ಕಬ್ಬನ್ ಪಾರ್ಕ್ []ಬೆಂಗಳೂರು ನಗರದಲ್ಲಿರುವ ಹಲವಾರು ಉದ್ಯಾನಗಳಲ್ಲಿ ಒಂದು. ಲಾಲ್‍ಬಾಗ್ ಬಳಿಕ ಇದೇ ಅತ್ಯುತ್ತಮವಾದ ಉದ್ಯಾನ.

ಕಬ್ಬನ್ ಪಾರ್ಕ್ ಉದ್ಯಾನ ವನ

ಲಾರ್ಡ್ ಕಬ್ಬನ್‍ರವರ ಪ್ರೀತಿಯ ಉದ್ಯಾನವನ ಕಬ್ಬನ್ ಪಾರ್ಕ್

ಬದಲಾಯಿಸಿ

೩೦೦ ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕನ್ನು ಲಾರ್ಡ್ ಕಬ್ಬನ್‍ರವರು, ೧೮೬೪ ರಲ್ಲಿ ಸ್ಥಾಪಿಸಿದರು. ಈ ಉದ್ಯಾನವು ಬೆಂಗಳೂರಿನ ಪ್ರಮುಖ ಜಾಗದಲ್ಲಿದೆ. ವಿಧಾನ ಸೌಧಕ್ಕೆ ಭೇಟಿ ನೀಡುವ ಸಮಯದಲ್ಲಿ ಕಬ್ಬನ್ ಪಾರ್ಕ್ ಹತ್ತಿರದಲ್ಲೇ ಸಾಗಬೇಕು, ಅದು ಎಲ್ಲರ ಕಣ್ಣಿಗೆ ಕಾಣುತ್ತದೆ. ಬೆಂಗಳೂರು ರೈಲ್ವೆ ಸ್ಟೇಷನ್‍ಗೆ ಕೇವಲ ೫ ಕಿ. ಮೀ ದೂರದಲ್ಲಿದೆ. ನಡೆದಾಡಲು ಇಷ್ಟವಿರುವ ಜನರಿಗೆ, (ಬೆಳಗಿನ ವಾಕಿಂಗ್ ಪ್ರಿಯರಿಗೆ), ಇದು ಹೇಳಿಮಾಡಿಸಿದ ಜಾಗ. ಸುಂದರವಾದ ಗಿಡ-ಬಳ್ಳಿ ವೃಕ್ಷಗಳು ಸುಂದರವಾಗಿ ಸಜಾಯಿಸಿದ ವಿಶಾಲವಾದ ಲಾನ್‍ಗಳು, ನೀರಿನ ಚಿಲುಮೆಗಳು, ಬಣ್ಣ- ಬಣ್ಣದ ಹೂವಿನ ಗಿಡ ಮರಗಳು ಮುದಕೊಡುತ್ತವೆ. ಪ್ರತಿಮರದ ಕಾಂಡದಮೇಲೂ ಚೆನ್ನಾಗಿ ಕಾಣಿಸುವಂತೆ ಬರೆದಿದ್ದಾರೆ. ವೈಜ್ಜಾನಿಕ ವಿವರಗಳನ್ನು, ಹಾಗೂ ಮರಗಳ ವಯಸ್ಸುಗಳು ದಾಖಲಾಗಿವೆ. ಮಕ್ಕಳಿಗೆ ಆಟಕ್ಕೆ ಹಲವಾರು ಸಾಧನಗಳಿವೆ. ಮಕ್ಕಳ-ರೈಲಿನಲ್ಲಿ ಸವಾರಿಮಾಡುವ ಮಕ್ಕಳು, ಗಿರಿ, ವನ, ಬೆಟ್ಟ,ಕಾಡುಗಳ ಮಧ್ಯೆ ಹಾದು ಸಾಗುವ ಸುಂದರ ಅನುಭವಗಳನ್ನು ಪಡೆಯುತ್ತಾರೆ. ಕಬ್ಬನ್ ಪಾರ್ಕ್‍ನಲ್ಲಿ ಪಾಟರಿಯನ್ನು ಕಲಿಸುವ ಶಾಲೆಗಳಿವೆ, ಮತ್ತು ಹಲವು ಕಲಿಕೆಗಳಿಗೆ ಶಾಲೆಗಳಿವೆ. ಕಾರ್ಯಾಗಾರಗಳನ್ನು ಹಮ್ಮಿಕೊಂಡು ಅನೇಕ ಕಲೆಗಳನ್ನು ಕಲಿಸುವ ಪ್ರಬಂಧವಿದೆ.

ಕಬ್ಬನ್ ಪಾರ್ಕ ಕೇವಲ ಪಾರ್ಕ್ ಆಗಿರದೆ, ಮಕ್ಕಳ ವಯಸ್ಕರ ಕಲಿಕೆಯ ತಾಣವಾಗಿದೆ

ಬದಲಾಯಿಸಿ

ಕಬ್ಬನ್ ಪಾರ್ಕ್‍ನ ವಿನ್ಯಾಸವನ್ನು ಒಮ್ಮೆ ಕಂಡವರು ಯಾರಾದರೂ ಆಕರ್ಷಿತರಾಗುತ್ತಾರೆ. ಬ್ರಿಟಿಷ್ ಕಾಲೋನಿಯ ಶೈಲಿಯಲ್ಲಿ ನಿರ್ಮಿಸಿದ ನವಿರಾದ ಸೊಬಗಿನ ಕಟ್ಟಡಗಳು, ಬ್ರಿಟಿಷರ ಸೌಂದರ್ಯ ಪ್ರಜ್ಞೆ ಮತ್ತು ಕುಶಲತೆಯ ಪ್ರತೀಕಗಳಾಗಿವೆ. ಪಾರ್ಕ್‍ನ ಮಧ್ಯೆ, ದಿವಾನ್ ಶೇಶಾದ್ರಿ ಅಯ್ಯರ್‍ರವರ ಸ್ಮರಣ ಮಂದಿರದಲ್ಲಿ ಲೈಬ್ರರಿ ಇದೆ. ಜವಹರ್ ಬಾಲಭವನ, ಮಕ್ಕಳ ಉದ್ಯಾನವನ, ಮತ್ತು ಇಲ್ಲಿರುವ ಮ್ಯೂಸಿಯೆಮ್, ಅತಿ ಹಳೆಯ ವಸ್ತುಸಂಗ್ರಹಾಲಯಗಳಲ್ಲೊಂದಾಗಿವೆ. ಸೋಮವಾರ ಬಿಟ್ಟು ವಾರದ ಎಲ್ಲಾ ದಿನಗಳಲ್ಲು ಲಭ್ಯವಿದೆ. ಸಮಯ ಬೆಳಿಗ್ಯೆ ೮ ರಿಂದ ಸಾಯಂಕಾಲ ೫ ರವರೆಗೆ. ಹತ್ತಿರದಲ್ಲೇ ಸರ್. ಎಮ್. ವಿಶ್ವೇಶ್ವರಯ್ಯ ಕೈಗಾರಿಕಾ ಸಾಮಗ್ರಿಗಳ ತಯಾರಿಕೆಯ ವಸ್ತುಸಂಗ್ರಹಾಲಯವಿದೆ. ಕಬ್ಬನ್ ಪಾರ್ಕ್‍ನ ಹತ್ತಿರದಲ್ಲಿ ಇರುವ ಸುಂದರ ಕಟ್ಟಡಗಳು.

ಉಲ್ಲೇಖಗಳು

ಬದಲಾಯಿಸಿ

<References / >

  1. ಉತ್ತರ ಬೆಂಗಳೂರಿನಲ್ಲಿರುವ ಒಂದು ಸುಂದರ ಉದ್ಯಾನ Archived 2015-05-10 ವೇಬ್ಯಾಕ್ ಮೆಷಿನ್ ನಲ್ಲಿ.. ಇಷ್ಟೋ ಚಿಕ್ಕ-ಪುಟ್ಟ ವಾಹನಗಳು ಈ ಉದ್ಯಾನದ ಮುಖಾಂತರವೇ ಕಸ್ತುರ್ ಬಾ ರಸ್ತೆ, ಮೊದಲಾದ ಕಡೆಗೆ ಓಡಾಡುತ್ತವೆ.