ಜಾನ್ ಎಫ್.ಕೆನೆಡಿ

ಜಾನ್ ಫಿಟ್ಜ್ ಜೆರಾಲ್ಡ್ ಕೆನಡಿ (ಮೇ ೨೯,೧೯೧೭ - ನವೆಂಬರ್ ೨೨, ೧೯೬೩) ಅಮೆರಿಕಾ ಸಂಯುಕ್ತ ಸಂಸ್ಥಾನದ ೩೫ ನೇ ರಾಷ್ಟ್ರಪತಿಗಳಾಗಿ ೧೯೬೧ ರಲ್ಲಿ ಅಧಿಕಾರಕ್ಕೇರಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜಕೀಯ ರಂಗದಲ್ಲಿ ಜೆ.ಎಫ್.ಕೆ ಅಥವಾ ಜಾಕ್ ಎಂದೇ ಪ್ರಸಿದ್ಧರಾಗಿದ್ದ ಕೆನಡಿಯವರು ೧೯೬೩ರ ನವೆಂಬರ್ ೨೨ ರಂದು ಡಲ್ಲಾಸ್ ನಲ್ಲಿ ಕಾರಿನ ರ್ಯಾಲಿಯಲ್ಲಿ ಪಾಲ್ಗೊಂಡು ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಯಿತು. ಆಗಿನ ಸೋವಿಯತ್ ಒಕ್ಕೂಟಶೀತಲ ಸಮರ ಹಾಗು ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ಯು.ಎಸ್.ಎ ಬಣದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೆನಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಉದಾರವಾದದಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದರು. ಡೆಮಾಕ್ರಟ್ ಪಕ್ಷದ ಅಭ್ಯರ್ಥಿಯಾಗಿದ್ದ ಅವರು ಸಂಯುಕ್ತ ಸಂಸ್ಥಾನದ ರಾಜ್ಯ ಸಭೆಯಲ್ಲಿ(ಹೌಸ್ ಆಫ್ ಕಾಮನ್ಸ್) ಸದಸ್ಯರಾಗಿ ರಾಷ್ಟ್ರ ರಾಜಕೀಯದ ಅನುಭವ ಹೊಂದಿದ್ದರು.

ಜಾನ್ ಎಫ್.ಕೆನೆಡಿ

ವಯ್ಯಕ್ತಿಕ ಹಿನ್ನೆಲೆಸಂಪಾದಿಸಿ

ಜಾನ್.ಎಫ್.ಕೆನಡಿ ಹುಟ್ಟಿದ್ದು ೧೯೧೭ರ ಮೇ ೨೯ ರಂದು ಮಸಾಚುಸೆಟ್ಸ್ ರಾಜ್ಯದ ಬೊಸ್ಟಾನ್ ನಗರದ ಹೊರವಲಯದ ಬ್ರೂಕ್ಲಿನ್ ನಲ್ಲಿ. ಉತ್ತಮ ರಾಜಕೀಯ ಹಿನ್ನೆಲೆಯಿರುವ ಕುಟುಂಬದಲ್ಲಿಯೇ ಕೆನಡಿ ಜನಿಸಿದ್ದರು. ಕೆನಡಿಯವರ ತಂದೆ ಜೋಸೆಫ್.ಪಿ.ಕೆನಡಿ ಒಬ್ಬ ಉದ್ಯಮಿ ಹಾಗು ರಾಜಕೀಯ ನಾಯಕರಾಗಿದ್ದರು. ಕೆನಡಿಯವರ ತಾತ ಪಿ.ಜೆ.ಕೆನಡಿ ಮಸಾಚುಸೆಟ್ಸ್ ರಾಜ್ಯದ ವಿಧಾನ ಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಪೂರ್ವಜರೆಲ್ಲರೂ ಅಮೆರಿಕಾಕ್ಕೆ ವಲಸೆ ಬಂದ ಐರಿಷ್ ಜನಾಂಗದವರಾಗಿದ್ದರು. ಒಂಬತ್ತು ಜನ ಮಕ್ಕಳ ತುಂಬು ಕುಟುಂಬದಲ್ಲಿ ಎರಡನೇಯವರಾಗಿ ಜನಿಸಿದ್ದರು ಕೆನಡಿಯವರು.

 
ಹತ್ಯೆಯಾಗುವುದಕ್ಕೂ ಕೆಲವೇ ಕ್ಷಣಗಳ ಮುಂಚೆ ಡಲ್ಲಾಸ್ ನ ಕಾರಿನ ರ್ಯಾಲಿಯಲ್ಲಿ ಕೆನಡಿ

ಹತ್ಯೆಸಂಪಾದಿಸಿ

ಅಮೆರಿಕಾ ಸಂಯುಕ್ತ ಸಂಸ್ಥಾನಡಲ್ಲಾಸ್ ನಗರದಲ್ಲಿ ೧೯೬೩ರ ನವೆಂಬರ್ ೨೨ರಂದು ರಾಷ್ಟ್ರಾಧ್ಯಕ್ಷರ ಕಾರಿನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಾನ್.ಎಫ್.ಕೆನಡಿಯವರು ಕಾರಿನಲ್ಲಿ ಕುಳಿತು ಜನರತ್ತ ಕೈಬೀಸುತ್ತಾ ಸಾಗುತ್ತಿದ್ದಾಗ ದಾಳಿಕೋರನೊಬ್ಬನ ಗುಂಡಿಗೆ ಬಲಿಯಾದರು.


ಆಕರಗಳುಸಂಪಾದಿಸಿ