ವಿ. ಪಿ. ಸಿಂಗ್

ಸ್ವತಂತ್ರ ಭಾರತದ ಹತ್ತನೆಯ ಪ್ರಧಾನಮಂತ್ರಿ
(ವಿ ಪಿ ಸಿಂಗ್ ಇಂದ ಪುನರ್ನಿರ್ದೇಶಿತ)

ವಿಶ್ವನಾಥ ಪ್ರತಾಪ್ ಸಿಂಗ್ ಭಾರತಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. ೧೯೮೪ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, ೧೯೮೯ಡಿಸೆಂಬರ್ ೨ ರಿಂದ ೧೯೯೦ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.

ವಿಶ್ವನಾಥ ಪ್ರತಾಪ್ ಸಿಂಗ್
೧೯೮೯ರಲ್ಲಿ ವಿ. ಪಿ. ಸಿಂಗ್

ಭಾರತದ ೭ನೆಯ ಪ್ರಧಾನಮಂತ್ರಿ
ಅಧಿಕಾರ ಅವಧಿ
೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦
ರಾಷ್ಟ್ರಪತಿ ಆರ್. ವೆಂಕಟರಾಮನ್
ಪ್ರತಿನಿಧಿ ಚೌಧರಿ ದೇವಿ ಲಾಲ್ (-೧ ನವೆಂಬರ್ ೧೯೯೦)
ಪೂರ್ವಾಧಿಕಾರಿ ರಾಜೀವ್ ಗಾಂಧಿ
ಉತ್ತರಾಧಿಕಾರಿ ಚಂದ್ರಶೇಖರ್

ಅಧಿಕಾರ ಅವಧಿ
೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦
ಪೂರ್ವಾಧಿಕಾರಿ ಕೃಷ್ಣ ಚಂದ್ರ ಪಂತ್
ಉತ್ತರಾಧಿಕಾರಿ ಚಂದ್ರಶೇಖರ್ ಸಿಂಗ್
ಅಧಿಕಾರ ಅವಧಿ
೨೪ ಜನವರಿ ೧೯೮೭ – ೧೨ ಏಪ್ರಿಲ್ ೧೯೮೭
ಪ್ರಧಾನ ಮಂತ್ರಿ ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಜೀವ್ ಗಾಂಧಿ
ಉತ್ತರಾಧಿಕಾರಿ ಕೃಷ್ಣ ಚಂದ್ರ ಪಂತ್

ಅಧಿಕಾರ ಅವಧಿ
೩೧ ಡಿಸೆಂಬರ್ ೧೯೮೪ – ೨೩ ಜನವರಿ ೧೯೮೭
ಪ್ರಧಾನ ಮಂತ್ರಿ ರಾಜೀವ್ ಗಾಂಧಿ
ಪೂರ್ವಾಧಿಕಾರಿ ಪ್ರಣಬ್ ಮುಖರ್ಜಿ
ಉತ್ತರಾಧಿಕಾರಿ ರಾಜೀವ್ ಗಾಂಧಿ

ಅಧಿಕಾರ ಅವಧಿ
೯ ಜೂನ್ ೧೯೮೦ – ೧೯ ಜುಲೈ ೧೯೮೨
ರಾಜ್ಯಪಾಲ ಚಂಡೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್
ಪೂರ್ವಾಧಿಕಾರಿ ಬನಾರಸಿ ದಾಸ್
ಉತ್ತರಾಧಿಕಾರಿ ಶ್ರೀಪತಿ ಮಿಶ್ರಾ
ವೈಯಕ್ತಿಕ ಮಾಹಿತಿ
ಜನನ (೧೯೩೧-೦೬-೨೫)೨೫ ಜೂನ್ ೧೯೩೧
ಅಲಹಾಬಾದ್, ಯುನೈಟೆಡ್ ಪ್ರಾವಿನ್ಸಸ್, ಬ್ರಿಟಿಷ್ ಭಾರತ
(ಈಗ ಉತ್ತರ ಪ್ರದೇಶ, ಭಾರತ)
ಮರಣ 27 November 2008(2008-11-27) (aged 77)
ನವ ದೆಹಲಿ, ದೆಹಲಿ, ಭಾರತ
ರಾಜಕೀಯ ಪಕ್ಷ ಜನ ಮೋರ್ಚ (1987–1988; 2006–2008)
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೧೯೮೭ರ ಮುಂಚೆ)
ಜನತಾ ದಳ (1988–2006)
ಅಭ್ಯಸಿಸಿದ ವಿದ್ಯಾಪೀಠ ಅಲಹಾಬಾದ್ ವಿಶ್ವವಿದ್ಯಾಲಯ
ಪುಣೆ ವಿಶ್ವವಿದ್ಯಾಲಯ
ಧರ್ಮ ಹಿಂದೂ ಧರ್ಮ
ಸಹಿ