ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು.

ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು. ಯಾರ ಮನೆ? ಎಂಬ ಪ್ರಶ್ನೆಗೆ, ಅರಸನಿಗೆ ಸಂಬಂಧಿಸಿದ ಮನೆ ಎಂದು ಗೊತ್ತಾಗುವುದು. ಹಾಗಾಗಿ, ಇಲ್ಲಿ ಅರಸನ ಎಂಬ ಪದದ ಅರ್ಥ ಮುಖ್ಯವೋ? ಮನೆ ಎಂಬ ಪದದ ಅರ್ಥ ಮುಖ್ಯವೊ? ಎಂಬುದನ್ನು ಗಮನಿಸಿದಾಗ , ಅರ್ಥೈಸಿದಾಗ , ಅರಸ , ಅವನಿಗೆ ಸಂಬಂಧಿಸಿದ - ಅರಸನ ಮನೆ ಎಂಬುದು ಸ್ಪಷ್ಟವಾಗುತ್ತದೆ .

ಈ ಸಮಸ್ತಪದದಲ್ಲಿ, ಮನೆ ಎಂಬ ಪದ ಮುಖ್ಯ..

'ಕಾಲುಬಳೆ ಎಂಬ ಸಮಸ್ತಪದದಲ್ಲಿಯೂ ಹೀಗೆಯೇ ಕಾಲಿನ ಸಂಬಂಧವಾದ ಬಳೆ ಎಂಬರ್ಥ ಬರುವುದು. ಬಳೆಗಳು ಅನೇಕ ವಿಧ. ಆದರೆ ಕಾಲಿನ ಎಂಬ ಪದವು, ಕಾಲಿಗೆ ಸಂಬಂಧಿಸಿದ ಬಳೆ ಎಂಬ ಅರ್ಥವನ್ನು ಪ್ರಧಾನವೆಂದು ಸೂಚಿಸುತ್ತದೆ. ಕಾಲಿನ ಬಳೆ = ಕಾಲುಬಳೆ . ( ಕಾಲ್ಬಳೆ ) . ಇಲ್ಲಿ, ಪೂರ್ವಪದದಲ್ಲಿ, ಷಷ್ಠೀ ವಿಭಕ್ತಿ ಇದ್ದು, ಅದು ಸಮಾಸವಾದಾಗ ಲೋಪವಾಗುವುದು. ಹಾಗಾಗಿ, ಇದನ್ನು ಷಷ್ಠೀ ತತ್ಪುರುಷ ಸಮಾಸ ಎಂದು ಕರೆಯುತ್ತಾರೆ.

ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಮೊದಲ್ಗೊಂಡು ಸಪ್ತಮೀ ವಿಭಕ್ತಿಯವರೆಗೆ ಯಾವುದಾದರೂ ವಿಭಕ್ತ್ಯಂತವಾಗಿರಬೇಕು. ಆಗ ಪೂರ್ವಪದದ ವಿಭಕ್ತಿ ಯಾವುದಿದೆಯೋ ಅದರ ಹೆಸರಿನಲ್ಲಿ ಸಮಾಸವನ್ನು ಹೇಳಲಾಗುತ್ತದೆ.

  • ಕನ್ನಡ - ಕನ್ನಡ ಪದಗಳು
  1. ಮರದ ಕಾಲು = ಮರಗಾಲು (ಷಷ್ಠೀ ತತ್ಪುರುಷ ಸಮಾಸ)
  2. ಬೆಟ್ಟದ ತಾವರೆ = ಬೆಟ್ಟದಾವರೆ (ಷಷ್ಠೀ ತತ್ಪುರುಷ ಸಮಾಸ)
  3. ಕಲ್ಲಿನ ಹಾಸಿಗೆ = ಕಲ್ಲುಹಾಸಿಗೆ (ಷಷ್ಠೀ ತತ್ಪುರುಷ ಸಮಾಸ)
  4. ತಲೆಯಲ್ಲ ನೋವು = ತಲೆನೋವು (ಸಪ್ತಮೀ ತತ್ಪುರುಷ ಸಮಾಸ)
  5. ಹಗಲಿನಲ್ಲಿ ಕನಸು = ಹಗಲುಗನಸು (ಸಪ್ತಮೀ ತತ್ಪುರುಷ ಸಮಾಸ)
  6. ತೇರಿಗೆ ಮರ = ತೇರುಮರ (ಚತುರ್ಥೀ ತತ್ಪುರುಷ ಸಮಾಸ)
  7. ಕಣ್ಣಿನಿಂದ ಕುರುಡ = ಕಣ್ಣುಕುರುಡ { ಕಣ್ಗುರುಡ } (ತೃತೀಯಾ ತತ್ಪುರುಷ ಸಮಾಸ)
  • ಸಂಸ್ಕೃತ - ಸಂಸ್ಕೃತ ಪದಗಳು
  1. ಕವಿಗಳಿಂದ ವಂದಿತ = ಕವಿವಂದಿತ (ತೃತೀಯಾ ತತ್ಪುರುಷ ಸಮಾಸ)
  2. ವ್ಯಾಘ್ರದ ದೆಸೆಯಿಂದ ಭಯ = ವ್ಯಾಘ್ರಭಯ (ಪಂಚಮೀ ತತ್ಪುರುಷ ಸಮಾಸ)
  3. ಉತ್ತಮರಲ್ಲಿ ಉತ್ತಮ = ಉತ್ತಮೋತ್ತಮ (ಸಪ್ತಮೀ ತತ್ಪುರುಷ ಸಮಾಸ)
  4. ದೇವರ ಮಂದಿರ = ದೇವಮಂದಿರ (ಷಷ್ಠೀ ತತ್ಪುರುಷ ಸಮಾಸ)
  5. ಧನದ ರಕ್ಷಣೆ = ಧನರಕ್ಷಣೆ (ಷಷ್ಠೀ ತತ್ಪುರುಷ ಸಮಾಸ)
  6. ವಯಸ್ಸಿನಿಂದ ವೃದ್ಧ = ವಯೋವೃದ್ಧ (ತೃತೀಯಾ ತತ್ಪುರುಷ ಸಮಾಸ)
  7. ತೇರಿಗೆ ಮೂರು = ತೇರುಮರ
  8. ಕವಿಗಳಿಂದ ವಂದಿತ = ಕವಿವಂದಿತ