ಸಮಾಸ

ಪದ ವಿವರ ಬದಲಾಯಿಸಿ

ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ.

ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ. ನಾಗವರ್ಮನ ಪ್ರಕಾರ, ‘ನಾಮವಾಚಿನಾಂ ಶಬ್ದನಾಂ ಪರಸ್ಪರಮನ್ವಯ ಸಿದ್ಧೋರ್ಥಸ್ಸಮಾಸ ಸಂಜ್ಞಸ್ಸ್ಯಾತ್’ (ಸೂತ್ರ : 131). ಎಂದರೆ ನಾಮವಾಚಿಯಾದ ಶಬ್ದಗಳೆರಡರ ಅನ್ವಯ ಸಿದ್ಧವಾದ ಅರ್ಥ. ನಾಮಪದಗಳು ಕೂಡಿ ನುಡಿಯುವ ಸರ್ಥವೇ ಸಮಾಸ. ಈ ಕೂಡು ನುಡಿಯನ್ನವನು ಪದವಿಧಿ ಯೆಂದೂ ಕರೆದಿದ್ದಾನೆ. ಕೇಶಿರಾಜನ ಸೂತ್ರದ ಪ್ರಕಾರ, “ಕರು ತಾಯ ಬಳಿಯನುಳಿಯದ ತೆರದಿಂದಂ ನಾಮಪದ ಮದರ್ಥಾನುಗಮಾ ಗೆರಿಗೆ ಸಮಾಸಂ ನೆಗಳ್ಗುಂ”. ಅಂದರೆ, ನಾಮಪದವು ಅರ್ಥಾನುಗತವಾಗುವುದೇ ಸಮಾಸ. ಹೀಗೆ ಅರ್ಥವನ್ನುಂಟು ಮಾಡುವ ಪರಸ್ಪರ ನಾಮಪದಗಳು ಅನ್ಯೋನ್ಯವಾಗಿ ಕೂಡಿರಬೇಕು. ಈ ಅನ್ಯೋನ್ಯವನ್ನು ಅವನು ‘ತಾಯ ಬಳಿಯ ಕರುವಿನಂತೆ’ಯೆಂದು ವರ್ಣಿಸುವನು. ಕೈಪಿಡಿಕಾರರ ಪ್ರಕಾರ, “ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ”.

ಸಮಾಸದ ಸ್ವರೂಪ ಬದಲಾಯಿಸಿ

ಪರಸ್ಪರ ಸಂಬಂಧವುಳ್ಳ ಅನೇಕ ಪದಗಳು ಒಂದು ‘ಪ್ರಾತಿಪದಿಕ’ವಾಗುವುದು ಸಮಾಸ. ಸಮಾಸವಾದಾಗ ಅದರಲ್ಲಿ ಸೇರಿರುವ ಪದಗಳ ನಡುವಿನ ವಿಭಕ್ತಿಗಳಿಗೆ ಲೋಪ ಬರುವುದು.

ಉದಾ : ಉಡುವ + ಕೊರೆ = ಉಡುಗೊರೆ. ಮಲರ್ + ಕಣ್ = ಮಲರ್ಗಣ್.

ಇಲ್ಲಿ ಎರಡು ಪದಗಳಿವೆ. ಮೊದಲನೆಯದು ‘ಪೂರ್ವಪದ’. ಎರಡನೆಯದು ‘ಉತ್ತರಪದ’. ಆಯಾ ಪ್ರಕೃತಿಗಳನ್ನು ವಿಭಕ್ತಿಗನುಗುಣವಾಗಿ ವಿಂಗಡಿಸಿ ಹೇಳುವ ವಿಶೇಷ ವಾಕ್ಯಕ್ಕೆ ‘ವಿಗ್ರಹವಾಕ್ಯ’ವೆಂದು ಹೆಸರು. ಅಂದರೆ ಸಮಾಸದ ಅರ್ಥವನ್ನು ಹೇಳುವ ವಾಕ್ಯ.

ಉದಾ : [ವಿಗ್ರಹವಾಕ್ಯ - ಪೂರ್ವಪದ + ಉತ್ತರ ಪದ = ಸಮಾಸ ಪದ.] ಅಲರಂತಪ್ಪ ಕಣ್ – ಅಲರ್ + ಕಣ್ = ಅಲರ್ಗಣ್.

ಸಮಾಗಳಲ್ಲಿ ಭಿನ್ನ ಭಿನ್ನ ನಾಮಪ್ರಕೃತಿಗಳು ಅಥವಾ ಧಾತುಗಳು ಸೇರುವುದರಿಂದಾಗಿ ಆಯಾ ಸಮಾಸಕ್ಕೆ ಬೇರೆ ಬೇರೆ ಹೆಸರು ಬಂದಿವೆ. ನಾಮಪ್ರಕೃತಿ ಮತ್ತು ಧಾತುಗಳು ಸೇರುವುದಕ್ಕೆ ಉದಾ :

ನಾಮ+ನಾಮ = ಅರಮನೆ.
ಧಾತು+ನಾಮ = ಉಡುಗೊರೆ.
ಅವ್ಯಯ+ನಾಮ = ನಿಡುಮೂಗಿ.
ಗುಣ +ನಾಮ = ಬೆಳ್ದಿಂಗಳ್.
ವಿಶೇಷಣ+ನಾಮ = ಹೆಗ್ಗೆರೆ.
ಸಂಖ್ಯೆ+ಸಂಖ್ಯೆ = ನೂರಪತ್ತು.
ನಾಮ+ಧಾತು = ಕೆಳೆಗೊಳ್.
ಸಂಖ್ಯೆ+ನಾಮ = ಇರ್ಕೋಡಿ.

ಸಮಾಸದಲ್ಲಿ ಕೆಲವು ಸಲ ಪೂರ್ವಪದಕ್ಕೂ ಕೆಲವು ಸಲ ಉತ್ತರಪದಕ್ಕೂ ಇನ್ನು ಕೆಲವು ಸಲ ಇವೆರಡಕ್ಕೂ ಸಂಬಂಧಿಸದ ಪರಪದಕ್ಕೂ ಪ್ರಾಮುಖ್ಯತೆ ಬರುವುದುಂಟು. ಈ ಪ್ರಾಮುಖ್ಯತೆಯುಳ್ಳ ಪದವನ್ನು ‘ಮುಖ್ಯಪದ’ವೆಂದು ಕರೆಯುತ್ತಾರೆ. ಒಂದು ಸಮಾಸದಲ್ಲಿ ಯಾವ ಪದಕ್ಕೆ ಕ್ರಿಯಾ ಸಂಬಂಧವಿರುವುದೋ ಅದು ‘ಮುಖ್ಯಪದ’ವೆಂದು ಕರೆಯಿಸಿಕೊಳ್ಳುತ್ತದೆ. [ಕ್ರಿಯೆ, ಒಂದು ಪದದ ಅರ್ಥದ ಸಂಬಂಧವನ್ನು ಹೇಳುತ್ತದೆ.] ಸಮಾಸ ಪದಗಳಲ್ಲಿ ಈ ಕ್ರಿಯಾ ಸಂಬಂಧವು ಪೂರ್ವಪದಕ್ಕಿದ್ದರೆ ಅದು ‘ಪೂರ್ವಪದ ಪ್ರಧಾನ’ ಸಮಾಸವೆಂದೂ, ಉತ್ತರದಲ್ಲಿದ್ದರೆ ‘ಉತ್ತರಪದ ಪ್ರಧಾನ ಸಮಾಸ’ವೆಂದು ಗ್ರಹಿಸಬೇಕು.

ವಿಗ್ರಹವಾಕ್ಯ ಬದಲಾಯಿಸಿ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ. "ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು" ಸಂಸ್ಕøತದಲ್ಲಿ 28 ಸಮಾಸಗಳ ವಿವರಣೆ ಕುರಿತು ಪ್ರಸ್ತಾಪಿಸಿದರೂ, ಕನ್ನಡಕ್ಕೆ ಎಷ್ಟು ಬೇಕೋ ಅಷ್ಟನ್ನೇ ಹೇಳುವುದು ಅವನ ಮುಖ್ಯ ಉದ್ದೇಶ. ಅರ್ಥವು ಯಾವ ಪದದಲ್ಲಿ ಮುಖ್ಯವಾಗಿರುವದೋ ಆ ತತ್ವದ ಮೂಲಕ್ಕೆ ಕೇಶಿರಾಜನು

ಸಮಾಸದ ವಿಧಗಳು ಬದಲಾಯಿಸಿ

ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ+ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ+ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು. ಮತ್ತು ಅದು ದೋಷಯುಕ್ತ ಸಮಾಸ ವೆನ್ನಿಸುವುದು. ಕೇಶಿರಾಜನು ಸಮಾಸಗಳಲ್ಲಿ ‘ಸಂಸ್ಕೃತ ಸಮಾಸ’ ಮತ್ತು ‘ಕನ್ನಡ ಸಮಾಸ’ವೆಂದು ಒಂಭತ್ತು ವಿಧಗಳನ್ನು ಮಾಡಿದ್ದಾನೆ.

ಸಂಸ್ಕೃತ ಸಮಾಸಗಳಲ್ಲಿ ಐದುವಿಧಗಳು ಬದಲಾಯಿಸಿ

ಕೇಶಿರಾಜ ಸಮಾಸಗಳನ್ನು ಐದು ರೀತಿಯಲ್ಲಿ ವರ್ಗೀಕರಿಸಿದ್ದಾನೆ.

  1. ಉತ್ತರಪದ ಮುಖ್ಯ ಸಮಾಸ : ಅ) ತತ್ಪುರುಷ ಆ) ಕರ್ಮಧಾರಯ ಇ) ದ್ವಿಗು ಈ) ಕ್ರಿಯಾ ಉ) ಗಮಕ..
  2. ಪೂರ್ವಪದ ಮುಖ್ಯ ಸಮಾಸ : ಅ) ಅವ್ಯಯೀಭಾವ ಸಮಾಸ (ಅಂಶೀ ಸಮಾಸ).
  3. ಎರಡೂ ಪದ ಮುಖ್ಯ ಸಮಾಸ : ದ್ವಂದ್ವ ಸಮಾಸ
  4. ಎರಡೂ ಪದ ಅಮುಖ್ಯ ಸಮಾಸ : ಬಹುವ್ರೀಹಿ ಸಮಾಸ.
  5. ವಿರುದ್ಧ ಪದ ಸಮಾಸ : ಅರಿಸಮಾಸ.

ಸಂಸ್ಕೃತ ಸಮಾಸಗಳು : ಸಂಸ್ಕೃತ+ಸಂಸ್ಕೃತ ಪದಗಳು ಸೇರಿಯಾಗುವ ಸಮಾಸವಿದು.

""೧"".ತತ್ಪುರುಷ ಸಮಾಸ - ತತ್ಪುರುಷ ಸಮಾಸ - ತತ್ಪುರುಷ ಸಮಾಸ [ಉತ್ತರಪದಾರ್ಥ ಪ್ರಧಾನ] ‘ಪರಪದದೊಳರ್ಥವರ್ತನಮಿರೆ ತತ್ಪುರುಷಂ’ (ಸೂತ್ರ : 175) ಪರಪದ ಎಂದರೆ, ಉತ್ತರಪದ. ಉತ್ತರಪದದ ಅರ್ಥವು ಪ್ರಧಾನವಾಗಿ ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಕೂಡಿ ಆಗುವ ಸಮಾಸವು ತತ್ಪುರುಷ. ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಮೆಯ್ಯಿಂ + ಕಲಿ = ಮೈಯ್ಗಲಿ(ತೃತೀಯ). ತೇರ್ಗೆ + ಮರಂ = ತೇರ್ಮರಂ(ಚತುರ್ಥಿ). ಪೊರೆಯ + ನೀರ್ = ಪೊರೆನೀರ್(ಷಷ್ಠಿ). ಬಿಲ್ಲೊಳ್ + ಜಾಣಂ =ಬಿಲ್ಜಾಣಂ(ಸಪ್ತಮಿ). ನೀರನ್ನು+ಕುಡಿದಂ=ನೀರ್ಕುಡಿದಂ(ದ್ವಿತೀಯ) ಇತ್ಯಾದಿ.

೨.ಕರ್ಮಧಾರಯ ಸಮಾಸ - ಕರ್ಮಧಾರಯ ಸಮಾಸ ವ[ಉತ್ತರ ಪದಾರ್ಥ ಪ್ರಧಾನ] ‘ತತ್ಪುರುಷಂ ಏಕಾಶ್ರಯಮಾಗೆ ಕರ್ಮಧಾರೆಯಮಕ್ಕುಂ’ (ಸೂ:175) ಪೂರ್ವಪದದಲ್ಲಿ ವಿಶೇಷಣ - ವಿಶೇಷ್ಯಗಳು, ಉಪಮಾನ – ಉಪಮೇಯಗಳು ಸೇರಿ ಆಗುವ ಮತ್ತು ಸಂಭಾವನೆ, ಅವಧಾರಣೆ ತೋರುವ ಸಮಾಸ ಕರ್ಮಧಾರಯ. ಗುಣವಚನಗಳಾಗಿವೆ. ಇವೆಲ್ಲವೂ ಸಹಜ ವಿಶೇಷಣಗಳೇ. ಕರ್ಮಧಾರಯದಲ್ಲಿ ಗುಣವಚನ, ಕೃದಂತ, ಉಪಮಾನ, ಸಂಭಾವನಾ ಪದಗಳು ಪೂರ್ವದಲ್ಲಿ ವಿಶೇಷಣಗಳಾಗಿದ್ದು ಉತ್ತರಪದ ವಿಶೇಷ್ಯವಾಗಿರಬೇಕು. ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಬಿಳಿಯದು ಆದ + ಕೊಡೆ = ಬೆಳ್ಗೊಡೆ. ಹಿರಿದು ಆದ + ಮರ = ಹೆಮ್ಮರ. ಶ್ರೇಷ್ಠನಾದ + ನೃಪ = ನೃಪಶ್ರೇಷ್ಠ. ವೀರನಾದ + ನರ = ನರವೀರ. ಪೆರೆಯಂತೆ + ನೊಸಲ್ = ಪೆರೆನೊಸಲ್. ತಳಿರಂತಹ + ಅಡಿ = ತಳಿರಡಿ. ತೆರೆಯೇ + ಕಯ್ = ತೆರಗಯ್. ಅಲರಂತಪ್ಪ + ಕಣ್ = ಅಲರ್ಗಣ್. ಕೇಶಿರಾಜನ ಪ್ರಕಾರ- ವಿಶೇಷಣ ಪೂರ್ವದ ಕರ್ಮಧಾರಯದಲ್ಲಿ ಕೊಡುವ ಪೂರ್ವಪದಗಳೆಲ್ಲವೂ.

೩.ದ್ವಿಗು ಸಮಾಸ - ದ್ವಿಗು ಸಮಾಸ [ಉತ್ತರ ಪದಾರ್ಥ ಪ್ರಧಾನ] ‘ನೆಲಸಿರೆ ಮೊದಲೊಳ್ ಸಂಖ್ಯೆಯದೆ, ವಲಂ ದ್ವಿಗುಮಕ್ಕುಂ’ (ಸೂ:175) ಕೇಶಿರಾಜನು, ‘ಪೂರ್ವಪದವು ಸಂಖ್ಯಾವಾಚಿಯಾಗಿದ್ದರೆ ಅದು ದ್ವಿಗು ಸಮಾಸವಾಗುತ್ತದೆ’ ಎನ್ನುತ್ತಾನೆ.

ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಒಂದು + ಪಿಡಿ = ಒರ್ಪಿಡಿ. ಎರಡು + ಪಿಡಿ = ಇರ್ಪಿಡಿ. ಎರಡು + ಸಾಸಿರಂ = ಇಚ್ರ್ಛಾಸಿರಂ. ಎರಡು ಮಾರು – ಎರಳ್ + ಮಾತು = ಎರಳ್ಮಾತು. ಮೂರು ಬಾಳ್ - ಮೂ + ಬಾಳ್ = ಮೂವಾಳ್.

೪.ಬಹುವ್ರೀಹಿ ಸಮಾಸ : ಬಹುವ್ರೀಹಿ ಸಮಾಸ - [ಎರಡೂ ಪದ ಅಮುಖ್ಯ] ‘ಪದನೆರಡುಂ ಮೇಣ್ ಪಲವಂ ಪದಾರ್ಥಮಂ ಬಯಸುತಿರೆ ಬಹುವ್ರೀಹಿ’ (ಸೂ : 176) ಅನ್ಯಪದವು ವಿಶೇಷ್ಯವಾಗಿ ಅನೇಕ ಪದಗಳಿಗೆ ಆಗುವ ಸಮಾಸವು ಬಹುವ್ರೀಹಿ. [ವಿಗ್ರಹವಾಕ್ಯ - ಪೂರ್ವಪದ + ಉತ್ತರ ಪದ = ಸಮಾಸ ಪದ.]ಉದಾ :

ಕಡುತರಂ ಆವಂ ವಾದದಲ್ಲಿ – ಕಡು+ಚಾಗಿ = ಕಡುಚಾಗಿ.,
ಛಲವು ಆವನಿಗೋ, ಅವಂ – ಛಲ+ವಾದಿ = ಛಲವಾದಿ,
ಭಿನ್ನಾಣದಲ್ಲಿ ಮೇಲ್ ಆವಂ, ಅವಂ - ಮೇಲ್+ಭಿನ್ನಾಣಿ = ಮೇಲ್ವಿನ್ನಾಣಿ,
ನಿಡಿದು ಮೂಗು ಆವಳಿಗೋ, ಅವಳ್ -
ನಿಡು+ಮೂಗಿ = ನಿಡುಮೂಗಿ, ಕಡು ಕೆಡಿಸುವಂ ಆವಳಿಗೋ, ಅವಳ್ – ಕಡು+ಕೇಡಿ = ಕಡುಗೇಡಿ,
ಅಭ್ಯಾಸಕ್ಕೆ : ಮುಕ್ಕಣ್ಣ, ಸರಸಿಜ(ತಾವರೆ), ಪೆರೆದಲೆಯಂ, ಕೂರಿಲಿ(ಮೊಂಡಾದ), ಮೀಂಗುಲಿ(ಮೀನುಗಾರ), ಚಂದ್ರಮೌಳಿ.

೫.ದ್ವಂದ್ವ ಸಮಾಸ - ದ್ವಂದ್ವ ಸಮಾಸ - ದ್ವಂದ್ವ [ಎರಡೂ ಪದ ಮುಖ್ಯ ಸಮಾಸ] ‘ಪದಾರ್ಥದ ಗಡಣಂ ದ್ವಂದ್ವ’ (ಪದಾರ್ಥಗಡಣ = ಪದಗಳ ಸಮೂಹ). ಎರಡೂ ಪದಗಳು ಮುಖ್ಯವಾಗಿರುವುದಕ್ಕೆ ದ್ವಂದ್ವ ಸಮಾಸವೆನ್ನುವರು. ಇಲ್ಲಿ ಸೇರಿರುವ ಪದಗಳು ನಾಮಪದಗಳಾಗಿರಬೇಕು ಮತ್ತು ಒಂದೇ ವಿಭಕ್ತಿಯಲ್ಲಿರಬೇಕೆಂಬುದು ನಿಯಮ. ಉದಾ:ಮರವೂ+ಗಿಡವೂ+ಬಳ್ಳಿಯೂ+ ಪುಲ್ಲೂ+ಪೊದರೂ+ಪಕ್ಕಿಯೂ+ಮಿಗವೂ = ಮರಗಿಡಬಳ್ಳಿಪುಲ್ಪೊದರ್ಪಕ್ಕಿಮಿಗಂಗಳ್.

ಅಭ್ಯಾಸಕ್ಕೆ : ತಾಯ್ತಂದೆಗಳ್, ಗಿಡಮರಬಳ್ಳಿಗಳ್, ಕೆರೆಕಟ್ಟೆಬಾವಿಗಳ್.

೬.ಅವ್ಯಯೀಭಾವ ಸಮಾಸ (ಅಂಶೀ ಸಮಾಸ) - [ಅಂಶಿ ಸಮಾಸ](ಅವ್ಯಯೀಭಾವ ಸಮಾಸ) - ಪೂರ್ವಪದಾರ್ಥ ಮುಖ್ಯಸಮಾಸ]ಅವ್ಯಯೀ ಭಾವಂ ಆದಿಪದ ಮುಖ್ಯತೆಯಿಂ (ಸೂ : 176) ಅವ್ಯಯೀಭಾವವನ್ನು ಭಟ್ಟಾಕಳಂಕನು ಅಂಶೀಸಮಾಸವೆಂದು ಕರೆಯುತ್ತಾನೆ. ಇದರಲ್ಲಿ ಸಂಸ್ಕøತದ ಅವ್ಯಯೀಭಾವ ಇರದೇ ಅಂಶ – ಅಂಶಿ ಭಾವ ಇರುತ್ತದೆ. (ಅಂಶ=ಭಾಗ, ಅಂಶಿ=ಪೂರ್ಣವಸ್ತು) ಪೂರ್ವಪದದ ಅರ್ಥವು ಉತ್ತರಪದದ ಆಂಶದಲ್ಲಿ ಸೇರಿ ವ್ಯಯವಾಗದೇ ಇರುವುದು – ಅವ್ಯಯೀಭಾವ.

ಉದಾ:ಕೈಯ+ಅಡಿ=ಅಂಗೈ, ಸೂರಿನ+ಮುಂದು=ಮುಂಜೂರ್, ಮಾಗಿಯ+ಮೊದಲು=ಮುಂಮಾಗಿ, ಕೆರೆಯ+ಕೆಳಗು=ಕಿಳ್ಕೆರೆ. 
ಅಭ್ಯಾಸಕ್ಕೆ : ಮುಂಗೈ, ಮೇಂಗೈ, ಮೇಂಗಾಲ್, ಮುಂಬಗಲ್, ಹಿಂಗಾಲ್, ತುದಿಮೂಗು, ಮಧ್ಯರಾತ್ರಿ, ನಟ್ಟಿರುಳು, ನಡುನೆತ್ತಿ, ಕಿಪ್ಪೊಟ್ಟೆ.

ಕನ್ನಡಸಮಾಸಗಳಲ್ಲಿ ಮೂರು ವಿಧಗಳು ಬದಲಾಯಿಸಿ

ಕನ್ನಡ + ಕನ್ನಡ ಸೇರಿ ಆಗುವ ಸಮಾಸವಿದು.

  1. ಕ್ರಿಯಾಸಮಾಸ- (ಉತ್ತರ ಪದಾರ್ಥ ಮುಖ್ಯ) ಪೂರ್ವಪದವು ಕಾರಕವಾಗಿದ್ದು ಉತ್ತರಪದವು ಕ್ರಿಯಾವಾಚಿಯಾಗಿದ್ದರೆ ಆಗುವ ಸಮಾಸವು ಕ್ರಿಯಾಸಮಾಸ. ನಾಮಪ್ರಕೃತಿ + ಧಾತು ಪದಗಳು ಕೂಡಿ ಕ್ರಿಯಾಸಮಾಸವಾಗುತ್ತದೆ. ಇಲ್ಲಿ ನಾಮಪದವು ವಿಶೇಷವಾಗಿ ದ್ವಿತೀಯ ವಿಭಕ್ತ್ಯಂತ ಆಗಿರುತ್ತದೆ. (ಕಾರಕ = ಕ್ರಿಯೆಗೆ ಕಾರಣವಾದವುಗಳು, ಕ್ರಿಯಾವಾಚಿ = ಕ್ರಿಯೆಯನ್ನು ಸೂಚಿಸುವವುಗಳು) ಪೂರ್ವಪದ ದ್ವಿತೀಯ ವಿಭಕ್ತ್ಯಂತ. ಉದಾ : ಬಳೆಯಂತೊಟ್ಟಂ - ಬಳೆ+ತೊಟ್ಟಂ = ಬಳೆದೊಟ್ಟಂ, ಕೆಳೆತನಮಂ ಕೊಂಡಂ – ಕೆಳೆ + ಕೊಂಡಂ = ಕೆಳೆಗೊಂಡಂ, ಮರೆಯೊಳ್ ಪೊಕ್ಕಂ - ಮರೆ + ಪೊಕ್ಕಂ = ಮರೆವೊಕ್ಕಂ. [ಇಲ್ಲಿ ಆದೇಶ ಸಂಧಿ ನಿಯಮವೂ ಇದೆ] ಅಭಾಸಕ್ಕೆ ಹೊಸಗನ್ನಡದ ಪದಗಳು: ಮೈದಡವಿ, ತಲೆಗೊಡವಿ, ಮೈದೊಳೆದು, ಕೈದೊಳೆದು. ಪೂರ್ವಪದ ಬೇರೆ ವಿಭಕ್ತ್ಯಂತ ಪದಗಳಲ್ಲಿ ಬೇರ್ವೆರಸಿ, ನೀರ್ಗೂಡಿ, ಮನಸಂದನು,
  2. ಗಮಕ ಸಮಾಸ - ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು. ಉದಾ : ಸಂಖ್ಯೆಗೆ : ನೂರು+ಪತ್ತು=ನೂರುಪತ್ತು. ಸರ್ವನಾಮಕ್ಕೆ – ಆವ+ಮಾತು=ಆವಮಾತು. ಅವನು+ಹುಡುಗ=ಆ ಹುಡುಗ, ಇವನು+ಗಂಡಸು=ಈ ಗಂಡಸು, ಈ ಮರ, ಗುಣವಚನದ ಅತ್ವ-ಇತ್ವಕ್ಕೆ : ಅಸಿ+ಅ+ನಡು=ಅಸಿಯನಡು. ಪಸಿಯ+ಬಣ್ಣಂ=ಪಸಿಬಣ್ಣಂ, ಕೃದಂತಕ್ಕೆ : ಪಾಡುವ ತುಂಬಿ = ಪಾಡುವ ತುಂಬಿ. ಗಮಕ ಸಮಾಸದಲ್ಲಿ ಅದು-ಇದು-ಉದು ಆ,ಈ, ಊ ಎಂಬುದು ಆದೇಶವಾಗುತ್ತದೆ.
  3. ವೀಪ್ಸಾ ಸಮಾಸ (ವೀಪ್ಸಾ = ಪುನರಾವರ್ತನೆ/ಆವೃತಿ) - ವೀಪ್ಸಾ ಸಮಾಸ (ವೀಪ್ಸಾ = ಪುನರಾವರ್ತನೆ/ಆವೃತಿ) ಕೇಶಿರಾಜನು ಕನ್ನಡ ಕಾವ್ಯಗಳಲ್ಲಿ ಬಂದಿರುವ ಕೆಲವು ಪುನರಾವರ್ತ ಪದಗಳನ್ನು ವಿಪ್ಸಾ ಸಮಾಸವೆಂದು ಕರೆದು ಅದು ಬರುವ ಸ್ಥಳಗಳನ್ನು ಹೀಗೆ ವಿವರಿಸಿದ್ದಾನೆ.
ದೂರ : ಆ ತೋರ್ಪುದಾ ತೋರ್ಪುದಾ ಬಾನೋಳ್ ಧ್ವಜಪಟಂ.
ಅಭೀಕ್ಷಣಂ : ಗಿಳಿಯೊಡ -ನೋಡಿಯೋದಿನುಡಿಗಲ್ತು.
ವೀಪ್ಸೆ : ಊರೂರೊಳ್ ಕೇರಿಕೇರಿಯೊಳ್ ಮನೆಮನೆಯೊಳ್.
ಅನುಕರಣ : ಝಲ್ ಝಲ್ಲೆನೆ, ಭೋರ್ ಭೋರನೆ.
ಕ್ರಿಯೆ : ನಡೆ ನಡೆಯೆಂದು ನಡೆದರ್.
ಚಪಳತೆ : ಒಪ್ಪಿಸೊಪ್ಪಿಸು.

ಅರಿಸಮಾಸ ಬದಲಾಯಿಸಿ

ಕನ್ನಡ ಪದಕ್ಕೂ ಸಂಸ್ಕೃತ ಪದಕ್ಕೂ ಸಮಾಸವು ಕೂಡದು. ಇದನ್ನು ಅರಿಸಮಾಸವೆನ್ನುವರು. ಆದರೆ ಕ್ರಿಯಾಸಮಾಸದಲ್ಲಿಯೂ, ಗಮಕಸಮಾಸದಲ್ಲಿಯೂ ಬಿರುದಾವಳಿಯಲ್ಲಿಯೂ ಕೆಲವು ಪೂರ್ವಕವಿಪ್ರಯೋಗಗಳಲ್ಲಿಯೂ ಅರಿಸಮಾಸ ದೋಷವಿಲ್ಲ.

ಕ್ರಿಯಾಸಮಾಸ : ಬಳಪಂಗೊಳ್, ವಜ್ರಂಗೊಳ್, [ಬಳಪಂ - ವಜ್ರಂ ಸಂಸ್ಕøತ, ಗೊಳ್ ಕನ್ನಡ]
ಗಮಕ ಸಮಾಸ : ಬೀಸುವ ಚಾಮರಂ, ಬಿರುದಾವಳಿಗಳಲ್ಲಿ : ನರಲೋಕದಲ್ಲಣಂ, ರಾಯ ಕೋಳಾಹಳಂ,
ಪೂರ್ವಕವಿಪ್ರಯೋಗ : ಕಡುರಾಗಂ, ಮೊಗರಾಗಂ, ಕಟ್ಟೇಕಾಂತಂ, ಮಂಗಳಾರತಿ, ಇರ್ಬಲಂ ಇತ್ಯಾದಿ.

ಉಲ್ಲೇಖ ಬದಲಾಯಿಸಿ

"https://kn.wikipedia.org/w/index.php?title=ಸಮಾಸ&oldid=1224505" ಇಂದ ಪಡೆಯಲ್ಪಟ್ಟಿದೆ