ವೀರೇಂದ್ರ ಪಾಟೀಲ್
ವೀರೇಂದ್ರ ಪಾಟೀಲ್ (1924-1997) ಹಿರಿಯ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಅವರು (1968-1971) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.18 ವರ್ಷಗಳ ನಂತರ ಎರಡನೇ ಬಾರಿಗೆ (1989-1990) ರವರೆಗೆ ಮುಖ್ಯಮಂತ್ರಿಯಾಗಿದ್ದರು.
ವೀರೇಂದ್ರ ಪಾಟೀಲ್ | |
---|---|
ಕರ್ನಾಟಕದ ಏಳನೆಯ ಮುಖ್ಯಮಂತ್ರಿ
| |
ಅಧಿಕಾರ ಅವಧಿ 29 May 1968 – 18 March 1971 | |
ರಾಜ್ಯಪಾಲ | ಧರ್ಮ ವೀರ |
ಪೂರ್ವಾಧಿಕಾರಿ | ಎಸ್.ನಿಜಲಿಂಗಪ್ಪ |
ಉತ್ತರಾಧಿಕಾರಿ | ಡಿ.ದೇವರಾಜ ಆರಸ್ |
ಅಧಿಕಾರ ಅವಧಿ 30 November 1989 – 10 October 1990 | |
ರಾಜ್ಯಪಾಲ | ಪಿ.ವೆಂಕಟಸುಬ್ಬಯ್ಯ ಭಾನು ಪ್ರತಾಮ್ ಸಿಂಗ್ |
ಪೂರ್ವಾಧಿಕಾರಿ | ಎಸ್.ಆರ್.ಬೊಮ್ಮಾಯಿ |
ಉತ್ತರಾಧಿಕಾರಿ | ಎಸ್.ಬಂಗಾರಪ್ಪ |
ಅಧಿಕಾರ ಅವಧಿ 1984 – 1989 | |
ಪೂರ್ವಾಧಿಕಾರಿ | ಎನ್.ಧರಮ್ ಸಿಂಗ್ |
ಉತ್ತರಾಧಿಕಾರಿ | ಬಿ.ಜಿ.ಜವಳಿ |
ವೈಯಕ್ತಿಕ ಮಾಹಿತಿ | |
ಜನನ | 1924 ಚಿಂಚೋಳಿ, ಗುಲ್ಬರ್ಗ |
ಮರಣ | ಮಾರ್ಚ್ 14, 1997 |
ರಾಜಕೀಯ ಪಕ್ಷ | INC |
ಮಕ್ಕಳು | ಕೈಲಾಶನಾಥ್ ಪಾಟೀಲ್[೧] |
ಧರ್ಮ | ಹಿಂದು |
ಬಾಲ್ಯ
ಬದಲಾಯಿಸಿಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಫೆಬ್ರವರಿ 28, 1924 ರಲ್ಲಿ ಜನಿಸಿದರು.ಗುಲ್ಬರ್ಗ ಸರ್ಕಾರಿ ಪ್ರೌಢಶಾಲೆ,ವಿವೇಕ್-ವರ್ಧಿನೀ ಸ್ಕೂಲ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್ ಬಿ ಶಿಕ್ಷಣ ಪಡೆದಿದ್ದಾರೆ.[೨]
ರಾಜಕೀಯ
ಬದಲಾಯಿಸಿಅವರು 1957 ರಲ್ಲಿ ಎಸ್ ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದರು ಚಿಂಚೋಳಿ[೩] ವಿಧಾನ ಸಭಾ ಕ್ಷೇತ್ರದಿಂದ ೩ ಸಲ ಆಯ್ಕೆಯಾಗಿದ್ದರು,ಒಂದೊಂದು ಬಾರಿ ಗುಲ್ಬರ್ಗಾ ಮತ್ತು ಬಾಗಲಕೋಟೆ ಸಂಸದರಾಗಿ ಆಯ್ಕೆಯಾಗಿದ್ದರು.[೪]
- ಹೈದರಾಬಾದ್ ವಿಧಾನ ಸಭೆ 1952-56
- ಮೈಸೂರು (ಈಗಿನ ಕರ್ನಾಟಕ) ವಿಧಾನ ಸಭೆಯಲ್ಲಿ 1957-71,
- ರಾಜ್ಯ ಸಭೆ ಸದಸ್ಯರು, 1972-78;
- ಏಳನೆ ಲೋಕಸಭಾ ಸದಸ್ಯರು 1980-84;
- ಯುಎಸ್ಎಸ್ಆರ್ ಭಾರತೀಯ ನಿಯೋಗ ಸದಸ್ಯರು 1965
- ಸಂಸದೀಯ ನಿಯೋಗ ಜರ್ಮನಿ ಸದಸ್ಯರು , 1973 .
- ಗೃಹ ಮತ್ತು ಕೈಗಾರಿಕಾ ಉಪ ಮಂತ್ರಿ,-ಮೈಸೂರು ಸರ್ಕಾರ 1961-62
- ಲೋಕೋಪಯೋಗಿ ಮತ್ತು ಸಾರಿಗೆ ಮಂತ್ರಿ; ಮೈಸೂರು ಸರ್ಕಾರ 1962-68 .
- ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ, 1968-ಮಾರ್ಚ್ ರಿಂದ 1971.
- ಕೇಂದ್ರ ಪೆಟ್ರೊಲಿಯಂ ಮತ್ತು ರಾಸಾಯನಿಕ ಸಚಿವ , ಮಾರ್ಚ್ 1980-ಸೆಪ್ಟೆಂಬರ್, 1980 .
- ಕೇಂದ್ರ ಶಿಪ್ಪಿಂಗ್ ಮತ್ತು ಸಾರಿಗೆ ಸಚಿವ ಸೆಪ್ಟೆಂಬರ್, 1980-ಸೆಪ್ಟೆಂಬರ್ 82;
- ಕೇಂದ್ರ ಲೇಬರ್ ಮತ್ತು ಪುನರ್ವಸತಿ ಸಚಿವ 1982-1984.
- ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ & ಇಂಡಸ್ಟ್ರಿ ಮತ್ತು ಕಂಪನಿ ವ್ಯವಹಾರಗಳ ಹೆಚ್ಚುವರಿ ಚಾರ್ಜ್ ಸಚಿವ 1984
- ಕಾರ್ಯದರ್ಶಿ, ತಾಲೂಕು ಕಾಂಗ್ರೆಸ್ ಸಮಿತಿ ಚಿಂಚೋಳಿ 1950-52.
- ಪ್ರಧಾನ ಕಾರ್ಯದರ್ಶಿ, ಹೈದರಾಬಾದ್ ಪ್ರದೇಶ ಕಾಂಗ್ರೆಸ್ 1955-56;
- ಎಂಟನೆ ಲೋಕಸಭಾ ಸದಸ್ಯರು ಬಾಗಲಕೋಟೆ 1980-84;[೫]
ವಿದೇಶ ಪ್ರವಾಸ
ಬದಲಾಯಿಸಿ- ಯು.ಎಸ್.ಎಸ್.ಆರ್,
- ಆಸ್ಟ್ರೇಲಿಯಾ,
- ಜಪಾನ್,
- ಸಿಂಗಾಪುರ,
- ಜರ್ಮನಿ,
- ಇಟಲಿ,
- ಆಸ್ಟ್ರೇಲಿಯಾ
- ಸ್ವಿಜರ್ಲ್ಯಾಂಡ್
- U.S.A.
- ಕೆನಡಾ
- ಐರ್ಲೆಂಡ್.
ಉಲ್ಲೇಖಗಳು
ಬದಲಾಯಿಸಿ- ↑ http://www.deccanherald.com/content/261720/ex-cms-kids-form-dynasts.html
- ↑ 8th Lok Sabha Members Bioprofile
- ↑ "Chincholi (Karnataka) Assembly Constituency Elections". Archived from the original on 2017-06-30. Retrieved 2017-03-27.
- ↑ MEMBERS OF EIGHTH LOK SABHA Karnataka - 29,www.indiapress.org/election
- ↑ 8th Lok Sabha Members Bioprofile,loksabha/writereaddata/biodata