ಕರ್ನಾಟಕ ವಿಧಾನ ಸಭೆ

ಕರ್ನಾಟಕ ವಿಧಾನಸಭೆಯು ಕರ್ನಾಟಕ ರಾಜ್ಯದ ದ್ವಿ ಶಾಸನ ಸಭೆಯ ಕೆಳಮನೆಯಾಗಿದೆ. ಭಾರತದ ಏಳು ರಾಜ್ಯಗಳ ರಾಜ್ಯ ಶಾಸಕಾಂಗಗಳು ಎರಡು ಮನೆಗಳನ್ನು ಒಳಗೊಂಡಿದೆ. ಅಂತಹ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ವಿಧಾನ ಸಭೆಯನ್ನು ಕೆಳಮನೆ ಎಂದೂ ಮತ್ತು ವಿಧಾನ ಪರಿಷತ್ತನ್ನು ಮೇಲ್ಮನೆ ಎಂದೂ ಕರೆಯಲಾಗುತ್ತದೆ.

{{{name}}}
Type
Type
ಕೆಳಮನೆ
Term limits
5 ವರ್ಷಗಳು
Leadership
ವಿರೋಧ ಪಕ್ಷದ ನಾಯಕ
Structure
Seats225 (224 ಆಯ್ಕೆ + 1 ನಾಮನಿರ್ದೇಶನ)
Political groups
ಆಡಳಿತ ಪಕ್ಷ (106)
  •   ಭಾರತೀಯ ಜನತಾ ಪಕ್ಷ (105)
  •   ಸ್ವತಂತ್ರ (1)

ವಿರೋಧ ಪಕ್ಷ (102)

ಖಾಲಿ (17)

Elections
Last election
2018
Meeting place
ವಿಧಾನಸೌಧ, ಬೆಂಗಳೂರು, ಕರ್ನಾಟಕ, ಭಾರತ
Website
Karnataka Legislative Assembly

ವಿಧಾನ ಸಭೆಯ ಸದಸ್ಯರು ನೇರವಾಗಿ ಮತದಾನದ ಮೂಲಕ ಜನರಿಂದ ಚುನಾಯಿತರಾಗುತ್ತಾರೆ.

ಕರ್ನಾಟಕ ವಿಧಾನಸಭೆಯಲ್ಲಿ ೨೨೫ ಸದಸ್ಯರಿದ್ದಾರೆ. ಒಬ್ಬ ಸದಸ್ಯನು ಕರ್ನಾಟಕ ರಾಜ್ಯಪಾಲರು ನಾಮಕರಣ ಮಾಡಿದ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿರುತ್ತಾರೆ. ಶಾಸನಸಭಾ ಸದಸ್ಯರನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯವನ್ನು ೨೨೪ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ.

ಪ್ರತಿಯೊಂದು ಕ್ಷೇತ್ರವು ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಸದಸ್ಯರನ್ನು ಜನಪ್ರಿಯವಾಗಿ ಎಮ್ಎಲ್ಎಗಳು ಎಂದು ಕರೆಯಲಾಗುತ್ತದೆ. ಸರಳ ಬಹುತ್ವ ಚುನಾವಣಾ ವ್ಯವಸ್ಥೆಯನ್ನು ಬಳಸಿ ವಿಧಾನ ಸಭೆಯನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳನ್ನು ಭಾರತದ ಚುನಾವಣಾ ಆಯೋಗವು ನಡೆಸುತ್ತದೆ.

ಸದಸ್ಯರ ಸಾಮಾನ್ಯ ಅವಧಿಯು ಐದು ವರ್ಷಗಳವರೆಗೆ ಇರುತ್ತದೆ. ಮರಣದ ಸಂದರ್ಭದಲ್ಲಿ, ಸದಸ್ಯರ ರಾಜೀನಾಮೆ ಅಥವಾ ಅನರ್ಹತೆ, ಸದಸ್ಯರಿಂದ ನಿರೂಪಿಸಲ್ಪಟ್ಟ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಸಲಾಗುತ್ತದೆ. ಬಹುಮತ ಹೊಂದಿರುವ ಪಕ್ಷ ಅಥವಾ ಪಕ್ಷಗಳ ಕೂಟ ಆಡಳಿತ ಪಕ್ಷವು ಆಗುತ್ತದೆ.

ಶಾಸನ ಸಭೆಗಳ ಪಟ್ಟಿ

ಬದಲಾಯಿಸಿ
ಶಾಸನ ಸಭೆ ಅವಧಿ ಮುಖ್ಯಮಂತ್ರಿ (ಗಳು)
ಮೊದಲ ಶಾಸನ ಸಭೆ 18 ಜೂನ್ 1952 - 31 ಮಾರ್ಚ್ 1957 ಕೆ.ಸಿ. ರೆಡ್ಡಿ , ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ , ಎಸ್.ನಿಜಲಿಂಗಪ್ಪ
ಎರಡನೇ ಶಾಸನ ಸಭೆ 10 ಜೂನ್ 1957 - 1 ಮಾರ್ಚ್ 1962 ಎಸ್. ನಿಜಲಿಂಗಪ್ಪ , ಬಿ.ಡಿ.ಜತ್ತಿ
ಮೂರನೇ ಶಾಸನ ಸಭೆ 15 ಮಾರ್ಚ್ 1962 - 28 ಫೆಬ್ರವರಿ 1967 ಎಸ್ ಆರ್ ಕಂಠಿ , ಎಸ್. ನಿಜಲಿಂಗಪ್ಪ
ನಾಲ್ಕನೇ ಶಾಸನ ಸಭೆ 15 ಮಾರ್ಚ್ 1967 - 14 ಏಪ್ರಿಲ್ 1971 ಎಸ್. ನಿಜಲಿಂಗಪ್ಪ , ವೀರೇಂದ್ರ ಪಾಟೀಲ್
ಐದನೇ ಶಾಸನ ಸಭೆ 24 ಮಾರ್ಚ್ 1972 - 31 ಡಿಸೆಂಬರ್ 1977 (ವಿಸರ್ಜನೆ) ಡಿ. ದೇವರಾಜ ಅರಸ್
ಆರನೇ ಶಾಸನ ಸಭೆ 17 ಮಾರ್ಚ್ 1978 - 8 ಜೂನ್ 1983 (ವಿಸರ್ಜನೆ) ಡಿ. ದೇವರಾಜ ಅರಸ್ , ಆರ್. ಗುಂಡೂರಾವ್
ಏಳನೇ ಶಾಸನ ಸಭೆ 24 ಜುಲೈ 1983 - 2 ಜನವರಿ 1985 (ವಿಸರ್ಜನೆ) ರಾಮಕೃಷ್ಣ ಹೆಗಡೆ
ಎಂಟನೇ ಶಾಸನ ಸಭೆ 18 ಮಾರ್ಚ್ 1985 - 21 ಏಪ್ರಿಲ್ 1989 (ವಿಸರ್ಜನೆ) ರಾಮಕೃಷ್ಣ ಹೆಗಡೆ , ಎಸ್. ಆರ್. ಬೊಮ್ಮಾಯಿ
ಒಂಬತ್ತನೇ ಶಾಸನ ಸಭೆ 18 ಡಿಸೆಂಬರ್ 1989 - 20 ಸೆಪ್ಟೆಂಬರ್ 1994 (ವಿಸರ್ಜನೆ) ವೀರೇಂದ್ರ ಪಾಟೀಲ್ , ಬಂಗಾರಪ್ಪ , ಎಮ್. ವೀರಪ್ಪ ಮೊಯಿಲಿ
ಹತ್ತನೇ ಶಾಸನ ಸಭೆ 25 ಡಿಸೆಂಬರ್ 1994 - 22 ಜುಲೈ 1999 (ವಿಸರ್ಜನೆ) ಹೆಚ್.ಡಿ.ದೇವೇಗೌಡ , ಜೆ.ಎಚ್. ಪಟೇಲ್
ಹನ್ನೊಂದನೇ ಶಾಸನ ಸಭೆ 25 ಅಕ್ಟೋಬರ್ 1999 - 28 ಮೇ 2004 ಎಸ್.ಎಂ. ಕೃಷ್ಣ
ಹನ್ನೆರಡನೆಯ ಶಾಸನ ಸಭೆ 28 ಮೇ 2004 - 19 ನವೆಂಬರ್ 2007 (ವಿಸರ್ಜನೆ) ಧರಮ್ ಸಿಂಗ್ , ಹೆಚ್.ಡಿ.ಕುಮಾರಸ್ವಾಮಿ , ಬಿ.ಎಸ್. ಯಡಿಯೂರಪ್ಪ
ಹದಿಮೂರನೇ ಶಾಸನ ಸಭೆ 30 ಮೇ 2008 - 5 ಮೇ 2013 ಬಿ.ಎಸ್. ಯಡಿಯೂರಪ್ಪ , ಡಿ.ವಿ. ಸದಾನಂದ ಗೌಡ , ಜಗದೀಶ್ ಶೆಟ್ಟರ್
ಹದಿನಾಲ್ಕನೆಯ ಶಾಸನ ಸಭೆ 13 ಮೇ 2013 - 17 ಮೇ 2018 ಸಿದ್ದರಾಮಯ್ಯ
ಹದಿನೈದನೇ ಶಾಸನ ಸಭೆ 17 ಮೇ 2018 - ಪ್ರಸ್ತುತ ಬಿಎಸ್ ಯಡಿಯೂರಪ್ಪ , ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಅಧ್ಯಕ್ಷರ ಆಡಳಿತ

ಅವಧಿ ಶಾಸನ ಸಭೆ
19.03.1971 ರಿಂದ 20.03.1972 ನಾಲ್ಕನೇ ಅಸೆಂಬ್ಲಿ
31.12.1977 ರಿಂದ 28.02.1978 ಐದನೇ ಅಸೆಂಬ್ಲಿ
21.04.1989 ರಿಂದ 30.11.1989 ಎಂಟನೇ ವಿಧಾನಸಭೆ
09.10.2007 ರಿಂದ 11.11.2007 ವರೆಗೆ ಹನ್ನೆರಡನೆಯ ಅಸೆಂಬ್ಲಿ
20.11.2007 ರಿಂದ 29.05.2008 ವರೆಗೆ ಹನ್ನೆರಡನೆಯ ಅಸೆಂಬ್ಲಿ

ಬುಧವಾರ, ೧೮ ಜೂನ್ ೧೯೫೨ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹಳೆಯ ಸಾರ್ವಜನಿಕ ಕಛೇರಿ ಕಟ್ಟಡ ಕಾನ್ಫರೆನ್ಸ್ ಸಭಾಂಗಣದಲ್ಲಿ (ಪ್ರಸ್ತುತ ಹೈಕೋರ್ಟ್ ಕಟ್ಟಡ) ಶಾಸನ ಸಭೆಯ ಮೊದಲ ಅಧಿವೇಶನ ನಡೆಯಿತು.

ಡಿಸೆಂಬರ್ ೧೬, ೧೯೪೯ ರಂದು ಮೈಸೂರು ಮಹಾರಾಜರು ಪ್ರತಿನಿಧಿ ಸಭೆ ಮತ್ತು ಶಾಸನಸಭೆಯನ್ನು ವಿಸರ್ಜಿಸಿದರು. ೧೯೪೭ರಲ್ಲಿ ರಚನೆಯಾದ ಸಂಸತ್ ಸಭೆಯು ೧೯೫೨ರಲ್ಲಿ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಮೈಸೂರಿನ ಸಭೆಯಾಗಿತು.

ಸಂವಿಧಾನದ ಅಡಿಯಲ್ಲಿ ರಚಿಸಲಾದ ಮೊದಲ ಸಭೆಯಲ್ಲಿ 99 ಚುನಾಯಿತರು ಮತ್ತು ಒಬ್ಬ ನಾಮನಿರ್ದೇಶನಗೊಂಡ ಸದಸ್ಯರಿದ್ದರು. ಸಭೆಯ ಮೊದಲ ಸಭೆಯಲ್ಲಿ, ವಿ. ವೆಂಕಟಪ್ಪ ಅವರು ಗೌರವಾನ್ವಿತ ಸಭಾಧ್ಯಕ್ಷರಾಗಿದ್ದರು, ನಂತರ ಅವರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಇತರೆ ಸದಸ್ಯರಿಗೆ ಪ್ರಮಾಣ ವಚನ ನೀಡಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಹಾಗು ಎಚ್. ಸಿದ್ದಯ್ಯ ಸಭಾಧ್ಯಕ್ಷ ಹುದ್ದೆಯ ಚುನಾವಣೆಗೆ ಸ್ಪರ್ಧಿಸಿದ್ದರು, ಆ ಚುನಾವಣೆಯಲ್ಲಿ ಸಿದ್ದಯ್ಯ ಅವರು 74 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು ಮತ್ತು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಭಾಷಣ ಮಾಡಿದರು.

1953 ರಲ್ಲಿ ಆಂಧ್ರ ರಾಜ್ಯದ ರಚನೆಯೊಂದಿಗೆ, ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆಯ ಭಾಗಗಳು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು ಮತ್ತು ಶಾಸನ ಸಭೆಯ ಬಲವು ಐದು ಸದಸ್ಯರಿಂದ ಹೆಚ್ಚಿಸಲ್ಪಟ್ಟಿತು. ಮೈಸೂರು ರಾಜ್ಯದ ಮರು-ಸಂಘಟನೆಯು ೧ ನವೆಂಬರ್ ೧೯೫೬ ರಂದು ಹಿಂದಿನ ಬಾಂಬೆ ರಾಜ್ಯದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ರಾಜ್ಯದ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಕೊಡಗು ಮತ್ತು ಮೈಸೂರು ಸಂಸ್ಥಾನದ ಒಂದು ಜಿಲ್ಲೆ ಮತ್ತು ಒಂದು ತಾಲ್ಲೂಕನ್ನು ಸೇರಿಸಲಾಯಿತು. ರಾಜ್ಯವನ್ನು ೧೯೭೩ ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಹೊಸ ವಿಧಾನಸಭೆಯ ಮೊದಲ ಅಧಿವೇಶನ ೧೯೫೬ರ ಡಿಸೆಂಬರ್ ೧೯ ರಂದು ಹೊಸದಾಗಿ ನಿರ್ಮಾಣವಾದ ವಿಧಾನ ಸೌಧದಲ್ಲಿ ನಡೆಯಿತು. ೧೯೫೭ರಲ್ಲಿ ಇದ್ದ ೨೦೮ ಶಾಸಕರ ಸಂಖ್ಯೆಯು ೧೯೬೭ರಲ್ಲಿ ೨೧೬ ಕ್ಕೆ ಏರಿತು ಮತ್ತು ೧೯೭೮ರಲ್ಲಿ ೨೨೪ ಏರಿತು ಹಾಗು ಒರ್ವ ನಾಮ ನಿರ್ದೇಶಿತರನ್ನು ಸೇರಿಸಲಾಯಿತು.

ಕರ್ನಾಟಕ ವಿಧಾನ ಸಭೆಯ ಏಕೈಕ ಮಹಿಳಾ ಸಭಾಧ್ಯಕ್ಷರಾಗಿ ಕೆ.ಎಸ್. ನಾಗರತ್ನಮ್ಮನವರು ೨೪ ಮಾರ್ಚ್ ೧೯೭೨ ರಿಂದ ೩ ಮಾರ್ಚ್ ೧೯೭೮ ರವರೆಗೆ ಕಾರ್ಯ ನಿರ್ವಹಿಸಿದ್ದಾರೆ.

ಬಜೆಟ್ ಅಧಿವೇಶನ ಮತ್ತು ಶಾಸನಸಭೆಯ ಮುಂಗಾರು ಅಧಿವೇಶನವನ್ನು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲಾಗುತ್ತದೆ. ಶಾಸನಸಭೆಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತದೆ.

ಸಭಾಧ್ಯಕ್ಷರ ಪಟ್ಟಿ

ಬದಲಾಯಿಸಿ
ಕ್ರಮ ಸಂಖ್ಯೆ ಸಭಾಧ್ಯಕ್ಷರು ಪಕ್ಷ ಅಧಿಕಾರಾವಧಿ
1 ವಿ. ವೆಂಕಟಪ್ಪ INC 17.06.1952 ಗೆ 26.01.1952
2 ಎಚ್. ಸಿದ್ದಯ್ಯ INC 18.06.1952 ರಿಂದ 14.05.1954 ಗೆ
3 ಎಚ್.ಎಸ್ ರುದ್ರಪ್ಪ INC 13.10.1954 ರಿಂದ 01.11.1956 ವರೆಗೆ
4 ಎಸ್ ಆರ್ ಕಂಠಿ INC 19.12.1956 ರಿಂದ 09.03.1962
5 ಬಿ. ವೈಕುಂಟಾ ಬಾಳಿಗ INC 15.03.1962 ರಿಂದ 06.06.1968
6 ಎಸ್.ಡಿ. ಕೋಟಾವಲೆ INC 05.09.1968 ರಿಂದ 24.03.1972
7 ಕೆ.ಎಸ್. ನಾಗರತ್ನಮ್ಮ INC 24.03.1972 ಗೆ 17.03.1978
8 ಪಿ. ವೆಂಕಟರಮಣ INC 17.03.1978 ರಿಂದ 03.10.1980 ಗೆ
9 ಕೆ.ಎಚ್ ರಂಗನಾಥ್ INC 30.01.1981 ರಿಂದ 24.01.1983 ವರೆಗೆ
10 ಡಿ.ಬಿ ಚಂದ್ರೆ ಗೌಡ ಜೆಪಿ 24.01.1983 ರಿಂದ 17.03.1985 ಗೆ
11 ಬಿ.ಜಿ ಬಣಕಾರ್ ಜೆಪಿ 18.03.1985 ರಿಂದ 17.12.1989
12 ಎಸ್.ಎಂ ಕೃಷ್ಣ INC 18.12.1989 ರಿಂದ 20.01.1993 ಗೆ
13 ವಿ.ಎಸ್. ಕೌಜಲಗಿ INC 15.02.1993 ರಿಂದ 26.12.1994 ಗೆ
14 ಕೆ.ಆರ್ ರಮೇಶ್ ಕುಮಾರ್ ಜೆಡಿ 27.12.1994 ಗೆ 24.10.1999
15 ಎಂ.ವಿ. ವೆಂಕಟಪ್ಪ INC 26.10.1999 ರಿಂದ 07.06.2004 ವರೆಗೆ
16 ಎಸ್ ಎಂ ಕೃಷ್ಣ ಜೆಡಿ (ಎಸ್) 10.06.2004 ರಿಂದ 04.06.2008
17 ಜಗದೀಶ್ ಶೆಟ್ಟರ್ ಬಿಜೆಪಿ 05.06.2008 ರಿಂದ 16.11.2009 ವರೆಗೆ
18 ಕೆ.ಜಿ ಬೋಪಯ್ಯ ಬಿಜೆಪಿ 17.11.2009 ರಿಂದ ಮೇ 2013 ವರೆಗೆ
19 ಕಾಗೋಡು ತಿಮ್ಮಪ್ಪ INC 31.05.2013 ರಿಂದ 19.06.2016
20 ಕೆ.ಬಿ ಕೊಲಿವಾಡ್ INC 05.07.2016 ರಿಂದ 18.05.2018
21 ಕೆ.ಆರ್ ರಮೇಶ್ ಕುಮಾರ್ INC 25.05.2018 ರಿಂದ 29.07.2019
22 ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ 31 July 2019 ರಿಂದ ಪ್ರಸ್ತುತ

ಸಭಾಧ್ಯಕ್ಷರ ಅಧಿಕಾರಗಳು,

ಬದಲಾಯಿಸಿ

ಹೆಚ್ಚಿನ ಮಾಹಿತಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ