ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಥವಾ ಆರ್‌ಸಿಬಿ) ಬೆಂಗಳೂರಿನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಯುನೈಟೆಡ್ ಸ್ಪಿರಿಟ್ಸ್ ಆರ್ ಸಿ ಬಿ ತ೦ಡದ ಮಾಲಿಕರು .[೨] ವಿರಾಟ್ ಕೊಹ್ಲಿ ನಾಯಕ ಹಾಗು ಡೇನಿಯಲ್ ವೆಟ್ಟೊರಿ ಮುಖ್ಯ ತರಬೇತುದಾರರಾಗಿದ್ದಾರೆ. ಬ್ರೇನ್ಡೊಮ್ ಮೆಕಾಲಮ್ , ಎಬಿ ಡೀ ವಿಲಿಯರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
250px
ಕೋಚ್: ಡೇನಿಯಲ್ ವೆಟ್ಟೊರಿ
ನಾಯಕ: ವಿರಾಟ್ ಕೊಹ್ಲಿ
ಬಣ್ಣಗಳು: ಕೆಂಪು ಮತ್ತು ಚಿನ್ನದ ಹಳದಿ[೧]
ಸ್ಥಾಪನೆ: 2008
ತವರಿನ ಕ್ರೀಡಾಂಗಣ: ಚಿನ್ನಸ್ವಾಮಿ ಕ್ರೀಡಾಂಗಣ
ಸ್ಥಳಾವಕಾಶ: 40,000
ಮಾಲೀಕ: ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಡಿಯಾಜಿಯೊ ಒಡೆತನದಲ್ಲಿದೆ
ಅಧಿಕೃತ ತಾಣ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಡಳಿತಸಂಪಾದಿಸಿ

  • ಮಾಲೀಕರು - ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ( ಡಿಯಾಜಿಯೊ ಮೂಲಕ)
  • ತಂಡ ನಿರ್ದೇಶಕ- ಅಮ್ರಿತ್ ಥೊಮಸ್
  • ಮ್ಯಾನೆಜರ್- ಅವಿನಾಶ್ ವೈದ್ಯ
  • ಮುಖ್ಯ ತರಬೇತುದಾರ- ಡೇನಿಯಲ್ ವೆಟ್ಟೊರಿ

ಪ್ರಸ್ತಕ ತಂಡಸಂಪಾದಿಸಿ

ಬ್ಯಾಟ್ಸ್‌ಮನ್ಸಂಪಾದಿಸಿ

ವಿಕೆಟ್ ಕೀಪರ್‌ಗಳುಸಂಪಾದಿಸಿ

ABD ಫಿಲಿಪ್ಸಂಪಾದಿಸಿ

ಆಲ್ ರೌಂಡರ್‌ಗಳುಸಂಪಾದಿಸಿ

  •  ಮೊಇನ್ ಅಲಿ
  •  ಪವನ್ ನೇಗಿ
  •  ವಾಷಿಂಗ್ಟನ್ ಸುಂದರ್
  •  ಪವನ್ ದೇಷ್ಪಾಂಡೆ

ಬೌಲರ್ಗಳುಸಂಪಾದಿಸಿ

  •  ಯುಜ್ವೇಂದ್ರ ಚಹಾಲ್
  •  ಉಮೇಶ್ ಯಾದವ್
  •  ಮೊಹಮದ್ ಸಿರಾಜ್
  •  ನವ್ದೀಪ್ ಸೈನಿ
  •  ಕೇನ್ ರಿಚರ್ಡ್ಸನ್

ತರಬೇತುದಾರರುಸಂಪಾದಿಸಿ

  • ಮುಖ್ಯ ತರಬೇತುದಾರ:  ಡೇನಿಯಲ್ ವೆಟ್ಟೊರಿ
  • ಬ್ಯಾಟಿಂಗ್ ತರಬೇತುದಾರ:  ಗ್ಯಾರಿ ಕಿರ್ಸ್ತೆನ್
  • ಬೌಲಿಂಗ್ ತರಬೇತುದಾರ: ಆಂಡ್ರ್ಯೂ ಮೆಕ್ಡೊನಾಲ್ಡ್
  • ಮಾರ್ಗದರ್ಶಕರು:  ಆಶಿಶ್ ನೆಹ್ರಾ
  • ಫೀಲ್ಡಿಂಗ್ ತರಬೇತುದಾರ: ಟ್ರೆಂಟ್ ವೂಢಿಲ್ಲ್

೨೦೦೮ನೇ ಐಪಿಎಲ್ ಆವೃತ್ತಿಸಂಪಾದಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೮ನೇ ಐಪಿಎಲ್ ಆವೃತ್ತಿಯಲ್ಲಿ ೧೪ ಪಂದ್ಯಗಳಲ್ಲಿ ಕೇವಲ ೪ ಪಂದ್ಯಗಳನ್ನು ಗೆದ್ದು ೭ನೇ ಸ್ಥಾನವನ್ನು ಪಡೆದುಕೊಂಡಿತು. ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು.

೨೦೦೯ನೇ ಐಪಿಎಲ್ ಆವೃತ್ತಿಸಂಪಾದಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೯ನೇ ಐಪಿಎಲ್ ಆವೃತ್ತಿಯಲ್ಲಿ ನಾಯಕನನ್ನು ಬದಲಾಯಿಸಿತು. ಕೆವಿನ್ ಪೀಟರ್ಸನ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಆದರೆ ಪೀಟರ್ಸನ್ ಕೇವಲ ೬ ಪಂದ್ಯಗಳನ್ನು ಆಡಿ ಇಂಗ್ಲೆಂಡ್‍ಗೆ ಮರಳಿದರು. ಆಗ ಅನಿಲ್ ಕುಂಬ್ಳೆ ತಂಡದ ನಾಯಕರಾದರು. ತಂಡವು ಉತ್ತಮ ಪ್ರದರ್ಶನ ತೋರಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಫೈನಲ್‍ನಲ್ಲಿ ೬ ರನ್‍ಗಳಿಂದ ಸೋಲನುಭವಿಸಬೇಕಾಯಿತು.೩

೨೦೧೦ನೇ ಐಪಿಎಲ್ ಆವೃತ್ತಿಸಂಪಾದಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೦ನೇ ಐಪಿಎಲ್ ಆವೃತ್ತಿಯ ಲೀಗ್ ಹಂತದಲ್ಲಿ ೪ನೇ ಸ್ಥಾನವನ್ನು ಪಡೆದು ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‍ನಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ೩೫ ರನ್‍ಗಳಿಂದ ಸೋತಿತು. ಚಾಂಪಿಯನ್ಸ್ ಲೀಗ್ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ೯ ವಿಕೆಟ್‍ಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್ ಪ್ರವೇಶಿಸಿತು.

೨೦೧೧ನೇ ಐಪಿಎಲ್ ಆವೃತ್ತಿಸಂಪಾದಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೧ನೇ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆಯದಿದ್ದರೂ ನಂತರ ಉತ್ತಮ ಪ್ರದರ್ಶನ ತೋರಿ ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಕ್ರಿಸ್ ಗೇಲ್ ತಂಡಕ್ಕೆ ಪ್ರವೇಶಿಸಿದ ನಂತರ ತಂಡದ ಅದೃಷ್ಟ ಬದಲಾಯಿತು. ಸೆಮಿಫೈನಲ್‍ನಲ್ಲಿ ಮೊದಲ ಕ್ವಾಲಿಫೈರ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಸೋತರೂ ನಂತರ ಮುಂಬಯಿ ಇಂಡಿಯನ್ಸ್ ವಿರುದ್ಧ ೪೩ ರನ್‍ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್‍ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ೫೮ ರನ್‍ಗಳಿಂದ ಸೋತು ೨ನೇ ಬಾರಿಗೆ ೨ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

೨೦೧೨ನೇ ಐಪಿಎಲ್ ಆವೃತ್ತಿಸಂಪಾದಿಸಿ

ಲೀಗ್ ಹಂತ

೨೦೧೩ನೇ ಐಪಿಎಲ್ ಆವೃತ್ತಿಸಂಪಾದಿಸಿ

ಲೀಗ್ ಹಂತ

೨೦೧೪ನೇ ಐಪಿಎಲ್ ಆವೃತ್ತಿಸಂಪಾದಿಸಿ

ಲೀಗ್ ಹಂತ

೨೦೧೫ನೇ ಐಪಿಎಲ್ ಆವೃತ್ತಿಸಂಪಾದಿಸಿ

ಪ್ಲೇ ಆಫ್

೨೦೧೬ನೇ ಐಪಿಎಲ್ ಆವೃತ್ತಿಸಂಪಾದಿಸಿ

ರನ್ನರ್ ಅಪ್

೨೦೧೭ನೇ ಐಪಿಎಲ್ ಆವೃತ್ತಿಸಂಪಾದಿಸಿ

ಲೀಗ್ ಹಂತ

೨೦೧೮ನೇ ಐಪಿಎಲ್ ಆವೃತ್ತಿಸಂಪಾದಿಸಿ

ಲೀಗ್ ಹಂತ [೧]

ಐಪಿಎಲ್‌ನ ಫಲಿತಾಂಶಸಂಪಾದಿಸಿ

ಪಂದ್ಯಗಳು ಗೆಲುವು ಸೋಲು ಫಲಿತಾಂಶ ರಹಿತ % ಗೆಲುವು ಸ್ಥಾನ
೨೦೦೮ ೧೪ ೧೦ ೨೮.೫೭%
೨೦೦೯ ೧೬ ೫೬.೨೫%
೨೦೧೦ ೧೬ ೫೦.೦೦%
2011 ೧೬ ೧೦ ೬೪.೨೮%
Total ೬೨ ೩೧ ೩೦ ೫೦.೦೦%

ಉಲ್ಲೇಖಗಳುಸಂಪಾದಿಸಿ

  1. "Royal Challengers have it all worked out". http://cricket.indiatimes.com. 2008-04-09. Retrieved 2008-04-09. External link in |work= (help)
  2. G. Krishnan (2008-02-20). "Bangalore team named 'Royal Challengers'". HindustanTimes. Archived from the original on 2008-05-04. Retrieved 2008-02-20.

ಬಾಹ್ಯ ಸಂಪರ್ಕಗಳುಸಂಪಾದಿಸಿ