ಹಣಮಸಾಗರ
ಹಣಮಸಾಗರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿದೆ. ಇದು ಒಂದು ಚಿಕ್ಕ ಗ್ರಾಮ ಹಾಗೂ ಪುಣ್ಯಕ್ಷೇತ್ರ. ಗ್ರಾಮವು ಬಬಲೇಶ್ವರ - ಯರಗಟ್ಟಿ ರಾಜ್ಯ ಹೆದ್ದಾರಿ - ೫೫ರ ಸಮೀಪದಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೪೦ ಕಿ. ಮಿ. ದೂರದಲ್ಲಿದೆ.
ಹಣಮಸಾಗರ
ಹಣಮಸಾಗರ ಹಾಲಸಾಗರ | |
---|---|
village | |
Population (2011) | |
• Total | ೧,೪೩೫ |
ಚರಿತ್ರೆ
ಬದಲಾಯಿಸಿಗ್ರಾಮದ ಶ್ರೀ ಕರಿಗಿರಿ ಮಹಾಸ್ವಾಮಿಗಳು ಕಳೆದ ಶತಮಾನದಲ್ಲಿ ಇದ್ದರು ಎಂಬ ಪ್ರತೀತ ಇದೆ. ಅವರದು ಕೇವಲ ಒಂದು ಭಾವಚಿತ್ರವಿದ್ದು ಪ್ರತಿವರ್ಷ ಜುಲೈ/ಅಗಸ್ಟ್ ತಿಂಗಳಿನಲ್ಲಿ ಜಾತ್ರೆ ಜರುಗುವುದು. ಇತಿಹಾಸ ಪ್ರಸಿದ್ದ ಬಬಲಾದಿ ಶ್ರೀ ಸದಾಶಿವ ಶಾಖಾ ಮಠವನ್ನು 1995ರಲ್ಲಿ ಸ್ಥಾಪಿಸಲಾಗಿದೆ.
ಧಾರ್ಮಿಕ ಕೇಂದ್ರ
ಬದಲಾಯಿಸಿಗ್ರಾಮದಲ್ಲಿ ಬಬಲಾದಿ ಪರಂಪರೆಯ ಶ್ರೀ ಕರಗಿರಿ ಸಂಗಮ ಶಿವಲಿಂಗೇಶ್ವರ ಮಠವಿದೆ.
ಭೌಗೋಳಿಕ ಲಕ್ಷಣ
ಬದಲಾಯಿಸಿಗ್ರಾಮವು ಭೌಗೋಳಿಕವಾಗಿ 16* 32' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
ಬದಲಾಯಿಸಿ- ಮಳೆಗಾಲ-ಚಳಿಗಾಲ-ಬೇಸಿಗೆಕಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43°C ವರೆಗೆ(ಮೇನಲ್ಲಿ), ಚಳಿಗಾಲದಲ್ಲಿ ಅತೀ ಕಡಿಮೆ ಅಂದರೆ 8°C ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - 35°C-42°C (ಫೆಬ್ರುವರಿ, ಮಾರ್ಚ, ಏಪ್ರೀಲ್ ಮತ್ತು ಮೇ ತಿಂಗಳು)
- ಚಳಿಗಾಲ - 19°C-28°C (ಅಕ್ಟೂಬರ್, ನವೆಂಬರ್, ಡಿಶೆಂಬರ್ ಮತ್ತು ಜನೇವರಿ ತಿಂಗಳು)
- ಮಳೆಗಾಲ - 18°C-32°C ( ಜೂನ್, ಜೂಲೈ, ಅಗಷ್ಟ್ ಮತ್ತು ಸಪ್ಟೆಂಬರ್ ತಿಂಗಳು)
- ಮಳೆ - ಪ್ರತಿ ವರ್ಷ ಮಳೆಯು 300 - 600 ಮಿಮಿ ಗಳಷ್ಟು ಸುರಿಯುತ್ತದೆ.
- ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ್), 19 ಕಿಮಿ/ಗಂ (ಜೂಲೈ)ಹಾಗೂ 17 ಕಿಮಿ/ಗಂ (ಅಗಸ್ಟ್)ನಲ್ಲಿ ಬೀಸುತ್ತದೆ.
ಜನಸಂಖ್ಯೆ
ಬದಲಾಯಿಸಿಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 1,435 ಇದೆ. ಅದರಲ್ಲಿ 730 ಪುರುಷರು ಮತ್ತು 705 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.
ಕಲೆ
ಬದಲಾಯಿಸಿಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದಗಳನ್ನು ಹಾಡುತ್ತಾರೆ.
ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.
ಆಹಾರ (ಖಾದ್ಯ)
ಬದಲಾಯಿಸಿಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.
ಕೃಷಿ
ಬದಲಾಯಿಸಿಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆ
ಬದಲಾಯಿಸಿಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಉದ್ಯೋಗ
ಬದಲಾಯಿಸಿಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಧಾನ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಮೇಕೆ ಸಾಕಾಣಿಕೆ ಉಪಕಸುಬುಗಳಾಗಿವೆ.
ಬೆಳೆಗಳು
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ ವರ್ಗ
ಬದಲಾಯಿಸಿಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ ವರ್ಗ
ಬದಲಾಯಿಸಿತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.
ಆರ್ಥಿಕತೆ
ಬದಲಾಯಿಸಿಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.
ನಾಟಕ
ಬದಲಾಯಿಸಿಗ್ರಾಮದಲ್ಲಿ ಪ್ರತಿವರ್ಷ ಪೌರಾಣಿಕ ಅಥವಾ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗ್ರಾಮದ ಕಲಾವಿದರಾದ ಚಿಕ್ಕಯ್ಯ ಮಠಪತಿಯವರು ಪ್ರಮುಖ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು.
ಧರ್ಮಗಳು
ಬದಲಾಯಿಸಿಭಾಷೆಗಳು
ಬದಲಾಯಿಸಿಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಭಾಷೆಗಳನ್ನಾಡುತ್ತಾರೆ.
ದೇವಾಲಯಗಳು
ಬದಲಾಯಿಸಿ- ಶ್ರೀ ಸಂಗಮೇಶ್ವರ ದೇವಾಲಯ, ಹಣಮಸಾಗರ
- ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರ ಪುಣ್ಯಾಶ್ರಮ, ಹಣಮಸಾಗರ
- ಶ್ರೀ ಹಣಮಂತ ದೇವಾಲಯ, ಹಣಮಸಾಗರ
ಮಸೀದಿ
ಬದಲಾಯಿಸಿಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಖಾಜಾ ಬಂದೇನವಾಜ ದರ್ಗಾ ಹಾಗೂ ಮಸೀದಿ ಇದೆ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರರ ಪಾರಮಾರ್ಥೀಕೋತ್ಸವ, ಶ್ರೀ ಸಂಗಮೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಸಂಘಟನೆಗಳು
ಬದಲಾಯಿಸಿಹಣಮಸಾಗರ ಗ್ರಾಮದಲ್ಲಿರುವ ಸಂಘಟನೆಗಳು
- ಶ್ರೀ ಗಜಾನನ ಯುವಕ ಮಂಡಳಿ, ಹಣಮಸಾಗರ
- ನೇತಾಜಿ ಸುಭಾಸ್ ಚಂದ್ರ ಬೋಸ್ ಯುವಕ ಮಂಡಳಿ, ಹಣಮಸಾಗರ
ಶಿಕ್ಷಣ
ಬದಲಾಯಿಸಿಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1955ರಲ್ಲಿ ಸ್ಠಾಪಿತವಾಗಿದೆ. ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿವರೆಗೆ 150ರಕ್ಕೂ ಹೆಚ್ಚು ವಿದ್ಯಾರ್ಥಿಗಳ್ಳಿದ್ದಾರೆ.
- ಶಾಲೆಯ ಪಕ್ಷಿನೋಟ
ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಸುಕ್ಷೇತ್ರ ಹಣಮಸಾಗರ ಒಂದು ಚಿಕ್ಕ ಗ್ರಾಮವಾಗಿದ್ದು, ಗ್ರಾಮದಲ್ಲಿ ಈ ಶಾಲೆಯು ದಿನಾಂಕ : 05/06/1947 ರಲ್ಲಿ ಮಂಜೂರಾತಿ ಆದೇಶವಾಯಿತು. ಅಧಿಕೃತವಾಗಿ ದಿನಾಂಕ:15-08-1947 ರಂದು ಸ್ವಾತಂತ್ರ್ಯ ಸಿಕ್ಕ ದಿನದಂದು ಸ್ವಾತಂತ್ಯೋತ್ಸವ ಸಂಭ್ರಮಾಚರಣೆಯೊಂದಿಗೆ ಶಾಲೆಯು ಅಧಿಕೃತವಾಗಿ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಶಾಲೆಯ ಕ್ರಮ ಸಂಖ್ಯೆ 147 ಇದ್ದು ಪ್ರಾರಂಭದಲ್ಲಿ ಶಾಲೆಯು ಶಿಕ್ಷಕರ ಮಂಜೂರಾತಿ ಇಲ್ಲದ ಕಾರಣ ಶ್ರೀ ಓ.ಗು.ಪೂಜಾರಿ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಊರಿನ ಚಂದ್ರ ಶಾಲೆಯಲ್ಲಿ ಒಂದನೇ ತರಗತಿಯನ್ನು ಪ್ರಾರಂಭಿಸಿದರು. ಅದೇ ಚಂದ್ರ ಶಾಲೆಯಲ್ಲಿ ಸತತ 08 ವರ್ಷಗಳವರೆಗೆ ಶಾಲೆ ನಡೆದು 1955ರಲ್ಲಿ ಈಗಿನ ಪ್ರಸಕ್ತ ಸ್ಥಳದಲ್ಲಿ ಸರಕಾರಿ ಶಾಲೆಯ ಮೊದಲನೆಯ ಕೋಣೆಯು ಶ್ರೀ ಈರಬಸಯ್ಯಾ ಮಠಪತಿ ಇವರ ಭೂದಾನದಿಂದ ದೊರೆತ 20 ಗುಂಟೆ ಜಾಗೆಯಲ್ಲಿ ಪ್ರಾರಂಭವಾಯಿತು. ಎರಡನೆಯ ಕೋಣೆಯು 1985ರಲ್ಲಿ ಕಟ್ಟಲ್ಪಟ್ಟಿತು. ಕ್ರಮೇಣ ಹಂತ ಹಂತವಾಗಿ OBB, DPEP ಮತ್ತು SSA ಯೋಜನೆಗಳಲ್ಲಿ ಒಟ್ಟು 8 ಕೋಣೆಗಳು ನಿರ್ಮಾಣವಾಗಿವೆ.
- ಶಿಕ್ಷಕರು
ಪ್ರಾರಂಭದಲ್ಲಿ ತರಗತಿಗಳನ್ನು ಯಾವುದೇ ಸಂಭಾವನೆಯಿಲ್ಲದೆ ತರಗತಿಗಳನ್ನು ನಡೆಸಿಕೊಂಡು ಬಂದ ಓ.ಗು.ಪೂಜಾರಿ ಶಿಕ್ಷಕರ ನಿಧನದ ನಂತರ ಸದರಿ ಶಾಲೆಗೆ ಕಂಬಾಗಿಯ ಶ್ರೀ ದೇವೇಂದ್ರ ಬಡಿಗೇರ, ಶ್ರೀ ಕೆಂಗನಾಳ, ಶ್ರೀ ಚಲುವಾದಿ, ಜೈನಾಪೂರದ ಶ್ರೀ ಕುಲಕರ್ಣಿ, ಶ್ರೀ ಲಚ್ಚಪ್ಪ ತೊನಶ್ಯಾಳ(ಗುಣದಾಳ), ದೇವರಗೆಣ್ಣೂರಿನ ಶ್ರೀ ಮೋದೀನ್ ಕೋಲ್ಹಾರ, ಶ್ರೀಮತಿ ಆರ್.ಆರ್.ಪಾಟಿ, ಶ್ರೀ ಎಸ್.ಎಮ್. ಏಳಗಿ, ಶ್ರೀಮತಿ ರಾಯಣ್ಣವರ, ಶ್ರೀಮತಿ ಜಯಶ್ರೀ ಚಲ್ಲಾ, ಶ್ರೀ ಎನ್.ಎಲ್.ರಾಠೋಡ, ಶ್ರೀ ಎಸ್.ಎ.ಬಿರಾದರ, ಶ್ರೀಮತಿ ಎಸ್.ಎಮ್.ಸುನಗದ(ಕಾಖಂಡಕಿ), ಶ್ರೀಮತಿ ಕೋರಿ, ಶ್ರೀ ಎಸ್.ಎಸ್.ಪಾಟೀಲ(ಸಾರವಾಡ), ಶ್ರೀಮತಿ ಎಸ್.ಎಚ್.ನದಾಫ್, ಶ್ರೀಮತಿ ದೇಗಿನಾಳ, ಶ್ರೀ ತಳವಾರ, ಶ್ರೀ ಕುಲಕರ್ಣಿ ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳು. ಪ್ರಸ್ತುತ(2017) ಸದರಿ ಶಾಲೆಯಲ್ಲಿ ಶ್ರೀಮತಿ ಲಕ್ಷ್ಮೀ ಹೊಸಮನಿ, ಶ್ರೀಮತಿ ಏ.ವ್ಹಿ. ದೇಶಮುಖ, ಶ್ರೀ ಆರ್.ಎ.ಗಂಗೂರ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯು 1947 ರಿಂದ 1978 ರವರೆಗೆ 01 ರಿಂದ 04 ನೇ ತರಗತಿಯವರೆಗೆ ಇದ್ದದ್ದು, 1979ನೇ ಸಾಲಿನಿಂದ 1998 ರವರೆಗೆ 01ರಿಂದ 06ನೇ ವರ್ಗದವರೆಗೆ ತರಗತಿಗಳು ಇದ್ದವು. ನಂತರ 1999 ರಲ್ಲಿ 7ನೇ ವರ್ಗ ಪ್ರಾಂಭವಾಯಿತು. ನಂತರ 2004/05ನೇ ಸಾಲಿನಲ್ಲಿ 8ನೇ ತರಗತಿಯು ಪ್ರಾರಂಭವಾಯಿತು.
- ಹಳೆಯ ವಿಧ್ಯಾರ್ಥಿಗಳು
ಈ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ 6 ಜನ ಇಂಜಿನಿಯರ್, ಒಬ್ಬರು ತೋಟಗಾರಿಕೆ ಅಧಿಕಾರಿಯಾಗಿ, ಒಬ್ಬರು ಹೆಸ್ಕಾಂನಲ್ಲಿ ಲೈನಮ್ಯಾನಯಾಗಿ, ಅದೇ ತೆರನಾಗಿ ಮಿಲಿಟರಿಯಲ್ಲಿ 9 ಜನರು, ಪೋಲಿಸ್ ಇಲಾಖೆಯಲ್ಲಿ ಇಬ್ಬರು, ಸರಕಾರಿ ಶಾಲೆ ಶಿಕ್ಷಕರಾಗಿ 4 ಜನ ಹಾಗೂ ಖಾಸಗಿ ಶಾಲಾ ಶಿಕ್ಷಕರಾಗಿ 6 ಜನ ಹಾಗೂ ಬೇರೆ ಬೇರೆ ಇಲಾಖೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಏಳಿಗೆಗಾಗಿ ಯುವಕರು ಪಾಲಕರು ಪ್ರೋತ್ಸಾಹ ಹೊಂದಲು, ಚೈತನ್ಯ ಶಕ್ತಿಯಾಗಿ ಪರಮ ಪೂಜ್ಯ ವೇದಮೂರ್ತಿ ಶ್ರೀ ಶಿವಯ್ಯಾ ಮಹಾ ಸ್ವಾಮಿಗಳು ಬಬಲಾದಿ ಮಠ ಹಣಮಸಾಗರ ಇವರ ಕೃಪಾಶೀರ್ವಾದ ಹಾಗೂ ಮಾರ್ಗದರ್ಶನ ಪ್ರಮುಖವಾಗಿದೆ.
- ಬೇಸಿಗೆ ಸಂಭ್ರಮ ಕಾರ್ಯಕ್ರಮ
ಕಳೆದ 2010-2016 ವರ್ಷಗಳಲ್ಲಿ ಸದರಿ ಶಾಲೆಯ ದಾಖಲಾತಿ ಹಾಜರಾತಿ ಕುಸಿಯುತ್ತಾ ಬಂದು ಕೇವಲ 62 ಮಕ್ಕಳು ಮಾತ್ರ 1ರಿಂದ 8ನೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸ್ತುತ ಸಾಲಿನಲ್ಲಿ ಸರಕಾರವು ಜಾರಿಗೆ ತಂದಂತಹ ಬೇಸಿಗೆ ಸಂಭ್ರಮಕಾರ್ಯಕ್ರಮದಡಿಯಲ್ಲಿ ಸದರಿ ಶಾಲೆಯ ಮಕ್ಕಳು ಉತ್ಸುಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಯೊಜನೆಯು ಖಾಸಗಿ ಶಾಲೆಗಳಲ್ಲಿ ವಿಸ್ತರಣೆಯಾಗಿರಲಿಲ್ಲ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ತಮ್ಮ ಬೇಸಿಗೆ ಸಮಯವನ್ನು ಮನೆಯಲ್ಲಿಯೆ ಕಳೆಯದೆಯೇ ಸರಕಾರಿ ಶಾಲೆಯ ಮಕ್ಕಳೊಂದಿಗೆ ಬೆರೆತು ಇಲ್ಲಿಯ ಚಟುವಟಿಕೆಗಳು ಆಟ-ಪಾಠಗಳಲ್ಲಿ ಸಕ್ರೀಯವಾಗಿ ಬೆರೆತು ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಆಕರ್ಷಣೀಯ ಭೋಧನೆ, ಶಾಲಾ ಪರಿಸರಕ್ಕೆ ಆಕರ್ಷಿತರಾಗಿ ಪ್ರತಿ ದಿನವು ಶಾಲೆಗೆ ಬರಲು ರೂಢಿಸಿಕೊಂಡರು. ಸದರಿ ಗ್ರಾಮದಲ್ಲಿರುವ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷ್ಕಕರು ಸಹ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಸ್ವಯಂಪ್ರೆರಿತರಾಗಿ ಆಕರ್ಷಕ ಬೋಧನೆಯನ್ನು ಮಾಡಿದ್ದರಿಂದ ತಮ್ಮ ಮಕ್ಕಳ ಸಾಧನೆಯನ್ನು ಗಮನಿಸಿದ ಪಾಲಕರು, ಪೋಷಕರು ಸಂಘ ಸಂಸ್ಥೆಗಳವರು, ಜನಪ್ರತಿನಿಧಿಗಳು ಸಹ, ಸರಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವದನ್ನು ಮನಗಂಡ ಪಾಲಕರು ತಮ್ಮ ಮಕ್ಕಳ ಖಾಸಗಿ ಶಾಲೆಯಲ್ಲಿ ಒದುವದು ಬೇಡ ಎಂದು ನಿರ್ಧಾರ ಕೈಗೊಂಡು ಖಾಸಗಿ ಶಾಲೆಯಿಂದ, ತಮ್ಮೂರಿನ ಸರಕಾರಿ ಶಾಲೆಯಲ್ಲಿ ಓದಿಸುವ ಹಂಬಲವನ್ನು ವ್ಯಕ್ತಪಡಿಸಿ ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾದರು.
ಸಾಕ್ಷರತೆ
ಬದಲಾಯಿಸಿಗ್ರಾಮದ ಸಾಕ್ಷರತೆ(2011) ಪ್ರಮಾಣವು ಸುಮಾರು 66.37%ರಷ್ಟಿದ್ದು. ಅದರಲ್ಲಿ 76.37% ಪುರುಷರು ಹಾಗೂ 55.63% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯ
ಬದಲಾಯಿಸಿಗ್ರಾಮವು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಗ್ರಾಮದ ಹಿರಿಯರಾದ ಶ್ರೀ ಮಹಾದೇವಪ್ಪ ಮದರಖಂಡಿಯವರು ವಿಜಯಪುರ ತಾಲ್ಲೂಕ ಪಂಚಾಯತಿಯ ಮಾಜಿ ಸದಸ್ಯರು. ಗ್ರಾಮವು ಕಂಬಾಗಿ ಗ್ರಾಮ ಪಂಚಾಯತಿ ಹಾಗೂ ಬಬಲೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ.
ಬ್ಯಾಂಕ್
ಬದಲಾಯಿಸಿ- ಪರಮ ಪೂಜ್ಯ ಶ್ರೀ ಶಿವಯೋಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ, ಹಣಮಸಾಗರ
ಹಾಲು ಉತ್ಪಾದಕ ಸಹಕಾರಿ ಸಂಘ
ಬದಲಾಯಿಸಿಗ್ರಾಮದಲ್ಲಿ ಕೆ.ಎಮ್.ಎಫ್.(ನಂದಿನಿ)(ಕರ್ನಾಟಕ ಹಾಲು ಒಕ್ಕೂಟ)ನ ಸಹಾಯದೊಂದಿಗೆ ಹಾಲು ಉತ್ಪಾದಕ ಸಹಕಾರಿ ಸಂಘ ಸ್ಥಾಪಿತವಾಗಿದೆ. ನಂದಿನಿ ಮುಖ್ಯ ಕಾರ್ಯಾಲಯವು ವಿಜಯಪುರ ನಗರದ ಹತ್ತಿರವಿರುವ ಭೂತನಾಳ ಗ್ರಾಮದಲ್ಲಿದೆ.
ದೂರವಾಣಿ ಸಂಕೇತ
ಬದಲಾಯಿಸಿಬಿ.ಎಸ್.ಎನ್.ಎಲ್. ಮುಖ್ಯ ದೂರವಾಣಿ ಕೇಂದ್ರವು ಬಬಲೇಶ್ವರ ಗ್ರಾಮದಲ್ಲಿದೆ.
- ದೂರವಾಣಿ ಸಂಕೇತ - 08355
ಅಂಚೆ ಸೂಚ್ಯಂಕ ಸಂಖ್ಯೆ
ಬದಲಾಯಿಸಿಮುಖ್ಯ ಅಂಚೆ ಕಚೇರಿಯು ಸಾರವಾಡ ಗ್ರಾಮದಲ್ಲಿದೆ. ಉಪ ಅಂಚೆ ಕಚೇರಿಯು ಕಂಬಾಗಿ ಗ್ರಾಮದಲ್ಲಿದೆ.
- ಅಂಚೆ ಸೂಚ್ಯಂಕ ಸಂಖ್ಯೆ - 586125
ಸಾರಿಗೆ
ಬದಲಾಯಿಸಿಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ.ಮೀ. ದೂರವಿದ್ದು, ಗ್ರಾಮದ ರಸ್ತೆಯು ಕಂಬಾಗಿ - ಬಬಲೇಶ್ವರ ಮಾರ್ಗವಾಗಿ ವಿಜಯಪುರ ನಗರವನ್ನು ತಲಪುತ್ತದೆ.
ರಾಜ್ಯ ಹೆದ್ದಾರಿ
ಬದಲಾಯಿಸಿಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ ರಾಜ್ಯ ಹೆದ್ದಾರಿ - 55 ಹಾದೂಹೋಗಿದೆ.
ನಕ್ಷೆ
ಬದಲಾಯಿಸಿಗೂಗಲನಲ್ಲಿ ಹಾಲಸಾಗರ ಗ್ರಾಮದ ನಕ್ಷೆ
ವಿಕಿಮ್ಯಾಪಿಯಾದಲ್ಲಿ ಹಣಮಸಾಗರ ಗ್ರಾಮದ ನಕ್ಷೆ
ದಿಕ್ಕುಗಳು
ಬದಲಾಯಿಸಿ