ಹಣಮಸಾಗರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿದೆ. ಇದು ಒಂದು ಚಿಕ್ಕ ಗ್ರಾಮ ಹಾಗೂ ಪುಣ್ಯಕ್ಷೇತ್ರ. ಗ್ರಾಮವು ಬಬಲೇಶ್ವರ - ಯರಗಟ್ಟಿ ರಾಜ್ಯ ಹೆದ್ದಾರಿ - 55ರ ಸಮೀಪದಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ. ಮಿ. ದೂರದಲ್ಲಿದೆ.

ಹಣಮಸಾಗರ, ವಿಜಯಪುರ
ಹಣಮಸಾಗರ
ಹಾಲಸಾಗರ
village
Population
 (2011)
 • Total೧,೫೦೦

ಚರಿತ್ರೆ ಬದಲಾಯಿಸಿ

 
ಶ್ರೀ ವೇದಮೂರ್ತಿ ಶಿವಯ್ಯ ಮಹಾಸ್ವಾಮಿಜಿ, ಬಬಲಾದಿ

ಗ್ರಾಮದ ಶ್ರೀ ಕರಿಗಿರಿ ಮಹಾಸ್ವಾಮಿಗಳು ಕಳೆದ ಶತಮಾನದಲ್ಲಿ ಇದ್ದರು ಎಂಬ ಪ್ರತೀತ ಇದೆ. ಅವರದು ಕೇವಲ ಒಂದು ಭಾವಚಿತ್ರವಿದ್ದು ಪ್ರತಿವರ್ಷ ಜುಲೈ/ಅಗಸ್ಟ್ ತಿಂಗಳಿನಲ್ಲಿ ಜಾತ್ರೆ ಜರುಗುವುದು. ಇತಿಹಾಸ ಪ್ರಸಿದ್ದ ಬಬಲಾದಿ ಶ್ರೀ ಸದಾಶಿವ ಶಾಖಾ ಮಠವನ್ನು 1995ರಲ್ಲಿ ಸ್ಥಾಪಿಸಲಾಗಿದೆ.

ಧಾರ್ಮಿಕ ಕೇಂದ್ರ ಬದಲಾಯಿಸಿ

ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರ ಮಠವಿದೆ.

ಭೌಗೋಳಿಕ ಲಕ್ಷಣ ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ 16* 32' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ ಬದಲಾಯಿಸಿ

  • ಮಳೆಗಾಲ-ಚಳಿಗಾಲ-ಬೇಸಿಗೆಕಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43°C ವರೆಗೆ(ಮೇನಲ್ಲಿ), ಚಳಿಗಾಲದಲ್ಲಿ ಅತೀ ಕಡಿಮೆ ಅಂದರೆ 8°C ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C (ಫೆಬ್ರುವರಿ, ಮಾರ್ಚ, ಏಪ್ರೀಲ್ ಮತ್ತು ಮೇ ತಿಂಗಳು)
  • ಚಳಿಗಾಲ - 19°C-28°C (ಅಕ್ಟೂಬರ್, ನವೆಂಬರ್, ಡಿಶೆಂಬರ್ ಮತ್ತು ಜನೇವರಿ ತಿಂಗಳು)
  • ಮಳೆಗಾಲ - 18°C-32°C ( ಜೂನ್, ಜೂಲೈ, ಅಗಷ್ಟ್ ಮತ್ತು ಸಪ್ಟೆಂಬರ್ ತಿಂಗಳು)
  • ಮಳೆ - ಪ್ರತಿ ವರ್ಷ ಮಳೆಯು 300 - 600 ಮಿಮಿ ಗಳಷ್ಟು ಸುರಿಯುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ್), 19 ಕಿಮಿ/ಗಂ (ಜೂಲೈ)ಹಾಗೂ 17 ಕಿಮಿ/ಗಂ (ಅಗಸ್ಟ್)ನಲ್ಲಿ ಬೀಸುತ್ತದೆ.

ಹಣಮಸಾಗರ ಗ್ರಾಮದ ಹವಾಮಾನದ ಬಗ್ಗೆ ತಿಳಿಯಲು ಈ ತಾಣಕ್ಕೆ ಸಂಪರ್ಕಿಸಿ

ಜನಸಂಖ್ಯೆ ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 1,435 ಇದೆ. ಅದರಲ್ಲಿ 730 ಪುರುಷರು ಮತ್ತು 705 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.

ಹಣಮಸಾಗರ ಗ್ರಾಮದಲ್ಲಿರುವ ಜನಸಂಖ್ಯೆಯ ವಿವರ

ಹಣಮಸಾಗರ ಗ್ರಾಮದಲ್ಲಿರುವ ಮತದಾರರ ಪಟ್ಟಿ

ಕಲೆ ಬದಲಾಯಿಸಿ

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದಗಳನ್ನು ಹಾಡುತ್ತಾರೆ.

ಸಂಸ್ಕೃತಿ ಬದಲಾಯಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ) ಬದಲಾಯಿಸಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಕೃಷಿ ಬದಲಾಯಿಸಿ

ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ ಬದಲಾಯಿಸಿ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಧಾನ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಮೇಕೆ ಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆಗಳು ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ ಬದಲಾಯಿಸಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ ಬದಲಾಯಿಸಿ

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ನಾಟಕ ಬದಲಾಯಿಸಿ

ಗ್ರಾಮದಲ್ಲಿ ಪ್ರತಿವರ್ಷ ಪೌರಾಣಿಕ ಅಥವಾ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗ್ರಾಮದ ಕಲಾವಿದರಾದ ಚಿಕ್ಕಯ್ಯ ಮಠಪತಿಯವರು ಪ್ರಮುಖ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು.

ಧರ್ಮಗಳು ಬದಲಾಯಿಸಿ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು ಬದಲಾಯಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ದೇವಾಲಯಗಳು ಬದಲಾಯಿಸಿ

  • ಶ್ರೀ ಸಂಗಮೇಶ್ವರ ದೇವಾಲಯ, ಹಣಮಸಾಗರ
  • ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರ ಪುಣ್ಯಾಶ್ರಮ, ಹಣಮಸಾಗರ
  • ಶ್ರೀ ಹಣಮಂತ ದೇವಾಲಯ, ಹಣಮಸಾಗರ

ಮಸೀದಿ ಬದಲಾಯಿಸಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಖಾಜಾ ಬಂದೇನವಾಜ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು ಬದಲಾಯಿಸಿ

ಪ್ರತಿವರ್ಷ ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರರ ಪಾರಮಾರ್ಥೀಕೋತ್ಸವ, ಶ್ರೀ ಸಂಗಮೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಸಂಘಟನೆಗಳು ಬದಲಾಯಿಸಿ

ಹಣಮಸಾಗರ ಗ್ರಾಮದಲ್ಲಿರುವ ಸಂಘಟನೆಗಳು

  • ಶ್ರೀ ಗಜಾನನ ಯುವಕ ಮಂಡಳಿ, ಹಣಮಸಾಗರ
  • ನೇತಾಜಿ ಸುಭಾಸ್ ಚಂದ್ರ ಬೋಸ್ ಯುವಕ ಮಂಡಳಿ, ಹಣಮಸಾಗರ

ಶಿಕ್ಷಣ ಬದಲಾಯಿಸಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮಸಾಗರ

ಸಾಕ್ಷರತೆ ಬದಲಾಯಿಸಿ

ಗ್ರಾಮದ ಸಾಕ್ಷರತೆ(2011) ಪ್ರಮಾಣವು ಸುಮಾರು 66.37%ರಷ್ಟಿದ್ದು. ಅದರಲ್ಲಿ 76.37% ಪುರುಷರು ಹಾಗೂ 55.63% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ ಬದಲಾಯಿಸಿ

ಗ್ರಾಮವು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಗ್ರಾಮದ ಹಿರಿಯರಾದ ಶ್ರೀ ಮಹಾದೇವಪ್ಪ ಮದರಖಂಡಿಯವರು ವಿಜಯಪುರ ತಾಲ್ಲೂಕ ಪಂಚಾಯತಿಯ ಮಾಜಿ ಸದಸ್ಯರು. ಗ್ರಾಮವು ಕಂಬಾಗಿ ಗ್ರಾಮ ಪಂಚಾಯತಿ ಹಾಗೂ ಬಬಲೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ.

ಬ್ಯಾಂಕ್ ಬದಲಾಯಿಸಿ

  • ಪರಮ ಪೂಜ್ಯ ಶ್ರೀ ಶಿವಯೋಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ, ಹಾಲಸಾಗರ

ಹಾಲು ಉತ್ಪಾದಕ ಸಹಕಾರಿ ಸಂಘ ಬದಲಾಯಿಸಿ

ಗ್ರಾಮದಲ್ಲಿ ಕೆ.ಎಮ್.ಎಫ್.(ನಂದಿನಿ)(ಕರ್ನಾಟಕ ಹಾಲು ಒಕ್ಕೂಟ)ನ ಸಹಾಯದೊಂದಿಗೆ ಹಾಲು ಉತ್ಪಾದಕ ಸಹಕಾರಿ ಸಂಘ ಸ್ಥಾಪಿತವಾಗಿದೆ. ನಂದಿನಿ ಮುಖ್ಯ ಕಾರ್ಯಾಲಯವು ವಿಜಯಪುರ ನಗರದ ಹತ್ತಿರವಿರುವ ಭೂತನಾಳ ಗ್ರಾಮದಲ್ಲಿದೆ.

ದೂರವಾಣಿ ಸಂಕೇತ ಬದಲಾಯಿಸಿ

ಬಿ.ಎಸ್.ಎನ್.ಎಲ್. ಮುಖ್ಯ ದೂರವಾಣಿ ಕೇಂದ್ರವು ಬಬಲೇಶ್ವರ ಗ್ರಾಮದಲ್ಲಿದೆ.

  • ದೂರವಾಣಿ ಸಂಕೇತ - 08355

ಅಂಚೆ ಸೂಚ್ಯಂಕ ಸಂಖ್ಯೆ ಬದಲಾಯಿಸಿ

ಮುಖ್ಯ ಅಂಚೆ ಕಚೇರಿಯು ಸಾರವಾಡ ಗ್ರಾಮದಲ್ಲಿದೆ. ಉಪ ಅಂಚೆ ಕಚೇರಿಯು ಕಂಬಾಗಿ ಗ್ರಾಮದಲ್ಲಿದೆ.

  • ಅಂಚೆ ಸೂಚ್ಯಂಕ ಸಂಖ್ಯೆ - 586125

ಸಾರಿಗೆ ಬದಲಾಯಿಸಿ

ಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ.ಮೀ. ದೂರವಿದ್ದು, ಗ್ರಾಮದ ರಸ್ತೆಯು ಕಂಬಾಗಿ - ಬಬಲೇಶ್ವರ ಮಾರ್ಗವಾಗಿ ವಿಜಯಪುರ ನಗರವನ್ನು ತಲಪುತ್ತದೆ.

ರಾಜ್ಯ ಹೆದ್ದಾರಿ ಬದಲಾಯಿಸಿ

ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ ರಾಜ್ಯ ಹೆದ್ದಾರಿ - 55 ಹಾದೂಹೋಗಿದೆ.

ನಕ್ಷೆ ಬದಲಾಯಿಸಿ

ಗೂಗಲನಲ್ಲಿ ಹಾಲಸಾಗರ ಗ್ರಾಮದ ನಕ್ಷೆ

ವಿಕಿಮ್ಯಾಪಿಯಾದಲ್ಲಿ ಹಣಮಸಾಗರ ಗ್ರಾಮದ ನಕ್ಷೆ

ದಿಕ್ಕುಗಳು ಬದಲಾಯಿಸಿ