ಹೊಸಗನ್ನಡ ಈಗ ಬಳಕೆಯಲ್ಲಿರುವ ಕನ್ನಡ ಭಾಷೆ. ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ಆಡುನುಡಿಯಾಗಿದ್ದ ಕನ್ನಡ ಭಾಷೆಯನ್ನು ಕ್ರಿಸ್ತ ಶಕ ೧೪ನೇ ಶತಮಾನಕ್ಕಿಂತ ಮೊದಲಿದ್ದದನ್ನು ಹಳಗನ್ನಡವೆಂದೂ, ೧೫ರಿಂದ ೧೭ನೇ ಶತಮಾನದವರೆಗಿನ ಕನ್ನಡವನ್ನು ನಡುಗನ್ನಡವೆಂದೂ ಗುರುತಿಸಲಾಗುತ್ತದೆ. ನಂತರದ್ದು ಹೊಸಗನ್ನಡ.

ಇಪ್ಪತ್ತನೇ ಶತಮಾನದ ಕನ್ನಡವನ್ನು ಆಧುನಿಕ ಕನ್ನಡವೆಂದು ಪರಿಗಣಿಸುವ ಪರಿಪಾಠವೂ ಇದೆ. ೯ನೇ ಶತಮಾನಕ್ಕಿಂತ ಹಿಂದಿನ ಕನ್ನಡವನ್ನು ಪೂರ್ವದ (ಪ್ರಾಚೀನ) ಹಳಗನ್ನಡವೆನ್ನಲಾಗುತ್ತದೆ.

ಇಂಥ ಪ್ರಭೇಧಗಳು ಒಮ್ಮಿಂದೊಮ್ಮೆಗೆ ಬಂದಂಥವುಗಳಲ್ಲ. ಕೆಲವು ಸಮಯ ಎರಡೂ ರೂಪಗಳು ಬಳಕೆಯಲ್ಲಿದ್ದು, ಹಳೆಯವು ನಿಧಾನವಾಗಿ ಮರೆಯಾಗಿ ಹೊಸ ರೂಪಗಳು ಸ್ಥಿರವಾದವು. ಈ ದೃಷ್ಟಿಯಲ್ಲಿ ಈ ಬದಲಾವಣೆಗಳನ್ನು ಯಾವದೇ ನಿರ್ದಿಷ್ಟ ಕಾಲಘಟ್ಟಕ್ಕೆ ಸಮೀಕರಿಸುವದು ಸಾಧುವಲ್ಲ.

ಹೆಚ್ಚಿಗೆ ಓದಲು

ಬದಲಾಯಿಸಿ

ನಮ್ಮ ನುಡಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ೧೯೮೯(೨ನೇ ಮುದ್ರಣ)