ವೃಂದಾವನ (ಹಿಂದಿ:वृन्दावनpronunciation )(ಪರ್ಯಾಯವಾಗಿ ವೃಂದಾಬನ , ಬ್ರಿಂದಾವನ್ , ಬ್ರಿಂದಾವನ , ಅಥವಾ ಬೃಂದಾವನ ಎಂದೂ ಉಚ್ಚರಿಸಲ್ಪಡುತ್ತದೆ.) ವ್ರಜ್ ಎಂದೂ ಸಹ ಪರಿಚಿತವಾಗಿದೆ.(ಏಕೆಂದರೆ ಇದು ಬ್ರಜ್ ಪ್ರದೇಶದಲ್ಲಿ ನೆಲೆಗೊಂಡಿದೆ), ಇದು ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಪುರಾತನ ಕಾಲದ ಅರಣ್ಯವಿರುವ ಪ್ರದೇಶವಾಗಿದ್ದು, ಇಲ್ಲಿ ಭಗವಾನ್ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಕಳೆದಿರುತ್ತಾನೆ.

ವೃಂದಾವನ
Vrindavan
city
Population
 (2001)
 • Total೫೬,೬೧೮

ಪಟ್ಟಣವು ಆಗ್ರಾ-ದೆಹಲಿ ಹೆದ್ದಾರಿಗೆ ಸಮೀಪ, ಭಗವಾನ್ ಕೃಷ್ಣನ ಜನ್ಮಸ್ಥಳ ಮಥುರಾ ನಗರದಿಂದ ಸುಮಾರು ೧೫ ಕಿಮೀ ದೂರದಲ್ಲಿದೆ. ಪಟ್ಟಣವು, ರಾಧಾ ಹಾಗು ಕೃಷ್ಣನ ಆರಾಧನೆಗೆ ಸಮರ್ಪಿತ ನೂರಾರು ದೇವಾಲಯಗಳನ್ನು ಹೊಂದಿದೆ. ಜೊತೆಗೆ ಹಲವಾರು ಧಾರ್ಮಿಕ ಸಂಪ್ರದಾಯಗಳಾದ ಗೌಡೀಯ ವೈಷ್ಣವಧರ್ಮ, ವೈಷ್ಣವಧರ್ಮ ಹಾಗು ಸರ್ವೆಸಾಮಾನ್ಯವಾಗಿ ಹಿಂದೂಧರ್ಮದಲ್ಲಿ ಪವಿತ್ರಸ್ಥಳವೆಂದು ಪರಿಗಣಿತವಾಗಿದೆ. ನಗರದಲ್ಲಿ ಆಶ್ರಯ ಪಡೆಯುವ ತಿರಸ್ಕೃತ ವಿಧವೆಯರು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಇದು "ವಿಧವೆಯರ ಪಟ್ಟಣ"ವೆಂಬ ಸಂಕ್ಷಿಪ್ತ ಹೆಸರಿನಿಂದ ಕರೆಯಲ್ಪಡುತ್ತದೆ.[೧]

ವ್ಯುತ್ಪತ್ತಿ

ಬದಲಾಯಿಸಿ
 
ಯಮುನಾ ನದಿಯಲ್ಲಿರುವ ಕೇಸಿ ಘಾಟ್.

ನಗರದ ಪುರಾತನ ಹೆಸರು, ಬೃಂದಾವನ, 'ಬೃಂದಾ' ಆಸಿಮಮ್ ಟೆನುಯಿಫ್ಲೋರಂ (ಪವಿತ್ರ ತುಳಸಿ ಅಥವಾ ತುಳಸಿ ) ತೋಟಗಳಿಂದ ಹಾಗು ಒಂದು ತೋಟ ಅಥವಾ ತುಳಸಿ ಕಾಡು ಎಂಬ ಅರ್ಥ ನೀಡುವ ವನ (ಸಂಸ್ಕೃತ: वन) ಶಬ್ದಗಳಿಂದ ವ್ಯುತ್ಪತ್ತಿ ಹೊಂದಿದೆ.[೨] ನಿಧಿವನ ಹಾಗು ಸೇವಾ ಕುಂಜ್ ನಲ್ಲಿ ಇಂದಿಗೂ ಇಂಥ ಎರಡು ಚಿಕ್ಕ ತೋಟಗಳು ಅಸ್ತಿತ್ವದಲ್ಲಿವೆ.

ಇತಿಹಾಸ

ಬದಲಾಯಿಸಿ

ಹಿಂದೂ ಇತಿಹಾಸದೊಂದಿಗೆ ಸಂಬಂಧದ ಕೊಂಡಿ ಹೊಂದಿರುವ ವೃಂದಾವನ, ಪುರಾತನ ಗತವೈಭವ ಹೊಂದಿರುವುದರ ಜೊತೆ ಒಂದು ಮಹತ್ವದ ಹಿಂದೂ ಯಾತ್ರಾಸ್ಥಳವಾಗಿದೆ. ಇಂದಿಗೂ ಉಳಿದಿರುವ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಗೋವಿಂದ ದೇವ್ ದೇವಾಲಯವೂ ಒಂದು.ದೇವಾಲಯವು ೧೫೯೦ರಲ್ಲಿ ನಿರ್ಮಾಣವಾಗಿರುವ ಅದೇ ಶತಮಾನದಲ್ಲಿ ರಚನೆಯಾದ ಪಟ್ಟಣದ ನಂತರದ ವಾಸ್ತುಶಿಲ್ಪವಾಗಿದೆ.[೩]

ಕಾಲಾನಂತರದಲ್ಲಿ ವೃಂದಾವನವು ತನ್ನ ಅಸ್ತಿತ್ವವನ್ನು ಮರೆ ಮಾಚಿಕೊಂಡಿತ್ತು. ಆದರೆ ೧೬ನೇ ಶತಮಾನದಲ್ಲಿ ಭಗವಾನ್ ಚೈತನ್ಯ ಮಹಾಪ್ರಭುಗಳು ಇದನ್ನು ಮರುಪರಿಶೋಧಿಸಿ ಕಳೆದುಕೊಂಡಿದ್ದನ್ನು ಮತ್ತೆ ಹುಡಿಕಿದರು ಎಂದು ನಂಬಲಾಗುತ್ತದೆ. ಭಗವಾನ್ ಚೈತನ್ಯ ಮಹಾಪ್ರಭುಗಳು, ಶ್ರೀಕೃಷ್ಣನ ಅಲೌಕಿಕ ಗತಕಾಲದೊಂದಿಗೆ ಸಹಯೋಗ ಹೊಂದಿರುವ, ಕಣ್ಮರೆಯಾದ ಪವಿತ್ರಸ್ಥಳಗಳನ್ನು ಗುರುತಿಸುವ ಉದ್ದೇಶದಿಂದ ವೃಂದಾವನಕ್ಕೆ ೧೫೧೫ರಲ್ಲಿ ಭೇಟಿ ನೀಡುತ್ತಾರೆ. ಪವಿತ್ರ ಪ್ರೇಮರೂಪದ ಆಧ್ಯಾತ್ಮಿಕ ಮಗ್ನಸ್ಥಿತಿಯಲ್ಲಿ ವೃಂದಾವನದ ವಿವಿಧ ಪವಿತ್ರ ವನಗಳಲ್ಲಿ ಭಗವಾನ್ ಚೈತನ್ಯರು ಅಲೆಯುತ್ತಾರೆ. ಹೀಗೆ ತಮ್ಮ ದೈವಿಕ ಶಕ್ತಿಯಿಂದ, ಭಗವಾನ್ ಕೃಷ್ಣನ ಗತಕಾಲದ ಮಹತ್ವದ ಸ್ಥಳಗಳನ್ನು ವೃಂದಾವನದೊಳಗೆ ಹಾಗು ಸುತ್ತಮುತ್ತಲು ಗುರುತಿಸಲು ಅವರು ಶಕ್ತರಾಗುತ್ತಾರೆ.[೪]

ಕಳೆದ ೨೫೦ ವರ್ಷಗಳಲ್ಲಿ, ಮೊದಲು ಸ್ಥಳೀಯ ರಾಜರುಗಳಿಂದ, ನಂತರ ಇತ್ತೀಚಿನ ದಶಕಗಳಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಗಳಿಂದ ವೃಂದಾವನದ ವಿಶಾಲ ವನಗಳು ನಗರೀಕರಣಕ್ಕೆ ಗುರಿಯಾಗಿವೆ. ಕೆಲವೇ ಕೆಲವು ಜಾಗಗಳನ್ನು ಹೊರತುಪಡಿಸಿ ವನ್ಯಪ್ರದೇಶದ ಕ್ಷೇತ್ರವನ್ನು ಕುಗ್ಗಿಸಲಾಗಿದೆ. ಅಲ್ಲದೇ ನವಿಲುಗಳು, ಹಸುಗಳು, ಕೋತಿಗಳು ಹಾಗು ಪಕ್ಷಿ ಸಂಕುಲದ ಹಲವು ಪ್ರಬೇಧಗಳನ್ನು ಒಳಗೊಂಡಂತೆ ಸ್ಥಳೀಯ ವನ್ಯಜೀವಿ ಸಂಕುಲವನ್ನು ಅಲ್ಲಿಂದ ಹೊರಹಾಕಲಾಗಿದೆ. ಕೆಲವೇ ಕೆಲವು ನವಿಲುಗಳು ಹಾಗು ಕೋತಿಗಳು ಕಂಡುಬರುತ್ತವಾದರೂ ಹಸುಗಳು ವೃಂದಾವನದ ಪ್ರಮುಖ ಆಶ್ರಮಗಳಲ್ಲಿರುವ ಗೋಶಾಲೆಗಳಲ್ಲಿ ಮಾತ್ರ ಕಂಡುಬರುತ್ತವೆ.

ಭಗವಾನ್ ಕೃಷ್ಣದ ಆಶೀರ್ವಾದದಿಂದ, ಕಲಿಯುಗವು ವೃಂದಾವನಕ್ಕೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆಯೂ ಸಹ ಇದೆ.

ಧಾರ್ಮಿಕ ಪರಂಪರೆ

ಬದಲಾಯಿಸಿ
 
ಮದನ ಮೋಹನ ದೇವಾಲಯ

ಹಿಂದೂ ಧರ್ಮದ ಎಲ್ಲ ಸಂಪ್ರದಾಯಗಳು ವೃಂದಾವನವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತವೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಅನುಸರಿಸಲಾಗುವ ಸಂಪ್ರದಾಯವೆಂದರೆ ವೈಷ್ಣವಧರ್ಮದ ಆಚರಣೆಯಾಗಿದೆ. ಅದಲ್ಲದೇ ಕಾರ್ಯನಿರ್ವಹಿಸುವ ಹಲವಾರು ವೃಂದಾವನದ ಆಶ್ರಮಗಳೊಂದಿಗೆ ಈ ಸ್ಥಳವು ಕಲಿಕಾ ಕೇಂದ್ರವಾಗಿದೆ. ಇದೊಂದು ಕೃಷ್ಣನ ಆರಾಧನಾ ಕೇಂದ್ರವಾಗಿದ್ದು, ಇಲ್ಲಿನ ಪ್ರದೇಶವು ಕೃಷ್ಣನೊಂದಿಗಿನ ಅವಿನಾಭಾವ ಸಂಬಂಧ ಹೊಂದಿರುವ ಗೋವರ್ಧನ ಹಾಗು ಗೋಕುಲ ಸ್ಥಳವಿಶೇಷಗಳನ್ನು ಒಳಗೊಂಡಿದೆ. ರಾಧಾ ಕೃಷ್ಣನ ಭಕ್ತರು ಅಥವಾ ದೈವಶ್ರದ್ಧೆಯುಳ್ಳ ದಶಲಕ್ಷಗಟ್ಟಲೆ ಶೃದ್ದಾವಂತರು ಈ ಯಾತ್ರಾಸ್ಥಳಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಾರೆ.ಜೊತೆಗೆ ಭೂಮಿಯ ಮೇಲಿನ ಕೃಷ್ಣ ಅವತಾರಕ್ಕೆ ಸಂಬಂಧಿಸಿದ ಹಲವಾರು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.[೫]

ಸಂಪ್ರದಾಯ ಹಾಗು ದಾಖಲಾದ ಸಾಕ್ಷಿಯ ಪ್ರಕಾರ, ಕೃಷ್ಣನನ್ನು ಸಾಕು ತಂದೆತಾಯಿಯರಾದ ನಂದ ಮಹಾರಾಜ ಹಾಗು ಯಶೋಧ ಗೋಕುಲದ ದನಗಾಹಿ ಹಳ್ಳಿಯಲ್ಲಿ ಬೆಳೆಸುತ್ತಾರೆ. ಭಾಗವತ ಪುರಾಣವು, ವೃಂದಾವನದ ವನದಲ್ಲಿನ ಕೃಷ್ಣನ ಬಾಲ್ಯದ ವಿನೋದಾವಳಿಗಳನ್ನು ವಿವರಿಸುತ್ತದೆ. ಅಲ್ಲಿ ಕೃಷ್ಣನು ತನ್ನ ಸಹೋದರ ಬಲರಾಮ, ಹಾಗು ತನ್ನ ಗೋಪಾಲಕ ಸ್ನೇಹಿತರೊಂದಿಗೆ ಬೆಣ್ಣೆ ಕದಿಯುವುದರೊಂದಿಗೆ, ಬಾಲ್ಯದ ತುಂಟಾಟಗಳಲ್ಲಿ ತೊಡಗಿ, ಅಸುರರೊಂದಿಗೆ ಯುದ್ದ ಮಾಡಿರುತ್ತಾನೆ. ಈ ತುಂಟಾಟಗಳ ಜೊತೆಯಲ್ಲಿ, ಕೃಷ್ಣ ವೃಂದಾವನ ಹಳ್ಳಿಯ ಸ್ಥಳೀಯ ಹುಡುಗಿಯರನ್ನು ಸಂಧಿಸುವುದು ಹಾಗು ಅವರೊಟ್ಟಿಗೆ ನರ್ತಿಸುವುದನ್ನೂ ಸಹ ಇದರಲ್ಲಿ ವಿವರಿಸಲಾಗಿದೆ, ಅದರಲ್ಲೂ ವಿಶೇಷವಾಗಿ ರಾಧಾರಾಣಿ, ಇವರೆಲ್ಲರೂ ಗೋಪಿ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ಈ ವಿನೋದಗಳು, ಸಂಸ್ಕೃತ ಕವಿ ಜಯದೇವ ರಚಿಸಿದ ಪ್ರಸಿದ್ಧ ಸಂಸ್ಕೃತ ಪದ್ಯ, ಗೀತ ಗೋವಿಂದಕ್ಕೆ ಪ್ರೇರಣೆಯಾಗಿವೆ.(ಸುಮಾರು. ೧೨೦೦ AD).

ಅತ್ಯಂತ ಜನಪ್ರಿಯ ದೇವಾಲಯಗಳೆಂದರೆ:

 • ಮದನ ಮೋಹನ ದೇವಾಲಯ ಕಾಳಿ ಘಾಟ್ ಸಮೀಪದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯವನ್ನು ಮುಲ್ತಾನಿನ ಕಪೂರ್ ರಾಮ್ ದಾಸ್ ನಿರ್ಮಿಸಿದರು. ಇದು ವೃಂದಾವನದ ಅತ್ಯಂತ ಹಳೆಯ ದೇವಾಲಯವಾಗಿದೆ. ಸಂತ ಚೈತನ್ಯ ಮಹಾಪ್ರಭುಗಳು ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಔರಂಗಜೇಬನ ಆಳ್ವಿಕೆಯಲ್ಲಿ ಭಗವಾನ್ ಮದನ ಗೋಪಾಲನ ಮೂಲ ವಿಗ್ರಹವನ್ನು ರಕ್ಷಿಸುವ ಸಲುವಾಗಿ ದೇಗುಲದಿಂದ ರಾಜಾಸ್ಥಾನದ ಕರೌಲಿಗೆ ಸ್ಥಳಾಂತರಿಸಲಾಗಿತ್ತು. ಇಂದು, ವಿಗ್ರಹದ ಪ್ರತಿರೂಪ ದೇವಾಲಯದಲ್ಲಿ ಪೂಜಿಸಲ್ಪಡುತ್ತಿದೆ.
 • ಬಾಂಕೆ ಬಿಹಾರಿ ದೇವಾಲಯ , ೧೮೬೨ರಲ್ಲಿ[೬] ನಿರ್ಮಿತವಾದ ವೃಂದಾವನದ ಅತ್ಯಂತ ಜನಪ್ರಿಯ ದೇಗುಲ. ಬಾಂಕೆ-ಬಿಹಾರಿಯ ವಿಗ್ರಹವನ್ನು ಕೃಷ್ಣನ ಪರಮ ಭಕ್ತರಾದ ಸ್ವಾಮೀ ಹರಿದಾಸರು ನಿಧಿವನದಲ್ಲಿ ಪತ್ತೆಹಚ್ಚಿದರು, ಇವರು ನಿಂಬರ್ಕ ಪಂಥಕ್ಕೆ ಸೇರಿದವರು.
 • ರಾಧಾ ವಲ್ಲಭ ದೇವಾಲಯ ವನ್ನು ಶ್ರೀ ಹಿತ್ ಹರಿವಂಶ ಮಹಾಪ್ರಭುಗಳ ಮೂಲಕ ರಾಧಾ-ವಲ್ಲಭ ಪಂಥದವರು ಸ್ಥಾಪಿಸಿದರು.[೭] ದೇವಾಲಯದಲ್ಲಿ ಶ್ರೀಕೃಷ್ಣನ ಮೂರ್ತಿಯ ಪಕ್ಕದಲ್ಲಿ ರಾಧಾರಾಣಿಯ ಕಿರೀಟವನ್ನು ಇರಿಸಲಾಗಿದೆ.
 • ಜೈಪುರ ದೇವಾಲಯ ವನ್ನು ೧೯೧೭ರಲ್ಲಿ ಜೈಪುರದ ಮಹಾರಾಜ ಸವಾಯಿ ಮಾಧೋ ಸಿಂಗ್ ನಿರ್ಮಿಸಿದರು. ಇದು ಅತ್ಯಂತ ಸುಂದರ ಹಾಗು ಭವ್ಯ ಮಂದಿರವಾಗಿದೆ. ಮರಳುಗಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಇದು ಸರಿಸಾಟಿಯಿಲ್ಲದ ಹಸ್ತಕೌಶಲಕ್ಕೆ ಸಾಕ್ಷಿಯಾಗಿದೆ. ದೇವಾಲಯವು ಶ್ರೀ ರಾಧಾ ಮಾಧವರಿಗೆ ಸಮರ್ಪಿತವಾಗಿದೆ.
 • ಶ್ರೀ ರಾಧಾ ರಮಣ ಮಂದಿರ , ಇದನ್ನು ೧೫೪೨ರಲ್ಲಿ ಶ್ರೀ ಗೋಪಾಲ ಭಟ್ಟ ಗೋಸ್ವಾಮಿಗಳ ಕೋರಿಕೆಯ ಮೇರೆಗೆ ನಿರ್ಮಿಸಲಾಯಿತು. ಇದು ಅತ್ಯಂತ ಮನೋಹರವಾಗಿ ಕೆತ್ತಲಾದ ವೃಂದಾವನದ ದೇವಾಲಯಗಳಲ್ಲಿ ಒಂದಾಗಿದೆ. ಜೊತೆಗೆ ವಿಶೇಷವಾಗಿ ವೃಂದಾವನದ ಗೋಸ್ವಾಮಿಗಳು ಈ ದೇವಾಲಯದಲ್ಲಿ ಆರಾಧನೆ ಮಾಡುತ್ತಾರೆ. ದೇವಾಲಯದಲ್ಲಿ ರಾಧಾರಾಣಿಯ ಮೂರ್ತಿಯ ಜೊತೆಗೆ ಕೃಷ್ಣನ ಮೂಲ ಸಾಲಿಗ್ರಾಮ ಮೂರ್ತಿಯೂ ಸಹ ಇದೆ.[೮]
 • ಶಹಾಜಿ ದೇವಾಲಯ , ವೃಂದಾವನದ ಮತ್ತೊಂದು ಜನಪ್ರಿಯ ದೇವಾಲಯ, ಇದನ್ನು ೧೮೭೬ರಲ್ಲಿ ಲಕ್ನೋದ ಶ್ರೀಮಂತ ಕುಂದಣಗಾರ ಶಾಹ್ ಕುಂದನ್ ಲಾಲ್ ವಿನ್ಯಾಸಗೊಳಿಸಿ ನಿರ್ಮಿಸಿದರು. ದೇವಾಲಯದಲ್ಲಿರುವ ದೇವತೆಗಳು(ಮೂರ್ತಿಗಳು) ಛೋಟೆ ರಾಧಾ ರಮಣ ಎಂಬ ಹೆಸರಿನಿಂದ ಜನಪ್ರಿಯವಾಗಿವೆ. ತನ್ನ ಸೊಗಸಾದ ವಾಸ್ತುಶೈಲಿ ಹಾಗು ಸುಂದರವಾದ ಅಮೃತಶಿಲೆಯ ಮೂರ್ತಿಗಳಿಂದ ಗಮನ ಸೆಳೆದಿರುವ ದೇವಾಲಯವು ೧೫ ಅಡಿ ಎತ್ತರದ ಹನ್ನೆರಡು ಸುರುಳಿಯಾಕಾರದ ಸ್ಥಂಭಗಳನ್ನು ಹೊಂದಿದೆ. 'ಬಸಂತಿ ಕಮರಾ' ಎಂಬ ದರ್ಬಾರ್ ಸಭಾಂಗಣವು ತನ್ನ ಬೆಲ್ಜಿಯನ್ ಗಾಜಿನ ದೀಪಗುಚ್ಚಗಳು ಹಾಗು ಅತ್ಯುತ್ತಮ ವರ್ಣಚಿತ್ರಗಳಿಗಾಗಿ ಪ್ರಸಿದ್ಧವಾಗಿದೆ.
 • ರಂಗಾಜಿ ದೇವಾಲಯ , ೧೮೫೧ರಲ್ಲಿ ನಿರ್ಮಿತವಾದ ಈ ದೇವಾಲಯವು ಸುರುಳಿಯಾಕಾರದಲ್ಲಿರುವ ಪವಿತ್ರ ಶೇಷ ನಾಗನ ಮೇಲೆ ಶೇಷಶಾಯಿ ಭಂಗಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಗವಾನ್ ವಿಷ್ಣುವೆಂದು ವರ್ಣಿಸಲಾಗುವ ಭಗವಾನ್ ರಂಗನಾಥ ಅಥವಾ ರಂಗಾಜಿಗೆ ಸಮರ್ಪಿತವಾಗಿದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ.(ಶ್ರೀವಿಲ್ಲಿಪುತ್ತೂರ್ ನಲ್ಲಿರುವ ದೇವಾಲಯದ ಮಾದರಿ), ಇದು ಆರು ಮಹಡಿಗಳ ಎತ್ತರದ ಗೋಪುರ(ಪ್ರವೇಶ ದ್ವಾರ) ಹಾಗು ೫೦ ಅಡಿ ಎತ್ತರದ ಸ್ವರ್ಣ ಲೇಪಿತ ಧ್ವಜ ಸ್ತಂಭ ಹೊಂದಿದೆ. ಒಂದು ಪುಷ್ಕರಿಣಿ ಹಾಗು ಚಿತ್ರಸದೃಶವಾದ ಉದ್ಯಾನವು ದೇವಾಲಯದ ಪ್ರಾಕಾರದೊಳಗೆ ಕಂಡುಬರುತ್ತದೆ. ಅಲ್ಲಿರುವ ದೇವರಿಗಾಗಿ ವಾರ್ಷಿಕ ಜಲ ವಿಹಾರ ಉತ್ಸವವನ್ನು ಪುಷ್ಕರಿಣಿಯಲ್ಲಿ ಬಹಳ ವೈಭವದಿಂದ ಹಾಗು ಭವ್ಯವಾಗಿ ಆಚರಿಸಲಾಗುತ್ತದೆ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ 'ರಥ್ ಕಾ ಮೇಲಾ' ಎಂದು ಜನಪ್ರಿಯವಾಗಿ ಕರೆಯಲ್ಪಡುವ 'ಬ್ರಹ್ಮೋತ್ಸವ'ದ ಆಚರಣೆಗೂ ಸಹ ಇದು ಪ್ರಸಿದ್ಧವಾಗಿದೆ. ಹತ್ತು ದಿನಗಳ ಆಚರಣೆಯಲ್ಲಿ, ದೇವಾಲಯದ ಭಕ್ತಾದಿಗಳು ರಥವನ್ನು(ತೇರು) ಅಲ್ಲೇ ಪಕ್ಕದಲ್ಲಿರುವ ಉದ್ಯಾನವನದವರೆಗೆ ಎಳೆಯುತ್ತಾರೆ. ದೇವಾಲಯದೊಳಗೆ ಆಂಡಾಳ್ ಶೈಲಿಯನ್ನು ಅನುಸರಿಸಿ ಭಜನಾ ಕಾರ್ಯಕ್ರಮ ನಡೆಸಲಾಗುತ್ತದೆ. ಇವರು ದಕ್ಷಿಣ ಭಾರತದ ಹನ್ನೆರಡು ವೈಷ್ಣವ ಸಂತರಲ್ಲಿ ಒಬ್ಬರು.

ಗೋವಿಂದ ದೇವ್ (ಗೋವಿಂದಜಿ)ದೇವಾಲಯ , ಈ ದೇವಾಲಯವು ಗ್ರೀಕ್ ನ ಶಿಲುಬೆಯಾಕಾರದಲ್ಲಿ ನಿರ್ಮಿತ ಏಳು ಮಹಡಿಗಳಿಂದ ಭವ್ಯವಾಗಿ ರಚನೆಯಾಗಿತ್ತು. ಚಕ್ರವರ್ತಿ ಅಕ್ಬರನು ಆಗ್ರಾದ ಕೆಂಪು ಕೋಟೆಗೆಂದು ತರಿಸಲಾಗಿದ್ದ ಕೆಂಪು ಮರಳುಗಲ್ಲನ್ನು ಈ ದೇವಾಲಯದ ನಿರ್ಮಾಣಕ್ಕಾಗಿ ದಾನಮಾಡಿದ್ದನೆಂದು ಹೇಳಲಾಗುತ್ತದೆ. ಅವನ ಸೇನಾಪತಿ ರಾಜ ಮಾನ್ ಸಿಂಗ್ ನ ಮೇಲ್ವಿಚಾರಣೆಯಲ್ಲಿ ೧೫೯೦ರಲ್ಲಿ ಒಂದು ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಪಾಶ್ಚಿಮಾತ್ಯ, ಹಿಂದೂ ಹಾಗು ಮುಸ್ಲಿಮರ ವಾಸ್ತುಶಿಲ್ಪೀಯ ಅಂಶಗಳೊಂದಿಗೆ ರಚನೆಯಾಗಿದೆ. ಇದು ಮುಘಲ್ ದೊರೆ ಔರಂಗಜೇಬನಿಂದ ನಾಶಗೊಳಿಸಲ್ಪಡುತ್ತದೆ.

 • ಶ್ರೀ-ಕೃಷ್ಣ ಬಲರಾಮ ದೇವಾಲಯ , ಇದನ್ನು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್(ISKON) 'ರಮಣ-ರೇಟಿ' ಎಂದು ಕರೆಯಲ್ಪಡುವ ಸ್ಥಳದಲ್ಲಿ ನಿರ್ಮಿಸಿದೆ. ಇದು ಇಂದು ವೃಂದಾವನದ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವರುಗಳೆಂದರೆ ಕೃಷ್ಣ ಮತ್ತು ಬಲರಾಮ; ಇವರ ಜೊತೆಯಲ್ಲಿ ರಾಧಾ-ಶ್ಯಾಮಸುಂದರ ಹಾಗು ಗೌರ-ನಿತಾಯಿ ದೇವತೆಗಳೂ ಸಹ ಪೂಜಿಸಲ್ಪಡುತ್ತಾರೆ. ದೇವಾಲಯಕ್ಕೆ ಅಂಟಿಕೊಂಡಂತೆ, ISKCONನ ಸ್ಥಾಪಕ A. C. ಭಕ್ತಿವೇದಾಂತ ಸ್ವಾಮೀ ಪ್ರಭುಪಾದರ ಸಮಾಧಿಯಿದೆ, ಸಮಾಧಿಯನ್ನು ಅಪ್ಪಟ ಅಮೃತಶಿಲೆಯಲ್ಲಿ ನಿರ್ಮಿಸಲಾಗಿದೆ.
 • ರಾಧಾ ದಾಮೋದರ ಮಂದಿರ ವು ಸೇವಾ ಕುಂಜದಲ್ಲಿ ನೆಲೆಯಾಗಿದ್ದು, ಮಂದಿರವನ್ನು ೧೫೪೨ರಲ್ಲಿ ಶ್ರೀಲ ಜೀವ ಗೋಸ್ವಾಮಿಗಳು ಸ್ಥಾಪಿಸಿದರು. ಶ್ರೀ ಶ್ರೀ ರಾಧಾ ದಾಮೋದರ ದೇವತೆಗಳು ಇಲ್ಲಿ ಪೂಜಿಸಲ್ಪಡುತ್ತಾರೆ. ಎ. ಸಿ. ಭಕ್ತಿವೇದಾಂತ ಸ್ವಾಮೀ ಪ್ರಭುಪಾದರ ಭಜನ ಕುಟಿರವೂ ಸಹ ಈ ಮಂದಿರದಲ್ಲಿದೆ.
 • ಶ್ರೀ ಮಾ ಕಾತ್ಯಾಯಿನಿ ಮಂದಿರ , ದೇವಾಲಯವು ರಂಗನಾಥ ಮಂದಿರದ ಸಮೀಪ ರಾಧಾ ಬಾಗ್ ನಲ್ಲಿ ಸ್ಥಿತವಾಗಿದೆ. ಶಕ್ತಿಯನ್ನು ಆರಾಧಿಸುವ ಶುದ್ಧ ಶಕ್ತಿ ಪೀಠಗಳಲ್ಲಿ ಇದೂ ಒಂದು.
 • ಚಿಂತಾಹರಣ ಹನುಮಾನ ಮಂದಿರ , ಭಗವಾನ್ ಹನುಮಾನನ ದೇವಾಲಯವು ಅಟಲ್ ವನ್ ಸಮೀಪ ಸ್ಥಿತವಾಗಿದೆ.
 • ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ದೇವಾಲಯ ವು: ವೃಂದಾವನದಲ್ಲಿ, ಭಗವಾನ್ ಕೃಷ್ಣನ "ಲೀಲಾ ಸ್ಥಾನ"ಕ್ಕೆ(ದೈವಿಕ ಭಾವಾವೇಶ ಒಳಗೊಂಡ ಆಟ)೮೪ ಕೋಷ್ ವ್ರಜ್ ಪರಿಕ್ರಮ ಯಾತ್ರೆಯನ್ನು ಪೂರ್ಣಗೊಳಿಸುವ ಭಕ್ತಾದಿಗಳು ತಪ್ಪದೆ ಭೇಟಿ ನೀಡಬೇಕಾದ ಸ್ಥಳವಾಗಿದೆ. ದೇವಾಲಯವು ಶತಮಾನಗಳಷ್ಟು ಹಳೆಯದಾಗಿದ್ದು, ದೈವಿಕ ಜೋಡಿ ಹಾಗು ಅವರ ಅಷ್ಟ ಸಖಿಯರಿಗೆ ಸಮರ್ಪಿತ ಮೊದಲ ಭಾರತೀಯ ದೇವಾಲಯವಾಗಿದೆ - ರಾಧೆಯ ಎಂಟು "ಸಖಿಯರು", ಭಗವಾನ್ ಕೃಷ್ಣನೊಂದಿಗಿನ ಆಕೆಯ ಪ್ರೇಮದಾಟದಲ್ಲಿ ನಿಕಟವಾಗಿ ಭಾಗಿಯಾಗಿದ್ದರು. ಅಷ್ಟ ಸಖಿಯರ ಬಗ್ಗೆ ಪ್ರಾಚೀನ ಗ್ರಂಥಗಳಾದ ಪುರಾಣಗಳು ಹಾಗು ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ದೇವಾಲಯವನ್ನು ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ಮಂದಿರ ವೆಂದು ಕರೆಯಲಾಗುತ್ತದೆ. ಜೊತೆಗೆ ಭಗವಾನ್ ಕೃಷ್ಣ ಹಾಗು ರಾಧಾರಾಣಿಯ ದೈವಿಕ ರಾಸ ಲೀಲೆಯ ತಾಣವಾಗಿತ್ತು. ಇದು ಶ್ರೀ ಬಾಂಕೆ ಬಿಹಾರಿ ಮಂದಿರಕ್ಕೆ ತೀರ ಸಮೀಪದಲ್ಲಿದೆ. ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ಮಂದಿರವು ಮಥುರಾ, ವೃಂದಾವನದ ಎರಡು ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಭಗವಾನ್ ಕೃಷ್ಣನು ವಾಸ್ತವವಾಗಿ ತನ್ನ ಪ್ರೇಮಿಕೆ ರಾಧಾ ಹಾಗು ಅವಳ ಸಖಿಯರೊಂದಿಗೆ ರಾಸ ಲೀಲೆಯಲ್ಲಿ ತೊಡಗುತ್ತಾನೆಂದು ಪುರಾಣವು ಹೇಳುತ್ತದೆ. ಅಂತಹ ದಿನ ರಾತ್ರಿಯಲ್ಲಿ, ಭಕ್ತಾದಿಗಳು ಗೆಜ್ಜೆಯ ನಾದ ಕೇಳಿಬರುತ್ತದೆಂದು ಹೇಳುತ್ತಾರೆ. ಒಂದು ಮಧುರ ಗಾಯನಕ್ಕೆ ಲಯಬದ್ಧವಾಗಿ ಗೆಜ್ಜೆಗಳು ಕುಣಿಯುವ ಸದ್ದು ಕೇಳಿಬರುತ್ತದೆ.

ಇತರ ಪವಿತ್ರ ಸ್ಥಳಗಳು

ಬದಲಾಯಿಸಿ
 
ಸ್ವಾಮಿ ಹರಿದಾಸರನ್ನು ಭೇಟಿ ಮಾಡಿದ ಅಕ್ಬರ್ ಹಾಗು ತಾನ್ಸೇನ್.

ಆಕರ್ಷಣೀಯ ಇತರ ಸ್ಥಳಗಳಲ್ಲಿ ಸೇವಾ ಕುಂಜ್, ಕೇಸಿ ಘಾಟ್, ಶ್ರೀಜಿ ಮಂದಿರ, ಜುಗಲ್ ಕಿಶೋರ್ ದೇವಾಲಯ, ಲಾಲ್ ಬಾಬು ದೇವಾಲಯ, ರಾಜ್ ಘಾಟ್, ಕುಸುಮ ಸರೋವರ, ಮೀರಾ-ಬಾಯಿ ದೇವಾಲಿ, ಇಮ್ಲಿ ತಾಲ್, ಕಾಲಿಯ ಘಾಟ್, ರಮಣ ರೇಟಿ, ವರಾಹ ಘಾಟ್ ಹಾಗು ಚಿರ ಘಾಟ್, ಜೊತೆಗೆ ದೋಣಿಯ ಮೂಲಕ ನದಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ದೇವ್ರಹ ಬಾಬಾರ ಸಮಾಧಿ ಸಿಗುತ್ತದೆ, ಇವರು ಕಳೆದ ಶತಮಾನದಲ್ಲಿದ್ದ ಓರ್ವ ಪೂಜ್ಯ ಸಂತರಾಗಿದ್ದಾರೆ.

ಸೇವಾ ಕುಂಜದಲ್ಲಿ ಭಗವಾನ್ ಕೃಷ್ಣ, ರಾಧಾರಾಣಿ ಹಾಗು ಗೋಪಿಯರೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದನು; ಅದಲ್ಲದೇ ನಿಧಿವನದಲ್ಲಿ ದೈವೀ ಜೋಡಿಯು ವಿಶ್ರಾಂತಿ ಪಡೆಯುತ್ತಿತ್ತು. ತಾನ್ಸೇನ್ ರ ಗುರು ಸ್ವಾಮೀ ಹರಿದಾಸರ ಸಮಾಧಿಯೂ ಇಲ್ಲಿದೆ. ಪ್ರತಿ ವರ್ಷ, ಇವರ ಗೌರವಾರ್ಥ, ಸ್ವಾಮಿ ಹರಿದಾಸ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ, ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಪ್ರಸಿದ್ಧ ಸಂಗೀತಗಾರರು ಭಾಗವಹಿಸುತ್ತಾರೆ.

ಶ್ರೀ ವೃಂದಾವನದಲ್ಲಿರುವ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ ಗುರುಕುಲ ರಸ್ತೆಯಲ್ಲಿರುವ ಶ್ರೀ ಕಥಿಯ ಬಾಬಾ ಕಾ ಸ್ಥಾನ", "ಬ್ರಜೋಬಿದೇಹಿ ಮಹಂತ " ಎಂದು ಹೆಸರಾಗಿರುವ ಇವರು ನಿಮ್ಬರ್ಕ ಪಂಥದ ಸ್ವಭುರಾಮ್ ದ್ವಾರರ ಆಚಾರ್ಯರೆನಿಸಿದ್ದಾರೆ. ಶ್ರೀ ಸ್ವಾಮೀ ರಾಷ್ ಬಿಹಾರಿ ದಾಸ್ ಕಥಿಯ ಬಾಬಾಜಿ ಮಹಾರಾಜ್ ಎಂದೇ ಪ್ರಖ್ಯಾತರಾಗಿದ್ದಾರೆ.

 • ಶ್ರೀ ಶ್ರೀ ರಾಧಾ ಗೋವಿಂದ ದೇವಾಲಯ [೯] - ಇದನ್ನು ವೃಂದಾವನದ ಮಹಾಮಂಡಲೇಶ್ವರ ಮಹಾಂತ ಶ್ರೀ ಕೃಷ್ಣ ಬಲರಾಮ್ ಸ್ವಾಮಿಜಿ ನಿರ್ಮಾಣ ಮಾಡಿದರು. ಹೊಸದಾಗಿ ನಿರ್ಮಿತ, ಈ ರಾಧಾ ಗೋವಿಂದ ದೇವಾಲಯವು ೨೦೦೪ರಲ್ಲಿ ಪೂರ್ಣಗೊಂಡಿತು. ಇದು ಶ್ರೀ ಚೈತನ್ಯ ಮಹಾಪ್ರಭುಗಳ ನೇರ ಸನ್ಯಾಸಿ ಶಿಷ್ಯರಾದ ಶ್ರೀ ರೂಪ ಗೊಸ್ವಾಮಿಗಳು ಸುಮಾರು ೫೦೦ ವರ್ಷಗಳ ಹಿಂದೆ ನಿರ್ಮಿಸಿದ ಪ್ರಸಿದ್ಧ ಐತಿಹಾಸಿಕ ದೇವಾಲಯವೇ ಇದಕ್ಕೆ ಮೂಲಾಧಾರವಾಗಿದೆ.

ಭೌಗೋಳಿಕತೆ

ಬದಲಾಯಿಸಿ

ವೃಂದಾವನವು27°35′N 77°42′E / 27.58°N 77.7°E / 27.58; 77.7ರಲ್ಲಿ ನೆಲೆಯಾಗಿದೆ.[೧೦] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೧೭೦ ಮೀಟರ್ (೫೫೭ ಅಡಿ) ಎತ್ತರದಲ್ಲಿದೆ. ಇದೊಂದು ಪವಿತ್ರ ನಗರವೂ ಹೌದು.

ಜನಸಂಖ್ಯೆ

ಬದಲಾಯಿಸಿ

As of 2001ಭಾರತ ಜನಗಣತಿಯ ಪ್ರಕಾರ,[೧೧] ವೃಂದಾವನವು ೫೬,೬೧೮ರಷ್ಟು ಜನಸಂಖ್ಯೆ ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ ೫೬% ಪುರುಷರು ಮತ್ತು ೪೪% ಮಹಿಳೆಯರು ಇದ್ದಾರೆ. ವೃಂದಾವನವು ಸರಾಸರಿ ೬೫%ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಇದು ೫೯.೫%ರಷ್ಟು ಸರಾಸರಿ ರಾಷ್ಟ್ರೀಯ ಸಾಕ್ಷರತಾ ಪ್ರಮಾಣಕ್ಕಿಂತ ಹೆಚ್ಚಿದೆ: ಪುರುಷರ ಸಾಕ್ಷರತಾ ಪ್ರಮಾಣವು ೮೪%ನಷ್ಟು, ಹಾಗು ಮಹಿಳಾ ಸಾಕ್ಷರತಾ ಪ್ರಮಾಣವು ೭೪%ರಷ್ಟಿದೆ. ವೃಂದಾವನದಲ್ಲಿ ಶೇಖಡಾ ೧೩ರಷ್ಟು ಜನಸಂಖ್ಯೆಯು ಆರು ವರ್ಷ ವಯೋಮಿತಿಗಿಂತ ಕೆಳಗಿನವರು. ಮಹಿಳೆಯರ ಸಂಖ್ಯೆ ೨೪,೨೦೦ ರಷ್ಟಿದ್ದು, ಜನಸಂಖ್ಯೆಯಲ್ಲಿ ೧೩%ನಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ವೃಂದಾವನವು ವಿಧವೆಯರ ನಗರವೆಂದೂ[೧೨] ಸಹ ಕರೆಯಲ್ಪಡುತ್ತದೆ. ಏಕೆಂದರೆ ತಮ್ಮ ಗಂಡಂದಿರನ್ನು ಕಳೆದುಕೊಂಡ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಹಾಗು ಸುತ್ತಮುತ್ತಲ ಪ್ರದೇಶಗಳಿಂದ ಬಂದು ಇಲ್ಲಿ ನೆಲೆಗೊಳ್ಳುತ್ತಾರೆ. ಕೆಲವು ಹಿಂದೂ ಸಂಪ್ರದಾಯಗಳ ಪ್ರಕಾರ, ಮೇಲ್ಜಾತಿಯ ವಿಧವೆಯರು ಮರುವಿವಾಹ ಮಾಡಿಕೊಳ್ಳುವಂತಿರಲಿಲ್ಲ; ಈ ರೀತಿಯಾಗಿ ತಮ್ಮ ಪತಿಯ ವಿಯೋಗದಿಂದ ಕುಟುಂಬದ ತಿರಸ್ಕಾರಕ್ಕೆ ಒಳಗಾದವರು ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಸುಮಾರು ೧೫,೦೦೦ದಿಂದ ೨೦,೦೦೦ ವಿಧವೆಯರು ಬೀದಿ ಪ್ರದೇಶಗಳಲ್ಲಿ ವಾಸಿಸುತ್ತಾರೆಂದು ಅಂದಾಜಿಸಲಾಗಿದೆ.[೧೩][೧೪] ಇವರಲ್ಲಿ ಹಲವರು ಸುಮಾರು ೩೦ ವರ್ಷಕ್ಕೂ ಹೆಚ್ಚು ಕಾಲದಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ಭಜನಾಶ್ರಮಗಳಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ದೇವರ ಭಜನೆ ಗಳನ್ನು ಹಾಡುವುದರ ಬದಲಿಯಾಗಿ, ಹೆಂಗಸರಿಗೆ ಒಂದು ಬಟ್ಟಲು ಅನ್ನ ಹಾಗು ಅಲ್ಪ ಹಣ ನೀಡಲಾಗುತ್ತದೆ.(ಸುಮಾರು ಹತ್ತು ರೂಪಾಯಿಗಳು)[೧೨], ಹೀಗಾಗಿ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಇವರುಗಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾರೆ ಅಥವಾ, ಕೆಲವೊಂದು ಪರಿಸ್ಥಿತಿಗಳಲ್ಲಿ ವೇಶ್ಯಾವೃತ್ತಿ ಮಾಡುತ್ತಾರೆ.[೧೫] ಗಿಲ್ಡ್ ಆಫ್ ಸರ್ವಿಸ್ ಎಂಬ ಸಂಸ್ಥೆಯು ಇಂತಹ ನತದೃಷ್ಟ ಹೆಂಗಸರು ಹಾಗು ಮಕ್ಕಳಿಗೆ ಸಹಾಯ ಮಾಡಲು ಸ್ಥಾಪನೆಯಾಗಿದೆ[೧೪]. ಈ ಸಂಸ್ಥೆಯು ಅಮರ್ ಬರಿ(ನನ್ನ ಮನೆ) ಎಂಬ ಆಶ್ರಯತಾಣವನ್ನು ೨೦೦೦ದಲ್ಲಿ ಆರಂಭಿಸಿತು. ಇದು ವೃಂದಾವನದ ೧೨೦ ವಿಧವೆಯರಿಗೆ ಆಶ್ರಯ ನೀಡಿದೆ; ಅಲ್ಲದೆ ೫೦೦ ವಿಧವೆಯರಿಗೆ ಎರಡನೇ ನೆಲೆಯಾಗಲು ಇನ್ನೊಂದು ಆಶ್ರಯತಾಣವು ಆರಂಭವಾಗುವ ನಿರೀಕ್ಷೆಯಿದೆ.

ವೃಂದಾವನದಲ್ಲಿರುವ ಕೈಗಾರಿಕೆಗಳು

ಬದಲಾಯಿಸಿ

ಇತ್ತೀಚಿನ ದಿನಗಳಲ್ಲಿ ವೃಂದಾವನವು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಆದಾಯದ ಪ್ರಮುಖ ಮೂಲವಾಗುತ್ತಿದೆ. ವೃಂದಾವನದ ಶಾಂತಿ ಹಾಗು ನಿಶಬ್ದತೆಯ ವಾತಾವರಣದಿಂದಾಗಿ ದೆಹಲಿಯ ಹಲವರು ಇಲ್ಲಿ ಮನೆಗಳನ್ನು ಖರೀದಿಸಿ, ಪವಿತ್ರ ಸ್ಥಳದಲ್ಲಿ ನೆಲೆಸಲು ಮುಂದಾಗಿದ್ದಾರೆ. ಈ ಅವಶ್ಯಕತೆಗೆ ಬದಲಿಯಾಗಿ, ಹಲವು ಪ್ರಸಿದ್ಧ ರಿಯಲ್ ಎಸ್ಟೇಟ್ ಹಾಗು ಆಸ್ತಿಯನ್ನು ಅಭಿವೃದ್ಧಿ ಪಡಿಸುವ ಕಂಪನಿಗಳು ಹೊಸ ಹೌಸಿಂಗ್ ಯೋಜನೆ ಆರಂಭಿಸಿವೆ.

ಇವನ್ನೂ ನೋಡಿ

ಬದಲಾಯಿಸಿ
 • ವೃಂದಾವನದ ಆರು ಗೋಸ್ವಾಮಿಗಳು
 • ಹರೇ ಕೃಷ್ಣ
 • ಗೋವರ್ಧನ ಪರ್ವತ
 • ಗೌರಾ ಕಿಶೋರ ದಾಸ ಬಾಬಾಜಿ
 • ಸ್ವಯಂ ಭಗವಾನ್
 • ರಾಧಾ ಕೃಷ್ಣ

ಉಲ್ಲೇಖಗಳು

ಬದಲಾಯಿಸಿ
 1. http://www.voanews.com/english/archive/2008-01/2008-01-24-voa22.cfm?moddate=2008-01-24[ಮಡಿದ ಕೊಂಡಿ]
 2. ಬ್ರಿಂದಾಬನ್ ದಿ ಇಂಪೀರಿಯಲ್ ಗೆಜೆಟೀರ್ ಆಫ್ ಇಂಡಿಯಾ, ೧೯೦೯, v. ೯, ಪುಟ. ೧೭.
 3. ಬ್ರಿಂದಾಬನ್   This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help).
 4. "ಭಗವಾನ್ ಚೈತನ್ಯ ಮಹಾಪ್ರಭುಗಳು ಪರಿಶೋಧಿಸಿದ ವೃಂದಾವನ". Archived from the original on 2011-01-23. Retrieved 2011-01-28.
 5. KLOSTERMAIER, Klaus K. (2007). A Survey of Hinduism. State University of New York Press; 3 edition. p. 204. ISBN 0791470814. The center of Krishna-worship has been for a long time Brajbhumi, the district of Mathura that embraces also Vrindavana, Govardhana, and Gokula, associated with Krishna from the time immemorial. Many millions of Krishna bhaktas visit these places ever year and participate in the numerous festivals that reenact scenes from Krshnas life on Earth {{cite book}}: line feed character in |quote= at position 195 (help)
 6. "Banke-Bihari Temple website". Archived from the original on 2016-03-04. Retrieved 2021-08-10.
 7. ರಾಧಾವಲ್ಲಭ ದೇವಾಲಯದ ವೆಬ್ಸೈಟ್
 8. ಶ್ರೀ ರಾಧಾ ರಮಣ ದೇವಾಲಯದ ಇತಿಹಾಸ
 9. "ಕೆಂಪು ಕಲ್ಲಿನ ದೇವಾಲಯ". Archived from the original on 2009-08-30. Retrieved 2011-01-28.
 10. ಫಾಲಿಂಗ್ ರೈನ್ ಜೆನೋಮಿಕ್ಸ್, Inc - ವೃಂದಾವನ
 11. GRIndia
 12. ೧೨.೦ ೧೨.೧ "[[CNN]]: India's widows live out sentence of shame, poverty". Archived from the original on November 29, 2006. Retrieved 2007-03-25. {{cite news}}: URL–wikilink conflict (help)
 13. "[[Catalyst Magazine]]: Moksha: the widows of Vrindavan". Archived from the original on 2007-04-03. Retrieved 2007-03-25. {{cite web}}: URL–wikilink conflict (help)
 14. ೧೪.೦ ೧೪.೧ "Shunned from society, widows flock to city to die". CNN. 2007-07-05. Retrieved 2007-07-05.("ಸಾಮಾನ್ಯ ನಿರೂಪಣೆಗಳು ಹಾಗು ಪ್ರಶ್ನಾರ್ಹ ಹೇಳಿಕೆಗಳಿಗಾಗಿ" ಸೌತ್ ಏಶಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ನ ಹಲವಾರು ಸದಸ್ಯರು ಈ ಲೇಖನವನ್ನು ಟೀಕಿಸಿದರು. SAJA ಫೋರಮ್ ನಲ್ಲಿರುವ ಒಂದು ಲೇಖನ ವು ಇಂತಹ ಟೀಕೆಗಳು ಪ್ರಕಟವಾದ ನಂತರ ಹಲವಾರು ಉದಾಹರಣೆಗಳನ್ನು ದಾಖಲಿಸಿತು. CNN ಆನ್ಲೈನ್ ರೂಪಾಂತರದಲ್ಲಿ ಸದ್ದಿಲ್ಲದೇ ಲೇಖನವನ್ನು ಬದಲಾವಣೆ ಮಾಡಿತು. WNYCಯ ವರದಿಗಾರ ಅರುಣ್ ವೇಣುಗೋಪಾಲ್, "SAJA ಚರ್ಚಾ ಪಟ್ಟಿಯಲ್ಲಿ, ರಾಜಕೀಯ ಸಮುದಾಯದಕ್ಕೆ ಸೇರಿದ ಹಲವರು, ಕಥೆಯು ಸಂಕೀರ್ಣ ಸಾಮಾಜಿಕ ವಾಸ್ತವಿಕತೆಗೆ ಹೆಚ್ಚು ಒತ್ತು ನೀಡುವ ಬದಲು 'ಸಂಪ್ರದಾಯ'ವನ್ನು ಹೆಚ್ಚು ಆರೋಪಿಸಿದೆಯೆಂದು ಬರೆಯುತ್ತಾರೆ.")
 15. http://womennewsnetwork.net/೨೦೦೭/೧೧/೦೫/nothing-to-go-back-to-the-fate-of-the-widows-of-vrindavan-india/[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ವೃಂದಾವನ&oldid=1169439" ಇಂದ ಪಡೆಯಲ್ಪಟ್ಟಿದೆ