ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಭಾರತ)


ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಯು ಭಾರತೀಯ ಸೈನ್ಯ ಸೇವೆಗಳ ಜಂಟಿ ಸೇವಾ ಅಕಾಡೆಮಿಯಾಗಿದ್ದು, ಇಲ್ಲಿ ಮೂರೂ ಸೈನ್ಯ ವಿಭಾಗಗಳಾದ ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯ ಕೆಡೆಟ್‌ಗಳಿಗೆ ಅವರು ಸೇವಾ ಅಕಾಡೆಮಿಗಳಿಗೆ ಪೂರ್ವ ನಿಯೋಜಿತ ತರಬೇತಿಗಳಿಗೆ ತೆರಳುವ ಮೊದಲು ತರಬೇತಿಯನ್ನು ನೀಡಲಾಗುತ್ತದೆ. ಇದು ಮಹಾರಾಷ್ಟ್ರಪುಣೆ ಬಳಿಯ ಖಡಕ್‌ವಾಸ್ಲಾದಲ್ಲಿದೆ.

National Defence Academy
ಧ್ಯೇಯसेवा परमो धर्म:
ಧ್ಯೇಯ (ಕನ್ನಡ)ಸೇವೆಯೇ ಪರಮ ಧರ್ಮ
ಸ್ಥಾಪನೆ7 ಡಿಸೆಂಬರ್ 1954
ಪ್ರಕಾರಮಿಲಿಟರಿ ಅಕಾಡೆಮಿ
ಸ್ಥಳಖಡಕ್ ವಾಸ್ಲಾ, ಮಹಾರಾಷ್ಟ್ರ, ಭಾರತ
ಆವರಣ7,015 acres (28.39 km2)
ಅಂತರಜಾಲ ತಾಣnda.nic.in

ಅಕಾಡೆಮಿಯು ಪ್ರಾರಂಭವಾದಾಗಿನಿಂದ ಪ್ರತಿ ಪ್ರಮುಖ ಸಂಘರ್ಷಗಳಲ್ಲಿ ಭಾರತೀಯ ಸೈನ್ಯವನ್ನು ಕಾರ್ಯಾಚರಣೆಗೆ ಕರೆದಾಗಲೆಲ್ಲಾ ಎನ್‌ಡಿಎ ಹಳೆಯ ವಿದ್ಯಾರ್ಥಿಗಳು ಯುದ್ಧದಲ್ಲಿ ಮಂಚೂಣಿಯಲ್ಲಿದ್ದು ಹೋರಾಡಿದ್ದಾರೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳಲ್ಲಿ 3 ಪರಮ ವೀರ ಚಿಕ್ರ ಮತ್ತು 9 ಅಶೋಕ ಚಕ್ರ ಸ್ವೀಕೃತರಿದ್ದಾರೆ.

Shamu pm 18 |thumb|left|200px|ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಸೂಡಾನ್ ಬ್ಲಾಕ್]] 1941 ರಲ್ಲಿ, ಆಗಿನ ಭಾರತದ ಗರ್ವನರ್ ಜನರಲ್ ಆಗಿದ್ದ ಲಾರ್ಡ್ ಲಿನ್ಲಿತ್‌ಗೋ ಅವರು [[ಎರಡನೇ ಮಹಾಯುದ್ಧ| ಎರಡನೇ ವಿಶ್ವ ಯುದ್ಧ]dash]ದ ಸಂದರ್ಭದಲ್ಲಿ ಪಶ್ಚಿಯ ಆಫ್ರಿಕಾದ ಕಾರ್ಯಾಚರಣೆಯಲ್ಲಿನ ಲಿಬರೇಶನ್ ಆಫ್ ಸೂಡಾನ್‌ನಲ್ಲಿ ಭಾರತೀಯ ಸೈನ್ಯದ ತ್ಯಾಗದ ಸ್ಮರಣಾರ್ಥವಾಗಿ ಯುದ್ಧ ಸ್ಮಾರಕವನ್ನು ನಿರ್ಮಿಸಲು ಸುಡಾನ್ ಸರ್ಕಾರದಿಂದ ನೂರು ಸಾವಿರ ಪೌಂಡ್‌ಗಳ ಉಡುಗೊರೆಯನ್ನು ಸ್ವೀಕರಿಸಿದರು. ಯುದ್ಧದ ಕೊನೆಯಲ್ಲಿ, ಆಗಿನ ಭಾರತೀಯ ಸೈನ್ಯದ ಕಮಾಂಡರ್ ಇನ್ ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕ್ಲಾಡ್ ಆಚಿನ್ಲೇಕ್ ಅವರು ಯುದ್ಧದ ಸಂದರ್ಭದಲ್ಲಿನ ಅನುಭವವನ್ನು ಪಡೆದು, ವಿಶ್ವದಾದ್ಯಂತದ ವಿವಿಧ ಸೈನ್ಯ ಅಕಾಡೆಮಿಗಳನ್ನು ಅಧ್ಯಯನ ಮಾಡುವ ಸಮಿತಿಯ ನೇತೃತ್ವ ವಹಿಸಿದರು ಮತ್ತು 1946 ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದರು. ವೆಸ್ಟ್ ಪಾಯಿಂಟ್‌ನಲ್ಲಿನ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಅಕಾಡೆಮಿಯ ಮಾದರಿಯಲ್ಲಿ ತರಬೇತಿ ನೀಡುವುದರೊಂದಿಗೆ ಜಂಟಿ ಸೇವೆಗಳ ಸೈನ್ಯ ಅಕಾಡೆಮಿಯನ್ನು ಸ್ಥಾಪಿಸಲು ಸಮಿತಿಯು ಶಿಫಾರಸು ಮಾಡಿತು.[]

1947 ರ ಆಗಸ್ಟ್‌ನಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಭಾರತದಲ್ಲಿನ ಸ್ಟಾಫ್ ಕಮಿಟಿಯ ಮುಖ್ಯಸ್ಥರುಗಳು ಆಚಿನ್ಲೇಕ್ ವರದಿಯನ್ನು ಪರಿಶೀಲಿಸಿತು ಮತ್ತು ತಕ್ಷಣವೇ ಶಿಫಾರಸುಗಳನ್ನು ಜಾರಿಗೆ ತಂದಿತು. ಖಾಯಂ ರಕ್ಷಣಾ ಅಕಾಡೆಮಿಯನ್ನು ಸ್ಥಾಪಿಸಲು ಸಮಿತಿಯು 1947 ರ ಕೊನೆಯಲ್ಲಿ ಕ್ರಿಯಾ ಯೋಜನೆಯೊಂದನ್ನು ಪ್ರಾರಂಭಿಸಿತು ಮತ್ತು ಅಕಾಡೆಮಿಯನ್ನು ಸ್ಥಾಪಿಸಲು ಸ್ಥಳವೊಂದಕ್ಕೆ ಹುಡುಕಾಟ ನಡೆಸಿತು. ಹಾಗೆಯೇ ಅವರು ಜಾಯಿಂಟ್ ಸರ್ವೀಸಸ್ ವಿಂಗ್ (ಜೆಎಸ್‌ಡಬ್ಲೂ) ಎಂಬ ಮಧ್ಯಂತರ ತರಬೇತಿ ಅಕಾಡಮೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದರು ಮತ್ತು ಅದನ್ನು 1949 ರ ಜನವರಿ 1 ರಂದು ಡೆಹ್ರಾಡೂನ್ನಲ್ಲಿನ ಸೈನ್ಯ ಪಡೆಗಳ ಅಕಾಡೆಮಿ ಯಲ್ಲಿ (ಇದೀಗ ಭಾರತೀಯ ಮಿಲಿಟರಿ ಅಕಾಡೆಮಿ ಎಂದು ಹೆಸರಾಗಿದೆ) ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ, ಜೆಎಸ್‌ಡಬ್ಲೂನಲ್ಲಿ ಎರಡು ವರ್ಷಗಳ ತರಬೇತಿಯ ನಂತರ, ಇನ್ನೂ ಎರಡು ವರ್ಷಗಳ ನಿಯೋಜನೆ-ಪೂರ್ವ ತರಬೇತಿಗಾಗಿ ಎಎಫ್ಎದ ಸೈನ್ಯ ವಿಭಾಗಕ್ಕೆ ಆರ್ಮಿ ಕೆಡೆಟ್‌ಗಳು ಹೋಗಬೇಕಾಗಿತ್ತು ಮತ್ತು ನೌಕಾ ಮತ್ತು ವಾಯು ಸೈನ್ಯದ ಕೆಡೆಟ್‌ಗಳನ್ನು ಹೆಚ್ಚಿನ ತರಬೇತಿಗಾಗಿ ಯುನೈಟೆಡ್ ಕಿಂಗ್‌ಡಮ್ನಲ್ಲಿನ ಡಾರ್ಟ್ಮೌತ್ ಮತ್ತು ಕ್ರಾನ್‌ವೆಲ್‌ಗೆ ಕಳುಹಿಸಲಾಗುತ್ತಿತ್ತು.

ವಿಭಜನೆಯ ಬಳಿಕ, ಸೂಡಾನ್‌ನಿಂದ ಸ್ವೀಕರಿಸಿದ ಹಣಕಾಸು ಉಡುಗೊರೆಯಲ್ಲಿ ಭಾರತದ ಪಾಲು ಸುಮಾರು £ 70,000 ಆಗಿತ್ತು (ಉಡುಗೊರೆಯ ಉಳಿಕೆ ಹಣ £ 30,000 ಪಾಕಿಸ್ತಾನಕ್ಕೆ ಸೇರಿತು). ಈ ನಿಧಿಯನ್ನು ಎನ್‌ಡಿಎ ನಿರ್ಮಾಣದ ಭಾಗಶಃ ವೆಚ್ಚವಾಗಿ ಬಳಸಲು ಭಾರತದ ಸೈನ್ಯವು ನಿರ್ಧರಿಸಿತು. ಅಕಾಡೆಮಿಯ ಅಡಿಗಲ್ಲನ್ನು 1949 ರ ಅಕ್ಟೋಬರ್ 6 ರಂದು ಆಗಿನ ಭಾರತದ ಪ್ರಧಾನಮಂತ್ರಿಗಳಾಗಿದ್ದ, ಜವಹರಲಾಲ್ ನೆಹರುರವರು ಮಾಡಿದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು 1954 ರ ಡಿಸೆಂಬರ್ 7 ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಿತು ಮತ್ತು 1955 ರ ಜನವರಿ 16 ರಂದು ಉದ್ಭಾಟನಾ ಸಮಾರಂಭವು ಜರುಗಿತು.[] ಜೆಎಸ್‌ಡಬ್ಲ್ಯೂ ಕಾರ್ಯಕ್ರಮವನ್ನು ಎಎಫ್ಎ ನಿಂದ ಎನ್‌ಡಿಎ ಗೆ ವರ್ಗಾಯಿಸಲಾಯಿತು.

ಕ್ಯಾಂಪಸ್

ಬದಲಾಯಿಸಿ
ಚಿತ್ರ:NDA SudanBlk.JPG
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿನ ಸೂಡಾನ್ ಬ್ಲಾಕ್ ಮತ್ತು ಅಶೋಕ ಸ್ಥಂಭ

ಪುಣೆ ನಗರದ ನೈಋತ್ಯ ದಿಕ್ಕಿನಲ್ಲಿ 17 ಕಿಮೀ ದೂರದಲ್ಲಿ, ಖಡಕ್‌ವಾಸ್ಲಾ ಸರೋವರದ ವಾಯುವ್ಯ ದಿಕ್ಕಿನಲ್ಲಿ ಎನ್‌ಡಿಎ ಕ್ಯಾಂಪಸ್ ನೆಲೆಸಿದೆ. ಮೊದಲಿನ ಬಾಂಬೆ ಎಸ್ಟೇಟ್‌ನ ಸರ್ಕಾರವು ದಾನ ನೀಡಿದ 8,022 acres (32.46 km2) ದ 7,015 acres (28.39 km2) ರಲ್ಲಿ ಎನ್‌ಡಿಎ ಆವರಿಸಿದೆ. ಸರೋವರದ ತೀರ, ಪಕ್ಕದ ಬೆಟ್ಟದ ಪ್ರದೇಶ, ಅರೇಬಿಯನ್ ಸಮುದ್ರಕ್ಕೆ ಮತ್ತು ಇತರ ಸೈನಿಕ ನೆಲೆಗಳಿಗೆ ಸಮೀಪದಲ್ಲಿರುವುದು ಮತ್ತು ಹತ್ತಿರದ ಲೋಹೆಗಾಂವ್ನಲ್ಲಿ ವಾಯುನೆಲೆಯಿರುವುದು ಜೊತೆಗೆ ಹಿತಕರ ವಾತಾವರಣದ ಕಾರಣದಿಂದ ಈ ಪ್ರದೇಶವನ್ನು ಆಯ್ಕೆ ಮಾಡಲಾಯಿತು. ಹಳೆಯ ಸಂಯೋಜಿತ-ಸೈನ್ಯದ ತರಬೇತಿ ಕೇಂದ್ರ ಮತ್ತು ಖಡಕ್‌ವಾಸ್ಲಾ ಸರೋವರದ ಉತ್ತರ ತೀರದಲ್ಲಿರುವ ಮತ್ತು ಉಭಯಪಡೆಗಳ ನಿಲ್ಲಿಸುವಿಕೆಗೆ ಬಳಸಲಾಗಿದ್ದ, ಈಗ ಬಳಸದಿರುವ ಹುಸಿ ನಿಂತ ಹಡಗು ಹೆಚ್ಎಮ್ಎಸ್ ಅಂಗೋಸ್ಟುರಾ ಇವುಗಳೆಲ್ಲವೂ ಈ ಸ್ಥಳದ ಆಯ್ಕೆಗೆ ಹೆಚ್ಚುವರಿಯಾಗಿ ಪ್ರಯೋಜನವನ್ನು ನೀಡಿದ್ದವು.[] ಯೋಗ್ಯವಾಗಿ, ಐತಿಹಾಸಿಕ ಶಿವಾಜಿಯ ಯುದ್ಧ ಭೂಮಿಯಲ್ಲಿ ಎನ್‌ಡಿಎ ನೆಲೆಸಿದ್ದು, ಇದರ ಹಿನ್ನೆಲೆಯಲ್ಲಿ ಸಿನ್ಹಘಡ್ ಕೋಟೆಯ ಮನೋರಮಣೀಯ ದೃಶ್ಯ ಕಾಣುತ್ತದೆ.

ಪೂರ್ವ ಆಫ್ರಿಕಾದಲ್ಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಸೂಡಾನ್ ಯುದ್ಧಕ್ಷೇತ್ರದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ ಎನ್‌ಡಿಎ ನ ಕಾರ್ಯನಿರ್ವಹಣಾ ಮುಖ್ಯಕೇಂದ್ರಕ್ಕೆ ಸೂಡಾನ್ ಬ್ಲಾಕ್ ಎಂದು ಹೆಸರಿಡಲಾಗಿದೆ. ಇದನ್ನು 1959 ರ ಮೇ 30 ರಂದು ಭಾರತದಲ್ಲಿನ ಸೂಡಾನ್‌ನ ಆಗಿನ ರಾಯಭಾರಿಯಾಗಿದ್ದ ರಹಮತುಲ್ಲಾ ಅಬ್ದುಲ್ಲಾ ಅವರು ಉದ್ಘಾಟಿಸಿದರು. ಕಟ್ಟಡವು 3 ಮಹಡಿಯ ಬಸಾಲ್ಟ್ ಮತ್ತು ಗ್ರಾನೈಡ್ ರಚನೆಯಾಗಿದ್ದು, ಇದನ್ನು ಜೋಧ್‌ಪುರ್‌ನ ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಕಮಾನಿನ ಮಿಶ್ರಣವನ್ನು ಒಳಗೊಂಡಿರುವ ಬಾಹ್ಯ ವಿನ್ಯಾಸ, ಮೇಲ್ಭಾದಲ್ಲಿ ಗುಮ್ಮಟವನ್ನು ಹೊಂದಿರುವ ಸ್ತಂಭಗಳು ಮತ್ತು ಜಗುಲಿಗಳು ಈ ಕಟ್ಟಡದ ವಾಸ್ತುಶಿಲ್ಪದ ವೈಶಿಷ್ಟ್ಯವಾಗಿದೆ. ಪ್ರವೇಶ ಹಜಾರವು ಬಿಳಿ ಇಟಾಲಿಯನ್ ಮಾರ್ಬಲ್‌ನ ನೆಲವನ್ನು ಮತ್ತು ಒಳಭಾಗದ ಗೋಡೆಗಳಿಗೆ ಫಲಕ ಜೋಡಣೆಗಳನ್ನು ಒಳಗೊಂಡಿದೆ. ಪ್ರವೇಶ ಹಜಾರದ ಗೋಡೆಗಳೊಂದರ ಮೇಲೆ ಅತ್ಯುಚ್ಛ ಶೌರ್ಯ ಪ್ರಶಸ್ತಿಗಳಾದ ಪರಮ ವೀರ ಚಕ್ರ ಅಥವಾ ಅಶೋಕ ಚಕ್ರದಿಂದ ಸನ್ಮಾನಿತರಾದ ಎನ್‌ಡಿಎ ಪದವೀಧರರ ಭಾವಚಿತ್ರಗಳನ್ನು ನೇತು ಹಾಕಲಾಗಿದೆ.

ಐತಿಹಾಸಿಕ ವಶಪಡಿಸಿಕೊಂಡ ಟ್ಯಾಂಕುಗಳು ಮತ್ತು ವಿಮಾನಗಳನ್ನು ಒಳಗೊಂಡು ಹಲವು ಯುದ್ಧ ಸ್ಮಾರಕಗಳು ಎನ್‌ಡಿಎ ಕ್ಯಾಂಪಸ್‌ಗೆ ಶೋಭೆ ತಂದಿದೆ.[] ವ್ಯಾಸ್ ಗ್ರಂಥಾಲಯ ವು 100,000 ಕ್ಕೂ ಹೆಚ್ಚು ಮುದ್ರಿತ ಸಂಪುಟಗಳ ಸಂಗ್ರಹದ ಜೊತೆಗೆ ಹಲವಾರು ಎಲೆಕ್ಟ್ರಾನಿಕ್ ವೃತ್ತಪತ್ರಿಕೆಗಳು ಮತ್ತು ವಿಶ್ವದಾದ್ಯಂತದಿಂದ ಕನಿಷ್ಠ 10 ಭಾಷೆಗಳಲ್ಲಿ ಹಲವಾರು ನಿಯತಕಾಲಿಕಗಳು ಮತ್ತು ವರ್ತಮಾನ ಪತ್ರಿಕೆಗಳನ್ನು ಒಳಗೊಂಡಿದೆ.

ಪ್ರವೇಶಾತಿ

ಬದಲಾಯಿಸಿ
 
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿನ "ಹೆಚ್" ಸ್ಕ್ವಾಡ್ರನ್ ಡಾರ್ಮಿಟರಿ

ಎನ್‌ಡಿಎಗೆ ಅರ್ಜಿ ಸಲ್ಲಿಸಿದವರನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಇದನ್ನು ಯುಪಿಎಸ್‌ಸಿ ನಡೆಸುತ್ತದೆ, ಆನಂತರ ವ್ಯಾಪಕ ಪ್ರಮಾಣದಲ್ಲಿ ಸಾಮಾನ್ಯ ಕೌಶಲ್ಯ, ಮನೋವೈಜ್ಞಾನಿಕ ಪರೀಕ್ಷೆ, ತಂಡ ಕೌಶಲ್ಯಗಳು ಜೊತೆಗೆ ದೈಹಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಒಳಗೊಂಡ ಸಂದರ್ಶಗಳು ಜೊತೆಗೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಜುಲೈ ಮತ್ತು ಜನವರಿಯಲ್ಲಿ ಪ್ರಾರಂಭವಾಗುವ ಸೆಮಿಸ್ಟರ್‌ಗಳಿಗೆ ವರ್ಷಕ್ಕೆ ಎರಡು ಬಾರಿ ಒಳಬರುವವರಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಪ್ರತಿ ಲಿಖಿತ ಪರೀಕ್ಷೆಗೆ ಸುಮಾರು 100,000 ಅರ್ಜಿದಾರರು ಹಾಜರಾಗುತ್ತಾರೆ. ಸಾಮಾನ್ಯವಾಗಿ, ಇವರಲ್ಲಿ ಸುಮಾರು 10,000 ಜನರಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ವಾಯು ಸೇನೆಗೆ ಸೇರಲು ಬಯಸುವ ಅರ್ಜಿದಾರರು ಪೈಲಟ್ ಕೌಶಲ್ಯ ಪರೀಕ್ಷೆಗೆ ಸಹ ಹಾಜರಾಗಬೇಕಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ ಅಕಾಡೆಮಿಗೆ ಸುಮಾರು 300-350 ಕೆಡೆಟ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ವಾಯು ಸೇನೆಗೆ ಸುಮಾರು 40 ಕೆಡೆಟ್‌ಗಳು, ನೌಕಾ ಸೇನೆಗೆ 50 ಮತ್ತು ಉಳಿದವರನ್ನು ಭೂಸೇನೆಗೆ ತೆಗೆದುಕೊಳ್ಳಲಾಗುತ್ತದೆ.

ಪ್ರವೇಶಕ್ಕೆ ತೆಗೆದುಕೊಳ್ಳುವ ಮತ್ತು ಯಶಸ್ವಿಯಾಗಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಕೆಡೆಟ್‌ಗಳನ್ನು ಅನುಕ್ರಮ ಸೇವೆಗಳಿಗೆ ಅಧಿಕಾರಿಗಳಾಗಿ ನಿಯುಕ್ತಿಗೊಳಿಸಲಾಗುತ್ತದೆ. ಕಾರ್ಯಕ್ರಮದ ಸಂದರ್ಭದಲ್ಲಿ ಗಂಭೀರವಾದ ಖಾಯಂ ವೈದ್ಯಕೀಯ ಸ್ಥಿತಿಗೆ ಒಳಗಾದ ಸಂದರ್ಭದಲ್ಲಿ ಮಾತ್ರ ನಿಯುಕ್ತಿಯನ್ನು ಕೆಡೆಟ್ ನಿರಾಕರಿಸಬಹುದಾಗಿರುತ್ತದೆ.[] ವಜಾ ಮಾಡಲಾದ, ನಿಯುಕ್ತಿಗೆ ರಾಜೀನಾಮೆ ನೀಡಿದ ಅಥವಾ ನಿರಾಕರಿಸಿದ ಕೆಡೆಟ್‌ಗಳಿಗೆ ಪದವಿಯನ್ನು ನೀಡದೇ ಇರಬಹುದು ಮತ್ತು ಶಿಕ್ಷಣ ಮತ್ತು ತರಬೇತಿಗೆ ತಗುಲಿದ ವೆಚ್ಚವನ್ನು ಅಂತಹವರು ರಕ್ಷಣಾ ಇಲಾಖೆಗೆ ಹಿಂತಿರುಗಿಸಬೇಕಾಗುತ್ತದೆ. 2009 ರಲ್ಲಿ ವೆಚ್ಚವು ಪ್ರತಿ ವಾರಕ್ಕೆ ರೂ. 7075 ಎಂದು ಅಂದಾಜು ಮಾಡಲಾಗಿದೆ.

ಪಠ್ಯಕ್ರಮ

ಬದಲಾಯಿಸಿ

ಶೈಕ್ಷಣಿಕ

ಬದಲಾಯಿಸಿ

ಕೇವಲ ಪೂರ್ಣಕಾಲಿಕ, ವಸತಿ ಶಿಕ್ಷಣದ ಪದವಿಪೂರ್ಣ ಕಾರ್ಯಕ್ರಮವನ್ನು ಎನ್‌ಡಿಎ ನೀಡುತ್ತದೆ. ಕೆಡೆಟ್‌ಗಳಿಗೆ ಮೂರು ವರ್ಷಗಳ ಅಧ್ಯಯನದ ನಂತರ ಬ್ಯಾಕಲರಿಯೇಟ್ ಪದವಿ (ಕಲಾ ವಿಭಾಗದ ಪದವಿ ಅಥವಾ ವಿಜ್ಞಾನ ವಿಭಾಗದ ಪದವಿ ) ಯನ್ನು ಪ್ರದಾನ ಮಾಡಲಾಗುತ್ತದೆ. ಕೆಡೆಟ್‌ಗಳು ಎರಡು ವಿಭಾಗಗಳ ಅಧ್ಯಯನದ ಆಯ್ಕೆಯನ್ನು ಹೊಂದಿರುತ್ತಾರೆ. ವಿಜ್ಞಾನ ವಿಭಾಗವು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಅಧ್ಯಯನ ಮಾಡುವ ಆಯ್ಕೆಯನ್ನು ನೀಡುತ್ತದೆ. ಮಾನವ ಸಂಸ್ಕೃತಿಗಳು (ಮಾನವಿಕ ಶಾಸ್ತ್ರಗಳು) ವಿಭಾಗವು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳ ಶಾಸ್ತ್ರ ಮತ್ತು ಭಾಷೆಗಳಲ್ಲಿ ಅಧ್ಯಯನ ಮಾಡುವ ಆಯ್ಕೆಯನ್ನು ನೀಡುತ್ತದೆ.

ಎರಡೂ ವಿಭಾಗಗಳಲ್ಲಿ, ಶೈಕ್ಷಣಿಕ ಅಧ್ಯಯನಗಳನ್ನು ಕೋರ್ಸುಗಳ ಮೂರು ವರ್ಗಗಳಾಗಿ ವಿಭಜಿಸಲಾಗಿದೆ.

  • ಕಡ್ಡಾಯ ಕೋರ್ಸ್ ನಲ್ಲಿ, ಕೆಡೆಟ್‌ಗಳು ಇಂಗ್ಲೀಷ್, ವಿದೇಶಿ ಭಾಷೆಗಳು (ಅರೇಬಿಕ್, ಚೈನೀಸ್, ಫ್ರೆಂಚ್ ಅಥವಾ ರಷ್ಯನ್), ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರವನ್ನು ಅಧ್ಯಯನ ಮಾಡುತ್ತಾರೆ. ಎಲ್ಲಾ ಕೆಡೆಟ್‌ಗಳು ವಿದೇಶೀ ಭಾಷೆಗಳನ್ನು ಹೊರತುಪಡಿಸಿ ಈ ಎಲ್ಲಾ ವಿಷಯಗಳಲ್ಲಿ ಪ್ರಾಥಮಿಕ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ನಂತರ ಕೆಡೆಟ್‌ಗಳು ತಾವು ಆಯ್ಕೆಮಾಡಿದ ವಿಭಾಗವನ್ನು ಆಧರಿಸಿ ಉನ್ನತ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.
  • ಮೂಲಭೂತ ಕೋರ್ಸ್ ಕಡ್ಡಾಯವಾಗಿದೆ ಮತ್ತು ಇದು ಸೈನ್ಯ ವಿಜ್ಞಾನ ಮತ್ತು ಸಾಮಾನ್ಯ ಅಧ್ಯಯನಗಳನ್ನು ಒಳಗೊಂಡಿದೆ. ಸೈನ್ಯ ಇತಿಹಾಸ, ಸೈನ್ಯ ಭೂಗೋಳಶಾಸ್ತ್ರ, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಸಲಕರಣೆಗಳು ಹಾಗೂ ಇತರ ವಿಷಯಗಳನ್ನು ಸೈನ್ಯ ಅಧ್ಯಯನವು ಒಳಗೊಂಡಿದೆ. ಭೂರಾಜ್ಯ ಶಾಸ್ತ್ರ, ಮಾನವ ಹಕ್ಕುಗಳು, ಸಶಸ್ತ್ರ ಸಂಘರ್ಷಗಳ ಕಾನೂನುಗಳು ಮತ್ತು ಪರಿಸರ ವಿಜ್ಞಾನದಂತಹ ವಿಷಯಗಳನ್ನು ಸಾಮಾನ್ಯ ಅಧ್ಯಯನದ ವಿಷಯವು ಒಳಗೊಂಡಿರುತ್ತದೆ.
  • ಕೆಡೆಟ್‌ಗಳು ಆಯ್ಕೆ ಮಾಡಿದ ಸೇವೆಗೆ ನಿರ್ದಿಷ್ಟವಾಗಿರುವುದನ್ನು ಐಚ್ಛಿಕ ಕೋರ್ಸ್ ಕೇಂದ್ರೀಕರಿಸುತ್ತದೆ.

ಕೆಡೆಟ್‌ಗಳು ಮೊದಲ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕಡ್ಡಾಯ ಕೋರ್ಸ್ ಮತ್ತು ಮೂಲಭೂತ ಕೋರ್ಸ್ ಗಳನ್ನು ಕಲಿಯುತ್ತಾರೆ. ಅವರುಗಳು ಐದನೇ ಮತ್ತು ಆರನೇ ಸೆಮಿಸ್ಟರ್‌ಗಳಲ್ಲಿ ಐಚ್ಛಿಕ ಕೋರ್ಸ್ ಅನ್ನು ತೆಗೆದುಕೊಳ್ಳುತ್ತಾರೆ. ಐಚ್ಛಿಕ ಕೋರ್ಸುಗಳಿಗೆ ಅವುಗಳನ್ನು ಇತರ ಸೇವಾ ಅಕಾಡೆಮಿಗಳಿಗೆ ವರ್ಗಾವಣೆ ಮಾಡಬಹುದು.[]

ತರಬೇತಿ

ಬದಲಾಯಿಸಿ

ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸಿದ ಎಲ್ಲಾ ಕೆಡೆಟ್‌ಗಳನ್ನು ಸಶಸ್ತ್ರ ಸೇನಾ ಪಡೆಯಲ್ಲಿ ಅಧಿಕಾರಿಗಳಾಗಿ ನಿಯೋಜಿಸಲಾಗುತ್ತದೆ. ಆದ್ದರಿಂದ, ಸೈನ್ಯ ನಾಯಕತ್ವ ಮತ್ತು ತರಬೇತಿಯು ಪಠ್ಯಕ್ರಮದ ಅತ್ಯಗತ್ಯ ಭಾಗವಾಗಿದೆ.

ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಎಲ್ಲಾ ಆರು ಸೆಮಿಸ್ಟರ್‌ಗಳ ಸಂದರ್ಭದಲ್ಲಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ದೈಹಿಕ ತರಬೇತಿಯು ಕಡ್ಡಾಯವಾಗಿದೆ. ಚಿಕ್ಕಪ್ರಮಾಣದ ಸಶಸ್ತ್ರ ಉಪಕರಣಗಳ ತರಬೇತಿಯು ಅಗತ್ಯವಿರುತ್ತದೆ. ಇದರ ಜೊತೆಗೆ, ಕೆಡೆಟ್‌ಗಳು ಪ್ಯಾರಾ ಗ್ಲೈಡಿಂಗ್, ರೋವಿಂಗ್, ಸೇಲಿಂಗ್, ಫೆನ್ಸಿಂಗ್, ಕುದುರೆ ಸವಾರಿ, ಕದನ ಕಲೆಗಳು, ಶೂಟಿಂಗ್, ಸ್ಕೈಯಿಂಗ್, ಸ್ಕೈ ಡ್ರೈವಿಂಗ್, ಬೆಟ್ಟ ಹತ್ತುವಿಕೆಯಂತಹ ಸಾಕಷ್ಟು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಪ್ರಮುಖ ಹಳೆಯ-ವಿದ್ಯಾರ್ಥಿಗಳು

ಬದಲಾಯಿಸಿ

ಅಕಾಡೆಮಿಯು ಸ್ಥಾಪಿತವಾದಾಗಿನಿಂದ ಅಕಾಡೆಮಿಯ ಹಳೆಯ ವಿದ್ಯಾರ್ಥಿಗಳು ಭಾರತವು ಭಾಗವಹಿಸಿದ ಪ್ರತಿ ಪ್ರಮುಖ ಸಂಘರ್ಷಗಳಲ್ಲಿ ರಾಷ್ಟ್ರದ ಪರವಾಗಿ ಮಂಚೂಣಿಯಲ್ಲಿದ್ದು ಹೋರಾಡಿದ್ದಾರೆ. ಅವರುಗಳು ಹತ್ತು ಹಲವು ಶೌರ್ಯ ಪ್ರಶಸ್ತಿಗಳನ್ನು ಜಯಿಸಿದುದರ ಜೊತೆಗೆ ಸಶಸ್ತ್ರ ಸೇನೆಗಳಲ್ಲಿ ಅತ್ಯುಚ್ಛ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಅಕಾಡೆಮಿಯ ಮೂರು ಹಳೆಯ ವಿದ್ಯಾರ್ಥಿಗಳಿಗೆ ಪರಮ ವೀರ ಚಕ್ರವನ್ನು ಪ್ರದಾನ ಮಾಡಲಾಗಿದೆ.[]

  • ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲೇರಿಯಾ, ಮರಣೋತ್ತರ, 1 ಗೂರ್ಖಾ ರೈಫಲ್ಸ್, ಕಾಂಗೋ, 1961
  • 2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್, ಮರಣೋತ್ತರ, 17 ಪೂನಾ ಹಾರ್ಸ್, 1971 ರ ಭಾರತ-ಪಾಕಿಸ್ತಾನ ಯುದ್ಧ
  • ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಮರಣೋತ್ತರ, 11 ಗೂರ್ಖಾ ರೈಫಲ್ಸ್, ಕಾರ್ಗಿಲ್ ಯುದ್ಧ, 1999

2010 ರ ವರೆಗೆ ಅಕಾಡೆಮಿಯ ಒಂಬತ್ತು ಹಳೆಯ ವಿದ್ಯಾರ್ಥಿಗಳಿಗೆ ಅಶೋಕ ಚಕ್ರವನ್ನು ಪ್ರದಾನ ಮಾಡಲಾಗಿದೆ.

31 ಹಳೆಯ ವಿದ್ಯಾರ್ಥಿಗಳಿಗೆ ಮಹಾವೀರ ಚಕ್ರ ಪ್ರದಾನ ಮಾಡಲಾಗಿದ್ದರೆ, 152 ವಿದ್ಯಾರ್ಥಿಗಳಿಗೆ ವೀರ ಚಕ್ರ ಪ್ರದಾನ ಮಾಡಲಾಗಿದೆ.

33 ಹಳೆಯ ವಿದ್ಯಾರ್ಥಿಗಳಿಗೆ ಕೀರ್ತಿ ಚಕ್ರ ಮತ್ತು 122 ವಿದ್ಯಾರ್ಥಿಗಳಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಗಿದೆ.

ಭಾರತೀಯ ಸಶಸ್ತ್ರ ಸೇನೆಯ 8 ಭೂ ಸೇನಾ ಮುಖ್ಯಸ್ಥರು, 7 ನೌಕಾ ಸೇನಾ ಮುಖ್ಯಸ್ಥರು ಮತ್ತು 4 ವಾಯು ಸೇನೆಯ ಮಖ್ಯಸ್ಥರು ಎನ್‌ಡಿಎ ಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ.[]

ಸಮೂಹ ಮಾಧ್ಯಮಗಳಲ್ಲಿ

ಬದಲಾಯಿಸಿ

ದೀಪ್ತಿ ಭಲ್ಲಾ ಮತ್ತು ಕುನಾಲ್ ಅವರುಗಳು ಬರೆದು ನಿರ್ದೇಶಿಸಿರುವ ದಿ ಸ್ಟ್ಯಾಂಡರ್ಡ್ ಬೇರರ್ಸ್ ಎಂಬ ಸಾಕ್ಷ್ಯಚಿತ್ರವು ಎನ್‌ಡಿಎ ನ ಇತಿಹಾಸ ಮತ್ತು ಕಾರ್ಯಗಳ ಬಗ್ಗೆ ಒಳನೋಟವನ್ನು ನೀಡುತ್ತದೆ.

ಇವನ್ನೂ ಗಮನಿಸಿ‌

ಬದಲಾಯಿಸಿ
  • ಭಾರತದ ಸೈನ್ಯ ಅಕಾಡೆಮಿಗಳು
  • ಸೈನಿಕ ಶಾಲೆ
  • ಭಾರತೀಯ ನೌಕಾ ಅಕಾಡೆಮಿ
  • ಆರ್ಮಿ ಕೆಡೆಟ್ ಕಾಲೇಜು

ಉಲ್ಲೇಖಗಳು‌

ಬದಲಾಯಿಸಿ
  1. ೧.೦ ೧.೧ "ಆರ್ಕೈವ್ ನಕಲು". Archived from the original on 2012-04-19. Retrieved 2011-04-21.
  2. http://www.bharatonline.com/maharashtra/travel/pune/national-defence-academy.html
  3. "ಆರ್ಕೈವ್ ನಕಲು". Archived from the original on 2011-06-18. Retrieved 2011-04-21.
  4. ೪.೦ ೪.೧ http://indianarmy.nic.in/writereaddata/documents/nda-joining-instruction.pdf
  5. http://nda.nic.in/html/nda-academic-training.html
  6. http://nda.nic.in/html/nda-chiefs-of-staff.html


ಬಾಹ್ಯ ಕೊಂಡಿಗಳು‌

ಬದಲಾಯಿಸಿ