ಮೌಂಟ್‌ ಅಬು ,pronunciation  ಅರಾವಳಿ ಪರ್ವತಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಶಿಖರವಾಗಿದ್ದು, ಇದು ಪಶ್ಚಿಮ ಭಾರತರಾಜಸ್ತಾನ ರಾಜ್ಯದಲ್ಲಿದೆ. ಈ ಶಿಖರ ಸಿರೋಹಿ ಜಿಲ್ಲೆಯಲ್ಲಿದೆ.

ಮೌಂಟ್‌ ಅಬು
Mount Abu

ಮೌಂಟ್‌ ಅಬು ಶಿಖರ ಪಾಲಂಪುರ್‌ (ಗುಜರಾತ್‌)ನಿಂದ 58 ಕಿಲೋ ಮೀಟರ್‌ ದೂರದಲ್ಲಿದೆ. ಉತ್ತರ ಅಹಮದಾಬಾದಿಗೆ 110 ಮೈಲಿ ದೂರದಲ್ಲಿದೆ. ಏಳು ಮೈಲಿ ಅಗಲವಾಗಿರುವ ಒಂದು ನದೀಕಣಿವೆ ಉಳಿದ ಬೆಟ್ಟಗಳ ಸಾಲಿನಿಂದ ಪರ್ವತವನ್ನು ಪ್ರತ್ಯೇಕಿಸಿದೆ. ಈ ಕಣಿವೆಯಲ್ಲಿ ಪಶ್ಚಿಮ ಬಾನಸ್ ಎಂಬ ನದಿ ಹರಿಯುವುದು. ಈ ಪರ್ವತ ಮೈದಾನದ ನಡುವೆ ಇರುವ ಕಡಿದಾದ ಗ್ರಾನೈಟ್ ಶಿಲಾದ್ವೀಪದಂತೆ ತೋರುವುದು. ಎತ್ತರ 4000' ಗಳಿಂದ 5650' ಗಳ ವರೆಗೆ. ಈ ಪರ್ವತ, 22 ಕಿಲೋ ಮೀಟರ್‌ ಉದ್ದ ಮತ್ತು 9 ಕಿಲೋ ಮೀಟರ್‌ ವಿಸ್ತಾರವಿರುವ ಅಪರೂಪದ ಕಲ್ಲುಬಂಡೆಗಳಿಂದ ಕೂಡಿದ ಪ್ರಸ್ಥಭೂಮಿಯನ್ನು ರೂಪಿಸಿದೆ. ಪರ್ವತಶ್ರೇಣಿಯಲ್ಲಿ ಗುರು ಶಿಖರ ಅತ್ಯಂತ ಅತ್ಯಂತ ಎತ್ತರವಾದ ಶಿಖರವಾಗಿದ್ದು, ಸಮುದ್ರ ಮಟ್ಟದಿಂದ 1722 ಮೀಟರ್‌ ಎತ್ತರದಲ್ಲಿದೆ. ಇದು ಹಲವು ನದಿಗಳು, ಸರೋವರಗಳು ಮತ್ತು ಜಲಪಾತಗಳ ತವರು ಮನೆಯಾಗಿದೆ, ಅಲ್ಲದೆ ನಿತ್ಯಹರಿದ್ವರ್ಣ ಅರಣ್ಯದಿಂದ ಕೂಡಿದೆ. ಈ ಎಲ್ಲ ಕಾರಣಗಳಿಂದ ಇದು 'ಮರುಭೂಮಿಯಲ್ಲಿರುವ ಓಯಸಿಸ್‌' ಎಂದು ಉಲ್ಲೇಖಗೊಂಡಿದೆ.

ಮೌಂಟ್‌ ಅಬು ಪರ್ವತದ ಪ್ರಾಚೀನ ಹೆಸರು "ಅರ್ಬುದಾಂಚಲ್‌ "

ಇತಿಹಾಸ ಬದಲಾಯಿಸಿ

ಪುರಾಣದಲ್ಲಿ ಈ ಪ್ರದೇಶ ಅರ್ಬುದಾರಣ್ಯ ಎಂದು ಉಲ್ಲೇಖಗೊಂಡಿದೆ, ("ಅರ್ಬು ವಿನ ಅರಣ್ಯ") ಮತ್ತು ಅಬು ಎನ್ನುವುದು ಇದರ ಸಂಕ್ಷಿಪ್ತ ಹೆಸರು. ಋಷಿ ವಸಿಷ್ಠರಿಗೆ ಇನ್ನೊಬ್ಬ ಋಷಿ ವಿಶ್ವಾಮಿತ್ರರೊಂದಿಗೆ ವೈಮನಸ್ಯ ಉಂಟಾಗಿ, ವಸಿಷ್ಠರು ಮೌಂಟ್‌ ಅಬುವಿನ ದಕ್ಷಿಣ ಭಾಗಕ್ಕೆ ತೆರಳಿ ಪರ್ವತದಂಚಿನಲ್ಲಿ ತಪಸ್ಸಿಗೆ ಕುಳಿತರು ಎಂಬ ನಂಬಿಕೆಯಿದೆ. ಆದಾಗ್ಯೂ, ಈ ನಂಬಿಕೆಗೆ ಪುಷ್ಠಿ ನೀಡುವಂತೆ ಸಣ್ಣದೊಂದು ಸಾಕ್ಷಿಯೂ ದೊರೆತಿದೆ.

ಇತ್ತೀಚಿನವು ಎನಿಸಿದ ಎರಡು ದೇವಸ್ಥಾನಗಳಲ್ಲಿ ಒಂದಾದ ತೇಜಪಾಲ್ ದೇವಸ್ಥಾನವನ್ನು ಇಬ್ಬರು ಶ್ರೀಮಂತ ವ್ಯಾಪಾರೀ ಸಹೋದರರು (ತೇಜಪಾಲ್ ಮತ್ತು ವಸ್ತುಪಾಲ್) 1197 ಮತ್ತು 1247ರ ಮಧ್ಯಂತರದಲ್ಲಿ ಕಟ್ಟಿಸಿದರೆಂದೂ ಮತ್ತೊಂದು ಸೋಳಾಂಕ ಚಕ್ರವರ್ತಿಗಳ ಮಾಂಡಲಿಕ ವಿಮಲಷಾಹ ಎಂಬುವನಿಂದ 1032ರಲ್ಲಿ ಕಟ್ಟಿಸಲಾಯಿತೆಂದೂ ಭಾವಿಸಲಾಗಿದೆ. ಈ ದೇವಸ್ಥಾನಗಳು ಅವುಗಳ ಒಳಭಾಗದ ಗೋಪುರಗಳಲ್ಲಿ ಕೊರೆದಿರುವ ಶಿಲ್ಪಕಲೆಗೆ ಪ್ರಸಿದ್ಧವಾಗಿರುವುದಲ್ಲದೆ ಅವಕ್ಕೆ ಸರಿಸಮವಾದುವು ಇನ್ನೊಂದಿಲ್ಲ ಎನಿಸಿವೆ. ಇವು ಜೈನರ ವಾಸ್ತುಶಿಲ್ಪ ಸೌಂದರ್ಯಾಭಿರುಚಿಗೂ ಪ್ರಸಿದ್ಧವಾಗಿವೆ. ವಿಮಲಷಾಹ ದೇವಸ್ಥಾನದ ಪ್ರಾಮುಖ್ಯತೆಯೆಂದರೆ ಗರ್ಭಗುಡಿಯಲ್ಲಿ ಪ್ರತಿಷ್ಠಿಸಿರುವ ಜೈನರ 23ನೆಯ ತೀರ್ಥಂಕರ ಪಾಶ್ರ್ವನಾಥ ವಿಗ್ರಹದ ಮೇಲೆ ಗವಾಕ್ಷದಿಂದ ಬೀಳುವ ಬೆಳಕು. ಈ ದೇವಸ್ಥಾನದ ಮೇಲಿರುವ ಮುಖಮಂಟಪ 48 ಸಾಲಂಕೃತ ಸಾಲುಗಂಬಗಳ ಮೇಲಿದೆ. ದೇವಸ್ಥಾನ ದೀರ್ಘಚತುರಸ್ರಾಕೃತಿಯಲ್ಲಿದ್ದು (140' ಉದ್ದ ಮತ್ತು 90' ಅಗಲ) ಅದರ ಸುತ್ತಳತೆಯಲ್ಲಿ 52 ಗರ್ಭಗುಡಿಗಳಿವೆ. ಪ್ರತಿ ಗುಡಿಯಲ್ಲೂ ಪಾಶ್ರ್ವನಾಥನ ವಿಗ್ರಹವಿದೆ. ಹೊರನೋಟಕ್ಕೆ ಈ ದೇವಾಲಯಗಳು ಸಾಧಾರಣವಾಗಿ ಕಾಣುತ್ತವೆ. ಆದರೆ ಒಳಭಾಗದಲ್ಲಿನ ಕಂಬಗಳು, ಕಮಾನುಗಳು, ದುಂಡು ಗುಮ್ಮಟ, ಮೂರ್ತಿಗಳು, ಕುಸುರಿ ಕೆತ್ತನೆಯ ಮೋಹಕ ಕೃತಿಗಳು - ಇವುಗಳಿಗೆ ಜಗತ್ಪ್ರಸಿದ್ಧವಾಗಿವೆ. ಆ ಮಂದಿರಗಳಲ್ಲಿ ಅಮೃತಶಿಲೆಯಲ್ಲಿ ಮಾಡಿರುವ ಕೆತ್ತನೆಯ ಕೆಲಸವನ್ನು ಕಾಗದದ ಮೇಲೆ ಚಿತ್ರಿಸಲು ಕೂಡ ತಾನು ಅಸಮರ್ಥನಾಗಿರುವುದಾಗಿಯೂ ಅಲ್ಲಿಯ ಕಲೆ ಅಷ್ಟು ಸೂಕ್ಷ್ಮವಾಗಿಯೂ ಚೆಲುವಾಗಿಯೂ ಇದೆ ಎಂದೂ ಡಾ. ಫಗ್ರ್ಯೂಸನ್ ಬೆರಗಾಗಿ ಹೇಳಿದ್ದಾನೆ. ಐತಿಹ್ಯದ ಪ್ರಕಾರ ಈ ಶಿಖರದ ಸುತ್ತಲೂ ಇದ್ದ ಅಗ್ನಿಕುಂಡದಿಂದ ಅಗನಿಕುಲ ಸಂಭೂತರಾದ ರಜಪೂತರು ಉದ್ಭವಿಸಿದರೆಂಬ ಪ್ರತೀತಿಯಿದೆ. ಇದು ಪ್ರಾಯಶಃ ರಜಪೂತವಂಶದ ಪಾವಿತ್ರ್ಯ, ಶುದ್ಧಚಾರಿತ್ರ್ಯ ಹಾಗೂ ವರ್ಣಸಂಕರ ನಿಷೇಧವನ್ನು ಹೇಳಲು ಉಲ್ಲೇಖಿಸಿರಬಹುದು. ಮಹಾಭಾರತ, ಪುರಾಣಗಳಲ್ಲಿ ವಸಿಷ್ಠ ಮುನಿಯ ಆಶ್ರಮ ಇಲ್ಲಿ ಇದ್ದಂತೆ ಹೇಳಿದೆ. ವಿಶ್ವಾಮಿತ್ರ ಕಾಮಧೇನುವನ್ನು ಅಪಹರಿಸಲು ಹೂಡಿದ ಕುತಂತ್ರವನ್ನು ನಿವಾರಿಸಲು ವಸಿಷ್ಠ ತನ್ನ ಯಜ್ಞಕುಂಡದಿಂದ ಪರಮಾರನೆಂಬ ವೀರನನ್ನು ಸೃಜಿಸಿದನೆಂದೂ ಈತನೇ ರಜಪೂತವಂಶದ ಪೂರ್ವಜನೆಂದೂ ಐತಿಹ್ಯವಿದೆ.

ಪ್ರವಾಸಿ ಆಕರ್ಷಣೆಯ ಸ್ಥಳಗಳು ಬದಲಾಯಿಸಿ

ಚಿತ್ರ:Mt. Abu Sunset 1990.jpg
ಮೌಂಟ್‌‌ ಅಬುವಿನಲ್ಲಿ ಸೂರ್ಯಾಸ್ತ

ರಾಜಸ್ತಾನದಲ್ಲಿರುವ ಏಕೈಕ ಗಿರಿಧಾಮವಾಗಿರುವ ಮೌಂಟ್‌ ಅಬು ಪಟ್ಟಣ, 1220 ಮೀಟರ್‌ಗಳಷ್ಟು ಎತ್ತರದಲ್ಲಿದೆ. ರಾಜಸ್ತಾನ ಮತ್ತು ನೆರೆಯ ಗುಜರಾತ್‌ ರಾಜ್ಯದ ಧಗೆಯಿಂದ ಪಾರಾಗಲು ಸುರಕ್ಷಿತ ತಾಣವಾಗಿ ಇದು ಶತಮಾನಗಳಿಂದಲೂ ಜನಪ್ರಿಯವಾಗಿದೆ. ಮೌಂಟ್‌ ಅಬು ವನ್ಯಜೀವಿ ಅಭಯಾರಣ್ಯ 1960ರಲ್ಲಿ ಸ್ಥಾಪನೆಯಾಗಿದ್ದು, ಪರ್ವತದ 290 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಪರ್ವತದ ನೆತ್ತಿಯಲ್ಲಿ ಮತ್ತು ಪೀಠಭೂಮಿಗಳಲ್ಲಿ ವಿಶೇಷ ರೀತಿಯಲ್ಲಿ ಕೊರೆದಿರುವ ಜೈನ ಬಸದಿಗಳೂ ದೇವಾಲಯಗಳೂ ಗೋಪುರಗಳೂ ಇವೆ. ಕನಿಷ್ಠಪಕ್ಷ 2000 ವರ್ಷಗಳಿಂದಲೂ ಯಾತ್ರಾಸ್ಥಳವಾಗಿವೆ. ಮಹಾಭಾರತದಲ್ಲಿ ಇದನ್ನು ಅರ್ಬುದ ಎಂದು ಉಲ್ಲೇಖಿಸಲಾಗಿದೆ. ಶಿಖರದ ಮೇಲುಭಾಗದಲ್ಲಿ ಒಂದು ವೃತ್ತಾಕಾರದ ಪೀಠಭೂಮಿಯಲ್ಲಿ ಗ್ರಾನೈಟ್ ಶಿಲೆಯ ಗುಹೆ ಇದೆ. ಇದರಲ್ಲಿ ಪುರಾಣಗಳಲ್ಲಿ ಹೇಳಿರುವಂತೆ ವಿಷ್ಣುವಿನ ಅವತಾರವೆನಿಸಿದ ದಾತ - ಭೃಗುವಿನ ಪಾದಗಳ ಹೆಜ್ಜೆ ಮೂಡಿದೆಯೆಂದು ನಂಬಲಾಗಿದೆ. ಈ ಶಿಖರದ ಮಧ್ಯದಲ್ಲಿ ದಿಲ್‍ವಾರಾ ಎಂಬ ಸ್ಥಳದಲ್ಲಿ ಅಮೃತಶಿಲೆಯಿಂದ ನಿರ್ಮಿಸಲಾದ ಎರಡು ಪ್ರಸಿದ್ಧ ದೇವಾಲಯಗಳಿವೆ. ಇವು ಗುಜರಾತಿನ ವಾಸ್ತುಶಿಲ್ಪವನ್ನು ತೋರಿಸುವ ಮಾದರಿಯಾಗಿವೆ. ಜೈನರ ಪ್ರಖ್ಯಾತವಾದ ಐದು ಪವಿತ್ರ ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ಜೈನ ದೇವಾಲಯಗಳಲ್ಲದೆ ಜೈನ ಶಾಸನಗಳೂ ಇವೆ.

ಮೌಂಟ್ ಅಬುವಿನಲ್ಲಿ ಹಲವು ಜೈನ ದೇವಾಲಯಗಳಿವೆ. AD 11 ಮತ್ತು 13ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ದಿಲ್‌ವಾರ ದೇವಾಲಯಗಳು, ಬಿಳಿ ಅಮೃತಶಿಲೆಯಿಂದ ರಚನೆಗೊಂಡಿದ್ದು, ಅತ್ಯಂತ ಸಂಕೀರ್ಣ ರಚನೆ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ. ಇವುಗಳ ಪೈಕಿ ವಿಮಲ್‌ ವಾಸಾಹಿ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು, AD 1031ರಲ್ಲಿ ವಿಮಲ್‌ ಷಾ ಎಂಬುವವನು ನಿರ್ಮಿಸಿದನು, ಮತ್ತು ಅದನ್ನು ಮೊದಲ ಜೈನ ತೀರ್ಥಂಕರ ವೃಷಭನಾಥನಿಗೆ ಅರ್ಪಿಸಿದನು. ಲುನ ವಾಸಾಹಿ ದೇವಾಲಯವನ್ನು ಪೋರ್ವಾಲ್‌ ಜೈನ ಸಮುದಾಯಕ್ಕೆ ಸೇರಿದ ವಾಸ್ತುಪಾಲ್‌ ಮತ್ತು ತೇಜ್‌ಪಾಲ್‌ ಎಂಬ ಸಹೋದರರು AD 1231ರಲ್ಲಿ ನಿರ್ಮಿಸಿದರು. ಗುಜರಾತ್‌ನ ಸ್ಥಳೀಯ ದೊರೆ ರಾಜ ವೀರ ಧವಳ್‌ನ ಆಳ್ಚಿಕೆಯಲ್ಲಿ ಇವರು ಮಂತ್ರಿಗಳಾಗಿದ್ದರು.

ಇಲ್ಲಿಗೆ ಸಮೀಪದಲ್ಲೇ ಮೇವಾಡ್‌‌ರಾಣ ಕುಂಭ 14ನೇ ಶತಮಾನದಲ್ಲಿ ಕಟ್ಟಿಸಿದ ಅಚಲ್‌ಗರ್‌ ಕೋಟೆಯಿದೆ. ಈ ಕೋಟೆಯೊಳಗೆ ಅಚಲೇಶ್ವರ ಮಹಾದೇವ ದೇವಾಲಯ (1412) ಮತ್ತು ಕಾಂತೀನಾಥ ದೇದಾಲಯ (1513) ಸೇರಿದಂತೆ ಹಲವು ಸುಂದರವಾದ ಜೈನ ದೇವಾಲಯಗಳಿವೆ.

ಚಿತ್ರ:Nakki.JPG
ಮಹಾರಾಜ ಜೈಪುರ್‌ ಅರಮನೆಯೊಂದಿಗೆ ನಕ್ಕಿ ಸರೋವರ ಮತ್ತು ಕಪ್ಪೆಗಲ್ಲು

ನಕ್ಕಿ ಸರೊವರ, ಮೌಂಟ್‌ ಅಬುವಿನಲ್ಲಿರುವ ಪ್ರವಾಸಿಗರ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಸರೋವರದ ಸಮೀಪ ಬೆಟ್ಟದ ಮೇಲೆ ಕಪ್ಪೆಗಲ್ಲು (ಕಪ್ಪೆಯಾಕಾರದ ಕಲ್ಲು) ಇದೆ. ರಘನಾಥ ದೇವಾಲಯ ಮತ್ತು ಮಹಾರಾಜ ಜೈಪುರ್ ಅರಮನೆಗಳೂ ಕೂಡ ಬೆಟ್ಟದ ಮೇಲೆ ನಕ್ಕಿ ಸರೋವರದ ಸಮೀಪ ಇವೆ.

ಗಟ್ಟಿಯಾದ ಬಂಡೆಯಲ್ಲಿ ಕೆತ್ತಲಾದ ಅಧರ್‌ ದೇವಿ ದೇವಾಲಯ, ಶ್ರೀ ರಘುನಾಥಜಿ ದೇವಾಲಯ ಮತ್ತು ಗುರು ಶಿಖರದ ಮೇಲೆ ನಿರ್ಮಾಣಗೊಂಡಿರುವ ಪುಣ್ಯಕ್ಷೇತ್ರ ದತ್ತಾತ್ರೇಯ ದೇವಾಲಯ ಸೇರಿದಂತೆ ಹಲವು ಹಿಂದೂ ದೇವಾಲಯಗಳಿಗೂ ಈ ಪರ್ವತ ತವರು ಮನೆಯಾಗಿದೆ. ಬ್ರಹ್ಮ ಕುಮಾರಿ ಪಂಥದ ಮಹಿಳಾ ಸಂನ್ಯಾಸಿಯರ ವಿಶ್ವ ಕೇಂದ್ರ ಕಾರ್ಯಾಲಯ ಇಲ್ಲಿದ್ದು, ಇದು ಅದೇ ಪಂಥದ ವಿಶ್ವದ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಕೂಡ ಹೌದು. ಮೌಂಟ್‌ ಅಬು ಪರ್ವತದ ತುದಿಯಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ ಎಂಬ ನಂಬಿಕೆಯೂ ಇದೆ. ಮೌಂಟ್‌ ಅಬುವಿನ ಹೊರಗಡೆ ಜಗತ್‌ ಎಂಬಲ್ಲಿರುವ ಬಂಡೆಯ ಸೀಳಿನಲ್ಲಿ ದುರ್ಗಾ ದೇವಾಲಯಮತ್ತು ಅಂಬಿಕಾ ಮಾತಾ ದೇವಾಲಯವಿದೆ.

ಸಾರಿಗೆ ಬದಲಾಯಿಸಿ

ಇಲ್ಲಿಗೆ ಅತಿ ಸಮೀಪದ ರೈಲು ನಿಲ್ದಾಣ ಅಬು ರಸ್ತೆಯಲ್ಲಿದ್ದು, ಮೌಂಟ್‌ ಅಬು ಪಟ್ಟಣದಿಂದ ತಗ್ಗಿನಲ್ಲಿ ಆಗ್ನೇಯಕ್ಕೆ 27 ಕಿಲೋ ಮೀಟರ್‌ ದೂರದಲ್ಲಿದೆ. ಭಾರತೀಯ ರೈಲ್ವೆದೆಹಲಿ, ಪಾಲಂಪುರ್‌ ಮತ್ತು ಅಹ್ಮದಾಬಾದ್‌ ನಡುವಿನ ಪ್ರಮುಖ ಮಾರ್ಗದಲ್ಲೇ ಈ ನಿಲ್ದಾಣವಿದೆ.

ಜನಸಂಖ್ಯೆ ಬದಲಾಯಿಸಿ

As of 2001ಭಾರತ ಜನಗಣತಿ[೧] ಯ ಪ್ರಕಾರ ಮೌಂಟ್‌ ಅಬು 22,045 ಜನಸಂಖ್ಯೆಯನ್ನು ಹೊಂದಿತ್ತು.

ಒಟ್ಟು ಜನಸಂಖ್ಯೆಯಲ್ಲಿ 58% ಪುರುಷರೂ ಮತ್ತು 42% ಮಹಿಳೆಯರೂ ಇದ್ದಾರೆ. ಮೌಂಟ್‌ ಅಬು 67% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ; ಇದು ರಾಷ್ಟ್ರೀಯ ಸರಾಸರಿ 59.5%ಗಿಂತ ಅಧಿಕವಾಗಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣ 77% ಇದ್ದರೆ, ಮಹಿಳಾ ಸಾಕ್ಷರತಾ ದರ 55% ಇದೆ.

ಮೌಂಟ್‌ ಅಬುವಿನಲ್ಲಿರುವ ಜನಸಂಖ್ಯೆಯಲ್ಲಿ 14%ನಷ್ಟು ಜನರು 6 ವರ್ಷಕ್ಕಿಂತ ಕಡಿಮೆ ವಯಮಾನದವರು.

ಚಿತ್ರ-ಸಂಪುಟ ಬದಲಾಯಿಸಿ

ಪರಾಮರ್ಶನಗಳು ಬದಲಾಯಿಸಿ

ಟೆಂಪ್ಲೇಟು:Sirohi district