ಕಾಗೋಡು ತಿಮ್ಮಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ರಾಜಕಾರಣಿ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮೂಲದವರು. ಹಲವು ಬಾರಿ ಶಾಸಕರಾಗಿ, ಸಚಿವರಾಗಿ ಮತ್ತು ವಿಧಾನಸಭಾಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಸಾಗರದಲ್ಲಿ ೨೮ ಜುಲೈ ೨೦೧೩ರಲ್ಲಿ ವಿಕಿಪೀಡಿಯಾ ಕಾರ್ಯಾಗಾರದ ಉದ್ಘಾಟನೆಯ ಭಾಷಣಮಾಡುತ್ತಿರುವ ಶ್ರೀ ಕಾಗೋಡು ತಿಮ್ಮಪ್ಪ

ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಕಾಗೋಡು ಸಾಗರ ಪಟ್ಟಣದಿಂದ ೧೮ ಕಿಲೋಮೀಟರ್ ದೂರವಿರುವ ಒಂದು ಚಿಕ್ಕ ಹಳ್ಳಿ. ೧೯೫೧ ಏಪ್ರಿಲ್ ೧೮ರಂದು ಭೂಮಾಲಿಕರ ವಿರುದ್ಧ ಕಾಗೋಡು ಸತ್ಯಾಗ್ರಹ ಎಂಬ ಹೆಸರಿನಲ್ಲಿ ಹೋರಾಟ ಮಾಡಿದ ಕೇಂದ್ರ ಸ್ಥಳ. ಈ ರೈತ ಹೋರಾಟದ ಭೂಮಿಯಾದ ಕಾಗೋಡಿನಲ್ಲಿ ತಿಮ್ಮಪ್ಪನವರು ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಗಳಿಗೆ ೩ ನೇ ಮಗನಾಗಿ ೧೯೩೨ ಸೆಪ್ಟಂಬರ್ ೧೦ ರಂದು, (ದಿ.10-9-1932) ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಪ್ರೌಢ ಶಾಲಾ ಶಿಕ್ಷಣಗಳನ್ನು ಹಿರೇನೆಲ್ಲೂರು ಮತ್ತು ಸಾಗರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಬಿ.ಕಾಂ. ಬಿ.ಎಲ್ ಪದವಿ ಮುಗಿಸಿ. ಸಾಗರದಲ್ಲಿ ನ್ಯಾಯವಾದಿಗಳಾಗಿ ವೃತ್ತಿಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.[]

ಸಮಾಜ ಸೇವೆ

ಬದಲಾಯಿಸಿ
  • ಸಾಗರ ಪಟ್ಟಣಕ್ಕೆ ದಿ|| ಗೋಪಾಲಗೌಡರ ಕ್ರೀಡಾಂಗಣ, ಕುಡಿಯುವ ನೀರಿನ ಯೋಜನೆ, ಮಹಿಳಾ ಪದವಿ ಕಾಲೇಜು, ಹಿಂದುಳಿದ ಹೆಣ್ಣು ಮಕ್ಕಳಿಗೆ ಕಾಲೇಜು ವಿದ್ಯಾರ್ಥಿ ನಿಲಯ, ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದಾರೆ.
  • ಆರ್ಯಈಡಿಗ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಸಮಾಜ ಬಾಂಧವರ ಸಹಕಾರದಿಂದ ನಿರ್ಮಾಣಮಾಡಿದ್ದಾರೆ. ಸಂಪೂರ್ಣ ಜೀರ್ಣವಾಗಿದ್ದ ಸಮಾಜದ ಛತ್ರವನ್ನು ಜೀರ್ಣೋದ್ಧಾರ ಮಾಡಿ ಇದರಿಂದ ಬಂದ ಬಾಡಿಗೆ ಹಣದಿಂದ ವಿದ್ಯಾರ್ಥಿನಿಲಯ ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ.
  • ಸಾಗರದಲ್ಲಿರುವ ಜನತಾ ವಿದ್ಯಾವರ್ಧಕ ಸಂಸ್ಥೆ , ರಾಷ್ತ್ರೀಯ ವಿದ್ಯಾ ವರ್ಧಕ ಸಂಸ್ಥೆ ಗಳ ಅಧ್ಯಕ್ಷ ಉಪಾದ್ಯಕ್ಷರಾಗಿ, ಈ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಸಾಗರದಲ್ಲಿ ಸಂಜಯ ಮೆಮೋರಿಯಲ್ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಯುವಕರಿಗೆ ತಾಂತ್ರಿಕ ಶಿಕ್ಷಣ ದೊರಕಿ ಉದ್ಯೋಗ ಸಿಗುವಂತೆ ಮಾಡಿದ್ದಾರೆ.
  • ಗ್ರಾಮಾಂತರ ಕುಢಿಯುವ ನೀರಿನ ಯೋಜನೆಯಡಿಯಲ್ಲಿ ಅನೇಕ ಹಳ್ಳಿಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಹಳ್ಳಿಗಳಿಗೆ ರಸ್ತೆಗಳು, ಸಂಪರ್ಕ ಸೇತುವೆಗಳು, ಪ್ರೌಢಶಾಲೆಗಳು, ಆಸ್ಪತ್ರೆಗಳು , ಪಶುವೈದ್ಯ ಶಾಲೆಗಳು, ವಿಇದ್ಯಾರ್ಥಿನಿಲಯಗಳು, ಏತ ನೀರಾವರಿ ಯೋಜನೆ ಗಳು, , ಹರಿಜನ ಗಿರಿಜನರಿಗೆ ಗಂಗಾಕಲ್ಯಾಣ ಯೋಜನೆಯಿಂದ ನೀರಾವರಿ ಬಾವಿಗಳು, ಮುಂತಾದ ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಗ್ರಾಮೀಣಜನರಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
  • ಅವರಿಗೆ ದೊರಕಿದ ಅಧಿಕಾರವನ್ನು ಜಾತಿ ಮತ ಬೇಧವಿಲ್ಲದೆ ದೀನ ದಲಿತರ ಪರವಾಗಿ, ಉಪಯೋಗಿಸಿಕೊಂಡು ಬಂದಿದ್ದಾರೆ. ತಮಗೆ ದೊರೆತ ಅಧಿಕಾರವನ್ನು ಬಡವರ ಸೇವೆಗೆ ಸಾಧನವೆಂದು ತಿಳಿದು ಜನರ ಸೇವೆ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನೇರ ನೆಡೆಯುಳ ವ್ಯಕ್ತಿ ಎಂದು ಹೆಸರು ಪಡೆದಿದ್ದಾರೆ.

ರಾಜಕೀಯ ಜೀವನ

ಬದಲಾಯಿಸಿ
  • ಇವರು ಸಾಗರದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮೇಲೆ ಇವರಿಗೆ ಹೆಚ್ಚಾಗಿ ಗೇಣಿ ರೈತರ ಸಮಸ್ಯೆಯ ಕೇಸುಗಳೇ ಬರುತ್ತಿದ್ದವು. ಹಣಕ್ಕೆ ಒತ್ತಾಯಿಸದೇ ಅವುಗಳನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜವಾದೀ ರೈತ ಪರ ಹೋರಾಟಕ್ಕಾಗಿ ಹಳ್ಳಿ ಹಳ್ಳಿಗಳಿಗೆ ಸೈಕಲ್ ಮೇಲೆ ಸಮಾಜವಾದೀ ಪ್ರಮುಖರೊಡನೆ ಪ್ರವಾಸಮಾಡಿ ಜನ ಜಾಗ್ರತಿಗಳಿಸಿದ್ದರು. ಸಮಾಜವಾದೀ ಪಕ್ಷವು ೧೯೬೨ ರಲ್ಲಿ ಶ್ರೀ ತಿಮ್ಮಪ್ಪನವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತು ; ಅದರಲ್ಲಿ ,ಕಾಂಗ್ರೆಸ್ಸಿನ ಲಕ್ಷ್ಮಿಕಾಂತಪ್ಪನವ ರಿಂದ ಕೇವಲ ೪೮೪೮ ಮತಗಳಿಂದ ಸೋಲನ್ನು ಅನುಭವಿಸಿದರು. ೧೯೬೭ ರಲ್ಲಿ ಪುನಃ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.
  • ಆದರೆ ಸಾಗರ ತಾಲ್ಲೂಕು ಬೋರ್ಡ್ ಚುನಾಣೆಯಲ್ಲಿ ಸಮಾಜವಾದೀ ಪಕ್ಷದಿಂದ ೧೫ ಸ್ಥಾನಗಳಲ್ಲಿ ೧೨ ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿ, ಸಾಗರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅದ್ಯಕ್ಷರಾದರು. ಆ ಸಮಯದಲ್ಲಿ ಲೆಇವಿರೋಧಿ ಚಳುವಳಿಯನ್ನು ಸಂಘಟಿಸಿದ್ದಲ್ಲದೆ ಗೇಣೀದಾರರ, ಕೃಷಿ ಕಾರ್ಮಿಕರ , ಹರಿಜನ,ಗಿರಿಜನರ, ದ್ವನಿಯಾಗಿ ಜನಪ್ರಿಯರಾದರು. ೧೯೭೨ ರ ವಿಧಾನಸಭೆಯ ಚುನಾವನೆಯಲ್ಲಿ ಪುನಃ ಸ್ಪರ್ಧಿಸಿ ಕಾಂಗ್ರಸ್ಸಿನ ಎದುರು ಜಯಗಳಿಸಿದರು. ಆಸಮಯದಲ್ಲಿ ಅನೇಕ ಗೇಣೀದಾರರಿಗೆ ಜಮೀನು ಕೊಡಿಸಲು ಹೋರಾಡಿ ಯಶಸ್ವಿಯಾದರು.
  • ೧೯೭೪ ರಲ್ಲಿ ಭೂಸುದಾರಣಾ ಶಾಸನವನ್ನು ರೂಪಿಸಲು ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿ ಸದಸ್ಯರಾಗಿ ಕ್ರಾಂತಿಕಾರಕ ಭೂ ಸುಧಾರಣಾ ಕಾಯಿದೆ ಜಾರಿಗೆ ತರಲು ಕಾರಣರಾಗಿದ್ದಾರೆ. ೧೯೭೩ ರಲ್ಲಿ ಸಂಡೂರು ಭೂ ವಿಮೋಚನಾನಾ ಚಳುವಳಿಯಲ್ಲಿ ಭಾಗವಹಿಸಿ, ಯಶಸ್ವಿ ಯಾಗಿ ಸಂಡೂರು ಇನಾಂ ರದ್ದಿಯಾತಿ ಮಸೂದೆ ಜಾರಿಯಾಗಲು , ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿದ್ದ ತಿಮ್ಮಪ್ಪನವರು ಯಶಸ್ವಿಯಾದರು.
  • ಜನತಾಪಕ್ಷವು ಒಡೆದಿದ್ದರಿಂದ ಇಂದಿರಾ ಕಾಂಗ್ರೆಸ್ ಬಡವರ ಪರವಗಿಕೆಲಸ ಮಡುವುದೆಂದು ಮನಗಂಡು ೧೯೮೦ ರಲ್ಲಿ ಕಾಂಗ್ರೆಸ್ (ಐ) ಪಕ್ಷ ಸೇರಿದರು. *೧೯೮೦ಮೇ ೫ ರಂದು ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಶ್ರೀಗುಂಡೂರಾವ್ ಬೆಂಬಲದಿಂದ ಆಯ್ಕೆಯಾಗಿ ಹಿಂದುಳಿದವರ ಸಮಿತಿಯ ಅದ್ಯಕ್ಷರಾದರು. ನಂತರ ಮು.ಮಂ. ಗುಂಡೂರಾವ್ ರವರು ಇವರನ್ನು ೧೯೮೦ ಅಕ್ಟೋಬರ್ ೩ರಂದು ಅರಣ್ಯ ಇಲಾಖೆಯ ಸಚಿವರನ್ನಾಗಿ ನಿಯುಕ್ತಿಗೊಳಿಸಿ ವಿಧಾನ ಪರಿಷತ್ತಿನ ಸಭಾನಾಯಕರಾಗಿ ನೇಮಿಸಲ್ಪಟ್ಟರು.
  • ಕೆಲವು ಕಾಲದ ನಂತರ ಗುಂಡೂರಾವ್ ಸಂಪುಟದ ಲೋಕೋಪಯೋಗಿ ಸಚಿವಾರಗಿ ನಿಯುಕ್ತಗೋಡರು. ಪುನಃ ೧೯೮೯ ರಲ್ಲಿ ನೆಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿಂದ ಸ್ಪರ್ಧಿಸಿ ಅಧಿಕ ಬಹುಮತದಿಮದ ಗೆದ್ದರು. ಆಗ ಇವರನ್ನು ಮು.ಮ.ವೀರೆಂದ್ರ ಪಾಟೀಲ ರು ರಾಜ್ಯ ಗೃಹಮಂಡಳಿ ಅದ್ಯಕ್ಷರಾಗಿ ನೇಮಕ ಮಾಡಿದರು. ನಂತರ ಶ್ರೀ ವೀರಪ್ಪ ಮೊಯಿಲಿ ಮಂತ್ರಿ ಮಂಡಲದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ನಿಯುಕ್ತಗೊಂಡರು. ೧೯೯೪ ನವೆಂಬರ್ ೨೦ರಂದು ಮತ್ತು ೧೯೯೯ ರಲ್ಲಿ ನಡೆದ ವಿಧಾನ ಸಭಾ ಚುನಾವನೆಯಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ ಗಳಿಸಿದರು.

೨೦೧೩ ವಿಧಾನಸಭಾ ಆದ್ಯಕ್ಷರು

ಬದಲಾಯಿಸಿ
  • ನಂತರ ಸಾಗರ ವಿಧಾನಸಭಾ ಕ್ಷೇತ್ರದಿಂದ ೨೦೧೩ ರ ವಿಧಾನ ಸಭಾ ಚುನಾವಣೆಯಲ್ಲಿ ೪೧೨೪೮ ಮತಗಳ ಅಂತರದಿಂದ ೭೧೫೬೦ ಮತ ಗಳಿಸುವ ಮೂಲಕ ಕಾಂಗ್ರೆಸ್ಸಿ ನ ಅಭ್ಯರ್ಥಿಯಾಗಿ ಜಯಗಳಿಸಿದರು . ಅವರನ್ನು ವಿಧಾನ ಸಭೆಯ ಅದ್ಯಕ್ಷರಾಗಿ ಸರ್ವಾನುಮತದಿದ ಆಯ್ಕೆ ಮಾಡಲಾಯಿತು.
ಚಿತ್ರ:.582006 461263060625943 1917697622 n
ಕಾಗೋಡು ತಿಮ್ಮಪ್ಪ

ಸಂಪುಟದರ್ಜೆ ಸಚಿವ

ಬದಲಾಯಿಸಿ

೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆದು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಕಂದಾಯ ಇಲಾಖೆಯನ್ನು ನೀಡಲಾಗಿತ್ತು.[]

ಉಲ್ಲೇಖಗಳು

ಬದಲಾಯಿಸಿ
  1. ಸಚಿವರ ಪ್ರಮಾಣ ವಚನ Archived 2016-07-23 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಜಾವಾಣಿ ವಾರ್ತೆ, Mon 06/20/201613
  2. 21-6-2016:kannadaprabha:official-portfolios-of-ministers-allocated


  • ಪರಿಚಯ ಕರಪತ್ರ - ಶ್ರೀ ಕಾಗೋಡು ತಿಮ್ಮಪ್ಪನವರ ಸನ್ಮಾನ ಸಮಿತಿ
  • ಶ್ರೀ ಕಾಗೋಡು ತಿಮ್ಮಪ್ಪನವರ ಬಗ್ಗೆ ಅಭಿನಂದನ ಗ್ರಂಥ= "ಸಾಧನೆಯ ಹರಿಕಾರ : ಕಾಗೋಡು ತಿಮ್ಮಪ್ಪ", ಪ್ರಕಾಶಿತ ಶ್ರೀ ಕಾಗೋದು ತಿಮ್ಮಪ್ಪ ಅಭಿನಂದನಾ ಸಮಿತಿ ಗಾಂಧಿಮಂದಿರ ಸಾಗರ.(ಡಾ.ಚಿ.ಬೋರಲಿಂಗಯ್ಯ.ಎನ್.ಹುಚ್ಚಪ್ಪಮಾಸ್ತರ್, ಕಾಗೋಡು ಅಣ್ಣಪ್ಪ.)