ಕರ್ಮಧಾರೆಯ ಸಮಾಸ:- "ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು." ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು. ಉದಾಹರಣೆಗೆ:-


(i) ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ-

  1. ನೀಲವಾದ + ಉತ್ಪಲ = ನೀಲೋತ್ಪಲ[5] (ನೀಲಕಮಲ)
  2. ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ)
  3. ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ)
  4. ಬೃಹತ್ತಾದ + ವೃಕ್ಷ = ಬೃಹದ್ವೃಕ್ಷ (ದೊಡ್ಡಗಿಡ)
  5. ನೀಲವಾದ + ಶರಧಿ = ನೀಲಶರಧಿ
  6. ನೀಲವಾದ + ಸಮುದ್ರ = ನೀಲಸಮುದ್ರ
  7. ಶ್ವೇತವಾದ + ವರ್ಣ = ಶ್ವೇತವರ್ಣ
  8. ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ)
  9. ಪೀತವಾದ + ವಸ್ತ್ರ = ಪೀತವಸ್ತ್ರ
  10. ಪೀತವಾದ + ಅಂಬರ = ಪೀತಾಂಬರ
  11. ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ

ಮೇಲಿನ ಕನ್ನಡ, ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.

(iii) ಕರ್ಮಧಾರಯ ಸಮಾಸದಲ್ಲಿ ಉಪಮಾನೋಪಮೇಯಭಾವ ಸಂಬಂಧದಿಂದಲೂ ಪೂರ್ವೋತ್ತರ ಪದಗಳಿರುತ್ತವೆ.

  1. ತಾವರೆಯಂತೆ + ಕಣ್ಣು = ತಾವರೆಗಣ್ಣ (ಉಪಮಾನಪೂರ್ವಪದ ಕರ್ಮಧಾರಯ)
  2. ಪುಂಡರೀಕದಂತೆ + ಅಕ್ಷಗಳು = ಪುಂಡರೀಕಾಕ್ಷಗಳು ( - ,, - )

(iv) ಉಪಮಾನವು ಉತ್ತರಪದದಲ್ಲಿಯೂ ಇರುವುದುಂಟು.

  1. ಅಡಿಗಳು + ತಾವರೆಯಂತೆ = ಅಡಿದಾವರೆ
  2. ಮುಖವು + ಕಮಲದಂತೆ = ಮುಖಕಮಲ
  3. ಪಾದಗಳು + ಕಮಲಗಳಂತೆ = ಪಾದಕಮಲ
  4. ಕರವು + ಕಮಲದಂತೆ = ಕರಕಮಲ

(v) ಕೆಲವು ಕಡೆ ಅವಧಾರಣೆಯ ಎಂದರೆ ನಿರ್ಧರಿಸಿ ಹೇಳುವ ಅರ್ಥದ ಏ ಎಂಬ ಸ್ವರವು ಅಂತ್ಯದಲ್ಲಿ ಉಳ್ಳಪದವು ಪೂರ್ವಪದವಾಗಿ ಸಮಾಸವಾಗುವುದುಂಟು. ಇದಕ್ಕೆ ಅವಧಾರಣಾಪೂರ್ವಪದಕರ್ಮಧಾರಯ ಸಮಾಸ ಎನ್ನುವರು.

  1. ಫಲವೇ + ಆಹಾರ = ಫಲಾಹಾರ
  2. ನಖವೇ + ಆಯುಧ = ನಖಾಯುಧ
  3. ವಿಶ್ವವೇ + ರಂಗಭೂಮಿ = ವಿಶ್ವರಂಗಭೂಮಿ
  4. ಸುಖವೇ + ಜೀವನ = ಸುಖಜೀವನ
  5. ವಾತವೇ + ಆಹಾರ = ವಾತಾಹಾರ

- ಇತ್ಯಾದಿ.

       (vi) ಇನ್ನು ಕೆಲವು ಕಡೆ ಸಂಭಾವನೆ ಮಾಡಿದಾಗ ಅಂದರೆ ಊಹೆ ಮಾಡಿದಾಗ (ಇಂಥ ಹೆಸರಿದೆ ಎಂದು ಊಹೆ ಮಾಡಿ ಹೇಳಿದಾಗ) ಕರ್ಮಧಾರಯ ಸಮಾಸವಾಗುವುದು. ಇವು ಸಂಭಾವನಾಪೂರ್ವಪದ ಕರ್ಮಧಾರಯ ಸಮಾಸಗಳೆನಿಸುವುವು.
  1. ಕಾವೇರೀ ಎಂಬ ನದಿ = ಕಾವೇರೀನದಿ.
  2. ನಳನೆಂಬರಾಜ = ನಳರಾಜ.
  3. ಸ್ತ್ರೀ ಎಂಬ ದೇವತೆ = ಸ್ತ್ರೀದೇವತೆ.
  4. ಭೂಮಿಯೆಂಬ ಮಾತೆ = ಭೂಮಾತೆ.
  5. ವಿಂಧ್ಯವೆಂಬ ಪರ್ವತ = ವಿಂಧ್ಯಪರ್ವತ.

ಈಗ ಕೆಳಗೆ ಕೆಲವೊಂದು ಕರ್ಮಧಾರಯ ಸಮಸ್ತಪದಗಳ ಪಟ್ಟಿಯನ್ನೇ ಕೊಟ್ಟಿದೆ. ಇವೆಲ್ಲ ಹಳಗನ್ನಡಕಾವ್ಯಗಳಲ್ಲಿ ವಿಶೇಷವಾಗಿ ಪ್ರಯೋಗಿಸಲ್ಪಡುತ್ತವೆ. ಅಲ್ಪ ಸ್ವಲ್ಪ ಹಳಗನ್ನಡ ಗದ್ಯ ಪದ್ಯ ಭಾಗಗಳನ್ನು ಓದುವ ನೀವು ಇವುಗಳ ಸ್ಥೂಲಪರಿಚಯ ಮಾಡಿಕೊಂಡರೆ ಸಾಕು.

        (vii) ಚೆಂಗಣಗಿಲೆ, ಕೆಂಗಣಗಿಲೆ, ಚೆಂದೆಂಗು, ಕೆಂದೆಂಗು, ಚೆಂಬವಳ್, ಚೆಂದಳಿರ್, ಕೆಂದಳಿರ್, ಕೇಸಕ್ಕಿ, ಪೆರ್ಮರ್, ಪೆರ್ಬಾಗಿಲ್, ಕೆಮ್ಮಣ್ಣು, ಕೆಂಜೆಡೆ, ನಿಡುಗಣ್, ನಿಟ್ಟುಸಿರ್, ನಿಟ್ಟೋಟ, ಕೆಮ್ಮುಗಿಲ್, ಕೆನ್ನೀರ್, ಬೆನ್ನೀರ್, ಬೆಂಬೂದಿ, ಬೆಂಗದಿರ್, ತಂಗದಿರ್, ಪೇರಾನೆ, ಪೇರಡವಿ, ಪೇರಾಲ, ತೆಳ್ವಸಿರ್, ಕಿಸುಮಣ್, ಪೆರ‍್ವಿದಿರ್, ಪರ‍್ವೊದರ್, ತೆಳ್ಗದಂಪು, ಒಳ್ಗನ್ನಡ, ಬೆಳ್ಮುಗಿಲ್, ಬಲ್ಮುಗುಳ್, ಬೆಳ್ದಾವರೆ, ಕಟ್ಟಿರುಳ್, ಕಟ್ಟಿರುವೆ, ಕಟ್ಟಾಳ್, ತಣ್ಣಿಳಲ್, ತಂಬೆಲರ್, ತಂಗಾಳಿ-ಇತ್ಯಾದಿ

ನೋಡಿ:ಇನತನೂಜ ಬದಲಾಯಿಸಿ