ಲಿಪೊಸಕ್ಷನ್
ಲಿಪೊಸಕ್ಷನ್ (ನೆಣಹೀರಿಕೆ) ಎಂದರೆ ಪ್ಲಾಸ್ಟಿಕ್ ಸರ್ಜರಿಯಲ್ಲಿ ಬಳಸಲಾಗುವ ಕೊಬ್ಬು ತೆಗೆಯುವ ವಿಧಾನದ ಒಂದು ಬಗೆ.[೧][೨][೩][೪]
ದೇಹದ ಕೆಲವೊಂದು ಭಾಗಗಳಲ್ಲಿ, ಮನುಷ್ಯ ಯಾವುದೇ ಬಗೆಯ ದೇಹಸಾಧನೆ ಮಾಡಿದರೂ ಕೊಬ್ಬುಗೂಡುವುದು ತಪ್ಪದು. ಈ ರೀತಿಯ ನೆಣ ಸಂಗ್ರಹ ಹೊಟ್ಟೆಯ ಮೇಲೆ, ಮೇಲಣ ತೊಡೆಯಲ್ಲಿ, ತೋಳಿನಲ್ಲಿ, ನಿತಂಬದಲ್ಲಿ ವಿಶೇಷ. ಈ ಕೆಲವು ಪ್ರದೇಶಗಳು ನೆಣಕೆತ್ತನೆ (ಲಿಪೋಸ್ಕಲ್‍ಪ್ಟಿಂಗ್) ಒಳಪಡುವಂತಹವು.
ಹಳೆಯ ವಿಧಾನ
ಬದಲಾಯಿಸಿವ್ಯಕ್ತಿಯ ಎಚ್ಚರ ತಪ್ಪಿಸಿ, ಲವಣಜಲ (ಸಲಾಯಿನ್) ವನ್ನು ಸೇರಿಸದೆ, ಒಣವಿಧಾನವಾಗಿ ನೆಣ ಹೀರಿಕೆಯನ್ನು ಮಾಡಲಾಗುತ್ತಿದ್ದಿತು. ಈ ವಿಧಾನದಲ್ಲಿ ಹೀರಿಕೆಗೆ ಬಳಸುವ ಹೀರುಗೊಳವೆ ತುಂಬ ಅಗಲ. ಅಲ್ಲದೆ ರಕ್ತೋದ್ರೇಕವೂ ವಿಶೇಷ. ಸುಮಾರು 4 ಲೀಟರ್ ನೆಣವನ್ನು ಹೀರಿತೆಗೆದರೆ 800 ಮಿ. ಲೀ. ರಕ್ತ ನಷ್ಟವಾಗುತ್ತಿದ್ದಿತು. ಅದನ್ನು ನೀಗಿಸಲು ರಕ್ತಪೂರಕದ ಅವಶ್ಯಕತೆಯಿದ್ದಿತು ಮತ್ತು ಶಸ್ತ್ರಕ್ರಿಯೆ ನಂತರ ಎಲಕ್ಟ್ರೋಲೈಟ್ ಸಮತೋಲನೆಯನ್ನು ಕಾಯ್ದಿರಿಸಲು ಶ್ರಮಿಸಬೇಕಾಗಿದ್ದಿತು.
ಹಸಿ ವಿಧಾನ
ಬದಲಾಯಿಸಿಈ ವಿಧಾನದ ಬದಲು ಬಳಕೆಗೆ ಬಂದಿರುವ ಹಸಿ (ವೆಟ್) ವಿಧಾನ ಹೆಚ್ಚು ಜನಪ್ರಿಯವಾಗಿದೆ. ಅಲ್ಲಿ ಸಲಾಯಿನನ್ನು ಜೈಲೋಕೇನ್, ಅಡ್ರಿನಲಿನ್ ಮತ್ತು ಸೋಡಿಯಂ ಬೈಕಾರ್ಬನೇಟ್ ಜೊತೆಯಲ್ಲಿ ಮಿಶ್ರಮಾಡಿ ನೆಣಹೀರಿಕೆ ಮಾಡುವ ಸ್ಥಳದಲ್ಲಿ ಕೊಡಬೇಕಾಗುತ್ತದೆ. 4 ಲೀಟರ್ ಕೊಬ್ಬು ತೆಗೆಯಲು ಯೋಚಿಸಿದ್ದರೆ 2 ಲೀಟರ್ ದ್ರವವನ್ನು 20 ನಿಮಿಷಗಳ ಕಾಲಾವಧಿಯಲ್ಲಿ ಒಳಸೇರಿಸಬೇಕಾಗುವುದು. ಅದನ್ನು ಕೇಕಮಾಡಿದನಂತರ ಆ ಪ್ರದೇಶವನ್ನು ಒತ್ತಿ ಆ ಪ್ರದೇಶದಲ್ಲೆಲ್ಲ ದ್ರವ ಹರಡುವಂತೆ ಮಾಡಬೇಕು. 20-30 ನಿಮಿಷಗಳ ನಂತರ ನೆಣಹೀರಿಕೆ ಮಾಡಬೇಕು. ಕೆಳ ಹೊಟ್ಟೆಯಿಂದ ತೆಗೆಯಬೇಕಾದರೆ 4-5 ಮಿ. ಮೀ ಉದ್ದನೆಯ ಗೀರುಗಾಯವನ್ನು ಹೊಕ್ಕಳು ಕೆಳಗೆ, ಗುಂಜೆಲು (ಪ್ಯೂಬಿಸ್) ಮೇಲೆ ಮಧ್ಯಗೆರೆಯಲ್ಲಿ ಮಾಡಿ, ಹೀರುಗೊಳವೆಯನ್ನು ಒಳಸೇರಿಸಬೇಕು. ಮೊದಲು ಆಳಪ್ರದೇಶದಲ್ಲಿನ ನೆಣವನ್ನು ಹೀರಿತೆಗೆಯಬೇಕು. ಅದಕ್ಕಾಗಿ ನಾಲ್ಕಾರು ಕಡೆ 2-3 ಮಿ ಮೀ. ಅಂತರದಲ್ಲಿ ಸುರಂಗಗಳನ್ನು ಕೊರೆದು ಎರಡೂ ಕಡೆ ಪಕ್ಕದವರೆಗೂ ಹೋಗಿ ನೆಣ ಹೀರಿ ತೆಗೆಯಬೇಕು. ಬಲಗೈ ಹೀರಿಕೆಯಲ್ಲಿ ತೋರಿಸಿದ್ದಾಗ, ಎಡಗೈಯನ್ನು ಹೊಟ್ಟೆಯ ಮೇಲಿರಿಸಿ ಒತ್ತುತ್ತ ಎಷ್ಟು ನೆಣ ತೆಗೆಯಲಾಗಿದೆ, ಮತ್ತೆಷ್ಟು ತೆಗೆಯಬೇಕು ಎಂಬುದರ ಅಳತೆ ಮಾಡುತ್ತ ಹೋಗಬೇಕು. ಆಳದ ಪದರದ ನಂತರ ಚರ್ಮದಡಿಯ ಮೇಲ್ತಲದ ಪ್ರದೇಶದಿಂದ ನೆಣಹೀರಬೇಕು. ಇದೇ ಬಗೆಯ ವಿಧಾನವನ್ನು ಮೇಲುಹೊಟ್ಟೆಯಲ್ಲಿ ಅನುಸರಿಸಲಾಗುತ್ತದೆ. ಆಗ ಗೀರುಗಾಯವನ್ನು ಹೊಕ್ಕುಳ ಮೇಲೆ ಮಧ್ಯಗೆರೆಯಲ್ಲಿ ಮಾಡಬೇಕು ಮತ್ತು ಗಾಳಿಯನ್ನು ಒಳಗೆಳೆದುಕೊಂಡು ಹೊಟ್ಟೆಯನ್ನು ಉಬ್ಬಿಸಬೇಕು. ಅದರಿಂದ ಉದರ ಭಿತ್ತಿಯಲ್ಲಿ ತೂತು ಬೀಳುವ ಸಂಭಾವ್ಯ ಕಡಿಮೆಯಾಗುತ್ತದೆ.
ನೆಣಹೀರಿಕೆಯ ಈ ವಿಧಾನವನ್ನು ದೇಹದ ಬೇರೆ ಭಾಗಗಳಲ್ಲೂ ಅನುಸರಿಸಲಾಗುವುದು. ನೆಣಹೀರಿಕೆ ನಂತರ ಆ ಪ್ರದೇಶವನ್ನು ಒತ್ತಿ ಬ್ಯಾಂಡೇಜ್ ಕಟ್ಟಬೇಕು. 13 ರಿಂದ 14 ವಾರಗಳ ಕಾಲ ಆ ಪ್ರದೇಶದ ಮೇಲೆ ಬಿಗಿಯಾಗಿ ಬಟ್ಟೆ ಕಟ್ಟಿ, ಅದರ ಬಿಗುಪು ಕಾಯ್ದುಕೊಳ್ಳಲು ಅಂಗ ಸಾಧನೆ ಮಾಡಬೇಕು. ನೆಣಹೀರಿಕೆ ನಂತರ ಬದಲಾವಣೆಗಳು ಕೂಡಲೇ ಗೋಚರಿಸುವುದಿಲ್ಲ. ಅದಕ್ಕೆ ಕನಿಷ್ಠ ಆರು ತಿಂಗಳಾದರೂ ಬೇಕು.
ಹಿಮಗೋಳಿಕೆ ವಿಧಾನ
ಬದಲಾಯಿಸಿಈಚೆಗೆ ಹಿಮಗೋಳಿಕೆ (ಕೈಯೆ) ನೆಣಹೀರಿಕೆ ವಿಧಾನವೂ ಬಳಕೆಗೆ ಬರುತ್ತಿದೆ. ಇಲ್ಲಿ ಶೈತ್ಯೀಕರಣವನ್ನು ಹೊರಗಿನಿಂದ ಅಥವಾ ಒಳಗಿನಿಂದ ಮಾಡಿ ನಂತರ ನೆಣಹೀರಿಕೆಯನ್ನು ಕೈಕೊಳ್ಳಲಾಗುತ್ತದೆ. ಹೊರಗಿನಿಂದ ಶೈತ್ಯೀಕರಣ ಮಾಡುವಾಗ ಪುಡಿಮಾಡಿದ ಹಿಮಕ್ಕೆ (ಐಸ್) ಯ ಚೀಲಗಳನ್ನು ನೆಣಹೀರಿಕೆ ಮಾಡುವ ಸ್ಥಳದಲ್ಲಿ ಇರಿಸಬೇಕು. ಇಲ್ಲವೆ 20 ಸೆಂ. ತಂತಿನ ಶೈತ್ಯೀಕರಣ ಸಲಾಯಿನನ್ನು ರಕ್ತನಾಳಾಂತರವಾಗಿ 29-30 ನಿಮಿಷಗಳ ಕಾಲ ಕೊಟ್ಟು ತಂಪುಮಾಡಿ, ನಂತರ ನೆಣಹೀರಿಕೆಮಾಡಬಹುದು. ಇಲ್ಲಿ ರಕ್ತೋದ್ರೇಕದ ಸಂಭಾವ್ಯ ಕಡಿಮೆ.
ಸಿರಿಂಜ್ ವಿಧಾನ
ಬದಲಾಯಿಸಿಸಿರಿಂಜ್ನ್ನು ಒಳಸೇರಿಸಿ, ಆ ಸೂಕ್ಮಸೂಜಿಯ ಮೂಲಕವೂ ನೆಣವನ್ನು ಹೀರಿತೆಗೆಯಬಹುದು. ಈ ವಿಧಾನದಲ್ಲಿ ಎಷ್ಟು ನೆಣಹೊರತೆಗೆಯಲಾಗಿದೆ ಎಂಬುದನ್ನು ಪಿಚಕಾರಿ ಕೂಡಲೇ ತಿಳಿಸಿಕೊಡುತ್ತದೆ. ಈ ವಿಧಾನವನ್ನು ಫ್ರೆಂಚ್ ಶಸ್ತ್ರವೈದ್ಯ ಪೀರೆ ಫ಼ೂರ್ನಿಯರ್ ಜನಪ್ರಿಯಗೊಳಿಸಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ Dixit, VV; Wagh, MS (May 2013). "Unfavourable outcomes of liposuction and their management". Indian Journal of Plastic Surgery. 46 (2): 377–92. doi:10.4103/0970-0358.118617. PMC 3901919. PMID 24501474.
- ↑ https://medlineplus.gov/ency/article/002985.htm
- ↑ https://www.urmc.rochester.edu/encyclopedia/content.aspx?ContentTypeID=85&ContentID=P01126
- ↑ Fallon, L. Fleming "Liposuction ." Gale Encyclopedia of Surgery: A Guide for Patients and Caregivers. . Encyclopedia.com. 9 Jan. 2024 <https://www.encyclopedia.com>.