ವಿಕಿಪೀಡಿಯ:ಮತ್ತಷ್ಟು ಸ್ವಾರಸ್ಯಕರ ವಿಷಯಗಳು
ಹಲವು ಸ್ವಾರಸ್ಯಕರ ವಿಷಯಗಳು, ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...
- ಗಂಟಲು ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.
- ಎಎಸ್9100 ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣಾ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್ ಸೇರಿ ಬಿಡುಗಡೆ ಮಾಡಿದವು .
- ಆಲ್ ಇಂಡಿಯಾ ರೇಡಿಯೊಗೆ ಆಕಾಶವಾಣಿ ಎಂದು ಹೆಸರಿಸಿದವರು ಮೈಸೂರು ಆಕಾಶವಾಣಿ ಕೇಂದ್ರದವರು.
- ಪೂರಕ ಮಾಹಿತಿ:ಎಂ.ವಿ.ಗೋಪಾಲಸ್ವಾಮಿಯವರ ಪ್ರಯತ್ನದಿಂದ ಮೈಸೂರಿನಲ್ಲಿ ಸ್ಥಾಪಿತವಾದ ರೇಡಿಯೊ ಕೇಂದ್ರಕ್ಕೆ 'ಆಕಾಶವಾಣಿ'ಎಂದು ಹೆಸರು ಸೂಚಿಸಿದವರು: ನಾ.ಕಸ್ತೂರಿ
- ಕರ್ನಾಟಕದ ಧ್ವಜವನ್ನು ರೂಪಿಸಿದವರು ದಿ.ರಾಮಮೂರ್ತಿ
- ಗ್ರೀಕ್ ಮಹಾಕಾವ್ಯ ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆಯಂತೆ!
- ಕಾರಂತರು 'ತರಂಗ' ಸಾಪ್ತಾಹಿಕದಲ್ಲಿ ಕೆಲಕಾಲ 'ಬಾಲವನದಲ್ಲಿ ಕಾರಂತಜ್ಜ' ಎಂಬ ಅಂಕಣ ನಡೆಸಿಕೊಡುತ್ತಿದ್ದರು. ಅದನ್ನೋದುತ್ತಿದ್ದ ಮಕ್ಕಳಿಗೆ ಇವರು 'ಕಾರಂತಜ್ಜ'ರೆಂದೇ ಚಿರಪರಿಚಿತ!
- ನಾರಾಯಣ್ ಅವರ ಮೊದಲ ಕಾದಂಬರಿಯನ್ನು ಪ್ರಕಟಿಸಲು ಮೊದಲಿಗೆ ಯಾವ ಪ್ರಕಾಶಕರೂ ಒಪ್ಪಿರಲಿಲ್ಲವಂತೆ!
- ಮೌರ್ಯ ಸಾಮ್ರಾಜ್ಯ ಮಧ್ಯ ಭಾರತದಿಂದ ಪಶ್ಚಿಮದ ಅಫ್ಗಾನಿಸ್ತಾನದವರೆಗೂ ಹಬ್ಬಿತ್ತು!
- ಡಿ ವಿ ಜಿ ಹಾಗೂ ಬಿ ಜಿ ಎಲ್ ಸ್ವಾಮಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಒಂದೇ ಕುಟುಂಬದ ಪ್ರಥಮರು!
- ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿದಾಗ, ಅದು ಅಂದಿನ ಭಾರತದ ಅತಿ ದೊಡ್ಡ ಅಣೆಕಟ್ಟಾಗಿತ್ತು!
- ಅನೇಕ ಅರಮನೆಗಳಿರುವುದರಿಂದ ಮೈಸೂರು ನಗರಕ್ಕೆ 'ಅರಮನೆಗಳ ನಗರ' ಎಂದು ಕರೆಯುತ್ತಾರೆ.
- ವಿಜಯನಗರದಲ್ಲಿ 'ಸುಗ್ರೀವನ ಗುಹೆ' ಎಂಬ ಪ್ರಾಕೃತಿಕ ಗುಹೆ ಇದೆ. ಈ ಗುಹೆಯಲ್ಲಿಯೇ ಶ್ರೀರಾಮ ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎಂಬ ನಂಬಿಕೆ ಪ್ರಚಲಿತವಾಗಿದೆ.
- ಟಿ ಪಿ ಕೈಲಾಸಂ ರವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ಇವರು ಆಗ ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದು!
- ಪ್ರೊ. ಜಿ ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ೧೯೯೧ರಲ್ಲಿ ಪ್ರಜಾವಾಣಿಯ ಒಂದು ಪುಟ್ಟ ಅಂಕಣವಾಗಿ ಪ್ರಾರಂಭವಾದದ್ದು!
- ಎ.ಎನ್.ಮೂರ್ತಿ ರಾವ್ (ಜೂನ್ ೧೬ ೧೯೦೦ - ೨೪ ಆಗಸ್ಟ್ ೨೦೦೫). ಬರಿಯ ಶತಾಯುಷಿಯಷ್ಟೇ ಅಲ್ಲದೇ, ಮೂರು ಶತಮಾನಗಳಲ್ಲಿ ( ೧೯, ೨೦, ೨೧ನೆಯ ಶತಮಾನಗಳು) ಬದುಕಿದ ಅತ್ಯಂತ ಅಪರೂಪದ ವ್ಯಕ್ತಿ.
- ಗುಬ್ಬಿ ವೀರಣ್ಣ ನಿರ್ಮಿಸಿದ "ಕುರುಕ್ಷೇತ್ರ" ಎಂಬ ನಾಟಕದಲ್ಲಿ ಜೀವಂತ ಆನೆ ಕುದುರೆಗಳನ್ನು ಬಳಸಲಾಗಿತ್ತು
- ಡಾ. ಎಂ ಸಿ ಮೋದಿ ತಿರುಪತಿಯಲ್ಲಿ ಒಂದೆ ದಿನದಲ್ಲಿ ೮೩೩ ಕಣ್ಣಿನ ಪೊರೆ ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಮಾಡಿದರು.
- ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ನ ಹೆಸರಾಂತ ದಾಂಡಿಗರಾದ ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದರು
- ಹಾಕಿ ಪಟು ಧ್ಯಾನ್ ಚಂದ್ರವರ ಜನ್ಮದಿನ ೨೯ ಆಗಸ್ಟ್ ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
- ಬುಧಿ ಕುಂದೆರನ್ ಒಂದೂ ರಣಜಿ ಪಂದ್ಯವನ್ನಾಡದೇ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕ್ರಿಕೆಟರ್.
- ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ ನುರಿತ ಪಿಯಾನೋ ಮತ್ತು ವಿಯೋಲ ವಾದಕರಾಗಿದ್ದರು
- ಡಾ.ರಾಜ್ ಕುಮಾರ್ ಹಾಡಿದ ಮೊದಲ ಚಿತ್ರಗೀತೆ ಓಹಿಲೇಶ್ವರ ಚಿತ್ರದ, ಜಿ.ಕೆ.ವೆಂಕಟೇಶ್ ಸಂಗೀತದಲ್ಲಿನ ಶರಣು ಶಂಭೋ ಗೀತೆ.
- ಮುದ್ದಣ ವಿರಚಿತ ಅದ್ಭುತ ರಾಮಾಯಣಂ, ಶ್ರೀರಾಮ ಪಟ್ಟಾಭಿಷೇಕಂ, ಹಾಗೂ ಶ್ರೀ ರಾಮಾಶ್ವಮೇಧಂ ಕೃತಿಗಳು ಮುದ್ದಣನವರ ಹೆಸರಲ್ಲದೆ ಒಂದು ಕಾಲ್ಪನಿಕ ವ್ಯಕ್ತಿಯ ಹೆಸರಿನಲ್ಲಿ ಮೊದಲಬಾರಿ ಪ್ರಕಾಶನಗೊಂಡಿದ್ದವು.
- ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೂರು ದಾರಿಗಳು.
- ಪ್ರಪಂಚದಲ್ಲೆ ಅತಿ ದೊಡ್ಡ ಹಿಂದೂ ದೇವಾಲಯವಿರುವುದು ಕಾಂಬೋಡೀಯ ದೇಶದ ಅಂಕೋರ್ ವಾಟ್ ನಗರದಲ್ಲಿ.
- ಭಾರತದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕೊನೆಯ ಮಾತು: “ನನ್ನ ಕೊನೆ ಆಸೆ ಯಾವುದೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟೀಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು.”
- ಕನ್ನಡದ ಪ್ರಪ್ರಥಮ ಚಲನಚಿತ್ರ ಸತಿ ಸುಲೋಚನ ಬಿಡುಗಡೆಯಾದದ್ದು ೧೯೩೪ರ ಮಾರ್ಚ್ ೩ರಂದು.
- ರೊಮಾನಿಯ: ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ.
- ಪ್ಯೊನ್ಗ್ಯಾಂಗ್: ಉತ್ತರ ಕೊರಿಯದ ರಾಜಧಾನಿಯಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಅಲ್ಲಿನ ಸರ್ಕಾರ ಬಹಿರಂಗ ಮಾಡಿಲ್ಲ.
- ಟಿ. ಎಸ್. ಎಲಿಯಟ್ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬರು.
- ಆರ್ಕಿಮಿಡೀಸ್ ಗ್ರೀಕ್ ನ ಗಣಿತಜ್ಞ,ಭೌತಶಾಸ್ತ್ರಜ್ಞ, ಯಂತ್ರಶಿಲ್ಪಿ (ಎಂಜಿನಿಯರ್), ಆವಿಷ್ಕರ್ತ ಹಾಗು ಖಗೋಳ ವಿಜ್ಞಾನಿ. ಇವನ ಜೀವನದ ಬಗ್ಗೆ ಅತ್ಯಲ್ಪ ಮಾಹಿತಿಯಿದೆಯಾದರೂ, ಈತನನ್ನು ಪ್ರಾಚೀನ ಕಾಲದ ವಿಜ್ಞಾನಿಗಳಲ್ಲಿ ಪ್ರಮುಖನೆಂದು ಭಾವಿಸಲಾಗಿದೆ.
- ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಐತಿಹಾಸಿಕವಾಗಿ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವಕ್ಕೆ ಸೇರಿದೆ. ಆಜಾದ್ ಕಾಶ್ಮೀರ್ (ಎಜೆಕೆ) ಎಂದು ಕರೆಯಲ್ಪಡುವ ಈ ಪ್ರದೇಶವು ೧೯೭೪ರಲ್ಲಿ ಅಂಗೀಕರಿಸಲ್ಪಟ್ಟ ಆಜಾದ್ ಕಾಶ್ಮೀರ ಮಧ್ಯಂತರ ಸಂವಿಧಾನ ಕಾಯ್ದೆಯಡಿ ಆಡಳಿತ ನಡೆಸುತ್ತದೆ.