ಆಸ್ಟ್ರೇಲಿಯನ್ ಓಪನ್
ಟೆಂಪ್ಲೇಟು:GrandSlamTournaments ಪ್ರತಿ ವರ್ಷವೂ ಆಯೋಜಿತವಾಗುವ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯನ್ ಓಪನ್ ಮೊದಲನೆಯದಾಗಿದೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ, ಈ ಪಂದ್ಯಾವಳಿಯು ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದ ಮೆಲ್ಬೊರ್ನ್ ಪಾರ್ಕ್‌ನಲ್ಲಿ ನಡೆಯುತ್ತದೆ. ಈ ಪಂದ್ಯಾವಳಿಯು ಮೊದಲ ಬಾರಿಗೆ 1905ರಲ್ಲಿ ನಡೆಯಿತು. ಹುಲ್ಲಿನ ಅಂಕಣದಲ್ಲಿ ಕೊನೆಯ ಬಾರಿಗೆ 1987ರಲ್ಲಿ ನಡೆಯಿತು. 1988ರಿಂದ ಈ ಪಂದ್ಯಾವಳಿಯು ಮೆಲ್ಬೊರ್ನ್ ಪಾರ್ಕ್‌ನ ಹಾರ್ಡ್ ಕೋರ್ಟ್‌ಗಳಲ್ಲಿ ಆಡಲಾಗುತ್ತಿದೆ. ಮ್ಯಾಟ್ಸ್ ವಿಲಾಂಡರ್ ಹುಲ್ಲಿನ ಹಾಗೂ ಹಾರ್ಡ್ ಕೋರ್ಟ್‌ಗಳಲ್ಲಿ ಈ ಪಂದ್ಯಾವಳಿ ಗೆದ್ದ ಏಕೈಕ ಆಟಗಾರ.
ಇತರೆ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಂತೆ, ಇದರಲ್ಲಿಯೂ ಸಹ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪಂದ್ಯಗಳು; ಜೊತೆಗೆ, ಪುರುಷರ, ಮಹಿಳೆಯರ ಹಾಗೂ ಮಿಶ್ರ ಡಬಲ್ಸ್, ಕಿರಿಯರ, ಗಾಲಿಕುರ್ಚಿಯ , ಪ್ರದರ್ಶನಾತ್ಮಕ ಹಾಗೂ ಪ್ರಸಿದ್ಧರ ಪಂದ್ಯಗಳನ್ನು ಇಲ್ಲಿ ಆಡಲಾಗುತ್ತವೆ. ಪಂದ್ಯಾವಳಿಯಲ್ಲಿ ಬಳಸಲಾಗುವ ಎರಡು ಪ್ರಮುಖ ಅಂಕಣಗಳೆಂದರೆ ರಾಡ್ ಲೇವರ್ ಅರೆನಾ ಹಾಗೂ ಹೈಸೆನ್ಸ್ ಅರೆನಾ. ಇವೆರಡೂ ಅಂಕಣಗಳಿಗೆ ಹಿಂತೆಗೆದುಕೊಳ್ಳುವ ಛಾವಣಿಗಳಿವೆ. ಮಳೆಯಾದಾಗ ಅಥವಾ ಭಾರೀ ಬಿಸಿಲಾದಾಗ ಅವುಗಳನ್ನು ಮುಚ್ಚಲಾಗುತ್ತದೆ. ಕೇವಲ ಎರಡೇ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳು (ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್) ಒಳಾಂಗಣ ಆಟ ವ್ಯವಸ್ಥೆ ಹೊಂದಿವೆ. ಆಸ್ಟ್ರೇಲಿಯಾದ ಬೇಸಿಗೆ ಋತುವಿನ ಮಧ್ಯದಲ್ಲಿ ನಡೆಯುವ ಕಾರಣ, ಆಸ್ಟ್ರೇಲಿಯನ್ ಓಪನ್ ಪಂದ್ಯಗಳನ್ನು ಬಹಳಷ್ಟು ಹೆಚ್ಚು ಉಷ್ಣಾಂಶದ ಸ್ಥಿತಿಗಳಲ್ಲಿ ಆಡಲಾಗುತ್ತವೆ. ಪಂದ್ಯ ನಡೆಯುವ ವೇಳೆ ಉಷ್ಣಾಂಶ ಮತ್ತು ಆರ್ದ್ರತೆಯು ಅಪಾಯಕಾರಿ ಮಟ್ಟ ತಲುಪಿದಲ್ಲಿ ಪಂದ್ಯಾವಳಿಯ ನಿಯಮಾವಳಿಗಳಡಿ ತೀವ್ರ-ಉಷ್ಣಾಂಶ ನೀತಿ ಜಾರಿಗೊಳಿಸಲಾಗುವುದು. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಾತಿ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. 2010ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಗ್ರ್ಯಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾಳಿಯಲ್ಲಿ ಅತ್ಯಧಿಕ ಒಂದುದಿನದ ಹಗಲು/ರಾತ್ರಿ ಹಾಜರಾತಿ 77 ,043 ಮತ್ತು ಒಟ್ಟಾರೆ ಹಾಜರಾತಿ 653,860 ಸಾಧನೆಯಿಂದ ದಾಖಲೆ ನಿರ್ಮಿಸಿದೆ.[೧] 2008ರಲ್ಲಿ ಮೆಲ್ಬೊರ್ನ್ ಪಾರ್ಕ್‌ನಲ್ಲಿ ಕಳೆದ 20 ವರ್ಷಗಳಿಂದ ಅಳವಡಿಸಲಾಗಿದ್ದ ರಿಬೌಂಡ್ ಏಸ್ ಹಾಸನ್ನು 20 ವರ್ಷಗಳ ನಂತರ, ಅಂದರೆ 2008ರಲ್ಲಿ ಬದಲಾಯಿಸಲಾಯಿತು. ಇದರ ಸ್ಥಳದಲ್ಲಿ ಪ್ಲೆಕ್ಸಿಕುಷನ್ ಪ್ರೆಸ್ಟಿಜ್ ಎಂಬ ಮೆತ್ತೆಯ, ಅಕ್ರಿಲಿಕ್ ಮೇಲ್ಮೈನ ಹಾಸನ್ನು ಅಳವಡಿಸಲಾಯಿತು. ರಿಬೌಂಡ್ ಏಸ್ ಮತ್ತು ಪ್ಲೆಕ್ಸಿಕುಷನ್ ಪ್ರೆಸ್ಟಿಜ್ ಎರಡೂ ತರಹದ ಅಂಕಣಗಳಲ್ಲಿ ಆಡಲಾದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ಗೆದ್ದವರು ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಆಟಗಾರರು ಮಾತ್ರ. ಹೊಸ ಮೇಲ್ಮೈನ ಮುಖ್ಯ ಅನುಕೂಲಗಳೆಂದರೆ ಉತ್ತಮ ಘನತ್ವ ಹಾಗೂ ತೆಳುವಾದ ಮೇಲ್ಪದರ ಹೊಂದಿರುವುದರಿಂದ ಅಂಕಣವು ಶಾಖವನ್ನು ಕಡಿಮೆ ಹಿಡಿದಿಡುತ್ತದೆ. ಈ ಬದಲಾವಣೆಯಿಂದ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗಾಗಿ ಪೂರ್ವಸಿದ್ಧತೆಯ ಎಲ್ಲ ಪಂದ್ಯಾವಳಿಗಳಲ್ಲೂ ಬದಲಾವಣೆಗಳು ಕಂಡಿತು. ಈ ಹೊಸ ಅಂಕಣ ಹಾಸು ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಳಸಲಾಗುವ ಡೆಕೊಟರ್ಫ್ ಹಾಸಿನಂತಿದ್ದ ಕಾರಣ, ಹಾಸು ಬದಲಾವಣೆ ವಿವಾದಕ್ಕೀಡಾಯಿತು.[೨] 2010ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಸೆರೆನಾ ವಿಲಿಯಮ್ಸ್ ಸಿಂಗಲ್ಸ್ ವಿಜೇತರಾಗಿದ್ದರು. ಪುರುಷರ ಡಬಲ್ಸ್ ಪಂದ್ಯದಲ್ಲಿ, ಬಾಬ್ ಮತ್ತು ಮೈಕ್ ಬ್ರಯಾನ್ ಜೋಡಿ ಹಾಗೂ, ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಜೋಡಿ ವಿಜೇತರಾದರು. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಎರಡೂ ಡಬಲ್ಸ್ ಪಂದ್ಯಗಳನ್ನು ಒಡಹುಟ್ಟಿದವರು ಗೆದ್ದಿರುವುದು ಇತಿಹಾಸದಲ್ಲಿ ಎರಡನೆಯ ಬಾರಿ ಹಾಗೂ ಸತತ ಎರಡನೇ ವರ್ಷದ ದಾಖಲೆಯಾಗಿದೆ. ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಕಾರಾ ಬ್ಲ್ಯಾಕ್ ಮತ್ತು ಲಿಯಾಂಡರ್ ಪೇಸ್ ಜೋಡಿ ವಿಜೇತರಾಗಿದ್ದರು.
ಇತಿಹಾಸ
ಬದಲಾಯಿಸಿಟೆನ್ನಿಸ್ ಆಸ್ಟ್ರೇಲಿಯಾ ಮುಂಚಿನ ಲಾನ್ ಟೆನ್ನಿಸ್ ಅಸೊಷಿಯೇಷನ್ ಆಫ್ ಆಸ್ಟ್ರೇಲಿಯಾ (LTAA) ಮಂಡಳಿಯು ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಿ, ನಿರ್ವಹಿಸುತ್ತದೆ. ಮೊದಲ ಬಾರಿಗೆ 1905ರಲ್ಲಿ ಮೆಲ್ಬೊರ್ನ್‌ನ ಸೇಂಟ್ ಕಿಲ್ಡಾ ರಸ್ತೆಯಲ್ಲಿರುವ ವೇರ್ಹೌಸ್ಮನ್ ಕ್ರಿಕೆಟ್ ಮೈದಾನದಲ್ಲಿ ಆಡಲಾಯಿತು. ಈ ಅಂಕಣವನ್ನು ಇಂದು ಅಲ್ಬರ್ಟ್ ರಿಸರ್ವ್ ಟೆನ್ನಿಸ್ ಸೆಂಟರ್ ಎನ್ನಲಾಗಿದೆ.[೩] ಮೊದಲಿಗೆ, ಪಂದ್ಯಾವಳಿಯನ್ನು ಆಸ್ಟ್ರೇಲೇಷ್ಯನ್ ಚಾಂಪಿಯನ್‌ಶಿಪ್ಸ್ ಎನ್ನಲಾಗುತ್ತಿತ್ತು. 1927ರಲ್ಲಿ ಇದನ್ನು ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್ಸ್ ಎನ್ನಲಾಯಿತು. 1969ರಲ್ಲಿ ಆಸ್ಟ್ರೇಲಿಯನ್ ಓಪನ್ ಎಂದು ಮರುನಾಮಕರಣ ಮಾಡಲಾಯಿತು.[೪] 1905ರಿಂದಲೂ, ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯನ್ನು ಕೆಳಕಂಡಂತೆ ಆಸ್ಟ್ರೇಲಿಯಾದ ಐದು ನಗರಗಳು ಹಾಗೂ ನ್ಯೂಜಿಲೆಂಡ್‌ನ ಎರಡು ನಗರಗಳಲ್ಲಿ ಆಯೋಜಿಸಲಾಗಿತ್ತು: ಮೆಲ್ಬೊರ್ನ್ (54 ಬಾರಿ), ಸಿಡ್ನಿ (17 ಬಾರಿ), ಆಡಿಲೇಡ್ (14 ಬಾರಿ), ಬ್ರಿಸ್ಬೇನ್ (7 ಬಾರಿ), ಪರ್ತ್ (3 ಬಾರಿ), ಕ್ರೈಸ್ಟ್‌ಚರ್ಚ್ (1906ರಲ್ಲಿ) ಹಾಗೂ ಹೇಸ್ಟಿಂಗ್ಸ್ (1912ರಲ್ಲಿ).[೪] ಪಂದ್ಯಾವಳಿಯನ್ನು ಪ್ರತಿ ವರ್ಷವೂ ಒಂದೇ ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು 1972ರಲ್ಲಿ ನಿರ್ಧರಿಸಲಾಯಿತು. ಮೆಲ್ಬೊರ್ನ್ ನಗರವು ಅತೀ ಹೆಚ್ಚು ಪ್ರೋತ್ಸಾಹವನ್ನು ಆಕರ್ಷಿಸಿದ್ದರಿಂದ ಅಲ್ಲಿನ ಕೂಯಾಂಗ್ ಲಾನ್ ಟೆನ್ನಿಸ್ ಕ್ಲಬ್‌ನ್ನು ಆಯ್ಕೆ ಮಾಡಲಾಯಿತು.[೩] ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್ 1905ರಲ್ಲಿ ಆರಂಭಗೊಂಡರೂ, ಪಂದ್ಯಾವಳಿಯನ್ನು ಒಂದು ಪ್ರಮುಖ ಚಾಂಪಿಯನ್‌ಶಿಪ್ ಎಂದು 1924ರವರೆಗೆ ಗೊತ್ತುಮಾಡಿರಲಿಲ್ಲ. 1923ರಲ್ಲಿ ಸಭೆ ಸೇರಿದ ಅಂತಾರಾಷ್ಟ್ರೀಯ ಲಾನ್ ಟೆನ್ನಿಸ್ ಒಕ್ಕೂಟ (ಐಎಲ್‌ಟಿಎಫ್)ದ ನಿರ್ಣಯದಂತೆ ಪ್ರಮುಖ ಚಾಂಪಿಯನ್‌ಶಿಪ್ ಎಂದು ಸೂಚಿಸಲಾಯಿತು. ಆ ಸಮಯದಲ್ಲಿ, ಶ್ರೇಯಾಂಕ ವ್ಯವಸ್ಥೆಯನ್ನು ಒಳಗೊಳ್ಳಲೆಂದು ಪಂದ್ಯಾವಳಿಯ ಸಮಿತಿಯು ಪಂದ್ಯಾವಳಿಯ ರೂಪುರೇಖೆಯನ್ನು ಬದಲಾಯಿಸಿತು.[೫]
ಕೂಯಾಂಗ್ ಕ್ರೀಡಾಂಗಣದ ಪ್ರೇಕ್ಷಕರ ಸಾಮರ್ಥ್ಯವನ್ನು ಮೀರಿದ ಬೇಡಿಕೆಗಳನ್ನು ಪೂರೈಸಲು, 1988ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗಾಗಿ ಮೆಲ್ಬೊರ್ನ್ ಪಾರ್ಕ್ (ಮುಂಚೆ 'ಫ್ಲಿಂಡರ್ಸ್ ಪಾರ್ಕ್') ನಿರ್ಮಿಸಲಾಯಿತು. ಕೂಯಾಂಗ್‌ನಿಂದ ಮೆಲ್ಬೊರ್ನ್ ಪಾರ್ಕ್‌ಗೆ ಪಂದ್ಯಾವಳಿಯ ಸ್ಥಳಾಂತರದಿಂದಾಗಿ ಶೀಘ್ರ ಯಶಸ್ಸು ಕಂಡಿತು. 1988ರಲ್ಲಿ ಪ್ರೇಕ್ಷಕರ ಹಾಜರಾತಿಯಲ್ಲಿ 90%ರಷ್ಟು ಹೆಚ್ಚಳವಾಯಿತು (266,436). ಇದರ ಹಿಂದಿನ ವರ್ಷ ಕೂಯಾಂಗ್‌ನಲ್ಲಿ ಹಾಜರಾತಿ 140,000ದಷ್ಟಿತ್ತು.[೬]
ಆಸ್ಟ್ರೇಲಿಯಾ ಭೌಗೋಳಿಕವಾಗಿ ದೂರಪ್ರದೇಶದಲ್ಲಿರುವುದರಿಂದ ಪಂದ್ಯಾವಳಿಯ ಆರಂಭಕಾಲದಲ್ಲಿ ಭಾಗವಹಿಸುತ್ತಿದ್ದ ವಿದೇಶಿ ಆಟಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. 1920ರ ದಶಕದಲ್ಲಿ, ಯುರೋಪ್‌ನಿಂದ ಆಸ್ಟ್ರೇಲಿಯಾದತ್ತ ಹಡಗು ಪ್ರಯಾಣವು ಸುಮಾರು 45 ದಿನಗಳಾಗುತ್ತಿತ್ತು. ಮೊದಲ ಬಾರಿಗೆ, ಅಂದರೆ ನವೆಂಬರ್ 1946ರಲ್ಲಿ ವಿಮಾನದಲ್ಲಿ ಬಂದವರು, ಅಮೆರಿಕನ್ ಡೇವಿಸ್ ಕಪ್ ಟೆನ್ನಿಸ್ ತಂಡದ ಆಟಗಾರರಾಗಿದ್ದರು.[೬] ದೇಶದೊಳಗೂ ಸಹ, ಬಹಳಷ್ಟು ಆಟಗಾರರು ಸುಗಮವಾಗಿ ಪ್ರಯಾಣಿಸಲಾಗುತ್ತಿರಲಿಲ್ಲ. ಪಂದ್ಯಾವಳಿಯನ್ನು ಪರ್ತ್ ನಗರದಲ್ಲಿ ಆಯೋಜಿಸಿದಾಗ, ವಿಕ್ಟೊರಿಯಾ ಅಥವಾ ನ್ಯೂ ಸೌತ್ ವೇಲ್ಸ್ ಆಟಗಾರರಲ್ಲಿ ಯಾರೊಬ್ಬರೂ ರೈಲು ಪ್ರಯಾಣ ಮಾಡಲು ಆಸಕ್ತಿ ತೋರಲಿಲ್ಲ. ಆಸ್ಟ್ರೇಲಿಯಾದ ಪೂರ್ವ ಕಡಲತೀರ ಮತ್ತು ಪಶ್ಚಿಮ ಕಡಲತೀರದ ನಡುವೆ ಸುಮಾರು 3,000 ಕಿಲೋಮೀಟರ್ ದೂರವಿದೆ. 1906ರಲ್ಲಿ ಪಂದ್ಯಾವಳಿಯು ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಿತು. ಕೇವಲ ಹತ್ತು ಆಟಗಾರರ ಪೈಕಿ ಇಬ್ಬರು ಆಸ್ಟ್ರೇಲಿಯನ್ನರು ಭಾಗವಹಿಸಿದ್ದರು. ನ್ಯೂಜಿಲೆಂಡ್ ಅಟಗಾರರೊಬ್ಬರು ಈ ಟೆನ್ನಿಸ್ ಪಂದ್ಯಾವಳಿಯನ್ನು ಗೆದ್ದರು.[೭]
ಆಸ್ಟ್ರಲೇಷ್ಯನ್ ಚಾಂಪಿಯನ್‌ಶಿಪ್‌ನ ಮೊದಲ ಕೆಲ ಪಂದ್ಯಾವಳಿಗಳು ಇತರೆ ಆಸ್ಟ್ರಲೇಷ್ಯನ್ ಪಂದ್ಯಾವಳಿಗಳ ತೀವ್ರ ಪೈಪೋಟಿಯಿಂದ ಕಷ್ಟ ಎದುರಿಸಿತು. 1905ರ ಮುಂಚೆ, ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ನ್ಯೂಜಿಲೆಂಡ್‌ನಲ್ಲಿ ತಮ್ಮದೇ ಚಾಂಪಿಯನ್‌ಶಿಪ್ ಪಂದ್ಯಾವಳಿಗಳು ಆಯೋಜಿತವಾಗುತ್ತಿದ್ದವು. ಇವುಗಳಲ್ಲಿ ಮೊಟ್ಟಮೊದಲನೆಯದು 1880ರಲ್ಲಿ ಮೆಲ್ಬೊರ್ನ್ ನಗರದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗೆ ಚಾಂಪಿಯನ್‌ಶಿಪ್ ಆಫ್ ದಿ ಕಾಲೊನಿ ಆಫ್ ವಿಕ್ಟೊರಿಯಾ ಎಂದು ಕರೆಯಲಾಯಿತು( ಇದನ್ನು ನಂತರ ಚಾಂಪಿಯನ್‌ಶಿಪ್ ಆಫ್ ವಿಕ್ಟೊರಿಯಾ ಎನ್ನಲಾಯಿತು).[೮] . ಆ ವರ್ಷಗಳಲ್ಲಿ ಇಬ್ಬರು ಅತ್ಯುತ್ತಮ ಆಟಗಾರರಾದ, ಆಸ್ಟ್ರೇಲಿಯಾ ಮೂಲದ ನಾರ್ಮನ್ ಬ್ರೂಕ್ಸ್(ಪುರುಷರ ಸಿಂಗಲ್ಸ್ ಕಪ್‌ನಲ್ಲಿ ಅವರ ಹೆಸರು ಬರೆಯಲಾಗಿದೆ) ಮತ್ತು ನ್ಯೂಜಿಲೆಂಡ್‌ನ ಆಂತೊನಿ ವೈಲ್ಡಿಂಗ್ ಈ ಪಂದ್ಯಾವಳಿಯಲ್ಲಿ ಬಹುಮಟ್ಟಿಗೆ ಆಡಲಿಲ್ಲ. ಬ್ರೂಕ್ಸ್ ಒಮ್ಮೆ ಆಗಮಿಸಿ 1911ರಲ್ಲಿ ಪಂದ್ಯಾವಳಿ ವಿಜೇತರಾದರು. ವೈಲ್ಡಿಂಗ್ ಪ್ರವೇಶಿಸಿ ಎರಡು ಬಾರಿ 1906 ಮತ್ತು 1909ರಲ್ಲಿ ಸ್ಪರ್ಧೆಯಲ್ಲಿ ಗೆದ್ದರು. ವಿಕ್ಟೊರಿಯನ್ ಚಾಂಪಿಯನ್‌ಶಿಪ್ ಪಂದ್ಯಾವಳಿ (ಅಥವಾ ವಿಂಬಲ್ಡನ್‌ನಲ್ಲಿ)ಯಲ್ಲಿ ಅವರ ಭೇಟಿಗಳಿಂದ ಆಸ್ಟ್ರೇಲೇಷ್ಯಾದ ಅತ್ಯುತ್ತಮ ಆಟಗಾರರನ್ನು ನಿರ್ಣಯಿಸಲು ನೆರವಾಯಿತು. 1912ರಲ್ಲಿ ನ್ಯೂಜಿಲೆಂಡ್‌ನ ಹೇಸ್ಟಿಂಗ್ಸ್‌ನಲ್ಲಿ ಆಸ್ಟ್ರೇಲೇಷ್ಯನ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆದಿದ್ದಾಗ, ಮೂರು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರೂ, ವೈಲ್ಡಿಂಗ್ ಸ್ವದೇಶಕ್ಕೆ ವಾಪಸಾಗಲಿಲ್ಲ. ಆ ಶಕೆಯ ಎಲ್ಲಾ ಆಟಗಾರರಿಗೂ ಇದು ಮರುಕಳಿಸುವ ಸಮಸ್ಯೆಯಾಗಿತ್ತು. ಬ್ರೂಕ್ಸ್ ಕೇವಲ ಮೂರು ಬಾರಿ ಯುರೋಪ್‌ಗೆ ಹೋಗಿದ್ದರು. ವಿಂಬಲ್ಡನ್ ಚಾಲೆಂಜ್ ಸುತ್ತನ್ನು ಒಮ್ಮೆ ತಲುಪಿದರಲ್ಲದೆ ಎರಡು ಬಾರಿ ವಿಂಬಲ್ಡನ್ ಜಯಗಳಿಸಿದರು. ಇದರಿಂದಾಗಿ, ಹಲವು ಆಟಗಾರರು ಆಸ್ಟ್ರೇಲೇಷ್ಯನ್ (ಆಸ್ಟ್ರೇಲಿಯನ್) ಹವ್ಯಾಸಿ ಅಥವಾ ಮುಕ್ತ ಚಾಂಪಿಯನ್‌ಶಿಪ್‌ಗಳಲ್ಲಿ ಆಡಿರಲಿಲ್ಲ: ರೆನ್ಷಾ, ಡೊಹರ್ಟಿಸ್ ವಿಲಿಯಮ್ ಲರ್ನೆಡ್, ಮೌರಿಸ್ ಮೆಕ್ಲಫ್ಲಿನ್, ಬೀಲ್ಸ್ ರೈಟ್, ಬಿಲ್ ಜಾನ್ಸ್ಟನ್, ಬಿಲ್ ಟಿಲ್ಡನ್, ರೆನೆ ಲಾಕಾಸ್ಟ್, ಹೆನ್ರಿ ಕೊಷೆಟ್, ಬಾಬ್ಬಿ ರಿಗ್ಸ್, ಜ್ಯಾಕ್ ಕ್ರಾಮರ್, ಟೆಡ್ ಷ್ರೋಡರ್, ಪ್ಯಾಂಚೊ ಗಾಂಜೇಲ್ಸ್, ಬಡ್ಜ್ ಪ್ಯಾಟಿ, ಮ್ಯಾನುಯಲ್ ಸ್ಯಾಂಟನಾ, ಜಾನ್ ಕೊಡ್ಸ್ ಮತ್ತಿತರರು. ಬ್ರೂಕ್ಸ್, ಎಲ್ಸ್‌ವರ್ತ್ ವೈನ್ಸ್, ಯರೊಸ್ಲಾವ್ ಡ್ರೊಬ್ನಿ, ಮ್ಯಾನುಯಲ್ ಆರಾಂಟಸ್, 35 ವರ್ಷದ ಇಲೀ ನ್ಯಾಸ್ಟಾಸ್ ಹಾಗೂ ಜಾನ್ ಬಾರ್ಗ್ ಒಮ್ಮೆ ಮಾತ್ರ ಆಗಮಿಸಿದ್ದರು. 1969ರಲ್ಲಿ ಮೊಟ್ಟಮೊದಲ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಬ್ರಿಸ್ಬೆನ್‌ನ ಮಿಲ್ಟನ್ ಕೋರ್ಟ್ಸ್‌ನಲ್ಲಿ ನಡೆಯಿತು. ಪಂದ್ಯವಾಳಿಯು ಎಲ್ಲ ಆಟಗಾರರಿಗೂ ಮುಕ್ತವಾಗಿತ್ತು. ಸಾಂಪ್ರದಾಯಿಕ ಸರಣಿಯಲ್ಲಿ ಆಡಲು ಅವಕಾಶವಿಲ್ಲದ ವೃತ್ತಿಪರ ಆಟಗಾರರೂ ಇದರಲ್ಲಿ ಸೇರಿದ್ದರು.[೯] ಅದೇನೇ ಇರಲಿ, 1969 ಮತ್ತು 1971 ಪಂದ್ಯಾವಳಿಗಳ ಹೊರತುಪಡಿಸಿ, 1982ರವರೆಗೆ ಅನೇಕ ಮಂದಿ ಅತ್ಯುತ್ತಮ ಆಟಗಾರರು ಈ ಚಾಂಪಿಯನ್‌ಶಿಪ್‌ನಲ್ಲಿ ಆಡುವುದರಿಂದ ತಪ್ಪಿಸಿಕೊಂಡರು. ದೂರಪ್ರದೇಶ, ಅನನುಕೂಲದ ದಿನಾಂಕಗಳು (ಕ್ರಿಸ್ಮಸ್ ಮತ್ತು ಕ್ರೈಸ್ತವರ್ಷಾರಂಭ ದಿನದ ಆಸುಪಾಸು) ಹಾಗೂ ಬಹಳ ಕಡಿಮೆ ಮೊತ್ತದ ಬಹುಮಾನ ಇದಕ್ಕೆ ಕಾರಣವಾಗಿತ್ತು. 1970ರಲ್ಲಿ, ರಾಡ್ ಲೇವರ್, ಕೆನ್ ರೊಸ್ವಾಲ್, ಆಂಡ್ರೆಸ್ ಗಿಮೆನೊ, ಪ್ಯಾಂಚೊ ಗಾಂಝೆಲೆಜ್, ರಾಯ್ ಎಮರ್ಸನ್ ಮತ್ತು ಫ್ರೆಡ್ ಸ್ಡೊಲ್‌ಅವರನ್ನು ನೇಮಿಸಿಕೊಂಡಿದ್ದ ನ್ಯಾಷನಲ್ ಟೆನ್ನಿಸ್ ಲೀಗ್, ತಮ್ಮ ಆಟಗಾರರು ಪಂದ್ಯಾವಳಿಗೆ ಪ್ರವೇಶಿಸುವುದನ್ನು ತಪ್ಪಿಸಿತು. ಏಕೆಂದರೆ ಖಾತರಿಗಳು ಸಾಕಷ್ಟಿರಲಿಲ್ಲ. ಅಂತಿಮವಾಗಿ, ಆರ್ಥರ್ ಆಷ್ ಈ ಪಂದ್ಯಾವಳಿಯಲ್ಲಿ ವಿಜೇತರಾದರು.[೧೦] 1983ರಲ್ಲಿ, ಇವಾನ್ ಲೆಂಡ್ಲ್, ಜಾನ್ ಮೆಕೆನ್ರೊ ಮತ್ತು ಮ್ಯಾಟ್ಸ್ ವಿಲಾಂಡರ್ ಪಂದ್ಯಾವಳಿಗೆ ಪ್ರವೇಶಿಸಿದರು. ಸಿಂಗಲ್ಸ್ ಪ್ರಶಸ್ತಿ ಗೆದ್ದ ನಂತರ,[೧೧] ಕೂಯಾಂಗ್‌ನಲ್ಲಿ ಡೇವಿಸ್ ಕಪ್ ಪಂದ್ಯದಲ್ಲಿ ತಮ್ಮ ಎರಡೂ ಸಿಂಗಲ್ಸ್ ರಬ್ಬರ್‌ಗಳನ್ನು ಮ್ಯಾಟ್ಸ್ ವಿಲಾಂಡರ್ ಗೆದ್ದುಕೊಂಡರು. ಸ್ವೀಡನ್ ಆಸ್ಟ್ರೇಲಿಯಾ ವಿರುದ್ಧ ಡೇವಿಸ್ ಕಪ್ ಪಂದ್ಯ ಸೋತಿತು.[೧೨] 1983ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ನಂತರ, ಅಂತಾರಾಷ್ಟ್ರೀಯ ಟೆನ್ನಿಸ್ ಒಕ್ಕೂಟವು ಪಂದ್ಯಾವಳಿಯ ಸ್ಥಳವನ್ನು ಬದಲಾಯಿಸುವಂತೆ ಆಸ್ಟ್ರೇಲಿಯ ಲಾನ್ ಟೆನ್ನಿಸ್ ಸಂಘಕ್ಕೆ ಪ್ರಚೋದಿಸಿತು. ಇಂತಹ ದೊಡ್ಡ ಪಂದ್ಯಾವಳಿಯ ಆತಿಥ್ಯ ವಹಿಸಲು ಕೂಯಾಂಗ್ ಅಸೂಕ್ತ ಎನ್ನುವುದು ಕಾರಣವಾಗಿತ್ತು. 1988ರಲ್ಲಿ ಮೊದಲ ಬಾರಿಗೆ ಫ್ಲಿಂಡರ್ಸ್ ಪಾರ್ಕ್‌ನಲ್ಲಿ (ಆನಂತರ ಮೆಲ್ಬೊರ್ನ್ ಪಾರ್ಕ್ ಎಂದು ಮರುಹೆಸರಿಸಲಾಯಿತು) ಪಂದ್ಯಾವಳಿಯನ್ನು ರಿಬೌಂಡ್ ಏಸ್ ಅಂಕಣದಲ್ಲಿ ಆಯೋಜಿಸಲಾಯಿತು.[೧೩]
ಮೆಲ್ಬೊರ್ನ್ ಪಾರ್ಕ್‌ಗೆ ಸ್ಥಳಾಂತರಕ್ಕೆ ಮುಂಚೆ, ಆತಿಥ್ಯ ವಹಿಸುವ ಸ್ಥಳದ ಹವಾಗುಣ ಅಥವಾ ಅನಿವಾರ್ಯ ಘಟನೆಗಳ ಕಾರಣದಿಂದಾಗಿ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ದಿನಾಂಕಗಳು ಅದರಲ್ಲೂ ನಿರ್ದಿಷ್ಟವಾಗಿ ಅರಂಭಿಕ ವರ್ಷಗಳಲ್ಲಿ ಏರುಪೇರಾಯಿತು. ಉದಾಹರಣೆಗೆ, 1919ರ ಪಂದ್ಯಾವಳಿಯನ್ನು 1920ರ ಜನವರಿ ತಿಂಗಳಲ್ಲಿ ನಡೆಸಲಾಯಿತು (1920ರ ಪಂದ್ಯಾವಳಿಯನ್ನು ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತಿತ್ತು). 1923ರಲ್ಲಿ ಬ್ರಿಸ್ಬೆನ್‌ನಲ್ಲಿ ಪಂದ್ಯಾವಳಿಯನ್ನು, ತೀವ್ರ ಬಿಸಿಲು ಅಥವಾ ಆರ್ದ್ರತೆಯಿರದ, ಸೌಮ್ಯ ಹವಾಗುಣದ ಆಗಸ್ಟ್ ತಿಂಗಳಲ್ಲಿ ನಡೆಸಲಾಯಿತು. ಮೊದಲ ಬಾರಿಗೆ, 1977ರ ಪಂದ್ಯಾವಳಿಯನ್ನು 1976ರ ಡಿಸೆಂಬರ್ ಹಾಗೂ 1977ರ ಜನವರಿ ತಿಂಗಳುಗಳ ನಡುವೆ ಆಯೋಜಿಸಿದ ನಂತರ ಮುಂದಿನ ಪಂದ್ಯಾವಳಿಯನ್ನು ಕೆಲವು ದಿನಗಳವರೆಗೆ ಮುಂದಕ್ಕೆ ಹಾಕಲು ಆಯೋಜಕರು ಆಯ್ಕೆಮಾಡಿಕೊಂಡರು. ನಂತರ ಅದೇ ವರ್ಷ ಇನ್ನೊಂದು ಪಂದ್ಯಾವಳಿಯು ನಡೆದು, ಡಿಸೆಂಬರ್ 31ರಂದು ಅಂತ್ಯಗೊಂಡಿತು. ಆದರೂ ಅತ್ಯುತ್ತಮ ಆಟಗಾರರನ್ನು ಆಕರ್ಷಿಸಲು ಇದು ವಿಫಲವಾಯಿತು. 1982ರಿಂದ 1985ರ ತನಕ, ಪಂದ್ಯಾವಳಿಯನ್ನು ಡಿಸೆಂಬರ್ ತಿಂಗಳ ಮಧ್ಯದಲ್ಲಿ ನಡೆಸಲಾಯಿತು. ನಂತರ ಮುಂದಿನ ಪಂದ್ಯಾವಳಿಯನ್ನು (ಜನವರಿ 1987) ಜನವರಿಯ ಮಧ್ಯಾವಧಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು, ಅದರ ಅರ್ಥ 1986ರಲ್ಲಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ನಡೆಯಲಿಲ್ಲ. 1987ರಿಂದಲೂ, ಆಸ್ಟ್ರೇಲಿಯನ್ ಓಪನ್ ನಡೆಯುವ ದಿನಾಂಕವು ಬದಲಾಗಿಲ್ಲ. ಆದರೂ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಕ್ರಿಸ್ಮಸ್ ಮತ್ತು ಹೊಸವರ್ಷ ರಜೆಗಳು ಕಳೆದ ಕೂಡಲೆ ಆರಂಭಗೊಳ್ಳುವುದರಿಂದ ಆಟಗಾರರು ತಮ್ಮ ಉತ್ತಮ ಲಯ ಕಂಡುಕೊಳ್ಳಲು ಅಸಾಧ್ಯವಾಗುತ್ತದೆ, ಇದರಿಂದಾಗಿ ಪಂದ್ಯಾವಳಿಯನ್ನು ಫೆಬ್ರವರಿಗೆ ಸ್ಥಳಾಂತರಿಸಬೇಕು ಎಂದು ರೋಜರ್ ಫೆಡರರ್, ರಫೆಲ್ ನಡಾಲ್ ಸೇರಿದಂತೆ ಹಲವು ಶ್ರೇಷ್ಠ ಟೆನ್ನಿಸ್ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[೧೪] 2008ರಲ್ಲಿ ಅಂಕಣ ಬದಲಾಯಿಸುವ ಪ್ರಸ್ತಾಪ ಮೂಡಿಬಂತು. 2016ರಲ್ಲಿ ಮೆಲ್ಬೊರ್ನ್ ಗುತ್ತಿಗೆಯು ಮುಗಿದೊಡನೆಯೇ ತಾವು ಪಂದ್ಯಾವಳಿಯ ಆತಿಥ್ಯ ವಹಿಸಲು ಆಸಕ್ತರಾಗಿರುವುದಾಗಿ ನ್ಯೂ ಸೌತ್ ವೇಲ್ಸ್ ಅಧಿಕಾರಿಗಳು ತಮ್ಮ ಇಚ್ಛೆಯನ್ನು ಸ್ಪಷ್ಟಪಡಿಸಿದರು. ಸಿಡ್ನಿಯ ಗ್ಲೆಬ್ ಐಲೆಂಡ್ ಪಂದ್ಯಾವಳಿಗೆ ಪ್ರಸ್ತಾಪಿಸಿದ ಮರುಸ್ಥಳವಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯು ಮೆಲ್ಬೊರ್ನ್ ಸ್ಪರ್ಧೆಯನ್ನು ಉಳಿಸಿಕೊಳ್ಳಬೇಕು ಎಂದು ವಿಕ್ಟೊರಿಯನ್ ಇವೆಂಟ್ಸ್ ಇಂಡಸ್ಟ್ರಿ ಕೌನ್ಸಿಲ್ ಮುಖ್ಯಸ್ಥ ವೇಯ್ನ್ ಕೇಯ್ಲರ್-ಥಾಮ್ಸನ್ ಹಠ ಹಿಡಿದರು. 'ನ್ಯೂ ಸೌತ್ ವೇಲ್ಸ್ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, NSWಗೆ ಸ್ವಂತಿಕೆಯಿಲ್ಲದಿರುವುದು ನಿರಾಶೆ ಉಂಟುಮಾಡಿದೆ ಹಾಗು ಇತರೆ ಆಸ್ಟ್ರೇಲಿಯದ ನಗರಗಳನ್ನು ಬಳಸಿಕೊಳ್ಳುವ ಬದಲಿಗೆ ಅವರದೇ ಸ್ಪರ್ಧೆಗಳನ್ನು ನಡೆಸಲಿ ಎಂದು ತಿಳಿಸಿದ್ದಾರೆ. ಪ್ರಸ್ತಾಪ ಮುಂದಿಟ್ಟಾಗಿನಿಂದಲೂ, ಮೆಲ್ಬೊರ್ನ್ ಪಾರ್ಕ್‌ನ ಪುನರಾಭಿವೃದ್ಧಿ ಯೋಜನೆ ಘೋಷಿಸಲಾಗಿದೆ. ಇದಕ್ಕೆ ನೂರಾರು ದಶಲಕ್ಷ ಡಾಲರ್‌ಗಳು ವೆಚ್ಚವಾಗುವುವದೆಂದು ನಿರೀಕ್ಷಿಸಲಾಗಿದೆ. ಮೆಲ್ಬೊರ್ನ್ ಪಾರ್ಕ್ ನವೀಕರಿಸಿದ ಹಾಗೂ ಹೆಚ್ಚಿಸಿದ ಆಸನ ವ್ಯವಸ್ಥೆಗಳನ್ನು ಪ್ರಮುಖ ಸ್ಥಳಗಳಲ್ಲಿ ಒಳಗೊಂಡಿರಬೇಕು, ಮಾರ್ಗರೆಟ್ ಕೋರ್ಟ್ ಅರೆನಾ ಮೇಲೆ ಛಾವಣಿ, ಆಟಗಾರರಿಗಾಗಿ ಇನ್ನಷ್ಟು ಸುಧಾರಿಸಿದ ಸೌಕರ್ಯಗಳು, ಟೆನ್ನಿಸ್ ಆಸ್ಟ್ರೇಲಿಯಕ್ಕಾಗಿ ಹೊಸ ಪ್ರಧಾನ ಕಾರ್ಯಸ್ಥಾನಗಳು, ಹಾಗೂ ಪ್ರಸಕ್ತ ಟೆನ್ನಿಸ್ ಆಟವನ್ನು ತೋರಿಸುವ ದೊಡ್ಡ ಟೆಲಿವಿಷನ್‌ಗಳನ್ನು ಒಳಗೊಂಡಿರುವ ಆಂಶಿಕವಾಗಿ ಮುಚ್ಚಿರುವ ಟೌನ್ ಸ್ಕ್ವೇರ್ ಪ್ರದೇಶ.[೧೫] ಒಂದು ವರ್ಷದ ನಂತರ, ಈ ಯೋಜನೆಗಳನ್ನು ಬಹುಮಟ್ಟಿಗೆ ಅನುಮೋದಿಸಲಾಯಿತು. ಈ ನವೀಕರಣಗಳನ್ನು ಸಂಪೂರ್ಣಗೊಳಿಸಲು ತಮ್ಮ ಸರ್ಕಾರವು 363 ದಶಲಕ್ಷ ಆಸ್ಟ್ರೇಲಿಯನ್ ಡಾಲರ್(AUD )ಗಳಷ್ಟು ಹಣವನ್ನು ಮೀಸಲಿಡಲು ಬದ್ಧ ಎಂದು ವಿಕ್ಟೊರಿಯಾದ ಪ್ರಧಾನಿ ಜಾನ್ ಬ್ರಂಬಿ ದೃಢಪಡಿಸಿದರು. ಈ ಕ್ರಮದಿಂದಾಗಿ 2036ರ ತನಕ ಪಂದ್ಯಾವಳಿಯು ಮೆಲ್ಬೊರ್ನ್ ಬಿಟ್ಟು ಸ್ಥಳಾಂತರವಾಗದಿರುವುದು ಖಾತರಿಪಟ್ಟಿತು.[೧೬]
ದೂರದರ್ಶನ ಪ್ರಸಾರ
ಬದಲಾಯಿಸಿಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ನೆಟ್ವರ್ಕ್ ಪ್ರಸಾರದಲ್ಲಿ ನೇರಪ್ರಸಾರವಾಗದಿರುವ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಎಂದರೆ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿ. 2010ರಲ್ಲಿ, ಇಎಸ್‌ಪಿಎನ್ ಮತ್ತು ಟೆನ್ನಿಸ್ ಚಾನೆಲ್ ಮೂಲಕ ನೇರಪ್ರಸಾರ ಮತ್ತು ಧ್ವನಿಮುದ್ರಣವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಚಾಂಪಿಯನ್‌ಶಿಪ್ ಪಂದ್ಯವನ್ನು ಇಎಸ್‌ಪಿಎನ್2 ವಾಹಿನಿಯಲ್ಲಿ ಪ್ರಸಾರ ಮಾಡಲಾಯಿತು. ಆಸ್ಟ್ರೇಲಿಯಾದಲ್ಲಿ, ಸೆವೆನ್ ನೆಟ್ವರ್ಕ್ ವಾಹಿನಿಯ ಮೂಲಕ ಇಡೀ ಪಂದ್ಯಾವಳಿಯು ಪ್ರಸಾರವಾಗುವುದು. ಬ್ರಿಟನ್‌ನಲ್ಲಿ ಬಿಬಿಸಿ ವಾಹಿನಿಯ ಮೂಲಕ ಈ ಪಂದ್ಯಾವಳಿ ಪ್ರಸಾರವಾಗುತ್ತದೆ. ವಿಶ್ವದ ಇತರೆಲ್ಲೆಡೆ, ಪಂದ್ಯಾವಳಿಯನ್ನು ಯುರೋಸ್ಪೋರ್ಟ್ ಮೂಲಕ ವೀಕ್ಷಿಸಬಹುದಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾಗಳು ಹಾಗು ಆಸ್ಟ್ರೇಲಿಯದ ನಡುವೆ ಬಹಳಷ್ಟು ಸಮಯದ ಅಂತರವಿರುವುದರಿಂದ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಕನಿಷ್ಠ ಟೆಲಿವಿಷನ್ ಪ್ರಸಾರದ ಗ್ರಾಂಡ್ ಸ್ಲಾಮ್ ಎನಿಸಿದೆ.
ಇತ್ತೀಚಿನ ಹಾಜರಾತಿಗಳು
ಬದಲಾಯಿಸಿಟ್ರೋಫಿಗಳು ಮತ್ತು ಬಹುಮಾನ ಹಣ
ಬದಲಾಯಿಸಿಪಂದ್ಯಾವಳಿ ವಿಜೇತರ ಹೆಸರುಗಳನ್ನು ಅವರಿಗೆ ನೀಡಲಾದ ಟ್ರೋಫಿಕಪ್‌ಗಳ ಮೇಲೆ ಕೆತ್ತನೆ ಮಾಡಲಾಗಿರುತ್ತದೆ.
- ಮಹಿಳೆಯರ ಸಿಂಗಲ್ಸ್ ವಿಜೇತೆಗೆ ಡ್ಯಾಫ್ನ್ ಅಖರ್ಸ್ಟ್ ಸ್ಮಾರಕ ಪಾರಿತೋಷಕ ನೀಡಲಾಗುತ್ತದೆ.
- ಪುರುಷರ ಸಿಂಗಲ್ಸ್ ವಿಜೇತರಿಗೆ ನಾರ್ಮನ್ ಬ್ರೂಕ್ಸ್ ಚಾಲೆಂಜ್ ಕಪ್ ನೀಡಲಾಗುತ್ತದೆ.
2010ರಲ್ಲಿ, ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್ ಪಂದ್ಯಾವಳಿಗಳಲ್ಲಿ ನೀಡಿದ ಬಹುಮಾನದ ಹಣವು ಸಮಾನವಾಗಿದ್ದು, ಕೆಳಗಿನಂತೆ ವಿತರಿಸಲಾಗಿದೆ:[೨೨]
- ಮೊದಲನೆಯ ಸುತ್ತು: A$ 19,500
- ಎರಡನೆಯ ಸುತ್ತು: A$ 31,500
- ಮೂರನೆಯ ಸುತ್ತು: A$ 52,000
- ನಾಲ್ಕನೆಯ ಸುತ್ತು: A$ 89,000
- ಕ್ವಾರ್ಟರ್‌ಫೈನಲ್ ತಲುಪಿದವರಿಗೆ: A$ 200,000
- ಸೆಮಿಫೈನಲ್ ತಲುಪಿದವರಿಗೆ: A$ 400,000
- ರನ್ನರ್ಸ್ ಅಪ್: A$ 1,050,000
- ವಿಜೇತರಿಗೆ A$ 2,100,000 (ಸುಮಾರು GBP£1,163,700 ; ಸುಮಾರು EUR€ 1,339,100 ; ಸುಮಾರು US$ 1,885,600 )
ಚಾಂಪಿಯನ್ನರು
ಬದಲಾಯಿಸಿಮುಖ್ಯ ಲೇಖನಗಳು ಪಂದ್ಯಗಳ ಪ್ರಕಾರ ವಿಂಗಡಿಸಲಾಗಿದೆ :
- ಪುರುಷರ ಸಿಂಗಲ್ಸ್
- ಮಹಿಳೆಯರ ಸಿಂಗಲ್ಸ್
- ಪುರುಷರ ಡಬಲ್ಸ್
- ಮಹಿಳೆಯರ ಡಬಲ್ಸ್
- ಮಿಶ್ರ ಡಬಲ್ಸ್
- ಸಿಂಗಲ್ಸ್ ಫೈನಲ್ಸ್
ಪ್ರಸಕ್ತ ಚಾಂಪಿಯನ್ನರು
ಬದಲಾಯಿಸಿ-
ಫೈನಲ್ ಪಂದ್ಯದಲ್ಲಿ ಆಂಟಿ ಮರ್ರೆ ವಿರುದ್ಧ ಗೆದ್ದ ರೋಜರ್ ಫೆಡರರ್, ನಾಲ್ಕು ಬಾರಿ ಚಾಂಪಿಯನ್ ಆಗಿದ್ದಾರೆ. ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ ಆಂಡ್ರೆ ಅಗಾಸಿ ದಾಖಲೆ ಸಮಗೊಳಿಸಿದರು.2010ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಫೆಡರರ್ಗೆ 16ನೆಯ ವೃತ್ತಿಪರ ಗ್ರ್ಯಾಂಡ್ ಸ್ಲ್ಯಾಮ್ ಜಯವಾಗಿತ್ತು.
-
ಸೆರೆನಾ ವಿಲಿಯಮ್ಸ್ ಎರಡು-ಬಾರಿ ಮಹಿಳೆಯರ ಚಾಂಪಿಯನ್ ಆದರು. ಜಸ್ಟೀನ್ ಹೆನಿನ್ರನ್ನು ಸೋಲಿಸಿ ಐದನೆಯ ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ 12ನೆಯ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗಳಿಸಿದರು.ಓಪನ್ ಟೆನ್ನಿಸ್ ಪಂದ್ಯಾವಳಿಗಳ ಇತಿಹಾಸದಲ್ಲಿ ಈ ಐದೂ ಪ್ರಶಸ್ತಿಗಳು ಮಹಿಳೆಯೊಬ್ಬರು ಗೆದ್ದ ಅತಿಹೆಚ್ಚು ಪ್ರಶಸ್ತಿಗಳಾಗಿವೆ.
-
ಪುರುಷರ ಡಬಲ್ಸ್ನಲ್ಲಿ ಬಾಬ್ ಬ್ರಯಾನ್ ಮತ್ತು ಅವಳಿ ಸಹೋದರ ಮೈಕ್ ಇಬ್ಬರೂ ಎರಡು ಬಾರಿ ಚಾಂಪಿಯನ್ನರಾಗಿದ್ದಾರೆ.ಇದು ಬ್ರಯಾನ್ ಸಹೋದರರ ನಾಲ್ಕನೆಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಹಾಗೂ ಪುರುಷರ ಡಬಲ್ಸ್ನಲ್ಲಿ ಒಟ್ಟಾರೆ ಎಂಟನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
-
ಮೈಕ್ ಮತ್ತು ಅವರ ಅವಳಿ ಸಹೋದರ ಬಾಬ್ ಬ್ರಯಾನ್ ಪುರುಷರ ಡಬಲ್ಸ್ನಲ್ಲಿ ಎರಡು ಬಾರಿ ಹಾಲಿ ಚಾಂಪಿಯನ್ನರಾಗಿದ್ದಾರೆ.ಇದು ಬ್ರಯಾನ್ ಸಹೋದರರ ನಾಲ್ಕನೆಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಹಾಗೂ ಪುರುಷರ ಡಬಲ್ಸ್ ಪಂದ್ಯದಲ್ಲಿ ಒಟ್ಟಾರೆ ಎಂಟನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ.
-
ಸೆರೆನಾ ವಿಲಿಯಮ್ಸ್ ಮತ್ತು ಅವರ ಅಕ್ಕ ವೀನಸ್ ಎರಡು ಬಾರಿ ಮಹಿಳೆಯರ ಡಬಲ್ಸ್ ಹಾಲಿ ಚಾಂಪಿಯನ್ರಾಗಿದ್ದಾರೆ.2010ರಲ್ಲಿ ವಿಲಿಯಮ್ಸ್ ಸಹೋದರಿಯರು ನಾಲ್ಕನೆಯ ಬಾರಿ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದರು. ಇದು ತಂಡವಾಗಿ ಅವರ ಹನ್ನೊಂದನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
-
ವೀನಸ್ ವಿಲಿಯಮ್ಸ್ ಮತ್ತು ಅವರ ತಂಗಿ ಸೆರೆನಾ ಎರಡು ಬಾರಿ ಹಾಲಿ ಮಹಿಳೆಯರ ಡಬಲ್ಸ್ ಚಾಂಪಿಯನ್ ಆಗಿದ್ದಾರೆ.2010ರಲ್ಲಿ ವಿಲಿಯಮ್ಸ್ ಸಹೋದರಿಯರು ನಾಲ್ಕನೆಯ ಬಾರಿ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದರು. ಇದು ಒಟ್ಟಾರೆ ಹನ್ನೊಂದನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
-
2010ರಲ್ಲಿ ಮಿಶ್ರ ಡಬಲ್ಸ್ ವಿಜೇತ ತಂಡದ ಸದಸ್ಯೆ ಕಾರಾ ಬ್ಲ್ಯಾಕ್.ಈ ಪ್ರಶಸ್ತಿ ಅವರ ವೃತ್ತಿಜೀವನದ ನಾಲ್ಕನೆಯ ಮಿಶ್ರ ಡಬಲ್ಸ್ ಪ್ರಶಸ್ತಿಯಾಗಿದ್ದು, ಮಿಶ್ರ ಡಬಲ್ಸ್ ವೃತ್ತಿ ಗ್ರ್ಯಾಂಡ್ ಸ್ಲ್ಯಾಮ್ ದೊರಕಿಸಿತು.
-
2010ರಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ವಿಜೇತ ತಂಡದ ಸದಸ್ಯ ಲಿಯಾಂಡರ್ ಪೇಸ್. ಎರಡನೆಯ ಬಾರಿ ಆಸ್ಟ್ರೇಲಿಯನ್ ಓಪನ್ ವಿಜೇತರು (ಇದಕ್ಕೆ ಮುಂಚೆ 2003ರಲ್ಲಿ ಮಾರ್ಟಿನಾ ನವ್ರಟಿಲೊವಾರೊಂದಿಗೆ ಗೆದ್ದಿದ್ದರು)ಅವರ ವೃತ್ತಿಜೀವನದಲ್ಲಿ ಇದು ಐದನೆಯ ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿತ್ತು.
ಪಂದ್ಯ | ಚಾಂಪಿಯನ್ | ರನ್ನರ್‌ಅಪ್ | ಅಂಕ |
---|---|---|---|
2010 ಪುರುಷರ ಸಿಂಗಲ್ಸ್ | ರೋಜರ್ ಫೆಡರರ್ | ಆಂಡಿ ಮರ್ರೆ | 6–3, 6–4, 7–6(11) |
2010 ಮಹಿಳೆಯರ ಸಿಂಗಲ್ಸ್ | ಸೆರೆನಾ ವಿಲಿಯಮ್ಸ್ | ಜಸ್ಟೀನ್ ಹೆನಿನ್ | 6–4, 3–6, 6–2 |
2010 ಪುರುಷರ ಡಬಲ್ಸ್ | ಬಾಬ್ ಬ್ರಯಾನ್ ಮೈಕ್ ಬ್ರಯಾನ್ |
ಡೇನಿಯಲ್ ನೆಸ್ಟರ್ ನೆನಾಡ್ ಝಿಮೊನ್ಜಿಕ್ |
6–3, 6–7(5), 6–3 |
2010 ಮಹಿಳೆಯರ ಡಬಲ್ಸ್ | ಸೆರೆನಾ ವಿಲಿಯಮ್ಸ್ ವೀನಸ್ ವಿಲಿಯಮ್ಸ್ |
ಕಾರಾ ಬ್ಲ್ಯಾಕ್ ಲೀಜಲ್ ಹೂಬರ್ |
6–4, 6–3 |
2010 ಮಿಶ್ರ ಡಬಲ್ಸ್ | ಕಾರಾ ಬ್ಲ್ಯಾಕ್ ಲಿಯಾಂಡರ್ ಪೇಸ್ |
ಎಕಾಟರಿನಾ ಮಕಾರೊವಾ ಜಾರೊಸ್ಲಾವ್ ಲೆವಿನ್‌ಸ್ಕಿ |
7–5, 6–3 |
ದಾಖಲೆಗಳು
ಬದಲಾಯಿಸಿಇತರೆ ಮೂರು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳು 1968ರಲ್ಲಿ ಓಪನ್(ಮುಕ್ತ) ಪಂದ್ಯಾವಳಿಗಳಾದರೆ ಆಸ್ಟ್ರೇಲಿಯನ್ ಪಂದ್ಯಾವಳಿಯು ವೃತ್ತಿಪರರಿಗಾಗಿ 1969ರಲ್ಲಿ ಮುಕ್ತವಾಯಿತು. ಹಾಗಾಗಿ, 1969ರ ಪಂದ್ಯಾವಳಿಯಲ್ಲಿ ಇಲ್ಲಿನ ದಾಖಲೆಗಳು ಮುರಿಯುತ್ತವೆ. ಈ ದಾಖಲೆಗಳಿಗಾಗಿ ಉಲ್ಲೇಖಗಳು ಇಲ್ಲಿವೆ.[೨೩]
ದಾಖಲೆ | ಪಂದ್ಯಾವಳಿ ಮುಕ್ತಗೊಂಡ ಯುಗ* | ಆಟಗಾರ(ರು) | ಎಣಿಕೆ | ವರ್ಷಗಳು | ||
---|---|---|---|---|---|---|
1905ರಿಂದ ಪುರುಷರು | ||||||
ಅತಿಹೆಚ್ಚು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದವರು |
1969ಕ್ಕಿಂತ ಮೊದಲು | ರಾಯ್ ಎಮರ್ಸನ್ | 6 | 1961, 1963, 1964, 1965, 1966, 1967 | ||
1968ರ ನಂತರ | ಆಂಡ್ರೆ ಅಗಾಸಿ ರೋಜರ್ ಫೆಡರರ್ |
4 | 1995, 2000, 2001, 2003 2004, 2006, 2007, 2010 | |||
ಅತಿ ಹೆಚ್ಚು ಸತತವಾಗಿ ಪುರುಷರ ಸಿಂಗಲ್ಸ್ ಪ್ರಶಸ್ತಿಗಳ ವಿಜೇತರು |
1969ಕ್ಕಿಂತ ಮೊದಲು | ರಾಯ್ ಎಮರ್ಸನ್ | 5 | 1963, 1964, 1965, 1966, 1967 | ||
1968 ರ ನಂತರ | ಕೆನ್ ರೋಸ್ವಾಲ್ ಗಿಲರ್ಮೊ ವಿಲಾಸ್ ಜೊಹಾನ್ ಕ್ರಿಯಕ್ ಮ್ಯಾಟ್ಸ್ ವಿಲಾಂಡರ್ ಸ್ಟೀಫನ್ ಎಡ್ಬರ್ಗ್ ಇವಾನ್ ಲೆಂಡ್ಲ್ ಜಿಮ್ ಕೊರಿಯರ್ ಆಂಡ್ರೆ ಅಗಾಸಿ ರೋಜರ್ ಫೆಡರರ್ |
2 | 1971, 1972 1978, 1979 1981 -1982 1983, 1984 1985, 1987[೨೪] 1989, 1990 1992, 1993 2000, 2001 2006, 2007 | |||
ಅತೀ ಹೆಚ್ಚು ಪುರುಷರ ಡಬಲ್ಸ್ ಪ್ರಶಸ್ತಿ ವಿಜೇತರು |
1969ಕ್ಕಿಂತ ಮೊದಲು | ಅಡ್ರಿಯನ್ ಕ್ವಿಸ್ಟ್ | 10 | 1936, 1937, 1938, 1939, 1940, 1946, 1947, 1948, 1949, 1950 | ||
1968ರ ನಂತರ | ಮಾರ್ಕ್ ಎಡ್ಮಂಡ್ಸನ್ ಬಾಬ್ ಬ್ರಯಾನ್ ಮೈಕ್ ಬ್ರಯಾನ್ |
4 | 1980, 1981, 1983, 1984 2006, 2007, 2009, 2010 2006, 2007, 2009, 2010 | |||
ಅತೀ ಹೆಚ್ಚು ಸತತವಾಗಿ ಪುರುಷರ ಡಬಲ್ಸ್ ಪ್ರಶಸ್ತಿ ವಿಜೇತರು |
1969ಕ್ಕಿಂತ ಮೊದಲು | ಅಡ್ರಿಯನ್ ಕ್ವಿಸ್ಟ್ | 10 | 1936, 1937, 1938, 1939, 1940, 1946, 1947, 1948, 1949, 1950[೨೫] | ||
1968ರ ನಂತರ | ಮಾರ್ಕ್ ಎಡ್ಮಂಡ್ಸನ್ ಕಿಮ್ ವಾರ್ವಿಕ್ ಮಾರ್ಕ್ ಎಡ್ಮಂಡ್ಸನ್ ರಿಕ್ ಲೀಚ್ ಜಿಮ್ ಪಗ್ ಫ್ಯಾಬ್ರಿಸ್ ಸ್ಯಾಂಟೊರೊ ಮೈಕಲ್ ಲೊಡ್ರಾ ಬಾಬ್ ಬ್ರಯಾನ್ ಮೈಕ್ ಬ್ರಯಾನ್ |
2 | 1980 -1981 1980 -1981 1983, 1984 1988, 1989 1988, 1989 2003, 2004 2003, 2004 2006, 2007; 2009, 2010 2006, 2007; 2009, 2010 | |||
ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಅತೀ ಹೆಚ್ಚು ಬಾರಿ ಗೆದ್ದ ಪುರುಷರು |
1969ಕ್ಕಿಂತ ಮೊದಲು | ಹ್ಯಾರಿ ಹಾಪ್ಮನ್ ಕೊಲಿನ್ ಲಾಂಗ್ |
4 | 1930, 1936, 1937, 1939 1940, 1946, 1947, 1948 | ||
1968ರ ನಂತರ | ಜಿಮ್ ಪಗ್ | 3 | 1988, 1989, 1990 | |||
ಅತೀ ಹೆಚ್ಚು ಚಾಂಪಿಯನ್‌ಶಿಪ್‌ಗಳ ವಿಜೇತರು (ಒಟ್ಟು: ಸಿಂಗಲ್ಸ್, ಪುರುಷರ ಡಬಲ್ಸ್, ಮಿಶ್ರ ಡಬಲ್ಸ್) - ಪುರುಷರು |
1969ಕ್ಕಿಂತ ಮೊದಲು | ಅಡ್ರಿಯನ್ ಕ್ವಿಸ್ಟ್ | 13 | 1936-1950 (3 ಸಿಂಗಲ್ಸ್, 10 ಪುರುಷರ ಡಬಲ್ಸ್, 0 ಮಿಶ್ರ ಡಬಲ್ಸ್) | ||
1968ರ ನಂತರ | ಮಾರ್ಕ್ ಎಡ್ಮಂಡ್ಸನ್ ಜಿಮ್ ಪಗ್ ರಿಕ್ ಲೀಚ್ |
5 | 1976-1984 (1 ಸಿಂಗಲ್ಸ್, 4 ಪುರುಷರ ಡಬಲ್ಸ್) 1988-1990 (2 ಪುರುಷರ ಡಬಲ್ಸ್, 3 ಮಿಶ್ರ ಡಬಲ್ಸ್) 1988-2000 (3 ಪುರುಷರ ಡಬಲ್ಸ್, 2 ಮಿಶ್ರ ಡಬಲ್ಸ್) | |||
1922ರಿಂದ ಮಹಿಳೆಯರು | ||||||
ಅತಿಹೆಚ್ಚು ಬಾರಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದವರು |
1969ಕ್ಕಿಂತ ಮೊದಲು | ಮಾರ್ಗರೆಟ್ ಕೋರ್ಟ್ | 7 | 1960, 1961, 1962, 1963, 1964, 1965, 1966 | ||
1968ರ ನಂತರ | ಸೆರೆನಾ ವಿಲಿಯಮ್ಸ್ | 5 | 2003, 2005, 2007, 2009, 2010 | |||
ಅತೀ ಹೆಚ್ಚು ಸತತವಾಗಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ವಿಜೇತರು | ||||||
1969ಕ್ಕಿಂತ ಮೊದಲು | ಮಾರ್ಗರೆಟ್ ಕೋರ್ಟ್ | 7 | 1960, 1961, 1962, 1963, 1964, 1965, 1966 | |||
1968ರ ನಂತರ | ಮಾರ್ಗರೆಟ್ ಕೋರ್ಟ್ ಇವೊನ್ ಗೂಲಗಾಂಗ್ ಕಾಲೀ ಸ್ಟೆಫಿ ಗ್ರಾಫ್ / / ಮೊನಿಕಾ ಸೆಲೆಸ್ ಮಾರ್ಟಿನಾ ಹಿಂಗಿಸ್ |
3 | 1969, 1970, 1971 1974, 1975, 1976 1988, 1989, 1990 1991, 1992, 1993 1997, 1998, 1999 | |||
ಅತಿಹೆಚ್ಚು ಬಾರಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದವರು | ||||||
1969ಕ್ಕಿಂತ ಮೊದಲು | ಥೆಲ್ಮಾ ಕೊಯನ್ ಲಾಂಗ್ | 12 | 1936, 1937, 1938, 1939, 1940, 1947, 1948, 1949, 1951, 1952, 1956, 1958 | |||
1968ರ ನಂತರ | ಮಾರ್ಟಿನಾ ನವ್ರಟಿಲೊವಾ | 8 | 1980, 1982, 1983, 1984, 1985, 1987, 1988, 1989 | |||
ಅತೀ ಹೆಚ್ಚು ಸತತವಾಗಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗಳಿಸಿದವರು | ||||||
1969ಕ್ಕಿಂತ ಮೊದಲು | ಥೆಲ್ಮಾ ಕೊಯನ್ ಲಾಂಗ್ ನ್ಯಾನ್ಸಿ ವಿನ್ ಬೊಲ್ಟನ್ |
5 | 1936, 1937, 1938, 1939, 1940 1936, 1937, 1938, 1939, 1940 | |||
1989 ರ ನಂತರ | ಮಾರ್ಟಿನಾ ನವ್ರಟಿಲೊವಾ ಪ್ಯಾಮ್ ಷ್ರೈವರ್ |
7 | 1982, 1983, 1984, 1985, 1987, 1988, 1989 1982, 1983, 1984, 1985, 1987, 1988, 1989 | |||
ಅತಿಹೆಚ್ಚು ಬಾರಿ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದವರು - |
1969ಕ್ಕಿಂತ ಮೊದಲು | ಢ್ಯಾಫ್ನ್ ಅಖರ್ಸ್ಟ್ ಕೊಝೆನ್ಸ್ ನೆಲ್ ಹಾಲ್ ಹಾಪ್ಮನ್ ನ್ಯಾನ್ಸಿ ವಿನ್ ಬೊಲ್ಟನ್ ಥೆಲ್ಮಾ ಕೊಯನ್ ಲಾಂಗ್ |
4 | 1924, 1925, 1928, 1929 1930, 1936, 1937, 1939 1940, 1946, 1947, 1948 1951, 1952, 1954, 1955 | ||
1968ರ ನಂತರ | ಜೇನಾ ನೊವೊಟ್ನಾ ಲಾರಿಸಾ ಸವಚೆಂಕೊ ನೀಲೆಂಡ್ |
2 | 1988, 1989 1994, 1996 | |||
ಅತಿಹೆಚ್ಚು ಚಾಂಪಿಯನ್‌ಶಿಪ್‌ಗಳನ್ನು ಗೆದ್ದವರು: (ಒಟ್ಟು: ಸಿಂಗಲ್ಸ್, ಮಹಿಳೆಯರ ಡಬಲ್ಸ್, ಮಿಶ್ರ ಡಬಲ್ಸ್) - ಮಹಿಳೆಯರು |
1969ಕ್ಕಿಂತ ಮೊದಲು | ನ್ಯಾನ್ಸಿ ವಿನ್ ಬೊಲ್ಟನ್ | 20 | 1936-1952 (6 ಸಿಂಗಲ್ಸ್, 10 ಮಹಿಳೆಯರ ಡಬಲ್ಸ್, 4 ಮಿಶ್ರ ಡಬಲ್ಸ್) | ||
1968ರ ನಂತರ | ಮಾರ್ಟಿನಾ ನವ್ರಟಿಲೊವಾ | 12 | 1980-2003 (3 ಸಿಂಗಲ್ಸ್, 8 ಮಹಿಳೆಯರ ಡಬಲ್ಸ್, 1 ಮಿಶ್ರ ಡಬಲ್ಸ್) | |||
ಇತರೆ ವಿಷಯಗಳು | ||||||
ಅತಿ ಕಿರಿಯ ವಿಜೇತ | ಪುರುಷರ ಸಿಂಗಲ್ಸ್: | ಕೆನ್ ರೊಸ್ವಾಲ್ | 18 ವರ್ಷ 2 ತಿಂಗಳುಗಳು (1953) | |||
ಪುರುಷರ ಡಬಲ್ಸ್: | ಲ್ಯೂ ಹೋಡ್ | 18 ವರ್ಷ 2 ತಿಂಗಳು (1953) | ||||
ಮಹಿಳೆಯರ ಡಬಲ್ಸ್: | ಮಿರ್ಜಾನಾ ಲುಸಿಸ್ | 15 ವರ್ಷ 10 ತಿಂಗಳು (1998) | ||||
ಮಹಿಳೆಯರ ಸಿಂಗಲ್ಸ್: | ಮಾರ್ಟಿನಾ ಹಿಂಗಿಸ್ | 16 ವರ್ಷ 4 ತಿಂಗಳು (1997) | ||||
ಅತಿ ಹಿರಿಯ ವಿಜೇತರು | ಪುರುಷರ ಸಿಂಗಲ್ಸ್: | ಕೆನ್ ರೊಸ್ವಾಲ್ | 37 ವರ್ಷ 8 ತಿಂಗಳು (1972) | |||
ಪುರುಷರ ಡಬಲ್ಸ್: | ನಾರ್ಮನ್ ಬ್ರೂಕ್ಸ್ | 46 ವರ್ಷ 2 ತಿಂಗಳು (1924) | ||||
ಮಹಿಳೆಯರ ಡಬಲ್ಸ್: | ಥೆಲ್ಮಾ ಕೊಯನ್ ಲಾಂಗ್ | 37 ವರ್ಷ 7 ತಿಂಗಳು (1956) | ||||
ಮಹಿಳೆಯರ ಸಿಂಗಲ್ಸ್: | ಥೆಲ್ಮಾ ಕೊಯನ್ ಲಾಂಗ್ | 35 ವರ್ಷ 8 ತಿಂಗಳು (1954) | ||||
ಮಿಶ್ರ ಡಬಲ್ಸ್ (ಪುರುಷರು): | ಹೊರೆಸ್ ರೈಸ್ | 52 ವರ್ಷ (1923) | ||||
ಮಿಶ್ರ ಡಬಲ್ಸ್ (ಮಹಿಳೆಯರು): | ಮಾರ್ಟಿನಾ ನವ್ರಟಿಲೊವಾ | 46 ವರ್ಷ 3 ತಿಂಗಳು (2003) |
ಉಲ್ಲೇಖಗಳು
ಬದಲಾಯಿಸಿ- ↑ ದಿ ಫೈನಲ್ ವರ್ಡ್: ಆಸ್ಟ್ರೇಲಿಯನ್ ಓಪನ್ 2010
- ↑ ಟೆನ್ನಿಸ್ ಕೋರ್ಟ್ ಸರ್ಫೇಸರ್ ಸರ್ವ್ಸ್ ಅಪ್ ಟು ಮೇಜರ್ ಡೀಲ್ಸ್
- ↑ ೩.೦ ೩.೧ "Australian Tennis Open History". Jazzsports. Archived from the original on 2008-01-30. Retrieved 2008-01-22.
- ↑ ೪.೦ ೪.೧ Tristan Foenander. "History of the Australian Open – the Grand Slam of Asia/Pacific". Australian Open. Retrieved 2008-01-22.
- ↑ Unknown (09 November 1923). "Australasian Championships". The Sydney Morning Herald. Retrieved 2010-07-19.
{{cite web}}
: Check date values in:|date=
(help) - ↑ ೬.೦ ೬.೧ Frank Cook (14 February 2008). "Open began as Aussie closed shop". The Daily Telegraph. news.com.au. Archived from the original on 2012-12-06. Retrieved 2008-01-22.
- ↑ "Anthony Frederick Wilding "Tony"". International Tennis Hall of Fame. Archived from the original on September 30, 2007. Retrieved 2008-02-01.
- ↑ "History of Tennis - From humble beginnings". Tennis Australia. Retrieved 2008-01-25.
- ↑ "Milton Tennis Centre". Australian Stadiums. Retrieved 2008-01-25.
- ↑ Nikki Tugwell (14 January 2008). "Hewitt chases amazing slam win". The Daily Telegraph. news.com.au. Archived from the original on 2012-05-29. Retrieved 2008-01-25.
- ↑ Alan Trengove. "Australian Open 1983". wilandertribute.com. Retrieved 2008-02-19.
- ↑ "World Group 1983 Final". Davis Cup. Retrieved 2008-02-19.
- ↑ "Rebound Ace under review". The Daily Telegraph. news.com.au. 29 January 2007. Archived from the original on 2012-05-29. Retrieved 2008-02-19.
- ↑ Schlink, Leo (2009-01-17). "Rafael Nadal keen to call time on early slam". Herald Sun. Archived from the original on 2012-05-29. Retrieved 2009-09-18.
- ↑ "Brumby Government announces Melbourne Park redevelopment". Herald Sun. 2009-01-26. Archived from the original on 2012-05-29. Retrieved 2009-04-22.
- ↑ http://www.australianopen.com/en_AU/news/articles/2010-01-19/201001191263860753359.html?fpos=r2
- ↑ "Federer wins fourth Australian Open, 16th major singles title". 31 January 2010. Retrieved 2010-03-07.
- ↑ ಆಸ್ಟ್ರೇಲಿಯನ್ ಓಪನ್ 2009 - ದಿ ಫೈನಲ್ ವರ್ಡ್
- ↑ "The Australian Open - History of Attendance" (PDF). Australian Open. Archived from the original (PDF) on September 5, 2007. Retrieved 2008-01-30.
{{cite web}}
: Cite has empty unknown parameter:|1=
(help) - ↑ "AO 2007: The Final Word". Tennis Australia. Archived from the original on 2010-11-14. Retrieved 2008-01-25.
- ↑ "Safin credits Lundgren for resurgence". Sports Illustrated. CNN. 30 January 2005. Archived from the original on 2008-07-25. Retrieved 2008-01-25.
- ↑ "Prize Money". AustralianOpen.com. Retrieved 2010-01-26.
- ↑ "Australian History and Records". TennisTours.com. Archived from the original on 2008-12-21. Retrieved 2009-01-17.
- ↑ 1986ರಲ್ಲಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ನಡೆಯಲಿಲ್ಲ
- ↑ 1941ರಿಂದ 1945 ತನಕ ಎರಡನೆಯ ಮಹಾಯುದ್ಧದ ಕಾರಣ, ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್ಸ್ ಪಂದ್ಯಾವಳಿಯು ನಡೆಯಲಿಲ್ಲ.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಧಿಕೃತ ಅಂತರಜಾಲತಾಣ
- ಟೆನ್ನಿಸ್ ಆಸ್ಟ್ರೇಲಿಯಾದ ಅಂತರಜಾಲತಾಣ Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.
- ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ Archived 2013-07-22 ವೇಬ್ಯಾಕ್ ಮೆಷಿನ್ ನಲ್ಲಿ.
- ಸೆಟಲೈಟ್ ಇಮೇಜ್ ಆಫ್ ದಿ ವೆನ್ಯೂ (ಗೂಗಲ್ ಮ್ಯಾಪ್ಸ್ )
- ಆಸ್ಟ್ರೇಲಿಯನ್ ಓಪನ್ - ಆಲ್ ವಿನ್ನರ್ಸ್ ಎಂಡ್ ರನ್ನರ್ಸ್-ಅಪ್. ರೆಫರೆನ್ಸ್ ಬುಕ್
ಟೆಂಪ್ಲೇಟು:Australian Championships (tennis)