ಕೂಡಲ ಸಂಗಮ
ಕೂಡಲ ಸಂಗಮ ಗ್ರಾಮವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಇದೆ. ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು ೩೫ ಕಿ.ಮಿ.ದೂರದಲ್ಲಿದೆ.
ಕೂಡಲ ಸಂಗಮ | |
![]() | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೭೧೧೫ - +೯೧ (೦) ೮೩೫೧ - ಕೆಎ-೨೯ |
ಅಂತರ್ಜಾಲ ತಾಣ: ಕೂಡಲ ಸಂಗಮ http://www.bagalkot.nic.in/ ಕೂಡಲ ಸಂಗಮ |




ಚರಿತ್ರೆ ಸಂಪಾದಿಸಿ
ಕೂಡಲ ಸಂಗಮವು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ ಕೃಷ್ಣಾ ನದಿ ಮತ್ತು ಮಲಪ್ರಭಾ ನದಿ ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ. ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವು ಈ ಪುಣ್ಯಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.
ಭೌಗೋಳಿಕ ಸಂಪಾದಿಸಿ
ಗ್ರಾಮವು ಭೌಗೋಳಿಕವಾಗಿ ೧೬* ೩೨ ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧ ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ ಸಂಪಾದಿಸಿ
- ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ ಸಂಪಾದಿಸಿ
ಗ್ರಾಮದಲ್ಲಿ ಜನಸಂಖ್ಯೆ ಸುಮಾರು ೩,೭೦೦ ಇದೆ. ಅದರಲ್ಲಿ ೨೧೦೦ ಪುರುಷರು ಮತ್ತು ೧೬೦೦ ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ ಸಂಪಾದಿಸಿ
ಮುಖ್ಯ ಭಾಷೆ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆ ಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಶೆಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಹಾಗೂ ಸಿಹಿತಿಂಡಿ ಎಳ್ಳು ಹೋಳಿಗೆ, ಶೆಂಗಾ ಹೋಳಿಗೆ, ಅಲ್ಪಿ (ಕರದಂಟು) ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ ಸಂಪಾದಿಸಿ
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮಗಳು ಸಂಪಾದಿಸಿ
ಭಾಷೆಗಳು ಸಂಪಾದಿಸಿ
ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯಗಳು ಸಂಪಾದಿಸಿ
- ಶ್ರೀ ಸಂಗಮೇಶ್ವರ ದೇವಾಲಯ
- ಶ್ರೀ ಹನುಮಂತ ದೇವಾಲಯ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ಬಸವೇಶ್ವರ ಐಕ್ಯ ಮಂಟಪ
ಮಸೀದಿಗಳು ಸಂಪಾದಿಸಿ
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ ಸಂಪಾದಿಸಿ
ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆಗಳು ಸಂಪಾದಿಸಿ
ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಉದ್ಯೋಗ ಸಂಪಾದಿಸಿ
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆಗಳು ಸಂಪಾದಿಸಿ
ಆಹಾರ ಬೆಳೆಗಳು ಸಂಪಾದಿಸಿ
ಜೋಳ, ಗೋಧಿ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು ಸಂಪಾದಿಸಿ
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು ಸಂಪಾದಿಸಿ
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಹಬ್ಬಗಳು ಸಂಪಾದಿಸಿ
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷveena ಸಂಪಾದಿಸಿ
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.
ಸಾಕ್ಷರತೆ ಸಂಪಾದಿಸಿ
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ಪ್ರವಾಸೋದ್ಯಮ ಸಂಪಾದಿಸಿ
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಇಂತಿವೆ:
- ಚಾಲುಕ್ಯ ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
- ಬಸವೇಶ್ವರನ ಐಕ್ಯ ಲಿಂಗ
- ಬಸವ ಧರ್ಮ ಪೀಠದ ಮಹಾಮನೆ ಆವರಣ
- ಪೂಜಾವನ
- ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
- ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ಗಂಗಾಂಬಿಕೆ, ನೀಲಾಂಬಿಕೆ, ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮ ಎಂದು ಹೆಸರಿಸಲಾಗಿದೆ.
- ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ
ಕೂಡಲ ಸಂಗಮ ಸಂಪಾದಿಸಿ
ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರ., ಕೂಡಲ ಸಂಗಮ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಧರ್ಮದ ಪ್ರಮುಖ ಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ ಕೃಷ್ಣ ನದಿ ಮತ್ತು ಮಲಪ್ರಭಾ ನದಿ ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ (ಇನ್ನೊಂದು ಕ್ಷೇತ್ರ) ಕಡೆಗೆ ಹರಿಯುತ್ತದೆ.
ಕೂಡಲ ಸಂಗಮ ಸುಕ್ಷೇತ್ರ ಸಂಪಾದಿಸಿ
- ಓಂ ಶ್ರೀ ಗುರು ಬಸವ ಲಿಂಗಾಯ ನಮ: ಕೂಡಲ ಸಂಗಮ ಸುಕ್ಷೇತ್ರವು ಹಿನ್ನೆಲೆಯನ್ನೊಳಗೊಂಡ ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ, ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ
- "ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟ ಅವಿಮುಕ್ತ ಕ್ಷೇತ್ರ" ಎಂದು ಜಗನ್ಮಾತೆ ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.
- ಕೂಡಲ ಸಂಗಮವು ಕರ್ನಾಟಕದ ಪ್ರಮುಖ ಪ್ರವಾಸಿ ತಾಣ. ರಾಷ್ಟ್ರೀಯ ಹೆದ್ದಾರಿ ನಂ.13ರಿಂದ ರಸ್ತೆ ಸಂಪರ್ಕವಿದೆ. ಆದರೆ, ನೇರವಾಗಿ ರೈಲು ಸಂಪರ್ಕ ಇಲ್ಲ. ರೈಲಿನ ಮೂಲಕ ಬರಬೇಕಿದ್ದರೆ ಬಾಗಲಕೋಟೆ, ಬಾದಾಮಿ, ಆಲಮಟ್ಟಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬರಬೇಕು. ಇಲ್ಲಿ ತಂಗಲು ಯಾತ್ರಿ ನಿವಾಸದಲ್ಲಿ 50 ಕೊಠಡಿ, 15 ಡಾರ್ಮೆಟರಿ ಇವೆ. ಸರ್ಕಾರಿ, ಪ್ರಾಧಿಕಾರದ ಅತಿಥಿಗೃಹ, ಉಪಹಾರ ಗೃಹಗಳಿವೆ. ಮಧ್ಯಾಹ್ನ ಮತ್ತು ರಾತ್ರಿ ದಾಸೋಹದ ವ್ಯವಸ್ಥೆ ಇದ್ದು, ಪ್ರವಾಸಿಗರ ನೆರವಿಗಾಗಿ ಮಾಹಿತಿ ಕೇಂದ್ರ ಸಹ ಇದೆ.
- ಈಗ ಕೂಡಲಸಂಗಮವು ಅಂತರರಾಷ್ಟ್ರೀಯ ಬಸವ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಕರ್ನಾಟಕ ಸರಕಾರವು ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿರುವ ಐಕ್ಯ ಮಂಟಪವನ್ನು ವಿಶಿಷ್ಟ ರೀತಿಯ ಆಧುನಿಕ ವಾಸ್ತು ಶಿಲ್ಪ ದಲ್ಲಿ ಸಂರಕ್ಸಿಸಲಾಗಿದೆ. ಜೀವಿತದಲ್ಲಿ ಒಮ್ಮೆ ಸಂದರ್ಶಿಸಬೇಕಾದ ಸ್ಥಳವಿದು.
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಸಂಪಾದಿಸಿ
- ಚಾಲುಕ್ಯ ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
- ಬಸವೇಶ್ವರ ಐಕ್ಯ ಮಂಟಪ
- ಬಸವ ಧರ್ಮ ಪೀಠದ ಮಹಾಮನೆ ಆವರಣ
- ಪೂಜಾವನ
- ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ಗಂಗಾಂಬಿಕೆ, ನೀಲಾಂಬಿಕೆ, ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮ ಎಂದು ಹೆಸರಿಸಲಾಗಿದೆ.
- ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
- ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ ಕೂಡಲ ಸಂಗಮ ಸುಕ್ಷೆತ್ರದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಶರಣಮೇಳ ಪ್ರತಿ ವರ್ಷ ಜನವರಿ 11, 12, 13, 14, ಮತ್ತು 15 ರಂದು.
- ಬಸವ ಪೀಠವು ಎದ್ದು | ಒಸೆದು ನಾಣ್ಯವ ಹುಟ್ಟಿ
- ಬಸವನ ಮುದ್ರೆ ಮೆರೆದಾವು | ಧರೆಯವಗೆ
- ವಶವಗದಿಹುದೆ ಸರ್ವಜ್ಞ ||
ಪ್ರಥಮ ಚಾರಿತ್ರಿಕ ಶರಣಮೇಳ ಸಂಪಾದಿಸಿ
- ಧರ್ಮಕರ್ತ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ (ಬಸವ) ಧರ್ಮಿಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡ 1988 ರ ಜನವರಿ 14 15 ಮತ್ತು 16 ರಂದು ಪ್ರಥಮ ಚಾರಿತ್ರಿಕ ಶರಣಮೇಳವನ್ನು ನಡೆಸಲಾಯಿತು, ಮೊತ್ತ ಮೊದಲನೆಯ ಚಾರಿತ್ರಿಕ ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನು ಆಕರ್ಷಿಸಿತು.
- ಇಂತಹ ಶರಣ ಮೇಳವು ಪರ್ತಿವರ್ಷ ಬಸವ ಧರ್ಮ ಸಂಸ್ಥಪಾನ ದಿನದ ಅಂಗವಾಗಿ ನಡೆಯುತ್ತಲಿದ್ದು 24 ನೇ ಶರಣ ಮೇಳ 2011 ರ ಜನವರಿ 11, 12, 13, 14, ಮತ್ತು 15 ರಂದು ನಡೆಯುವುದು ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟ ಲಿಂಗ ಪೂಜೆ, ಗಣಲಿಂಗ ದರ್ಶನ ಶರಣ ಮೇಳದ ಪ್ರಮುಖ ದಾರ್ಮಿಕ ವಿಧಿಗಳು. ಜನವರಿ 14 ರಂದು ಬೆಳ್ಳಗೆ 10 ರಿಂದ ಧ್ವಜಾರೋಹಣ, ಪಥ ಸಂಚಲನ, ಸಮುದಾಯ ಪ್ರಾರ್ಥನೆ ಇರುತ್ತದೆ. ( ಐದು ದಿನ ಭಾಗವಹಿಸಲು ಆಗದೆ ಇದ್ದವರು ಸಮುದಾಯ ಪ್ರಾರ್ಥನೆಯಲ್ಲಿ ಭಾಗವಹಿಸುವದು ಕಡ್ದಾಯವಾಗಿರುತ್ತದೆ) ಸಂಜೆ ೭ ಗಂಟೆಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಇರುತ್ತದೆ.
- ಇವುಗಳಲ್ಲಿ ಶರಣ ವ್ರತಿಗಳು ಭಾಗವಹಿಸುವುದು ಕಡ್ದಾಯವಾಗಿರುತ್ತದೆ, 40, 30, 20, ಮತ್ತು 10 ಶರಣವ್ರತವನ್ನ ಅವರವರ ಸಮಯವಕಶಕ್ಕೆ ತಕ್ಕಂತೆ ಸ್ವೀಕರಿಸಿ, ಆಚರಿಸಿ ಯಾರು ಬೇಕಾದರೂ ಶರಣ ಮೇಳದಲ್ಲಿ ಭಾಗಿಗಳಾಗಬಹುದು. ಚಿಂತನ ಗೋಷ್ಠಿ ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳಿಂದ ಕೂಡಿದ ಶರಣ ಮೇಳವು ಉತ್ತಮ ಜ್ಞಾನ ದಾಸೋಹದೊಡನೆ, ಅನ್ನದಾಸೋಹವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.
- ದಿ 11 ಮತ್ತು 12 ರಂದು ಧರ್ಮ ಚಿಂತನಗೋಷ್ಠಿ ನಡಿಯುತತಿದ್ದು ಸಮಾಜ- ಧರ್ಮಗಳಿಗೆ ಸಂಭಂದಿಸಿದಂತೆ ಮುಕ್ತ ಚರ್ಚೆಗೆ ಅವಕಾಶವಿರುತ್ತದೆ. ಮುಸಲ್ಮಾನ್ ಧರ್ಮೀಯರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ದ ರಿಗೆ ಬುದ್ದಗಯೇ ಧರ್ಮಕ್ಷೇತ್ರ ಗಳಲ್ಲಿರುವಂತೆ ಧರ್ಮಾನುಯಾಯಿಗಳಿಗೆ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮವೇ ಧರ್ಮಕ್ಷೇತ್ರ ತನ್ನ ಜೀವಮಾನದಲ್ಲಿ ಆಯುಷ್ಯ ಅರೋಗ್ಯ ಇರುವವರೆಗೆ ಎಷ್ಟು ಸಲ ಒಬ್ಬ ವ್ಯಕ್ತಿ ಶರಣ ಮೇಳದಲ್ಲಿ ಭಾಗಿಯಗುತ್ತಾನೋ ಅತ ನಿಜಕ್ಕೂ ಹೆಚ್ಚು ಪುಣ್ಯವಂತ.
ಚಿತ್ರಗಳು ಸಂಪಾದಿಸಿ
ಬಾಹ್ಯ ಸಂಪರ್ಕಗಳು ಸಂಪಾದಿಸಿ
- ಕೂಡಲಸಂಗಮ Archived 2013-04-11 at Archive.is