ಉತ್ತರ ಕೊರಿಯಾ

(ಉತ್ತರ ಕೊರಿಯ ಇಂದ ಪುನರ್ನಿರ್ದೇಶಿತ)
조선민주주의인민공화국
朝鮮民主主義人民共和國
ಚೊಸೊನ್ ಮಿನ್ಜುಜೋಇ ಇನ್ಮಿನ್ ಕೊನ್ಘ್ವಾಗುಕ್

ಕೊರಿಯಾದ ಪ್ರಜಾಸತ್ತಾತ್ಮಕ ಜನ ಗಣತಂತ್ರ
ಉತ್ತರ ಕೊರಿಯಾ ದೇಶದ ಧ್ವಜ ಉತ್ತರ ಕೊರಿಯಾ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಸಮೃದ್ಧ ಹಾಗು ಮಹಾನ್ ರಾಷ್ಟ್ರ (강성대국) [೧]
ರಾಷ್ಟ್ರಗೀತೆ: ಐಗುಕ್ಕ

Location of ಉತ್ತರ ಕೊರಿಯಾ

ರಾಜಧಾನಿ ಪ್ಯೊನ್ಗ್‌ಯಾಂಗ್
39°2′ಉ 125°45′ಪೂ
ಅತ್ಯಂತ ದೊಡ್ಡ ನಗರ ಪ್ಯೊನ್ಗ್‌ಯಾಂಗ್
ಅಧಿಕೃತ ಭಾಷೆ(ಗಳು) ಕೊರಿಯನ್
ಸರಕಾರ ಸಮಾಜವಾದಿ ಗಣತಂತ್ರ
 - ಗಣತಂತ್ರದ ಶಾಶ್ವತ ರಾಷ್ಟ್ರಪತಿ ಕಿಮ್ ಇಲ್-ಸಂಗ್ (ಮೃತ, ೧೯೯೪)
 - ಕೊರಿಯಾದ ರಾಷ್ಟ್ರೀಯ ಭದ್ರತಾ ಕಮಿಷನ್‌ನ ಅಧ್ಯಕ್ಷ ಕಿಮ್ ಜಾಂಗ್-ಇಲ್
 - ಸರ್ವೋಚ್ಚ ಜನ ಅಸೆಂಬ್ಲಿಯ ಅಧ್ಯಕ್ಷ ಕಿಮ್ ಯಾಂಗ್-ನಾಮ್
 - ಉತ್ತರ ಕೊರಿಯಾದ ಪ್ರಧಾನಿ ಪಕ್ ಪಾಂಗ್-ಜು
ಸ್ಥಾಪನೆ  
 - ಗೋಜೋಸಿಯೋನ್ ಕ್ರಿ.ಪೂ. ೨೩೩೩ 
 - ಸ್ವಾತಂತ್ರ ಘೋಷನೆ ಮಾರ್ಚ ೧, ೧೯೧೯ 
 - ಜಪಾನ್ ವಿರುದ್ಧ ಜ ಆಗಸ್ಟ್ ೧೫, ೧೯೪೫ 
 - ಗಣತಂತ್ರ ಸೆಪ್ಟೆಂಬರ್ ೯, ೧೯೪೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೧೨೦,೫೪೦ ಚದರ ಕಿಮಿ ;  (೯೮ನೇ)
  ೪೬,೫೨೮ ಚದರ ಮೈಲಿ 
 - ನೀರು (%) ೪.೮೭%
ಜನಸಂಖ್ಯೆ  
 - ೨೦೦೬ರ ಅಂದಾಜು ೨೩,೧೧೩,೦೧೯ (೪೮ನೇ)
 - ರ ಜನಗಣತಿ N/A
 - ಸಾಂದ್ರತೆ ೧೯೦ /ಚದರ ಕಿಮಿ ;  (೫೫ನೇ)
೪೯೨ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು ೪೦ ಬಿಲಿಯನ್ ಡಾಲರ್ (೮೫ನೇ)
 - ತಲಾ ೧೮೦೦ ಡಾಲರ್ (೧೪೯ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
NA (unranked) – NA
ಚಲಾವಣಾ ನಾಣ್ಯ/ನೋಟು ವಾನ್ (₩) (ಕೆಪಿಡಬ್ಲ್ಯೂ)
ಸಮಯ ವಲಯ (UTC+೯)
  Does not observe DST
ಅಂತರಜಾಲ ಸಂಕೇತ none, .kp reserved
ದೂರವಾಣಿ ಸಂಕೇತ +850

ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ (ಪ್ರಜಾತಾಂತ್ರಿಕ ಕೊರಿಯಾ ಜನ ಗಣತಂತ್ರ ) ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು. ಈ ದೇಶದ ಉತ್ತರದದಲ್ಲಿ ಚೀನಾ ಹಾಗು ರಷ್ಯಾ ದೇಶಗಳಿದ್ದರೆ, ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ದೇಶವಿದೆ. ೧೯೪೫ರ ವರೆಗೂ ಎರಡೂ ಕೊರಿಯಾ ದೇಶಗಳು ಒಂದಾಗಿದ್ದವು. ಉತ್ತರ ಚೀನದಿಂದ ಹೊರಕ್ಕೆ, ಹಳದಿ ಸಮುದ್ರ ಹಾಗೂ ಜಪಾನ್ ಸಮುದ್ರಗಳ ನಡುವೆ, ಚಾಚಿಕೊಂಡಿರುವ ಪರ್ಯಾಯ ದ್ವೀಪದಲ್ಲಿ ಉ.ಅ. 38º ಯಿಂದ ಉತ್ತರಕ್ಕಿರುವ ರಾಜ್ಯ. ಕೊರಿಯದ ಪ್ರಜಾಪ್ರಭುತ್ವವಾದಿ ಜನತಾ ಗಣರಾಜ್ಯ (ಡೆಮೊಕ್ರ್ಯಾಟಿಕ್ ಪೀಪಲ್ಸ್‌ ರಿಪಬ್ಲಿಕ್ ಆಫ್ ಕೊರಿಯ). ಇದಕ್ಕೆ ದಕ್ಷಿಣದಲ್ಲಿ ದಕ್ಷಿಣ ಕೊರಿಯ (ಕೊರಿಯ ಗಣರಾಜ್ಯ) ಇದೆ. ವಿಸ್ತೀರ್ಣ 77,000 ಕಿಮೀ. ಜನಸಂಖ್ಯೆ 22,224000 (2002). ಒಟ್ಟು ಕೊರಿಯದ ಶೇ.56ರಷ್ಟು ಭಾಗವನ್ನು ಈ ರಾಜ್ಯ ಆಕ್ರಮಿಸಿದೆ.

ಮೇಲ್ಮೈಲಕ್ಷಣಸಂಪಾದಿಸಿ

ಉತ್ತರ ದಕ್ಷಿಣವಾಗಿ ಹಬ್ಬಿರುವ ಈ ರಾಜ್ಯ ಬಹುಪಾಲು ಪರ್ವತಮಯ. ಆದರೆ ಜಪಾನ್ ದ್ವೀಪಗಳಲ್ಲಿರುವಂತೆ ಇಲ್ಲಿ ಜ್ವಾಲಾಮುಖಿಗಳಿಲ್ಲ. ವ್ಯವಸಾಯಯೋಗ್ಯ ಭೂಮಿ ಕಡಿಮೆ. ಉತ್ತರ ಕೊರಿಯವನ್ನು ಅಲ್ಲಿನ ಮೇಲ್ಮೈಲಕ್ಷಣಗಳಿಗನುಗುಣವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು

  • ಮಧ್ಯದ ಹಾಗೂ ಉತ್ತರದ ಪರ್ವತ ಪ್ರದೇಶ: ಪುರ್ತಿಯಾಗಿ ಪರ್ವತಗಳಿಂದ ಆವೃತವಾಗಿರುವುದರಿಂದ ಜನಸಾಂದ್ರತೆ ತೀರ ವಿರಳ. ಅನೇಕ ಶಿಖರಗಳು 2435 ಮೀ ಗಳಿಗಿಂತಲೂ ಎತ್ತರ. ಈ ಪರ್ವತಗಳ ದಕ್ಷಿಣಕ್ಕೆ ವಿಶಾಲವಾದ ಪ್ರಸ್ಥಭೂಮಿಯಿದೆ. ಅತಿ ಎತ್ತರದ ಶಿಖರ ಪಾಯೆಕ್ಟ್ರು (2744 ಮೀ). ಇಲ್ಲಿ ವಾಸಮಾಡುವ ಗುಡ್ಡಗಾಡಿನ ಕಣಿವೆಗಳಲ್ಲಿ ಸ್ವಲ್ಪ ಮಟ್ಟಿನ ವ್ಯವಸಾಯ ಮಾಡುತ್ತಾರೆ. ಉತ್ತರದಲ್ಲಿ ಯಾಲೂ ಹಾಗೂ ಟೇಡಾಂಗ್ ನದಿಗಳು ಮುಖ್ಯ.
  • ಪೂರ್ವದ ಕರಾವಳಿ ಪ್ರದೇಶ : ಈ ಕಿರಿದಾದ ಕರಾವಳಿಯಲ್ಲಿ ಅನೇಕ ಮೀನುಗಾರರ ಹಳ್ಳಿಗಳಿವೆ. ನದೀಮುಖಗಳಲ್ಲಿ ಸ್ವಲ್ಪಮಟ್ಟಿನ ವ್ಯವಸಾಯ ಸಾಧ್ಯ. ಬತ್ತ ಮತ್ತು ದ್ವಿದಳ ಧಾನ್ಯ ಇಲ್ಲಿನ ಬೆಳೆ. ಅಲೆಗಳ ಹಾವಳಿ ಕಡಿಮೆ.
  • ವಾಯವ್ಯ ಪ್ರದೇಶ: ಪ್ರಮುಖ ವ್ಯವಸಾಯ ಪ್ರದೇಶ. ಆದರೆ ಚಳಿಗಾಲದಲ್ಲಿ ಬೇಸಾಯಕ್ಕೆ ಅನೇಕ ಅಡಚಣೆಗಳಿರುವುದರಿಂದ ವರ್ಷಕ್ಕೆ ಒಂದು ಬೆಳೆ ಮಾತ್ರ ಸಾಧ್ಯ. ಗೋಧಿ, ಮೆಕ್ಕೆಜೋಳ ಮುಖ್ಯ ಬೆಳೆಗಳು, ಖನಿಜಗಳು ಹೇರಳವಾಗಿ ದೊರೆಯುವುದರಿಂದ ಕೈಗಾರಿಕೆಗಳು ಬೆಳೆದಿವೆ. ಯಾಲು ಮತ್ತು ಟುಮೆನ್ ಪ್ರಮುಖ ನದಿಗಳು

ವಾಯುಗುಣಸಂಪಾದಿಸಿ

ಉತ್ತರ ಕೊರಿಯದ್ದು ಪೂರ್ವ ಏಷ್ಯನ್ ರೀತಿಯ ಮಾನ್ಸೂನ್ ವಾಯುಗುಣ. ಬೇಸಿಗೆಯಲ್ಲಿ ಹೆಚ್ಚು ಉಷ್ಣತೆ, ಹೆಚ್ಚು ಮಳೆ. ಚಳಿಗಾಲದಲ್ಲಿ ನೀರು ಗಡ್ಡೆ ಕಟ್ಟುವ ಮಟ್ಟಕ್ಕಿಂತಲೂ ಕಡಿಮೆ ಉಷ್ಣತೆ. (-8º ಸೆ.) ವಾರ್ಷಿಕ ಸರಾಸರಿಮಳೆ 150 ಸೆಂಮೀ. ಉತ್ತರ ಮತ್ತು ಪಶ್ಚಿಮಕ್ಕೆ ಹೋದಂತೆ ಮಳೆ ಪ್ರಮಾಣ ಕಡಿಮೆಯಾಗುತ್ತದೆ.

ಸ್ವಾಭಾವಿಕ ಸಸ್ಯ, ಪ್ರಾಣಿವರ್ಗಸಂಪಾದಿಸಿ

ಉತ್ತರ ಕೊರಿಯದಲ್ಲಿ ಅನೇಕ ಬಗೆಯ ಸಸ್ಯಗಳಿವೆ. ಒಟ್ಟು ಭೂಮಿಯ ಶೇ.70 ಭಾಗ ಕಾಡು. ಲಾರ್ಜ್, ಸ್ಪ್ರೂಸ್, ಫರ್, ಬರ್ಚ್ಗಳು ಉತ್ತರದಲ್ಲಿ ಹೆಚ್ಚು. ಯಾಲೂ ಕಣಿವೆಯಲ್ಲೂ ದಕ್ಷಿಣದಲ್ಲೂ ಮೇಪ್ಲ್‌, ಬಾಸ್ವುಡ್, ಬರ್ಚ್, ಪಾಪ್ಲರ್, ಓಕ್, ಆಷ್, ಹಾರ್ನ್‌ಬೀಮ್, ಎಲ್ಮ್‌ ಚೆಸ್ನಟ್, ಹ್ಯಾಕ್ಟೆರಿ, ಮ್ಯಾಗ್ನೋಲಿಯ ಮತ್ತು ಜಪಾನೀ ಹೂಗಳಿವೆ. ಲಿಲಿ ಇತರ ಕಾಡು ಹೂಗಳು ಗ್ರಾಮಾಂತರ ಪ್ರದೇಶದ ಸೌಂದರ್ಯ ಹೆಚ್ಚಿಸಿವೆ. ಇಲ್ಲಿನ ಪ್ರಾಣಿಗಳು ಏಷ್ಯದ ಪ್ರಾಣಿಗಳಿಗಿಂತ ಯುರೋಪಿನವನ್ನೇ ಹೆಚ್ಚಾಗಿ ಹೋಲುತ್ತವೆ. ಇದೊಂದು ವೈಚಿತ್ರ್ಯ. ಇಂಥ ಪ್ರಾಣಿಗಳ ಜೊತೆಗೆ ಹುಲಿ, ಹಿಮಚಿರತೆ, ಕಸ್ತೂರಿಮೃಗಗಳಿವೆ. ತೋಳ, ಕರಡಿ, ಕಾಡುಹಂದಿ, ಜಿಂಕೆ, ಕಪ್ಪೆ, ಹಲ್ಲಿ, ಹಾವು ಇವು ಸಾಮಾನ್ಯ.

ಖನಿಜ ಸಂಪತ್ತುಸಂಪಾದಿಸಿ

ಉತ್ತರ ಕೊರಿಯದಲ್ಲಿ ಹೇರಳವಾದ ಖನಿಜ ಸಂಪತ್ತಿದೆ. ಕಬ್ಬಿಣದ ಅದಿರು, ತಾಮ್ರ, ಸೀಸ, ಸತು, ಸ್ವರ್ಣ ಮಕ್ಷಿಕ, ಟಂಗ್ ಸ್ಟನ್, ಕಲ್ಲಿದ್ದಲು, ಚಿನ್ನ ಮುಖ್ಯ. ವ್ಯವಸಾಯ, ಕೈಗಾರಿಕೆ, ಸಾರಿಗೆ ವ್ಯವಸ್ಥೆ: ಉತ್ತರ ಕೊರಿಯದ ಒಟ್ಟು ಭೂಮಿಯ 1/5 ಭಾಗ ಮಾತ್ರ ವ್ಯವಸಾಯ ಯೋಗ್ಯ. ಬತ್ತ, ಗೋದಿ, ಬಾರ್ಲಿ, ಮೆಕ್ಕೆಜೋಳ ಮತ್ತು ಸೋಯ ಬೀನುಗಳು ಇಲ್ಲಿನ ಮುಖ್ಯ ಬೆಳೆ. ಹತ್ತಿ, ಹೊಗೆಸೊಪ್ಪು, ನಾರು, ಹಣ್ಣುಗಳನ್ನು ಬೆಳೆಯುತ್ತಾರೆ. ಜಪಾನ್ ಮಾದರಿಯ ಬತ್ತದ ಬೇಸಾಯದಿಂದಾಗಿ ಅಕ್ಕಿಯ ಉತ್ಪಾದನೆ ಹೆಚ್ಚಾಗಿದೆ. 1905ರಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನೀಯರ ಪ್ರೋತ್ಸಾಹದಿಂದ ಇಲ್ಲಿ ಹತ್ತಿ ಬೆಳೆಯಲಾಯಿತು. ಈಗ ಹತ್ತಿಯೂ ಇಲ್ಲಿನ ಒಂದು ಮುಖ್ಯ ವಾಣಿಜ್ಯ ಬೆಳೆ. ಉತ್ತರ ಕೊರಿಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಸಂಪತ್ತಿರುವುದರಿಂದ ಕೈಗಾರಿಕೆಗಳು ಬೆಳೆದಿವೆ. ಜಪಾನೀಯರ ಆಕ್ರಮಣ ಕಾಲದಲ್ಲಿ ರಸಾಯನವಸ್ತು, ಸಿಮೆಂಟ್, ಕಬ್ಬಿಣ, ಉಕ್ಕು, ವಿದ್ಯುತ್ತು ಮತ್ತು ಯಂತ್ರ ಕೈಗಾರಿಕೆಗಳು ಸ್ಥಾಪಿತವಾಗಿದ್ದವು. ದ್ವಿತೀಯ ಯುದ್ಧ ಮುಗಿದು ಜಪಾನೀಯರು ಹಿನ್ನಡೆಯುವಾಗ ಇಲ್ಲಿನ ಅನೇಕ ಕೈಗಾರಿಕೆಗಳನ್ನು ನಾಶ ಮಾಡಿದರು. ಕಮ್ಯುನಿಸ್ಟರ ಆಡಳಿತದಲ್ಲಿ ಕೈಗಾರಿಕೀಕರಣವಾಗುತ್ತಿದೆ. ಇಲ್ಲಿ ಪ್ರಜಾಪ್ರಭುತ್ವವಾದಿ ಗಣರಾಜ್ಯದ ಸ್ಥಾಪನೆಯಾದಾಗ ಎಲ್ಲ ಕೈಗಾರಿಕೆಗಳೂ ರಾಷ್ಟ್ರೀಕರಣಗೊಂಡವು. ಉತ್ತರ ದಕ್ಷಿಣ ಕೊರಿಯ ಯುದ್ಧದಿಂದ ಮತ್ತೆ ಇಲ್ಲಿನ ಅನೇಕ ಕೈಗಾರಿಕೆಗಳ ನಾಶವಾಯಿತು. ಯೋಜನಾತ್ಮಕ ಆರ್ಥಿಕ ಪ್ರಗತಿಗಾಗಿ ಇಲ್ಲಿನ ಸರ್ಕಾರ ಶ್ರಮಿಸುತ್ತಿದೆ. ವಿದ್ಯುತ್, ಧಾತು ಕೈಗಾರಿಕೆ, ಯಂತ್ರರಚನೆ, ರಸಾಯನವಸ್ತು, ಜವಳಿ ಕೈಗಾರಿಕೆಗಳು ಮುಖ್ಯ. ಸುಮಾರು ಅರ್ಧದಷ್ಟು ಜನ ಈಗಲೂ ವ್ಯವಸಾಯ ನಿರತರು. ಕೊರಿಯ ಯುದ್ಧಕಾಲದಲ್ಲಿ ಇಲ್ಲಿನ ರಸ್ತೆ ಹಾಗೂ ರೈಲು ವ್ಯವಸ್ಥೆಗಳು ಬಹುತೇಕ ನಾಶ ಹೊಂದಿದವು. ಪುನರ್ನಿರ್ಮಿತ ರೈಲು ವ್ಯವಸ್ಥೆಯಲ್ಲಿ ಒಂದು ಭಾಗ (21%) ವಿದ್ಯುತ್ಚಾಲಿತ. ಮಾಸ್ಕೊ ಬೀಜಿಂಗ್ಗಳೊಂದಿಗೆ ರೈಲ್ವೆ ಸಂಪರ್ಕವಿದೆ. ಕೆಲವು ನದಿಗಳು ನೌಕಾಸಂಚಾರಯೋಗ್ಯವಾದವು. ಪಿಯಂಗ್ ಯಾಂಗಿನಿಂದ ಮಾಸ್ಕೊ ಪೀಕಿಂಗುಗಳಿಗೆ ವಿಮಾನ ವ್ಯವಸ್ಥೆಯುಂಟು.

ಆಡಳಿತ, ರಕ್ಷಣಾವ್ಯವಸ್ಥೆಸಂಪಾದಿಸಿ

 
ಅಸೆಂಬ್ಲಿ ಹಾಲ್

ಉತ್ತರ ಕೊರಿಯದ ಈಗಿನ ಸಂವಿಧಾನದ (1948) ಪ್ರಕಾರ ಇದು ಜನತಾ ಪ್ರಜಾಪ್ರಭುತ್ವ (ಪೀಪಲ್ಸ್‌ ಡೆಮಾಕ್ರಸಿ). ಅಧಿಕಾರ ಜನತೆಗೆ ಸೇರಿದ್ದು. ಸಾರ್ವತ್ರಿಕ, ಸಮಾನ, ಹಾಗೂ ರಹಸ್ಯ ಮತದಾನದ ಮೂಲಕ ಜನತೆ ಅಧಿಕಾರ ಚಲಾಯಿಸುತ್ತದೆ. ಪರಮೋನ್ನತ ಜನತಾ ಸಭೆಯಲ್ಲಿ ರಾಷ್ಟ್ರದ ಅಧಿಕಾರ ನಿಯುಕ್ತವಾಗಿದೆ. ಇದರ ಅಧಿವೇಶನ ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ. ಈ ಸಭೆ ಸಮಾವೇಶಗೊಂಡಿಲ್ಲದಾಗ ಇದಕ್ಕೆ ಉತ್ತರವಾದಿಯಾಗಿ ನಿರೂಪ ಹೊರಡಿಸುವ ಹೊಣೆ ಅಧ್ಯಕ್ಷಮಂಡಲಿಯದು (ಪ್ರಿಸಿಡಿಯಂ). ಸಂಪುಟವೂ ಅದರ ಅಧೀನದಲ್ಲಿ ವ್ಯವಹರಿಸುವ ಮಂತ್ರಾಲಯಗಳೂ ಕೇಂದ್ರೀಯ ಆಡಳಿತಾಂಗಗಳು. ಪ್ರಧಾನಿಯೂ ಉಪಪ್ರಧಾನಿಗಳೂ ಮಂತ್ರಿಗಳೂ ಆಯೋಗ ಗಳ (ಮಂತ್ರಾಲಯಗಳ) ಅಧ್ಯಕ್ಷರೂ ಇನ್ನು ಕೆಲವರೂ ಸಂಪುಟ ಸದಸ್ಯರು. ಸಂಪುಟವನ್ನು ನೇಮಿಸುವ ಹೊಣೆ ಪರಮೋನ್ನತ ಜನತಾ ಸಭೆಯದು. ಇದು ಈ ಸಭೆಯ ಹಾಗೂ ಅಧ್ಯಕ್ಷಮಂಡಲಿಯೂ ಹೊಣೆ. ಉತ್ತರ ಕೊರಿಯ ರಕ್ಷಣೆಗಾಗಿ ಸೋವಿಯತ್ ಒಕ್ಕೂಟದೊಂದಿಗೂ ಜನತಾ ಚೀನದೊಂದಿಗೂ ಕರಾರಿಗೆ ಸಹಿಹಾಕಿದೆ. ಪ್ರತಿಯೊಬ್ಬನಿಗೂ 18ನೆಯ ವಯಸ್ಸಿನಲ್ಲಿ ಸೈನಿಕ ಸೇವೆ ಕಡ್ಡಾಯ. (ಸೈನ್ಯಬಲ 4,00,000. ಚಾಲ್ತಿ ಆಯವ್ಯಯದ ಶೇ. 30.2 ರಕ್ಷಣೆಗಾಗಿ ವೆಚ್ಚವಾಗುತ್ತಿದೆ.)

ಇತಿಹಾಸಸಂಪಾದಿಸಿ

ಎರಡನೆಯ ಮಹಾಯುದ್ಧಪೂರ್ವಕಾಲದಲ್ಲಿ ಉತ್ತರ ಕೊರಿಯ ಪ್ರತ್ಯೇಕ ರಾಜ್ಯವಾಗಿರಲಿಲ್ಲ. ಆದ್ದರಿಂದ ಇದರ ಹಿಂದಿನ ಚರಿತ್ರೆಗೆ 1910ರಿಂದ ಜಪಾನಿನ ನೇರ ಆಡಳಿತಕ್ಕೊಳಪಟ್ಟಿದ್ದ ಅಖಂಡ ಕೊರಿಯ ಬಿಡುಗಡೆ ಪಡೆದದ್ದು 1945ರಲ್ಲಿ. ಇದಕ್ಕೂ ಹಿಂದೆ 1943 ಡಿಸೆಂಬರಿನಲ್ಲಿ ಚೀನ, ಬ್ರಿಟನ್ ಹಾಗೂ ಅಮೆರಿಕ ಸಂಯುಕ್ತಸಂಸ್ಥಾನಗಳು ಹೊರಡಿಸಿದ ಕೈರೊ ಘೋಷಣೆಯಲ್ಲಿ ಕೊರಿಯದ ಪ್ರಸ್ತಾಪವೂ ಇತ್ತು. ಕ್ರಮೇಣ ಈ ರಾಜ್ಯಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವುದಾಗಿ ಈ ರಾಷ್ಟ್ರಗಳು ಆಗ ಸಾರಿದ್ದುವು. 1945ರಲ್ಲಿ ಪಾಟ್ಸ್‌ಡಾಂನಲ್ಲಿ ಸೇರಿದ್ದ ಮಿತ್ರರಾಷ್ಟ್ರ ಸಮ್ಮೇಳನದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸಲಾಯಿತು. 1945ರ ಆಗಸ್ಟ್‌ 8ರಂದು ಸೋವಿಯತ್ ಒಕ್ಕೂಟ ಜಪಾನ್ ವಿರುದ್ಧ ಯುದ್ಧದಲ್ಲಿ ತೊಡಗಿದಾಗ ಅದು ಕೊರಿಯ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಆಗಸ್ಟ್‌ 12ರಂದು ಸೋವಿಯತ್ ಸೇನೆಗಳು ಉತ್ತರ ಕೊರಿಯವನ್ನು ಪ್ರವೇಶಿಸಿದವು. ಅಮೆರಿಕ ಸಂಯುಕ್ತಸಂಸ್ಥಾನ ದಕ್ಷಿಣ ಕೊರಿಯ ಪ್ರದೇಶವನ್ನು ಪ್ರವೇಶ ಮಾಡಿದ್ದು ಸೆಪ್ಟೆಂಬರ್ 8ರಂದು. ಜಪಾನ್ ಶರಣಾಗತಿಯನ್ನು ನಿರ್ವಹಿಸುವ ಸಲುವಾಗಿ ಕೊರಿಯವನ್ನು 38ನೆಯ ಅಕ್ಷಾಂಶದಲ್ಲಿ ಎರಡು ಭಾಗ ಮಾಡಲಾಯಿತು. ಉತ್ತರ ದಕ್ಷಿಣ ಭಾಗಗಳು ಅನುಕ್ರಮವಾಗಿ ಸೋವಿಯತ್ ಹಾಗೂ ಅಮೆರಿಕ ಸಂಯುಕ್ತಸಂಸ್ಥಾನ ಸೇನೆಗಳ ಅಧೀನಕ್ಕೆ ಬಂದವು. ಜಪಾನೀಯರ ಆಡಳಿತ ಕೊನೆಗೊಂಡಾಗ ರಾಜಕೀಯವಾಗಿ ಇಲ್ಲಿ ಒಂದು ಬಗೆಯ ಶೂನ್ಯಸ್ಥಿತಿ ಏರ್ಪಟ್ಟಿತ್ತು. ದಕ್ಷಿಣೋತ್ತರಗಳು ಪ್ರತ್ಯೇಕವಾಗಿಯೇ ಆಡಳಿತ ವ್ಯವಸ್ಥೆ ರಚಿಸಿ ಕೊಂಡುವು.

 
ಉತ್ತರ ಕೊರಿಯಾದ ಸೈನಿಕರಿಂದ ಹತರಾದ ನಾಗರಿಕರು, ಅಕ್ಟೋಬರ್ 1950

ಕೊರಿಯದ ಏಕೀಕರಣಕ್ಕಾಗಿ ಸೋವಿಯತ್ ಹಾಗೂ ಅಮೆರಿಕನ್ ಸೇನಾಧಿಪತಿಗಳು ಸಂಯುಕ್ತ ಆಯೋಗ ರಚಿಸಬೇಕೆಂದೂ ಇದು ಕೊರಿಯದ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಇಲ್ಲಿ ಪ್ರಜಾಪ್ರಭುತ್ವ ಸರ್ಕಾರವೊಂದನ್ನು ತಾತ್ಕಾಲಿಕವಾಗಿ ಏರ್ಪಡಿಸಬೇಕೆಂದೂ ಡಿಸೆಂಬರ್ 1945ರಲ್ಲಿ ಮಾಸ್ಕೊನಲ್ಲಿ ಸಮಾವೇಶಗೊಂಡಿದ್ದ ನಾಲ್ಕು ಬೃಹದ್ರಾಷ್ಟ್ರಗಳು (ಸೋವಿಯತ್ ಒಕ್ಕೂಟ, ಬ್ರಿಟನ್, ಅಮೆರಿಕ, ಚೀನ) ತೀರ್ಮಾನಿಸಿದುವಾದರೂ ಈ ತೀರ್ಮಾನವನ್ನು ಕಾರ್ಯರೂಪಕ್ಕೆ ತರುವುದು ಅಸಾಧ್ಯವಾಯಿತು. ಇಡೀ ಕೊರಿಯದಲ್ಲಿ ಚುನಾವಣೆಯಾಗಬೇಕೆಂದು 1947ರಲ್ಲಿ ವಿಶ್ವಸಂಸ್ಥೆಯ ಮಹಾಸಭೆ ನಿರ್ಣಯಿಸಿತಾದರೂ ಇದರಲ್ಲಿ ಪಶ್ಚಿಮದ ಕೈವಾಡವಿದೆಯೆಂಬ ಸಂಶಯದಿಂದ ಈ ಸಂಸ್ಥೆಯ ಆಯೋಗಕ್ಕೆ ಉತ್ತರ ಕೊರಿಯನ್ ಪ್ರದೇಶವನ್ನು ಪ್ರವೇಶಿಸಲು ಸೋವಿಯತ್ ಸೈನ್ಯಾಧಿಕಾರಿಗಳು ಅವಕಾಶ ಕೊಡಲಿಲ್ಲ. ಉತ್ತರ ಕೊರಿಯಕ್ಕೆ ಪ್ರತ್ಯೇಕವಾದ ಸಂವಿಧಾನವೊಂದು 1948ರಲ್ಲಿ ರಚಿತವಾಗಿ ಪ್ರತ್ಯೇಕ ಚುನಾವಣೆಗಳು ನಡೆದವು (ಆಗಸ್ಟ್‌ 25). ಸೆಪ್ಟೆಂಬರ್ 28ರಂದು ಉತ್ತರ ಕೊರಿಯದ ಪ್ರಥಮ ಪರಮೋನ್ನತ ಜನತಾ ಸಭೆ ಸಮಾವೇಶಗೊಂಡು ನೂತನ ಸಂವಿಧಾನವನ್ನು ಸ್ವೀಕರಿಸಿತು. ಪ್ರಜಾಪ್ರಭುತ್ವವಾದಿ ಜನತಾ ಗಣರಾಜ್ಯ ಅಸ್ತಿತ್ವಕ್ಕೆ ಬಂದದ್ದು ಅಂದು. 38ನೆಯ ಅಕ್ಷಾಂಶದ ಆಚೀಚಿನಿಂದ ಉತ್ತರ ದಕ್ಷಿಣ ಕೊರಿಯಗಳ ತಿಕ್ಕಾಟ ಬಿರುಸಾಗಿ ಕೊನೆಗೆ 1950 ಜೂನ್ 25ರಂದು ಯುದ್ಧ ಆಸ್ಫೋಟನೆಯಾದಾಗ ದಕ್ಷಿಣ ಕೊರಿಯದ ನೆರವಿಗೆ ವಿಶ್ವಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳ ಸೈನ್ಯಗಳು ಬಂದವು. ಮೂರು ವರ್ಷ ನಡೆದ ಈ ಯುದ್ಧದ ಅಂತ್ಯವಾದದ್ದು 1952 ಜುಲೈ 27ರಂದು-ಪಾನ್ಮುಂಜಾನ್ನಲ್ಲಿ ಕದನ ವಿರಾಮಕ್ಕೆ ಸಹಿ ಬಿದ್ದಾಗ. ಕೊರಿಯದ ಐಕ್ಯಸ್ಥಾಪನೆಯಾಗಬೇಕೆಂದು ಈ ಕೌಲಿನಲ್ಲಿ ಮತ್ತೆ ಆಶಯ ವ್ಯಕ್ತ ಪಟ್ಟಿತ್ತಾದರೂ ಈ ಬಗ್ಗೆ ವಿಶ್ವಸಂಸ್ಥೆಯ ಯತ್ನ ಫಲಿಸಲಿಲ್ಲ. 1954ರಲ್ಲಿ ಜಿನೀವದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ವಿಫಲಗೊಂಡಿತು. ಅಲ್ಲಿಂದೀಚೆಗೆ ಉತ್ತರ ಕೊರಿಯ ಪ್ರತ್ಯೇಕವಾಗಿಯೇ ಮುಂದುವರಿಯುತ್ತಿದೆ. ಉತ್ತರ ದಕ್ಷಿಣ ಕೊರಿಯಗಳೆರಡಕ್ಕೂ ಪ್ರತ್ಯೇಕವಾಗಿ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿಸಿಕೊಡಬೇಕೆಂದು 1962ರಲ್ಲಿ ನಡೆದ ಪ್ರಯತ್ನವೂ ಫಲಿಸಲಿಲ್ಲ.

ಬಾಹ್ಯ ಸಂಪರ್ಕಗಳುಸಂಪಾದಿಸಿ

ಸರಕಾರಿ
ಸಾಮಾನ್ಯ
ಚಿತ್ರಗಳು
ವಿಡಿಯೋಗಳು

ಮೂಲಗಳುಸಂಪಾದಿಸಿ