ವೃಕ್ಷಗಳ ಪಟ್ಟೆ ಎಂಬುದು ವೃಕ್ಷಗಳು ಬೆಳೆಯುವ ಅವಕಾಶವನ್ನು ಹೊಂದಿರುವಂತಹಾ ವಾಸಸ್ಥಾನ/ವಸತಿಪ್ರದೇಶಗಳ ಒಂದು ಕೊನೆಯಾಗಿರುತ್ತದೆ. ವೃಕ್ಷಗಳ ಪಟ್ಟೆಯಿಂದಾಚೆಗೆ, ಸೂಕ್ತವಲ್ಲದ ಪರಿಸರೀಯ ಪರಿಸ್ಥಿತಿಗಳ ಕಾರಣದಿಂದಾಗಿ (ಸಾಧಾರಣವಾಗಿ ತಂಪಾದ ತಾಪಮಾನದ ಸ್ಥಿತಿ, ಗಾಳಿಯ ಒತ್ತಡ ಸಾಕಷ್ಟಿರದ ಪರಿಸ್ಥಿತಿ, ಅಥವಾ ತೇವಾಂಶದ ಕೊರತೆ) ಅವುಗಳು ಬೆಳೆಯಲು ಸಾಧ್ಯವಾಗುವುದಿಲ್ಲ. ಕೆಲವರು ಇದಕ್ಕೆ ಹೆಚ್ಚುವರಿಯಾಗಿ ವೃಕ್ಷಗಳು ಕಾಂಡಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವ ಇನ್ನೂ ದಟ್ಟವಾದ ಚೌಬೀನೆಪಟ್ಟೆ ಯನ್ನು ಕೂಡಾ ಪ್ರತ್ಯೇಕವಾಗಿ ಗುರುತಿಸುತ್ತಾರೆ.

ಸ್ವಿಟ್ಜರ್ಲೆಂಡ್‌ನ St. ಮಾರಿಟ್ಜ್‌ನ ಮೇಲಿರುವ ವೃಕ್ಷಗಳ ಪಟ್ಟೆ.ಮೇ 2009
ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಯ ಈ ನೋಟದಲ್ಲಿ, ದೂರದಲ್ಲಿ ಕಾಣುವ ರೇಖೆಯು ನಿರ್ದಿಷ್ಟವಾಗಿ ಸ್ಪಷ್ಟವಾಗಿದೆ. ಮುನ್ನೆಲೆಯು ವೃಕ್ಷಗಳ ಸ್ಥಿತಿಯಿಂದ ವೃಕ್ಷಗಳಿಲ್ಲದ ಸ್ಥಿತಿಗೆ ಆಗುವ ಸ್ಥಿತ್ಯಂತರವನ್ನು ತೋರಿಸುತ್ತದೆ. ಶೀತಲ ವಾತಾವರಣ ಹಾಗೂ ನಿರಂತರ ಗಾಳಿಯಿಂದಾಗಿ ಈ ವೃಕ್ಷಗಳು ಕುಂಠಿತ ಬೆಳವಣಿಗೆಯನ್ನು ಹೊಂದಿದ್ದು ಕೇವಲ ಒಂದು ಬದಿಗೆ ಬೆಳೆದಿವೆ.

ವೃಕ್ಷಗಳ ಪಟ್ಟೆಯ ಪ್ರದೇಶದಲ್ಲಿ, ಮರಗಳ ಬೆಳವಣಿಗೆಯು ಬಹುತೇಕ ತೀರಾ ಕುಂಠಿತವಾಗಿರುತ್ತದೆ, ಅಲ್ಲಿನ ಕಡೆಯ ಸಾಲಿನ ವೃಕ್ಷಗಳು ಹೆಚ್ಚೇನೂ ಎತ್ತರವಿಲ್ಲದ, ದಟ್ಟವಾಗಿ ಜೊಂಡುಗಟ್ಟಿದ ಪೊದೆಗಳನ್ನು ಹೊಂದಿರುತ್ತದೆ. ಇವುಗಳು ಮಾರುತದ ಪ್ರಭಾವದಿಂದ ಹೀಗೆ ರೂಪುಗೊಂಡಿದ್ದರೆ ಅವುಗಳನ್ನು 'ಸುರುಳಿ ಸುತ್ತಿಕೊಂಡಿರುವ ಮರ' ಎಂಬರ್ಥದ ಜರ್ಮನ್‌ ಪದವಾದ ಕ್ರುಮ್ಮ್‌ಹೋಲ್ಜ್‌‌ ಸಂರಚನೆ ಎಂಬ ಹೆಸರಿನಿಂದ ಕರೆಯುತ್ತಾರೆ.

ವೃಕ್ಷಗಳ ಪಟ್ಟೆಯು ಕೂಡಾ, ಇನ್ನೂ ಹಲವು ನೈಸರ್ಗಿಕ ಸ್ವರೂಪಗಳಂತೆಯೇ (ಉದಾಹರಣೆಗೆ ಸರೋವರದ ಮೇರೆಗಳಂತೆ), ದೂರದಿಂದ ನೋಡಿದಾಗ ಸರಳ ಸುಸ್ಪಷ್ಟ ಸ್ವರೂಪ ಹೊಂದಿದಂತೆ ಕಂಡುಬಂದರೂ, ಸಾಕಷ್ಟು ಸಮೀಪವಾಗಿ ಹೋಗಿ ನೋಡಿದರೆ ಬಹುತೇಕ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳು ಗೋಚರಿಸತೊಡಗುತ್ತವೆ. ವೃಕ್ಷಗಳು ಹೆಚ್ಚು ರಕ್ಷಣೆಯಿಲ್ಲದ ವಾತಾವರಣದ ಸಂದರ್ಭದಲ್ಲಿ ಹೆಚ್ಚು ಎತ್ತರವಿಲ್ಲದೆ ತಾವೇ ಸ್ವತಃ ಬೆಳೆಯುವುದನ್ನು ನಿಲ್ಲಿಸುವವರೆಗೆ ಬೆಳೆಯುತ್ತಾ ಹೋಗುತ್ತವೆ.

ವಿಧಗಳು

ಬದಲಾಯಿಸಿ

ಭೂವಿಜ್ಞಾನಶಾಸ್ತ್ರ ಹಾಗೂ ಪರಿಸರಶಾಸ್ತ್ರಗಳಲ್ಲಿ ಹಲವು ವಿಧಗಳ ವೃಕ್ಷಗಳ ಪಟ್ಟೆಗಳನ್ನು ವಿಷದೀಕರಿಸಲಾಗಿದೆ:

ಉನ್ನತ ಪರ್ವತದ/ಅಲ್ಪೈನ್‌ ಗಿಡ

ಬದಲಾಯಿಸಿ

ಇದು ವೃಕ್ಷಗಳು ಬೆಳೆಯಲು ಸಾಧ್ಯವಿರುವ ಅತ್ಯಂತ ಉನ್ನತ ಎತ್ತರದ ಪ್ರದೇಶವಾಗಿರುತ್ತದೆ; ಇದಕ್ಕಿಂತಾ ಮೇಲೆ ಹೋದರೆ, ಆ ಪ್ರದೇಶ ತೀರಾ ತಣ್ಣಗಿರುತ್ತದೆ ಅಥವಾ ಹಿಮದ ಹೊದಿಕೆಗಳು ವರ್ಷದ ಬಹುತೇಕ ಭಾಗದ ಅವಧಿಯಲ್ಲಿಯೂ ಆವರಿಸಿದ್ದು ವೃಕ್ಷಗಳು ಅಲ್ಲಿ ಉಳಿಯಲು ಆಸ್ಪದವಿರುವುದಿಲ್ಲ. ಸಾಧಾರಣವಾಗಿ ಪರ್ವತಗಳಿಗೆ ಸಂಬಂಧಿಸಿದಂತೆ ಹೆಸರಿಸುವ ವೃಕ್ಷಗಳ ಪಟ್ಟೆಗಿಂತ ಮೇಲಿರುವ ವಾತಾವರಣಕ್ಕೆ ಉನ್ನತ ಪರ್ವತದ/ಅಲ್ಪೈನ್‌ ವಾತಾವರಣ ಎಂದು ಕರೆಯಲಾಗುತ್ತದೆ, ಹಾಗೂ ಅಲ್ಲಿನ ಭೂಪ್ರದೇಶವನ್ನು ಉನ್ನತ ಪರ್ವತದ/ಅಲ್ಪೈನ್‌ ಪಾಚಿ ಬಯಲು/ಜೌಗುಪ್ರದೇಶ ಎಂದು ಕರೆಯಬಹುದಾಗಿದೆ. ಉತ್ತರ ಗೋಳಾರ್ಧದಲ್ಲಿ ಉತ್ತರ ದಿಕ್ಕಿನೆಡೆಗೆ ಮುಖ ಮಾಡಿರುವ ಇಳಿಜಾರು ಪ್ರದೇಶಗಳಲ್ಲಿರುವ ವೃಕ್ಷಗಳ ಪಟ್ಟೆಗಳ ಎತ್ತರವು ದಕ್ಷಿಣದಿಕ್ಕಿನೆಡೆಗೆ ಮುಖ ಮಾಡಿರುವ ಇಳಿಜಾರು ಪ್ರದೇಶಗಳಿಗಿಂತ ಕಡಿಮೆಯಿರುತ್ತದೆ ಏಕೆಂದರೆ ಹೆಚ್ಚಾದ ನೆರಳಿನಿಂದಾಗಿ ಹಿಮದ ಪದರವು ಕರಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರಿಂದ ವೃಕ್ಷಗಳಿಗೆ ಬೆಳೆಯುವ ಅವಧಿಯನ್ನು ಮೊಟಕುಗೊಳಿಸುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯು ನಡೆಯುತ್ತದೆ.

ಮರುಭೂಮಿ

ಬದಲಾಯಿಸಿ

ಈ ಪ್ರದೇಶಗಳು ವೃಕ್ಷಗಳು ಬೆಳೆಯಬಲ್ಲ ಅತ್ಯಂತ ಶುಷ್ಕವಾದ ಪ್ರದೇಶಗಳಾಗಿರುತ್ತವೆ; ಎಂದರೆ ವೃಕ್ಷಗಳು ಬೆಳೆಯಲು ಅಗತ್ಯವಾದಷ್ಟು ಪ್ರಮಾಣದ ಮಳೆಯನ್ನು ಪಡೆಯದ ಶುಷ್ಕವಾದ ಮರುಭೂಮಿ ಪ್ರದೇಶಗಳು ಇವಾಗಿರುತ್ತದೆ. ಈ ಪ್ರದೇಶಗಳನ್ನು "ಕೆಳಮಟ್ಟದ" ವೃಕ್ಷಗಳ ಪಟ್ಟೆ ಎಂದು ಕರೆಯುವುದು ರೂಢಿಯಾಗಿದ್ದು ಇವು ನೈಋತ್ಯ ಯುನೈಟೆಡ್‌ ಸ್ಟೇಟ್ಸ್‌‌ನ ಮರುಭೂಮಿ ಪ್ರದೇಶದಲ್ಲಿ ಸಾಧಾರಣ ಸುಮಾರು 5000 ftಗಳಿಗಿಂತಲೂ (1500 m) ಕಡಿಮೆ ಔನ್ನತ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಮರುಭೂಮಿ ವೃಕ್ಷಗಳ ಪಟ್ಟೆಯು ಧೃವಪ್ರದೇಶಗಳೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳು ವಿಷುವದ್ರೇಖೆಯೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳಿಗಿಂತ ಎತ್ತರದಲ್ಲಿರುವ ಪ್ರವೃತ್ತಿ ಹೊಂದಿರುತ್ತವೆ, ಏಕೆಂದರೆ ಧೃವಪ್ರದೇಶಗಳೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳಲ್ಲಿರುವ ಹೆಚ್ಚಿನ ಪ್ರಮಾಣದ ನೆರಳು ಆಯಾ ಇಳಿಜಾರು ಪ್ರದೇಶಗಳನ್ನು ತಂಪಾಗಿರಿಸುತ್ತಲ್ಲದೇ ತೇವಾಂಶವು ವೇಗವಾಗಿ ಆವಿಯಾಗದಂತೆ ತಡೆಗಟ್ಟುತ್ತದೆ, ಇದರಿಂದಾಗಿ ವೃಕ್ಷಗಳಿಗೆ ದೀರ್ಘಕಾಲದ ಬೆಳವಣಿಗೆಯ ಅವಧಿ ದೊರಕುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ನೀರಿನ ಬಳಕೆಗೆ ಆಸ್ಪದವಿರುತ್ತದೆ.

ಮರುಭೂಮಿ - ಉನ್ನತ ಪರ್ವತದ/ಅಲ್ಪೈನ್‌ ಗಿಡ

ಬದಲಾಯಿಸಿ

ಕೆಲ ಪರ್ವತಮಯ ಪ್ರದೇಶಗಳಲ್ಲಿ, ಘನೀಕರಣ ಮಿತಿಗಿಂತ ಹೆಚ್ಚಿನ ಔನ್ನತ್ಯಗಳಲ್ಲಿ ಅಥವಾ ವಿಷುವದ್ರೇಖೆಯೆಡೆಗೆ ಮುಖ ಮಾಡಿದ ಹಾಗೂ ಗಾಳಿಮರೆಯ ಇಳಿಜಾರು ಪ್ರದೇಶಗಳು ಕಡಿಮೆ ಪ್ರಮಾಣದ ಮಳೆಗೆ ಹಾಗೂ ಸೌರ ವಿಕಿರಣಕ್ಕೆ/ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವಿಕೆಗೆ ಕಾರಣವಾಗಬಹುದಾಗಿರುತ್ತದೆ. ಇದು ಮಣ್ಣನ್ನು ಶುಷ್ಕವಾಗಿಸುತ್ತದಲ್ಲದೇ ವೃಕ್ಷಗಳಿಗೆ ಸರಿಹೊಂದದ ಶುಷ್ಕವಾದ ಸ್ಥಳೀಯ ವಾತಾವರಣವನ್ನುಂಟಾಗುವುದಕ್ಕೆ ಕಾರಣವಾಗುತ್ತದೆ. 10,000 ftಗಳಿಗಿಂತಲೂ ಎತ್ತರವಿರುವ ಹವಾಯ್‌ ದ್ವೀಪಗಳಲ್ಲಿನ ಮೌನಾ ಲೋವಾದ ಇಳಿಜಾರು ಪ್ರದೇಶಗಳು ಇವಕ್ಕೆ ಉದಾಹರಣೆಯಾಗಿವೆ. U.S.ನ ಪಶ್ಚಿಮ ಭಾಗದ ಪರ್ವತಸಾಲುಗಳ ಹಲವು ದಕ್ಷಿಣದಿಕ್ಕಿನೆಡೆಗೆ ಮುಖ ಮಾಡಿದ ಬೆಟ್ಟಸಾಲುಗಳು ಉತ್ತರ ದಿಕ್ಕಿನೆಡೆಗೆ ಮುಖ ಮಾಡಿದವುಗಳಿಗಿಂತ ಅಲ್ಪ ಮಟ್ಟದ ವೃಕ್ಷಗಳ ಪಟ್ಟೆಯನ್ನು ಹೊಂದಿರುತ್ತವೆ, ಇದಕ್ಕೆ ಕಾರಣ ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದು ಹಾಗೂ ಶುಷ್ಕತೆಯಿರುವುದು.

ಡಬಲ್‌/ಮುದುಡಿದ ಮರಸಾಲು/ಸುರುಳಿ ಮರಸಾಲು

ಬದಲಾಯಿಸಿ

ಬೇರೆ ಬೇರೆ ವಿಧಗಳ ಮರಗಳ ತಳಿಗಳು ಜಲಕ್ಷಾಮಗಳಿಗೆ ಹಾಗೂ ತಂಪಾಗುವಿಕೆಗಳ ಸಹಿಷ್ಣುತೆಗಳನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ಹೊಂದಿರುತ್ತವೆ. ಮಹಾಸಾಗರಗಳು ಅಥವಾ ಮರುಭೂಮಿಗಳಿಂದ ಪ್ರತ್ಯೇಕಿಸಲ್ಪಡುವ ಪರ್ವತಸಾಲುಗಳು ಸೀಮಿತ ಸಂಗ್ರಹಗಳ ಮರಗಳ ತಳಿಗಳನ್ನು ಹೊಂದಿರಬಹುದಾಗಿದ್ದು ಅವುಗಳಲ್ಲಿ ಕೆಲವು ತಳಿಗಳಿಗೆ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಗಿಂತ ಮೇಲಿನ ಅಂತರಗಳಿದ್ದರೆ, ಉಳಿದ ಕೆಲವು ತಳಿಗಳಿಗೆ ಮತ್ತೂ ಕೆಳಗೆ ಮರುಭೂಮಿ ವೃಕ್ಷಗಳ ಪಟ್ಟೆಗಳಿಗಿಂತ ಕೆಳಮಟ್ಟದಲ್ಲಿರುತ್ತವೆ. ಉದಾಹರಣೆಗೆ ಉತ್ತರ ಅಮೇರಿಕಾದ ಭಾರೀ/ಬೃಹತ್‌ ಜಲಾನಯನ ಭೂಮಿಯಲ್ಲಿರುವ ಹಲವು ಪರ್ವತ ಶ್ರೇಣಿಗಳು ಪಿನ್ಯಾನ್‌ ತಳಿಗಳ ಪೈನ್‌ ಹಾಗೂ ಜ್ಯೂನಿಪರ್‌ ಮರಗಳ ಕೆಳಮಟ್ಟದ ವಲಯ/ಮಂಡಲಗಳು ಮಧ್ಯಂತರವಾಗಿ ಪೊದೆಗಳಿಂದ ಕೂಡಿದ ಆದರೆ ಮರಗಳಿಲ್ಲದ ವಲಯ ಪ್ರದೇಶಗಳಿಂದ ಲಿಂಬರ್‌‌ ಮತ್ತು ಬ್ರಿಸ್ಟಲ್‌ಕೀನ್‌ ಪೈನ್‌ಗಳ ಮೇಲಿನ ವಲಯದಿಂದ ಪ್ರತ್ಯೇಕಿಸಲ್ಪಟ್ಟಿದೆ.

ಅಭಿಮುಖತೆ/ಎಕ್ಸ್‌‌ಪೋಷರ್‌

ಬದಲಾಯಿಸಿ

ಕರಾವಳಿ ಪ್ರದೇಶಗಳಲ್ಲಿ ಹಾಗೂ ಪ್ರತ್ಯೇಕವಾಗಿರುವ ಪರ್ವತಗಳಲ್ಲಿ ವೃಕ್ಷಗಳ ಪಟ್ಟೆಯು ಅನೇಕವೇಳೆ ಒಳನಾಡಿನಲ್ಲಿ ಅದಕ್ಕೆ ಸದೃಶವಾಗಿರುವ ಎತ್ತರಗಳಿಗಿಂತ ಸಾಕಷ್ಟು ಕಡಿಮೆ ಎತ್ತರದಲ್ಲಿರುತ್ತವೆ ಹಾಗೂ ಮತ್ತಷ್ಟು ಸಂಕೀರ್ಣ ಪರ್ವತ ವ್ಯವಸ್ಥೆಗಳಲ್ಲಿ ಹೆಚ್ಚಿನ ಎತ್ತರದಲ್ಲಿರುತ್ತವೆ, ಏಕೆಂದರೆ ಬಲವಾದ ಮಾರುತಗಳು ಮರಗಳ ಬೆಳವಣಿಗೆಯನ್ನು ಕುಂದಿಸುತ್ತವೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರಪಾತದ ಬುಡದಲ್ಲಿಯ ಓರೆಕಲ್ಲುರಾಶಿ ಅಥವಾ ಬಯಲಿನಲ್ಲಿನ ರಕ್ಷಣೆಯಿಲ್ಲದ ಶಿಲಾ ಸ್ವರೂಪಗಳಲ್ಲಿ ಕಂಡುಬರುವಂತಹಾ ಸೂಕ್ತವಾದ ಮಣ್ಣಿನ ಕೊರತೆಯು ವೃಕ್ಷಗಳು ಅಗತ್ಯವಾದಷ್ಟು ಬುಡಾಧಾರವನ್ನು ಪಡೆದುಕೊಳ್ಳಲು ಅನುವು ಮಾಡಗೊಡದಿರುವುದರಿಂದ ಅವುಗಳನ್ನು ಸೂರ್ಯನ ಬಿಸಿಲಿಗೆ ಹಾಗೂ ಜಲಕ್ಷಾಮಗಳಿಗೆ ಈಡು ಮಾಡುತ್ತದೆ.

ಆರ್ಕ್‌‌ಟಿಕ್‌‌/ಉತ್ತರ ಧೃವ

ಬದಲಾಯಿಸಿ

ಇದು ವೃಕ್ಷಗಳು ಬೆಳೆಯಬಲ್ಲ ಉತ್ತರ ಗೋಳಾರ್ಧದಲ್ಲಿನ ಅತ್ಯಂತ ಉತ್ತರದಲ್ಲಿನ ಅಕ್ಷಾಂಶದ ಪ್ರದೇಶವಾಗಿದೆ; ಮತ್ತಷ್ಟು ಉತ್ತರ ದಿಕ್ಕಿಗೆ ಹೋದರೆ, ವೃಕ್ಷಗಳು ಉಳಿಯಲಾರದಷ್ಟು ಶೀತಪ್ರದೇಶವಾಗಿರುತ್ತದೆ. ವಿಪರೀತ ಶೀತವಾದ ತಾಪಮಾನಗಳು ವೃಕ್ಷಗಳ ಅಂತರ್ಗತ ಜೀವರಸವನ್ನು ಘನೀಕೃತವಾಗಿಸುವ ಮೂಲಕ ಅವುಗಳನ್ನು ಸಾಯಿಸುತ್ತದೆ. ಇಷ್ಟು ಮಾತ್ರವಲ್ಲದೇ ಮಣ್ಣಿನಲ್ಲಿನ ಶೀತಕೆಳಸ್ತರವು ವೃಕ್ಷಗಳು ತಮಗೆ ಅಗತ್ಯವಾದ ಸಂರಚನಾತ್ಮಕ ಬೆಂಬಲವನ್ನು ಪಡೆದುಕೊಳ್ಳಲು ಬೇಕಾದ ಆಳಕ್ಕೆ ತನ್ನ ಬೇರುಗಳನ್ನು ಇಳಿಸಲು ಆಗದಂತೆ ಮಾಡುತ್ತದೆ.

ಅಂಟಾರ್ಕ್‌ಟಿಕ್‌/ದಕ್ಷಿಣ ಧೃವ

ಬದಲಾಯಿಸಿ

ಇದು ವೃಕ್ಷಗಳು ಬೆಳೆಯಬಲ್ಲ ದಕ್ಷಿಣ ಗೋಳಾರ್ಧದಲ್ಲಿನ ಅತ್ಯಂತ ದಕ್ಷಿಣದಲ್ಲಿನ ಅಕ್ಷಾಂಶದ ಪ್ರದೇಶವಾಗಿದೆ; ಮತ್ತಷ್ಟು ದಕ್ಷಿಣಕ್ಕೆ ಹೋದರೆ, ವೃಕ್ಷಗಳು ಉಳಿಯಲಾರದಷ್ಟು ಶೀತಪ್ರದೇಶವಾಗಿರುತ್ತದೆ. ಇದೊಂದು ಯಾವುದೇ ವಿಷದೀಕರಿಸಿದ ನಿರ್ದಿಷ್ಟ ಭೂಸ್ಥಾನಕ್ಕೆ ಅನ್ವಯಿಸಿದ ಸೈದ್ಧಾಂತಿಕ ಕಲ್ಪನೆಯಾಗಿದೆ. ಅಂಟಾರ್ಕ್‌ಟಿಕಾ/ದಕ್ಷಿಣ ಧೃವ ಅಥವಾ ಉಪ-ದಕ್ಷಿಣ ಧೃವದ ದ್ವೀಪಗಳಲ್ಲಿ ಯಾವುದೇ ವೃಕ್ಷಗಳು ಬೆಳೆಯುವುದಿಲ್ಲ. ಈ ವೃಕ್ಷಗಳ ಪಟ್ಟೆಯು ವೃಕ್ಷಗಳು ಎಂದಿಗೂ ಬೆಳೆಯಲಾರದ ವಾತಾವರಣದಲ್ಲಿನ ತೀರ ದಕ್ಷಿಣದಲ್ಲಿನ ಸ್ಥಳವಾಗಿದ್ದು, ಒಂದೇ ವ್ಯತ್ಯಾಸವೆಂದರೆ ಉತ್ತರಧೃವದ ವೃಕ್ಷಗಳ ಪಟ್ಟೆಗಳಿಗೆ ಸದೃಶವಾದ ನಿಜವಾದ ವೃಕ್ಷಗಳ ಪಟ್ಟೆಗಳಿರುವ ಯಾವುದೇ ಭೂಪ್ರದೇಶಗಳು ಆ ವಲಯದಲ್ಲಿಲ್ಲ.

ಇಂತಹಾ ಪ್ರದೇಶಗಳಲ್ಲಿನ ತಕ್ಷಣದ ಪರಿಸರವು ವೃಕ್ಷಗಳು ಬೆಳೆಯಲಿಕ್ಕೆ ತೀರ ವಿಷಮ ಪರಿಸ್ಥಿತಿಯನ್ನು ಹೊಂದಿರುತ್ತವೆ. ಈ ತರಹದ ಪರಿಸ್ಥಿತಿಗಳು ಯೆಲ್ಲೋಸ್ಟೋನ್‌ನಲ್ಲಿರುವಂತಹಾ ಶಾಖದಿಂದ ಕೂಡಿದ ಚಿಲುಮೆಗಳು ಅಥವಾ ಅಗ್ನಿಪರ್ವತಗಳಿಗೆ ಸಂಬಂಧಿಸಿದ ಭೂಮಿಯ ಒಳಗಿನ ಶಾಖದಿಂದ ಉಂಟಾಗುತ್ತದೆ, ಜೌಗು ಪ್ರದೇಶಗಳ ಬಳಿಯಲ್ಲಿರುವ ಮಣ್ಣಿನಲ್ಲಿ ಅತ್ಯುಗ್ರ ಆಮ್ಲತೆ, ಮಟ್ಟಸ ಒಣಭೂಮಿಗಳು ಅಥವಾ ಉಪ್ಪಿನಂಶವಿರುವ ಸರೋವರಗಳಿಗೆ ಸಂಬಂಧಿಸಿದ ಅಧಿಕ ಲವಣಾಂಶತೆ ಅಥವಾ ಬಹುತೇಕ ಮರಗಳ ಬೇರುಗಳಿಗೆ ಅಗತ್ಯವಾಗಿರುವ ಮಣ್ಣಿನಲ್ಲಿರುವ ಆಮ್ಲಜನಕವನ್ನು ಹೀರಿಕೊಳ್ಳುವಂತಹಾ ಅಂತರ್ಜಲದಿಂದ ಕೂಡಿದ ಭೂಪ್ರದೇಶಗಳಿಂದ ಹೀಗಾಗುತ್ತದೆ. ಸಮತಟ್ಟು ಜವುಗು ಭೂಮಿ ಹಾಗೂ ಸಾಧಾರಣ ಜವುಗು ಭೂಮಿಗಳ ಮೇರೆಗಳು ಈ ತರಹದ ಮುಕ್ತ/ಅನಾವೃತ ಪ್ರದೇಶಗಳಿಗೆ ಸರ್ವೇಸಾಮಾನ್ಯ ಉದಾಹರಣೆಗಳಾಗಿವೆ. ಆದಾಗ್ಯೂ, ಶಾಶ್ವತವಾಗಿ ತೇವಾಂಶ ಹೊಂದಿರುವ ಮಣ್ಣಿನಲ್ಲಿ ಬೆಳೆಯಲು ಹೊಂದಿಕೊಂಡಿರುವ ಬಾಲ್ಡ್‌ ಸೈಪ್ರೆಸ್‌ ಹಾಗೂ ಹಲವು ಮ್ಯಾಂಗ್ರೋವ್‌ ಮರಗಳ ತಳಿಗಳಂತಹಾ ವೃಕ್ಷಗಳು ಬೆಳೆಯುವ ಜೌಗುನೆಲಗಳಿಗೆ ಅಂತಹಾ ಯಾವುದೇ ಮೇರೆಗಳಿಲ್ಲ. ವಿಶ್ವದ ಕೆಲ ತೀರ ಶೀತದ ಭಾಗಗಳಲ್ಲಿ ಜೌಗು ಪ್ರದೇಶಗಳ ಸುತ್ತಮುತ್ತಲಿರುವ ವೃಕ್ಷಗಳ ಪಟ್ಟೆಗಳಿವೆ, ಅಂತಹಾ ಕಡೆಗಳಲ್ಲಿ ಬೆಳೆಯಲು ಸಾಧ್ಯವಾಗುವಂತಹಾ ಯಾವುದೇ ಸ್ಥಳೀಯ ವೃಕ್ಷಗಳ ತಳಿಗಳಿಲ್ಲ. ವಾತಾವರಣಕ್ಕೆ ಒಡ್ಡಿಕೊಳ್ಳುವ ಮನುಷ್ಯ-ನಿರ್ಮಿತ ಮಾಲಿನ್ಯಕ್ಕೀಡಾಗಿರುವ ಪ್ರದೇಶಗಳಲ್ಲಿ ಕೂಡಾ ವೃಕ್ಷಗಳ ಪಟ್ಟೆಗಳಿವೆ, ಮಾಲಿನ್ಯದ ಹೆಚ್ಚಿನ ಒತ್ತಡದಿಂದಾಗಿ ಎಳೆದಿರುವ ಹೊಸದಾದ ವೃಕ್ಷಗಳ ಪಟ್ಟೆಗಳು ಕೂಡಾ ಬೆಳೆದಿವೆ. ಇದಕ್ಕೆ ಉದಾಹರಣೆಗಳೆಂದರೆ ರಷ್ಯಾದಲ್ಲಿನ ನಿಕೆಲ್‌ ಪ್ರದೇಶದ ಸುತ್ತಲಿರುವ ಹಾಗೂ ಈ ಹಿಂದೆ ಎರ್ಜೆಬಿರ್ಗೆಯಲ್ಲಿದ್ದ ವೃಕ್ಷಗಳ ಪಟ್ಟೆಗಳು.

ಪ್ರಾತಿನಿಧಿಕ ಸಸ್ಯವರ್ಗ

ಬದಲಾಯಿಸಿ
 
ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಯಲ್ಲಿನ ತೀವ್ರತರವಾದ ಚಳಿಗಾಲದ ವಾತಾವರಣ ಪರಿಸ್ಥಿತಿಗಳು ಕುಂಠಿತಗೊಂಡ ಕ್ರುಮ್‌ಹೋಲ್ಜ್‌ ಬೆಳವಣಿಗೆಗೆ ಕಾರಣವಾಗುತ್ತದೆ. ಕಾರ್ಕೋನೊಸ್ಜೆ, ಪೋಲೆಂಡ್‌.
 
ಉತ್ತರಧೃವದ/ಆರ್ಕ್‌ಟಿಕ್‌ದಲ್ಲಿನ ಈಶಾನ್ಯ ಸೈಬೀರಿಯಾದ ಕೋಲಿಮಾ ಪ್ರದೇಶದಲ್ಲಿನ ಉತ್ತರಧೃವದ/ಆರ್ಕ್‌ಟಿಕ್‌ ಮರಗಳ ಪಟ್ಟೆಗೆ ಸಮೀಪವಾಗಿ ಬೆಳೆಯುತ್ತಿರುವ ಡಾಹೂರಿಯನ್‌ ಲಾರ್ಚ್‌ ಮರಗಳು.

ಕೆಲ ಪ್ರಾತಿನಿಧಿಕ ಉತ್ತರಧೃವದ ಹಾಗೂ ಉನ್ನತ ಪರ್ವತದ/ಅಲ್ಪೈನ್‌ ಮರಗಳ ಪಟ್ಟೆಗಳಲ್ಲಿ ಕಂಡುಬರುವ ಮರಗಳ ತಳಿಗಳು (ಕೋನಿಫರ್‌/ಶಂಕುಮರಗಳ ಪ್ರಾಬಲ್ಯತೆಯನ್ನು ಗಮನಿಸಿ):

ಯುರೇಷ್ಯಾ

ಬದಲಾಯಿಸಿ
  • ಡಹುರಿಯನ್‌ ಲಾರ್ಚ್‌ ಮರ (ಲ್ಯಾರಿಕ್ಸ್‌ ಜಿಮೆಲಿನೀ )
  • ಮೇಸ್‌ಡೋನಿಯನ್‌ ಪೈನ್‌ ಮರಗಳು (ಪೈನಸ್‌ ಪ್ಯೂಸ್‌ )
  • ಸ್ವಿಸ್‌ ಪೈನ್‌ ಮರ (ಪೈನಸ್‌ ಸೆಂಬ್ರಾ )
  • ಮೌಂಟೇನ್‌/ಪರ್ವ ಪೈನ್‌ ಮರ (ಪೈನಸ್‌ ಮುಗೋ )
  • ಆರ್ಕ್‌ಟಿಕ್‌ ವೈಟ್‌ ಬಿರ್ಚ್‌ ಮರ (ಬೆಟುಲಾ ಪ್ಯೂಬೆಸೆನ್ಸ್ subsp. ಟಾರ್ಚುವೋಸಾ )

ಉತ್ತರ ಅಮೆರಿಕಾ

ಬದಲಾಯಿಸಿ
  • ಸಬ್‌ಅಲ್ಪೈನ್‌ ಫಿರ್‌ ಮರ (ಏಬೀಸ್‌/ಅಬೀಸ್‌ ಲಾಸಿಯೋಚಾಕಾರ್ಪಾ )
  • ಸಬ್‌ಅಲ್ಪೈನ್‌ ಲಾರ್ಚ್‌ ಮರ (ಲೇ/ಲಾರಿಕ್ಸ್‌ ಲೈಯಾಲ್ಲೀ )
  • ಎಂಜೆಲ್‌ಮಾನ್ನ್‌‌ ಸ್ಪ್ರೂಸ್‌ ಮರ (ಪಿಸಿಯಾ ಎಂಜೆಲ್‌ಮಾನ್ನೀ )
  • ವೈಟ್‌ಬಾರ್ಕ್‌ ಪೈನ್‌ ಮರ (ಪೈನಸ್‌ ಅಲ್ಬಿಕಾಲಿಸ್‌ )
  • ಗ್ರೇಟ್‌ ಬೇಸಿನ್‌ ಬ್ರಿಸ್ಟಲ್‌ಕೋನ್‌ ಪೈನ್‌‌ ಮರ (ಪೈನಸ್‌ ಲಾಂಗೇವಾ )
  • ರಾಕಿ ಮೌಂಟೇನ್ಸ್‌ ಬ್ರಿಸ್ಟಲ್‌ಕೋನ್‌ ಪೈನ್‌‌ ಮರ (ಪೈನಸ್‌ ಅರಿಸ್ಟಾಟಾ )
  • ಫಾಕ್ಸ್‌ಟೇಲ್‌ ಪೈನ್‌ ಮರ (ಪೈನಸ್‌ ಬಾಲ್ಫೌರಿಯಾನಾ )
  • ಲಿಂಬರ್‌ ಪೈನ್‌ ಮರ (ಪೈನಸ್‌ ಫ್ಲೆಕ್ಸಿಲಿಸ್‌ )
  • ಪೊಟೊಸಿ ಪಿನ್ಯಾನ್‌ ಮರ (ಪೈನಸ್‌ ಕಲ್ಮಿನಿಕೋಲಾ )
  • ಬ್ಲ್ಯಾಕ್‌ ಸ್ಪ್ರೂಸ್‌ ಮರ (ಪಿಸಿಯಾ ಮರಿಯಾನಾ )
  • ಹಾರ್ಟ್‌ವೆಗ್‌ಸ್‌ ಪೈನ್‌ ಮರ (ಪೈನಸ್‌ ಹಾರ್ಟ್‌‌ವೆಜೀ )

ದಕ್ಷಿಣ ಅಮೆರಿಕಾ

ಬದಲಾಯಿಸಿ
 
ಚಿಲಿಯ ಟಾರ್ರೆಸ್‌ ಡೆಲ್‌ ಪೈನೆ ರಾಷ್ಟ್ರೀಯ ಉದ್ಯಾನದಲ್ಲಿರುವ ಮರಗಳ ಪಟ್ಟೆಗೆ ಸಮೀಪವಿರುವ ಮ್ಯಾಗೆಲ್ಲಾನಿಕ್‌ ಲೆಂಗಾ ಅರಣ್ಯಗಳ ನೋಟ.
  • ಅಂಟಾರ್ಕ್‌ಟಿಕ್‌ ಬೀಚ್‌ ಮರ (ನೊಥೊಫಾಗಸ್‌ ಅಂಟಾರ್ಕ್‌ಟಿಕಾ )
  • ಲೆಂಗಾ ಬೀಚ್‌‌ ಮರ (ನೊಥೊಫಾಗಸ್‌ ಪುಮಿಲಿಯೋ )
  • ಪಾಲಿಲೆಪಿಸ್‌ ಮರ (ಪಾಲಿಲೆಪಿಸ್‌ ಟಾರಾಪಾಕಾನಾ )

ಆಸ್ಟ್ರೇಲಿಯಾ

ಬದಲಾಯಿಸಿ
  • ಸ್ನೋ ಗಮ್‌ (ಯೂಕಲಿಪ್ಟಸ್‌ ಪಾಸಿಫ್ಲೋರಾ )

ವಿಶ್ವದಾದ್ಯಂತ ಆಗಿರುವ ಹಂಚಿಕೆ

ಬದಲಾಯಿಸಿ

ಅಲ್ಪೈನ್‌ ವೃಕ್ಷಗಳ ಪಟ್ಟೆಗಳು

ಬದಲಾಯಿಸಿ

ನಿರ್ದಿಷ್ಟ ಸ್ಥಳದಲ್ಲಿರುವ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಯು, ಇಳಿಜಾರೊಂದರ ಅಭಿಮುಖತೆ, ಛಾಯಾ ಮಳೆಯ/ಅಲ್ಪಾಂಶ ಮಳೆಯ ಪ್ರದೇಶ ಹಾಗೂ ಯಾವುದಾದರೊಂದು ಭೌಗೋಳಿಕ ಧೃವದೊಂದಿಗಿರುವ ಅಂತರಗಳಂತಹಾ ಅನೇಕ ಸ್ಥಳೀಯ ಅನಿರ್ದಿಷ್ಟಾಂಶಗಳ ಮೇಲೆ ಅವಲಂಬಿಸಿದೆ. ಇದರೊಂದಿಗೆ, ಕೆಲ ಉಷ್ಣವಲಯದ ಅಥವಾ ದ್ವೀಪ ಪ್ರದೇಶೀಯ ಸ್ಥಳಗಳಲ್ಲಿ ಜೀವಭೌಗೋಳಿಕ ಉಪ-ಉನ್ನತ ಪರ್ವತದ/ಅಲ್ಪೈನ್‌ ವಾತಾವರಣಗಳಲ್ಲಿ ವಿಕಸನವನ್ನು ಹೊಂದಿದ ಮರಗಳ ತಳಿಗಳಿಗೆ ಸುಲಭಗಮ್ಯತೆಯ ಕೊರತೆ ಇರುವ ಪರಿಸ್ಥಿತಿಯು ಕೇವಲ ವಾತಾವರಣದ ಪ್ರಭಾವದಿಂದಲೇ ಉಂಟಾಗಬಹುದು ಎಂದು ನಿರೀಕ್ಷಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ವೃಕ್ಷಗಳ ಪಟ್ಟೆಗಳು ಕಂಡುಬರಲಿಕ್ಕೆ ಕಾರಣವಾಗಬಹುದು.

ಈ ತರಹದ ತಡೆಯಿರುವುದನ್ನು ಗಮನದಲ್ಲಿರುವಂತೆಯೇ, ವಿಶ್ವದಾದ್ಯಂತದ ವಿವಿಧ ಸ್ಥಳಗಳಲ್ಲಿರುವ ವೃಕ್ಷಗಳ ಪಟ್ಟೆಗಳ ಸ್ಥೂಲವಾದ ಪಟ್ಟಿ ಕೆಳಕಂಡಂತಿದೆ:

ಸ್ಥಳ Approx. ಅಕ್ಷಾಂಶ Approx. ವೃಕ್ಷಗಳ ಪಟ್ಟೆಗಳ ಅಂದಾಜು ಔನ್ನತ್ಯ ಟಿಪ್ಪಣಿಗಳು
(m) (ft)
ಸ್ಕಾಟ್‌ಲೆಂಡ್ 57°N 500 1,600 ಪ್ರಬಲವಾದ ಸಮುದ್ರೀಯ/ಸಾಗರಿಕ ಪ್ರಭಾವ ತಂಪಾದ ಬೇಸಿಗೆಯ ಅವಧಿಗೆ ಕಾರಣವಾಗುತ್ತದೆ ಹಾಗೂ ಮರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ[]
ಸ್ವೀಡನ್‌‌ 68°N 800 2,600
ಚೂ/ಛೂಗಚ್/ಛ್‌ ಪರ್ವತಶ್ರೇಣಿ, ಅಲಾಸ್ಕಾ 61°N 700 2,300 ಕರಾವಳಿ ಪ್ರದೇಶಗಳಲ್ಲಿ ಸುಮಾರು 1500 ಅಡಿಗಳು ಅಥವಾ ಅದಕ್ಕೂ ಕೆಳಗಿನ ಮಟ್ಟದಲ್ಲಿ ವೃಕ್ಷಗಳ ಪಟ್ಟೆಗಳು ಕಂಡುಬರುತ್ತವೆ
ನಾರ್ವೆ‌ 61°N 1,100 3,600 ಕರಾವಳಿಯ ಬಳಿ ತೀರಾ ಕೆಳ ಮಟ್ಟದಲ್ಲಿ 5–600 ಮೀಟರ್‌ಗಳ ಮಟ್ಟದಲ್ಲಿ ಕಂಡುಬರುತ್ತದೆ. ಫಿನ್‌ಮಾರ್ಕ್‌ ಕೌಂಟಿಯಲ್ಲಿನ 71°N ಅಕ್ಷಾಂಶದಲ್ಲಿ, ವೃಕ್ಷಗಳ ಪಟ್ಟೆಯು ಸಮುದ್ರಮಟ್ಟಕ್ಕಿಂತ ಕೆಳಗಿನ ಮಟ್ಟದಲ್ಲಿದೆ (ಆರ್ಕ್‌ಟಿಕ್‌/ಉತ್ತರಧೃವದ ವೃಕ್ಷಗಳ ಪಟ್ಟೆ).
ಒಲಿಂಪಿಕ್‌ ಪರ್ವತ ಶ್ರೇಣಿ WA, USA 47°N 1,500 4,900 ಭಾರಿ ಪ್ರಮಾಣದಲ್ಲಿನ ಚಳಿಗಾಲದಲ್ಲಿನ ಹಿಮದ ಹೊದಿಕೆಯು ಚಿಕ್ಕ ವಯಸ್ಸಿನ ವೃಕ್ಷಗಳನ್ನು ಬೇಸಿಗೆ ಕಾಲದ ಸಾಕಷ್ಟು ಅವಧಿಯವರೆಗೆ ತನ್ನೊಳಗೆ ಸಮಾಧಿ ಮಾಡಿಕೊಂಡಿರುತ್ತದೆ
ಸ್ವಿಸ್ ಪರ್ವತ ಶಿಖರ ಶ್ರೇಣಿ 47°N 2,200 7,200 []
ಕೆನಡಿಯನ್‌ ರಾಕೀಸ್‌ ಪರ್ವತ ಶ್ರೇಣಿ 51°N 2,400 7,900
ಕಟಾಹ್‌ದಿನ್‌ ಪರ್ವತ, ಮೈನೆ, USA 46°N 1,150 3,770
ಪೂರ್ವ ಪರ್ವತ ಶಿಖರ ಶ್ರೇಣಿ, ಆಸ್ಟ್ರಿಯಾ, ಇಟಲಿ 46°N 1,750 5,740 ಪಶ್ಚಿಮ ಪರ್ವತ ಶಿಖರ ಶ್ರೇಣಿಗಳಿಗಿಂತಲೂ ರಷ್ಯಾದ ತಂಪು ಮಾರುತಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಡ್ಡಿಕೊಳ್ಳುತ್ತವೆ
ಪೀಡ್‌ಮಾಂಟ್‌ ಪರ್ವತ ಶಿಖರಶ್ರೇಣಿ, ವಾಯುವ್ಯ ಇಟಲಿ 45°N 2,100 6,900
ನ್ಯೂ ಹ್ಯಾಂಪ್‌ಷೈರ್‌, USA 44°N 1,400 4,600 ಗ್ರಾಂಡ್‌ ಮೊನಾಡ್‌ನಾಕ್‌ ಮತ್ತು ಮೌಂಟ್‌ ಚೊಕೊರುವಾಗಳಂತಹಾ ಕೆಲ ಪರ್ವತ ಶಿಖರಗಳು ಕಾಳ್ಗಿಚ್ಚು ಹಾಗೂ ಅದರಿಂದಾದ ಮಣ್ಣಿನ ನಷ್ಟಗಳಿಂದಾಗಿ ಕೆಳ ಮಟ್ಟದ ವೃಕ್ಷಗಳ ಪಟ್ಟೆಗಳನ್ನು ಕೂಡಾ ಹೊಂದಿವೆ.
ವ್ಯೋಮಿಂಗ್‌, USA 43°N 3,000 9,800
ರಿಲಾ ಮತ್ತು ಪಿರಿನ್‌ ಪರ್ವತ ಶ್ರೇಣಿ, ಬಲ್ಗೇರಿಯಾ 42°N 2,300 7,500 2600mಗಳ ಎತ್ತರದವರೆಗೆ ಅನುಕೂಲಕರ ಸ್ಥಳಗಳಲ್ಲಿ ಇರುತ್ತವೆ. ಮೌಂಟೇನ್‌ ಪೈನ್‌ ತಳಿಯು ಇಲ್ಲಿ ಸರ್ವೇಸಾಮಾನ್ಯವಾದ ವೃಕ್ಷಗಳ ಪಟ್ಟೆಗಳಲ್ಲಿನ ತಳಿಯಾಗಿದೆ.
ಪೈರೆನೀಸ್‌ ಸ್ಪೇನ್‌, ಫ್ರಾನ್ಸ್‌, ಅಂಡೊರ್ರಾ 42°N 2,300 7,500 ಮೌಂಟೇನ್‌ ಪೈನ್‌ ತಳಿಯು ಇಲ್ಲಿನ ವೃಕ್ಷಗಳ ಪಟ್ಟೆಗಳಲ್ಲಿನ ತಳಿಯಾಗಿದೆ
ವಾಸಾಚ್‌ ಪರ್ವತ ಶ್ರೇಣಿ, ಉಟಾಹ್, USA 40°N 2,900 9,500 ಉಯಿಂಟಾಸ್‌ ಪ್ರದೇಶದಲ್ಲಿ ಉನ್ನತ ಎತ್ತರದಲ್ಲಿದೆ (ಸ್ಥೂಲವಾಗಿ 11,000 ಅಡಿಗಳು)
ರಾಕಿ ಪರ್ವತ ಶ್ರೇಣಿ NP, USA 40°N 3,500 11,500 ಒಣದಾದ/ಬೆಚ್ಚನೆಯ ನೈಋತ್ಯ ಇಳಿಜಾರು ಪ್ರದೇಶಗಳ ಮೇಲೆ
3,250 10,660 ಈಶಾನ್ಯ ಇಳಿಜಾರು ಪ್ರದೇಶಗಳ ಮೇಲೆ
ಜಪಾನೀಯ ಶಿಖರ ಶ್ರೇಣಿ 39°N 2,900 9,500
ಯೋಸೆಮೈಟ್‌, USA 38°N 3,200 10,500 ಸಿಯೆರ್ರಾ ನೆವಾಡಾ ಪ್ರದೇಶದ ಪಶ್ಚಿಮ ಭಾಗ[]
3,600 11,800 ಸಿಯೆರ್ರಾ ನೆವಾಡಾ ಪ್ರದೇಶದ ಪೂರ್ವ ಭಾಗ[]
ಸಿಯೆರ್ರಾ ನೆವಾಡಾ, ಸ್ಪೇನ್‌ 37°N 2,400 7,900 ಬೇಸಿಗೆಯಲ್ಲಿ ಮಳೆಯ ಪ್ರಮಾಣ ಕಡಿಮೆ
ಹಿಮಾಲಯ 28°N 4,400 14,400
ಹವಾಯ್‌ ದ್ವೀಪ, USA 20°N 2,800 9,200 ಭೌಗೋಳಿಕ ಪ್ರತ್ಯೇಕತೆ ಹಾಗೂ ತಂಪಾದ ತಾಪಮಾನಗಳ ವೈಪರೀತ್ಯವನ್ನು ತಡೆಯುವಂತಹಾ ಸಹಿಷ್ಣುತೆಯಿರುವ ಯಾವುದೇ ಸ್ಥಳೀಯ ವೃಕ್ಷಗಳ ತಳಿಗಳಿಲ್ಲ (ನೋಡಿ Mt. ಕಿಲಿಮಾಂಜರೋ).
ಪಿಕೋ ಡೆ ಒರಿಜಾಬಾ, ಮೆಕ್ಸಿಕೋ 19°N 4,000 13,000 []
ಕೊಸ್ಟಾ ರಿಕಾ 9.5°N 3,400 11,200
ಮೌಂಟ್‌ ಕಿಲಿಮಾಂಜರೋ ಪರ್ವತ, ಟಾಂಜೇನಿಯಾ 3°S 3,000 9,800 ಉಪ-ಉನ್ನತ ಪರ್ವತದ/ಅಲ್ಪೈನ್‌ ವಾತಾವರಣದಲ್ಲಿ ಜೀವಿಸಲಿಕ್ಕೆಂದು ವಿಕಸನ ಹೊಂದಿರುವ ಮರಗಳ ತಳಿಗಳಿಗೆ ಜೀವಭೌಗೋಳಿಕ ಸುಲಭಗಮ್ಯತೆಯ ಕೊರತೆಯಿರುವ ಉಷ್ಣವಲಯದ ಸ್ಥಳಕ್ಕೆ ಇದು ಉದಾಹರಣೆ. ಆದ್ದರಿಂದ, ಸ್ಥಳೀಯ ಮರಗಳ ತಳಿಗಳ ಸಹಿಷ್ಣುತೆಯು ಕಡಿಮೆಯಿರುತ್ತದೆ ಹಾಗೂ ಅದರ ಪರಿಣಾಮವಾಗಿ ಕೆಳ ಮಟ್ಟದ ವೃಕ್ಷಗಳ ಪಟ್ಟೆಗಳುಂಟಾಗುತ್ತವೆ
ನ್ಯೂಗಿನಿಯಾ 6°S 3,900 12,800
ಆಂಡಿಸ್, ಪೆರು 11°S 3,900 12,800 ಪೂರ್ವ ಭಾಗ; ಪಶ್ಚಿಮ ಭಾಗದಲ್ಲಿ ಮರಗಳ ಬೆಳವಣಿಗೆಯನ್ನು ಶುಷ್ಕತೆಯು ನಿಯಂತ್ರಿಸುತ್ತದೆ
ಆಂಡಿಸ್, ಬೊಲಿವಿಯಾ 18°S 5,200 17,100 ಪಶ್ಚಿಮ ಬೆಟ್ಟಸಾಲು/ಶೈಲರಾಜಿ; ಸಜಾಮಾ ಅಗ್ನಿಪರ್ವತದ ಇಳಿಜಾರು ಪ್ರದೇಶಗಳಲ್ಲಿರುವ ವಿಶ್ವದ ಅತ್ಯಂತ ಔನ್ನತ್ಯದ ವೃಕ್ಷಗಳ ಪಟ್ಟೆ (ಪಾಲಿಲೆಪಿಸ್‌ ಟರಾಪಕಾನಾ)
4,100 13,500 ಪೂರ್ವದ ಬೆಟ್ಟಸಾಲು/ಶೈಲರಾಜಿ; ಅಲ್ಪ ಪ್ರಮಾಣದ ಬಿಸಿಲಿನಿಂದಾಗಿ ವೃಕ್ಷಗಳ ಪಟ್ಟೆಯು ಕೆಳ ಮಟ್ಟದ್ದಾಗಿದೆ (ಹೆಚ್ಚಿನ ತೇವಪೂರಿತ ವಾತಾವರಣ)
ಸಿಯೆರ್ರಾ ಡೆ ಕಾರ್ಡೋಬಾ, ಅರ್ಜೆಂಟಿನಾ 31°S 2,000 6,600 ವಾಣಿಜ್ಯ ಮಾರುತಗಳ ಮೇಲೆ ಮಳೆಯ ಪ್ರಮಾಣ ಕಡಿಮೆ, ಹಾಗೂ ಹೆಚ್ಚಿನ ಒಡ್ಡಿಕೊಳ್ಳುವಿಕೆ
ಆಸ್ಟ್ರೇಲಿಯಾದ ಪರ್ವತ ಶಿಖರಗಳು, ಆಸ್ಟ್ರೇಲಿಯಾ 36°S 2,000 6,600 ಆಸ್ಟ್ರೇಲಿಯಾದ ಪರ್ವತ ಶಿಖರಗಳ ಪಶ್ಚಿಮ ಭಾಗ
1,700 5,600 ಆಸ್ಟ್ರೇಲಿಯಾದ ಪರ್ವತ ಶಿಖರಗಳ ಪೂರ್ವ ಭಾಗ
ಟಾಸ್ಮೇನಿಯಾ, ಆಸ್ಟ್ರೇಲಿಯಾ 41°S 1,200 3,900 ಶೀತದಿಂದ ಕೂಡಿದ ಚಳಿಗಾಲಗಳು, ಪ್ರಬಲ ಶೀತ ಮಾರುತಗಳು ಹಾಗೂ ಅನಿಯಮಿತವಾಗಿ ಬೇಸಿಗೆಯ ಹಿಮಪಾತಗಳಿಂದ ಕೂಡಿದ ತಂಪಾದ ಬೇಸಿಗೆಗಳು ಮರಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ
ಸೌತ್‌ ಐಲೆಂಡ್‌, ನ್ಯೂಜಿಲೆಂಡ್‌ 43°S 1,200 3,900 ಪ್ರಬಲ ಸಮುದ್ರೀಯ/ಸಾಗರಿಕ ಪ್ರಭಾವ ತಂಪಾದ ಬೇಸಿಗೆಯ ಅವಧಿಗೆ ಕಾರಣವಾಗುತ್ತದೆ ಹಾಗೂ ಮರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ
ಟಾರ್ರೆಸ್‌ ಡೆಲ್‌ ಪೈನೆ, ಚಿಲಿ 51°S 950 3,120 ದಕ್ಷಿಣ ಪೆಟಾಗೋನಿಯನ್‌ ಹಿಮ ಕ್ಷೇತ್ರದ ಪ್ರಬಲ ಪ್ರಭಾವವು ತಂಪಾದ ಬೇಸಿಗೆಯ ಅವಧಿಗೆ ಕಾರಣವಾಗುತ್ತದೆ ಹಾಗೂ ಮರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ[]
ನವಾರಿನೋ ದ್ವೀಪ, ಚಿಲಿ 55°S 600 2,000 ಪ್ರಬಲ ಸಮುದ್ರೀಯ/ಸಾಗರಿಕ ಪ್ರಭಾವ ತಂಪಾದ ಬೇಸಿಗೆಯ ಅವಧಿಗೆ ಕಾರಣವಾಗುತ್ತದೆ ಹಾಗೂ ಮರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ[]

ಉತ್ತರಧೃವದ/ಆರ್ಕ್‌ಟಿಕ್‌ ವೃಕ್ಷಗಳ ಪಟ್ಟೆಗಳು

ಬದಲಾಯಿಸಿ

ಮೇಲೆ ತೋರಿಸಿದ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಗಳ ಹಾಗೆಯೇ, ಧೃವಪ್ರದೇಶಗಳಲ್ಲಿನ ವೃಕ್ಷಗಳ ಪಟ್ಟೆಗಳು ಕೂಡಾ ಇಳಿಜಾರೊಂದರ ಅಭಿಮುಖತೆ, ಹಾಗೂ ನೆರಳಿನಾಸರೆಯ ಪ್ರಮಾಣಗಳಂತಹಾ ಸ್ಥಳೀಯ ಅನಿರ್ದಿಷ್ಟಾಂಶಗಳಿಂದ ಭಾರೀ ಪ್ರಮಾಣದ ಪ್ರಭಾವಕ್ಕೆ ಒಳಗಾಗುತ್ತದೆ. ಇಷ್ಟು ಮಾತ್ರವಲ್ಲದೇ, ಶೀತಕೆಳಭೂಸ್ತರವು ನೆಲದೊಳಗಿನ ಪ್ರದೇಶದಲ್ಲಿ ತನ್ನ ಬೇರುಗಳನ್ನು ಇಳಿಬಿಡುವ ವೃಕ್ಷಗಳ ಸಾಮರ್ಥ್ಯದ ಮೇಲೆ ಪ್ರಧಾನ ಪರಿಣಾಮವನ್ನು ಬೀರುತ್ತದೆ. ಬೇರುಗಳು ತೀರಾ ಆಳಕ್ಕೆ ತಲುಪಿಲ್ಲದಾಗ, ಭೂಸವಕಳಿಗಳಿಂದ ಹಾಗೂ ಗಾಳಿಯ ಒತ್ತಡಕ್ಕೆ ಬಿದ್ದುಹೋಗುವಂತಹಾ ಅಪಾಯಗಳಿಗೆ ವೃಕ್ಷಗಳು ಈಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮತ್ತಷ್ಟು ಒಡ್ಡಿಕೊಂಡ ಪ್ರದೇಶಗಳಲ್ಲಿ ಬೆಳೆಯಲಾರವು ಎನ್ನುವಂತಹಾ ಅಕ್ಷಾಂಶಗಳಲ್ಲಿ ನದಿಗಳ ಕಣಿವೆ ಪ್ರದೇಶಗಳಲ್ಲಿ ಕೂಡಾ ವೃಕ್ಷಗಳು ಬೆಳೆಯಬಲ್ಲವು. ಸಾಗರಗಳ/ಸಮುದ್ರಗಳ ಪ್ರವಾಹದಂತಹಾ ಸಮುದ್ರೀಯ/ಸಾಗರಿಕ ಪ್ರಭಾವಗಳು ವಿಷುವದ್ರೇಖೆಯಿಂದ ಎಷ್ಟು ದೂರದ ಪ್ರದೇಶಗಳಲ್ಲಿ ವೃಕ್ಷಗಳು ಬೆಳೆಯಬಲ್ಲವು ಎಂಬುದನ್ನು ನಿರ್ಧರಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕೆಲವು ಪ್ರಾತಿನಿಧಿಕ ಧೃವಪ್ರದೇಶಗಳಲ್ಲಿನ ವೃಕ್ಷಗಳ ಪಟ್ಟೆಗಳು ಕೆಳಕಂಡಂತಿವೆ:

ಸ್ಥಳ Approx. ರೇಖಾಂಶ Approx. ವೃಕ್ಷಗಳ ಪಟ್ಟೆಗಳ ಅಂದಾಜು ಅಕ್ಷಾಂಶ ಟಿಪ್ಪಣಿಗಳು
ನಾರ್ವೆ‌ 24°E 70°N ಉತ್ತರ ಅಟ್ಲಾಂಟಿಕ್‌ ಸಾಗರದ ಪ್ರವಾಹವು ಈ ಪ್ರದೇಶದಲ್ಲಿನ ಉತ್ತರಧೃವದ/ಆರ್ಕ್‌ಟಿಕ್‌ ಹವಾಮಾನಗಳನ್ನು ಇದಕ್ಕೆ ಸದೃಶವಾದ ಅಕ್ಷಾಂಶಗಳಲ್ಲಿನ ಇತರೆ ಕರಾವಳಿ ಪ್ರದೇಶಗಳಿಗಿಂತ ಬೆಚ್ಚಗಿರುವಂತೆ ಮಾಡುತ್ತವೆ. ನಿರ್ದಿಷ್ಟವಾಗಿ ಸೌಮ್ಯವಾದ ಚಳಿಗಾಲದ ಅವಧಿಗಳು ಶೀತಭೂಸ್ತರಗಳು ಉಂಟಾಗುವುದನ್ನು ತಡೆಯುತ್ತವೆ.
ಪಶ್ಚಿಮ ಸೈಬೀರಿಯನ್‌ ಬಯಲು ಪ್ರದೇಶ 75°E 66°N
ಮಧ್ಯ/ಕೇಂದ್ರೀಯ ಸೈಬೀರಿಯನ್‌ ಪ್ರಸ್ಥಭೂಮಿ 102°E 72°N ವೈಪರೀತ್ಯಗಳಿಂದ ಕೂಡಿದ ಭೂಖಂಡೀಯ ಹವಾಮಾನವೆಂದರೆ ಉನ್ನತ ಅಕ್ಷಾಂಶಗಳಲ್ಲಿ ಮರಗಳ ಬೆಳವಣಿಗೆಗೆ ಅನುಕೂಲ ಮಾಡುವಷ್ಟು ಬೇಸಿಗೆ ಕಾಲವು ಬೆಚ್ಚಗಿರುತ್ತದೆ ಎಂದರ್ಥ, ಖಟಾಂಗಾ ನದಿಯ ಉಪನದಿಯಾದ ನೊವಾಯಾ ನದಿಯ ಕಣಿವೆ ಪ್ರದೇಶಗಳಲ್ಲಿನ ಅರಿ-ಮಾಸ್‌ (102° 15' E) ಎಂಬಲ್ಲಿ 72°28'N ಅಕ್ಷಾಂಶಗಳ ಅತ್ಯಂತ ಉತ್ತರದಲ್ಲಿರುವ ಅರಣ್ಯಗಳಿಗೆ ಹಾಗೂ ಖಟಾಂಗಾ ನದಿಯ ಪೂರ್ವಕ್ಕೆ 72°31'N, 105° 03' E ಅಕ್ಷಾಂಶದಲ್ಲಿರುವ ಮತ್ತೂ ಉತ್ತರದಿಕ್ಕಿನ ಲುಕುಂಸ್ಕಿ ಪೊದೆಗಳಿರುವೆಡೆಗೆ ಈ ಪ್ರದೇಶವು ವಿಸ್ತರಿಸಿದೆ.
ರಷ್ಯಾದಿಂದ ಸಾಕಷ್ಟು ಪೂರ್ವದ ಕಡೆಗೆ (ಕಾಮ್‌ಚಟ್‌ಕಾ ಮತ್ತು ಛುಕೋಟ್ಕಾ) 160°E 60°N ಒಯಾಷಿಯೋ ಸಮುದ್ರದ ಪ್ರವಾಹ ಹಾಗೂ ಪ್ರಬಲ ಮಾರುತಗಳು ಮರಗಳ ಬೆಳವಣಿಗೆಯು ಕುಂಠಿತವಾಗುವ ಮಟ್ಟಿಗೆ ಬೇಸಿಗೆಯ ತಾಪಮಾನಗಳ ಮೇಲೆ ಪ್ರಭಾವ ಬೀರುತ್ತವೆ. ಅಲ್ಯೂಟಿ/ಷಿಯನ್‌ ಐಲೆಂಡ್ಸ್‌ ದ್ವೀಪಗಳು ಹಾಗಾಗಿಯೇ ಬಹುತೇಕ ಸಂಪೂರ್ಣವಾಗಿ ಮರರಹಿತವಾಗಿವೆ.
‌ಅಲಾಸ್ಕಾ 152°W 68°N ವೃಕ್ಷಗಳು ಉತ್ತರ ದಿಕ್ಕಿನೆಡೆಗೆ ಬೆಳೆಯುತ್ತಾ ದಕ್ಷಿಣದೆಡೆಗೆ ಮುಖ ಮಾಡಿರುವ ಬ್ರೂಕ್ಸ್‌ ಪರ್ವತ ಶ್ರೇಣಿಯ ಇಳಿಜಾರು ಪ್ರದೇಶಗಳೆಡೆಯಲ್ಲಿ ಬೆಳೆಯುತ್ತವೆ. ಆರ್ಕ್‌ಟಿಕ್‌ ಮಹಾಸಾಗರದಿಂದ ಆಚೆಗೆ ಬೀಸುವ ತಂಪಾದ ಗಾಳಿಯನ್ನು ಈ ಪರ್ವತ ಶ್ರೇಣಿಯು ತಡೆಗಟ್ಟುತ್ತದೆ.
ವಾಯುವ್ಯ ಪ್ರಾಂತ್ಯಗಳು, ಕೆನಡಾ 132°W 69°N ವಾತಾವರಣದ ಭೂಖಂಡೀಯ ಪ್ರಕೃತಿಯಿಂದಾಗಿ ಹಾಗೂ ಬೆಚ್ಚಗಿನ ಬೇಸಿಗೆಯ ತಾಪಮಾನಗಳಿಂದಾಗಿ ಉತ್ತರಧೃವದ/ಆರ್ಕ್‌ಟಿಕ್‌ ಸರ್ಕಲ್‌ ವೃತ್ತ ಪ್ರದೇಶದ ಉತ್ತರ ಭಾಗವನ್ನು ತಲುಪುತ್ತದೆ.
ನುನಾವುಟ್ 95°W 61°N ಹಡ್ಸನ್‌ ಕೊಲ್ಲಿಯ ಭಾರೀ ತಂಪು ಹವೆಯ ಪ್ರಭಾವವು ವೃಕ್ಷಗಳ ಪಟ್ಟೆಯನ್ನು ದಕ್ಷಿಣದೆಡೆಗೆ ಸ್ಥಳಾಂತರಗೊಳ್ಳುವಂತೆ ಮಾಡುತ್ತದೆ.
ಲಾ/ಲ್ಯಾಬ್ರಡಾರ್ ಪರ್ಯಾಯದ್ವೀಪ/ದ್ವೀಪಕಲ್ಪ 72°W 56°N ಬೇಸಿಗೆಯ ತಾಪಮಾನಗಳ ಮೇಲೆ ಲಾ/ಲ್ಯಾಬ್ರಡಾರ್ ನದಿ/ಸಮುದ್ರದ ಪ್ರವಾಹವು ಭಾರೀ ಪ್ರಬಲ ಪ್ರಭಾವವನ್ನು ಬೀರುತ್ತದೆ. ಲಾ/ಲ್ಯಾಬ್ರಡಾರ್ ಪ್ರದೇಶದ ಕೆಲ ಭಾಗಗಳಲ್ಲಿ, ವೃಕ್ಷಗಳ ಪಟ್ಟೆಯು ದಕ್ಷಿಣಕ್ಕೆ 53°N ಅಕ್ಷಾಂಶದಷ್ಟು ವಿಸ್ತರಿಸುತ್ತದೆ.
ಗ್ರೀನ್‌ಲೆಂಡ್ 50°W 64°N ನೈಸರ್ಗಿಕ ಬೀಜ ಮೂಲಗಳಿಂದ ಪ್ರತ್ಯೇಕವಾಗಿರುವ ಕಾರಣದಿಂದ ಸ್ಥಳೀಯ ವೃಕ್ಷಗಳ ಅನುಪಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಮರಗಳನ್ನು ಬೆಳೆಸುವಿಕೆ ನಡೆಸುವುದರ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ; 67°N ಅಕ್ಷಾಂಶದ ಸಾಂಡ್ರೆ ಸ್ಟ್ರಾಂಫ್‌ಜಾರ್ಡ್ ಎಂಬಲ್ಲಿ ತೀರ ಕೆಲವೇ ಕೆಲವು ವೃಕ್ಷಗಳು ಬದುಕುಳಿಯುತ್ತಿದ್ದರೂ, ನಿಧಾನವಾಗಿಯೇ ಬೆಳೆಯುತ್ತಿವೆ.

ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ವೃಕ್ಷಗಳ ಪಟ್ಟೆಗಳು

ಬದಲಾಯಿಸಿ

ಕೆರ್ಗ್ಯುಯೆಲೆನ್‌ ದ್ವೀಪ, ಐಲ್‌ ಸೇಂಟ್‌-ಪಾಲ್‌, ದಕ್ಷಿಣ ಜಾರ್ಜಿಯಾ, ದಕ್ಷಿಣ ಆರ್ಕ್‌ನಿ ಮತ್ತು ಇತರೆ ಉಪ-ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ದ್ವೀಪಗಳೆಲ್ಲವೂ ಭಾರೀ ಮಾರುತಗಳಿಗೆ ಒಡ್ಡಲ್ಪಟ್ಟಿರುತ್ತವೆ ಹಾಗೂ ತೀರಾ ಶೀತವಾಗಿರುವ ಬೇಸಿಗೆಯ ವಾತಾವರಣವಾಗಿರುವುದರಿಂದ (ಪಾಚಿ ಬಯಲು/ಜೌಗು ಪ್ರದೇಶ) ಇಲ್ಲಿ ಯಾವುದೇ ಸ್ಥಳೀಯ ಮರಗಳ ತಳಿಗಳಿಲ್ಲ.

ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ಪರ್ಯಾಯದ್ವೀಪ/ದ್ವೀಪಕಲ್ಪವು ಅಂಟಾರ್ಕ್‌ಟಿಕಾ/ದಕ್ಷಿಣ ಧೃವದಲ್ಲಿನ ಅತ್ಯಂತ ಉತ್ತರದ ಪ್ರದೇಶವಾಗಿದ್ದು ಅತ್ಯಂತ ಸೌಮ್ಯವಾದ ಹವಾಮಾನವನ್ನು ಹೊಂದಿದೆ. ಇದು ಟಿ/ತಿಯೆರ್ರಾ ಡೆಲ್‌ ಫ್ಯುಯೆಗೋದ (ಟಿ/ತಿಯೆರ್ರಾ ಡೆಲ್‌ ಫ್ಯುಯೆಗೋ ವೃಕ್ಷಗಳನ್ನು ಹೊಂದಿದೆ) ಮೇಲೆ/ಸನಿಹದಲ್ಲಿ ಇರುವ ಹಾರ್ನ್‌ ಭೂಶಿರದಿಂದ 1,080 kilometres (670 mi)ದಷ್ಟು ಅಕ್ಷಾಂಶದಲ್ಲಿದೆ. ಆದರೆ ಅಂಟಾರ್ಕ್‌ಟಿಕಾ/ದಕ್ಷಿಣ ಧೃವದಲ್ಲಿ ಯಾವುದೇ ರೀತಿಯ ವೃಕ್ಷಗಳು ಜೀವಿಸುವುದಿಲ್ಲ. ವಾಸ್ತವವಾಗಿ ಕೇವಲ ಕೆಲವೇ ಕೆಲವು ಹುಲ್ಲುಗಳು,ಪಾಚಿಗಳು ಹಾಗೂ ಬೂಸಣಿಗೆಗಳ ತಳಿಗಳು ಈ ಪರ್ಯಾಯ ದ್ವೀಪದಲ್ಲಿ ಜೀವಿಸಬಲ್ಲವಾಗಿದೆ. ಇಷ್ಟು ಮಾತ್ರವಲ್ಲದೇ ಪರ್ಯಾಯ ದ್ವೀಪದ ಸಮೀಪವಿರುವ ಯಾವುದೇ ಉಪಅಂಟಾರ್ಕ್‌ಟಿಕ್‌/ದಕ್ಷಿಣಧೃವದ ದ್ವೀಪಗಳಲ್ಲಿ ಕೂಡಾ ಯಾವುದೇ ವೃಕ್ಷಗಳು ಉಳಿಯುವುದಿಲ್ಲ.

 
55°S ಅಕ್ಷಾಂಶದಲ್ಲಿರುವ ಬೀಗಲ್‌ ಕಾಲುವೆಯ ಉತ್ತರ ತೀರದುದ್ದಕ್ಕೂ ಬೆಳೆಯುತ್ತಿರುವ ಮರಗಳು.

ಇವನ್ನೂ ಗಮನಿಸಿ‌

ಬದಲಾಯಿಸಿ
  • ಇಕೋಟೋನ್‌ : ಎರಡು ನಿಕಟತಮ ಪರಿಸರಶಾಸ್ತ್ರೀಯ ಸಮುದಾಯಗಳ ನಡುವೆ ಸ್ಥಿತ್ಯಂತರ
  • ತುದಿ ಪರಿಣಾಮ/ಎಡ್ಜ್‌ ಎಫೆಕ್ಟ್ : ಪರಿಸರ ವ್ಯವಸ್ಥೆಯ ಮೇಲೆ ಪರಸ್ಪರ ವಿರುದ್ಧವಾದ ವಾತಾವರಣಗಳ ಪರಿಣಾಮ
  • ಮಾಸ್ಸೆನೆರ್‌ಹೆಬಂಗ್‌ ಪರಿಣಾಮ/ಎಫೆಕ್ಟ್‌
  • ಟಂಡ್ರಾ/ಜೌಗು ನೆಲ : ಅಲ್ಪ ತಾಪಮಾನದ ಪರಿಸ್ಥಿತಿ ಹಾಗೂ ಅಲ್ಪಾವಧಿಯ ಬೆಳವಣಿಗೆಯ ಕಾಲಗಳಿಂದಾಗಿ ಮರಗಳ ಬೆಳವಣಿಗೆ ಕುಂಠಿತಗೊಳ್ಳುವ ಪ್ರದೇಶ

ಉಲ್ಲೇಖಗಳು‌

ಬದಲಾಯಿಸಿ
  1. "ಆಕ್ಷನ್‌ ಫಾರ್‌ ಸ್ಕಾಟ್‌ಲೆಂಡ್ಸ್‌ ಬಯೋಡೈವರ್ಸಿಟಿ (ಪುಟ 85)". Archived from the original on 2011-06-07. Retrieved 2011-03-10.
  2. ೨.೦ ೨.೧ Körner, Christian. "High Elevation Treeline Research". Archived from the original on 2011-05-14. Retrieved 2010-06-14.
  3. ೩.೦ ೩.೧ Schoenherr, Allan A. (1995). A Natural History of California. UC Press. ISBN 0-520-06922-6.
  4. ೪.೦ ೪.೧ ಮೇಲ್ಭಾಗದ ಮರಗಳ ಪಟ್ಟೆಯಲ್ಲಿ, ದಕ್ಷಿಣ ಚಿಲಿಯ ಪೆಟಗೋನಿಯಾ ಪ್ರದೇಶದ ನಾಥೋಫೇಗಸ್‌ ಪ್ಯುಮುಲಿಯೋ (ಫಾಗೇಸಿಯೇ) ಅರಣ್ಯಗಳಿಂದ ಮರಗಳ-ಸರಣಿ/ವೃತ್ತ ಬೆಳವಣಿಗೆಯ ಮಾದರಿಗಳು ಹಾಗೂ ತಾಪಮಾನದ ಮರುಹೊಂದಾಣಿಕೆ

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ಆರ್ನೋ, S. F. & ಹ್ಯಾಮರ್ಲಿ, R. P. 1984. ಟಿಂಬರ್‌ಲೈನ್‌. ಮೌಂಟೇನ್‌ ಅಂಡ್‌ ಆರ್ಕ್‌ಟಿಕ್‌ ಫಾರೆಸ್ಟ್ ಫ್ರಾಂಟೀಯರ್ಸ್‌. ದ ಮೌಂಟೆನೀರ್ಸ್‌, ಸಿಯಾಟಲ್‌. ISBN 0-89886-085-7
  • ಬೆರಿಂಗರ್‌, J., ಟಾ/ಟ್ಯಾಪ್ಪರ್‌, N. J., ಮೆಕ್‌ಹುಗ್‌, I., ಲಿಂಚ್‌, A. H., ಸೆರ್ರೆಜ್‌, M. C., & ಸ್ಲೇಟರ್‌, A. 2001. ಹವಾಮಾನದ ಸ್ಥಿತಿಗತಿಗಳ ಮೇಲೆ ಉತ್ತರಧೃವದ/ಆರ್ಕ್‌ಟಿಕ್‌ ವೃಕ್ಷಗಳ ಪಟ್ಟೆಗಳ ಪ್ರಭಾವ. ಜಿಯೋಫಿಸಿಕಲ್‌ ರಿಸರ್ಚ್‌ ಲೆಟರ್ಸ್‌ 28 (22): 4247-4250.
  • ಕಾರ್ನರ್‌, C. 1998. ಉನ್ನತ ಔನ್ನತ್ಯದ ವೃಕ್ಷಗಳ ಪಟ್ಟೆಗಳ ಸ್ಥಾನಗಳ ಮರು ಪರಿಶೀಲನೆ ಹಾಗೂ ಅವುಗಳ ವಿವರಣೆ. ಓಯಿಕೋಲಾಜಿಯಾ 115:445-459.
  • ಓಡಮ್, S. 1979. ಉತ್ತರ ಅಟ್ಲಾಂಟಿಕ್‌ ಮಹಾಸಾಗರದ ಪ್ರದೇಶಗಳಲ್ಲಿ, ವಿಶೇಷವಾಗಿ ಗ್ರೀನ್‌ಲೆಂಡ್/ಲ್ಯಾಂಡ್‌ ಹಾಗೂ ಪಾರೋಸ್‌ಗಳಲ್ಲಿ ವಾಸ್ತವಿಕ ಹಾಗೂ ಸಂಭಾವ್ಯ ವೃಕ್ಷಗಳ ಪಟ್ಟೆ. ಹೋಲಾರ್ಕ್‌ಟಿಕ್‌ ಇಕಾಲಜಿ 2: 222-227.
  • ಓಡಮ್, S. 1991. ಗ್ರೀನ್‌ಲೆಂಡ್‌/ಲ್ಯಾಂಡ್‌ ಮತ್ತು ಫಾರೋ ದ್ವೀಪಗಳಲ್ಲಿನ ವೃಕ್ಷ ವ್ಯವಸಾಯಗಳ ತಳಿಗಳ ಆಯ್ಕೆ ಹಾಗೂ ಅವುಗಳ ಮೂಲ. ಡಾನ್ಸ್‌ಕ್‌ ಡೆಂಡ್ರೋಲಾಜಿಸ್ಕ್‌ ಅರ್ಸ್‌ಕ್ರಿಫ್ಟ್‌ 9: 3-78.
  • ಸಿಂಗ್, C. P. 2008. ವಾತಾವರಣ ಬದಲಾವಣೆಗಳಿಗೆ ಸಂಬಂಧಿಸಿದಂತೆ ಉನ್ನತ ಪರ್ವತದ/ಅಲ್ಪೈನ್‌ ಗಿಡ ಪರಿಸರ ವ್ಯವಸ್ಥೆಗಳು. ISG Newslett. 14: 54-57.