ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ. ಪ್ರತಿಶ್ಟಿತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಗೆ ಸೇರಿ ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇವರಿಗೆ ೧೯೮೨ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ "ಟಚ್ ಪ್ಲೇ" ಯನ್ನು ರಚಿಸಿದ್ದಾರೆ. ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ.

ಪ್ರಕಾಶ್ ಪಡುಕೋಣೆ
— ಬ್ಯಾಡ್ಮಿಂಟನ್‌ ಆಟಗಾರ —
ಟಾಟಾ ಮುಕ್ತ ಚ್ಯಾಂಪಿಯನ್ಷಿಪ್ಪಿನಲ್ಲಿ ಪ್ರಕಾಶ್ ಪಡುಕೋಣೆ
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಪ್ರಕಾಶ್ ಪಡುಕೋಣೆ
ಹುಟ್ಟು (1955-06-10) ೧೦ ಜೂನ್ ೧೯೫೫ (ವಯಸ್ಸು ೬೯)
ಬೆಂಗಳೂರು, ಮೈಸೂರು ರಾಜ್ಯ, ಭಾರತ
ಎತ್ತರ1.85 m (6 ft 1 in)
ದೇಶಭಾರತ
ಆಡುವ ಕೈಬಲ
ಪುರುಷರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ1[೧] (೧೯೮೦)
ಪ್ರಕಾಶ್ ಪಡುಕೋಣೆ

ವೃತ್ತಿ ಜೀವನ

ಬದಲಾಯಿಸಿ

ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು.

೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು ಡೆನ್ಮಾರ್ಕ್ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು. ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ ಮಾರ್ಟಿನ್ ಫ್ರಾಸ್ಟ್ ಒಬ್ಬರು.

೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ.

ಕೌಟುಂಬಿಕ ಜೀವನ

ಬದಲಾಯಿಸಿ

ಪ್ರಕಾಶ್ ರವರು ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವಥ ಬ್ರಾಹಣ ಕುಟುಂಬದಲ್ಲಿ ಜನಿಸಿದರು.

ಪ್ರಸ್ಥ್ಹುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ. ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು. ಮೊದಲ ಪುತ್ರಿ ದೀಪಿಕಾ ಪಡುಕೋಣೆ ಖ್ಯಾತ ನಟಿ ಹಾಗು ರೂಪದರ್ಶಿ. ಇವರ ಎರಡನೇ ಪುತ್ರಿ ಗೋಲ್ಫ್ ಆಟಗಾರ್ತಿ.

೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು.

ಪ್ರಮುಖ ಸಾಧನೆಗಳು

ಬದಲಾಯಿಸಿ
ಶ್ರೇಣಿ ಕ್ರೀಡಾ ಕೂಟ ದಿನಾಂಕ ಸ್ಥಳ
ಐಬಿಎಫ್ ವರ್ಲ್ಡ್ ಚಾಂಪಿಯನ್ ಶಿಪ್
3 ಸಿಂಗಲ್ಸ್ 1983 ಕೂಪನ್ ಹೇಗನ್, ಡೆನ್ಮಾರ್ಕ್
ಕಾಮನ್ ವೆಲ್ತ್ ಕ್ರೀಡಾಕೂಟ
1 ಸಿಂಗಲ್ಸ್ 1978 ಎಡ್ಮೊಂಟನ್, ಕೆನಡಾ
ಬ್ಯಾಡ್ ಮಿಂಟನ್ ವರ್ಲ್ಡ್ ಕಪ್
1 ಸಿಂಗಲ್ಸ್ 1981
ವರ್ಲ್ಡ್ ಗ್ರಾಂಡ್ ಪ್ರಿ
1 ಸಿಂಗಲ್ಸ್ 1979 ಡೆನ್ಮಾರ್ಕ್ ಒಪನ್
1 ಸಿಂಗಲ್ಸ್ 1980 ಆಲ್ ಇಂಗ್ಲೆಂಡ್ ಒಪನ್

ಉಲ್ಲೇಖ

ಬದಲಾಯಿಸಿ
  1. "Prakash Padukone Profile". iloveindia. Retrieved 15 August 2013.
  2. http://www.theworldgames.org/the-world-games/results-history#edition=0&category=0&country=IND