ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ. ಪೂರ್ವಪದದ ಕೊನೆಯಲ್ಲಿರುವ ಪ್ರಥಮ ವರ್ಣಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವರ್ಣಗಳು ಪರವಾದರೆ ಅವುಗಳ ಸ್ಥಾನದಲ್ಲಿ ಅದೇ ವರ್ಗದ ಮೂರನೆಯ ವರ್ಣವು ಆದೇಶವಾಗುತ್ತದೆ.

ಉದಾಹರಣೆ:

ವಾಕ್ + ಈಶ = ವಾಗೀಶ

ಜಗತ್ + ಗುರು = ಜಗದ್ಗುರು

ದಿಕ್ + ದೇಶ = ದಿಗ್ದೇಶ

ಸತ್ + ಉದ್ಯೋಗ = ಸದುದ್ಯೋಗ

ಇದನ್ನೂ ನೋಡಿಸಂಪಾದಿಸಿ

ಉಲ್ಲೇಖ