ಬೆನಿಟೋ ಮುಸೊಲಿನಿ

(ಬೆನಿಟೊ ಮುಸ್ಸೊಲಿನಿ ಇಂದ ಪುನರ್ನಿರ್ದೇಶಿತ)

ಬೆನಿಟೋ ಅಮಿಲ್‌ಕೇರ್ ಆಂದ್ರಿಯಾ ಮುಸೊಲಿನಿ , KSMOM GCTE (29 ಜುಲೈ 1883 - 28 ಏಪ್ರಿಲ್ 1945) ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯ ನೇತಾರನಾಗಿದ್ದ ಇಟಾಲಿಯನ್ ರಾಜಕಾರಣಿ ಮತ್ತು ಫ್ಯಾಸಿಸಮ್ ಅನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳಲ್ಲೊಬ್ಬ. ಆತನು 1922ರಲ್ಲಿ ಇಟಲಿಯ ಪ್ರಧಾನಮಂತ್ರಿಯಾದನು ಮತ್ತು 1925ರಿಂದ ಇಲ್ ಡೂಶೆ ಎಂಬ ಬಿರುದನ್ನು ಬಳಸಲು ಆರಂಭಿಸಿದನು. 1936ರ ನಂತರ ಆತನ ಅಧಿಕೃತ ಬಿರುದಾಂಕಿತವು ಈ ರೀತಿಯಾಗಿದ್ದಿತು: "ಹಿಸ್ ಎಕ್ಸೆಲೆನ್ಸಿ ಬೆನಿಟೊ ಮುಸೊಲಿನಿ, ಹೆಡ್ ಆಫ್ ಗವರ್ನಮೆಂಟ್, ಡೂಶೆ ಆಫ್ ಫ್ಯಾಸಿಸಮ್, ಎಂಡ್ ಫೌಂಡರ್ ಆಫ್ ಎಂಪೈರ್ ".[] ಜತೆಗೇ ಮುಸೊಲಿನಿಯು ರಾಜ ವಿಕ್ಟೋರ್ ಎಮ್ಯಾನುಯೆಲ್ III ಆಫ್ ಇಟಲಿಯ ಜತೆಯಲ್ಲಿ ಅತ್ಯುಚ್ಚ ಮಿಲಿಟರಿ ಅಧಿಕಾರವಾದ ಫಸ್ಟ್ ಮಾರ್ಷಲ್ ಆಫ್ ದ ಎಂಪೈರ್ ಅನ್ನು ಸ್ಥಾಪಿಸಿ ಹೊಂದಿದ್ದು, ಇದು ಆತನಿಗೂ ಮತ್ತು ರಾಜನಿಗೂ ಇಟಲಿಯ ಮಿಲಿಟರಿಯ ಮೇಲೆ ಜಂಟಿ ಅತ್ಯುಚ್ಚ ಅಧಿಕಾರವನ್ನು ನೀಡಿತ್ತು. 1943ರಲ್ಲಿ ಆತನನ್ನು ಪದಚ್ಯುತಗೊಳಿಸಲಾಗುವ ತನಕವೂ ಆತ ಅಧಿಕಾರದಲ್ಲಿದ್ದನು ಮತ್ತು ಆತನ ಸಾವಿಗೆ ಮುನ್ನ ಕೆಲಕಾಲದವರೆಗೂ ಆತನು ಇಟಾಲಿಯನ್ ಸೊಶಿಯಲ್ ರಿಪಬ್ಲಿಕ್ನ ನಾಯಕನಾಗಿದ್ದನು.

Benito Mussolini
ಬೆನಿಟೋ ಮುಸೊಲಿನಿ


ಅಧಿಕಾರದ ಅವಧಿ
31 October 1922 – 25 July 1943
ಪೂರ್ವಾಧಿಕಾರಿ Luigi Facta
ಉತ್ತರಾಧಿಕಾರಿ Pietro Badoglio

ಅಧಿಕಾರದ ಅವಧಿ
30 March 1938 – 25 July 1943
ಉತ್ತರಾಧಿಕಾರಿ Pietro Badoglio

ಅಧಿಕಾರದ ಅವಧಿ
23 September 1943 – 25 April 1945

ಜನನ (೧೮೮೩-೦೭-೨೯)೨೯ ಜುಲೈ ೧೮೮೩
Predappio, Forlì, Italy
ಮರಣ 28 April 1945(1945-04-28) (aged 61)
Giulino di Mezzegra, Italy
ರಾಜಕೀಯ ಪಕ್ಷ Republican Fascist Party
(1943-1945)
National Fascist Party
(1921-1943)
Italian Socialist Party
(1901-1914)
ಜೀವನಸಂಗಾತಿ Ida Dalser
* Benito Albino Mussolini
Rachele Mussolini
* Edda Mussolini
* Anna Maria Mussolini
* Vittorio Mussolini
* Bruno Mussolini
* Romano Mussolini
ವೃತ್ತಿ Politician, Journalist
ಧರ್ಮ Roman Catholic, atheist
ಹಸ್ತಾಕ್ಷರ

ಮುಸೊಲಿನಿಯು ಇಟಾಲಿಯಮ್ ಫ್ಯಾಸಿಸಮ್ನ ಸಂಸ್ಥಾಪಕರಲ್ಲೊಬ್ಬನಾಗಿದ್ದನು, ಇದು ರಾಷ್ಟ್ರೀಯತೆ, ಕಾರ್ಪೊರೇಟಿಸಮ್, ರಾಷ್ಟ್ರೀಯ ಸಿಂಡಿಕ್ಯಾಲಿಸಮ್, ಎಕ್ಸ್‌ಪ್ಯಾನ್ಷನಿಸಮ್, ಸಾಮಾಜಿಕ ಅಭಿವೃದ್ಧಿ ಮತ್ತು ಕಮ್ಯುನಿಸಮ್-ವಿರೋಧದಂತಹ ಅಂಶಗಳ ಜತೆಗೇ ವಿಧ್ವಂಸಕಸೆನ್ಸಾರ್‌ಶಿಪ್ ಮತ್ತು ರಾಜ್ಯದ ಪ್ರಚಾರಕಾರ್ಯಗಳನ್ನೂ ಒಳಗೊಳ್ಳಲಾಗಿತ್ತು. ಫ್ಯಾಸಿಸ್ಟ್ ಸಿದ್ಧಾಂತವನ್ನು ರೂಪಿಸಿದ ನಂತರ ಮುಸೊಲಿನಿ ಹಲವಾರು ವೈವಿಧ್ಯಮಯ ರಾಜಕೀಯ ವ್ಯಕ್ತಿತ್ವಗಳನ್ನು ಪ್ರಭಾವಿಸಿದನು ಮತ್ತು ಶ್ಲಾಘನೆಗೊಳಗಾದನು.[]

ಮುಸೊಲಿನಿಯ 1924–1939ರ ಅವಧಿಯ ಸ್ಥಳೀಯ ಸಾಧನೆಗಳ ಬಗ್ಗೆ ಹೇಳುವುದಾದಲ್ಲಿ ಆತನ ಸಾರ್ವಜನಿಕ ಕೆಲಸದ ಕಾರ್ಯಕ್ರಮಗಳಾದ ಪಾಂಟೈನ್ ಜೌಗುಪ್ರದೇಶಗಳ ಸುಧಾರಣೆ, ಉದ್ಯೋಗ ಅವಕಾಶಗಳಲ್ಲಿ ಹೆಚ್ಚಳ, ಮತ್ತು ಸಾರ್ವಜನಿಕ ಸಾರಿಗೆಗಳನ್ನು ಹೆಸರಿಸಬಹುದು. ಜತೆಗೇ ಮುಸೊಲಿನಿ ಇಟಲಿ ಸಾಮ್ರಾಜ್ಯ ಮತ್ತು ಹೋಲಿ ಸೀಯ ನಡುವಣ ಲ್ಯಾಟೆರನ್ ಟ್ರೀಟಿಯನ್ನು ಮಾಡಿಕೊಳ್ಳುವುದರ ಮೂಲಕ ರೋಮನ್ ಪ್ರಶ್ನೆಯನ್ನು ಬಗೆಹರಿಸಿದನು. ಇಟಲಿಯ ವಸಾಹತುಗಳು ಮತ್ತು ಆರ್ಥಿಕವಾಗಿ ಆಶ್ರಿತವಾಗಿದ್ದ ಪ್ರದೇಶಗಳಲ್ಲಿ ಆರ್ಥಿಕ ಯಶಸ್ಸು ಸಾಧಿಸಿದ ಶ್ರೇಯವೂ ಈತನಿಗೆ ಸಲ್ಲುತ್ತದೆ.[] ಆತನ ಮೊದಮೊದಲ ಬೆಂಬಲವು 1930ರ ದಶಕದ ಆರಂಭದಲ್ಲಿ ಜರ್ಮನಿಯ ವಿರುದ್ಧವಾಗಿ ಫ್ರ್ಯಾನ್ಸ್‌ನ ಕಡೆಗಿದ್ದರೂ, ನಂತರ ಮುಸೊಲಿನಿ ಆಕ್ಸಿಸ್ ಶಕ್ತಿಗಳ ಪ್ರಮುಖ ನಾಯಕರಲ್ಲೊಬ್ಬನಾದನು ಮತ್ತು, 10 ಜೂನ್ 1940ರಂದು ಮುಸೊಲಿನಿ ಆಕ್ಸಿಸ್‌ನ ಪಕ್ಷದಲ್ಲಿದ್ದುಕೊಂಡು ಇಟಲಿಯು ಎರಡನೇ ವಿಶ್ವಯುದ್ಧದಲ್ಲಿ ಭಾಗವಹಿಸಲು ಕಾರಣನಾದನು. ಮೂರು ವರ್ಷಗಳ ನಂತರ ಮಿತ್ರರಾಷ್ಟ್ರಗಳ ದಾಳಿಯಿಂದಾಗಿ ಮುಸೊಲಿನಿಯನ್ನು ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್ನಿಂದ ಪದಚ್ಯುತಗೊಳಿಸಲಾಯಿತು. ಕಾರಾಗೃಹವಾಸದಲ್ಲಿದ್ಡ ಮುಸೊಲಿನಿಯನ್ನು ಜರ್ಮನ್ ವಿಶೇಷ ಪಡೆಗಳು ಕೆಲವೇ ಸಮಯದ ನಂತರ ಸಾಹಸಪೂರ್ಣ ಗ್ರ್ಯಾನ್ ಸ್ಯಾಸ್ಸೋ ರೇಡ್ ಅನ್ನು ನಡೆಸುವುದರ ಮೂಲಕ ಪಾರುಮಾಡಿದವು.

ಪಾರಾದ ನಂತರ ಮುಸೊಲಿನಿ ಮಿತ್ರಪಡೆಗಳಿರದ ಇಟಾಲಿಯನ್ ಭಾಗಗಳಲ್ಲಿ ಸ್ಥಾಪಿಸಲಾದ ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್ನ ನಾಯಕತ್ವ ವಹಿಸಿಕೊಂಡನು. ಏಪ್ರಿಲ್ 1945ರ ವೇಳೆಗೆ ಸೋಲಿನ ಕಾರ್ಮೋಡ ಕವಿಯತೊಡಗಿದಾಗ, ಮುಸೊಲಿನಿಯು ಸ್ವಿಜರ್ಲೆಂಡಿಗೆ ಪರಾರಿಯಾಗಲು ಪ್ರಯತ್ನಿಸಿದನಾದರೂ ಆತನನ್ನು ಸೆರೆಹಿಡಿಯಲಾಯಿತು ಮತ್ತು ಇಟಾಲಿಯನ್ ಪಾರ್ಟಿಸಾನ್‌ಗಳು ಆತನನ್ನು ಲೇಕ್ ಕೋಮೋ ಬಳಿ ತಡಮಾಡದೆ ಕೊಂದರು. ಆತನ ದೇಹವನ್ನು ನಂತರ ಮಿಲಾನ್ಗೆ ಒಯ್ಯಲಾಯಿತು ಮತ್ತು ಅಲ್ಲಿನ ಪೆಟ್ರೋಲ್ ಸ್ಟೇಶನ್ ಒಂದರಲ್ಲಿ ಸಾರ್ವಜನಿಕರಿಗೆ ಆತನ ಸಾವು ನಿಜವೆಂದು ಖಚಿತಪಡಿಸುವ ಸಲುವಾಗಿ ತಲೆಕೆಳಗಾಗಿ ನೇತುಹಾಕಲಾಯಿತು.

ಆರಂಭಿಕ ಜೀವನ

ಬದಲಾಯಿಸಿ
 
ಬೆನಿಟೊ ಮುಸೊಲಿನಿ ಹುಟ್ಟಿದ ಸ್ಥಳ, ಇಂದು ಮ್ಯೂಸಿಯಂ ಆಗಿ ಬಳಸಲಾಗುತ್ತಿದೆ.

ಮುಸೊಲಿನಿಯ ಜನನವು 1883ರಲ್ಲಿ ಎಮಿಲಿಯಾ-ರೊಮಾನಾಫೋರ್ಲಿ ಪ್ರಾಂತ್ಯದ ಡೋವಿಯಾ ಡಿ ಪ್ರೆಡೆಪ್ಪಿಯೋ ಎಂಬ ಸಣ್ಣ ಪಟ್ತಣವೊಂದರಲ್ಲಿ ಆಯಿತು. ಫ್ಯಾಸಿಸ್ಟ್ ಯುಗದ ಸಮಯದಲ್ಲಿ ಪ್ರೆಡೆಪ್ಪಿಯೋವನ್ನು "ಡೂಶೆಯ ಪಟ್ಟಣ"ವೆಂದೂ, ಫೋರ್ಲಿಯನ್ನು "ಡೂಶೆಯ ನಗರ"ವೆಂದೂ ಕರೆಯಲಾಗುತ್ತಿತ್ತು. ಮುಸೊಲಿನಿಯ ಹುಟ್ಟಿದ ಸ್ಥಳವನ್ನು ನೋಡಲೆಂದೇ ಹಲವಾರು ಯಾತ್ರಿಕರು ಪ್ರೆಡೆಪ್ಪಿಯೋ ಮತ್ತು ಫೋರ್ಲಿಗೆ ಭೇಟಿ ನೀಡುತ್ತಿದ್ದರು. ಆತನ ತಂದೆ ಅಲೆಸ್ಸಾಂದ್ರೊ ಮುಸೊಲಿನಿ ಒಬ್ಬ ಕಮ್ಮಾರನಾಗಿದ್ದನು ಮತ್ತು ಅರಾಜಕತಾವಾದಿಯೂ ಆಗಿದ್ದನು[] ಆದರೆ ಆತನ ತಾಯಿ ರೋಸಾ ಮುಸೊಲಿನಿ (ನೀ ಮಾಲ್ಟೊನಿ) ಒಬ್ಬ ಶಾಲಾ ಅಧ್ಯಾಪಕಿ ಮತ್ತು ದೈವಭಕ್ತೆಯಾದ ಕ್ಯಾಥೊಲಿಕಳೂ ಆಗಿದ್ದಳು.[] ಆತನ ತಂದೆಯ ರಾಜಕೀಯ ನಂಬಿಕೆಗಳಿಗನುಸಾರವಾಗಿ ಮುಸೊಲಿನಿಗೆ ಮೆಕ್ಸಿಕನ್ ಸುಧಾರಣಾವಾದಿ ಅಧ್ಯಕ್ಷ ಬೆನಿಟೊ ಯುವಾರೆಜ್ರವರ ಹೆಸರಿನಂತೆ ಬೆನಿಟೊ ಎಂಬ ಹೆಸರನ್ನಿಡಲಾಯಿತು, ಹಾಗೂ ಆತನ ಮಧ್ಯನಾಮಗಳಾದ ಆಂದ್ರಿಯಾ ಮತ್ತು ಅಮಿಲ್‌ಕೇರ್ ಗಳನ್ನು ಇಟಾಲಿಯನ್ ಸಮಾಜವಾದಿಗಳಾದ ಆಂದ್ರಿಯಾ ಕೋಸ್ಟಾ ಮತ್ತು ಅಮಿಲ್‌ಕೇರ್ ಚಿಪ್ರಿಯಾನಿಯವರ ಹೆಸರುಗಳಿಂದ ತೆಗೆದುಕೊಳ್ಳಲಾಯಿತು.[] ಬೆನಿಟೊ ತನ್ನ ಪೋಷಕರ ಮೂವರು ಮಕ್ಕಳಲ್ಲಿ ಮೊದಲನೆಯವನಾಗಿದ್ದನು. ಆತನ ನಂತರ ಇಬ್ಬರು ಮಕ್ಕಳು ಅರ್ನಾಲ್ಡೋ ಮತ್ತು ಎಡ್ವಿಗಾ ಹುಟ್ಟಿದರು.[]

ಸಣ್ಣ ಹುಡುಗನಾಗಿದ್ದಾಗ ಮುಸೊಲಿನಿ ತನ್ನ ಹೆಚ್ಚಿನ ಸಮಯವನ್ನು ತನ್ನ ತಂದೆಯ ಕಮ್ಮಾರಿಕೆಯ ಕೆಲಸಕ್ಕೆ ಸಹಾಯ ಮಾಡುವುದರಲ್ಲಿ ಕಳೆಯುತ್ತಿದ್ದನು.[] ಬಹುಶಃ ಇಲ್ಲಿಯೇ ಆತನಿಗೆ ತನ್ನ ತಂದೆಯ ರಾಜಕೀಯ ನಂಬಿಕೆಗಳ ಬಗ್ಗೆ ತಿಳಿದು ಬಂದಿತೆಂದು ತೋರುತ್ತದೆ. ಅಲೆಸ್ಸಾಂದ್ರೋ ಒಬ್ಬ ಸಮಾಜವಾದಿಯೂ, ಒಬ್ಬ ರಿಪಬ್ಲಿಕನ್ನೂ ಆಗಿದ್ದಲ್ಲದೆ, ಕೆಲವು ಹಂತದವರೆಗೆ ರಾಷ್ಟ್ರೀಯತಾವಾದದ ವಿಚಾರಗಳನ್ನೂ ಹೊಂದಿದ್ದನು, ಇದು ವಿಶೇಷವಾಗಿ ಆಸ್ಟ್ರೋ ಹಂಗೇರಿಯನ್ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಕೆಲವು ಇಟಾಲಿಯನ್ನರ ಬಗ್ಗೆಯಾಗಿತ್ತು,[] ಮತ್ತು ಇದು ಆ ಹೊತ್ತಿಗಿನ ಅಂತರ್ರಾಷ್ಟ್ರೀಯ ಸಮಾಜವಾದಕ್ಕೆ ಹೊಂದಿಕೊಳ್ಳುವಂತೆ ಇರಲಿಲ್ಲ. ಆತನ ತಂದೆ ಮತ್ತು ತಾಯಿಯ ನಡುವೆ ಧರ್ಮದ ಬಗ್ಗೆ ನಡೆಯುತ್ತಿದ್ದ ಘರ್ಷಣೆಯ ಕಾರಣ, ಇತರೆಲ್ಲ ಇಟಾಲಿಯನ್ನರ ರೀತಿ ಮುಸೊಲಿನಿಯನ್ನು ಹುಟ್ಟಿದಾಗಲೇ ಬ್ಯಾಪ್‌ಟೈಜ್ ಮಾಡಲಿಲ್ಲ ಮತ್ತು ಬಹಳ ಕಾಲದ ನಂತರವೇ ಈ ವಿಧಿಯನ್ನು ನೆರವೇರಿಸಲಾಯಿತು. ಆದರೆ, ಆತನ ತಾಯಿಯೊಂದಿಗೆ ಸಂಧಾನ ಮಾಡಿಕೊಳ್ಳುವ ರೀತಿ ಮುಸೊಲಿನಿಯನ್ನು Salesian ಸನ್ಯಾಸಿಗಳು ನಡೆಸುತ್ತಿದ್ದ ಒಂದು ಬೋರ್ಡಿಂಗ್ ಸ್ಕೂಲ್ಗೆ ದಾಖಲು ಮಾಡಲಾಯಿತು. ಮುಸೊಲಿನಿಯು ಇಲ್ಲಿ ಬಹಳ ಅವಿಧೇಯನೂ ತುಂಟನೂ ಆಗಿದ್ದರಿಂದ ಆತನನ್ನು ಪ್ರಾರ್ಥನಾಸಭೆಯ ನಂತರ ಕಾನ್‌ಗ್ರಿಗೇಶನ್‍ ಕಡೆಗೆ ಕಲ್ಲೆಸೆದಿದ್ದು, ಸಹಪಾಟಿಯೊಬ್ಬನ ಹಸ್ತಕ್ಕೆ ಇರಿದಿದ್ದು ಮತ್ತು ಅಧ್ಯಾಪಕರೊಬ್ಬರ ಮೇಲೆ ಮಸಿಕುಡಿಕೆಯನ್ನು ಎಸೆದಿದ್ದೇ ಮುಂತಾದ ಹಲವಾರು ಘಟನೆಗಳ ನಂತರ ಶಾಲೆಯಿಂದ ವಜಾ ಮಾಡಲಾಯಿತು.[] ಹಿಸ ಶಾಲೆಗೆ ಸೇರಿದ ನಂತರ ಮುಸೊಲಿನಿ ಅಧ್ಯಯನದಲ್ಲಿ ಉತ್ಸಾಹ ತೋರಿ ಚೆನ್ನಾಗಿ ಅಭ್ಯಸಿಸತೊಡಗಿದನು ಮತ್ತು 1901ರಲ್ಲಿ ಎಲಿಮೆಂಟರಿ ಶಾಲಾ ಮಾಸ್ತರನ ಕೆಲಸಕ್ಕೆ ಅರ್ಹತೆಯನ್ನು ಪಡೆದನು.[][]

 
ಇಟಾಲಿಯನ್ ಸೈನಿಕನಾಗಿ ಮುಸೊಲಿನಿ, 1917

ರಾಜಕೀಯ ಪತ್ರಕರ್ತ ಮತ್ತು ಸೈನಿಕ

ಬದಲಾಯಿಸಿ

1902ರಲ್ಲಿ, ಮುಸೊಲಿನಿ ಸ್ವಿಜರ್ಲೆಂಡ್‌ಗೆ ವಲಸೆ ಹೋದನು ಮತ್ತು ಇದಕ್ಕೆ ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುವುದೂ ಒಂದು ಕಾರಣವಾಗಿತ್ತು.[] ಕೆಲಕಾಲದವರೆಗೆ ಆತನು ಜಿನೀವಾದಲ್ಲಿ ಕಲ್ಲಿನಕೆಲಸ ಮಾಡಿದನು, ಆದರೆ, ಅತನಿಗೆ ಸ್ವಿಜರ್ಲೆಂಡಿನಲ್ಲಿ ಖಾಯಂ ಉದ್ಯೋಗ ದೊರೆಯಲಿಲ್ಲ ಮತ್ತು ಒಂದು ಹಂತದಲ್ಲಿ ಆತನನ್ನು ಸುಮ್ಮನೆ ಅಲೆಯುತ್ತಿದ್ದಿದ್ದಕ್ಕಾಗಿ ಬಂಧಿಸಿ ಒಂದು ರಾತ್ರಿ ಜೈಲಿನಲ್ಲಿ ಇರಿಸಲಾಯಿತು. ಸ್ವಿಜರ್ಲೆಂಡಿನಲ್ಲಿದ್ದಾಗ ಆತ ವ್ಯವಹರಿಸಲು ಬೇಕಾಗುವಷ್ಟು ಫ್ರೆಂಚ್ ಭಾಷಾಜ್ಞಾನವನ್ನು ಪಡೆದುಕೊಂಡಿದ್ದಲ್ಲದೆ ಮತ್ತು ಕೊಂಚ ಜರ್ಮನ್ ಅನ್ನು ಕೂಡಾ ಕಲಿತುಕೊಂಡನು.

ಇದೇ ಸಮಯದಲ್ಲಿ ಆತನು ತತ್ವಶಾಸ್ತ್ರಜ್ಞ ಫ್ರೆಡರಿಕ್ ನೀಶೆ, ಸಮಾಜವಾದಿ ವಿಲ್‌ಫ್ರೆಡೋ ಪರೆಟೋ, ಮತ್ತು ಸಿಂಡಿಕ್ಯಾಲಿಸ್ಟ್ ಜಾರ್ಜ್ ಸೊರೆಲ್ರ ವಿಚಾರಧಾರೆಗಳನ್ನು ಓದಿಕೊಂಡನು. ಮುಂದೆ ಮುಸೊಲಿನಿ ಇವರ ಜತೆಗೆ ಮಾರ್ಕ್ಸಿಸ್ಟ್ ಚಾರ್ಲ್ಸ್ ಪೆಗಯ್, ಮತ್ತು ಸಿಂಡಿಕ್ಯಾಲಿಸ್ಟ್ ಹ್ಯೂಬರ್ಟ್ ಲಾಗಾರ್ಡೆಲ್ರನ್ನು ತನ್ನ ಮೇಲೆ ಪ್ರಭಾವ ಬೀರಿದರೆಂದು ಹೆಸರಿಸಿದನು.[] ಮುಸೊಲಿನಿಯ ಮೇಲೆ ಸೊರೆಲ್‌ನ ಹಳತಾದ ಉದಾರ ಗಣತಂತ್ರ ಮತ್ತು ಬಂಡವಾಳಶಾಹಿಗಳನ್ನು ಹಿಂಸೆ, ನೇರ ಕ್ರಮ, ಸಾಮಾನ್ಯ ಮುಷ್ಕರಗಳ ಮೂಲಕ ಪರಾಭವಗೊಳಿಸುವುದರ ಅವಶ್ಯಕತೆ, ಹಾಗೂ ನಿಯೋ-ಮಾಶಿಯಾವೆಲ್ಲಿಯನ್ ಭಾವನೆಗಳ ಬಳಕೆಯು ಗಾಢವಾದ ಪ್ರಭಾವ ಬೀರಿದವು.[] ಸ್ವಿಜರ್ಲೆಂಡ್‌ನಲ್ಲಿದ್ದಾಗ, ಆತ ಅಲ್ಲಿ ವಾಸವಾಗಿದ್ದ ಕೆಲವರು ರಶ್ಯನ್ ದೇಶಭ್ರಷ್ಟರನ್ನು ಭೇಟಿಯಾದನು, ಅವರಲ್ಲಿ ಮಾರ್ಕ್ಸಿಸ್ಟ್ ಏಂಜೆಲಿಕಾ ಬಾಲಾಬಾನೋಫ್, ಮತ್ತು ಮಾಕ್ಸಿಸ್ಟ್ ವ್ಲಾದಿಮಿರ್ ಲೆನಿನ್ ಪ್ರಮುಖರಾಗಿದ್ದರು.[] ಈ ವೇಳೆಗೆ ಆತ ಮಾರ್ಕ್ಸಿಸ್ಟ್ ಸಮಾಜವಾದಿ ಚಳುವಳಿಯನ್ನು ಸೇರಿದನು.

1904, ಆತನನ್ನು ವಾಪಾಸು ಇಟಲಿಗೆ ಗಡೀಪಾರು ಮಾಡಲಾಯಿತು. ಇಟಾಲಿಯನ್ ಸರ್ಕಾರವು ಆತನ ಹಿಂದಿನ ತಪ್ಪು ನಡವಳಿಕೆಯನ್ನು ಕ್ಷಮಿಸಿತು, ಹಾಗೂ ನಂತರದ ದಿನಗಳಲ್ಲಿ ಆತ ಇಟಾಲಿಯನ್ ಸೇನೆಯಲ್ಲಿ ಮಿಲಿಟರಿ ಸೇವೆಗೆ ಉಮೇದುವಾರಿಕೆ ಮಾಡಿದನು. ಎರಡು ವರ್ಷಗಳ ಕಾಲ ಮಿಲಿಟರಿ ಸೇವೆ ಸಲ್ಲಿಸಿದ ನಂತರ (ಜನವರಿ 1905ರಿಂದ ಸೆಪ್ಟೆಂಬರ್ 1906), ಆತ ತನ್ನ ಅಧ್ಯಾಪಕವೃತ್ತಿಗೆ ಹಿಂತಿರುಗಿದನು.[೧೦]

ರಾಜಕೀಯ ಪತ್ರಕರ್ತ ಮತ್ತು ಸೋಶಿಯಲಿಸ್ಟ್ ಆಗಿ

ಬದಲಾಯಿಸಿ

ಫೆಬ್ರವರಿ 1908ರಲ್ಲಿ ಮುಸೊಲಿನಿ ಪುನಃ ಇಟಲಿಯನ್ನು ಬಿಟ್ಟು ಆಗ ಆಸ್ಟ್ರಿಯಾ-ಹಂಗರಿಯ ವಶದಲ್ಲಿದ್ದ ಇಟಾಲಿಯನ್ ಭಾಷೆಯನ್ನು ಬಳಸುತ್ತಿದ್ದ ನಗರ ಟ್ರೆಂಟೋಗೆ ಲೇಬರ್ ಪಕ್ಷದ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಲು ತೆರಳಿದನು . ಜತೆಗೇ ಆತ ಅಲ್ಲಿನ ಸ್ಥಳೀಯ ಸಮಾಜವಾದಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದನಲ್ಲದೆ ಅದರ ಪತ್ರಿಕೆಯಾದ L'Avvenire del Lavoratore (ಕಾರ್ಮಿಕನ ಭವಿಷ್ಯ ) ಎಂಬಲ್ಲಿ ಸಂಪಾದಕನಾಗಿಯೂ ಕೆಲಸ ಮಾಡಿದನು. ಇಟಲಿಗೆ ಮರಳಿದ ನಂತರ ಆತ ಸ್ವಲ್ಪಕಾಲದವರೆಗೆ ಇಟಾಲಿಯನ್ ನಗರವಾದ ಮಿಲಾನ್ನಲ್ಲಿದ್ದು 1910ರಲ್ಲಿ ತನ್ನ ಊರಾದ ಫೋರ್ಲಿಗೆ ಮರಳಿ ಅಲ್ಲಿ Lotta di classe (ವರ್ಗಗಳ ಹೋರಾಟ ) ಎಂಬ ವಾರಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಲು ತೊಡಗಿದನು.

ಈದೇ ಸಮಯದಲ್ಲಿ ಆತನು ತೀವ್ರವಾದಿ ನಿಯತಕಾಲಿಕೆ ಲಾ ವೊಚೆ ಯಲ್ಲಿ Il Trentino veduto da un Socialista (ಸಮಾಜವಾದಿಯೊಬ್ಬ ಕಂಡಂತೆ ಟ್ರೆಂಟೋ )ವನ್ನು ಪ್ರಕಟಿಸಿದನು.[೧೧] ಆತನು ಜರ್ಮನ್ ಸಾಹಿತ್ಯದ ಬಗ್ಗೆ ಹಲವಾರು ಪ್ರಬಂಧಗಳನ್ನೂ, ಕೆಲವು ಕಥೆಗಳನ್ನೂ, ಮತ್ತು L'amante del Cardinale: Claudia Particella, romanzo storico (ಕಾರ್ಡಿನಲ್‌ನ ಪ್ರಿಯತಮೆ ) ಎಂಬ ಒಂದು ಕಾದಂಬರಿಯನ್ನು ಕೂಡ ಪ್ರಕಟಿಸಿದನು. ಈ ಕಾದಂಬರಿಯನ್ನು ಆತ ಸಾಂತಿ ಕೊರ್ವಾಜಾನ ಜತೆಗೆ ಸಹಲೇಖಕನಾಗಿ ಬರೆದನು ಮತ್ತು ಇದು ಟ್ರೆಂಟೋದ ದಿನಪತ್ರಿಕೆ ಇಲ್ ಪೊಪೋಲೋ ನಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದು ಜನವರಿ 20ರಿಂದ ಮೇ 11, 1910ರವರೆಗೆ ಕಂತುಗಳಲ್ಲಿ ಬಿಡುಗಡೆಯಾಯಿತು.[೧೨] ಈ ಕಾದಂಬರಿಯು ಧರ್ಮಾಧಿಕಾರಿತನವನ್ನು ಕಡುವಾಗಿ ವಿರೋಧಿಸಿತ್ತು ಮತ್ತು ನಂತರದ ದಿನಗಳಲ್ಲಿ ಮುಸೊಲಿನಿ ವ್ಯಾಟಿಕನ್ ಜತೆಗೆ ಒಪ್ಪಂದ ಮಾಡಿಕೊಂಡಾಗ ಅದನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು.[]

ಈ ಹೊತ್ತಿಗೆ ಆತ ಇಟಲಿಯ ಅಗ್ರಗಣ್ಯ ಸಮಾಜವಾದಿಗಳಲ್ಲೊಬ್ಬನೆನಿಸಿಕೊಂಡಿದ್ದನು. ಸೆಪ್ಟೆಂಬರ್ 1911ರಲ್ಲಿ ಮುಸೊಲಿನಿಯು ಇಟಲಿಯ ಲಿಬ್ಯಾ ಯುದ್ಧದ ವಿರುದ್ಧ ಸಮಾಜವಾದಿಗಳು ನಡೆಸಿದ ದಂಗೆಯೊಂದರಲ್ಲಿ ಭಾಗವಹಿಸಿದನು. ಲಿಬಿಯನ್ ರಾಜಧಾನಿಯಾದ ಟ್ರಿಪೊಲಿಯನ್ನು ವಶಪಡಿಸಿಕೊಳ್ಳಲು ಇಟಲಿಯ "ಸಾಮ್ರಾಜ್ಯಶಾಹೀ ಯುದ್ಧ"ವನ್ನು ಕಟುವಾಗಿ ಖಂಡಿಸಿದ್ದಕ್ಕಾಗಿ ಆತನಿಗೆ ಐದು ತಿಂಗಳ ಸೆರೆವಾಸ ಪ್ರಾಪ್ತವಾಯಿತು.[೧೩] ಬಿಡುಗಡೆಯ ನಂತರ ಆತನು ಯುದ್ಧವನ್ನು ಬೆಂಬಲಿಸಿದ್ದ ಇಬ್ಬರು ’ರಿವಿಶನಿಸ್ಟ್’ಗಳಾದ ಇವಾನೋ ಬೊನೋಮಿಮತ್ತು ಲಿಯೋನಿಡಾ ಬಿಸೊಲಾಟಿ ಎಂಬುವರನ್ನು ಸೋಶಿಯಲಿಸ್ಟ್ ಪಾರ್ಟಿಯ ಹುದ್ದೆಗಳಿಂದ ತೆಗೆದುಹಾಕಿಸಿದನು. ಇದರಿಂದಾಗಿ ಆತನಿಗೆ ಸೋಶಿಯಲಿಸ್ಟ್ ಪಕ್ಷದ ಸುದ್ದಿಪತ್ರಿಕೆಯಾಗಿದ್ದ Avanti! ಯ ಸಂಪಾದಕತ್ವ ಲಭಿಸಿತು. ಆತನ ನೇತೃತ್ವದಲ್ಲಿ ಪತ್ರಿಕೆಯ ಮಾರಾಟಸಂಖ್ಯೆಯು 20,000ದಿಂದ 100,000ಕ್ಕೇರಿತು.[೧೪]

1913ರಲ್ಲಿ, ಆತನು Giovanni Hus, il veridico (ಜ್ಯಾನ್ ಹಸ್, ನಿಜವಾದ ಪ್ರವಾದಿ ) ಎಂಬ ಜೆಕ್ ಎಕ್ಲೆಸಿಯಾಸ್ಟಿಕ್ ಸುಧಾರಕ ಜ್ಯಾನ್ ಹಸ್ನ ಜೀವನ ಮತ್ತು ಗುರುಗಳು ಹಾಗೂ ಆತನ ಅನುಯಾಯಿ ಹೋರಾಟಗಾರರಾದ ಹಸ್ಸೈಟ್ಗಳ ಬಗೆಗಿನ ಐತಿಹಾಸಿಕ ಮತ್ತು ರಾಜಕೀಯ ಜೀವನಚರಿತ್ರೆಯನ್ನು ಪ್ರಕಟಿಸಿದನು. ತನ್ನ ಜೀವನದ ಈ ಸಮಾಜವಾದಿ ಕಾಲದಲ್ಲಿ ಮುಸೊಲಿನಿ ಕೆಲವೊಮ್ಮೆ "Vero Eretico" (ಹೃತ್ಪೂರ್ವಕ ಅಪನಂಬಿಕೆಯುಳ್ಳವ) ಎಂಬ ಲೇಖನಿನಾಮವನ್ನು ಬಳಸುತ್ತಿದ್ದುದಿತ್ತು.

ಈ ಹೊತ್ತಿಗೆ ಆತ ಇಟಾಲಿಯನ್ ಪೊಲೀಸರು ಗಮನ ಹರಿಸುವಷ್ಟು ಪ್ರಭಾವಶಾಲಿಯಾಗಿದ್ದನು; ಮುಸೊಲಿನಿಯ ಬಗ್ಗೆ ಮಿಲಾನ್‌ನ ಸಾರ್ವಜನಿಕ ಸುರಕ್ಷಾ ವಿಭಾಗದ ಇನ್ಸ್‌ಪೆಕ್ಟರ್ ಜನರಲ್ ಜಿ. ಗ್ಯಾಸ್ಟಿ ತಯಾರಿಸಿದ ಪೊಲೀಸ್ ವರದಿಯ ಕೆಲಭಾಗಗಳು ಈ ಕೆಳಗಿನಂತಿವೆ.

ಸಮಾಜವಾದಿಗಳೊಂದಿಗೆ ಬಿರುಕು

ಬದಲಾಯಿಸಿ

ಇನ್ಸ್‌ಪೆಕ್ಟರ್ ಜನರಲ್ ಈ ರೀತಿಯಾಗಿ ಬರೆದರು:

ಮುಸೊಲಿನಿಯ ಕುರಿತಾಗಿ

ಪ್ರೊಫೆಸರ್ ಬೆನಿಟೊ ಮುಸೊಲಿನಿ,...38, ಕ್ರಾಂತಿಕಾರಿ ಸಮಾಜವಾದಿ, ಪೊಲೀಸ್ ದಾಖಲೆಗಳನ್ನು ಹೊಂದಿದವ; ಸೆಕೆಂಡರಿ ಶಾಲೆಗಳಲ್ಲಿ ಪಾಠ ಮಾಡಲು ಅರ್ಹತೆ ಇರುವ ಎಲಿಮೆಂಟರಿ ಶಾಲಾ ಅಧ್ಯಾಪಕ; ಚೆಸೀನಾ, ಫೋರ್ಲಿ ಮತ್ತು ರವೆನ್ನಾಗಳ ಚೇಂಬರ್‌ಗಳ ಮಾಜೀ ಫಸ್ಟ್ ಸೆಕ್ರೆಟರಿ; 1912ರ ನಂತರ ಸುದ್ದಿಪತ್ರಿಕೆ Avanti! ಯ ಸಂಪಾದಕ ಮತ್ತು ಅದಕ್ಕೆ ಹಿಂಸಾತ್ಮಕ, ಪ್ರಚೋದನಕಾರಿ ಹಾಗೂ ಮೊಂಡುತನದ ಆಯಾಮವನ್ನು ನೀಡಿದಾತ. ಅಕ್ಟೋಬರ್ 1914ರಲ್ಲಿ ಈತನು ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಇಟಲಿಯು ಸಂಪೂರ್ಣ ತಟಸ್ಥ ನೀತಿಯನ್ನು ಅನುಸರಿಸಬೇಕೆಂಬ ಇಟಾಲಿಯನ್ ಸಮಾಜವಾದಿ ಪಕ್ಷ ನಿರ್ದೇಶನಕ್ಕೆ ವಿರುದ್ಧವಾಗಿ ಒಂದು ರೀತಿಯ ಕ್ರಿಯಾತ್ಮಕ ತಟಸ್ಥ ನೀತಿಯನ್ನು ಬೆಂಬಲಿಸಿದ್ದರಿಂದಾಗಿ ಅದೇ ತಿಂಗಳ ಇಪ್ಪತ್ತನೇ ತಾರೀಖಿನಂದು Avanti! ಯ ನಿರ್ದೇಶನಾಲಯದಿಂದ ಹೊರಬಂದನು.

ನಂತರ ನವೆಂಬರ್ ಹದಿನೈದರಂದು [1914], ಆತನು Avanti! ಗೆ ವಿರುದ್ಧವಾಗಿ Il Popolo d'Italia ಎಂಬ ಸುದ್ದಿಪತ್ರಿಕೆಯೊಂದರ ಪ್ರಕಟಣೆಯನ್ನು ಆರಂಭಿಸಿದನು ಮತ್ತು ಸುದ್ದಿಪತ್ರಿಕೆ ಮತ್ತು ಅದರ ಬೆಂಬಲಿಗರ ಬಗ್ಗೆ ಎದ್ದ ಕಹಿಯಾದ ವಿವಾದಗಳ ನಡುವೆಯೇ ಮಧ್ಯ ಸಾಮ್ರಾಜ್ಯಗಳ ಸೇನಾನೀತಿಯಲ್ಲಿ ಇಟಾಲಿಯನ್ ಹಸ್ತಕ್ಷೇಪ ಆಗಬೇಕೆಂಬ ಸಿದ್ಧಾಂತವನ್ನು ಬೆಂಬಲಿಸಿದನು.

ಈ ಕಾರಣದಿಂದಾಗಿ ಆತನು ನೈತಿಕವಾಗಿ ಮತ್ತು ರಾಜಕೀಯವಾಗಿ ಅನರ್ಹನೆಂದು ಆರೋಪ ಮಾಡಲಾಗಿ ಪಕ್ಷವು ಆತನನ್ನು ಉಚ್ಚಾಟಿಸಲು ತೀರ್ಮಾನ ಕೈಗೊಂಡಿತು.

ಆದ್ದರಿಂದ ಆತ..ಇಟಾಲಿಯನ್ ಹಸ್ತಕ್ಷೇಪದ ಪಕ್ಷವಾಗಿ ಬಹಳ ಚಟುವಟಿಕೆಯ ಪ್ರಚಾರಕಾರ್ಯವನ್ನು ಕೈಗೊಂಡನು, ಜತೆಗೇ ಪಿಯಾಜಾಗಳ ಪ್ರದರ್ಶನಗಳಲ್ಲಿ ಭಾಗವಹಿಸಿದನು ಮತ್ತು ಪೊಪೋಲೋ ಡಿ ಇಟಾಲಿಯಾದಲ್ಲಿ ಬಹಳ ಹಿಂಸಾತ್ಮಕವಾದ ಬರಹಗಳನ್ನು ಬರೆದನು....[೧೪]

ತನ್ನ ಸಾರಾಂಶದಲ್ಲಿ ಇನ್ಸ್‌ಪೆಕ್ಟರ್ ಈ ರೀತಿಯಾಗಿಯೂ ಬರೆಯುತ್ತಾರೆ:

"ಆತ ಸಮಾಜವಾದಿಗಳಿಗೆ Avanti! ಯ ಮಾದರಿ ಸಂಪಾದಕನಾಗಿದ್ದ . ಈ ರೀತಿಯ ಕೆಲಸ ಮಾಡುವಲ್ಲಿ ಆತ ಅಪಾರ ಗೌರವ, ಪ್ರೀತಿಗಳನ್ನು ಗಳಿಸಿದ್ದ. ಇಂದಿಗೂ ಆತನ ಹಿಂದಿನ ಕಾಮ್ರೇಡ್‌ಗಳು ಮತ್ತು ಅಭಿಮಾನಿಗಳು ದುಡಿಮೆಗಾರ ವರ್ಗದ ಚೈತನ್ಯವನ್ನು ಆತನಷ್ಟು ಚೆನ್ನಾಗಿ ಅರ್ಥೈಸಿಕೊಂಡು ವ್ಯಾಖ್ಯಾನಿಸುವವರು ಇನ್ನಾರೂ ಇರಲಿಲ್ಲವೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಆತನ ಬಹಿಷ್ಕಾರವನ್ನು ದುಃಖದಿಂದ ಸ್ವೀಕರಿಸದವರಾರೂ ಇರಲಿಲ್ಲ.

ಇದುಸ್ವಾರ್ಥ ಅಥವಾ ದುಡ್ಡಿನ ಕಾರಣಗಳಿಂದ ಆದುದಾಗಿರಲಿಲ್ಲ. ಆತನು ಹೃತ್ಪೂರ್ವಕವಾಗಿ ಮತ್ತು ಭಾವೋದ್ದೀಪ್ತನಾಗಿ ಮೊದಮೊದಲು ಜಾಗರೂಕ ಹಾಗೂ ಶಸ್ತ್ರಸಜ್ಜಿತ ತಟಸ್ಥನೀತಿಯನ್ನು ಪ್ರತಿಪಾದಿಸುತ್ತಿದ್ದವನಾಗಿದ್ದು ನಂತರ ಯುದ್ಧವನ್ನು ಬೆಂಬಲಿಸಿದನು; ತನ್ನ ಸುದ್ದಿಪತ್ರಿಕೆಗಾಗಿ, ತನ್ನ ಯೋಜನೆ ಮತ್ತು ಕಾರ್ಯಾಚರಣೆಗಾಗಿ ಎಲ್ಲಾ ರೀತಿಯ ಸಹಾಯ - ಅದು ಯಾವುದೇ ಮೂಲದಿಂದ ಬಂದದ್ದಾಗಿರಲಿ, ಹೇಗಾದರೂ ಪಡೆದದ್ದಾಗಿರಲಿ - ಬಳಸಿಕೊಳ್ಳುವಾಗ ಆತನಿಗೆ ತಾನು ತನ್ನ ವೈಯುಕ್ತಿಕ ಮತ್ತು ರಾಜಕೀಯ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದೇನೆಂದು ಆತ ನಂಬುತ್ತಿದ್ದಿಲ್ಲ.

ಇದು ಆತನ ಆರಂಭದ ರೀತಿಯಾಗಿತ್ತು. ಆತನು ತನ್ನನ್ನು ತೊಡಗಿಸಿಕೊಂಡಿದ್ದ ಹೋರಾಟಕ್ಕೆ ಅವಶ್ಯಕವಾಗಿದ್ದ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತ ಆತನ ಸಮಾಜವಾದೀ ನಂಬಿಕೆಗಳನ್ನು ಎಷ್ಟರ ಮಟ್ಟಿಗೆ ತ್ಯಾಗ ಮಾಡಿರಬಹುದು (ಇದನ್ನು ಆತ ಬಹಿರಂಗವಾಗಿ ಅಥವಾ ವೈಯುಕ್ತಿಕವಾಗಿ ತ್ಯಜಿಸಲಿಲ್ಲ) ಎಂದು ಹೇಳುವುದು ಕಷ್ಟಕರವಾಗುತ್ತದೆ... ಆದರೆ ಈ ಬದಲಾವಣೆಗಳು ಆದವು ಎಂದು ಅಂದುಕೊಳ್ಳುವುದಾದಲ್ಲಿ...ಆತ ತಾನು ಇನ್ನೂ ಸಮಾಜವಾದಿಯಾಗಿದ್ದೇನೆಂದು ತೋರಿಸಿಕೊಳ್ಳಲು ಬಯಸುತ್ತಿದ್ದ ಮತ್ತು ಇದೇ ನಿಜವೆಂದು ತನ್ನಗೆ ತಾನೇ ಹೇಳಿಕೊಂಡು ಮೂರ್ಖನಂತೆ ಅದನ್ನು ನಂಬತೊಡಗಿದ ಕೂಡಾ."[೧೫]

ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ಸೇವೆ

ಬದಲಾಯಿಸಿ

ಆತನು ಇರ್ರಿಡೆಂಟಿಸ್ಟ್ ರಾಜಕಾರಣಿಯೂ ಪತ್ರಕರ್ತನೂ ಆಗಿದ್ದ ಸಿಸೇರ್ ಬ್ಯಾಟಿಸ್ಟಿಯ ಮಿತ್ರತ್ವ ಬೆಳೆಸಿಕೊಂಡನು ಮತ್ತು ಅವನ ರೀತಿಯೇ ಸೇನೆಯನ್ನು ಸೇರಿ ಸೇವೆ ಸಲ್ಲಿಸಿದನು. "ಆತನನ್ನು ಕಾರ್ಯಾಚರಣೆಗಳ ವಲಯಕ್ಕೆ ಕಳುಹಿಸಲಾಯಿತು ಮತ್ತು ಅಲ್ಲಿ ಗ್ರೆನೇಡೊಂದರ ಸ್ಫೋಟದಿಂದ ಆತ ತೀವ್ರವಾಗಿ ಗಾಯಗೊಂಡನು."[೧೪]

ಇನ್ಸ್‌ಪೆಕ್ಟರ್ ಮುಂದುವರೆಸುತ್ತಾರೆ:

"ಆತನಿಗೆ "ಯುದ್ಧದಲ್ಲಿ ಪ್ರಶಂಸಾರ್ಹ ಕೆಲಸ ಮಾಡಿದ್ದಕ್ಖಾಗಿ" ಕಾರ್ಪೊರಲ್‌ನ ಹುದ್ದೆಗೆ ಬಡ್ತಿ ನೀಡಲಾಯಿತು. ಈ ಬಡ್ತಿಯು ಆತನ ಆದರ್ಶಪ್ರಾಯ ನಡತೆ ಮತ್ತು ಹೋರಾಟದ ಗುಣ, ಆತನ ಮಾನಸಿಕ ಸಮಚಿತ್ತತೆ ಮತ್ತು ಅನನುಕೂಲತೆಗಳಿದ್ದರೂ ಪರಿಗಣಿಸದಿರುವುದು, ತನಗೆ ವಹಿಸಿದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಉತ್ಸಾಹ ಮತ್ತು ಕ್ರಮಬದ್ಧತೆ, ದೈಹಿಕ ಶ್ರಮ ಮತ್ತು ಸಹಿಷ್ಣುತೆಯ ಕೆಲಸಗಳಲ್ಲಿ ಯಾವಾಗಲೂ ಮೊದಲಿಗನಾಗಿರುವುದು - ಮೊದಲಾದ ಕಾರಣಗಳಿಂದ ದೊರಕಿತು."[೧೪]

ಮುಸೊಲಿನಿಯ ಮಿಲಿಟರಿ ಅನುಭವಗಳನ್ನು ಆತ ತನ್ನ ರಚನೆಯಾದ Diario Di Guerra. ದಲ್ಲಿ ಬರೆದುಕೊಂಡಿದ್ದಾನೆ. ಒಟ್ಟಾರೆ ಆತನು ಸುಮಾರು ಒಂಬತ್ತು ತಿಂಗಳುಗಳ ಕಾಲ ಸಕ್ರಿಯವಾಗಿ ಮುಂಚೂಣಿಯ ಕಂದಕಗಳಿಂದ ಕೂಡಿದ ಯುದ್ಧದಲ್ಲಿ ಕಾರ್ಯನಿರ್ವಹಣೆ ಮಾಡಿದನು. ಈ ವೇಳೆಯಲ್ಲಿ ಆತನಿಗೆ ಪ್ಯಾರಾ ಟೈಫಾಯಿಡ್ ಜ್ವರ ತಗುಲಿತು.[೧೬] ಆತನ ಮಿಲಿಟರಿ ಸಾಧನೆಗಳು 1917ರಲ್ಲಿ ಆತನಿದ್ದ ಕಂದಕದಲ್ಲಿ ಮೊರ್ಟರ್ ಬಾಂಬೊಂದು ಸಿಡಿದಾಗ ಕೊನೆಗೊಂಡವು. ಆತನ ದೇಹದಲ್ಲಿ ಕಡಿಮೆಯೆಂದರೂ 40 ಲೋಹದ ಚೂರುಗಳು ಚುಚ್ಚಿಕೊಂಡಿದ್ದವು[೧೬] ಆಗಸ್ಟ್ 1917ರಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಮೇಲೆ ಆತ ತನ್ನ ಹೊಸ ಪತ್ರಿಕೆ Il Popolo d'Italia ದ ಸಂಪಾದಕನಾಗಿ ಮರಳಿ ಕೆಲಸ ಆರಂಭಿಸಿದನು. ಅಲ್ಲಿ ಆತನು ಇಟಲಿಯಲ್ಲಿದ್ದ ಜೆಕೊಸ್ಲೊವಾಕ್ ದಂಡುಗಳ ಬಗ್ಗೆ ಧನಾತ್ಮಕ ಲೇಖನಗಳನ್ನು ಬರೆದನು.

25 ಡಿಸೆಂಬರ್ 1915ರಲ್ಲಿ ಟ್ರೆವಾಲ್‌ಗ್ಲಿಯೋನಲ್ಲಿ ಆತ ತನ್ನದೇ ದೇಶದ ರೇಶೇಲ್ ಗಿಡಿಯ ಜತೆ ವಿವಾಹ ನೆರವೇರಿಸಿದ ಮತ್ತು ಈಕೆಯಿಂದ ಆತನಿಗೆ 1910ರಲ್ಲಿ ಫೋರ್ಲಿಯಲ್ಲಿ ಹುಟ್ಟಿದ ಎಡ್ಡಾ ಎಂಬ ಮಗಳಿದ್ದಳು. 1915ರಲ್ಲಿ ಆತನಿಗೆ ಟ್ರೆಂಟೋ ಬಳಿಯ ಹಳ್ಳಿಯಾದ ಸೊಪ್ರಾಮೊಂಟ್‌ನ ನಿವಾಸಿಯಾಗಿದ್ದ ಐಡಾ ಡಾಲ್ಸರ್ಳಿಂದ ಒಬ್ಬ ಮಗ ಹುಟ್ಟಿದನು.[][][೧೭] ಈ ಮಗನನ್ನು ಆತ ಕಾನೂನು ಪ್ರಕಾರ 11 ಜನವರಿ 1916ರಲ್ಲಿ ಅಂಗೀಕರಿಸಿದನು..

ಫ್ಯಾಸಿಸಮ್‌ನ ಸೃಷ್ಟಿ

ಬದಲಾಯಿಸಿ

ಮುಸೊಲಿನಿಯು ಪ್ರಥಮ ವಿಶ್ವಯುದ್ಧದಲ್ಲಿ ಮಿತ್ರಪಕ್ಷಗಳ ಸೇವೆಯಿಂದ ವಾಪಾಸು ಬರುವಷ್ಟರಲ್ಲಿ ಆತನು ಸಮಾಜವಾದವು ಸಿದ್ಧಾಂತವಾಗಿ ದೊಡ್ಡಪ್ರಮಾಣದ ಸೋಲನ್ನನುಭವಿಸಿರುವುದೆಂಬ ತೀರ್ಮಾನಕ್ಕೆ ಬಂದಿದ್ದನು. 1917ರಲ್ಲಿ ಮುಸೊಲಿನಿ ಬ್ರಿಟಿಶ್ ಭದ್ರತಾ ಸೇವೆಯಾದ MI5ನಿಂದ ವಾರಕ್ಕೆ £100 ಸಂಬಳಕ್ಕೆ ಕೆಲಸಮಾಡಲು ನೇಮಕಗೊಳ್ಳುವುದರ ಮೂಲಕ ರಾಜಕೀಯಕ್ಕೆ ವಿಧ್ಯುಕ್ತ ಪಾದಾರ್ಪಣೆಯನ್ನು ಮಾಡಿದನು; ಈ ಸಹಾಯವನ್ನು ಪಡೆಯಲು ಸರ್ ಸ್ಯಾಮ್ಯುಯೆಲ್ ಹೋರ್ ಅನುಮತಿ ನೀಡಿದ್ದನು.[೧೮] 1918ರಲ್ಲಿ ಮುಸೊಲಿನಿ ಇಟಲಿ ರಾಷ್ಟ್ರವನ್ನು ಪುನರುಜ್ಜೀವಿತಗೊಳಿಸಲು "ಸಂಪೂರ್ಣ ಬದಲಾವಣೆಯನ್ನು ತರುವ ಅರ್ಹತೆಯುಳ್ಳ ಕಠಿಣ ಮತ್ತು ಉತ್ಸಾಹೀ" ವ್ಯಕ್ತಿಯೊಬ್ಬನ ಅವಶ್ಯಕತೆಯಿದೆಯೆಂದು ಕರೆನೀಡಿದನು.[೧೯] ಕೆಲವು ಕಾಲದ ನಂತರ ಮುಸೊಲಿನಿಯ ಪ್ರಕಾರ 1919ರ ಹೊತ್ತಿಗೆ ಆತನಿಗೆ "ಸಮಾಜವಾದವು ಒಂದು ಸಿದ್ಧಾಂತವಾಗಿ ಆಗಲೇ ಸತ್ತುಹೋಗಿಯಾಗಿದೆ; ಅದು ಕೇವಲ ಒಂದು ಅತೃಪ್ತಿಯಾಗಿ ಉಳಿದುಕೊಂಡಿದೆ" ಎಂದು ಅನ್ನಿಸಿತ್ತು.[೨೦] 23 ಮಾರ್ಚ್ 1919ರಂದು ಮುಸೊಲಿನಿ ಮಿಲಾನ್ ಫ್ಯಾಸಿಯೋo ವನ್ನು ಪುನರ್ರಚನೆ ಮಾಡಿ 200 ಸದಸ್ಯರನ್ನೊಳಗೊಂಡ Fasci Italiani di Combattimento (ಇಟಾಲಿಯನ್ ಹೋರಾಟ ಪಡೆ)ಯನ್ನು ರೂಪಿಸಿದನು.[೧೯]

ಫ್ಯಾಸಿಸಂ-:ಆಕ್ರಮಣಕಾರೀ ರಾಷ್ಟ್ರೀಯತೆ, ಸರ್ವಾಧಿಕಾರಿ ನಾಯಕಪಂಥ, ಯುದ್ಧಪ್ರಿಯತೆ, ರಾಷ್ಟ್ರಸಂಸ್ಕøತಿಯ ಅಂಧಪೂಜೆ ಇವು ಫ್ಯಾಸಿಸಮ್ಮಿನ ಮುಖ್ಯ ಲಕ್ಷಣಗಳು. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ವಿರೋಧಿ, ಪ್ರಜಾಸತ್ತೆಯ ಪರಮಶತ್ರು. ಇಲ್ಲಿ ಪ್ರಜೆಗಳು ಸರ್ಕಾರದ ಕೈಗೊಂಬೆಗಳಂತೆ. ಒಂದು ರಾಜ್ಯ ಆಂತರಿಕ ಬಿಕ್ಕಟ್ಟಿಗೆ ಸಿಕ್ಕಾಗ ಫ್ಯಾಸಿಸಮ್ ತಲೆ ಎತ್ತಬಹುದಾಗಿದೆ. ಎರಡನೆಯ ಮಹಾಯುದ್ಧದ ಅನಂತರವೂ ಫ್ಯಾಸಿಸ್ಟ್ ಪ್ರವೃತ್ತಿಗಳು ಅಲ್ಲಲ್ಲಿ ತಲೆ ಎತ್ತಿರುವುದುಂಟು. ಫ್ಯಾಸಿಸಮ್ ಪ್ರಾಬಲ್ಯದ ವಿರುದ್ಧ ಒಂದು ಭರವಸೆಯೆಂದರೆ ಇದು; ಪ್ರಜೆಗಳು ಶಾಶ್ವತವಾಗಿ ತಮ್ಮ ಸ್ವಾತಂತ್ರ್ಯದ ಅಪಹರಣವನ್ನು ಸಹಿಸುವುದಿಲ್ಲ. ಇದು ಇತಿಹಾಸ ಕಲಿಸಿರುವ ಪಾಠ.[೨೧]

ಫ್ಯಾಸಿಸಮ್ ತನ್ನ ಮೊದಲ ಹಂತಗಳಲ್ಲಿ ಬೆಂಬಲವನ್ನು ಪಡೆಯುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದು ಸಾಮಾಜಿಕ ವರ್ಗಕ್ಕೆ ಸಂಬಂಧಿಸಿದ ಎಲ್ಲ ಭೇದಭಾವಗಳನ್ನು ವಿರೋಧಿಸುವುದಾಗಿ ಮತ್ತು ಎಲ್ಲ ರೀತಿಯ ವರ್ಗ ಸಂಘರ್ಷಗಳನ್ನು ಕಡುವಾಗಿ ವಿರೋಧಿಸುವುದಾಗಿ ಮಾಡಿದ ಘೋಷಣೆ.[೨೨] ಇದರ ಬದಲಾಗಿ ಫ್ಯಾಸಿಸಮ್ ಇಟಲಿಯನ್ನು ಅದರ ಅಮೋಘವಾದ ರ‍ೋಮನ್ ಘನತೆಗೆ ಮರಳಿ ಕೊಂಡೊಯ್ಯುವ ಬಯಕೆಯಿಂದ ರಾಷ್ಟ್ರೀಯತಾವಾದಿ ಭಾವನೆಗಳಾದ ಬಲವಾದ, ವರ್ಗರಹಿತ ಐಕ್ಯತೆಗಳನ್ನು ಬೆಂಬಲಿಸತೊಡಗಿತು. ಫ್ಯಾಸಿಸಮ್‌ನ ಸೈದ್ಧಾಂತಿಕ ತಳಹದಿಯು ಹಲವಾರು ಮೂಲಗಳನ್ನು ಆಧರಿಸಿದ್ದಾಗಿತ್ತು. ಮುಸೊಲಿನಿ ಫ್ಯಾಸಿಸಮ್ ಅನ್ನು ರೂಪಿಸಲು ಪ್ಲೇಟೋ, ಜಾರ್ಜ್ ಸೊರೆಲ್, ನೀಶೆಯ ಬರಹಗಳು ಹಾಗೂ Vilfredo Paretoನ ಸಮಾಜವಾದಿ ಮತ್ತು ಆರ್ಥಿಕ ವಿಚಾರಗಳನ್ನು ಬಳಸಿಕೊಂಡನು. ಮುಸೊಲಿನಿ ಪ್ಲೇಟೋನ ಬರಹಗಳನ್ನು ಮೆಚ್ಚುತ್ತಿದ್ದುದಲ್ಲದೆ ಆತನ ದ ರಿಪಬ್ಲಿಕ್ ಅನ್ನು ಸ್ಫೂರ್ತಿಗಾಗಿ ಆಗಾಗ ಓದುತ್ತಿದ್ದನು.[೨೩] ದ ರಿಪಬ್ಲಿಕ್ ನಲ್ಲಿದ್ದ ಹಲವಾರು ಅಭಿಪ್ರಾಯಗಳನ್ನು ಫ್ಯಾಸಿಸಮ್ ಪ್ರವರ್ಧಮಾನಕ್ಕೆ ತರತೊಡಗಿತು, ಉದಾಹರಣೆಗೆ ರಾಷ್ಟ್ರಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವೆಂದು ಪ್ರತಿಪಾದಿಸುವ ಬುದ್ಧಿಜೀವಿಯೊಬ್ಬನು ರಾಷ್ಟ್ರವನ್ನು ಆಳಬೇಕೆಂಬುದು, ಪ್ರಜಾತಂತ್ರಕ್ಕೆ ವಿರೋಧ, ವರ್ಗವ್ಯವಸ್ಥೆಯನ್ನು ಕಾಪಾಡುವುದು ಮತ್ತು ವರ್ಗಗಳ ನಡುವಣ ಸಹಕಾರ, ಯೋಧರ ವರ್ಗವೊಂದನ್ನು ರೂಪಿಸುವುದರ ಮೂಲಕ ರಾಷ್ಟ್ರದ ಮಿಲಿಟರೀಕರಣವನ್ನು ಪ್ರೋತ್ಸಾಹಿಸುವುದು, ರಾಷ್ಟ್ರದ ಒಳಿತಿಗಾಗಿ ಪ್ರಜೆಗಳು ಪೌರ ಸೇವೆ ಸಲ್ಲಿಸಬೇಕೆಂದು ಆದೇಶ ನೀಡುವುದು ಮತ್ತು ಭವಿಷ್ಯದ ಯೋಧರನ್ನು ಮತ್ತು ರಾಷ್ಟ್ರವನ್ನಾಳಬಹುದಾದ ನಾಯಕರನ್ನು ರೂಪಿಸುವ ಸಲುವಾಗಿ ಶಿಕ್ಷಣವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ಯಾದಿ.[೨೪] ಫ್ಯಾಸಿಸಮ್ ಮತ್ತು ದ ರಿಪಬ್ಲಿಕ್ ನ ನಡುವೆ ಇದ್ದ ವ್ಯತ್ಯಾಸವೆಂದರೆ ಅದು ಆಕ್ರಮಣಕಾರೀ ಯುದ್ಧಪ್ರವೃತ್ತಿಗೆ ಉತ್ತೇಜನ ನೀಡುತ್ತಿರಲಿಲ್ಲ ಮತ್ತು ಭದ್ರತಾ ಕಾರಣಗಳಿಗೋಸ್ಕರ ಮಾತ್ರ ಯುದ್ಧ ಮಾಡಬೇಕೆಂದು ಅಭಿಪ್ರಾಯ ಹೊಂದಿತ್ತು; ಫ್ಯಾಸಿಸಮ್‌ನಂತಲ್ಲದೆ ಅದು ಸ್ವತ್ತಿನ ವಿಚಾರದಲ್ಲಿ ಬಹಳ ಕಮ್ಯುನಿಸ್ಟ್‌-ರೀತಿಯ ವಿಚಾರಗಳನ್ನು ಪ್ರವರ್ತಿಸುತ್ತಿತ್ತು, ಪ್ಲೇಟೋ ನ್ಯಾಯ ಮತ್ತು ನೈತಿಕತೆಯನ್ನು ಸಾಧಿಸಬೇಕೆನ್ನುವ ಆದರ್ಶವಾದಿಯಾಗಿದ್ದರೆ ಮುಸೊಲಿನಿ ಮತ್ತು ಫ್ಯಾಸಿಸಮ್ ರಾಜಕೀಯ ಗುರಿಗಳನ್ನುಳ್ಳ ವಾಸ್ತವವಾದಿಗಳಾಗಿದ್ದರು.[೨೫]

ಮುಸೊಲಿನಿ ಮತ್ತು ಫ್ಯಾಸಿಸ್ಟರು ಒಂದೇ ಸಾರಿಗೆ ಕ್ರಾಂತಿಕಾರಿಗಳೂ ಸಂಪ್ರದಾಯವಾದಿಗಳೂ ಆಗಿದ್ದರು;[೨೬][೨೭] ಏಕೆಂದರೆ ಅವರ ಹಾದಿಯು ಅಂದಿನ ರಾಜಕೀಯ ವಾತಾವರಣಕ್ಕಿಂತ ಬಹಳ ಭಿನ್ನವಾದುದಾಗಿತ್ತು, ಮತ್ತು ಇದನ್ನು ಕೆಲವು ಬಾರಿ "ಮೂರನೇ ಹಾದಿ"ಯಂದು ವರ್ಣಿಸಲಾಗುತ್ತದೆ.[೨೮] ಮುಸೊಲಿನಿಯ ಹತ್ತಿರದ ವಿಶ್ವಾಸಿಗಳಲ್ಲೊಬ್ಬನಾಗಿದ್ದ ಡಿನೋ ಗ್ರಾಂಡಿಯ ನಾಯಕತ್ವದಲ್ಲಿ ಫ್ಯಾಸಿಸ್ಟಿಗಳು ಸೇರಿಕೊಂಡು ಇಟಲಿಯ ಬೀದಿಗಳಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಯುದ್ಧದಲ್ಲಿ ಹೋರಾಡಿ ಅನುಭವವುಳ್ಳ ಸೈನಿಕರ ಶಸ್ತ್ರಸಜ್ಜಿತ ಪಡೆಗಳನ್ನು ರೂಪಿಸಿದರು ಮತ್ತು ಇವನ್ನು ಬ್ಲ್ಯಾಕ್‌ಶರ್ಟ್ಸ್ (ಅಥವಾ ಸ್ಕ್ವಾಡ್ರಿಸ್ಟಿ ) ಎಂದು ಕರೆಯಲಾಯಿತು. ಬ್ಲ್ಯಾಕ್‌ಶರ್ಟ್‌ಗಳು ಯಾವಾಗಲು ಕಮ್ಯುನಿಸ್ಟರು, ಸಮಾಜವಾದಿಗಳು ಮತ್ತು ಅನಾರ್ಕಿಸ್ಟ್ಗಳೊಂದಿಗೆ ಪೆರೇಡುಗಳು ಮತ್ತು ಪ್ರದರ್ಶನಗಳ ವೇಳೆಯಲ್ಲಿ ಘರ್ಷಿಸುತ್ತಿದ್ದರು ಮತ್ತು ಈ ಎಲ್ಲಾ ಬಣಗಳೂ ಒಬ್ಬರೊಬ್ಬರ ವಿರುದ್ಧವಾಗಿದ್ದವು. ಕಮ್ಯುನಿಸ್ಟ್ ಕ್ರಾಂತಿಯೊಂದರ ಭೀತಿಯ ನೆರಳು ಕವಿಯುತ್ತಿದ್ದುದರಿಂದಾಗಿ ಸರ್ಕಾರವೂ ಕೂಡ ಬ್ಲ್ಯಾಕ್‌ಶರ್ಟ್ಸ್‌ಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಫ್ಯಾಸಿಸ್ಟಿ ಎಷ್ಟು ತ್ವರಿತಗತಿಯಲ್ಲಿ ಬೆಳೆಯಿತೆಂದರೆ ಕೇವಲ ಎರಡು ವರ್ಷಗಳಲ್ಲಿ ಅದು ರೋಮ್‌ನ ಸಮ್ಮೇಳನವೊಂದರಲ್ಲಿ ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯಾಗಿ ರೂಪಾಂತರಗೊಂಡಿತು. ಇದಲ್ಲದೆ 1921ರಲ್ಲಿ ಪ್ರಥಮ ಬಾರಿಗೆ ಮುಸೊಲಿನಿಯನ್ನು ಚೇಂಬರ್ ಆಫ್ ಡೆಪ್ಯುಟೀಸ್ಗೆ ಆಯ್ಕೆ ಮಾಡಲಾಯಿತು.[] ಇದಲ್ಲದೆ, ಸುಮಾರು 1911ರಿಂದ 1938ರವರೆಗೆ ಮುಸೊಲಿನಿಯು "ಫ್ಯಾಸಿಸಮ್‌ನ ಯಹೂದಿ ತಾಯಿ"ಯೆಂದು ಕರೆಯಲ್ಪಡುತ್ತಿದ್ದ ಯಹೂದಿ ಲೇಖಕಿ ಮತ್ತು ಪಂಡಿತೆಯಾಗಿದ್ದ ಮಾರ್ಗೆರಿಟಾ ಸರ್ಫಾಟ್ಟಿಯೊಡನೆ ಹಲವಾರು ಸಂಬಂಧಗಳನ್ನು ಹೊಂದಿದ್ದನು.[೨೯]

ರೋಮ್ ಮೇಲೆ ದಾಳಿ ಮತ್ತು ಅಧಿಕಾರದ ಆರಂಭದ ದಿನಗಳು

ಬದಲಾಯಿಸಿ

ರೋಮಿನ ಮೇಲೆ ಆಕ್ರಮಣವು ಒಂದು ರಾಜಕೀಯ ವಿಪ್ಲವವಾಗಿತ್ತು ಮತ್ತು ಇದರ ಮುಖಾಂತರ ಮುಸೊಲಿನಿಯ ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯು ಇಟಲಿಯಲ್ಲಿ ಪ್ರಧಾನಮಂತ್ರಿ ಲೂಗಿ ಫ್ಯಾಕ್ಟಾನನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿತು. ಈ "ಮೆರವಣಿಗೆ"ಯನ್ನು 1922ರ 27–29 ಅಕ್ಟೋಬರ್ ನಡುವೆ ಕೈಗೊಳ್ಳಲಾಯಿತು. 28 ಅಕ್ಟೋಬರ್‌ನಂದು ಅರಸ ವಿಕ್ಟರ್ ಎಮ್ಯಾನುಯೆಲ್ III ಫ್ಯಾಕ್ಟಾನನ್ನು ಬೆಂಬಲಿಸಲು ನಿರಾಕರಿಸಿ ಮುಸೊಲಿನಿಗೆ ಅಧಿಕಾರವನ್ನು ವರ್ಗಾಯಿಸಿದನು. ಮುಸೊಲಿನಿಗೆ ಮಿಲಿಟರಿ, ಉದ್ಯಮಿಗಳ ವರ್ಗ ಮತ್ತು ಉದಾರ ಬಲಪಂಥೀಯರ ಬೆಂಬಲ ದೊರಕಿತು.

 
ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ಸ್ 1922ರಲ್ಲಿ ರೋಮ್‌ನ ಮೇಲಿನ ದಂಡಯಾತ್ರೆಯ ವೇಳೆಯಲ್ಲಿ.

ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸೊಲಿನಿಯ ಮೊದಲ ವರ್ಷಗಳ ಆಳ್ವಿಕೆಯು ಫ್ಯಾಸಿಸ್ಟರು, ರಾಷ್ಟ್ರೀಯತಾವಾದಿಗಳು, ಲಿಬರಲ್‌ಗಳು ಮುಂತಾದ ಹಲವು ಪಕ್ಷಗಳು ಮತ್ತು ಪಾಪ್ಯುಲರ್ ಪಾರ್ಟಿಯ ಎರಡು ಕ್ಯಾಥೊಲಿಕ್ ಮಂತ್ರಿಗಳನ್ನೂ ಕೂಡ ಒಳಗೊಂಡ ಬಲಪಂಥೀಯ ಸಮ್ಮಿಶ್ರ ಸರ್ಕಾರವಾಗಿತ್ತು. ಆತನ ಮೂಲ ಸರ್ಕಾರಗಳಲ್ಲಿ ಫ್ಯಾಸಿಸ್ಟರು ಅಲ್ಪಸಂಖ್ಯಾತರಾಗಿದ್ದರು. ಮುಸೊಲಿನಿಯ ದೇಶೀಯ ಗುರಿಯು ಅಂತಿಮವಾಗಿ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಿ ಅದರಲ್ಲಿ ತಾನು ಸರ್ವೋಚ್ಛ ನಾಯಕ (ಇಲ್ ಡೂಶೆ )ನಾಗುವುದಾಗಿತ್ತು ಮತ್ತು ಈ ಸಂದೇಶವನ್ನು ಮುಸೊಲಿನಿಯ ತಮ್ಮ ಅರ್ನಾಲ್ಡೋ ಸಂಪಾದಕತ್ವದ ಫ್ಯಾಸಿಸ್ಟ್ ಪತ್ರಿಕೆಯಾದ Il Popolo ದಲ್ಲಿ ತಿಳಿಯಪಡಿಸಿದನು. ಇದನ್ನು ಸಾಧಿಸಲು ಮುಸೊಲಿನಿಯು ಶಾಸಕಾಂಗದಿಂದ ಒಂದು ವರ್ಷದ ಅವಧಿಯವರೆಗೆ ಸರ್ವಾಧಿಕಾರಿಯ ಅಧಿಕಾರಗಳನ್ನು ಪಡೆದುಕೊಂಡನು (ಆಗಿನ ಕಾನೂನಿನ ಪ್ರಕಾರ ಸಿಂಧುವಾಗಿದ್ದುದು). ಆತ ರಾಜ್ಯದ ನಿರಂಕುಶ ಅಧಿಕಾರವನ್ನು ಮರಳಿ ಸ್ಥಾಪಿಸುವುದನ್ನು ಬೆಂಬಲಿಸಿದನು ಮತ್ತು ಇದನ್ನು ಸಾಧಿಸಲು Fasci di Combattimento ವನ್ನು ಮತ್ತು ಶಸ್ತ್ರಸಜ್ಜಿತ ಸೇನೆಯೊಡನೆ ಸೇರಿಸುವುದು (ಜನವರಿ 1923ರಂದು Milizia Volontaria per la Sicurezza Nazionale ಗೆ ತಳಹದಿ ಹಾಕಲಾಯಿತು) ಮತ್ತು ಪಕ್ಷವು ರಾಜ್ಯದೊಡನೆ ಪ್ರಗತಿಶೀಲವಾಗಿ ಗುರುತಿಸಿಕೊಳ್ಳುವುದರ ಪರವಾಗಿದ್ದನು. ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ, ಆತನು ಶ್ರೀಮಂತ ಔದ್ಯಮಿಕ ಮತ್ತು ಕೃಷಿಕ ವರ್ಗಗಳಿಗೆ ಅನುಕೂಲಕರ ಕಾನೂನೊಂದನ್ನು ಜಾರಿಗೆ ತಂದನು (ಖಾಸಗೀಕರಣಗಳು, ಬಾಡಿಗೆ ಕಾನೂನುಗಳ ಉದಾರೀಕರಣಗಳು ಮತ್ತು ಸಂಘಸಂಸ್ಥೆಗಳ ವಿಸರ್ಜನೆ).[]

1923ರಲ್ಲಿ ಮುಸೊಲಿನಿ "ಕೋರ್ಫು ಘಟನೆಯ ಸಂದರ್ಭದಲ್ಲಿಕೋರ್ಫುವಿನ ಮೇಲೆ ಆಕ್ರಮಣ ಮಾಡಲು ಇಟಾಲಿಯನ್ ಸೇನಾಬಲವನ್ನು ಕಳುಹಿಸಿದನು." ಕೊನೆಗೆ, ಲೀಗ್ ಆಫ್ ನೇಶನ್ಸ್ ಬಲಹೀನವೆಂದು ಸಾಬೀತಾಯಿತು ಮತ್ತು ಗ್ರೀಸ್ ಇಟಾಲಿಯನ್ ಬೇಡಿಕೆಗಳಿಗೆ ಮಣಿಯಬೇಕಾಗಿ ಬಂದಿತು.

ಏಸರ್ಬೋ ಕಾನೂನು

ಬದಲಾಯಿಸಿ

ಜೂನ್ 1923ರಲ್ಲಿ ಸರ್ಕಾರವು ಇಟಲಿಯನ್ನು ಒಂದು ಏಕೈಕ ರಾಷ್ಟ್ರೀಯ ಚುನಾವಣಾ ಕ್ಷೇತ್ರವನ್ನಾಗಿ ಮಾರ್ಪಡಿಸುವ ಏಸರ್ಬೋ ಕಾನೂನನ್ನು ಜಾರಿಗೆ ತಂದನು. ಇದರಿಂದ ಪಕ್ಷಕ್ಕೆ ಅಥವಾ 25%ನಷ್ಟಾದರೂ ಮತಗಳನ್ನು ಪಡೆದ ಪಕ್ಷಗಳ ಗುಂಪಿಗೆ ಸಂಸತ್ತಿನಲ್ಲಿ 2/3ರಷ್ಟು ಬಹುಮತ ದೊರಕುವಂತಾಯಿತು. ಈ ಕಾನೂನು 6 ಏಪ್ರಿಲ್ 1924ರ ಚುನಾವಣೆಗಳಲ್ಲಿ ಜಾರಿಗೆ ಬಂದಿತು. ಫ್ಯಾಸಿಸ್ಟರು, ಹೆಚ್ಚಿನ ಹಳೆಯ ಲಿಬರಲ್‌ಗಳು ಮತ್ತಿತರರು ಪ್ರಮುಖವಾಗಿ ಹಿಂಸಾತ್ಮಕ ಹಾದಿಯ ಮೂಲಕ ಅಥವಾ ಮತದಾರರನ್ನು ಬೆದರಿಸುವ ಮೂಲಕ 64%ರಷ್ಟು ಮತಗಳನ್ನು ಗಳಿಸಿಕೊಂಡರು. ಈ ತಂತ್ರಗಳು ವಿಶೇಷವಾಗಿ ದಕ್ಷಿಣಭಾಗದಲ್ಲಿ ಪ್ರಚಲಿತವಾಗಿದ್ದವು.

ಸ್ಕ್ವಾಡ್ರಿಸ್ಟಿ ಹಿಂಸಾಚಾರ

ಬದಲಾಯಿಸಿ

ನಿಯಮಗಳ ಉಲ್ಲಂಘನೆಯಾಗಿದೆಯೆಂಬ ಕಾರಣ ನೀಡಿ ಮತದಾನ ಪ್ರಕ್ರಿಯೆಯನ್ನು ರದ್ದುಮಾಡಬೇಕೆಂದು ವಿನಂತಿಸಿದ ಸಮಾಜವಾದಿ ಪ್ರತಿನಿಧಿ ಜಿಯಾಕೊಮೊ ಮ್ಯಾಟಿಯೊಟಿಹತ್ಯೆಯು ಮುಸೊಲಿನಿ ಸರ್ಕಾರದಲ್ಲಿ ತಾತ್ಕಾಲಿಕವಾದ ಬಿಕ್ಕಟ್ಟನ್ನುಂಟುಮಾಡಿತು. ಕೊಲೆಗಾರನಾಗಿದ್ದ ಅಮೆರಿಗೋ ಡುಮಿನಿ ಎಂಬ ಹೆಸರಿನ ಸ್ಕ್ವಾಡ್ರಿಸ್ಟಾ ಕೊಲೆ ಮಾಡಿದ ನಂತರ ಮುಸೊಲಿನಿಗೆ ವರದಿಯೊಪ್ಪಿಸಿದನು. ಮುಸೊಲಿನಿ ಇದನ್ನು ಮುಚ್ಚಿಹಾಕಲು ಆದೇಶ ನೀಡಿದನು, ಆದರೆ ಸಾಕ್ಷಿಗಳು ಮ್ಯಾಟಿಯೊಟಿಯ ದೇಹವನ್ನು ಸಾಗಿಸಲು ಉಪಯೋಗಿಸಲಾದ ಕಾರು ಮ್ಯಾಟಿಯೊಟಿಯ ಮನೆಯ ಮುಂದೆ ನಿಂತಿರುವುದನ್ನು ನೋಡಿದ್ದರು ಮತ್ತು ಇದು ಡುಮಿನಿಯನ್ನು ಕೊಲೆಯೊಂದಿಗೆ ಜೋಡಿಸಿತು. ಮ್ಯಾಟಿಯೊಟಿ ಬಿಕ್ಕಟ್ಟು ಫ್ಯಾಸಿಸ್ಟ್ ಹಿಂಸಾಚಾರದ ವಿರುದ್ಧ ದನಿಯೆತ್ತಿದ ವಿಮರ್ಶಕನೊಬ್ಬನ ಕೊಲೆಯ ವಿರುದ್ಧವಾಗಿ ನ್ಯಾಯ ಒದಗಿಸಲು ದನಿಗಳು ಏಳುವಂತೆ ಮಾಡಿತು. ಸರ್ಕಾರವು ಕೆಲದಿನಗಳವರೆಗೆ ಸ್ತಂಭನಕ್ಕೊಳಗಾಗಿ ನಿಷ್ಕ್ರಿಯವಾಗಿತ್ತು, ಹಾಗೂ ಮುಸೊಲಿನಿ ನಂತರದಲ್ಲಿ ಕೆಲವು ದೃಢಕಲ್ಪವುಳ್ಳ ವ್ಯಕ್ತಿಗಳು ಈ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಎಚ್ಚರ ನೀಡಿ ವಿಪ್ಲವವೊಂದನ್ನು ಆರಂಭಿಸಿ ಫ್ಯಾಸಿಸಮ್ ಅನ್ನು ಮುರುಟಿಬಿಡಬಹುದಾಗಿತ್ತು ಎಂದು ಒಪ್ಪಿಕೊಂಡನು. ಡುಮಿನಿಯನ್ನು ಎರಡು ವರ್ಷಗಳ ಕಾಲ ಸೆರೆಯಲ್ಲಿಡಲಾಯಿತು. ಬಿಡುಗಡೆಯಾದ ನಂತರ ಆತನು ಇತರರಿಗೆ ಇದಕ್ಕೆ ಮುಸೊಲಿನಿ ಹೊಣೆಗಾರನೆಂದು ಹೇಳಿದನು ಮತ್ತು ಇದರಿಂದಾಗಿ ಆತ ಅನ್ನೂ ಹೆಚ್ಚುಕಾಲ ಸೆರೆವಾಸ ಅನುಭವಿಸುವಂತಾಯಿತು. ಮುಂದಿನ 15 ವರ್ಷಗಳವರೆಗೆ ಡುಮಿನಿಯು ಮುಸೊಲಿನಿ, ಫ್ಯಾಸಿಸ್ಟ್ ಪಕ್ಷ ಮತ್ತು ಇತರ ಮೂಲಗಳಿಂದ ನಿಯಮಿತವಾಗಿ ಹಣ ಸ್ವೀಕರಿಸಿದನು.

ಚಿತ್ರ:Benito Mussolini Face.jpg
ತರುಣ ಮುಸೊಲಿನಿ, ಅಧಿಕಾರದ ಮೊದಮೊದಲ ದಿನಗಳಲ್ಲಿ

ವಿರುದ್ಧ ಪಕ್ಷಗಳ ಪ್ರತಿಕ್ರಿಯೆ ದುರ್ಬಲವಾಗಿತ್ತು ಅಥವಾ ಅವು ಸಾಧಾರಣವಾಗಿ ಪ್ರತಿಕ್ರಿಯೆಯನ್ನೆ ನೀಡುತ್ತಿರಲಿಲ್ಲ. ವಿಕ್ಟರ್ ಎಮ್ಯಾನುಯೆಲ್ ಮೇಲೆ ಮುಸೊಲಿನಿಯನ್ನು ವಜಾಮಾಡಲು ಒತ್ತಡ ಹೇರುವ ಆಶೆಯಿಂದ ಹಲವಾರು ಸಮಾಜವಾದಿಗಳು, ಲಿಬರಲ್‌ಗಳು ಮತ್ತು ಮಾಡರೇಟ್‌ಗಳು ಅವೆಂಟೈನ್ ವಿಯೋಜನೆಯ ಮೂಲಕ ಸಂಸತ್ತನ್ನು ಬಹಿಷ್ಕರಿಸಿದರು. ಆಂತೋನಿಯೋ ಗ್ರಾಮ್‌ಶಿಯಂತಹ ಕಮ್ಯುನಿಸ್ಟರು, ಪಿಯೆತ್ರೋ ನೆನ್ನಿಯಂತಹ ಸಮಾಜವಾದಿಗಳು ಹಾಗೂ ಪಿಯೆರೋ ಗೊಬೆಟ್ಟಿ ಮತ್ತು ಜಿಯೋವಾನ್ನಿ ಅಮೆಂದೊಲಾರಂತಹ ಲಿಬರಲ್‌ಗಳು ನೇತಾರರಾಗಿದ್ದಾಗ್ಯೂ, ಒಂದು ಸಾಮೂಹಿಕವಾದ ಫ್ಯಾಸಿಸ್ಟ್ ವಿರೋಧಿ ಆಂದೋಲನವು ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಫ್ಯಾಸಿಸ್ಟ್ ಸ್ಕ್ವಾಡ್ರಿಸ್ಟಿಯ ಹಿಂಸಾಚಾರಕ್ಕೆ ಭಯಪಟ್ಟುಕೊಂಡು ಮಹಾರಾಜನೂ ಕೂಡ ಮುಸೊಲಿನಿಯನ್ನು ಅಧಿಕಾರದಲ್ಲಿ ಮುಂದುವರೆಸಿದನು. ಸಂಸತ್ತನ್ನು ಇತರ ಪಕ್ಷಗಳು ಬಹಿಷ್ಕರಿಸಿದ್ದರಿಮ್ದ ಮುಸೊಲಿನಿ ಯಾವುದೇ ಕಾನೂನನ್ನಾದರೂ ವಿರೋಧವಿಲ್ಲದೆ ಜಾರಿಗೊಳಿಸುವುದು ಸಾಧ್ಯವಾಯಿತು. ಸ್ಕ್ವಾಡ್ರಿಸ್ಟಿಯ ರಾಜಕೀಯ ಹಿಂಸಾಚಾರವು ಫಲ ನೀಡಿತು ಮತ್ತು ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಯಾವುದೇ ಜನಜನಿತವಾದ ಪ್ರದರ್ಶನ ನಡೆಯಲಿಲ್ಲ.

ಈ ಸಂದಿಗ್ಧ ಸಮಯದಲ್ಲಿ ಕೆಲವು ವಾರಗಳವರೆಗೆ ಮುಸೊಲಿನಿ ಪಕ್ಷದೊಳಡೆಯಿಂದ ಸಂಶಯ ಮತ್ತು ವೈಮನಸ್ಯವನ್ನು ಎದುರಿಸಬೇಕಾಯಿತು.

31 ಡಿಸೆಂಬರ್r 1924ರಂದು ಮುಸೊಲಿನಿಯನ್ನು ಭೇಟಿಮಾಡಿದ MVSN ನಿಯೋಗಿಗಳು ಆತನಿಗೆ ಕೊನೆಯ ಎಚ್ಚರಿಕೆಯೊಂದನ್ನು ನೀಡಿದರು - ವಿರೋಧವನ್ನು ಬಗ್ಗುಬಡಿಯಬೇಕು ಇಲ್ಲವೇ ತಾವು ಆ ಕೆಲಸವನ್ನು ಮುಸೊಲಿನಿಯಿಲ್ಲದೆಯೆ ಮಾಡಬೇಕಾಗುವುದು. ತನ್ನವರೇ ಆದ ತೀವ್ರವಾದಿಗಳಿಂದ ಉಂಟಾಗಬಹುದಾದ ಬಂಡಾಯದ ಭಯದಿಂದ ಮುಸೊಲಿನಿಯು ಗಣತಂತ್ರದ ಎಲ್ಲ ತೋರಿಕೆಗಳನ್ನು ತ್ಯಜಿಸಲು ನಿರ್ಧರಿಸಿದನು.[೩೦] 3 ಜನವರಿ 1925ರಂದು ಮುಸೊಲಿನಿಯು ಚೇಂಬರ್‌ನೆದುರಿಗೆ ಒಂದು ಬಿರುಸಾದ ಭಾಷಣವನ್ನು ಮಾಡುತ್ತ ಅದರಲ್ಲಿ ಸ್ಕ್ವಾಡ್ರಿಸ್ಟಿ ಹಿಂಸಾಚಾರಕ್ಕೆ ಜವಾಬ್ದಾರಿ ವಹಿಸಿಕೊಂಡನು (ಆದರೆ ಆತ ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಏನನ್ನೂ ಹೇಳಲಿಲ್ಲ). ಜತೆಗೇ ಆತನು ಭಿನ್ನಾಭಿಪ್ರಾಯಗಳನ್ನು ಬಗ್ಗುಬಡಿಯುವುದಾಗಿ ವಾಗ್ದಾನ ಮಾಡಿದನು. ಆತನ ಭಾಷಣಕ್ಕೆ ಮೊದಲು MVSN ದಳಗಳು ವಿರೋಧಪಕ್ಷದವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿ ವಿರೋಧಪಕ್ಷಗಳ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವುದನ್ನು ತಡೆದರು. ಮುಸೊಲಿನಿ ಭವಿಷ್ಯ ನುಡಿದಂತೆಯೆ ಆಯಿತು ಮತ್ತು ಸಾರ್ವಜನಿಕ ಅಭಿಮತಕ್ಕೆ ಆತನು ಸ್ಥಿರವಾಗಿ ನಿಯಂತ್ರಣವನ್ನು ತೆಗೆದುಕೊಂಡಿರುವನೆಂಬುದು ಅರಿವಾಗುತ್ತಿದ್ದಂತೆಯೆ "ತಟಸ್ಥ ನೀತಿಯವರು", ಮೌನವಾಗಿರುವ ಬಹುಸಂಖ್ಯಾತರು ಮತ್ತು "ಜಾಗದ ಹವಣಿಕೆಯಲ್ಲಿರುವವರು" ಎಲ್ಲರೂ ಆತನ ಬೆನ್ನಹಿಂದಿರುವರೆಂದು ಆತ ತಿಳಿಸಿದಂತೆಯೆ ನಡೆಯಿತು. ಇದನ್ನು ಮುಸೊಲಿನಿಯ ಸರ್ವಾಧಿಕಾರಿತ್ವದ ಆರಂಭವೆಂದು ಪರಿಗಣಿಸಲಾಗುತ್ತದೆ.

ಒಂದು ಸುಸಂಬದ್ಧವಾದ ಕಾರ್ಯಕ್ರಮದ ರೂಪರೇಖೆಗಳನ್ನು ನೀಡುವಲ್ಲಿ ವಿಫಲವಾದ ಫ್ಯಾಸಿಸಮ್ ಸರ್ವಾಧಿಕಾರಿಶಾಹಿ ಪದ್ಧತಿ, ರಾಷ್ಟ್ರೀಯತಾವಾದ, ಕಮ್ಯುನಿಸ್ಟ್-ವಿರೋಧ, ಬಂಡವಾಳಶಾಹೀ ವಿರೋಧ ಮತ್ತು ಉದಾರವಾದಿತ್ವ ವಿರೋಧಗಳನ್ನು ಒಂದುಗೂಡಿಸಿಕೊಂಡ ಒಂದು ಹೊಸ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ರಾಜ್ಯವಾಗಿ ಹೊರಹೊಮ್ಮಿತು ಮತ್ತು ಇದು ಎಲ್ಲಾ ವರ್ಗಗಳನ್ನು ಒಂದು ಕಾರ್ಪೊರೇಟಿಸ್ಟ್ ವ್ಯವಸ್ಥೆಯಡಿ ಒಗ್ಗೂಡಿಸಲು ವಿನ್ಯಾಸಗೊಳಿಸಿದ್ದಾಗಿತ್ತು ("ಮೂರನೇ ಹಾದಿ"). ಈ ನೂತನ ವ್ಯವಸ್ಥೆಯಲ್ಲಿ ರಾಜ್ಯವು ಅದರ ಪ್ರಮುಖ ಉದ್ದಿಮೆಗಳ ವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಾಗಿತ್ತು. ರಾಷ್ಟ್ರೀಯತಾವಾದ ಮತ್ತು ರಾಜ್ಯ ಅಧಿಕಾರದ ಪತಾಕೆಗಳಡಿ ಫ್ಯಾಸಿಸಮ್ ಅಮೋಘವಾದ ರೋಮನ್ ಹಿನ್ನೆಲೆ ಮತ್ತು ನವ್ಯವಾದ ಉಟೋಪಿಯಾಗಳೆರಡನ್ನೂ ಸಮನ್ವಯಗೊಳಿಸಿದಂತೆ ಕಂಡುಬರುತ್ತದೆ.

ಒಂದು ಸರ್ವಾಧಿಕಾರದ ಕಟ್ಟುವಿಕೆ

ಬದಲಾಯಿಸಿ

ಹತ್ಯಾ ಪ್ರಯತ್ನಗಳು

ಬದಲಾಯಿಸಿ

ಪ್ರಚಾರಕಾರ್ಯದಲ್ಲಿ ಮುಸೊಲಿನಿಯ ಪ್ರಭಾವ ಎಷ್ಟಿತ್ತೆಂದರೆ ಆತನಿಗೆ ಬಗ್ಗುಬಡಿಯಲು ಅಚ್ಚರಿಹುಟ್ಟಿಸುವಷ್ಟು ಕಡಿಮೆ ವಿರೋಧ ಕಂಡುಬಂದಿತು. 7 ಏಪ್ರಿಲ್ 1926ರಂದು ಬ್ಯಾರೊನ್ ಆಶ್‌ಬೋರ್ನ್ನ ಮಗಳಾಗಿದ್ದ ವಯೊಲೆಟ್ ಗಿಬ್ಸನ್ ಎಂಬ ಐರಿಶ್ ಮಹಿಳೆ ಹಾರಿಸಿದ ಗುಂಡಿನಿಂದ ಆತನಿಗೆ "ಮೂಗಿನ ಮೇಲೆ ಸಣ್ಣ ಗಾಯ"ವಾಯಿತು.[೩೧] 31 ಅಕ್ಟೋಬರ್ 1926ರಂದು ಬೊಲೋನಾದಲ್ಲಿ 15 ವಯಸ್ಸಿನ ಆಂತಿಯೋ ಜಾಂಬೋನಿ ಮುಸೊಲಿನಿಯ ಮೇಲೆ ಗುಂಡುಹಾರಿಸಲು ಪ್ರಯತ್ನಿಸಿದನು. ಜ್ಯಾಂಬೊನಿ ಅಲ್ಲಿಯೇ ವಿಚಾರಣೆಯಿಲ್ಲದೆ ಗಲ್ಲಿಗೇರಿಸಲಾಯಿತು.[೩೨][೩೩] ಇದರ ಜತೆಗೇ ರೋಮ್‌ನಲ್ಲಿ ಮುಸೊಲಿನಿಯ ಹತ್ಯೆ ಮಾಡಲು ಅನಾರ್ಕಿಸ್ಟ್ ಜಿನೋ ಲುಚೆಟ್ಟಿಯ ಪ್ರಯತ್ನ,[೩೪] ಮತ್ತು ಅಮೆರಿಕನ್ ಅನಾರ್ಕಿಸ್ಟ್ ಮೈಕೆಲ್ ಶಿರೂನ ಪ್ರಯತ್ನಗಳೆರಡೂ ವಿಫಲವಾಯಿತು ಹಾಗೂ ಶಿರ್ರುನನ್ನು೮ ಸೆರೆಹಿಡಿದು ಗಲ್ಲಿಗೇರಿಸಲಾಯಿತು.[೩೫] TIGR ಎಂಬ ಒಂದು ಸ್ಲೊವೀನ್ ಫ್ಯಾಸಿಸ್ಟ್ ವಿರೋಧಿಗಳು 1938ರ ಕೇಪೊರೆಟ್ಟೊನಲ್ಲಿ ಮುಸೊಲಿನಿಯನ್ನು ಕೊಲೆಗೈಯಲು ಯೋಜಿಸಿದರಾದರು ಅವರ ಪ್ರಯತ್ನ ಅಸಫಲವಾಯಿತು.

ಪೋಲೀಸ್ ರಾಜ್ಯ

ಬದಲಾಯಿಸಿ
ಚಿತ್ರ:Benito mussolini28.jpg
ಅಧಿಕಾರ ಪಡೆದುಕೊಂಡ ನಂತರ ಮುಸೊಲಿನಿ ಆಗಾಗ ಮಿಲಿಟರಿ ಸಮವಸ್ತ್ರದಲ್ಲಿ ಕಂಡುಬರುತ್ತಿದ್ದ.

1922ರ ನಂತರ ಹಲವು ಬಾರಿ ಮುಸೊಲಿನಿ ವೈಯುಕ್ತಿಕವಾಗಿ ಅಂತರಿಕ, ವಿದೇಶ ವ್ಯವಹಾರಗಳು ವಸಾಹತುಗಳು, ಕಾರ್ಪೊರೇಶನ್‌ಗಳು, ಭದ್ರತೆ ಮತ್ತು ಸಾರ್ವಜನಿಕ ಕೆಲಸಗಳ ಮಂತ್ರಾಲಯಗಳನ್ನು ವಹಿಸಿಕೊಂಡನು. ಕೆಲವು ಬಾರಿ ಆತ ಒಟ್ಟಿಗೇ ಸುಮಾರು ಏಳು ಮಂತ್ರಾಲಯಗಳನ್ನು ಸರ್ವೋಚ್ಛ ಅಧಿಕಾರದ ಜತೆಗೆ ನಿಭಾಯಿಸುತ್ತಿರುತ್ತಿದ್ದನು. ಜತೆಗೇ ಆತನು ಬಲಶಾಲಿಯಾದ ಫ್ಯಾಸಿಸ್ಟ್ ಪಕ್ಷ ಮತ್ತು ನಗರಗಳಲ್ಲಿ ಮತ್ತು ಪ್ರಾಂತ್ಯಗಳಲ್ಲಿ ಅಂಕುರಿಸುವ ಯಾವುದೇ ಪ್ರತಿರೋಧವನ್ನು ಚಿವುಟಿಹಾಕುತ್ತಿದ್ದ ಸ್ಥಳೀಯ ಶಸ್ತ್ರಸಜ್ಜಿತ ಫ್ಯಾಸಿಸ್ಟ್ ಮಿಲಿಶಿಯಾಗಳಾಗಿದ್ದ MVSN ಅಥವಾ "ಬ್ಲ್ಯಾಕ್‌ಶರ್ಟ್ಸ್" ಮುಖಂಡನೂ ಆಗಿದ್ದನು. ಮುಂದಿನ ದಿನಗಳಲ್ಲಿ ಆತ ಅಧಿಕೃತವಾಗಿ ರಾಜ್ಯದ ಬೆಂಬಲವಿದ್ದ ಸಾಂಸ್ಥೀಕರಣಗೊಂಡ OVRA ಎಂದು ಕರೆಯಲ್ಪಡುವ ರಹಸ್ಯ ಪೊಲೀಸ್ ಅನ್ನು ರೂಪಿಸುವವನಿದ್ದನು. ಈ ರೀತಿಯಾಗಿ ಆತನು ಅಧಿಕಾರವನ್ನು ತನ್ನ ಕೈಯಲ್ಲೆ ಇಟ್ಟುಕೊಳ್ಳುವುದರಲ್ಲೂ, ಯಾವುದೇ ವಿರೋಧಿ ಹುಟ್ಟಿಕೊಳ್ಳದಂತೆ ತಡೆಯುವುದರಲ್ಲೂ ಸಫಲನಾದನು.

1925 ಮತ್ತು 1927ರ ನಡುವೆ ಮುಸೊಲಿನಿ ಪ್ರಗತಿಶೀಲನಾಗಿ ತನ್ನ ಅಧಿಕಾರಕ್ಕೆ ಇದ್ದ ಎಲ್ಲ ಸಂವಿಧಾನಾತ್ಮಕ ಮತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನೂ ಕಿತ್ತೊಗೆಯುವುದರ ಮೂಲಕ ಒಂದು ಪೊಲೀಸ್ ಸ್ಟೇಟ್ ಅನ್ನು ರೂಪಿಸಿದನು. 1925ರ ಕ್ರಿಸ್ಮಸ್ ಮುನ್ನಾದಿನ ಜಾರಿಗೆ ತಂದ ಕಾನೂನೊಂದು ಮುಸೊಲಿನಿಯ ಪದವಿಯನ್ನು "ಪ್ರೆಸಿಡೆಂಟ್ ಆಫ್ ದ ಕೌನ್ಸಿಲ್ ಆಫ್ ಮಿನಿಸ್ಟರ್ಸ್" ನಿಂದ ಬದಲಾಯಿಸಿ "ಹೆಡ್ ಆಫ್ ದ ಗವರ್ನ್‌ಮೆಂಟ್" ಎಂದು ಮಾಡಿತು. ಆತ ಸಂಸತ್ತಿಗೆ ಜವಾಬ್ದಾರನಾಗಿರಲಿಲ್ಲ ಮತ್ತು ಆತನನ್ನು ಕೇವಲ ಮಹಾರಾಜ ಮಾತ್ರ ತೆಗೆದುಹಾಕಬಹುದಾಗಿತ್ತು. ಇಟಾಲಿಯನ್ ಸಂವಿಧಾನದ ಪ್ರಕಾರ ಮಂತ್ರಿಗಳು ಸಾರ್ವಭೌಮನಿಗೆ ಮಾತ್ರ ಜವಾಬ್ದಾರರು ಎಂದು ಸ್ಪಷ್ಟವಾಗಿದ್ದರೂ, ನಿಜ ಸ್ಥಿತಿಯಲ್ಲಿ ಸಂಸತ್ತಿನ ಸ್ಪಷ್ಟ ಸಮ್ಮತಿಯ ವಿನಾ ರಾಜ್ಯಭಾರ ಮಾಡುವದು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿಯಿತ್ತು. ಕ್ರಿಸ್ಮಸ್ ಈವ್‌ನ ಕಾನೂನು ಇದನ್ನು ತಡೆಯಿತು ಮತ್ತು ಮುಸೊಲಿನಿಯನ್ನು ಸಂಸತ್ ಕಾರ್ಯಕಲಾಪಗಳನ್ನು ನಿರ್ಧರಿಸಬಲ್ಲ ಏಕೈಕ ಅರ್ಹ ವ್ಯಕ್ತಿಯನ್ನಾಗಿ ಮಾಡಿತು. ಸ್ಥಳೀಯ ಸ್ವಾಯತ್ತತೆಯನ್ನು ರದ್ದುಪಡಿಸಲಾಯಿತು ಮತ್ತು ಚುನಾಯಿತ ಮೇಯರ್‌ಗಳು ಮತ್ತು ಕೌನ್ಸಿಲ್‌ಗಳ ಬದಲಾಗಿ ಇಟಾಲಿಯನ್ ಸೆನೇಟ್ನಿಂದ ನೇಮಿಸಲ್ಪಟ್ಟ ಪೊಡೆಸ್ಟಾಗಳು ಬಂದರು.

ಇತರೆಲ್ಲಾ ಪಕ್ಷಗಳನ್ನು 1928ರಲ್ಲಿ ನಿಷೇಧಿಸಲಾಯಿತಾದರೂ ಮುಸೊಲಿನಿಯ 1925ರ ಭಾಷಣದ ನಂತರ ಇಟಲಿಯು ಏಕಪಕ್ಷ ರಾಜ್ಯವಾಗಿದ್ದಿತು ಎಂಬುದೂ ನಿಜವೆ. ಇದೇ ವರ್ಷ ಜಾರಿಗೆ ಬಂದ ಚುನಾವಣಾ ಕಾನೂನುಗಳು ಸಂಸತ್ ಚುನಾವಣೆಗಳನ್ನು ರದ್ದುಪಡಿಸಿದವು. ಇದರ ಬದಲಾಗಿ ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್ಚುನಾಯಿತರಾಗಬಹುದಾದವರ ಒಂದು ಪಟ್ಟಿಯನ್ನು ತಯಾರಿಸಿ ಅದನ್ನು ಜನಾಭಿಪ್ರಾಯದ ಅನುಮೋದನೆಗಾಗಿ ನೀಡುತ್ತಿತ್ತು. ಗ್ರಾಂಡ್ ಕೌನ್ಸಿಲ್ ಅನ್ನು ಐದು ವರ್ಷಗಳ ಹಿಂದೆಯೇ ಪಕ್ಷದ ಭಾಗವಾಗಿ ರೂಪಿಸಲಾಗಿತ್ತಾದರೂ ಅದನ್ನು "ಸಂವಿಧಾನಾತ್ಮಕ"ವನ್ನಾಗಿ ಮಾಡಲಾಯಿತು ಮತ್ತು ಅದು ರಾಜ್ಯದ ಅತ್ಯುಚ್ಛ ಸಂವಿಧಾನಿಕ ಅಧಿಕಾರವನ್ನು ಹೊಂದಿತ್ತು. ದಾಖಲೆಗಳಲ್ಲಿ ಗ್ರ್ಯಾಂಡ್ ಕೌನ್ಸಿಲ್‌ಗೆ ಮುಸೊಲಿನಿಯನ್ನು ಅಧಿಕಾರದಿಂದ ತೆಗೆಯಲು ಶಿಫಾರಸು ಮಾಡುವ ಹಕ್ಕು ಇದ್ದಿತು ಮತ್ತು ಸೈದ್ಧಾಂತಿಕವಾಗಿ ಅದು ಆತನ ಅಧಿಕಾರಕ್ಕೆ ಇದ್ದ ಒಂದೇ ಒಂದು ತಡೆಯಾಗಿತ್ತು. ಆದರೆ ಗ್ರಾಂಡ್ ಕೌನ್ಸಿಲ್‌ನ ಸಭೆ ಸೇರಿಸುವ ಮತ್ತು ಅದರ ಕಾರ್ಯಕಲಾಪಗಳನ್ನು ನಿರ್ಧರಿಸುವ ಅಧಿಕಾರ ಮುಸೊಲಿನಿಗೆ ಮಾತ್ರ ಇದ್ದಿತು. ದಕ್ಷಿಣದ, ಅದರಲ್ಲಿಯೂ ವಿಶೇಷವಾಗಿ ಸಿಸಿಲಿಯ ನಿಯಂತ್ರಣವನ್ನು ಪಡೆದುಕೊಳ್ಳಲು ಆತ ಸಿಸೇರ್ ಮೋರಿಯನ್ನು ಪಾಲೆರ್ಮೋ ನಗರದ ಪ್ರಿಫೆಕ್ಟ್ ಆಗಿ ನಿಯಮಿಸಿ ಮಾಫಿಯಾವನ್ನು ಯಾವುದೇ ರೀತಿಯಲ್ಲಾಗಲೀ ನಿರ್ಮೂಲನ ಮಾಡುವ ಜವಾಬ್ದಾರಿ ವಹಿಸಿದನು. ಟೆಲಿಗ್ರಾಮಿನಲ್ಲಿ ಮುಸೊಲಿನಿ ಮೋರಿಗೆ ಈ ರೀತಿಯಾಗಿ ಸಂದೇಶ ಕಳುಹಿಸಿದನು:

"ಯುವರ್ ಎಕ್ಸೆಲೆನ್ಸಿಗೆ ಸಂಪೂರ್ಣಾಧಿಕಾರವಿದೆ, ರಾಜ್ಯದ ಅಧಿಕಾರವನ್ನು ಸಂಪೂರ್ಣವಾಗಿ, ಮತ್ತೆ ಹೇಳುತ್ತೇನೆ ಸಂಪೂರ್ಣವಾಗಿ, ಸಿಸಿಲಿಯಲ್ಲಿ ಮರುಸ್ಥಾಪನೆ ಮಾಡಬೇಕಾಗಿದೆ. ಜಾರಿಯಲ್ಲಿರುವ ಕಾನೂನುಗಳಿಂದ ನಿಮಗೆ ತೊಡಕಾದರೆ ನಿಮಗೇನೂ ತೊಂದರೆಯಾಗದು, ಏಕೆಂದರೆ ನಾವು ಹೊಸ ಕಾನೂನುಗಳನ್ನು ಜಾರಿಗೆ ತರುವೆವು."[೩೬]

ಆತನು ಸಂಶಯವಿರುವವರು ಶರಣಾಗುವಂತೆ ಒತ್ತಡ ಹೇರಲು ಪಟ್ಟಣಗಳ ಮೇಲೆ ಆಕ್ರಮಣ ಮಾಡುವುದು, ಚಿತ್ರಹಿಂಸೆಯನ್ನು ಬಳಸುವುದು, ಹಾಗೂ ಹೆಂಗಸರು ಮತ್ತು ಮಕ್ಕಳನ್ನು ಒತ್ತೆಯಾಳುಗಳಂತೆ ಬಳಸಿಕೊಳ್ಳುವುದೇ ಮೊದಲಾದ ಕ್ರ್ಮಗಳನ್ನು ಅನುಸರಿಸಲು ಹಿಂದೇಟು ಹಾಕಲಿಲ್ಲ. ಈ ಕಠಿಣ ವಿಧಾನಗಳಿಂದ ಆತನಿಗೆ "ಐರನ್ ಪ್ರಿಫೆಕ್ಟ್" ಎಂಬ ಅಡ್ಡಹೆಸರು ದೊರಕಿತು. ಆದರೆ 1927ರಲ್ಲಿ ಮೋರಿಯ ವಿಚಾರಣೆಗಳಿಂದ Mafia ಮತ್ತು ಫ್ಯಾಸಿಸ್ಟ್ ಸಂಸ್ಥೆಯ ನಡುವೆ ರಹಸ್ಯ ಒಪ್ಪಂದವಿರುವ ಬಗ್ಗೆ ಪುರಾವೆಗಳು ದೊರಕಿದವು ಮತ್ತು ಆತನನ್ನು 1929ರಲ್ಲಿ ತನ್ನ ಅಧಿಕಾರದ ಅವಧಿಯನ್ನು ಮುಗಿಸಿದ್ದಕ್ಕಾಗಿ ಹುದ್ದೆಯಿಂದ ತೆಗೆದುಹಾಕಲಾಯಿತು. ಮುಸೊಲಿನಿಯು ಮೋರಿಯನ್ನು ಸೆನೇಟರ್ ಆಗಿ ನಿಯಮಿಸಿದನು ಮತ್ತು ಫ್ಯಾಸಿಸ್ಟ್ ಪ್ರಚಾರವು ಮಾಫಿಯಾವನ್ನು ಬಗ್ಗುಬಡಿಯಲಾಗಿದೆಯೆಂದು ಸುದ್ದಿ ಹರಡಿತು.

ಆರ್ಥಿಕ ನೀತಿ

ಬದಲಾಯಿಸಿ
 
ಬೆನಿಟೊ ಮುಸೊಲಿನಿ ಅಲ್ಫಾರೋಮಿಯೋ ಫ್ಯಾಕ್ಟರಿಗಳ ಭೇಟಿಯ ಸಂದರ್ಭದಲ್ಲಿ.

ಆರ್ಥಿಕ ಹಿನ್ನಡೆಗಳು ಅಥವಾ ನಿರುದ್ಯೋಗ ಮಟ್ಟಗಳ ವಿರುದ್ಧ ಹೋರಾಡುವ ಸಲುವಾಗಿ ಮುಸೊಲಿನಿ ಇಟಲಿಯ ಎಲ್ಲೆಡೆಯಲ್ಲೂ ಹಲವಾರು ಸಾರ್ವಜನಿಕ ನಿರ್ಮಾಣ ಯೋಜನೆಗಳನ್ನು ಮತ್ತು ಸರ್ಕಾರೀ ಕಾರ್ಯಗಳನ್ನು ಆರಂಭಿಸಿದನು . ಆತನ ಮೊದಲ ಮತ್ತು ಜನಜನಿತವಾಗಿರುವ ಯೋಜನೆಯೆಂದರೆ ಹಸಿರು ಕ್ರಾಂತಿಯ ರೀತಿಯಲ್ಲಿಯೇ ಇಟಲಿಯಲ್ಲಿ ನಡೆದ "ಬ್ಯಾಟಲ್ ಫಾರ್ ಗ್ರೇನ್", ಇದರ ಮೂಲಕ 5,000 ಹೊಸ ಫಾರ್ಮುಗಳನ್ನು ಆರಂಭಿಸಲಾಯಿತು ಮತ್ತು ಪಾಂಟೈನ್ ಜೌಗುಪ್ರದೇಶಗಳನ್ನು ಒಣಗಿಸಿ ಸುಮಾರು ಐದು ಕೃಷಿಪ್ರಧಾನ ಪಟ್ಟಣಗಳಷ್ಟು ಭೂಮಿಯನ್ನು ಮರಳಿ ಪಡೆಯಲಾಯಿತು. ಸಾರ್ಡೀನಿಯಾದಲ್ಲಿ ಒಂದು ಮಾದರಿ ಕೃಷಿ ಪಟ್ಟಣವನ್ನು ರೂಪಿಸಲಾಯಿತು ಮತ್ತು ಅದಕ್ಕೆ ಮುಸೊಲಿನಿಯಾ ಎಂದು ಹೆಸರಿಡಲಾಯಿತು; ಈಗ ಅದನ್ನು ಆರ್ಬೋರಿಯಾ ಎಂದು ಕರೆಯಲಾಗುತ್ತದೆ. ಮುಸೊಲಿನಿ ಈ ಪಟ್ಟಣದ ರೀತಿಯಲ್ಲಿಯೇ ದೇಶದ ಉದ್ದಗಲಕ್ಕೂ ಸಾವಿರಾರು ಹೊಸ ಕೃಷಿ ನೆಲೆಗಳನ್ನು ಸ್ಥಾಪಿಸುವ ಬಯಕೆ ಹೊಂದಿದ್ದನು. ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಲ್ಲದ ಬೆಳೆಗಳೆಡೆಗಳಿಂದ ಸಂಪನ್ಮೂಲಗಳನ್ನು ಧಾನ್ಯಗಳನ್ನು ಬೆಳೆಯುವತ್ತ ತಿರುಗಿಸುತ್ತಿತ್ತು. ಈ ಯೋಜನೆಗೆ ಸಂಬಂಧಿಸಿದ ಹೆಚ್ಚು ತೆರಿಗೆಗಳು ಅದಕ್ಷತೆ ಹರಡಲು ಕಾರಣವಾದವು, ಮತ್ತು ರೈತರಿಗೆ ಸರ್ಕಾರವು ನೀಡಿದ ಸಬ್ಸಿಡಿಗಳು ದೇಶವನ್ನು ಹೆಚ್ಚು ಸಾಲದೆಡೆ ತಳ್ಳಿದವು. ಮುಸೊಲಿನಿಯು "ಬ್ಯಾಟ್ಲ್ ಫಾರ್ ಲ್ಯಾಂಡ್" ಎಂಬ ಯೋಜನೆಯನ್ನು ಆರಂಭಿಸಿದನು, ಈ ನೀತಿಯು 1928ರಲ್ಲಿ ರೂಪಿಸಲಾದ ಭೂಮಿ ಹಿಂಪಡೆತವನ್ನು ಆಧರಿಸಿತ್ತು. ಈ ಯೋಜನೆಗೆ ಮಿಶ್ರಫಲ ದೊರಕಿತು; 1935ರಲ್ಲಿ ಕೃಷಿಗಾಗಿ ಕೈಗೊಂಡ ಪಾಂಟೈನ್ ಜೌಗುಪ್ರದೇಶವನ್ನು ಒಣಗಿಸುವ ಯೋಜನೆಯು ಪ್ರಚಾರಕಾರ್ಯಕ್ಕೆ ಒಳ್ಳೆಯದಾಗಿದ್ದು, ನಿರುದ್ಯೋಗಿಗಳಿಗೆ ಕೆಲಸ ಒದಗಿಸಿ ಹೆಚ್ಚು ಭೂಪ್ರದೇಶವುಳ್ಳವರು ಸಬ್ಸಿಡಿಗಳನ್ನು ನಿಯಂತ್ರಿಸುವಂತೆ ಮಾಡಿದರೂ ಬ್ಯಾಟ್ಲ್ ಫಾರ್ ಲ್ಯಾಂಡ್‌ನ ಇತರ ವಿಭಾಗಗಳು ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಈ ಕಾರ್ಯಕ್ರಮವು ಬ್ಯಾಟ್ಲ್ ಫಾರ್ ಗ್ರೇನ್‌ನೊಂದಿಗೆ ಹೊಂದಿಕೊಂಡಿರಲಿಲ್ಲ (ದೊಡ್ಡ ಪ್ರಮಾಣದಲ್ಲಿ ಗೋಧಿ ಬೆಳೆಯಲು ಸಣ್ಣ ವಿಸ್ತೀರ್ಣದ ಭೂಮಿಗಳನ್ನು ನಿಗದಿಪಡಿಸಲಾಗಿತ್ತು), ಮತ್ತು ಎರಡನೇ ವಿಶ್ವಯುದ್ಧದ ವೇಳೆಯಲ್ಲಿ ಪಾಂಟೈನ್ ಜೌಗುಪ್ರದೇಶವು ಇಟಲಿಯ ಕೈತಪ್ಪಿಹೋಯಿತು. 10,000ಕ್ಕೂ ಕಡಿಮೆ ಸಂಖ್ಯೆಯ ರೈತರು ಮರುಹಂಚಿಕೆಯಾದ ಭೂಮಿಯಲ್ಲಿ ಮತ್ತೆ ವಾಸ್ತವ್ಯ ಹೂಡಿದರು, ಹಾಗೂ ರೈತರ ಬಡತನದ ಹೆಚ್ಚುತ್ತಲೇ ಇತ್ತು. 1940ರಲ್ಲಿ ಬ್ಯಾಟ್ಲ್ ಫಾರ್ ಲ್ಯಾಂಡ್ ಯೋಜನೆಯನ್ನು ಬರಖಾಸ್ತು ಮಾಡಲಾಯಿತು.

ಜತೆಗೇ ಆರ್ಥಿಕ ಕುಸಿತದ ವಿರುದ್ಧ ಹೋರಾಡಲು ಆತನು ಯೋಜನೆಯನ್ನು ಆರಂಭಿಸಿ ಜನತೆಯು ಸ್ವ-ಇಚ್ಛೆಯಿಂದ ನೆಕ್‌ಲೇಸ್ಗಳು, ಮದುವೆಯ ಉಂಗುರಗಳು ಮೊದಲಾದ ಚಿನ್ನಆಭರಣಗಳನ್ನು ಸರ್ಕಾರೀ ಅಧಿಕಾರಿಗಳಿಗೆ ದಾನ ಮಾಡಿ ಅವುಗಳಿಗೆ ಬದಲಾಗಿ "ಗೋಲ್ಡ್ ಫಾರ್ ದ ಫಾದರ್‌ಲ್ಯಾಂಡ್" ಅಂಕಿತವಿರುವ ಸ್ಟೀಲ್ಮಣಿಕಟ್ಟು ಆಭರಣಗಳನ್ನು ಪಡೆಯುವಂತೆ ಪ್ರೋತ್ಸಾಹಿಸಿದನು. ರೇಶೇಲ್ ಮುಸ್ಸೊಲಿನಿ ಕೂಡ ತನ್ನ ಮದುವೆಯ ಉಂಗುರವನ್ನು ದಾನವಾಗಿ ನೀಡಿದಳು. ಹೀಗೆ ಸಂಗ್ರಹವಾದ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿ ರಾಷ್ಟ್ರೀಯ ಬ್ಯಾಂಕ್ಗಳಿಗೆ ಹಂಚಲಾಯಿತು.

ಮುಸೊಲಿನಿ ಸರ್ಕಾರವು ಉದ್ಯಮಗಳನ್ನು ನಿಯಂತ್ರಿಸುವುದರ ಬಗ್ಗೆ ಒತ್ತು ನೀಡಿದನು: 1935ರ ಹೊತ್ತಿಗೆ ಮುಸೊಲಿನಿಯ ಹೇಳಿಕೆಯೊಂದರ ಪ್ರಕಾರ ಮುಕ್ಕಾಲುಪಾಲು ಇಟಾಲಿಯನ್ ಉದ್ಯಮಗಳು ರಾಜ್ಯದ ನಿಯಂತ್ರಣದಲ್ಲಿದ್ದವು. ಅದೇ ವರ್ಷ, ಆತನು ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಹಲವಾರು ಶಾಸನಗಳನ್ನು ಹೊರಡಿಸಿದನು ಹಾಗೂ ಇವುಗಳ ಪ್ರಕಾರ ಎಲ್ಲಾ ಬ್ಯಾಂಕುಗಳು, ಉದ್ಯಮಗಳು ಮತ್ತು ಖಾಸಗೀ ಪೌರರಿಂದ ಬಲವಂತವಾಗಿ ಎಲ್ಲಾ ವಿದೇಶೀ ಸ್ಟಾಕುಗಳು ಮತ್ತು ಬಾಂಡ್‌ಗಳನ್ನು ಬ್ಯಾಂಕ್ ಆಫ್ ಇಟಲಿಗೆ ಸಲ್ಲಿಸುವಂತೆ ಆದೇಶ ನೀಡಲಾಯಿತು. 1938ರಲ್ಲಿ ಆತನು ವೇತನ ಮತ್ತು ಬೆಲೆನಿಯಂತ್ರಣಗಳನ್ನು ಕೂಡ ಜಾರಿಗೆ ತಂದನು.[೩೭] ಜರ್ಮನಿಯನ್ನು ಹೊರತುಪಡಿಸಿ ಇತರೆಲ್ಲಾ ರಾಷ್ಟ್ರಗಳ ಜತೆಗಿನ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕುವುದರ ಮೂಲಕ ಆತನು ಇಟಲಿಯನ್ನು ಸ್ವಾವಲಂಬಿಯಾದ ಸ್ವಾಯತ್ತ ರಾಷ್ಟ್ರವನ್ನಾಗಿ ಮಾಡಲು ಹವಣಿಸಿದನು.

1943ರಲ್ಲಿ ಮುಸೊಲಿನಿ ಆರ್ಥಿಕ ಸಾಮಾಜೀಕರಣದ ಸಿದ್ಧಾಂತವನ್ನು ಪ್ರಸ್ತುತಪಡಿಸಿದನು.

ಸರ್ಕಾರ

ಬದಲಾಯಿಸಿ

ಇಟಲಿಯ ಸರ್ವಾಧಿಕಾರಿಯಾಗಿ ಮುಸೊಲಿನಿಯ ಪ್ರಮುಖ ಅದ್ಯತೆಯು ಇಟಾಲಿಯನ್ ಜನತೆಯ ಮನಸ್ಸುಗಳನ್ನು ನಿಗ್ರಹಿಸುವುದು ಮತ್ತು ಹೀಗೆ ಮಾಡಲು ಪ್ರಚಾರಕಾರ್ಯವನ್ನು ಬಳಸುವುದು; ಸ್ವದೇಶದಲ್ಲಾಗಲೀ, ವಿದೇಶದಲ್ಲಾಗಲೀ ಪತ್ರಕರ್ತನಾಗಿ ಆತ ಪಡೆದ ತರಬೇತಿಯು ಅಮೂಲ್ಯವಾಗಿತ್ತು. ಪ್ರೆಸ್, ರೇಡಿಯೋ, ಶಿಕ್ಷಣ, ಚಲನಚಿತ್ರಗಳು - ಎಲ್ಲವನ್ನೂ ಫ್ಯಾಸಿಸಮ್ ಇಪ್ಪತ್ತನೇ ಶತಮಾನದ್ದೇ ಆದ , ಪ್ರಜಾತಂತ್ರ ಮತ್ತು ಉದಾರೀಕರಣದ ಬದಲಾಗಿ ಹೊರಹೊಮ್ಮಿರುವ ಸಿದ್ಧಾಂತವೆನ್ನುವ ರೀತಿಯ ಭ್ರಮೆಯನ್ನು ಹುಟ್ಟಿಸುವಂತೆ ಮಾಡಲು ಬಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು.

ಈ ಸಿದ್ಧಾಂತದ ನೀತಿಗಳನ್ನು ಫ್ಯಾಸಿಸಮ್ ಬಗ್ಗೆ ಜಿಯೋವಾನ್ನಿ ಜೆಂಟೈಲ್ ಬರೆದು ಮುಸೊಲಿನಿ ಸಹಿ ಹಾಕಿದ್ದ ಲೇಖನವೊಂದರಲ್ಲಿ ಪ್ರಸ್ತುತಪಡಿಸಲಾಗಿತ್ತು ಮತ್ತು ಈ ಲೇಖನವು 1932ರಲ್ಲಿ Enciclopedia Italiana ದಲ್ಲಿ ಪ್ರಕಟವಾಯಿತು. 1929ರಲ್ಲಿ ವ್ಯಾಟಿಕನ್ನೊಂದಿಗಿನ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು, ಈ ಲ್ಯಾಟೆರನ್ ಒಪ್ಪಂದಗಳ ಪ್ರಕಾರ ಇಟಾಲಿಯನ್ ರಾಜ್ಯವು ಕೊನೆಗೂ ರೋಮನ್ ಕ್ಯಾಥೊಲಿಕ್ ಚರ್ಚ್‌ನಿಂದ ಅಂಗೀಕರಿಸಲ್ಪಟ್ಟಿತು ಮತ್ತು ಇಟಾಲಿಯನ್ ರಾಜ್ಯವು ವ್ಯಾಟಿಕನ್ ನಗರದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು. ಜತೆಗೇ 1929ರ ಒಪ್ಪಂದವು ಇಟಾಲಿಯನ್ ಸರ್ಕಾರವು ಅಪರಾಧಿಗಳಿಗೆ ದಂಡನೆಯನ್ನು ನೀಡುವುದರ ಬಗೆಗಿನ ಕಾನೂನುಬದ್ಧ ಕರಾರನ್ನು ಒಳಗೊಳ್ಳುವುದರ ಮೂಲಕ ಪೋಪ್‌ನ ಘನತೆ, ಗೌರವಗಳನ್ನು ಕಾಪಾಡುತ್ತಿತ್ತು.[೩೮] ಪೋಪರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ವ್ಯಾಟೀಕನ್ ಅನ್ನು ಹೆಚ್ಚೂಕಡಿಮೆ ಬ್ಲ್ಯಾಕ್‌ಮೇಲ್ ಮಾಡಿದ ಆಳ್ವಿಕೆಯ ಬಗ್ಗೆ ಅಪನಂಬಿಕೆಯಿಂದಿದ್ದ ಕೆಲವಾರು ಕ್ಯಾಥೊಲಿಕರನ್ನು ಸಮಾಧಾನಪಡಿಸಲು 1927ರಲ್ಲಿ ಮುಸೊಲಿನಿಯನ್ನು ರೋಮನ್ ಕ್ಯಾಥೊಲಿಕ್ ಪಾದ್ರಿಯೊಬ್ಬ ಬ್ಯಾಪ್‌ಟೈಜ್ ಮಾಡಿದನು. 1927ರಿಂದ, ಹೆಚ್ಚಾಗಿ 1929ರ ನಂತರವೂ ಕೂಡ ಕಮ್ಯುನಿಸ್ಟ್-ವಿರೋಧಿ ಸಿದ್ಧಾಂತಗಳೊಂದಿಗೆ ಹೆಚ್ಚಿನ ಕ್ಯಾಥೊಲಿಕರು ತನ್ನನ್ನು ಬೆಂಬಲಿಸುವಂತೆ ಮನವೊಲಿಸಿದನು. ಎಲ್ಲ ಕಡೆಯಲ್ಲಿ ಸುತ್ತೋಲೆಯಂತೆ ಕಳುಹಿಸಲಾದ ನಾನ್ ಅಬ್ಬಿಯಾಮೋ ಬಿಸೋನೋ ದಲ್ಲಿ, ಪೋಪ್ ಪಯಸ್ XI ಫ್ಯಾಸಿಸ್ಟ್ ಆಳ್ವಿಕೆಯನ್ನು ಅದರ Catholic Action ವಿರುದ್ಧದ ನೀತಿಯ ಬಗ್ಗೆ ಮತ್ತು ಕ್ಯಾಥೊಲಿಕ್ ಶಿಕ್ಷಣದ ನೀತಿಪಾಠಗಳನ್ನು ಅಲ್ಲಗಳೆಯುವಂತಹ ಕೆಲವು ಪ್ರವೃತ್ತಿಗಳ ಬಗ್ಗೆ ತೀವ್ರವಾದ ದಾಳಿಯನ್ನು ಮಾಡಿದರು.

ಸಂಸತ್ ವ್ಯವಸ್ಥೆಯ ಕಾನೂನು ಸಂಹಿತೆಗಳನ್ನು ಮುಸೊಲಿನಿಯ ಆಳ್ವಿಕೆಯ ಸಮಯದಲ್ಲಿ ತಿದ್ದಿ ಮತ್ತೆ ಬರೆಯಲಾಯಿತು. ಎಲ್ಲಾ ಶಾಲೆ ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಾಪಕರೂ ಕೂಡ ಫ್ಯಾಸಿಸ್ಟ್ ಆಳ್ವಿಕೆಯನ್ನು ಕಾಪಾಡುವುದಾಗಿ ಪ್ರತಿಜ್ಞೆಯೊಂದನ್ನು ಕೈಗೊಳ್ಳಲೇಬೇಕಿತ್ತು. ಎಲ್ಲಾ ಸುದ್ದಿಪತ್ರಿಕೆಗಳ ಸಂಪಾದಕರನ್ನೂ ಮುಸೊಲಿನಿ ಖುದ್ದಾಗಿ ಆರಿಸುತ್ತಿದ್ದನು ಮತ್ತು ಫ್ಯಾಸಿಸ್ಟ್ ಪಕ್ಷದ ಒಪ್ಪಿಗೆಯಿಲ್ಲದೆ ಯಾರೂ ಪತ್ರಕರ್ತನಾಗಿ ಕೆಲಸ ಮಾಡುವಂತಿರಲಿಲ್ಲ. ಈ ಪ್ರಮಾಣಪತ್ರ್ಗಳನ್ನು ರಹಸ್ಯವಾಗಿ ವಿತರಿಸಲಾಗುತ್ತಿತ್ತು; ಈ ರೀತಿಯಾಗಿ ಮುಸೊಲಿನಿ ’ಮುಕ್ತ ಪ್ರೆಸ್’ನ ಭ್ರಮೆಯನ್ನು ರೂಪಿಸುವಲ್ಲಿ ಯಶಸ್ವಿಯಾದನು. ಕಾರ್ಮಿಕರ ಸಂಘಗಳೀಂದ ಎಲ್ಲಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು ಮತ್ತು ಅವುಗಳನ್ನೆಲ್ಲ ಒಂದುಗೂಡಿಸಿ ಒಂದು "ಸಹಕಾರೀ ವ್ಯವಸ್ಥೆ"ಯಡಿ ಸೇರಿಸಲಾಯಿತು. ಇದರ ಗುರಿಯು (ಇದನ್ನು ಸಂಪೂರ್ಣವಾಗಿ ತಲುಪಲಾಗಲಿಲ್ಲ) ಮಧ್ಯಯುಗದ ಕೂಟ(ಗಿಲ್ಡ್)ಗಳಿಂದ ಪ್ರೇರಿತವಾಗಿದ್ದು, ಎಲ್ಲ ಇಟಾಲಿಯನ್ನರನ್ನೂ ಹಲವಾರು ವೃತ್ತಿಪರ ಸಂಸ್ಥೆಗಳು ಅಥವಾ "ಕಾರ್ಪೊರೇಶನ್"ಗಳಿಗೆ ಸೇರಿಸುವುದಾಗಿತ್ತು ಹಾಗೂ ಈ ಸಂಸ್ಥೆಗಳೆಲ್ಲ ರಹಸ್ಯವಾಗಿ ಸರ್ಕಾರೀ ನಿಯಂತ್ರಣದಲ್ಲಿದ್ದವು.

ಹೆಚ್ಚು ಬಹಿರಂಗವಾಗಿ ಕಾಣಬಹುದಾದ ಸಾರ್ವಜನಿಕ ಕಾಮಗಾರಿಗಳ ಮೇಲೆ ಬೃಹತ್ ಮೊತ್ತವನ್ನು ವೆಚ್ಚ ಮಾಡಲಾಯಿತು, ಮತ್ತು ಇದು ಕೆಲವು ಅಂತರ್ರಾಷ್ಟ್ರೀಯ ಪ್ರತಿಷ್ಠೆಯ ಯೋಜನೆಗಳಿಗೂ ಅನ್ವಯಿಸಿತು. ಉದಾಹರಣೆಗೆ, SS ರೆಕ್ಸ್ ಬ್ಲೂ ರೈಬ್ಯಾಂಡ್ ಹಡಗು, Macchi M.C.72 ಎಂಬ ಹೆಸರಿನ ಪ್ರಪಂಚದ ಅತಿ ವೇಗವಾದ ಸಮುದ್ರವಿಮಾನದಂತಹ ವಿಮಾನಯಾನದ ಸಾಧನೆಗಳು ಹಾಗೂ ಇಟಾಲೊ ಬಾಲ್ಬೊ ಎಂಬ ಟ್ರಾನ್ಸ್‌ ಅಟ್ಲಾಂಟಿಕ್ ಹಾರುವ ದೋಣಿಯ ನೌಕಾಯಾನ, ಇದು ಚಿಕಾಗೋದಲ್ಲಿ ಬಂದಿಳಿದಾಗ ಯುನೈಟೆಡ್ ಸ್ಟೇಟ್ಸ್ ಇದನ್ನು ವೈಭವದಿಂದ ಸ್ವಾಗತಿಸಿತು.

ಶಿಕ್ಷಣ ಮತ್ತು ವಿದ್ಯಾರ್ಥಿ ಸಂಘಟನೆಗಳ ಪಾತ್ರ

ಬದಲಾಯಿಸಿ
 
ಬೆನಿಟೊ ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ ತರುಣರು 1935ರಲ್ಲಿ

ರಾಷ್ಟ್ರೀಯತಾವಾದಿಗಳು ವಿಶ್ವಯುದ್ಧದ ನಂತರದ ದಿನಗಳಲ್ಲಿ ತಾವು ಲಿಬರಲ್‌ಗಳು ಮತ್ತು ಜಿಯೋವಾನ್ನಿ ಜಿಯೊಲಿಟ್ಟಿಯಂತಹವರ ಕ್ಯಾಬಿನೆಟ್‌ಗಳು ರೂಪಿಸಿದ ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನೂ ಒಳಗೊಂಡ ನಿಯಂತ್ರಣ ಸಂಸ್ಥೆಗಳ ವಿರುದ್ಧ ಹೋರಾಡುತ್ತಿರುವುದಾಗಿ ಭಾವಿಸಿದ್ದರು. , ಒಂದು ಕ್ರಾಂತಿಕಾರೀ ಸಾಂಸ್ಕೃತಿಕ ಆಂದೋಲನವಾಗಿದ್ದು ಮುಂದಿನ ದಿನಗಳಲ್ಲಿ ಫ್ಯಾಸಿಸಮ್‌ಗೆ ವರ್ಧಕವಾಗಿ ಬಳಸಲ್ಪಡಲಿದ್ದ ಭವಿಷ್ಯವಾದಿತ್ವವು 1919ರಲ್ಲಿ ಫಿಲಿಪೊ ತೊಮಾಸೊ ಮರಿನೆಯ್ ವ್ಯಕ್ತಪಡಿಸಿದ ಅಭಿಪ್ರಾಯಗಳಿಗನುಸಾರವಾಗಿ "ದೈಹಿಕ ಸ್ಥೈರ್ಯ ಮತ್ತು ದೇಶಭಕ್ತಿಗಾಗಿ ಒಂದು ಶಾಲೆ "ಯಿರಬೇಕೆಂದು ವಾದಿಸಿತು. ಮರಿನೆಯ್ "ಈ ಹೊತ್ತಿಗೆ ಪ್ರಾಗೈತಿಹಾಸಿಕ ಮತ್ತು [[ಶಿಲಾಯುಗ/1}ದ ಕಾಲದ್ದೆನಿಸುವ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಶಿಕ್ಷಣಕ್ರಮ|ಶಿಲಾಯುಗ/1}ದ ಕಾಲದ್ದೆನಿಸುವ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಶಿಕ್ಷಣಕ್ರಮ]] "ಗಳ ಬಗ್ಗೆ ತನ್ನ ತಿರಸ್ಕಾರವನ್ನು ವ್ಯಕ್ತಪಡಿಸುತ್ತ, ಇವುಗಳಿಗೆ ಬದಲಾಗಿ ಶಿಕ್ಷಣಕ್ರಮವು ಆರ್ಡಿಟಿ ಸೈನಿಕರ ಶಿಕ್ಷಣಕ್ರಮವನ್ನು ಮಾದರಿಯಾಗಿಟ್ಟುಕೊಂಡು ರೂಪಿಸಿದ್ದಾಗಿರಬೇಕೆಂದು ವಾದಿಸಿದನು("[ಕಲಿಯಬೇಕಾದ್ದು] ಮೆಶೀನ್‌ಗನ್ದಾಳಿಯೆದುರು ಮೊಣಕೈ ಮತ್ತು ಮಂಡಿಗಳನ್ನುಪಯೋಗಿಸಿ ಮುಂದೆ ಸಾಗುವುದು; ತಮ್ಮ ತಲೆಯ ಮೇಲೆ ತೊಲೆಗಳು ಯಾವಾಗ ಹಾದುಹೋಗುವವೊ ಎಂದು ಎಚ್ಚರಿಕೆಯಿಂದ ಪ್ರತೀಕ್ಷಿಸುವುದು ಇತ್ಯಾದಿ. "). ಈ ವರುಷಗಳಲ್ಲಿಯೆ ಮೊದಲ ಫ್ಯಾಸಿಸ್ಟ್ ಯುವಪಂಗಡಗಳನ್ನು ರೂಪಿಸಲಾಯಿತು - 1919ರಲ್ಲಿ Avanguardie Giovanili Fasciste (ಫ್ಯಾಸಿಸ್ಟ್ ಯುವ ಮುಂದಾಳುಗಳು) ಮತ್ತು 1922ರಲ್ಲಿ Gruppi Universitari Fascisti (ಫ್ಯಾಸಿಸ್ಟ್ ವಿಶ್ವವಿದ್ಯಾನಿಲಯ ಗುಂಪುಗಳು)).

ಬೆನಿಟೊ ಮುಸೊಲಿನಿಯನ್ನು ಅಧಿಕಾರಕ್ಕೆ ತಂದ ಮಾರ್ಚ್ ಆನ್ ರೋಮ್ನ ನಂತರ ಫ್ಯಾಸಿಸ್ಟರು ಇಟಾಲಿಯನ್ ಸಮಾಜವನ್ನು ಅದರ್ಶೀಕರಿಸಲು ಮಾರ್ಗಗಳನ್ನು ಹುಡುಕತೊಡಗಿದರು ಮತ್ತು ಇದರಲ್ಲಿ ಶಾಲೆಗಳಿಗೆ ಪ್ರಾಧಾನ್ಯವನ್ನು ನೀಡಲಾಯಿತು. ಮುಸೊಲಿನಿಯು ಮಾಜೀ ಆರ್ಡಿಟೊ ಹಾಗೂ ಶಿಕ್ಷಣ ಮಂತ್ರಾಲಯದ ಡೆಪ್ಯುಟಿ ಸೆಕ್ರೆಟರಿಯಾಗಿದ್ದ ರೆನಾಟೊ ರಿಚ್ಚಿಗೆ "ಯುವಜನರನ್ನು ನೈತಿಕ ಮತ್ತು ದೈಹಿಕ ದೃಷ್ಟಿಕೋನದಿಂದ ಪುನಸ್ಸಂಘಟಿಸಬೇಕೆಂಬ " ಕಾರ್ಯವನ್ನು ವಹಿಸಿದನು. ಸ್ಕೌಟಿಂಗ್ ಅನ್ನು ರೂಪಿಸಿದ ರಾಬರ್ಟ್ ಬೇಡನ್-ಪಾವೆಲ್ನನ್ನು ಇಂಗ್ಲೆಂಡಿನಲ್ಲಿ ಭೇಟಿ ಮಾಡಿದ ರಿಚ್ಚಿ ಆತನಿಂದ ಮತ್ತು ಜರ್ಮನಿಯ ಬಾಹಾಸ್ ಕಲಾವಿದರಿಂದ ಸ್ಫೂರ್ತಿ ಪಡೆದನು. ಮುಸೊಲಿನಿಯ 3 ಏಪ್ರಿಲ್ 1926ರ ತೀರ್ಮಾನದಂತೆ ರೂಪಿಸಲಾದ Opera Nazionale Balillaವು ಮುಂದಿನ ಹನ್ನೊಂದು ವರ್ಷಗಳವರೆಗೆ ರಿಚ್ಚಿಯ ಮುಂದಾಳತ್ವದಲ್ಲಿ ಮುಂದುವರೆಯಿತು. 8ರಿಂದ 18ವಯಸ್ಸಿನ ಮಕ್ಕಳನ್ನು ಒಳಗೊಂಡಿದ್ದ ಈ ಸಂಸ್ಥೆಯು ಅವರನ್ನು Balilla ಮತ್ತು Avanguardisti ಎಂಬ ಎರಡು ಭಾಗಗಳಾಗಿ ವಿಂಗಡಿಸಿತ್ತು.

ಮುಸೊಲಿನಿಯ ಪ್ರಕಾರ: "ಫ್ಯಾಸಿಸ್ಟ್ ಶಿಕ್ಷಣವು ನೈತಿಕ, ದೈಹಿಕ, ಸಾಮಾಜಿಕ ಮತ್ತು ಮಿಲಿಟರಿ ರೀತಿಯದಾಗಿದೆ: ಅದರ ಗುರಿಯು ಒಬ್ಬ ಸಂಪೂರ್ಣ ಮತ್ತು ಸಮರಸಪೂರ್ಣ ಬೆಳವಣಿಗೆಯುಳ್ಳ ಮನುಷ್ಯನನ್ನು, ನಮ್ಮ ಪ್ರಕಾರ ಹೇಳುವುದಾದರೆ ಒಬ್ಬ ಫ್ಯಾಸಿಸ್ಟನನ್ನು ರೂಪಿಸುವುದಾಗಿದೆ ". ಬಾಲ್ಯದ ಭಾವನಾತ್ಮಕ ಮುಖವನ್ನು ಗಮನದಲ್ಲಿಟ್ಟುಕೊಂಡು ಮುಸೊಲಿನಿ ಈ ಪ್ರಕ್ರಿಯೆಯನ್ನು ರೂಪಿಸಿದನು: "ಬಾಲ್ಯ ಮತ್ತು ಹರೆಯಗಳೆರಡೂ(...) ಗಾನಗೋಷ್ಠಿಗಳು, ಸಿದ್ಧಾಂತಗಳು ಮತ್ತು ಅಮೂರ್ತ ಶಿಕ್ಷಣಗಳಿಂದ ಮಾತ್ರ ಬೆಳೆಸಲು ಸಾಧ್ಯವಿಲ್ಲ. ನಾವು ಅವರಿಗೆ ಕಲಿಸಲು ಪ್ರಯತ್ನಪಡುವ ಸತ್ಯವು ಮುಖ್ಯವಾಗಿ ಅವರ ಭ್ರಮಾ ಕಲ್ಪನೆಗಳಿಗೆ, ಹೃದಯಕ್ಕೆ ನಾಟಿದ ನಂತರವೇ ಮನಸ್ಸುಗಳಿಗೆ ಅರಿಕೆಯಾಗಬೇಕು ".

ಸಾಂಪ್ರದಾಯಿಕ ಮಾರ್ಗಗಳ ಬದಲಾಗಿ "ಶೈಕ್ಷಣಿಕ ಮೌಲ್ಯವನ್ನು ಕಾರ್ಯ ಮತ್ತು ಉದಾಹರಣೆಗಳ ಮೂಲಕ ನಿರ್ಧರಿಸುವುದು " ಆರಂಭವಾಗಲಿತ್ತು. ಫ್ಯಾಸಿಸಮ್ ತನ್ನ ಆದರ್ಶವಾದದ ಅವತರಣಿಕೆಯಿಂದ ಹಿಡಿದು ಪ್ರಚಲಿತ ವಿಚಾರವಾದದವರೆಗೆ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದಿತು, ಮತ್ತು Opera Nazionale Balillaವನ್ನು ಶೈಕ್ಷಣಿಕ ಸಂಪ್ರದಾಯವನ್ನು ತಲೆಕೆಳಗು ಮಾಡಿ ಸಾಮುದಾಯಿಕ ಮತ್ತು ಶ್ರೇಣಿವ್ಯವಸ್ಥೆಯನ್ನು ಹಾಗೂ ಮುಸೋಲಿನಿಯ ಸ್ವಂತದ ವ್ಯಕ್ತಿತ್ವ ಆರಾಧನೆಗಳನ್ನು ಬಲವಂತವಾಗಿ ಹೇರಲೋಸುಗ ಬಳಸಲಾಗುತ್ತಿತ್ತು.

ವಿದೇಶೀ ನೀತಿ

ಬದಲಾಯಿಸಿ

ವಿದೇಶೀ ನೀತಿಯಲ್ಲಿ ಮುಸೊಲಿನಿ ಬಲುಬೇಗನೆ ತಾನು ಅಧಿಕಾರಕ್ಕೆ ಬರುವ ಹಾದಿಯಲ್ಲಿ ಉಪಯೋಗಿಸಿದ ಶಾಂತಿವಾದ ಮತ್ತು ಚಕ್ರಾಧಿಪತ್ಯವಾದ-ವಿರೋಧೀ ಸಿದ್ಧಾಂತಗಳಿಂದ ಹೊರಬಂದು ತೀವ್ರವಾದೀ ರೂಪದ ಆಕ್ರಮಣಕಾರಿ ರಾಷ್ಟ್ರೀಯತಾವಾದವನ್ನು ಬೆಂಬಲಿಸಲು ಆರಂಭಿಸಿದನು. ಆತನು ಇಟಲಿಯನ್ನು ಯುರೋಪಿನಲ್ಲಿ ಮತ್ತು ಇಡೀ ಪ್ರಪಂಚದಲ್ಲಿ "ಅಮೋಘ, ಗೌರವಿತ ಮತ್ತು ಭಯಭಕ್ತಿ ಮೂಡಿಸುವ" ರಾಷ್ಟ್ರವನ್ನಾಗಿ ಮಾಡಲು ಕನಸು ಕಂಡನು. ಇದಕ್ಕೆ ನೀಡಬಹುದಾದ ಒಂದು ಮೊದಮೊದಲ ಉದಾಹರಣೆಯೆಂದರೆ 1923ರ ಕೋರ್ಫು ಮೇಲಿನ ಬಾಂಬ್ ದಾಳಿ. ಇದಾದ ಮೇಲೆ ಆತ ಕೆಲವೇ ಕಾಲದಲ್ಲಿ ಅಲ್ಬೇನಿಯಾದಲ್ಲಿ ಕೈಗೊಂಬೆ ಆಳ್ವಿಕೆಯನ್ನು ನೆಲೆಗೊಳಿಸಿದನಲ್ಲದೆ ಸುಮಾರು 1912ನಿಂದಲೂ ಹೆಚ್ಚೂಕಡಿಮೆ ವಸಾಹತು ನೆಲೆಯಾಗಿದ್ದ ಲಿಬಿಯಾದಲ್ಲಿ ಇಟಾಲಿಯನ್ ನಿಯಂತ್ರಣವನ್ನು ನಿರ್ದಯವಾಗಿ ಕ್ರೋಢೀಕರಿಸಿದನು. ಮೆಡಿಟರೇನಿಯನ್ ಅನ್ನು ಮೇರ್ ನೋಸ್ಟ್ರಮ್ (ಲ್ಯಾಟಿನ್ನಲ್ಲಿ "ನಮ್ಮ ಸಮುದ್ರ") ಆಗಿ ಮಾಡುವುದು ಆತನ ಕನಸಾಗಿತ್ತು, ಮತ್ತು ಪೂರ್ವ ಮೆಡಿಟರೇನಿಯನ್ ಮೇಲೆ ಆಯಕಟ್ಟಿನ ಹಿಡಿತವನ್ನು ಕಡ್ಡಾಯಮಾಡುವ ಸಲುವಾಗಿ ಆತನು ಗ್ರೀಕ್ ದ್ವೀಪ Lerosನಲ್ಲಿ ಒಂದು ಬೃಹತ್ ನೌಕಾ ನೆಲೆಯನ್ನು ಸ್ಥಾಪಿಸಿದನು. ಹೀಗಿದ್ದಾಗ್ಯೂ, ವಿದೇಶ ನೀತಿಯ ಆತನ ಮೊದಲ ತೊದಲುಹೆಜ್ಜೆಗಳು ಆತನನ್ನು ಓರ್ವ ರಾಜನೀತಿಜ್ಞನಂತೆ ಬಿಂಬಿಸುವಂತೆನಿಸಿದವು, ಎಕೆಮ್ದರೆ ಆತನು 1925ರ ಲೊಕಾರ್ನೋ ಒಪ್ಪಂದಗಳಲ್ಲಿ ಭಾಗವಹಿಸಿದನು ಮತ್ತು 1933ರಲ್ಲಿ ಪ್ರಯತ್ನಿಸಲಾದ Four Power Pact ಮುಸೊಲಿನಿಯ ಯೋಜನೆಯಾಗಿದ್ದಿತು. 1935ರಲ್ಲಿ ಜರ್ಮನಿಯ ವಿರುದ್ಧ Stresa Front ಅನ್ನು ಅನುಸರಿಸುತ್ತಿರುವಾಗ ಮುಸೊಲಿನಿಯ ನೀತಿಯು ನಾಟಕೀಯ ತಿರುವನ್ನು ಪಡೆದುಕೊಂಡಿತಲ್ಲದೆ ತನ್ನ ಆಕ್ರಮಣಶೀಲ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿತು. ಯುದ್ಧದ ಈ ಡೊಮಿನೊ ಪರಿಣಾಮವು ಎರಡನೇ ಇಟಾಲೋ-ಅಬಿಸೀನಿಯನ್ ಯುದ್ಧದಿಂದ ಆರಂಭವಾಯಿತು.

ಇಥಿಯೋಪಿಯಾದ ದಂಡಯಾತ್ರೆ

ಬದಲಾಯಿಸಿ
ಚಿತ್ರ:Mussolini standing on a tank.jpg
ಇಲ್ ಡೂಚೆ ಟ್ಯಾಂಕ್ ಒಂದರ ಮೇಲೆ ನಿಂತುಕೊಂಡಿರುವುದು

ಇಟಾಲಿಯನ್ ಸಾಮ್ರಾಜ್ಯವೊಂದನ್ನು, ಅಥವಾ ಬೆಂಬಲಿಗರು ಕರೆದಂತೆ ನ್ಯೂ ರೋಮನ್ ಎಂಪೈರ್ ಒಂದನ್ನು ರೂಪಿಸುವುದಕ್ಕಾಗಿ,[೩೯] ಇಥಿಯೋಪಿಯಾದ ಮೇಲೆ ಕಣ್ಣಿಟ್ಟ ಇಟಲಿ ಅದರ ಮೇಲೆ ಬಹಳ ಬೇಗ ದಂಡಯಾತ್ರೆಯನ್ನು ಕೈಗೊಂಡಿತು. ಇಟಲಿಯ ಸೇನೆಯು ಅಬಿಸೀನಿಯನ್ ಸೇನೆಗಿಂತ ಬಲಶಾಲಿಯಾಗಿದ್ದುದರಿಂದ, ಅದರಲ್ಲೂ ಅವರ ವಾಯುಬಲ ಹೆಚ್ಚಾಗಿದ್ದುದರಿಂದ ಅವರನ್ನು ಬಲು ಬೇಗನೆ ವಿಜಯಶಾಲಿಗಳೆಂದು ಘೋಷಿಸಲಾಯಿತು. ಮೇ 1936ರ ಹೊತ್ತಿಗೆ ಇಟಲಿ ಇಥಿಯೋಪಿಯಾವನ್ನು ಇಟಾಲಿಯನ್ ಈಸ್ಟ್ ಆಫ್ರಿಕಾದ ಭಾಗವನ್ನಾಗಿ ಮಾಡಿಕೊಂಡು ತನ್ನ ಸಾಮ್ರಾಜ್ಯವನ್ನು ಘೋಷಿಸಲು ರಾಜಧಾನಿ ಅಡಿಸ್ ಅಬಾಬಗೆ ಪ್ರವೇಶ ಮಾಡುತ್ತಿದ್ದಂತೆಯೇ ಚಕ್ರವರ್ತಿ ಹೇಯ್ಲ್ ಸೆಲಾಸ್ಸೀ ದೇಶ ಬಿಟ್ಟು ಪರಾರಿಯಾಗಬೇಕಾಯಿತು.[೪೦]

ಈ ಹೊತ್ತಿಗೆ ಆಗಿನ ಎಲ್ಲಾ ಪ್ರಮುಖ ಯುರೋಪಿಯನ್ ಬಲಗಳು ಆಫ್ರಿಕಾದ ವಿವಿಧ ಭಾಗಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿ ಆ ವಸಾಹತುಗಳಲ್ಲಿ ಹಲವಾರು ಕುಕೃತ್ಯಗಳನ್ನು ಎಸಗಿದ್ದವಾದರೂ, ಇಪ್ಪತ್ತನೆಯ ಶತಮಾನದ ಆರಂಭದ ವೇಳೆಗೆ ಆಫ್ರಿಕಾಗಾಗಿ ಸೆಣಸಾಟವು ಮುಗಿದುಹೋಗಿತ್ತು. ಆಹೊತ್ತಿಗಿನ ಅಂತರ್ರಾಷ್ಟ್ರೀಯ ಭಾವನೆಯು ವಸಾಹತುಗಳನ್ನು ಸ್ಥಾಪಿಸುವುದಕ್ಕೆ ವಿರುದ್ಧವಾಗಿತ್ತು ಮತ್ತು ಇಟಲಿಯ ಕೃತ್ಯಗಳನ್ನು ಖಂಡಿಸಲಾಯಿತು. ಪೂರ್ವಕ್ರಿಯಾತ್ಮಕವಾಗಿ, ಇಟಲಿಯನ್ನು ತನ್ನ ವೈರಿಗಳ ವಿರುದ್ಧ ಮಸ್ಟರ್ಡ್ ಅನಿಲ ಮತ್ತು ಫಾಸ್‌ಜೀನ್ ಅನ್ನು ಬಳಸಿದ್ದಕ್ಕಾಗಿ ಹಾಗೂ ಮುಸೊಲಿನಿಯ ಆದೇಶದ ಪ್ರಕಾರ ವೈರಿ ಗೆರಿಲ್ಲಾಗಳಿಗೆ ಯಾವುದೇ ದಯೆ ತೋರಿಸದಿರುವುದಕ್ಕಾಗಿ ಖಂಡಿಸಲಾಯಿತು.[೪೦]

 
"ಇಟಾಲಿಯನ್ ದಾಳಿಖೋರ"ನ ವಿರುದ್ಧದ ಸ್ಪ್ಯಾನಿಶ್ ರಿಪಬ್ಲಿಕನ್ ಭಿತ್ತಿಚಿತ್ರ.

ಇಂಟರ್‌ನ್ಯಾಶನಲ್ ರೆಡ್ ಕ್ರಾಸ್ ಪ್ರಕಾರ ಅಧಿಕೃತ ಸಮಾರಂಭವೊಂದರಲ್ಲಿ ಗೆರಿಲ್ಲಾ ಬಾಂಬೊಂದು ಸ್ಫೋಟಿಸಿ ಇಥಿಯೋಪಿಯಾದ ವೈಸ್‌ರಾಯ್ ರೊಡೋಲ್ಫೋ ಗ್ರಾಜಿಯಾನಿಯನ್ನು ಕೊಲ್ಲಲು ಪ್ರಯತ್ನಿಸಿದ ನಂತರ ಖೈದಿಗಳಾಗಿದ್ದವರನ್ನೂ ಒಳಗೊಂಡಂತೆ ಗೆರಿಲ್ಲಾಗಳ ವಿರುದ್ಧ ಬಹಳ ಬಲವಾದ ಕ್ರಮಗಳನ್ನು ಕೈಗೊಳ್ಳಲಾಯಿತು.[೪೦] ಜತೆಗೇ IRCಯ ಪ್ರಕಾರ ಗೆರಿಲ್ಲಾಗಳ ಮಿಲಿಟರಿ ಬೀಡುಗಳಿದ್ದ ಜಾಗಗಳ ಮೇಲೆ ಇಟಲಿ ಬಾಂಬ್ ದಾಳಿ ನಡೆಸಿತೆಂದು ಆರೋಪಿಸಲಾಯಿತು, ಆದರೆ ಇಟಲಿಯು ಬಂಡುಕೋರರನ್ನು ಮಾತ್ರ ಗುರಿಯಾಗಿಟ್ತುಕೊಳ್ಳಲಾಯಿತು ಎಂದು ಹೇಳುತ್ತ ಈ ಆರೋಪವನ್ನು ನಿರಾಕರಿಸಿತು.[೪೦] 1941ರಲ್ಲಿ ಹದಿನಾಲ್ಕು ರಾಷ್ಟ್ರಗಳ ಮಿತ್ರಬಲವನ್ನು ಎದುರಿಸಿದ ಇಟಲಿಯು ಸೋತು ತನ್ನ ಪೂರ್ವ ಆಫ್ರಿಕನ್ ರಾಜ್ಯಗಳನ್ನು ಕಳೆದುಕೊಂಡಿತು ಮತ್ತು ಇದರೊಂದಿಗೆ ಈಸ್ಟ್ ಆಫ್ರಿಕನ್ ಕ್ಯಾಂಪೇನ್'ನ ಅಂತ್ಯವಾಯಿತು.

ಸ್ಪಾನಿಶ್ ಅಂತರ್ಯುದ್ಧ

ಬದಲಾಯಿಸಿ

ರಿಪಬ್ಲಿಕನ್ ಪಕ್ಷವು ಪಾದ್ರಿಗಳ ವಿರುದ್ಧ ಮತ್ತು ಕ್ಯಾಥೊಲಿಕರ ವಿರುದ್ಧ ನಡೆಸಿದ ದುರಾಚಾರಗಳನ್ನು ವಿರೋಧಿನಲು ನ್ಯಾಶನಲಿಸ್ಟರಿಗೆ ಇಟಾಲಿಯನ್ ಮಿಲಿಟರಿ ನೀಡಿದ ಬೆಂಬಲವು ಕ್ಯಾಥೊಲಿಕರನ್ನು ಗುರಿಯಾಗಿಟ್ಟುಕೊಂಡ ಇಟಾಲಿಯನ್ ಪ್ರಚಾರಕಾರ್ಯಕ್ಕೆ ಸಹಾಯಕವಾಯಿತು. 1936ರ ಜುಲೈ 27ರಂದು ಬೆನಿಟೊ ಮುಸೊಲಿನಿ ಕಳುಹಿಸಿದ ಇಟಾಲಿಯನ್ ವಿಮಾನಗಳ ಮೊದಲನೆ ಪಡೆಯು ಸ್ಪೇನ್ ಅನ್ನು ತಲುಪಿತು.[೪೧] 1936–1939ರಲ್ಲಿ ಸ್ಪ್ಯಾನಿಶ್ ಅಂತರ್ಯುದ್ಧದ ಸಮಯದಲ್ಲಿ ಫ್ರ್ಯಾಂಕೋನ ಪಕ್ಷದ ಕಡೆಯಿಂದ ನಡೆದ ಈ ತ್ವರಿತಗತಿಯ ಹಸ್ತಕ್ಷೇಪದಿಂದಾಗಿ ಫ್ರ್ಯಾನ್ಸ್ ಮತ್ತು ಬ್ರಿಟನ್ ನಡುವಿನ ಸಂಧಾನದ ಎಲ್ಲ ಸಾಧ್ಯತೆಗಳೂ ಕೊನೆಗಂಡವು. ಇದರಿಂದಾಗಿ ಆತನ ಮತ್ತು ಅಡಾಲ್ಫ್ ಹಿಟ್ಲರ್ ನಡುವಿನ ಸಂಬಂಧವು ಗಾಢವಾಯಿತು ಮತ್ತು ಆತ ಜರ್ಮನಿ ಆಸ್ಟ್ರಿಯಾವನ್ನು 1938ರಲ್ಲಿ ಸ್ವಾಧೀನಪಡಿಸಿಕೊಳ್ಳುವಿಕೆಗೆ ಹಾಗೂ 1939ರಲ್ಲಿ ಜೆಕೊಸ್ಲೊವಾಕಿಯಾದ ಒಡೆಯುವಿಕೆಗೆ ಸಮ್ಮತಿಸಿದರು. ಸೆಪ್ಟೆಂಬರ್ 1938ರ ಮ್ಯುನಿಕ್ ಅಧಿವೇಶನದಲ್ಲಿ ಆತ ಯುರೋಪಿನ ಶಾಂತಿಗಾಗಿ ದುಡಿಯುತ್ತಿರುವ ಒಬ್ಬ ಸೌಮ್ಯವಾದಿಯಂತೆ,ಸುಡೆಟೆನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ನಾಜೀ ಜರ್ಮನಿಗೆ ಸಹಾಯ ಮಾಡುತ್ತಿರುವವನಂತೆ ತೋರ್ಪಡಿಸಿಕೊಂಡನು. ಮೇ 1939ರಲ್ಲಿ ಆತ ಹಿಟ್ಲರ್‌ನ ಜತೆ "ಪ್ಯಾಕ್ಟ್ ಆಫ್ ಸ್ಟೀಲ್" ಒಪ್ಪಂದ ಮಾಡಿಕೊಂಡಾಗ ಜರ್ಮನಿಯ ಜತೆ ಆತನ "ಆಕ್ಸಿಸ್" ಸಂಬಂಧವಿರುವುದು ಸ್ಪಷ್ತವಾಯಿತು, ಏಕೆಂದರೆ ಹಿಂದೆ 1936ರಲ್ಲಿ ಮಾಡಲಾದ "ರೋಮ್-ಬರ್ಲಿನ್ ಆಕ್ಸಿಸ್" ಅನಧಿಕೃತವಾದುದಾಗಿತ್ತು. TIGR ಎಂಬ ಸ್ಲೊವೇನ್ ಫ್ಯಾಸಿಸ್ಟ್ ವಿರೋಧಿ ಗುಂಪೊಂದರ ಸದಸ್ಯರು ಮುಸೊಲಿನಿಯನ್ನು 1938ರಲ್ಲಿ ಕೊಬರಿಡ್ ಎಂಬ ಸ್ಥಳದಲ್ಲಿ ಕೊಲ್ಲಲು ಸಂಚುಹೂಡಿದರಾದರೂ ಈ ಪ್ರಯತ್ನ ಫಲಕಾರಿಯಾಗಲಿಲ್ಲ.

ಆಕ್ಸಿಸ್‌ ದೇಶಗಳು

ಬದಲಾಯಿಸಿ

ರೋಮ್-ಬರ್ಲಿನ್ ಸಂಬಂಧಗಳು

ಬದಲಾಯಿಸಿ
 
ಬೆನಿಟೊ ಮುಸೊಲಿನಿ ಮತ್ತು ಅಡಾಲ್ಫ್ ಹಿಟ್ಲರ್

ಮೊದಮೊದಲು ಮುಸೊಲಿನಿ ಮತ್ತು ಅಡಾಲ್ಫ್ ಹಿಟ್ಲರ್‌ನ ಸಂಬಂಧವು ಕಲಹಪೂರ್ಣವಾದುದಾಗಿತ್ತು. ಮುಸೊಲಿನಿಯನ್ನು ಹಿಟ್ಲರ್ ತನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಯೆಂದು ಉಲ್ಲೇಖಿಸುತ್ತಿದ್ದನು, ಆದರೆ ನಾಜಿಗಳು 1933 ತನ್ನ ಮಿತ್ರನಾಗಿದ್ದ ಆಸ್ಟ್ರಿಯಾದ ಆಸ್ಟ್ರೋಫ್ಯಾಸಿಸ್ಟ್ ಸರ್ವಾಧಿಕಾರಿ ಎಂಗೆಲ್‌ಬರ್ಟ್ ಡೊಲ್‌ಫಸ್ನನ್ನು ಹತ್ಯೆಗೈದ ನಂತರ ಮುಸೊಲಿನಿಗೆ ಹಿಟ್ಲರನ ಬಗ್ಗೆ ಕಿಂಚಿತ್ತೂ ಗೌರವವಿರಲಿಲ್ಲ.

ಡೊಲ್‌ಫಸ್‌ನ ಹತ್ಯೆಯ ನಂತರ ಮುಸ್ಸೊಲಿನಿಯು ಜರ್ಮನ್ ತೀವ್ರಗಾಮಿಯು ಸಮರ್ಥಿಸುತ್ತಿದ್ದ ವಿಚಾರಗಳಾದ ಜನಾಂಗೀಯವಾದ (ವಿಶೇಷವಾಗಿ ನಾರ್ಡಿಸಿಸಮ್ ಮತ್ತು ಜರ್ಮನಿಸಮ್) ಮತ್ತು ಯಹೂದ್ಯ-ವಿರೋಧಿವಾದಗಳನ್ನು ತಿರಸ್ಕರಿಸುವುದರ ಮೂಲಕ ಹಿಟ್ಲರ‍್ನಿಂದ ದೂರವಿರಲು ಹವಣಿಸಿದನು. ಈ ಅವಧಿಯಲ್ಲಿ ಮುಸೊಲಿನಿ ನಾಜೀ ರೀತಿಯ ಜೈವಿಕ ಜನಾಂಗವಾದವನ್ನು ತಿರಸ್ಕರಿಸಿದನಲ್ಲದೆ ಅದಕ್ಕೆ ಬದಲಾಗಿ ತಾನು ಕಟ್ಟಬೇಕೆಂದು ಬಯಸುತ್ತಿದ್ದ ಇಟಾಲಿಯನ್ ಸಾಮ್ರಾಜ್ಯದ ಭಾಗಗಳ "ಇಟಾಲಿಯನೀಕರಣ"ಕ್ಕೆ ಪ್ರಾಮುಖ್ಯತೆ ನೀಡಿದನು.[೪೨] ಯುಜೆನಿಕ್ಸ್(ಸುಸಂತಾನಶಾಸ್ತ್ರ)ನ ಯೋಜನೆಗಳು ಮತ್ತು ಒಂದು ಆರ್ಯನ್ ರಾಷ್ಟ್ರದಂತಹ ಜನಾಂಗೀಯ ಪರಿಕಲ್ಪನೆಗಳು ನಿಜವಾಗುವುದು ಸಾಧ್ಯವಿಲ್ಲ ಎಂದು ಆತ ಘೋಷಿಸಿದನು.[೪೨]

ವಿಶೇಷವಾಗಿ ಮುಸೊಲಿನಿಗೆ ಜರ್ಮನರು ಇಟಾಲಿಯನರನ್ನು ಅಡ್ಡತಳಿಯ ನಾಯಿಗಳ ಜನಾಂಗವೆಂದು ಆರೋಪ ಹೊರಿಸುವುದರ ಬಗ್ಗೆ ಸೂಕ್ಷ್ಮಗ್ರಾಹಿಯಾಗಿದ್ದನು. ಇದಕ್ಕೆ ಪ್ರತಿಯಾಗಿ ಆತ ಹಲವಾರು ಸಂದರ್ಭಗಳಲ್ಲಿ ಜರ್ಮನರ ಜನಾಂಗೀಯ ಪರಿಶುದ್ಧತೆಯ ಕೊರತೆಯ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದನು. 1934ರ ಬೇಸಿಗೆಯಲ್ಲಿ ಜರ್ಮನ್ ಜನತೆಯು ಆರ್ಯನ್ ಅಥವಾ ಯಹೂದಿ ಜನಾಂಗಗಳಿಗೆ ಸೇರಿರುವರೆಂಬ ಗುರುತಿರುವ ಪಾಸ್‌ಪೋರ್ಟನ್ನು ಇಟ್ಟುಕೊಂಡಿರಬೇಕೆಂಬ ನಾಜೀ ಶಾಸನದ ಬಗ್ಗೆ ಚರ್ಚೆ ಮಾಡುತ್ತ ಮುಸೊಲಿನಿ ಅವರು "ಜರ್ಮೇನಿಕ್ ಜನಾಂಗ"ಕ್ಕೆ ಸದಸ್ಯತ್ವವನ್ನು ಯಾವ ಆಧಾರದ ಮೇಲೆ ನೀಡುವರೊ ಎಂದು ಆಶ್ಚರ್ಯ ಪ್ರಕಟಿಸಿದನು :

"ಯಾವ ಜನಾಂಗ? ಜರ್ಮನ್ ಜನಾಂಗ ಎಂಬುದೊಂದಿದೆಯೆ? ಅದು ಯಾವಾಗಲಾದರು ಆಸ್ತಿತ್ವದಲ್ಲಿದ್ದಿತೆ? ಎಂದಾದರು ಅದು ಅಸ್ತಿತ್ವದಲ್ಲಿರುವುದೆ? ಅದು ನಿಜವೆ, ಕಟ್ಟುಕಥೆಯೆ ಅಥವಾ ಸೈದ್ಧಾಂತಿಕರ ವಂಚನೆಯ ತಂತ್ರವೆ?

ಆಹಾ, ಇರಲಿ, ಇದಕ್ಕೆ ನಾವು ಉತ್ತರಿಸುತ್ತೇವೆ, ಜರ್ಮೇನಿಕ್ ಜನಾಂಗ ಅಸ್ತಿತ್ವದಲ್ಲಿಲ್ಲ. ಹಲವಾರು ಆಂದೋಲನಗಳು. ಕುತೂಹಲ. ಮಂಪರು. ನಾವು ಪುನರುಚ್ಚರಿಸುತ್ತೇವೆ. ಅಸ್ತಿತ್ವದಲ್ಲಿಲ್ಲ. ನಾವು ಹೀಗೆ ಹೇಳುತ್ತಿಲ್ಲ. ವಿಜ್ಞಾನಿಗಳು ಹೇಳುತ್ತಾರೆ. ಹಿಟ್ಲರ್ ಹೀಗೆ ಹೇಳುತ್ತಾನೆ."—ಬೆನಿಟೊ ಮುಸೊಲಿನಿ, 1934.[೪೩]

ಜರ್ಮನ್-ಯಹೂದಿ ಪತ್ರಕರ್ತ ಎಮಿಲ್ ಲುದ್ವಿಗ್ ಜನಾಂಗಗಳ ಬಗ್ಗೆ ಆತನ ಅಭಿಪ್ರಾಯ ಕೇಳಿದಾಗ ಮುಸೊಲಿನಿ ಉದ್ಗರಿಸಿದ:

ಜನಾಂಗ!ಅದು ಒಂದು ಭಾವನೆಯಷ್ಟೆ, ನಿಜವಲ್ಲ: ಶೇಕಡಾ ತೊಂಭತ್ತೈದು ಭಾಗದಷ್ಟಾದರೂ, ಅದು ಒಂದು ಭಾವನೆ. ಜೈವಿಕವಾಗಿ ಪರಿಶುದ್ಧವಾದ ಜನಾಂಗಗಳು ಅಸ್ತಿತ್ವದಲ್ಲಿರುವುದನ್ನು ತೋರಿಸಬಹುದು ಎಂದು ನನ್ನನ್ನು ನಂಬಿಸಲು ಯಾವುದರಿಂದಲೂ ಸಾಧ್ಯವೇ ಇಲ್ಲ. ತಮಾಷೆಯೇನೆಂದರೆ ಟ್ಯುಟಾನಿಕ್ ಜನಾಂಗದ "ಘನತೆ"ಯನ್ನು ಸಾರಿರುವ ಅವರಲ್ಲೊಬ್ಬರಾದರೂ ಸ್ವತಃ ಒಬ್ಬ ಟ್ಯುಟಾನ್ ಅಲ್ಲ. ಗೋಬಿನೂ ಒಬ್ಬ ಫ್ರೆಂಚ್ ಪ್ರಜೆ, ಹ್ಯೂಸ್ಟನ್ ಚೇಂಬರ್ಲೇನ್, ಒಬ್ಬ ಆಂಗ್ಲದೇಶೀಯ; ವೋಲ್ಟ್‌ಮ್ಯಾನ್, ೊಬ್ಬ ಯಹೂದ್ಯ; ಲಾಪೂಶ್, ಇನ್ನೊಬ್ಬ ಫ್ರೆಂಚ್ ಪ್ರಜೆ ."

--ಬೆನಿಟೊ ಮುಸೊಲಿನಿ, 1933.[೪೪]

ಆದರೆ ಹಿಟ್ಲರನ ಬಗೆಗಿನ ವೈಷಮ್ಯ ಹೆಚ್ಚಾಗಿದ್ದ ಕಾಲವಾಗಿದ್ದ 1934ರ ಹೊತ್ತಿಗಿನ ಮುಸೊಲಿನಿಯ ಜನಾಂಗವಾದ ಮತ್ತು ಜನಾಂಗದ ಪ್ರಾಮುಖ್ಯತೆಯ ಬಗೆಗಿನ ತಿರಸ್ಕಾರವು ಜನಾಂಗದ ಬಗೆಗಿನ ಆತನವೇ ಹಳೆಯ ಹೇಳಿಕೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಉದಾಹರಣೆಗೆ, 1928ರಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಆತನು ಜನಾಂಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದನು:

[When the] city dies, the nation—deprived of the young life—blood of new generations—is now made up of people who are old and degenerate and cannot defend itself against a younger people which launches an attack on the now unguarded frontiers[...] This will happen, and not just to cities and nations, but on an infinitely greater scale: the whole White race, the Western race can be submerged by other coloured races which are multiplying at a rate unknown in our race.

—Benito Mussolini, 1928.[೪೫]

ಇಟಾಲಿಯನ್ ಫ್ಯಾಸಿಸಮ್ ಜನಾಂಗದ ಬಗೆಗಿನ ತನ್ನ 1920ರ ಹೊತ್ತಿಗಿನ ಅಭಿಪ್ರಾಯಗಳನ್ನು 1934ರ ಹೊತ್ತಿಗೆ ಬದಲಾಯಿಸಿತ್ತಾದರೂ, ಸೈದ್ಧಾಂತಿಕವಾಗಿ ಇಟಾಲಿಯನ್ ಫ್ಯಾಸಿಸಮ್ ಮೂಲವಾಗಿ ಇಟಾಲಿಯನ್ ಯಹೂದಿ ಸಮುದಾಯದ ಬಗ್ಗೆ ಯಾವುದೇ ಭೇದಭಾವವನ್ನು ತೋರಲಿಲ್ಲ:ರೋಮನ್ ಚಕ್ರವರ್ತಿಗಳ" ಕಾಲದಿಂದಲೂ ಅವರ ಸಣ್ಣ ತಂಡವೊಂದು ಅಲ್ಲಿಯೇ ನೆಲೆಸಿರುವುದೆಂದು ಅರಿತಿದ್ದ ಮುಸೊಲಿನಿ ಅವರನ್ನು "ಹಾಗೆಯೇ ತೊಂದರೆಗೂಡುಮಾಡದೆ ಇರಿಸಬೇಕು" ಎಂಬ ಭಾವನೆಯನ್ನು ಹೊಂದಿದ್ದನು.[೪೬] ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯಲ್ಲಿ ಹಲವರು ಯಹೂದಿಗಳಿದ್ದರು, ಉದಾಹರಣೆಗೆ 1935ರಲ್ಲಿ ಯಹೂದಿ ಫ್ಯಾಸಿಸ್ಟ್ ಪತ್ರಿಕೆಯಾದ La Nostra Bandiera [೪೭] ("ನಮ್ಮ ಧ್ವಜ")ವನ್ನು ಆರಂಭಿಸಿದ ಎಟೋರ್ ಒವಾಜ್ಜಾ.

1938ರ ಹೊತ್ತಿಗೆ ಮುಸೊಲಿನಿಯ ಮೇಲೆ ಹಿಟ್ಲರನಿಗಿದ್ದ ಅಗಾಧ ಪ್ರಭಾವವು ಮ್ಯಾನಿಫೆಸ್ಟೊ ಆಫ್ ರೇಸ್ ಅನ್ನು ಪರಿಚಯಿಸುವುದರೊಂದಿಗೆ ಸ್ಪಷ್ಟವಾಯಿತು. ಈ ಮ್ಯಾನಿಫೆಸ್ಟೋವನ್ನು ನಾಜೀ ನ್ಯೂರೆಂಬರ್ಗ್ ಕಾನೂನುಗಳ ಮಾದರಿಯಲ್ಲಿ ರಚಿಸಲಾಗಿದ್ದು,[೩೦] ಇದು ಯಹೂದಿಗಳ ಇಟಾಲಿಯನ್ ಪೌರತ್ವವನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ಇದರಿಂದ ಅವರನ್ನು ಸರ್ಕಾರೀ ಅಥವಾ ಯಾವುದೇ ವೃತ್ತಿಯನ್ನು ಮಾಡುವ ಅವಕಾಶಗಳಿಂದಲೂ ವಂಚಿತರನ್ನಾಗಿಸಿತು. ಇಟಾಲಿಯನ್ ನೀತಿಯ ಮೇಲಿನ ಈ ಜರ್ಮನ್ ಪ್ರಭಾವವು ಫ್ಯಾಸಿಸ್ಟ್ ಇಟಲಿಯಲ್ಲಿ ಸ್ಥಾಪನೆಯಾಗಿದ್ದ ಸಮತೋಲನವನ್ನು ಬಿಗಡಾಯಿಸಿತು ಮತ್ತು ಇಟಾಲಿಯನ್ನರ ನಡುವೆ ಎಷ್ಟು ಪಖ್ಯಾತಿ ಪಡೆಯಿತೆಂದರೆ, ಪೋಪ್ ಪಯಸ್ XII ಮುಸೊಲಿನಿಗೆ ಒಂದು ಪತ್ರವನ್ನು ಕಳುಹಿಸಿ ಹೊಸ ಕಾನೂನುಗಳ ವಿರುದ್ಧ ಪ್ರಕಟಿಸಿದರು.[೪೮]

ಹೆಚ್ಚಿನ ಊಹೆಗಳ ಪ್ರಕಾರ 1938ರಲ್ಲಿ ಮ್ಯಾನಿಫೆಸ್ಟೋವನ್ನು ಒಳಗೊಳ್ಳುವ ಮುಸೊಲಿನಿಯ ನಿರ್ಧಾರವು ಜರ್ಮನಿಯ ಜತೆ ಇಟಲಿಯ ಸಂಬಂಧಗಳನ್ನು ಉತ್ತಮಪಡಿಸುವ ಸಲುವಾಗಿ ಕೈಗೊಂಡ ತಂತ್ರ ಮಾತ್ರವಾಗಿತ್ತು. ಡಿಸೆಂಬರ್ 1943ರಲ್ಲಿ ಬ್ರೂನೋ ಸ್ಪ್ಯಾಂಪನ್ಯಾಟೋ ಬಳಿ ಹೇಳಿಕೊಂಡ ಮಾತುಗಳು ಆತನು ಮ್ಯಾನಿಫೆಸ್ಟೋ ಆಫ್ ರೇಸ್‌ನ ಬಗ್ಗೆ ವಿಷಾದಿಸುತ್ತಿದ್ದನೆಂಬುದನ್ನು ಸೂಚಿಸುತ್ತವೆ:

"ರೇಶಿಯಲ್ ಮ್ಯಾನಿಫೆಸ್ಟೊವನ್ನು ಒಳಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅದು ಕೆಲವು ಪತ್ರಕರ್ತರು ಮತ್ತು ಶಿಕ್ಷಕರ ವೈಜ್ಞಾನಿಕ ಕ್ಲಿಷ್ಟತೆಗೆ ಸಂಬಂಧಿಸಿದ್ದಾಗಿತ್ತು, ಅದು ಒಂದು ಕೆಟ್ಟದಾಗಿ ಇಟಾಲಿಯನ್‌ಗೆ ಅನುವಾದಿಸಲಾದ ಸೈದ್ಧಾಂತಿಕ ಜರ್ಮನ್ ಪ್ರಬಂಧವಾಗಿತ್ತು. ನಾನು ಈ ವಿಚಾರವಾಗಿ ಹೇಳಿರುವುದು, ಬರೆದಿರುವುದು ಮತ್ತು ಸಹಿ ಹಾಕಿರುವುದಕ್ಕಿಂತ ಇದು ಭಿನ್ನವಾಗಿದೆ. ನೀವು Il Popolo d'Italiaದ ಹಳೆಯ ಸಂಚಿಕೆಗಳನ್ನು ನೋಡಿ ಎಂದು ನಾನು ಸಲಹೆ ನೀಡುತ್ತೇನೆ. ಈ ಕಾರಣದಿಂದಾಗಿ ನಾನು (Alfred) ರೊಸೆನ್‌ಬರ್ಗನ ಕಲ್ಪನೆಯನ್ನು ಒಪ್ಪಿಕೊಳ್ಳುವುದರಿಂದ ದೂರವುಳಿದಿದ್ದೇನೆ. "

-- ಬೆನಿಟೊ ಮುಸೊಲಿನಿ, 1943.[೪೯]

ಜತೆಗೇ ಮುಸೊಲಿನಿ ತನ್ನ ಸಾಮ್ರಾಜ್ಯದಲ್ಲಿದ್ದ ಮುಸ್ಲಿಮರು ಮತ್ತು ಮಧ್ಯಪೂರ್ವದ ಹೊಸ ಮುಸ್ಲಿಮ್ ರಾಜ್ಯಗಳ ಕಡೆಗೆ ಸ್ನೇಹಹಸ್ತವನ್ನು ಚಾಚಿದ್ದನು. 1937ರಲ್ಲಿ, ಲಿಬಿಯಾದ ಮುಸ್ಲಿಮರು ಆತನಿಗೆ "ಇಸ್ಲಾಮ್‌ನ ರಕ್ಷಕ" ಎಂಬ ಬಿರುದು ನೀಡಿದರು.[೫೦]

ಮ್ಯುನಿಕ್ ಅಧಿವೇಶನ, ಯುದ್ಧದ ನೆರಳು

ಬದಲಾಯಿಸಿ
ಚಿತ್ರ:Chamberlain, Mussolini, Halifax, Ciano.png
ಚೇಂಬರ್ಲೇನ್, ಮುಸೊಲಿನಿ, ವಿಕೌಂಟ್ ಹ್ಯಾಲಿಫ್ಯಾಕ್ಸ್ ಮತ್ತು ಚಿಯಾನೋ,ರೋಮ್ ಓಪೆರಾ ಹೌಸ್‌ನಲ್ಲಿ, 1939.

ಟ್ಯುನೀಶಿಯಾದಲ್ಲಿ ಚಕ್ರಾಧಿಪತ್ಯ ಸ್ಥಾಪನೆಯ ಆಕಾಂಕ್ಷೆಯನ್ನು ಹೊಂದಿದ್ದ ಮುಸೊಲಿನಿ ಆ ದೇಶದಲ್ಲಿ ಬೆಂಬಲವನ್ನು ಕೆಲಮಟ್ಟಿಗೆ ಹೊಂದಿದ್ದನು.[೫೧] ಏಪ್ರಿಲ್ 1939ರಲ್ಲಿ ಪ್ರಪಂಚವು ಹಿಟ್ಲರನ ಜೆಕೊಸ್ಲೊವಾಕಿಯಾದ ಮೇಲಿನ ಆಕ್ರಮಣದೆಡೆ ಗಮನ ಹರಿಸಿದ್ದಾಗ, ತನ್ನ ಹಳೆಯ ಸೋಲೊಂದರಿಂದ ಕಳೆದ ಗೌರವವನ್ನು ಮರಳಿ ಪಡೆಯುವ ಸಲುವಾಗಿ ಇಟಲಿಯು ಅಲ್ಬೇನಿಯಾದ ಮೇಲೆ ಆಕ್ರಮಣ ಮಾಡಿತು. ಇಟಲಿಯು ಕೇವಲ ಐದು ದಿನಗಳಲ್ಲಿ Albaniaವನ್ನು ಸೋಲಿಸಿದಾಗ ಅರಸ ಜಾಗ್ ಪಲಾಯನ ಮಾಡಿದನು ಮತ್ತು ಇದರಿಂದ ಇಟಲಿಯ ಆಳ್ವಿಕೆಯಲ್ಲಿ ಅಲ್ಬೇನಿಯಾದ ಅವಧಿಯು ಆರಂಭವಾಯಿತು. ಮೇ 1939ರವರೆಗೆ ಆಕ್ಸಿಸ್ ಸಂಪೂರ್ಣವಾಗಿ ಅಧಿಕೃತವಾಗಿರಲಿಲ್ಲವಾದರೂ, ಆ ತಿಂಗಳಿನಲ್ಲಿ ಜರ್ಮನಿ ಮತ್ತು ಇಟಲಿಗಳ ನಡುವಿನ "ಸ್ನೇಹ ಮತ್ತು ಮೈತ್ರಿ"ಗಳ ರೂಪರೇಖೆಗಳನ್ನು ನೀಡುವ ಪ್ಯಾಕ್ಟ್ ಆಫ್ ಸ್ಟೀಲ್ ಒಪ್ಪಂದವನ್ನು ರೂಪಿಸಲಾಗಿ, ಅದಕ್ಕೆ ಎರಡೂ ದೇಶಗಳ ವಿದೇಶ ಮಂತ್ರಿಗಳು ಸಹಿ ಹಾಕಿದರು.[೫೨] ಹೆಚ್ಚು ಸಾಂಪ್ರದಾಯಿಕ ಇಟಾಲಿಯನ್ ಮೈತ್ರಿಗಳ ಪರವಾಗಿದ್ದ ಇಟಲಿಯ ಅರಸ ವಿಕ್ಟರ್ ಎಮ್ಯಾನುಯೆಲ್ III ಈ ಒಪ್ಪಂದದ ಬಗ್ಗೆ ಜಾಗರೂಕನಾಗಿದ್ದನು.[೫೩]

ಗ್ಯಾಲಿಯಾಜ್ಜೋ ಚಿಯಾನೊ ಹಿಟ್ಲರ್‌ಗೆ ಪೋಲಂಡ್‌ನ ಮೇಲೆ ಆಕ್ರಮಣ ಮಾಡುವುದರ ಬಗ್ಗೆ ಅದು ಮಿತ್ರಪಕ್ಷಗಳೊಂದಿಗೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದರೂ ಕೂಡ ಸ್ಥಿರನಾಗಿದ್ದನು. ಚಿಯಾನೋನ ವ್ಯಾಖ್ಯಾನವನ್ನು ಪರಿಗಣಿಸದ ಹಿಟ್ಲರ್, ಅಂತಾಗದೆ ಬ್ರಿಟನ್ ಮತ್ತು ಇತರ ಪಶ್ಚಿಮರಾಷ್ಟ್ರಗಳು ಸುಮ್ಮನಾಗುವವೆಂದು ಭವಿಷ್ಯ ನುಡಿದನಲ್ಲದೆ ಇಟಲಿಯು ಯುಗೋಸ್ಲಾವಿಯಾದ ಮೇಲೆ ಆಕ್ರಮಣ ಮಾಡಬೇಕೆಂದು ಸಲಹೆ ನೀಡಿದನು.[೫೪] ಮುಸೊಲಿನಿಗೆ ಈ ಪ್ರಸ್ತಾಪವು ಆಕರ್ಷಕವಾಗಿ ತೋರಿತು, ಆದರೆ ಆ ಹಂತದಲ್ಲಿ ವಿಶ್ವಯುದ್ಧವು ಇಟಲಿಯ ಪಾಲಿಗೆ ಆಪತ್ತಾಗಬಹುದಿತ್ತು ಏಕೆಂದರೆ ಇಟಾಲಿಯನ್ ಚಕ್ರಾಧಿಪತ್ಯವನ್ನು ಕಟ್ಟಲು ಹೊರಟ ಮೇಲೆ ಅದರ ಶಸ್ತ್ರಾಸ್ತ್ರಗಳ ಪರಿಸ್ಥಿತಿಯು ಬಹಳ ನಾಜೂಕಾಗಿದ್ದಿತು. ಹೆಚ್ಚು ಮುಖ್ಯವಾಗಿ ಹೇಳಬೇಕೆಂದರೆ, ವಿಕ್ಟರ್ ಎಮ್ಯಾನುಯೆಲ್ ಈ ವ್ಯಾಜ್ಯದಲ್ಲಿ ತಟಸ್ಥವಾಗಿರಬೇಕೆಂದು ಆಗ್ರಹಿಸಿದ್ದನು.[೫೪] ಹೀಗಾಗಿ ಎರಡನೇ ವಿಶ್ವಯುದ್ಧವು ಯುರೋಪಿನಲ್ಲಿ ಸೆಪ್ಟೆಂಬರ್ 1, 1939ರಂದು ಪೋಲಂಡಿನ ಮೇಲೆ ಜರ್ಮನಿಯ ದಾಳಿಯೊಂದಿಗೆ ಆರಂಭವಾಗಿ, ಇದಕ್ಕೆ ಉತ್ತರವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್‌ಗಳು ಜರ್ಮನಿಯ ಮೇಲೆ ಯುದ್ಧ ಸಾರಿದಾಗ ಇಟಲಿಯು ಈ ಘರ್ಷಣೆಯಲ್ಲಿ ಶಾಮೀಲಾಗಿರಲಿಲ್ಲ.[೫೪]

ಯುದ್ಧ ಘೋಷಣೆ

ಬದಲಾಯಿಸಿ

ಎರಡನೇ ವಿಶ್ವಯುದ್ಧವು ಆರಂಭವಾಗುತ್ತಿದ್ದಂತೆ, ಚಿಯಾನೋ ಮತ್ತು ವಿಕೌಂಟ್ ಹ್ಯಾಲಿಫ್ಯಾಕ್ಸ್ ರಹಸ್ಯವಾಗಿ ಫೋನ್ ಮೂಲಕ ಮಾತುಕತೆಗಳನ್ನು ನಡೆಸುತ್ತಿದ್ದರು. ಪ್ರಥಮ ವಿಶ್ವಯುದ್ಧದಲ್ಲಿದ್ದಂತೆಯೆ ಇಟಲಿ ಈ ಬಾರಿಯೂ ಜರ್ಮನಿಯ ವಿರುದ್ಧ ತಮ್ಮ ಪಕ್ಷದಲ್ಲಿರಬೇಕೆಂದು ಬ್ರಿಟೀಶರು ಬಯಸುತ್ತಿತ್ತು.[೫೪] ಫ್ರೆಂಚ್ ಸರ್ಕಾರದ ವಿಚಾರವು ಇಟಲಿಯ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿತ್ತು; ಅವರು ಇಟಲಿಯ ಮೇಲೆ ಲಿಬಿಯಾದ ಮೂಲಕವಾಗಿ ದಾಳಿ ಮಾಡಲು ಹವಣಿಸುತ್ತಿದ್ದರು. ಸೆಪ್ಟೆಂಬರ್ 1939ರಲ್ಲಿ ಫ್ರೆಂಚರು ತಮ್ಮ ವಿಚಾರಗಳಿಗೆ ಸಂಪೂರ್ಣ ವಿರುದ್ಧವಾಗಿ ಇಟಲಿಯೊಡನೆ ಹಲವು ವಿಷಯಗಳನ್ನು ಚರ್ಚಿಸಲು ಮುಂದಾದರು, ಆದರೆ ಫ್ರೆಂಚರು ಕಾರ್ಸಿಕಾ, ನೈಸ್ ಮತ್ತು ಸವೋಯ್ಗಳ ಬಗ್ಗೆ ಚರ್ಚಿಸಲು ಸಿದ್ಧರಿಲ್ಲದ ಕಾರಣ ಮುಸೊಲಿನಿ ಪ್ರತ್ಯುತ್ತರ ನೀಡಲಿಲ್ಲ.[೫೪]

So long as the Duce lives, one can rest assured that Italy will seize every opportunity to achieve its imperialistic aims.

Adolf Hitler, late November 1939[೫೪]

 
ಮೇ 13, 1940ರಂದು ಹೊರಬಂದ ನ್ಯೂಸ್‌ವೀಕ್‌ನ ಮ್ಯಾಗಜೀನ್ ಆವೃತ್ತಿಯ ರಕ್ಷಾಪುಟ ಶೀರ್ಷಿಕೆ: "ಇಲ್ ಡೂಚೆ: ಮೆಡಿಟರೇನಿಯನ್‌ನ ಮುಖ್ಯ ವ್ಯಕ್ತಿ".

ಯುದ್ಧವು ಬಲುಬೇಗನೆ ಮುಗಿದುಹೋಗುವುದೆಂದು ಭಾವಿಸಿದ ಮುಸೊಲಿನಿ, ಆ ಹೊತ್ತಿಗೆ ಜರ್ಮನಿಯು ಜಯಶಾಲಿಯಾಗುವುದು ಖಚಿತವೆಂಬಂತೆ ಕಂಡು ಬರುತ್ತಿದ್ದುದರಿಂದ ಆಕ್ಸಿಸ್ ಕಡೆಯಿಂದ ಯುದ್ಧದಲ್ಲಿ ಭಾಗವಹಿಸಲು ನಿಶ್ಚಯಿಸಿದನು. ಇದಕ್ಕೆ ತಕ್ಕನಾಗಿ ಇಟಲಿಯು 10 ಜೂನ್ 1940ರಂದು ಬ್ರಿಟನ್ ಮತ್ತು ಫ್ರಾನ್ಸ್‌ಗಳ ಮೇಲೆ ಯುದ್ಧ ಘೋಷಿಸಿತು.[೫೫] ಬ್ಯಾಟ್‌ಲ್ ಆಫ್ ಫ್ರಾನ್ಸ್ನಲ್ಲಿ ಜರ್ಮನಿಯೊಂದಿಗೆ ಸೇರಿದ ಇಟಲಿಯು ಗಡಿರೇಖೆಯ ಭದ್ರಪಡಿಸಲಾದ ಅಲ್ಪೈನ್ ರೇಖೆಯುದ್ದಕ್ಕು ಹೋರಾಟ ನಡೆಸತೊಡಗಿತು. ಕೇವಲ ಹನ್ನೊಂದು ದಿನಗಳ ನಂತರ, ಫ್ರ್ಯಾನ್ಸ್ ಆಕ್ಸಿಸ್ ಶಕ್ತಿಗಳಿಗೆ ಸೋತು ಶರಣಾಯಿತು. ಇಟಾಲಿಯನ್ ನಿಯಂತ್ರಣದ ಫ್ರ್ಯಾನ್ಸ್ನಲ್ಲಿ ನೈಸ್ನ ಹೆಚ್ಚಿನ ಭಾಗ ಮತ್ತು ಇತರ ಆಗ್ನೇಯ ರಾಷ್ಟ್ರಗಳಿದ್ದವು.[೫೫] ಇದೇ ವೇಳೆಗೆ ಆಫ್ರಿಕಾದಲ್ಲಿ ಮುಸೊಲಿನಿಯ ಇಟಾಲಿಯನ್ ಈಸ್ಟ್ ಆಫ್ರಿಕಾದ ಪಡೆಗಳು ಬ್ರಿಟೀಶರ ಮೇಲೆ ಅವರ ಸುಡಾನ್, ಕೀನ್ಯಾ ಮತ್ತು ಬ್ರಿಟಿಶ್ ಸೊಮಾಲಿ‌ಲ್ಯಾಂಡ್ ವಸಾಹತುಗಳಲ್ಲಿ ದಾಳಿ ಮಾಡಿದವು ಮತ್ತು ಮುಂದೆ ಇದನ್ನು ಈಸ್ಟ್ ಆಫ್ರಿಕನ್ ಕ್ಯಾಂಪೇನ್ ಎಂದು ಕರೆಯಲಾಯಿತು.[೫೬] 3 ಆಗಸ್ಟ್ 1940ರಂದು ಬ್ರಿಟಿಶ್ ಸೊಮಾಲಿಲ್ಯಾಂಡ್ ಅನ್ನು ಮಣಿಸಲಾಯಿತು ಮತ್ತು ಇಟಾಲಿಯನ್ ಈಸ್ಟ್ ಆಫ್ರಿಕಾದ ಭಾಗವಾಯಿತು. ಸುಡಾನ್ ಮತ್ತು ಕೀನ್ಯಾಗಳಲ್ಲಿಯೂ ಕೂಡ ಇಟಲಿ ಮುನ್ನುಗ್ಗಿತು.[೫೭]

ಕೇವಲ ಒಂದು ತಿಂಗಳ ನಂತರ ಜನರಲ್ ರೊಡೋಲ್ಫೋ ಗ್ರಾಜಿಯಾನಿಯ ನೇತೃತ್ವದಲ್ಲಿ ಇಟಾಲಿಯನ್ ಟೆಂತ್ ಆರ್ಮಿಯು ಇಟಾಲಿಯನ್ ಲಿಬಿಯಾ ಮೂಲಕ ಬ್ರಿಟಿಶ್ ಪಡೆಗಳಿದ್ದ ಈಜಿಪ್ಟ್ ಅನ್ನು ತಲುಪಿತು; ಇದನ್ನು ವೆಸ್ಟರ್ನ್ ಡೆಸರ್ಟ್ ಕ್ಯಾಂಪೇನ್ ಎಂದು ಕರೆಯಲಾಯಿತು. ಈ ಮುನ್ನಡೆಗಳು ಯಶಸ್ವಿಯಾದವು, ಆದರೆ ಇಟಾಲಿಯನ್ನರು ಸಿದಿ ಬರ್ರಾನಿಯಲ್ಲ್ಲಿ ಸೇನಾ ಸರಬರಾಜುಗಳಿಗಾಗಿ ಕಾಯಲು ನಿಲುಗಡೆ ಮಾಡಿದರು. 25 ಅಕ್ಟೋಬರ್ 1940ರಮ್ದು ಮುಸೊಲಿನಿ ಇಟಾಲಿಯನ್ ಏರ್ ಕಾರ್ಪ್ಸ್ ಅನ್ನು ಬೆಲ್ಜಿಯಮ್‌ಗೆ ಕಳುಹಿಸಿದನು ಮತ್ತು ಈ ವಾಯುದಳವು ಎರಡು ತಿಂಗಳುಗಳ ಕಾಲ ಬ್ಯಾಟ್‌ಲ್ ಆಫ್ ಬ್ರಿಟನ್‌ನಲ್ಲಿ ಭಾಗವಹಿಸಿತು.[೫೮] ಅಕ್ಟೋಬರ್‌ನಲ್ಲಿ ಮುಸೊಲಿನಿ ಇಟಾಲಿಯನ್ ಪಡೆಗಳನ್ನು ಗ್ರೀಸ್ಗೆ ಕೂಡಾ ಕಳುಹಿಸಿ ಗ್ರೆಕೋ-ಇಟಾಲಿಯನ್ ಯುದ್ಧವನ್ನು ಆರಂಭಿಸಿದನು. ಆರಂಭದ ಯಶಸ್ಸು ದೊರಕಿತಾದರೂ ಇದು ಹಿಂದೇಟು ಹೊಡೆಯಿತು, ಏಕೆಂದರೆ ಗ್ರೀಕ್ ಪ್ರತಿದಾಳಿಯು ತನ್ನ ಪಟ್ಟನ್ನು ಸಡಿಲಿಸಲಿಲ್ಲ ಮತ್ತು ಇದರಿಂದ ಇಟಲಿ ಅಲ್ಬೇನಿಯಾದ ನಾಲ್ಕನೇ ಒಂದು ಭಾಗವನ್ನು ಕಳೆದುಕೊಳ್ಳುವಂತಾಯಿತು. ಕೆಲಸಮಯದಲ್ಲೇ ಜರ್ಮನಿಯು ಒಂದೆಡೆ ಸೇರುತ್ತಿದ್ದ ಮೈತ್ರಿಕೂಟಗಳನ್ನು ಎದುರಿಸಲು ತನ್ನ ಬಲಗಳನ್ನೆಲ್ಲ ಬಾಲ್ಕನ್ಸ್ಗೆ ಕಳುಹಿಸಿತು.[೫೯]

1941ರಷ್ಟರ ಹೊತ್ತಿಗೇ ಆಫ್ರಿಕಾದ ಘಟನೆಗಳಲ್ಲಿ ಬದಲಾವಣೆಗಳುಂಟಾಗಿದ್ದವು. ಆಪರೇಶನ್ ಕಾಂಪಾಸ್ನಿಂದಾಗಿ ಇಟಾಲಿಯನ್ನರು ಲಿಬಿಯಾಗೆ ಹಿಂದೆಗೆಯಬೇಕಾಗಿ ಬಂದು ಇಟಾಲಿಯನ್ ಸೇನೆಗೆ ಅಪಾರ ನಷ್ಟಗಳುಂಟಾಗಿದ್ದವು.[೬೦] ಈಸ್ಟ್ ಆಫ್ರಿಕನ್ ಕ್ಯಾಂಪೇನ್ನಲ್ಲಿ ಕೂಡಾ ಇಟಲಿಯ ವಿರುದ್ಧ ದಾಳಿಗಳನ್ನು ಆರಂಭಿಸಲಾಯಿತು. ಬ್ಯಾಟ್‌ಲ್ ಆಫ್ ಕೆರೆನ್ನಲ್ಲಿ ಪ್ರತಿರೋಧವನ್ನು ತೋರಿದರು ಕೂಡ ಅವರು ಸೋಲಬೇಕಾಯಿತು ಮತ್ತು ಬ್ಯಾಟ್‌ಲ್ ಆಫ್ ಗೊಂಡರ್ನ ಸೋಲಿನ ನಂತರ ಇಟಾಲಿಯನ್ ಭದ್ರತಾವ್ಯವಸ್ಥೆ ಕುಸಿಯಲು ಆರಂಭಿಸಿತು. ಈ ಘಟನೆಗಳ ಬಗ್ಗೆ ಇಟಾಲಿಯನ್ ಜನತೆಗೆ ತಿಳಿಸುವಾಗ ಆತನು ಏನನ್ನೂ ಮುಚ್ಚಿಡದೆ, "ನಾವು ರೊಟ್ಟಿಯನ್ನು ರೊಟ್ಟಿಯೆಂದೇ ವೈನ್ ಅನ್ನು ವೈನ್ ಎಂದೇ ಕರೆಯುವವರು, ವಿರೋಧಿಯು ರಣರಂಗದಲ್ಲಿ ಗೆದ್ದಾಗ ಇಂಗ್ಲೀಷರ ಹೋಲಿಸಲಾಗದ ಬೂಟಾಟಿಕೆಯಂತೆ ಅದನ್ನು ನಿರಾಕರಿಸುವುದು ಅಥವಾ ತಗ್ಗಿಸಿ ಹೇಳುವುದು ನಿರರ್ಥಕ ಮತ್ತು ಹಾಸ್ಯಾಸ್ಪದ."[೬೧] ಈ ಮಾತುಗಳನ್ನು ಆತನು ಇಟಾಲಿಯನ್ನರು ಆಫ್ರಿಕಾದಲ್ಲಿ ಮೊದಲು ಗಳಿಸಿದ ಯಶಸ್ಸು ಮತ್ತು ನಂತರ ಮೈತ್ರಿಕೂಟದಿಂದ ಅನುಭವಿಸಿದ ಸೋಲಿನ ಬಗ್ಗೆ ಹೇಳಿದನು. ಉತ್ತರ ಆಫ್ರಿಕಾದ ಎಲ್ಲಾ ಇಟಾಲಿಯನ್ ಸ್ವತ್ತುಗಳ ನಿಯಂತ್ರಣವನ್ನು ಕಳೆದುಕೊಳ್ಳುವ ಅಪಾಯ ಒದಗಿದ್ದರಿಂದ ಜರ್ಮನಿಯು ಕೊನೆಗೂ ಇಟಲಿಗೆ ನೆರವು ನೀಡಲು ಆಫ್ರಿಕಾ ಕಾರ್ಪ್ಸ್ ಅನ್ನು ಕಳುಹಿಸಿತು. ಇದೇ ಹೊತ್ತಿಗೆ ಯುಗೋಸ್ಲಾವಿಯಾದಲ್ಲಿ ಗ್ರೆಕೋ ಇಟಾಲಿಯನ್ ಯುದ್ಧವನ್ನು ಕೊನೆಗೊಳಿಸಲು ನಡೆಸಲಾದ ಆಪರೇಶನ್ ಮೆರಿಟಾದಲ್ಲಿ ಆಕ್ಸಿಸ್‌ಗೆ ವಿಜಯ ದೊರೆತು ಇದರಿಂದಾಗಿ ಇಟಲಿ ಮತ್ತು ಜರ್ಮನಿಗಳು ಗ್ರೀಸ್ ಅನ್ನು ಸ್ವಾಧೀನಪಡಿಸಿಕೊಂಡವು.[೬೨] ಸೋವಿಯೆತ್ ಒಕ್ಕೂಟದ ಮೇಲೆ ಆಕ್ಸಿಸ್ ದಾಳಿಯ ನಂತರ ಮುಸೊಲಿನಿ ಸೋವಿಯೆತ್ ಒಕ್ಕೂಟದ ಮೇಲೆ ಜೂನ್ 1941ರಲ್ಲ್ಲಿಯುದ್ಧವನ್ನು ಸಾರಿದನು ಮತ್ತು ಅಲ್ಲಿ ಯುದ್ಧ ಮಾಡಲು ಒಂದು ಸೈನ್ಯವನ್ನು ಕಳುಹಿಸಿದನು. ಜಪಾನೀಯರು ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿದ ನಂತರ ಆತನು ಯುನೈಟೆಡ್ ಸ್ಟೇಟ್ಸ್ ಮೇಲೆ ಯುದ್ಧವನ್ನು ಸಾರಿದನು.[೫೯]

ಪದಚ್ಯುತಿ ಮತ್ತು ಬಂಧನ

ಬದಲಾಯಿಸಿ
ಚಿತ್ರ:Pbadoglio.jpg
ಮುಸೊಲಿನಿಯ ನಂತರ ಮಾರ್ಷಲ್ ಪಿಯೆತ್ರೊ ಬ್ಯಾಡೊಗ್ಲಿಯೋ ಪ್ರಧಾನಮಂತ್ರಿಯ ಸ್ಥಾನಕ್ಕೆ ಬಂದರು.

ಇಟಲಿಯ ಪರಿಸ್ಥಿತಿಯು ಹೆಚ್ಚುಹೆಚ್ಚು ಅಸಮರ್ಥನೀಯವಾಗುತ್ತಾ ಬಂದಿತು. 1942ರ ಎಲ್ ಅಮೀನ್ನ ಸೋಲಿನ ನಂತರ ಆಕ್ಸಿಸ್ ತುಕಡಿಗಳು ಹಿಮ್ಮೆಟ್ಟುತ್ತ ಹೋದ ಕಡೆಯಲ್ಲಿಯೇ 1943ರ ವಸಂತಕಾಲದಲ್ಲಿ ಟ್ಯುನೀಶಿಯಾ ಕ್ಯಾಂಪೇನ್ನಲ್ಲಿ ಕಟ್ಟಕಡೆಯದಾಗಿ ಸೋಲನ್ನನುಭವಿಸಬೇಕಾಗಿ ಬಂದಿತು. ಜತೆಗೇ ಪೂರ್ವ ಯುದ್ಧಭೂಮಿಯಲ್ಲಿ ಹಲವಾರು ಗಂಭೀರವಾದ ಹಿನ್ನಡೆಗಳುಂಟಾದುದಲ್ಲದೆ ಸಿಸಿಲಿಯ ಮೇಲೆ ಮೈತ್ರಿಪಕ್ಷಗಳ ದಾಳಿಯೊಂದಿಗೆ ಯುದ್ಧವು ರಾಷ್ಟ್ರದ ಬಾಗಿಲಿಗೇ ಬಂದು ನಿಲ್ಲುವಂತಾಗಿತ್ತು.[೬೩] ಮೈತ್ರಿಪಕ್ಷದ ಬಾಂಬ್ ಸುರಿಮಳೆಯಿಂದ ಉಂಟಾಗುತ್ತಿದ್ದ ನಷ್ಟದಿಂದಾಗಿ ಸ್ವದೇಶೀ ಯುದ್ಧಭೂಮಿಯ ಪರಿಸ್ಥಿತಿಯೂ ಬಿಗಡಾಯಿಸಿತ್ತು. ಕಚ್ಚಾವಸ್ತುಗಳ, ಕಲ್ಲಿದ್ದಿಲು ಮತ್ತು ತೈಲದ ಕೊರತೆಯಿಂದಾಗಿ ಫ್ಯಾಕ್ಟರಿಗಳು ಹೆಚ್ಚೂಕಡಿಮೆ ನಿಂತುಹೋಗುವ ಪರಿಸ್ಥಿತಿಯನ್ನು ತಲುಪಿದ್ದವು. ಜತೆಗೇ ಆಹಾರ ದ ಕೊರತೆಯು ತೀವ್ರವಾಗಿತ್ತು ಮತ್ತು ಲಭ್ಯವಿರುವ ಎಲ್ಲಾ ಆಹಾರಸಾಮಗ್ರಿಗಳನ್ನು ಅತಿ ಹೆಚ್ಚು ಬೆಲೆಗೆ ಮಾರಲಾಗುತ್ತಿತ್ತು. ಒಂದೊಮ್ಮೆ ಎಲ್ಲೆಡೆ ಹರಡಿದ್ದ ಮುಸೊಲಿನಿಯ ಪ್ರಚಾರಯಂತ್ರದ ಪ್ರಭಾವವು ಜನರ ಮೇಲೆ ಆಗುತ್ತಿರಲಿಲ್ಲ; ಹೆಚ್ಚಿನ ಇಟಾಲಿಯನ್ನರು ಖಚಿತವಾದ ಸುದ್ದಿಗಾಗಿ ವ್ಯಾಟಿಕನ್ ರೇಡಿಯೋ ಇಲ್ಲವೇ ರೇಡಿಯೋ ಲಂಡನ್ ಅನ್ನು ಕೇಳತೊಡಗಿದ್ದರು. ಎಲ್ಲೆಡೆ ವ್ಯಾಪಕವಾಗಿದ್ದ ಅತೃಪ್ತಿಯು ಭುಗಿಲೆದ್ದು 1925ರ ನಂತರ ಮೊದಲ ಬಾರಿಗೆ ಇಂಡಸ್ಟ್ರಿಯಲ್ ನಾರ್ತ್‌ನಲ್ಲಿ ಬೃಹತ್ ಮಟ್ಟದ ಮುಷ್ಕರಗಳ ಅಲೆಗಳು ಏಳಲಾರಂಭಿಸಿದವು.[೬೪] ಜತೆಗೇ ಮಾರ್ಚಿನಲ್ಲಿ ಮಿಲಾನ್ ಮತ್ತು ಟ್ಯುರಿನ್ನ ಕೆಲವು ಮುಖ್ಯ ಫ್ಯಾಕ್ಟರಿಗಳು ತಮ್ಮ ಕೆಲಸಗಾರರ ಕುಟುಂಬಗಳಿಗೆ ಸ್ಥಳಾಂತರಣಾ ಭತ್ಯೆಯ ಬಂದೋಬಸ್ತು ಮಾಡುವ ಸಲುವಾಗಿ ಉತ್ಪಾದನೆಯನ್ನು ನಿಲ್ಲಿಸಿದವು. ಇಟಲಿಯಲ್ಲಿ ಜರ್ಮನಿಯ ಉಪಸ್ಥಿತಿಯು ಜನಮತವನ್ನು ಮುಸೊಲಿನಿಯ ವಿರುದ್ಧ ಮಾಡಿಬಿಟ್ಟಿತ್ತು; ಉದಾಹರಣೆಗೆ ಮೈತ್ರಿಕೂಟದವರು ಸಿಸಿಲಿಯನ್ನು ಆಕ್ರಮಿಸಿಕೊಂಡಾಗ ಜನರು ಅವರನ್ನು ವಿಮೋಚಕರನ್ನು ಸ್ವಾಗತಿಸುವ ರೀತಿಯಲ್ಲಿ ಎದುರುಗೊಂಡರು.[೬೫]

ಇದಕ್ಕೂ ಹಿಂದೆ ಮುಸೊಲಿನಿ ಹಿಟ್ಲರನಿಗೆ ಸ್ಟಾಲಿನ್‌ನೊಂದಿಗೆ ಪ್ರತ್ಯೇಕವಾಗಿ ಶಾಂತಿಸಂಧಾನವನ್ನು ಮಾಡಿಕೊಂಡು ಮೈತ್ರಿಕೂಟದ ದಾಳಿಯ ನಿರೀಕ್ಷೆಯಿದ್ದುದರಿಂದ ಜರ್ಮನಿಯ ಸೇನಾಪಡೆಯನ್ನು ಇಟಲಿಗೆ ಕಳಿಸುವಂತೆ ಮನವಿ ಮಾಡಿಕೊಂಡಿದ್ದನು. ಆತನ ಕಳಕಳಿಗೆ ಟ್ಯುನೀಶಿಯಾ ಮತ್ತು ಉತ್ತರ ಆಫ್ರಿಕಾಗಳನ್ನು ಕಳೆದುಕೊಂಡ ನಂತರ ಡ್ವೈಟ್ ಐಸೆನ್‍ಹಾವರ್ನ ಸೇನಾಪಡೆಗಳ ಮುಂದಿನ ತರ್ಕಬದ್ಧ ಹೆಜ್ಜೆಯು ಮೆಡಿಟರೇನಿಯನ್ ಅನ್ನು ದಾಟಿಬಂದು ಪರ್ಯಾಯದ್ವೀಪದ ಮೇಲೆ ದಾಳಿ ಮಾಡುವುದೆಂಬ ವಿಚಾರವು ಕಾರಣವಾಗಿತ್ತು. ಸಿಸಿಲಿಯನ್ನು ಮೈತ್ರಿಕೂಟವು ಆಕ್ರಮಿಸಿಕೊಂಡ ಕೆಲವೇ ದಿನಗಳಲ್ಲಿ, ಮುಸೊಲಿನಿಯ ಸೈನ್ಯವು ಕುಸಿದುಬೀಳುವ ಪರಿಸ್ಥಿತಿಯಲ್ಲಿರುವುದು ಸ್ಪಷ್ಟವಾಯಿತು. ಇದರಿಂದ ಹಿಟ್ಲರ್ ಮುಸೊಲಿನಿಯನ್ನು 19 ಜುಲೈಗೆ ಉತ್ತರ ಇಟಲಿಯಲ್ಲಿ ಭೇಟಿಯಾಗಲು ಕರೆಕಳುಹಿಸುವಂತಾಯಿತು. ಈ ಹೊತ್ತಿಗೆ ಮುಸೊಲಿನಿ ಎಷ್ಟು ಆಘಾತಗೊಂಡಿದ್ದನೆಂದರೆ ಆತ ಹಿಟ್ಲರನ ಬಡಾಯಿಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅದೇ ದಿನ ಮಿತ್ರಪಕ್ಷಗಳವರು ರೋಮ್‌ನ ಮೇಲೆ ಮೊದಲ ಬಾರಿಗೆ ಬಾಂಬ್ ಹಾಕಿದ್ದು ಆತನ ಮನಸ್ಥಿತಿ ಇನ್ನೂ ಹೆಚ್ಚು ಕೆಡಲು ಕಾರಣವಾಯಿತು.[೬೬]

ಇಟಾಲಿಯನ್ ಫ್ಯಾಸಿಸ್ಟ್ ಸರ್ಕಾರದ ಕೆಲವು ಪ್ರಮುಖ ಸದಸ್ಯರು ಈ ಹೊತ್ತಿಗೆ ಮುಸೊಲಿನಿಯ ವಿರುದ್ಧವಾಗಿಬಿಟ್ಟಿದ್ದರು. ಅವರಲ್ಲಿ ಗ್ರಾಂಡಿ ಮತ್ತು ಮುಸೊಲಿನಿಯ ಅಳಿಯ ಗ್ಯಾಲಿಯಾಜ್ಜೊ ಚಿಯಾನೊ ಇದ್ದರು. ತನ್ನ ಹಲವಾರು ಸಹೋದ್ಯೋಗಿಗಳು ಬಂಡೇಳುವುದಕ್ಕೆ ಹತ್ತಿರವಾಗಿದ್ದರಿಂದ ಇಲ್ ಡೂಶೆ ಯು ಬಲವಂತವಾಗಿ ಜುಲೈ 24ರಂದು ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್ನ ಸಭೆಯನ್ನು ಕರೆಯಬೇಕಾಯಿತು: ಇದು ಯುದ್ಧ ಆರಂಭವಾದ ಮೇಲೆ ಈ ಸಂಸ್ಥೆಯು ಸೇರಿದ ಮೊದಲ ಸಭೆಯಾಗಿದ್ದಿತು. ಜರ್ಮನರು ದಕ್ಷಿಣದಿಂದ ನಿರ್ಗಮಿಸುವ ಬಗ್ಗೆ ಆಲೋಚಿಸುತ್ತಿದ್ದಾರೆಂದು ಆತ ಘೋಷಿಸಿದಾಗ ಗ್ರಾಂಡಿ ಆತನ ಮೇಲೆ ವಾಗ್ದಾಲಿಯನ್ನು ನಡೆಸಿದನು.[೬೩] ಮಸೂದೆಯೊಂದನ್ನು ಮಂಡಿಸಿದ ಗ್ರಾಂಡಿ ಮಹಾರಾಜನನ್ನು ಆತನ ಸಂವಿಧಾನಾತ್ಮಕ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಂಡು ಮುಸೊಲಿನಿಯ ಬಗ್ಗೆ ಅವಿಶ್ವಾಸ ಮತನಿರ್ಣಯವನ್ನು ಜಾರಿಗೊಳಿಸಲು ಮನವಿ ಮಾಡಿದನು. ಈ ಮಸೂದೆಯು 19–7ರ ಅಂತರದಿಂದ ಅನುಮೋದಿಸಲ್ಪಟ್ಟಿತು. ಈ ತೀವ್ರವಾದ ಆಕ್ಷೇಪಣೆಯ ಹೊರತಾಗಿಯೂ ಮುಸೊಲಿನಿ ಮರುದಿನ ಎಂದಿನಂತೆ ಕೆಲಸಕ್ಕೆ ಮರಳಿದನು. ಊಹೆಯ ಪ್ರಕಾರ ಆತ ಗ್ರ್ಯಾಂಡ್ ಕೌನ್ಸಿಲ್ ಅನ್ನು ಕೇವಲ ಒಂದು ಸಲಹೆಗಾರ ಅಂಗವಾಗಿ ಕಾಣುತ್ತಿದ್ದನು ಮತ್ತು ಈ ಮತನಿರ್ಣಯವು ಯಾವುದೇ ಪ್ರಮುಖವಾದ ಪರಿಣಾಮವನ್ನು ಬೀರುವುದೆಂದು ಆತ ಭಾವಿಸಿರಲಿಲ್ಲ.[೬೪] ಅಂದು ಮಧ್ಯಾಹ್ನ ಆತನಿಗೆ ಈ ಹಿಂದೆಯೇ ಆತನನ್ನು ಪದಚ್ಯುತಗೊಳಿಸಲು ತೀರ್ಮಾನಿಸಿದ್ದ ರಾಜ ವಿಕ್ಟರ್ ಎಮ್ಯಾನುಯೆಲ್ IIIನಿಂದ ಅರಮನೆಗೆ ಬರುವಂತೆ ಕರೆಬಂದಿತು. ಮುಸೊಲಿನಿಯು ಮಹಾರಾಜನಿಗೆ ಸಭೆಯ ಬಗ್ಗೆ ಹೇಳಲು ಪ್ರಯತ್ನಿಸುತ್ತಿರುವಂತೆಯೇ ಆತನನ್ನು ತಡೆದ ವಿಕ್ಟರ್ ಎಮ್ಯಾನುಯೆಲ್ ಮುಸೊಲಿನಿಗೆ ಆತನನ್ನು ಪದಚ್ಯುತಗೊಳಿಸಲಾಗುತ್ತಿದೆಯೆಂದೂ, ಆತನ ಸ್ಥಾನಕ್ಕೆ ಮಾರ್ಷಲ್ ಪಿಯೆತ್ರೋ ಬ್ಯಾಡೋಗ್ಲಿಯೋನನ್ನು ನಿಯುಕ್ತಗೊಳಿಸಲಾಗುತ್ತಿದೆಯೆಂದೂ ತಿಳಿಸಿದನು.[೬೪] ಮುಸೊಲಿನಿ ಅರಮನೆಯಿಂದ ತೆರಳಿದ ನಂತರ ರಾಜನ ಆದೇಶದಂತೆ ಆತನನ್ನು ಕ್ಯಾರಾಬಿನಿಯರಿಗಳು ಬಂಧಿಸಿದರು.[೬೭]

 
ಸೆಪ್ಟೆಂಬರ್ 12, 1943ರಂದು ಕ್ಯಾಂಪೋ ಇಂಪೆರಾತೋರ್‌ನಿಂದ ಜರ್ಮನ್ ಸೈನಿಕರ ಮೂಲಕ ರಕ್ಷಿಸಲ್ಪಟ್ಟ ಮುಸೊಲಿನಿ.

ಈ ಹೊತ್ತಿಗೆ ಮುಸೊಲಿನಿಯ ಬಗೆಗಿನ ಅಸಹನೆ ಯಾವ ಹಂತವನ್ನು ಮುಟ್ಟಿತ್ತೆಂದರೆ, ಆತ ಪದಚ್ಯುತನಾದ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಿದಾಗ್ಯೂ ಯಾವುದೇ ಪ್ರತಿರೋಧ ಕಂಡುಬರಲಿಲ್ಲ.[೬೪] ಆತನನ್ನು ಅಬ್ರುಜ್ಜೋಕ್ಯಾಂಪೋ ಇಂಪೆರಟೋರ್ ಎಂಬ ಗಿರಿಧಾಮಕ್ಕೆ ಕಳುಹಿಸಿ ಸಂಪೂರ್ಣ ಏಕಾಂತದಲ್ಲಿಡುವುದಕ್ಕೆ ಮೊದಲು ಜರ್ಮನರಿಗೆ ಆತನಿರುವ ಸ್ಥಾನ ತಿಳಿಯಬಾರದೆಂದು ಮುಸೊಲಿನಿಯನ್ನು ಹಲವಾರು ಕಡೆಗೆ ವರ್ಗಾಯಿಸಲಾಯಿತು.[೬೩] ಇಟಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ನಾಜೀಗಳು ನಾಗರಿಕರಿಗೆ ತೊಂದರೆಯನ್ನುಂಟುಮಾಡಬಾರದೆಂದು ಬ್ಯಾಡೋಗ್ಲಿಯೋ "ಯುದ್ಧವು ನಮ್ಮ ಜರ್ಮನ್ ಮೈತ್ರಿಯ ಪಕ್ಷದಲ್ಲಿಯೇ ಮುಂದುವರೆಯುವುದು" ಎಂದು ಘೋಷಿಸಿದನು.[೬೩] ಆಕ್ಸಿಸ್‌ಗೆ ನಿಷ್ಠೆಯನ್ನು ವ್ಯಕ್ತಪಡಿಸುವ ತೋರಿಕೆಯನ್ನು ವ್ಯಕ್ತಪಡಿಸುತ್ತಲೇ ಬ್ಯಾಡೋಗ್ಲಿಯೋ ಅಧಿಕಾರಕ್ಕೆ ಬಂದ ಎರಡು ದಿನಗಳಲ್ಲಿಯೇ ಫ್ಯಾಸಿಸ್ಟ್ ಪಕ್ಷವನ್ನು ವಿಸರ್ಜಿಸಿದನು. ಜತೆಗೇ ಆತನ ಸರ್ಕಾರವು ಮಿತ್ರಪಕ್ಷದೊಂದಿಗೆ ಯುದ್ಧವಿರಾಮದ ಮಾತುಕತೆಯನ್ನು ನಡೆಸತೊಡಗಿದ್ದನು ಮತ್ತು ಇದಕ್ಕೆ 3 ಸೆಪ್ಟೆಂಬರ್ 1943ರಂದು ಸಹಿ ಹಾಕಲಾಯಿತು. ಇದನ್ನು ಘೋಷಿಸಿದಾಗ ಇಟಲಿಯಲ್ಲಿ ಹಾಹಾಕಾರವೆದ್ದು ಅಂತರ್ಯುದ್ಧದ ಪರಿಸ್ಥಿತಿ ನಿರ್ಮಾಣವಾಯಿತು. ಬ್ಯಾಡೋಗ್ಲಿಯೋ ಮತ್ತು ರಾಜ ರೋಮ್‌ನಿಂದ ಪಲಾಯನ ಮಾಡಿದರು ಮತ್ತು ಇಟಾಲಿಯನ್ ಸೇನೆಗೆ ಆದೇಶ ನೀಡುವವರಿಲ್ಲದಂತಾಯಿತು. ಅರಾಜಕತೆಯ ಈ ಅವಧಿಯ ನಂತರ ಇಟಲಿ ಕಟ್ಟಕಡೆಯದಾಗಿ 13 ಅಕ್ಟೋಬರ್‌ನಂದು ಮಾಲ್ಟಾದಿಂದ ನಾಜೀ ಜರ್ಮನಿಯ ಮೇಲೆ ಯುದ್ಧಘೋಷಣೆ ಮಾಡಿತು; ಸಾವಿರಾರು ಸಂಖ್ಯೆಯಲ್ಲಿ ಸೈನಿಕರನ್ನು ಜರ್ಮನಿಯ ವಿರುದ್ಧ ಹೋರಾಡಲು ಕಳುಹಿಸಲಾಯಿತು, ಇನ್ನುಳಿದವರು ಪಕ್ಷ ಬದಲಾಯಿಸಲು ನಿರಾಕರಿಸಿ ಜರ್ಮನ್ ಪಕ್ಷಕ್ಕೆ ಸೇರಿಕೊಂಡರು. ಬ್ಯಾಡೋಗ್ಲಿಯೋ ಸರ್ಕಾರವು ಬಲಪಂಥೀಯ ಪಾರ್ಟಿಸಾನ್ಗಳೊಂದಿಗೆ ಇಟಲಿಗಾಗಿ ಮತ್ತು ಇಟಲಿಯನ್ನು ನಾಜೀಗಳಿಂದ ಮುಕ್ತಗೊಳಿಸುವುದಕ್ಕಾಗಿ ಸಾಮಾಜಿಕ ಒಡಂಬಡಿಕೆಯೊಂದನ್ನು ಮಾಡಿಕೊಂಡಿತು.[೬೩]

ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್

ಬದಲಾಯಿಸಿ

ಇದೇ ಹೊತ್ತಿಗೆ, 12 ಸೆಪ್ಟೆಂಬರ್ 1943ರಂದು, ಮುಸೊಲಿನಿಯು ಪದಚ್ಯುತನಾಗಿ ಬಂಧಿಸಲ್ಪಟ್ಟ ಎರಡೇ ತಿಂಗಳುಗಳ ನಂತರ ಆತನನ್ನು ಗ್ರ್ಯಾನ್ ಸ್ಯಾಸ್ಸೋ ರೈಡ್ನ ಸೆರೆಮನೆಯಿಂದ ವಿಶೇಷವಾದ Fallschirmjäger ಪಡೆಯು ಆತನನ್ನು ಪಾರುಮಾಡಿತು; ಅಲ್ಲಿ ಓಟ್ಟೊ ಸ್ಕೋರ್ಜೆನಿ ಕೂಡ ಇದ್ದನು.[೬೭] ಇದರಿಂದಾಗಿ ಯುದ್ಧವಿರಾಮ ಸಂಧಿಯಂತೆ ಮುಸೊಲಿನಿಯು ಮಿತ್ರಪಕ್ಷಗಳಿಗೆ ಒಪ್ಪಿಸಲ್ಪಡುವುದರಿಂದ ಪಾರಾದಂತಾಯಿತು.[೬೩] ಮುಸೊಲಿನಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಹಿಟ್ಲರ್ ಮಹಾರಾಜ,ರಾಜಕುಮಾರ ಉಂಬರ್ಟೊ ಬ್ಯಾಡೋಗ್ಲಿಯೋ ಮತ್ತು ಇನ್ನಿತರ ಸರ್ಕಾರೀ ಜನರನ್ನು ಸೆರೆಹಿಡಿಯುವ ಯೋಜನೆಯನ್ನು ಮಾಡಿದನಾದರೂ ಸರ್ಕಾರವು ದಕ್ಷಿಣದೆಡೆಗೆ ಧಾವಿಸಿ ಪಾರಾಗಿದ್ದರಿಂದ ಈ ಯೋಜನೆಗಳು ಸಫಲವಾಗಲಿಲ್ಲ.[೬೬]

 
ಹದಿಹರೆಯದ ಸೈನಿಕರನ್ನು ಪರಾಮರ್ಶಿಸುತ್ತಿರುವ ಬೆನಿಟೊ ಮುಸೊಲಿನಿ, 1944

ಈ ಹೊತ್ತಿಗೆ ಮುಸೊಲಿನಿಯ ಆರೋಗ್ಯವು ಕ್ಷೀಣಿಸಿತ್ತು ಮತ್ತು ಆತನು ನಿವೃತ್ತಿ ಬಯಸುತ್ತಿದ್ದನು. ಆದರೆ, ಆತನನ್ನು ಕೂಡಲೇ ಜರ್ಮನಿಗೆ ಹಿಟ್ಲರನೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಆತನ ಪೂರ್ವ ಪ್ರಶಿಯಾದ ಅಡಗುದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಹಿಟ್ಲರ್ ಆತನಿಗೆ ಆತ ಇಟಲಿಗೆ ಹಿಂದಿರುಗಿ ಅಲ್ಲಿ ಫ್ಯಾಸಿಸ್ಟ್ ರಾಜ್ಯವನ್ನು ಮರುಸ್ಥಾಪನೆ ಮಾಡದಿದ್ದಲ್ಲಿ ಜರ್ಮನರು ಮಿಲಾನ್ ಜೆನೋವಾ ಮತ್ತು ಟ್ಯುರಿನ್ ಅನ್ನು ನಾಶ ಮಾಡುವುದಾಗಿ ತಿಳಿಸಿದನು. ನಾಜೀ ದಬ್ಬಾಳಿಕೆಯನ್ನು ತಡೆಗಟ್ಟಲು ತಾನು ಏನಾದರೂ ಮಾಡಬೇಕೆಂದುಕೊಂಡ ಮುಸೊಲಿನಿ ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್[೬೩] ಎಂಬ ಹೊಸ ಆಳ್ವಿಕೆಯ ಘೋಷಣೆಯನ್ನು ಮಾಡಿದನು; ಈ ಆಳ್ವಿಕೆಯನ್ನು Salò ಪಟ್ಟಣದಿಂದ ನಡೆಸಲಾಗುತ್ತಿದ್ದಿದ್ದರಿಂದ ಅದಕ್ಕೆ ಅವಿಧ್ಯುಕ್ತವಾಗಿ ಸ್ಯಾಲೋ ಗಣರಾಜ್ಯ ಎಂಬ ಹೆಸರು ಬಂದಿತು.

ಈ ಅವಧಿಯಲ್ಲಿ ಮುಸೊಲಿನಿ ಲೊಂಬಾರ್ಡಿಲೇಕ್ ಗಾರ್ಡಾದ ಮೇಲಿನ ಗಾರ್ಗ್ನಾನೋದಲ್ಲಿ ವಾಸವಿದ್ದನು, ಆದರೂ ಆತನು ತನ್ನ ಜರ್ಮನ್ ರಕ್ಷಕರ ಸುರಕ್ಷೆಯಲ್ಲಿರುವ, ಅವರ ಉದ್ದೇಶಗಳಿಗನುಸಾರವಾಗಿ ವರ್ತಿಸುವ ಲೊಂಬಾರ್ಡಿಯಗಾಲೀಟರ್ ಅಥವಾ ಕೈಗೊಂಬೆ ಅರಸ ಮಾತ್ರವಾಗಿದ್ದನು.[೬೬] ಹಿಟ್ಲರನ ಒತ್ತಡಕ್ಕೆ ಮಣಿದ ನಂತರ ಸ್ಯಾಲೋ ಗಣರಾಜ್ಯವನ್ನು ಸ್ಥಾಪಿಸಲು ಸಹಕರಿಸಿದ ಕೆಲವು ನಿಷ್ಟಾವಂತ ಫ್ಯಾಸಿಸ್ಟರ ಜತೆಗೆ ಮುಸೊಲಿನಿ ಫ್ಯಾಸಿಸ್ಟ್ ಗ್ರ್ಯಾಂಡ್ ಕೌನ್ಸಿಲ್‌ನ ಕೊನೆಯ ಸಭೆಯಲ್ಲಿ ತನಗೆ ದ್ರೋಹ ಬಗೆಗಿದ್ದ ಕೆಲವು ಫ್ಯಾಸಿಸ್ಟ್ ನಾಯಕರ ಮರಣದಂಡನೆಗಳನ್ನು ಆಯೋಜಿಸಲು ಸಹಾಯ ಮಾಡಿದನು. ಹೀಗೆ ಕೊಲ್ಲಲ್ಪಟ್ಟವರಲ್ಲಿ ಆತನ ಅಳಿಯನಾಗಿದ್ದ ಗ್ಯಾಲಿಯಾಜ್ಜೋ ಚಿಯಾನೋ ಕೂಡ ಒಬ್ಬನಾಗಿದ್ದನು. ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್‌ನ ನೇತಾರನೂ, ವಿದೇಶ ವ್ಯವಹಾರಗಳ ಮಂತ್ರಿಯೂ ಆಗಿದ್ದ ಮುಸೊಲಿನಿ ತನ್ನ ಹೆಚ್ಚಿನ ಸಮಯವನ್ನು ಸ್ವಾನುಭವ ವೃತ್ತಾಂತಗಳನ್ನು ಬರೆಯುವುದರಲ್ಲಿಯೇ ಕಳೆಯುತ್ತಿದ್ದನು. 1928ರ ಆತನ ಜೀವನಚರಿತ್ರೆಯೊಡನೆ, ಈ ಬರಹಗಳನ್ನು ಸೇರಿಸಿ ಮುಂದೆ ಡಾ ಕ್ಯಾಪೋ ಪ್ರೆಸ್ ಮೂಲಕ ಮೈ ರೈಸ್ ಎಂಡ್ ಫಾಲ್. ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು.

Yes, madam, I am finished. My star has fallen. I work and I try, yet know that all is but a farce.... I await the end of the tragedy and -- strangely detached from everything -- I do not feel any more an actor. I feel I am the last of spectators.

—Benito Mussolini, interviewed in 1945 by Madeleine Mollier.[೬೮]

ವೈಯಕ್ತಿಕ ಜೀವನ

ಬದಲಾಯಿಸಿ

ಮುಸೊಲಿನಿ ಮೊದಲ ಬಾರಿ ಐಡಾ ಡಲ್ಸೆರ್ ಎಂಬ ಮಹಿಳೆಯನ್ನು 1914ರಲ್ಲಿ ಟ್ರೆಂಟೋನಲ್ಲಿ ವಿವಾಹವಾಗಿದ್ದರು.[೧೭] ಒಂದು ವರ್ಷದ ನಂತರ ಅವರಿಗೆ ಒಂದು ಗಂಡುಮಗುವಾಯಿತು ಮತ್ತು ಅದಕ್ಕೆ ಅವರು ಬೆನಿಟೊ ಅಲ್ಬಿನೊ ಮುಸೊಲಿನಿ ಎಂದು ನಾಮಕರಣ ಮಾಡಿದರು. ಡಿಸೆಂಬರ್ 1915ರಲ್ಲಿ ಮುಸೊಲಿನಿ 1910ರಿಂದ ತನ್ನ ಪ್ರೇಯಸಿಯಾದ ರೇಶೇಲ್ ಗುಯಿಡಿಯನ್ನು ವಿವಾಹವಾದರು ಮತ್ತು ಇದರ ನಂತರ ಆತನ ರಾಜಕೀಯ ಪ್ರಭಾವ ಏರತೊಡಗಿದಾಗ ಮೊದಲ ಮದುವೆಯ ಬಗೆಗಿನ ಮಾಹಿತಿಯನ್ನು ಗುಪ್ತವಾಗಿರಿಸಲಾಯಿತು ಮತ್ತು ಮೊದಲನೆ ಹೆಂಡತಿ ಮತ್ತು ಮಗನಿಗೆ ನಂತರದ ದಿನಗಳಲ್ಲಿ ಕಿರುಕುಳ ನೀಡಲಾಯಿತು.[೧೭] ರೇಶೇಲ್‌ರಿಂದ ಮುಸೊಲಿನಿಗೆ ಇಬ್ಬಳು ಹೆಣ್ನುಮಕ್ಕಳು, ಎಡ್ಡಾ (1910–1995) ಮತ್ತು ಅನಾ ಮಾರಿಯಾ (ಫೋರ್ಲಿ, ವಿಲ್ಲಾ ಕಾರ್ಪೆನಾ, 3 ಸೆಪ್ಟೆಂಬರ್ 1929 - ರೋಮ್, 25 ಏಪ್ರಿಲ್ 1968), ಮದುವೆ ರಾವೆನ್ನಾದಲ್ಲಿ ಜೂನ್ 11 1960 ನ್ಯಾಂಡೋ ಪುಚ್ಚಿ ನೆಗ್ರಿ ಜತೆಗೆ, ಮತ್ತು ಮೂರು ಗಂಡುಮಕ್ಕಳು ವಿಟ್ಟೋರಿಯೋ (1916–1997), ಬ್ರೂನೋ (1918–1941), ಮತ್ತು ರೊಮಾನೊ (1927–2006) ಹುಟ್ಟಿದರು. ಮುಸೊಲಿನಿಗೆ ಹಲವಾರು ಪ್ರೇಯಸಿಯರಿದ್ದರು ಮತ್ತು ಅವರುಗಳಲ್ಲಿ ಪ್ರಮುಖವಾದವರೆಂದರೆ ಮಾರ್ಗೆಹ್‌ರೀಟಾ ಸರ್ಫಾಟ್ಟಿ ಮತ್ತು ಆತನ ಕೊನೆಯ ಸಂಗಾತಿ, ಕ್ಲಾರಾ ಪೆಟಾಚ್ಚಿ. ಇದಲ್ಲದೆ, ಆತನ ಜೀವನಚರಿತ್ರೆ ಬರೆದಿರುವ ನಿಕೊಲಸ್ ಫ್ಯಾರೆಲ್‌ರ ವರದಿಯ ಪ್ರಕಾರ ಮುಸೊಲಿನಿಗೆ ತನ್ನ ಬೆಂಬಲಿಗರಾದ ಮಹಿಳೆಯರ ಜತೆಗೆ ಎಣಿಕೆಯೇ ಇಲ್ಲದಷ್ಟು ಅಲ್ಪಕಾಲದ ಲೈಂಗಿಕ ಸಂಬಂಧಗಳಿದ್ದುವು.[೬೯]

ಧಾರ್ಮಿಕ ನಂಬಿಕೆಗಳು

ಬದಲಾಯಿಸಿ

ಮುಸೊಲಿನಿಯ ತಾಯಿ ಒಬ್ಬ ದೈವಭಕ್ತೆಯಾದ ಕ್ಯಾಥೊಲಿಕಳೂ[೭೦] ತಂದೆ ಪಾದ್ರಿಗಳನ್ನು ವಿರೋಧಿಸುವವರೂ ಆಗಿದ್ದರು.[೭೧] ಆತನ ತಾಯಿ ರೋಸಾ ಆತನನ್ನು ರೋಮನ್ ಕ್ಯಾಥೊಲಿಕ್ ಚರ್ಚಿನಲ್ಲಿ ಬ್ಯಾಪ್‌ಟೈಜ್ ಮಾಡಿಸಿದ್ದಲ್ಲದೆ ಪ್ರತಿ ಭಾನುವಾರ ತನ್ನೆಲ್ಲ ಮಕ್ಕಳನ್ನೂ ಪ್ರಾರ್ಥನಾಸಭೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆತನ ತಂದೆ ಇವುಗಳಲ್ಲಿ ಎಂದೂ ಭಾಗವಹಿಸಲಿಲ್ಲ.[೭೦] ಧಾರ್ಮಿಕ ವಸತಿಶಾಲೆಯಲ್ಲಿ ತಾನು ಕಳೆದ ಸಮಯವನ್ನು ಮುಸೊಲಿನಿ ಒಂದು ಶಿಕ್ಷೆಯೆಂದು ಭಾವಿಸಿದ್ದ, ತನ್ನ ಅನುಭವಗಳನ್ನು ನರಕಕ್ಕೆ ಹೋಲಿಸಿದ ಮತ್ತು "ಒಂದು ಸಾರಿ ಬೆಳಗಿನ ಮಾಸ್‌ಗೆ ಹೋಗಲು ಆತ ನಿರಾಕರಿಸಿದ್ದರಿಂದ ಆತನನ್ನು ಬಲವಂತವಾಗಿ ಎಳೆದೊಯ್ಯಬೇಕಾಯಿತು."[೭೨]

ಮುಂದೆ ಮುಸೊಲಿನಿ ತನ್ನ ತಂದೆಯ ರೀತಿ ಪಾದ್ರಿಗಳ ವಿರೋಧಿಯಾಗುವವನಿದ್ದ. ಯುವಕನಾಗಿದ್ದಾಗ, ಆತ ತನ್ನನ್ನು "ತಾನೊಬ್ಬ ನಾಸ್ತಿಕನೆಂದು ಕರೆದುಕೊಂಡಿದ್ದನು ಮತ್ತು ದೇವರನ್ನು ತನ್ನನ್ನು ಸಾಯಿಸುವಂತೆ ಸವಾಲೊಡ್ಡುವುದರ ಮೂಲಕ ತನ್ನ್ ಸುತ್ತಮುತ್ತಲಿನ ನೋಡುಗರನ್ನು ದಿಗ್ಭ್ರಾಂತಗೊಳಿಸಿದ್ದನು."[೭೧] ಧರ್ಮದ ಬಗ್ಗೆ ಸಹಿಷ್ಣುತೆಯುಳ್ಳ ಮತ್ತು ತಮ್ಮ ಮಕ್ಕಳನ್ನು ಬ್ಯಾಪ್‌ಟೈಜ್ ಮಾಡಿದ ಸಮಾಜವಾದಿಗಳನ್ನು ಆತ ಬಲವಾಗಿ ಖಂಡಿಸುತ್ತಿದ್ದನು. ವಿಜ್ಞಾನವು ದೇವರಿಲ್ಲವೆಂದು ಸಾಬೀತುಪಡಿಸಿರುವುದಾಗಿಯೂ, ಐತಿಹಾಸಿಕ ಜೀಸಸ್ ಒಬ್ಬ ಅಜ್ಞಾನಿಯೂ ಹುಚ್ಚನೂ ಆಗಿದ್ದನೆಂದೂ ಆತ ನಂಬಿದ್ದನು. ಆತ ಧರ್ಮವನ್ನು ಒಂದು ಮಾನಸಿಕ ರೋಗವೆಂದು ಪರಿಗಣಿಸುತ್ತಿದ್ದನು ಮತ್ತು ಕ್ರೈಸ್ತಧರ್ಮವು ತ್ಯಾಗ ಮತ್ತು ಹೇಡಿತನಕ್ಕೆ ಉತ್ತೇಜನ ನೀಡುತ್ತಿದೆಯೆಂದು ಆರೋಪಿಸಿದನು.[೭೧]

ಮುಸೊಲಿನಿ ಫ್ರೆಡರಿಕ್ ನೀಶೆಯ ಪ್ರಶಂಸಕನಾಗಿದ್ದನು. ಡೆನಿಸ್ ಮ್ಯಾಕ್ ಸ್ಮಿಥ್‌ರ ಪ್ರಕಾರ, "ನೀಶೆಯಲ್ಲಿ ಆತನಿಗೆ ಕ್ರಿಶ್ಚಿಯನ್ ಸದ್ಗುಣಗಳಾದ ನಮ್ರತೆ, ತ್ಯಾಗ, ದಾನಧರ್ಮ ಮತ್ತು ಒಳ್ಳೆಯತನಗಳ ವಿರುದ್ಧದ ಯುದ್ಧಕ್ಕೆ ತಕ್ಕನಾದ ಸಮರ್ಥನೆಯು ದೊರಕಿತು."[೭೩] ನೀಶೆಯ ಮಹಾಮಾನವ ಕಲ್ಪನೆಯನ್ನು ಆತ ಶ್ಲಾಘಿಸುತ್ತಿದ್ದನು, ಈ ಮಹಾಮಾನವ "ದೇವರು ಮತ್ತು ಜನತೆಯನ್ನು ಉಲ್ಲಂಘಿಸುವವನೂ, ಸಮಾನತೆ ಮತ್ತು ಪ್ರಜಾತಂತ್ರವನ್ನು ದ್ವೇಷಿಸುವವನೂ, ಬಲಹೀನರು ಸೋಲನ್ನೊಪ್ಪಿಕೊಳ್ಳಬೇಕೆಂದೂ, ಅವರು ಒಪ್ಪಿಕೊಳ್ಳಲು ತಡಮಾಡಿದರೆ ಅವರನ್ನು ಅದರೆಡೆ ತಳ್ಳಬೇಕೆಂದು ನಂಬುವವನೂ ಆಗಿದ್ದನು."[೭೩]

ಮುಸೊಲಿನಿ ಕ್ರಿಶ್ಚಿಯನ್ ಧರ್ಮ ಮತ್ತು ಕ್ಯಾಥೊಲಿಕ್ ಚರ್ಚುಗಳ ವಿರುದ್ಧ ತೀಕ್ಷ್ಣವಾದ ವಾಗ್ದಾಳಿಯನ್ನು ಮಾಡುತ್ತ, "ಪವಿತ್ರ ಅತಿಥೇಯರ ಬಗ್ಗೆ ಮತ್ತು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನರ ನಡುವೆ ಇದ್ದಿತೆನ್ನಲಾದ ಸಂಬಂಧದ ಬಗ್ಗೆ ಪ್ರಚೋದನಕಾರಿಯಾದ ಮತ್ತು ದೈವನಿಂದೆಯ ಮಾತುಗಳನ್ನು ಕೂಡ ಆಡುತ್ತಿದ್ದನು."[೭೪] ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಅಥವಾ ಧಾರ್ಮಿಕ ವಿವಾಹಗಳಿಗೆ ಸಮ್ಮತಿಸುವ ಯಾವುದೇ ಸಮಾಜವಾದಿಯನ್ನು ಪಕ್ಷದಿಂದ ಹೊರಹಾಕಬೇಕೆಂದು ಆತ ಬಲವಾಗಿ ನಂಬುತ್ತಿದ್ದನು. ಆತ ಕ್ಯಾಥೊಲಿಕ್ ಚರ್ಚ್ ಅನ್ನು ಅದರ "ದಬ್ಬಾಳಿಕೆಯ ಪ್ರವೃತ್ತಿ ಮತ್ತು ಯೋಚನಾ ಸ್ವಾತಂತ್ರ್ಯವನ್ನು ನೀಡಲು ಅನುಮತಿ ನಿರಾಕರಿಸುತ್ತಿದ್ದುದಕ್ಕಾಗಿ.." ಖಂಡಿಸುತ್ತಿದ್ದನು. ಮುಸೊಲಿನಿಯ ಪತ್ರಿಕೆ La Lotta di Classe ನ ಸಂಪಾದಕೀಯ ವಿಭಾಗವು ಕ್ರಿಶ್ಚಿಯನ್ ವಿರೋಧಿ ಧೋರಣೆಯನ್ನು ಪಾಲಿಸುತ್ತಿದ್ದಿತು.[೭೪]

ಈ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಸೊಲಿನಿ ಜನಪ್ರಿಯತೆಯನ್ನು ಗಳಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಇಟಲಿಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿದ್ದ ಕ್ಯಾಥೊಲಿಕರ ಬೆಂಬಲವನ್ನು ಗಳಿಸಲು ಪ್ರಯತ್ನಿಸುವವನಿದ್ದನು. 1924ರಲ್ಲಿ ಮುಸೊಲಿನಿ ತನ್ನ ಮೂವರು ಮಕ್ಕಳಿಗೆ ಕಮ್ಯುನಿಯನ್ ನೀಡಿಸಿದನು. 1925ರಲ್ಲಿ ಪಾದ್ರಿಯೊಬ್ಬನು ನಡೆಸಿಕೊಟ್ಟ ಧಾರ್ಮಿಕ ವಿವಾಹ ಸಮಾರಂಭವೊಂದರಲ್ಲಿ ಆತನು ತಾನು ಹತ್ತು ವರುಷಗಳ ಹಿಂದೆ ಪೌರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದ ತನ್ನ ಪತ್ನಿ ರೇಶೇಲ್‌ಳನ್ನು ಮತ್ತೆ ಮದುವೆಯಾದನು.[೭೫] ಹಾಗೂ 1929ರಲ್ಲಿ ಆತನು ರೋಮನ್ ಕ್ಯಾಥೊಲಿಕ್ ಚರ್ಚಿನ ಜತೆಗೆ ಒಂದು ಕಾನ್‌ಕಾರ್ಡ್ತಾಟ್ ಮತ್ತು ಒಪ್ಪಂದಕ್ಕೆ ಸಹಿ ಹಾಕಿದನು.[೭೬]

ಆದರೆ, ಈ ಸಂಧಾನದ ನಂತರ ಆತನು ಚರ್ಚು ರಾಜ್ಯಕ್ಕೆ ಅಧೀನವಾಗಿದೆಯೆಂದು ಘೋಷಿಸಿದನು ಮತ್ತು "ದೈವದೂಷಣೆ ಮಾಡುವ ರೀತಿಯಲ್ಲಿ ಕ್ಯಾಥೊಲಿಸಿಸಮ್ ಮೂಲವಾಗಿ ಒಂದು ಸಣ್ಣ ಪಂಥವಾಗಿತ್ತೆಂದೂ ಅದು ರೋಮನ್ ಸಾಮ್ರಾಜ್ಯದ ಸಂಸ್ಥೆಯ ಜತೆಗೆ ಸೇರಿಕೊಂಡಿದ್ದರಿಂದ ಪ್ಯಾಲೆಸ್ತೀನಿನಿಂದಾಚೆಗೆ ಹರಡಲು ಸಾಧ್ಯವಾಯಿತೆಂದು ಹೇಳಿದನು."[೭೬] ಕಾನ್‌ಕಾರ್ಡ್ಯಾಟ್‌ನ ನಂತರ, "ಕಳೆದ ಏಳು ವರ್ಷಗಳಲ್ಲಿ ಆಗಿದ್ದಕ್ಕಿಂತ ಹೆಚ್ಚು ಸಂಖ್ಯೆಯ ಕ್ಯಾಥೊಲಿಕ್ ಸುದ್ದಿಪತ್ರಿಕೆಗಳನ್ನು ಆತ ಮುಟ್ಟುಗೋಲು ಹಾಕಿಕೊಂಡನು."[೭೬] ಈ ಹೊತ್ತಿಗೆ ಮುಸೊಲಿನಿಯು ಕ್ಯಾಥೊಲಿಕ್ ಚರ್ಚಿನಿಂದ ಹೊರದೂಡಲ್ಪಡುವುದಕ್ಕೆ ಬಲು ಹತ್ತಿರದ ಘಟ್ಟವನ್ನು ತಲುಪಿದನು.[೭೬]

೧೯೩೨ ಮುಸೊಲಿನಿಯು ಪೋಪ್‌ನೊಂದಿಗೆ ಬಹಿರಂಗವಾಗಿ ರಾಜಿ ಮಾಡಿಕೊಂಡನು, ಆದರೆ "ಯಾವುದೇ ನಿಯತಕಾಲಿಕಗಳಲ್ಲಿ ತಾನು ಪೋಪ್‌ನ ಎದುರು ಮಂಡಿಯೂರಿರುವ ಅಥವಾ ಭಕ್ತಿ ಪ್ರದರ್ಶಿಸುತ್ತಿರುವ ಯಾವುದೇ ಚಿತ್ರವು ಬರದಂತೆ ನೋಡಿಕೊಂಡನು."[೭೬] ಆತ ಕ್ಯಾಥೊಲಿಕರಿಗೆ "ಫ್ಯಾಸಿಸಮ್ ಕೂಡ ಕ್ಯಾಥೊಲಿಕ್ ಆಗಿತ್ತೆಂದೂ, ತಾನು ಖುದ್ದಾಗಿ ದಿನದ ಕೆಲವು ಭಾಗವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದನೆಂದೂ.." ಮನವರಿಕೆ ಮಾಡಲು ಬಯಸಿದ್ದನು.[೭೬] ಪೋಪ್ ಮುಸೊಲಿನಿಯನ್ನು "ದೈವಾನುಗ್ರಹದಿಂದ ಕಳಿಸಲ್ಪಟ್ಟ ಮನುಷ್ಯ" ಎಂದು ಕರೆಯಲು ಆರಂಭಿಸಿದನು.[೭೪][೭೬] ದೈವಭಕ್ತನಾಗಿಉ ಕಾಣಿಸಿಕೊಳ್ಳುವ ಮುಸೊಲಿನಿಯ ಎಲ್ಲಾ ಪ್ರಯತ್ನಗಳ ಹೊರತಾಗಿ, ಪಾರ್ಟಿಯ ಆದೇಶದ ಪ್ರಕಾರ, ಆತನನ್ನು ವರ್ಣಿಸಲು ಬಳಸಲಾಗುವ ಎಲ್ಲ ವಿಶೇಷಣಗಳೂ ಕೂಡ " ದೇವರನ್ನು ವರ್ಣಿಸಲು ಬಳಸಲಾಗುವ ವಿಶೇಷಣಗಳಂತೆಯೇ ಕಾಣುವಂತೆ ನೋಡಿಕೊಳ್ಳಬೇಕಾಗಿತ್ತು.."[೭೬]

1938ರಲ್ಲಿ ಮುಸೊಲಿನಿಯು ತನ್ನ ಪುರೋಹಿತಶಾಹೀ-ವಿರೋಧಿ ನೀತಿಯನ್ನು ಮತ್ತೆ ಪ್ರತಿಪಾದಿಸಲು ಆರಂಭಿಸಿದನು. ಕೆಲವೊಮ್ಮೆ ಆತನು ತನ್ನನ್ನು "ಪಕ್ಕಾ ನಂಬಿಕೆಯಿಲ್ಲದಿರುವವನು" ಎಂದು ವರ್ಣಿಸಿಕೊಳ್ಳುತ್ತಿದ್ದನಲ್ಲದೆ, ಒಮ್ಮೆ ತನ್ನ ಕ್ಯಾಬಿನೆಟ್‌ಗೆ ತಿಳಿಸಿದ ಪ್ರಕಾರ "ಬಹುಶಃ ಇಸ್ಲಾಮ್ ಕ್ರೈಸ್ತಧರ್ಮಕ್ಕಿಂತ ಹೆಚ್ಚು ಪರಿಣಾಮಕಾರಿ" ಮತ್ತು "ಪೋಪನ ಧಿಕಾರವು ಇಟಲಿಯ ದೇಹದಲ್ಲಿ ಬೆಳೆಯುತ್ತಿರುವ ಬಾವು ಮತ್ತು ಇದನ್ನು ’ಒಂದೇಬಾರಿಗೆ ಸಂಪೂರ್ಣವಾಗಿ ನಾಶ ಮಾಡಬೇಕಾಗಿದೆ’ ಏಕೆಂದರೆ ಇಟಲಿಯಲ್ಲಿ ಪೋಪ್ ಮತ್ತು ತನಗೆ - ಇಬ್ಬರಿಗೂ ಜತೆಯಲ್ಲಿ ಬದುಕುವಷ್ಟು ಜಾಗವಿಲ್ಲವೆಂದೂ ಹೇಳಿದನು."[೭೭] ಮುಂದೆ ಆತ ಸಾರ್ವಜನಿಕವಾಗಿ ಈ ರೀತಿಯ ಪುರೋಹಿತಶಾಹೀ-ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿದನಾದರೂ, ಖಾಸಗಿಯಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಮುಂದುವರೆಯಿತು.

1943ರಲ್ಲಿ ಅಧಿಕಾರದಿಂದ ಪದಚ್ಯುತನಾದಂದಿನಿಂದ ಮುಸೊಲಿನಿ "ದೇವರು ಮತ್ತು ಆತ್ಮಸಾಕ್ಷಿಯ ಕರೆಗೆ ಬೆಲೆಗೊಡುವುದರ ಬಗ್ಗೆ" ಮಾತನಾಡತೊಡಗಿದನು, ಆದರೆ ಕ್ಯಾಥೊಲಿಕ್ ಮತಕ್ಕೆ ಹಿಂದಿರುವುದಾಗಿ ಘೋಷಿಸಿಕೊಂಡರೂ ಕೂಡ "ಆತ ಪಾದ್ರಿಗಳು ಮತ್ತು ಚರ್ಚಿನ ಮತ ಸಂಸ್ಕಾರಗಳಿಗೆ ಯಾವುದೇ ಬೆಲೆ ನೀಡುತ್ತಿರಲಿಲ್ಲ".[೭೮] ಈ ಹೊತ್ತಿಗೆ ಆತನು ಪೋಪ್ ಹಿಂದೆ ತನ್ನ ಬಗ್ಗೆ ಹೇಳಿದ್ದ "ತಾನು ಸಮಾಜವನ್ನು ಉದ್ಧಾರ ಮಾಡಲೋಸುಗ ದೇವರು ಕಳಿಸಿರುವ ವ್ಯಕ್ತಿ" ಎಂಬ ಹೇಳಿಕೆಯನ್ನು ಬಲವಾಗಿ ನಂಬತೊಡಗಿದ್ದನು. ಜತೆಗೇ ಆತನು ತನ್ನ ಮತ್ತು ಯೇಸುಕ್ರಿಸ್ತನ ನಡುವೆ ಸಮಾನಾಂತರ ವಿಚಾರಗಳನ್ನು ಕಲ್ಪಿಸಲು ತೊಡಗಿದನು.[೭೮] ಮುಸೊಲಿನ ವಿಧವೆ ರೇಶೇಲ್ ತನ್ನ ಹೇಳಿಕೆಯಲ್ಲಿ ಆಕೆಯ ಪತಿಯು "ತನ್ನ ಕೊನೆಯ ವರುಷಗಳ ತನಕವೂ ಯಾವುದೇ ಧಾರ್ಮಿಕ ನಂಬಿಕೆಗಳನ್ನಿಟ್ಟುಕೊಂಡಿರಲಿಲ್ಲ" ಎಂದು ಹೇಳಿಕೆ ನೀಡಿದಳು.[೭೯] ಮುಸೊಲಿನಿ ಸತ್ತು ಹನ್ನೆರಡು ವರ್ಷಗಳ ನಂತರ ಆತನಿಗೆ ಕ್ರಿಶ್ಚಿಯನ್ ವಿಧಿಯ ಮೂಲಕ ಸಂಸ್ಕಾರವನ್ನು ನಡೆಸಲಾಯಿತು.[೮೦]

ಜನಾಂಗೀಯ ದೃಷ್ಟಿಕೋನ

ಬದಲಾಯಿಸಿ

ಮೂಲವಾಗಿ ನಾಜೀ ಜರ್ಮನಿಯ ಜನಾಂಗೀಯ ಸಿದ್ಧಾಂತವನ್ನು ಅವಾಸ್ತವಿಕವೆಂದೂ ಜನಾಂಗೀಯ ಪರಿಶುದ್ಧತೆಯನ್ನು ಇಟಾಲಿಯನ್ ಫ್ಯಾಸಿಸಮ್ಗೆ ಸಂಬಂಧಿಸಿದ್ದಲ್ಲವೆಂದೂ ವಿರೋಧಿಸಿದರೂ ಕೂಡ, ಇತ್ತೀಚಿನ ಐತಿಹಾಸಿಕ ಸಂಶೋಧನೆಗಳು ಮುಸೊಲಿನಿ ವೈಯುಕ್ತಿಕವಾಗಿ ಬಲವಾದ ಯಹೂದ್ಯ-ವಿರೋಧೀ ಧೋರಣೆಯನ್ನು ಹೊಂದೆದ್ದನೆಂದು ಸಂಕೇತಿಸುತ್ತವೆ. ಇಟಲಿಯ ದೈನಿಕ ಕೋರಿಯೇರ್ ಡೆಲ್ಲಾ ಸೆರಾದಲ್ಲಿ ಪ್ರಕಟವಾದ ಕ್ಲಾರೆಟ್ಟಾ ಪೆಟಾಚ್ಚಿಯ ಖಾಸಗೀ ಡೈರಿಯ ಭಾಗಗಳು ಸರ್ವಾಧಿಕಾರಿಯ ಜನಾಂಗೀಯ ನಂಬಿಕೆಗಳನ್ನು ಸ್ಪಷ್ಟಪಡಿಸುತ್ತವೆ.[೮೧]

"1921 ನಾನೊಬ್ಬ ಜನಾಂಗೀಯವಾದಿಯಾಗಿದ್ದೇನೆ. ನಾನು ಹಿಟ್ಲರ್‌ನನ್ನು ಅನುಕರಿಸುತ್ತಿದ್ದೇನೆಂದು ಅವರು ಅದು ಹೇಗೆ ಭಾವಿಸಿದರೋ ನಾನು ಕಾಣೆ. ಇಟಾಲಿಯನ್ನರಲ್ಲಿ ನಾವು ಜನಾಂಗೀಯ ಭಾವನೆಯೊಂದನ್ನು ಬೆಳೆಸಬೇಕಿದೆ. "

-- ಬೆನಿಟೊ ಮುಸೊಲಿನಿ, ಆಗಸ್ಟ್ 1938ರಲ್ಲಿ ಹೇಳಿದ್ದು.

"ಈ ಅಸಹ್ಯಕರ ಯಹೂದಿಗಳು, ನಾನು ಇವರನ್ನೆಲ್ಲ ನಾಶಮಾಡಬೇಕಿದೆ. "

-- ಬೆನಿಟೊ ಮುಸೊಲಿನಿ, ತನ್ನ ಪ್ರಿಯತಮೆಯೊಂದಿಗಿನ ಚರ್ಚೆಯ ಸಮಯದಲ್ಲ್ಲಿ.

 
ಮುಸೊಲಿನಿಗೆ ಗುಂಡಿಕ್ಕಲಾದ ಮೆಜ್ಜೆಗ್ರಾದ ಸ್ಥಾನವನ್ನು ಶಿಲುಬೆಯಿಂದ ಗುರುತಿಸಲಾಗಿದೆ.

27 ಏಪ್ರಿಲ್ 1945ರಂದು ಡೋಂಗೋ ಹಳ್ಳಿಯ (ಕೋಮೋ ಸರೋವರ) ಬಳಿ ಮುಸೊಲಿನಿ ಮತ್ತು ಆತನ ಗೆಳತಿ ಕ್ಲಾರಾ ಪೆಟಾಚ್ಚಿ ಸ್ಪೇನ್‌ಗೆ ಪರಾರಿಯಾಗಲು ಸ್ವಿಜರ್ಲೆಂಡಿನ ವಿಮಾನವೇರಲು ಹೊರಡುತ್ತಿದ್ದಾಗ, ಕಮ್ಯುನಿಸ್ಟ್ ಹೋರಾಟಗಾರರಾದ ವಲೇರಿಯೋ ಮತ್ತು ಬೆಲ್ಲಿನಿ ತಡೆಹಿಡಿದರು ಮತ್ತು ಅವರನ್ನು ಪಾರ್ಟಿಸಾನ್‌ಗಳ 52ನೇ ಗ್ಯಾರಿಬಾಲ್ಡಿ ಪಡೆಯ ಪೊಲಿಟಿಕಲ್ ಕಮಿಸ್ಸಾರ್ ಆಗಿದ್ದ ಅರ್ಬಾನೋ ಲಾಜ್ಜಾರೋ ಗುರುತುಹಿಡಿದರು. ಈ ಸಮಯದಲ್ಲಿ ಕ್ಲಾರೆಟ್ಟಾಳ ಸಹೋದರ ಸ್ಪಾನಿಶ್ ರಾಜಕೀಯ ಸಲಹೆಗಾರನಂತೆ ಮಾರುವೇಷ ಡರಿಸಿದರು[೮೨][page needed] ಮುಸೊಲಿನಿ ಹಿಂದೆಗೆಯುತ್ತಿದ್ದ ಜರ್ಮನ್ ಪಡೆಗಳ ಜತೆ ಪ್ರಯಾಣಿಸುತ್ತಿದ್ದರು ಮತ್ತು ಸಿಕ್ಕಿಹಾಕಿಕೊಂಡಾಗ ಗುರುತು ಸಿಗದಿರಲೋಸುಗ ಜರ್ಮನ್ ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದರು. ಕೋಮೋಗೆ ಅವರನ್ನು ಕರೆದುಕೊಂಡು ಹೋಗುವ ಹಲವಾರು ಪ್ರಯತ್ನಗಳು ವ್ಯರ್ಥವಾದಾಗ ಅವರನ್ನು ಮೆಜ್ಜೆಗ್ರಾಗೆ ಕರೆತರಲಾಯಿತು. ಅವರು ತಮ್ಮ ಕೊನೆಯ ರಾತ್ರಿಯನ್ನು ಡಿ ಮಾರಿಯಾ ಕುಟುಂಬದ ಮನೆಯಲ್ಲಿ ಕಳೆದರು.

ಮಾರನೆ ದಿನ ಮುಸೊಲಿನಿ ಮತ್ತು ಆತನ ಪ್ರೇಯಸಿಯನ್ನು ತಡಮಾಡದೆ ಬಹುಬೇಗನೆ ಗುಂಡಿಕ್ಕಿ ಕೊಲ್ಲಲಾಯಿತು, ಅವರ ಜತೆಯಿದ್ದ ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್‌ನ ಮಂತ್ರಿಗಳು ಹಾಗೂ ಅಧಿಕಾರಿಗಳ ಹದಿನೈದು ಜನರ ತಂಡಕ್ಕೂ ಇದೇ ಗತಿಯಾಯಿತು. ಅವರಿಗೆಲ್ಲ ಗುಂಡಿಕ್ಕಲಾದ ಜಾಗ ಗಿಯುಲಿನೊ ಡಿ ಮೆಜ್ಜೆಗ್ರಾ ಎಂಬ ಸಣ್ಣ ಹಳ್ಳಿ. ಈ ಘಟನೆಗಳ ಅಧಿಕೃತ ವರದಿಯ ಪ್ರಕಾರ ಈ ಗುಂಡಿಕ್ಕುವಿಕೆಯನ್ನು ನಿರ್ದೇಶಿಸಿದ್ದು "ಕರ್ನಲ್ ವಲೇರಿಯೋ" ಕರ್ನೆಲ್ಲೋ ವಲೇರಿಯೋ ). ವಲೇರಿಒಯೋನ ನಿಜವಾದ ಹೆಸರು ವಾಲ್ಟರ್ ಆಡಿಸಿಯೋ ಎಂದಾಗಿತ್ತು. ಆಡಿಸಿಯೋ ಒಬ್ಬ ಕಮ್ಯುನಿಸ್ಟ್ ಪಾರ್ಟಿಸಾನ್ ಕಮ್ಯಾಂಡರ್ ಆಗಿದ್ದನು ಮತ್ತು ವರದಿಯೊಂದರ ಪ್ರಕಾರ ಈತನಿಗೆ ಮುಸೊಲಿನಿಯನ್ನು ಕೊಲ್ಲುವ ಆದೇಶವನ್ನು ನೀಡಿದ್ದು ನ್ಯಾಶನಲ್ ಲಿಬರೇಶನ್ ಕಮಿಟಿ. ಒಂದು ವರದಿಯ ಪ್ರಕಾರ, ಮುಸೊಲಿನಿ ಮತ್ತು ಇತರ ಫ್ಯಾಸಿಸ್ಟ್‌ಗಳನ್ನು ಹಿಡಿದಿಡಲಾಗಿದ್ದ ಕೋಣೆಗೆ ಪ್ರವೇಶಿಸಿದ ಆಡಿಸಿಯೋ ಘೋಷಿಸಿದ "ನಾನು ನಿಮ್ಮನ್ನು ರಕ್ಷಿಸಲು ಬಂದಿದ್ದೇನೆ!!.. ನಿಮ್ಮ ಬಳಿ ಯಾವುದಾದರೂ ಆಯುಧಗಳಿವೆಯೆ?" ಆನಂತರ ಆತ ಅವರೆಲ್ಲರನ್ನು ವಾಹನವೊಂದಕ್ಕೆ ಹತ್ತಿಸಿ ಸ್ವಲ್ಪ ದೂರ ಕರೆದುಕೊಂಡು ಹೋದನು. ವಾಹನವನ್ನು ನಿಲ್ಲಿಸಿದ ಆಡಿಯೋ ಆದೇಶಿಸಿದ "ಕೆಳಗಿಳಿಯಿರಿ"; ಪೆಟಾಚ್ಚಿ ಮುಸೊಲಿನಿಯನ್ನು ಅಪ್ಪಿಕೊಂಡು ಆತನಿಂದ ದೂರ ಹೋಗಲು ನಿರಾಕರಿಸಿದಳು ಮತ್ತು ಆಗ ಅವರನ್ನು ಒಂದು ಖಾಲಿ ಜಾಗಕ್ಕೆ ಕರೆದೊಯ್ಯಲಾಯಿತು. ಗುಂಡಿಕ್ಕಲಾಯಿತು ಮತ್ತು ಪೆಟಾಚ್ಚಿ ಕೆಳಕ್ಕುರುಳಿದಳು. ಆಗ ಮುಸೊಲಿನಿ ತನ್ನ ಜ್ಯಾಕೆಟ್ ಅನ್ನು ತೆರೆದು "ನನ್ನ ಎದೆಗೆ ಗುಂಡಿಕ್ಕು!" ಎಂದು ಅರಚಿದ. ಆಡಿಸಿಯೋ ಆತನ ಎದೆಗೆ ಗುಂಡು ಹೊಡೆದ. ಮುಸೊಲಿನಿ ಕೆಳಕ್ಕುರುಳಿದನಾದರೂ ಸಾಯಲಿಲ್ಲ; ಆತ ಕಷ್ಟದಿಂದ ಉಸಿರಾಡುತ್ತಿದ್ದ. ಆತನ ಬಳಿ ಹೋದ ಆಡಿಸಿಯೋ ಆತನ ಎದೆಗೆ ಇನ್ನೊಂದು ಬುಲೆಟ್ ಹೊಡೆದ. ಮುಸೊಲಿನಿಯ ಮುಖವು ನೋವಿನಿಂದ ವಿವರ್ಣವಾಗಿರುವಂತೆ ಕಾಣುತ್ತಿತ್ತು. ಆಡಿಸಿಯೋ ತನ್ನ ಡ್ರೈವರ್‌ಗೆ ಹೇಳಿದ "ಅವನ ಮುಖವನ್ನು ನೋಡು, ಅವನ ಮುಖದ ಮೇಲಿನ ಭಾವನೆಗಳು ಅವನಿಗೆ ಹೊಂದಿಬರುವುದೇ ಇಲ್ಲ". ನಂತರ ಇತರ ಸದಸ್ಯರನ್ನೂ ಅದೇ ರಾತ್ರಿ ಫೈರಿಂಗ್ ಸ್ಕ್ವಾಡ್‌ನ ಎದುರು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಲಾಯಿತು.[೮೩]

ಮುಸೊಲಿನಿಯ ದೇಹ

ಬದಲಾಯಿಸಿ

29 ಏಪ್ರಿಲ್ 1945ರಂದು ಮುಸೊಲಿನಿ, ಪೆಟಾಚ್ಚಿ ಮತ್ತು ಅವರ ಜತೆ ಕೊಲ್ಲಲಾದ ಇತರ ಫ್ಯಾಸಿಸ್ಟ್‌ಗಳ ಶವಗಳನ್ನು ಒಂದು ಚಲಿಸುತ್ತಿರುವ ವ್ಯಾನಿನಲ್ಲಿ ಹಾಕಿ ದಕ್ಷಿಣದ ಕಡೆ ಮಿಲಾನ್ಗೆ ರವಾನಿಸಲಾಯಿತು. ಅಲ್ಲಿ ಬೆಳಗಿನಜಾವ ಸುಮಾರು ಮೂರು ಘಂಟೆಯ ಹೊತ್ತಿಗೆ ಓಲ್ಡ್ ಪಿಯಾಜ್ಜಾ ಲೊರೆಟೊನ ಮೈದಾನದಲ್ಲಿ ಅವರ ದೇಹಗಳನ್ನು ಎಸೆಯಲಾಯಿತು. ಕೊಂಚ ಸಮಯದ ಹಿಂದಷ್ಟೇ ಅದೇ ಜಾಗದಲ್ಲಿ ಕೊಲ್ಲಲಾಗಿದ್ದ 15 ಮಂದಿ ಫ್ಯಾಸಿಸ್ಟ್-ವಿರೋಧಿಗಳ ಗೌರವಾರ್ಥ ಈ ಜಾಗವನ್ನು "ಪಿಯಾಜ್ಜಾ ಕ್ವಿಂಡೀಚಿ ಮಾರ್ಟೈರಿ" ಎಂದು ಮರುನಾಮಕರಣ ಮಾಡಲಾಗಿತ್ತು.[೮೪]

ಗುಂಡಿಕ್ಕಿದ ಮೇಲೆ ಆ ದೇಹಗಳನ್ನು ಒದೆಯಲಾಯಿತು, ಉಗಿಯಲಾಯಿತು ಮತ್ತು ಒಂದು ಗ್ಯಾಸ್ ಸ್ಟೇಶನ್ನಿನ ಮಾಂಸ ನೇತುಹಾಕುವ ಕೊಕ್ಕೆಗಳಿಂದ ತಲೆಕೆಳಗಾಗಿ ನೇತುಹಾಕಲಾಯಿತು. ಇದಾದ ಮೇಲೆ ಕೆಳಗಿನಿಂದ ನಾಗರಿಕರೆಲ್ಲರೂ ಆ ದೇಹಗಳಿಗೆ ಕಲ್ಲು ಹೊಡೆದರು. ಫ್ಯಾಸಿಸ್ಟರನ್ನು ಹೋರಾಟ ಮುಂದುವರೆಸದಂತೆ ತಡೆಯಲು ಮತ್ತು ಅದೇ ಜಾಗದಲ್ಲಿ ಆಕ್ಸಿಸ್ ಅಧಿಕಾರಿಗಳು ಹಲವಾರು ಪಾರ್ಟಿಸಾನ್ ಹೋರಾಟಗಾರರನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಹೀಗೆ ಮಾಡಲಾಯಿತು. ಸ್ಥಾನಭ್ರಷ್ಟನಾದ ನಾಯಕನ ದೇಹವು ಮೂದಲಿಕೆ ಮತ್ತು ದೂಷಣೆಗಳಿಗೆ ಪಾತ್ರವಾಯಿತು.

ಫ್ಯಾಸಿಸ್ಟ್ ನಿಷ್ಟನಾಗಿದ್ದ ಅಖೀಲ್ಲ್ ಸ್ಟಾರಾಚೆಯನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು ಮತ್ತು ಆತನನ್ನು ಪಿಯಾಜ್ಜೇಲ್ ಲೊರೆಟೋಗೆ ಕರೆದುಕೊಂಡುಹೋಗಿ ಮುಸೊಲಿನಿಯ ದೇಹವನ್ನು ತೋರಲಾಯಿತು. ಹಿಂದೊಮ್ಮೆ ಮುಸೊಲಿನಿಯನ್ನು ಕುರಿತು "ಆತ ಒಬ್ಬ ದೇವರು" ಎಂದಿದ್ದ ಸ್ಟಾರಾಚೆ,[೮೫] ತನಗೆ ಗುಂಡಿಕ್ಕಲಾಗುವ ಮುನ್ನ ತನ್ನ ನಾಯಕನ ಉಳಿದಿದ್ದ ದೇಹಕ್ಕೆ ವಂದನೆ ಸಲ್ಲಿಸಿದ. ನಂತರ ಸ್ತಾರಾಚೆಯ ದೇಹವನ್ನು ಮುಸೊಲಿನಿಯ ದೇಹದ ಪಕ್ಕದಲ್ಲಿ ನೇತುಹಾಕಲಾಯಿತು.

ಮುಸೊಲಿನಿಯ ಸಾವು ಮತ್ತು ಮಿಲಾನ್‌ನಲ್ಲಿ ಆತನ ದೇಹವನ್ನು ಪ್ರದರ್ಶಿಸಿದ ನಂತರ ಆತನನ್ನು ನಗರದ ಉತ್ತರಭಾಗದಲ್ಲಿದ್ದ ಮುನಿಸಿಪಲ್ ಸಿಮಿಟರಿ ಮ್ಯುಜಾಕ್ನ ಗುರುತಿಲ್ಲದ ಜಾಗವೊಂದರಲ್ಲಿ ಸಮಾಧಿ ಮಾಡಲಾಯಿತು. 1946ರ ಈಸ್ಟರ್ ಭಾನುವಾರದ ದಿನ ಆತನ ದೇಹವನ್ನು ಡೊಮಿನಿಕೊ ಲೆಚಿಸಿ ಮತ್ತು ಇನ್ನಿಬ್ಬರು ನಿಯೋಫ್ಯಾಸಿಸ್ಟ್‌ಗಳು ಕಂಡುಹಿಡಿದು ಅಗೆದು ಹೊರತೆಗೆದರು. ತಮ್ಮ ನಾಯಕನೊಂದಿಗೆ ಪರಾರಿಯಾದ ಅವರು ತೆರೆದ ಸಮಾಡಿಯ ಮೇಲೆ ಈ ಸಂದೇಶವನ್ನು ಬಿಟ್ಟಿದ್ದರು: "ಕೊನೆಗೂ, ಓ ಡೂಚೆ, ನೀನು ನಮ್ಮೊಂದಿಗಿದ್ದೀಯೆ. ನಾವು ಗುಲಾಬಿ ಹೂಗಳಿಂದ ನಿನ್ನನ್ನು ಆಚ್ಛಾದಿಸುವೆವು, ಅದರೆ ನಿನ್ನ ಸಂಪನ್ನತೆಯ ಪರಿಮಳವು ಆ ಗುಲಾಬಿಗಳ ಪರಿಮಳವನ್ನೂ ಮೀರಿಸುವುದು."

ಹಲವಾರು ತಿಂಗಳುಗಳವರೆಗೆ ಪತ್ತೆಯಾಗದೆ - ನೂತನ ಇಟಾಲಿಯನ್ ಗಣತಂತ್ರದ ಅತಂಕಕ್ಕೆ ಕಾರಣವಾಗಿದ್ದ ಡೂಚೆಯ ದೇಹವನ್ನು ಕೊನೆಗೂ ಆಗಸ್ಟಿನಲ್ಲಿ ಸರ್ಟೋಸಾ ಡಿ ಪಾವಿಯಾ ಎಂಬ ಮಿಲಾನ್‌ನ ಹೊರಭಾಗದಲ್ಲಿ ಸಣ್ಣ ಟ್ರಂಕೊಂದರಲ್ಲಿ ಅಡಗಿಸಿಟ್ಟಿದ್ದದ್ದನ್ನು ಪತ್ತೆಹಚ್ಚಿ ’ವಶಪಡಿಸಿ’ಕೊಳ್ಳಲಾಯಿತು. ಆನಂತರದ ತನಿಖೆಯಿಂದ ಶವವು ಒಂದು ಜಾಗದಿಂದ ಇನ್ನೊಂದಕ್ಕೆ ಸಾಗಿಸಲಾಗುತ್ತಲೆ ಇತ್ತೆಂಬುದು ಪತ್ತೆಯಾದರೂ ಕೂಡ, ಇಬ್ಬರು ಫ್ರಾನ್ಸಿಸ್ಕನ್ ಸಹೋದರರ ಮೇಲೆ ಶವವನ್ನು ಅಡಗಿಸಿಟ್ಟ ಆರೋಪ ಹೊರಿಸಲಾಯಿತು. ಏನು ಮಾಡಬೇಕೆಂದು ತೋಚದ ಅಧಿಕಾರಿಗಳು ಈ ಅವಶೇಷಗಳನ್ನು ಮುಂದಿನ ಹತ್ತು ವರ್ಷಗಳವರೆಗೆ ರಾಜಕೀಯ ಬಂಧನದಲ್ಲಿಟ್ಟುಕೊಂಡಿದ್ದರು, ಮತ್ತು ಲೆಚಿಸಿ ಮತ್ತು ಮೂವಿಮೆಂಟೊ ಸೋಶಿಯೇಲ್ ಇಟಾಲಿಯಾನೊ ನಡೆಸಿದ ಪ್ರಚಾರದ ನಂತರ ಅವರು ಅದನ್ನು ಆತನ ಹುಟ್ಟಿದ ಸ್ಥಳವಾದ ರೊಮಾನಾಪ್ರೆಡೆಪ್ಪಿಯೋನಲ್ಲಿ ಮರುಸಮಾಧಿ ಮಾಡಲು ಅನುಮತಿಸಿದರು.

ಒಬ್ಬ ಫ್ಯಾಸಿಸ್ಟ್ ಉಪ ಅಧಿಕಾರಿಯಾಗಿದ್ದ ಲೆಚಿಸಿ ಮುಂದೆ ತನ್ನ ಜೀವನ ಚರಿತ್ರೆ ವಿದ್ ಮುಸೊಲಿನಿ ಬಿಫೋರ್ ಎಂಡ್ ಆಫ್ಟರ್ ಪಿಯಾಜೇಲ್ ಲೊರೆಟೊ ವನ್ನು ಬರೆದನು. ಆಗಿನ ಪ್ರಧಾನಮಂತ್ರಿಯಾಗಿದ್ದ ಅದೋನ್ ಜೋಲಿ ಪೂರ್ವ ಸರ್ವಾಧಿಕಾರಿಯ ವಿಧವೆ ಡೊನ್ನಾ ರೆಶೇಲ್ರನ್ನು ಆತನ ಅವಶೇಷಗಳನ್ನು ಮರಳಿಸುತ್ತಿರುವೆನೆಂದು ತಿಳಿಸುವುದಕ್ಕಾಗಿ ಸಂಪರ್ಕಿಸಿದರು, ಏಕೆಂದರೆ ಅವರಿಗೆ ಸಂಸತ್ತಿನಲ್ಲಿ ಲೆಚಿಸಿಯನ್ನೊಳಗೊಂಡಂತೆ ದೂರ- ಬಲಪಂಥದ ಬೆಂಬಲದ ಅವಶ್ಯಕತೆಯಿತ್ತು. ಪ್ರೆಡಾಪ್ಪಿಯೋನಲ್ಲಿ ಸರ್ವಾಧಿಕಾರಿಯನ್ನು ಒಂದು ಕ್ರಿಪ್ಟ್ (ಚರ್ಚಿನ ನೆಲಮಾಳಿಗೆಯಲ್ಲಿನ ಸಮಾಧಿ) (ಮುಸೊಲಿನಿಗೆ ದೊರಕಿದ ಒಂದೇ ಒಂದು ಗೌರವ). ಆತನ ಸಮಾಧಿಯು ಅಮೃತಶಿಲೆದಂಡಗಳು ಮತ್ತು ಕೊಡಲಿಗಳಿಂದ ಸುತ್ತುವರಿಯಲ್ಪಟ್ಟಿದ್ದು, ಅತನ ದೊಡ್ಡ ಗಾತ್ರದ ಉತ್ತಮಪಡಿಸಲ್ಪಟ್ಟ ವಿಗ್ರಹವೊಂದು ಸಮಾಧಿಯ ಮೇಲೆ ಕಂಡುಬರುತ್ತದೆ.

ಪರಂಪರೆ

ಬದಲಾಯಿಸಿ

ಮುಸೊಲಿನಿಯ ಮರಣದ ನಂತರ ಅವರ ಕುಟುಂಬದಲ್ಲಿ ಆತನ ಪತ್ನಿ ಡೋನ್ನಾ ರೇಶೇಲ್ ಮುಸ್ಸೊಲಿನಿ, ಇಬ್ಬರು ಗಂಡುಮಕ್ಕಳು, ವಿಟ್ಟೋರಿಯೋ ಮತ್ತು ರೊಮಾನೋ ಮುಸೊಲಿನಿ, ಮತ್ತು ಆತನ ಮಗಳು ಹಾಗೂ ಕೌಂಟ್ ಚಿಯಾನೋನ ವಿಧವೆಯಾಗಿದ್ದ ಎಡ್ಡಾ, ಹಾಗೂ ಆನಾ ಮಾರಿಯಾ. ಅವರ ಮೂರನೇ ಮಗ ಬ್ರೂನೋ 7 ಆಗಸ್ಟ್ 1941ರಂದು P108 ಬಾಂಬರ್ ಅನ್ನು ಪರೀಕ್ಷಾ ಉಡ್ಡಯನ ಮಾಡುತ್ತಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿ ಮರಣ ಹೊಂದಿದರು.[೮೬] ಸೋಫಿಯಾ ಲೊರೆನ್ರ ಸಹೋದರಿ ಅನ್ನ ಮಾರಿಯಾ ಸಿಕೊಲೋನ್ ಅವರು ಮುಸೊಲಿನಿಯ ಮಗ ರೊಮಾನೋ ಮುಸೊಲಿನಿಯನ್ನು ವರಿಸಿದ್ದರು. ಮುಸೊಲಿನಿಯ ಮೊಮ್ಮಗಳಾದ ಅಲೆಸ್ಸಾಂಡ್ರಾ ಮುಸೊಲಿನಿ ತೀವ್ರವಾದಿ ಬಲಪಂಥೀಯ ಪಕ್ಷವಾದ ಆಲ್ಟರ್ನೇಟಿವಾ ಸೋಶಿಯೇಲ್ ಪಕ್ಷದಿಂದ ಚುನಾಯಿತರಾಗಿ ಯುರೋಪಿಯನ್ ಪಾರ್ಲಿಮೆಂಟ್ನ ಸದಸ್ಯರಾಗಿದ್ದಾರೆ ; ಎಡ್ಡಾ (ಕ್ಯಾಸ್ಟ್ರಿಯಾನ್ನಿ)ರ ಸಂಬಂಧಿಕರೆಲ್ಲರೂ ಎರಡನೇ ವಿಶ್ವಯುದ್ದದ ಬಳಿಕ ಇಂಗ್ಲೆಂಡಿಗೆ ವಲಸೆಹೋದರು.

ಮುಸೊಲಿನಿಯ ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯನ್ನು ಯುದ್ಧಾನಂತರದ ಇಟಲಿಯ ಸಂವಿಧಾನದಲ್ಲಿ ನಿಷೇಧಿಸಲಾಯಿತು ಆದರೂ ನಂತರದಲ್ಲಿ ಈ ಪರಂಪರೆಯ ಮುಂದುವರಿಕೆಯಾಗಿ ಹಲವಾರು ನಿಯೋ-ಫ್ಯಾಸಿಸ್ಟ್ ಪಾರ್ಟಿಗಳು ಹುಟ್ಟಿಕೊಂಡವು. ಅಲೆಸ್ಸಾಂಡ್ರಾ ಮುಸೊಲಿನಿ ಆಧುನಿಕ ಇಟಲಿಯ ಮೂಲ ನಿಯೋ ಫ್ಯಾಸಿಸ್ಟ್ ಪಕ್ಷಗಳಲ್ಲೊಂದಾದ ಏಜಿಯೋನ್ ಸೋಷಿಯೇಲ್ನ ನಾಯಕಿಯಾಗಿದ್ದಾರೆ. ಐತಿಹಾಸಿಕವಾಗಿ, ಅತ್ಯಂತ ಬಲಶಾಲಿಯಾದ ನಿಯೋ ಫ್ಯಾಸಿಸ್ಟ್ ಪಕ್ಷವೆಂದರೆ MSI (ಮೂವಿಮೆಂತೋ ಸೋಶಿಯೇಲ್ ಇಟಾಲಿಯಾನೋ ) ಆಗಿದ್ದು, ಇದನ್ನು 19956ರಲ್ಲಿ ವಿಸರ್ಜಿಸಲಾಯಿತು ಮತ್ತು ಇದರ ಬದಲಾಗಿ ಅಸ್ತಿತ್ವಕ್ಕೆ ಬಂದ ನ್ಯಾಶನಲ್ ಅಲಯನ್ಸ್ ಫ್ಯಾಸಿಸಮ್‌ನಿಂದ ದೂರ ಸರಿಯಿತು (ಅದರ ನಾಯಕ ಜಿಯಾನ್‍ಫ್ರ್ಯಾಂಕೋ ಫಿನಿ ಒಮ್ಮೆ ಫ್ಯಾಸಿಸಮ್ ಕುರಿತು ಅದು "ಒಂದು ನಿರಂಕುಶ ಕೇಡು" ಹೇಳಿದ್ದಾರೆ). ಈ ಎಲ್ಲಾ ಪಕ್ಷಗಳೂ ಸಿಲ್ವಿಯೋ ಬರ್ಲುಸ್ಕೊನಿಹೌಸ್ ಆಫ್ ಫ್ರೀಡಮ್ಸ್ನ ಜತೆಸೇರಿ ಸಮ್ಮಿಶ್ರ ಸರ್ಕಾರವನ್ನು ರಚಿಸಿಕೊಂಡವು ಮತ್ತು ನ್ಯಾಶನಲ್ ಅಲಯನ್ಸ್‌ನ ನಾಯಕರಾದ ಜಿಯಾನ್‌ಫ್ರ್ಯಾಂಕೋ ಫಿನಿ ಬರ್ಲುಸ್ಕೊನಿಯವರ ಅತ್ಯಂತ ನಿಕಟವರ್ತಿಯಾದ ಸಲಹೆಗಾರರಾಗಿದ್ದರು. 2006ರಲ್ಲಿ ಹೌಸ್ ಆಫ್ ಫ್ರೀಡಮ್ಸ್ ಸಮ್ಮಿಶ್ರ ಸರ್ಕಾರವು ರೊಮಾನೋ ಪ್ರೋಡಿಯವರ ಸಮ್ಮಿಶ್ರ ಸರ್ಕಾರವಾದ ಲೆ ಯುನಿಯೋನ್ನಿಂದ ಬಹಳ ಕಡಿಮೆ ಅಂತರದಿಂದ ಪರಾಭವಗೊಂಡಿತು.

ಜನಪ್ರಿಯ ಸಂಸ್ಕೃತಿಯಲ್ಲಿ

ಬದಲಾಯಿಸಿ
 
ಅಮೆರಿಕದ ಯುದ್ಧಕಾಲದ ಕಾಮಿಕ್ ಒಂದರಲ್ಲಿ ಮುಸೊಲಿನಿ, ಹಿಟ್ಲರ್ ಮತ್ತಿ ಹಿರೊಹಿಟೊ ಸುಪರ್‌ಹೀರೋಗಳಿಂದ ಪರಾಜಿತರಾದಂತೆ ತೋರಿಸಿರುವುದು.

ಚಾರ್ಲಿ ಚಾಪ್ಲಿನ್‌ನ್ನ 1940ರ ಚಲನಚಿತ್ರವಾದ ದ ಗ್ರೇಟ್ ಡಿಕ್ಟೇಟರ್ ಮುಸೊಲಿನಿಯನ್ನು "ಬೆನ್‌ಜಿನೊ ನೇಪಲೋನಿ" ಎಂಬ ಹೆಸರಿನಿಂದ ವಿಡಂಬನೆ ಮಾಡಲಾಗಿದೆ ಮತ್ತು ಈ ಪಾತ್ರದಲ್ಲಿ ಜ್ಯಾಕ್ ಓಕೀ ನಟಿಸಿದ್ದಾರೆ. ಮುಸೊಲಿನಿಯ ಜೀವನಚರಿತ್ರೆಯ ಹೆಚ್ಚು ಗಂಭೀರವಾದ ಚಿತ್ರಣಗಳೆಂದರೆ, ಮುಸೊಲಿನಿಯ ಕೊನೆಯ ದಿನಗಳ ಬಗೆಗಿನ ಕಾರ್ಲೋ ಲಿಜ್ಜಾನಿಚಲನಚಿತ್ರ ಮುಸೊಲಿನಿ: ಅಲ್ಟಿಮೋ ಯಾಟ್ಟೋ (ಮುಸೊಲಿನಿ: ಕೊನೆಯ ಅಂಕ , 1974) ಮತ್ತು ಜಾರ್ಜ್ ಸಿ. ಸ್ಕಾಟ್ರವರ 1985ರ ಟೆಲಿವಿಶನ್ ಮಿನಿಸೀರೀಸ್ ಮುಸೊಲಿನಿ:ದ ಅನ್‌ಟೋಲ್ಡ್ ಸ್ಟೋರಿ . 1985ರಲ್ಲಿಯೇ ಹೊರಬಂದ ಇನ್ನೊಂದು ಚಲನಚಿತ್ರವೆಂದರೆ ಮುಸೊಲಿನಿ ಎಂಡ್ ಐ , ಇದರಲ್ಲಿ ಬಾಬ್ ಹಾಸ್ಕಿನ್ಸ್ ಸರ್ವಾಧಿಕಾರಿಯ ಪಾತ್ರ ವಹಿಸಿದ್ದಾರೆ (ಜತೆಗೇ ಸೂಸನ್ ಸರಾಂಡನ್ ಆತನ ಮಗಳು ಎಡ್ಡಾ ಆಗಿ ಮತ್ತು ಆಂಥೊನಿ ಹಾಪ್ಕಿನ್ಸ್ ಕೌಂಟ್ ಚಿಯಾನೋ ಪಾತ್ರಗಳನ್ನು ನಿರ್ವಹಿಸಿದ್ದಾರೆ). ನಟ ಆಂಟೋನಿಯೋ ಬ್ಯಾಂಡೆರಾಸ್ ಕೂಡ 1993ರ ಚಲನಚಿತ್ರ ಬೆನಿಟೋ - ದ ರೈಜ್ ಎಂಡ್ ಫಾಲ್ ಆಫ್ ಮುಸೊಲಿನಿ ಯ ಶೀರ್ಷಿಕೆಯ ಪಾತ್ರ ವಹಿಸಿದ್ದು, ಇದರಲ್ಲಿ ಆತ ಶಾಲಾ ಮಾಸ್ತರನಾಗಿದ್ದಂದಿನಿಂದ ಮೊದಲನೆ ವಿಶ್ವಯುದ್ಧದ ದಿನಗಳವರೆಗೆ, ಎಂದರೆ ಸರ್ವಾಧಿಕಾರಿಯ ಪದವಿಗೇರುವುದಕ್ಕೂ ಮುಂಚಿನ ಜೀವನವನ್ನು ಚಿತ್ರಿಸಲಾಗಿದೆ. ಇದಲ್ಲದೆ ಮುಸೊಲಿನಿಯನ್ನು ಟೀ ವಿದ್ ಮುಸೊಲಿನಿ ಹಾಗೂ ಲಯನ್ ಆಫ್ ದ ಡೆಸರ್ಟ್ ಗಳಲ್ಲಿಯೂ ಕೂಡ ಬಿಂಬಿಸಲಾಗಿದೆ.

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. Image Description: Propaganda poster of Benito Mussolini, with caption "His Excellency Benito Mussolini, Head of Government, Leader of Fascism, and Founder of the Empire...".
  2. Hakim, Joy (1995). A History of Us: War, Peace and all that Jazz. New York: Oxford University Press. ISBN 0-19-509514-6. {{cite book}}: Cite has empty unknown parameter: |coauthors= (help)
  3. Warwick Palmer, Alan (1996). Who's Who in World Politics: From 1860 to the Present Day. Routledge. ISBN 0415131618.
  4. ೪.೦ ೪.೧ ೪.೨ ೪.೩ ೪.೪ Mediterranean Fascism 1919-1945 Edited by Charles F. Delzel, Harper Rowe 1970, page 3 ಉಲ್ಲೇಖ ದೋಷ: Invalid <ref> tag; name "Mediterranean3" defined multiple times with different content
  5. ೫.೦ ೫.೧ ೫.೨ "Benito Mussolini". Grolier.com. 8 January 2008. Archived from the original on 20 ಮಾರ್ಚ್ 2009. Retrieved 6 ಏಪ್ರಿಲ್ 2010.
  6. ೬.೦ ೬.೧ ೬.೨ ೬.೩ ೬.೪ Living History 2; Chapter 2: Italy under Fascism - ISBN 1-84536-028-1
  7. "Alessandro Mussolini". GeneAll.net. 8 January 2008.
  8. ೮.೦ ೮.೧ ೮.೨ "Benito Mussolini". HistoryLearningSite.co.uk. 8 January 2008.
  9. ""Modern Leftism as Recycled Fascism"". FrontPageMag.com. 24 October 2009.
  10. ""Mussolini: il duce"". ThinkQuest.org. 24 October 2009. Archived from the original on 10 ಮೇ 2010. Retrieved 6 ಏಪ್ರಿಲ್ 2010.
  11. "The Life of Benito Mussolini" by Margherita G. Sarfatti, p. 156
  12. taken from WorldCat's entry for this book's title.
  13. Mediterranean Fascism 1919-1945 Edited by Charles F. Delzel, Harper Rowe 1970, bottom of page 3
  14. ೧೪.೦ ೧೪.೧ ೧೪.೨ ೧೪.೩ Mediterranean Fascism 1919-1945 Edited by Charles F. Delzel, Harper Rowe 1970, page 4
  15. Mediterranean Fascism 1919-1945 Edited by Charles F. Delzel, Harper Rowe 1970, page 6
  16. ೧೬.೦ ೧೬.೧ Mussolini: A Study In Power, Ivone Kirkpatrick, Hawthorne Books, 1964. ISBN 0-8371-8400-2
  17. ೧೭.೦ ೧೭.೧ ೧೭.೨ "Power-mad Mussolini sacrificed wife and son". London: Times Online. 2005-01-13. Archived from the original on 2011-06-29. Retrieved 2009-05-14.
  18. ""Recruited by MI5: the name's Mussolini. Benito MussoliniDocuments reveal Italian dictator got start in politics in 1917 with help of £100 weekly wage from MI5"". Guardian. 2009-10-13. Retrieved 2009-10-14.
  19. ೧೯.೦ ೧೯.೧ "The Rise of Benito Mussolini". 8 January 2008. Archived from the original on 9 ಮೇ 2008. Retrieved 6 ಏಪ್ರಿಲ್ 2010.
  20. ""We're all fascists now"". Salon.com. 8 January 2008. Archived from the original on 16 ಏಪ್ರಿಲ್ 2008. Retrieved 6 ಏಪ್ರಿಲ್ 2010.
  21. (ಜಿ.ಕೆ.ಎ. ಮೈ. ವಿ ಕೋ.)
  22. "Flunking Fascism 101". WND.com. 8 January 2008. Archived from the original on 20 ನವೆಂಬರ್ 2009. Retrieved 6 ಏಪ್ರಿಲ್ 2010.
  23. ಮೋಸ್‌ಲೀ, ರೇ. Mussolini: The Last 600 Days of Il Duce . Taylor Trade Publications, 2004. P. 39
  24. ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66
  25. ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66-67.
  26. "Fascist Modernization in Italy: Traditional or Revolutionary". Roland Sarti. 8 January 2008.
  27. "Mussolini's Italy". Appstate.edu. 8 January 2008. Archived from the original on 15 ಏಪ್ರಿಲ್ 2008. Retrieved 6 ಏಪ್ರಿಲ್ 2010.
  28. Macdonald, Hamish (1999). Mussolini and Italian Fascism. Nelson Thornes. ISBN 0748733868.
  29. "Ha'aretz Newspaper, Israel, 'The Jewish Mother of Fascism". Haaretz.com. Archived from the original on 2007-10-01. Retrieved 2009-03-13.
  30. ೩೦.೦ ೩೦.೧ Paxton, Robert (2004). The Anatomy of Fascism. New York City: Alfred A. Knopf. ISBN 1-4000-4094-9. {{cite book}}: Cite has empty unknown parameter: |coauthors= (help)
  31. ದ ಟೈಮ್ಸ್, ಗುರುವಾರ, 8 ಏಪ್ರಿಲ್ 1926; pg. 12; Issue 44240; col A
  32. Cannistraro, Philip (1996). "Mussolini, Sacco-Vanzetti, and the Anarchists: The Transatlantic Context". The Journal of Modern History. The University of Chicago Press. 68 (1): 55. doi:10.1086/245285. Retrieved 2008-09-06. {{cite journal}}: Unknown parameter |month= ignored (help)
  33. "Father inspired Zamboni.; But Parent of Mussolini's Assailant Long Ago Gave Up Anarchism. Blood Shed in Riots throughout Italy". The New York Times. 1926-11-03. Retrieved 2008-09-06.
  34. "The attempted assassination of Mussolini in Rome". Libcom.org. Retrieved 2009-03-13.
  35. "1931: The murder of Michael Schirru". Libcom.org. Retrieved 2009-03-13.
  36. ಅರ್ರಿಗೋ ಪೆಟಾಚ್ಚೋ, L'uomo della provvidenza: Mussolini, ascesa e caduta di un mito, Milano, Mondadori, 2004, p. 190
  37. The Vampire Economy: Italy, Germany, and the US, ಜೆಫ್ರೀ ಹರ್ಬೆನರ್, Mises Institute, ಅಕ್ಟೋಬರ್ 13, 2005
  38. Comic escapes prosecution for insulting pope(Oddly Enough) Reuters, (ಶುಕ್ರವಾರ ಸೆಪ್ಟೆಂಬರ್ 19, 2008 1:15 p.m. EDT) By Phil Stewart
  39. "A Brief History of Italy: From the Etruscans to today". LifeinItaly.com. 8 January 2008.
  40. ೪೦.೦ ೪೦.೧ ೪೦.೨ ೪೦.೩ "Ethiopia 1935-36". icrc.org. 8 January 2008. Archived from the original on 1 ಡಿಸೆಂಬರ್ 2006. Retrieved 6 ಏಪ್ರಿಲ್ 2010.
  41. ನಾಯಕ ಬೆನಿಟೊ ಮುಸೊಲಿನಿಯ ಭಾಷಣ. ರೋಮ್, ಇಟಲಿ, 23 ಫೆಬ್ರವರಿ 1941
  42. ೪೨.೦ ೪೨.೧ "Mussolini's Cultural Revolution: Fascist or Nationalist?". jch.sagepub.com. 8 January 2008.
  43. Gillette, Aaron (2002), Racial Theories in Fascist Italy, Routledge, p. 45, ISBN 041525292X
  44. Gillette, Aaron (2002), Racial Theories in Fascist Italy, Routledge, p. 44, ISBN 041525292X
  45. Griffen, Roger (ed.). Fascism. Oxford University Press, 1995. Pp. 59.
  46. Hollander, Ethan J (1997). Italian Fascism and the Jews (PDF). University of California. ISBN 0803946481. Archived from the original (PDF) on 2008-05-15. Retrieved 2010-04-06.
  47. "The Italian Holocaust: The Story of an Assimilated Jewish Community". ACJNA.org. 8 January 2008.
  48. "Mussolini and the Roman Catholic Church". HistoryLearningSite.co.uk. 8 January 2008.
  49. Gillette, Aaron (2002), Racial Theories in Fascist Italy, Routledge, p. 95, ISBN 041525292X
  50. ಟೈಮ್ ಮ್ಯಾಗಜೀನ್, ಏಪ್ರಿಲ್ 5, 1937
  51. Lowe, CJ (1967). Italian Foreign Policy 1870-1940. Routledge. ISBN 0415265975.
  52. "The Italo-German Alliance, May 22, 1939". astro.temple.edu. 8 January 2008. Archived from the original on 20 ಜುಲೈ 2011. Retrieved 6 ಏಪ್ರಿಲ್ 2010.
  53. "Victor Emmanuel III". Questia.com. 8 January 2008.
  54. ೫೪.೦ ೫೪.೧ ೫೪.೨ ೫೪.೩ ೫೪.೪ ೫೪.೫ Knox, MacGregor (1986). Mussolini Unleashed, 1939-1941: Politics and Strategy in Fascist Italy's Last War. Cambridge University Press. ISBN 0521338352. {{cite book}}: line feed character in |publisher= at position 21 (help)
  55. ೫೫.೦ ೫೫.೧ "Italy Declares War". ThinkQuest.org. 8 January 2008. Archived from the original on 20 ಡಿಸೆಂಬರ್ 2007. Retrieved 6 ಏಪ್ರಿಲ್ 2010.
  56. Samson, Anne (1967). Britain, South Africa and East African Campaign: International Library of Colonial History. I B Tauris & Co Ltd. ISBN 0415265975.
  57. "1940 World War II Timeline". WorldWarIIHistory.info. 8 January 2008. Archived from the original on 19 ಏಪ್ರಿಲ್ 2008. Retrieved 6 ಏಪ್ರಿಲ್ 2010.
  58. Mollo, Andrew (1987). The Armed Forces of World War II. I B Tauris & Co Ltd. ISBN 978-0517544785.
  59. ೫೯.೦ ೫೯.೧ "Chronology of the Second World War". Spartacus.SchoolNet.co.uk. 8 January 2008. Archived from the original on 16 ಮಾರ್ಚ್ 2010. Retrieved 6 ಏಪ್ರಿಲ್ 2010.
  60. "World War II: Operation Compass". About.com. 8 January 2008. Archived from the original on 15 ಏಪ್ರಿಲ್ 2008. Retrieved 6 ಏಪ್ರಿಲ್ 2010.
  61. "Speech Delivered by Premier Benito Mussolini". IlBiblio.org. 8 January 2008.
  62. "The Invasion and Battle for Greece (Operation Marita)". Feldgrau.com. 2008-01-08.
  63. ೬೩.೦ ೬೩.೧ ೬೩.೨ ೬೩.೩ ೬೩.೪ ೬೩.೫ ೬೩.೬ Moseley, Ray (2004). Mussolini: The Last 600 Days of Il Duce. Taylor Trade. ISBN 1589790952.
  64. ೬೪.೦ ೬೪.೧ ೬೪.೨ ೬೪.೩ Whittam, John (2005). Fascist Italy. Manchester University Press. ISBN 0719040043.
  65. "Modern era". BestofSicily.com. 8 January 2008.
  66. ೬೬.೦ ೬೬.೧ ೬೬.೨ Shirer, William (1960). The Rise and Fall of the Third Reich. New York City: Simon & Schuster. ISBN 0-671-72868-7. {{cite book}}: Cite has empty unknown parameter: |coauthors= (help)
  67. ೬೭.೦ ೬೭.೧ Annussek, Greg (2005). Hitler's Raid to Save Mussolini. Da Capo Press. ISBN 978-0-306-81396-2.
  68. "The twilight of Italian fascism". EnterStageRight.com. 8 January 2008.
  69. Peter York. Dictator Style. Chronicle Books, San Francisco (2006), ISBN 10:0-8118-5314-4. pp. 17–18.
  70. ೭೦.೦ ೭೦.೧ ಡಿ.ಎಮ್.ಸ್ಮಿತ್ 1982, p. 1
  71. ೭೧.೦ ೭೧.೧ ೭೧.೨ ಡಿ.ಎಮ್.ಸ್ಮಿತ್ 1982, p. 8
  72. ಡಿ.ಎಮ್.ಸ್ಮಿತ್ 1982, p. 2-3
  73. ೭೩.೦ ೭೩.೧ ಡಿ.ಎಮ್.ಸ್ಮಿತ್ 1982, p. 12
  74. ೭೪.೦ ೭೪.೧ ೭೪.೨ ಡಿ.ಎಮ್.ಸ್ಮಿತ್ 1982, p. 15
  75. ರೇಶೇಲ್ ಮುಸೊಲಿನಿ 1974, p. 129
  76. ೭೬.೦ ೭೬.೧ ೭೬.೨ ೭೬.೩ ೭೬.೪ ೭೬.೫ ೭೬.೬ ೭೬.೭ ಡಿ.ಎಮ್.ಸ್ಮಿತ್ 1982, p. 162-163
  77. ಡಿ.ಎಮ್.ಸ್ಮಿತ್ 1982, p. 222-223
  78. ೭೮.೦ ೭೮.೧ ಡಿ.ಎಮ್.ಸ್ಮಿತ್ 1982, p. 311
  79. ರೇಶೇಲ್ ಮುಸೊಲಿನಿ1974, p. 131
  80. ರೇಶೇಲ್ ಮುಸೊಲಿನಿ 1974, p. 135
  81. "Mussolini was a fierce anti-Semite". 18 November 2009. Archived from the original on 20 ಜನವರಿ 2012. Retrieved 10 ಆಗಸ್ಟ್ 2021.
  82. ಟೋಲ್ಯಾಂಡ್, ಜಾನ್. (1966). The Last 100 Days Random House, OCLC 294225
  83. "Benito Mussolini". Celebritymorgue.com. 1945-04-28. Archived from the original on 2009-03-16. Retrieved 2009-03-13.
  84. ಟೈಮ್ ಮ್ಯಾಗಜೀನ್, ಮೇ 7, 1945
  85. Quoted in "Mussolini: A New Life" - ಪುಟ 276 - ನಿಕೋಲಸ್ ಬರ್ಜೆಸ್ ಫ್ಯಾರೆಲ್ – 2004
  86. Jim Heddlesten. "''Commando Supremo: Events of 1941". Comandosupremo.com. Retrieved 2009-03-13.

ಗ್ರಂಥಸೂಚಿ

ಬದಲಾಯಿಸಿ
  • Mussolini . ಬಾಸ್‌ವರ್ತ್ ಆರ್.ಜೆ.ಬಿ., London, Hodder, 2002 (hardback ISBN 0-340-73144-3); (paperback ISBN 0-340-80988-4).
  • "Mussolini's Italy: Life Under the Dictatorship 1915-1945 ". ಬಾಸ್‌ವರ್ತ್ ಆರ್.ಜೆ.ಬಿ., London, Allen Lane, 2006 (hardback ISBN 0-7139-9697-8, paperback 2006 ISBN 0-14-101291-9).
  • The Birth of Fascist Ideology, From Cultural Rebellion to Political Revolution , ಜೀವ್, ಟರ್ನ್‌ಹೆಲ್, ವಿದ್ ಮಾರಿಯೋ ಸ್ನಾಜ್‌ಡರ್ ಮತ್ತು ಮಯಾ ಆಶೆರಿ, ಅನುವಾದ- ಡೇವಿಡ್ ಮೈಸೆಲ್, ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್, NJ, 1994. pg 214.
  • Mussolini's Cities: Internal Colonialism in Italy, 1930-1939 , Cambria Press: 2007
  • Mussolini's Rome: rebuilding the Eternal City , ಬೋರ್ಡೆನ್ ಡಬ್ಲ್ಯೂ. ಪೇಂಟರ್, ಜೂನಿಯರ್., 2005
  • Mussolini , ರೆನ್‍೬ಜೋ ಡಿ ಫೆಲೀಸ್, ಟೊರಿನೋ: Einaudi, 1995.
  • Mussolini: A biography , by ಡೆನಿಸ್ ಮ್ಯಾಕ್ ಸ್ಮಿಥ್, Borzoi Book published by ಅಲ್‌ಫ್ರೆಡ್ ಎ. ನಾಫ್, Inc., 1982, ISBN 0-394-50694-4
  • Mussolini: A New Life , ನಿಕೋಲಸ್ ಫ್ಯಾರೆಲ್, London: Phoenix Press, 2003, ISBN 1-84212-123-5.
  • Mussolini: An Intimate Biography by ರೇಶೇಲ್ ಮುಸೊಲಿನಿ, ಅಲ್ಬರ್ಟ್ ಜಾರ್ಕಾಗೆ ಹೇಳಿದಂತೆ, Pocket Book edition, 1977, published by arrangement with William Morrow & Company, Inc. (Morrow edition published 1974), ISBN 0-671-81272-6, Library of Congress Catalog Card Number: 74-1129
  • Mussolini: The Last 600 Days of Il Duce , ರೇ ಮೋಸ್ಲಿ, ಡಲಾಸ್: Taylor Trade Publishing, 2004.
  • Mussolini in the First World War: The Journalist, the Soldier, the Fascist . ಓ’ಬ್ರೇನ್, ಪಾಲ್. Oxford: Berg Publishers, 2004 (hardback, ISBN 1-84520-051-9; (paperback, ISBN 1-84520-052-7).
  • Mastering Modern World History by ನಾರ್ಮನ್ ಲೋವ್ "Italy, 1918-1945: the first appearance of fascism.
  • Europe 1870-1991 by ಟೆರಿ ಮೊರಿಸ್ ಮತ್ತು ಡೆರ್ರಿಕ್ ಮರ್ಫಿ
  • Il Duce - ಕ್ರಿಸ್ಟೋಫರ್ ಹಿಬ್ಬರ್ಟ್
  • The Last Centurion by ರುಡಾಲ್ಫ್ ಎಸ್. ಡಾಲ್ಡಿನ್ www.benito-mussolini.com ISBN 0-921447-34-5
  • Hitler and Mussolini. The Secret Meetings By ಸಾಂತಿ ಕೊರ್ವಾಜಾ ಅನುವಾದ- ರಾಬರ್ಟ್ ಎಲ್. ಮಿಲ್ಲರ್ Enigma 2001 ISBN 1-929631-00-6
  • Mussolini. The Secrets of his Death by ಲೂಶಿಯಾನೋ ಗ್ಯಾರಿಬಾಲ್ಡಿi Enigma 2004 ISBN 1-929631-23-5
  • L'archivio segreto di Mussolini , ಅರ್ರಿಗೋ ಪೆಟಾಚ್ಚೋ (ಸಂ.), ಮೊಂಡಾಡೊರಿ, 1998, ISBN 88-04-44914-4

ಮುಸೊಲಿನಿಯ ಬರಹಗಳು

ಬದಲಾಯಿಸಿ
  • Giovanni Hus, il Veridico(Jan Hus, True prophet) , Rome (1913). Published in America as John Hus (New York: Albert and Charles Boni, 1929). Republished by the Italian Book Co., NY (1939) as John Hus, the Veracious .
  • The Cardinal's Mistress (ಅನು. ಹಿರಾಮ್ ಮದರ್‌ವೆಲ್, New York: Albert and Charles Boni, 1928)
  • "ಫ್ಯಾಸಿಸಮ್‌ನ ತತ್ವಗಳು" ಎಂಬ ಬೆನಿಟೊ ಮುಸೊಲಿನಿ ವಿರಚಿತ ಪ್ರಬಂಧವೊಂದು Enciclopedia Italianaದ 1932ರ ಆವೃತ್ತಿಯಲ್ಲಿ ಪ್ರಕಟವಾಯಿತು ಮತ್ತು ಅದರ ಕೆಲವು ಭಾಗಗಳನ್ನು Doctrine of Fascismನಲ್ಲಿ ಓದಬಹುದು. ಜತೆಗೇ ಸಂಪೂರ್ಣ ಪಠ್ಯದ ಕೊಂಡಿಗಳೂ ಸಹ ಇವೆ.
  • La Mia Vita ("ನನ್ನ ಜೀವನ"), ರೋಮ್‌ನ ಅಮೆರಿಕನ್ ರಾಯಭಾರಿಯ (ಚೈಲ್ಡ್) ಕೋರಿಕೆಯ ಮೇರೆಗೆ ರಚಿಸಲಾದ ಮುಸೊಲಿನಿಯ ಜೀವನಚರಿತ್ರೆ. ಮೊದಮೊದಲು ಈ ಬಗ್ಗೆ ಆಸಕ್ತನಾಗಿರದಿದ್ದ ಮುಸೊಲಿನಿ, ಕೊನೆಗೆ ತನ್ನ ಜೀವನದ ಕಥೆಯನ್ನು ತನ್ನ ತಮ್ಮ ಅರ್ನಾಲ್ಡೋ ಮುಸೊಲಿನಿಗೆ ಹೇಳಿ ಬರೆಸಲು ನಿಶ್ಚಯಿಸಿದನು. 1929ರವರೆಗಿನ ಅವಧಿಯನ್ನು ಬಳಸಿರುವ ಕಥೆಯು, ಇಟಾಲಿಯನ್ ರಾಜಕೀಯದ ಬಗ್ಗೆ ಮುಸೊಲಿನಿಯ ವೈಯುಕ್ತಿಕ ಆಲೋಚನೆಗಳು ಮತ್ತು ಅತನ ಹೊಸ ಕ್ರಾಂತಿಕಾರೀ ಕಲ್ಪನೆಗೆ ಇಂಬುನೀಡಿದ ಕಾರಣಗಳನ್ನು ಒಳಗೊಂಡಿದೆ. ಇಲ್ಲಿ ರೋಮ್ ಮೇಲಿನ ದಂಡಯಾತ್ರೆ ಮತ್ತು ಸರ್ವಾಧಿಕಾರಿತ್ವದ ಆರಂಭಗಳ ಬಗ್ಗೆ ಬರೆಯಲಾಗಿದ್ದು, ಇಟಾಲಿಯನ್ ಸಂಸತ್ತಿನಲ್ಲಿ ಆತ ನೀಡಿದ ಕೆಲವು ಅತ್ಯಂತ ಜನಪ್ರಿಯ ಭಾಷಣಗಳನ್ನೂ ಒಳಗೊಂಡಿದೆ.(ಅಕ್ಟೋಬರ್ 1924, ಜನವರಿ 1925).
  • 1951ರಿಂದ 1962ರವರೆಗೆ ಎಡೊವಾರ್ಡೋ ಮತ್ತು ಡುಯಿಲಿಯೋ ಸಸ್ಮೆಲ್ ಮುಸೊಲಿನಿಯ opera omnia (ಸಮಗ್ರ ರಚನೆಗಳು)ವನ್ನು 35 ಸಂಪುಟಗಳಲ್ಲಿ ಹೊರತರುವುದಕ್ಕಾಗಿ "ಲಾ ಫೆನೀಸ್" ಎಂಬ ಪ್ರಕಾಶನಕ್ಕಾಗಿ ಕೆಲಸ ಮಾಡಿದರು

ಹೊರಗಿನ ಕೊಂಡಿಗಳು

ಬದಲಾಯಿಸಿ
Political offices
ಪೂರ್ವಾಧಿಕಾರಿ
Luigi Facta
Prime Minister of Italy
1922 – 1943
ಉತ್ತರಾಧಿಕಾರಿ
Pietro Badoglio
ಪೂರ್ವಾಧಿಕಾರಿ
Carlo Schanzer
Italian Minister of Foreign Affairs
1922 – 1929
ಉತ್ತರಾಧಿಕಾರಿ
Dino Grandi
ಪೂರ್ವಾಧಿಕಾರಿ
Dino Grandi
Italian Minister of Foreign Affairs
1932 – 1936
ಉತ್ತರಾಧಿಕಾರಿ
Galeazzo Ciano
ಪೂರ್ವಾಧಿಕಾರಿ
Galeazzo Ciano
Italian Minister of Foreign Affairs
1943
ಉತ್ತರಾಧಿಕಾರಿ
Raffaele Guariglia
ಪೂರ್ವಾಧಿಕಾರಿ
Paolino Taddei
Italian Minister of the Interior
1922 – 1924
ಉತ್ತರಾಧಿಕಾರಿ
Luigi Federzoni
ಪೂರ್ವಾಧಿಕಾರಿ
Luigi Federzoni
Italian Minister of the Interior
1926 – 1943
ಉತ್ತರಾಧಿಕಾರಿ
Bruno Fornaciari
ಪೂರ್ವಾಧಿಕಾರಿ
New Title
Head of State of the Italian Social Republic
1943 – 1945
ಉತ್ತರಾಧಿಕಾರಿ
End Title
ಪೂರ್ವಾಧಿಕಾರಿ
New Title
Minister of Foreign Affairs of the Italian Social Republic
1943 – 1945
ಉತ್ತರಾಧಿಕಾರಿ
End Title