ಲಿಯಾಂಡರ್‌ ಪೇಸ್‌

ಟೆನ್ನಿಸ್ ಆಟಗಾರ

ಲಿಯಾಂಡರ್‌ ಏಡ್ರಿಯನ್‌ ಪೇಸ್‌ (ಜನನ: ೧೯೭೩ರ ಜೂನ್‌ ೧೭) ಭಾರತದ ಓರ್ವ ವೃತ್ತಿಪರ ಟೆನಿಸ್‌ ಆಟಗಾರನಾಗಿದ್ದು, ಈತ ಪ್ರಸಕ್ತವಾಗಿ ATP ಪ್ರವಾಸ ಮತ್ತು ಡೇವಿಸ್‌ ಕಪ್‌ ಪಂದ್ಯಾವಳಿಯ ಡಬಲ್ಸ್‌‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ೭ ಡಬಲ್ಸ್‌‌ ಮತ್ತು ೬ ಮಿಶ್ರ ಡಬಲ್ಸ್‌‌ ಟೆನಿಸ್‌ ಗ್ರಾಂಡ್‌ ಸ್ಲಾಂ ಪಟ್ಟಗಳನ್ನು ಗೆದ್ದುಕೊಂಡಿರುವ ಹಾಗೂ ಇತರ ಹಲವಾರು ಗ್ರಾಂಡ್‌ ಸ್ಲಾಂ ಅಂತಿಮ ಪಂದ್ಯಗಳಲ್ಲಿ ಉಪಾಂತ-ವಿಜಯಿಯಾಗಿ (ರನ್ನರ್‌‌-ಅಪ್‌) ಹೊರಹೊಮ್ಮಿರುವ ಈತ, ಪ್ರಪಂಚದಲ್ಲಿನ ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ವಲಯದ ಮಹೋನ್ನತ ಮತ್ತು ಅತ್ಯಂತ ಗೌರವಾನ್ವಿತರಾದ ಸಮಕಾಲೀನ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ೨೦೧೦ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ಗಿರಿಗಳಲ್ಲಿ ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ಯಾವುದೇ ವಿಂಬಲ್ಡನ್‌ ಪಟ್ಟವನ್ನು ಗೆಲ್ಲುವಲ್ಲಿ ರಾಡ್‌ ಲೇವರ್‌ ನಂತರದ ಮೊದಲ ಪುರುಷ ಟೆನಿಸ್‌ ಆಟಗಾರ ಎಂಬ ಕೀರ್ತಿಗೆ ಪಾತ್ರನಾದ. ಈತ ಭಾರತದ ಅತ್ಯಂತ ಯಶಸ್ವೀ ವೃತ್ತಿಪರ ಟೆನಿಸ್‌ ಆಟಗಾರರ ಪೈಕಿ ಒಬ್ಬನಾಗಿದ್ದಾನೆ ಮತ್ತು ಭಾರತೀಯ ಡೇವಿಸ್‌ ಕಪ್‌ ತಂಡದ ಹಿಂದಿನ ನಾಯಕನೂ ಆಗಿದ್ದಾನೆ. ಹಲವಾರು ಪ್ರಶಸ್ತಿಗಳನ್ನು ಈತ ಸ್ವೀಕರಿಸಿದ್ದಾನೆ. ಕ್ರೀಡೆಗೆ ಸಂಬಂಧಿಸಿದ ಭಾರತದ ಅತ್ಯುನ್ನತ ಗೌರವವಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ೧೯೯೬–೧೯೯೭ರಲ್ಲಿ, ಅರ್ಜುನ ಪ್ರಶಸ್ತಿಯನ್ನು ೧೯೯೦ರಲ್ಲಿ ಸ್ವೀಕರಿಸಿರುವುದು ಇವುಗಳಲ್ಲಿ ಸೇರಿವೆ. ಇವಷ್ಟೇ ಅಲ್ಲದೇ, ಭಾರತದಲ್ಲಿ ಟೆನಿಸ್‌ ಕ್ರೀಡೆಗೆ ಈತನು ನೀಡಿರುವ ಮಹೋನ್ನತವಾದ ಕೊಡುಗೆಯನ್ನು ಪರಿಗಣಿಸಿ ಈತನಿಗೆ ೨೦೦೧ರಲ್ಲಿ ಪದ್ಮಶ್ರೀ ಹಾಗೂ ೨೦೧೪ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.[]

ಲಿಯಾಂಡರ್ ಪೇಸ್
ದೇಶ ಭಾರತ
ವಾಸಸ್ಥಾನಕೊಲ್ಕತ್ತ, Mumbai, and
Orlando, Florida
ಎತ್ತರ1.77 m (5 ft 9+12 in)
ಆಟದಲ್ಲಿ ಪರಣಿತಿ ಪಡೆದದ್ದು1991
ಆಟRight-handed (one-handed backhand)
ವೃತ್ತಿಯ ಬಹುಮಾದನದ ಹಣUS$5,469,297
ಸಿಂಗಲ್ಸ್
ವೃತ್ತಿಯ ದಾಖಲೆ99–98
ವೃತ್ತಿಯ ಶೀರ್ಷಿಕೆಗಳು1
ಅತ್ಯುನ್ನತ ಶ್ರೇಣಿNo. 73 (August 24, 1998)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್2 RD (1997, 2000)
ಫ್ರೆಂಚ್ ಓಪನ್2 RD (1997)
ವಿಂಬಲ್ಡನ್2 RD (2001)
ಯು.ಇಸ್. ಓಪನ್ (ಟೆನಿಸ್)3 RD (1997)
ಇತರ ಪಂದ್ಯಾವಳಿಗಳು
ಒಲಂಪಿಕ್ ಆಟಗಳು Bronze (1996)
ಡಬಲ್ಸ್
ವೃತ್ತಿಯ ದಾಖಲೆ524–271
ವೃತ್ತಿಯ ಶೀರ್ಷಿಕೆಗಳು44
ಅತ್ಯುನ್ನತ ಶ್ರೇಣಿNo. 1 (June 21, 1999)
ಈಗಿನ ಶ್ರೇಣಿ8 (Sept 13, 2010)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್F (1999, 2006, 2012)
ಕಿರಿಯರ ಫ್ರೆಂಚ್ ಓಪನ್W (1999, 2001, 2009)
ವಿಂಬಲ್ಡನ್W (1999)
ಯು.ಇಸ್. ಓಪನ್ (ಟೆನಿಸ್)W (2006, 2009)
ಇತರೆ ಡಬಲ್ಸ್ ಟೂರ್ನಮೆಂಟ್‌ಗಳು
ಟೂರ್ ಫ಼ೈನಲ್‌ಗಳುF (1997, 1999, 2000, 2005)
ಒಲಂಪಿಕ್ ಆಟಗಳುFourth place (2004)
ಮಿಕ್ಸ್ಡ್ ಡಬಲ್ಸ್
ವೃತ್ತಿಯ ಶೀರ್ಷಿಕೆಗಳು6
Grand Slam Mixed Doubles results
ಆಸ್ಟ್ರೇಲಿಯನ್ ಓಪನ್W (2003, 2010)
ಫ್ರೆಂಚ್ ಓಪನ್F (2005)
ವಿಂಬಲ್ಡನ್W (1999, 2003, 2010)
ಯು.ಇಸ್. ಓಪನ್ (ಟೆನಿಸ್)W (2008)
Last updated on: July 05, 2010.

ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ಸ್ಪರ್ಧೆಗಳಲ್ಲಿ ಈತ ಸಾಧಿಸಿರುವ ಹನ್ನೆರಡು ಗ್ರಾಂಡ್‌ ಸ್ಲಾಂ ವಿಜಯಗಳನ್ನು ಹೊರತುಪಡಿಸಿ, ಡೇವಿಸ್‌ ಕಪ್‌ ಪಂದ್ಯಾವಳಿಗಳಲ್ಲಿ ಭಾರತದ ಪರವಾಗಿ ಆಡುವಾಗ ಈತ ನೀಡಿದ ಹಲವಾರು ಸ್ಮರಣಾರ್ಹ ಪ್ರದರ್ಶನಗಳಿಗಾಗಿ ಪ್ರಸಿದ್ಧನಾಗಿದ್ದಾನೆ; ಅಷ್ಟೇ ಅಲ್ಲ, ೧೯೯೬ರ ಅಟ್ಲಾಂಟಾ ಒಲಿಂಪಿಕ್‌ ಆಟಗಳಲ್ಲಿ ಭಾರತದ ಪರವಾಗಿ ಆಟವಾಡಿ ಒಂದು ಕಂಚಿನ ಪದಕವನ್ನು ಗೆದ್ದಿರುವುದೂ ಇವನ ದಾಖಲೆಯಲ್ಲಿ ಸೇರಿದೆ. ೧೯೯೯ರ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್‌‌/ಮಿಶ್ರ ಡಬಲ್ಸ್‌‌ ವರ್ಗದಲ್ಲಿ ಈತ ಅಪರೂಪದ ಡಬಲ್‌ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾನೆ. ೧೯೯೨ರಿಂದ ೨೦೦೮ರವರೆಗೆ[] ಈತ ಅನುಕ್ರಮಿಕವಾಗಿ ಒಲಿಂಪಿಕ್‌ ಪಂದ್ಯಗಳಲ್ಲಿ ಪಾಲ್ಗೊಂಡಿದ್ದು, ತನ್ಮೂಲಕ ಐದು ಒಲಿಂಪಿಕ್‌ ಆಟಗಳಲ್ಲಿ ಸ್ಪರ್ಧಿಸಿದ ಕೀರ್ತಿಗೆ ಪಾತ್ರರಾಗಿರುವ ಬಂದೂಕುಗಾರರಾದ ಕಾರ್ನಿ ಸಿಂಗ್‌‌ ಮತ್ತು ರಣಧೀರ್‌‌ ಸಿಂಗ್‌‌ ನಂತರದ ಮೂರನೇ ಭಾರತೀಯ ಎನಿಸಿಕೊಂಡಿದ್ದಾನೆ. ೨೦೧೦ರ ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ವಿಂಬಲ್ಡನ್‌ ಪಟ್ಟಗಳನ್ನು ಗೆಲ್ಲುವಲ್ಲಿನ ಏಕೈಕ ಎರಡನೇ ಪುರುಷ (ರಾಡ್‌ ಲೇವರ್‌ ನಂತರ) ಎಂಬ ಕೀರ್ತಿಗೆ ಲಿಯಾಂಡರ್‌ ಪೇಸ್‌ ಪಾತ್ರನಾದ.[] ೨೦೧೦ರಲ್ಲಿ, ಒಲಿಂಪಿಕ್‌ ಗೋಲ್ಡ್‌ ಫೆಸ್ಟ್‌[] ಎಂಬ ಪ್ರತಿಷ್ಠಾನದ ನಿರ್ದೇಶಕರ ಮಂಡಳಿಯನ್ನು ಅವನು ಸೇರಿಕೊಂಡ. ಈ ಪ್ರತಿಷ್ಠಾನವು ಗೀತ್‌ ಸೇಥಿ ಮತ್ತು ಪ್ರಕಾಶ್‌ ಪಡುಕೋಣೆಯವರ ಸಹ-ಸಂಸ್ಥಾಪನೆಯಲ್ಲಿ ರೂಪುಗೊಂಡಿದ್ದು, ಒಲಿಂಪಿಕ್‌ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಭಾರತದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಅದು ಹೊಂದಿದೆ.[]

ಆರಂಭಿಕ ಜೀವನ

ಬದಲಾಯಿಸಿ

ಭಾರತದ ಕೋಲ್ಕತಾದಲ್ಲಿ ಲಿಯಾಂಡರ್‌ ಜನಿಸಿದ. ಹಿಂದೆ ಇದು ಕಲ್ಕತ್ತಾ ಎಂದು ಕರೆಯಲ್ಪಡುತ್ತಿತ್ತು. ವೆಸಿ ಪೇಸ್‌ ಮತ್ತು ಜೆನ್ನಿಫರ್‌‌ ಪೇಸ್‌ ಅವನ ಜನ್ಮದಾತರಾಗಿದ್ದು, ಭಾರತದ ಕೋಲ್ಕತಾದಲ್ಲಿ ಅವನು ಬೆಳೆದು ದೊಡ್ಡವನಾದ. ಕಲ್ಕತ್ತಾದ ಲಾ ಮಾರ್ಟಿನಿಯೇರ್‌, ಚೆನ್ನೈನ ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದ ಸೇಂಟ್‌ ಕ್ಸೇವಿಯರ್‌ ಕಾಲೇಜ್‌‌‌ನಲ್ಲಿ ಅವನು ಶಿಕ್ಷಣ ಪಡೆದ. ಅವನ ಹೆತ್ತವರಿಬ್ಬರೂ ಕ್ರೀಡಾಪಟುಗಳಾಗಿದ್ದರು. ೧೯೭೨ರ ಮ್ಯೂನಿಕ್‌ ಒಲಿಂಪಿಕ್ಸ್‌‌‌ನಲ್ಲಿ ಕಂಚಿನ ಪದಕವನ್ನು ಗೆದ್ದ ಭಾರತೀಯ ಹಾಕಿ ತಂಡದಲ್ಲಿ ಅವನ ತಂದೆ ವೆಸಿ ಪೇಸ್‌ ಮಧ್ಯ ಮೈದಾನದಲ್ಲಿನ ಓರ್ವ ಆಟಗಾರನಾಗಿದ್ದ.[] ೧೯೮೦ರ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಅವನ ತಾಯಿಯು ಭಾರತೀಯ ಬ್ಯಾಸ್ಕೆಟ್‌ಬಾಲ್‌ ತಂಡದ ನಾಯಕಿಯಾಗಿದ್ದಳು. ೧೯೮೫ರಲ್ಲಿ ಮದ್ರಾಸ್‌ನಲ್ಲಿರುವ ಬ್ರಿಟಾನಿಯಾ ಅಮೃತ್‌‌ರಾಜ್‌ ಟೆನಿಸ್‌ ಅಕಾಡೆಮಿಯೊಂದಿಗೆ ಪೇಸ್‌ ದಾಖಲು ಮಾಡಿಕೊಂಡ; ಅಲ್ಲಿ ಆತನಿಗೆ ಡೇವ್‌ ಒ'ಮೆಯೆರಾನಿಂದ ತರಬೇತಿ ದೊರೆಯಿತು.[] ಅವನ ಆರಂಭಿಕ ಬೆಳವಣಿಗೆಯಲ್ಲಿ ಈ ಅಕಾಡೆಮಿಯು ಒಂದು ಪ್ರಮುಖ ಪಾತ್ರವನ್ನು ವಹಿಸಿತು. ಲಿಯಾಂಡರ್‌ ೧೯೯೦ರ ವಿಂಬಲ್ಡನ್‌ ಜೂನಿಯರ್‌‌ ಪಟ್ಟವನ್ನು ಗೆದ್ದುಕೊಂಡಾಗ ಮತ್ತು ಜೂನಿಯರ್‌‌ ವರ್ಗದ ವಿಶ್ವ-ಶ್ರೇಯಾಂಕಗಳಲ್ಲಿ ಮೊದಲನೇ ಸ್ಥಾನಕ್ಕೆ ಏರಿದಾಗ ಅವನಿಗೆ ಅಂತರರಾಷ್ಟ್ರೀಯ ಪ್ರಸಿದ್ಧಿಯು ದಕ್ಕಿತು ಎನ್ನಬಹುದು. ಮೈಕೇಲ್‌ ಮಧುಸೂದನ್‌ ದತ್‌ ಎಂಬ ಬಂಗಾಳಿ ಕವಿಗೆ ಪೇಸ್‌ ಮರಿಮಗನಾಗಿದ್ದಾನೆ. ಪೇಸ್‌ ಹಿಂದೊಮ್ಮೆ ಬಾಲಿವುಡ್‌ ನಟಿ ಮಹಿಮಾ ಚೌಧರಿಯೊಂದಿಗೆ ಪ್ರಣಯ-ವಿಹಾರ ನಡೆಸಿದ್ದನಾದರೂ, ಈಗ ಆತ ರಿಯಾ ಪಿಳ್ಳೈ (ಬಾಲಿವುಡ್‌ ನಟ ಸಂಜಯ್‌ ದತ್‌‌‌ನ ಮಾಜಿ-ಪತ್ನಿ) ಎಂಬಾಕೆಯನ್ನು ಮದುವೆಯಾಗಿದ್ದಾನೆ ಹಾಗೂ ಈ ದಂಪತಿಗಳಿಗೆ ಆಯನಾ ಪೇಸ್ ಎಂಬ ಓರ್ವ ಮಗಳಿದ್ದಾಳೆ.

ವೃತ್ತಿಜೀವನ

ಬದಲಾಯಿಸಿ

ಆರಂಭಿಕ ವೃತ್ತಿಜೀವನ (೧೯೯೧–೧೯೯೭)

ಬದಲಾಯಿಸಿ

ಜೂನಿಯರ್‌‌ US ಓಪನ್‌ ಮತ್ತು ಜೂನಿಯರ್‌‌ ವಿಂಬಲ್ಡನ್‌ ವರ್ಗಗಳಲ್ಲಿನ ಪಟ್ಟಗಳನ್ನು ಗೆಲ್ಲುವ ಮೂಲಕ, ಪೇಸ್‌ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಮುಂಚಿತವಾಗಿಯೇ ಭರವಸೆಯನ್ನು ತೋರಿಸಿದ. ೧೯೯೧ರಲ್ಲಿ ಆತ ವೃತ್ತಿಪರ ಆಟಗಾರನಾಗಿ ಹೊರಹೊಮ್ಮಿದ.[] ಜೂನಿಯರ್‌‌ ಶ್ರೇಯಾಂಕಗಳಲ್ಲಿ ಆತ ವಿಶ್ವದಲ್ಲೇ ಅಗ್ರಗಣ್ಯ ಪಟ್ಟಕ್ಕೆ ಏರಿದ.[] ೧೯೯೨ರಲ್ಲಿ, ಆತ ರಮೇಶ್‌ ಕೃಷ್ಣನ್‌ ಜೊತೆಗೂಡಿ ೧೯೯೨ರ ಬಾರ್ಸಿಲೋನಾ ಒಲಿಂಪಿಕ್ಸ್‌‌‌ನಲ್ಲಿ ಡಬಲ್ಸ್‌‌ ಸ್ಪರ್ಧೆಯ ಕ್ವಾರ್ಟರ್‌ ಫೈನಲ್‌ ಹಂತವನ್ನು ತಲುಪಿದ.[೧೦]

೧೯೯೬ರ ಅಟ್ಲಾಂಟಾ ಒಲಿಂಪಿಕ್ಸ್‌‌ನಲ್ಲಿ ಆತ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡ. ಅಲ್ಲಿ ಆತ ಫರ್ನ್ಯಾಂಡೊ ಮೆಲಿಗೆನಿಯನ್ನು ಬಗ್ಗುಬಡಿಯುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡ. ಅವನ ಈ ಸಾಧನೆಯಿಂದಾಗಿ, ನಾಲ್ಕು ದಶಕಗಳಿಗೂ ಹಿಂದೆ, ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್‌‌‌ನಲ್ಲಿ KD ಜಾಧವ್‌ ಎಂಬಾತ ಕಂಚಿನ ಪದಕವನ್ನು ಗೆದ್ದುಕೊಂಡ ನಂತರದಲ್ಲಿ ಒಂದು ವೈಯಕ್ತಿಕ ಪದಕವನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಎಂಬ ಕೀರ್ತಿಗೆ ಪೇಸ್‌ ಪಾತ್ರನಾದ.[೧೧] ಈ ಸಾಧನೆಯು ಟೆನಿಸ್‌ ಅಂಕಣದ ಮೇಲಿನ ತನ್ನ ಮಹೋನ್ನತ ಪ್ರದರ್ಶನಗಳ ಪೈಕಿ ಒಂದು ಎಂಬುದಾಗಿ ಪೇಸ್‌ ಉಲ್ಲೇಖಿಸಿದ; ಸದರಿ ಪಂದ್ಯದ ಸಮಯದಲ್ಲಿ ಅವನ ಮಣಿಕಟ್ಟು ತೀವ್ರವಾಗಿ ಗಾಯಗೊಂಡಿದ್ದು ಈ ಉಲ್ಲೇಖದ ಹಿಂದಿನ ಭಾಗಶಃ ಕಾರಣವಾಗಿತ್ತು.[೧೨] ಕ್ರೀಡೆಗೆ ಸಂಬಂಧಿಸಿದ ಅತ್ಯುನ್ನತ ಗೌರವವಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರವು ಅವನಿಗೆ ೧೯೯೬ರಲ್ಲಿ ನೀಡಿ ಗೌರವಿಸಿತು.[೧೩] ATP ಸರಣಿಯಲ್ಲಿನ ಅವನ ಮೊದಲ ಯಶಸ್ವೀ ವರ್ಷವು ೧೯೯೩ರಲ್ಲಿ ದಾಖಲಾಯಿತು. ಈ ಅವಧಿಯಲ್ಲಿ ಆತ ಸೆಬಾಸ್ಟಿಯನ್‌ ಲ್ಯಾರಿಯು ಎಂಬಾತನನ್ನು ಜೊತೆಯಾಟಗಾರನನ್ನಾಗಿಸಿಕೊಂಡು US ಓಪನ್‌ ಡಬಲ್ಸ್‌‌ ಪಂದ್ಯದ ಉಪಾಂತ್ಯ ಹಂತವನ್ನು ತಲುಪಿದ. ೧೯೯೪ರಲ್ಲಿ ಮಧ್ಯಸ್ಥವಾದ ಒಂದು ಕ್ರೀಡಾಋತುವಿಗೆ ಸಾಕ್ಷಿಯಾದ ನಂತರ, ಕೆವಿನ್‌ ಉಲಿಯೆಟ್‌ ಜೊತೆಗೂಡಿ ಆತ ೧೯೯೫ರ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ ಹಂತವನ್ನು ತಲುಪಿದ. ೧೯೯೬ರಿಂದ ಆತ ಸಹವರ್ತಿ ಭಾರತೀಯ ಆಟಗಾರನಾದ ಮಹೇಶ್ ಭೂಪತಿಯೊಂದಿಗೆ ಜೊತೆಯಾಟವನ್ನು ಆರಂಭಿಸಿದ; ಇದೊಂದು ವಿಜಯಶಾಲಿ ಸಂಯೋಜನೆ ಎಂಬುದಾಗಿ ನಂತರದಲ್ಲಿ ಸಾಬೀತಾಯಿತು. ಈ ವರ್ಷವು ಅತ್ಯಂತ ಯಶಸ್ವೀ ವರ್ಷವಾಗೇನೂ ಹೊರಹೊಮ್ಮಲಿಲ್ಲ; ವಿಶೇಷವಾಗಿ ಹೇಳುವುದಾದರೆ, ವಿಂಬಲ್ಡನ್‌ನಲ್ಲಿನ ೩೨ ಸಮಾಪ್ತಿಯ ಒಂದು ಸುತ್ತಿನೊಂದಿಗಿನ ಗ್ರಾಂಡ್‌ ಸ್ಲಾಂಗಳು ಅತ್ಯುತ್ತಮವಾಗಿದ್ದವು. ೧೯೯೭ರ ವರ್ಷವು ಪೇಸ್‌ ಮತ್ತು ಭೂಪತಿ ತಂಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಉತ್ತಮವಾದ ವರ್ಷ ಎಂದು ಸಾಬೀತಾಯಿತು. ಈ ವರ್ಷದಲ್ಲಿ US ಓಪನ್‌ನ ಉಪಾಂತ್ಯ ಪಂದ್ಯಗಳಲ್ಲಿ ಹೊರಹೊಮ್ಮಿದ ಅವರ ಸಾಧನೆಯು, ಅವರ ಅತ್ಯುತ್ತಮ ಗ್ರಾಂಡ್‌ ಸ್ಲಾಂ ಫಲಿತಾಂಶ ಎಂಬ ಕೀರ್ತಿಗೆ ಪಾತ್ರವಾಯಿತು. ವರ್ಷದ ಆರಂಭದಲ್ಲಿ ೮೯ರಷ್ಟಿದ್ದ ಪೇಸ್‌ನ ಡಬಲ್ಸ್‌‌ ಶ್ರೇಯಾಂಕವು ವರ್ಷಾಂತ್ಯದ ವೇಳೆಗೆ ೧೪ರ ಮಟ್ಟಕ್ಕೆ ಏರಿತ್ತು.[೧೪]

ಡಬಲ್ಸ್‌‌ನಲ್ಲಿನ ಏಳಿಗೆ (೧೯೯೮–೨೦೦೨)

ಬದಲಾಯಿಸಿ
 
ಲಿಯಾಂಡರ್‌ ಪೇಸ್‌ ಮತ್ತು ಅವನ ಹಿಂದಿನ ಡಬಲ್ಸ್‌‌ ಜೊತೆಗಾರ ಮಹೇಶ್ ಭೂಪತಿ

ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ ಮತ್ತು US ಓಪನ್‌ ಪಂದ್ಯಾವಳಿಗಳಂಥ ೩ ಗ್ರಾಂಡ್‌ ಸ್ಲಾಂಗಳ ಉಪಾಂತ್ಯ ಹಂತಗಳನ್ನು ತಲುಪುವ ಮೂಲಕ, ಲಿಯಾಂಡರ್‌ ಪೇಸ್‌ ಮತ್ತು ಮಹೇಶ್ ಭೂಪತಿ ಜೋಡಿಯ ಡಬಲ್ಸ್‌‌ ತಂಡವು ೧೯೯೮ರಲ್ಲಿ ಪ್ರಬಲವಾಗಿ ಬೆಳೆಯಿತು. ಅದೇ ವರ್ಷದಲ್ಲಿ, ATP ಪ್ರವಾಸದಲ್ಲಿನ ತನ್ನ ಎರಡು ಅತಿದೊಡ್ಡ ಸಿಂಗಲ್ಸ್‌ ಫಲಿತಾಂಶಗಳನ್ನು ಪೇಸ್‌ ನೀಡಿದ್ದ. ನ್ಯೂಪೋರ್ಟ್‌ನಲ್ಲಿ ಒಂದು ATP ಸಿಂಗಲ್ಸ್‌ ಪಟ್ಟವನ್ನು ಗೆಲ್ಲುವ ಮೂಲಕ ಮೊದಲ ಫಲಿತಾಂಶವು ಬಂದರೆ, ನ್ಯೂ ಹೇವನ್‌ ATP ಪಂದ್ಯಾವಳಿಯಲ್ಲಿ ಪೀಟ್‌ ಸ್ಯಾಂಪ್ರಾಸ್‌‌ನನ್ನು ೬-೩, ೬-೪ ಅಂಕಗಳಿಕೆಯ ಮೂಲಕ ಅವನು ಬಗ್ಗುಬಡಿದು ದಾಖಲಿಸಿದ ಫಲಿತಾಂಶವು ಎರಡನೆಯದಾಗಿತ್ತು.[೧೫][೧೬][೧೭][೧೮] ೧೯೯೯ರ ವರ್ಷದಲ್ಲಿ, ಈ ಜೋಡಿಯು ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌‌ನ್ನು ಗೆಲ್ಲುವ ಮೂಲಕ ಎಲ್ಲಾ ೪ ಗ್ರಾಂಡ್‌ ಸ್ಲಾಂಗಳ ಅಂತಿಮ ಪಂದ್ಯಗಳನ್ನು ತಲುಪಿತು; ಈ ಮೂಲಕ ಗ್ರಾಂಡ್‌ ಸ್ಲಾಂ ಸ್ಪರ್ಧೆಯೊಂದರಲ್ಲಿ ಡಬಲ್ಸ್‌‌ ಸ್ಪರ್ಧೆಯೊಂದನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಜೋಡಿ ಎಂಬ ಕೀರ್ತಿ ಇವರಿಗೆ ದಕ್ಕಿತು. ಲೀಸಾ ರೇಮಂಡ್‌ ಜೊತೆಗೂಡಿಯೂ ಆಟವನ್ನಾಡಿದ ಪೇಸ್‌, ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌‌ ಸ್ಪರ್ಧೆಯಲ್ಲಿ ಗೆಲುವನ್ನು ದಾಖಲಿಸಿದ. ಡಬಲ್ಸ್ ವರ್ಗದಲ್ಲಿ ಮೊದಲನೇ ಶ್ರೇಯಾಂಕಕ್ಕೆ ಅವನ ಏರಿಕೆಯಾಗುವುದಕ್ಕೂ ಈ ವರ್ಷವು ಅಂಕಿತವನ್ನು ಹಾಕಿತು.[೧೯] ಇದನ್ನು ಅನುಸರಿಸಿಕೊಂಡು ಬಂದ ವರ್ಷದಲ್ಲಿ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗೆ ಸಂಬಂಧಿಸಿದಂತೆ ಸೆಬಾಸ್ಟಿಯನ್‌ ಲ್ಯಾರಿಯು ಜೊತೆಗೂಡಿ ಹಾಗೂ ಫ್ರೆಂಚ್‌ ಓಪನ್‌ ಪಂದ್ಯಾವಳಿಗೆ ಸಂಬಂಧಿಸಿದಂತೆ ಜಾನ್‌ ಸೀಮರಿಂಕ್‌ ಜೊತೆಗೂಡಿ ಪೇಸ್‌ ಆಟವಾಡಿದ; ಆದರೆ ಎರಡೂ ಸಂದರ್ಭಗಳಲ್ಲಿ ಮೊದಲ ಸುತ್ತಿನಲ್ಲಿಯೇ ಈ ಜೋಡಿಯು ಸೋಲಬೇಕಾಗಿ ಬಂತು. US ಓಪನ್‌ ಪಂದ್ಯಾವಳಿಗಾಗಿ ಪೇಸ್‌ ಮತ್ತೊಮ್ಮೆ ಮಹೇಶ್ ಭೂಪತಿಯೊಂದಿಗೆ ಕೈಜೋಡಿಸಿದನಾದರೂ, ಮತ್ತೊಮ್ಮೆ ಮೊದಲ ಸುತ್ತಿನಲ್ಲಿಯೇ ಸೋಲುಣ್ಣಬೇಕಾಯಿತು. ಸಿಡ್ನಿ ಒಲಿಂಪಿಕ್ಸ್‌‌‌ನಲ್ಲಿ ಈ ಜೋಡಿಯ ಮೇಲೆ ಅತಿ ಹೆಚ್ಚಿನ ಭರವಸೆಗಳನ್ನು ಇರಿಸಲಾಗಿತ್ತಾದರೂ, ಟಾಡ್‌ ವುಡ್‌ಬ್ರಿಜ್‌ ಮತ್ತು ಮಾರ್ಕ್‌ ವುಡ್‌ಫೋರ್ಡ್‌ ಎಂಬಿಬ್ಬರ ಆಸ್ಟ್ರೇಲಿಯನ್‌ ಜೋಡಿಯೊಂದಿಗೆ ಸೆಣಸುವಾಗ, ನಿರಾಶಾದಾಯಕವೆನ್ನುವ ರೀತಿಯಲ್ಲಿ ಪೇಸ್‌-ಭೂಪತಿ ಜೋಡಿಯು ಎರಡನೇ ಸುತ್ತಿನಲ್ಲೇ ನಿರ್ಗಮಿಸಿತು.[೨೦] ಸಿಡ್ನಿ ಒಲಿಂಪಿಕ್ಸ್‌‌ನ ಪ್ರಾರಂಭೋತ್ಸವದಲ್ಲಿ ಭಾರತದ ಧ್ವಜವನ್ನು ಹಿಡಿದು ಸಾಗುವ ಗೌರವಕ್ಕೆ ಪೇಸ್‌ ಪಾತ್ರನಾಗಿದ್ದ.[೨೧] ೨೦೦೧ರಲ್ಲಿ ಫ್ರೆಂಚ್‌ ಓಪನ್‌ ಪಂದ್ಯವನ್ನು ಗೆದ್ದ ಹೊರತಾಗಿಯೂ, ಭೂಪತಿ ಮತ್ತು ಪೇಸ್‌ ಜೋಡಿಯು ಇತರ ೩ ಗ್ರಾಂಡ್‌ ಸ್ಲಾಂಗಳಲ್ಲಿ ಮೊದಲನೇ ಸುತ್ತಿನಲ್ಲೇ ನಿರ್ಗಮಿಸಿತು. ೨೦೦೧ರಲ್ಲಿ ಭಾರತ ಸರ್ಕಾರವು ಪೇಸ್‌ಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿತು.[೨೨] ಬೂಸಾನ್‌ನಲ್ಲಿ ನಡೆದ ೨೦೦೨ರ ಏಷ್ಯನ್‌ ಕ್ರೀಡೆಗಳಲ್ಲಿ ಪೇಸ್‌ ಮತ್ತು ಭೂಪತಿ ಜೋಡಿಯು ಬಂಗಾರದ ಪದಕವನ್ನು ಗೆದ್ದುಕೊಂಡಿತು.[೨೩] ೨೦೦೨ರಲ್ಲಿ ಮೈಕೇಲ್‌ ಹಿಲ್‌ ಜೊತೆಗೂಡಿ ಹಲವಾರು ಪಂದ್ಯಾವಳಿಗಳಲ್ಲಿ ಆಡಿದ ಲಿಯಾಂಡರ್‌, ಮಧ್ಯಸ್ಥವಾದ ಯಶಸ್ಸನ್ನು ದಾಖಲಿಸಿದ.

 
ಲಿಯಾಂಡರ್‌ ಪೇಸ್‌ ಮತ್ತು ಮಾರ್ಟಿನಾ ನವ್ರಾಟಿಲೋವಾ ಮಿಶ್ರ ಡಬಲ್ಸ್‌‌ ಸ್ಪರ್ಧೆಯೊಂದರಲ್ಲಿ ಜೊತೆಯಾಗಿರುವುದು

೨೦೦೩ರಿಂದ–ಇಲ್ಲಿಯವರೆಗೆ

ಬದಲಾಯಿಸಿ

೨೦೦೩ರಿಂದ ಮೊದಲ್ಗೊಂಡು ವರ್ತಮಾನದ ವರ್ಷದ ನಡುವಿನ ಅವಧಿಯಲ್ಲಿ ತನ್ನ ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ಆಟಗಳ ಮೇಲೆ ಪೇಸ್‌ ಅತೀವವಾಗಿ ಗಮನಹರಿಸಿದ್ದಾನೆ. ೨೦೦೩ರಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ ಪಂದ್ಯಾವಳಿಗಳಲ್ಲಿ ಮಾರ್ಟಿನಾ ನವ್ರಾಟಿಲೋವಾ ಜೊತೆಯಾಟದಲ್ಲಿ ಲಿಯಾಂಡರ್‌ ಮಿಶ್ರ ಡಬಲ್ಸ್‌‌ ಸ್ಪರ್ಧೆಗಳನ್ನು ಗೆದ್ದುಕೊಂಡ. ವಿಂಬಲ್ಡನ್‌ನಲ್ಲಿ ಗೆಲುವು ಕಂಡ ಕೆಲ ವಾರಗಳ ನಂತರ, ಪೇಸ್‌ ಓರ್ಲೆಂಡೊನಲ್ಲಿನ M.D. ಆಂಡರ್‌ಸನ್‌ ಕ್ಯಾನ್ಸರ್‌ ಸೆಂಟರ್‌‌ಗೆ ದಾಖಲಿಸಲ್ಪಟ್ಟ; ಅವನ ಮಿದುಳಿನಲ್ಲಿ ಗಡ್ಡೆಯಿರಬಹುದೆಂಬ ಶಂಕೆಯೊಂದಿಗೆ ಅವನನ್ನು ಅಲ್ಲಿಗೆ ಸೇರಿಸಲಾಗಿತ್ತು. ಆತ ನ್ಯೂರೋಸಿಸ್ಟಿಸೆರ್ಕೋಸಿಸ್‌ ಎಂದು ಕರೆಯಲ್ಪಡುವ ಪರೋಪಜೀವಿಯ ಮಿದುಳು ಸೋಂಕಿಗೆ ಈಡಾಗಿದ್ದ ಎಂದು ನಂತರದಲ್ಲಿ ತಿಳಿದುಬಂತು. ಇದಕ್ಕೆ ಸಂಬಂಧಿಸಿದಂತೆ ಉಪಚರಿಸಲ್ಪಡುತ್ತಿರುವಾಗ ಆತ US ಓಪನ್‌ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಬೇಕಾಗಿ ಬಂತು; ಆದರೆ ಆ ವರ್ಷಾಂತ್ಯದೊಳಗೆ ಅವನು ಚೇತರಿಸಿಕೊಂಡ.[೨೪] ೨೦೦೪ರ ಅಥೆನ್ಸ್‌ ಒಲಿಂಪಿಕ್‌ ಆಟಗಳಲ್ಲಿ ಆತ ಮಹೇಶ್ ಭೂಪತಿಯ ಜೊತೆಗೂಡಿ ಆಟವಾಡಿದನಾದರೂ, ಉಪಾಂತ್ಯ ಪಂದ್ಯಗಳ ಹಂತದಲ್ಲಿ ಮತ್ತೊಮ್ಮೆ ಸೋಲೊಪ್ಪಿಕೊಳ್ಳಬೇಕಾಗಿ ಬಂತು. ೨೦೦೬ರಲ್ಲಿ ನಡೆದ U.S. ಓಪನ್‌ ಡಬಲ್ಸ್‌‌ ಸ್ಪರ್ಧೆಯಲ್ಲಿ ಮಾರ್ಟಿನ್‌ ಡ್ಯಾಮ್ ಜೊತೆಗೂಡಿ ಆಡಿದ ಆತ ಗ್ರಾಂಡ್‌ ಸ್ಲಾಂ ಯಶಸ್ಸನ್ನು ದಾಖಲಿಸಿದ. ೨೦೦೬ರಲ್ಲಿ ನಡೆದ ದೋಹಾ ಏಷ್ಯನ್‌ ಕ್ರೀಡೆಗಳಲ್ಲಿ ಭಾರತೀಯ ಟೆನಿಸ್‌ ತಂಡದ ನೇತೃತ್ವವನ್ನು ಪೇಸ್‌ ವಹಿಸಿದ ಹಾಗೂ ಪುರುಷರ ಡಬಲ್ಸ್‌‌ (ಮಹೇಶ್ ಭೂಪತಿ ಜೊತೆಯಾಟದಲ್ಲಿ) ಮತ್ತು ಮಿಶ್ರ ಡಬಲ್ಸ್‌‌ (ಸಾನಿಯಾ ಮಿರ್ಜಾ ಜೊತೆಯಾಟದಲ್ಲಿ) ವರ್ಗಗಳಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದುಕೊಂಡ.[೨೫][೨೬] ೨೦೦೫ ಮತ್ತು ೨೦೦೭ರ ನಡುವೆ, ವಿಶ್ವದಲ್ಲಿನ ಅಗ್ರಗಣ್ಯ ೨೦ ಆಟಗಾರರ ಪಟ್ಟಿಯಲ್ಲಿ ತನ್ನ ಡಬಲ್ಸ್‌‌ ಶ್ರೇಯಾಂಕವನ್ನು ಪೇಸ್‌ ಕಾಯ್ದುಕೊಂಡಿದ್ದಾನೆ.[೨೭][೨೮] ೨೦೦೭ರ ಮೇ ತಿಂಗಳ ವೇಳೆಗೆ ಇದ್ದಂತೆ, ಇಂಡಿಯನ್‌ ವೆಲ್ಸ್‌‌ನಲ್ಲಿನ ATP ಮಾಸ್ಟರ್ಸ್‌ ಸರಣಿ ಮತ್ತು ರೋಟರ್‌ಡ್ಯಾಮ್‌ನಲ್ಲಿನ ವಿಜಯಗಳಿಂದಾಗಿ ಪೇಸ್‌ ತನ್ನ ಡಬಲ್ಸ್‌ ಗೆಲುವಿನಂಕಗಳ ಮೊತ್ತವನ್ನು ೩೮ಕ್ಕೆ ಮುಟ್ಟಿಸಿದ್ದಾನೆ.[೨೯][೩೦][೩೧] ೨೦೦೮ರ ಬೀಜಿಂಗ್‌ ಒಲಿಂಪಿಕ್ಸ್‌‌‌ನಲ್ಲಿನ ಪುರುಷರ ಡಬಲ್ಸ್‌ ವರ್ಗದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್ ಭೂಪತಿ ಭಾಗವಹಿಸಿದರು. ಆದರೆ ರೋಜರ್‌‌ ಫೆಡರರ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕಾ [೩೨] ಜೋಡಿಯು ಪೇಸ್‌-ಭೂಪತಿ ಜೋಡಿಯನ್ನು ಕ್ವಾರ್ಟರ್‌-ಫೈನಲ್‌ ಪಂದ್ಯಗಳ ಹಂತದಲ್ಲಿಯೇ ಸೋಲಿಸಿ ಹೊರಹಾಕಿತು ಮತ್ತು ಪುರುಷರ ಡಬಲ್ಸ್‌‌ ಬಂಗಾರ ಪದಕವನ್ನು [೩೩] ಗೆಲ್ಲುವಲ್ಲಿ ಯಶಸ್ಸು ಕಂಡಿತು. ನಂತರ ೨೦೦೮ರಲ್ಲಿ, ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಅವನು ೨೦೦೮ರ US ಓಪನ್‌ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದುಕೊಂಡ. ೨೦೦೯ರಲ್ಲಿ, ಲ್ಯೂಕಾಸ್‌ ಡ್ಲೌಹಿ ಜೊತೆಯಾಟದಲ್ಲಿ ಅವನು ಫ್ರೆಂಚ್‌ ಓಪನ್‌ ಮತ್ತು US ಓಪನ್‌ ಪುರುಷರ ಡಬಲ್ಸ್‌‌ ಪಟ್ಟಗಳನ್ನು ಗೆದ್ದುಕೊಂಡ; ಅಷ್ಟೇ ಅಲ್ಲ, US ಓಪನ್‌ ಪಂದ್ಯಾವಳಿಯ ಮಿಶ್ರ ಡಬಲ್ಸ್‌‌ನ ಅಂತಿಮ ಪಂದ್ಯದಲ್ಲಿ ಅವನು ಉಪಾಂತ-ವಿಜಯಿಯಾಗಿ ಹೊರಹೊಮ್ಮಿದ. ೨೦೧೦ ಆಸ್ಟ್ರೇಲಿಯನ್‌ ಓಪನ್‌ – ಮಿಶ್ರ ಡಬಲ್ಸ್‌‌ ಪಟ್ಟವನ್ನು ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಗೆಲ್ಲುವ ಮೂಲಕ, ಆತ ೨೦೧೦ರ ಋತುವನ್ನು ಉತ್ತಮ ಫಾರಂನಲ್ಲಿ ಶುರುಮಾಡಿದ. ಇದು ಸದರಿ ಜೋಡಿಯ ೩ನೇ ಅನುಕ್ರಮಿಕ ಗ್ರಾಂಡ್‌ ಸ್ಲಾಂ ಅಂತಿಮ ಪಂದ್ಯವಾಗಿತ್ತು ಮತ್ತು ಒಟ್ಟಾರೆಯಾಗಿ ೪ನೇ ಪಂದ್ಯವಾಗಿತ್ತು. ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ೨೦೧೦ರ ವಿಂಬಲ್ಡನ್‌ನಲ್ಲಿ ಗೆಲುವು ಸಾಧಿಸಿರುವುದರಿಂದಾಗಿ ಪೇಸ್‌ ಭಾರತದ ಅಗ್ರಗಣ್ಯ ಗ್ರಾಂಡ್‌ ಸ್ಲಾಂ ವಿಜಯಿ ಎನಿಸಿಕೊಂಡಿದ್ದಾನೆ. ೨೦೧೨ರ ವರ್ಷದಲ್ಲಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಸ್ತೆಪಾನಿಕ್ ಜೊತೆಗೂಡಿ ಗೆದ್ದಿದ್ದಾನೆ ಮತ್ತು ತನ್ಮೂಲಕ ಒಟ್ಟು ೧೨ ಗ್ರಾಂಡ್‌ ಸ್ಲಾಂ ಪಟ್ಟಗಳನ್ನು ಹೊಂದಿರುವ ತನ್ನ ಮಾಜಿ-ಡಬಲ್ಸ್‌‌ ಜೊತೆಯಾಟಗಾರ ಮಹೇಶ್ ಭೂಪತಿಗಿಂತ ಮುಂದಿದ್ದಾನೆ.

ಡೇವಿಸ್‌ ಕಪ್‌ ವೃತ್ತಿಜೀವನ

ಬದಲಾಯಿಸಿ

ಕೇವಲ ೧೬ನೇ ವರ್ಷದಷ್ಟು ಚಿಕ್ಕ ವಯಸ್ಸಿನಲ್ಲಿಯೇ ಲಿಯಾಂಡರ್‌ ಪೇಸ್‌ ತನ್ನ ಡೇವಿಸ್‌ ಕಪ್‌ ವೃತ್ತಿಜೀವನವನ್ನು ೧೯೯೦ರಲ್ಲಿ ಆರಂಭಿಸಿದ. ಈ ಅವಧಿಯಲ್ಲಿ ಡಬಲ್ಸ್‌‌ ವರ್ಗದಲ್ಲಿ ಜೀಶನ್‌ ಆಲಿಯೊಂದಿಗೆ ಜೊತೆಯಾಟವನ್ನು ಪ್ರಾರಂಭಿಸಿದ ಪೇಸ್‌, ಒಂದು ತ್ರಾಸದಾಯಕವಾದ ೫ ಸೆಟ್ಟುಗಳ ಮುಖಾಮುಖಿಯಲ್ಲಿ ಜಪಾನಿಯರ ತಂಡವನ್ನು ಸೋಲಿಸಿದ. ೨೦೦೭ರ ಮೇ ತಿಂಗಳ ವೇಳೆಗೆ ಇದ್ದಂತೆ, ಒಟ್ಟಾರೆಯಾಗಿ ಆತ ೮೧–೩೦ರಷ್ಟು ಪ್ರಮಾಣದಲ್ಲಿನ ಒಂದು ದಾಖಲೆಯನ್ನು ಹೊಂದಿದ್ದು, ತನ್ನ ದೇಶಕ್ಕೆ ಸಂಬಂಧಿಸಿದಂತಿರುವ ಅಗ್ರಗಣ್ಯ ಡೇವಿಸ್‌ ಕಪ್‌ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ.[೩೪][೩೫] ೧೯೯೧–೧೯೯೮ರ ಅವಧಿಯಲ್ಲಿ ವಿಶ್ವ ಗುಂಪನ್ನು ತಲುಪಿದ ಭಾರತೀಯ ಡೇವಿಸ್‌ ಕಪ್‌ ತಂಡದಲ್ಲಿ ಅವನು ಒಂದು ಪ್ರಮುಖ ಪಾತ್ರವನ್ನು ವಹಿಸಿದ. ೧೯೯೩ರ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಸ್ವಿಜರ್‌ಲೆಂಡ್‌ ಮತ್ತು ಫ್ರಾನ್ಸ್ ತಂಡಗಳ ವಿರುದ್ಧ ವಿಜಯಗಳನ್ನು ದಾಖಲಿಸುವುದರೊಂದಿಗೆ ಉಪಾಂತ್ಯದ ಹಂತವನ್ನು ತಲುಪಿದ ಭಾರತೀಯ ಡೇವಿಸ್‌ ಕಪ್‌ ತಂಡದಲ್ಲಿ ಅವನು ಒಂದು ಭಾಗವಾಗಿದ್ದ; ಆದರೆ ಭಾರತ ತಂಡವು ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಸೋಲಬೇಕಾಯಿತು. ಸಿಂಗಲ್ಸ್‌ ವಿಭಾಗದಲ್ಲಿ ಅವನು ದಾಖಲಿಸಿದ ಪ್ರಮುಖ ವಿಜಯಗಳಲ್ಲಿ ಇವು ಸೇರಿವೆ: ಫ್ರೆಂಚ್‌ ದ್ವಯರಾದ ಆರ್ನೌಡ್‌ ಬೋಷ್‌ ಮತ್ತು ಹೆನ್ರಿ ಲೆಕೊಂಟೆ ವಿರುದ್ಧ ೧೯೯೩ರಲ್ಲಿ ಫ್ರೆಜಸ್‌ ಫ್ರಾನ್ಸ್‌ನಲ್ಲಿನ ವಿಜಯ, ೧೯೯೪ರಲ್ಲಿ ವೇಯ್ನ್‌ ಫೆರೀರಾ ವಿರುದ್ಧದ ವಿಜಯ, ೧೯೯೫ರಲ್ಲಿ ಭಾರತವು ಕ್ರೊವೇಷಿಯಾವನ್ನು ಸೋಲಿಸಿದಾಗ ಗೋರನ್‌ ಇವಾನಿಸೆವಿಕ್‌ ವಿರುದ್ಧದ ವಿಜಯ, ೧೯೯೫ರಲ್ಲಿ ನೆದರ್ಲೆಂಡ್ಸ್‌‌ನ್ನು ಸೋಲಿಸಿದಾಗ ಜಾನ್‌ ಸೀಮರಿಂಕ್‌ ವಿರುದ್ಧ ದಾಖಲಾದ ವಿಜಯ, ೧೯೯೭ರಲ್ಲಿ ಜಿರೀ ನೊವಾಕ್‌ ವಿರುದ್ಧದ ವಿಜಯ.[೩೬].[೩೭] ಮಹೇಶ್ ಭೂಪತಿಯೊಂದಿಗೆ ಜೊತೆಗೂಡಿದ ಅವನು ೧೯೯೫ರಲ್ಲಿ ಕ್ರೊವೇಷಿಯಾದ ಹಿರ್ಸ್‌ಜೋನ್‌ ಮತ್ತು ಇವಾನಿಸೆವಿಕ್‌ ಜೋಡಿಯನ್ನೂ, ೧೯೯೭ರಲ್ಲಿ ಝೆಕ್‌ ಗಣರಾಜ್ಯದ ಮಾರ್ಟಿನ್‌ ಡ್ಯಾಮ್‌ ಮತ್ತು ಪೆಟ್ರ್‌‌ ಕೋರ್ಡಾ ಜೋಡಿಯನ್ನೂ, ೧೯೯೭ರಲ್ಲಿ ಚಿಲಿ ದೇಶದ ನಿಕೋಲಸ್‌ ಮಾಸ್ಸು ಮತ್ತು ಮಾರ್ಸೆಲೊ ರಯೋಸ್‌ ಜೋಡಿಯನ್ನೂ, ೧೯೯೮ರಲ್ಲಿ ಬ್ರಾಡ್‌ ಮತ್ತು ಟಿಮ್‌ ಹೆನ್‌ಮನ್‌‌ ಜೋಡಿಯನ್ನೂ ಹಾಗೂ ೨೦೦೫ರಲ್ಲಿ ಸ್ವೀಡನ್‌ನ ಸೈಮನ್‌ ಆಸ್ಪೆಲಿನ್‌ ಮತ್ತು ಜೋನಾಸ್‌ ಜೋರ್ಕ್‌ಮನ್‌ ಜೋಡಿಯನ್ನೂ ಸೋಲಿಸಿದ. ೨೦೦೭ರಲ್ಲಿನ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಲಿಯಾಂಡರ್‌ ೩ ವಿಜಯಗಳನ್ನು (೨ ಡಬಲ್ಸ್‌‌ ೧ ಸಿಂಗಲ್ಸ್‌) ತನ್ನ ಖಾತೆಗೆ ಸೇರಿಸಿಕೊಂಡಿದ್ದಾನೆ ಮತ್ತು ಇದರಲ್ಲಿ ಅವನು ಸೋಲನ್ನು ಕಂಡಿಲ್ಲ‌.

ವೃತ್ತಿಜೀವನದ ಪ್ರಮುಖ ವಿಜಯಗಳು

ಬದಲಾಯಿಸಿ

ಸಿಂಗಲ್ಸ್‌ ಪಟ್ಟಗಳು

ಬದಲಾಯಿಸಿ
ಶಿರೋನಾಮೆ (ಸಿಂಗಲ್ಸ್‌)
ಗ್ರಾಂಡ್‌ ಸ್ಲಾಂ (0)
ಟೆನಿಸ್‌ ಮಾಸ್ಟರ್ಸ್‌ ಕಪ್‌ (0)
ATP ಮಾಸ್ಟರ್ಸ್‌ ಸರಣಿ (0)
ATP ಪ್ರವಾಸ (1)
ಕ್ರ.ಸಂ. ದಿನಾಂಕ ಪಂದ್ಯಾವಳಿ ಮೇಲ್ಮೈ ಅಂತಿಮ ಪಂದ್ಯದಲ್ಲಿನ ಪ್ರತಿಸ್ಪರ್ಧಿ ಅಂತಿಮ ಪಂದ್ಯದಲ್ಲಿನ ಅಂಕ
1. ಜುಲೈ 6, 1998 ನ್ಯೂಪೋರ್ಟ್‌, ರೋಡ್‌ ದ್ವೀಪ, U.S. ಹುಲ್ಲಿನ ಅಂಕಣ   ನೆವಿಲ್ಲೆ ಗಾಡ್ವಿನ್‌ 6–3, 6–2

ಪುರುಷರ ಡಬಲ್ಸ್‌‌ ಪಟ್ಟಗಳು (44)

ಬದಲಾಯಿಸಿ
ಶಿರೋನಾಮೆ (ಡಬಲ್ಸ್‌‌)
ಗ್ರಾಂಡ್‌ ಸ್ಲಾಂ (6)
ಟೆನಿಸ್‌ ಮಾಸ್ಟರ್ಸ್‌ ಕಪ್‌ /
ATP ವರ್ಲ್ಡ್‌ ಟೂರ್‌‌ ಅಂತಿಮ ಪಂದ್ಯಗಳು (0)
ATP ಮಾಸ್ಟರ್ಸ್‌ ಸರಣಿ /
ATP ವರ್ಲ್ಡ್‌ ಟೂರ್‌ ಮಾಸ್ಟರ್ಸ್‌ 1000 (9)
ATP ಅಂತರರಾಷ್ಟ್ರೀಯ ಸರಣಿ ಬಂಗಾರ /
ATP ವರ್ಲ್ಡ್‌ ಟೂರ್‌‌ 500 ಸರಣಿ (5)
ATP ಅಂತರರಾಷ್ಟ್ರೀಯ ಸರಣಿ /
ATP ವರ್ಲ್ಡ್‌ ಟೂರ್‌‌ 250 ಸರಣಿ (24)
ಕ್ರ.ಸಂ. ದಿನಾಂಕ ಪಂದ್ಯಾವಳಿ ಮೇಲ್ಮೈ ಜೊತೆಯಾಟಗಾರ ಅಂತಿಮ ಪಂದ್ಯದಲ್ಲಿನ ಪ್ರತಿಸ್ಪರ್ಧಿ ಅಂತಿಮ ಪಂದ್ಯದಲ್ಲಿನ ಅಂಕ
1. ಏಪ್ರಿಲ್ 7, 1997. ಚೆನ್ನೈ, ಭಾರತ ಗಡಸು ಅಂಕಣ   ಮಹೇಶ್ ಭೂಪತಿ   ಒಲೆಗ್‌ ಒಗೊರೊಡೊವ್‌
  ಇಯಾಲ್‌ ರಾನ್‌
7–6, 7–5
2. ಏಪ್ರಿಲ್ 28, 1997. ಪ್ರಾಗ್ವೆ, ಝೆಕ್‌ ಗಣರಾಜ್ಯ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಪೆಟ್ರ್‌‌ ಲಕ್ಸಾ
  ಡೇವಿಡ್‌ ಸ್ಕೋಚ್‌
6–1, 6–1
3. ಜುಲೈ 28, 1997. ಮಾಂಟ್ರಿಯಲ್‌, ಕೆನಡಾ ಗಡಸು ಅಂಕಣ   ಮಹೇಶ್ ಭೂಪತಿ   ಸೆಬಾಸ್ಟಿಯನ್‌ ಲ್ಯಾರಿಯು
  ಅಲೆಕ್ಸ್‌ ಒ'ಬ್ರಿಯೆನ್‌
7–6, 6–3
4. ಆಗಸ್ಟ್‌‌ 11, 1997 ನ್ಯೂ ಹೇವನ್‌, ಕನೆಕ್ಟಿಕಟ್‌, U.S. ಗಡಸು ಅಂಕಣ   ಮಹೇಶ್ ಭೂಪತಿ   ಸೆಬಾಸ್ಟಿಯನ್‌ ಲ್ಯಾರಿಯು
  ಅಲೆಕ್ಸ್‌ ಒ'ಬ್ರಿಯೆನ್‌
6–4, 6–7, 6–2
5. ಸೆಪ್ಟೆಂಬರ್ 29, 1998 ಬೀಜಿಂಗ್‌, ಚೀನಾ ಗಡಸು ಅಂಕಣ (I)   ಮಹೇಶ್ ಭೂಪತಿ   ಅಲೆಕ್ಸ್‌ ಒ'ಬ್ರಿಯೆನ್‌
 ಜಿಮ್‌ ಕುರಿಯರ್‌
7–5, 7–6
6. ಅಕ್ಟೋಬರ್ 6, 1997 ಸಿಂಗಪೂರ್‌‌ ನೆಲಹಾಸು (I)   ಮಹೇಶ್ ಭೂಪತಿ  ರಿಕ್‌ ಲೀಚ್‌
  ಜೋನಾಥನ್‌ ಸ್ಟಾರ್ಕ್‌
6–4, 6–4
7. ಜನವರಿ 5, 1998 ದೋಹಾ, ಕತಾರ್‌‌ ಗಡಸು ಅಂಕಣ   ಮಹೇಶ್ ಭೂಪತಿ   ಒಲಿವಿಯರ್‌‌ ಡೆಲಾಯ್ಟ್ರೆ
 ಫ್ಯಾಬ್ರಿಸ್‌ ಸ್ಯಾಂಟೊರೊ
6–4, 3–6, 6–4
8. ಫೆಬ್ರುವರಿ 9, 1998 ದುಬೈ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗಡಸು ಅಂಕಣ   ಮಹೇಶ್ ಭೂಪತಿ   ಡೊನಾಲ್ಡ್‌‌ ಜಾನ್ಸನ್‌
  ಫ್ರಾನ್ಸಿಸ್ಕೊ ಮೊಂಟಾನಾ
6–2, 7–5
9. ಏಪ್ರಿಲ್ 6, 1998. ಚೆನ್ನೈ, ಭಾರತ ಗಡಸು ಅಂಕಣ   ಮಹೇಶ್ ಭೂಪತಿ   ಒಲಿವಿಯರ್‌‌ ಡೆಲಾಯ್ಟ್ರೆ
  ಮ್ಯಾಕ್ಸ್‌‌ ಮಿರ್‌ನ್ಯಿ
6–7, 6–3, 6–2
10. ಮೇ 11, 1998 ರೋಮ್‌, ಇಟಲಿ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಎಲಿಸ್‌ ಫೆರೀರಾ
  ರಿಕ್‌ ಲೀಚ್‌
6–4, 4–6, 7–6
11. ಅಕ್ಟೋಬರ್ 5, 1998 ಷಾಂಘೈ ನೆಲಹಾಸು (I)   ಮಹೇಶ್ ಭೂಪತಿ   ಟಾಡ್‌ ವುಡ್‌ಬ್ರಿಜ್‌
  ಮಾರ್ಕ್‌ ವುಡ್‌ಫೋರ್ಡ್‌
6–4, 6–7, 7–6
12. ನವೆಂಬರ್‌‌ 2, 1998 ಪ್ಯಾರಿಸ್‌, ಫ್ರಾನ್ಸ್‌‌ ನೆಲಹಾಸು (I)   ಮಹೇಶ್ ಭೂಪತಿ   ಜಾಕೊ ಎಲ್ಟಿಂಗ್‌
  ಪಾಲ್‌ ಹಾರ್‌ಹ್ಯೂಯಿಸ್‌
6–4, 6–2
13. ಏಪ್ರಿಲ್ 5, 1999. ಚೆನ್ನೈ, ಭಾರತ ಗಡಸು ಅಂಕಣ   ಮಹೇಶ್ ಭೂಪತಿ   ವೇಯ್ನ್‌ ಬ್ಲ್ಯಾಕ್‌
  ನೆವಿಲ್ಲೆ ಗಾಡ್ವಿನ್‌
4–6, 7–5, 6–4
14. ಮೇ 24, 1999 ಫ್ರೆಂಚ್‌ ಓಪನ್‌ , ಫ್ರಾನ್ಸ್‌‌ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಗೋರನ್‌ ಇವಾನಿಸೆವಿಕ್‌
  ಜೆಫ್‌ ಟರಾಂಗೊ
6–2, 7–5
15. ಜೂನ್ 21, 1999 ವಿಂಬಲ್ಡನ್‌ , ಯುನೈಟೆಡ್‌ ಕಿಂಗ್‌ಡಂ ಹುಲ್ಲಿನ ಅಂಕಣ   ಮಹೇಶ್ ಭೂಪತಿ   ಪಾಲ್‌ ಹಾರ್‌ಹ್ಯೂಯಿಸ್‌
  ಜರೇಡ್‌ ಪಾಮರ್‌
6–7, 6–3, 6–4, 7–6
16. ಜುಲೈ 5, 1999 ನ್ಯೂಪೋರ್ಟ್‌, ರೋಡ್‌ ದ್ವೀಪ, U.S. ಹುಲ್ಲಿನ ಅಂಕಣ   ವೇಯ್ನ್‌ ಅರ್ಥರ್ಸ್‌   ಸಾರ್ಗಿಸ್‌ ಸಾರ್ಗ್‌ಸಿಯಾನ್‌
  ಕ್ರಿಸ್‌ ವುಡ್ರಫ್‌
6–7, 7–6, 6–3
17. ಮೇ 1, 2000 ಒರ್ಲ್ಯಾಂಡೊ, ಫ್ಲೋರಿಡಾ, U.S. ಮಣ್ಣಿನ ಅಂಕಣ   ಜಾನ್‌ ಸೀಮರಿಂಕ್‌   ಜಸ್ಟಿನ್‌ ಗಿಮೆಲ್‌ಸ್ಟೋಬ್‌
  ಸೆಬಾಸ್ಟಿಯನ್‌ ಲ್ಯಾರಿಯು
6–3, 6–4
18. ಅಕ್ಟೋಬರ್ 9, 2000 ಟೊಕಿಯೊ, ಜಪಾನ್‌ ಗಡಸು ಅಂಕಣ   ಮಹೇಶ್ ಭೂಪತಿ   ಮೈಕೇಲ್‌ ಹಿಲ್‌
  ಜೆಫ್‌ ಟರಾಂಗೊ
6–4, 6–7, 6–3
19. ಏಪ್ರಿಲ್ 23, 2001. ಅಟ್ಲಾಂಟಾ, U.S. ಮಣ್ಣಿನ ಅಂಕಣ   ಮಹೇಶ್ ಭೂಪತಿ   ರಿಕ್‌ ಲೀಚ್‌
  ಡೇವಿಡ್‌ ಮ್ಯಾಕ್‌ಫೆರ್ಸನ್‌
6–3, 7–6
20. ಏಪ್ರಿಲ್ 30, 2001. ಹೂಸ್ಟನ್‌, ಟೆಕ್ಸಾಸ್‌, U.S. ಮಣ್ಣಿನ ಅಂಕಣ   ಮಹೇಶ್ ಭೂಪತಿ   ಕೆವಿನ್‌ ಕಿಮ್‌
  ಜಿಮ್‌ ಥಾಮಸ್‌
7–6, 6–2
21. ಮೇ 28, 2001 ಫ್ರೆಂಚ್‌ ಓಪನ್‌ , ಫ್ರಾನ್ಸ್‌‌ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಪೆಟ್ರ್‌‌ ಪಾಲಾ
  ಪಾವೆಲ್‌ ವಿಜ್‌ನರ್‌
7–6, 6–3
22. ಆಗಸ್ಟ್‌‌ 6, 2001 ಸಿನ್‌ಸಿನಾಟಿ, ಓಹಿಯೊ, U.S. ಗಡಸು ಅಂಕಣ   ಮಹೇಶ್ ಭೂಪತಿ   ಮಾರ್ಟಿನ್‌ ಡ್ಯಾಮ್‌
  ಡೇವಿಡ್‌ ಪ್ರಿನೋಸಿಲ್‌
7–6, 6–3
23. ಡಿಸೆಂಬರ್‌ 31, 2001 ಚೆನ್ನೈ, ಭಾರತ ಗಡಸು ಅಂಕಣ   ಮಹೇಶ್ ಭೂಪತಿ   ಟೊಮಾಸ್‌ ಸಿಬ್ಯುಲೆಕ್‌
  ಒಟಾ ಫುಕಾರೆಕ್‌
5–7, 6–2, 7–5
24. ಏಪ್ರಿಲ್ 29, 2002. ಮೆಜೋರ್ಕಾ, ಸ್ಪೇನ್‌ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಜೂಲಿಯನ್‌ ನೋಲೆ
  ಮೈಕೇಲ್‌ ಕೋಲ್‌ಮನ್‌
6–2, 6–4
25. ಫೆಬ್ರುವರಿ 24, 2003 ದುಬೈ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗಡಸು ಅಂಕಣ   ಡೇವಿಡ್‌ ರಿಕ್ಲ್‌‌   ವೇಯ್ನ್‌ ಬ್ಲ್ಯಾಕ್‌
  ಕೆವಿನ್‌ ಉಲಿಯೆಟ್‌
6–3, 6–0
26. ಮಾರ್ಚ್‌ 3, 2003 ಡೆಲ್ರೆ ಬೀಚ್‌, ಫ್ಲೋರಿಡಾ, U.S. ಗಡಸು ಅಂಕಣ   ನೆನಾಡ್‌ ಝಿಮೊನ್ಜಿಚ್‌‌   ರೇಮೋನ್‌ ಸ್ಲೂಟರ್‌
  ಮಾರ್ಟಿನ್‌ ವೆರ್ಕರ್ಕ್‌
7–5, 3–6, 7–5
27. ಜುಲೈ 7, 2003. ಜಿಸ್ಟಾಡ್‌, ಸ್ವಿಜರ್‌ಲೆಂಡ್‌ ಮಣ್ಣಿನ ಅಂಕಣ   ಡೇವಿಡ್‌ ರಿಕ್ಲ್‌‌   ಫ್ರಾಂಟಿಸೆಕ್‌ ಸೆರ್ಮಾಕ್‌
  ಲಿಯೋಸ್‌ ಫ್ರೀಡ್ಲ್‌
6–3, 6–3
28. ಜೂನ್ 7, 2004 ಹ್ಯಾಲೆ, ಜರ್ಮನಿ ಹುಲ್ಲಿನ ಅಂಕಣ   ಡೇವಿಡ್‌ ರಿಕ್ಲ್‌‌   ಟೊಮಾಸ್‌ ಸಿಬ್ಯುಲೆಕ್‌
  ಪೆಟ್ರ್‌‌ ಪಾಲಾ
6–2, 7–5
29. ಜುಲೈ 5, 2004. ಜಿಸ್ಟಾಡ್‌, ಸ್ವಿಜರ್‌ಲೆಂಡ್‌ ಮಣ್ಣಿನ ಅಂಕಣ   ಡೇವಿಡ್‌ ರಿಕ್ಲ್‌‌   ಮಾರ್ಕ್‌ ರೋಸೆಟ್‌
  ಸ್ಟಾನಿಸ್ಲಾಸ್‌ ವಾವ್ರಿಂಕಾ
6–4, 6–2
30. ಜುಲೈ 26, 2004. ಟೊರೊಂಟೊ, ಕೆನಡಾ ಗಡಸು ಅಂಕಣ   ಮಹೇಶ್ ಭೂಪತಿ   ಜೋನಾಸ್‌ ಜೋರ್ಕ್‌ಮನ್‌
  ಮ್ಯಾಕ್ಸ್‌‌ ಮಿರ್‌ನ್ಯಿ
6–4, 6–2
31. ಸೆಪ್ಟೆಂಬರ್ 13, 2004 ಡೆಲ್ರೆ ಬೀಚ್‌, ಫ್ಲೋರಿಡಾ, U.S. ಗಡಸು ಅಂಕಣ   ರಾಡೆಕ್‌ ಸ್ಟೆಪಾನೆಕ್‌   ಗ್ಯಾಸ್ಟನ್‌ ಎಟ್ಲಿಸ್‌
  ಮಾರ್ಟಿನ್‌ ರೋಡ್ರಿಗ್ಜ್‌
6–0, 6–3
32. ಏಪ್ರಿಲ್ 11, 2005. ಮಾಂಟೆ ಕಾರ್ಲೋ, ಮೊನಾಕೊ ಮಣ್ಣಿನ ಅಂಕಣ   ನೆನಾಡ್‌ ಝಿಮೊನ್ಜಿಚ್‌‌   ಬಾಬ್‌ ಬ್ರಯಾನ್‌
  ಮೈಕ್‌ ಬ್ರಯಾನ್‌
W/O
33. ಏಪ್ರಿಲ್ 18, 2005. ಬಾರ್ಸಿಲೋನಾ ಮಣ್ಣಿನ ಅಂಕಣ   ನೆನಾಡ್‌ ಝಿಮೊನ್ಜಿಚ್‌‌   ಫೆಲಿಸಿಯಾನೊ ಲೋಪೆಜ್‌
  ರಾಫೆಲ್‌ ನಡಾಲ್‌
6–3, 6–3
34. ಸೆಪ್ಟೆಂಬರ್ 26, 2005 ಬ್ಯಾಂಕಾಕ್‌ ಗಡಸು ಅಂಕಣ (I)   ಪಾಲ್‌ ಹಾನ್ಲೆ   ಜೋನಾಥನ್‌ ಎರ್ಲಿಚ್‌
  ಆಂಡಿ ರಾಮ್‌
6–7, 6–1, 6–2
35. ಜೂನ್ 19, 2006 'ಎಸ್‌-ಹೆರ್ಟೋಜೆನ್‌ಬೋಷ್‌, ನೆದರ್ಲೆಂಡ್ಸ್‌ ಹುಲ್ಲಿನ ಅಂಕಣ   ಮಾರ್ಟಿನ್‌ ಡ್ಯಾಮ್‌   ಆರ್ನೌಡ್‌ ಕ್ಲೆಮೆಂಟ್‌
  ಕ್ರಿಸ್‌ ಹಗಾರ್ಡ್‌
6–1, 7–6
36. ಆಗಸ್ಟ್‌‌ 28, 2006 US ಓಪನ್‌ , U.S. ಗಡಸು ಅಂಕಣ   ಮಾರ್ಟಿನ್‌ ಡ್ಯಾಮ್‌   ಜೋನಾಸ್‌ ಜೋರ್ಕ್‌ಮನ್‌
  ಮ್ಯಾಕ್ಸ್‌‌ ಮಿರ್‌ನ್ಯಿ
6–7, 6–4, 6–3
37. ಫೆಬ್ರುವರಿ 19, 2007 ರೋಟರ್‌ಡ್ಯಾಮ್‌, ನೆದರ್ಲೆಂಡ್ಸ್‌ ಗಡಸು ಅಂಕಣ (I)   ಮಾರ್ಟಿನ್‌ ಡ್ಯಾಮ್‌   ಆಂಡ್ರೀ ಪಾವೆಲ್‌
  ಅಲೆಕ್ಸಾಂಡರ್‌ ವಾಸ್ಕೆ
6–3, 6–7, [10–7]
38. ಮಾರ್ಚ್‌ 5, 2007 ಇಂಡಿಯನ್‌ ವೆಲ್ಸ್‌‌, ಕ್ಯಾಲಿಫೋರ್ನಿಯಾ, U.S. ಗಡಸು ಅಂಕಣ   ಮಾರ್ಟಿನ್‌ ಡ್ಯಾಮ್‌   ಜೋನಾಥನ್‌ ಎರ್ಲಿಚ್‌
  ಆಂಡಿ ರಾಮ್‌
6–4, 6–4
39. ಸೆಪ್ಟೆಂಬರ್ 21, 2008 ಬ್ಯಾಂಕಾಕ್‌, ಥೈಯ್ಲೆಂಡ್ ಗಡಸು ಅಂಕಣ (I)   ಲ್ಯೂಕಾಸ್‌ ಡ್ಲೌಹಿ   ಸ್ಕಾಟ್‌ ಲಿಪ್ಸ್ಕಿ
  ಡೇವಿಡ್‌ ಮಾರ್ಟಿನ್‌
6–4, 7–6(4)
40. ಜೂನ್ 6, 2009 ಫ್ರೆಂಚ್‌ ಓಪನ್‌ , ಫ್ರಾನ್ಸ್‌‌ ಮಣ್ಣಿನ ಅಂಕಣ ಟೆಂಪ್ಲೇಟು:Country data Czech ಲ್ಯೂಕಾಸ್‌ ಡ್ಲೌಹಿ   ವೆಸ್ಲೆ ಮೂಡೀ
  ಡಿಕ್‌ ನೋರ್ಮನ್‌
3–6, 6–3, 6–2
41. ಸೆಪ್ಟೆಂಬರ್ 13, 2009 US ಓಪನ್‌ , U.S. ಗಡಸು ಅಂಕಣ ಟೆಂಪ್ಲೇಟು:Country data Czech ಲ್ಯೂಕಾಸ್‌ ಡ್ಲೌಹಿ   ಮಹೇಶ್ ಭೂಪತಿ
  ಮಾರ್ಕ್‌ ನೋಲ್ಸ್‌
3–6, 6–3, 6–2
42. 3 ಏಪ್ರಿಲ್ 2010 ಮಿಯಾಮಿ, ಫ್ಲೋರಿಡಾ, U.S. ಗಡಸು ಅಂಕಣ ಟೆಂಪ್ಲೇಟು:Country data Czech ಲ್ಯೂಕಾಸ್‌ ಡ್ಲೌಹಿ   ಮಹೇಶ್ ಭೂಪತಿ
  ಮ್ಯಾಕ್ಸ್‌‌ ಮಿರ್‌ನ್ಯಿ
6–2, 7–5
43. 17 ಅಕ್ಟೋಬರ್ 2010 ಷಾಂಘೈ, ಚೀನಾ ಗಡಸು ಅಂಕಣ   ಜರ್ಗನ್‌ ಮೆಲ್ಜರ್‌   ಮಾರಿಯುಸ್‌ಜ್‌ ಫ್ರಿಸ್ಟೆನ್‌ಬರ್ಗ್‌
  ಮಾರ್ಸಿನ್‌ ಮ್ಯಾಟ್ಕೋವ್ಸ್‌‌ಕಿ
7–5, 4–6, [10–5]

ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು

ಬದಲಾಯಿಸಿ

ಪುರುಷರ ಡಬಲ್ಸ್‌‌: 12 ಅಂತಿಮ ಪಂದ್ಯಗಳು (6 ಪಟ್ಟಗಳು, 6 ಉಪಾಂತ-ವಿಜಯಿಗಳು)

ಬದಲಾಯಿಸಿ
ಫಲಿತಾಂಶ ವರ್ಷ ಚಾಂಪಿಯನ್‌ಗಿರಿ ಮೇಲ್ಮೈ ಜೊತೆಯಾಟಗಾರ ಅಂತಿಮ ಪಂದ್ಯದಲ್ಲಿನ ಎದುರಾಳಿಗಳು ಅಂತಿಮ ಪಂದ್ಯದಲ್ಲಿನ ಅಂಕ
ಉಪಾಂತ-ವಿಜಯಿ 1999 ಆಸ್ಟ್ರೇಲಿಯನ್ ಓಪನ್ ಗಡಸು ಅಂಕಣ   ಮಹೇಶ್ ಭೂಪತಿ   ಜೋನಾಸ್‌ ಜೋರ್ಕ್‌ಮನ್‌   ಪ್ಯಾಟ್ರಿಕ್‌ ರ್ಯಾಫ್ಟರ್‌‌ 6–3, 4–6, 6–4, 6–7(10), 6–4
ವಿಜೇತ 1999 ಫ್ರೆಂಚ್ ಓಪನ್ ಮಣ್ಣಿನ ಅಂಕಣ   ಮಹೇಶ್ ಭೂಪತಿ   ಗೋರನ್‌ ಇವಾನಿಸೆವಿಕ್‌   ಜೆಫ್‌ ಟರಾಂಗೊ 6–2, 7–5
ವಿಜೇತ 1999 ವಿಂಬಲ್ಡನ್ ಹುಲ್ಲಿನ ಅಂಕಣ   ಮಹೇಶ್ ಭೂಪತಿ   ಪಾಲ್‌ ಹಾರ್‌ಹ್ಯೂಯಿಸ್‌  ಜರೇಡ್‌ ಪಾಮರ್‌ 6–7(10), 6–3, 6–4, 7–6(4)
ಉಪಾಂತ-ವಿಜಯಿ 1999 US ಓಪನ್ ಗಡಸು ಅಂಕಣ   ಮಹೇಶ್ ಭೂಪತಿ   ಸೆಬಾಸ್ಟಿಯನ್‌ ಲ್ಯಾರಿಯು   ಅಲೆಕ್ಸ್‌ ಒ'ಬ್ರಿಯೆನ್‌ 7–6, 6–4
ವಿಜೇತ 2001 ಫ್ರೆಂಚ್‌ ಓಪನ್‌ (2) ಮಣ್ಣಿನ ಅಂಕಣ   ಮಹೇಶ್ ಭೂಪತಿ   ಪೆಟ್ರ್‌‌ ಪಾಲಾ   ಪಾವೆಲ್‌ ವಿಜ್‌ನರ್‌ 7–6, 6–3
ಉಪಾಂತ-ವಿಜಯಿ 2004 US ಓಪನ್ ಗಡಸು ಅಂಕಣ   ಡೇವಿಡ್‌ ರಿಕ್ಲ್‌‌   ಮಾರ್ಕ್‌ ನೋಲ್ಸ್‌   ಡೇನಿಯೆಲ್‌ ನೆಸ್ಟರ್‌‌ 6–3, 6–3
ಉಪಾಂತ-ವಿಜಯಿ 2006 ಆಸ್ಟ್ರೇಲಿಯನ್ ಓಪನ್ ಗಡಸು ಅಂಕಣ   ಮಾರ್ಟಿನ್‌ ಡ್ಯಾಮ್‌   ಬಾಬ್‌ ಬ್ರಿಯಾನ್‌   ಮೈಕ್‌ ಬ್ರಿಯಾನ್‌ 4–6, 6–3, 6–4
ವಿಜೇತ 2006 US ಓಪನ್ ಗಡಸು ಅಂಕಣ   ಮಾರ್ಟಿನ್‌ ಡ್ಯಾಮ್‌   ಜೋನಾಸ್‌ ಜೋರ್ಕ್‌ಮನ್‌   ಮ್ಯಾಕ್ಸ್‌‌ ಮಿರ್‌ನ್ಯಿ 6–7(5), 6–4, 6–3
ಉಪಾಂತ-ವಿಜಯಿ 2008 US ಓಪನ್ ಗಡಸು ಅಂಕಣ   ಲ್ಯೂಕಾಸ್‌ ಡ್ಲೌಹಿ   ಬಾಬ್‌ ಬ್ರಿಯಾನ್‌   ಮೈಕ್‌ ಬ್ರಿಯಾನ್‌ 7–6(5), 7–6(10)
ವಿಜೇತ 2009 ಫ್ರೆಂಚ್‌ ಓಪನ್‌ (3) ಮಣ್ಣಿನ ಅಂಕಣ   ಲ್ಯೂಕಾಸ್‌ ಡ್ಲೌಹಿ   ವೆಸ್ಲೆ ಮೂಡೀ   ಡಿಕ್‌ ನೋರ್ಮನ್‌ 3–6, 6–3, 6–2
ವಿಜೇತ 2009 U.S. ಓಪನ್ (2) ಗಡಸು ಅಂಕಣ   ಲ್ಯೂಕಾಸ್‌ ಡ್ಲೌಹಿ   ಮಹೇಶ್ ಭೂಪತಿ   ಮಾರ್ಕ್‌ ನೋಲ್ಸ್‌ 3–6, 6–3, 6–2
ಉಪಾಂತ-ವಿಜಯಿ 2010 ಫ್ರೆಂಚ್ ಓಪನ್ ಮಣ್ಣಿನ ಅಂಕಣ   ಲ್ಯೂಕಾಸ್‌ ಡ್ಲೌಹಿ   ನೆನಾಡ್‌ ಝಿಮೋನ್‌ಜಿಕ್‌   ಡೇನಿಯೆಲ್‌ ನೆಸ್ಟರ್‌‌ 7–5, 6–2

ಮಿಶ್ರ ಡಬಲ್ಸ್‌‌: 11 ಅಂತಿಮ ಪಂದ್ಯಗಳು (6 ಪಟ್ಟಗಳು, 5 ಉಪಾಂತ-ವಿಜಯಿಗಳು)

ಬದಲಾಯಿಸಿ
ಫಲಿತಾಂಶ ವರ್ಷ ಚಾಂಪಿಯನ್‌ಗಿರಿ ಮೇಲ್ಮೈ ಜೊತೆಯಾಟಗಾರ ಅಂತಿಮ ಪಂದ್ಯದಲ್ಲಿನ ಎದುರಾಳಿಗಳು ಅಂತಿಮ ಪಂದ್ಯದಲ್ಲಿನ ಅಂಕ
ವಿಜೇತ 1999 ವಿಂಬಲ್ಡನ್ ಹುಲ್ಲಿನ ಅಂಕಣ   ಲೀಸಾ ರೇಮಂಡ್‌   ಆನ್ನಾ ಕೌರ್ನಿಕೋವಾ
  ಜೋನಾಸ್‌ ಜೋರ್ಕ್‌ಮನ್‌
6–4, 3–6, 6–3
ವಿಜೇತ 2003 ಆಸ್ಟ್ರೇಲಿಯನ್ ಓಪನ್ ಗಡಸು ಅಂಕಣ   ಮಾರ್ಟಿನಾ ನವ್ರಾಟಿಲೊವಾ   ಎಲೆನಿ ಡ್ಯಾನೀಲಿಡೌ
  ಟಾಡ್‌ ವುಡ್‌ಬ್ರಿಜ್‌
6–4, 7–5
ವಿಜೇತ 2003 ವಿಂಬಲ್ಡನ್ (2) ಹುಲ್ಲಿನ ಅಂಕಣ   ಮಾರ್ಟಿನಾ ನವ್ರಾಟಿಲೊವಾ   ಅನಾಸ್ಟೇಸಿಯಾ ರೋಡಿಯೋನೋವಾ
  ಆಂಡಿ ರಾಮ್‌
6–3, 6–3
ಉಪಾಂತ-ವಿಜಯಿ 2004 ಆಸ್ಟ್ರೇಲಿಯನ್ ಓಪನ್ ಗಡಸು ಅಂಕಣ   ಮಾರ್ಟಿನಾ ನವ್ರಾಟಿಲೊವಾ   ಎಲೆನಾ ಬೊವಿನಾ   ನೆನಾಡ್‌ ಝಿಮೋನ್‌ಜಿಕ್‌ 6–1, 7–6
ಉಪಾಂತ-ವಿಜಯಿ 2005 ಫ್ರೆಂಚ್ ಓಪನ್ ಮಣ್ಣಿನ ಅಂಕಣ   ಮಾರ್ಟಿನಾ ನವ್ರಾಟಿಲೊವಾ   ಡೇನಿಯೆಲಾ ಹಾಂಟುಚೋವಾ   ಫ್ಯಾಬ್ರಿಸ್‌ ಸ್ಯಾನ್‌ಟೊರೊ 3–6, 6–3, 6–2
ಉಪಾಂತ-ವಿಜಯಿ 2007 US ಓಪನ್ ಗಡಸು ಅಂಕಣ   ಮೆಘಾನ್‌ ಶೌಘ್ನೆಸ್ಸೆ   ವಿಕ್ಟೋರಿಯಾ ಅಜರೆಂಕಾ
  ಮ್ಯಾಕ್ಸ್‌‌ ಮಿರ್‌ನ್ಯಿ
6–4, 7–6(6)
ವಿಜೇತ 2008 US ಓಪನ್ ಗಡಸು ಅಂಕಣ   ಕಾರಾ ಬ್ಲ್ಯಾಕ್‌   ಲೀಜಲ್‌ ಹೂಬರ್‌
  ಜಾಮೀ ಮರ್ರೆ
7–6, 6–4
ಉಪಾಂತ-ವಿಜಯಿ 2009 ವಿಂಬಲ್ಡನ್ ಹುಲ್ಲಿನ ಅಂಕಣ   ಕಾರಾ ಬ್ಲ್ಯಾಕ್‌   ಆನ್ನಾ-ಲೆನಾ ಗ್ರೋನ್‌ಫೆಲ್ಡ್‌   ಮಾರ್ಕ್‌ ನೋಲ್ಸ್‌ 7–5, 6–3
ಉಪಾಂತ-ವಿಜಯಿ 2009 US ಓಪನ್ ಗಡಸು ಅಂಕಣ   ಕಾರಾ ಬ್ಲ್ಯಾಕ್‌   ಕಾರ್ಲಿ ಗಲಿಕ್‌ಸನ್‌   ಟ್ರಾವಿಸ್‌ ಪ್ಯಾರಟ್‌ 6–2, 6–4
ವಿಜೇತ 2010 ಆಸ್ಟ್ರೇಲಿಯನ್‌ ಓಪನ್‌ (2) ಗಡಸು ಅಂಕಣ   ಕಾರಾ ಬ್ಲ್ಯಾಕ್‌   ಎಕಟೆರಿನಾ ಮ್ಯಾಕರೋವಾ   ಜಾರೊಸ್ಲಾವ್‌ ಲೆವಿನ್ಸ್‌ಕಿ 7–5, 6–3
ವಿಜೇತ 2010 ವಿಂಬಲ್ಡನ್ (3) ಹುಲ್ಲಿನ ಅಂಕಣ   ಕಾರಾ ಬ್ಲ್ಯಾಕ್‌   ಲೀಸಾ ರೇಮಂಡ್‌   ವೆಸ್ಲೆ ಮೂಡೀ 6–4, 7–6

ಡಬಲ್ಸ್‌‌ ಪ್ರದರ್ಶನದ ಕಾಲಯೋಜನೆ

ಬದಲಾಯಿಸಿ
ಪಂದ್ಯಾವಳಿ 1991 1992 1993 1994 1995 1996 1997 1998 1999 2000 2001 2002 2003 2004 2005 2006 2007 2008 2009 2010 ವೃತ್ತಿಜೀವನದ SR ವೃತ್ತಿಜೀವನದ ಗೆಲುವು-ಸೋಲು
ಗ್ರ್ಯಾಂಡ್ ಸ್ಲಾಂಗಳು
ಆಸ್ಟ್ರೇಲಿಯನ್ ಓಪನ್ A A A 2R QF A 1R SF F 1R 1R 2R QF 1R A F 3R 2R SF QF 0 / 15 32–15
ಫ್ರೆಂಚ್ ಓಪನ್ A A A A A A 2R SF W 1R W SF SF 2R QF 1R 2R 3R W F 3 / 14 43–11
ವಿಂಬಲ್ಡನ್ A A 1R 3R A 2R 1R 2R W A 1R 1R SF 2R QF SF QF SF 1R 2R 1 / 16 30–15
US ಓಪನ್ A A SF 2R 1R A SF SF F 1R 1R 2R A F 1R W 1R F W 1R 2 / 16 41–14
ಗ್ರಾಂಡ್‌ ಸ್ಲಾಂ SR 0 / 0 0 / 0 0 / 2 0 / 3 0 / 2 0 / 1 0 / 4 0 / 4 2 / 4 0 / 3 1 / 4 0 / 4 0 / 3 0 / 4 0 / 3 1 / 4 0 / 4 0 / 4 2 / 4 0 / 4 6 / 61 N/A
ವಾರ್ಷಿಕ ಗೆಲುವು-ಸೋಲು 0–0 0–0 4–2 4–3 3–2 0–1 5–4 13–4 22–2 0–3 6–3 6–4 11–3 7–4 6–3 15–3 6–4 16–4 16–2 9–4 N/A 146–55
ವರ್ಷಾಂತ್ಯದ ಚಾಂಪಿಯನ್‌ಗಿರಿಗಳು
ಟೆನಿಸ್‌ ಮಾಸ್ಟರ್ಸ್‌ ಕಪ್‌ A A A A A A F RR F F RR NH A A F SF SF RR RR RR 0 / 11 17–25
ಬೇಸಿಗೆ ಒಲಿಂಪಿಕ್ಸ್‌‌
ಬೇಸಿಗೆ ಒಲಿಂಪಿಕ್ಸ್‌‌ NH QF ಆಯೋಜಿಸಲ್ಪಡಲಿಲ್ಲ 2R ಆಯೋಜಿಸಲ್ಪಡಲಿಲ್ಲ 2R ಆಯೋಜಿಸಲ್ಪಡಲಿಲ್ಲ SF ಆಯೋಜಿಸಲ್ಪಡಲಿಲ್ಲ QF ಆಯೋಜಿಸಲ್ಪಡಲಿಲ್ಲ 0 / 5 9–6
ಮಾಸ್ಟರ್ಸ್‌ ಸರಣಿ
ಇಂಡಿಯನ್‌ ವೆಲ್ಸ್‌‌ A A A A A 1R 1R A SF 2R 1R 1R SF 1R QF 2R W QF 2R 1R 1 / 14 16–13
ಮಿಯಾಮಿ A A A 2R 1R 2R 2R 2R 2R 2R A 2R F QF 1R A F QF 2R W 1 / 15 22–14
ಮಾಂಟೆ ಕಾರ್ಲೋ A A A A A A A SF 2R A SF 1R 2R A W 2R A 2R SF 2R 1 / 10 11–9
ರೋಮ್‌ A A A A A A A W A A 1R 1R 2R 2R QF 2R SF 2R QF QF 1 / 11 10–10
ಮ್ಯಾಡ್ರಿಡ್‌ (ಸ್ಟಟ್‌ಗಾರ್ಟ್‌) A A A A A A QF F A A QF 2R A 1R F 1R 2R 2R A SF 0 / 10 10–10
ಕೆನಡಾ A A A A A A W SF QF A 1R QF QF W 2R SF QF SF A 2R 2 / 12 19–10
ಸಿನ್ಸಿನಾಟಿ A A 1R A A A QF A 2R A W 1R 2R QF QF SF SF QF 2R 2R 1 / 13 14–12
ಷಾಂಘೈ ಆಯೋಜಿಸಲ್ಪಡಲಿಲ್ಲ A W 1 / 1 4–0
ಪ್ಯಾರಿಸ್ A A A A A A 2R W A A F 2R 1R 1R A 1R 2R A 2R QF 1 / 10 9–9
ಹ್ಯಾಂಬರ್ಗ್ A A A A A A A A 2R A 1R 2R SF SF SF A A SF NM1 0 / 7 11–6
ಮಾಸ್ಟರ್ಸ್‌ ಸರಣಿ SR 0 / 0 0 / 0 0 / 1 0 / 1 0 / 1 0 / 2 1 / 6 2 / 6 0 / 6 0 / 2 1 / 8 0 / 9 0 / 8 1 / 8 1 / 8 0 / 7 1 / 7 0 / 8 0 / 6 2 / 8 9 / 103 N/A
ವಾರ್ಷಿಕ ಗೆಲುವು-ಸೋಲು 0–0 0–0 0–1 1–1 0–1 1–2 9–5 16–4 3–5 1–2 12–7 5–9 9–7 11–7 12–8 6–6 12–6 11–9 5–6 12–7 N/A 126–93
ವರ್ಷಾಂತ್ಯದ ಶ್ರೇಯಾಂಕ
ಶ್ರೇಯಾಂಕ 481 179 93 142 76 89 14 4 1 84 9 33 13 13 12 12 12 10 8 align="center" N/A

A = ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ

ಟೆನಿಸ್‌ ಅಂಕಣದಲ್ಲಿ ಮತ್ತು ಅದರಾಚೆಗೆ ತನ್ನ ಸಹವರ್ತಿ ಭಾರತೀಯ ಟೆನಿಸ್‌ ಆಟಗಾರನಾದ ಮಹೇಶ್ ಭೂಪತಿಯೊಂದಿಗೆ ಲಿಯಾಂಡರ್‌ ಪೇಸ್ ಹೊಂದಿರುವ ಜೊತೆಗಾರಿಕೆಯು ಅವನ ತಾಯ್ನಾಡಾದ ಭಾರತದಲ್ಲಿನ ಮಾಧ್ಯಮಗಳ ಗಮನವನ್ನು ಏಕಪ್ರಕಾರವಾಗಿ ಸೆಳೆದಿದೆ. [೩೮][೩೯][೪೦] ೨೦೦೬ರ ಏಷ್ಯನ್‌ ಕ್ರೀಡೆಗಳಲ್ಲಿ‌, ತಂಡ ಸ್ಪರ್ಧೆಯಲ್ಲಿ ಚೀನಾದ ತೈಪೀಗೆ ಸೋಲಬೇಕಾಗಿ ಬಂದಾಗ, ಭಾರತ ತಂಡದೆಡೆಗೆ ಭೂಪತಿಯು ಹೊಂದಿರುವ ಬದ್ಧತೆಯ ಕುರಿತಾಗಿ ಲಿಯಾಂಡರ್‌ ಪ್ರಶ್ನಿಸಬೇಕಾಗಿ ಬಂತು.[೪೧] ಅವನು ಸಂದರ್ಶನವೊಂದರಲ್ಲಿ ಒಮ್ಮೆ ಮಾತನಾಡುತ್ತಾ, ತಾನು ಮತ್ತು ಭೂಪತಿ ಸ್ನೇಹಿತರಾಗಿದ್ದರೂ ಸಹ, ತನ್ನ ತಂಡದ ಹಿಂದಿನ-ಸಹವರ್ತಿಯೊಂದಿಗೆ ಜೊತೆಗೂಡುವುದನ್ನು ತಾನು ಪರಿಗಣಿಸಲಿಲ್ಲ ಎಂದು ತಿಳಿಸಿದ. [೪೨] ಆದಾಗ್ಯೂ, ೨೦೦೮ರ ಬೀಜಿಂಗ್‌ ಒಲಿಂಪಿಕ್ಸ್‌‌ಗೆ ಸಂಬಂಧಿಸಿದಂತೆ ತಮ್ಮ ದೇಶದ[೪೩] ಪರವಾಗಿ ಒಟ್ಟಾಗಿ ಆಡಲು ಅವರು ನಿರ್ಧರಿಸಿದರು ಮತ್ತು ಸಂಭಾವ್ಯ ಚಾಂಪಿಯನ್ನರಾದ ರೋಜರ್‌‌ ಫೆಡರರ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕಾ ಜೋಡಿಗೆ ಎದುರಾಗಿ ಕ್ವಾರ್ಟರ್‌-ಫೈನಲ್‌ ಪಂದ್ಯಗಳಲ್ಲಿ ಅವರು ಸೋತರು.[೪೪] ೨೦೧೦ರಲ್ಲಿ, ಥೈಲೆಂಡ್‌ ಓಪನ್‌ (ಒಂದು ATP ೨೫೦ ಪಂದ್ಯಾವಳಿ) ಪಂದ್ಯಾವಳಿಯಲ್ಲಿ ಡಬಲ್ಸ್‌‌ ಜೊತೆಯಾಟಗಾರರಾಗಿ ಅವರು ಮತ್ತೆ ಜೊತೆಯಾದರಾದರೂ, ಅಂತಿಮವಾಗಿ ಮೊದಲ ಸುತ್ತಿನಲ್ಲಿಯೇ ಸೋತು ಸ್ಪರ್ಧೆಯಿಂದ ಹೊರಹಾಕಲ್ಪಟ್ಟರು.

ಉಲ್ಲೇಖಗಳು

ಬದಲಾಯಿಸಿ
  1. "Padma Awards Announced". Press Information Bureau, Ministry of Home Affairs. 25 January, 2014. Retrieved 2014-01-26. {{cite web}}: Check date values in: |date= (help)
  2. "ಆರ್ಕೈವ್ ನಕಲು". Archived from the original on 2011-03-20. Retrieved 2010-12-13.
  3. http://www.wimbledon.org/en_GB/news/match_reports/2010-07-04/201007041278253501136.html
  4. "ಒಲಿಂಪಿಕ್‌ ಗೋಲ್ಡ್‌ ಫೆಸ್ಟ್‌‌‌ನಲ್ಲಿರುವ ಲಿಯಾಂಡರ್‌ ಪೇಸ್‌ನ ವಿವರಗಳು". Archived from the original on 2016-02-04. Retrieved 2010-12-13.
  5. ಲಿಯಾಂಡರ್‌ ಪೇಸ್‌ ಜಾಯಿನ್ಸ್‌‌ ಒಲಿಂಪಿಕ್‌ ಗೋಲ್ಡ್‌ ಫೆಸ್ಟ್‌
  6. James H. Mills (2005). Subaltern Sports: Politics and Sport in South Asia. Anthem Press. p. 215. ISBN 1843311682. {{cite book}}: |access-date= requires |url= (help)
  7. Rahul Chandawarkar (2008-09-09). "The hero in young Leander". The Indian Express. Retrieved 2009-01-31.
  8. ATP (2006-05-28). "Leander Paes - Player Profile". Archived from the original on 2009-01-31. Retrieved 2007-05-28.
  9. Debasmita Chanda. "Leander Paes - India's Tennis Pride". Archived from the original on 2007-09-30. Retrieved 2007-05-28.
  10. "Olympics Barcelona - Men's Doubles - Main Draw". Archived from the original on 2007-09-29. Retrieved 2007-12-31.
  11. Gulu Ezekiel. "KD Jadhav - Man of Bronze". Retrieved 2007-06-01.
  12. Mark Malinowski. "Fond Memories: Players REcall Greatest Moments III". Archived from the original on 2007-09-28. Retrieved 2007-08-31.
  13. Ministry of Youth Affairs and Sports, Government of India. "List of Rajiv Gandhi Khel Ratna Award Winners". Archived from the original on May 23, 2007. Retrieved 2007-05-28.
  14. ATP Tennis. "Rankings History". Retrieved 2007-06-01.
  15. REUTERS (1998-07-13). "Paes picks up first ATP singles crown". Archived from the original on 2007-09-29. Retrieved 2007-06-01. {{cite web}}: |author= has generic name (help)
  16. ATP Tennis. "Official Tournament Draw". Retrieved 2007-06-01.
  17. ATP Tennis. "Officiela Tournament Draw, New Haven". Retrieved 2007-05-28.
  18. ATP Tennis (1998-08-21). "Paes sends Sampras packing". Retrieved 2007-06-01.
  19. ATP Tennis. "Rankings History". Retrieved 2007-06-01.
  20. www.gamesinfo.com.au. "Tennis results" (PDF). Archived from the original (PDF) on 2007-06-16. Retrieved 2007-06-01.
  21. PTI. (2006-08-06). "Anju to carry flag at Athens". Archived from the original on 2007-06-02. Retrieved 2007-06-01.
  22. Ministry of Home Affairs, Government of India (2001-01-26). "Civilian Awards announced on January 26, 2001". Archived from the original on March 3, 2007. Retrieved 2007-05-28.
  23. 14th Asian Games BUSAN. (2002-10-11). "Uzbekistan, India, Chinese Taipei split Asiad tennis titles". Retrieved 2007-06-01.{{cite web}}: CS1 maint: numeric names: authors list (link)
  24. "ಆರ್ಕೈವ್ ನಕಲು". Archived from the original on 2008-09-14. Retrieved 2024-05-07.
  25. 15th Asian Games Doha. (2006-12-13). "Men's Doubles Final MD31". Archived from the original on October 16, 2007. Retrieved 2007-06-01.{{cite web}}: CS1 maint: numeric names: authors list (link)
  26. 15th Asian Games Doha. (2006-12-13). "Mixed Doubles Final XD21". Archived from the original on October 15, 2007. Retrieved 2007-06-01.{{cite web}}: CS1 maint: numeric names: authors list (link)
  27. ATP Tennis. "Rankings History". Retrieved 2007-06-01.
  28. ATP Tennis. "Rankings History". Retrieved 2007-06-01.
  29. ATP Tennis. "Rotterdam". Retrieved 2007-06-01.
  30. PTI (2007-03-19). "Rotterdam". Retrieved 2007-06-01.
  31. ATP. "Player Profile". Retrieved 2007-06-01.
  32. IBNLIVE (2008-08-15). "Paes Bhupathi out of Olympics 2008". Archived from the original on 2008-08-18. Retrieved 2008-08-15.
  33. "Federer leads Swiss to doubles gold".
  34. Rohit Brijnath (2006-04-23). "Leander Paes - setting the standard". BBC News. Retrieved 2007-05-28.
  35. Davis Cup. "Team Profile". Retrieved 2007-06-01.
  36. Davis Cup. "Player Profile, www.daviscup.com". Retrieved 2007-06-01.
  37. Brijnath, Rohit (October 5–11, 2002.). "The enduring uniqueness of the Davis Cup". The Sportstar. 25 (40). Archived from the original on 2007-10-17. Retrieved 2007-06-01. {{cite journal}}: Check date values in: |date= (help)
  38. M S Unnikrishnan (2000-05-20). "Leander Paes, Mahesh Bhupathi finally part ways". Retrieved 2007-06-01.
  39. M S Unnikrishnan (2002-03-23). "Did 'sibling' rivalry lead to Paes-Bhupathi split?". Retrieved 2007-06-01.
  40. The Hindu (2002-10-04). "AITA wants Mahesh Bhupathi back in the team". Chennai, India. Archived from the original on 2007-05-16. Retrieved 2007-06-01.
  41. Times Now (2006-12-05). "Paes questions Mahesh's commitment". Archived from the original on 2007-02-13. Retrieved 2007-06-01.
  42. IBNLIVE (2006-05-27). "Pairing Hesh not on my mind: Paes". Archived from the original on 2023-12-14. Retrieved 2007-06-01.
  43. The Times of India (2007-12-18). "Lee-Hesh to play together in 2008 Olympics". The Times Of India. Retrieved 2007-12-31.
  44. "Match Statistics:Men's Doubles Quarterfinal 2". Official website of Beijing Olympics. 2008-08-15. Archived from the original on 2008-08-18. Retrieved 2009-01-30.

ಬಾಹ್ಯ ಕೊಂಡಿಗಳು

ಬದಲಾಯಿಸಿ
Preceded by Rajiv Gandhi Khel Ratna
1996/1997
Joint with Nameirakpam Kunjarani
Succeeded by

ಟೆಂಪ್ಲೇಟು:WebSlice-begin

ಟೆಂಪ್ಲೇಟು:WebSlice-end