ಉಕ್ಕು

(ಸ್ಟೀಲ್ ಇಂದ ಪುನರ್ನಿರ್ದೇಶಿತ)

'ಸ್ಟೀಲ್' ಎಂದು ಇಂಗ್ಲೀಷ್ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಇದು ಕಬ್ಬಿಣ ಮತ್ತು ಇಂಗಾಲಮಿಶ್ರಲೋಹವಾಗಿದೆ. ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 2.1% ಇದೆ. ಇದು ಪ್ರಾಚೀನ ಕಾಲದಿಂದಲೂ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಲ್ಲಿರುವ ಒಂದು ಜನಪ್ರಿಯ ಲೋಹ. ಪ್ರಪಂಚದಲ್ಲಿ ಉಕ್ಕನ್ನು ವಾರ್ಷಿಕವಾಗಿ ಸುಮಾರು 1.30 ಬಿಲಿಯನ್ ಟನ್ನುಗಳಷ್ಟನ್ನು ಉತ್ಪಾದಿಸಲಾಗುತ್ತದೆ. ಆಧುನಿಕ ಉಕ್ಕನ್ನು ವಿವಿಧ ರೀತಿಯ ಗ್ರೇಡ್ಗಳ ಮೂಲಕ ಇದಕ್ಕಾಗಿಯೇ ಇರುವ 'ಪ್ರಮಾಣಗಳ ಸಂಸ್ಥೆ'ಗಳು ಗುರುತಿಸುತ್ತವೆ.

ಬ್ಲೂಮರಿಗಳಲ್ಲಿ ಉಕ್ಕಿನ ತಯಾರಿಕೆ
ವಿವಿಧ ರೀತಿಯ ಕಳೆಗಳನ್ನು ರೂಪಿಸಲು ಅಗತ್ಯವಿರುವ ಸ್ಥಿತಿಗಳನ್ನು ತೋರಿಸುತ್ತಿರುವ ಇಂಗಾಲ-ಉಕ್ಕು ಕಳೆ ಚಿತ್ರ.

ನಿರೂಪಣೆ

ಬದಲಾಯಿಸಿ
  • ಕಬ್ಬಿಣದ ಒಂದು ರೂಪವಾದ ಇದು ಕನಿಷ್ಟ ಒಂದು ಮೇರೆಯ ಉಷ್ಣತೆಯಲ್ಲಿ ಸಾಗಬಡಿಯತಕ್ಕದ್ದಾಗಿದೆ. ಅಲ್ಲದೆ, ಇದರ ಜತೆಗೆ ಇದು ಎರಡರಲ್ಲಿ ಒಂದೂ, ಆರಂಭದ ಸಾಗಬಡಿಯತಕ್ಕ ವಸ್ತುವನ್ನಾಗಿ ಎರಕ ಹೊಯ್ಯಬಹುದು. ಅಥವಾ ಒಮ್ಮೆಗೆ ತಣ್ಣಗೆ ಮಾಡುವುದರಿಂದ, ಹೆಚ್ಚು ಗಡಸಾಗುವಿಕೆಯ ಸಾಮರ್ಥ್ಯವಿರುವಿದು. ಇಲ್ಲವೇ, ಎರಕ ಹೊಯ್ಯಬಹುದು ಮತ್ತು ಗಡಸಾಗುವಿಕೆಯ ಸಾಮರ್ಥ್ಯ ಎರಡೂ ಇರುವುದು. ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 2.1% ಇದೆ.
  • ಇದಕ್ಕಿಂತ ಹೆಚ್ಚಿಗೆ ಇಂಗಾಲದ ಪ್ರಮಾಣವು ಇದ್ದರೆ, ಅದರಲ್ಲಿರುವ ಇತರೆ ವಸ್ತುಗಳನ್ನು ಅವಲಂಬಿಸಿ ಅದನ್ನು 'ಬೀಡು ಕಬ್ಬಿಣ(ಕ್ಯಾಸ್ಟ್ ಐರನ್)' ಎಂದು ಕರೆಯುತ್ತಾರೆ. ಇದಕ್ಕಿಂತ ಕಮ್ಮಿ ಇದ್ದರೆ, ಲೋಹವು ಮೃದು ಮತ್ತು ದುರ್ಭಲವಾಗುವುದು. ಇಂಗಾಲದ ಪ್ರಮಾಣವು ಬಹಳ ಕಡಿಮೆ ಇದ್ದು, ಸ್ಲಾಗ್ನ ಪ್ರಮಾಣ ಹೆಚ್ಚಿಗೆ ಇದ್ದರೆ ಅದನ್ನು 'ಹದಮಾಡಿದ ಕಬ್ಬಿಣ(ರಾಟ್ ಐರನ್)' ಎಂದು ಕರೆಯುತ್ತಾರೆ.
  • ಉಕ್ಕಲ್ಲಿ ಕೆಲವು ಗುಣಗಳನ್ನು ಅಭಿವೃದ್ಧಿಪಡಿಸಲು, ಅಗತ್ಯಕ್ಕೆ ತಕ್ಕಂತೆ ಮ್ಯಾಂಗನೀಸ್, ನಿಕ್ಕ್ಲ್, ಕ್ರೋಮಿಯಮ್, ಮಾಲಿಬ್ಡೆನಮ್, ಬೋರಿಯಂ, ಟಿಟಾನಿಯಂ, ವ್ಯನಡಿಯಂ ಮತ್ತು ನಿಯೋಬಿಯಂ ಮುಂತಾದ ಇತರೆ ಲೋಹಗಳನ್ನು ಸೇರಿಸುವುದಲ್ಲದೆ, ಗಂಧಕ, ರಂಜಕ ಮತ್ತು ಸಿಲಿಕಾನ್ ಮುಂತಾದ ಮೂಲ ವಸ್ತುಗಳು ಹಾಗು ಆಮ್ಲಜನಕ ಮತ್ತು ಸಾರಜನಕವನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ಮಿಶ್ರಲೋಹ(ಅಲಾಯ್)ವನ್ನು ತಯಾರಿಸಿ ಬಳಸುತ್ತಾರೆ.

ಉಕ್ಕಿನ ತಯಾರಿಕೆಯ ಚರಿತ್ರೆ

ಬದಲಾಯಿಸಿ
  • ಉಕ್ಕು ಒಂದು ಪುರಾತನ ಲೋಹ ಮತ್ತು ಬ್ಲೂಮರಿಗಳಲ್ಲಿ ನಡೆಸುವಲ್ಲಿ ಅಥವಾ ಕಬ್ಬಿಣದ ಅದುರನ್ನು ಕರಗಿಸಿ ಪ್ರತ್ಯೇಕಿಸುವ ಜಾಗದಲ್ಲಿ ತಯಾರಿಸಲಾಗುತ್ತಿತ್ತು. ಸುಮಾರು 4000 ವರ್ಷಗಳ ಹಿಂದಿನ ಅನಾಟೋಲಿಯ ಪ್ರಾಚ್ಯವಸ್ತುವಿನ ಜಾಗದಲ್ಲಿ ಉತ್ಖನನದಲ್ಲಿ ದೊರೆತಿರುವ ಉಕ್ಕಿನ ಕವಚದ ಚೂರು ಹಿಂದಿನ ಉಕ್ಕಿನ ತಯಾರಿಕೆಯ ಕುರುಹು ಎಂದು ತಿಳಿಯಬಹುದಾಗಿದೆ. ಇದಾದನಂತರ, ಪೂರ್ವ ಆಪ್ರಿಕಾದಲ್ಲಿರುವ ಉಕ್ಕು ಕ್ರಿ.ಪೂ. 400 ಕ್ಕೆ ಕೊಂಡಯ್ಯುವುದು. ಕ್ರಿ.ಪೂ. 4ನೇ ಶತಮಾನದ ಆಯುಧಗಳಾದ ಪಲ್ಕಾಟಗಳನ್ನು ಲಬೇರಿಯನ್ ಪೆನಿನ್ಸುಲಿಯದಲ್ಲಿ ತಯಾರಿಸಲಾಗುತಿತ್ತು. ನೋರಿಕ್ ಉಕ್ಕನ್ನು ರೋಮನ್ ಸೈನ್ಯದಲ್ಲಿ ಬಳಸಲಾಗುತ್ತಿತ್ತು. ಕ್ರಿ.ಪೂ. 650 ರಲ್ಲಿ ಸ್ಪಾರ್ಟಾದಲ್ಲಿ ಉಕ್ಕನ್ನು ಬಹಳಷ್ಟು ಪ್ರಮಾಣದಲ್ಲಿ ಬಳಸಲಾಗುತ್ತಿತ್ತು.
  • ವೇರಿಂಗ್ ರಾಜ್ಯದ ಚೈನಾದವರಲ್ಲಿ(ಕ್ರಿ.ಪೂ. 403-221) ಆರಿಸುವಂತಹ ಗಡಸು(ಕ್ವೆಂಚ್ ಹಾರ್ಡ್ನಂಡ್) ಉಕ್ಕು ಇತ್ತು. ಚೈನಾದ ಹ್ಯಾನ್ ವಂಶದ(ಕ್ರಿ.ಪೂ. 202-ಕ್ರಿ.ಶ.220)ವರು ಹದಮಾಡಿದ ಕಬ್ಬಿಣದ ಜತೆ ಎರಕದ ಕಬ್ಬಿಣವನ್ನು ಕರಗಿಸಿ ಇಂಗಾಲಯುಕ್ತ ಮಾಧ್ಯಮಿಕ ಉಕ್ಕನ್ನು ತಯಾರಿಸುತ್ತಿದ್ದರು. 2000 ವರ್ಷಗಳ ಹಿಂದೆ ಪೂರ್ವ ಆಪ್ರಿಕಾದ ಹಯಾ ದವರು 1802 ಸೆಲ್ಸಿಯಸ್ ನಲ್ಲಿ ಇಂಗಾಲಯುಕ್ತ ಉಕ್ಕನ್ನು ತಯಾರಿಸುವ ಭಟ್ಟಿಯನ್ನು ಆವಿಷ್ಕರಿಸಿದ್ದರು. ಭಾರತ ಉಪಖಂಡದಲ್ಲಿ ಹೆಚ್ಚಿನ ಇಂಗಾಲಯುಕ್ತ ಉಕ್ಕಿನ ತಯಾರಿಕೆಯ ಬಗ್ಗೆ ಸಾಕ್ಷಿ ಯು ಶ್ರೀಲಂಕಾದ ಸಮನಲವೇವ ಎಂಬಲ್ಲಿ ದೊರಕುವುದು.
  • ಕ್ರಿ.ಶ. ಐದನೇ ಶತಮಾನದಲ್ಲಿ ಚೈನಾದವರು 'ವುಟ್ಜ್' ಉಕ್ಕನ್ನು ತಯಾರಿಸುವ ತಂತ್ರಜ್ಞಾನವನ್ನು ಭಾರತದಿಂದ ಆಮದು ಮಾಡಿಕೊಂಡು, ತಮ್ಮ ಉಕ್ಕನ್ನು ಕಮ್ಮಾರಿಕೆ(ಪೋರ್ಜ್) ಮಾಡುವ ವಿಧಾನದ ಜತೆಗೆ ಅಳವಡಿಸಿಕೊಂಡಿದ್ದರು. ಶ್ರಿಲಂಕಾದಲ್ಲಿ ಈ ಮೊದಲು ಉಕ್ಕಿನ ತಯಾರಿಕೆಯಲ್ಲಿ ಮುಂಗಾರು ಮಾರುತಗಳನ್ನು ಉಪಯೋಗಿಸಿಕೊಳ್ಳುವ ಅಪೂರ್ವ ಭಟ್ಟಿಗಳನ್ನು ಇಂಗಾಲಯುಕ್ತ ಉಕ್ಕನ್ನು ತಯಾರಿಸಲು ಅಳವಡಿಸಿಕೊಂಡಿದ್ದರು. 'ವುಟ್ಜ್' ಉಕ್ಕನ್ನು 'ಡಮಸ್ಕಸ್' ಉಕ್ಕು ಎಂದು ಕರೆಯಲಾಗುತ್ತದೆ. ಇದು ಬಹಳ ಬಾಳಿಕೆ ಬರುವ ವಸ್ತು ಎಂದು ಮತ್ತು ಅದರ ಹರಿತಕ್ಕೆ ಒಳಪಡುವ ಸಾಮರ್ಥ್ಯಕ್ಕೆ ಜನಪ್ರಿಯವಾಗಿದೆ.
  • ಇದನ್ನು ಬಹಳಷ್ಟು ವಸ್ತುಗಳನ್ನು ಉಪಯೋಗಿಸಿ ಇತರೆ ಲೇಶಧಾತುಗಳ ಜತೆಗಳ ಸೇರಿಸಿ ಉತ್ಪಾದಿಸಲಾಗುತ್ತಿತ್ತು. ಇದು ಕಬ್ಬಿಣವು ಮುಖ್ಯ ಭಾಗವಾಗಿರುವ ಒಂದು ಮಿಶ್ರಲೋಹವಾಗಿತ್ತು. ಇತ್ತೀಚಿನ ಅಧ್ಯಯನಗಳು, ಇಂಗಾಲದ ನ್ಯಾನೋ ಟ್ಯೂಬ್ಗಳು ಅವುಗಳ ರಚನೆಯಲ್ಲಿ ಇರುವ ಬಗ್ಗೆ, ಅವುಗಳ ಗುಣಲಕ್ಷಣಗಳ ದಂತ ಕತೆಗಳ ಬಗ್ಗೆ ಕಾರಣಗಳನ್ನು ಕೊಡುತ್ತವೆ. ಆಕಾಲದ ತಂತ್ರಜ್ಞಾನದಲ್ಲಿ ಇದು ಆಕಸ್ಮಿಕವಾಗಿ ಉತ್ಪಾದಿತವಾದಂತೆ ತೋರುವುದೇ ವಿನಾ ಬೇಕೆಂದು ರಚಿಸಿದ್ದಲ್ಲ. ನೈಸರ್ಗಿಕ ಗಾಳಿಯನ್ನು ಮರ ಗಳನ್ನು ಉಪಯೋಗಿಸಿ ಕಬ್ಬಿಣವಿರು ಮಣ್ಣನ್ನು ಕಾಯಿಸಲಾಗುತ್ತಿತ್ತು.
  • ಪ್ರಾಚೀನ ಸಿಂಹಳಿಯರು, ಪ್ರತಿ ಎರೆಡು ಟನ್ನ್ ಅದುರಿಗೆ ಒಂದು ಟನ್ನ್ ಉಕ್ಕನ್ನು ಉತ್ಪಾದಿಸುತಿದ್ದರು. ಈ ತರಹದ ಒಂದು ಭಟ್ಟಿಯು ಶ್ರಿಲಂಕಾದ ಸಮನಲವೇವ ದಲ್ಲಿ ಕಂಡಿಬಂದಿರುವುದಲ್ಲದೆ, ಪ್ರಾಚ್ಯವಸ್ತು ಶಾಸ್ತ್ರಜ್ಞರು ಪ್ರಾಚೀನರಂತೆ ಉಕ್ಕನ್ನು ತಯಾರಿಸುವಲ್ಲಿ ಸಫಲರಾಗಿದ್ದಾರೆ.

ಮೆರ್ವ್ನಲ್ಲಿ ಮೂಸೆಯಲ್ಲಿ, ಮೂಸೆ ಉಕ್ಕನ್ನು(ಕ್ರುಸಿಬಲ್ ಸ್ಟೀಲ್), ಶುದ್ಧ ಕಬ್ಬಿಣ ಮತ್ತು ಇಂಗಾಲವನ್ನು ಕಾಯಿಸಿ ಮತ್ತು ತಣ್ಣಗಾಗಿಸುವ ಮೂಲಕ ಪಡೆಯುತ್ತಿದ್ದರು. 11ನೇ ಶತಮಾನದಲ್ಲಿ ಸಾಂಗ್ ಚೈನಾದಲ್ಲಿ, 'ಬೆರ್ಗಾನೆಸ್ಕ್ಯು' ಎಂಬ ವಿಧಾನದಲ್ಲಿ ಕೀಳಾಗೀರುವ ಮತ್ತು ಸಜಾತೀಯವಲ್ಲದ ಉಕ್ಕನ್ನು ಹಾಗು ಆಧುನಿಕ 'ಬಿಸೆಮೆರ್ ಸಂಸ್ಕರಣೆ' ವಿಧಾನಕ್ಕೆ ಪೂರ್ವಬಾವಿ ಯಾದಂತೆ ಪುನಃ ಪುನಃ ಕಮ್ಮಾರಿಕೆ(ಪೋರ್ಜಿಂಗ್) ಮಾಡುವ ಮೂಲಕ ಪಾಲುಪಾಲಾದ ಡಿಕಾರ್ಬೊರೈಜೇಶನ್ನ್ನು ಉಪಯೋಗಿಸಿ ಮುಕ್ತ ಬೆಂಕಿಯ(ಕೋಲ್ಡ ಬ್ಲಾಸ್ಟ್)ಲ್ಲಿ ಉಕ್ಕನ್ನು ತಯಾರಿಸಿರುವ ಬಗ್ಗೆ ಸಾಕ್ಷಿ ಇದೆ.

ತಯಾರಿಕೆ

ಬದಲಾಯಿಸಿ
 
ಕಬ್ಬಿಣದ ಅದುರಿನ ಚೂರುಗಳಿಂದ ಉಕ್ಕಿನ ತಯಾರಿಕೆ

ಉಕ್ಕಿನ ತಯಾರಿಕೆಯೆಂದರೆ ಪೆಡಸು ಕಬ್ಬಿಣದಿಂದ ಕಶ್ಮಲವನ್ನು ತೆಗೆಯುವುದು. ಇಂಗಾಲದ ಪ್ರಮಾಣವನ್ನು ಸರಿದೂಗಿಸುವುದು ಮತ್ತು ಬೇಕಾದ ಗುಣಲಕ್ಷಣಗಳನ್ನು ಪಡೆಯಲು ಮಿಶ್ರಲೊಹ್ಯ ಧಾತುಗಳನ್ನು ಸೇರಿಸುವುದೇ ಆಗಿದೆ.

ಉಕ್ಕಿನ ತಯಾರಿಕೆಯ ತಂತ್ರಜ್ಞಾನ

ಬದಲಾಯಿಸಿ
  • ವಾಣಿಜ್ಯ ಸಂಸ್ಕರಣೆಯಲ್ಲಿ ಕಬ್ಬಿಣವನ್ನು ಕಬ್ಬಿಣದ ಅದಿರಿನಿಂದ ಪುಟವಿಟ್ಟು ಲೋಹವನ್ನು ವಿಂಗಡಿಸಿದಾಗ, ಅದು ಅಗತ್ಯಕ್ಕಿಂತ ಹೆಚ್ಚಿಗೆ ಇಂಗಾಲವನ್ನು ಹೊಂದಿರುತ್ತದೆ. ಉಕ್ಕಿನ ತಯಾರಿಸುವಾಗ, ಕಬ್ಬಿಣವನ್ನು ಕರಗಿಸಿ ಪುನಃ ಸಂಸ್ಕರಿಸಿ ಇಂಗಾಲವನ್ನು ಸರಿಯಾದ ಪ್ರಮಾಣಕ್ಕೆ ಕಮ್ಮಿ ಮಾಡಲಾಗುವ ಬಿಂದುವಿನಲ್ಲಿ, ಇತರೆ ಧಾತುಗಳನ್ನು ಸೇರಿಸ ಬಹುದು. ಈ ದ್ರವವನ್ನು, ನಿರಂತರವಾಗಿ ಉದ್ದವಾದ ಹಲಿಗೆಯಂತೆ ಎರಕಹೊಯ್ಯಬಹುದು ಅಥವಾ ಗಟ್ಟಿಗಳಾಗಿ ಎರಕಹೊಯ್ಯಬಹುದು.
  • ಅಂದಾಜು, 96% ಉಕ್ಕುನ್ನು ನಿರಂತರವಾಗಿ ಎರಕಹೊಯ್ಯಲಾಗುವುದು ಮತ್ತು ಕೇವಲ 4% ಮಾತ್ರ ಗಟ್ಟಿಗಳಾಗಿ ತಯಾರಿಸಲಾಗುವುದು. ನಂತರ ಉಕ್ಕಿನ ಗಟ್ಟಿಗಳನ್ನು ನೆನೆಗುಂಡಿಗಳಲ್ಲಿ ಕಾಯಿಸಿ ಬಿಸಿತಿರುಗಣೆಗಳ ಮೂಲಕ , ಬ್ಲೂಮ್ಗಳು ಮತ್ತು ಕೊರಡುಗಳಾಗಿ ತಯಾರಿಸಲಾಗುವುದು. ಹಲಿಗೆಗಳನ್ನು ಬಿಸಿ ಅಥವಾ ತಣ್ಣಗಿನ ಸುರುಳಿಗಳಲ್ಲಿ ತಟ್ಟೆಗಳು ಮತ್ತು ತಗಡುಗಳನ್ನಾಗಿ ಪರಿವರ್ತಿಸುವರು. ಕೊರಡುಗಳನ್ನು ಬಿಸಿ ಅಥವಾ ತಣ್ಣಗಿನ ಸುರುಳಿಗಳಲ್ಲಿ ಕೋಲುಗಳು ಮತ್ತು ತಂತಿಗಳನ್ನಾಗಿ ಪರಿವರ್ತಿಸುವರು.
  • ಬ್ಲೂಮ್ಗಳನ್ನು ಬಿಸಿ ಅಥವಾ ತಣ್ಣಗಿನ ಸುರುಳಿಗಳಲ್ಲಿ ತೊಲೆಗಳು ಮತ್ತು Ι- ಆಕಾರದ ಅಡ್ಡಪಟ್ಟಿಗಳು ಮುಂತಾದ ರಾಚನಿಕ ಉಕ್ಕಾ(ಸ್ಟ್ರಕ್ಚರಲ್ ಸ್ಟೀಲ್)ಗಿ ಪರಿವರ್ತಿಸುವರು. ಆಧುನಿಕ ಉಕ್ಕಿನ ಗಿರಣಿಗಳಲ್ಲಿ ಈ ಸಂಸ್ಕರಣೆಗಳು ಕೆಲವೊಮ್ಮೆ ಒಂದೇ ಜೋಡಣೆ ಜಾಗದಲ್ಲಿ ನಡೆಯುವುದು. ಕಬ್ಬಿಣದ ಅದಿರು ಒಂದು ಕಡೆಯಿಂದ ಒಳಗಡೆ ಬರುವುದು, ಇನ್ನೊಂದೆಡೆ ಉಕ್ಕು ಹೊರಗಡೆ ಬರುವುದು. ಕೆಲವೊಂದು ಸಂದರ್ಭಗಳಲ್ಲಿ, ಹೊರಗಡೆ ಬರುವ ಉಕ್ಕನ್ನು ದೃಢತೆಗೋಸ್ಕರ ಶಾಖೋಪಚಾರ(ಹೀಟ್-ಟ್ರೀಟ್) ಮಾಡಲಾಗುವುದು.

ಆಧುನಿಕ ಉಕ್ಕಿನ ತಯಾರಿಕೆ

ಬದಲಾಯಿಸಿ

ಯುರೋಪಿಯನ್ ದೇಶಗಳಲ್ಲಿ 17ನೇ ಶತಮಾನದಿಂದಲೂ, ಕಬ್ಬಿಣದ ಅದಿರನ್ನು ಊದುಕುಲುಮೆಯಲ್ಲಿ ಪುಟವಿಟ್ಟು ಲೋಹವನ್ನು ವಿಂಗಡಿಸಿ ಪೆಡಸು ಕಬ್ಬಿಣವನ್ನಾಗಿ ಪರಿವರ್ತಿಸುವುದು ಉಕ್ಕಿನ ತಯಾರಿಕೆಯಲ್ಲಿ ಮೊದಲ ಹೆಜ್ಜೆಯಾಗಿದ್ದಿತು. ಮೂಲತಃ, ಇದ್ದಿಲನ್ನು ಉಪಯೋಗಿಸಿದರೂ, ಆಧುನಿಕ ಪದ್ದತಿಯಲ್ಲಿ, ಉಳಿತಾಯವು ಸಾಬೀತಾಗಿರುವುದರಿಂದ ಕೋಕ್ ನ್ನು ಉಪಯೋಗಿಸಲಾಗುತ್ತದೆ.

ಹದಮಾಡಿದ ಕಬ್ಬಿಣದಿಂದ ಪ್ರಾರಂಭವಾಗುವ ಸಂಸ್ಕರಣೆ

ಬದಲಾಯಿಸಿ
  • ಈ ತರಹದ ಸಂಸ್ಕರಣೆಗಳಲ್ಲಿ, ಪೆಡಸು ಕಬ್ಬಿಣವನ್ನು ಪೈನರಿ ಕುಲುಮೆಗಳಲ್ಲಿ ಹದಮಾಡಿದ ಕಬ್ಬಿಣವನ್ನಾಗಿ ತಯಾರಿಸಿ ನಂತರ ಉಕ್ಕನ್ನು ತಯಾರಿಸುತ್ತಾರೆ. ಸಿಮೆಂಟೇಶನ್ ಸಂಸ್ಕರಣೆಯಲ್ಲಿ,ಉಕ್ಕಿನ ತಯಾರಿಕೆಯನ್ನು 1574 ರಲ್ಲಿ ಪ್ರೇಗ್ನಲ್ಲಿ ಪ್ರಕಾಶಿಸಲ್ಪಟ್ಟ ಒಂದು ಗ್ರಂಥದಲ್ಲಿ ವಿವರಿಸಲಾಗಿದೆ. ಇದು 1601ರಿಂದ ನ್ಯುರೆಂಬರ್ಗ್ನಲ್ಲಿ ಉಪಯೋಗಿಸಲಾಗಿತ್ತು. ಇದೇ ತರಹದ ಒಂದು ಸಂಸ್ಕರಣೆ ಕೇಸ್ ಹಾರ್ಡೆನಿಂಗ್ ಯದ್ಧ ಕವಚಗಳು ಮತ್ತು ಸರಿಗೆಗಳ ಬಗ್ಗೆ 1589 ರಲ್ಲಿ ನಾಪ್ಲೆಸ್ನಲ್ಲಿ ಪ್ರಕಾಶಿಸಲ್ಪಟ್ಟ ಒಂದು ಗ್ರಂಥದಲ್ಲಿ ವಿವರಿಸಲಾಗಿದೆ.
  • ಈ ಸಂಸ್ಕರಣೆಯು ಸುಮಾರು 1614ರಲ್ಲಿ ಇಂಗ್ಲೇಂಡ್ ದೇಶಕ್ಕೆ ಪರಿಚಯಿಸಲ್ಪಟ್ಟಿತಲ್ಲದೆ, 1610ರಲ್ಲಿ ಕೋಲ್ಬ್ರೂಕ್ದೇಲ್ನ ಸರ್ ಬಾಸಿಲ್ ಬ್ರೂಕ್ ರಿಂದ ಆ ತರಹದ ಉಕ್ಕುನ್ನು ತಯಾರಿಸಲು ಉಪಯೋಗಿಸಲ್ಪಟ್ಟಿತು. ಈ ಸಂಸ್ಕರಣೆಗೆ ಕಚ್ಛಾವಸ್ತುವು ಹದಮಾಡಿದ ಕಬ್ಬಿಣದ ಸಲಾಕೆಗಳು. 17ನೇ ಶತಮಾನದಲ್ಲಿ, ಸ್ವೀಡನ್ ದೇಶದ ಸ್ಟಾಕ್ಹೋಮಿನ ಉತ್ತರ ಭಾಗಗಳಲ್ಲಿ ಓರ್ಗ್ರೌಂಡ್ ಕಬ್ಬಿಣದಿಂದ ಬರುವ ಉಕ್ಕು ಉತ್ತಮವಾದೆಂದು ತಿಳಿಯಲ್ಪಟ್ಟಿತು.
  • 19ನೇ ಶತಮಾನದವರೆಗು ಎಲ್ಲಿಯವರೆಗೆ ಈ ಸಂಸ್ಕರಣೆಯನ್ನು ಉಪಯೋಗಿಸುತ್ತಿದ್ದರೋ, ಅಲ್ಲಿಯವರೆಗೂ ಇದು ಸಾಮಾನ್ಯವಾದ ಕಚ್ಛಾವಸ್ತುವಾಗಿದ್ದಿತು. ಮೂಸೆ ಉಕ್ಕು ಎನ್ನುವ ಉಕ್ಕನ್ನು ಒಂದೇ ತರಹದ ಉಕ್ಕಿನ ಫಲಿತಾಂಶ ಪಡೆಯಲು ಕುಲುಮೆಗಾರಿಕೆಗಿಂತಲೂ ಮಿಗಿಲಾಗಿ ಮೂಸೆಯಲ್ಲಿ ಕರಗಿಸುವರು. ಬಹಳಷ್ಟು ಹಿಂದಿನ ಕುಲುಮೆಗಳು ಉಕ್ಕನ್ನು ಕರಗಿಸಲು ಬೇಕಾದ ಉಷ್ಣತೆಯನ್ನು ಮುಟ್ಟಲು ಶಕ್ತವಾಗಿರಲಿಲ್ಲ. ಮೊದಲ ಆಧುನಿಕ ಮೂಸೆ ಉಕ್ಕಿನ ಕೈಗಾರಿಕೆಯು 1740ರಲ್ಲಿಯ ಬೆಂಜಮಿನ್ ಹಂಟ್ಸಮನ್ ನ ಕಂಡುಹಿಂಡುಯುವಿಕೆಯ ಫಲಿತಾಂಶವಾಗಿದೆ. ಮೇಲಿನಂತೆ ತಯಾರಿಸಿದ ಬ್ಲಿಸ್ಟರ್ ಉಕ್ಕು ಮೂಸೆಯಲ್ಲಿ ಅಥವಾ ಕುಲುಮೆಯಲ್ಲಿ ಕರಗಿಸಲಾಗಿದ್ದಿತು ಮತ್ತು ಗಟ್ಟಿಗಳಾನ್ನಾಗಿ ಎರಕಹೊಯ್ಯಲಾಗುತ್ತಿತ್ತು.

ಪೆಡಸು ಕಬ್ಬಿಣದಿಂದ ಪ್ರಾರಂಭವಾಗುವ ಸಂಸ್ಕರಣೆ

ಬದಲಾಯಿಸಿ
  • ಆಧುನಿಕ ಯುಗದ ಉಕ್ಕಿನ ತಯಾರಿಕೆಯು 1855ರಲ್ಲಿ ಹೆನ್ರಿ ಬೆಸ್ಸೆಮೆರ್ ನ ಬೆಸ್ಸೆಮೆರ್ ಸಂಸ್ಕರಣೆ ಪರಿಚಯದೊಂದಿಗೆ ಪ್ರಾರಂಭವಾಯಿತು. ಇದಕ್ಕೆ ಕಚ್ಛಾವಸ್ತುವು ಪೆಡಸು ಕಬ್ಬಿಣವಾಗಿದ್ದಿತು. ಆತನ ಪದ್ಧತಿಯು ಆತನಿಗೆ ಉಕ್ಕನ್ನು ಹೆಚ್ಚಿಗೆ ಪ್ರಮಾಣದಲ್ಲಿ ಅಗ್ಗವಾಗಿ ತಯಾರಿಸಲು ಸಾದ್ಯವಾಯಿತು. ಇದರಿಂದ, ಮೊದಲು ಬಳಸುತ್ತಿದ್ದ ಹದಮಾಡಿದ ಕಬ್ಬಿಣ(ರಾಟ್ ಐರನ್)ದ ಬದಲಾಗಿ ಹೆಚ್ಚಿನ ಉದ್ದೇಶಗಳಿಗೆ ಮೆದು ಉಕ್ಕು (ಮೈಲ್ಡ್ ಸ್ಟೀಲ್) ನ ಉಪಯೋಗ ಪ್ರಾರಂಭವಾಯಿತು.
  • ಬೆಸ್ಸೆಮೆರ್ ಸಂಸ್ಕರಣೆಯ ಸುಧಾರಣೆಯಾದ ಗಿಲ್ಕ್ರೈಸ್ಟ್ ಸಂಸ್ಕರಣೆ ಅಥವಾ ಮೂಲ ಬೆಸ್ಸೆಮೆರ್ ಸಂಸ್ಕರಣೆಯಲ್ಲಿ ಬೆಸ್ಸೆಮೆರ್ ಪರಿವರ್ತಕವನ್ನು ರಂಜಕವನ್ನು ತೆಗೆಯಲು ಪ್ರತ್ಯಾಮ್ಲಯುಕ್ತ ವಸ್ತುಗಳಿಂದ ಅಸ್ತರಿ ಹಾಕಲಾಗಿದ್ದಿತು. ಮತ್ತೊಂದು 19ನೇ ಶತಮಾನದ ಉಕ್ಕಿನ ತಯಾರಿಕೆಯು ಬೆಸ್ಸೆಮೆರ್ ಸಂಸ್ಕರಣೆಗೆ ಪೂರಕವಾದ ಸೀಮನ್ಸ್-ಮಾರ್ಟಿನ್ ಸಂಸ್ಕರಣೆ. ಅದರಲ್ಲಿ, ಕಬ್ಬಿಣದ ಸಲಾಕೆಗಳು ಅಥವಾ ಗುಜರಿ ಉಕ್ಕನ್ನು ಪೆಡಸು ಕಬ್ಬಿಣದ ಜತೆಗೆ ಕರಗಿಸಲಾಗುತ್ತಿತ್ತು.
  • 1950ರಲ್ಲಿ ಸೃಷ್ಟಿಸಲ್ಪಟ್ಟ ಲಿಂನ್ಜ್- ಡೊನಾವಿಟ್ಜ್ ಸಂಸ್ಕರಣೆಯಾದ ಪ್ರತ್ಯಾಮ್ಲಯುಕ್ತ ಆಮ್ಲಜನಕ ಉಕ್ಕಿ(ಬೆಸಿಕ್ ಅಕ್ಸಿಜನ್ ಸ್ಟೀಲ್ ಮೇಕಿಂಗ್)ನ ತಯಾರಿಕೆಯು ಮೇಲಿನ ಎಲ್ಲಾ ಉಕ್ಕಿನ ತಯಾರಿಕೆಗಳ ಮತ್ತು ಇತರೆ ಆಮ್ಲಜನಕ ಉಕ್ಕಿನ ತಯಾರಿಕೆಯ ಪದ್ದತಿಗಳನ್ನು ಹಳತಾಗಿ ಸಿದವು. ಪ್ರತ್ಯಾಮ್ಲಯುಕ್ತ ಆಮ್ಲಜನಕ ಉಕ್ಕಿ(ಬೆಸಿಕ್ ಅಕ್ಸಿಜನ್ ಸ್ಟೀಲ್ ಮೇಕಿಂಗ್)ನ ತಯಾರಿಕೆಯು ಹಿಂದಿನ ಎಲ್ಲಾ ಉಕ್ಕಿನ ತಯಾರಿಕೆಗಳ ಪದ್ದತಿಗಳಿಗಿಂತ ಶ್ರೇಷ್ಟವೆನಿಸಲು ಕಾರಣ ಕುಲುಮೆಗೆ ಎಳೆಯಲ್ಪಟ್ಟ ಆಮ್ಲಜನಕವು ಹಿಂದೆ ಉಪಯೋಗಿಸಲ್ಪಟ್ಟ ಗಾಳಿಯಿಂದ ಪ್ರವೇಶಿಸು ವ ಕಶ್ಮಲಗಳನ್ನು ತಡೆಯುತ್ತಿದ್ದವು.
  • ಈಗ, ವಿದ್ಯುತ್ ಖಂಡ ಕುಲುಮೆಗಳು(ಎಲೆಕ್ಟ್ರಿಕ್ ಆರ್ಕ್ ಪರ್ನಾಸಸ್) ಹೊಸ ಉಕ್ಕನ್ನು ತಯಾರಿಸಲು ಗುಜರಿ ಲೋಹಗಳನ್ನು ಮರು ಸಂಸ್ಕರಣೆ ಮಾಡುವ ಸಾಮಾನ್ಯ ವಿಧಾನವಾಗಿದೆ. ಅವುಗಳನ್ನು ಪೆಡಸು ಕಬ್ಬಿಣದಿಂದ ಉಕ್ಕನ್ನು ತಯಾರಿಸಲು ಉಪಯೋಗಿಸುತ್ತಾರೆ. ಆದರೆ, ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ವ್ಯಯವಾಗುವುದರಿಂದ(ಒಂದು ಮೆಟ್ರಿಕ್ ಟನ್ ಗೆ ಸುಮಾರು 440 kWh), ಸಾಮಾನ್ಯವಾಗಿ ಎಲ್ಲಿ ಅಗ್ಗದ ವಿದ್ಯುತ್ ಸಿಗುವುದೋ ಅಲ್ಲಿ ಮಾತ್ರ ಮಿತವ್ಯಯಕಾರಿಯು.

=ಉಕ್ಕಿನ ಗುಣ ಮತ್ತು ಸಂಯುಕ್ತತೆ

ಬದಲಾಯಿಸಿ
  • ವೈಜ್ಞಾನಿಕ ಪರಿಭಾಷೆಯಲ್ಲಿ ಉಕ್ಕು ಎಂದರೆ ಕಬ್ಬಿಣ ಮತ್ತು ಇಂಗಾಲಗಳ ಮಿಶ್ರಲೋಹ. ಅಗತ್ಯಕ್ಕೆ ಬೇಕಾದಂತೆ ಹದಗೊಳಿಸಬಹುದಾದ ಗುಣ ಹೊಂದಿರುವ ಕಾರಣಕ್ಕೆ ಇದು ಬಳಕೆಸ್ನೇಹಿಯಾಗಿದೆ. ಉಕ್ಕು ಎಂದರೆ, ಅದು ಮೆದು ಕಬ್ಬಿಣವೂ ಅಲ್ಲ. ಬೀಡು ಕಬ್ಬಿಣವೂ ಅಲ್ಲ. ಇವುಗಳೆರಡರ ನಡುವಣ ಸ್ಥಿತಿ. ಇದಕ್ಕೆ ಪ್ರಮುಖ ಕಾರಣ ಕಬ್ಬಿಣದಲ್ಲಿ ಬೆರೆತಿರುವ ಇಂಗಾಲದ ಪ್ರಮಾಣ. ಮೆದು ಕಬ್ಬಿಣದಲ್ಲಿ ಇಂಗಾಲದ ಅಂಶ ಶೇ 0.02ರಿಂದ 0.08ರಷ್ಟು ಇದ್ದರೆ, ಬೀಡು ಕಬ್ಬಿಣದಲ್ಲಿ ಶೇ 3ರಿಂದ 4.5ರಷ್ಟು ಇರುತ್ತದೆ. ಉಕ್ಕಿನಲ್ಲಿ ಇಂಗಾಲದ ಪ್ರಮಾಣ ಶೇ 0.2ರಿಂದ ಶೇ 1.5ರಷ್ಟು ಇದೆ. ಮೆದುಕಬ್ಬಿಣಕ್ಕೆ ಬಾಗುವ ಗುಣ ಇದ್ದರೂ ಗಟ್ಟಿಯಾಗಿಲ್ಲ. ಬೀಡುಕಬ್ಬಿಣ ಗಟ್ಟಿಯಾಗಿದ್ದರೂ ಅಗತ್ಯಕ್ಕೆ ಬೇಕಾದಂತೆ ಅದನ್ನು ಹೊಂದಿಸಿಕೊಳ್ಳುವ ಗುಣ ಇಲ್ಲ. ಆದರೆ, ಉಕ್ಕು ಹಾಗಲ್ಲ. ಗಟ್ಟಿಯೂ ಇದೆ, ಬಾಗುವ ಗುಣವನ್ನೂ ಹೊಂದಿದೆ.

ಪ್ರಾಚೀನತೆ

ಬದಲಾಯಿಸಿ
  • ಪುರಾತನ ನಾಗರಿಕತೆಯ ಜನರಿಗೆ ಕಬ್ಬಿಣದ ಪರಿಚಯ ಯಾವಾಗ ಆಯಿತೋ ಅಂದಿನಿಂದಲೇ ಕಬ್ಬಿಣದ ಮಿಶ್ರಲೋಹಗಳ ಪರಿಚಯವೂ ಇತ್ತು. ಮಣ್ಣಿನ ಕುಲುಮೆಯಲ್ಲಿ ಕಬ್ಬಿಣವನ್ನು ಕರಗಿಸಿ, ಮಿಶ್ರಲೋಹಗಳನ್ನು ತಯಾರಿಸುವ ವಿಧಾನ ಅವರಿಗೆ ಗೊತ್ತಿತ್ತು. ಉಕ್ಕಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಕ್ರಿ.ಪೂ 1800ರಲ್ಲಿ ಜನರು ಬಳಸಿದ್ದ ಕಬ್ಬಿಣದ ಸಲಕರಣೆಗಳು ಅನಾಟೋಲಿಯಾದ ಪುರಾತತ್ವ ಪ್ರದೇಶದಲ್ಲಿ ಪತ್ತೆಯಾಗಿವೆ. ರೋಮನ್‌ ಸೇನೆಯಲ್ಲಿ ಉಕ್ಕಿನಿಂದ ಮಾಡಿದ ಅಸ್ತ್ರಗಳನ್ನು ಬಳಸುತ್ತಿದ್ದರು ಎಂಬುದಕ್ಕೂ ಸಾಕ್ಷ್ಯಗಳು ದೊರೆತಿವೆ.
  • ಉಕ್ಕಿನ ಚರಿತ್ರೆಯಲ್ಲಿ ಭಾರತದ ಪಾಲು ದೊಡ್ಡದು. ಕ್ರಿ.ಪೂ ಆರನೇ ಶತಮಾನದಿಂದಲೂ ದಕ್ಷಿಣ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಉಕ್ಕನ್ನು ತಯಾರಿಸಲಾಗುತ್ತಿತ್ತು. ದ್ರಾವಿಡ ಸಂಸ್ಕೃತಿ ಪ್ರಚಲಿತದಲ್ಲಿದ್ದ ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳಗಳ ಹಲವು ಕಡೆಗಳಲ್ಲಿ ತಯಾರಾಗುತ್ತಿದ್ದ ಉಕ್ಕು ಜಗತ್ತಿನಲ್ಲೇ ಶ್ರೇಷ್ಠ ಗುಣಮಟ್ಟದ್ದಾಗಿತ್ತಂತೆ. ಇಲ್ಲಿ ತಯಾರಾದ ಉಕ್ಕನ್ನು ಗ್ರೀಸ್‌, ರೋಮ್‌, ಚೀನಾ, ಮಧ್ಯಪ್ರಾಚ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಶ್ರೀಲಂಕಾದಲ್ಲೂ ಕಬ್ಬಿಣದ ಅದಿರುವ ಕರಗಿಸಿ ಉಕ್ಕು ತಯಾರಿಸುವ ಸುಧಾರಿತ ವಿಧಾನ ಚಾಲ್ತಿಯಲ್ಲಿತ್ತು. ಚೀನಾದ ಆಡಳಿತದಲ್ಲಿದ್ದ ಹನ್‌ ಚಕ್ರಾಧಿಪತ್ಯ ಕಾಲದಲ್ಲಿ (ಕ್ರಿ.ಪೂ 202- ಕ್ರಿ.ಶ 220) ಮೆದು ಕಬ್ಬಿಣ ಮತ್ತು ಬೀಡುಕಬ್ಬಿಣ ಕರಗಿಸಿ ಹೆಚ್ಚು ಇಂಗಾಲದ ಪ್ರಮಾಣ ಹೊಂದಿರುವ ಸದೃಢ ಉಕ್ಕನ್ನು ತಯಾರಿಸಲಾಗುತ್ತಿತ್ತು. ಪೂರ್ವ ಆಫ್ರಿಕಾದ ಹಯಾದ ಜನರು 2000 ವರ್ಷಗಳ ಹಿಂದೆಯೇ ಕಬ್ಬಿಣವನ್ನು 1,802 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಕರಗಿಸಿ ಇಂಗಾಲದ ಉಕ್ಕನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು.
  • ಜಗತ್ತಿನ ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಉಕ್ಕನ್ನು ತಯಾರಿಸುವ ವಿಧಾನ ಚಾಲ್ತಿಯಲ್ಲಿತ್ತು. ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ನೈಸರ್ಗಿಕ ಗಾಳಿಯ ಉಪಯೋಗಿಸಿ ಮಣ್ಣಿನಲ್ಲಿ ಬೆರೆತಿದ್ದ ಕಬ್ಬಿಣವನ್ನು ಕರಗಿಸಿ ಉಕ್ಕು ತಯಾರಿಸಲಾಗುತ್ತಿತ್ತು. ಈ ವಿಧಾನದಲ್ಲಿ ಉಕ್ಕನ್ನು ತಯಾರಿಸುತ್ತಿದ್ದ ಕುಲುಮೆ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಶತಮಾನಗಳು ಉರುಳಿದಂತೆ ಸುಧಾರಿತ ತಂತ್ರಜ್ಞಾನಗಳು ಅಭಿವೃದ್ಧಿಯಾಗಲು ಆರಂಭಿಸಿದವು.
  • 9 ಮತ್ತು 10ನೇ ಶತಮಾನದ ವೇಳೆಗೆ ಶುದ್ಧ ಕಬ್ಬಿಣವನ್ನು ಕಲ್ಲಿದ್ದಲಿನೊಂದಿಗೆ ಬಿಸಿ ಮಾಡುವ ಮೂಲಕ ಉಕ್ಕನ್ನು ತಯಾರಿಸುವ ಪದ್ಧತಿ ಜಾರಿಗೆ ಬಂತು. ಆದರೆ, 17ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ಊದುಕುಲುಮೆ (ಬಿಸಿಗಾಳಿ ಹಾಯಿಸುವುದು) ಮೂಲಕ ಉಕ್ಕನ್ನು ತಯಾರಿಸುವ ವಿಧಾನ ಬೆಳಕಿಗೆ ಬಂತು. 18ನೇ ಶತಮಾನದವರೆಗೂ ಉಕ್ಕು ತಯಾರಿಕೆ ದುಬಾರಿಯಾಗಿತ್ತು.

ಉಕ್ಕು ತಯಾರಿಕೆ

ಬದಲಾಯಿಸಿ
  • ಎಲ್ಲಕ್ಕಿಂತ ಹೆಚ್ಚಾಗಿ ಉಕ್ಕಿನಲ್ಲಿ ಇರಬೇಕಾದ ಇಂಗಾಲದ ಪ್ರಮಾಣವನ್ನು ನಿಯಂತ್ರಿಸುವ ಮಾರ್ಗ ಸುಲಭದ್ದಾಗಿರಲಿಲ್ಲ. ಆದರೆ, 1800ರಲ್ಲಿ ರೈಲು ಹೆಚ್ಚು ಜನಪ್ರಿಯವಾಗಿದ್ದರಿಂದ, ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚು ಪ್ರಮಾಣದಲ್ಲಿ ಉಕ್ಕು ಅಗತ್ಯವಾಯಿತು. ಇದರಿಂದಾಗಿ ಉಕ್ಕಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಯಿತು. ಆರಂಭದಲ್ಲಿ ರೈಲು ಮಾರ್ಗಗಳನ್ನು ಮೆದುಕಬ್ಬಿಣದಲ್ಲಿ ಮಾಡಲಾಗುತ್ತಿತ್ತು. ಗಟ್ಟಿ ಇರದಿದ್ದರಿಂದ ಹೆಚ್ಚು ಬಾಳಿಕೆ ಬರುತ್ತಿರಲಿಲ್ಲ. ಎರಡು ಮೂರು ತಿಂಗಳಿಗೊಮ್ಮೆ ಹಳಿಗಳನ್ನು ಬದಲಾಯಿಸಬೇಕಾಗಿತ್ತು.
  • 1855ರಲ್ಲಿ ಆಧುನಿಕ ವಿಧಾನದ ಉಕ್ಕು ತಯಾರಿಕೆ ಆರಂಭವಾಯಿತು. ಬ್ರಿಟನ್ ಲೋಹತಜ್ಞ ಹೆನ್ರಿ ಬೆಸೆಮರ್‌ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದರು. ಅದಕ್ಕೆ ‘ಬೆಸೆಮರ್‌ ಪ್ರೊಸೆಸ್‌’ ಎಂಬ ಹೆಸರೇ ಇದೆ. ಕಡಿಮೆ ವೆಚ್ಚದಲ್ಲಿ ಭಾರಿ ಪ್ರಮಾಣದಲ್ಲಿ ಉಕ್ಕು ತಯಾರಿಸಲು ಇದು ಅವಕಾಶ ಕಲ್ಪಿಸಿತು. ಗಿಲ್‌ಕ್ರಿಸ್ಟ್‌ ಥಾಮಸ್‌ ಎಂಬುವವರು ಸುಧಾರಿತ ವಿಧಾನವನ್ನು ಅಭಿವೃದ್ಧಿಪಡಿಸಿದರು. 1865ರಲ್ಲಿ ಜರ್ಮನಿ ಮೂಲದ ಎಂಜಿನಿಯರ್‌ ಕಾರ್ಲ್‌ವಿಲ್‌ಹೆಲ್ಮ್ ಸೀಮನ್ಸ್‌ ಮತ್ತು ಫ್ರಾನ್ಸ್‌ನ ಪೀರೆ ಎಮಿಲಿ ಮಾರ್ಟಿನ್‌ ಪ್ರಯತ್ನದಿಂದ ತೆರೆದ ಬೆಂಕಿ ಕುಲುಮೆಯ ಮೂಲಕ ಉಕ್ಕು ತಯಾರಿಸುವ ವಿಧಾನ ಪರಿಚಯವಾಯಿತು. ಈ ವಿಧಾನದಲ್ಲಿ ಪೆಡಸು ಕಬ್ಬಿಣವನ್ನು ಬಳಸಲಾಗುತ್ತಿತ್ತು.
  • 1948ರಲ್ಲಿ ರಾಬರ್ಟ್‌ ಡ್ಯೂರರ್‌ ಎಂಬುವವರು ಆಮ್ಲಜನಕ ಬಳಸಿ ಉಕ್ಕು ತಯಾರಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಿದರು. ಈಗ ವಿದ್ಯುತ್‌ ಚಾಲಿತ ಕುಲುಮೆಗಳೂ ಬಳಕೆಯಲ್ಲಿವೆ. ಉಕ್ಕು ತಯಾರಿಗೆ ಜಗತ್ತಿನಲ್ಲಿ ಈಗ ಬಹುದೊಡ್ಡ ಉದ್ದಿಮೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಉಕ್ಕಿಗೆ ಬಹುದೊಡ್ಡ ಮಾರುಕಟ್ಟೆ. ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ವಾರ್ಷಿಕವಾಗಿ 130 ಕೋಟಿ ಟನ್‌ಗಳಷ್ಟು ಉಕ್ಕು ತಯಾರಿಸಲಾಗುತ್ತದೆ.[]

ಜಾಗತಿಕ ಉಕ್ಕು ತಯಾರಿಕೆ

ಬದಲಾಯಿಸಿ

ವಿಶ್ವ ಉಕ್ಕು ತಯಾರಿಕಾ ಕಂಪೆನಿಗಳ ಒಕ್ಕೂಟ (ಡಬ್ಲ್ಯುಎಸ್‌ಎ)ವು, ಜಗತ್ತಿನಲ್ಲಿ ವಿವಿಧ ದೇಶಗಳು ತಯಾರಿಸಿದ ಉಕ್ಕಿನ ಪ್ರಮಾಣವನ್ನು ತಿಳಿಸಿದೆ.

  • (2014 ಅಕ್ಟೋಬರ್) ಕಳೆದ 5 ವರ್ಷಗಳಿಂದ ಭಾರತವು ಉಕ್ಕು ತಯಾರಿಕೆಯಲ್ಲಿ ನಾಲ್ಕನೇ ಸ್ಥಾನ ಕಾಯ್ದು ಕೊಂಡಂತಾ ಗಿದೆ ಎಂದು ಕೈಗಾರಿಕಾ ವಲಯದ ಪರಿಣಿತರು ಹೇಳಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಉಕ್ಕು ತಯಾರಿಕೆ ಶೇ 1.8ರಷ್ಟು ಏರಿಕೆ ಕಂಡಿದ್ದು, 612.7 ಲಕ್ಷ ಟನ್‌ ಉಕ್ಕು ತಯಾರಿಸಿ ಪ್ರಮುಖ ನಾಲ್ಕು ಉಕ್ಕು ತಯಾರಿಕಾ ದೇಶಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು ಎಂದು ವಿಶ್ವ ಉಕ್ಕು ತಯಾರಿಕಾ ಕಂಪೆನಿಗಳ ಒಕ್ಕೂಟ (ಡಬ್ಲ್ಯುಎಸ್‌ಎ) ಮಾಹಿತಿ ನೀಡಿದೆ.
  • ಉಕ್ಕು ತಯಾರಿಕೆ ಯಲ್ಲಿ ಪ್ರಪಂಚದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ಪ್ರಸಕ್ತ ಹಣಕಾಸು ವರ್ಷದ ಜನವರಿ–ಸೆಪ್ಟೆಂಬರ್ ಅವಧಿಯಲ್ಲಿ 624.1 ಲಕ್ಷ ಟನ್‌ ಉಕ್ಕು ತಯಾರಿಸಿದೆ ಎಂದು ವಿಶ್ವ ಉಕ್ಕು ತಯಾರಿಕಾ ಕಂಪೆನಿಗಳ ಒಕ್ಕೂಟ (ಡಬ್ಲ್ಯುಎಸ್‌ಎ) ಹೇಳಿದೆ.

ಒಟ್ಟಾರೆ ಜಾಗತಿಕ ಉಕ್ಕು ತಯಾರಿಕೆಯಲ್ಲಿ ಅರ್ಧದಷ್ಟು ಪಾಲನ್ನು ಚೀನಾ ಹೊಂದಿದೆ.

2014 ಮಾರ್ಚ್ ತಿಂಗಳಲ್ಲಿ ಜಾಗತಿಕ ಕಚ್ಛಾ ಉಕ್ಕು ಉತ್ಪಾದನೆ[]

ಬದಲಾಯಿಸಿ

2014 ಮಾರ್ಚ್ನಲ್ಲಿ, ಭಾರತ ೭೨.೫ ಲಕ್ಷ ಟನ್(72.5 ಲಕ್ಷ ಟನ್‌ಗಳಷ್ಟು ) ಉಕ್ಕನ್ನು ತಯಾರಿಸಿದೆ. ಇದು ೨೦೧೩ರರ ಮಾರ್ಚ್ ತಿಂಗಳ ಉತ್ಪಾದನೆಗಿಂತ ಶೇ. ೩.೯೦ ರಷ್ಟು ಹೆಚ್ಚು. ಈ ತಿಂಗಳಲ್ಲಿ, ಉಕ್ಕು ಉತ್ಪಾದನೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ. ಈ ತಿಂಗಳಲ್ಲಿ, ಉಕ್ಕುಉತ್ಪಾದನೆಯಲ್ಲಿ ಮಂಚೂಣಿಯಲ್ಲಿರುವ ಹತ್ತು ದೇಶಗಳು ಹಾಗು ಅವುಗಳು ತಯಾರಿಸಿದ ಪ್ರಮಾಣ ಹೀಗಿವೆ.

  • ಚೀನಾ --೭೦,೨೫೦ ಸಾವಿರ ಟನ್ ಲೆಕ್ಕದಲ್ಲಿ ;
  • ಜಪಾನ್—೯,೭೨೯ "
  • ಅಮೇರಿಕಾ --೭,೪೦೫ "
  • ಭಾರತ—೭,೨೫೦ "
  • ದ,ಕೊರಿಯಾ --೬,೧೨೭ "
  • ರಷ್ಯಾ--೬,೦೨೮ "
  • ಜರ್ಮನಿ --೪,೦೪೫ "
  • ಬ್ರೆಜಿಲ್—೨,೮೯೦ "
  • ಟರ್ಕಿ -- ೨,೮೪೫ "
  • ಉಕ್ರೇನ್—೨,೬೫೦ "
 
೨೦೧೩ರಲ್ಲಿ ಜಾಗತಿಕ ಒಟ್ಟು ಕಚ್ಛಾ ಉಕ್ಕು ತಯಾರಿಕೆ

೨೦೧೩ರಲ್ಲಿ ಜಾಗತಿಕ ಒಟ್ಟು ಕಚ್ಛಾ ಉಕ್ಕು ತಯಾರಿಕೆ

ಬದಲಾಯಿಸಿ

೨೦೧೩ರಲ್ಲಿ ಜಾಗತಿಕವಾಗಿ ೬೫ ದೇಶಗಳು ತಯಾರಾದ ಒಟ್ಟು ಕಚ್ಛಾ ಉಕ್ಕಿನ ಪ್ರಮಾಣ 1,582,493 ಸಾವಿರ ಟನ್ನುಗಳು.[]

ಸಮಕಾಲೀನ ಉಕ್ಕು

ಬದಲಾಯಿಸಿ
  • ಆಧುನಿಕ ಉಕ್ಕು ಬೇರೆ ಬೇರೆ ಉದ್ದೇಶಗಳಿಗಾಗಿ ವಿವಿಧ ರೀತಿಗಳಲ್ಲಿ ಸಂಯೋಗ ಮಾಡಿದ ಮಿಶ್ರಲೋಹ ಗಳಿಂದ ಮಾಡಲ್ಪಟ್ಟಿದೆ. ಇಂಗಾಲಯುಕ್ತ ಉಕ್ಕು(ಕಾರ್ಬನ್ ಸ್ಟೀಲ್) ಕಬ್ಬಿಣ ಮತ್ತು ಇಂಗಾಲದ ಮಿಶ್ರಣವಾಗಿದ್ದು, ಉಕ್ಕಿನ ತಯಾರಿಕೆಯುಲ್ಲಿ 90% ಭಾಗವನ್ನು ಹೊಂದಿದೆ. ಹೆಚ್ಚಿನ ದೃಡತೆಯುಳ್ಳ, ಕಮ್ಮಿ ಮಿಶ್ರಲೋಹಗಳು(ಹೈ ಸ್ಟ್ರೆಂತ್ ಲೊ ಅಲಾಯ್ ಸ್ಟೀಲ್) ಸ್ವಲ್ಪ ಬೆಲೆ ಏರಿಕೆಯಲ್ಲಿ ಹೆಚ್ಚಿನ ಗಟ್ಟಿತನ ಕೊಡಲು ಸ್ವಲ್ಪ ಪ್ರಮಾಣದಲ್ಲಿ ಬೇರೆ ಧಾತುಗಳನ್ನು(ತೂಕದಲ್ಲಿ ಸಾಮಾನ್ಯವಾಗಿ 2%ಗಿಂತ ಕಮ್ಮಿ), ವಿಶಿಷ್ಟವಾಗಿ 1.5% ಮಾಂಗನೀಸ್ ನ್ನು ಹೊಂದಿದೆ. ಕಮ್ಮಿ ಮಿಶ್ರಲೋಹ ಉಕ್ಕುಗಳಲ್ಲಿ(ಲೋ ಅಲಾಯ್ ಸ್ಟೀಲ್) ದಪ್ಪದ ಭಾಗಗಳ ಗಟ್ಟಿತನದ ಸಾಮರ್ಥ್ಯವನ್ನು ಸುಧಾರಿಸಲು ಮಾಲಿಬ್ಡೆನಮ್, ಮ್ಯಾಂಗನೀಸ್, ಕ್ರೋಮಿಯಮ್ ಮತ್ತು ನಿಕ್ಕ್ಲ್ ತೂಕದಲ್ಲಿ 10% ನಂತೆ ಮಿಶ್ರಣ ಮಾಡುವರು. *ಸ್ಟೈನ್ಲೆಸ್ ಉಕ್ಕಿನಲ್ಲಿ ತುಕ್ಕನ್ನು ತಡೆಯಲು 11% ಕ್ರೋಮಿಯಮ್ ಜತೆಗೆ ಕೆಲವೊಮ್ಮೆ ನಿಕ್ಕ್ಲ್ ನ್ನು ಸೇರಿಸುವರು. 'ಪೆರ್ರಿಟಿಕ್' ಮುಂತಾದ ಕೆಲವು ಸ್ಟೈನ್ಲೆಸ್ ಉಕ್ಕುಗಳು ಅಯಸ್ಕಾಂತ ಗುಣವನ್ನು ಹೋಂದಿವೆ. ಮತ್ತೆ ಕೆಲವು, 'ಅಸ್ಟೆನಿಕ್' ಮುಂತಾದವು ಅಯಸ್ಕಾಂತ ಗುಣರಹಿತ ವಾಗಿವೆ. ತುಕ್ಕು ನಿರೋಧಕ ಉಕ್ಕನ್ನು CRES ಎಂದು ಸಂಕ್ಷೇಪಿಸುತ್ತಾರೆ. ಮತ್ತೆ ಕೆಲವು ಆಧುನಿಕ ಉಕ್ಕುಗಳಾದ ಟೂಲ್ ಉಕ್ಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಂಗ್ಸ್ಟನ್ ಮತ್ತು ಕೋಬಾಲ್ಟ್ ಮತ್ತಿತರ ಧಾತುಗಳನ್ನು ಸಲ್ಯೂಶನ್ ಹಾರ್ಡೆನಿಂಗ್ ಹೆಚ್ಚಿಗೆ ಮಾಡಲು ಸೇರಿಸುವರು. ಇದು ಪ್ರೆಸಿಪಿಟೇಶನ್ ಹಾರ್ಡೆನಿಂಗ್ ಉಪಯೋಗಿಸಲು ಬಿಡುವುದಲ್ಲದೆ, ಮಿಶ್ರಲೊಹದ ಉಷ್ಣ ನಿರೋಧಕತೆಯನ್ನು ಸುಧಾರಿಸುವುದು.
  • ಸಾಮಾನ್ಯವಾಗಿ, ಇವುಗಳನ್ನು ಅಚ್ಚುಗಳು, ಬೈರಿಗೆಗಳು, ಮುಂತಾದ ಹರಿತವಾದ ಮತ್ತು ಬಹುಕಾಲ ಉಳಿಯುವ ಕತ್ತರಿಸುವ ಅಲುಗಿನ ಅಗತ್ಯವಿರುವ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇತರೆ ವಿಶೇಷ ಮಿಶ್ರಲೋಹಗಳಾದ, ಕೋರ್-ಟೆನ್ ಎಂಬ ವೆದರಿಂಗ್ ಸ್ಟೀಲ್ ಹವಾ ಪರಿಣಾಮದಿಂದ ಸ್ಥಿರ ಮತ್ತು ತುಕ್ಕಿನಂತೆ ಮೆಲ್ಮೈ ಪಡೆಯುವುದರಿಂದ ಬಣ್ಣರಹಿತವಾಗಿ ಉಪಯೋಗಿಸುತ್ತಾರೆ. ಇನ್ನೂ ಹೆಚ್ಚಿನ ಕೆಲವುಗಳು, ಶಾಖೋಪಚಾರದ ನಂತರ, 'ಡ್ಯುಯೆಲ್ ಪೇಸ್' ಮುಂತಾದ ಅತಿ ಸಣ್ಣ ರಚನೆಯುಳ್ಳ 'ಪೆರೆಟಿಕ್' ಮತ್ತು 'ಮಾರ್ಟೆನ್ಸ್ಟಿಕ್' ಎರಡನ್ನು ಉತ್ಪಾದಿಸಿ ಹೆಚ್ಚು ಗಟ್ಟಿತನವನ್ನು ಹೊಂದುವ ಹೆಚ್ಚು ಗಟ್ಟಿತನದ ಉಕ್ಕುಗಳಿವೆ.
  • ಸಾಮಾನ್ಯವಾಗಿ ರೂಮಿನ ಉಷ್ಣತೆಯಲ್ಲಿ 'ಅಸ್ಟೆನೈಟ್' ಇಲ್ಲದಿರುವ ಲೋ ಅಲಾಯ್ 'ಪೆರ್ರಿಟಿಕ್ ಸ್ಟೀಲ್'ನಲ್ಲಿ 'ಅಸ್ಟೆನೈಟ್' ಪ್ರಮಾಣವನ್ನು ಸ್ಥಿರ ಮಾಡಲು ವಿಶೇಷ ಮಿಶ್ರಲೋಹಗಳನ್ನು ಬೆರಿಕೆ ಮಾಡುವುದು ಮತ್ತು ಶಾಖೋಪಚಾರವು 'ಟ್ರಾನ್ಸಪರಮೇಶನ್ ಇಂಡ್ಯೂಸ್ಡ್ ಪ್ಲಾಸ್ಟಿಸಿಟಿ ಸ್ಟೀಲ್(TRIP)'ನಲ್ಲಿ ಒಳಗೊಂಡಿದೆ. ಸ್ಟ್ರೈನ್ನ್ನು ಒಳಪಡಿಸುವುದರಿಂದ ಶಾಖವನ್ನು ಸೇರಿಸದೆಯೇ 'ಅಸ್ಟೆನೈಟ್' ಕಳೆ ಬದಲಾಗುವಿಕೆ(ಪೇಸ್ ಟ್ರಾನ್ಸಿಶನ್) ಹೊಂದಿ 'ಮಾರ್ಟೈನ್ಸೈಟ್' ಆಗುವುದು. ಮ್ಯಾರೇಜಿಂಗ್ ಸ್ಟೀಲ್ನಲ್ಲಿ ಮಿಶ್ರಲೋಹಕ್ಕೆ ನಿಕ್ಕ್ಲ್ ಮುಂತಾದ ಇತರೆ ಧಾತುಗಳನ್ನು ಸೇರಿಸುವರು(ಆದರೆ, ಹೆಚ್ಚಿನ ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 0.1% ಇರುವಿಕೆಯಂತಿಲ್ಲ), ಇದು ಬಹಳ ಗಟ್ಟಿಯಾಗಿರುವ, ಆದರೂ ಹದಮಾಡಿದ ಉಕ್ಕು(ಮೆಲಿಯಬಲ್ ಸ್ಟೀಲ್)ನ್ನು ಸೃಷ್ಟಿಸುವುದು.
  • ಒಂದು ತರಹದ ವಿಶೇಷ ರೀತಿಯ ಸ್ಟ್ರೈನ್ನ್ನು ಮಿಶ್ರಲೋಹದ ಮೇಲೆ ವರ್ಕ್ ಹಾರ್ಡೆನಿಂಗ್ನ್ನು ಪರಿಣಾಮಕಾರಿಯಾಗಿಸಲು ಟ್ವಿನ್ನಿಂಗ್ ಇಂಡ್ಯೂಸ್ಡ್ ಪ್ಲಾಸ್ಟಿಸಿಟಿ ಸ್ಟೀಲ್(TWIP) ನಲ್ಲಿ ಉಪಯೋಗಿಸುತ್ತಾರೆ. ಎಗ್ಲಿನ್ ಸ್ಟೀಲ್ನ ಬಂಕರ್ ಗಳನ್ನು ನಾಶ ಮಾಡುವ ಬಾಂಬುಗಳ ಆಯುಧಗಳಲ್ಲಿ ಉಪಯೋಗಕ್ಕೆಂದು ಸಾಪೇಕ್ಷವಾಗಿ ಕಮ್ಮಿ ಖರ್ಚಿನ ಉಕ್ಕುನ್ನು ಸೃಷ್ಟಿಸಲು ವಿವಿಧ ರೀತಿಯ ಬೆರೆಕಿ ಮಾಡಲು ಸುಮಾರು ಡಜನ್ ಧಾತುಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸುವರು. ಹ್ಯಾಡ್ಪೀಲ್ಡ್ ಸ್ಟೀಲ್ನಲ್ಲಿ ಅಥವಾ ಮ್ಯಾಂಗನೀಸ್ ಉಕ್ಕಿನಲ್ಲಿ 12-14% ಮ್ಯಾಂಗನೀಸ್ ಇರುವುದು. ಇದನ್ನು ತಿಕ್ಕಿ ಸ್ಟ್ರೈನ್ ಹಾರ್ಡೆನಿಂಗ್ ಮಾಡಿದಾಗ ನಂಬಿಕೆಗೂ ಮೀರಿದ ಗಟ್ಟಿ ಪದರು ನಿರ್ಮಾಣವಾಗುವುದರಿಂದ ಸವಕಳಿ ನಿರೋಧವಾಗಿದೆ.
  • ಉದಾಹರಣೆಗೆ, ಮಿಲಿಟರಿ ಟ್ಯಾಂಕಿನ ನಿರಂತರ ದಾರಿಗಳು, ಬುಲ್ಡೋಜರ್ ಗಳಲ್ಲಿ ಉಪಯೋಗಿಸುವ ಕತ್ತರಿಸುವ ಬ್ಲೇಡ್ಗಳು, ಹೈಡ್ರಾಲಿಕ್ ರಕ್ಷಣಾ ಉಪಕರಣಗಳ ಅಲುಗುಗಳು, ಮುಂತಾದವು. ಮಿಶ್ರಲೋಹವಲ್ಲದಿದ್ದರೂ ಕೂಡ, ಸಾಮಾನ್ಯವಾಗಿ ಉಪಯೋಗಿಸಲ್ಪಡುವ ವಿವಿಧ ರೀತಿಯ ಉಕ್ಕುಗಳಲ್ಲಿ ಗ್ಯಾಲ್ವೋನೈಜಡ್ ಸ್ಟೀಲ್, ಸತುವಿನ(ಜಿಂಕ್) ಬಿಸಿಯ ದ್ರವದಲ್ಲಿ ಅದ್ದುವುದರಿಂದ ಅಥವಾ ವಿದ್ಯುತ್ ಮೂಲಕ ಮುಲಾಮು ಸವರುವುದರಿಂದ(ಎಲೆಕ್ಟ್ರೋಪ್ಲೇಟಿಂಗ್) ತುಕ್ಕು ನಿರೋಧವಾಗಿದೆ.

ಬಳಕೆ ಮತ್ತು ಉಪಯೋಗಗಳು

ಬದಲಾಯಿಸಿ
  • ಉಕ್ಕುನ್ನು ರಸ್ತೆಗಳ, ರೈಲ್ವೆ, ಕಟ್ಟಡಗಳ, ಯಂತ್ರಗಳ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸುವರು. ಹೆಚ್ಚಿನ ಆಧುನಿಕ ದೊಡ್ಡ ರಚನೆಗಳಾದ ಕ್ರೀಢಾಂಗಣಗಳು, ಸೇತುವೆಗಳು, ಗಗನಚುಂಬಿಗಳು ಮತ್ತು ವಿಮಾನ ನಿಲ್ದಾಣಗಳು ಉಕ್ಕಿನ ಅಸ್ಥಿಪಂಜರದ ಮೇಲೆ ಅವಲಂಬಿತವಾಗಿದೆ. ಕಾಂಕ್ರೀಟ್ನ ರಚನೆಯಲ್ಲಿ ಉಕ್ಕನ್ನು ಬೆಂಬಲಕ್ಕಾಗಿ ಉಪಯೋಗಿಸಿದರೂ, ಹೆಚ್ಚಿನ ಬಳಕೆಯು ದೊಡ್ಡ ಯಂತ್ರಗಳ ನಿರ್ಮಾಣದಲ್ಲಿ ಹಾಗು ಆಟೋಮೊಬೈಲ್ ಕೈಗಾರಿಕೆಯಲ್ಲಿ ಕಂಡುಬರುವುದು. ಕಾರುಗಳ ದೇಹದ ನಿರ್ಮಾಣದಲ್ಲಿ ಉಕ್ಕು ಒಂದು ಮುಖ್ಯವಾದ ವಸ್ತುವಾಗಿದೆ.
  • ಬೋಲ್ಟ್, ನಟ್ಗಳು, ಸ್ಕೃಗಳು, ಮೊಳೆಗಳು ಮುಂತಾದ ಯಂತ್ರಗಳ ಬಿಡಿಭಾಗಗಳ ತಯಾರಿಕೆಯಲ್ಲಿ ಕೂಡ ಉಪಯೋಗಿಸುತ್ತಾರೆ. ಇತರೆ ಸಾಮಾನ್ಯ ಬಳಕೆಗಳು ಎಂದರೆ, ಹಡಗು ನಿರ್ಮಾಣಗಳು, ಪೈಪ್ ಲೈನ್ ಗಳು, ಗಣಿ ಕೈಗಾರಿಕೆ, ಅಂತರಿಕ್ಷಯಾನ, ಗೃಹ ಬಳಕೆಯ ವಸ್ತುಗಳು, ಬುಲ್ಡೋಜರ್ ಮುಂತಾದ ದೊಡ್ಡ ಯಂತ್ರಗಳು , ಪೀಠೋಪಕರಣಗಳು, ಉಕ್ಕಿನ ಉಣ್ಣೆ, ಆಯುಧಗಳು, ಯುದ್ದಕವಚ, ಉಪಕರಣಗಳು ಇವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಚಾರಿತ್ರಿಕತೆ

ಬದಲಾಯಿಸಿ
  • ಬೆಸ್ಸೆಮೆರ್ ಸಂಸ್ಕರಣೆ ಮತ್ತು ಇತರ ಆಧುನಿಕ ತಯಾರಿಕ ವಿಧಾನಗಳು ಪರಿಚಯವಾಗುವುದಕ್ಕಿಂತ ಮೊದಲು ಉಕ್ಕು ಬಹಳ ದುಬಾರಿಯಾಗಿತ್ತು, ಚಾಕುಗಳು, ರೇಜರ್ಗಳು, ಕತ್ತಿಗಳು, ಮತ್ತಿತರ ವಸ್ತುಗಳಲ್ಲಿ ಎಲ್ಲಿ ಗಟ್ಟಿ ಮತ್ತು ಹರಿತವಾದ ಅಲಗುಗಳ ಅಗತ್ಯವಿದೆಯೋ ಅಲ್ಲಿ ಮಾತ್ರ ಅಗ್ಗದ ಬೇರೆ ದಾರಿಯಿಲ್ಲದೆ ಉಪಯೋಗಿಸಲಾಗುತ್ತಿತ್ತು. ಉಕ್ಕನ್ನು ಗಡಿಯಾರಗಳು ಮತ್ತು ವಾಚುಗಳು ಸೆರಿದಂತೆ ಸ್ಪ್ರಿಂಗ್ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ವೇಗದ ಮತ್ತು ಮಿತವ್ಯಯ ತಯಾರಿಕ ವಿಧಾನಗಳು ಬಂದಂತೆ ಉಕ್ಕು ಸುಲಭ ಮತ್ತು ಬಹಳ ಅಗ್ಗವಾಗಿ ದೊರೆಯುವುದು. ಉಕ್ಕು ಹದಮಾಡಿದ ಕಬ್ಬಿಣ(ರಾಟ್ ಐರನ್)ವನ್ನು ಹೆಚ್ಚಿನ ಉದ್ದೇಶಗಳಿಗಾಗಿ ಬದಲಾಯಿಸಲ್ಪಟ್ಟಿದೆ. ಏನೇ ಇರಲಿ, 20ನೇ ಶತಮಾನದ ಅಂತ್ಯದಲ್ಲಿ ಪ್ಲಾಸ್ಟಿಕ್ನ ದೊರಕುವಿಕೆಯು, ಕಡಿಮೆ ರಚನೆಯ ಖರ್ಚು ಮತ್ತು ತೂಕದಿಂದ ಈ ವಸ್ತುಗಳು ಉಕ್ಕನ್ನು ಕೆಲವು ಬಳಕೆಯಲ್ಲಿ ಬದಲಾಯಿಸಿದೆ.
  • ವಿಮಾನಗಳು, ಕ್ರೀಡಾ ಉಪಕರಣಗಳು, ಹೈ ಎಂಡ್ ಆಟೋಮೊಬೈಲ್ಸ್ ಮುಂತಾದವುಗಳಲ್ಲಿ ಇಂಗಾಲದ ಪೈಬರ್ಗಳು ಖರ್ಚಿನ ಬಗ್ಗೆ ಆಲೋಚನೆ ಇಲ್ಲದ ಕೆಲವು ಬಳಕೆಯಲ್ಲಿ ಬದಲಾಯಿಸಿದೆ.

ಮರು ಬಳಕೆ

ಬದಲಾಯಿಸಿ

ಪ್ರಪಂಚದಲ್ಲಿ ಉಕ್ಕು ಹೆಚ್ಚಿನ ಪ್ರಮಾಣದಲ್ಲಿ ಮರು ಬಳಕೆಯಲ್ಲಿರುವ ವಸ್ತುವಾಗಿದ್ದು, ಜಾಗತಿಕವಾಗಿ ಮರು ಬಳಕೆಯ ಪ್ರಮಾಣ 60% ಇದೆ.

ಉಕ್ಕಿನ ಕೈಗಾರಿಕೆ

ಬದಲಾಯಿಸಿ
  • ಒಂದೇ ವಸ್ತು ಎಂಬಂತೆ "ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ" ಎಂದು ಕರೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾದರೂ, ಚಾರಿತ್ರಿಕವಾಗಿ ಇವೆರೆಡು ಬೇರೆ ಬೇರೆ ಉತ್ಪನ್ನಗಳಾಗಿವೆ. ಉಕ್ಕು ಮೂಲಭೂತ ಸೌಕರ್ಯ ಮತ್ತು ಎಲ್ಲಾ ಆರ್ಥಿಕ ಪ್ರಗತಿಯಲ್ಲಿ ಸೂಕ್ಷ್ಮ ಪಾತ್ರ ವಹಿಸು ವುದರಿಂದ ಉಕ್ಕಿನ ಕೈಗಾರಿಕೆಯನ್ನು ಕೆಲವೊಮ್ಮೆ ಆರ್ಥಿಕ ಪ್ರಗತಿಯ ಸೂಚಕ ಎಂದು ತಿಳಿಯುತ್ತಾರೆ. 1980ರಲ್ಲಿ ಅಮೇರಿಕಾ ದೇಶದಲ್ಲಿ 500000ಕ್ಕಿಂತ ಜಾಸ್ತಿ ಉಕ್ಕಿನ ಕೆಲಸಗಾರರು ಇದ್ದರು. 2000ರ ಹೊತ್ತಿಗೆ, ಉಕ್ಕಿನ ಕೆಲಸಗಾರರ ಸಂಖ್ಯೆ 224,000ಕ್ಕೆ ಇಳಿಯಿತು.
  • ಚೈನಾ ಮತ್ತು ಭಾರತದ ಆರ್ಥಿಕ ಶೃಂಗ, ಇತ್ತೀಚಿನ ವರ್ಷಗಳಲ್ಲಿ ಉಕ್ಕಿನ ಬೇಡಿಕೆಯನ್ನು ತೀವ್ರವಾಗಿ ಹೆಚ್ಚಿಸಿದೆ. 2000 ಮತ್ತು 2006 ವರ್ಷಗಳ ಮದ್ಯೆ ಜಾಗತಿಕ ಉಕ್ಕಿನ ಬೇಡಿಕೆಯು 6% ಜಾಸ್ತಿಯಾಗಿದೆ. 2000ರಿಂದ ಟಾಟಾ ಸ್ಟೀಲ್(2007ರಲ್ಲಿ ಕೋರಸ್ ಗ್ರೂಪ್ನ್ನು ಖರೀದಿಸಿದ ಸಂಸ್ಥೆ) , ಶಾಂಗಾಯ್ ಬಾವೋ ಸ್ಟೀಲ್ ಗ್ರೂಪ್ ಕಾರ್ಪೋರೇಶನ್ ಮತ್ತು ಶಗಂಗ್ ಗ್ರೂಪ್ ಮುಂತಾದ ಚೈನಾ ಮತ್ತು ಭಾರತದ ಉಕ್ಕಿನ ಘಟಕಗಳು ಮುಖ್ಯವಾಗಿ ಉದಯವಾಗಿವೆ.
  • ಅರ್ಸಿಲೋಮಿಟ್ಟಲ್ ಪ್ರಪಂಚದ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆಯಾಗಿದೆ. ಪ್ರಪಂಚದ 3ನೇ ಒಂದು ಭಾಗದಷ್ಟು ಉಕ್ಕು ತಯಾರಿಸಿ ಚೈನಾ ದೇಶವು ಮೊದಲ ಸ್ಥಾನದಲ್ಲಿದೆ ಎಂದು 2005ರಲ್ಲಿ ಬ್ರಿಟೀಶ್ ಜಿಯಾಲಜಿಕಲ್ ಸರ್ವೆಯು ಹೇಳಿದೆ. ನಂತರ ಅನುಕ್ರಮವಾಗಿ ಜಪಾನ್, ರಷ್ಯಾ ಮತ್ತು ಅಮೇರಿಕಾ ದೇಶಗಳು ಬರುತ್ತವೆ.
  • 2008ರಲ್ಲಿ ಉಕ್ಕನ್ನು ಲಂಡನ್ ಮೆಟಲ್ ಎಕ್ಸಚೇಂಜ್ನಲ್ಲಿ ಒಂದು ಸರಕಂತೆ ವ್ಯಾಪಾರ ಮಾಡಲು ಪ್ರಾರಂಭವಾಯಿತು. 2008ರ ಕೊನೆಯ ಹೊತ್ತಿಗೆ ಉಕ್ಕಿನ ಕೈಗಾರಿಕೆಯು ತೀವ್ರ ಕುಸಿತವನ್ನು ಕಂಡದಲ್ಲದೆ, ಬಹಳ ನಷ್ಟವನ್ನು ಉಂಟುಮಾಡಿತು. ಪ್ರಪಂಚದ ಉಕ್ಕಿನ ಕೈಗಾರಿಕೆಯು 2007ರಲ್ಲಿ. ಆ ವರ್ಷ ತಿಸ್ಸೆನ್ಕೃಪ್ ಬ್ರೆಜಿಲ್ನ ಕಲ್ವೆರ್ಟ್, ಅಲಬಮ, ಸೆಪಿಟೆಬ, ರಿಯೊ ಡಿ ಜನಿರೋನಲ್ಲಿ $12 ಬಿಲಿಯನ್ರಷ್ಟು ಹಣವನ್ನು ಎರೆಡು ಆಧುನಿಕ ಉಕ್ಕಿನ ಗಿರಣಿಗಳನ್ನು ನಿರ್ಮಿಸಲು ಖರ್ಚು ಮಾಡಿತು.
  • 2008ರಲ್ಲಿ ಪ್ರಾರಂಭವಾದ ಪ್ರಪಂಚದಾದ್ಯಂತದ ಮಹತ್ತರ ಹಿಂಜರಿತವು ಬೇಡಿಕೆಯನ್ನು ಮತ್ತು ಹೊಸ ನಿರ್ಮಾಣವನ್ನು ಕಡಿಮೆಮಾಡಿತು. ಆದುದರಿಂದ ಬೆಲೆಗಳು ಕಡಿಮೆಯಾದವು. ತಿಸ್ಸೆನ್ಕೃಪ್ ಉಕ್ಕನ್ನು ತಯಾರಿಕಾ ವೆಚ್ಚಕ್ಕಿಂತ ಕಡಿಮೆಯಲ್ಲಿ ಮಾರಿ $11 ಬಿಲಿಯನ್ರಷ್ಟು ಹಣವನ್ನು ತನ್ನ ಎರೆಡು ಹೊಸ ಆಧುನಿಕ ಉಕ್ಕಿನ ಗಿರಣಿಗಳಲ್ಲಿ ಕಳೆದುಕೊಂಡಿತು. ಕೊನೆಗೆ 2013ರಲ್ಲಿ, ತಿಸ್ಸೆನ್ಕೃಪ್ $ 4 ಬಿಲಿಯನ್ ಗಿಂತ ಕೆಳಗೆ ಘಟಕಗಳನ್ನು ಮಾರಾಟಮಾಡಲು ಮುಂದಡಿಯಿಟ್ಟಿತು.

ವಸ್ತುವಿನ ಗುಣಲಕ್ಷಣಗಳು

ಬದಲಾಯಿಸಿ
  • ಕಬ್ಬಿಣವು ಭೂಮಿಯ ಕವಚದಲ್ಲಿ ಸಾಮಾನ್ಯವಾಗಿ ಕಬ್ಬಿಣದ ಆಕ್ಸೈಡ್ ಆದ ಮ್ಯಾಗ್ನಟೈಟ್, ಹಿಮಾಟೈಟ್ ಮುಂತಾದ ಅದಿರಿನ ರೂಪದಲ್ಲಿ ಸಿಗುವುದು. ಕಬ್ಬಿಣವನ್ನು ಕಬ್ಬಿಣದ ಅದಿರಿನಿಂದ ಆಮ್ಲಜನಕವನ್ನು ತೆಗೆದುಹಾಕಿ, ಅದು ಇಂಗಾಲ ಮುಂತಾದ ಬೇಕಿರುವ ರಾಸಾಯನಿಕ ಸಹವರ್ತಿಯೊಂದಿಗೆ ಇಂಗಾಲದ ಡೈಆಕ್ಸೈಡ್ ಆಗಿ ಪರಿಸರವನ್ನು ಸೇರಿಸಿ ಭೇರ್ಪಡಿಸುವರು. ಪುಟವಿಟ್ಟು ಲೋಹವನ್ನು ವಿಂಗಡಿಸುವ ಈ ಸಂಸ್ಕರಣೆಯನ್ನು ಇಂಗ್ಲೀಷ್ ನಲ್ಲಿ "ಸ್ಮೆಲ್ಟಿಂಗ್" ಎಂದು ಕರೆಯುತ್ತಾರೆ.
  • ಪ್ರಾಚೀನ ಕಾಲದಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣವನ್ನು ಘನ ರೂಪದಲ್ಲಿ ಇದ್ದಿಲಿನ ಬೆಂಕಿಯಲ್ಲಿ ಹುದುಗಿಸಲಾದ ಕಬ್ಬಿಣದ ಅದಿರನ್ನು ಬಿಸಿಮಾಡುವುದರ ಮೂಲಕ ಮತ್ತು ಸುತ್ತಿಗೆಯಲ್ಲಿ ಬಡಿಯುವದರ ಮೂಲಕ ಲೋಹದ ಕಶ್ಮಲಗಳನ್ನು ಹಿಂಡಿ ತೆಗೆಯುತ್ತಿದ್ದರು. ಎಚ್ಚರಿಕೆಯಿಂದ ಇವುಗಳನ್ನು ಬೆಂಕಿಯಲ್ಲಿ ಚಲಿಸುವುದರ ಮೂಲಕ ಇಂಗಾಲದ ಪ್ರಮಾಣವನ್ನು ನಿಯಂತ್ರಿಸುತ್ತಿದ್ದರು.
  • "ಸ್ಮೆಲ್ಟಿಂಗ್" ಸಂಸ್ಕರಣೆಯು ಕಡಿಮೆ ಆಮ್ಲಜನಕದ ಪರಿಸರದಲ್ಲಿ ನಡೆಯುವುದು. ದ್ರವ ಅಥವಾ ಘನ ಕಬ್ಬಿಣವು ಇಂಗಾಲವನ್ನು ಬೇಗ ಕರಗಿಸುವುದು. "ಸ್ಮೆಲ್ಟಿಂಗ್"ನ ಫಲಿತಾಂಶವಾಗಿರುವ 'ಪೆಡಸು ಕಬ್ಬಿಣ' ಎಂಬ ಒಂದು ಮಿಶ್ರಲೋಹವು, ಹೆಚ್ಚಿನ ಇಂಗಾಲವನ್ನು ಹೊಂದಿರುವುದರಿಂದ ಉಕ್ಕೆಂದು ಕರೆಯಲು ಬಾರದು. ಹೆಚ್ಚಿನ ಇಂಗಾಲದ ಅಂಶವನ್ನು ಮತ್ತು ಇತರೆ ಕಶ್ಮಲಗಳನ್ನು ಸಂಸ್ಕರಣೆಯ ಮುಂದಿನ ಹಂತಗಳಲ್ಲಿ ನಿವಾರಿಸಲಾಗುವುದು.
  • ಉಕ್ಕಲ್ಲಿ ಕೆಲವು ಗುಣಗಳನ್ನು ಅಭಿವೃದ್ಧಿಪಡಿಸಲು, ಅಗತ್ಯಕ್ಕೆ ತಕ್ಕಂತೆ ಇತರೆ ಲೋಹಗಳನ್ನು ಸೇರಿಸುತ್ತಾರೆ. ಉಕ್ಕಲ್ಲಿ ಮ್ಯಾಂಗನೀಸ್ ಮತ್ತು ನಿಕ್ಕ್ಲ್ ನ್ನು ಟೆನ್ಸೈಲ್ ಸ್ಟ್ರೆಂತ್ ಗೋಸ್ಕರ, ಇಂಗಾಲ-ಕಬ್ಬಿಣ ದ್ರಾವಣವು ಹೆಚ್ಚು ಸ್ಥಿರವಾಗಿರುವ 'ಅಸ್ಟೆನೈಟ್' ರೂಪ ಕೊಡಲು ಸೇರ್ಪಡೆಯಾಗುವುದು. ಕ್ರೋಮಿಯಮ್ ಗಡಸುತನವನ್ನು ಮತ್ತು ದ್ರವವಾಗುವ ಉಷ್ಣತೆಯನ್ನೂ, ಮತ್ತು ವ್ಯನಡಿಯಂ ಕೂಡ ಗಡಸುತನವನ್ನು ಹೆಚ್ಚಿಸುವುದಲ್ಲದೆ ಮೆಟಲ್ ಪ್ಯಾಟಿಗ್ ಗೆ ಕಮ್ಮಿ ಸೂಕ್ಷ್ಮತೆಯನ್ನು ಹೊಂದಿರುವುದು.
  • ಉಕ್ಕಿಗೆ ತುಕ್ಕನ್ನು ತಡೆಯಲು 11% ಕ್ರೋಮಿಯಮ್ ನ್ನು ಸೇರಿಸುವುದರಿಂದ ಲೋಹದ ಮೇಲೆ ಗಡಸು ಆಕ್ಸೈಡ್ ಉಂಟಾಗಿ, ಇದನ್ನು "ಸ್ಟೈನ್ ಲೆಸ್ ಸ್ಟೀಲ್" ಎಂದು ಕರೆಯುವರು. ಟಂಗಸ್ಟನ್ ಲೋಹವು 'ಸಿಮೆಂಟೈಟ್' ಆಗುವುದನ್ನು ತಡೆಯುವುದಲ್ಲದೆ, 'ಮಾರ್ಟೈನ್ಸೈ ಟ್' ನ್ನು ಪ್ರಾಶಸ್ತ್ಯವಾಗಿ ಕಮ್ಮಿಯ ಆರಿಸಲ್ಪಟ್ಟ ದರಗಳಲ್ಲಿ ರೂಪಿತವಾಗಿ 'ಹೈ ಸ್ಪೀಡ್ ಸ್ಟೀಲ್' ಆಗುವುದು. ಸಾರಜನಕ, ಗಂಧಕ ಮತ್ತು ರಂಜಕವು ಉಕ್ಕನ್ನು ಪೆಡೆಸು ಮಾಡುವುದರಿಂದ, ಅವುಗಳನ್ನು ಸಂಸ್ಕರಣೆಯ ಸಮಯದಲ್ಲಿ ತೆಗೆದುಹಾಕಲಾಗುವುದು.
  • ಉಕ್ಕಿನ ಸಾಂದ್ರೆತಯು ಮಿಶ್ರಲೋಹ್ಯ ಸಂಯೋಜಕ ವಸ್ತುಗಳ ಮೇಲೆ ಅವಲಂಬಿಸಿದರೂ, ಸಾಮಾನ್ಯವಾಗಿ 7750 Kg/m3 ರಿಂದ 8050 Kg/m3 ಇರುವುದು. ಇಂಗಾಲ ಮತ್ತು ಕಬ್ಬಿಣ ಒಂದಾಗಿ ಕೂಡಿಸುವಾಗ, ಇಕ್ಕಟ್ಟಿನ ಮೇರೆಯ ಮಿಶ್ರಣದಲ್ಲಿ ಕೂಡ ವಿವಿಧ ರೀತಿಯ ಮೆಟಲರ್ಜಿಕಲ್ ರಚನೆಗಳ ಜತೆಗೆ ವಿವಿಧ ರೀತಿಯ ಗುಣಲಕ್ಷಣಗಳುಳ್ಳ ಉಕ್ಕನ್ನು ರೂಪಿಸಲು ಸಾದ್ಯ. ಆ ತರಹದ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು.
  • ಉತ್ತಮ ದರ್ಜೆಯ ಉಕ್ಕನ್ನು ಪಡೆಯುವಲ್ಲಿ ಅಗತ್ಯವಿದೆ. ರೂಂ ಉಷ್ಣತೆಯಲ್ಲಿ, ಕಬ್ಬಿಣದ ಅತಿ ಸ್ಥಿರ ರೂಪವು ಬಾಡಿ-ಸೆಂಟರ್ಡ್ ಕ್ಯೂಬಿಕ್(BCC) ರಚನೆ ಎಂದು ಕರೆಯುವ 'ಪೆರೈಟ್' ಅಥವಾ α-ಕಬ್ಬಿಣ. ಇದು ಒಂದು ಮೃದು ಲೋಹವಲ್ಲದೆ, 723 ಡಿಗ್ರಿ ಸೆಲ್ಸಿಯಸ್ನಲ್ಲಿ, ತೂಕದಲ್ಲಿ ಶೇ. 0.21 ಹೆಚ್ಚಿಲ್ಲದಂತೆ ಮತ್ತು 0 ಡಿಗ್ರಿ ಸೆಲ್ಸಿಯಸ್ನಲ್ಲಿ, ಶೇ. 0.005 ನಂತೆ ಕೇವಲ ಚಿಕ್ಕ ಪ್ರಮಾಣದ ಇಂಗಾಲವನ್ನು ಕರಗಿಸುವುದು.
  • 910 ಡಿಗ್ರಿ ಸೆಲ್ಸಿಯಸ್ನಲ್ಲಿ ಶುದ್ಧ ಕಬ್ಬಿಣವು ಪೇಸ್-ಸೆಂಟರ್ಡ್ ಕ್ಯೂಬಿಕ್ (FCC)ರಚನೆ ಎಂದು ಕರೆಯುವ 'ಅಸ್ಟೆನೈಟ್' ಅಥವಾ γ-ಕಬ್ಬಿಣವಾಗಿ ಬದಲಾಗುವುದು. 1148 ಡಿಗ್ರಿ ಸೆಲ್ಸಿಯಸ್ನಲ್ಲಿ ‘ಅಸ್ಟೆನೈಟ್ನ “ FCC ರಚನೆಯು ಗಣನೀಯವಾಗಿ ಹೆಚ್ಚು ಕಬ್ಬಿಣವನ್ನು ಅಂದರೆ ತೂಕದಲ್ಲಿ 2.1%ನ್ನು ಕರಗಿಸುವುದು.('ಪೆರೈಟ್'ಗಿಂತ 38 ಪಟ್ಟು ಹೆಚ್ಚು). ಇದು ಉಕ್ಕಿನ ಇಂಗಾಲದ ಪ್ರಮಾಣ ಗರಿಷ್ಟ ಮಟ್ಟವನ್ನು ತೋರಿಸುವುದು, ಇದಾದ ನಂತರ ಮಿಶ್ರಣವು 'ಬೀಡು ಕಬ್ಬಿಣ(ಕ್ಯಾಸ್ಟ್ ಐರನ್)'ವಾಗುವುದು.
  • ಇಂಗಾಲದ ಪ್ರಮಾಣ 0.8%ಗಿಂತ ಕಮ್ಮಿ ಇರುವ ‘ಹೈಪೊಯುಟೆಕ್ಟಾಯ್ಡ್ ಉಕ್ಕು ‘ಎಂದು ಕರೆಯಲ್ಪಡುವ ಉಕ್ಕನ್ನು ತಂಪಾಗಿಸಿದಾಗ, ಮಿಶ್ರಣದ 'ಅಸ್ಟೆನೈಟ್' ರೂಪವು 'ಪೆರೈಟ್' ರೂಪವಾಗಿ ಬದಲಾಗಿ ಇಂಗಾಲದ ಪ್ರಮಾಣ ಹೆಚ್ಚಾಗುವುದು. Fe3C ರಾಸಾಯನ ಸೂತ್ರ ಹೊಂದಿರುವ 'ಸಿಮೆಂಟೈಟ್' ಗಟ್ಟಿ ಮತ್ತು ಪೆಡೆಸಾಗಿರುವ ಒಂದು ಅಂತಲೋಹ್ಯಿಕ ಕಲಬೆರಿಕಿ.’ ಯುಟೆಕ್ಟಾಯ್ಡ್ ‘ನಲ್ಲಿ ಇಂಗಾಲದ ಪ್ರಮಾಣ 0.8% ಇದ್ದು, ತಂಪಾದ ರಚನೆಯು 'ಪಿಯರ್ಲೈಟ್' ಎನ್ನುವ ರೂಪವಾಗುವುದು.
  • ಇದು 'ಪೆರೈಟ್' ಮತ್ತು 'ಸಿಮೆಂಟೈಟ್'ನ ಒಂದರ ಮೇಲೆ ಒಂದಂತಿರುವ ರೂಪವಾಗಿದೆ. ಇಂಗಾಲದ ಪ್ರಮಾಣ 0.8%ಗಿಂತ ಹೆಚ್ಚು ಇರುವ ಉಕ್ಕಲ್ಲಿ, ತಂಪಾದ ರಚನೆಯು 'ಸಿಮೆಂಟೈಟ್' ಮತ್ತು 'ಪಿಯರ್ಲೈಟ್' ನ ರೂಪವಾಗುವುದು. ಬಹುಶಃ ಬಹಳ ಮುಖ್ಯವಾದ ಉಕ್ಕಿನ ಪಾಲಿಮಾರ್ಪಿಕ್ ರೂಪವು ಇತರೆ ಉಕ್ಕಿನ ರೂಪಗಳಿಗಿಂತ ಗಟ್ಟಿಯಾದ ಒಂದು ತಾತ್ವಿಕಸ್ಥಿರ ರೂಪವಾದ 'ಮಾರ್ಟೈನ್ಸೈಟ್'.
  • ಉಕ್ಕು 'ಅಸ್ಟೆನೈಟಿಕ್' ರೂಪದಲ್ಲಿ ಇರುವಾಗ ಮತ್ತು ನಂತರ ಬೇಗನೆ ತಣ್ಣಗಾಗಿಸಿದಾಗ, ಆಣುಗಳು ಜಾಗದಲ್ಲಿ ತಣ್ಣಗಾಗಿ ಕೋಶದ ರಚನೆಯು FCCಯಿಂದ BCC ಗೆ ಬದಲಾಗಿ 'ಮಾರ್ಟೈನ್ಸೈಟ್' ಆಗಿ ರೂಪಿಸಲ್ಪಡುವುದು. 'ಮಾರ್ಟೈನ್ಸೈಟ್' ರೂಪವು ಇಂಗಾಲದ ಪ್ರಮಾಣದ ಮೇಲೆ ಅವಲಂಬಿಸಿ ವಿವಿಧ ರೂಪಗಳನ್ನು ಹೊಂದುವುದು. ಇಂಗಾಲದ ಪ್ರಮಾಣ ಸುಮಾರು 0.2% ಗಿಂತ ಕಡಿಮೆ ಇರುವಾಗ, 'ಮಾರ್ಟೈನ್ಸೈಟ್' α-ಪೆರೈಟ್ BCC ಹರಳಿನ ರೂಪವಾಗಿರುವುದು.
  • ಆದರೆ, ಇಂಗಾಲದ ಪ್ರಮಾಣ ಸುಮಾರು 0.2% ಗಿಂತ ಹೆಚ್ಚು ಇರುವಾಗ, ಅದು ಒಂದು ಬಾಡಿ-ಸೆಂಟರ್ಡ್ ಟೆಟ್ರಾಗನಲ್(BCT) ರೂಪವಾಗಿರುವುದು. 'ಮಾರ್ಟೈನ್ಸೈಟ್' 'ಅಸ್ಟೆನೈಟ್'ಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿರುವುದರಿಂದ, ಅವುಗಳ ಮದ್ಯೆ ಬದಲಾವಣೆಯ ಫಲಿತಾಂಶವು ವಾಲ್ಯುಮ್ನಲ್ಲಿ ಬದಲಾವಣೆಯಾಗುವುದು. ಈ ಸಂದರ್ಭದಲ್ಲಿ ಹಿಗ್ಗುವಿಕೆಯು ಆಗುವುದು. ಈ ಹಿಗ್ಗುವಿಕೆಯಿಂದ, ಸಾಮಾನ್ಯವಾಗಿ 'ಮಾರ್ಟೈನ್ಸೈಟ್' ಹರಳುಗಳು ಒತ್ತುವಿಕೆಯ ರೂಪವನ್ನು ಪಡೆಯುವುದಲ್ಲದೆ, ಉಳಿದ ಕಡೆ 'ಪೆರೈಟ್' ಎಳೆಯುವಿಕೆಯನ್ನು ಪಡೆಯುವುದರ ಜತೆಗೆ ಎರೆಡೂ ಕಡೆ ಸಂಯುಕ್ತಗಳು ಚಂದದ ಪ್ರಮಾಣದಲ್ಲಿ 'ಶಿಯರ್'ಗೆ ಒಳಪಡುವವು.
  • ಮುಳುಗುಸುವಿಕೆ(ಕ್ವೆಂಚಿಂಗ್)ಯು ಸರಿಯಾಗಿ ಆಗದಿದ್ದ ಪಕ್ಷದಲ್ಲಿ 'ಆಂತರಿಕ ಸ್ಟ್ರೆಸ್' ಗಳು ಭಾಗಗಳ ಒಡೆಯುವಿಕೆಗೆ ಕಾರಣವಾಗುವುದು. ಕಡಿಮೆಯೆಂದರೆ, ಅವುಗಳು 'ಆಂತರಿಕ ವರ್ಕ ಹಾರ್ಡೆನಿಂಗ್' ಗೆ ಮತ್ತು ಸೂಕ್ಷ್ಮದರ್ಶಿಕ ಅನಾನುಕೂಲತೆಗಳಿಗೆ ಕಾರಣವಾಗುವುದು, ಪ್ರತಿಸಲವೂ ಕಾಣದಿದ್ದರೂ ಸಹಾ, ಉಕ್ಕನ್ನು ನೀರಲ್ಲಿ ಮುಳಗುಸುವಿಕೆ(ವಾಟರ್ ಕ್ವೆಂಚಿಂಗ್)ಯಿಂದ, ಕ್ವೆಂಚ್ ಬಿರಿಕುಗಳು ಬಿಡುವುದು ಸಾಮಾನ್ಯವಾಗಿದೆ.

ಶಾಖೋಪಚಾರ(ಹೀಟ್ ಟ್ರೀಟ್ಮೆಂಟ್)

ಬದಲಾಯಿಸಿ
  • ಉಕ್ಕಿಗೆ ಬಹಳ ವಿಧದ ಶಾಖೋಪಚಾರ(ಹೀಟ್ ಟ್ರೀಟ್ಮೆಂಟ್) ಸಂಸ್ಕರಣೆಗಳಿವೆ. ಇವುಗಳಲ್ಲಿ ಸಾಮಾನ್ಯವಾದದೆಂದರೆ ಅನೀಲಿಂಗ್, ಕ್ವೆಂಚಿಂಗ್ ಮತ್ತು ಟೆಂಪರಿಂಗ್. ಅನೀಲಿಂಗ್ ವಿಧಾನದಲ್ಲಿ, ಉಕ್ಕನ್ನು ಮೃದುಗೋಳಿಸಲು ಸಾಕಷ್ಟು ಹೆಚ್ಚಿನ ಉಷ್ಣತೆಗೆ ಕಾಯಿಸುವರು. ಈ ಸಂಸ್ಕರಣೆಯು ಮೂರು ಹಂತಗಳಲ್ಲಿ ನಡೆಯುವುದು: ರಿಕವರಿ, ರಿಕ್ರಸ್ಟಲೈಜೇಶನ್ ಮತ್ತು ಗ್ರೈನ್ ಗ್ರೋತ್. ಉಕ್ಕನ್ನು ಅನೀಲಿಂಗ್ ಗೊಳಿಸುವಾಗ ಬೇಕಾದ ಉಷ್ಣತೆಯು ಅನೀಲಿಂಗ್ ವಿಧ ಮತ್ತು ಲೋಹದ ಸಂಯುಕ್ತಗಳ ಮೇಲೆ ಅವಲಂಬಿತವಾಗಿರುವುದು.
  • ಕ್ವೆಂಚಿಂಗ್ ಮತ್ತು ಟೆಂಪರಿಂಗ್ ನಲ್ಲಿ ಉಕ್ಕನ್ನು ಮೊದಲು 'ಅಸ್ಟೆನೈಟ್' ರೂಪಕ್ಕೆ ಬಿಸಿಯನ್ನು ಮಾಡಿ ನಂತರ ಉಕ್ಕನ್ನು ನೀರಲ್ಲಿ ಅಥವಾ ಎಣ್ಣೆಯಲ್ಲಿ ಮುಳುಗಿಸುವರು.(ವಾಟರ್ ಕ್ವೆಂಚಿಂಗ್).ತತ್ಕ್ಷಣ ತಣಿಸುವುದರಿಂದ, ಉಕ್ಕು ಗಡಸು ಮತ್ತು 'ಮಾರ್ಟೈನ್ಸೈಟ್' ರೂಪವನ್ನು ಪಡೆಯುವುದು. ಉಕ್ಕನ್ನು ನಂತರ ವಿಶೇಷ ರೀತಿಯ ಅನೀಲಿಂಗ್ ಆದ 'ಟೆಂಪರಿಂಗ್' ಮೂಲಕ ಟೆಂಪರ್ ಮಾಡಲಾಗುವುದು.
  • ಈ ರೀತಿಯ ಟೆಂಪರಿಂಗ್ ಸಂಸ್ಕರಣೆಯಲ್ಲಿ, 'ಆಂತರಿಕ ಸ್ಟ್ರೆಸ್' ಗಳು ಮತ್ತು ಹೋಕುಗಳನ್ನು ಕಡಿಮೆ ಮಾಡಲು ಕೆಲವು 'ಮಾರ್ಟೈನ್ಸೈಟ್'ಗಳು, 'ಸಿಮೆಂಟೈಟ್' ಮತ್ತು 'ಸ್ಪಿರೋಯ್ಡೈಟ್' ಆಗಿ, ಕೊನೆಯದಾಗಿ ಫಲಿತಾಂಶಭೂತವಾಗಲು ಹೆಚ್ಚಿನ 'ಡಕ್ಟೈಲ್' ಮತ್ತು 'ಪ್ರಾಕ್ಚರ್ ರೆಸಿಸ್ಟೆಂಟ್ ಉಕ್ಕಾಗಿ' ಪರಿವರ್ತನೆ ಹೊಂದುವವು.

ಸೂಕ್ಷ್ಮರೂಪಿ ಜೀವಿಗಳ ಶೀಥಿಲೀಕರಣ

ಬದಲಾಯಿಸಿ

ಕೆಲವು ಸೂಕ್ಷ್ಮರೂಪಿ ಜೀವಿಗಳು ಉಕ್ಕಿನಲ್ಲಿರುವ ಕಬ್ಬಿಣವನ್ನು ಇಂಗಾಲದಿಂದ ಬೇರ್ಪಡಿಸುವುದಲ್ಲದೆ ಬಳಕೆಯನ್ನು ಮಾಡಿ ಕೊನೆಗೆ ತುಕ್ಕು ಉಳಿಯುವಂತೆ ಮಾಡುವವು.

ಪ್ರಕಾರಗಳು

ಬದಲಾಯಿಸಿ

ಗ್ರೇಡ್ಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. Thu, 10/01/2015 www.prajavani.net/article/ಉಕ್ಕಿನ-ವೃತ್ತಾಂತ
  2. ೨೦೧೪ ಮಾರ್ಚ್ ತಿಂಗಳ ಕಚ್ಛಾ ಉಕ್ಕು ಉತ್ಪಾದನೆ:http://www.worldsteel.org/media-centre/press-releases/2014/March-2014-crude-steel-production-.html Archived 2014-04-26 ವೇಬ್ಯಾಕ್ ಮೆಷಿನ್ ನಲ್ಲಿ.
  3. '೨೦೧೩ರಲ್ಲಿ ಕಚ್ಛಾ ಉಕ್ಕಿನ ತಯಾರಿಕೆ'(ವರ್ಲ್ಡ್ ಸ್ಟೀಲ್ ಅಸೋಸಿಏಶನ್)-http://www.worldsteel.org/dms/internetDocumentList/steel-stats/2013/Crude-steel-excel/document/Crude%20steel%20December%202013.xls

ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಉಕ್ಕು&oldid=1059163" ಇಂದ ಪಡೆಯಲ್ಪಟ್ಟಿದೆ