ಎಸ್. ಬಂಗಾರಪ್ಪ
ಸಾರೇಕೊಪ್ಪ ಬಂಗಾರಪ್ಪ ಕರ್ನಾಟಕ ರಾಜ್ಯದ ೧೨ ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಸಾರೇಕೊಪ್ಪ ಬಂಗಾರಪ್ಪ | |
---|---|
೧೨ನೆಯ ಕರ್ನಾಟಕದ ಮುಖ್ಯಮಂತ್ರಿ
| |
ಅಧಿಕಾರ ಅವಧಿ ೧೭ ಅಕ್ಟೋಬರ್ ೧೯೯೦ – ೧೯ನವಂಬರ್ ೧೯೯೨ | |
ರಾಜ್ಯಪಾಲ | ಭಾನು ಪ್ರತಾಪ್ ಸಿಂಗ್ ಖುರ್ಷಿದ್ ಆಲಮ್ ಖಾನ್ |
ಪೂರ್ವಾಧಿಕಾರಿ | ವೀರೇಂದ್ರ ಪಾಟೀಲ್ |
ಉತ್ತರಾಧಿಕಾರಿ | ಎಂ.ವೀರಪ್ಪಮೊಯ್ಲಿ |
ಮತಕ್ಷೇತ್ರ | ಸೊರಬ |
Member of the ಭಾರತೀಯ Parliament
for Shimoga (Lok Sabha constituency) | |
ಅಧಿಕಾರ ಅವಧಿ ೧೯೯೬ – ೧೯೯೮ | |
ಪೂರ್ವಾಧಿಕಾರಿ | ಕೆ.ಜಿ.ಶಿವಪ್ಪ |
ಉತ್ತರಾಧಿಕಾರಿ | ಆಯನೂರು ಮಂಜುನಾಥ |
ಅಧಿಕಾರ ಅವಧಿ ೧೯೯೯ – ೨೦೦೯ | |
ಪೂರ್ವಾಧಿಕಾರಿ | ಆಯನೂರು ಮಂಜುನಾಥ |
ಉತ್ತರಾಧಿಕಾರಿ | ಬಿ.ವೈ.ರಾಘವೇಂದ್ರ |
ವೈಯಕ್ತಿಕ ಮಾಹಿತಿ | |
ಜನನ | ಕುಬಟೂರು, ಶಿವಮೊಗ್ಗ | ೨೬ ಅಕ್ಟೋಬರ್ ೧೯೩೩
ಮರಣ | 26 December 2011 ಬೆಂಗಳೂರು | (aged 79)
ರಾಜಕೀಯ ಪಕ್ಷ | ಹಲವಾರು (ಏಳು) |
ಸಂಗಾತಿ(ಗಳು) | ಶಕುಂತಳ |
ಮಕ್ಕಳು | ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ |
ಜನನ
ಬದಲಾಯಿಸಿಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜೀ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತ. ಎಸ್. ಬಂಗಾರಪ್ಪ|ಎಸ್. ಬಂಗಾರಪ್ಪನವರು ತಮ್ಮ ಬೆಂಗಳೂರಿನ ಸದಾಶಿವ ನಗರ|ಸದಾಶಿವನಗರದ ಸ್ವಂತ ನಿವಾಸದಲ್ಲಿ ವಾಸಿಸುತ್ತಿದ್ದು, ತಮ್ಮ ಕೊನೆಯುಸಿರಿರುವವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ೧೯೩೩ ರ ಅಕ್ಟೋಬರ್, ೨೬ ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ . ಹಾಗೂ ತಾಯಿ ಕಲ್ಲಮ್ಮ. ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು 'ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ' ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡ|ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ ೧೯೬೨ ರಲ್ಲಿ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲಿವೃತ್ತಿಯನ್ನು ನಡೆಸುತ್ತಿದ್ದರು.
ರಾಜಕೀಯ
ಬದಲಾಯಿಸಿಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು.
ವಕೀಲ ವೃತ್ತಿ ಪ್ರವೇಶಿಸಿದ್ದ ವೇಳೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967ರಲ್ಲಿ ಮೊದಲ ಬಾರಿಗೆ ಸೊರಬ ದಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ.
ಸಮಾಜವಾದಿ ಹವಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್‌ನತ್ತ ಹೊರಳಿದ ಬಂಗಾರಪ್ಪ 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ನಾಯಕತ್ವ ವಹಿಸಿದರು. ಜನತಾ ಪಕ್ಷದೊಡನೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾರಂಗದ ಹೆಸರಿನಲ್ಲಿ ಚುನಾವಣಾ ಪ್ರಚಾರದ ನಾಯಕತ್ವ ವಹಿಸಿದರು.
ಕ್ಷೇತ್ರಕ್ಕೆ ಬಾರದೆಯೇ ಗೆದ್ದವರು
ಬದಲಾಯಿಸಿಆ ಸಂದರ್ಭ ದಲ್ಲಿ ಸೊರಬದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಫಲಿತಾಂಶದ ಬಳಿಕವಷ್ಟೇ ಕ್ಷೇತ್ರಕ್ಕೆ ಮರಳಿ ಬರುವೆ. ಅಲ್ಲಿಯವರೆಗೆ ರಾಜ್ಯ ಪ್ರವಾಸ ಮಾಡುವೆ. ನನ್ನನ್ನು ಗೆಲ್ಲಿಸಿಕೊಡುವುದು ಸೊರಬದ ಜನತೆ ಕೆಲಸ ಎಂದು ಹೇಳಿ ಹೊರಟವರು ಕೊನೆಗೆ ಚುನಾವಣಾ ದಿನ ಮತ ಹಾಕಲು ಸೊರಬಕ್ಕೆ ಬಂದರು. ಆ ಚುನಾವಣೆ ಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದರು ಎಂಬುದು ಇತಿಹಾಸ.
ಆದರೆ ಗೆಲುವು ಸಾಧಿಸಿ ಅಧಿಕಾರ ಹಿಡಿದ ಜನತಾರಂಗದ ನಾಯಕತ್ವ ಇದ್ದಕ್ಕಿದ್ದಂತೆ ರಾಮ ಕೃಷ್ಣ ಹೆಗಡೆ ಪಾಲಾಗಿ ಅವರು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಮತ್ತೆ ಸೆಡ್ಡು ಹೊಡೆದ ಬಂಗಾರಪ್ಪ ಜನತಾರಂಗ ತೊರೆದು ಕಾಂಗ್ರೆಸ್‌ಗೆ ಮರಳಿದರು. 1990ರಲ್ಲಿ ಮುಖ್ಯಮಂತ್ರಿಯಾದರು. 92ರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರು ಬಂಗಾರಪ್ಪ ಅವರನ್ನು ಅಧಿಕಾರ ದಿಂದ ಇಳಿಸಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿ ಯಾಗಿ ಮಾಡಿದರು.
ಪಕ್ಷಾಂತರ
ಬದಲಾಯಿಸಿಆಗ ಮತ್ತೆ ಕಾಂಗ್ರೆಸ್ ತೊರೆದು ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್ ಪಾರ್ಟಿ(ಕೆಸಿಪಿ) ಸ್ಥಾಪಿಸಿದರು. ಚುನಾ ವಣೆ ಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್ ಪಕ್ಷವನ್ನು ಅಧಿ ಕಾರದಿಂದ ದೂರಕ್ಕೆ ಸರಿಸಿದರು. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಬಂಗಾರಪ್ಪ, 1997ರಲ್ಲಿ ಪುನಃ ಕಾಂಗ್ರೆಸ್ ತೊರೆದು ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ) ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು.
ನಂತರ ಅದನ್ನು ಕಾಂಗ್ರೆಸ್ ಜೊತೆ ವಿಲೀನ ಗೊ ಳಿಸಿದರು. 2004ರಲ್ಲಿ ಕೇಂದ್ರದಲ್ಲಿ ಮಂತ್ರಿಯಾ ಗಬಹುದು ಎಂಬ ಆಕಾಂಕ್ಷೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನೂ ತೊರೆದು ಜೆಡಿಎಸ್ ಸೇರಿದರು. ಅದೇ ಅವರ ಕೊನೆ ಪಕ್ಷವಾಗಿತ್ತು. ಆದರೆ ಅವರು ಯಾವುದೇ ಪಕ್ಷ ಸೇರಿದರೂ ಸೊರಬದ ಜನ ಅವರನ್ನು ಬೆಂಬಲಿಸುತ್ತಿದ್ದರು.
ಅಲ್ಲದೆ ಯಾವುದೇ ಪಕ್ಷ ಸೇರಿದರೂ ಹಿಂದಿನ ಪಕ್ಷದಿಂದ ಗೆದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಸ್ಪರ್ಧೆ ಮಾಡುತ್ತಿದ್ದರು ಎಂಬುದು ವಿಶೇಷ. ಹಿಂದೆ ಮುಂದೆ ನೋಡದೆ ನಿರ್ಧಾರ ಕೈಗೊಳ್ಳುತ್ತಿದ್ದ ಅವರು ಹಠದಿಂದ ತಾವು ಅಂದು ಕೊಂಡಿದ್ದನ್ನು ಸಾಧಿಸುತ್ತಿದ್ದರು. ತಮ್ಮ ಸಿಟ್ಟಿಗೆ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು ಕೂಡ ದೂರ ಸರಿಸಿದರು. ಕೊನೆಯವರೆಗೂ ಪುತ್ರನನ್ನು ಹತ್ತಿರ ಸೇರಿಸಲಿಲ್ಲ.
ಇನ್ನೊಬ್ಬ ಪುತ್ರ ಮಧು ಬಂಗಾರಪ್ಪನವರನ್ನು ಶಾಸಕನಾಗಿ ನೋಡ ಬೇಕೆಂದು ಹಠ ತೊಟ್ಟರು. ಆದರೆ 2004ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು 2008 ರಲ್ಲಿ ತಮ್ಮ ಪುತ್ರರಿಬ್ಬರ ಸೋಲನ್ನು ನೋಡ ಬೇಕಾದ ದುರಂತ ಪರಿಸ್ಥಿತಿ ಅವರದ್ದಾಗಿತ್ತು. 2013ರಲ್ಲಿ ಮಧು ಬಂಗಾರಪ್ಪ ಶಾಸಕರಾಗುವ ವೇಳೆ ಬಂಗಾರಪ್ಪ ಇಹಲೋಕ ತೊರೆದಿದ್ದರು.
ಸೋಲಿಲ್ಲದ ಸರದಾರ ಎಂಬ ಅಭಿದಾನವನ್ನು ಪಡೆದ ಬಂಗಾರಪ್ಪ ಸೊರಬದಲ್ಲಿ ನಿರಂತರವಾಗಿ ಯಾವುದೇ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಿದ್ದರು ಎಂಬುದು ನಿಜ. ಆದರೆ 1994ರಲ್ಲಿ ಸೊರಬದಲ್ಲಿ ಕೆಸಿಪಿ ಸ್ಥಾಪಿಸಿದ್ದ ವೇಳೆ ಸಾಗರ ದಲ್ಲೂ ಒಂದು ಕೈ ನೋಡಿಯೇ ಬಿಡುವ, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುತ್ತೇನೆ ಎಂಬ ಭ್ರಮೆಗೆ ಸಿಕ್ಕು ಸ್ಪರ್ಧಿಸಿ ದರು. ಆದರೆ ಅಲ್ಲಿ 3ನೇ ಸ್ಥಾನ ಪಡೆಯಬೇಕಾಯಿತು.
ಬಳಿಕ ಅವರು ಸೋಲು ಕಂಡಿದ್ದು 2008ರಲ್ಲಿ. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜ ವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸುದ್ದಿ ಮಾಡಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪರೋಕ್ಷವಾಗಿ ಸಹಕರಿ ಸಿದ್ದವು. ಆದರೆ ಆಘಾತಕಾರಿ ಸೋಲು ಎದುರಾಗಿತ್ತು.
ನಿಧನ
ಬದಲಾಯಿಸಿಶ್ರೀ.ಬಂಗಾರಪ್ಪ ನವರು ಸ್ವಲ್ಪದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರು ನಗರದ ಮಲ್ಯ ಆಸ್ಪತ್ರೆ ಗೆ ಡಿಸೆಂಬರ್ ೮ ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸನ್, ೨೦೧೧ ರ, ರವಿವಾರ, ಡಿಸೆಂಬರ್, ೨೫ ರಂದು, ಮಧ್ಯರಾತ್ರಿ ೧೨-೪೫ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ,, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಅಂತಿಮ ಸಂಸ್ಕಾರ
ಬದಲಾಯಿಸಿಸನ್,೨೦೧೧ ರ, ಡಿಸೆಂಬರ್,೨೭, ಮಂಗಳವಾರದಂದು ಅಂತಿಮ ಸಂಸ್ಕಾರ ಜರುಗಿತು. ಅದರ ವಿವರಗಳು ಹೀಗಿವೆ. ಬೆಂಗಳೂರಿನಿಂದ ಕುಬಟೂರಿಗೆ ಶ್ರೀ.ಬಂಗಾರಪ್ಪನವರ ಶವವನ್ನು ಬೆಳಿಗ್ಗೆ ೪-೩೦ ಕ್ಕೆ ತರಲಾಯಿತು. ಅಲ್ಲಿಂದ ೪ ಕಿ.ಮೀ.ದೂರದ ಲಕ್ಕವಳ್ಳಿಯ ಅವರ ತೋಟದಲ್ಲಿ ಶ್ರೀ.ಬಂಗಾರಪ್ಪನವರ ತಂದೆ, ತಾಯಿಯರ ಸಮಾಧಿಯ ಎದುರಿಗೆ ಪೂಜೆಗಳನ್ನು ಸಲ್ಲಿಸಿ, ಪುನಃ ಕುಬಟೂರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆ ಆನವಟ್ಟಿ, ಸಮನ ಹಳ್ಳಿ, ಕುಪ್ಪಗಡ್ಡೆ, ತವನಂದಿ, ಕೊರಗೋಡು, ಗುಡವಿಕಾನ್, ಮತ್ತು ಹಳೇ ಸೊರಬ ದಿಂದ ಸೊರಬಕ್ಕೆ ತೆರಳುವ ಹೊತ್ತಿಗೆ ಮಧ್ಯಾನ್ಹ ೩ ಗಂಟೆಯಾಗಿತ್ತು. 'ಸೊರಬದ ಪದವೀ ಪೂರ್ವ ಕಾಲೇಜಿನ ಮೈದಾನ'ದಲ್ಲಿ 'ಬಂಗಾರಪ್ಪನವರ ಶವ'ವನ್ನು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ತದ ನಂತರ 'ರಾಜ್ಯ ಪೋಲೀಸ್ ಪಡೆ' 'ರಾಷ್ಟ್ರಗೀತೆಯನ್ನು ಪಠಿಸಿ' ಸಕಲ ಮರ್ಯಾದೆಗಳೊಂದಿಗೆ, ಮೂರು ಸುತ್ತಿನ ಕುಶಾಲ ತೋಪಿನ ಗೌರವದೊಂದಿಗೆ ಸಂಸ್ಕಾರ ವಿಧಿ ಮುಗಿಯಿತು. ಶವ ಸಂಸ್ಕಾರದ ಪ್ರಮುಖ ವಿಧಿಗಳಲ್ಲೊಂದಾದ 'ಅಗ್ನಿಸ್ಪರ್ಶ ಕಾರ್ಯ'ವನ್ನು ಸಂಜೆ ೭-೧೫ ಕ್ಕೆ, ಶ್ರೀ.ಬಂಗಾರಪ್ಪನವರ ಕೊನೆಯ ಮಗ, ಮಧು ಬಂಗಾರಪ್ಪ ನವರು ಮಾಡಿದರು. ಅಪಾರ ಜನಸ್ತೋಮ ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸಿತು. ಅಲ್ಲಿ ನೆರೆದಿದ್ದ ಪ್ರಮುಖ ರಾಜಕಾರಣಿಗಳೆಂದರೆ- ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ|ಸದಾನಂದ ಗೌಡ, ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ|ಸಿದ್ಧರಾಮಯ್ಯ, ರಾಜ್ಯ ಬಿ.ಜೆ.ಪಿ.ಘಟಕದ ಅಧ್ಯಕ್ಷ, ಕೆ.ಎಸ್. ಈಶ್ವರಪ್ಪ, ಶ್ರೀ.ಬಂಗಾರಪ್ಪನವರ ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಹಿತೈಷಿಗಳು ಹಾಜರಿದ್ದು ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಶ್ರೀ.ಬಂಗಾರಪ್ಪನವರಿಗೆ, ಗೌರವ ಸೂಚಿಸುವ ಸಲುವಾಗಿ ಎಲ್ಲ ಸರಕಾರಿ ಕಚೇರಿಗಳ ಮೇಲೆ, ರಾಷ್ಟ್ರಧ್ವಜವನ್ನು ಅರ್ಥಮಟ್ಟದಲ್ಲಿ ಹಾರಿಸಲಾಯಿತು.