ಸಂಧಿ
ಮಳೆ ಗಾಲ
(ಲೋಪ ಸಂಧಿ ಇಂದ ಪುನರ್ನಿರ್ದೇಶಿತ)
ಸಂಧಿ ಎಂದರೇನು?
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.
ವಿದ್ವಾಂಸರ ಅಭಿಪ್ರಾಯ
ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.
- ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.
ಸಂಧಿಗಳಲ್ಲಿ ವಿಧ
ಸಂಧಿಗಳಲ್ಲಿ ಎರಡು ವಿಧ.
ಸ್ವರ ಸಂಧಿ | ವ್ಯಂಜನ ಸಂಧಿ |
---|---|
ಲೋಪ ಸಂಧಿ | ಆದೇಶ ಸಂಧಿ |
ಆಗಮ ಸಂಧಿ |
ಸ್ವರ ಸಂಧಿ | ವ್ಯಂಜನ ಸಂಧಿ |
---|---|
ಸವರ್ಣದೀರ್ಘಸಂಧಿ (ದೀರ್ಘಸ್ವರಾದೇಶ) | ಜಶ್ತ್ವಸಂಧಿ (ಜಬಗಡದ ಆದೇಶ) |
ಗುಣಸಂಧಿ (ಏ, ಓ, ಅರ್ ಆದೇಶ) | ಶ್ಚುತ್ವಸಂಧಿ (ಶಕಾರ ಚವರ್ಗಾದೇಶ) |
ವೃದ್ಧಿಸಂಧಿ (ಐ, ಔ ಆದೇಶ) | ಅನುನಾಸಿಕಸಂಧಿ (ಙ,ಞ,ಣ,ನ,ಮ ಗಳ ಆದೇಶ) |
ಯಣ್ಸಂಧಿ (ಯ, ವ, ರ ಆದೇಶ) |
ಉಲ್ಲೇಖ