ವಿಧಾನಸೌಧ

(ವಿಧಾನ ಸೌಧ ಇಂದ ಪುನರ್ನಿರ್ದೇಶಿತ)

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[] ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ.

ವಿಧಾನ ಸೌಧ
ವಿಧಾನ ಸೌಧ
ಕರ್ನಾಟಕ ರಾಜ್ಯದ ವಿಧಾನ ಸಭೆ ನಡೆಯುವ ಕಟ್ಟಡ
ವಿಧಾನಸೌಧ is located in Bengaluru
ವಿಧಾನಸೌಧ
Location of Vidhana Soudha in Bangalore 32
ಸಾಮಾನ್ಯ ಮಾಹಿತಿ
ಮಾದರಿLegislative building
ವಾಸ್ತುಶಾಸ್ತ್ರ ಶೈಲಿNeo-Dravidian
ಸ್ಥಳಬೆಂಗಳೂರು,ಕರ್ನಾಟಕ
ದೇಶಭಾರತ
ನಿರ್ದೇಶಾಂಕ12°58′47″N 77°35′26″E / 12.979693°N 77.590658°E / 12.979693; 77.590658
ನಿರ್ಮಾಣ ಪ್ರಾರಂಭ1952
ಮುಕ್ತಾಯ1956
ಬೆಲೆ14.8 ದಶಲಕ್ಷ (ಯುಎಸ್$೩,೨೮,೫೬೦)
ಎತ್ತರ150 feet (46 m)
ತಾಂತ್ರಿಕ ವಿವರಗಳು
Floor count4 + 1 basement
ನೆಲದ ವಿಸ್ತೀರ್ಣ505,505 square feet (46,963.0 m2)
ವಿನ್ಯಾಸ ಮತ್ತು ನಿರ್ಮಾಣ
Ownerಕರ್ನಾಟಕ ಸರಕಾರ
Main contractorKPWD
ವಾಸ್ತುಶಿಲ್ಪಿಬಿ.ಆರ್.ಮಾಣಿಕ್ಯಮ್
Other information
Seating capacity೩೦೦ ಸದಸ್ಯರು

ಕಟ್ಟಡದ ರಚನೆ

ಬದಲಾಯಿಸಿ

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿದ್ದು ಎತ್ತರವಾದ ಕೆತ್ನೆಯುಳ್ಳ ಕಂಬಗಳು ಕಟ್ಟಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿವೆ. ಕಟ್ಟಡದ ಮೇಲ್ಭಾಗದಲ್ಲಿ ಕಣ್ಸೆಳೆವ ಗೋಪುರಗಳೂ ಇವೆ.

ಮುಖ್ಯ ಗೋಪುರದ ಮೇಲ್ಭಾಗದಲ್ಲಿ ಚಿತ್ತಾರಗಳ ಮಧ್ಯೆ ಅಶೋಕಸ್ತಂಭವನ್ನೂ ಸ್ಥಾಪಿಸಲಾಗಿದೆ. ಗೋಪುರಗಳು ಇಂಡೋ ಇಸ್ಲಾಮಿಕ್‌ ಅಂಶಗಳನ್ನು ಒಳಗೊಂಡಿದ್ದು ಕಟ್ಟಡದ ಉಳಿದ ಭಾಗಗಳಿಗೆ ಸಂಬಂಧ ಕಲ್ಪಿಸುವಂತೆ ನಾಲ್ಕೂ ಮೂಲೆಯಲ್ಲಿ ಚಿಕ್ಕದಾದ ಗೋಪುರನ್ನು ನಿರ್ಮಿಸಲಾಗಿದೆ.

ಆಯಾತಾಕಾರದಲ್ಲಿ ನಿರ್ಮಿಸಲಾದ ಕಟ್ಟಡದ ಒಳಭಾಗದಲ್ಲಿಯೂ ಸಾಕಷ್ಟು ಗಾಳಿ– ಬೆಳಕು ಇರುವಂತೆ ಗಮನ ನೀಡಲಾಗಿದೆ. ವಿಸ್ತಾರವಾದ ಹಜಾರ ಕೂಡ ಇಲ್ಲಿಯ ಆಕರ್ಷಣೆ.

ಬಾಲ್ಕನಿಗಳಿಗೆ ರಾಜಸ್ತಾನಿ ಶೈಲಿಯ ಮೆರುಗು ಇದೆ. ಬೆಟ್ಟಹಲಸೂರಿನಿಂದ ತರಿಸಲಾದ ಕಲ್ಲುಗಳಿಗೆ ಬಣ್ಣಗಳ ಲೇಪನವಿಲ್ಲದೆ ಮೂಲ ರೂಪವನ್ನೇ ಉಳಿಸಿಕೊಂಡಿರುವುದು ಕಟ್ಟಡದ ಭವ್ಯತೆಯನ್ನು ಹೆಚ್ಚಿಸಿದೆ.

ವಿಧಾನಸೌಧದ ಬಾಗಿಲುಗಳು, ಕಿಟಕಿಗಳಿಗೆ ಬಳಕೆಯಾಗಿರುವುದು ಹುಣಸೂರು ತೇಗ. ಅವುಗಳಲ್ಲಿನ ಕೆತ್ತನೆ, ನೀಡಲಾದ ಪಾಲಿಶ್‌ ಮೆರುಗು ಎಲ್ಲರ ಗಮನ ಸೆಳೆಯುತ್ತಿವೆ.

ಸರ್ಕಾರದ ಸಚಿವಾಲಯ ಹಾಗೂ ಶಾಸಕಾಂಗ ಎರಡೂ ಒಂದೇ ಕಡೆ ಇರುವುದು ಕಟ್ಟಡದ ವಿಶೇಷ. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಸುಮಾರು 700 ಅಡಿ ಉದ್ದ ಹಾಗೂ 350 ಅಡಿ ಅಗಲ ಹೊಂದಿರುವ ವಿಧಾನಸೌಧದಲ್ಲಿ ಒಟ್ಟು ನಾಲ್ಕು ಮಹಡಿಗಳಿವೆ.

ಒಂದನೇ ಮಹಡಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭಾಂಗಣಗಳಿದ್ದು ವಿಶಾಲವಾಗಿದೆ. ದೊಡ್ಡದಾದ ಈ ಸಭಾಂಗಣದ ಮಧ್ಯಭಾಗದಲ್ಲಿ ಒಂದೂ ಕಂಬ ಇಲ್ಲದಿರುವುದು ಇನ್ನೊಂದು ವಿಶೇಷ.

ಪ್ರತಿ ಮಹಡಿಯಲ್ಲಿಯೂ ನಲವತ್ತರಿಂದ ನಲವತ್ತೈದು ಕೊಠಡಿಗಳಿದ್ದು 3ನೇ ಮಹಡಿಯಲ್ಲಿ ಕ್ಯಾಬಿನೆಟ್‌ ಹಾಲ್‌ ಹಾಗೂ ಕಾನ್‌ಫರೆನ್ಸ್‌ ಹಾಲ್‌ ಇದೆ.

ಇತರೆ ವಿವರಗಳು

ಬದಲಾಯಿಸಿ

ಎದುರಿನಲ್ಲಿ ಹೈಕೋರ್ಟ್‌ ಹಾಗೂ ಉತ್ತರದಲ್ಲಿ ರಾಜಭವನ ಇದೆ. ಇಟ್ಟಿಗೆ ಹಾಗು ಕಲ್ಲುಗಳ ಅದ್ಭುತ ಕಾಮಗಾರಿಯನ್ನು ಹೊಂದಿರುವ, ರಾಜ್ಯಸಚಿವಾಲಯವೂ ಆಗಿರುವ ಬೆಂಗಳೂರಿನ ವಿಧಾನ ಸೌಧವು ಭೇಟಿ ನೀಡಲೇ ಬೇಕಾದ ಒಂದು ಸ್ಥಳ. ಕಟ್ಟಡವು 46ಮಿ. ಎತ್ತರವಾಗಿದ್ದು ಬೆಂಗಳೂರಿನ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ.ಕಟ್ಟಡವು ದ್ರಾವಿಡಿಯನ್ ಮತ್ತು ಆಧುನಿಕ ಶೈಲಿಯ ಕ್ರಿಯಾತ್ಮಕ ಮಿಶ್ರಣವಾಗಿದ್ದು, ಸಂದರ್ಶಕರಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ. ಇದನ್ನು ಎಲ್ಲ ದಿಕ್ಕಿನಿಂದಲೂ ಕೂಡ ಸರಳವಾಗಿ ಪ್ರವೇಶಿಸಬಹುದು. ಸಾರ್ವಜನಿಕ ರಜಾ ದಿನಗಳು ಮತ್ತು ಪ್ರತಿ ಭಾನುವಾರ ಸಾಯಂಕಾಲದಂದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಡುವದರಿಂದ ಇನ್ನಷ್ಟು ಸುಂದರವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಇದು ಪ್ರತಿದಿನ ಸಾಯಂಕಾಲ 6 ರಿಂದ 8.30 ರ ವರೆಗೆ ದೀಪಗಳಿಂದ ಬೆಳಗುವದರಿಂದ, ನೀವು ಇದನ್ನು ನೋಡುವುದನ್ನು ತಪ್ಪಿಸಿಕೊಳ್ಳಲೇ ಬಾರದು.ಇದು ಬೆಂಗಳೂರು ನಗರ ಜಂಕ್ಷನನಿಂದ 9 ಕಿ.ಮೀ. ದೂರದಲ್ಲಿದೆ. ಹಚ್ಚಹಸಿರಿನ ಕಬ್ಬನ್ ಪಾರ್ಕಿನ ಹತ್ತಿರದಲ್ಲಿರುವ ವಿಧಾನ ಸೌಧವು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದ್ದು, ಕ್ರಿಯಾತ್ಮಕ ವ್ಯಕ್ತಿಗಳು ಮಧುರತೆಯಿಂದ ದಿನ ಕಳೆಯಲು ಅತ್ಯಂತ ಸೂಕ್ತವಾಗಿದೆ.

ಛಾಯಾಂಕಣ

ಬದಲಾಯಿಸಿ

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Bangalore Tourist Attractions". Archived from the original on 2017-08-29. Retrieved 2014-02-08.
  2. A concise history of modern architecture in India. Orient Blackswan. 2002. pp. 40–41. ISBN 978-81-7824-017-6. {{cite book}}: |first= missing |last= (help)
  3. "Soudha: A tale of sweat and toil". Deccan Chronicle. 31 October 2010. Archived from the original on 5 ನವೆಂಬರ್ 2010. Retrieved 11 November 2010.


ಬಾಹ್ಯ ಸಂಪರ್ಕಗಳು

ಬದಲಾಯಿಸಿ