ಭರತನಾಟ್ಯ
ಮಹರ್ಷಿಗಳು ಕಂಡರುಹಿದ ನಾಟ್ಯಕಲೆ
ಇತ್ತೀಚಿನ ದಿನಗಳಲ್ಲಿ ನಾಟ್ಯವು ಹಲವು ಬಗೆಗಳಲ್ಲಿ ಬೆಳೆದು ಬಂದಿದೆ. ನಾಟ್ಯರಂಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವುದು ಹಿಂದಿನ ಕಾಲದಲ್ಲಿ ನಟರ ವಾಡಿಕೆಯಾದರೆ, ಇದನ್ನು ಪ್ರದರ್ಶಿಸಲು ಇಂದು ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ. ಇಂದಿನ ನಾಟ್ಯಕಲಾ ಪ್ರದರ್ಶನದ ಮೂಲ ಉದ್ದೇಶವು ಬಹುಮಟ್ಟಿಗೆ ಮನೋರಂಜನೆ, ಕಲಾಪ್ರದರ್ಶನ, ಕೀರ್ತಿ ಸಂಪಾದನೆ ಹಾಗೂ ಧನ ಸಂಪಾದನೆಯೇ ಆಗಿದೆ. ಆಧುನಿಕ ಡ್ಯಾನ್ಸ್ ನ ಭರಾಟೆಯಲ್ಲಿ ಪ್ರಾಚೀನ ನಾಟ್ಯ ಪದ್ಧತಿಗಳಾದಂತಹ ಭರತನಾಟ್ಯವೇ ಮೊದಲಾದ ಭಾರತೀಯ ನಾಟ್ಯಪರಂಪರೆಗಳ ಜನಪ್ರಿಯತೆ ಕಡಿಮೆಯಾಗುತ್ತಿದೆಯೇನೋ ಎನ್ನಿಸುವಂತಿದೆ. ನಾಟ್ಯ, ಸಂಗೀತ, ನಾಟಕ ಮುಂತಾದ ದೃಶ್ಯ ಕಲೆಗಳು ಬಹಳ ಪ್ರಭಾವಶಾಲಿ ಮಾಧ್ಯಮಗಳು. ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮನೋರಂಜನೆಯನ್ನಷ್ಟೆ ಅಲ್ಲದೆ, ಲೋಕಕ್ಕೆ ಶಿಕ್ಷಣವನ್ನು ನೀಡುವಲ್ಲೂ, ನಮ್ಮ ಸಂಸ್ಕೃತಿ ಪ್ರಸಾರದಲ್ಲೂ ಮುಖ್ಯಪಾತ್ರ ವಹಿಸಬಲ್ಲವು.
ಇಂದಿನ ಕಾಲದಲ್ಲಿ ಕೆಲ ಯುವಕರು ಅತ್ಯಾಧುನಿಕ ಬೈಕುಗಳನ್ನು ಖರೀದಿಸಿ ಮಾಡುವ ವಿವಿಧ ಪ್ರದರ್ಶನಗಳನ್ನು ಗಮನಿಸಬಹುದು. ಉದಾಹರಣೆಗೆ, ಇದರಲ್ಲಿನ ಅತ್ಯುತ್ತಮ, ಬಲಿಷ್ಠ ಇಂಜಿನ್ ಶಕ್ತಿಯನ್ನು ಬಳಸಿಕೊಂಡು ಅತಿವೇಗವಾಗಿ ಗಾಡಿಗಳನ್ನು ಚಲಾಯಿಸುವುದು, ವ್ಹೀಲಿಂಗ್ ಮಾಡುವುದು ಇತ್ಯಾದಿಗಳಿಂದ ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ಗಾಡಿಯನ್ನು ತೆಗೆದುಕೊಂಡು ಮನೆಯಿಂದ ಹೊರಟರೂ ಪುನಃ ಕ್ಷೇಮವಾಗಿ ಮನೆಯನ್ನು ತಲುಪುವ ಜವಾಬ್ದಾರಿಯೂ ಇರಬೇಕು. ಈ ವಿಷಯವನ್ನು ಮರೆತು ಕ್ಷಣಿಕ ಸಂತೋಷಕ್ಕೆ ಒಳಗಾಗಿ ಮೈಮರೆತರೆ ಅಪಘಾತವಾಗುವುದುಂಟು. ನಾವು ತಿನ್ನುವ ಆಹಾರವು ನಾಲಿಗೆಗೆ ರುಚಿಯನ್ನು ಕೊಡುವುದರಲ್ಲಿ ಮಾತ್ರ ಸೀಮಿತವಾಗಿರದೆ ದೇಹದ ಅರೋಗ್ಯವನ್ನು ಕಾಪಾಡುವಂತಿರಬೇಕು. ಊಟವಾಗಲಿ, ನೋಟವಾಗಲಿ ರಸಭರಿತವಾಗಿರಬೇಕು. ಇಲ್ಲವಾದರೆ ಜೀವನ ಸಪ್ಪೆ. ಆದರೆ ನಾಲಿಗೆ, ಕಣ್ಣು ಮುಂತಾದ ಇಂದ್ರಿಯಗಳ ಕೈಯಲ್ಲೇ ಲಗಾಮನ್ನು ಕೊಟ್ಟುಬಿಟ್ಟರೆ ಈ ಶರೀರಕ್ಕೆ ತೊಂದರೆಯಾಗುವುದು ಕಟ್ಟಿಟ್ಟಿದ್ದು. ಈ ಮಾತು ಕಲಾಪ್ರದರ್ಶನಗಳಿಗೂ ಅನ್ವಯಿಸುತ್ತದೆ.
ಭಾರತದೇಶದಲ್ಲಿ ಮಹರ್ಷಿಗಳು ತಂದ ನಾಟ್ಯಕಲೆಯಲ್ಲಿ ಇಂದ್ರಿಯಗಳು ಮೆಚ್ಚುವ ಕಲೆ, ಸೌಂದರ್ಯ, ಮುಂತಾದ ಅಂಶಗಳು ಪುಷ್ಕಳವಾಗಿಯೇ ಇವೆ. ಆದರೆ ಮನೋರಂಜನೆಯೊಡನೆ ಆತ್ಮರಂಜನೆಗೂ ಬೇಕಾದ ರಸ, ಭಾವಗಳನ್ನು ಸೇರಿಸಿಟ್ಟಿದ್ದಾರೆ. ಭಾರತೀಯ ನಾಟ್ಯವು ಮೇಲ್ನೋಟಕ್ಕೆ ಮೈ ಕುಣಿಸುವಂತೆ ಕಂಡರೂ ಅಷ್ಟೇ ಅದರ ಉದ್ದೇಶವಲ್ಲ. ಭರತಮುನಿಗಳು ತಂದ ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ. ಅಲ್ಲಿ ದೇವಿಯ ಸೌಂದರ್ಯವೂ ಉಂಟು, ಶಿವನ ಗಾಂಭೀರ್ಯವೂ ಉಂಟು. ಶಿವೆಯ ಲಾಸ್ಯ- ಶಿವನ ತಾಂಡವಗಳೆರಡೂ ಉಂಟು. ಅದು ಒಳತಾಪಗಳನ್ನು ತಣಿಸುವುದು. ನಮ್ಮ ದೇಶದ ಸಂಸ್ಕೃತ ವ್ಯಾಕರಣ ಶಾಸ್ತ್ರದ ಆರಂಭದಲ್ಲಿ ಮಾಹೇಶ್ವರ ಸೂತ್ರಗಳ ಪ್ರಸ್ತಾಪವಿದೆ. ಆ ಪ್ರಕರಣದಲ್ಲಿ ನಟರಾಜನು ನೃತ್ತವನ್ನು ಮಾಡಿ ಅದರ ಅಂತ್ಯದಲ್ಲಿ ಢಕ್ಕೆಯನ್ನು ಹದಿನಾಲ್ಕು ಬಾರಿ ಬಾರಿಸಿದುದರಿಂದ ಸನಕಾದಿಸಿದ್ಧರ ಉದ್ಧಾರವಾಯಿತೆಂಬ ಮಾತಿದೆ. ಇಂತಹ ಅದ್ಭುತ ಪರಿಣಾಮ ಹೇಗಾಗಬಹುದೆಂಬ ಬಗ್ಗೆ ಬಹಳ ಜನರಲ್ಲಿ ಕುತೂಹಲವೇಳುವುದು ಸಹಜವೇ. ಭಾರತೀಯ ವಿದ್ಯೆ ಹಾಗೂ ಕಲೆಗಳ ಆಳವನ್ನು ಅರಿತಿದ್ದ ಶ್ರೀರಂಗ ಮಹಾಗುರುಗಳು ಈ ನೃತ್ತದ ಮರ್ಮವನ್ನು ಹೀಗೆ ಬಿಚ್ಚಿಟ್ಟಿದ್ದಾರೆ - “ನಟರಾಜನು, (ತನ್ನ) ನಾಟ್ಯಚೇಷ್ಟೆಯಿಂದ ಸೃಷ್ಟಿ ಸ್ಥಿತಿಗಳು ಆಗಿ, ತಿರುಗಿ ಲೀನವಾಗಿಸಲು ಉಂಟಾಗುವ ಆನಂದದ ಗುಟ್ಟನ್ನು ಸನಕಾದಿಸಿದ್ಧರಿಗೆ ಉಪದೇಶ ಮಾಡುತ್ತಾನೆ”. ಸನಕಾದಿಸಿದ್ಧರು ಅಂತರಂಗಕ್ಷೇತ್ರದ ಸಾಧನೆಯಿಂದ ನಾಟ್ಯಕಲಾಚಾರ್ಯನಾದ ನಟರಾಜನ ದೈವೀ ವಿಲಾಸಗಳನ್ನು ಅರ್ಥಮಾಡಿಕೊಳ್ಳಬಲ್ಲ ಶುದ್ಧಪ್ರಕೃತಿಯುಳ್ಳವರಾಗಿದ್ದರು. ನಾವೂ ಅಂತಹ ಪ್ರಕೃತಿಯವರಾಗಿದ್ದಾಗಷ್ಟೆ ನಟರಾಜನ ನಾಟ್ಯದ ಮರ್ಮವನ್ನು ಅರಿಯಬಹುದಷ್ಟೆ.
ಭಾರತೀಯ ನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಇಂದು ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಂಡ ಜೀವನದ ಮೂಲೋದ್ದೇಶವಾದ ಪರಮಾತ್ಮಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ.
ಯೋಗಾಯತನವೂ ಮತ್ತು ಭೋಗಾಯತನವೂ ಆಗಿರುವ ಈ ನಾಟ್ಯಕಲೆಯ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸುವಂತಾಗಲಿ ಎಂದು ಆಶಿಸೋಣ.
--
The neutrality of this article is disputed. |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.
ಭರತ ಪದದ ಅರ್ಥ
ಬದಲಾಯಿಸಿಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.
ಶ್ಲೋಕ
ಬದಲಾಯಿಸಿಭಕಾರೋ ಭಾವಸಂಯುಕ್ತೋ, ರೇಕೋ ರಾಗೇಣ ಸಂಶ್ರೀತಃ, ತಕಾರಸ್ ತಾಳ ಇತ್ಯಾಹುಹು ಭರತಾರ್ಥ ವಿಚಕ್ಶಣೈ ಹಿ
ಹಿನ್ನೆಲೆ
ಬದಲಾಯಿಸಿ- ಪ್ರಾಚೀನ ಕಾಲದಲ್ಲಿ ಭರತ ನಾಟ್ಯಂನ್ನು ದೇವಾಲಯಗಳಲ್ಲಿ (ದೇವಸ್ಥಾನ) ದೇವದಾಸಿಯರ ಮೂಲಕ "ಸಾದಿರ್ ಆಟಂ " (ಆಸ್ಥಾನ ನೃತ್ಯ) ಎಂದು ಮಾಡುತ್ತಿದ್ದರು. ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೆಲ್ ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು [೧][೨][೩] ದೇವಸ್ಥಾನಗಳಲ್ಲಿ ಪ್ರಾಚೀನ ಶಿಲ್ಪಗಳು ಅನೇಕ ಭರತ ನಾಟ್ಯಂನ ಕರಣಗಳು ಅಥವಾ ನೃತ್ಯ ಭಂಗಿಗಳನ್ನು ಆಧರಿಸಿವೆ.
- ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂನ್ನು ಹೇಳಬಹುದು. ಸಂಪ್ರದಾಯದಂತೆ ಗುಡಿಯಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.
- ಆದುದರಿಂದ,ಭಾರತೀಯ ಆಡಳಿತಗಾರರು ಮಾಡಿದಂತೆ ಸಾಂಪ್ರದಾಯಿಕವಾಗಿ ನಿರ್ವಹಿಸಲ್ಪಡುವ ಹಲವು ಹಿಂದೂ ದೇವಾಲಯಗಳು, ತರಬೇತಿ ಹೊಂದಿದ ಸಂಗೀತಗಾರರು ಮತ್ತು ನೃತ್ಯಗಾರರನ್ನು ಪೋಷಿಸಿವೆ. ಕಲಿಯುಗದಲ್ಲಿ ಭಾರತದ ಹೆಚ್ಚಿನ ಎಲ್ಲಾ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ.
- ಆದುದರಿಂದ ಭರತನಾಟ್ಯಂ ಮತ್ತು ಕರ್ನಾಟಕ ಸಂಗೀತದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ ಭರತ ನಾಟ್ಯಂನ್ನು ಸಂಗೀತದ ದೃಶ್ಯ ರೂಪಕ,ಭಕ್ತಿಯ ಒಂದು ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಭರತನಾಟ್ಯಂನಲ್ಲಿ ಸಂಗೀತ ಮತ್ತು ನೃತ್ಯ ಬೇರ್ಪದಿಸಲಾಗದ ರಚನೆಗಳು ಮತ್ತು ಕೇವಲ ಸಂಗೀತದ ಅನುಭೂತಿಯಿಂದ ಮಾತ್ರ ನೃತ್ಯವನ್ನು ಆಸ್ವಾದಿಸಲು ಸಾದ್ಯ.
- ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ನೃತ್ತ (ಲಯಬದ್ಧ ಚಲನೆ) ನಾಟ್ಯ (ನಾಟಕೀಯತೆ) ಮತ್ತು ನೃತ್ಯ (ನೃತ್ತ ಮತ್ತು ನಾಟ್ಯದ ಸಂಯೋಜನೆ)ತಮಿಳುನಾಡು ವಿಶೇಷವಾಗಿ ತಂಜಾವೂರು, ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ. ಭರತನಾಟ್ಯವು ೧೭೯೮-೧೮೨೪ ರಲ್ಲಿ ಮರಾಠ ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.
- ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರುನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಬ್ರಾಹ್ಮಣರಾಗಿದ್ದರು.
ಶೈಲಿಗಳು
ಬದಲಾಯಿಸಿಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವುಗಳೇಂದರ
- ತಂಜಾವುರು ಶೈಲಿ,
- ಕಲಾಕ್ಷೇತ್ರ ಶೈಲಿ,
- ಮೆಲ್ತೂರು ಶೈಲಿ,
- ಪಂದನಲ್ಲೂರ್ ಶೈಲಿ,
- ಕಾಂಚೀಪುರಂ ಶೈಲಿ,
- ಮೈಸೂರು ಶೈಲಿ[೪]
ವೇಶಭೂಷಣ
ಬದಲಾಯಿಸಿತುಯ್ಯ ಸೀರೆ
ಬದಲಾಯಿಸಿದೇವದಾಸಿಯರು ನರ್ತಿಸುತ್ತಿದ್ದಾಗ ಉಪಯೋಗಿಸುತ್ತಿದ್ದ ಉಡುಗೆ-ತೊಡುಗೆಗಳು ಪರಿಷ್ಕಾರವಾಗುತ್ತಲೇ ಬಂದು, ಇಂದು ನಾವು ಹೊಲಿದ ರೀತಿಯ ಉಡುಪನ್ನು ನೋಡಬದುದಾಗಿದೆ. ಸಾಂಪ್ರದಾಯಿಕ ಬಣ್ಣಗಳಾದ ಹಸಿರು, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳ ಉಡುಪುಗಳನ್ನು ಕಾಣಬಹುದು. ಹಿಂದೆ ಒಂಭತ್ತು ಗಜದ ಸೀರೆಯನ್ನು ಉಡುತಿದ್ದರು. ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು. ಮೇಲೆ ಉದ್ದಕ್ಕೆ ಸೊಂಟದವರೆಗೂ ಚೋಲಿಯನ್ನು ಧರಿಸಿ, ಚೋಲಿಯ ತೋಳುಗಳು ಮೊಣಕೈವರೆಗೂ ಬರುವಂತೆ ಇರುತ್ತಿತ್ತು. ಇದಕ್ಕೆ ತುಯ್ಯ ಸೀರೆ ಎಂದು ಕರೆಯುತ್ತಿದ್ದರು. ಇದರೊಂದಿಗೆ ಕಂಠಕ್ಕೆ ಸಣ್ಣ ಹಾರ ಹಾಗೂ ಉದ್ದನೆಯ ಇನ್ನೊಂದು ಹಾರವನ್ನು ಹಾಕುತ್ತಿದ್ದರು. ಸೊಂಟಕ್ಕೆ ಗೆಜ್ಜೆಡಾಬು, ಕೈಗಳಿಗೆ ಕುಸುರಿ ಕೆಲಸ ಮಾಡಿದ ಬಳೆಗಳು, ಕಿವಿಗೆ ಓಲೆ-ಝುಮುಕಿ. ಕೆನ್ನೆ ಸರಪಳಿ, ಮೂಗಿಗೆ ಮೂಗುನತ್ತು ಹಾಗೂ ಬುಲ್ಲಾಕು, ತೊಳ ಬಂದಿಗಳು, ಕಾಲಿಗೆ ಕಾಲಂದುಗೆ, ಕೈಗಳ ಬೇರಳುಗಳಿಗೆ ಉಂಗುರಗಳು, ಕಾಲಲ್ಲಿ ಬೆಳ್ಳಿ ಗೆಜ್ಜೆಗಳು, ಜಡೆ ಬಿಲ್ಲೆ ಹಾಗೂ ಕುಚ್ಚುಗಳನ್ನು ಧರಿಸುತ್ತಿದ್ದರು.
ಪೈಜಾಮದ ಉಡುಪು
ಬದಲಾಯಿಸಿಇದರಲ್ಲಿ ಹಲವಾರು ವಿಧಗಳಿವೆ.
- ಕಾಲಕ್ರಮೇಣ ಸೀರೆಯನ್ನು ಕಚ್ಚೆಹಾಕಿ ಉಡುವುದು ಕಡಿಮೆಯಾಗಿ ಪೈಜಾಮ ರೀತಿಯಲ್ಲಿ ಹಾಕಿ ಕೊಳ್ಳುವ ಉಡುಪಾಗಿ ಬದಲಾಯಿತು. ಪೈಜಾಮದಂತೆ ಹೊಲಿದ ಉಡುಪಿಗೆ ಮಧ್ಯದಲ್ಲಿ ಅನೇಕ ಮಡಿಕೆಗಳಿರುವ ಬಟ್ಟೆಯಿದ್ದು, ಚೋಲಿಯ ಮೇಲೆ ಸೆರಗಿನಂತಹ ಒಂದು ಬಟ್ಟೆ ಹೊದ್ದಿರುತ್ತಾರೆ. ಬಟ್ಟೆಯ ಮಡಿಕೆಯು ಮಂಡಿಗಿಂತ ಎರಡು ಇಂಚಿನಷ್ಟು ಉದ್ದವಿರುತ್ತದೆ.
- ಇನ್ನೊಂದು ರೀತಿಯ ಉಡುಪು ಸೀರೆಯ ರೀತಿಯದು. ಒಳಗೆ ಪೈಜಾಮವನ್ನು ಮಂಡಿಯವರೆಗೂ ಹಾಕಿ, ಅದರ ಮೇಲೆ ಸೀರೆಯನ್ನು ಮಂಡಿಯಿಂದ ಮುಕ್ಕಾಲು ಇಂಚಿನಷ್ಟು ಕೆಳಗೆ ಬರುವಂತೆ ಸೀರೆಯನ್ನು ಮಡಚಿ ಹೊಲಿದು, ತದನಂತರ ಅನೇಕ ಬಾರಿ ಮಡಚಿ, ನೆರಿಗೆ ಬರುವ ರೀತಿಯಾಗಿಸುವುದು, ನಂತರ ಸೆರಗನ್ನು ಹೊದ್ದು, ಸುತ್ತಿ ತಂದು ಎಡಪಕ್ಕದಲ್ಲಿ ಮಡಚಿದ ನೆರಿಗೆಗಳನ್ನು ಇಳಿಬಿಡುವುದು.
- ನೆರಿಗೆಯು ಮೂರು ಮೆಟ್ಟಿಲುಗಳಾಗಿ ಇರುವುದು ಇನ್ನೊಂದು ವಿಧ.
- ಪೈಜಾಮ ಉಡುಪಿನ ನೆರಿಗೆಯು ಸೊಂಟದ ಎಡಪಕ್ಕದಿಂದ ಬಲಕಾಲಿನವರೆಗೂ ಕರ್ಣ ರೇಖೆಯಲ್ಲಿ ನೆರಿಗೆಯಾಗಿ ಧರಿಸುವುದು.
- ಪೈಜಾಮದಲ್ಲಿ ಉದ್ದನೆಯ ನೆರಿಗೆ ಇದ್ದು, ಮೇಲುಗಡೆಯಲ್ಲಿ ಚಿಕ್ಕದಾದ ನೆರಿಗೆ ಇರುವುದು, ನೆರಿಗೆಯಲ್ಲಿ ಮಧ್ಯೆ ಒಂದು ಪಟ್ಟಿಯಂತಹ ಜರಿ ಇರುವುದು.
- ಪೈಜಾಮದ ಉಡುಪಿನಲ್ಲಿ ಮೊಣಕಾಲಿನಿಂದ ಕೆಳಗೆ ಉದ್ದದ ನೆರಿಗೆ ಇದ್ದು,ಈ ನೆರಿಗೆಯ ಕೆಳಗೆ ಮೂರು ಇಂಚಿನ ಮತ್ತೊಂದು ನೆರಿಗೆ ಇದ್ದು ಅದಕ್ಕೆ ಕುಚ್ಚನ್ನು ಕಟ್ಟಿರುತ್ತಾರೆ.
ಪಾಠಕ್ರಮ
ಬದಲಾಯಿಸಿಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಗಿಯುತ್ತದೆ
ಹಸ್ತ ಮುದ್ರೆಗಳು
ಬದಲಾಯಿಸಿನಂದಿಕೇಶ್ವರನ ಅಭಿನಯದರ್ಪಣದಪ್ರಕಾರ ಭರತನಾಟ್ಯದಲ್ಲಿ ೨ ವಿಧವಾದ ಹಸ್ತಮುದ್ರೆಗಳಿವೆ.
ಅಸಂಯುತ ಹಸ್ತಗಳು
ಬದಲಾಯಿಸಿಒಂದು ಕೈಯಿಂದ ಮಾಡುವ ಹಸ್ತಗಳು.ಇದು ೨೮ ಹಸ್ತಗಳಿವೆ.ಅವುಗಳು
- ಪತಾಕ
- ತ್ರಿಪತಾಕ
- ಅರ್ಧಪತಾಕ
- ಕತ್ತರೀ ಮುಖ
- ಮಯೂರ
- ಅರ್ಧಚಂದ್ರ
- ಅರಾಳ
- ಶುಖತುಂಡ
- ಮುಷ್ಠಿ
- ಶಿಖರ
- ಕಪಿತ್ಥ
- ಕಟಕಾಮುಖ
- ಸೂಚಿ
- ಚಂದ್ರಕಲಾ
- ಪದ್ಮಕೋಶ
- ಸರ್ಪಶೀರ್ಷ
- ಮೃಗಶೀರ್ಷ
- ಸಿಂಹಮುಖ
- ಲಾಂಗೂಲ
- ಆಲಪದ್ಮ
- ಚತುರ
- ಭ್ರಮರ
- ಹಂಸಾಸ್ಯ
- ಹಂಸಪಕ್ಷ
- ಸಂದಂಶ
- ಮುಖುಳ
- ತಾಮ್ರಚೂಡ
- ತ್ರಿಶೂಲ
ಸಂಯುತ ಹಸ್ತ
ಬದಲಾಯಿಸಿಎರಡು ಕೈಗಳನ್ನು ಉಪಯೋಗಿಸಿ ಮಾಡುವ ಹಸ್ತಗಳು. ಇವು ೨೪ ಹಸ್ತಗಳಿವೆ.
- ಅಂಜಲಿ
- ಕಪೋತ
- ಕರ್ಕಟ
- ಸ್ವಸ್ತಿಕ
- ಡೋಲಾಹಸ್ತ
- ಪುಷ್ಪಪುಟ
- ಉತ್ಸಂಗ
- ಶಿವಲಿಂಗ
- ಕಟಕಾವರ್ಧನ
- ಕತ್ತರಿಸ್ವಸ್ತಿಕ
- ಶಕಟ
- ಶಂಖ
- ಸಂಪುಟ
- ಚಕ್ರ
- ಪಾಶ
- ಕೀಲಕ
- ಮತ್ಸ
- ಕೂರ್ಮ
- ವರಾಹ
- ಗರುಡ
- ನಾಗಬಂಧ
- ಕಟ್ವಾ
- ಭೇರುಂಡ
- ಅವಹಿತ್ಥ
ಚತುರ್ವಿಧ ಅಭಿನಯ
ಬದಲಾಯಿಸಿಅಭಿ ಎಂದರೆ ಮನಸ್ಸಿನ ಭಾವ, ನಯ ಎಂದರೆ ಪ್ರದರ್ಶಿಸು ಎಂದು ಅರ್ಥ. ಒಟ್ಟಾರೆಯಾಗಿ ಅಭಿನಯ ಎಂದರೆ ಮನಸ್ಸಿನ ಭಾವನೆಗಳನ್ನು ಮುಖದ ಮೂಲಕ ಪ್ರೇಕ್ಷಕರಿರ ಮುಂದೆ ಪ್ರದರ್ಶಿಸುವು ಎಂದು ಅರ್ಥ. ಅಭಿನಯದಲ್ಲಿ ನಾಲ್ಕು ವಿಧಗಳು, ಅವುಗಳೆಂದರೆ
- ಆಂಗಿಕ ಅಭಿನಯ
- ವಾಚಿಕ ಅಭಿನಯ
- ಆಹಾರ್ಯ ಅಭಿನಯ ಮತ್ತು
- ಸಾತ್ವಿಕ ಅಭಿನಯ
ಆಂಗಿಕ ಅಭಿನಯ
ಬದಲಾಯಿಸಿವಿಧಗಳು
ಬದಲಾಯಿಸಿಆಂಗಿಕಾಭಿನಯ ದಲ್ಲಿ ಎರಡು ವಿಧಗಳು
- ಪದಾರ್ಥಾಭಿನಯ - ಮಾತಿನ ಅಥವಾ ಹಾಡಿನ ಒಂದೊಂದು ಶಬ್ದದ ಅರ್ಥವನ್ನು ತೋರಿಸುವುದು.
- ವಾಕ್ಯಾರ್ಥಾಭಿನಯ - ಒಂದು ವಾಕ್ಯದ ಒಳಾರ್ಥ ಅಥವಾ ಅದರ ಮನೋಭಾವವನ್ನು ತೋರಿಸುವುದು. ಇದರಲ್ಲಿ ಮೂರು ವಿಧಗಳು. ಅವುಗಳೆಂದರೆ,
- ಶಾಖಾ - ಶಾಖಾ ಎಂದರೆ ಕವಲು. ಇಲ್ಲಿ ಕೈಗಳ ವಿವಿಧ ಚಲನೆಗಳಲ್ಲಿ ಶಬ್ದಾರ್ಥ ತಿಳಿಸುತ್ತದೆ. ಅವು ಅಭಿನಯ ಹಸ್ತ ರೀತಿ ಮತ್ತು ನೃತ್ತ ಹಸ್ತ ರೀತಿಗಳ ವಿನಿಯೋಗ.
- ಅಂಕುರ - ಅಭಿನಯ ಹಸ್ತ ರೀತಿಯನ್ನು ಕಾರ್ಯರೂಪದಲ್ಲಿ ಪ್ರಯೋಗಿಸಿದರೆ ಅದು ಅಂಕುರ.
- ನೃತ್ತ - ನೃತ್ತಹಸ್ತಗಳನ್ನು ನರ್ತನ ವಿಭಾಗದಲ್ಲಿ ಪ್ರಯೋಗಿಸಿದಾಗ ಅದು ನೃತ್ತ.
ನರ್ತಕರು ನೃತ್ಯ ಪ್ರದರ್ಶಿಸುವಾಗ ಅವರ ಚಲನ ಮತ್ತು ಭಾವಸೂಚನೆಗಳು ಪ್ರೇಕ್ಷಕನ ಮನಸ್ಸನ್ನು ಸುಲಭವಾಗಿ ಆಕರ್ಷಿಸುತ್ತದೆ. ಇದಕ್ಕೆ ಮಾನವನ ದೇಹದ ಭಾಗಗಳು ಮುಖ್ಯವಾಗುತ್ತದೆ. ಈ ದೇಹದ ಭಾಗಗಳಲ್ಲಿ ಮೂರು ವಿಧಗಳು. ಅವುಗಳೆಂದರೆ,
- ಅಂಗ
- ಪ್ರತ್ಯಾಂಗ
- ಉಪಾಂಗ
ಇವುಗಳ ಸಹಾಯದಿಂದ ಆಂಗಿಕಾಭಿನಯ ಸಾಧ್ಯ.
ಅಂಗಗಳು
ಬದಲಾಯಿಸಿಶಿರ, ಹಸ್ತ, ವಕ್ಷ, ಪಾರ್ಶ್ವ, ಕಟಿ ಮತ್ತು ಪಾದಗಳು.
ಪ್ರತ್ಯಾಂಗಗಳು
ಬದಲಾಯಿಸಿಸ್ಕಂದ, ಬಾಹು, ಪೃಷ್ಠ, ಉದರ, ಊರು ಮತ್ತು ಜಂಘೆ.
ಉಪಾಂಗಗಳು
ಬದಲಾಯಿಸಿದೃಷ್ಠಿ, ಭ್ರೂಪುಟ, ತಾರಾ, ಕಪೋಲ, ನಾಸಿಕ, ಹನು, ಅಧರ, ದಶನಾ, ಜಿಹ್ವಾ, ಚುಬಕ ಮತ್ತು ವದನ. ಇದರೊಂದಿಗೆ ಹಿಮ್ಮಡಿ, ಹರಡು, ಕಾಲು, ಕೈಬೆರಳುಗಳು, ಅಂಗಾಲು ಮತ್ತು ಅಂಗೈಗಳು ಅಂಗಾಂತರಗಳೆನಿಸಿವೆ. ಆಂಗಿಕ ಅಭಿನಯಕ್ಕೆ ಸಹಾಯಕವಾಗುವ ದೈಹಿಕಭಾಗಗಳಿಗೆ ಶಾರೀರಕ, ಮುಖಜ ಮತ್ತು ಚೇಷ್ಟಾಕೃತ ಎಂಬ ವಿಧಗಳಿವೆ. ಶಾರೀರಿಕ ಅಭಿನಯ ದೇಹದ ಭಾಗಗಳಿಗೆ ಸಂಬಂಧಿಸಿದೆ, ಮುಖಜ ಅಭಿನಯ ಮುಖಕ್ಕೆ ಸಂಬಂಧಿಸಿದರೆ, ಚೇಷ್ಟಾಕೃತ ಅಭಿನಯ ದೇಹದ ಚಲನವಲನಗಳಿಗೆ ಸಂಬಂಧಿಸಿದೆ.
ವಾಚಿಕ ಅಭಿನಯ
ಬದಲಾಯಿಸಿನೃತ್ಯದಲ್ಲಿ ಹಾಡುಗಳು ಸೇರಿದಾಗ ವಾಚಿಕಾಭಿನಯವಾಗುತ್ತದೆ. ಹಾಡುಗಾರನ ಸಂಗೀತದಿಂದ ಪ್ರೇಕ್ಷಕರಲ್ಲಿ ರಸವು ಸೃಷ್ಠಿಯಾಗುತ್ತದೆ. ಭರತನಾಟ್ಯಕ್ಕೆ ಹೊಂದುವುದು ಕರ್ನಾಟಕ ಶಾಸ್ತ್ರೀ ಸಂಗೀತ. ಹಂಸಧ್ವನಿ, ಆರಭಿ, ಮೋಹನ, ಹಂಸಾನಂದಿ ಮೂಂತಾದ ರಾಗಗಳ ಕೃತಿಗಳನ್ನು, ದೇವರನಾಮಗಳನ್ನು, ಭಜನೆಗಳನ್ನು ಹಾಡುತ್ತಾರೆ. ಕಲ್ಯಾಣಿ, ವಸಂತ, ತೋಡಿ, ಹೇಮಾವತಿ ರಾಗಗಳನ್ನು ಜತಿಸ್ವರದಲ್ಲಿ ಬಳಸುತ್ತಾರೆ. ನಾಯಕ - ನಾಯಕಿಯರಿಗೆ ಸಂಬಂಧಿಸಿರುವ ಪದಂ, ಜಾವಳಿ, ಅಷ್ಟಪದಿಗಳಿಗೆ ಸರಿಯಾಗಿ ರಾಗ ಮತ್ತು ತಾಳವನ್ನು ಸಂಯೋಜಿಸಿರುತ್ತಾರೆ. ಮನಸ್ಸಿನಲ್ಲಿ ಉಕ್ಕಿ ಬರುವ ಎಲ್ಲಾ ಭಾವನೆಗಳಿಗೂ ದೈಹಿಕಪ್ರತಿಕ್ರಿಯೆಗಳು ಆಂಗಿಕವಾಗಿದ್ದಾಗ ಅದು ನರ್ತನ,ಲಯಬದ್ಧವಾದ ನಾದ ವಿನ್ಯಾಸವಾಗಿದ್ದಾಗ ಅದು ಸಂಗೀತ.
ನವರಸಗಳು
ಬದಲಾಯಿಸಿನವರಸಗಳು ೯, ಅವುಗಳೆಂದರೆ
- ಶೃಂಗಾರ(ಪ್ರೀತಿ,ಪ್ರಣಯ)
- ಹಾಸ್ಯ(ಪರಿಹಾಸ)
- ಕರುಣ(ಮರುಕ)
- ರೌದ್ರ(ಭೀಕರ)
- ವೀರ(ಧೀರ,ಸಾಹಸಿ)
- ಭಯಾನಕ(ಹೆದರಿಕೆ)
- ಬೀಭತ್ಸ(ಅಸಹ್ಯ)
- ಅದ್ಭುತ(ಆಶ್ಚರ್ಯ)
- ಶಾಂತ(ಸಮಾಧಾನ,ನೆಮ್ಮದಿ)
ಗ್ರಂಥಋಣ ಮತ್ತು ಕರ್ತೃ
ಬದಲಾಯಿಸಿ- ನಾಟ್ಯಶಾಸ್ತ್ರ - ಭರತಮುನಿ
- ಅಭಿನವ ದರ್ಪಣ - ನಂದಿಕೇಶ್ವರ
- ಭರತಾರ್ಣವ - ನಂದಿಕೇಶ್ವರ
- ದಶರೂಪಕ - ಧನಂಜಯ
- ನೃತ್ಯಕಲೆ - ಯು.ಎಸ್.ಕೃಷ್ಣರಾವ್ ಮತ್ತು ಯು.ಕೆ.ಚಂದ್ರಭಾಗದೇವಿ
- ಶ್ರುತಗಾನ - ಜಿ.ಟಿ.ನಾರಯಣರಾವ್
- ವಿಮರ್ಶೆಯ ವ್ಯಾಪ್ತಿ - ಕೃಷ್ಣಮೂರ್ತಿ,ಕಿತ್ತೂರ
- ನಾದಲಹರಿ ಶಾಸ್ತ್ರ ಚಂದ್ರಿಕೆ - ಪ.ಸಿದ್ದರಾಮಯ್ಯ ಮಠಪತಿ
- ನೃತ್ಯಲೋಕ - ಕೆ.ಮುರಳೀಧರರಾವ್
- ದಶಾವತಾರ ಕಥೆಗಳು - ಜಿ.ವಿ.ಶಾಸ್ತ್ರಿ
ಆಧಾರ
ಬದಲಾಯಿಸಿನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "Touching tribute". The Hindu. India. 6 March 2004. Archived from the original on 26 ಜನವರಿ 2005.
- ↑ "In step with tradition". The Sunday Tribune. India. 2 April 2006.
- ↑ "Talibanisation of the performing arts". The Hindu. India. 18 December 2001. Archived from the original on 5 ಡಿಸೆಂಬರ್ 2010.
- ↑ http://www.indianmirror.com/dance/bharatanatyam.html
- ↑ http://www.cyberkerala.com/bharatanatyam/