ಇಂದ್ರಾಣಿ ರೆಹಮಾನ್

ಇಂದ್ರಾಣಿ ರೆಹಮಾನ್ (೧೯ ಸೆಪ್ಟೆಂಬರ್ ೧೯೩೦, ಚೆನ್ನೈ - ೫ ಫೆಬ್ರವರಿ ೧೯೯೯, ನ್ಯೂಯಾರ್ಕ್) ಭರತ ನಾಟ್ಯಂ, ಕೂಚಿಪುಡಿ, ಕಥಕ್ಕಳಿ ಮತ್ತು ಒಡಿಸ್ಸಿಯ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಅವರು ಪಶ್ಚಿಮದಲ್ಲಿ ಅದನ್ನು ಜನಪ್ರಿಯಗೊಳಿಸಿದರು. ನಂತರ ೧೯೭೬ ರಲ್ಲಿ ನ್ಯೂಯಾರ್ಕ್‌ನಲ್ಲಿ ನೆಲೆಸಿದರು.

ಇಂದ್ರಾಣಿ ರೆಹಮಾನ್
Born
ಇಂದ್ರಾಣಿ ಬಾಜಪೈ

(೧೯೩೦-೦೯-೧೯)೧೯ ಸೆಪ್ಟೆಂಬರ್ ೧೯೩೦[]
Died5 February 1999(1999-02-05) (aged 68)
ನ್ಯೂಯಾರ್ಕ್, ಯು‌ಎಸ್
Occupation(s)ಭಾರತೀಯ ಶಾಸ್ತ್ರೀಯ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ,
Spouseಹಬೀಬ್ ರೆಹಮಾನ್ (ವಾಸ್ತುಶಿಲ್ಪಿ) ಭಾರತ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ
Childrenರಾಮ್ ರೆಹಮಾನ್
ಸುಕನ್ಯಾ ರೆಹಮಾನ್
Motherರಾಗಿಣಿ ದೇವಿ
Awards೧೯೬೯: ಪದ್ಮಶ್ರೀ
೧೯೮೧:ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ಇಂದ್ರಾಣಿ ರೆಹಮಾನ್ ಅವರ ಭಾವಚಿತ್ರ, ಇಂದ್ರಾಣಿ ಎಮ್ಎಫ್ ಹುಸೇನ್ ಅವರಿಂದ

೧೯೫೨ ರಲ್ಲಿ, ಅವರು ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದರು. ನಂತರ ತಾಯಿ ರಾಗಿಣಿ ದೇವಿಯ ಕಂಪನಿಗೆ ಸೇರಿಕೊಂಡರು. ಅವರು ತಮ್ಮ ಅಂತರಾಷ್ಟ್ರೀಯ ಪ್ರವಾಸಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಒಡಿಸ್ಸಿಯನ್ನು ಜನಪ್ರಿಯಗೊಳಿಸಿದರು. ಇಂದ್ರಾಣಿ ಅವರು ೧೯೬೯ ರಲ್ಲಿ ಪದ್ಮಶ್ರೀ ಮತ್ತು ಪ್ರದರ್ಶನ ಕಲೆಯಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತಾರಕನಾಥ್ ದಾಸ್ ಪ್ರಶಸ್ತಿಯನ್ನು ಪಡೆದರು.

ಹಿನ್ನೆಲೆ ಮತ್ತು ಕುಟುಂಬ

ಬದಲಾಯಿಸಿ

ಇಂದ್ರಾಣಿ ರೆಹಮಾನ್ ಚೆನ್ನೈನಲ್ಲಿ (ಆಗ ಮದ್ರಾಸ್), ಇಂಡೋ-ಅಮೆರಿಕನ್ ಲೀಗ್‌ನ ಕೆಲ ಕಾಲದ ಅಧ್ಯಕ್ಷರಾಗಿದ್ದ (೧೮೮೦ - ೧೯೬೨) ರಾಮಲಾಲ್ ಬಲರಾಮ್ ಬಾಜ್‌ಪೇಯ್ ಹಾಗೂ ಅವರ ಪತ್ನಿ ರಾಗಿಣಿ ದೇವಿ ಅವರ ಮಗಳಾಗಿ ಜನಿಸಿದರು. ಆಕೆಯ ತಂದೆ ರಾಮಲಾಲ್ ಬಾಜಪೇಯ್ ಅವರು ಉತ್ತರ ಭಾರತದ ಹಿನ್ನೆಲೆಯವರಾಗಿದ್ದರು. ಅವರು ಉನ್ನತ ಶಿಕ್ಷಣಕ್ಕಾಗಿ ಯು‌ಎಸ್ ಗೆ ಹೋದ ರಸಾಯನಶಾಸ್ತ್ರಜ್ಞರಾಗಿದ್ದರು. ಇಲ್ಲಿ ಅವರು ಹುಟ್ಟಿನಿಂದಲೇ ಅಮೇರಿಕನ್ ಎಸ್ತರ್ ಲುಯೆಲ್ಲಾ ಶೆರ್ಮನ್ ಅವರನ್ನು ಭೇಟಿಯಾದರು ಮತ್ತು ವಿವಾಹವಾದರು.[] [] ಎಸ್ತರ್ ತನ್ನ ಮದುವೆಯ ನಂತರ ಹಿಂದೂ ಧರ್ಮವನ್ನು ಸ್ವೀಕರಿಸಿದರು ಮತ್ತು 'ರಾಗಿಣಿ ದೇವಿ' ಎಂಬ ಹೆಸರನ್ನು ಪಡೆದರು. []

ದಂಪತಿಗಳು ೧೯೨೦ ರ ದಶಕದಲ್ಲಿ ಭಾರತಕ್ಕೆ ಹಿಂತಿರುಗಿದರು. ರಾಮಲಾಲ್ ನಂತರ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಯಂಗ್ ಇಂಡಿಯಾ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದರು. ಸ್ವಾತಂತ್ರ್ಯದ ನಂತರ, ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆದರು, [] ಮತ್ತು ಇಂಡೋ-ಅಮೆರಿಕನ್ ಲೀಗ್‌ನ ಅಧ್ಯಕ್ಷರಾದರು. ಈ ಮಧ್ಯೆ, ರಾಗಿಣಿ ಭಾರತೀಯ ಶಾಸ್ತ್ರೀಯ ನೃತ್ಯದ ಭಾವೋದ್ರಿಕ್ತ ಪ್ರತಿಪಾದಕರಾದರು ಮತ್ತು ಅದರ ಪುನರುಜ್ಜೀವನ ಮತ್ತು ಪೋಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಭರತ ನಾಟ್ಯವನ್ನು ಕಲಿಯಲು ಪ್ರಾರಂಭಿಸಿದ ಮೈಸೂರಿನ ಜೆಟ್ಟಿ ತಾಯಮ್ಮ ಎಂಬ ಮಹಾನ್ ರಾಜದಾಸಿ (ರಾಜನ ವೇಶ್ಯೆ) ಅವರನ್ನು ಭೇಟಿಯಾದ ನಂತರ ಇದು ಸಂಭವಿಸಿತು. ನಂತರ ಅವರು ಚೆನ್ನೈನ ವೇಶ್ಯೆಯರಾದ ಗೌರಿ ಅಮ್ಮನ ಮಾರ್ಗದರ್ಶನದಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಮೆರೆದರು. [][] [] ರಾಗಿಣಿ ನಂತರ ಸ್ವತಃ ಪ್ರಸಿದ್ಧ ನರ್ತಕಿಯಾದರು ಮತ್ತು ೧೯೩೦ ರ ದಶಕದಲ್ಲಿ ಅತ್ಯಂತ ಗೌರವಾನ್ವಿತ ಪ್ರದರ್ಶಕರಲ್ಲಿ ಒಬ್ಬರಾದರು. [] ಅದೇ ಅವಧಿಯಲ್ಲಿ ರಾಗಿಣಿ ಕಥಕ್ಕಳಿಯ ಪುನರುಜ್ಜೀವನವನ್ನು ಸಹ ಸಮರ್ಥಿಸಿಕೊಂಡರು.

ದಂಪತಿಗಳಿಗೆ ಚೆನ್ನೈನಲ್ಲಿ ಜನಿಸಿದ ಇಂದ್ರಾಣಿ ಅವರು ಮಿಶ್ರ ಜನಾಂಗದ ಕುಟುಂಬದಲ್ಲಿ ಬೆಳೆದರು. ಅವರ ಅಮೇರಿಕನ್ ತಾಯಿಯಿಂದ ಅವರು ಅನಿರ್ಬಂಧಿತ ಮತ್ತು ಸ್ವತಂತ್ರವಾಗಿ ಬೆಳೆದರು. ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಸ್ಪರ್ಧಿಸಲು ಮನವೊಲಿಸಬಹುದಾದ ದೇಶಾದ್ಯಂತದ ಕೆಲವೇ ಕೆಲವು ಸ್ಪರ್ಧಾಳುಗಳಲ್ಲಿ ಇವರು ಒಬ್ಬರಾಗಿದ್ದರು. ಇಂದ್ರಾಣಿ ೧೯೫೨ ರಲ್ಲಿ 'ಮಿಸ್ ಇಂಡಿಯಾ' ಕಿರೀಟವನ್ನು ಪಡೆದರು.

 
ಇಂದ್ರಾಣಿ ರೆಹಮಾನ್ ೧೯೫೨ ರ ಮಿಸ್ ಇಂಡಿಯಾ ಕಿರೀಟವನ್ನು ಪಡೆದ ನಂತರ, ಭಾರತೀಯ ಕಾಂಗ್ರೆಸ್ ನಾಯಕ ಎಸ್‌ಕೆ ಪಾಟೀಲ್ ಮತ್ತು ಸ್ಪರ್ಧೆಯ ಇಬ್ಬರು ಪ್ರಾಯೋಜಕರೊಂದಿಗೆ
 
ಇಂದ್ರಾಣಿ ರೆಹಮಾನ್ (ಎಡದಿಂದ ಮೂರನೇ) ಮತ್ತು ರನ್ನರ್ ಅಪ್ ಮಿಸ್ ಸೂರ್ಯಕುಮಾರಿ (ಎಡದಿಂದ ಆರನೇ) ಮಿಸ್ ಇಂಡಿಯಾ ೧೯೫೨ ಭಾಗವಹಿಸಿದವರೊಂದಿಗೆ

ವೃತ್ತಿ

ಬದಲಾಯಿಸಿ

ಇಂದ್ರಾಣಿ ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮ್ಮ ತಾಯಿಯ ಕಂಪನಿಯಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ತಮ್ಮ ತಾಯಿ ಅಮೇರಿಕಾ ಮತ್ತು ಯುರೋಪಿನಲ್ಲಿ ಪ್ರಯಾಣಿಸುವಾಗ ಅವರೊಂದಿಗೆ ಹೋದರು. ೧೯೪೦ ರ ದಶಕದಲ್ಲಿ ಗುರು ಚೊಕ್ಕಲಿಂಗಂ ಪಿಳ್ಳೈ (೧೮೯೩-೧೯೬೮) ಅವರಿಂದ ಭರತ ನಾಟ್ಯಂನ ಪಂಡನಲ್ಲೂರ್ ಶೈಲಿಯನ್ನು ಕಲಿತ ನಂತರ ಅವರು ಭರತ ನಾಟ್ಯದಲ್ಲೇ ತಮ್ಮ ಮೊದಲ ಕಲಾ ಪ್ರದರ್ಶನ ಪ್ರಾರಂಭಿಸಿದರು. ಶೀಘ್ರದಲ್ಲೇ ಅವರು ವಿಜಯವಾಡದಲ್ಲಿದ್ದ, ಕೊರಡ ನರಸಿಂಹ ರಾವ್ ಅವರಿಂದ ಕೂಚಿಪುಡಿ ಕಲಿತರು, ನಂತರ ಅವರು ಪ್ರಪಂಚದ ಅನೇಕ ಭಾಗಗಳನ್ನು ಸುತ್ತಿದರು. [೧೦]

೧೯೪೭ ರಲ್ಲಿ, ಇಂದ್ರಾಣಿ ಭಾರತದ ಪ್ರಮುಖ ನೃತ್ಯ ಮತ್ತು ಕಲಾ ವಿಮರ್ಶಕ ಡಾ. ಚಾರ್ಲ್ಸ್ ಫ್ಯಾಬ್ರಿ ಅವರ ಗಮನವನ್ನು ಸೆಳೆದರು. ಅವರು ನಂತರ ಒರಿಸ್ಸಾಗೆ ಹೋಗಿ ಒಡಿಸ್ಸಿಯ ಕಡಿಮೆ-ಪ್ರಸಿದ್ಧ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಕಲಿಯಲು ಪ್ರೋತ್ಸಾಹಿಸಿದರು, ಒಡಿಸ್ಸಿ ಕಲಿತ ಮೊದಲ ವೃತ್ತಿಪರ ನೃತ್ಯಗಾರ್ತಿಯಾದರು. ಗುರು ಶ್ರೀ ದೇಬಾ ಪ್ರಸಾದ್ ದಾಸ್ ಅವರಿಂದ ಮೂರು ವರ್ಷಗಳ ಕಾಲ ಒಡಿಸ್ಸಿ ಕಲಿತ ನಂತರ, ಅವರು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅದನ್ನು ಜನಪ್ರಿಯಗೊಳಿಸಿದರು. [೧೧] [೧೨]

೧೯೫೨ ರಲ್ಲಿ, ವಿವಾಹವಾದರು ಮತ್ತು ಒಂದು ಮಗುವಿನ ತಾಯಿಯೂ ಆದರು. ಇದೇ ಸಮಯದಲ್ಲಿ ಅವರು ಮೊದಲ ಮಿಸ್ ಇಂಡಿಯಾ ಆದರು, [೧೩] [೧೪] ಮತ್ತು ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ೧೯೫೨ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಹೋದರು. [೧೫] ಇವರು ತಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದರು ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ನೀಡುತ್ತಿದ್ದರು. [೧೬] ೧೯೬೧ ರಲ್ಲಿ, ಅವರು ಏಷ್ಯಾ ಸೊಸೈಟಿಯಿಂದ ರಾಷ್ಟ್ರೀಯ ಪ್ರವಾಸದಲ್ಲಿ ನೃತ್ಯ ಪ್ರಸ್ತುತ ಪಡಿಸಿದ ಮೊದಲ ನರ್ತಕಿಯಾಗಿದ್ದರು ಮತ್ತು ವಾಷಿಂಗ್ಟನ್, ಡಿ‌ಸಿ ಗೆ ನೆಹರು ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಯು‌ಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಮತ್ತು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗಾಗಿ ಪ್ರದರ್ಶನ ನೀಡಿದರು. [] ನಂತರ ಅವರು ಚಕ್ರವರ್ತಿ ಹೈಲೆ ಸೆಲಾಸಿ, ರಾಣಿ ಎಲಿಜಬೆತ್ II, ಮಾವೋ ಝೆಡಾಂಗ್, ನಿಕಿತಾ ಕ್ರುಶ್ಚೇವ್ ಮತ್ತು ಫಿಡೆಲ್ ಕ್ಯಾಸ್ಟ್ರೋ ಅವರಿಗಾಗಿ ವರ್ಷಗಳ ಕಾಲ ಪ್ರದರ್ಶನ ನೀಡಿದರು. [] [೧೭] ೧೯೭೬ ರಲ್ಲಿ ಅವರು ನ್ಯೂಯಾರ್ಕ್‌ನ ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿರುವ ಜೂಲಿಯಾರ್ಡ್ ಸ್ಕೂಲ್‌ನಲ್ಲಿ ನೃತ್ಯ ವಿಭಾಗದ ಅಧ್ಯಾಪಕರಾದರು, ಹಾರ್ವರ್ಡ್ ಸೇರಿದಂತೆ ವಿವಿಧ ಅಮೇರಿಕನ್ ವಿಶ್ವವಿದ್ಯಾಲಯಗಳಲ್ಲಿ ಕಲಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಮ ಉಳಿದ ಎರಡು ದಶಕಗಳನ್ನು ವ್ಯಾಪಕವಾಗಿ ಪ್ರವಾಸ ಮಾಡುತ್ತಾ ಕಳೆದರು.

ವೈಯಕ್ತಿಕ ಜೀವನ

ಬದಲಾಯಿಸಿ

೧೯೪೫ ರಲ್ಲಿ, ತಮ್ಮ ೧೫ ನೇ ವಯಸ್ಸಿನಲ್ಲಿ ಅವರು ಪ್ರಸಿದ್ಧ ವಾಸ್ತುಶಿಲ್ಪಿ ಹಬೀಬ್ ರೆಹಮಾನ್ (೧೯೧೫-೧೯೯೫) ಅವರೊಂದಿಗೆ ಓಡಿಹೋಗಿ ವಿವಾಹವಾದರು. ದಂಪತಿಗೆ ಕಲಾವಿದನಾದ ರಾಮ್ ರೆಹಮಾನ್ ಎಂಬ ಒಬ್ಬ ಮಗ ಮತ್ತು ಸುಕನ್ಯಾ ರೆಹಮಾನ್ ಎಂಬ ಒಬ್ಬ ಮಗಳಿದ್ದಾಳೆ. ಸುಕನ್ಯಾ [೧೮] ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನೃತ್ಯ ಮಾಡಿದ್ದಳು. ಇಂದ್ರಾಣಿ ಅವರ ಮೊಮ್ಮಕ್ಕಳು ವಾರ್ಡ್ರೀತ್ ವಿಕ್ಸ್ ಮತ್ತು ಹಬೀಬ್ ವಿಕ್ಸ್.

ಇಂದ್ರಾಣಿ ರೆಹಮಾನ್ ೫ ಫೆಬ್ರವರಿ ೧೯೯೯ ರಂದು ನ್ಯೂಯಾರ್ಕ್‌ನ ಮ್ಯಾನ್ಹ್ಯಾಟನ್‌ನಲ್ಲಿ ನಿಧನರಾದರು.

ಪ್ರಶಸ್ತಿಗಳು

ಬದಲಾಯಿಸಿ

ಹೆಚ್ಚಿನ ಓದುವಿಕೆ

ಬದಲಾಯಿಸಿ
  • ಕುಟುಂಬದಲ್ಲಿ ನೃತ್ಯ, ಸುಕನ್ಯಾ ರೆಹಮಾನ್ ಅವರಿಂದ. ೨೦೦೧, ಹಾರ್ಪರ್‌ಕಾಲಿನ್ಸ್ ಇಂಡಿಯಾ.
  • ರಾಗಿಣಿ ದೇವಿ ಅವರಿಂದ ಭಾರತದ ನೃತ್ಯ ಉಪಭಾಷೆಗಳು . ಮೋತಿಲಾಲ್ ಬನಾರ್ಸಿದಾಸ್ ಪಬ್ಲ್. , 1990. ISBN 81-208-0674-3.

ಉಲ್ಲೇಖಗಳು

ಬದಲಾಯಿಸಿ
  1. "Remembering Indrani". 24 September 2009. Retrieved 1 April 2021.
  2. Ragini Devi Biography Notable American Women: A Biographical Dictionary Completing the Twentieth Century, by Susan Ware, Stacy Lorraine Braukman, Radcliffe Institute for Advanced Study. Harvard University Press, 2004. ISBN 0-674-01488-X, 9780674014886. Page 172-173.
  3. Book Review South Asian Women Forum
  4. ೪.೦ ೪.೧ Obituary: Indrani Rehman Archived 15 September 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. by Kuldip Singh, The Independent (London), 18 February 1999
  5. Ramalal Balram Bajpai – Biography[ಶಾಶ್ವತವಾಗಿ ಮಡಿದ ಕೊಂಡಿ]
  6. Rhythm of the new millennium[Usurped!]
  7. Dancing through their lives The Hindu, 22 September 2002.
  8. HINDU DANCES PRESENTED; Ragini Devi Seen in Theatre of All Nations Performance New York Times, 9 December 1944.
  9. ೯.೦ ೯.೧ Indrani, Performer of Classical Indian Dance, Dies at 68 New York Times, 8 February 1999.
  10. Indrani Rahman Kuchipudi: Kūcipūdi ISBN 81-7017-359-0, ISBN 978-81-7017-359-5
  11. ISBN 81-7017-434-1
  12. Guests Archived 5 October 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Stuttgart – Bharatiya Mujlis.
  13. MISS INDIA' IS PICKED; Architect's Wife Wins Boycotted Beauty Contest's Final New York Times, 4 April 1952.
  14. Indian Press Hails National Beauty Contest Won by Shapely Half-American in Her Sari New York Times, 5 April 1952.
  15. "Miss India". Archived from the original on 26 October 2009. Retrieved 2010-11-11.{{cite web}}: CS1 maint: bot: original URL status unknown (link)
  16. Indrani Rahman National Library of Australia.
  17. In Remembrance Archived 6 April 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Indian Express, 15 April 1999.
  18. Sukanya Rahman Website
  19. Padma Shri – Indrani Rahman Archived 1 December 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Padma Shri Official listing at Govt. of India website.
  20. Sangeet Natak Akademi Award – "Bharata Natyam Archived 12 February 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Sangeet Natak Akademi Award official listing.


ಬಾಹ್ಯ ಕೊಂಡಿಗಳು

ಬದಲಾಯಿಸಿ