ಹ್ಯಾಂಬರ್ಗ್ (pronounced /ˈhæmbɜrɡ/; German pronunciation: [ˈhambʊʁk], ಸ್ಥಳೀಯ ಉಚ್ಚಾರಣೆ [ˈhambʊɪç] ಲೋ ಜರ್ಮನ್‌‌/ಲೋ ಸ್ಯಾಕ್ಸನ್‌‌: ಹ್ಯಾಂಬೊರ್ಗ್‌ [ˈhambɔːx]) ಜರ್ಮನಿಯಲ್ಲಿನ ಎರಡನೇ-ಅತಿದೊಡ್ಡ ನಗರವಾಗಿದೆ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಏಳನೇ-ಅತಿದೊಡ್ಡ ನಗರವಾಗಿದೆ.[] 1.8 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ನಗರವು ನೆಲೆಯಾಗಿದ್ದರೆ, ಹ್ಯಾಂಬರ್ಗ್ ಮಹಾನಗರದ ಪ್ರದೇಶವು (ನೆರೆಹೊರೆಯ ಒಕ್ಕೂಟದ ಸಂಸ್ಥಾನಗಳಾದ ಲೋಯರ್‌ ಸ್ಯಾಕ್ಸನಿ ಮತ್ತು ಸ್ಕ್ಲೆಸ್‌ವಿಗ್‌-ಹಾಲ್‌ಸ್ಟೀನ್‌‌‌‌ನ ಭಾಗಗಳನ್ನು ಒಳಗೊಂಡಂತೆ) 4.3 ದಶಲಕ್ಷಕ್ಕೂ ಹೆಚ್ಚಿನ ನಿವಾಸಿಗಳನ್ನು ಹೊಂದಿದೆ. ಹ್ಯಾಂಬರ್ಗ್‌‌‌ನ ಬಂದರು ಯುರೋಪ್‌ನಲ್ಲಿನ ಮೂರನೇ-ಅತಿದೊಡ್ಡ ಬಂದರಾಗಿದೆ (ರೋಟರ್‌ಡ್ಯಾಮ್‌‌ ಹಾಗೂ ಆಂಟ್ವೆರ್ಪ್‌ ಬಂದರುಗಳು ಮೊದಲಿನ ಎರಡು ಸ್ಥಾನಗಳಲ್ಲಿವೆ) ಮತ್ತು ಪ್ರಪಂಚದಲ್ಲಿನ ಎಂಟನೇ ಅತಿದೊಡ್ಡ ಬಂದರಾಗಿದೆ.

Free and Hanseatic City of Hamburg
Freie und Hansestadt Hamburg
Flag of Free and Hanseatic City of Hamburg
Coat of arms of Free and Hanseatic City of Hamburg
Countryಜರ್ಮನಿ
Government
 • First MayorChristoph Ahlhaus (CDU)
 • Governing partiesCDU / Green Alternative List (GAL)
 • Votes in Bundesrat3 (of 69)
Area
 • City೭೫೫ km (೨೯೨ sq mi)
Population
 (2007-10-31)[]
 • City೧೭,೬೯,೧೧೭
 • Density೨,೩೦೦/km (೬,೧೦೦/sq mi)
 • Metro
೪೩,೦೦,೦೦೦
Time zoneUTC+1 (CET)
 • Summer (DST)UTC+2 (CEST)
Postal code(s)
20001–21149, 22001–22769
Area code(s)040
ISO 3166 codeDE-HH
Vehicle registrationHH
GDP/ Nominal€86.153 billion (2006) [ಸೂಕ್ತ ಉಲ್ಲೇಖನ ಬೇಕು]
NUTS RegionDE6
Websitehamburg.de

ಫ್ರೀ ಅಂಡ್‌ ಹ್ಯಾನ್ಸಿಯಾಟಿಕ್‌ ಸಿಟಿ ಆಫ್‌ ಹ್ಯಾಂಬರ್ಗ್ (ಜರ್ಮನ್‌‌: ಫ್ರೆಯೀ ಅಂಡ್‌ ಹ್ಯಾನ್ಸೆಸ್ಟಾಟ್‌ ಹ್ಯಾಂಬರ್ಗ್ ) ಎಂಬುದು ಹ್ಯಾಂಬರ್ಗ್‌‌ನ ಅಧಿಕೃತ ಹೆಸರಾಗಿದೆ.[] ಮಧ್ಯಯುಗದ ರಾಜಕೀಯ-ವಾಣಿಜ್ಯ ಕೂಟದ ಓರ್ವ ಸದಸ್ಯವಾಗಿ, ಪವಿತ್ರ ರೋಮನ್‌ ಸಾಮ್ರಾಜ್ಯದ ಒಂದು ಮುಕ್ತ ಚಕ್ರಾಧಿಪತ್ಯದ ನಗರವಾಗಿ ಇದು ಹ್ಯಾಂಬರ್ಗ್‌‌‌ನ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ, ಹ್ಯಾಂಬರ್ಗ್ ನಗರವು ಒಂದು ನಗರ-ಸಂಸ್ಥಾನವಾಗಿದೆ ಹಾಗೂ ಹದಿನಾರರಷ್ಟು ಸಂಖ್ಯೆಯಲ್ಲಿರುವ ಜರ್ಮನಿಯ ಸಂಸ್ಥಾನಗಳ ಪೈಕಿ ಒಂದೆನಿಸಿದೆ.

ಹ್ಯಾಂಬರ್ಗ್, ಉತ್ತರದ ಜರ್ಮನಿಯಲ್ಲಿನ ಒಂದು ಪ್ರಮುಖ ಸಾರಿಗೆ ಕೇಂದ್ರವಾಗಿದೆ ಮತ್ತು ಯುರೋಪ್‌ನಲ್ಲಿನ ಅತ್ಯಂತ ಸಂಪದ್ಭರಿತ ನಗರಗಳಲ್ಲಿ ಒಂದೆನಿಸಿಕೊಂಡಿದೆ. ಏರ್‌ಬಸ್‌ , ಬ್ಲೋಮ್‌‌ + ವಾಸ್‌‌ ಮತ್ತು ಔರುಬಿಸ್‌ ಮೊದಲಾದ ಕಂಪನಿಗಳಿಗೆ ಸೇರಿದ ಘಟಕಗಳು ಮತ್ತು ಸೌಕರ್ಯಗಳಿಂದಾಗಿ ಇದು ಮಾಧ್ಯಮಗಳು ಮತ್ತು ಕೈಗಾರಿಕೆಗಳ ಒಂದು ಕೇಂದ್ರವಾಗಿ ಮಾರ್ಪಟ್ಟಿದೆ. ರೇಡಿಯೋ ಮತ್ತು ದೂರದರ್ಶನ ಪ್ರಸಾರಕ ಸಂಸ್ಥೆಯಾದ ನೋರ್ಡ್‌ಡ್ಯೂಷರ್‌ ರಂಡ್‌ಫಂಕ್‌‌ , ಹಾಗೂ ಗ್ರೂನರ್‌‌ + ಜಹ್ರ್‌‌ ಮತ್ತು ಸ್ಪೀಗೆಲ್‌‌-ವೆರ್ಲಾಗ್‌‌ರಂಥ ಪ್ರಕಾಶಕರು ಹ್ಯಾಂಬರ್ಗ್‌ನಲ್ಲಿನ ಪ್ರಮುಖ ಮಾಧ್ಯಮಗಳ ಉದ್ಯಮದ ಆಧಾರಸ್ತಂಭಗಳಾಗಿರುವುದು ಗಮನಾರ್ಹ ಸಂಗತಿ. ಒಟ್ಟಾರೆಯಾಗಿ ಅಲ್ಲಿ 120,000ಕ್ಕೂ ಹೆಚ್ಚಿನ ಉದ್ಯಮಗಳಿವೆ.

ಈ ನಗರವು ಸ್ವದೇಶೀ ಮತ್ತು ಸಾಗರೋತ್ತರ ಸಂದರ್ಶಕರಿಗೆ ಸಂಬಂಧಿಸಿದಂತೆ ಒಂದು ಪ್ರಮುಖವಾದ ಪ್ರವಾಸಿ ಗಮ್ಯಸ್ಥಾನವಾಗಿದ್ದು, 2008ರಲ್ಲಿ ಸುಮಾರು 7.7 ದಶಲಕ್ಷದಷ್ಟು ಒಂದು ರಾತ್ರಿಯ ತಂಗುವಿಕೆಗಳು ಇಲ್ಲಿ ದಾಖಲಿಸಲ್ಪಟ್ಟಿವೆ.[] ವಾಸಯೋಗ್ಯವಾಗಿರುವಿಕೆಗೆ ಸಂಬಂಧಿಸಿದಂತೆ ಹ್ಯಾಂಬರ್ಗ್ ನಗರವು 2009ರಲ್ಲಿ[] ಪ್ರಪಂಚದಲ್ಲಿ 23ನೇ ಶ್ರೇಯಾಂಕ ಪಡೆದಿದೆ ಮತ್ತು ಕೆಲವೊಂದು ಪರ್ಯಾಯ ಶ್ರೇಯಾಂಕಗಳಲ್ಲಿ[] ಇದಕ್ಕೂ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಟುಥಿಂಕ್ನೊ (2thinknow) ವಾರ್ಷಿಕ ನಾವೀನ್ಯ ನಗರಗಳ ಸೂಚಿಯಲ್ಲಿ ಒಂದು ಹೊಸತನದ ನಂಟಿನ ಸ್ವರೂಪವಾಗಿ ಫ್ರಾಂಕ್‌ಫರ್ಟ್‌ ನಂತರದ ಸ್ಥಾನದಲ್ಲಿ ಈ ನಗರವು ಗುರುತಿಸಲ್ಪಟ್ಟಿದೆ ಮತ್ತು ಈ ನಿಟ್ಟಿನಲ್ಲಿ 2010ರಲ್ಲಿ ಪ್ರಪಂಚದಲ್ಲಿನ 10ನೇ ಶ್ರೇಯಾಂಕ ಪಡೆದರೆ, ಜರ್ಮನಿಯಲ್ಲಿ 2ನೇ ಶ್ರೇಯಾಂಕ ಪಡೆದಿದೆ.[]

ಇತಿಹಾಸ

ಬದಲಾಯಿಸಿ
 
ಸುಮಾರು 810ರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟ, ಸ್ಯಾಕ್ಸನ್ಸ್‌‌ ಮತ್ತು ಸ್ಲಾವಿಕ್‌‌ ಒಬೊಟ್ರೈಟ್ಸ್‌ ನಡುವಿನ ಲೈಮ್ಸ್‌ ಸ್ಯಾಕ್ಸೋನಿಯೇ ಗಡಿ.

ತಾಣದಲ್ಲಿನ ಮೊದಲ ಕಾಯಂ ಕಟ್ಟಡದಿಂದ ಈ ನಗರವು ತನ್ನ ಹೆಸರು ಪಡೆದುಕೊಂಡಿದೆ. ಈ ಕಾಯಂ ಕಟ್ಟಡವು 808 ADಯ ಅವಧಿಯಲ್ಲಿ ಚಾರ್ಲೆಮಾಗ್ನೆ ಚಕ್ರವರ್ತಿಯ ಆದೇಶದ ಅನುಸಾರ ನಿರ್ಮಿಸಲ್ಪಟ್ಟ ಒಂದು ಸೈನಿಕ ರಕ್ಷಾವರಣದ ದುರ್ಗವಾಗಿದೆ. ಸ್ಲಾವಿಕ್‌‌ ಜನರ ಆಕಸ್ಮಿಕ ದಾಳಿಗೆ ಪ್ರತಿಯಾಗಿ ಒಂದು ರಕ್ಷಣೆಯ ಸ್ವರೂಪದಲ್ಲಿ, ಆಲ್‌‌ಸ್ಟರ್ ನದಿ‌‌ ಮತ್ತು ಎಲ್ಬೆ ನದಿಗಳ ನಡುವಿನ ಒಂದು ಜವುಗು ಭೂಮಿಯಲ್ಲಿರುವ ಬಂಡೆಯಂಥ ನೆಲದ ಮೇಲೆ ಈ ದುರ್ಗವು ನಿರ್ಮಿಸಲ್ಪಟ್ಟಿತು. ಹ್ಯಾಮ್ಮಾಬರ್ಗ್‌ ಎಂಬುದಾಗಿ ಈ ದುರ್ಗಕ್ಕೆ ಹೆಸರಿಡಲಾಯಿತು. ಬರ್ಗ್‌ ಎಂದರೆ ಸೈನಿಕ ರಕ್ಷಾವರಣ ಎಂದರ್ಥ. ಹ್ಯಾಮ್ಮಾ ಎಂಬ ಶಬ್ದದ ಹುಟ್ಟು ಮತ್ತು ಸೈನಿಕ ರಕ್ಷಾವರಣದ ನಿಖರವಾದ ತಾಣವು ಅನಿಶ್ಚಿತವಾಗಿ[] ಉಳಿದುಕೊಂಡಿವೆ.[]

834ರಲ್ಲಿ, ಹ್ಯಾಂಬರ್ಗ್ ನಗರವು ರೋಮನ್‌ ಕ್ಯಾಥಲಿಕ್‌‌ ಬಿಷಪ್‌ಗಿರಿಯ ಒಂದು ಕ್ಷೇತ್ರವಾಗಿ ನಿಯೋಜಿಸಲ್ಪಟ್ಟಿತು; ಇದರ ಮೊದಲ ಬಿಷಪ್‌ ಆದ ಆನ್ಸ್‌ಗರ್‌‌ ಎಂಬಾತ ಉತ್ತರ ವಲಯದ ಪ್ರಚಾರಕನಾಗಿ ಚಿರಪರಿಚಿತನಾದ. ಎರಡು ವರ್ಷಗಳ ನಂತರ, ಬ್ರೆಮೆನ್‌‌ ಜೊತೆಯಲ್ಲಿ ಹ್ಯಾಂಬರ್ಗ್ ವಿಲೀನಗೊಂಡು ಹ್ಯಾಂಬರ್ಗ್-ಬ್ರೆಮೆನ್‌‌ನ ಬಿಷಪ್‌ಗಿರಿಯು ರೂಪುಗೊಂಡಿತು‌.[] 1529ರಲ್ಲಿ, ನಗರವು ಲೂಥರ್‌ ತತ್ತ್ವವನ್ನು ಸ್ವೀಕರಿಸಿತು, ಮತ್ತು ತರುವಾಯದಲ್ಲಿ ನೆದರ್ಲೆಂಡ್ಸ್‌ ಮತ್ತು ಫ್ರಾನ್ಸ್‌‌‌ನಿಂದ ಬಂದ ಪ್ರಾಟೆಸ್ಟೆಂಟ್‌ ನಿರಾಶ್ರಿತರನ್ನು ಹ್ಯಾಂಬರ್ಗ್ ಸ್ವೀಕರಿಸಿತು ಮತ್ತು, 17ನೇ ಶತಮಾನದಲ್ಲಿ ಪೋರ್ಚುಗಲ್‌‌‌ನಿಂದ ಬಂದ ಸಿಫಾರ್ಡಿ ಯೆಹೂದಿಗಳನ್ನು ಸ್ವೀಕರಿಸಿತು.

ಹ್ಯಾಂಬರ್ಗ್ ಹಲವಾರು ಬಾರಿ ನಾಶಪಡಿಸಲ್ಪಟ್ಟಿದೆ ಮತ್ತು ಆಕ್ರಮಿಸಲ್ಪಟ್ಟಿದೆ. 845ರಲ್ಲಿ, 600 ವೈಕಿಂಗ್‌ ಹಡಗುಗಳ ಒಂದು ಶ್ರೇಣಿಯು ಎಲ್ಬೆ ನದಿಯನ್ನು ದಾಟಿಕೊಂಡು ಬಂದು ಹ್ಯಾಂಬರ್ಗ್‌‌ನ್ನು ನಾಶಪಡಿಸಿತು. ಆ ಸಮಯದಲ್ಲಿ ಇದು ಸುಮಾರು 500 ನಿವಾಸಿಗಳನ್ನು ಒಳಗೊಂಡಿದ್ದ ಒಂದು ಪಟ್ಟಣವಾಗಿತ್ತು.[] 1030ರಲ್ಲಿ, ಪೋಲೆಂಡ್‌‌ನ ಮೀಸ್‌ಜ್ಕೊ II ಲ್ಯಾಂಬರ್ಟ್‌ ರಾಜನಿಂದ ನಗರವು ಸುಡಲ್ಪಟ್ಟಿತು. ಡೆನ್ಮಾರ್ಕ್‌ನ IIನೇ ವಾಲ್ಡೆಮಾರ್ ಎಂಬಾತ 1201ರಲ್ಲಿ ಹ್ಯಾಂಬರ್ಗ್ ಮೇಲೆ ದಾಳಿಮಾಡಿದ ಹಾಗೂ 1214ರಲ್ಲಿ ಅದನ್ನು ಆಕ್ರಮಿಸಿಕೊಂಡ. 1350ರಲ್ಲಿ ದಾಳಿಯಿಟ್ಟ ಪ್ಲೇಗು ಮಾರಿಯು ಹ್ಯಾಂಬರ್ಗ್‌‌ನ ಜನಸಂಖ್ಯೆಯ ಪೈಕಿ ಕನಿಷ್ಟಪಕ್ಷ 60%ನಷ್ಟು ಭಾಗವನ್ನು ಸಾಯಿಸಿತು.[೧೦] ಹ್ಯಾಂಬರ್ಗ್ ಹಲವಾರು ಮಹಾನ್‌ ಅಗ್ನಿದುರಂತಗಳಿಗೆ ಈಡಾಗಿದ್ದು, 1284 ಮತ್ತು 1842ರಲ್ಲಿ ಸಂಭವಿಸಿದ ದುರಂತಗಳು ಅವುಗಳ ಪೈಕಿ ಅತ್ಯಂತ ಗಮನಾರ್ಹವಾಗಿವೆ. 1842ರಲ್ಲಿ, ಒಳಗಿನ ನಗರದ ಸರಿಸುಮಾರು ಕಾಲುಭಾಗವು "ಮಹಾನ್‌ ಅಗ್ನಿದುರಂತ"ದಲ್ಲಿ ನಾಶಪಡಿಸಲ್ಪಟ್ಟಿತು. 1842ರ ಮೇ 4ರಂದು ರಾತ್ರಿ ವೇಳೆಯಲ್ಲಿ ಪ್ರಾರಂಭವಾದ ಈ ಬೆಂಕಿಯು ಮೇ 8ರಂದು ನಂದಿಸಲ್ಪಟ್ಟಿತು. ಮೂರು ಚರ್ಚುಗಳು, ಪುರಭವನ, ಮತ್ತು ಇತರ ಅನೇಕ ಕಟ್ಟಡಗಳನ್ನು ಇದು ನಾಶಪಡಿಸಿತು ಹಾಗೂ 51 ಜನರನ್ನು ಸಾಯಿಸಿತು; ಮತ್ತು ಈ ದುರಂತದಿಂದಾಗಿ ಅಂದಾಜು 20,000ದಷ್ಟು ಮಂದಿ ನಿರ್ಗತಿಕರಾಗಿ ಉಳಿದುಕೊಂಡರು. ಮರುನಿರ್ಮಾಣವು ಸಂಪೂರ್ಣಗೊಳ್ಳಲು 40ಕ್ಕೂ ಹೆಚ್ಚಿನ ವರ್ಷಗಳು ಹಿಡಿದವು.

 
1241ರ ಮೊಹರು.

1189ರಲ್ಲಿ, ಚಕ್ರಾಧಿಪತ್ಯದ ಸನ್ನದಿನ ನೆರವಿನಿಂದ ಫ್ರೆಡೆರಿಕ್‌ I "ಬಾರ್ಬರೊಸ್ಸಾ" ಹ್ಯಾಂಬರ್ಗ್ ನಗರಕ್ಕೆ ಒಂದು ಚಕ್ರಾಧಿಪತ್ಯ ಮುಕ್ತ ನಗರದ ಸ್ಥಾನಮಾನವನ್ನು ನೀಡಿದ ಮತ್ತು ಲೋಯರ್‌ ಎಲ್ಬೆ ಪ್ರದೇಶದಿಂದ ಉತ್ತರ ಸಮುದ್ರದ ಪ್ರದೇಶದವರೆಗಿನ ವ್ಯಾಪ್ತಿಗೆ ತೆರಿಗೆ-ವಿನಾಯಿತಿಯ ಪ್ರವೇಶಾವಕಾಶವನ್ನು ನೀಡಿದ. 1265ರಲ್ಲಿ, ಖೋಟಾ ಸೃಷ್ಟಿ ಎಂದು ಭಾವಿಸಲಾದ ಪತ್ರವೊಂದನ್ನು ಹ್ಯಾಂಬರ್ಗ್‌‌ನ ಇತಿಹಾಸಪೂರ್ವ ದುರ್ಗಕ್ಕೆ ಸಲ್ಲಿಸಲಾಯಿತು ಅಥವಾ ಅದರಿಂದ ಸದರಿ ಪತ್ರವು ಸಲ್ಲಿಸಲ್ಪಟ್ಟಿತು.[೧೧] ಉತ್ತರ ಸಮುದ್ರ ಮತ್ತು ಬಾಲ್ಟಿಕ್‌‌ ಸಮುದ್ರದ ಮುಖ್ಯ ವ್ಯಾಪಾರ ಮಾರ್ಗಗಳಿಗೆ ಹ್ಯಾಂಬರ್ಗ್ ಹೊಂದಿರುವ ಸಾಮೀಪ್ಯತೆಯ ಜೊತೆಯಲ್ಲಿ ಈ ಸನ್ನದೂ ಸೇರಿಕೊಂಡು, ನಗರವನ್ನು ಉತ್ತರದ ಯುರೋಪ್‌‌ನಲ್ಲಿನ ಒಂದು ಪ್ರಮುಖ ಬಂದರನ್ನಾಗಿ ಶೀಘ್ರವಾಗಿ ರೂಪಿಸಿದವು. 1241ರಲ್ಲಿ ಲ್ಯೂಬೆಕ್‌‌ ಜೊತೆಯಲ್ಲಿ ಇದು ಮಾಡಿಕೊಂಡ ವ್ಯಾಪಾರ ಒಪ್ಪಂದವು, ವ್ಯಾಪಾರದಲ್ಲಿ ತೊಡಗಿಸಿಕೊಂಡ ನಗರಗಳ ಶಕ್ತಿಯುತವಾದ ರಾಜಕೀಯ-ವಾಣಿಜ್ಯ ಕೂಟದ ಹುಟ್ಟು ಮತ್ತು ತಿರುಳನ್ನು ಗುರುತು ಮಾಡುತ್ತದೆ. 1266ರ ನವೆಂಬರ್‌‌ 8ರಂದು, IIIನೇ ಹೆನ್ರಿ ಮತ್ತು ಹ್ಯಾಂಬರ್ಗ್‌‌‌ನ ವ್ಯಾಪಾರಿಗಳ ನಡುವೆ ರೂಪುಗೊಂಡ ಒಂದು ಒಡಂಬಡಿಕೆಯು, ಲಂಡನ್‌‌ನಲ್ಲಿ ಒಂದು ವರ್ತಕ ಸಂಘ ವನ್ನು ಸ್ಥಾಪಿಸುವಲ್ಲಿ ಅವರಿಗೆ ಅವಕಾಶ ನೀಡಿತು. ರಾಜಕೀಯ-ವಾಣಿಜ್ಯ ಕೂಟ ಎಂಬ ವ್ಯಾಪಾರಿ ಸಂಘಕ್ಕಾಗಿ ವರ್ತಕ ಸಂಘ ಎಂಬ ಪದವು ನಮೂದಿಸಲ್ಪಟ್ಟಿದ್ದು ಇತಿಹಾಸದಲ್ಲಿ ಮೊದಲ ಬಾರಿಗೆ ಘಟಿಸಿದ ಸಂಗತಿಯಾಗಿತ್ತು.[೧೨] ಜರ್ಮನಿಯಲ್ಲಿನ ನಗರವೊಂದಕ್ಕೆ ಸಂಬಂಧಿಸಿದ ಪೌರ ಕಾನೂನು, ಅಪರಾಧದ ಕಾನೂನು ಮತ್ತು ಕಾರ್ಯವಿಧಾನದ ಕಾನೂನಿನ ಮೊದಲ ವಿವರಣೆಯನ್ನು ಜರ್ಮನ್‌‌ ಭಾಷೆಯಲ್ಲಿ ದಾಖಲಿಸಿದ್ದ ಆರ್ಡೀಲ್‌ಬುಕ್‌‌ (ಆರ್ಡೀಲ್‌ : ದಂಡನೆ) ಎಂಬ ಕೃತಿಯನ್ನು ಸೆನೆಟ್‌ನ ಸಲಹಾ ವಕೀಲನಾದ ಜೋರ್ಡಾನ್‌‌ ವಾನ್‌ ಬೋಯ್ಟ್‌ಜೆನ್‌‌ಬರ್ಗ್‌ ಎಂಬಾತ 1270ರಲ್ಲಿ ಬರೆದ.[೧೩] 1410ರ ಆಗಸ್ಟ್‌ 10ರಂದು ಸಂಭವಿಸಿದ ನಾಗರಿಕ ಕ್ಷೋಭೆಯು ಒಂದು ಒಪ್ಪಂದದ ಸಮನ್ವಯಕ್ಕಾಗಿ ಅಥವಾ ರಾಜಿಗಾಗಿ ಒತ್ತಾಯಿಸಿತು (ಜರ್ಮನ್‌‌:ರೆಜೆಬ್‌ , ಅಕ್ಷರಶಃ ಅರ್ಥ: ಹಿಂದೆಗೆತ). ಇದು ಹ್ಯಾಂಬರ್ಗ್‌‌ನ ಮೊದಲ ಸಂವಿಧಾನ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.[೧೪]

 
1800ರಲ್ಲಿದ್ದಂತೆ ಹ್ಯಾಂಬರ್ಗ್

1806ರಲ್ಲಿ ಪವಿತ್ರ ರೋಮನ್‌ ಸಾಮ್ರಾಜ್ಯದ ವಿಘಟನೆಯಾದ ನಂತರ, ಹ್ಯಾಂಬರ್ಗ್‌‌ ಮುಕ್ತ ಚಕ್ರಾಧಿಪತ್ಯದ ನಗರವು ವಿಲೀನಗೊಳಿಸಲ್ಪಡಲಿಲ್ಲವಾದರೂ, ಅಧಿಕೃತವಾಗಿ ಫ್ರೀ ಅಂಡ್‌ ಹ್ಯಾನ್ಸಿಯಾಟಿಕ್‌ ಸಿಟಿ ಆಫ್‌ ಹ್ಯಾಂಬರ್ಗ್ ಎಂಬ ಶೀರ್ಷಿಕೆಯನ್ನಿಟ್ಟುಕೊಂಡ ಒಂದು ಪರಮಾಧಿಕಾರವುಳ್ಳ ಸಂಸ್ಥಾನವಾಗಿ ಮಾರ್ಪಟ್ಟಿತು. ಮೊದಲ ಫ್ರೆಂಚ್‌ ಸಾಮ್ರಾಜ್ಯಕ್ಕೆ (1810–14) ಹ್ಯಾಂಬರ್ಗ್‌‌ ನಗರವು Iನೇ ನೆಪೋಲಿಯನ್‌‌ನಿಂದ ಸಂಕ್ಷಿಪ್ತವಾಗಿ ಜೋಡಣೆ ಮಾಡಲ್ಪಟ್ಟಿತು. ಅಂತಿಮವಾಗಿ, ಜನರಲ್‌ ಬೆನ್ನಿಗ್ಸೆನ್‌ ಅಡಿಯಲ್ಲಿ ರಷ್ಯಾದ ಪಡೆಗಳು ನಗರವನ್ನು 1814ರಲ್ಲಿ ಮುಕ್ತವಾಗಿಸಿದವು. ಹ್ಯಾಂಬರ್ಗ್ ನಗರವು 1811ಕ್ಕೆ ಮುಂಚಿತವಾಗಿದ್ದ ತನ್ನ ನಗರ-ಸಂಸ್ಥಾನದ ಸ್ವರೂಪದ ಸ್ಥಾನಮಾನವನ್ನು 1814ರಲ್ಲಿ ಪುನಃ ವಹಿಸಿಕೊಂಡಿತು. 1815ರ ವಿಯೆನ್ನಾ ಕಾಂಗ್ರೆಸ್‌‌, ಹ್ಯಾಂಬರ್ಗ್‌‌ನ ಸ್ವಾತಂತ್ರ್ಯವನ್ನು ದೃಢೀಕರಿಸಿತು ಮತ್ತು ಇದು ಜರ್ಮನ್‌‌ ಒಕ್ಕೂಟದ (1815–66) ಪರಮಾಧಿಕಾರವುಳ್ಳ 39 ಸಂಸ್ಥಾನಗಳ ಪೈಕಿ ಒಂದೆನಿಸಿಕೊಂಡಿತು.

1860ರಲ್ಲಿ, ಹ್ಯಾಂಬರ್ಗ್ ಸಂಸ್ಥಾನವು ಒಂದು ಗಣತಂತ್ರವಾದಿ ಸಂವಿಧಾನವನ್ನು ಅಳವಡಿಸಿಕೊಂಡಿತು. ಉತ್ತರ ಜರ್ಮನ್‌‌ ಒಕ್ಕೂಟದಲ್ಲಿ (1866–71), ಜರ್ಮನ್‌‌ ಸಾಮ್ರಾಜ್ಯದಲ್ಲಿ (1871–1918) ಮತ್ತು ವೆಯ್ಮರ್‌‌ ಗಣತಂತ್ರದ (1919–33) ಅವಧಿಯಲ್ಲಿ ಹ್ಯಾಂಬರ್ಗ್ ನಗರವು ಒಂದು ನಗರ-ಸಂಸ್ಥಾನವಾಯಿತು. 19ನೇ ಶತಮಾನದ ದ್ವಿತೀಯಾರ್ಧದ ಅವಧಿಯಲ್ಲಿ ಹ್ಯಾಂಬರ್ಗ್ ತನ್ನ ಅತಿವೇಗದ ಬೆಳವಣಿಗೆಯನ್ನು ಕಂಡುಕೊಂಡಿತು; ನಗರವನ್ನು ಯುರೋಪ್‌ನ ಮೂರನೇ-ಅತಿದೊಡ್ಡ ಬಂದರನ್ನಾಗಿ ಮಾಡುವಲ್ಲಿ ನಗರದ ಅಟ್ಲಾಂಟಿಕ್‌‌ ವ್ಯಾಪಾರದ ಬೆಳವಣಿಗೆಯು ನೆರವಾದ್ದರಿಂದ, ಅದರ ಜನಸಂಖ್ಯೆಯು ನಾಲ್ಮಡಿಗಿಂತಲೂ ಹೆಚ್ಚು ಬೆಳೆದು 800,000ದಷ್ಟು ಸಂಖ್ಯೆಗೆ ಮುಟ್ಟಿತು. ಆಲ್ಬರ್ಟ್‌ ಬ್ಯಾಲಿನ್‌‌ ಎಂಬಾತನನ್ನು ತನ್ನ ನಿರ್ದೇಶಕನನ್ನಾಗಿ ಹೊಂದುವುದರೊಂದಿಗೆ ಹ್ಯಾಂಬರ್ಗ್-ಅಮೆರಿಕಾ ಲೈನ್‌ ಕಂಪನಿಯು ಅಟ್ಲಾಂಟಿಕ್‌ ಸಾಗರವನ್ನು ಅಡ್ಡಹಾಯುವ‌‌ ಪ್ರಪಂಚದ ಅತಿದೊಡ್ಡ ಹಡಗು ರವಾನೆ ಕಂಪನಿ ಎಂಬ ಸ್ಥಾನಮಾನವನ್ನು ಶತಮಾನದ ತಿರುವಿನಲ್ಲಿ ಗಳಿಸಿಕೊಂಡಿತು. ದಕ್ಷಿಣ ಅಮೆರಿಕಾ, ಆಫ್ರಿಕಾ, ಭಾರತ ಮತ್ತು ಪೂರ್ವ ಏಷ್ಯಾ ವಲಯಗಳಿಗೆ ಸಮುದ್ರಯಾನ ಮಾಡುತ್ತಿರುವ ಹಡಗು ರವಾನೆ ಕಂಪನಿಗಳು ಸದರಿ ನಗರದಲ್ಲಿ ತಮ್ಮ ಮೂಲವನ್ನು ಹೊಂದಿದ್ದವು. 19ನೇ ಶತಮಾನದ ಅಂತ್ಯಭಾಗ ಮತ್ತು 20ನೇ ಶತಮಾನದ ಆರಂಭಿಕ ಅವಧಿಗಳಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗುವ ಬಹುಪಾಲು ಜರ್ಮನ್ನರು ಹಾಗೂ ಪೂರ್ವದ ಯುರೋಪಿಯನ್‌ ಸಮುದಾಯದವರಿಗೆ ಸಂಬಂಧಿಸಿದಂತೆ ಹ್ಯಾಂಬರ್ಗ್ ನಿರ್ಗಮನ ಬಂದರು ಎನಿಸಿಕೊಂಡಿತ್ತು. ಪ್ರಪಂಚದ ಎಲ್ಲೆಡೆಯ ಭಾಗಗಳಿಗೆ ಸೇರಿದ ವ್ಯಾಪಾರ ಸಮುದಾಯಗಳು ತಮ್ಮ ನೆಲೆಯನ್ನು ಇಲ್ಲಿ ಸ್ಥಾಪಿಸಿದವು.

1892ರಲ್ಲಿ ಏಕಾಏಕಿ ಆರಂಭಗೊಂಡ ಕಾಲರಾ ರೋಗದಂಥ ಒಂದು ಪ್ರಮುಖ ಸಮಸ್ಯೆಯನ್ನು ನಗರ ಸರ್ಕಾರವು ಅತ್ಯಂತ ಕೆಟ್ಟದಾಗಿ ನಿರ್ವಹಿಸಿತು; ಆ ಸಮಯದಲ್ಲಿ ಜರ್ಮನ್‌‌ ನಗರವೊಂದಕ್ಕೆ ಸಂಬಂಧಿಸಿದಂತಿದ್ದ ಒಂದು ಅಸಾಮಾನ್ಯ ಮಟ್ಟದ ಸ್ವಾತಂತ್ರ್ಯವನ್ನು ಸದರಿ ನಗರ ಸರ್ಕಾರವು ಇನ್ನೂ ಉಳಿಸಿಕೊಂಡಿತ್ತು. 19ನೇ ಶತಮಾನದ ಅಂತ್ಯಭಾಗದಲ್ಲಿ ಸಂಭವಿಸಿದ ಜರ್ಮನಿಯ ಅತಿದೊಡ್ಡ ಸಾಂಕ್ರಾಮಿಕ ರೋಗದಲ್ಲಿ ಮತ್ತು ಪಾಶ್ಚಾತ್ಯ ಪ್ರಪಂಚದಲ್ಲಿನ ಪ್ರಮುಖ ನಗರವೊಂದರಲ್ಲಿನ ಕೊನೆಯ ಪ್ರಮುಖ ಕಾಲರಾ ಸಾಂಕ್ರಾಮಿಕ ರೋಗದಲ್ಲಿ ಸುಮಾರು 8,600 ಮಂದಿ ಸತ್ತರು.

ಎರಡನೇ ಜಾಗತಿಕ ಸಮರ

ಬದಲಾಯಿಸಿ

ನಾಜಿ ಜರ್ಮನಿಯಲ್ಲಿ 1934ರಿಂದ 1945ರವರೆಗೂ ಹ್ಯಾಂಬರ್ಗ್ ಒಂದು ಗೌ (ಒಂದು ಆಡಳಿತ ಪ್ರದೇಶ) ಆಗಿತ್ತು. IIನೇ ಜಾಗತಿಕ ಸಮರದ ಅವಧಿಯಲ್ಲಿ ವಿಮಾನ ದಾಳಿಗಳ ಒಂದು ಸರಣಿಯಿಂದ ಹ್ಯಾಂಬರ್ಗ್ ಬಳಲಿತು. ಈ ದಾಳಿಯು ಜನರು ವಾಸವಾಗಿದ್ದ ನಗರದ ಬಹುಭಾಗವನ್ನು ಮಾತ್ರವೇ ಅಲ್ಲದೇ ಬಂದರು ಪ್ರದೇಶಗಳನ್ನೂ ಧ್ವಂಸಮಾಡಿತು. 1943ರ ಜುಲೈ 23ರಂದು ಹೌಪ್ಟ್‌ಬಾಹ್ನಾಫ್‌ನಿಂದ ಬಂದ ಒಂದು ಬಾಂಬ್‌ಸ್ಫೋಟದ ಬಿರುಗಾಳಿಯು ಆಗ್ನೇಯ ದಿಕ್ಕಿನೆಡೆಗೆ ಶೀಘ್ರವಾಗಿ ಸಾಗಿ ಹ್ಯಾಮರ್‌ಬ್ರೂಕ್‌, ಬಿಲ್‌‌‌ಬ್ರೂಕ್‌ ಅಥವಾ ಹ್ಯಾಮ್‌‌‌-ದಕ್ಷಿಣದಂಥ ಸಮಗ್ರ ಪುರಸಭಾ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಿತು. ಇದರ ಪರಿಣಾಮವಾಗಿ, ಶ್ರಮಿಕ-ವರ್ಗದ ದಟ್ಟ ಜನಸಂದಣಿಯನ್ನು ತುಂಬಿಕೊಂಡಿದ್ದ ಈ ಪುರಸಭಾ ಕ್ಷೇತ್ರಗಳು ಜನಸಂಖ್ಯಾ ಸ್ವರೂಪದ ಒಂದು ನಾಟಕೀಯ ಬದಲಾವಣೆಗೆ ಒಳಗಾದವು. ಹ್ಯಾಮರ್‌ಬ್ರೂಕ್‌‌ನಲ್ಲಿರುವ 400 ಸಂಖ್ಯೆಯ ಒಂದು ಚಿಕ್ಕ ಸಮುದಾಯವನ್ನು ಹೊರತುಪಡಿಸಿ, ಇಂದು ಅಲ್ಲಿ ಕೆಲವೇ ಜನರು ವಾಸಿಸುತ್ತಿದ್ದಾರೆ.[೧೫] RAFನಿಂದ ಆಪರೇಷನ್‌‌ ಗೊಮೊರಾಹ್‌‌ ಎಂಬ ಸಂಕೇತನಾಮದಿಂದ ಹೆಸರಿಸಲ್ಪಟ್ಟಿದ್ದ ಈ ದಾಳಿಗಳು 42,000 ನಾಗರಿಕರನ್ನು ಸಾಯಿಸಿದರೆ, 1 ದಶಲಕ್ಷಕ್ಕೂ ಹೆಚ್ಚಿನ ನಾಗರಿಕರು ಸ್ಥಳಾಂತರಿಸಲ್ಪಟ್ಟರು.

ನಗರದ ವ್ಯಾಪ್ತಿಯೊಳಗಿನ ನ್ಯುಯೆನ್‌ಗ್ಯಾಮೆ ನಾಜಿ ಸೆರೆಶಿಬಿರದಲ್ಲಿ ಕನಿಷ್ಟಪಕ್ಷ 55,000 ಜನರು ಸಾಯಿಸಲ್ಪಟ್ಟರು.[೧೬]

ಯುದ್ಧಾನಂತರದ ಇತಿಹಾಸ

ಬದಲಾಯಿಸಿ

1945ರ ಮೇ 3ರಂದು, ಯಾವುದೇ ಒಂದು ಹೋರಾಟವಿಲ್ಲದೆಯೇ ಬ್ರಿಟಿಷ್‌ ಪಡೆಗಳಿಗೆ ಹ್ಯಾಂಬರ್ಗ್ ಶರಣಾಯಿತು.[೧೭] IIನೇ ಜಾಗತಿಕ ಸಮರದ ನಂತರ, ಹ್ಯಾಂಬರ್ಗ್ ಬ್ರಿಟಿಷ್‌ ಹಿಡುವಳಿಯ ವಲಯದಲ್ಲಿತ್ತು ಮತ್ತು 1949ರಲ್ಲಿ, ಅಗಿನ್ನೂ ಪಶ್ಚಿಮ ಜರ್ಮನ್‌ನದೇ ಆಗಿದ್ದ ಜರ್ಮನಿಯ ಒಕ್ಕೂಟ ಗಣತಂತ್ರದ ಒಂದು ಸಂಸ್ಥಾನವೆನಿಸಿಕೊಂಡಿತು. 1962ರ ಫೆಬ್ರುವರಿ 16ರಂದು ಕಂಡುಬಂದ ಆ ವರ್ಷದ ಉತ್ತರ ಸಮುದ್ರದ ಪ್ರವಾಹವು ಸಾರ್ವಕಾಲಿಕವಾಗಿ ಹೆಚ್ಚಿನದು ಎನ್ನಬಹುದಾದ ಮಟ್ಟಕ್ಕೆ ಎಲ್ಬೆಯು ಉಕ್ಕಲು ಕಾರಣವಾಯಿತು; ಇದರಿಂದಾಗಿ ಹ್ಯಾಂಬರ್ಗ್‌‌ನ ಐದನೇ ಒಂದು ಭಾಗವು ಮುಳುಗಿತು ಹಾಗೂ 300ಕ್ಕೂ ಹೆಚ್ಚಿನ ಜನರು ಅಸುನೀಗಿದರು.

ಹ್ಯಾಂಬರ್ಗ್‌‌ನ ಕೇವಲ 50 kilometres (30 mi)ನಷ್ಟು ಪೂರ್ವಕ್ಕಿರುವ ಒಳಗಿನ ಜರ್ಮನ್‌‌ ಗಡಿಯು, ನಗರವನ್ನು ಅದರ ಬಹುಪಾಲು ಒಳನಾಡಿನಿಂದ ಪ್ರತ್ಯೇಕಿಸಿತು ಮತ್ತು ಹ್ಯಾಂಬರ್ಗ್‌‌‌ನ ಜಾಗತಿಕ ವ್ಯಾಪಾರವನ್ನು ಮತ್ತಷ್ಟು ತಗ್ಗಿಸಿತು. 1990ರಲ್ಲಿ ಜರ್ಮನ್‌‌ ಪುನರೇಕೀಕರಣವಾದ ನಂತರ ಮತ್ತು 2004ರಲ್ಲಿ EUನೊಳಗೆ (ಐರೋಪ್ಯ ಒಕ್ಕೂಟದೊಳಗೆ) ಕೆಲವೊಂದು ಪೂರ್ವದ ಐರೋಪ್ಯ ಮತ್ತು ಬಾಲ್ಟಿಕ್‌‌ ಸಂಸ್ಥಾನಗಳ ಸೇರ್ಪಡೆಯಾದ ನಂತರ, ಹ್ಯಾಂಬರ್ಗ್‌‌ನ ಬಂದರು ತನ್ನ ಸ್ಥಾನವನ್ನು ಮರುಗಳಿಸುವುದಕ್ಕೆ ಸಂಬಂಧಿಸಿದ ಮಹತ್ವಾಕಾಂಕ್ಷೆಗಳನ್ನು ಜೀವಂತವಾಗಿರಿಸಿಕೊಂಡಿದೆ; ಧಾರಕ ಹಡಗಿನ ರವಾನೆ ಮತ್ತು ಅದರ ಪ್ರಮುಖ ವಾಣಿಜ್ಯ ಹಾಗೂ ವ್ಯಾಪಾರ ಕೇಂದ್ರಕ್ಕೆ ಸಂಬಂಧಿಸಿದಂತೆ, ಆ ಪ್ರದೇಶದ ಅತಿದೊಡ್ಡ ಆಳ-ಸಮುದ್ರದ ಬಂದರು ಎನಿಸಿಕೊಳ್ಳಬೇಕು ಎಂಬುದೇ ಇದು ಮರುಗಳಿಸಲು ಬಯಸಿರುವ ಸ್ಥಾನವಾಗಿದೆ ಎಂಬುದು ಗಮನಾರ್ಹ ಅಂಶ.

ಭೌಗೋಳಿಕ ಲಕ್ಷಣ

ಬದಲಾಯಿಸಿ

ಜೂಟ್‌ಲೆಂಡ್‌ ಪರ್ಯಾಯದ್ವೀಪದ ದಕ್ಷಿಣದ ತಾಣದಲ್ಲಿ ಹ್ಯಾಂಬರ್ಗ್ ನೆಲೆಗೊಂಡಿದೆ. ತನಗೆ ನೇರವಾಗಿ ದಕ್ಷಿಣದಲ್ಲಿರುವ ಯುರೋಪ್‌ ಖಂಡ ಮತ್ತು ತನಗೆ ಉತ್ತರಕ್ಕಿರುವ ಸ್ಕ್ಯಾಂಡಿನೇವಿಯಾದ ನಡುವೆ ಹ್ಯಾಂಬರ್ಗ್ ನೆಲೆಗೊಂಡಿದೆ. ಹ್ಯಾಂಬರ್ಗ್‌‌ನ ಪಶ್ಚಿಮ ಭಾಗದಲ್ಲಿ ಉತ್ತರ ಸಮುದ್ರವಿದ್ದರೆ, ಪೂರ್ವ ಭಾಗದಲ್ಲಿ ಬಾಲ್ಟಿಕ್‌‌ ಸಮುದ್ರವಿದೆ. ಆಲ್‌‌ಸ್ಟರ್‌‌ ಮತ್ತು ಬಿಲ್ಲೆ ನದಿಗಳ ಸಂಗಮಸ್ಥಾನದಲ್ಲಿ, ಎಲ್ಬೆ ನದಿಯ ದಂಡೆಯ ಮೇಲೆ ಹ್ಯಾಂಬರ್ಗ್ ನೆಲೆಗೊಂಡಿದೆ. ಪ್ರಧಾನ ನಗರ ಪ್ರದೇಶವು ಬಿನ್ನೆನ್‌‌ಆಲ್‌‌ಸ್ಟರ್‌‌ ("ಒಳಗಿನ ಆಲ್‌‌ಸ್ಟರ್‌‌") ಮತ್ತು ಔಬೆನ್‌‌‌ಆಲ್‌‌ಸ್ಟರ್‌‌ ("ಹೊರಗಿನ ಆಲ್‌‌ಸ್ಟರ್‌‌") ಸುತ್ತಲೂ ನೆಲೆಗೊಂಡಿದೆ; ಈ ಎರಡೂ ಸಹ ಮೂಲತಃ ಆಲ್‌‌ಸ್ಟರ್‌‌ ನದಿಯಾಗಿವೆಯಾದರೂ, ಸರೋವರಗಳಾಗಿ ಉಳಿದುಕೊಂಡಿವೆ. ನ್ಯೂವೆರ್ಕ್‌ ದ್ವೀಪ ಮತ್ತು ಉತ್ತರ ಸಮುದ್ರದಲ್ಲಿನ ಇತರ ಎರಡು ದ್ವೀಪಗಳೂ ಸಹ ಹ್ಯಾಂಬರ್ಗ್‌‌ನ ಭಾಗವಾಗಿದ್ದು, ಅವು ಹ್ಯಾಂಬರ್ಗ್ ವ್ಯಾಡೆನ್‌ ಸೀ ನ್ಯಾಷನಲ್‌ ಪಾರ್ಕ್‌‌‌ನಲ್ಲಿ ನೆಲೆಗೊಂಡಿವೆ.[೧೮]

ನ್ಯೂಯೆನ್‌‌ಫೆಲ್ಡೆ, ಕ್ರಾಂಜ್‌‌, ಫ್ರಾಂಕಾಪ್‌‌ ಮತ್ತು ಫಿಂಕೆನ್‌ವೆರ್ಡರ್‌‌ ಎಂಬ ನೆರೆಹೊರೆಗಳು ಆಲ್ಟೆಸ್‌ ಲ್ಯಾಂಡ್‌ ಪ್ರದೇಶದ (ಹಳೆಯ ಭೂಮಿ) ಭಾಗವಾಗಿದ್ದು, ಈ ಪ್ರದೇಶವು ಪ್ರಧಾನ ಯುರೋಪ್‌‌ನಲ್ಲಿನ ಹೊಂದಿಕೊಂಡಂತಿರುವ ಅತಿದೊಡ್ಡ ಹಣ್ಣಿನ ತೋಟವಾಗಿದೆ. ನ್ಯೂಗ್ರಾಬೆನ್‌‌-ಫಿಸ್ಕ್‌ಬೆಕ್‌‌ ನೆರೆಹೊರೆಯು 116.2 metres (381 ft)ನಷ್ಟು AMSLನಲ್ಲಿ ಹ್ಯಾಸೆಲ್‌ಬ್ರಾಕ್‌‌ ಎಂದು ಕರೆಯಲ್ಪಡುವ ಹ್ಯಾಂಬರ್ಗ್‌‌ನ ಅತಿ ಎತ್ತರದ ಉನ್ನತಸ್ಥಳವನ್ನು ಹೊಂದಿದೆ.[೧೯]

ಹವಾಮಾನ

ಬದಲಾಯಿಸಿ

ಹ್ಯಾಂಬರ್ಗ್ ಒಂದು ಸಾಗರ ಪರಿಣಾಮಿ ಹವಾಮಾನವನ್ನು (Cfb ) ಹೊಂದಿದೆ. ಕಡಲತೀರದ ಪ್ರದೇಶಗಳಿಗೆ ಹ್ಯಾಂಬರ್ಗ್ ನಗರವು ಹೊಂದಿರುವ ಸಾಮೀಪ್ಯತೆಯಿಂದಾಗಿ, ಅಟ್ಲಾಂಟಿಕ್‌‌ ಸಾಗರದಿಂದ ಬೀಸುವ ಕಡಲಿನ ಗಾಳಿರಾಶಿಯನ್ನು ಕಳಿಸುವ ಮೂಲಕ, ಸದರಿ ಪ್ರದೇಶದ ಹವಾಮಾನದ ಮೇಲೆ ಅದು ಪ್ರಭಾವವನ್ನು ಬೀರುತ್ತದೆ. ಸನಿಹದ ಜೌಗುಭೂಮಿಗಳೂ ಸಹ ಕಡಲತಡಿಯ ಒಂದು ಸಮಶೀತೋಷ್ಣದ ಹವಾಮಾನದ ಕುರಿತು ಖಾತ್ರಿನೀಡುತ್ತವೆ. ಹಿಮಸುರಿತವು ಅಪರೂಪವಾಗಿದ್ದು, ಸಾಮಾನ್ಯವಾಗಿ ಅದು ವರ್ಷವೊಂದರಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಸಂಭವಿಸುತ್ತದೆ.

ಜೂನ್‌‌, ಜುಲೈ, ಮತ್ತು ಆಗಸ್ಟ್ ತಿಂಗಳುಗಳು ಅತಿ ಬೆಚ್ಚನೆಯ ತಿಂಗಳುಗಳಾಗಿದ್ದು, 19.9 to 22.2 °C (67.8 to 72.0 °F)ನಷ್ಟಿರುವ ಹೆಚ್ಚಿನ ತಾಪಮಾನಗಳನ್ನು ಇವು ಹೊಂದಿರುತ್ತವೆ. ಡಿಸೆಂಬರ್‌‌, ಜನವರಿ, ಮತ್ತು ಫೆಬ್ರುವರಿ ತಿಂಗಳುಗಳು ಅತಿ ತಣ್ಣಗಿನ ತಿಂಗಳುಗಳಾಗಿದ್ದು, −1.4 to 0.0 °C (29.5 to 32.0 °F)ನಷ್ಟಿರುವ ಕಡಿಮೆ ತಾಪಮಾನಗಳನ್ನು ಅವು ಹೊಂದಿರುತ್ತವೆ.[೨೦]

Hamburgದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 3.5
(38.3)
4.4
(39.9)
8.0
(46.4)
12.3
(54.1)
17.5
(63.5)
19.9
(67.8)
22.1
(71.8)
22.2
(72)
17.9
(64.2)
13.0
(55.4)
7.5
(45.5)
4.6
(40.3)
12.7
(54.9)
ಕಡಮೆ ಸರಾಸರಿ °C (°F) −1.4
(29.5)
−1.2
(29.8)
1.1
(34)
3.3
(37.9)
7.4
(45.3)
10.5
(50.9)
12.7
(54.9)
12.5
(54.5)
9.6
(49.3)
6.0
(42.8)
2.4
(36.3)
0.0
(32)
5.2
(41.4)
ಸರಾಸರಿ ಮಳೆ mm (inches) 64.4
(2.535)
42.4
(1.669)
62.9
(2.476)
45.6
(1.795)
53.7
(2.114)
76.9
(3.028)
74.7
(2.941)
73.0
(2.874)
68.4
(2.693)
63.6
(2.504)
69.4
(2.732)
77.7
(3.059)
772.7
(30.421)
Average rainy days 12.1 9.2 11.3 8.9 9.6 11.3 11.4 10.2 10.8 10.5 11.7 12.4 129.4
Source: World Meteorological Organisation (UN) [೨೦]

ನಗರದೃಶ್ಯ

ಬದಲಾಯಿಸಿ
A panoramic view of the Hamburg Skyline of the Binnenalster taken from Kennedybrücke.

ವಾಸ್ತುಶಿಲ್ಪ

ಬದಲಾಯಿಸಿ
 
ರಾತ್ರಿಯಲ್ಲಿ ಕಂಡಂತೆ ಸ್ಪೀಚೆರ್‌‌‌ಸ್ಟಾಟ್‌
 
ಓಹ್ಲ್‌ಸ್‌ಡಾರ್ಫ್‌ ಸ್ಮಶಾನದಲ್ಲಿರುವ ಯೆಹೂದಿಗಳ ಶೋಕಾಚರಣೆಯ ಭವನ.

ಒಂದು ವ್ಯಾಪಕ ಶ್ರೇಣಿಯ ಶೈಲಿಗಳಲ್ಲಿರುವ, ವಾಸ್ತುಶಿಲ್ಪದ ದೃಷ್ಟಿಯಲ್ಲಿ ಗಮನಾರ್ಹವಾಗಿರುವ ಕಟ್ಟಡಗಳನ್ನು ಹ್ಯಾಂಬರ್ಗ್ ಹೊಂದಿದೆ. ಆದಾಗ್ಯೂ, ಅಲ್ಲಿ ಕೇವಲ ಕೆಲವೇ ಗಗನಚುಂಬಿ ಕಟ್ಟಡಗಳಿವೆ. ಮತ್ತೊಂದೆಡೆ, 19ನೇ ಶತಮಾನದಲ್ಲಿ ಪ್ರಪಂಚದ ಅತಿ ಎತ್ತರದ ಕಟ್ಟಡವೆನಿಸಿಕೊಂಡಿದ್ದ ಸೇಂಟ್‌ ನಿಕೋಲಸ್‌ನ ಚರ್ಚಿನ ರೀತಿಯ ಚರ್ಚುಗಳು ನಗರದ ಪ್ರಮುಖ ಹೆಗ್ಗುರುತುಗಳಾಗಿವೆ. ಹ್ಯಾಂಬರ್ಗ್ ನಗರದ ಕ್ಷಿತಿಜವು ಪ್ರಧಾನ ಚರ್ಚುಗಳ (ಹೌಪ್ಟ್‌ಕಿರ್ಚೆನ್‌ ) ಎತ್ತರದ ಶಿಖರ ರಚನೆಗಳನ್ನು ಒಳಗೊಂಡಿದೆ; ಸೇಂಟ್‌ ಮೈಕೇಲಿಸ್‌ ಚರ್ಚು (ಇದು “ಮೈಕೇಲ್‌" ಎಂಬ ಅಡ್ಡಹೆಸರನ್ನು ಹೊಂದಿದೆ), ಸೇಂಟ್‌ ಪೀಟರ್‌ನ ಚರ್ಚು, ಸೇಂಟ್‌ ಜಾಕೋಬಿ ಚರ್ಚು (ಸೇಂಟ್‌ ಜೇಮ್ಸ್‌ಗೆ ಇದನ್ನು ಸಮರ್ಪಿಸಲಾಗಿದೆ) ಮತ್ತು ತಾಮ್ರದ ಫಲಕಗಳು ಹೊದಿಸಲ್ಪಟ್ಟಿರುವ ಸೇಂಟ್‌ ಕ್ಯಾಥರೀನ್‌‌ನ ಚರ್ಚು ಮತ್ತು ಹಿಂದೊಮ್ಮೆ ಸಾರ್ವಜನಿಕವಾಗಿ ಸಂಪರ್ಕಿಸಲು ಸಾಧ್ಯವಿದ್ದ ರೇಡಿಯೋ ಮತ್ತು ದೂರದರ್ಶನ ಗೋಪುರವಾಗಿದ್ದ ಹೆನ್ರಿಕ್‌‌-ಹರ್ಟ್ಜ್‌-ಟರ್ಮ್‌ ಇವುಗಳು ಈ ಪಟ್ಟಿಯಲ್ಲಿ ಸೇರಿವೆ.

ಹ್ಯಾಂಬರ್ಗ್‌‌ನಲ್ಲಿರುವ ಅನೇಕ ಝರಿಗಳು, ನದಿಗಳು ಮತ್ತು ಕಾಲುವೆಗಳಿಗೆ ಅಡ್ಡಲಾಗಿ 2300ಕ್ಕೂ ಹೆಚ್ಚಿನ ಸೇತುವೆಗಳನ್ನು ನಿರ್ಮಿಸಲಾಗಿದೆ; ಈ ಸಂಖ್ಯೆಯು ಆಮ್‌ಸ್ಟರ್‌ಡ್ಯಾಂ ಅಥವಾ ವೆನಿಸ್‌‌‌‌ನಲ್ಲಿ ಇರುವುದಕ್ಕಿಂತಲೂ ಹೆಚ್ಚಿನದು ಎಂಬುದು ಗಮನಾರ್ಹ ಅಂಶ.[೨೧] ಪ್ರಪಂಚದಲ್ಲಿನ ಬೇರಾವುದೇ ನಗರಕ್ಕಿಂತ ಹೆಚ್ಚಾಗಿ ಹ್ಯಾಂಬರ್ಗ್ ತನ್ನ ನಗರ ಮಿತಿಗಳ ಒಳಗಡೆ ಹೆಚ್ಚಿನ ಸೇತುವೆಗಳನ್ನು ಹೊಂದಿದೆ. ಕೊಹ್ಲ್‌ಬ್ರಾಂಡ್‌ಬ್ರೂಕ್‌‌, ಫ್ರೀಹ್ಯಾಫೆನ್‌‌ ಎಲ್‌‌ಬ್ರೂಕೆನ್‌‌, ಮತ್ತು ಲೋಂಬಾರ್ಡ್ಸ್‌ಬ್ರೂಕ್‌‌ ಹಾಗೂ ಕೆನೆಡಿಬ್ರೂಕ್‌‌ ಇವುಗಳು‌ ಬಿನ್ನೆನ್‌‌ಆಲ್‌‌ಸ್ಟರ್‌‌ನ್ನು ಔಸ್ಸೆನ್‌‌ಆಲ್‌‌ಸ್ಟರ್‌‌ನಿಂದ ವಿಭಜಿಸುವ ಪ್ರಮುಖ ಸಂಚಾರ ಮಾರ್ಗಗಳಾಗಿವೆ.

ಇಲ್ಲಿನ ಪುರಭವನವು ಸಮೃದ್ಧವಾಗಿ ಅಲಂಕರಿಸಲ್ಪಟ್ಟ ನವ-ಪುನರುದಯದ ಕಟ್ಟಡವಾಗಿದ್ದು, 1897ರಲ್ಲಿ ಇದು ಸಂಪೂರ್ಣಗೊಂಡಿತು. ಇದರ ಗೋಪುರವು 112 metres (367 ft)ನಷ್ಟು ಎತ್ತರವಿದೆ. ಇದರ ಮುಖಭಾಗವು 111 m (364 ft)ನಷ್ಟು ಉದ್ದವಿದ್ದು, ಪವಿತ್ರ ರೋಮನ್‌ ಸಾಮ್ರಾಜ್ಯದ ಚಕ್ರವರ್ತಿಗಳನ್ನು ಅದು ಚಿತ್ರಿಸುತ್ತದೆ; ಒಂದು ಮುಕ್ತ ಚಕ್ರಾಧಿಪತ್ಯದ ನಗರವಾಗಿ ಹ್ಯಾಂಬರ್ಗ್ ಕೇವಲ ಚಕ್ರವರ್ತಿಯ ಪರಮಾಧಿಕಾರದ ಅಡಿಯಲ್ಲಿ ಇತ್ತಾದ್ದರಿಂದ ಈ ಚಿತ್ರಣಗಳನ್ನು ರೂಪಿಸಲಾಗಿದೆ.[೨೨] 1922ರಲ್ಲಿ ನಿರ್ಮಿಸಲ್ಪಟ್ಟ ಮತ್ತು ಫ್ರಿಟ್ಜ್‌ ಹೋಗರ್‌‌ ಎಂಬ ವಾಸ್ತುಶಿಲ್ಪಿಯಿಂದ ವಿನ್ಯಾಸಗೊಳಿಸಲ್ಪಟ್ಟ ಒಂದು ಇಟ್ಟಿಗೆ ಕಲ್ಲಿನ ಕಚೇರಿ ಕಟ್ಟಡವಾಗಿರುವ ಚಿಲಿಹೌಸ್‌, ಸಾಗರ ಪ್ರಯಾಣದ ಹಡಗೊಂದರ ಆಕಾರವನ್ನು ಹೊಂದಿದೆ.

ಯುರೋಪ್‌ನ ಅತಿದೊಡ್ಡ ನಗರದೊಳಗಿನ ಬೆಳವಣಿಗೆಯಾದ (2008ರ ವೇಳೆಗೆ ಇದ್ದಂತೆ) ಹ್ಯಾಫೆನ್‌‌ಸಿಟಿಯು ಸುಮಾರು 10,000 ನಿವಾಸಿಗಳು ಮತ್ತು 15,000 ಕೆಲಸಗಾರರಿಗೆ ನೆಲೆಯಾಗಲಿದೆ. ರೆಮ್‌ ಕೂಲ್‌ಹಾಸ್‌ ಮತ್ತು ರೆಂಜೊ ಪಿಯಾನೊರಿಂದ ಮಾಡಲ್ಪಟ್ಟ ವಿನ್ಯಾಸಗಳನ್ನು ಸದರಿ ಯೋಜನೆಯು ಒಳಗೊಳ್ಳುತ್ತದೆ. ಎಲ್ಬೆ ಫಿಲ್‌ಹಾರ್ಮಾನಿಕ್‌ ಹಾಲ್‌‌ (ಎಲ್ಬ್‌ಫಿಲ್‌ಹಾರ್ಮಾನಿ) ಭವನವು 2012ರ ಮಧ್ಯಭಾಗದ ವೇಳೆಗೆ ಸಂಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ. ಹೆರ್ಜೋಗ್‌ & ಡೆ ಮ್ಯೂರಾನ್‌ ಎಂಬ ಸ್ವಿಸ್‌‌ ಸಂಸ್ಥೆಯಿಂದ ವಿನ್ಯಾಸಗೊಳಿಸಲ್ಪಟ್ಟ, ಒಂದು ಹಳೆಯ ಉಗ್ರಾಣದ ಮೇಲ್ಭಾಗದಲ್ಲಿನ ಕಟ್ಟಡವೊಂದರಲ್ಲಿ ಇದು ಸಂಗೀತ ಕಚೇರಿಗಳನ್ನು ಆಯೋಜಿಸಲಿದೆ.[೨೩][೨೪]

ಹ್ಯಾಂಬರ್ಗ್‌‌‌ನ ಅನೇಕ ಉದ್ಯಾನವನಗಳು ಇಡೀ ನಗರದ ಉದ್ದಗಲಕ್ಕೂ ಹರಡಿಕೊಂಡಿರುವುದರಿಂದಾಗಿ ಹ್ಯಾಂಬರ್ಗ್‌‌ಗೆ ಅತ್ಯಂತ ಹಚ್ಚಹಸುರಿನ ನೋಟವು ದೊರಕಿದೆ ಎನ್ನಬಹುದು. ಇಲ್ಲಿನ ಅತಿದೊಡ್ಡ ಉದ್ಯಾನವನಗಳಲ್ಲಿ ಸ್ಟಾಡ್‌ಪಾರ್ಕ್‌ , ಓಹ್ಲ್‌ಸ್‌ಡಾರ್ಫ್‌ ಸ್ಮಶಾನ ಮತ್ತು ಪ್ಲಾಂಟೆನ್‌ ಉನ್‌ ಬ್ಲೋಮೆನ್‌ ಸೇರಿವೆ. ಹ್ಯಾಂಬರ್ಗ್‌‌ನ "ಪ್ರಧಾನ ಉದ್ಯಾನವನ"ವಾಗಿರುವ ಸ್ಟಾಡ್‌ಪಾರ್ಕ್‌ , ಒಂದು ದೊಡ್ಡಪ್ರಮಾಣದ ಹುಲ್ಲುಹಾಸು ಮತ್ತು ಒಂದು ಬೃಹತ್‌ ನೀರಿನ ಗೋಪುರವನ್ನು ಒಳಗೊಂಡಿದ್ದು, ಇದರಲ್ಲಿ ಯುರೋಪ್‌ನ ಅತಿದೊಡ್ಡ ತಾರಾಲಯಗಳ ಪೈಕಿ ಒಂದು ನೆಲೆಗೊಂಡಿದೆ. ಸದರಿ ಉದ್ಯಾನವನ ಮತ್ತು ಅದರ ಕಟ್ಟಡಗಳನ್ನು ಫ್ರಿಟ್ಜ್‌ ಷುಮೇಕರ್‌‌ ಎಂಬಾತ 1910ರ ದಶಕದಲ್ಲಿ ವಿನ್ಯಾಸಗೊಳಿಸಿದ.

ಪುರಸಭಾ ಕ್ಷೇತ್ರಗಳು

ಬದಲಾಯಿಸಿ

ಹ್ಯಾಂಬರ್ಗ್ ನಗರವು 7 ಪುರಸಭಾ ಕ್ಷೇತ್ರಗಳಿಂದ (ಜರ್ಮನ್‌‌: ಬೆಜಿರ್ಕೆ ) ಮಾಡಲ್ಪಟ್ಟಿದೆ ಮತ್ತು 105 ಕೇರಿಗಳಾಗಿ (ಜರ್ಮನ್‌‌: ಸ್ಟಾಡ್‌ಟ್ಟೀಲೆ ) ಮರುವಿಭಜಿಸಲ್ಪಟ್ಟಿದೆ. ಅಲ್ಲಿ 180 ತಾಣಗಳು (ಜರ್ಮನ್‌‌: ಓರ್ಟ್‌ಸ್ಟೀಲೆ ) ಕೂಡಾ ಇವೆ. ನಗರ ಪ್ರದೇಶದ ಸಂಸ್ಥೆಯನ್ನು ಹ್ಯಾಂಬರ್ಗ್‌‌ನ ಸಂವಿಧಾನ ಮತ್ತು ಹಲವಾರು ಕಾನೂನುಗಳು ನಿಯಂತ್ರಿಸುತ್ತವೆ.[][೨೫] ಇಲ್ಲಿನ ಬಹುಪಾಲು ಕೇರಿಗಳು, ಹಿಂದೆ ಸ್ವತಂತ್ರ ನಗರಗಳು, ಪಟ್ಟಣಗಳು ಅಥವಾ ಹಳ್ಳಿಗಳಾಗಿದ್ದವು, ಮತ್ತು ಅವನ್ನು ಶುದ್ಧಾಂಗವಾಗಿ ಹ್ಯಾಂಬರ್ಗ್ ಪ್ರದೇಶವಾಗಿ ಜೋಡಣೆ ಮಾಡಲಾಯಿತು. 1937ರ ಗ್ರೇಟರ್‌‌ ಹ್ಯಾಂಬರ್ಗ್ ಕಾಯಿದೆಯ ಮೂಲಕ ಕೊನೆಯ ದೊಡ್ಡ ಸೇರ್ಪಡೆಯನ್ನು ಮಾಡಲಾಯಿತು; ಈ ಸಂದರ್ಭದಲ್ಲಿ ಆಲ್ಟೋನಾ, ಹಾರ್ಬರ್ಗ್‌‌ ಮತ್ತು ವ್ಯಾಂಡ್ಸ್‌ಬೆಕ್‌‌ ನಗರಗಳು ಹ್ಯಾಂಬರ್ಗ್ ಸಂಸ್ಥಾನದೊಳಗೆ ವಿಲೀನಗೊಂಡವು.[೨೬] ಹ್ಯಾಂಬರ್ಗ್ ರಾಜಕೀಯ-ವಾಣಿಜ್ಯ ಕೂಟದ ನಗರದ ಸಂವಿಧಾನ ಮತ್ತು ಆಡಳಿತದ ಕಾಯಿದೆ ಯು (ಆಕ್ಟ್‌ ಆಫ್‌ ದಿ ಕಾನ್ಸ್ಟಿಟ್ಯೂಷನ್‌ ಅಂಡ್‌ ಅಡ್ಮಿನಿಸ್ಟ್ರೇಷನ್‌ ಆಫ್‌ ಹಾನ್ಸಿಯಾಟಿಕ್‌ ಸಿಟಿ ಆಫ್‌ ಹ್ಯಾಂಬರ್ಗ್‌) ಹ್ಯಾಂಬರ್ಗ್‌‌ನ್ನು ಒಂದು ಸಂಸ್ಥಾನವಾಗಿ ಮತ್ತು ಒಂದು ಪುರಸಭೆಯಾಗಿ ಸ್ಥಾಪಿಸಿತು.[೨೭] ವರ್ಷಗಳಾಗುತ್ತಿದ್ದಂತೆ ಕೆಲವೊಂದು ಪುರಸಭಾ ಕ್ಷೇತ್ರಗಳು ಮತ್ತು ಕೇರಿಗಳು ಹಲವಾರು ಬಾರಿ ಮರುವ್ಯವಸ್ಥೆಗೊಳಿಸಲ್ಪಟ್ಟಿವೆ.

ಪ್ರತಿ ಪುರಸಭಾ ಕ್ಷೇತ್ರದ ಆಡಳಿತವನ್ನು ಪುರಸಭಾ ಕ್ಷೇತ್ರದ ಪರಿಷತ್ತೊಂದು (ಜರ್ಮನ್‌‌: ಬೆಜಿರ್‌ಕ್ಸ್‌ವೆರ್ಸ್ಯಾಮ್‌ಲಂಗ್‌ ) ನಡೆಸುತ್ತದೆ ಮತ್ತು ಓರ್ವ ಪೌರಾಡಳಿತದ ಕಾರ್ಯನಿರ್ವಾಹಕನು (ಜರ್ಮನ್‌‌: ಬೆಜಿರ್‌ಕ್ಸಾಮ್‌ಟ್ಸ್‌ಲೀಟೆರ್‌ ) ಈ ಆಡಳಿತದ ನಿರ್ವಹಣೆಯ ಹೊಣೆಹೊತ್ತುಕೊಂಡಿರುತ್ತಾನೆ. ಹ್ಯಾಂಬರ್ಗ್‌‌ನ ಪುರಸಭಾ ಕ್ಷೇತ್ರಗಳು ಸ್ವತಂತ್ರ ಪುರಸಭೆಗಳಲ್ಲ. ಪುರಸಭಾ ಕ್ಷೇತ್ರದ ಸರ್ಕಾರಗಳ ಅಧಿಕಾರವು ಸೀಮಿತಗೊಳಿಸಲ್ಪಟ್ಟಿದೆ ಮತ್ತು ಇದು ಹ್ಯಾಂಬರ್ಗ್‌‌‌ನ ಸೆನೆಟ್‌‌‌‌ನ ಅಧೀನದಲ್ಲಿದೆ. ಪುರಸಭಾ ಕ್ಷೇತ್ರದ ಕಾರ್ಯನಿರ್ವಾಹಕನನ್ನು ಪುರಸಭಾ ಕ್ಷೇತ್ರದ ಪರಿಷತ್ತು ಚುನಾಯಿಸುತ್ತದೆ ಮತ್ತು ಅದಾದ ನಂತರ ಅವನಿಗೆ ಸಂಬಂಧಿಸಿದಂತೆ ಹ್ಯಾಂಬರ್ಗ್‌‌‌ನ ಸೆನೆಟ್‌ನ ದೃಢೀಕರಣ ಹಾಗೂ ನೇಮಕಾತಿಯನ್ನು ಪಡೆಯುವುದು ಅಗತ್ಯವಾಗಿರುತ್ತದೆ.[೨೫] ಇಲ್ಲಿನ ಕೇರಿಗಳಿಗೆ ತಮ್ಮದೇ ಆದ ಯಾವುದೇ ಆಡಳಿತ ನಿರ್ವಹಣಾ ಘಟಕಗಳಿರುವುದಿಲ್ಲ.

2008ರಲ್ಲಿದ್ದ ಹ್ಯಾಂಬರ್ಗ್‌‌ನ ಪುರಸಭಾ ಕ್ಷೇತ್ರಗಳಲ್ಲಿ ಆಲ್ಟೋನಾ, ಬೆರ್ಜ್‌ಡಾರ್ಫ್‌, ಐಮ್ಸ್‌ಬ್ಯೂಟೆಲ್‌‌, ಹ್ಯಾಂಬರ್ಗ್-ಮಿಟ್ಟೆ, ಹ್ಯಾಂಬರ್ಗ್-ನೋರ್ಡ್‌, ಹಾರ್ಬರ್ಗ್‌‌ ಮತ್ತು ವ್ಯಾಂಡ್ಸ್‌ಬೆಕ್‌‌ ಸೇರಿದ್ದವು.[೨೮]

 
ಹ್ಯಾಂಬರ್ಗ್‌‌ನ ಪುರಸಭಾ ಕ್ಷೇತ್ರಗಳು

ಆಲ್ಟೋನಾ ಎಂಬುದು ಎಲ್ಬೆ ನದಿಯ ಬಲ ದಂಡೆಯ ಮೇಲಿರುವ ಅತ್ಯಂತ ಪಶ್ಚಿಮದ ಭಾಗದಲ್ಲಿರುವ ನಗರ ಪ್ರದೇಶದ ಪುರಸಭಾ ಕ್ಷೇತ್ರವಾಗಿದೆ. 1640ರಿಂದ 1864ರವರೆಗೆ ಆಲ್ಟೋನಾ ಪುರಸಭಾ ಕ್ಷೇತ್ರವು ಡ್ಯಾನಿಷ್‌ ರಾಜಪ್ರಭುತ್ವದ ಆಡಳಿತದಡಿಯಲ್ಲಿತ್ತು. 1937ರವರೆಗೂ ಆಲ್ಟೋನಾ ಒಂದು ಸ್ವತಂತ್ರ ನಗರವಾಗಿತ್ತು. ರಾಜಕೀಯವಾಗಿ ಹೇಳುವುದಾದರೆ, ಈ ಕೆಳಗಿನ ಕೇರಿಗಳು ಆಲ್ಟೋನಾ ಪುರಸಭಾ ಕ್ಷೇತ್ರದ ಭಾಗವಾಗಿವೆ: ಆಲ್ಟೋನಾ-ಆಲ್ಟ್‌ಸ್ಟಾಟ್‌, ಆಲ್ಟೋನಾ-ನೋರ್ಡ್‌, ಬಹ್ರೆನ್‌ಫೆಲ್ಡ್‌, ಒಟೆನ್ಸೆನ್‌‌, ಒಥ್ಮಾರ್ಸ್ಕೆನ್‌, ಗ್ರೊಬ್‌‌ ಫ್ಲಾಟ್‌ಬೆಕ್‌‌, ಓಸ್ಡಾರ್ಫ್‌, ಲ್ಯುರುಪ್‌‌, ನಿಯೆನ್‌ಸ್ಟೆಟೆನ್‌, ಬ್ಲಾಂಕೆನೀಸ್‌, ಐಸೆರ್‌ಬ್ರೂಕ್‌‌, ಸೂಲ್ಡಾರ್ಫ್‌, ರಿಸ್ಸೆನ್‌‌, ಸ್ಟೆರ್ನ್‌ಸ್ಕಾಂಜೆ.[೨೮]

ಬೆರ್ಜ್‌ಡಾರ್ಫ್‌ ಪುರಸಭಾ ಕ್ಷೇತ್ರವು ಒಳಗೊಂಡಿರುವ ಕೇರಿಗಳೆಂದರೆ: ಅಲ್ಲೆರ್‌ಮೋಹೆ, ಆಲ್ಟೆನ್‌ಗ್ಯಾಮೆ, ಹಿಂದಿನ ಸ್ವತಂತ್ರ ನಗರವಾದ ಬಿಲ್‌ವೆರ್ಡರ್‌ನ ನಗರ ಕೇಂದ್ರವಾದ ಬೆರ್ಜ್‌ಡಾರ್ಫ್‌, ಕರ್ಸ್‌ಲ್ಯಾಕ್‌‌, ಕಿರ್ಚ್‌ವೆರ್ಡರ್‌, ಲೊಹ್‌ಬ್ರೂಗ್‌‌, ಮೂರ್‌ಫ್ಲೀಟ್‌, ನ್ಯುಯೆನ್‌ಗ್ಯಾಮೆ, ಆಕ್‌ಸೆನ್‌ವೆರ್ಡರ್‌, ರೀಟ್‌ಬ್ರೂಕ್‌‌, ಸ್ಪ್ಯಾಡನ್‌ಲ್ಯಾಂಡ್‌ ಮತ್ತು ಟ್ಯಾಟೆನ್‌ಬರ್ಗ್‌.[೨೮]

ಐಮ್ಸ್‌ಬ್ಯೂಟೆಲ್‌‌ ಪುರಸಭಾ ಕ್ಷೇತ್ರವು ಒಂಬತ್ತು ಕೇರಿಗಳಾಗಿ ವಿಭಜಿಸಲ್ಪಟ್ಟಿದೆ. ಅವುಗಳೆಂದರೆ: ಐಡೆಲ್‌ಸ್ಟೆಟ್‌, ಐಮ್ಸ್‌ಬ್ಯೂಟೆಲ್‌‌, ಹಾರ್ವೆಸ್ಟ್‌ಹ್ಯೂಡ್‌, ಹೊಹೆಲುಫ್ಟ್‌-ವೆಸ್ಟ್‌, ಲೊಕ್‌‌‌ಸ್ಟೆಟ್‌, ನಿಯೆನ್‌ಡಾರ್ಫ್‌, ರೋಥರ್‌ಬೌಮ್‌‌, ಸ್ಕ್ನೆಲ್ಸೆನ್‌‌‌ ಮತ್ತು ಸ್ಟೆಲ್ಲಿಂಜೆನ್‌‌.[೨೮] ಈ ಪುರಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಯೆಹೂದಿಗಳ ಹಿಂದಿನ ನೆರೆಹೊರೆಯಾದ ಗ್ರಿಂಡೆಲ್ ನೆಲೆಗೊಂಡಿದೆ.

 
ಸೇಂಟ್‌ ಮೈಕೇಲಿಸ್‌ ಚರ್ಚಿನಿಂದ ಕಂಡಂತೆ ಹ್ಯಾಂಬರ್ಗ್ ಕೇಂದ್ರ

ಹ್ಯಾಂಬರ್ಗ್-ಮಿಟ್ಟೆ ("ಹ್ಯಾಂಬರ್ಗ್ ಸೆಂಟರ್‌‌") ಪುರಸಭಾ ಕ್ಷೇತ್ರವು ಹ್ಯಾಂಬರ್ಗ್ ನಗರದ ನಗರ ಪ್ರದೇಶ ಕೇಂದ್ರವನ್ನು ಬಹುತೇಕವಾಗಿ ಆವರಿಸುತ್ತದೆ ಮತ್ತು ಇದು ಒಳಗೊಂಡಿರುವ ಕೇರಿಗಳೆಂದರೆ: ಬಿಲ್‌‌‌ಬ್ರೂಕ್‌, ಬಿಲ್‌‌‌ಸ್ಟೆಟ್‌, ಬೋರ್ಗ್‌ಫೆಲ್ಡೆ, ಫಿಂಕೆನ್‌ವೆರ್ಡರ್‌‌, ಹ್ಯಾಫೆನ್‌‌ಸಿಟಿ, ಹ್ಯಾಮ್‌‌‌-ನೋರ್ಡ್‌, ಹ್ಯಾಮ್‌‌‌-ಮಿಟ್ಟೆ, ಹ್ಯಾಮ್‌‌‌-ಸೂದ್‌, ಹ್ಯಾಮರ್‌ಬ್ರೂಕ್‌, ಹೋರ್ನ್‌, ಕ್ಲೈನರ್‌ ಗ್ರಾಸ್‌ಬ್ರೂಕ್‌, ನ್ಯೂವೆರ್ಕ್‌, ರೋಥೆನ್‌ಬರ್ಗ್‌ಸಾರ್ಟ್‌, ಸೇಂಟ್‌ ಜಾರ್ಜ್‌, ಸೇಂಟ್‌ ಪಾಲಿ, ಸ್ಟೀನ್‌‌‌‌ವೆರ್ಡರ್‌, ವೆಡ್ಡೆಲ್‌‌, ವಾಲ್ಟರ್‌ಶಾಫ್‌ ಮತ್ತು ವಿಲ್‌ಹೆಲ್ಮ್ಸ್‌‌ಬರ್ಗ್‌.[೨೮] ಹ್ಯಾಂಬರ್ಗ್-ಆಲ್ಟ್‌ಸ್ಟಾಟ್‌ ("ಹಳೆಯ ಪಟ್ಟಣ") ಮತ್ತು ನ್ಯೂಸ್ಟಾಟ್‌ ("ಹೊಸ ಪಟ್ಟಣ") ಎಂಬ ಕೇರಿಗಳು ಹ್ಯಾಂಬರ್ಗ್‌‌ನ ಐತಿಹಾಸಿಕ ಮೂಲವಾಗಿವೆ.

ಹ್ಯಾಂಬರ್ಗ್-ನೋರ್ಡ್‌ ಪುರಸಭಾ ಕ್ಷೇತ್ರವು ಒಳಗೊಂಡಿರುವ ಕೇರಿಗಳೆಂದರೆ: ಆಲ್‌‌ಸ್ಟರ್‌‌ಡಾರ್ಫ್‌, ಬಾರ್ಮ್‌ಬೆಕ್‌‌-ನೋರ್ಡ್‌, ಬಾರ್ಮ್‌ಬೆಕ್‌‌-ಸೂದ್‌, ಡಲ್ಸ್‌ಬರ್ಗ್‌, ಎಪ್ಪೆನ್‌ಡಾರ್ಫ್‌, ಫಹಲ್ಸ್‌ಬ್ಯೂಟೆಲ್‌‌, ಗ್ರೊಬ್‌‌ ಬೋರ್ಸ್ಟೆಲ್‌, ಹೊಹೆಲುಫ್ತ್‌‌-ಓಸ್ಟ್‌, ಹೋಹೆನ್‌‌ಫೆಲ್ಡೆ, ಲ್ಯಾಂಗೆನ್‌‌‌ಹೋರ್ನ್‌, ಓಹ್ಲ್‌ಸ್‌ಡಾರ್ಫ್‌, ಉಹ್ಲೆನ್‌ಹೋರ್ಸ್ಟ್‌ ಮತ್ತು ವಿಂಟರ್‌ಹ್ಯೂಡ್‌.[೨೮]

ಹಾರ್ಬರ್ಗ್‌‌ ಪುರಸಭಾ ಕ್ಷೇತ್ರವು ಎಲ್ಬೆ ನದಿಯ ದಕ್ಷಿಣದ ತೀರಪ್ರದೇಶಗಳ ಮೇಲೆ ನೆಲೆಗೊಂಡಿದೆ. ಹ್ಯಾಂಬರ್ಗ್‌‌ನ ಬಂದರಿನ ಭಾಗಗಳು, ವಾಸಯೋಗ್ಯ ಮತ್ತು ಗ್ರಾಮಾಂತರ ಪ್ರದೇಶಗಳು, ಹಾಗೂ ಕೆಲವೊಂದು ಸಂಶೋಧನಾ ಸಂಸ್ಥೆಗಳನ್ನು ಈ ಪುರಸಭಾ ಕ್ಷೇತ್ರವು ತನ್ನ ವ್ಯಾಪ್ತಿಯಲ್ಲಿರಿಸಿಕೊಂಡಿದೆ. ಈ ಪುರಸಭಾ ಕ್ಷೇತ್ರವು ಒಳಗೊಂಡಿರುವ ಕೇರಿಗಳೆಂದರೆ: ಆಲ್ಟೆನ್‌‌‌ವೆರ್ಡರ್‌, ಕ್ರಾಂಜ್‌‌, ಐಬೆನ್‌ಡಾರ್ಫ್‌, ಫ್ರಾಂಕಾಪ್‌‌, ಗಟ್‌ ಮೂರ್‌‌, ಹಾರ್ಬರ್ಗ್‌‌, ಹೌಸ್‌ಬ್ರುಕ್‌, ಹೀಮ್‌ಫೆಲ್ಡ್‌, ಲ್ಯಾಂಗೆನ್‌ಬೆಕ್‌‌, ಮಾರ್ಮ್‌ಸ್ಟಾರ್ಫ್‌, ಮೂರ್‌‌‌ಬರ್ಗ್‌, ನ್ಯೂಯೆನ್‌‌ಫೆಲ್ಡೆ, ನ್ಯೂಗ್ರಾಬೆನ್‌‌-ಫಿಸ್ಕ್‌ಬೆಕ್‌‌, ನ್ಯೂಲ್ಯಾಂಡ್‌, ರೋನ್ನೆಬರ್ಗ್‌, ಸಿನ್ಸ್‌ಟಾರ್ಫ್‌ ಮತ್ತು ವಿಲ್‌ಸ್ಟಾರ್ಫ್‌.[೨೮]

ವ್ಯಾಂಡ್ಸ್‌ಬೆಕ್‌‌ ಫುರಸಭಾ ಕ್ಷೇತ್ರವನ್ನು ಈ ಕೆಳಕಂಡ ಕೇರಿಗಳಾಗಿ ವಿಭಜಿಸಲಾಗಿದೆ: ಬರ್ಗ್‌ಸ್ಟೆಟ್‌, ಬ್ರಾಮ್‌ಫೆಲ್ಡ್‌, ಡ್ಯುವೆನ್‌‌‌ಸ್ಟೆಟ್‌, ಐಲ್‌ಬೆಕ್‌‌, ಫಾರ್ಮ್‌ಸೆನ್‌‌-ಬೆರ್ನೆ, ಹಮ್ಮೆಲ್ಸ್‌ಬ್ಯೂಟೆಲ್‌‌, ಜೆನ್‌ಫೆಲ್ಡ್‌, ಲೆಮ್‌ಸಾಹ್ಲ್‌‌-ಮೆಲ್ಲಿಂಗ್‌‌‌ಸ್ಟೆಟ್‌, ಮೇರಿಯೆಂಥಾಲ್‌‌, ಪೊಪ್ಪೆನ್‌ಬ್ಯೂಟೆಲ್‌‌, ರಾಹ್ಲ್‌‌‌ಸ್ಟೆಟ್‌, ಸಾಸೆಲ್‌‌, ಸ್ಟೀಲ್‌ಶೂಪ್‌‌, ಟೋನ್‌ಡಾರ್ಫ್‌, ವೋಕ್ಸ್‌‌ಡಾರ್ಫ್‌, ವ್ಯಾಂಡ್ಸ್‌ಬೆಕ್‌‌, ವೆಲ್ಲಿಂಗ್ಸ್‌ಬ್ಯೂಟೆಲ್‌‌ ಮತ್ತು ವೊಹ್ಲ್‌‌‌ಡಾರ್ಫ್‌-ಒಹ್ಲ್‌‌‌ಸ್ಟೆಟ್‌.[೨೮]

ಸಂಸ್ಕೃತಿ ಮತ್ತು ಸಮಕಾಲೀನ ಜೀವನ

ಬದಲಾಯಿಸಿ

ಹ್ಯಾಂಬರ್ಗ್ ನಗರವು 40ಕ್ಕೂ ಹೆಚ್ಚಿನ ರಂಗಮಂದಿರಗಳು, 60 ವಸ್ತುಸಂಗ್ರಹಾಲಯಗಳು ಮತ್ತು 100 ಸಂಗೀತ ತಾಣಗಳು ಹಾಗೂ ಕ್ಲಬ್ಬುಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ. 2005ರಲ್ಲಿ, 18 ದಶಲಕ್ಷಕ್ಕೂ ಹೆಚ್ಚಿನ ಜನರು ಇಲ್ಲಿನ ಸಂಗೀತ ಕಚೇರಿಗಳು, ವಸ್ತುಪ್ರದರ್ಶನಗಳು, ರಂಗಮಂದಿರಗಳು, ಚಿತ್ರಮಂದಿರಗಳು, ವಸ್ತುಸಂಗ್ರಹಾಲಯಗಳು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂದರ್ಶಿಸಿದರು. 3.16 ನೌಕರರಷ್ಟು ಸರಾಸರಿ ಗಾತ್ರವನ್ನು ಹೊಂದಿದ್ದ 8,552ಕ್ಕೂ ಹೆಚ್ಚಿನ ತೆರಿಗೆಗೆ ಅರ್ಹವಾದ ಕಂಪನಿಗಳು ಸಂಸ್ಕೃತಿ ವಿಭಾಗದಲ್ಲಿ ತೊಡಗಿಸಿಕೊಂಡಿದ್ದವು; ಸದರಿ ಸಂಸ್ಕೃತಿ ವಿಭಾಗದಲ್ಲಿ ಸಂಗೀತ, ಪ್ರದರ್ಶನ ಕಲೆಗಳು ಮತ್ತು ಸಾಹಿತ್ಯದಂಥ ವಲಯಗಳು ಸೇರಿದ್ದವು ಎಂಬುದು ಗಮನಾರ್ಹ ಸಂಗತಿ. ಇಲ್ಲಿನ ತಲಾ ಸಾವಿರ ನಿವಾಸಿಗಳಿಗೆ ಸೃಜನಶೀಲ ವಿಭಾಗದಲ್ಲಿರುವ ಐದು (5) ಕಂಪನಿಗಳಿವೆ (ಬರ್ಲಿನ್‌‌ 3, ಲಂಡನ್‌‌ 37).[೨೯] ಯುರೋಪಿಯನ್‌‌ ಗ್ರೀನ್‌ ಕ್ಯಾಪಿಟಲ್‌ ಪ್ರಶಸ್ತಿಯ ಯೋಜನೆಗೆ ಹ್ಯಾಂಬರ್ಗ್ ಪ್ರವೇಶಿಸಿದ್ದು, 2011ರ ವರ್ಷಕ್ಕೆ ಸಂಬಂಧಿಸಿದಂತೆ ಅದಕ್ಕೆ ಯುರೋಪಿಯನ್‌ ಗ್ರೀನ್‌ ಕ್ಯಾಪಿಟಲ್‌‌ ಎಂಬ ಪಟ್ಟವನ್ನು ನೀಡಲಾಯಿತು.

ರಂಗಮಂದಿರಗಳು

ಬದಲಾಯಿಸಿ
 
ಸೇಂಟ್‌ ಜಾರ್ಜ್‌ ಕೇರಿಯಲ್ಲಿರುವ ಡ್ಯೂಷೆಸ್‌ ಸ್ಕೌಸ್ಪೀಲ್‌ಹೌಸ್‌.
 
ದಿ ಇಂಗ್ಲಿಷ್‌ ಥಿಯೇಟರ್‌‌

ಸಂಸ್ಥಾನದ-ಸ್ವಾಮ್ಯದ ಡ್ಯೂಷೆಸ್‌ ಸ್ಕೌಸ್ಪೀಲ್‌ಹೌಸ್‌ , ಥಾಲಿಯಾ ರಂಗಮಂದಿರ, ಮತ್ತು ಕ್ಯಾಂಪ್‌ನ್ಯಾಗೆಲ್‌‌ ಇವೇ ಮೊದಲಾದವುಗಳು ಜರ್ಮನಿಯಲ್ಲಿ ಮತ್ತು ಅದರಾಚೆಗೆ ಇರುವ ಸುಪರಿಚಿತ ರಂಗಮಂದಿರಗಳಾಗಿವೆ.[೩೦] U3 ಮುಂಡ್ಸ್‌‌ಬರ್ಗ್‌ ನಿಲ್ದಾಣದ ಸಮೀಪವಿರುವ ದಿ ಇಂಗ್ಲಿಷ್‌ ಥಿಯೇಟರ್‌‌‌ ನ್ನು 1976ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಜರ್ಮನಿಯಲ್ಲಿನ ಅತಿ ಹಳೆಯ, ವೃತ್ತಿಪರ ಇಂಗ್ಲಿಷ್‌-ಮಾತನಾಡುವ ರಂಗಮಂದಿರವಾಗಿದೆ, ಮತ್ತು ಸಹಜವಾಗಿ ಇಂಗ್ಲಿಷ್‌ ಮಾತನಾಡುವ ನಟರನ್ನು ತನ್ನ ಕಂಪನಿಯಲ್ಲಿ ಅದು ಏಕಮಾತ್ರವಾಗಿ ಹೊಂದಿದೆ.

ವಸ್ತು ಸಂಗ್ರಹಾಲಯಗಳು

ಬದಲಾಯಿಸಿ

ಶ್ರೇಷ್ಠ ಮತ್ತು ಸಮಕಾಲೀನ ಕಲೆಯನ್ನು ಪ್ರದರ್ಶಿಸುತ್ತಿರುವ ಹಲವಾರು ದೊಡ್ಡ ವಸ್ತುಸಂಗ್ರಹಾಲಯಗಳು ಹಾಗೂ ಕಲಾ-ಚಿತ್ರಶಾಲೆಗಳನ್ನು ಹ್ಯಾಂಬರ್ಗ್ ಹೊಂದಿದೆ. ಸಮಕಾಲೀನ ಕಲೆಗೆ ಸಂಬಂಧಿಸಿದ ತನ್ನ ಕಲಾ-ಚಿತ್ರಶಾಲೆಯೊಂದಿಗಿನ (ಗ್ಯಾಲರೀ ಡೆರ್‌ ಗೆಗೆನ್‌ವಾರ್ಟ್‌ ) ಕುನ್‌ಸ್ಥಾಲ್ಲೆ ಹ್ಯಾಂಬರ್ಗ್, ಮ್ಯೂಸಿಯಂ ಫಾರ್‌ ಆರ್ಟ್‌ ಅಂಡ್‌ ಇಂಡಸ್ಟ್ರಿ (ಮ್ಯೂಸಿಯಂ ಫಾರ್‌ ಕುನ್ಸ್ಟ್‌ ಅಂಡ್‌ ಗೆವೆರ್ಬೆ ) ಮತ್ತು ಡೀಕ್ಟೋರ್‌ಹ್ಯಾಲೆನ್‌‌/ಹೌಸ್‌ ಆಫ್‌ ಫೋಟೋಗ್ರಫಿ ಇವು ಅಂಥ ಉದಾಹರಣೆಗಳಾಗಿವೆ. 2008ರಲ್ಲಿ, ಹ್ಯಾಫೆನ್‌‌ಸಿಟಿ ಕೇರಿಯಲ್ಲಿ ಇಂಟರ್‌ನ್ಯಾಷನೇಲ್ಸ್‌ ಮ್ಯಾರಿಟೈಮ್ಸ್‌ ಮ್ಯೂಸಿಯಂ ಹ್ಯಾಂಬರ್ಗ್ ಪ್ರಾರಂಭವಾಯಿತು. ಹ್ಯಾಂಬರ್ಗ್‌‌ನಲ್ಲಿ ಮ್ಯೂಸಿಯಂ ಆಫ್‌ ಲೇಬರ್‌‌ (ಮ್ಯೂಸಿಯಂ ಡೆರ್‌ ಆರ್ಬೀಟ್‌ ) ರೀತಿಯ, ವಿಶೇಷ ಲಕ್ಷಣದ ಹಲವಾರು ವಸ್ತುಸಂಗ್ರಹಾಲಯಗಳಿವೆ ಮತ್ತು ಸ್ಥಳೀಯ ಇತಿಹಾಸದ ಕುರಿತು ಹೇಳುವ ಹಲವಾರು ವಸ್ತುಸಂಗ್ರಹಾಲಯಗಳಿವೆ; ಕೀಕ್‌ಬೆರ್ಗ್‌ ಓಪನ್‌ ಏರ್‌ ಮ್ಯೂಸಿಯಂ (ಫ್ರೀಲಿಕ್ಟ್‌ಮ್ಯೂಸಿಯಂ ಆಮ್‌ ಕೀಕ್‌ಬೆರ್ಗ್‌ ) ಇದಕ್ಕೊಂದು ಉದಾಹರಣೆಯಾಗಿದೆ. ಲ್ಯಾಂಡಂಗ್ಸ್‌ಬ್ರೂಕೆನ್‌‌ ಸಮೀಪವಿರುವ ಎರಡು ವಸ್ತುಸಂಗ್ರಹಾಲಯದ ಹಡಗುಗಳು , ಸರಕು ಸಾಗಣೆಯ ಹಡಗಿನ (ಕ್ಯಾಪ್‌ ಸ್ಯಾನ್‌ ಡಿಯೆಗೊ ) ಮತ್ತು ಸರಕಿನ ಸಮುದ್ರಯಾನದ ಹಡಗಿನ ಯುಗಕ್ಕೆ (ರಿಕ್ಮರ್‌ ರಿಕ್ಮರ್ಸ್‌‌ ) ಸಾಕ್ಷಿಯಾಗಿ ನಿಂತಿವೆ.[೩೧] ಪ್ರಪಂಚದ ಅತಿದೊಡ್ಡ ಮಾದರಿ ರೈಲುಹಾದಿ ವಸ್ತುಸಂಗ್ರಹಾಲಯವಾದ ಮಿನಿಯೇಟರ್‌ ವಂಡರ್‌ಲ್ಯಾಂಡ್‌, ಒಟ್ಟು 12 km (7.46 mi)ನಷ್ಟಿರುವ ರೈಲುಹಾದಿ ಉದ್ದವನ್ನು ಹೊಂದಿದ್ದು, ಇದೂ ಸಹ ಲ್ಯಾಂಡಂಗ್ಸ್‌ಬ್ರೂಕೆನ್‌‌ ಸಮೀಪದಲ್ಲಿ ಒಂದು ಹಿಂದಿನ ಉಗ್ರಾಣದಲ್ಲಿ ನೆಲೆಗೊಂಡಿದೆ.

1850 ಮತ್ತು 1939ರ ನಡುವೆ, ಯುರೋಪಿನ ಸಾಮೂಹಿಕ ವಸತಿ ಭವನಗಳಿಂದ ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳ ಕಡೆಗೆ ವಲಸೆಬಂದ ಲಕ್ಷಗಟ್ಟಲೆ ಯುರೋಪಿಯನ್ನರಿಗಾಗಿ ಬ್ಯಾಲಿನ್‌‌ಸ್ಟಾಟ್‌ ಎಮಿಗ್ರೇಷನ್‌ ಸಿಟಿ ಯನ್ನು ಸಮರ್ಪಿಸಲಾಗಿದೆ. ಆ ಸಾಗರೋತ್ತರ ವಲಸೆಗಾರರನ್ನು ಪೂರ್ವಜರನ್ನಾಗಿ ಹೊಂದಿರುವ ಸಂದರ್ಶಕರು, ತಮ್ಮ ಪೂರ್ವಜರಿಗಾಗಿ ಕಂಪ್ಯೂಟರ್‌‌ ತಾಣಗಳಲ್ಲಿ ಹುಡುಕಬೇಕಾಗಬಹುದು.

ಹ್ಯಾಂಬರ್ಗ್ ಸ್ಟೇಟ್‌ ಒಪೆರಾ ಎಂಬುದು ಒಂದು ಅಗ್ರಗಣ್ಯ ಗೀತನಾಟಕ ಕಂಪನಿಯಾಗಿದೆ. ಫಿಲ್‌ಹಾರ್ಮೋನಿಕೆರ್‌ ಹ್ಯಾಂಬರ್ಗ್ ಎಂಬುದು ಇದರ ವಾದ್ಯವೃಂದವಾಗಿದೆ. ನಾರ್ತ್‌ ಜರ್ಮನ್‌‌ ರೇಡಿಯೋ ಸಿಂಫನಿ ಆರ್ಕೇಸ್ಟ್ರಾ ಎಂಬುದು ನಗರದ ಮತ್ತೊಂದು ಸುಪರಿಚಿತ ವಾದ್ಯವೃಂದವಾಗಿದೆ. ಲೇಯ್ಸ್‌ಝಾಲ್ಲೆಯ ಮ್ಯೂಸಿಕ್‌ಹಾಲ್ಲೆ ಹ್ಯಾಂಬರ್ಗ್ ಎಂಬುದು ಸಂಗೀತ ಕಚೇರಿಯ ಮುಖ್ಯ ತಾಣವಾಗಿದ್ದು, ಇದು ಹೊಸ ಎಲ್ಬೆ ಫಿಲ್‌ಹಾರ್ಮಾನಿಕ್‌ ಹಾಲ್‌‌‌ನ ಬಾಕಿಯಿರುವ ಸಮಾಪನವಾಗಿದೆ. ಹ್ಯಾಂಬರ್ಗರ್‌ ಸಿಂಫನಿಕೆರ್‌ ಎಂಬ ಒಂದು ಮೂರನೇ ವಾದ್ಯವೃಂದಕ್ಕೂ ಲೇಯ್ಸ್‌ಝಾಲ್ಲೆ ನೆಲೆಯಾಗಿದೆ. ಹೋಕ್‌ಷುಲೆ ಫೂರ್‌ ಮ್ಯೂಸಿಕ್‌ ಅಂಡ್‌ ಥಿಯೇಟರ್‌ ಹ್ಯಾಂಬರ್ಗ್‌‌‌ನಲ್ಲಿ ಜ್ಯೋರ್ಜಿ ಲಿಗೆಟಿ ಮತ್ತು ಆಲ್‌ಫ್ರೆಡ್‌ ಸ್ಕ್ನಿಟ್ಕೆ ಬೋಧಿಸುತ್ತಿದ್ದರು.[೩೨][೩೩]

1985ರಲ್ಲಿ ಕ್ಯಾಟ್ಸ್‌‌‌ ನ ಪ್ರಥಮ ಜರ್ಮನ್‌‌ ಪ್ರದರ್ಶನವಾದಾಗಿನಿಂದ, ನಗರದಲ್ಲಿ ಸಂಗೀತಕಗಳು ಎಲ್ಲ ಸಮಯಗಳಲ್ಲೂ ಪ್ರದರ್ಶನವಾಗುತ್ತಲೇ ಬಂದಿದ್ದು, ಫ್ಯಾಂಟಮ್‌ ಆಫ್‌ ದಿ ಒಪೆರಾ , ದಿ ಲಯನ್‌ ಕಿಂಗ್‌ , ಡರ್ಟಿ ಡಾನ್ಸಿಂಗ್‌, ಮತ್ತು ಡಾನ್ಸ್‌ ಆಫ್‌ ದಿ ವ್ಯಾಂಪೈರ್ಸ್‌ ಮೊದಲಾದವು ಅವುಗಳಲ್ಲಿ ಸೇರಿವೆ. ಸ್ಟೇಜ್‌ ಎಂಟರ್‌ಟೇನ್‌ಮೆಂಟ್‌ ಎಂಬ ಪ್ರಮುಖ ಸಂಗೀತಕ ನಿರ್ಮಾಣ ಕಂಪನಿಯು ನಗರದಲ್ಲಿ ತನ್ನ ಮೂಲವನ್ನು ಹೊಂದಿರುವುದು, ಜರ್ಮನಿಯಲ್ಲೇ ಅತಿ ಹೆಚ್ಚಿನದಾಗಿರುವ ಈ ದಟ್ಟಣೆಗೆ ಭಾಗಶಃ ಕಾರಣವಾಗಿದೆಯೆನ್ನಬಹುದು.

ಹ್ಯಾಂಬರ್ಗ್ ನಗರವು ಜೋಹಾನ್ನೆಸ್‌ ಬ್ರಾಮ್ಸ್‌‌‌ನ ಜನ್ಮಸ್ಥಳವಾಗಿದ್ದು, ಈತ ತನ್ನ ರೂಪುಗೊಳ್ಳುವಿಕೆಯ ಆರಂಭಿಕ ವರ್ಷಗಳನ್ನು ಈ ನಗರದಲ್ಲಿ ಕಳೆದ.

ಹಲವಾರು ಪಾಪ್‌‌‌ ಸಂಗೀತಗಾರರನ್ನು ಹ್ಯಾಂಬರ್ಗ್ ರೂಪಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಟೋಕಿಯೋ ಹೊಟೇಲ್‌‌ ಎಂಬ ಹೆಸರಿನ ರಾಕ್‌ ವಾದ್ಯವೃಂದಕ್ಕೆ ಸೇರಿದ ಬಿಲ್‌ ಕೌಲಿಟ್ಜ್‌ ಮತ್ತು ಟಾಮ್‌‌ ಕೌಲಿಟ್ಜ್‌ ಎಂಬ ತದ್ರೂಪಿ ಅವಳಿ ಸೋದರರು ಇಂಥ ಪಾಪ್‌ ಸಂಗೀತಗಾರರ ಪೈಕಿ ಅತ್ಯಂತ ಪ್ರಸಿದ್ಧರಾಗಿದ್ದಾರೆ; ಟೋಕಿಯೋ ಹೊಟೇಲ್‌‌ನಲ್ಲಿಯೇ ಉಳಿದುಕೊಂಡು ತಮ್ಮ ಧ್ವನಿಮುದ್ರಣ ಸ್ಟುಡಿಯೋವನ್ನು ನಿರ್ವಹಿಸುತ್ತಿರುವ ಈ ಸೋದರರು, ಝಿಮ್ಮರ್‌‌ 483 ಮತ್ತು ಹ್ಯೂಮನಾಯ್ಡ್‌ ಎಂಬ ಹೆಸರಿನ ತಮ್ಮ ಎರಡನೇ ಮತ್ತು ಮೂರನೇ ಗೀತಸಂಪುಟಗಳನ್ನು ಅಲ್ಲಿಯೇ ಧ್ವನಿಮುದ್ರಿಸಿದರು. ನೆನಾ ಎಂಬ ಗಾಯಕಿಯೂ ಸಹ ಹ್ಯಾಂಬರ್ಗ್‌‌ನಲ್ಲಿ ವಾಸಿಸುತ್ತಾಳೆ. ಫೂಂಫ್‌ ಸ್ಟೆರ್ನೆ ಡಿಲಕ್ಸ್‌, ಸ್ಯಾಮಿ ಡಿಲಕ್ಸ್‌, ಬಿಗಿನರ್‌ ಮತ್ತು ಫೆಟ್ಟೆಸ್‌ ಬ್ರಾಟ್‌ ಇವೇ ಮೊದಲಾದ ಜರ್ಮನ್‌‌ ಹಿಪ್‌ ಹಾಪ್‌ ಪ್ರದರ್ಶನಗಳೂ ಸಹ ಇಲ್ಲಿ ಲಭ್ಯವಿವೆ. ಒಂದು ಮಹತ್ವದ ಪರ್ಯಾಯ ಮತ್ತು ಪಂಕ್‌‌ ರಂಗಸ್ಥಲವು ಇಲ್ಲಿ ಲಭ್ಯವಿದ್ದು, ರೋಟೆ ಫ್ಲೋರಾದ ಸುತ್ತಲೂ ಅದು ಜಮಾವಣೆಗೊಂಡಿದೆ; ರೋಟೆ ಫ್ಲೋರಾ ಎಂಬುದು ಒಂದು ಆಕ್ರಮಿಸಿಕೊಂಡಿರುವ ಹಿಂದಿನ ರಂಗಮಂದಿರವಾಗಿದ್ದು, ಸ್ಟೆರ್ನ್‌ಸ್ಕಾಂಜೆಯಲ್ಲಿ ಅದು ನೆಲೆಗೊಂಡಿದೆ. ಹ್ಯಾಂಬರ್ಗರ್‌ ಸ್ಕುಲೆ ("ಹ್ಯಾಂಬರ್ಗ್ ಸ್ಕೂಲ್‌") ಎಂದು ಕರೆಯಲ್ಪಡುವ ಒಂದು ಮೂಲ ಬಗೆಯ ಜರ್ಮನ್‌‌ ಪರ್ಯಾಯ ಸಂಗೀತಕ್ಕೆ ಸಂಬಂಧಿಸಿದಂತೆ ಹ್ಯಾಂಬರ್ಗ್ ಪ್ರಸಿದ್ಧವಾಗಿದೆ; ಹ್ಯಾಂಬರ್ಗರ್‌ ಸ್ಕುಲೆ ಎಂಬ ಶಬ್ದವನ್ನು ಟಾಕೋಟ್ರೋನಿಕ್‌, ಬ್ಲುಮ್‌ಫೆಲ್ಡ್‌, ಮತ್ತು ಟಾಮ್ಟೆಯಂಥ ವಾದ್ಯವೃಂದಗಳಿಗಾಗಿ ಬಳಸಲಾಗುತ್ತದೆ.

 
ಹ್ಯಾಂಬರ್ಗ್‌‌ನ ಬಂದರಿನಲ್ಲಿರುವ ದಿ ಲಯನ್‌ ಕಿಂಗ್‌ ರಂಗಮಂದಿರ.

1980ರ ದಶಕದಲ್ಲಿ, ಬಲವಾದ ತಾಳದ ಧ್ವನಿವರ್ಧಿತ ಸಂಗೀತಕ್ಕೆ (ಹೆವಿ ಮೆಟಲ್‌ ಮ್ಯೂಸಿಕ್‌) ಸಂಬಂಧಿಸಿದಂತೆ ನಗರವು ಒಂದು ಪ್ರಮುಖ ಕೇಂದ್ರವಾಗಿತ್ತು. ಹೆಲೋವೀನ್, ರನ್ನಿಂಗ್‌ ವೈಲ್ಡ್‌‌ ಮತ್ತು ಗ್ರೇವ್‌ ಡಿಗ್ಗರ್‌‌ ಮೊದಲಾದವು ಹ್ಯಾಂಬರ್ಗ್‌‌ನಲ್ಲಿ ಪ್ರಾರಂಭವಾದವು.[೩೪] ವಿದ್ಯುಚ್ಚಾಲಿತ ಧ್ವನಿವರ್ಧಿತ ಸಂಗೀತವೆಂಬ ಉಪಪ್ರಕಾರವನ್ನು ಸ್ಥಾಪಿಸುವಲ್ಲಿ, ಇವು ಮತ್ತು ಈ ಪ್ರದೇಶಕ್ಕೆ ಸೇರಿದ ಇತರ ವಾದ್ಯವೃಂದಗಳ ಪ್ರಭಾವಗಳು ನೆರವಾದವು.

ಸ್ಪಿರಿಟ್‌ ಝೋನ್‌‌‌‌ನಂಥ[೩೫] ಧ್ವನಿಮುದ್ರಣ ಕಂಪನಿಗಳು ಹಾಗೂ ಮಶ್ರೂಮ್‌ ಮ್ಯಾಗಜೀನ್‌‌ ಎಂಬ ಒಂದು ಸುದೀರ್ಘ-ಓಟದ ಸೈ-ಟ್ರಾನ್ಸ್‌‌ ನಿಯತಕಾಲಿಕದಂಥ ಪ್ರಕಾಶನಗಳ ದೆಸೆಯಿಂದಾಗಿ, ಹ್ಯಾಂಬರ್ಗ್ ನಗರವಿ ಒಂದು ಮೈನವಿರೇಳಿಸುವ ಭ್ರಾಂತಿಜನಕ ಟ್ರಾನ್ಸ್‌‌ ಸಮುದಾಯಕ್ಕೆ ನೆಲೆಯಾದಂತಾಗಿದೆ.

ಉದ್ಯಾನವನಗಳು ಮತ್ತು ತೋಟಗಳು

ಬದಲಾಯಿಸಿ

ಆಲ್ಟರ್‌ ಬಟಾನಿಸ್ಕೆರ್‌ ಗಾರ್ಟೆನ್‌‌ ಹ್ಯಾಂಬರ್ಗ್ ಎಂಬುದು ಒಂದು ಐತಿಹಾಸಿಕ ಸಸ್ಯವಿಜ್ಞಾನದ ತೋಟವಾಗಿದ್ದು, ಈಗ ಪ್ರಧಾನವಾಗಿ ಹಸಿರುಮನೆಗಳನ್ನು ಒಳಗೊಂಡಿರುವ ಪ್ಲಾಂಟೆನ್‌ ಉನ್‌ ಬ್ಲೋಮೆನ್‌ ಉದ್ಯಾನವನದಲ್ಲಿ ಅದು ನೆಲೆಗೊಂಡಿದೆ. ಬಟಾನಿಸ್ಕೆರ್‌‌ ಗಾರ್ಟೆನ್‌ ಹ್ಯಾಂಬರ್ಗ್ ಎಂಬುದೊಂದು ಆಧುನಿಕ ಸಸ್ಯವಿಜ್ಞಾನದ ತೋಟವಾಗಿದ್ದು, ಹ್ಯಾಂಬರ್ಗ್ ವಿಶ್ವವಿದ್ಯಾಲಯದಿಂದ ಅದು ನಿರ್ವಹಿಸಲ್ಪಡುತ್ತಿದೆ.

ಪ್ರವಾಸೋದ್ಯಮ

ಬದಲಾಯಿಸಿ
 
1873ರಲ್ಲಿದ್ದಂತೆ ಉಗ್ರಾಣ ಜಿಲ್ಲೆ
 
ಉಗ್ರಾಣ ಜಿಲ್ಲೆ
 
ಲ್ಯಾಂಡಂಗ್ಸ್‌ಬ್ರೂಕೆನ್‌‌ ಹಿಂಭಾಗದಲ್ಲಿರುವ ಫ್ರೀಡಮ್‌ ಆಫ್‌ ದಿ ಸೀಸ್‌

ನಗರದ ಆರ್ಥಿಕತೆಯಲ್ಲಿ ಪ್ರವಾಸಿಗರು ಒಂದು ಗಮನಾರ್ಹ ಪಾತ್ರವಹಿಸುತ್ತಾರೆ. 2007ರಲ್ಲಿ, 3,985,105ಕ್ಕೂ ಹೆಚ್ಚಿನ ಸಂದರ್ಶಕರನ್ನು ಹ್ಯಾಂಬರ್ಗ್ ಆಕರ್ಷಿಸಿತು ಮತ್ತು 7,402,423ರಷ್ಟು ಸಂಖ್ಯೆಯ ಒಂದು ರಾತ್ರಿಯ ತಂಗುವಿಕೆಗಳು ಈ ಅವಧಿಯಲ್ಲಿ ದಾಖಲಾದವು.[೩೬] ಪ್ರವಾಸೋದ್ಯಮ ವಿಭಾಗವು 175,000ಕ್ಕೂ ಹೆಚ್ಚಿನ ಜನರನ್ನು ಪೂರ್ಣಾವಧಿಯ ಉದ್ಯೋಗಿಗಳನ್ನಾಗಿ ನೇಮಿಸಿಕೊಂಡಿದೆ ಮತ್ತು 9.3 ಶತಕೋಟಿ €ನಷ್ಟು ಆದಾಯವನ್ನು ಅದು ತರುತ್ತಿದೆ. ಇದರಿಂದಾಗಿ ಹ್ಯಾಂಬರ್ಗ್ ಮಹಾನಗರದ ಪ್ರದೇಶದಲ್ಲಿ ಪ್ರವಾಸೋದ್ಯಮವು ಒಂದು ಪ್ರಮುಖ ಆರ್ಥಿಕ ಬಲವೆನಿಸಿಕೊಂಡಿದೆ. ಜರ್ಮನಿಯಲ್ಲಿನ ಅತಿವೇಗವಾಗಿ-ಬೆಳೆಯುತ್ತಿರುವ ಪ್ರವಾಸೋದ್ಯಮ ಕೈಗಾರಿಕೆಗಳ ಪೈಕಿ ಒಂದನ್ನು ಹ್ಯಾಂಬರ್ಗ್ ಹೊಂದಿದೆ. 2001ರಿಂದ 2007ರವರೆಗೆ, ನಗರದಲ್ಲಿನ ಒಂದು ರಾತ್ರಿಯ ತಂಗುವಿಕೆಗಳು 55.2%ನಷ್ಟು ಹೆಚ್ಚಳವನ್ನು ಕಂಡವು (ಬರ್ಲಿನ್‌‌ +52.7%, ಮೆಕ್ಲೆನ್‌‌‌ಬರ್ಗ್‌-ಪಶ್ಚಿಮ ಪೊಮೆರಾನಿಯಾ +33%).[೩೭]

ಹ್ಯಾಂಬರ್ಗ್‌‌ಗೆ ನೀಡುವ ಒಂದು ವಿಶಿಷ್ಟ ಭೇಟಿಯಲ್ಲಿ ಪುರಭವನ ಮತ್ತು ಸೇಂಟ್‌ ಮೈಕೇಲಿಸ್‌ (ಇದನ್ನು ಮೈಕೇಲ್‌ ಎಂದು ಕರೆಯಲಾಗುತ್ತದೆ) ಎಂಬ ಭವ್ಯ ಚರ್ಚಿನ ಒಂದು ಪ್ರವಾಸ ಮತ್ತು ಹಳೆಯ ಉಗ್ರಾಣ ಪ್ರದೇಶ (ಸ್ಪೀಚೆರ್‌‌‌ಸ್ಟಾಟ್‌ ) ಹಾಗೂ ಬಂದರು ಪಾದಚಾರಿ-ಪಥ (ಲ್ಯಾಂಡಂಗ್ಸ್‌ಬ್ರೂಕೆನ್‌‌ ) ಇವುಗಳನ್ನು ಸಂದರ್ಶಿಸುವುದು ಸೇರಿರುತ್ತದೆ. ಈ ಆಸಕ್ತಿಯ ತಾಣಗಳನ್ನು ದೃಶ್ಯವೀಕ್ಷಣೆಯ ಬಸ್ಸುಗಳು ಸಂಪರ್ಕಿಸುತ್ತವೆ. ಹ್ಯಾಂಬರ್ಗ್ ನಗರವು ಪ್ರಪಂಚದ ಅತಿದೊಡ್ಡ ಬಂದರುಗಳಲ್ಲಿ ಒಂದಾಗಿರುವುದರಿಂದ, ಲ್ಯಾಂಡಂಗ್ಸ್‌ಬ್ರೂಕೆನ್‌‌‌ ನಿಂದ ಆರಂಭವಾಗುವ ಬಂದರು ಮತ್ತು/ಅಥವಾ ಕಾಲುವೆ ದೋಣಿ ಪ್ರವಾಸಗಳ (ಗ್ರೊಬ್‌‌ ಹ್ಯಾಫೆನ್‌‌ರಂಡ್‌ಫಾರ್ಟ್‌ , ಫ್ಲೀಟ್‌‌ಫಾರ್ಟ್‌ ) ಪೈಕಿ ಒಂದನ್ನು ಅನೇಕ ಸಂದರ್ಶಕರು ಕೈಗೊಳ್ಳುತ್ತಾರೆ. ಪ್ರವಾಸದ ಪ್ರಮುಖ ಗಮ್ಯಸ್ಥಾನಗಳಲ್ಲಿ ವಸ್ತುಸಂಗ್ರಹಾಲಯಗಳು ಕೂಡಾ ಸೇರಿರುತ್ತವೆ.

ಸೇಂಟ್‌ ಪಾಲಿ ಎಂಬ ಕೇರಿಯಲ್ಲಿರುವ ರೀಪೆರ್‌ಬಾಹ್ನ್‌‌ ಪ್ರದೇಶದ ಸುತ್ತಮುತ್ತ ಸಾಯಂಕಾಲದ ವೇಳೆಯಲ್ಲಿ ಅನೇಕ ಸಂದರ್ಶಕರು ಒಂದು ನಡಿಗೆಯನ್ನು ಕೈಗೊಳ್ಳುವುದು ವಾಡಿಕೆಯಾಗಿದೆ; ಸೇಂಟ್‌ ಪಾಲಿ ಕೇರಿಯು ಯುರೋಪ್‌ನ ಅತಿದೊಡ್ಡ ವೇಶ್ಯಾವಾಟಿಕಾ ಕ್ಷೇತ್ರವಾಗಿರುವುದೇ[ಸೂಕ್ತ ಉಲ್ಲೇಖನ ಬೇಕು] ಅಲ್ಲದೇ, ಬತ್ತಲೆ ಕ್ಲಬ್ಬುಗಳು, ವೇಶ್ಯಾಗೃಹಗಳು, ಪಾನಗೃಹಗಳು ಮತ್ತು ರಾತ್ರಿಕ್ಲಬ್ಬುಗಳಿಗೆ ನೆಲೆಯಾಗಿದೆ. ಹಾನ್ಸ್‌‌‌ ಆಲ್ಬರ್ಸ್‌‌ ಎಂಬ ಗಾಯಕ ಮತ್ತು ನಟ ಸೇಂಟ್‌ ಪಾಲಿಯೊಂದಿಗೆ ಗಾಢವಾದ ಸಂಬಂಧಹೊಂದಿದ್ದಾನೆ. "ಔಫ್‌ ಡೆರ್‌ ರೀಪೆರ್‌ಬಾಹ್ನ್‌ ನ್ಯಾಕ್ಟ್ಸ್‌ ಅಮ್‌ ಹಾಲ್ಬ್‌ ಐನ್ಸ್‌‌" ಎಂಬ ಈ ನೆರೆಹೊರೆಯ ಅನಧಿಕೃತ ಸಂವಾದಗೀತೆಯನ್ನು 1940ರ ದಶಕದಲ್ಲಿ ಆತ ಬರೆದ. ಓರ್ವ ನಾವಿಕನು ಹೊರದೇಶಕ್ಕೆ ಹಿಂದಿರುಗುವುದಕ್ಕೆ ಮುಂಚಿತವಾಗಿ ಓರ್ವ ವೇಶ್ಯೆಯೊಂದಿಗೆ ತನ್ನ ಕೊನೆಯ ದಿನವನ್ನು ಹೇಗೆ ಸಂತೋಷವಾಗಿ ಕಳೆಯುತ್ತಾನೆ ಎಂಬುದನ್ನು ಈ ಹಾಡು ವಿನೀತವಾಗಿ ವಿವರಿಸುತ್ತದೆ. ದಿ ಬೀಟಲ್ಸ್‌‌ ತಂಡದ ಸದಸ್ಯರು ತಮ್ಮ ವೃತ್ತಿಜೀವನಗಳ ಆರಂಭದಲ್ಲಿ ರೀಪೆರ್‌ಬಾಹ್ನ್‌‌ನಲ್ಲಿ ನಿಗದಿತ ಕೆಲಸಗಳನ್ನು ಹೊಂದಿದ್ದರು; ಇಂದ್ರ ಕ್ಲಬ್‌‌ನಲ್ಲಿ 48-ರಾತ್ರಿಯ ಅವಧಿಯ ಒಂದು ವಾಸ, ಅದಾದ ನಂತರ 1960ರಲ್ಲಿ ಕೈಸೆರ್‌‌ಕೆಲ್ಲರ್‌‌‌ನಲ್ಲಿ ಮತ್ತೊಂದು 58 ರಾತ್ರಿಗಳವರೆಗೆ ತಂಗಿದ್ದು, ಟಾಪ್‌ ಟೆನ್‌ ಕ್ಲಬ್‌‌ (1961) ಮತ್ತು ಸ್ಟಾರ್‌-ಕ್ಲಬ್‌‌ (1962) ಮೊದಲಾದವುಗಳಲ್ಲಿ ತಂಗಿದ್ದು ಅವರ ಕಾರ್ಯಸೂಚಿಯಲ್ಲಿ ಸೇರಿತ್ತು. ಆರಾಮವಾಗಿ ಒರಗಿಕೊಂಡಂತಿರುವ ಸ್ಕ್ಯಾಂಜೆ ಎಂಬ ನೆರೆಹೊರೆಗೆ ಇತರರು ಆದ್ಯತೆ ನೀಡುತ್ತಾರೆ; ಇದು ಹೊಂದಿರುವ ಬೀದಿಬದಿಯ ಲಘು ಉಪಾಹಾರಗೃಹಗಳು, ಅಥವಾ ಎಲ್ಬೆ ನದಿಯ ಉದ್ದಕ್ಕೂ ಇರುವ ತೀರಗಳ ಪೈಕಿ ಒಂದರ ಮೇಲಿರುವ ಒಂದು ವನಭೋಜನದ ವ್ಯವಸ್ಥೆಯು ಗಮನಾರ್ಹ ಸಂಗತಿಯಾಗಿದೆ. ಹ್ಯಾಂಬರ್ಗ್‌‌ನ ಟಯರ್‌ಪಾರ್ಕ್‌ ಹೇಗನ್‌ಬೆಕ್‌‌ ಎಂಬ ಪ್ರಸಿದ್ಧ ಮೃಗಾಲಯವು 1907ರಲ್ಲಿ ಕಾರ್ಲ್‌ ಹೇಗನ್‌ಬೆಕ್‌‌‌ನಿಂದ ಸಂಸ್ಥಾಪಿಸಲ್ಪಟ್ಟಿತು. ಇದು ಕಂದಕದಿಂದ ಸುತ್ತುವರಿಯಲ್ಪಟ್ಟ, ಕಂಬಿಗಳಿಲ್ಲದ ಆವರಣಗಳ ಮೊದಲ ಮೃಗಾಲಯವೆನಿಸಿಕೊಂಡಿದೆ.[೩೮]

ಕೆಲವೊಬ್ಬರು ಒಂದು ನಿರ್ದಿಷ್ಟ ಆಸಕ್ತಿಯನ್ನಿಟ್ಟುಕೊಂಡೇ ಹ್ಯಾಂಬರ್ಗ್‌ಗೆ ಭೇಟಿನೀಡುತ್ತಾರೆ; ಸಂಗೀತಕಗಳ ಪೈಕಿ ಒಂದಕ್ಕೆ ಹಾಜರಿ ಹಾಕುವುದು, ಒಂದು ಕ್ರೀಡಾ ಸ್ಪರ್ಧೆ, ಒಂದು ವ್ಯಾಪಾರ ಪ್ರದರ್ಶನ ಅಥವಾ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಅವುಗಳಲ್ಲಿ ಗಮನಾರ್ಹವೆನಿಸಿವೆ. 2005ರಲ್ಲಿ, ಸಾಧಾರಣ ಸಂದರ್ಶಕನು ಹ್ಯಾಂಬರ್ಗ್‌‌ನಲ್ಲಿ ಎರಡು ರಾತ್ರಿಗಳನ್ನು ಕಳೆದ.[ಸೂಕ್ತ ಉಲ್ಲೇಖನ ಬೇಕು]

ಬಹುಪಾಲು ಸಂದರ್ಶಕರು ಜರ್ಮನಿಯಿಂದ ಬರುತ್ತಾರೆ. ಬಹುತೇಕ ವಿದೇಶಿಯರು ಯುರೋಪಿಯನ್ನರಾಗಿದ್ದಾರೆ; ಅದರಲ್ಲೂ ವಿಶೇಷವಾಗಿ ಇವರು, ಯುನೈಟೆಡ್‌ ಕಿಂಗ್‌ಡಂ (171,000ನಷ್ಟಿರುವ ಒಂದು ರಾತ್ರಿಯ ತಂಗುವಿಕೆಗಳು), ಸ್ವಿಜರ್‌ಲೆಂಡ್‌ (ಸುಮಾರು 143,000ನಷ್ಟಿರುವ ಒಂದು ರಾತ್ರಿಯ ತಂಗುವಿಕೆಗಳು) ಮತ್ತು ಆಸ್ಟ್ರಿಯಾ (ಸುಮಾರು 137,000ನಷ್ಟಿರುವ ಒಂದು ರಾತ್ರಿಯ ತಂಗುವಿಕೆಗಳು) ದೇಶಗಳಿಗೆ ಸೇರಿದವರಾಗಿರುತ್ತಾರೆ. ಯುರೋಪ್‌ನ ಹೊರಗಿನ ವಲಯಕ್ಕೆ ಸೇರಿದ ಅತಿದೊಡ್ಡ ಗುಂಪು ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ (129,000ನಷ್ಟಿರುವ ಒಂದು ರಾತ್ರಿಯ ತಂಗುವಿಕೆಗಳು) ಬರುತ್ತದೆ.[೩೯][೪೦]

ವಿಹಾರ ನೌಕಾಯಾನದ ನಿಲ್ದಾಣವೂ ಸಹ ಒಂದು ಆಕರ್ಷಣೆಯ ತಾಣವಾಗಿದೆ. ಕ್ವೀನ್‌ ಮೇರಿ 2 ಎಂಬ ನೌಕೆಯು 2004ರಿಂದಲೂ ನಿಯತವಾಗಿ ಹ್ಯಾಂಬರ್ಗ್‌‌ನಲ್ಲಿನ ಹಡಗುಕಟ್ಟೆಗೆ ಬರುತ್ತಿದೆ, ಮತ್ತು 2010ರ ನಂತರದಲ್ಲಿ ಅಲ್ಲಿಂದ ಆರು ನಿರ್ಗಮನಗಳು ಯೋಜಿಸಲ್ಪಟ್ಟಿವೆ.[೪೧]

ಉತ್ಸವಗಳು ಮತ್ತು ನಿಯತವಾದ ಕಾರ್ಯಕ್ರಮಗಳು

ಬದಲಾಯಿಸಿ

ಹಲವಾರು ಉತ್ಸವಗಳು ಮತ್ತು ನಿಯತವಾದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹ್ಯಾಂಬರ್ಗ್ ಹೆಸರು ಪಡೆದಿದೆ. ಅವುಗಳಲ್ಲಿ ಕೆಲವು ಸಲಿಂಗಕಾಮಿಗಳ ಹೆಮ್ಮೆಯ ಕ್ರಿಸ್ಟೋಫರ್‌ ಸ್ಟ್ರೀಟ್‌ ಡೇ ಉತ್ಸವ[೪೨] ಅಥವಾ ಆಲ್‌‌ಸ್ಟರ್‌‌ ಮೇಳದಂಥ[೪೩] ಬೀದಿ ಉತ್ಸವಗಳಾಗಿದ್ದು, ಬಿನ್ನೆನ್‌‌ಆಲ್‌‌ಸ್ಟರ್‌‌ ಎಂಬಲ್ಲಿ ಅವು ಆಯೋಜಿಸಲ್ಪಡುತ್ತವೆ. ಹ್ಯಾಂಬರ್ಗರ್‌‌ DOM ಎಂಬುದು ಉತ್ತರದ ಜರ್ಮನಿಯ ಒಂದು ಅತಿದೊಡ್ಡ ಮೋಜಿನ ಮೇಳವಾಗಿದ್ದು, ವರ್ಷವೊಂದರಲ್ಲಿ ಮೂರು ಬಾರಿ ಆಯೋಜಿಸಲ್ಪಡುತ್ತದೆ.[೪೪]ಹ್ಯಾಫೆನ್‌‌ಗೆಬರ್‌ಸ್ಟಾಗ್ ಎಂಬುದು ಹ್ಯಾಂಬರ್ಗ್‌ನ ಬಂದರಿನ ಪ್ರಾರಂಭಗೊಂಡ ದಿನವನ್ನು ಗೌರವಿಸಲೆಂದು ಆಚರಿಸಲ್ಪಡುವ ಒಂದು ಮೋಜಿನ ಮೇಳವಾಗಿದ್ದು, ಒಂದು ಸಂತೋಷಕೂಟ ಮತ್ತು ಹಡಗು ಪ್ರದರ್ಶನವೊಂದನ್ನು ಅದು ಒಳಗೊಂಡಿರುತ್ತದೆ.[೪೫] ಸೇಂಟ್‌ ಮೈಕೇಲ್‌‌ನ ಚರ್ಚಿನಲ್ಲಿನ ಬೈಕ್‌ ಸವಾರರ ಸೇವೆಯು ಸಾವಿರಾರು ಬೈಕ್‌ ಸವಾರರನ್ನು ಆಕರ್ಷಿಸುತ್ತದೆ.[೪೬] ಇತರ ಸ್ಥಳಗಳ ಪೈಕಿ, ಡಿಸೆಂಬರ್‌‌ನಲ್ಲಿ ಜಮಾವಣೆಗೊಳ್ಳುವ ಕ್ರಿಸ್‌ಮಸ್‌ ಮಾರುಕಟ್ಟೆಗಳನ್ನು ಹ್ಯಾಂಬರ್ಗ್ ರಾಥೌಸ್‌ ಚೌಕದಲ್ಲಿ ಆಯೋಜಿಸಲಾಗುತ್ತದೆ.[೪೭] ಮಧ್ಯರಾತ್ರಿಯವರೆಗೆ ನೋಡಬಹುದಾದ ಸುಮಾರು 40 ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದಂತೆ ಲಾಂಗ್‌ ನೈಟ್ಸ್‌ ಆಫ್‌ ಮ್ಯೂಸಿಯಮ್ಸ್‌ ಒಂದೇ ಪ್ರವೇಶ ಶುಲ್ಕವನ್ನು ವಿಧಿಸುತ್ತದೆ.[೪೮] ಬಹು-ಸಾಂಸ್ಕೃತಿಕ ಜೀವನವನ್ನು ಆಚರಿಸುವ ಆರನೇ ಫೆಸ್ಟಿವಲ್‌ ಆಫ್‌ ಕಲ್ಚರ್ಸ್‌ 2008ರ ಸೆಪ್ಟೆಂಬರ್‌ನಲ್ಲಿ ಆಯೋಜಿಸಲ್ಪಟ್ಟಿತು.[೪೯] ಫಿಲ್ಮ್‌ಫೆಸ್ಟ್‌‌ ಹ್ಯಾಂಬರ್ಗ್ ಚಿತ್ರೋತ್ಸವವು ಒಂದು ವ್ಯಾಪಕ ಶ್ರೇಣಿಯ ಚಲನಚಿತ್ರಗಳನ್ನು ಸಾದರಪಡಿಸುತ್ತದೆ; ಇದು 1950ರ ದಶಕದ ಫಿಲ್ಮ್‌ ಡೇಸ್‌‌‌ ನಿಂದ (ಜರ್ಮನ್‌‌: ಫಿಲ್ಮ್‌ ಟೇಜ್‌ ) ಹುಟ್ಟಿಕೊಂಡಿರುವ ಒಂದು ಚಲನಚಿತ್ರೋತ್ಸವವಾಗಿದೆ.[೫೦] ಹ್ಯಾಂಬರ್ಗ್ ಮೆಸ್ಸೆ ಅಂಡ್‌ ಕಾಂಗ್ರೆಸ್‌‌ ಎಂಬ ತಾಣವು ವ್ಯಾಪಾರ ಪ್ರದರ್ಶನಗಳಿಗೆ ಮೀಸಲಾಗಿರುವ ಒಂದು ಪ್ರದರ್ಶನ ವೇದಿಕೆಯಾಗಿದ್ದು, ಹ್ಯಾನ್ಸ್‌ಬೂಟ್‌‌ ನಂಥ ಒಂದು ಅಂತರರಾಷ್ಟ್ರೀಯ ದೋಣಿ ಪ್ರದರ್ಶನ, ಅಥವಾ ಡ್ಯು ಅಂಡ್‌ ಡೆಯ್ನ್‌ ವೆಲ್ಟ್‌‌‌ ನಂಥ ಬಳಕೆದಾರರ ಉತ್ಪನ್ನಗಳ ಒಂದು ದೊಡ್ಡ ಪ್ರದರ್ಶನಗಳು ಅಲ್ಲಿ ನಡೆಯುತ್ತವೆ.[೫೧] ಇಲ್ಲಿ ಆಯೋಜಿಸಲ್ಪಡುವ ನಿಯತವಾದ ಕ್ರೀಡಾ ಕಾರ್ಯಕ್ರಮಗಳಲ್ಲಿ ಕೆಲವು ವೃತ್ತಿಪರ ಮತ್ತು ಹವ್ಯಾಸಿ ಸಹಭಾಗಿಗಳಿಗೆ ಮುಕ್ತವಾಗಿವೆ. ವಾಟೆನ್‌ಫಾಲ್‌ ಸೈಕ್ಲಾಸಿಕ್ಸ್‌ ಎಂಬ ಸೈಕಲ್‌ ಸವಾರಿಯ ಸ್ಪರ್ಧೆ, ಬರ್ಲಿನ್‌‌ನ್ನು[೫೨] ಬಿಟ್ಟರೆ ಜರ್ಮನಿಯಲ್ಲಿ ಹಮ್ಮಿಕೊಳ್ಳಲಾಗುವ ಹ್ಯಾಂಬರ್ಗ್ ಮ್ಯಾರತನ್‌‌ ಎಂದು ಕರೆಯಲ್ಪಡುವ ಅತಿದೊಡ್ಡ ಸುದೀರ್ಘ ಓಟ, ಹ್ಯಾಂಬರ್ಗ್ ಮಾಸ್ಟರ್ಸ್‌ ಎಂಬ ಟೆನಿಸ್‌ ಪಂದ್ಯಾವಳಿ ಹಾಗೂ ಡ್ಯೂಷೆಸ್‌ ಡರ್ಬಿಯಂಥ ಅಶ್ವಾರೋಹಣದ ಕಾರ್ಯಕ್ರಮಗಳು ಸದರಿ ಕ್ರೀಡಾ ಕಾರ್ಯಕ್ರಮಗಳಲ್ಲಿ ಸೇರಿವೆ. 2007ರಿಂದಲೂ, ಡಾಕ್‌ವಿಲ್ಲೆ ಸಂಗೀತ ಮತ್ತು ಕಲಾ ಉತ್ಸವವು ಹ್ಯಾಂಬರ್ಗ್‌ನಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಇದು ವಿಲ್‌ಹೆಲ್ಮ್ಸ್‌‌ಬರ್ಗ್‌ ಎಂಬಲ್ಲಿ ನಡೆಯುತ್ತದೆ.[೫೩]

ಪಾಕಪದ್ಧತಿ

ಬದಲಾಯಿಸಿ
 
ಜರ್ಮನ್‌‌ ಲ್ಯಾಬಸ್ಕೌಸ್‌

ಮೂಲ ಹ್ಯಾಂಬರ್ಗ್ ಭಕ್ಷ್ಯಗಳಲ್ಲಿ ಇವು ಸೇರಿವೆ: ಬಿರ್ನೆನ್‌‌, ಬೊಹ್ನೆನ್‌‌ ಅಂಡ್‌ ಸ್ಪೆಕ್‌‌ (ಲೋ ಸ್ಯಾಕ್ಸನ್‌‌ ಬಿರ್ನ್‌, ಬೊಹ್ನ್‌ ಅನ್‌ ಸ್ಪೆಕ್‌‌ , ಪೇರುಹಣ್ಣುಗಳು ಮತ್ತು ಹಂದಿಮಾಂಸದೊಂದಿಗೆ ಬೇಯಿಸಲಾದ ಹಸಿರು ಬಳ್ಳಿಯ ಅವರೆ),[೫೪] ಆಲ್‌ಸುಪ್ಪೆ (ಲೋ ಸ್ಯಾಕ್ಸನ್‌‌ ಊಲ್‌ಸುಪ್‌‌ ) ಎಂಬುದು “ಈಲ್‌ ಸೂಪ್‌‌“ (ಆಲ್‌ /ಊಲ್‌ ಎಂಬುದು 'ಈಲ್‌' ಎಂದು ಅನುವಾದಿಸಲ್ಪಟ್ಟಿದೆ) ಎಂಬುದಕ್ಕಿರುವ ಜರ್ಮನ್‌ ಹೆಸರು ಎಂಬುದಾಗಿ ಅನೇಕವೇಳೆ ತಪ್ಪಾಗಿ ಗ್ರಹಿಸಲ್ಪಡುತ್ತದೆ; ಆದರೆ, ಸದರಿ ಹೆಸರು "ಆಲ್" (ಎಲ್ಲಾ‌) ಎಂಬ ಅರ್ಥವನ್ನು ಕೊಡುವ ಲೋ ಸ್ಯಾಕ್ಸನ್‌‌ ಭಾಷೆಯ ಆಲ್ನ್ಸ್‌ [aˑlns] ಎಂಬುದರಿಂದ ಪ್ರಾಯಶಃ ಬಂದಿದ್ದು, ಇದು “ಪ್ರತಿಯೊಂದು ಮತ್ತು ಅಡುಗೆಮನೆ ತೊಟ್ಟಿ” ಎಂಬುದನ್ನು ಧ್ವನಿಸುತ್ತದೆಯೇ ವಿನಃ ಅವಶ್ಯವಾಗಿ ಈಲ್ ಎಂಬುದನ್ನಲ್ಲ. ಸಂದೇಹಪಡದ ಭೋಜಕರ ನಿರೀಕ್ಷೆಗಳನ್ನು ಈಡೇರಿಸಲೆಂದು ಈಲ್‌ನ್ನು ಇಂದು ಅನೇಕವೇಳೆ ಸೇರಿಸಲಾಗುತ್ತದೆ.[೫೫] ಭಕ್ಷ್ಯಗಳ ಪಟ್ಟಿಯು ಹೀಗೆಯೇ ಮುಂದುವರಿಯುತ್ತದೆ: ಬ್ರಾಟ್‌ಕಾರ್ಟೊಫೆಲ್ನ್‌‌ (ಲೋ ಸ್ಯಾಕ್ಸನ್‌‌ ಬ್ರೂಟ್‌ಕಾರ್ಟೂಫೆಲ್ನ್‌‌ , ಕಾವಲಿಯಲ್ಲಿ-ಹುರಿದ ಆಲೂಗಡ್ಡೆ ತುಣುಕುಗಳು), ಫಿಂಕೆನ್‌ವೆರ್ಡರ್‌‌ ಸ್ಕೊಲ್ಲೆ (ಲೋ ಸ್ಯಾಕ್ಸನ್‌‌ ಫಿಂಕ್‌ವಾರ್ಡರ್‌‌ ಸ್ಕೊಲ್‌‌ , ಕಾವಲಿಯಲ್ಲಿ-ಹುರಿದ ಪ್ಲೇಸ್‌ ಚಪ್ಪಟೆಮೀನು), ಪ್ಯಾನ್‌ಫಿಶ್‌‌‌ (ಕಾವಲಿಯಲ್ಲಿ-ಹುರಿದ ಮೀನು),[೫೬] ರೋಟೆ ಗ್ರೂಟ್ಜ್‌ (ಲೋ ಸ್ಯಾಕ್ಸನ್‌‌ ರೋಡೆ ಗ್ರೂಟ್‌‌ , ಇದು ಡ್ಯಾನಿಷ್‌ ಜನರ ರೋಡ್‌ಗ್ರೋಡ್‌ ಎಂಬುದಕ್ಕೆ ಸಂಬಂಧಿಸಿದೆ ಹಾಗೂ ಇದು ಬೇಸಿಗೆಯ ಕಡುಬಿನ ಒಂದು ಬಗೆಯಾಗಿದ್ದು, ಬಹುತೇಕವಾಗಿ ಓಟೆಯಿಲ್ಲದ ರಸಭರಿತ ಹಣ್ಣುಗಳಿಂದ ತಯಾರಿಸಲ್ಪಡುತ್ತದೆ ಮತ್ತು ಡ್ಯಾನಿಷ್‌ ಜನರ ಭಕ್ಷ್ಯವಾದ ರೋಡ್‌ಗ್ರೋಡ್‌ ಮೆಡ್‌ ಫ್ಲೋಡ್‌ ರೀತಿಯಲ್ಲಿ ಕೆನೆಯೊಂದಿಗೆ ಬಡಿಸಲಾಗುತ್ತದೆ)[೫೭] ಮತ್ತು ಲ್ಯಾಬಸ್ಕೌಸ್‌ (ಇದು ಉಪ್ಪೂರಿಸಿದ ದನದ ಮಾಂಸ, ಜಜ್ಜಿಬಜ್ಜಿಮಾಡಿದ ಆಲೂಗಡ್ಡೆಗಳು ಮತ್ತು ಬೀಟ್‌ರೂಟ್‌ನ ಒಂದು ಮಿಶ್ರಣವಾಗಿದೆ. ಇದು ನಾರ್ವೆಯ ಲ್ಯಾಪ್ಸ್‌ಕೌಸ್‌ ಮತ್ತು ಲಿವರ್‌‌ಪೂಲ್‌‌‌ನ ನಾವಿಕರ ತಿಂಡಿಯ (ಲಾಬ್ಸ್‌‌ಕೌಸ್‌ - ಮಾಂಸದ ಜೊತೆಯಲ್ಲಿ ಹಡಗಿನ ಬಿಸ್ಕತ್ತು, ತರಕಾರಿ ಮೊದಲಾದವನ್ನು ಬಾಡಿಸಿ ತಯಾರಿಸಿದ ಖಾದ್ಯ) ವರ್ಗಕ್ಕೆ ಸೇರುವ ಒಂದು ಭಕ್ಷ್ಯವಾಗಿದೆ; ಇವೆಲ್ಲವೂ ಒಂದು ಹಳೆಯ-ಕಾಲದ ಅಥವಾ ಪಳಗಿದ ದಿಢೀರ್‌ ಭೋಜನದಿಂದ ಹೊರಹೊಮ್ಮಿ ಜನ್ಯವಾಗಿದ್ದು, ಇವು ಮೇಲ್ಮಟ್ಟದಲ್ಲಿರುವ ಸಮುದ್ರದ ನೀರಿನಲ್ಲಿನ ಸಾಮಾನ್ಯ ನಾವಿಕನ ಸಪ್ಪೆಯಾದ ಆಹಾರಕ್ರಮದ ಮುಖ್ಯ ಭಾಗವಾಗಿರುತ್ತಿದ್ದವು).[೫೮]

ಆಲ್‌‌ಸ್ಟರ್‌‌ವಾಸ್ಸರ್ ಎಂಬುದು ಹ್ಯಾಂಬರ್ಗ್‌‌ನಲ್ಲಿ ಒಂದು "ರ್ಯಾಡ್ಲರ್‌‌"ಗೆ ಸಂಬಂಧಿಸಿದಂತಿರುವ ಸ್ಥಳೀಯ ಹೆಸರಾಗಿದ್ದು (ನಗರ ಕೇಂದ್ರದಲ್ಲಿ ಸರೋವರದ-ರೀತಿಯ ಎರಡು ನೀರಿನ ಸೆಲೆಗಳನ್ನು ಹೊಂದಿರುವ ನಗರದ ನದಿಯಾದ ಆಲ್‌‌ಸ್ಟರ್‌‌ಗೆ ನೀಡಲಾಗಿರುವ ಒಂದು ಉಲ್ಲೇಖ; ಅಣೆಕಟ್ಟು ಕಟ್ಟುವಿಕೆಗೆ ಇದರ ಕೀರ್ತಿ ಸಲ್ಲುತ್ತದೆ), ಎರಡೂ ಸಹ ಒಂದು ಬಗೆಯ ಷ್ಯಾಂಡಿಯಾಗಿವೆ; ಇದು ಬಿಯರ್‌‌ ಮತ್ತು ಇಂಗಾಲಾಮ್ಲದ ವಾಯಹುದುಗಿಸಿದ ಕೃತಕ ನಿಂಬೆ ಪಾನೀಯದ (ಝಿಟ್ರೋನೆನ್ಲಿಮೊನೇಡ್‌ ) ಸಮನಾದ ಭಾಗಗಳ ಒಂದು ಮಿಶ್ರಣವಾಗಿದ್ದು, ಕೃತಕ ನಿಂಬೆ ಪಾನೀಯವು ಬಿಯರ್‌ಗೆ ಸೇರಿಸಲ್ಪಡುತ್ತದೆ‌‌.[೫೯]

ಫ್ರಾಂಜ್‌ಬ್ರೋಟ್‌ಚೆನ್‌ ಎಂಬುದಾಗಿ ಕರೆಯಲ್ಪಡುವ, ಪ್ರಾದೇಶಿಕ ಹಣ್ಣು-ಐಸ್‌ಕ್ರೀಂ ಮಿಶ್ರಿತವಾದ ಕುತೂಹಲಕರ ಪಿಷ್ಟಭಕ್ಷ್ಯವೂ ಸಹ ಇಲ್ಲಿ ಲಭ್ಯವಿದೆ. ಒಂದು ಚಪ್ಪಟೆಯಾದ ಅರ್ಧಚಂದ್ರಾಕಾರದ ಬ್ರೆಡ್ಡಿನ ಸುರುಳಿಯಂತೆ ಕಾಣುವ ಫ್ರಾಂಜ್‌ಬ್ರೋಟ್‌ಚೆನ್‌ ಭಕ್ಷ್ಯವು ತಯಾರಿಕೆಯಲ್ಲಿ ಅದನ್ನೇ ಹೋಲುತ್ತದೆಯಾದರೂ, ದಾಲ್ಚಿನ್ನಿ ಮತ್ತು ಸಕ್ಕರೆಯ ಒಂದು ಹೂರಣವನ್ನು ಅದು ಒಳಗೊಂಡಿರುತ್ತದೆ, ಹಾಗೂ ಈ ಹೂರಣದಲ್ಲಿ ಅನೇಕವೇಳೆ ಒಣದ್ರಾಕ್ಷಿಗಳು ಅಥವಾ ಕಂದು ಸಕ್ಕರೆಯಾದ ಸ್ಟ್ರ್ಯೂಸೆಲ್ ತುಂಬಿಸಲ್ಪಟ್ಟಿರುತ್ತವೆ. ಸುರುಳಿಯ ಅರ್ಧಚಂದ್ರಾಕಾರದ ಬ್ರೆಡ್ಡಿನ ಸುರುಳಿಯ-ರೀತಿಯ ನೋಟವನ್ನೂ ಸಹ ಇದರ ಹೆಸರು ಪ್ರತಿಬಿಂಬಿಸಬಹುದು - ಫ್ರಾಂಜ್‌‌ ಎಂಬುದು ಫ್ರಾಂಜೋಸಿಷ್‌ ಎಂಬುದರ ಒಂದು ಮೊಟಕಾಗಿಸಿದ ರೂಪದಂತೆ ತೋರುತ್ತದೆ; ಇದು "ಫ್ರೆಂಚ್‌" ಎಂಬ ಅರ್ಥವನ್ನು ಹೊರಹೊಮ್ಮಿಸುವುದರ ಜೊತೆಗೆ, ಒಂದು ಫ್ರಾಂಜ್‌ಬ್ರೋಟ್‌ಚೆನ್‌ , ಅಂದರೆ, ಒಂದು “ಫ್ರೆಂಚ್‌ ಸುರುಳಿ” ಎಂಬುದನ್ನು ಧ್ವನಿಸುತ್ತದೆ. ಸಾಧಾರಣ ಬ್ರೆಡ್‌ ಸುರುಳಿಗಳು ಅಂಡಾಕಾರದಲ್ಲಿರುವ ಮತ್ತು ಫ್ರೆಂಚ್‌ ಬ್ರೆಡ್‌ ವೈವಿಧ್ಯವನ್ನು ಹೊಂದಿರುವೆಡೆ ಒಲವು ತೋರುತ್ತವೆ. ರುಂಡ್‌ಸ್ಟೂಕ್‌ ಎಂಬುದು ಸ್ಥಳೀಯ ಹೆಸರಾಗಿದ್ದು, (ಇದು ಮುಖ್ಯವಾಹಿನಿಯ ಜರ್ಮನ್‌‌ ಭಾಷೆಯ ಬ್ರೋಟ್‌ಚೆನ್‌‌‌ ಎಂಬುದಕ್ಕಿಂತ “ದುಂಡನೆಯ ತುಣುಕು” ಎಂದು ಧ್ವನಿಸುತ್ತದೆ, ಮತ್ತು ಬ್ರೋಟ್‌ “ಬ್ರೆಡ್‌”ನ ಅಲ್ಪಾರ್ಥಕ ಸ್ವರೂಪವಾಗಿದೆ),[೬೦] ಇದು ಡೆನ್ಮಾರ್ಕ್‌ನ ಡುಂಡ್‌ಸ್ಟೈಕ್‌‌ ಎಂಬುದರ ಒಂದು ತತ್ಸಂಬಂಧಿಯಾಗಿದೆ. ವಾಸ್ತವವಾಗಿ, ಖಂಡಿತವಾಗಿಯೂ ತದ್ರೂಪಿಯಲ್ಲದಿದ್ದರೂ, ಹ್ಯಾಂಬರ್ಗ್ ಮತ್ತು ಡೆನ್ಮಾರ್ಕ್‌ನ, ಅದರಲ್ಲೂ ವಿಶೇಷವಾಗಿ ಕೋಪೆನ್‌ಹೇಗನ್‌‌ನ ಪಾಕಪದ್ಧತಿಗಳಲ್ಲಿ ಬಹಳಷ್ಟು ಸಂಗತಿಗಳು ಸಮಾನವಾಗಿವೆ. ಎಲ್ಲ ಬಗೆಯ ತೆರೆದ-ಸ್ವರೂಪದ ಸ್ಯಾಂಡ್‌ವಿಚ್‌ಗಳಿಗೆ ಸಂಬಂಧಿಸಿದಂತಿರುವ ಒಂದು ವಿಶೇಷಾಸಕ್ತಿಯನ್ನು, ಅದರಲ್ಲೂ ವಿಶೇಷವಾಗಿ ಮೇಲಿರಿಸಿ ಮುಚ್ಚಲ್ಪಟ್ಟ ತಂಪು-ಹೊಗೆಯಾಡಿಸಿದ ಅಥವಾ ಊರಿಟ್ಟ ಮೀನನ್ನೂ ಸಹ ಇದು ಒಳಗೊಳ್ಳುತ್ತದೆ. ಹ್ಯಾಂಬರ್ಗ್‌‌ನ ಫ್ರಿಕಾಡೆಲ್ಲೆ ಭಕ್ಷ್ಯದಿಂದ ಅಮೆರಿಕಾದ ಹ್ಯಾಂಬರ್ಗರ್‌‌ ಭಕ್ಷ್ಯವು ಅಭಿವೃದ್ಧಿಪಡಿಸಲ್ಪಟ್ಟಿದೆ ಎಂದು ತೋರುತ್ತದೆ: ಫ್ರಿಕಾಡೆಲ್ಲೆ ಎಂಬುದು ಕಾವಲಿಯಲ್ಲಿ-ಹುರಿದ ಒಂದು ಕಜ್ಜಾಯದಂಥ ಭಕ್ಷ್ಯವಾಗಿದ್ದು (ಅಮೆರಿಕಾದ ಪ್ರತಿರೂಪಿ ಭಕ್ಷ್ಯಕ್ಕಿಂತ ಇದು ಸಾಮಾನ್ಯವಾಗಿ ದೊಡ್ಡದಾಗಿರುತ್ತದೆ ಮತ್ತು ದಪ್ಪನಾಗಿರುತ್ತದೆ), ತಿರುವಿದ ದನದ ಮಾಂಸ, ನೆನೆಸಿದ ಹಳೆಯ ಬ್ರೆಡ್‌, ಮೊಟ್ಟೆ, ಕೊಚ್ಚಿದ ಈರುಳ್ಳಿ, ಉಪ್ಪು ಮತ್ತು ಮೆಣಸಿನಕಾಳು ಇವುಗಳ ಒಂದು ಮಿಶ್ರಣದಿಂದ ಮಾಡಲ್ಪಟ್ಟಿರುತ್ತದೆ. ಬೇರಾವುದೇ ಮಾಂಸದ ತುಣುಕಿನ ರೀತಿಯಲ್ಲಿ ಇದನ್ನು ಆಲೂಗಡ್ಡೆಗಳು ಮತ್ತು ತರಕಾರಿಗಳೊಂದಿಗೆ ಸಾಮಾನ್ಯವಾಗಿ ಬಡಿಸಲಾಗುತ್ತದೆಯೇ ವಿನಃ, ಒಂದು ಬನ್ನಿನ ಮೇಲೆ ಇರಿಸಿ ಸಾಮಾನ್ಯವಾಗಿ ನೀಡಲಾಗುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಒಂದು ಹ್ಯಾಂಬರ್ಗರ್‌‌ ಸ್ಟೀಕ್‌‌‌ ನ್ನು (ಕುದಿಸಿ ಬೇಯಿಸುವುದಕ್ಕಾಗಿ ಕತ್ತರಿಸಿದ ಗೋಮಾಂಸ) ಆಕ್ಸ್‌‌ಫರ್ಡ್‌ ಶಬ್ದಕೋಶವು 1802ರಲ್ಲಿ ಹೀಗೆ ವ್ಯಾಖ್ಯಾನಿಸಿದೆ: ಕೆಲವೊಮ್ಮೆ-ಹೊಗೆಯಾಡಿಸಿದ ಮತ್ತು ಉಪ್ಪು ಹಾಕಿದ ಮಾಂಸದ ಒಂದು ತುಣುಕು, ಇದು ಕೆಲವೊಂದು ಮೂಲಗಳ ಅನುಸಾರ ಹ್ಯಾಂಬರ್ಗ್‌‌ನಿಂದ ಅಮೆರಿಕಾಕ್ಕೆ ಬಂದಿತು.[೬೧]

ಕ್ರೀಡೆ

ಬದಲಾಯಿಸಿ
 
HSH ನೋರ್ಡ್‌ಬ್ಯಾಂಕ್‌ ಅರೆನಾ: ಹ್ಯಾಂಬರ್ಗರ್‌‌ SV vs ಐನ್‌ಟ್ರಾಕ್ಟ್‌ ಫ್ರಾಂಕ್‌ಫರ್ಟ್‌, ಮೇ 2004
 
ಬಿನ್ನೆನ್‌‌ಆಲ್‌‌ಸ್ಟರ್‌‌ನಲ್ಲಿರುವ ಹ್ಯಾಂಬರ್ಗ್ ಸಿಟಿ ಮ್ಯಾನ್‌ 2007
 
O2 ವರ್ಲ್ಡ್‌‌ ಹ್ಯಾಂಬರ್ಗ್

ಹ್ಯಾಂಬರ್ಗ್ ನಗರವು ಕೆಲವೊಮ್ಮೆ ಜರ್ಮನಿಯ ಕ್ರೀಡಾ-ರಾಜಧಾನಿ ಎಂದು ಕರೆಯಲ್ಪಡುತ್ತದೆ; ಏಕೆಂದರೆ, ಬೇರಾವುದೇ ನಗರವು ಹೆಚ್ಚಿನ ಸಂಖ್ಯೆಯಲ್ಲಿ ಮೊದಲ-ಲೀಗ್‌‌ ತಂಡಗಳು ಮತ್ತು ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು ಹೊಂದಿಲ್ಲ.

ಜರ್ಮನಿಯಲ್ಲಿನ ಅತ್ಯಂತ ಯಶಸ್ವೀ ತಂಡಗಳ ಪೈಕಿ ಒಂದೆನಿಸಿರುವ ಹ್ಯಾಂಬರ್ಗರ್‌‌ SV ಎಂಬುದು ಬಂಡೆಲ್‌ಸ್ಲಿಗಾದಲ್ಲಿರುವ ಒಂದು ಫುಟ್‌ಬಾಲ್‌‌ ತಂಡವಾಗಿದೆ. The HSVಯು ಬಂಡೆಲ್‌ಸ್ಲಿಗಾದ ಅತಿ ಹಳೆಯ ತಂಡವಾಗಿದ್ದು, 1963ರಲ್ಲಿ ಸದರಿ ಲೀಗ್‌ ಆರಂಭವಾದಂದಿನಿಂದಲೂ ಅದು ಲೀಗ್‌ನಲ್ಲಿ ಆಡುತ್ತಾ ಬಂದಿದೆ. HSV ತಂಡವು ಆರು-ಬಾರಿ ಜರ್ಮನ್‌‌ ಚಾಂಪಿಯನ್‌‌ ಆಗಿದೆ, ಮೂರು-ಬಾರಿ ಜರ್ಮನ್‌‌ ಕಪ್‌‌ ವಿಜಯಿಯಾಗಿದೆ ಮತ್ತು 1983ರಲ್ಲಿ ನಡೆದ ಐರೋಪ್ಯ ಕಪ್‌‌ನಲ್ಲಿ ವಿಜಯಶಾಲಿಯಾದ ತಂಡವಾಗಿದೆ; ಅಷ್ಟೇ ಅಲ್ಲ, 2000/2001ರಲ್ಲಿ ಮತ್ತು 2006/2007ರಲ್ಲಿ ಎರಡು ಬಾರಿ ಚಾಂಪಿಯನ್ಸ್‌‌ ಲೀಗ್‌‌‌‌ನ ಗುಂಪು ಹಂತಗಳಲ್ಲಿ ಈ ತಂಡವು ಆಟವಾಡಿದೆ. ಇಮ್ಟೆಕ್‌ ಅರೆನಾದಲ್ಲಿ ಅವರು ಆಟವಾಡುತ್ತಾರೆ (06/07ರ ಋತುವಿನಲ್ಲಿ 56,100ರಷ್ಟು ಸರಾಸರಿ ಹಾಜರಿಯಿತ್ತು). ಇದರ ಜೊತೆಗೆ, FC ಸೇಂಟ್‌ ಪಾಲಿ ಎಂಬುದು ಎರಡನೇ ವಿಭಾಗದ ಒಂದು ಫುಟ್‌ಬಾಲ್‌‌ ಕ್ಲಬ್‌ ಆಗಿತ್ತು ಹಾಗೂ 2009/2010ರ ಋತುವಿನಲ್ಲಿ ಅದು ಎರಡನೇ ಸ್ಥಾನವನ್ನು ಗಳಿಸಿತು; ಅಷ್ಟೇ ಅಲ್ಲ, 2001-02ರ ಋತುವು ಆರಂಭವಾದಾಗಿನಿಂದ ಮೊಟ್ಟಮೊದಲ ಬಾರಿಗೆ ಹ್ಯಾಂಬರ್ಗರ್‌‌ SV ತಂಡದ ಜೊತೆಜೊತೆಯಲ್ಲೇ ಆಟವಾಡುವ ಅರ್ಹತೆಯನ್ನು ಪಡೆದ ಕ್ಲಬ್‌ ಇದಾಗಿತ್ತು. ಸೇಂಟ್‌ ಪಾಲಿಯ ತವರೂರಿನ ಆಟಗಳು ಮಿಲ್ಲರ್ನ್‌ಟಾರ್‌-ಸ್ಟೇಡಿಯನ್‌‌‌ನಲ್ಲಿ ನಡೆಯುತ್ತವೆ.

ಜರ್ಮನಿಯಲ್ಲಿನ ಮಂಜಿನ ಹಾಕಿಯ ಪ್ರಧಾನ ಲೀಗ್‌‌ ಆಗಿರುವ DELನಲ್ಲಿ ಹ್ಯಾಂಬರ್ಗ್‌‌ನ್ನು ಹ್ಯಾಂಬರ್ಗ್ ಫ್ರೀಜರ್ಸ್‌‌ ಪ್ರತಿನಿಧಿಸುತ್ತದೆ. ಜರ್ಮನ್‌‌ ಹ್ಯಾಂಡ್‌ಬಾಲ್‌‌ ಲೀಗ್‌‌‌ನಲ್ಲಿ ಹ್ಯಾಂಬರ್ಗ್‌‌ನ್ನು HSV ಹ್ಯಾಂಡ್‌ಬಾಲ್‌‌ ಪ್ರತಿನಿಧಿಸುತ್ತದೆ. 2007ರಲ್ಲಿ, ಯುರೋಪಿಯನ್‌ ಕಪ್‌ವಿನ್ನರ್ಸ್‌‌ ಕಪ್‌ನ್ನು HSV ಹ್ಯಾಂಡ್‌ಬಾಲ್‌‌ ಗೆದ್ದುಕೊಂಡಿತು. ಎರಡೂ ತಂಡಗಳು O2 ವರ್ಲ್ಡ್‌‌ ಹ್ಯಾಂಬರ್ಗ್‌‌‌ನಲ್ಲಿ ಆಡುತ್ತವೆ.

ಹ್ಯಾಂಬರ್ಗ್ ನಗರವು ರಾಷ್ಟ್ರದ ಮೈದಾನ ಹಾಕಿಯ ರಾಜಧಾನಿಯಾಗಿರುವುದರ ಜೊತೆಗೆ, ಪುರುಷರ ಹಾಗೂ ಮಹಿಳೆಯರ ಬಂಡೆಲ್‌ಸ್ಲಿಗಾದಲ್ಲಿ ಪ್ರಾಬಲ್ಯ ಸಾಧಿಸಿದೆ.

ಜರ್ಮನಿಯ ಅಗ್ರಗಣ್ಯ ಲಕ್ರಾಸ್‌ ಕ್ಲಬ್ಬುಗಳ ಪೈಕಿ ಹ್ಯಾಂಬರ್ಗ್ ವಾರಿಯರ್ಸ್‌‌ ಒಂದೆನಿಸಿದೆ.[೬೨] ಕಳೆದ ಹಲವಾರು ವರ್ಷಗಳಲ್ಲಿ ಈ ಕ್ಲಬ್ಬು ಅಗಾಧವಾಗಿ ಬೆಳೆದಿದೆ ಮತ್ತು ಕನಿಷ್ಟಪಕ್ಷ ಒಂದು ಕಿರಿಯ ತಂಡ, ಪುರುಷರ ಮೂರು ತಂಡಗಳು, ಮತ್ತು ಮಹಿಳೆಯರ ಎರಡು ತಂಡಗಳನ್ನು ಒಳಗೊಂಡಿದೆ. ಡ್ಯೂಷ್‌ ಲಕ್ರಾಸ್‌ ವೆರೆಯಿನ್‌ನಲ್ಲಿ ಈ ತಂಡವು ಭಾಗವಹಿಸುತ್ತದೆ. ಹ್ಯಾಂಬರ್ಗ್ ವಾರಿಯರ್ಸ್‌‌ ಕ್ಲಬ್ಬು ಹಾರ್ವೆಸ್ಟ್‌ಹ್ಯೂಡ್‌ರ್‌‌ ಟೆನಿಸ್‌- ಅಂಡ್‌ ಹಾಕಿ-ಕ್ಲಬ್‌‌ ಇ.V (HTHC) ಎಂಬುದರ ಭಾಗವಾಗಿದೆ.[೬೩]

ಒಂದು ಆಸ್ಟ್ರೇಲಿಯಾದ ನಿಯಮಗಳ ಫುಟ್‌ಬಾಲ್‌‌ ಕ್ಲಬ್‌ ಆಗಿರುವ ಹ್ಯಾಂಬರ್ಗ್ ಡಾಕರ್ಸ್‌‌ ಕೂಡಾ ಇಲ್ಲಿದೆ.[೬೪] FC ಸೇಂಟ್‌ ಪಾಲಿ ತಂಡವು ಜರ್ಮನಿಯಲ್ಲಿನ ಮಹಿಳೆಯರ ರಗ್‌ಬಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಇತರ ಮೊದಲ-ಲೀಗ್‌‌ ತಂಡಗಳಲ್ಲಿ VT ಔರುಬಿಸ್‌ ಹ್ಯಾಂಬರ್ಗ್ (ವಾಲಿಬಾಲ್‌), ಹ್ಯಾಂಬರ್ಗರ್‌‌ ಪೋಲೋ ಕ್ಲಬ್‌, ಮತ್ತು ಹ್ಯಾಂಬರ್ಗ್ ಬ್ಲೂ ಡೆವಿಲ್ಸ್‌ (ಅಮೆರಿಕಾದ ಫುಟ್‌ಬಾಲ್‌‌) ಸೇರಿವೆ.[೬೫] ನಾಲ್ಕು ಕ್ರಿಕೆಟ್‌ ಕ್ಲಬ್ಬುಗಳೂ ಸೇರಿದಂತೆ, ಹಲವಾರು ಅಲ್ಪಸಂಖ್ಯಾತ ಕ್ರೀಡಾ ಕ್ಲಬ್ಬುಗಳೂ ಸಹ ಇಲ್ಲಿವೆ.

 
ಆಮ್‌ ರೋಥೆನ್‌ಬೌಮ್‌‌ ಎಂಬುದು ಅಂತರರಾಷ್ಟ್ರೀಯ ಜರ್ಮನ್‌ ಮುಕ್ತ ಪಂದ್ಯಾವಳಿಯ ಮುಖ್ಯ ಟೆನಿಸ್‌ ಕ್ರೀಡಾಂಗಣವಾಗಿದೆ

ಟೆನಿಸ್‌ನ ಪ್ರಧಾನ ಅಂಕಣವಾಗಿರುವ ಆಮ್‌ ರೋಥೆನ್‌ಬೌಮ್‌‌ ತಾಣವು 13,200 ಜನರ ಒಂದು ಆಸನ ಸಾಮರ್ಥ್ಯವನ್ನು ಹೊಂದಿದ್ದು, ಜರ್ಮನಿಯಲ್ಲೇ ಅದು ಅತಿದೊಡ್ಡದು ಎನಿಸಿಕೊಂಡಿದೆ.[೬೬]

ಹ್ಯಾಂಬರ್ಗ್ ನಗರವು ಅಶ್ವಾರೋಹಣದ ಸ್ಪರ್ಧೆಗಳನ್ನೂ ಆಯೋಜಿಸುತ್ತದೆ; ರೀಟ್‌ಸ್ಟೇಡಿಯನ್‌ ಕ್ಲೀನ್‌ ಫ್ಲಾಟ್‌ಬೆಕ್‌‌ (ಜಿಗಿಯುವಿಕೆ ಮತ್ತು ಕುದುರೆ ತರಬೇತಿಯಲ್ಲಿನ ಡ್ಯೂಷೆಸ್‌ ಡರ್ಬಿ) ಮತ್ತು ಹೋರ್ನರ್‌ ರೆನ್‌ಬಾನ್‌ (ಸಮತಟ್ಟಿನ ಓಟದ ಪಂದ್ಯದ ಡ್ಯೂಷೆಸ್‌ ಡರ್ಬಿ) ಎಂಬಲ್ಲಿ ಇದು ನಡೆಯುತ್ತದೆ ಎಂಬುದು ವಿಶೇಷ.[೬೭] ಹ್ಯಾಂಬರ್ಗ್ ಮ್ಯಾರತನ್‌‌ ಎಂಬ ಸ್ಪರ್ಧೆಯು ಜರ್ಮನಿಯಲ್ಲಿನ ಅತಿದೊಡ್ಡ ಸುದೀರ್ಘ ಓಟದ ಸ್ಪರ್ಧೆಯಾಗಿದ್ದು, ಇದು ಬರ್ಲಿನ್‌‌ನಲ್ಲಿ ನಡೆಯುವ ಪಂದ್ಯದ ನಂತರದ ಸ್ಥಾನದಲ್ಲಿದೆ. 2008ರಲ್ಲಿ ಈ ಪಂದ್ಯಕ್ಕೆ 23,230 ಸಹಭಾಗಿಗಳು ನೋಂದಾಯಿಸಲ್ಪಟ್ಟಿದ್ದರು.[೬೮] ಸೈಕಲ್‌ ಸವಾರಿಯಲ್ಲಿನ ವಿಶ್ವಕಪ್‌ ಸ್ಪರ್ಧೆಗಳೂ ಸಹ ಇಲ್ಲಿ ಆಯೋಜಿಸಲ್ಪಡುತ್ತವೆ. UCI ವೃತ್ತಿಪರ-ಪ್ರವಾಸ ಸ್ಪರ್ಧೆಯಾದ ವಾಟೆನ್‌ಫಾಲ್‌ ಸೈಕ್ಲಾಸಿಕ್ಸ್‌, ಮತ್ತು ಟ್ರಯಾಥ್ಲಾನ್‌ ITU ವಿಶ್ವಕಪ್‌ ಸ್ಪರ್ಧೆಯಾದ ಹ್ಯಾಂಬರ್ಗ್ ಸಿಟಿ ಮ್ಯಾನ್‌ ಇವುಗಳಲ್ಲಿ ಸೇರಿವೆ.[೬೯]

HSH ನೋರ್ಡ್‌ಬ್ಯಾಂಕ್‌‌ ಅರೆನಾವನ್ನು (ಹಿಂದೆ ಇದಕ್ಕೆ AOL ಅರೆನಾ ಎಂಬ ಹೆಸರಿತ್ತು ಮತ್ತು ಮೂಲತಃ ವೋಕ್ಸ್‌ಪಾರ್ಕ್‌ಸ್ಟೇಡಿಯಾನ್‌ ಎಂಬುದು ಇದರ ಹೆಸರಾಗಿತ್ತು) 2006ರ ವಿಶ್ವಕಪ್‌ ಸ್ಪರ್ಧೆಗೆ ಸಂಬಂಧಿಸಿದ ಒಂದು ತಾಣವಾಗಿ ಬಳಸಲಾಗಿತ್ತು. 2010ರಲ್ಲಿ, UEFA ಯುರೋಪಾ ಲೀಗ್‌‌ ಸ್ಪರ್ಧೆಯ ಅಂತಿಮ ಪಂದ್ಯವನ್ನು ಸದರಿ ಅಖಾಡದಲ್ಲಿ UEFA ಆಯೋಜಿಸಿತ್ತು.[೭೦]

ಉತ್ತರದ ಜರ್ಮನಿಗೆ ಸಂಬಂಧಿಸಿ ವಿಶಿಷ್ಟವಾಗಿರುವಂತೆ, ಹ್ಯಾಂಬರ್ಗ್‌‌ನ ಮೂಲ ಭಾಷೆಯು ಲೋ ಜರ್ಮನ್‌‌ ಆಗಿದ್ದು, ಇದನ್ನು ಹ್ಯಾಂಬೊರ್ಗರ್‌ ಪ್ಲಾಟ್‌ (ಜರ್ಮನ್‌‌ ಹ್ಯಾಂಬರ್ಗರ್‌‌ ಪ್ಲಾಟ್‌ ) ಅಥವಾ ಹ್ಯಾಂಬೊರ್ಗ್‌ಸ್ಕ್‌‌ ಎಂಬುದಾಗಿ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಆದರೂ, ಒಂದು ಅಲ್ಪಸಂಖ್ಯಾತ ಸಮುದಾಯದಿಂದ ಮತ್ತು ಬಹಿರಂಗವಾಗಿ ಅಪರೂಪಕ್ಕೆಂಬಂತೆ ಇದು ಇನ್ನೂ ಬಳಸಲ್ಪಡುತ್ತಿದೆ.[ಸೂಕ್ತ ಉಲ್ಲೇಖನ ಬೇಕು] 18ನೇ ಶತಮಾನದ ಆಸುಪಾಸಿನಲ್ಲಿ, ದೊಡ್ಡ-ಪ್ರಮಾಣದ ಜರ್ಮನೀಕರಣವು ಶ್ರದ್ಧಾಪೂರ್ವಕವಾದ ರೀತಿಯಲ್ಲಿ ಆರಂಭವಾದಾಗಿನಿಂದ, ಲೋ ಜರ್ಮನ್‌‌-ವರ್ಗದ ಹಲವಾರು ಉಪಭಾಷೆಗಳು ಬೆಳೆದಿವೆ (ಸಂಪರ್ಕಿಸಿ- ಲೋ ಸ್ಯಾಕ್ಸನ್‌‌ ಆಧಾರಗಳ ಮೇಲಿನ ಜರ್ಮನ್‌‌ನ ವೈವಿಧ್ಯತೆಗಳು). ಮೂಲತಃ, ಇಂಥ ಮಿಸ್ಸಿಂಗ್‌ಸ್ಕ್‌ ವೈವಿಧ್ಯತೆಗಳ ಒಂದು ಶ್ರೇಣಿಯೇ ಅಲ್ಲಿತ್ತು; ಶ್ರಮಿಕ ವರ್ಗದವರ ಪೈಕಿಯಲ್ಲಿ ಕಡಿಮೆ-ಪ್ರತಿಷ್ಠೆಯುಳ್ಳವರ ಪ್ರಭೇದ ಮತ್ತು ಒಂದು ರೀತಿಯಲ್ಲಿ ಮಧ್ಯಮವರ್ಗದ ಮನೋವೃತ್ತಿಯನ್ನು ಹೊಂದಿದ್ದ ಹಾನ್ಸಿಯಾಟೆನ್‌ಡ್ಯೂಷ್‌ (ರಾಜಕೀಯ-ವಾಣಿಜ್ಯ ಕೂಟದ ಜರ್ಮನ್‌‌) ಪ್ರಭೇದವು ಅವುಗಳ ಪೈಕಿ ಚಿರಪರಿಚಿತವಾದುದಾಗಿತ್ತು; ಆದರೂ ಸದರಿ ಶಬ್ದವನ್ನು ಮೌಲ್ಯನಿರ್ಣಯದಲ್ಲಿ ಬಳಸಲಾಗುತ್ತದೆ.[೭೧] ಶಿಕ್ಷಣ ಮತ್ತು ಮಾಧ್ಯಮಗಳ ವತಿಯಿಂದ ಹರಡಲ್ಪಟ್ಟ “ಶುದ್ಧಾಂಗವಾದ” ಜರ್ಮನ್‌‌ನ ಪ್ರಭಾವಗಳ ಕಾರಣದಿಂದಾಗಿ, ಈ ಎಲ್ಲವೂ ಸಹ ಈಗ ಮರಣಾವಸ್ಥೆಯಲ್ಲಿವೆ. ಆದಾಗ್ಯೂ, ಲೋ ಜರ್ಮನ್‌ನ ಹಿಂದಿನ ಪ್ರಾಮುಖ್ಯತೆಯು ಹಲವಾರು ಹಾಡುಗಳಿಂದ ಸೂಚಿಸಲ್ಪಟ್ಟಿದೆ; ಲೋ ಜರ್ಮನ್‌‌ ಭಾಷೆಯು ಹೆಚ್ಚು ವಾಡಿಕೆಯಾಗಿ ಬಳಸಲ್ಪಡುತ್ತಿದ್ದ 19ನೇ ಶತಮಾನದ ಅವಧಿಯಲ್ಲಿ ಬರೆಯಲ್ಪಟ್ಟ ಹ್ಯಾಂಬೊರ್ಗರ್‌‌ ವೀರ್‌‌ಮಾಸ್ಟರ್‌ ಎಂಬ ಪ್ರಸಿದ್ಧ ಸಮುದ್ರ ಷ್ಯಾಂಟೀ ಗೀತೆಯು ಇದಕ್ಕೊಂದು ಉದಾಹರಣೆಯಾಗಿದೆ.

ಇಂಗ್ಲಿಷ್‌ ಸಂಸ್ಕೃತಿ

ಬದಲಾಯಿಸಿ

ಹ್ಯಾಂಬರ್ಗ್ ನಗರದಲ್ಲಿ ಇಂಗ್ಲಿಷ್‌-ಮಾತನಾಡುವ ಹಲವಾರು ಸಮುದಾಯಗಳಿವೆ. ಅವುಗಳೆಂದರೆ: ಕೆಲೆಡೋನಿಯನ್‌ ಸೊಸೈಟಿ ಆಫ್‌ ಹ್ಯಾಂಬರ್ಗ್‌, ಬ್ರಿಟಿಷ್‌ ಕ್ಲಬ್‌‌ ಹ್ಯಾಂಬರ್ಗ್, ಬ್ರಿಟಿಷ್‌ ಮತ್ತು ಕಾಮನ್‌ವೆಲ್ತ್‌‌ ಲಂಚನ್‌ ಕ್ಲಬ್‌, ಪ್ರೊಫೆಷನಲ್‌ ವುಮೆನ್ಸ್‌ ಫೋರಮ್‌‌.[೭೨] ಇಂಗ್ಲಿಷ್‌-ಮಾತನಾಡುವ ಅಮೆರಿಕಾದ ಮತ್ತು ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ ಇವು ಸೇರಿವೆ: ದಿ ಅಮೆರಿಕನ್‌ ಕ್ಲಬ್‌ ಆಫ್‌ ಹ್ಯಾಂಬರ್ಗ್ e.V.,[೭೩] ಅಮೆರಿಕನ್‌ ವುಮೆನ್ಸ್‌ ಕ್ಲಬ್‌, ಇಂಗ್ಲಿಷ್‌ ಸ್ಪೀಕಿಂಗ್‌ ಯೂನಿಯನ್‌, ಮತ್ತು ಜರ್ಮನ್‌‌-ಅಮೆರಿಕನ್‌ ವುಮೆನ್ಸ್‌ ಕ್ಲಬ್‌.[೭೪]

ಸ್ಮಾರಕಗಳು

ಬದಲಾಯಿಸಿ

ವಿಲಿಯಂ ಲಿಂಡ್ಲೆ ಎಂಬ ಓರ್ವ ಯಶಸ್ವೀ ಇಂಗ್ಲಿಷ್‌ ಎಂಜಿನಿಯರ್‌‌ಗಾಗಿ ಮೀಸಲಾಗಿರುವ ಸ್ಮಾರಕವೊಂದು, ವೋರ್ಸೆಟ್‌ಜೆನ್‌ ಬೀದಿಯಲ್ಲಿನ ಬೌಮ್‌ವಾಲ್‌‌ ಟ್ರೇನು ನಿಲ್ದಾಣದ ಸಮೀಪದಲ್ಲಿ ನೆಲೆಗೊಂಡಿದೆ; 1842ರಲ್ಲಿ ಆರಂಭಗೊಂಡ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ವಿಲಿಯಂ ಲಿಂಡ್ಲೆ ಮರುಸಂಘಟಿಸಿದ ಹಾಗೂ ತನ್ಮೂಲಕ ಕಾಲರಾ ವಿರುದ್ಧದ ಹೋರಾಟದಲ್ಲಿ ನೆರವಾದ ಎಂಬುದು ಗಮನಾರ್ಹ ಸಂಗತಿ.

2009ರಲ್ಲಿ, 2,500ಕ್ಕೂ ಹೆಚ್ಚಿನ "ಅಡೆತಡೆಗಳು" (ಸ್ಟಾಲ್ಪೆರ್‌ಸ್ಟೀನ್‌) ಸ್ಥಾಪಿಸಲ್ಪಟ್ಟವು ಮತ್ತು ಗಡೀಪಾರು ಮಾಡಲ್ಪಟ್ಟ ಹಾಗೂ ಕೊಲೆಯಾದ ನಾಗರಿಕರ ಹೆಸರುಗಳನ್ನು ಅವುಗಳ ಮೇಲೆ ಕೆತ್ತಲಾಗಿತ್ತು. ಅವರು ಹಿಂದೆ ವಾಸವಾಗಿದ್ದ ಮನೆಗಳ ಮುಂಭಾಗದಲ್ಲಿರುವ ನೆಲಗಟ್ಟಿನೊಳಗೆ ತೂರಿಸಲಾದ ಈ ತಡೆಗಳು, ನಾಜಿ ಕಿರುಕುಳದ ಬಲಿಪಶುಗಳ ಕಡೆಗೆ ಗಮನವನ್ನು ಸೆಳೆಯುವ ಉದ್ದೇಶವನ್ನು ಹೊಂದಿದ್ದವು.[೭೫]

ಸರ್ಕಾರ

ಬದಲಾಯಿಸಿ
 
ಪುರಭವನ (ಮುಂಭಾಗದ ನೋಟ)

ಹ್ಯಾಂಬರ್ಗ್ ನಗರವು 16 ಜರ್ಮನ್‌‌ ಸಂಸ್ಥಾನಗಳ ಪೈಕಿ ಒಂದೆನಿಸಿಕೊಂಡಿದೆ; ಆದ್ದರಿಂದ ಹ್ಯಾಂಬರ್ಗ್‌‌ನ ಮಹಾಪೌರನ ಕಚೇರಿಯು ನಗರದ ಓರ್ವ ಮಹಾಪೌರನ ಪಾತ್ರಕ್ಕಿಂತ ಓರ್ವ ಮಂತ್ರಿ-ಅಧ್ಯಕ್ಷನ ಪಾತ್ರಕ್ಕೆ ಹೆಚ್ಚು ಅನುರೂಪವಾಗಿದೆ. ಒಂದು ಜರ್ಮನ್‌‌ ಸಂಸ್ಥಾನದ ಸರ್ಕಾರವಾಗಿ, ಇದು ಸಾರ್ವಜನಿಕ ಶಿಕ್ಷಣ, ತಿದ್ದುಪಡಿಯ ಸಂಸ್ಥೆಗಳು ಮತ್ತು ಸಾರ್ವಜನಿಕ ಸುರಕ್ಷತೆಯಂಥ ವಲಯಗಳಿಗೆ ಹೊಣೆಗಾರನಾಗಿದೆ; ಒಂದು ಪುರಸಭೆಯಾಗಿ ಇದು ಗ್ರಂಥಾಲಯಗಳು, ವಿನೋದ-ವಿಹಾರದ ಸೌಕರ್ಯಗಳು, ನಿರ್ಮಲೀಕರಣ, ನೀರು ಸರಬರಾಜು ಮತ್ತು ಜನಕಲ್ಯಾಣ ಸೇವೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಹೊಣೆಗಾರನಾಗಿದೆ.

1897ರಿಂದಲೂ, ಹ್ಯಾಂಬರ್ಗ್ ರಾಥೌಸ್‌ ಎಂಬುದು ಸರ್ಕಾರದ ಕ್ಷೇತ್ರವಾಗಿದ್ದು, ಮಹಾಪೌರನ ಕಚೇರಿ, ಸೆನೆಟ್‌ಗೆ ಮೀಸಲಾಗಿರುವ ಸಮಾವೇಶದ ಕೊಠಡಿ ಮತ್ತು ಹ್ಯಾಂಬರ್ಗ್ ಸಂಸತ್ತಿಗೆ ಮೀಸಲಾಗಿರುವ ಸದನವನ್ನು ಇದು ಒಳಗೊಂಡಿದೆ.[೭೬] 2008ರ ವೇಳೆಗೆ ಇದ್ದಂತೆ, ಕ್ರಿಸ್ಟೋಫ್‌‌ ಅಹ್ಲ್‌ಹೌಸ್‌[೭೭] ಎಂಬಾತ ಹ್ಯಾಂಬರ್ಗ್‌ನ ಮಹಾಪೌರನಾಗಿದ್ದ; ಈತ ಜರ್ಮನಿಯ ಮೊದಲ ಸಂಸ್ಥಾನ-ವ್ಯಾಪಿ "ಕಪ್ಪು-ಹಸಿರು" ಒಕ್ಕೂಟದಲ್ಲಿ ಆಡಳಿತ ನಡೆಸಿದ. ಅಲಯೆನ್ಸ್‌ '90/ದಿ ಗ್ರೀನ್ಸ್‌ ಪಕ್ಷಕ್ಕೆ ಸಂಬಂಧಿಸಿದ ಹ್ಯಾಂಬರ್ಗ್‌‌ನ ಪ್ರಾದೇಶಿಕ ವಿಭಾಗಗಳಾದ, ಸಂಪ್ರದಾಯಶೀಲ CDU ಮತ್ತು ಪರ್ಯಾಯ GALನ್ನು ಈ ಒಕ್ಕೂಟವು ಒಳಗೊಂಡಿತ್ತು.[೭೮]

ಆರ್ಥಿಕತೆ

ಬದಲಾಯಿಸಿ
 
ಕಾಮರ್ಜ್‌ಬ್ಯಾಂಕ್‌ ಏಟ್ರಿಯಂ

2007ರ ಒಟ್ಟಾರೆ ದೇಶೀಯ ಉತ್ಪನ್ನವು (ಗ್ರಾಸ್‌ ಡೊಮೆಸ್ಟಿಕ್‌ ಪ್ರಾಡಕ್ಟ್‌‌-GDP) 88.9 ಶತಕೋಟಿ €ನಷ್ಟಿತ್ತು.[೭೯] ತಲಾ ವ್ಯಕ್ತಿಗೆ 50,000 €ನಷ್ಟಿರುವ GDPಯನ್ನು ನಗರವು ಹೊಂದಿದ್ದು, ಇದು ಜರ್ಮನಿಯಲ್ಲಿ ಅತಿಹೆಚ್ಚಿನ GDPಯಾಗಿದೆ, ಮತ್ತು ತುಲನಾತ್ಮಕವಾಗಿ ಹೆಚ್ಚಿರುವ ಒಂದು ಉದ್ಯೋಗದ ಪ್ರಮಾಣವನ್ನು ನಗರವು ಹೊಂದಿದೆ. 120,000ಕ್ಕೂ ಹೆಚ್ಚಿನ ವ್ಯವಹಾರದ ಅಸ್ತಿತ್ವಗಳಲ್ಲಿ 88 ಪ್ರತಿಶತದಷ್ಟು ಕಾರ್ಯನಿರತ-ವಯೋಮಾನದ ಜನಸಮುದಾಯವು ಉದ್ಯೋಗದಲ್ಲಿರುವುದು ಇದಕ್ಕೆ ಪುಷ್ಟಿನೀಡುವಂತಿದೆ.[೮೦] 2007ರಲ್ಲಿ, ಉದ್ಯೋಗಿಗಳ ಸರಾಸರಿ ಆದಾಯವು 30,937 €ನಷ್ಟಿತ್ತು.[೭೯]

ಹ್ಯಾಂಬರ್ಗ್‌‌ನ ಬಂದರು ಹ್ಯಾಂಬರ್ಗ್‌‌ಗೆ ಸಂಬಂಧಿಸಿದ ಅತ್ಯಂತ ಗಮನಾರ್ಹ ಆರ್ಥಿಕ ಘಟಕವಾಗಿದ್ದು, ಯುರೋಪ್‌ನಲ್ಲಿ ರೋಟರ್‌ಡ್ಯಾಮ್‌‌ನ ನಂತರದಲ್ಲಿನ 2ನೇ ಶ್ರೇಯಾಂಕವನ್ನು ಪಡೆದಿದೆ. ಅಷ್ಟೇ ಅಲ್ಲ, 2007ರಲ್ಲಿ 9.8 million twenty-foot equivalent units (TEU)ಗಳಷ್ಟು ಸರಕು ಮತ್ತು 134 ದಶಲಕ್ಷ ಟನ್ನುಗಳಷ್ಟು ಸಾಮಾನು-ಸರಂಜಾಮುಗಳ ಯಾನಾಂತರಣಗಳನ್ನು ಮಾಡುವುದರೊಂದಿಗೆ, ವಿಶ್ವಾದ್ಯಂತದ ವ್ಯವಹಾರದಲ್ಲಿ 9ನೇ ಸ್ಥಾನವನ್ನು ಪಡೆದಿದೆ.[೮೧] ಜರ್ಮನ್‌‌ ಪುನರೇಕೀಕರಣದ ನಂತರ, ತನ್ನ ಒಳನಾಡಿನ ಪೂರ್ವದ ಭಾಗವನ್ನು ಹ್ಯಾಂಬರ್ಗ್ ವಶಪಡಿಸಿಕೊಂಡಿತು; ತನ್ಮೂಲಕ ಅದು ನಿಸ್ಸಂಶಯವಾಗಿ ಯುರೋಪ್‌ನಲ್ಲಿನ ಅತಿವೇಗವಾಗಿ-ಬೆಳೆಯುತ್ತಿರುವ ಬಂದರು ಎನಿಸಿಕೊಂಡಿತು.[ಸೂಕ್ತ ಉಲ್ಲೇಖನ ಬೇಕು] ಈ ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದೂತಾವಾಸಗಳಿರುವುದಕ್ಕೆ ಅಂತರರಾಷ್ಟ್ರೀಯ ವ್ಯಾಪಾರವೂ ಕಾರಣವಾಗಿದೆ. ಎಲ್ಬೆ ನದಿಯ ಮೇಲಕ್ಕೆ ಅಥವಾ ಮೂಲದವರೆಗೆ 68 miles (110 km)ನಷ್ಟು ದೂರದಲ್ಲಿ ಈ ನಗರವು ನೆಲೆಗೊಂಡಿದೆಯಾದರೂ, ದೊಡ್ಡ ಸಾಗರ-ಗಾಮಿ ಹಡಗುಗಳನ್ನು ನಿರ್ವಹಿಸುವಲ್ಲಿನ ಇದರ ಸಾಮರ್ಥ್ಯದಿಂದಾಗಿ ಇದು ಒಂದು ಸಮುದ್ರ ಬಂದರು ಎಂಬುದಾಗಿ ಪರಿಗಣಿಸಲ್ಪಟ್ಟಿದೆ.[೮೨]

 
ಡೆರ್‌‌ ಸ್ಪೀಗೆಲ್‌‌ ಕೇಂದ್ರಕಾರ್ಯಾಲಯಗಳು

ಸಿಯಾಟಲ್‌ ಮತ್ತು ಟೌಲೌಸ್‌ ಜೊತೆಯಲ್ಲಿ ಹ್ಯಾಂಬರ್ಗ್ ನಗರವು ನಾಗರಿಕ ಅಂತರಿಕ್ಷಯಾನ ವಿಜ್ಞಾನ ಉದ್ಯಮದ ಒಂದು ಪ್ರಮುಖ ತಾಣವೆನಿಸಿಕೊಂಡಿದೆ. ಫಿಂಕೆನ್‌ವೆರ್ಡರ್‌ನಲ್ಲಿ ಒಂದು ಜೋಡಣಾ ಘಟಕವನ್ನು ಹೊಂದಿರುವ ಏರ್‌ಬಸ್‌ ಕಂಪನಿಯು 13,000ಕ್ಕೂ ಹೆಚ್ಚಿನ ಜನರನ್ನು ನೇಮಿಸಿಕೊಂಡಿದೆ.[೮೩]

ಉಕ್ಕು‌, ಅಲ್ಯುಮೀನಿಯಂ, ತಾಮ್ರದ ಉತ್ಪಾದನೆ ಹಾಗೂ ಬ್ಲೋಮ್‌‌ + ವಾಸ್‌‌ನಂಥ ಹಲವಾರು ಹಡಗಿನ ಅಂಗಳಗಳ ರೂಪಿಸುವಿಕೆಯು ಇಲ್ಲಿನ ಭಾರೀ ಕೈಗಾರಿಕೆಯಲ್ಲಿ ಸೇರಿದೆ.[ಸೂಕ್ತ ಉಲ್ಲೇಖನ ಬೇಕು]

ಮಾಧ್ಯಮಗಳು

ಬದಲಾಯಿಸಿ

ಮಾಧ್ಯಮಗಳ ವ್ಯವಹಾರದ ಅಸ್ತಿತ್ವಗಳು 70,000ಕ್ಕೂ ಹೆಚ್ಚಿನ ಜನರನ್ನು ನೇಮಿಸಿಕೊಂಡಿವೆ.[೮೪] NDR ಫರ್ನ್‌ಸೆಹೆನ್‌‌ ದೂರದರ್ಶನ ಕೇಂದ್ರವನ್ನು ಒಳಗೊಂಡಿರುವ ನೋರ್ಡ್‌ಡ್ಯೂಷರ್‌ ರಂಡ್‌ಫಂಕ್‌‌ ಹ್ಯಾಂಬರ್ಗ್‌‌ನಲ್ಲಿ ತನ್ನ ಮೂಲವನ್ನು ಹೊಂದಿದೆ; ಇದೇ ರೀತಿಯಲ್ಲಿ, ಹ್ಯಾಂಬರ್ಗ್ 1 ಎಂಬ ವಾಣಿಜ್ಯ ದೂರದರ್ಶನ ಕೇಂದ್ರ, ಬೈಬಲ್‌ TV ಎಂಬ ಕ್ರೈಸ್ತ ದೂರದರ್ಶನ ಕೇಂದ್ರ ಮತ್ತು ಟೈಡ್‌ TV ಎಂಬ ನಾಗರಿಕ ಮಾಧ್ಯಮಗಳ ತಾಣ ಇವೇ ಮೊದಲಾದವೂ ಇಲ್ಲಿ ನೆಲೆಗೊಂಡಿವೆ. ರೇಡಿಯೋ ಹ್ಯಾಂಬರ್ಗ್‌‌ನಂಥ ಪ್ರಾದೇಶಿಕ ರೇಡಿಯೋ ಕೇಂದ್ರಗಳೂ ಇಲ್ಲಿವೆ. ಜರ್ಮನಿಯ ಕೆಲವೊಂದು ಅತಿದೊಡ್ಡ ಪ್ರಕಾಶನಾ ಕಂಪನಿಗಳು ಈ ನಗರದಲ್ಲಿ ನೆಲೆಗೊಂಡಿವೆ. ಅವುಗಳೆಂದರೆ: ಆಕ್ಸೆಲ್‌ ಸ್ಪ್ರಿಂಗರ್‌ AG, ಗ್ರೂನರ್‌‌ + ಜಹ್ರ್‌‌, ಬೌವೆರ್‌ ಮೀಡಿಯಾ ಗ್ರೂಪ್‌. ಡೆರ್‌‌ ಸ್ಪೀಗೆಲ್‌‌ ಮತ್ತು ಡೈ ಜೀಟ್‌‌‌ ನಂಥ ಅನೇಕ ರಾಷ್ಟ್ರೀಯ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳು, ಫೈನಾನ್ಷಿಯಲ್‌ ಟೈಮ್ಸ್‌ ಡ್ಯೂಷ್‌ಲೆಂಡ್‌‌‌‌ ನಂಥ ಕೆಲವೊಂದು ವಿಶೇಷಾಸಕ್ತಿಯ ವೃತ್ತಪತ್ರಿಕೆಗಳು ಹ್ಯಾಂಬರ್ಗ್‌‌ನಲ್ಲಿ ರೂಪಿಸಲ್ಪಡುತ್ತವೆ. ಹ್ಯಾಂಬರ್ಗರ್‌‌ ಅಬೆಂಡ್‌ಬ್ಲಾಟ್‌ ಮತ್ತು ಹ್ಯಾಂಬರ್ಗರ್‌‌ ಮೋರ್ಗನ್‌ಪೋಸ್ಟ್‌ ಎಂಬ ವೃತ್ತಪತ್ರಿಕೆಗಳು ಒಂದು ದೊಡ್ಡ ಪ್ರಸರಣವನ್ನು ಹೊಂದಿರುವ ಪ್ರಾದೇಶಿಕ ದೈನಿಕ ವೃತ್ತಪತ್ರಿಕೆಗಳಾಗಿವೆ. ವಾರ್ನರ್‌ ಬ್ರದರ್ಸ್‌‌ ರೆಕಾರ್ಡ್ಸ್‌ ಜರ್ಮನಿಯಂಥ ಸಂಗೀತ ಪ್ರಕಾಶಕರು, ಮತ್ತು ಅಡೋಬ್‌ ಸಿಸ್ಟಮ್ಸ್‌ ಹಾಗೂ ಗೂಗಲ್‌‌ ಜರ್ಮನಿಯಂಥ ICT ಸಂಸ್ಥೆಗಳೂ ಇಲ್ಲಿ ನೆಲೆಗೊಂಡಿವೆ. ವೆಬ್‌‌ ಆಯೋಜಿಸುವಿಕೆಗೆ ಸಂಬಂಧಿಸಿದ ಓರ್ವ ಜರ್ಮನ್‌‌ ಸೇವಾದಾರ ಸಂಸ್ಥೆಯಾದ ಜಿಮ್ಡೊ ಜಿಎಂಬಿಎಚ್‌ ಹ್ಯಾಂಬರ್ಗ್‌‌ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.[೮೫] ಅಲೈಸ್‌ ಬ್ರಾಂಡ್‌ ಅಡಿಯಲ್ಲಿ DSL ಅಂತರಜಾಲ ಸಂಪರ್ಕವನ್ನು ಮಾರಾಟಮಾಡುವ ಹಾನ್ಸ್‌ನೆಟ್‌ ಎಂಬ ಅಂತರಜಾಲ ಮತ್ತು ದೂರಸಂಪರ್ಕಗಳ ಕಂಪನಿಯು ತನ್ನ ಕೇಂದ್ರಕಾರ್ಯಾಲಯವನ್ನು ಹ್ಯಾಂಬರ್ಗ್‌‌ನಲ್ಲಿ ಹೊಂದಿದೆ.

ಜೇಮ್ಸ್‌ ಬಾಂಡ್‌ ಸರಣಿಗೆ ಸೇರಿದ ಟುಮಾರೊ ನೆವರ್‌ ಡೈಸ್‌ ಎಂಬ ಚಲನಚಿತ್ರಕ್ಕೆ ಸಂಬಂಧಿಸಿದಂತಿರುವ ಚಿತ್ರೀಕರಣದ ತಾಣಗಳ ಪೈಕಿ ಹ್ಯಾಂಬರ್ಗ್ ಒಂದಾಗಿತ್ತು. ರೀಪೆರ್‌ಬಾಹ್ನ್‌‌ ಬೀದಿಯು 1994ರಲ್ಲಿ ಬಂದ ಬ್ಯಾಕ್‌ಬೀಟ್‌ ಎಂಬ ಬೀಟಲ್ಸ್‌ ಚಲನಚಿತ್ರವೂ ಸೇರಿದಂತೆ ಅನೇಕ ಸಜ್ಜಿಕೆಗಳಿಗೆ ಸಂಬಂಧಿಸಿದ ತಾಣವಾಗಿತ್ತು.[೮೬]

ಜನಸಂಖ್ಯಾಶಾಸ್ತ್ರ

ಬದಲಾಯಿಸಿ
 
2007ರ 33ನೇ G8 ಶೃಂಗಸಭೆಯ ಸಂದರ್ಭದಲ್ಲಿನ ಪ್ರಾತ್ಯಕ್ಷಿಕೆ

2006ರ ಡಿಸೆಂಬರ್‌‌ 31ರ ವೇಳೆಗೆ ನೋಂದಾಯಿಸಲ್ಪಟ್ಟಂತೆ ಹ್ಯಾಂಬರ್ಗ್‌‌ನಲ್ಲಿ 1,754,182ರಷ್ಟು ಜನರು ವಾಸಿಸುತ್ತಿದ್ದು (1990ರಲ್ಲಿದ್ದ 1,652,363ರಷ್ಟು ಸಂಖ್ಯೆಯಿಂದ ಆದ ಏರಿಕೆಯಿದು), ಅವರು ವ್ಯಾಪಿಸಿದ್ದ ಪ್ರದೇಶದ ಒಂದು ವಿಸ್ತೀರ್ಣವು 755.3 km2 (291.6 sq mi)ನಷ್ಟಿತ್ತು. ಜನಸಂಖ್ಯೆಯ ದಟ್ಟಣೆಯು 2,322/km2 (6,010/sq mi)ನಷ್ಟಿತ್ತು.[೮೭] ಹ್ಯಾಂಬರ್ಗ್ ವಲಯದ ಮಹಾನಗರದ ಪ್ರದೇಶವು (ಹ್ಯಾಂಬರ್ಗ್ ಮಹಾನಗರದ ವಲಯ) ಸುಮಾರು 4.3 ದಶಲಕ್ಷದಷ್ಟು ಮಂದಿಗೆ ನೆಲೆಯಾಗಿದ್ದು, ಅವರು 19,000 km2 (7,300 sq mi)ನಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.[೮೮]

ಹ್ಯಾಂಬರ್ಗ್‌‌ನಲ್ಲಿ 856,132 ಪುರುಷರು ಹಾಗೂ 898,050 ಸ್ತ್ರೀಯರಿದ್ದರು. ಅಲ್ಲಿ ಪ್ರತಿ 1,000 ಪುರುಷರಿಗೆ 1,049 ಸ್ತ್ರೀಯರಿದ್ದರು. 2006ರಲ್ಲಿ, ಹ್ಯಾಂಬರ್ಗ್‌‌ನಲ್ಲಿ 16,089 ಜನನಗಳು (ಇವುಗಳ ಪೈಕಿ 33.1%ನಷ್ಟು ಭಾಗವು ಅವಿವಾಹಿತ ಮಹಿಳೆಯರಿಗೆ ಆದುದಾಗಿತ್ತು), 6,921 ಮದುವೆಗಳು ಮತ್ತು 4,583 ವಿಚ್ಛೇದನಗಳು ಸಂಭವಿಸಿದ್ದವು. ನಗರದಲ್ಲಿ ಹಬ್ಬಿದ್ದ ಜನಸಂಖ್ಯೆಯ ಪೈಕಿ, 18 ವರ್ಷ ವಯಸ್ಸಿಗಿಂತ ಕಡಿಮೆಯಿದ್ದವರದ್ದು 15.7%ನಷ್ಟು ಭಾಗವಾಗಿದ್ದರೆ, 65 ವರ್ಷಗಳಷ್ಟು ವಯೋಮಾನದವರು ಮತ್ತು ಅವರಿಗಿಂತ ವಯಸ್ಸಾದವರದ್ದು 18.8%ನಷ್ಟು ಭಾಗವಾಗಿತ್ತು.[೮೭] 28%ನಷ್ಟು (487.000)[೮೯] ಜನಸಂಖ್ಯೆಯು ಒಂದು ವಲಸೆಯ ಹಿನ್ನೆಲೆಯನ್ನು ಹೊಂದಿದ್ದು, ಇವರಲ್ಲಿ ಬಹುತೇಕವಾಗಿ ಟರ್ಕಿ, ಪೋಲೆಂಡ್‌, ರಷ್ಯಾ, ಆಫ್ಘಾನಿಸ್ತಾನ್‌, ಕಜಖ್‌ಸ್ತಾನ್‌, ಇರಾನ್‌ ಅಥವಾ ಘಾನಾದಂಥ ದೇಶಗಳಿಂದ ಬಂದವರು ಸೇರಿದ್ದಾರೆ.

1999ರಲ್ಲಿ, ಅಲ್ಲಿ 910,304 ಕುಟುಂಬಗಳು ನೆಲೆಗೊಂಡಿದ್ದವು. ಅವುಗಳ ಪೈಕಿ 18.9%ನಷ್ಟು ಕುಟುಂಬಗಳು 18 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದ ಮಕ್ಕಳನ್ನು ಹೊಂದಿದ್ದವು; ಉಳಿದೆಲ್ಲಾ 47.9%ನಷ್ಟು ಕುಟುಂಬಗಳು ಏಕವ್ಯಕ್ತಿಗಳನ್ನು ಒಳಗೊಂಡಿದ್ದವು. ಕುಟುಂಬದ ಸರಾಸರಿ ಗಾತ್ರವು 1.9ನಷ್ಟಿತ್ತು.[೯೦]

ಚಿತ್ರ:StMichaelHamburg.jpg
ಹ್ಯಾಂಬರ್ಗ್‌‌‌ನಲ್ಲಿರುವ ಆರ್ಚಾಂಗೆಲ್‌ ಮೈಕೇಲ್‌‌ನ ಪ್ರತಿಮೆ

ಹ್ಯಾಂಬರ್ಗ್‌‌ನ ಜನಸಂಖ್ಯೆಯು ಸುಮಾರು 30.7%ನಷ್ಟು[೯೧] ಭಾಗವು ನಾರ್ತ್‌ ಎಲ್ಬಿಯನ್‌ ಎವಾಂಜೆಲಿಕಲ್‌ ಲುಥೆರಾನ್‌ ಚರ್ಚ್‌‌‌ಗೆ ಸೇರಿದರೆ, 10.2%ನಷ್ಟು ಭಾಗವು ರೋಮನ್‌ ಕ್ಯಾಥಲಿಕ್‌‌ ಚರ್ಚ್‌‌‌ಗೆ ಸೇರುತ್ತದೆ.[೯೨] ವಲಸೆಯ ಕಾರಣದಿಂದಾಗಿ, ಹ್ಯಾಂಬರ್ಗ್ ನಗರವು ಒಂದು ದೊಡ್ಡ ಮುಸ್ಲಿಂ ಸಮುದಾಯವನ್ನು ಹೊಂದಿದೆ. ಮುಸ್ಲಿಮರ ನಿಖರವಾದ ಸಂಖ್ಯೆಯು ತಿಳಿದಿಲ್ಲವಾದರೂ, ಹ್ಯಾಂಬರ್ಗ್-ಮಿಟ್ಟೆ ಒಂದರಲ್ಲೇ ಕನಿಷ್ಟಪಕ್ಷ 90,000 ಮಂದಿ ಮುಸ್ಲಿಮರಿದ್ದಾರೆ[೯೩]. ಜನಸಂಖ್ಯೆಯ ಉಳಿದ ಭಾಗವು ಚಿಕ್ಕದಾದ ಕ್ರೈಸ್ತ ಚರ್ಚುಗಳ ಸದಸ್ಯರು, ಬೌದ್ಧ ಧರ್ಮೀಯರು,[೯೪] ಸಿಖ್‌ ಜನಾಂಗದವರು, ಹಿಂದೂಗಳು,[೯೫] ಯೆಹೂದಿಗಳು, ಮತ್ತು ಯಾವುದೇ ಧಾರ್ಮಿಕ ನಂಬಿಕೆಗೆ ಸಂಬಂಧಪಟ್ಟಿಲ್ಲದವರನ್ನು ಒಳಗೊಂಡಿದೆ. ಹ್ಯಾಂಬರ್ಗ್ ನಗರವು ನಾರ್ತ್‌ ಎಲ್ಬಿಯನ್‌ ಎವಾಂಜೆಲಿಕಲ್‌ ಲುಥೆರಾನ್‌ ಚರ್ಚ್‌ನ ಮೂರು ಬಿಷಪ್‌ಗಳ ಪೈಕಿ ಒಬ್ಬರ ಕ್ಷೇತ್ರವಾಗಿದೆ ಮತ್ತು ಹ್ಯಾಂಬರ್ಗ್‌‌ನ ರೋಮನ್‌ ಕ್ಯಾಥಲಿಕ್‌‌ ಆರ್ಚ್‌ ಬಿಷಪ್‌ನ ಆಡಳಿತಕ್ಕೊಳಪಟ್ಟ ಪ್ರಾಂತದ ಕ್ಷೇತ್ರವಾಗಿದೆ. ಇಸ್ಲಾಮಿಕ್‌ ಸೆಂಟರ್‌ ಹ್ಯಾಂಬರ್ಗ್ ಸೇರಿದಂತೆ ಅಲ್ಲಿ ಲವಾರು ಮಸೀದಿಗಳಿವೆ ಮತ್ತು ಬೆಳೆಯುತ್ತಿರುವ ಒಂದು ಯೆಹೂದಿಗಳ ಸಮುದಾಯವಿದೆ.[೯೬]

ಮೂಲಭೂತ ಸೌಕರ್ಯ

ಬದಲಾಯಿಸಿ

ಆರೋಗ್ಯ ವ್ಯವಸ್ಥೆಗಳು

ಬದಲಾಯಿಸಿ

ಹ್ಯಾಂಬರ್ಗ್ 54 ಆಸ್ಪತ್ರೆಗಳನ್ನು ಹೊಂದಿದೆ. ಸುಮಾರು 1300 ಹಾಸಿಗೆಗಳನ್ನು ಒಳಗೊಂಡಿರುವ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ ಹ್ಯಾಂಬರ್ಗ್-ಎಪ್ಪೆನ್‌ಡಾರ್ಫ್‌, ಒಂದು ದೊಡ್ಡ ವೈದ್ಯಕೀಯ ಶಾಲೆಗೆ ನೆಲೆಯಾಗಿದೆ. ಅಲ್ಲಿ ಚಿಕ್ಕದಾದ ಖಾಸಗಿ ಆಸ್ಪತ್ರೆಗಳೂ ಇವೆ. 2007ರ ಡಿಸೆಂಬರ್‌‌ 31ರ ವೇಳೆಗೆ, ಹ್ಯಾಂಬರ್ಗ್‌ನಲ್ಲಿ ಶುದ್ಧಾಂಗವಾಗಿ ಸುಮಾರು 12,600ರಷ್ಟು ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳಿದ್ದವು.[೯೭] 2006ರಲ್ಲಿ ಈ ನಗರವು, ಮಕ್ಕಳಿಗಾಗಿ ಮೀಸಲಾದ 1,061 ಹಗಲು-ಪಾಲನೆ ಕೇಂದ್ರಗಳು, ಖಾಸಗಿ ವೃತ್ತಿಯಲ್ಲಿರುವ 3,841 ಮಂದಿ ವೈದ್ಯರು ಹಾಗೂ 462 ಔಷಧದಂಗಡಿಗಳನ್ನು ಹೊಂದಿತ್ತು.[೯೦]

ಸಾರಿಗೆ

ಬದಲಾಯಿಸಿ
 
ಎಲ್ಬೆ ನದಿಯ ಮೇಲಿನ ಹ್ಯಾಂಬರ್ಗ್‌‌ನ ಬಂದರು
 
1900ರಲ್ಲಿದ್ದಂತೆ ಲ್ಯಾಂಡಂಗ್ಸ್‌ಬ್ರೂಕೆನ್‌‌
 
ನ್ಯೂಯೆ ಮತ್ತು ಫ್ರೀಹ್ಯಾಫೆನ್‌‌-ಎಲ್‌ಬ್ರೂಕ್‌‌

ಹ್ಯಾಂಬರ್ಗ್ ನಗರವು ಜರ್ಮನಿಯಲ್ಲಿನ ಒಂದು ಪ್ರಮುಖ ಸಾರಿಗೆ ಕೇಂದ್ರವಾಗಿದೆ. ಹ್ಯಾಂಬರ್ಗ್ ನಗರಕ್ಕೆ ನಾಲ್ಕು ಆಟಬಾನ್‌‌‌‌‌ಗಳ (ಮೋಟಾರು ಮಾರ್ಗಗಳು) ಸಂಪರ್ಕವನ್ನು ಕಲ್ಪಿಸಲಾಗಿದೆ ಮತ್ತು ಇದು ಸ್ಕ್ಯಾಂಡಿನೇವಿಯಾದೆಡೆಗೆ ಸಾಗುವ ರೈಲುಮಾರ್ಗದ ಮೇಲಿನ ಅತ್ಯಂತ ಪ್ರಮುಖ ಕೂಡುದಾರಿಯಾಗಿದೆ.

ಸೇತುವೆಗಳು ಮತ್ತು ಸುರಂಗ ಮಾರ್ಗಗಳು ನಗರದ ಉತ್ತರದ ಮತ್ತು ದಕ್ಷಿಣದ ಭಾಗಗಳನ್ನು ಸಂಪರ್ಕಿಸುತ್ತವೆ; ಈಗ ಒಂದು ಪ್ರಮುಖ ಪ್ರವಾಸೀ ಪ್ರೇಕ್ಷಣೀಯ ಸ್ಥಳವಾಗಿರುವ ಹಳೆಯ ಎಲ್ಬೆ ಸುರಂಗ ಮಾರ್ಗ (ಆಲ್ಟರ್‌ ಎಲ್ಬ್‌ಟನಲ್‌ ), ಮತ್ತು ಮೋಟಾರು ಮಾರ್ಗವೊಂದರ ಒಂದು ಅಡ್ಡಹಾಯುವ ತಾಣವಾದ ಎಲ್ಬೆ ಸುರಂಗ ಮಾರ್ಗ (ಎಲ್ಬ್‌ಟನಲ್‌‌ ) ಇದಕ್ಕೆ ನಿದರ್ಶನಗಳಾಗಿವೆ.[೯೮]

ಹ್ಯಾಂಬರ್ಗ್ ವಿಮಾನ ನಿಲ್ದಾಣವು ಈಗಲೂ ಕಾರ್ಯನಿರ್ವಹಣೆಯಲ್ಲಿರುವ ಜರ್ಮನಿಯಲ್ಲಿನ ಅತಿ ಹಳೆಯ ವಿಮಾನ ನಿಲ್ದಾಣವಾಗಿದೆ.[೯೯][೧೦೦] ಚಿಕ್ಕದಾಗಿರುವ ಹ್ಯಾಂಬರ್ಗ್ ಫಿಂಕೆನ್‌ವೆರ್ಡರ್‌‌ ವಿಮಾನ ನಿಲ್ದಾಣವೂ ಸಹ ಇಲ್ಲಿದ್ದು, ಇದನ್ನು ಏರ್‌ಬಸ್‌ ಕಂಪನಿಗೆ ಸಂಬಂಧಿಸಿದ ಒಂದು ಕಂಪನಿ ವಿಮಾನ ನಿಲ್ದಾಣವಾಗಿ ಮಾತ್ರವೇ ಬಳಸಲಾಗುತ್ತದೆ. ಕೆಲವೊಂದು ವಿಮಾನಯಾನ ಸಂಸ್ಥೆಗಳು ಲ್ಯೂಬೆಕ್‌‌ನಲ್ಲಿರುವ ಲ್ಯೂಬೆಕ್‌‌ ವಿಮಾನ ನಿಲ್ದಾಣವನ್ನು ಹ್ಯಾಂಬರ್ಗ್‌‌ಗೆ ಸೇವೆ ಸಲ್ಲಿಸುತ್ತಿರುವ ರೀತಿಯಲ್ಲಿ ಪ್ರಚಾರ ಮಾಡುತ್ತವೆ.[೧೦೧]

ಹ್ಯಾಂಬರ್ಗ್‌‌ನ ಪರವಾನಗಿ ಫಲಕದ (ಲೈಸೆನ್ಸ್‌ ಪ್ಲೇಟ್‌‌) ಪೂರ್ವಪ್ರತ್ಯಯವನ್ನು HH (ಹಾನ್ಸ್‌ಟಾಟ್‌ ಹ್ಯಾಂಬರ್ಗ್, ಇಂಗ್ಲಿಷ್‌: ಹಾನ್ಸಿಯಾಟಿಕ್‌ ಸಿಟಿ ಆಫ್‌ ಹ್ಯಾಂಬರ್ಗ್) ಎಂಬುದಾಗಿ ನಿಗದಿಗೊಳಿಸಲಾಗಿದೆ; ಬರ್ಲಿನ್‌‌ಗಾಗಿ B ಅಕ್ಷರವನ್ನು ಅಥವಾ ಮ್ಯೂನಿಕ್‌ಗಾಗಿ M ಅಕ್ಷರವನ್ನು ಬಳಸುವಂತೆ, ದೊಡ್ಡ ನಗರಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಬಳಸಲಾಗುವ ಕೇವಲ ಏಕ-ಅಕ್ಷರವು ಇಲ್ಲಿ ಕಂಡುಬರದಿರುವುದು ಒಂದು ಗಮನಾರ್ಹ ಅಂಶವೆನ್ನಬಹುದು. ಅದರ ಬದಲಿಗೆ ಹ್ಯಾನೋವರ್‌‌ನಿಂದ "H" ಎಂಬ ಪೂರ್ವಪ್ರತ್ಯಯವು ಬಳಸಲ್ಪಡುತ್ತದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಬದಲಾಯಿಸಿ

ಸಾರಿಗೆ ಕಂಪನಿಗಳ ನಡುವಿನ ಒಂದು ಶುಲ್ಕ-ಸಂಗ್ರಹದ ಜಂಟಿ ವ್ಯವಹಾರದ ಆಧಾರದ ಮೇಲೆ, ರೈಲು, ಬಸ್ಸು ಮತ್ತು ಹಡಗುಗಳ ಮೂಲಕ ಇಲ್ಲಿನ ಸಾರ್ವಜನಿಕ ಸಾರಿಗೆಯು ಸಂಘಟಿಸಲ್ಪಡುತ್ತದೆ. ಈ ಹ್ಯಾಂಬರ್ಗರ್‌‌ ವೆರ್ಕೆಹ್ರ್‌‌ಸ್ವೆರ್ಬಂಡ್‌ ("ಹ್ಯಾಂಬರ್ಗ್ ಸಾಗಣೆ ಪ್ರಾಧಿಕಾರ") (HVV) ಸಂಸ್ಥೆಯಲ್ಲಿನ ಕಂಪನಿಯೊಂದರಿಂದ ಮಾರಲ್ಪಟ್ಟ ಟಿಕೆಟ್ಟುಗಳು, HVV ಕಂಪನಿಗಳ ಇತರ ಎಲ್ಲಾ ಸೇವೆಗಳ ವ್ಯಾಪ್ತಿಯಲ್ಲಿ ಸಿಂಧುವಾಗಿರುತ್ತವೆ. ಈ ಬಗೆಯ ಸೇವೆಯನ್ನು ನೀಡುವಲ್ಲಿ HVVಯು ವಿಶ್ವಾದ್ಯಂತದ ಮೊದಲ ಸಂಘಟನೆಯಾಗಿತ್ತು.[೧೦೨]

ರೈಲು

ನಗರದ ಉದ್ದಗಲಕ್ಕೂ ಹಬ್ಬಿಕೊಂಡಿರುವ ಸಾಮೂಹಿಕ ಸಾಗಣೆಯ ಒಂಬತ್ತು ರೈಲು ಮಾರ್ಗಗಳು, ಹ್ಯಾಂಬರ್ಗ್ ಸಾರ್ವಜನಿಕ ಸಾರಿಗೆಯ ಬೆನ್ನೆಲುಬಾಗಿವೆ. ಹ್ಯಾಂಬರ್ಗ್ S-ಬಾಹ್ನ್‌‌ (ಭಾರೀ ರೈಲುಹಾದಿ ವ್ಯವಸ್ಥೆ) ವ್ಯವಸ್ಥೆಯು ಆರು ಮಾರ್ಗಗಳನ್ನು ಒಳಗೊಂಡಿದೆ ಮತ್ತು ಹ್ಯಾಂಬರ್ಗ್ U-ಬಾಹ್ನ್‌‌ ವ್ಯವಸ್ಥೆಯು ಮೂರು ಮಾರ್ಗಗಳನ್ನು ಒಳಗೊಂಡಿದೆ. U-ಬಾಹ್ನ್‌‌ ಎಂಬುದು ಅಂಟರ್‌ಗ್ರಂಡ್‌ಬಾಹ್ನ್‌‌ (ಭೂಗತ ರೈಲುಹಾದಿ, ಒಂದು ಲಘು ರೈಲು-ವ್ಯವಸ್ಥೆ) ಎಂಬುದಕ್ಕಾಗಿರುವ ಒಂದು ಸಂಕ್ಷಿಪ್ತ ರೂಪವಾಗಿದೆ. 101 km (63 mi)ನಷ್ಟಿರುವ ನೆಲದಡಿಯ ಸುರಂಗಮಾರ್ಗದ ಪೈಕಿ ಸರಿಸುಮಾರಾಗಿ 41 km (25 mi)ನಷ್ಟು ಭಾಗವು ಭೂಗತ ಸ್ವರೂಪದಲ್ಲಿದೆ; ಬಹುತೇಕ ಪಥಗಳು ಒಡ್ಡುಗಳು, ಕಮಾನುಸಾಲಿನ ಸೇತುವೆಗಳ ಮೇಲಿವೆ ಅಥವಾ ನೆಲ ಮಟ್ಟದಲ್ಲಿವೆ. ವಯಸ್ಸಾದ ನಿವಾಸಿಗಳು ಸದರಿ ವ್ಯವಸ್ಥೆಯನ್ನು ಈಗಲೂ ಹೊಕ್‌ಬಾಹ್ನ್‌‌ (ಎತ್ತರಿಸಲಾದ ರೈಲುಹಾದಿ) ಎಂದೇ ಕರೆಯುತ್ತಾರೆ; ನೆಲದಡಿಯ ಸುರಂಗಮಾರ್ಗದ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಕಂಪನಿಯ ಹೆಸರು ಹ್ಯಾಂಬರ್ಗರ್‌‌ ಹೊಕ್‌ಬಾಹ್ನ್‌‌ ಎಂದಿರುವುದೂ ಇದಕ್ಕೆ ಕಾರಣ. AKN ರೈಲುಹಾದಿ ಎಂಬ ಮತ್ತೊಂದು ಭಾರೀ ರೈಲುಹಾದಿ ವ್ಯವಸ್ಥೆಯು ಸ್ಕ್ಲೆಸ್‌ವಿಗ್‌-ಹಾಲ್‌ಸ್ಟೀನ್‌ನಲ್ಲಿನ ಉಪನಗರಗಳನ್ನು ಹ್ಯಾಂಬರ್ಗ್‌‌ ನಗರಕ್ಕೆ ಸಂಪರ್ಕಿಸುತ್ತದೆ. ನಿರ್ದಿಷ್ಟ ಮಾರ್ಗಗಳ ಮೇಲೆ, ಡ್ಯೂಷೆ ಬಾಹ್ನ್‌‌ AG ಎಂಬ ಜರ್ಮನಿಯ ಪ್ರಮುಖ ರೈಲು ಕಂಪನಿಯ ಪ್ರಾದೇಶಿಕ ಟ್ರೇನುಗಳಲ್ಲಿ ಮತ್ತು ಪ್ರಾದೇಶಿಕ ಮೆಟ್ರೊನಾಮ್‌ ಟ್ರೇನುಗಳಲ್ಲಿ, ಒಂದು HVV ಸಾರ್ವಜನಿಕ ಸಾರಿಗೆ ಟಿಕೆಟ್ಟನ್ನು ಬಳಸಿಕೊಂಡೂ ಪ್ರಯಾಣಿಸಬಹುದಾಗಿದೆ. ಹ್ಯಾಂಬರ್ಗ್‌‌ನ ಕೇಂದ್ರಭಾಗದಲ್ಲಿರುವ ಮೂರು ದೊಡ್ಡದಾದ ನಿಲ್ದಾಣಗಳನ್ನು ಹೊರತುಪಡಿಸಿ, ನಗರದ ಒಳಪ್ರದೇಶದಲ್ಲಿ ಪ್ರಾದೇಶಿಕ ಟ್ರೇನುಗಳು ನಿಲ್ಲುವುದು ಅಪರೂಪವೆನ್ನಬಹುದು; ಆ ಮೂರು ದೊಡ್ಡದಾದ ನಿಲ್ದಾಣಗಳೆಂದರೆ: ಹ್ಯಾಂಬರ್ಗ್ ಪ್ರಧಾನ ನಿಲ್ದಾಣ, ಹ್ಯಾಂಬರ್ಗ್ ಡ್ಯಾಮ್‌ಟರ್‌‌ ನಿಲ್ದಾಣ, ಮತ್ತು ಹ್ಯಾಂಬರ್ಗ್-ಆಲ್ಟೋನಾ ನಿಲ್ದಾಣ. ಟ್ರಾಮ್‌ ಜಾಲವನ್ನು 1978ರಲ್ಲಿ ಮುಚ್ಚಲಾಯಿತು.

ಬಸ್ಸು

ರೈಲು ಜಾಲದಲ್ಲಿನ ಅಂತರಗಳನ್ನು 600ಕ್ಕೂ ಹೆಚ್ಚಿನ ಬಸ್ಸಿನ ಮಾರ್ಗಗಳು ತುಂಬಿಸುತ್ತವೆ; ಏಕ-ಅಂತಸ್ತಿನ, ಎರಡು-, ಮೂರು- ಮತ್ತು ನಾಲ್ಕು-ಅಚ್ಚುಗಳ ಡೀಸೆಲ್‌ ಬಸ್ಸುಗಳು ಈ ಸಂಚಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿವೆ ಎಂಬುದು ವಿಶೇಷ. ಹ್ಯಾಂಬರ್ಗ್ ನಗರವು ಟ್ರಾಮ್‌ಗಳು ಅಥವಾ ಟ್ರಾಲಿ-ಬಸ್ಸುಗಳನ್ನು ಹೊಂದಿಲ್ಲವಾದರೂ, ಪ್ರಾಯೋಗಿಕ ಸೇವೆಗಳನ್ನು ನಿರ್ವಹಿಸುತ್ತಿರುವ ಜಲಜನಕ-ಚಾಲಿತ ಬಸ್ಸುಗಳನ್ನು ಹೊಂದಿದೆ. ಈ ಬಸ್ಸುಗಳು ಕೆಲಸದ ಅವಧಿಗಳಲ್ಲಿ ಆಗಿಂದಾಗ್ಗೆ ಸಂಚರಿಸುತ್ತವೆ; ಕೆಲವೊಂದು ಬಸ್ಸುಗಳು ಕೆಲವೊಂದು ಮಾರ್ಗಗಳಲ್ಲಿ ಪ್ರತಿ 2 ನಿಮಿಷಗಳಿಗೊಮ್ಮೆ ಬರುತ್ತವೆ. ಉಪನಗರದ ಪ್ರದೇಶಗಳಲ್ಲಿ ಮತ್ತು ವಿಶೇಷ ವಾರದ ದಿನದಂದು ಇರುವ ರಾತ್ರಿ ಮಾರ್ಗಗಳಲ್ಲಿ, ಮಧ್ಯಂತರಗಳ ಅವಧಿಯು 30 ನಿಮಿಷಗಳವರೆಗೆ ಅಥವಾ ಅದಕ್ಕಿಂತ ದೀರ್ಘವಾಗಿ ಇರಬಹುದು.

ನದಿಯನ್ನು ಹಾಯುವ ವ್ಯವಸ್ಥೆಗಳು

ಎಲ್ಬೆ ನದಿಯ ಉದ್ದಕ್ಕೂ, ನದಿಯನ್ನು ಹಾಯುವ ವ್ಯವಸ್ಥೆಯ ಆರು ಮಾರ್ಗಗಳಿದ್ದು, ಅವನ್ನು HADAG ಕಂಪನಿಯು ನಿರ್ವಹಿಸುತ್ತದೆ. ಮುಖ್ಯವಾಗಿ ಹ್ಯಾಂಬರ್ಗ್ ನಾಗರಿಕರು ಮತ್ತು ಹಡಗುಕಟ್ಟೆಯ ಕೆಲಸಗಾರರಿಂದ ಈ ಮಾರ್ಗಗಳು ಬಳಸಲ್ಪಡುತ್ತದೆಯಾದರೂ, ದೃಶ್ಯವೀಕ್ಷಣೆಯ ಪ್ರವಾಸಗಳ ಉದ್ದೇಶಗಳಿಗಾಗಿಯೂ ಅವನ್ನು ಬಳಸಬಹುದಾಗಿದೆ.

ವಾಯುಯಾನ

"ಹ್ಯಾಂಬರ್ಗ್ ವಿಮಾನ ನಿಲ್ದಾಣ" (IATA: HAM, ICAO: EDDH) ಎಂಬ ಅಧಿಕೃತ ಹೆಸರನ್ನು ಹೊಂದಿರುವ, ಹ್ಯಾಂಬರ್ಗ್ ಫಹಲ್ಸ್‌ಬ್ಯೂಟೆಲ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಜರ್ಮನಿಯಲ್ಲಿನ ಐದನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ ಮತ್ತು 1912ರಲ್ಲಿ ಸ್ಥಾಪಿಸಲ್ಪಟ್ಟಿರುವ ಇದು ಜರ್ಮನಿಯಲ್ಲಿನ ಅತಿ ಹಳೆಯ ವಿಮಾನ ನಿಲ್ದಾಣವೆನಿಸಿಕೊಂಡಿದೆ. ನಗರ ಕೇಂದ್ರದಿಂದ ಇದು ಸುಮಾರು 5 ಮೈಲುಗಳಷ್ಟು ದೂರದಲ್ಲಿದೆ. ಸುಮಾರು 60 ವಿಮಾನಯಾನ ಸಂಸ್ಥೆಗಳು 125 ಗಮ್ಯಸ್ಥಾನದ ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಒದಗಿಸುತ್ತವೆ; ನ್ಯೂಯಾರ್ಕ್‌, ದುಬೈ, ಟೊರೊಂಟೋ ಮತ್ತು ಟೆಹರಾನ್‌ನಂಥ ಕೆಲವೊಂದು ಸುದೀರ್ಘ ಅಂತರದ ಗಮ್ಯಸ್ಥಾನಗಳಿಗೆ ಒದಗಿಸಲ್ಪಡುವ ಸೇವೆಗಳು ಇದರಲ್ಲಿ ಸೇರಿವೆ. ಲುಫ್ತಾನ್ಸಾ ಸಂಸ್ಥೆಯು ಪ್ರಧಾನ ಸಾಗಣೆಗಾರನಾಗಿದ್ದು, ಬಹುಪಾಲು ವಿಮಾನಗಳನ್ನು ತನ್ನ ತೆಕ್ಕೆಯಲ್ಲಿ ಅದು ಹೊಂದಿದೆ. ಇದರ ನಂತರದ ಸ್ಥಾನವನ್ನು ಏರ್‌‌ ಬರ್ಲಿನ್‌‌ ವಾಯುಯಾನ ಸಂಸ್ಥೆಯು ಹೊಂದಿದೆ. ಲುಫ್ತಾನ್ಸಾ ಸಂಸ್ಥೆಯು ತನ್ನ ಅತಿದೊಡ್ಡ ನಿರ್ವಹಣಾ ಸೌಕರ್ಯಗಳ ಪೈಕಿ ಒಂದನ್ನು ಹ್ಯಾಂಬರ್ಗ್ ವಿಮಾನ ನಿಲ್ದಾಣದಲ್ಲಿ ನಿರ್ವಹಿಸುತ್ತದೆ.

ಹ್ಯಾಂಬರ್ಗ್-ಫಿಂಕೆನ್‌ವೆರ್ಡರ್‌‌ (IATA: XFW, ICAO: EDHI) ಎಂಬುದು ಹ್ಯಾಂಬರ್ಗ್‌ನಲ್ಲಿರುವ ಎರಡನೇ ವಿಮಾನ ನಿಲ್ದಾಣವಾಗಿದೆ. ಇದು ನಗರ ಕೇಂದ್ರದಿಂದ ಸುಮಾರು 10 ಕಿ.ಮೀ.ಯಷ್ಟು ದೂರದಲ್ಲಿದೆ ಮತ್ತು ಏರ್‌ಬಸ್‌ ಸ್ಥಾವರಕ್ಕೆ ಸಂಬಂಧಿಸಿದಂತೆ ಇದೊಂದು ಸಾರ್ವಜನಿಕವಲ್ಲದ ವಿಮಾನ ನಿಲ್ದಾಣವಾಗಿದೆ. ಇದು ಟೌಲೌಸ್‌ ನಂತರದ ಸ್ಥಾನದಲ್ಲಿರುವ ಎರಡನೇ ಅತಿದೊಡ್ಡ ಏರ್‌ಬಸ್‌ ಸ್ಥಾವರವಾಗಿದೆ, ಮತ್ತು ಸಿಯಾಟಲ್‌ ಮತ್ತು ಟೌಲೌಸ್‌ ನಂತರದಲ್ಲಿ ಮೂರನೇ ಸ್ಥಾನದಲ್ಲಿರುವ ವಾಯುಯಾನ ವಲಯದ ಅತಿದೊಡ್ಡ ತಯಾರಿಕಾ ಸ್ಥಾವರವಾಗಿದೆ. A318, A319, A321 ಮತ್ತು A380 ವಿಮಾನಗಳಿಗೆ ಸಂಬಂಧಿಸಿದಂತಿರುವ ಅಂತಿಮ ಜೋಡಣೆ ಶ್ರೇಣಿಗಳಿಗೆ ಫಿಂಕೆನ್‌ವೆರ್ಡರ್‌‌ ಸ್ಥಾವರವು ನೆಲೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]

ನಿತ್ಯೋಪಯೋಗಿ ಸೇವೆಗಳು

ಬದಲಾಯಿಸಿ
 
ಹ್ಯಾಫೆನ್‌‌ಸಿಟಿ ಕೇರಿಯಲ್ಲಿರುವ ಇಂಧನಕೋಶದ ವಿದ್ಯುತ್‌ ಸ್ಥಾವರ.

ಹ್ಯಾಂಬರ್ಗ್ ಮತ್ತು ಉತ್ತರದ ಜರ್ಮನಿಗಾಗಿ ಅಗತ್ಯವಿರುವ ವಿದ್ಯುಚ್ಛಕ್ತಿಯನ್ನು ವಾಟೆನ್‌ಫಾಲ್‌ ಯುರೋಪ್‌ ಒದಗಿಸುತ್ತದೆ. ಹಿಂದೆ ಸಂಸ್ಥಾನ-ಸ್ವಾಮ್ಯದಲ್ಲಿದ್ದಾಗ ಇದು ಹ್ಯಾಂಬರ್ಗಿಸ್ಕೆ ಎಲೆಕ್ಟ್ರಿಸಿಟ್ಯಾಟ್ಸ್‌-ವೆರ್ಕೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಹ್ಯಾಂಬರ್ಗ್ ಸಮೀಪದಲ್ಲಿ ವಾಟೆನ್‌ಫಾಲ್‌ ಯುರೋಪ್‌ ಸಂಸ್ಥೆಯು ಮೂರು ಪರಮಾಣು ವಿದ್ಯುತ್‌ ಸ್ಥಾವರಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ: ಬ್ರೋಕ್‌‌ಡಾರ್ಫ್‌ ಪರಮಾಣು ವಿದ್ಯುತ್‌ ಸ್ಥಾವರ, ಬ್ರನ್ಸ್‌ಬ್ಯೂಟೆಲ್‌ ಪರಮಾಣು ವಿದ್ಯುತ್‌ ಸ್ಥಾವರ ಮತ್ತು ಕ್ರಮೆಲ್‌‌ ಪರಮಾಣು ವಿದ್ಯುತ್‌ ಸ್ಥಾವರ.[೧೦೩] ಈ ಎಲ್ಲವನ್ನೂ ಸೇವೆಯಿಂದ ಹಿಂತೆಗೆದುಕೊಳ್ಳಲು ನಿಗದಿಪಡಿಸಲಾಗಿದೆ.[೧೦೪] ಕಲ್ಲಿದ್ದಲಿನಿಂದ-ದಹಿಸಲ್ಪಟ್ಟ ವೆಡೆಲ್‌ ಮತ್ತು ಮೂರ್‌‌‌ಬರ್ಗ್‌ ವಿದ್ಯುತ್‌ ಕೇಂದ್ರಗಳು, ಮತ್ತು ಇಂಧನ-ಕೋಶದ ವಿದ್ಯುತ್‌ ಸ್ಥಾವರವು ಹ್ಯಾಫೆನ್‌‌ಸಿಟಿ ಕೇರಿಯಲ್ಲಿ ನೆಲೆಗೊಂಡಿದೆ. VERA ಕ್ಲಾರ್ಸ್‌ಕ್ಲಾಮ್‌ವೆರ್ಬ್ರೆನ್ನಂಗ್‌ ಕೇಂದ್ರವು ಹ್ಯಾಂಬರ್ಗ್ ತ್ಯಾಜ್ಯನೀರು ಸಂಸ್ಕರಣಾ ಘಟಕದ ಜೈವಿಕ ಘನವಸ್ತುಗಳನ್ನು ಬಳಸಿಕೊಳ್ಳುತ್ತದೆ; ಪಂಪ್ಸ್‌ಪೀಚೆರ್ವೆರ್ಕ್‌ ಗೀಸ್ತಾಕ್ಟ್‌ ಎಂಬುದು ಒಂದು ಪಂಪ್‌ ಶೇಖರಣಾ ವಿದ್ಯುತ್‌ ಸ್ಥಾವರವಾಗಿದ್ದರೆ, ಮೂಲ್ವರ್‌ವೆರ್ಟುಂಗ್‌ ಬೋರ್ಸಿಗ್ಸ್‌ಸ್ಟ್ರಾಬೆ ಎಂಬುದು ಒಂದು ಜೀವರಾಶಿ ವಿದ್ಯುತ್‌ ಕೇಂದ್ರವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಶಿಕ್ಷಣ

ಬದಲಾಯಿಸಿ

ಇಲ್ಲಿನ ಶಾಲಾ ವ್ಯವಸ್ಥೆಯನ್ನು ಶಾಲೆಗಳು ಮತ್ತು ಔದ್ಯೋಗಿಕ ತರಬೇತಿಯ ಸಚಿವಖಾತೆಯು (ಬೆಹೋರ್ಡೆ ಫೂರ್‌ ಸ್ಕೂಲೆ ಅಂಡ್‌ ಬೆರುಫ್ಸ್‌ಬಿಲ್ಡಂಗ್‌ ) ನಿರ್ವಹಿಸುತ್ತದೆ. ಈ ವ್ಯವಸ್ಥೆಯು 2006ರಲ್ಲಿ, 245 ಪ್ರಾಥಮಿಕ ಶಾಲೆಗಳು ಮತ್ತು 195 ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರಿಸುಮಾರು 160,000 ವಿದ್ಯಾರ್ಥಿಗಳನ್ನು ಹೊಂದಿತ್ತು.[೧೦೫] ಶುದ್ಧಾಂಗವಾಗಿ ಹ್ಯಾಂಬರ್ಗ್‌‌ನಲ್ಲಿ 33 ಸಾರ್ವಜನಿಕ ಗ್ರಂಥಾಲಯಗಳಿವೆ.[೧೦೬]

ಹ್ಯಾಂಬರ್ಗ್‌ನಲ್ಲಿ ಹದಿನೇಳು ವಿಶ್ವವಿದ್ಯಾಲಯಗಳು ನೆಲೆಗೊಂಡಿವೆ. 9,000 ಮಂದಿ ನಿವಾಸಿ ಹೊರನಾಡಿಗರೂ ಸೇರಿದಂತೆ, ಒಟ್ಟಾರೆಯಾಗಿ ಸುಮಾರು 70,000 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆರು ಸಾರ್ವಜನಿಕ ವಿಶ್ವವಿದ್ಯಾಲಯಗಳು ಇಲ್ಲಿ ನೆಲೆಗೊಂಡಿವೆ. ಅತಿದೊಡ್ಡದೆನಿಸಿರುವ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಜೊತೆಯಲ್ಲಿರುವ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ ಹ್ಯಾಂಬರ್ಗ್-ಎಪ್ಪೆನ್‌ಡಾರ್ಫ್‌, ಯೂನಿವರ್ಸಿಟಿ ಆಫ್‌ ಮ್ಯೂಸಿಕ್‌ ಅಂಡ್‌ ಥಿಯೇಟರ್‌, ಹ್ಯಾಂಬರ್ಗ್ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌ ಮತ್ತು ಹ್ಯಾಂಬರ್ಗ್ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿ ಇವು ಈ ಪಟ್ಟಿಯಲ್ಲಿ ಸೇರಿವೆ. ಏಳು ವಿಶ್ವವಿದ್ಯಾಲಯಗಳು ಖಾಸಗಿ ವಲಯಕ್ಕೆ ಸೇರಿದ್ದು, ಬ್ಯೂಸೆರಿಯಸ್‌ ಕಾನೂನು ಶಾಲೆಯು ಅದಕ್ಕೊಂದು ಉದಾಹರಣೆಯಾಗಿದೆ. ಹೆಲ್ಮಟ್‌ ಸ್ಕ್ಮಿಟ್‌ ಯೂನಿವರ್ಸಿಟಿಯಂಥ (ಹಿಂದೆ ಇದು ಯೂನಿವರ್ಸಿಟಿ ಆಫ್‌ ದಿ ಫೆಡರಲ್‌ ಆರ್ಮ್ಡ್ ಫೋರ್ಸಸ್‌ ಹ್ಯಾಂಬರ್ಗ್ ಎಂದು ಹೆಸರಾಗಿತ್ತು) ಅನೇಕ ಧಾರ್ಮಿಕ ಮತ್ತು ವಿಶೇಷ-ಉದ್ದೇಶದ ಸಂಸ್ಥೆಗಳೂ ಸೇರಿದಂತೆ, ಚಿಕ್ಕದಾದ ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನೂ ಸಹ ಹ್ಯಾಂಬರ್ಗ್‌‌ ನಗರವು ಒಳಗೊಂಡಿದೆ.[೧೦೭]

ಅಂತರರಾಷ್ಟ್ರೀಯ ಸಂಬಂಧಗಳು

ಬದಲಾಯಿಸಿ

ಅವಳಿ ಪಟ್ಟಣಗಳು — ಸಹ ನಗರಗಳು

ಬದಲಾಯಿಸಿ

ವಿಶ್ವದ ಬೇರೆಲ್ಲೆಡೆಯೂ ಕಂಡುಬರದ ರೀತಿಯಲ್ಲಿ, ಹ್ಯಾಂಬರ್ಗ್ ನಗರವು ಹತ್ತು ಅವಳಿ ಪಟ್ಟಣಗಳು ಮತ್ತು ಸಹ ನಗರಗಳನ್ನು ಹೊಂದಿದೆ. ಚಿಕಾಗೊ ಎಂಬುದು 1994ರಲ್ಲಿ ಅತ್ಯಂತ ಹೊಸದಾದ ಸಹ ನಗರವೆನಿಸಿಕೊಂಡಿತು.[೧೦೮] ನಗರಗಳೊಂದಿಗಿನ ಇತರ ಹಲವಾರು ಪಾಲುದಾರಿಕೆಗಳು ಇಲ್ಲಿವೆ. ಸಹಕಾರವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ, ಹ್ಯಾಂಬರ್ಗ್ ಮತ್ತು ಡರ್‌ ಎಸ್‌ ಸಲಾಮ್‌, ಟಾಂಜಾನಿಯಾ 2007ರಲ್ಲಿ ಒಂದು ಒಡಂಬಡಿಕೆಯ ಜ್ಞಾಪಕ ಪತ್ರ ಕ್ಕೆ ಸಹಿಹಾಕಿದವು.[೧೦೯]

ಹ್ಯಾಂಬರ್ಗ್‌‌ನಿಂದ ಬಂದಿರುವ ಜನರು

ಬದಲಾಯಿಸಿ

In Hamburg it's hard to find a native Hamburger. A hurried and superficial search turns up only crayfish, people from Pinneberg, and those from Bergedorf. One accompanies the contented little kippers of a striving society; mackerels from Stade, sole from Finkenwerder, herrings from Cuxhaven swim in expectant throngs through the streets of my city and lobsters patrol the stock exchange with open claws. ... The first so-called unguarded glance always lands on the bottom of the sea and falls into twilight of the aquarium. Heinrich Heine must have had the same experience when he tried, with his cultivated scorn and gifted melancholy, to find the people of Hamburg.

Siegfried Lenz, in Leute von Hamburg (People from Hamburg) ISBN 978-3-423-11538-4.[೧೧೩]

ಸಾಹಿತ್ಯ

ಬದಲಾಯಿಸಿ

ಟೆಂಪ್ಲೇಟು:Portal

  • ಹ್ಯಾಂಬರ್ಗ್ ಗೈಡ್‌ ಫಾರ್‌ ರೆಸಿಡೆಂಟ್ಸ್‌ ಅಂಡ್‌ ವಿಸಿಟರ್ಸ್‌‌. ಹ್ಯಾಂಬರ್ಗ್ ಫಹ್ರೆರ್‌ ವೆರ್ಲಾಗ್‌‌ ಜಿಎಂಬಿಎಚ್‌, ಹ್ಯಾಂಬರ್ಗ್, ವರ್ಷದಲ್ಲಿ 12 ಬಾರಿ ಪ್ರಕಟಗೊಂಡಿರುವಂಥದ್ದು.[೧೧೪]

ಉಲ್ಲೇಖಗಳು

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. "State population". Portal of the Federal Statistics Office Germany. Archived from the original on 2012-03-08. Retrieved 2007-04-25. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "Europe's largest cities". City Mayors Statisics. Retrieved 2009-12-29.
  3. ೩.೦ ೩.೧ ಹ್ಯಾಂಬರ್ಗ್‌‌ನ ಸಂವಿಧಾನ Verfassung der Freien und Hansestadt Hamburg (11th ed.), 1952-06-06, archived from the original on 2007-06-10, retrieved 2008-09-21 (German)
  4. "Overnight stays in 2008" (PDF). Northern Germany statistics office (Statistikamt Nord) (in German). Retrieved 2009-12-29.{{cite web}}: CS1 maint: unrecognized language (link)
  5. ೫.೦ ೫.೧ http://www.theage.com.au/executive-style/culture/melbourne-pips-sydney-again-in-livability-stakes-20090617-chzy.html
  6. http://www.innovation-cities.com/top-100-city-rankings-for-the-innovation-economy/
  7. Verg, Erich; Verg, Martin (2007), Das Abenteuer das Hamburg heißt (4th ed.), Hamburg: Ellert&Richter, p. 8, ISBN 9783831901371 (German)
  8. "Hammaburg – der große Irrtum". Hamburger Abendblatt. 2007-12-12. Retrieved 2008-09-30. (German)
  9. ೯.೦ ೯.೧ ವೆರ್ಗ್‌ (2007), ಪುಟ 15
  10. Snell, Melissa (2006), The Great Mortality, Historymedren.about.com, retrieved 2009-04-19
  11. ವೆರ್ಗ್‌ (2007), ಪುಟ 26
  12. ವೆರ್ಗ್‌ (2007), ಪುಟ 30
  13. Clark, David S. (1987), "The Medieval Origins of Modern Legal Education: Between Church and State", The American Journal of Comparative Law, Vol. 35, No. 4 (4), American Society of Comparative Law: 653–719, doi:10.2307/840129 {{citation}}: |volume= has extra text (help)
  14. ವೆರ್ಗ್‌ (2007), ಪುಟ 39
  15. ಸ್ಟಾಟ್‌ ಹ್ಯಾಂಬರ್ಗ್, ಬೆವೋಲ್ಕರಂಗ್ಸ್‌ಸೆನ್ಸಸ್‌‌ 2006
  16. ಹ್ಯಾಂಬರ್ಗ್ ಇನ್‌ ಯುವರ್‌ ಪಾಕೆಟ್‌, ಸೆಪ್ಟೆಂಬರ್‌‌ – ಅಕ್ಟೋಬರ್‌‌ 2008, ಪುಟ 6: ಹಿಸ್ಟರಿ
  17. ಓರ್ಟ್ವಿನ್‌‌ ಪೆಲ್ಕ್‌‌, ಕ್ರಿಯೆಗ್‌ಸೆಂಡೆ ಇನ್‌ ಹ್ಯಾಂಬರ್ಗ್, ಹ್ಯಾಂಬರ್ಗ್ 2005
  18. ಹ್ಯಾಂಬರ್ಗ್ ವ್ಯಾಡೆನ್‌ ಸೀ ನ್ಯಾಷನಲ್‌ ಪಾರ್ಕ್‌ ಕಾಯಿದೆ Gesetz über den Nationalpark Hamburgisches Wattenmeer, 1990-04-09, retrieved 2009-07-26 (German)
  19. Geologisches Landesamt Hamburg (Hamburg state office of geological affairs) (2007), Statistisches Jahrbuch 2007/2008, Hamburg: Statistisches Amt für Hamburg und Schleswig-Holstein, ISSN 1614-8045 (German)
  20. ೨೦.೦ ೨೦.೧ "World Weather Information Service - Hamburg". Deutscher Wetterdienst. Retrieved 2010-05-03.
  21. Staff (2007-07-01), Hamburg – Grüne Metropole am Wasser, Hamburg: Behörde für Stadtentwicklung und Umwelt, retrieved 2008-09-24 (German)
  22. Buba, Eike Manfred (1998), Auf dem Rathausmarkt, Hamburg website, archived from the original on 2008-10-10, retrieved 2008-08-13 {{citation}}: External link in |publisher= (help) (German)
  23. Staff (2007-04-05), River Tunes: Elbe Philharmonic Hall by Herzog & de Meuron, ArchNewsNow.com, retrieved 2008-08-23
  24. Jaeger, Falk (2008), Waterfront Living and Working: Hamburg's HafenCity, Goethe-Institut, archived from the original on 2008-06-02, retrieved 2008-08-23 {{citation}}: Unknown parameter |month= ignored (help)
  25. ೨೫.೦ ೨೫.೧ ಪುರಸಭಾ ಕ್ಷೇತ್ರದ ಆಡಳಿತ ಕಾಯಿದೆ Bezirksverwaltungsgesetz (BezVG), 2006-07-06, archived from the original on 2007-08-13, retrieved 2008-09-21 (German)
  26. ಗ್ರೇಟರ್‌‌ ಹ್ಯಾಂಬರ್ಗ್ ಕಾಯಿದೆ Groß-Hamburg-Gesetz, 1937-01-26, archived from the original on 2018-01-17, retrieved 2008-09-24 (German)
  27. ಹ್ಯಾಂಬರ್ಗ್ ನಗರದ ರಾಜಕೀಯ-ವಾಣಿಜ್ಯ ಕೂಟದ ಸಂವಿಧಾನ ಮತ್ತು ಆಡಳಿತ ರೀಕ್‌ ಕಾಯಿದೆReichsgesetz über die Verfassung und Verwaltung der Hansestadt Hamburg, 1937-12-09, archived from the original on 2008-12-27, retrieved 2008-09-24 (German)
  28. ೨೮.೦ ೨೮.೧ ೨೮.೨ ೨೮.೩ ೨೮.೪ ೨೮.೫ ೨೮.೬ ೨೮.೭ ಹ್ಯಾಂಬರ್ಗ್‌‌ನ ಪ್ರದೇಶದ ಸಂಘಟನೆಯ ಕಾಯಿದೆGesetz über die räumliche Gliederung der Freien und Hansestadt Hamburg (RäumGiG), 2006-07-06, retrieved 2008-09-24 (German)
  29. Institut für Kultur- und Medienmanagement (August 2006), Kulturwirtschaftsbericht 2006 (PDF), Hamburg: Behörde für Kultur, Sport und Medien, archived from the original (PDF) on 2008-11-09, retrieved 2008-08-13 (German)
  30. Kulturstiftung des Bundes, Bayreuth Was Yesterday – New Opera at Kampnagel, archived from the original on 2012-06-28, retrieved 2008-08-13
  31. "Museums in Hamburg". Retrieved December 29, 2009.
  32. Staff (1999), Transcript of the John Tusa Interview with Gyorgy Ligeti, BBC, archived from the original on 2012-07-20, retrieved 2008-09-24
  33. Staff, Alfred Schnittke, Boosey & Hawkes, retrieved 2008-09-24
  34. Rivadavia, Eduardo, allmusic (((Helloween > Biography ))), allmusic, retrieved 2008-09-24
  35. Staff, Spirit Zone Recordings, www.discogs.com, retrieved 2008-09-24
  36. Staff (2008-02-29), Newsletter Nr. 18 (PDF), Hamburg Tourismus GmbH, retrieved 2008-08-13 {{citation}}: External link in |publisher= (help) (German)
  37. Staff (2008-07-11), Umsatzbringer und Jobmotor Tourismus, Behörde für Kultur, Sport und Medien, archived from the original on 2010-08-09, retrieved 2008-08-13 (German)
  38. Rene S. Ebersole (2001). "The New Zoo". Audubon Magazine. National Audubon Society. Archived from the original on 2007-09-06. Retrieved 2008-10-01. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help); Unknown parameter |month= ignored (help)
  39. Staff (2008), Zahlen,Fakten,Trends 2007 (PDF), Hamburg Tourismus GmbH, retrieved 2008-09-24 (German)
  40. ಉಲ್ರಿಚ್‌ ಗ್ಯಾಬ್‌ಡಾರ್ಫ್‌: ಇಂಗ್ಲಂಡರ್ ವುಲನ್‌ ಇನ್‌ ಡೆನ್‌ ಹ್ಯಾಫೆನ್‌‌, ಅಮೆರಿಕನೆರ್‌ ಇನ್‌ ಗ್ಯೂಟ್‌ ರೆಸ್ಟೋರೆಂಟ್ಸ್‌. ಇದರಲ್ಲಿರುವಂಥದ್ದು: ಹ್ಯಾಂಬರ್ಗರ್‌ ಅಬೆಂಡ್‌ಬ್ಲಾಟ್‌, ಅಕ್ಟೋಬರ್‌‌, 24 2009, ಪುಟ 17
  41. ಹ್ಯಾಂಬರ್ಗ್ ವಿರ್ಡ್‌ ಹೀಮ್ಲಿಚೆರ್‌ ಹೀಮೆಟ್‌‌ಹ್ಯಾಫೆನ್‌‌ ಡೆರ್‌ "ಕ್ವೀನ್‌ ಮೇರಿ 2" (ಇಂಗ್ಲಿಷ್‌ನಲ್ಲಿ: ಹ್ಯಾಂಬರ್ಗ್ ನಿಯರ್ಲಿ ಎ ಹೋಮ್‌ ಪೋರ್ಟ್‌ ಫಾರ್‌ "ಕ್ವೀನ್‌ ಮೇರಿ 2"). ಇದರಲ್ಲಿರುವಂಥದ್ದು: ಹ್ಯಾಂಬರ್ಗರ್‌ ಅಬೆಂಡ್‌ಬ್ಲಾಟ್‌, ಜನವರಿ, 15 2010, ಪುಟ 13
  42. "Christopher Street day Hamburg". Retrieved 2008-10-05. (German)
  43. "Alstervergnügen Hamburg". Retrieved 2008-10-05. (German)
  44. "Wann ist DOM". Retrieved 1008-10-05. {{cite web}}: Check date values in: |accessdate= (help) (German)
  45. "Hafengeburtstag Hamburg". Retrieved 2008-10-05.
  46. "Zehntausende Biker und ein schwerer Unfall". Spiegel online. 2008-07-13. Retrieved 2008-10-05. (German)
  47. "Weihnachtsmärkte in Hamburg-Mitte 2008". Bezirk Hamburg-Mitte. Archived from the original on 2009-09-18. Retrieved 2008-09-30. (German)
  48. "Lange Nacht der Museen". Retrieved 2008-10-05. (German)
  49. "6. Festival der Kulturen Hamburg". Archived from the original on 2002-06-13. Retrieved 2008-10-05.
  50. "Filmfest Hamburg". Archived from the original on 2008-11-21. Retrieved 2008-10-05.
  51. "Welcoming the world". Archived from the original on 2005-12-01. Retrieved 2008-10-05. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  52. "Mandago, Timofeyeva impress at Hamburg Marathon". 2008-04-27. Retrieved 2008-10-05.
  53. "Dockville". Retrieved 2009-06-19.
  54. Staff (2002-07-05), Birnen, Bohnen, Speck – Schmeckt vorzüglich, Hamburger Abendblatt, retrieved 2008-08-11 (German)
  55. Staff (2002-06-25), Aalsuppe – Frage des Geschmacks, Hamburger Abendblatt, retrieved 2008-08-11 (German)
  56. Staff (2002-06-25), Maischollen – Zart gebraten, Hamburger Abendblatt, retrieved 2008-08-11 (German)
  57. Staff (2002-06-25), Grütze – Mit kalter Milch, Hamburger Abendbla, retrieved 2008-08-11 (German)
  58. Staff (2002-06-25), Labskaus – Essen der Matrosen, Hamburger Abendblatt, retrieved 2008-08-11 (German)
  59. Staff (2002-08-10), Alsterwasser – Bier und Limonade, Hamburger Abendblatt, retrieved 2008-08-11 (German)
  60. Staff (2002-08-05), Rundstück – Hamburger Brötchen, Hamburger Abendblatt, retrieved 2008-06-06 (German)
  61. Stradley, Linda (2004), History of Hamburgers, retrieved 2008-08-23
  62. "HTHC Hamburg Warriors". Hamburgwarriors.com. Retrieved 2010-01-25.
  63. Forman, Ross (2008-06-10), Out lacrosse coach lands in Germany, Outsports.com, archived from the original (– Scholar search) on June 4, 2008, retrieved 2008-08-11 {{citation}}: External link in |format= and |publisher= (help)
  64. Staff (2005-07-18), Australian Football im Stadtpark, Hamburger Abendblatt, retrieved 2008-08-11 (German)
  65. Staff (2008-08-11), Hamburg Blue Devils vor Einzug in die Play-offs, Hamburger Abendblatt, retrieved 2008-08-11 (German)
  66. Staff, Center Court / Rothenbaum Stadion, Deutscher Tennis Bund, archived from the original on 2009-02-01, retrieved 2008-08-16 (German)
  67. Shinar, Jack (2008-07-09), Kamsin Easily Wins Deutsches Derby, news.bloodhorse.com, archived from the original on 2008-07-09, retrieved 2008-08-11 {{citation}}: External link in |publisher= (help)
  68. Staff (2008-04-27), Mandago, Timofeyeva impress at Hamburg Marathon, IAAF, retrieved 2008-08-11
  69. Staff (2008-02-02), Hamburg City Man 2006 als WM-Generalprobe, Hamburger Abendblatt, retrieved 2008-08-11 (German)
  70. Bilal, Ahmed (2008-03-29), 2010 Champions League Final in Madrid, 2010 UEFA Cup final in Hamburg, Soccerlens.com, retrieved 2008-08-11
  71. Bausch, Karl-Heinz (2007), "Die deutsche Sprache—eine Dialektlandschaft" (PDF), Nationalatlas Bundesrepublik Deutschland, Leipzig: Leibniz-Institut für Länderkunde, pp. 94–95, ISBN 3827409470, retrieved 2008-09-24 (German)
  72. "Britain in Hamburg". ning.com. Archived from the original on 2011-07-18. Retrieved 2009-09-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  73. "Website of the American Club of Hamburg". Retrieved 2009-09-13.
  74. ಹ್ಯಾಂಬರ್ಗ್ ಫಹ್ರೆರ್‌ ವೆರ್ಲಾಗ್‌‌ ಜಿಎಂಬಿಎಚ್‌: ಹ್ಯಾಂಬರ್ಗ್ ಗೈಡ್‌ , ಮೇ 2009, ಪುಟ 61
  75. Behling, Heidburg; Garbe, Detlef (January 2009), "Die Orte bleibe", Mittelungen des Freundeskreises KZ-Gedenkstätte Neuengamme, no. 11, p. 3 (German)
  76. Kleiner Rathausführer, Hamburg: State Chancellery, 2006 (German)
  77. German conservatives win most votes, usa today, 2008-02-24, retrieved 2008-08-13
  78. Kopp, Martin (2008-08-12), Geheime Absprachen zwischen CDU und Grünen, Hamburg: Die Welt, archived from the original on 2008-10-02, retrieved 2008-08-13. {{citation}}: Check date values in: |year= / |date= mismatch (help) (German)
  79. ೭೯.೦ ೭೯.೧ Volkswirtschaftliche Basisdaten 2007, HWF Hamburgische Gesellschaft für Wirtschaftsförderung, archived from the original on 2009-05-03, retrieved 2008-08-06 (German)
  80. Hamburg Hotspot in the North (PDF), Hamburg Ministry of Economic and Labour Affairs, archived from the original (PDF) on 2008-10-12, retrieved 2008-08-06 (German) (English)
  81. Van Marle, Gavin (2008-01-31). "Europe Terminals stretched to limit". Lloyds List Daily Commercial News. pp. 8–9.
  82. M. ರಮೇಶ್‌‌: ಮೇಕಿಂಗ್‌ ಹ್ಯಾಂಬರ್ಗ್ ಯುರೋಪ್‌'ಸ್‌ ಪ್ರಿಫರ್ಡ್‌ ಪೋರ್ಟ್‌ Archived 2009-07-20 ವೇಬ್ಯಾಕ್ ಮೆಷಿನ್ ನಲ್ಲಿ. ಡಿಸೆಂಬರ್‌‌ 25, 2000 Hinduonnet.com Archived 2020-05-12 ವೇಬ್ಯಾಕ್ ಮೆಷಿನ್ ನಲ್ಲಿ.. 2008ರ ಅಗಸ್ಟ್ 11ರಂದು ಮರುಸಂಪಾದಿಸಲಾಯಿತು.
  83. Past Cost-Cutting and Layoffs Haunt Airbus in Germany, Spiegel online, 2006-07-28, retrieved 2008-08-11
  84. Staff, Von der Faszination, in Hamburg zu arbeiten, www.hamburg.de, retrieved 2008-08-06 (German)
  85. "ಯುನೈಟೆಡ್‌ ಇಂಟರ್‌ನೆಟ್‌ AG ಅಕ್ವೈರ್ಸ್‌ ಎ ಮೈನಾರಿಟಿ ಸ್ಟೇಕ್‌ ಇನ್‌ ಜಿಮ್ಡೊ ಜಿಎಂಬಿಎಚ್‌." ಥಾಮ್ಸನ್‌ ರಾಯಿಟರ್ಸ್ . ಜುಲೈ 8, 2008. 2009ರ ಮೇ 1ರಂದು ಮರುಸಂಪಾದಿಸಲಾಯಿತು.
  86. "Backbeat filming locations". movielocations.com. Archived from the original on 2008-08-29. Retrieved 2008-10-01. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  87. ೮೭.೦ ೮೭.೧ Staff (2007), Statistisches Jahrbuch 2007/2008, Hamburg: Statistical office Hamburg and Schleswig-Holstein (Statistisches Amt für Hamburg und Schleswig-Holstein), ISSN 1614-8045 (German)
  88. Hamburg Metropolitan Area fact sheet (PDF), Statistical office Hamburg and Schleswig-Holstein (Statistisches Amt für Hamburg und Schleswig-Holstein), archived from the original (PDF) on 2009-01-18, retrieved 2008-08-04
  89. http://www.statistik-nord.de/uploads/tx_standocuments/SI_SPEZIAL_V_2010_01.pdf
  90. ೯೦.೦ ೯೦.೧ ಸೆಲೆಕ್ಟಬಲ್‌ ಡೇಟಾ ಬೇಸ್‌: Source: Residents registration office, Regionalergebnisse, Statistical office Hamburg and Schleswig-Holstein, archived from the original on 2008-06-17, retrieved 2008-06-16 (German)
  91. EKD.de
  92. ಚೀಸಾ ಕ್ಯಾಟೊಲಿಕಾ DBK.de
  93. "ಆರ್ಕೈವ್ ನಕಲು" (PDF). Archived from the original (PDF) on 2010-12-16. Retrieved 2010-11-04.
  94. Dalai Lama Begins Visit to Germany With Criticism of China, dalailama.com, 2007-07-19, archived from the original on June 18, 2008, retrieved 2008-08-14
  95. Baumann, Martin (2008). "Immigrant Hinduism in Germany: Tamils from Sri Lanka and Their Temples". Harvard university. Archived from the original on 2012-09-17. Retrieved 2008-10-10. These migrants established several cultural societies and spacious, marvelously decorated temples in Hamburg, Frankfurt and Cologne (2 temples). {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  96. Zaklikowski, Dovid (2007-08-30), Jewish School Returns to Hamburg Building Left Judenrein by Nazis, chabad.org, retrieved 2008-08-11
  97. Krankenhausplan 2010 der Freien und Hansestadt Hamburg (Hospital plan of Hamburg) (PDF), 2007, archived from the original (PDF) on 2008-09-10, retrieved 2008-08-03 {{citation}}: Unknown parameter |month= ignored (help) (German)
  98. Staff (2002-08-10), Elbe ohne e – Buchstaben fallen weg, Hamburger Abendblatt, retrieved 2008-08-11 (German)
  99. Staff (2008-03-28), Handelskammer Hamburg – Hamburg Airport: Facts, figures, and the Chamber’s viewpoint, Handelskammer Hamburg (Hamburg chamber of commerce), archived from the original (– Scholar search) on June 9, 2007, retrieved 2008-09-25 {{citation}}: External link in |format= (help)
  100. Press release (2001-01-08), The airport celebrates its 90th anniversary, Hamburg Airport, retrieved 2008-09-25
  101. Staff, Hamburg Lubeck Airport Guide, www.travel-library.com, archived from the original on 2008-09-15, retrieved 2008-09-27
  102. Staff, HVV – Mehr als ein Ziel – Historie, Hamburger Verkehrsverbund, retrieved 2008-09-25 (German)
  103. Nuclear Engineering International (2007-07-24), German chain reaction, Progressive Media Markets, retrieved 2008-09-25
  104. Staff (2007-01-10), Nuclear Power in Germany: A Chronology, Deutsche Welle, retrieved 1008-09-25 {{citation}}: Check date values in: |accessdate= (help)
  105. ಸೆಲೆಕ್ಟಬಲ್‌ ಡೇಟಾ ಬೇಸ್‌: Regionalergebnisse, Statistical office Hamburg and Schleswig-Holstein, archived from the original on 2008-06-17, retrieved 2008-06-16 (German)
  106. Wir über uns (Hamburg Libraries about us), Bücherhallen Hamburg, archived from the original on 2017-06-29, retrieved 2008-06-16 (German)
  107. Staff, Science Portal Hamburg, Ministry of Science and Research (Behörde für Wissenschaft und Forschung), archived from the original on 2008-08-10, retrieved 2008-08-05 {{citation}}: Italic or bold markup not allowed in: |publisher= (help) (German)
  108. Staff, Hamburg und seine Städtepartnerschaften (Hamburg sister cities), Hamburg's official website, retrieved 2008-08-05 (German)
  109. Staff, Hamburg in der Welt (Hamburg and the world) (in German), Hamburg's official website, archived from the original on 2009-07-06, retrieved 2008-08-18{{citation}}: CS1 maint: unrecognized language (link)
  110. "Dresden - Partner Cities". © 2008 Landeshauptstadt Dresden. Archived from the original on October 23, 2007. Retrieved 2008-12-29.
  111. Prefeitura. Archived 2008-12-24 ವೇಬ್ಯಾಕ್ ಮೆಷಿನ್ ನಲ್ಲಿ.Sp - ಡೀಸೆಂಟ್ರಲೈಸ್ಡ್‌ ಕೋಆಪರೇಷನ್‌ Archived 2008-12-24 ವೇಬ್ಯಾಕ್ ಮೆಷಿನ್ ನಲ್ಲಿ.
  112. ಇಂಟರ್‌ನ್ಯಾಷನಲ್‌ ರಿಲೇಷನ್ಸ್‌ - ಸಾವೋ ಪಾಲೊ ಪುರಭವನ - ಅಫಿಷಿಯಲ್‌ ಸಿಸ್ಟರ್‌ ಸಿಟೀಸ್‌
  113. Jenkins, Jennifer (2003), Provincial modernity: local culture and liberal politics in fin-de-siècle Hamburg, Cornell University Press, ISBN 0801440254
  114. Website for Hamburg guide, Hamburg Führer Verlag GmbH, archived from the original on 2009-08-08, retrieved 2009-03-16


ಬಾಹ್ಯ ಕೊಂಡಿಗಳು

ಬದಲಾಯಿಸಿ
  • Official website
  • ಹ್ಯಾಂಬರ್ಗ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್