ಎಂ ಚಿನ್ನಸ್ವಾಮಿ ಕ್ರೀಡಾಂಗಣ

(ಚಿನ್ನಸ್ವಾಮಿ ಕ್ರೀಡಾಂಗಣ ಇಂದ ಪುನರ್ನಿರ್ದೇಶಿತ)

ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭ರಿಂದ ೧೯೮೦ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು ೫೫,೦೦೦ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಕ್ರೀಡಾಂಗಣ ಮಾಹಿತಿ
ಸ್ಥಳಬೆಂಗಳೂರು
ಸ್ಥಾಪನೆ1969
ಸಾಮರ್ಥ್ಯ35000[][][][]
ಮಾಲೀಕತ್ವಕರ್ನಾಟಕ ಸರ್ಕಾರ
ನಿರ್ವಹಣೆಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಒಕ್ಕಲುತಂಡಕರ್ನಾಟಕ ಕ್ರಿಕೆಟ್ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಭಾರತ ಕ್ರಿಕೆಟ್ ತಂಡ
ಕೊನೆಗಳ ಹೆಸರು
Pavilion End
BEML End
ಅಂತರಾಷ್ತ್ರೀಯ ಮಾಹಿತಿ
ಮೊದಲ ಟೆಸ್ಟ್22–27 November 1974:  India v  ವೆಸ್ಟ್ ಇಂಡೀಸ್
ಕೊನೆಯ ಟೆಸ್ಟ್

14–18 November 2015:

 India v  ದಕ್ಷಿಣ ಆಫ್ರಿಕಾ
ಮೊದಲ ಏಕದಿನ26 September 1982:  India v  ಶ್ರೀಲಂಕಾ
ಕೊನೆ ಏಕದಿನ

2 November 2013:

 India v  ಆಸ್ಟ್ರೇಲಿಯಾ
ಮೊದಲ ಟಿ೨೦

25 December 2012:

 India v  ಪಾಕಿಸ್ತಾನ
ಕೊನೆ ಟಿ೨೦

23 March 2016:

 India v  ಬಾಂಗ್ಲಾದೇಶ
ಚಿನ್ನಸ್ವಾಮಿ ಕ್ರೀಡಾಂಗಣ

ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ಪಡೆದ ನಂತರ ಈ ಕ್ರೀಡಾಂಗಣದ ಅಡಿಗಲ್ಲು ಮೇ ೧೯೬೯ರಲ್ಲಿ ಹಾಕಲಾಯಿತು ಮತ್ತು, ನಿರ್ಮಾಣ ಕಾರ್ಯ ೧೯೭೦ರಲ್ಲಿ ಪ್ರಾರಂಭಿಸಲಾಯಿತು. ೧೯೭೨-೭೩ರಲ್ಲಿ ಕ್ರಿಕೆಟ್ ಋತುವಿನಲ್ಲಿ ಮೊದಲ ದರ್ಜೆಯ ಕ್ರಿಕೆಟ್ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಲ್ಪಟ್ಟಿತು. ಈ ಕ್ರೀಡಾಂಗಣ ೧೯೭೪-೭೫ರಲ್ಲಿ ಭಾರತ ಹಾಗು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಕಾಲದಲ್ಲಿ ಟೆಸ್ಟ್ ಕೇಂದ್ರದ ಅರ್ಹತೆ ಪಡೆಯಿತು. ೧೯೭೪ರ ನವೆಂಬರ್ ೨೨-೨೭ರ ನಡುವೆ ನಡೆದ ಈ ಟೆಸ್ಟಿನಲ್ಲಿ ಆಕಾಲಿಕ ಮಳೆಯಿಂದ ಮೊದಲೆರಡು ದಿನ ಆಟ ತಡವಾಗಿ ಪ್ರಾರಂಭವಾದರೂ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಟೈಗರ್ ಪಟೌಡಿ ನೇತೃತ್ವದ ಭಾರತವನ್ನು ೨೬೭ ರನ್ನುಗಳಿಂದ ಮಣಿಸಿತು. ಇದೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್‍ನ ಹೆಸರಾಂತ ದಾಂಡಿಗರಾದ ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು. ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಪ್ರಥಮ ವಿಜಯ ೧೯೭೬-೭೭ರಲ್ಲಿ ಟೋನಿ ಗ್ರೆಗ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ದೊರಕಿತು. ಈ ಕ್ರೀಡಾಂಗಣದಲ್ಲಿ ೧೯೮೨ರ ಸೆಪ್ಟಂಬರ್ ೨೬ರೊಂದು ಪ್ರಥಮ ಬಾರಿಗೆ ಎಕದಿನದ ಅಂತರಾಷ್ಟ್ರೀಯ ಪಂದ್ಯ. ಭಾರತ ಹಾಗು ಶ್ರೀಲಂಕಾ ನಡುವೆ ನೆಡೆಯಿತು. ಭಾರತ ಈ ಪಂದ್ಯದಲ್ಲಿ ೬ ವಿಕೆಟ್ ಜಯ ಸಾಧಿಸಿತು. ೧೯೯೬ ವಿಶ್ವ ಕಪ್ ಪಂದ್ಯಾವಳಿಯ ಸಮಯದಲ್ಲಿ ನೆಡೆದ ನವೀಕರಣದೊಂದಿಗೆ ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು. ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹಗಲು-ರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ ೧೯೯೬ರ ಮಾರ್ಚ್ ೯ರೊಂದು ಭಾರತ ಹಾಗು ಪಾಕಿಸ್ತಾನದ ನಡುವೆ ನೆಡೆಯಿತು. ಈ ವಿಶ್ವ ಕಪ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೩೯ ರನ್ನುಗಳಿಂದ ಪರಾಭವಗೊಳಿಸಿತು. ಈ ಕ್ರೀಡಾಂಗಣದ ಎರಡು ಬೌಲಿಂಗ್ ತುದಿಗಳು ಪೆವಿಲಿಯನ್ ತುದಿ ಹಾಗು ಬೆಮೆಲ್(ಬಿ.ಇ.ಎಮ್.ಎಲ್) ತುದಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ೨೦೦೦ ಇಸವಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಭಾರತದ ಮುಂದಿನ ಪೀಳಿಗೆಯ ಕ್ರಿಕೆಟ್ ಪಟುಗಳನ್ನು ತಯಾರಿಸುವ ತಾಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಸದ್ಯದಲ್ಲಿಯೆ ಕ್ರೀಡಾಂಗಣದ ಆಸನ ಕ್ಷಮತೆಯನ್ನು ೭೦,೦೦೦ಕ್ಕೆ ಹೆಚ್ಚಿಸಲಿದೆ. ಭಾರತದ ಶ್ರೇಷ್ಟ ಕ್ರಿಕೆಟ್ ಕ್ರೀಡಾಂಗಣಗಳಲ್ಲೊಂದು ಎಂದು ಪರಿಗಣಿಸಲಾಗುವ ಈ ಕ್ರೀಡಾಂಗಣದಲ್ಲಿ ಹಲವಾರು ರೋಮಾಂಚಕಾರಿ ಪಂದ್ಯಗಳ ನೆಡೆದಿವೆ ಹಾಗು ಹಲವಾರು ದಾಖಲೆಗಳು ಮಾಡಲ್ಪಟ್ಟಿದೆ.

ಕ್ರೀಡಾಂಗಣದ ಅಂಕಿಅಂಶಗಳು

ಬದಲಾಯಿಸಿ
ಸ್ಥಾಪನೆ: ೧೯೬೯
ಮೊದಲ ಟೆಸ್ಟ್: ೨೨-೨೭ ನವೆಂಬರ್ ೧೯೭೪
ಮೊದಲ ಎಕದಿನದ ಅಂತರಾಷ್ಟ್ರೀಯ ಪಂದ್ಯ: ೨೬ ಸೆಪ್ಟಂಬರ್ ೧೯೮೨
ಮೊದಲ ಹಗಲು-ರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ: ೯ ಮಾರ್ಚ್ ೧೯೯೬
ತುದಿಗಳು: ಪೆವಿಲಿಯನ್ ತುದಿ
ನಾರ್ತ್(ಉತ್ತರ) ತುದಿ
ಆಸನ ಕ್ಷಮತೆ: ೫೫,೦೦೦
ಹೊನಲು ಬೆಳಕಿನ ವ್ಯವಸ್ಥೆ: ಇದೆ

ದಾಖಲೆಗಳು

ಬದಲಾಯಿಸಿ

ಟೆಸ್ಟ್ ಪಂದ್ಯ ದಾಖಲೆಗಳು

ಬದಲಾಯಿಸಿ
  • ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ಮೊತ್ತ : ಪಾಕಿಸ್ತಾನದ ವಿರುದ್ಧ ಭಾರತ, ೬೨೬ ಆಲ್ ಔಟ್, ೮-೧೨ ಡಿಸೆಂಬರ್ ೨೦೦೭
  • ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಪಾಕಿಸ್ತಾನದ ಯುನಿಸ್ ಖಾನ್, ೨೬೭, ೨೪-೨೮ ಮಾರ್ಚ್ ೨೦೦೫
  • ಇನಿಂಗ್ಸೊಂದರಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ: ಪಾಕಿಸ್ತಾನದ ವಿರುದ್ದ ಭಾರತದ ಮಣೀಂದರ್ ಸಿಂಗ್, ೧೮.೨-೮-೨೭-೭, ೧೩-೧೭ ಮಾರ್ಚ್ ೧೯೮೭
  • ಅತಿ ಹೆಚ್ಚಿನ ರನ್ನುಗಳು: ಭಾರತದ ಸಚಿನ್ ತೆಂಡೂಲ್ಕರ್, ೮೨೫ ರನ್ನುಗಳು, ೮ ಪಂದ್ಯಗಳು (೧೪ ಇನಿಂಗ್ಸ್), ಸರಾಸರಿ: ೬೮.೭೫, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ೨೧೪
  • ಅತಿ ಹೆಚ್ಚಿನ ವಿಕೆಟುಗಳು: ಭಾರತದ ಅನಿಲ್ ಕುಂಬ್ಳೆ, ೪೧ ವಿಕೆಟ್ಟುಗಳು ೯ ಪಂದ್ಯಗಳು (೪೭೪.೪ ಓವರುಗಳು), ಕೊಟ್ಟ ರನ್ನುಗಳು: ೧೪೧೬, ಸರಾಸರಿ: ೩೫.೫೩ ಶ್ರೇಷ್ಠ ಬೌಲಿಂಗ್ ಪ್ರದರ್ಶನ: ೬/೯೮

ಏಕ ದಿನ ಅಂತರಾಷ್ಟ್ರೀಯ ಪಂದ್ಯಗಳ ದಾಖಲೆಗಳು

ಬದಲಾಯಿಸಿ
  • ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ಮೊತ್ತ: ೩೪೭-೨ ಭಾರತದ ವಿರುದ್ದ ಆಸ್ಟ್ರೇಲಿಯಾ, ೧೨ ನವೆಂಬರ್ ೨೦೦೩
  • ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಶ್ರೀಲಂಕಾದ ರಾಯ್ ಡಯಾಸ್, ೧೨೧, ೨೬ ಸೆಪ್ಟೆಂಬರ್ ೧೯೮೨
  • ಪಂದ್ಯವೊಂದರಲ್ಲಿ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ಭಾರತದ ವಿರುದ್ದ ಇಂಗ್ಲ್ಯಾಂಡಿನ ಪೌಲ್ ಜಾರ್ವಿಸ್, ೮.೪-೧-೩೫-೫, ೨೬ ಫೆಬ್ರುವರಿ ೧೯೯೩
  • ಅತಿ ಹೆಚ್ಚಿನ ರನ್ನುಗಳು: ಭಾರತದ ಸಚಿನ್ ತೆಂಡುಲ್ಕರ್, ೩೬೫ ರನ್ನುಗಳು, ೭ ಪಂದ್ಯಗಳು, ಸರಾಸರಿ: ೫೨.೧೪, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ:೧೧೭
  • ಅತಿ ಹೆಚ್ಚಿನ ವಿಕೆಟುಗಳು: ಭಾರತದ ಜಾವಗಲ್ ಶ್ರೀನಾಥ್, ೧೦ ವಿಕೆಟುಗಳು, ೫ ಪಂದ್ಯಗಳು(೨೭೩ ಎಸತಗಳು), ಕೊಟ್ಟ ರನ್ನುಗಳು: ೨೫೧, ಸರಾಸರಿ: ೨೫.೧೦ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ೫/೪೧

ವೈಯಕ್ತಿಕ ದಾಖಲೆಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಸಂಪರ್ಕ ಕೊಂಡಿಗಳು

ಬದಲಾಯಿಸಿ

ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಂತರಜಾಲ ತಾಣ Archived 2006-03-16 ವೇಬ್ಯಾಕ್ ಮೆಷಿನ್ ನಲ್ಲಿ. ಕ್ರಿಕ್‌ಇನ್ಫೊ ತಾಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ವಿವರ