ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. (೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)
- ಎರಡು+ಕೆಲ=ಇಕ್ಕೆಲ
- ಮೂರು+ಮಡಿ=ಮುಮ್ಮಡಿ
ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು ಸಂಖ್ಯಾವಾಚಕವಾಗಿರಲೇ ಬೇಕು.
- ಕನ್ನಡ - ಕನ್ನಡ ಪದಗಳು
- ಒಂದು+ಕಟ್ಟು = ಒಗ್ಗಟ್ಟು
- ಎರಡು+ಮಡಿ = ಇಮ್ಮಡಿ
- ನಾಲ್ಕು+ಮಡಿ = ನಾಲ್ವಡಿ
- ಐದು+ಮಡಿ = ಐವಡಿ
- ಎರಡು+ಬಾಳ್ = ಇರ್ವಾಳ್
- ಮೂರು+ಗಾವುದ = ಮೂಗಾವುದ
- ಒಂದು+ಕಣ್ಣು = ಒಕ್ಕಣ್ಣು
- ಸಂಸ್ಕೃತ - ಸಂಸ್ಕೃತ ಪದಗಳು
- ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು
- ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು
- ದಶಗಳಾದ+ಮುಖಗಳು = ದಶಮುಖಗಳು
- ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು
- ಏಕವಾದ+ಅಂಗ = ಏಕಾಂಗ