ಬಾರ್ಲಿ
ಬಾರ್ಲಿ | |
---|---|
Barley field | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | H. vulgare[೧]
|
Binomial name | |
Hordeum vulgare |
ಬಾರ್ಲಿ(ಜವೆ) ಯು ವಾರ್ಷಿಕವಾಗಿ ಬೆಳೆಯುವ ಹುಲ್ಲಿನ ಜಾತಿಯ ಸಸ್ಯ ಹಾರ್ಡಿಯಮ್ ವಲ್ಗರೆ ಯಿಂದ ಪಡೆದ ಒಂದು ಏಕದಳ ಧಾನ್ಯವಾಗಿದೆ.
ಬಾರ್ಲಿಯು ಅನೇಕ ಉಪಯೋಗಗಳನ್ನು ಹೊಂದಿದೆ. ಇದನ್ನು ಪ್ರಾಣಿಗಳ ಮುಖ್ಯ ಮೇವಾಗಿ, ಬಿಯರ್ ಮತ್ತು ಕೆಲವು ಬಟ್ಟಿ ಇಳಿಸಿದ ಪಾನೀಯಗಳಲ್ಲಿ ಪ್ರಮುಖ ಮೊಳಕೆ ಧಾನ್ಯವಾಗಿ ಹಾಗೂ ಅನೇಕ ಆರೋಗ್ಯಕರ ಆಹಾರಗಳ ಅಂಶವಾಗಿ ಬಳಸಲಾಗುತ್ತದೆ. ಇದನ್ನು ಸ್ಕಾಟ್‌ಲ್ಯಾಂಡ್‌ನಿಂದ ಹಿಡಿದು ಆಫ್ರಿಕಾದವರೆಗಿನ ವಿವಿಧ ಸಂಸ್ಕೃತಿಗಳ ಬಾರ್ಲಿ ಬ್ರೆಡ್‌ನಲ್ಲಿ ಹಾಗೂ ಸಾರು ಮತ್ತು ಭಕ್ಷ್ಯಗಳಲ್ಲಿ ಉಪಯೋಗಿಸುತ್ತಾರೆ.
ಪ್ರಪಂಚದಲ್ಲಿ 2007ರ ಏಕದಳ ಧಾನ್ಯಗಳ ಶ್ರೇಣಿಯಲ್ಲಿ, ಬಾರ್ಲಿಯು ಉತ್ಪಾದನೆಯಾಗುವ ಪ್ರಮಾಣ (136 ದಶಲಕ್ಷ ಟನ್‌ಗಳು) ಮತ್ತು ಬೆಳೆಯುವ ಪ್ರದೇಶ (566,000 km²) ಎರಡರಲ್ಲೂ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.[೨]
ವ್ಯುತ್ಪತ್ತಿ
ಬದಲಾಯಿಸಿಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಶನರಿ ಯು ಹಳೆಯ ಇಂಗ್ಲಿಷ್ bærlic(ಬಾರ್ಲಿಕ್) ನಿಂದ "ಬಾರ್ಲಿ"ಯನ್ನು ಪಡೆದುದರ ಬಗ್ಗೆ ದಾಖಲಿಸುತ್ತದೆ. ಆದರೂ ಕೊನೆಗೊಳ್ಳುವ -ಲಿಕ್ , ನಾಮವಾಚಕದ ಬದಲಿಗೆ ಬೆಳೆ ಅಥವಾ ಸಸ್ಯಕ್ಕೆ ಸಂಬಂಧಿಸಿದ ಗುಣವಾಚಕವಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಇದು ಮೊದಲು ಸುಮಾರು ಕ್ರಿ.ಶ. 966ರಲ್ಲಿ bærlic-croft(ಬಾರ್ಲಿಕ್-ಕ್ರಾಫ್ಟ್) ಎಂಬ ಸಂಯುಕ್ತ ಪದದಲ್ಲಿ ದಾಖಲಾಗಿದೆ.[೩] ಹಳೆಯ ಇಂಗ್ಲಿಷ್ ಪದ bære(ಬೇರ್) ಲ್ಯಾಟಿನ್ ಪದ ಫರಿನಾ "ಹೂವು"ಗೆ ಸಂಬಂಧಿಸಿದೆ. ಇದು "ಬಾರ್ಲಿಯ" ಎಂಬರ್ಥವಿರುವ bærlic(ಬಾರ್ಲಿಕ್) ಪದವನ್ನು ನೀಡಿತು.[೪] ಇದು ಸ್ಕಾಟ್‌ಲ್ಯಾಂಡ್‌ನ ಉತ್ತರದಲ್ಲಿ ಬೇರ್ ಆಗಿ ಇನ್ನೂ ಉಳಿದಿದೆ ಮತ್ತು ಅಲ್ಲಿ ಬೆಳೆಯುವ ಆರು-ಸಾಲಿನ ಬಾರ್ಲಿಯ ನಿರ್ದಿಷ್ಟ ಹೊರೆಯನ್ನು ಸೂಚಿಸುತ್ತದೆ.[೫][೬][೭] ಮೂಲತಃ ಬಾರ್ಲಿಯ ಮನೆ ಎಂಬರ್ಥವಿರುವ ಬಾರ್ನ್ ಪದವೂ ಸಹ ಈ ಪದಗಳಲ್ಲಿ ಮೂಲವನ್ನು ಹೊಂದಿದೆ.[೪]
ಜೀವಶಾಸ್ತ್ರ
ಬದಲಾಯಿಸಿಬಾರ್ಲಿಯು ಹುಲ್ಲಿನ ವಂಶಕ್ಕೆ ಸೇರಿದೆ. ಇದೊಂದು ಸ್ವಂತವಾಗಿ ಪರಾಗಸ್ಪರ್ಶ ಮಾಡಿಕೊಳ್ಳುವ, 14 ವರ್ಣತಂತುಗಳ ಜೋಡಿ-ವರ್ಣತಂತುವಿನ ಜಾತಿಯಾಗಿದೆ. ನಿಸರ್ಗ ಸಹಜವಾಗಿ ಬೆಳೆಯುವ ಬಾರ್ಲಿಯ ಮೂಲವಾದ ಹಾರ್ಡಿಯಮ್ ವಲ್ಗರೆ ಉಪಜಾತಿ ಸ್ಪೋಂಟೇನಿಯಂ , ಫರ್ಟೈಲ್ ಕ್ರೆಸೆಂಟ್‌ನಾದ್ಯಂತದ ಹುಲ್ಲುಗಾವಲು ಮತ್ತು ಕಾಡು ಪ್ರದೇಶಗಳಲ್ಲಿ ಹೇರಳವಾಗಿರುತ್ತದೆ ಹಾಗೂ ಅಸ್ಥಿರ ಆವಾಸ ಸ್ಥಾನಗಳಲ್ಲಿ, ರಸ್ತೆಬದಿಗಳಲ್ಲಿ ಮತ್ತು ಹಣ್ಣಿನ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಸರ್ಗ ಸಹಜವಾಗಿ ಬೆಳೆಯುವ ಬಾರ್ಲಿಯು ಈ ಪ್ರದೇಶದಿಂದ ಹೊರಗೆ ತೀರ ಕಡಿಮೆಯಾಗಿರುತ್ತದೆ. ಅಲ್ಲದೇ ಸಾಮಾನ್ಯವಾಗಿ ಅಸ್ಥಿರ ಆವಾಸ ಸ್ಥಾನಗಳಲ್ಲಿ ಮಾತ್ರ ಕಂಡುಬರುತ್ತದೆ.[೮]
ಒಗ್ಗಿಸುವಿಕೆ
ಬದಲಾಯಿಸಿನಿಸರ್ಗ ಸಹಜವಾದ ಬಾರ್ಲಿಯು ಸುಲಭವಾಗಿ ಒಡೆದುಹೋಗುವ ಕದಿರುಗೊಂಚಲನ್ನು ಹೊಂದಿರುತ್ತದೆ; ಗಿಡವು ಬೆಳೆದಂತೆ, ಈ ಕದಿರುಗೊಂಚಲುಗಳು ಬೀಜದ ಹರಡುವಿಕೆಯನ್ನು ಸುಗಮಗೊಳಿಸುವುದಕ್ಕಾಗಿ ಬೇರ್ಪಡುತ್ತವೆ. ಒಗ್ಗಿಸಿದ ಬಾರ್ಲಿಯು ಚೂರುಚೂರಾಗದ ಕದಿರುಗೊಂಚಲನ್ನು ಹೊಂದಿರುತ್ತದೆ. ಅದು ಬೆಳೆದ ಕದಿರನ್ನು ಕಟಾವು ಮಾಡಲು ಹೆಚ್ಚು ಸುಲಭಗೊಳಿಸುತ್ತದೆ.[೮] ಚೂರಾಗದ ಸ್ಥಿತಿಯು Bt1 ಮತ್ತು Bt2 ಎನ್ನುವ ಎರಡು ಭದ್ರವಾಗಿ ಬಂಧಿಸಿದ ಜೀನ್‌ಗಳಲ್ಲಿ ಒಂದರ ರೂಪಾಂತರದಿಂದ ಉಂಟಾಗುತ್ತದೆ; ಹೆಚ್ಚಿನ ಕೃಷಿ-ಪ್ರಭೇದಗಳು ಎರಡರ ರೂಪಾಂತರಗಳನ್ನೂ ಹೊಂದಿವೆ. ಚೂರಾಗದ ಸ್ಥಿತಿಯು ಆನುವಂಶಿಕ ಲಕ್ಷಣದ ವಿಷಯದಲ್ಲಿ ಗೌಣವಾಗಿರುತ್ತದೆ. ಆದ್ದರಿಂದ ಈ ಸ್ಥಿತಿಯನ್ನು ಹೊಂದಿರುವ ಬಾರ್ಲಿಯ ಉಪಜಾತಿಗಳು ರೂಪಾಂತರಿತ ಆಲೀಲ್‌ಗೆ ಸಮಯುಗ್ಮಜಗಳಾಗಿರುತ್ತವೆ.[೮]
ಎರಡು ಸಾಲಿನ ಮತ್ತು ಆರು ಸಾಲಿನ ಬಾರ್ಲಿ
ಬದಲಾಯಿಸಿಕದಿರುಗೊಂಚಲುಗಳು ಕಾಂಡದಲ್ಲಿ ಒಂದಾದ ಮೇಲೊಂದರಂತೆ ಮೂರುಸ್ತರಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ನಿಸರ್ಗ ಸಹಜ ಸ್ಥಿತಿಯ ಬಾರ್ಲಿಯಲ್ಲಿ (ಮತ್ತು ಹಾರ್ಡಿಯಮ್ ನ ಇತರ ಹಳೆಯ ಜಾತಿಗಳು), ಕೇವಲ ಕೇಂದ್ರ ಭಾಗದ ಕದಿರುಗೊಂಚಲು ಮಾತ್ರ ಫಲದಾಯಕವಾಗಿರುತ್ತದೆ, ಇತರ ಎರಡೂ ದುರ್ಬಲವಾಗಿರುತ್ತವೆ. ಈ ಸ್ಥಿತಿಯು ಎರಡು-ಸಾಲಿನ ಬಾರ್ಲಿಗಳೆನ್ನುವ ಕೆಲವು ಕೃಷಿ-ಪ್ರಭೇದಗಳಲ್ಲಿ ಉಳಿದುಕೊಂಡಿದೆ. ರೂಪಾಂತರಗಳ ಒಂದು ಜೊತೆಯು (ಒಂದು ಪ್ರಧಾನ, ಮತ್ತೊಂದು ಗೌಣ) ಫಲದಾಯಕ ಕದಿರುಗೊಂಚಲುಗಳನ್ನು ನೀಡುತ್ತವೆ. ಇದು ಆರು-ಸಾಲಿನ ಬಾರ್ಲಿಗಳನ್ನು ಉತ್ಪತ್ತಿ ಮಾಡುತ್ತದೆ. (ಕೃಷಿ-ಪ್ರಭೇದಗಳನ್ನು ಗಮನಿಸಿ).[೮] ಇತ್ತೀಚಿನ ತಳೀಯ ಅಧ್ಯಯನಗಳು, vrs1 ಎಂಬ ಒಂದು ಜೀನ್‌ನ ರೂಪಾಂತರವು ಎರಡು-ಸಾಲಿನಿಂದ ಆರು-ಸಾಲಿನ ಬಾರ್ಲಿಯಾಗಿ ಪರಿವರ್ತಿಸಲು ಜವಾಬ್ದಾರವಾಗಿರುತ್ತದೆ ಎಂಬುದನ್ನು ಪ್ರಕಟಿಸಿವೆ.[೯]
ಎರಡು-ಸಾಲಿನ ಬಾರ್ಲಿಯು ಆರು-ಸಾಲಿನ ಬಾರ್ಲಿಗಿಂತ ಕಡಿಮೆ ಪ್ರೋಟೀನ್ಅನ್ನು ಹೊಂದಿರುತ್ತದೆ ಮತ್ತು ಹೆಚ್ಚು ಕಿಣ್ವನಕ್ಕೆ ಒಳಪಡಿಸಬಹುದಾದ ಶರ್ಕರದ ಅಂಶವನ್ನು ಒಳಗೊಂಡಿರುತ್ತದೆ. ಅಧಿಕ ಪ್ರೋಟೀನ್‌ಯುಕ್ತ ಬಾರ್ಲಿಯು ಪ್ರಾಣಿಗಳ ಮೇವಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಮೊಳಕೆ ಬರಿಸಿದ ಬಾರ್ಲಿಯು ಸಾಮಾನ್ಯವಾಗಿ ಕಡಿಮೆ ಪ್ರೋಟೀನ್ಅನ್ನು ಹೊಂದಿರುತ್ತದೆ[೧೦] ('ಕಡಿಮೆ ಧಾನ್ಯ ಸಾರಜನಕ', ಸಾಮಾನ್ಯವಾಗಿ ಫಲೀಕರಣ ಸಹಕಾರಿಗಳನ್ನು ಬಳಸದೆ ಉತ್ಪಾದಿಸಿದ) ಇದು ಹೆಚ್ಚಾಗಿ ಏಕಪ್ರಕಾರದ ಮೊಳಕೆ ಒಡೆಯುವುದನ್ನು ತೋರಿಸುತ್ತದೆ, ಸ್ವಲ್ಪಕಾಲ ನೆನೆಸಿಟ್ಟರೆ ಸಾಕಾಗುತ್ತದೆ. ಅಲ್ಲದೇ ಸಾರದಲ್ಲಿ ಕಡಿಮೆ ಪ್ರಮಾಣದ ಪ್ರೋಟೀನ್ ಇರುತ್ತದೆ, ಇದು ಬಿಯರ್ಅನ್ನು ತಿಳಿಯಾಗದಂತೆ ಮಾಡುತ್ತದೆ. ಎರಡು-ಸಾಲಿನ ಬಾರ್ಲಿಯನ್ನು ಸಾಂಪ್ರದಾಯಿಕವಾಗಿ ಇಂಗ್ಲಿಷ್ ಏಲ್ ಶೈಲಿಯ ಬಿಯರ್‌ಗಳಲ್ಲಿ ಬಳಸಲಾಗುತ್ತದೆ. ಆರು-ಸಾಲಿನ ಬಾರ್ಲಿಯು ವಿಶೇಷವಾಗಿ ಮೆಕ್ಕೆಜೋಳ ಮತ್ತು ಭತ್ತದಂತಹ ಗೌಣ ವಸ್ತುಗಳನ್ನು ಸೇರಿಸಲಾಗುವ ಕೆಲವು ಅಮೆರಿಕಾದ ಲಾಗರ್ ಶೈಲಿಯ ಬಿಯರ್‌ಗಳಲ್ಲಿ ಸಾಮಾನ್ಯವಾಗಿದೆ. ಎರಡು-ಸಾಲಿನ ಮೊಳಕೆಬರಿಸಿದ ಬೇಸಿಗೆಯ ಬಾರ್ಲಿಯನ್ನು ಸಾಂಪ್ರದಾಯಿಕ ಜರ್ಮನ್ ಬಿಯರ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ನಾಲ್ಕು-ಸಾಲಿನ ಬಾರ್ಲಿಯು ಬಿಯರ್ ತಯಾರಿಸಲು ಸೂಕ್ತವಾಗಿರುವುದಿಲ್ಲ.
ಹೊಟ್ಟಿರುವ(ಹಲ್ಲೆಡ್) ಮತ್ತು ಹೊಟ್ಟಿಲ್ಲದ(ನೇಕೆಡ್) ಬಾರ್ಲಿ
ಬದಲಾಯಿಸಿಹೊಟ್ಟಿಲ್ಲದ ಬಾರ್ಲಿಯು (ಹಾರ್ಡಿಯಮ್ ವಲ್ಗರೆ L. var. ನ್ಯೂಡಮ್ ಹುಕ್. f.) ಒಂದು ಒಗ್ಗಿಸಿದ ಬಾರ್ಲಿಯ ರೂಪವಾಗಿದೆ. ಇದರ ಹೊಟ್ಟನ್ನು ತೆಗೆಯಲು ಸುಲಭವಾಗಿರುತ್ತದೆ. ಹೊಟ್ಟಿಲ್ಲದ ಬಾರ್ಲಿಯು ಒಂದು ಪುರಾತನ ಆಹಾರ ಬೆಳೆಯಾಗಿದೆ. ಆದರೆ ಹೊಸ ಉದ್ಯಮವೊಂದು ವಿಶೇಷವಾಗಿ ಹಂದಿ ಮತ್ತು ಸಾಕುಕೋಳಿಗಳಿಗೆ ಈ ಧಾನ್ಯದ ಜೀರ್ಣಸಾಧ್ಯ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಆಯ್ದ ಹೊಟ್ಟಿಲ್ಲದ ಬಾರ್ಲಿಯ ಬಳಕೆಯ ಸುತ್ತ ಅಭಿವೃದ್ಧಿಗೊಂಡಿತು.[೧೧] ಹೊಟ್ಟಿಲ್ಲದ ಬಾರ್ಲಿಯನ್ನು ಅನೇಕ ಪ್ರಬಲ ಹೊಸ ಅನ್ವಯಗಳಿಗಾಗಿ ಮತ್ತು ಅದರ ಮೌಲ್ಯಯುತ ಉತ್ಪನ್ನಗಳಿಗಾಗಿ ಕಂಡುಹಿಡಿಯಲಾಯಿತು. ಇದನ್ನು ಅನೇಕ ಆಹಾರ ಬಳಕೆಯಲ್ಲಿ ಹೊಟ್ಟು ಮತ್ತು ಹಿಟ್ಟಿನ ರೂಪದಲ್ಲಿ ಬಳಸಲಾಗುತ್ತದೆ.[೧೨]
ವರ್ಗೀಕರಣ
ಬದಲಾಯಿಸಿಬಾರ್ಲಿಯ ಸಾಂಪ್ರದಾಯಿಕ ವರ್ಗೀಕರಣಗಳಲ್ಲಿ, ಈ ರಚನಾ ಸ್ವರೂಪದ ಭಿನ್ನತೆಗಳು ವಿವಿಧ ರೀತಿಯ ಬಾರ್ಲಿಯನ್ನು ಬೇರೆ ಬೇರೆ ಜಾತಿಗಳಾಗಿ ವರ್ಗೀಕರಿಸುವಂತೆ ಮಾಡಿತು. ಈ ವರ್ಗೀಕರಣದಡಿಯಲ್ಲಿ, ಚೂರಾಗುವ ಕದಿರುಗೊಂಚಲನ್ನು ಹೊಂದಿರುವ ಎರಡು-ಸಾಲಿನ ಬಾರ್ಲಿಯನ್ನು (ನಿಸರ್ಗ ಸಹಜ ಸ್ಥಿತಿಯ ಬಾರ್ಲಿ) ಹಾರ್ಡಿಯಮ್ ಸ್ಪೋಂಟೇನಿಯಂ K.ಕೋಚ್ ಎಂಬುದಾಗಿ ವಿಂಗಡಿಸಲಾಗಿದೆ. ಚೂರಾಗದ ಕದಿರುಗೊಂಚಲನ್ನು ಹೊಂದಿರುವ ಎರಡು-ಸಾಲಿನ ಬಾರ್ಲಿಯನ್ನು H. ಡಿಸ್ಟಿಚಮ್ L. ಎಂಬುದಾಗಿ, ಚೂರಾಗದ ಕದಿರುಗೊಂಚಲನ್ನು ಹೊಂದಿರುವ ಆರು-ಸಾಲಿನ ಬಾರ್ಲಿಯನ್ನು H. ವಲ್ಗರೆ L. (ಅಥವಾ H. ಹೆಕ್ಸಾಸ್ಟಿಚಮ್ L.) ಎಂಬುದಾಗಿ ಮತ್ತು ಚೂರಾಗುವ ಕದಿರುಗೊಂಚಲನ್ನು ಹೊಂದಿರುವ ಆರು-ಸಾಲಿನ ಬಾರ್ಲಿಯನ್ನು H. ಅಗ್ರಿಯೊಕ್ರಿತಾನ್ ಆಬರ್ಗ್ ಎಂಬುದಾಗಿ ವರ್ಗೀಕರಿಸಲಾಗಿದೆ.
ಈ ಭಿನ್ನತೆಗಳು ಜೀವಕೋಶದ ಮತ್ತು ಅಣುವಿನ ಸಾಕ್ಷ್ಯದೊಂದಿಗೆ ಜತೆಗೂಡಿರುವ ಒಂದು-ಜೀನ‌್‌ನ ರೂಪಾಂತರದಿಂದ ಉಂಟಾಗಿದೆ. ಇದು ಇತ್ತೀಚಿನ ವರ್ಗೀಕರಣಗಳು ಈ ರೂಪಗಳನ್ನು H. ವಲ್ಗರೆ L ಎಂಬ ಏಕ ಜಾತಿಯಾಗಿ ಸೂಚಿಸುವಂತೆ ಮಾಡಿದೆ.[೮]
ಇತಿಹಾಸ
ಬದಲಾಯಿಸಿಬಾರ್ಲಿಯು ಸಮೀಪಪ್ರಾಚ್ಯ[೧೩] ದಲ್ಲಿ ಐಂಕಾರ್ನ್ ಮತ್ತು ಎಮರ್ ಗೋಧಿ ಇದ್ದ ಸಂದರ್ಭದಲ್ಲಿನ ಮೊದಲು ಒಗ್ಗಿಸಿದ ಧಾನ್ಯವಾಗಿದೆ.[೧೪] ನಿಸರ್ಗ ಸಹಜ ಸ್ಥಿತಿಯ ಬಾರ್ಲಿಯು (H. ವಲ್ಗರೆ ssp. ಸ್ಪೋಂಟೇನಿಯಂ ) ಪಶ್ಚಿಮದಲ್ಲಿ ಉತ್ತರ ಆಫ್ರಿಕಾ ಮತ್ತು ಕ್ರೀಟಿಯಿಂದ ಪೂರ್ವದಲ್ಲಿ ಟಿಬೆಟ್‌ವರೆಗೆ ಹಬ್ಬಿಕೊಂಡಿದೆ.[೮] ಪುರಾತತ್ವ ಶಾಸ್ತ್ರದಲ್ಲಿನ ನಿಸರ್ಗ ಸಹಜ ಸ್ಥಿತಿಯ ಬಾರ್ಲಿಯ ಆರಂಭಿಕ ಸಾಕ್ಷ್ಯವು ಗ್ಯಾಲಿಲೀ ಸಮುದ್ರದ ದಕ್ಷಿಣ ಭಾಗದ ಒಹಾಲೊ IIರ ಎಪಿಪೇಲಿಯೊಲಿಥಿಕ್‌ನಿಂದ ಬಂದಿದೆ. ಇದರ ಅವಶೇಷಗಳು ಸುಮಾರು ಕ್ರಿ.ಪೂ. 8500ರ ದಿನಾಂಕವನ್ನು ಸೂಚಿಸುತ್ತವೆ.[೮] ಆರಂಭಿಕ ಒಗ್ಗಿಸಿದ ಬಾರ್ಲಿಯು, ಟೆಲ್ ಅಬು ಹುರೆಯ್ರಾದ ಪ್ರಿ-ಪಾಟರಿ ನಿಯೋಲಿಥಿಕ್ B ಪ್ರದೇಶಗಳಂತಹ ಸಮೀಪಪ್ರಾಚ್ಯದಲ್ಲಿ ಸಿರಿಯಾದ ಅಸೆರಾಮಿಕ್ ನಿಯೋಲಿಥಿಕ್ ಪ್ರದೇಶಗಳಲ್ಲಿ ಕಂಡುಬರುತ್ತದೆ. ಬಾರ್ಲಿಯನ್ನು ಕಾಳು, ಗೋಧಿ ಮತ್ತು ದ್ವಿದಳಧಾನ್ಯಗಳಂತಹ ಇತರ ಬೆಳೆಗಳೊಂದಿಗೆ ಕೊರಿಯನ್ ಪೆನಿನ್ಸುಲದಲ್ಲಿ ಆರಂಭಿಕ ಮ್ಯೂಮನ್ ಪಾಟರಿ ಅವಧಿಯಿಂದ (ಸುಮಾರು ಕ್ರಿ.ಪೂ. 1500-50) ಬೆಳೆಯಲಾಗುತ್ತಿದೆ. .[೧೫]
ಪುಲಿಟ್ಜರ್ ಪ್ರಶಸ್ತಿ-ವಿಜೇತ ಪುಸ್ತಕ ಗನ್ಸ್, ಜರ್ಮ್ಸ್ ಆಂಡ್ ಸ್ಟೀಲ್ ನಲ್ಲಿ ಜ್ಯಾರೆಡ್ ಡೈಮಂಡ್, ನೈಋತ್ಯ ಯುರೇಷಿಯಾದಲ್ಲಿ ಇತರ ಒಗ್ಗಿಸಿದ ಬೆಳೆ ಮತ್ತು ಪ್ರಾಣಿಗಳೊಂದಿಗೆ ಬಾರ್ಲಿಯ ಲಭ್ಯತೆಯು, ಮಾನವ ಇತಿಹಾಸವು ಸುಮಾರು 13,000 ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ವಿಸ್ತಾರ ಐತಿಹಾಸಿಕ ಮಾದರಿಗಳಿಗೆ ಗಮನಾರ್ಹವಾದ ಕೊಡುಗೆಯನ್ನು ನೀಡಿದೆ ಎಂದು ಸಮರ್ಥಿಸುತ್ತಾನೆ; ಹಾಗಾಗಿ ಯುರೇಷಿಯಾದ ನಾಗರಿಕತೆಯು ಸಮಗ್ರವಾಗಿ ಉಳಿದುಕೊಂಡಿದೆ ಮತ್ತು ಇತರೆ ನಾಗರಿಕತೆಗಳನ್ನು ಮೀರಿಸಿದೆ.[೧೬]
ಬಾರ್ಲಿ ಬಿಯರ್ ನವಶಿಲಾಯುಗದ ಮಾನವರು ಅಭಿವೃದ್ಧಿಪಡಿಸಿದ ಮೊದಲ ಪಾನೀಯವಾಗಿದೆ.[೧೭] ಬಾರ್ಲಿಯನ್ನು ನಂತರ ಕರೆನ್ಸಿಯಾಗಿ ಬಳಸಲಾಯಿತು.[೧೭] ಎಮರ್ ಗೋಧಿಯೊಂದಿಗೆ, ಬಾರ್ಲಿಯು ಪುರಾತನ ಈಜಿಪ್ಟಿನ ಪ್ರಮುಖ ಏಕದಳ ಧಾನ್ಯವಾಗಿತ್ತು. ಅಲ್ಲಿ ಅದನ್ನು ಬ್ರೆಡ್ ಮತ್ತು ಬಿಯರ್ ತಯಾರಿಸಲು ಬಳಸುತ್ತಿದ್ದರು. ಬಾರ್ಲಿಯ ಸಾಮಾನ್ಯ ಹೆಸರು jt (ಊಹನವಾಗಿ "ಈಟ್" ಎಂದು ಉಚ್ಚರಿಸಲಾಗುತ್ತದೆ); šma (ಊಹನವಾಗಿ "ಶಿ-ಮ" ಎಂದು ಉಚ್ಚರಿಸಲಾಗುವ) ಎಂಬುದು ಈಜಿಪ್ಟಿನ ಒಳನಾಡಿನ ಬಾರ್ಲಿಯನ್ನು ಸೂಚಿಸುತ್ತದೆ ಮತ್ತು ಇದು ಈಜಿಪ್ಟಿನ ಒಳನಾಡಿನ ಸಂಕೇತವಾಗಿದೆ. ಇದರ ಸುಮೇರಿಯನ್ ಪದವೆಂದರೆ akiti. ಡ್ಯುಟರಾನಮಿ(ಬೈಬಲ್ಲಿನ ಹಳೆ ಒಡಂಬಡಿಕೆಯ ಪ್ರಥಮ ಪಂಚಕದ ಪಂಚಮಗ್ರಂಥ) 8:8ಯ ಪ್ರಕಾರ, ಬಾರ್ಲಿಯು ಕೇನನ್‌ನ ಪ್ರಾಮಿಸ್ಡ್ ಲ್ಯಾಂಡ್ನ ಫಲವಂತಿಕೆಯನ್ನು ವಿಶಿಷ್ಟವಾಗಿ ಹೊಂದಿರುವ "ಏಳು ಜಾತಿಯ" ಬೆಳೆಗಳಲ್ಲಿ ಒಂದಾಗಿದೆ ಮತ್ತು ಬಾರ್ಲಿಯು ಪೆಂಟಟ್ಯೂಕ್(ಪ್ರಥಮ ಗ್ರಂಥ ಪಂಚಕ)ನಲ್ಲಿ ವಿವರಿಸಿದ ಇಸ್ರೇಲಿ ತ್ಯಾಗಗಳಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ (ಗಮನಿಸಿ ಉದಾ. ನಂಬರ್ಸ್ 5:15). ಇದರ ಧಾರ್ಮಿಕ ಪ್ರಾಮುಖ್ಯತೆಯು ಯುರೋಪಿನಲ್ಲಿ ಮಧ್ಯ ಯುಗದವರೆಗೆ ಮುಂದುವರಿಯಿತು ಹಾಗೂ ಅವರು ಅದನ್ನು ಆಲ್ಫಿಟೊಮ್ಯಾಂಸಿ ಮತ್ತು ಕಾರ್ಸ್ನೆಡ್ಯ ಮೂಲಕ ನ್ಯಾಯದಲ್ಲಿ ಬಳಸುತ್ತಿದ್ದರು. {|style="float:right;clear:right;font-size:9pt;margin:2em 0 1em 1em;" |- |+ ಈಜಿಪ್ಟಿನ ಚಿತ್ರಲಿಪಿಯಲ್ಲಿ ಬಾರ್ಲಿ |jt ಬಾರ್ಲಿ ನಿರ್ಣಾಯಕ/ಭಾವಲಿಪಿ
|
|
|- |jt (ಸಾಮಾನ್ಯ) ಕಾಗುಣಿತ
|
|
|- |šma ನಿರ್ಣಾಯಕ/ಭಾವಲಿಪಿ
|
|
|} ಪುರಾತನ ಗ್ರೀಸ್‌ನಲ್ಲಿ, ಬಾರ್ಲಿಯ ಧರ್ಮವಿಧಿಗಳನ್ನೊಳಗೊಂಡ ಪ್ರಾಮುಖ್ಯತೆಯು ಎಲ್ಯೂಸಿನ್ ರಹಸ್ಯಾಚರಣೆಗಳ ಆರಂಭಿಕ ಹಂತಗಳಷ್ಟು ಹಿಂದಿನದಾಗಿದೆ. ಬಾರ್ಲಿ ಮತ್ತು ಮೂಲಿಕೆಯಿಂದ ತಯಾರಿಸಿದ ಮಿಶ್ರ ಪಾನೀಯ ಅಥವಾ ಸಿದ್ಧಗೊಳಿಸುವ ಕೈಕಿಯಾನ್ ಅನ್ನು ಹೋಮರಿಕ್ ಸ್ತೋತ್ರದಲ್ಲಿ ಡೆಮೆಟರ್‌ಗೆ ಸೂಚಿಸಲಾಗಿದೆ. ಡೆಮೆಟರ್‌ಳನ್ನು ಕೆಲವರು "ಬಾರ್ಲಿಯ ತಾಯಿ" ಎಂದು ನಂಬುತ್ತಾರೆ.[೧೮] ಪ್ಲಿನಿ ದ ಎಲ್ಡರ್‌ನ ನ್ಯಾಚುರಲ್ ಹಿಸ್ಟರಿ ಯ (xviii.72) ಪ್ರಕಾರ, ಹೊಟ್ಟು ಕಳೆದ ಬಾರ್ಲಿಗಳನ್ನು ಒಣಗಿಸಿ, ಅಂಬಲಿಯನ್ನು ತಯಾರಿಸುವ ಮೊದಲು ಅವುಗಳನ್ನು ಹುರಿಯಲಾಗುತ್ತಿತ್ತು. ಇದು ಮೊಳೆಕಟ್ಟಿಸಿದ ಧಾನ್ಯವನ್ನು ನೀಡುತ್ತದೆ, ಅದು ಶೀಘ್ರದಲ್ಲಿ ಹುದುಗುತ್ತದೆ ಮತ್ತು ಸ್ವಲ್ಪಮಟ್ಟಿಗೆ ಆಲ್ಕಹಾಲ್ ಆಗುತ್ತದೆ.
ಬಾರ್ಲಿಯು ಹಾರ್ಡಿಯರಿ ("ಬಾರ್ಲಿ-ತಿನ್ನುವವರು") ಎನ್ನುವ ಕುಸ್ತಿಮಲ್ಲರ ವಿಶೇಷ ಆಹಾರವಾಗಿತ್ತು ಎಂದೂ ಪ್ಲಿನಿಯು ಸೂಚಿಸಿದ್ದಾನೆ. ಆದರೆ ರೋಮನ್ನರ ಕಾಲದಲ್ಲಿ ಬಾರ್ಲಿಯ ಬದಲಿಗೆ ಗೋಧಿಯು ಅವರ ಪ್ರಮುಖ ಆಹಾರವಾಯಿತು ಎಂದು ನಂತರ ಸೇರಿಸಿದ್ದಾನೆ.[೧೯]
ಟಿಬೇಟನ್ ಬಾರ್ಲಿಯು ಕ್ರಿ.ಶ. ಐದನೇ ಶತಮಾನದಿಂದ ಟಿಬೇಟಿನಲ್ಲಿ ಪ್ರಮುಖ ಆಹಾರವಾಗಿದೆ. ಸಂಗ್ರಹಯೋಗ್ಯವಾದ ತಂಪಾದ ವಾಯುಗುಣದೊಂದಿಗೆ ಇದು ಅತ್ಯುತ್ತಮ ಸೈನ್ಯವನ್ನು ಅಭಿವೃದ್ಧಿಗೊಳಿಸಲು ಸಮರ್ಥವಾಗಿರುವ ನಾಗರಿಕತೆಯನ್ನು ಬೆಳೆಸಿದೆ.[೨೦] ಇದರಿಂದ ಟಿಬೇಟಿನ[೨೧] ಈಗಲೂ ಪ್ರಮುಖ ಆಹಾರವಾಗಿರುವ ತ್ಸಾಂಪ ಎಂಬ ಹಿಟ್ಟಿನ ಉತ್ಪನ್ನವನ್ನು ಮತ್ತು ಕೈಯಿಂದ-ಸುತ್ತಿದ ಬಾಲ್‌ಗಳಂತಹ ಉತ್ಪನ್ನಗಳನ್ನು ತಯಾರಿಸುತ್ತಾರೆ.[೨೦]
ಮಧ್ಯಕಾಲೀನ ಯುರೋಪಿನಲ್ಲಿ ಬಾರ್ಲಿ ಮತ್ತು ರೈಯಿಂದ ಮಾಡಿದ ಬ್ರೆಡ್ ಗ್ರಾಮೀಣ ಜನರ ಆಹಾರವಾಗಿತ್ತು. ಉನ್ನತ ವರ್ಗದವರು ಗೋಧಿಯ ಉತ್ಪನ್ನಗಳನ್ನು ಬಳಸುತ್ತಿದ್ದರು.[೧೯] ಪೂರ್ವ ಯುರೋಪಿನಲ್ಲಿ 19ನೇ ಶತಮಾನದಲ್ಲಿ ಬಾರ್ಲಿಯ ಬದಲಿಗೆ ಆಲೂಗಡ್ಡೆಯು ಹೆಚ್ಚಾಗಿ ಬಳಕೆಗೆ ಬಂದಿತು.[೨೨]
ಉತ್ಪಾದನೆ
ಬದಲಾಯಿಸಿಪ್ರಮುಖ ಹತ್ತು ಬಾರ್ಲಿ ಉತ್ಪಾದಕರು — 2007 (ದಶಲಕ್ಷ ಮೆಟ್ರಿಕ್ ಟನ್) | |
---|---|
ರಷ್ಯಾ | 15.7 |
ಕೆನಡಾ | 11.8 |
Spain | 11.7 |
Germany | 11.0 |
France | 9.5 |
ಟರ್ಕಿ | 7.4 |
ಉಕ್ರೇನ್ | 6.0 |
ಆಸ್ಟ್ರೇಲಿಯಾ | 5.9 |
ಯುನೈಟೆಡ್ ಕಿಂಗ್ಡಂ | 5.1 |
ಅಮೇರಿಕ ಸಂಯುಕ್ತ ಸಂಸ್ಥಾನ | 4.6 |
ಪ್ರಪಂಚದ ಒಟ್ಟು ಮೊತ್ತ | 136 |
ಮೂಲ: UN ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (FAO) [೨೩] |
ಬಾರ್ಲಿಯನ್ನು 2007ರಲ್ಲಿ ಪ್ರಪಂಚದಾದ್ಯಂತ ಸುಮಾರು 100 ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿತ್ತು. 1974ರಲ್ಲಿ ಪ್ರಪಂಚದ ಒಟ್ಟು ಉತ್ಪತ್ತಿಯು 148,818,870 ಟನ್‌ಗಳಷ್ಟಿತ್ತು; ಅದರಿಂದೀಚೆಗೆ ಪ್ರಪಂಚದಾದ್ಯಂತದ ಬಾರ್ಲಿಯ ಉತ್ಪಾದನೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡುಬಂದಿದೆ.[೧೯]
ಕೃಷಿ
ಬದಲಾಯಿಸಿಬಾರ್ಲಿಯು ವ್ಯಾಪಕವಾಗಿ ಹೊಂದಿಕೊಳ್ಳಬಲ್ಲ ಬೆಳೆಯಾಗಿದೆ. ಇದು ಪ್ರಸ್ತುತ ಬೇಸಿಗೆಯ ಬೆಳೆಯಾಗಿ ಬೆಳೆಯಲಾಗುವ ಸಮಶೀತೋಷ್ಣವಲಯದ ಪ್ರದೇಶಗಳಲ್ಲಿ ಮತ್ತು ಚಳಿಗಾಲದ ಬೆಳೆಯಾಗಿ ಬೆಳೆಸಲಾಗುವ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರ ಮೊಳಕೆ ಒಡೆಯುವ ಅವಧಿಯು ಎಲ್ಲಾ ಕಡೆ 1ರಿಂದ 3 ದಿನಗಳವರೆಗಿರುತ್ತದೆ. ಬಾರ್ಲಿಯು ತಂಪಾದ ವಾಯುಗುಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ ಇದು ನಿರ್ದಿಷ್ಟವಾಗಿ ಚಳಿಗಾಲ ಸಹಿಷ್ಣುವಲ್ಲ.
ಬಾರ್ಲಿಯು ಗೋಧಿಗಿಂತ ಹೆಚ್ಚು ಮಣ್ಣಿನ ಲವಣತ್ವವನ್ನು ತಡೆದುಕೊಳ್ಳುತ್ತದೆ. ಇದರಿಂದಾಗಿ ಕ್ರಿ.ಪೂ. 2ನೇ ಸಹಸ್ರವರ್ಷದಿಂದ ಮೆಸಪೊಟಮಿಯದಲ್ಲಿ ಬಾರ್ಲಿಯ ಕೃಷಿಯು ಅಧಿಕಗೊಂಡಿರಬಹುದು. ಬಾರ್ಲಿಯು ಚಳಿಗಾಲದ ಗೋಧಿ (ಟ್ರಿಟಿಕಮ್ ಏಸ್ಟಿವಮ್ ), ಫಾಲ್ ರೇ (ಸೆಕಾಲೆ ಸೆರೆಲೆ ) ಅಥವಾ ಚಳಿಗಾಲದ ಟ್ರಿಟಿಕೆಲೆ (× ಟ್ರಿಟಿಕೋಸೆಕಾಲೆ ವಿಟ್ಮ್. ex A. ಕ್ಯಾಮಸ್) ಯಷ್ಟು ಶೀತವನ್ನು ತಡೆದುಕೊಳ್ಳುವುದಿಲ್ಲ. ಆದರೆ ಆಸ್ಟ್ರೇಲಿಯಾದಂತಹ ಪ್ರಪಂಚದ ಬೆಚ್ಚಗಿನ ಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿ ಬಿತ್ತಲಾಗುತ್ತದೆ.
ಬಾರ್ಲಿಯು ಕಡಿಮೆ ಬೆಳೆಯುವ ಅವಧಿಯನ್ನು ಹೊಂದಿರುತ್ತದೆ. ಅದಲ್ಲದೇ ಹೆಚ್ಚುಕಡಿಮೆ ಶುಷ್ಕತೆಯನ್ನು ಸಹಿಸಿಕೊಳ್ಳುತ್ತದೆ.[೧೯]
ಸಸ್ಯದ ರೋಗಗಳು
ಬದಲಾಯಿಸಿಈ ಸಸ್ಯವು ಸುಲಭವಾಗಿ ಬಾರ್ಲಿ ಮೈಲ್ಡ್ ಮೊಸಾಯಿಕ್ ಬೈಮೊವೈರಸ್[೨೪][೨೫] ಮತ್ತು ಬ್ಯಾಕ್ಟೀರಿಯಾ ಬೆಳೆರೋಗದ ಪ್ರಭಾವಕ್ಕೆ ಒಳಗಾಗುತ್ತದೆ. ಬಾರ್ಲಿಯು ಬಲುಬೇಗ ಅನೇಕ ರೋಗಗಳಿಗೆ ತುತ್ತಾಗುತ್ತದೆ. ಆದರೆ ಸಸ್ಯದ ತಳಿಗಾರರು ಇದನ್ನು ಪ್ರತಿರೋಧಿಸಲು ಕಷ್ಟಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ರೋಗದಿಂದ ಉಂಟಾಗುವ ಹಾನಿಯು ಬೆಳೆಸುವ ಪ್ರಭೇದದ ರೋಗದ-ಪ್ರಭಾವಕ್ಕೆ-ಒಳಗಾಗುವ ಲಕ್ಷಣವನ್ನು ಮತ್ತು ರೋಗವು ಹೆಚ್ಚಾಗುವ ಸಂದರ್ಭದ ಪರಿಸರದ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಬಳಕೆಗಳು
ಬದಲಾಯಿಸಿಪಾಚಿನಾಶಕ
ಬದಲಾಯಿಸಿಇಂಗ್ಲೆಂಡ್ನಲ್ಲಿ, ಬಾರ್ಲಿಯ ಹುಲ್ಲನ್ನು ರಂಧ್ರವಿರುವ ಚೀಲಗಳಲ್ಲಿ ಇರಿಸಿ, ಮೀನಿನ ಕೊಳಗಳಲ್ಲಿ ಅಥವಾ ನೀರಿನ ಉದ್ಯಾನಗಳಲ್ಲಿ ತೇಲಿಸಿಬಿಡಲಾಗುತ್ತದೆ. ಇದು ಕೊಳದ ಸಸ್ಯ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಮಾಡದೆ ಪಾಚಿಯ ಬೆಳೆವಣಿಗೆಯನ್ನು ಕಡಿಮೆ ಮಾಡುತ್ತದೆ. ಬಾರ್ಲಿಯ ಹುಲ್ಲನ್ನು ಕೀಟನಾಶಕವಾಗಿ ಬಳಸುವುದಕ್ಕೆ EPA ಒಪ್ಪಿಗೆಯನ್ನು ನೀಡಲಿಲ್ಲ. ಆದರೆ US ಮತ್ತು UKಯಲ್ಲಿ ವಿಶ್ವವಿದ್ಯಾನಿಲಯದ ಪರಿಶೀಲನೆಯಲ್ಲಿ ಅದರ ಕೊಳಗಳಲ್ಲಿ ಪಾಚಿನಾಶಕವಾಗಿ ಬಳಸುವ ಪರಿಣಾಮಕಾರಿತ್ವವು ಮಿಶ್ರ ಫಲಿತಾಂಶಗಳನ್ನು ನೀಡಿತು.[೨೬]
ಪ್ರಾಣಿಗಳ ಆಹಾರ
ಬದಲಾಯಿಸಿಅಮೆರಿಕ ಸಂಯುಕ್ತ ಸಂಸ್ಥಾನದ ಬಾರ್ಲಿ ಉತ್ಪಾದನೆಯ ಅರ್ಧದಷ್ಟನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ.[೨೭] ಬಾರ್ಲಿಯು ಪ್ರಪಂಚದ ಹೆಚ್ಚಿನ ಪ್ರದೇಶಗಳಲ್ಲಿ ವಿಶೇಷವಾಗಿ ಉತ್ತರ ಭಾಗದ ವಾಯುಗುಣದಲ್ಲಿ -ಉದಾಹರಣೆಗಾಗಿ ಉತ್ತರ ಮತ್ತು ಪೂರ್ವದ ಯುರೋಪ್- ಒಂದು ಪ್ರಮುಖ ಆಹಾರ ಧಾನ್ಯವಾಗಿದೆ. ಇದು ಮೆಕ್ಕೆಜೋಳದ ಉತ್ಪಾದನೆಗೆ ಸರಿಹೊಂದುವುದಿಲ್ಲ. ಬಾರ್ಲಿಯು ಕೆನಡಾ, ಯುರೋಪ್ ಮತ್ತು ಉತ್ತರದ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಧಾನ ಆಹಾರ ಧಾನ್ಯವಾಗಿದೆ.[೨೮] ಬಾರ್ಲಿಯಿಂದ ತಯಾರಿಸಿದ ವಿಶಿಷ್ಟ ತಿನಿಸು ಮಾರುಕಟ್ಟೆಯಲ್ಲಿ ಬಳಸುವ ಪಶ್ಚಿಮ ಕೆನಡಾದ ಬೀಫ್‌ಅನ್ನು ನಿರೂಪಿಸುವ ಲಕ್ಷಣಗಳಲ್ಲಿ ಒಂದಾಗಿದೆ.[೨೯]
ಆಲ್ಕಹಾಲಿನ ಪಾನೀಯಗಳು
ಬದಲಾಯಿಸಿಬಾರ್ಲಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಳಕೆ ಕಟ್ಟಿಸಲು ಬಳಸಲಾಗುತ್ತದೆ.[೩೦] ಇದು ಬಿಯರ್ ಮತ್ತು ವಿಸ್ಕಿಯ ಉತ್ಪಾದನೆಯಲ್ಲಿ ಒಂದು ಪ್ರಮುಖ ಅಂಶವಾಗಿದೆ. ಎರಡು-ಸಾಲಿನ ಬಾರ್ಲಿಯನ್ನು ಸಾಂಪ್ರದಾಯಿಕವಾಗಿ ಜರ್ಮನ್ ಮತ್ತು ಇಂಗ್ಲಿಷ್ ಬಿಯರ್‌ಗಳಲ್ಲಿ ಬಳಸಲಾಗುತ್ತದೆ. ಆರು-ಸಾಲಿನ ಬಾರ್ಲಿಯನ್ನು US ಬಿಯರ್‌ಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿತ್ತು. ಆದರೆ ಈಗ ಎರಡು ಪ್ರಭೇದಗಳನ್ನೂ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.[೩೧] ಹಸಿರು ಬಿಯರ್‌ನಿಂದ[೩೨] ತೊಟ್ಟಿಕ್ಕಿಸಿದ ವಿಸ್ಕಿಯನ್ನು ಐರ್ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ಬಾರ್ಲಿಯಿಂದ ತಯಾರಿಸಲಾಗುತ್ತದೆ. ಇತರ ರಾಷ್ಟ್ರಗಳು ಆಲ್ಕಹಾಲಿನ ವಿವಿಧ ಮೂಲಗಳನ್ನು ಬಳಸಿಕೊಳ್ಳುತ್ತವೆ; ಸಾಮಾನ್ಯವಾಗಿ USAನಲ್ಲಿ ಮೆಕ್ಕೆಜೋಳ, ರೈ ಮತ್ತು ಮೊಲಾಸಗಳನ್ನು ಬಳಸಲಾಗುತ್ತದೆ. ಆಲ್ಕಹಾಲಿನ ಘಟಕಾಂಶಗಳಲ್ಲಿ ಧಾನ್ಯವು 51% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದಕ್ಕೆ ಆ ಧಾನ್ಯದ ಹೆಸರನ್ನು ಅನ್ವಯಿಸಲಾಗುತ್ತದೆ.[೩೩]
ಬಾರ್ಲಿ ನೀರು[೪] ಮತ್ತು ಬಾರ್ಲಿ ಚಹಾದಂತಹ (ಜಪಾನ್‌ನಲ್ಲಿ ಮುಗಿಚ ಎನ್ನುತ್ತಾರೆ)[೩೪] ಆಲ್ಕಹಾಲ್-ಇಲ್ಲದ ಪಾನೀಯಗಳನ್ನು, ಬಾರ್ಲಿಯನ್ನು ನೀರಿನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಬಾರ್ಲಿ ವೈನ್ 1700ರಲ್ಲಿದ್ದ ಒಂದು ಆಲ್ಕಹಾಲಿನ ಪಾನೀಯವಾಗಿದೆ. ಬಾರ್ಲಿಯನ್ನು ನೀರಿನಲ್ಲಿ ಬೇಯಿಸಿ, ನಂತರ ಬಾರ್ಲಿ-ನೀರನ್ನು ಬಿಳಿ ವೈನ್ ಹಾಗೂ ಬರಿಜು, ನಿಂಬೆ ಮತ್ತು ಸಕ್ಕರೆಯಂತಹ ಇತರ ಅಂಶಗಳೊಂದಿಗೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. 1800ರಲ್ಲಿ ಪುರಾತನ ಗ್ರೀಕ್ ಮೂಲದ ಪಾಕವಿಧಾನದಿಂದ ಒಂದು ಭಿನ್ನ ಬಾರ್ಲಿ ವೈನ್ಅನ್ನು ತಯಾರಿಸಲಾಗಿತ್ತು.[೪]
ಆಹಾರ
ಬದಲಾಯಿಸಿಪೌಷ್ಟಿಕಾಂಶದ ಮೌಲ್ಯ 100 g (3.5 oz) | |
---|---|
ಶಕ್ತಿ | 1,474 kJ (352 kcal) |
ಕಾರ್ಬೋಹೈಡ್ರೇಟ್ಗಳು | 77.7 g |
ಸಕ್ಕರೆ | 0.8 g |
ನಾರು ಪದಾರ್ಥ | 15.6 g |
1.2 g | |
9.9 g | |
ವಿಟಮಿನ್(ಅನ್ನಾಂಗ)ಗಳು | ಪ್ರಮಾಣ %DV† |
ಥಯಾಮಿನ್ | 17% 0.2 mg |
ಬಿ೨ ಅನ್ನಾಂಗ (ರೈಬೊಫ್ಲೆವಿನ್) | 8% 0.1 mg |
ಬಿ೩ ಅನ್ನಾಂಗ (ನಯಾಸಿನ್) | 31% 4.6 mg |
ಬಿ೫ ಅನ್ನಾಂಗ (ಪಾಂಟೊಥೆನಿಕ್ ಆಸಿಡ್) | 6% 0.3 mg |
ಬಿ೧೨ ಅನ್ನಾಂಗ | 23% 0.3 mg |
ಬಿ೯ ಅನ್ನಾಂಗ (ಫೊಲೆಟ್) | 6% 23 μg |
ಸಿ ಅನ್ನಾಂಗ | 0% 0.0 mg |
ಖನಿಜಗಳು | ಪ್ರಮಾಣ %DV† |
ಸುಣ್ಣ(ಕ್ಯಾಲ್ಸಿಯಮ್) | 3% 29.0 mg |
ಕಬ್ಬಿಣ | 19% 2.5 mg |
ಮೆಗ್ನೀಸಿಯಂ | 22% 79.0 mg |
ಫಾಸ್ಫರಸ್ | 32% 221 mg |
ಪೊಟಾಸಿಯಂ | 6% 280 mg |
ಸತು | 22% 2.1 mg |
| |
†Percentages are roughly approximated using US recommendations for adults. Source: USDA FoodData Central |
ಬಾರ್ಲಿಯು ಎಂಟು ಮೂಲಭೂತ ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ.[೩೫][೩೬] ಇತ್ತೀಚಿನ ಅಧ್ಯಯನದ ಪ್ರಕಾರ ಇಡಿ-ಧಾನ್ಯ ಬಾರ್ಲಿಯನ್ನು ತಿನ್ನುವುದರಿಂದ, ಅಂತಹುದೇ ಗ್ಲಿಸೆಮಿಕ್ ಸೂಚಿಯನ್ನು ಹೊಂದಿರುವ ಬಿಳಿ ಅಥವಾ ಇಡಿ-ಧಾನ್ಯ ಗೋಧಿಗೆ ಹೋಲಿಸಿದರೆ ಸೇವಿಸಿದ ನಂತರ 10 ಗಂಟೆಗಳವರೆಗೆ ರಕ್ತದ ಸಕ್ಕರೆಯ ಪ್ರಮಾಣವು ನಿಯಂತ್ರಿಸಲ್ಪಡುತ್ತದೆ (ಅಂದರೆ ಆಹಾರಕ್ಕೆ ರಕ್ತದ-ಗ್ಲುಕೋಸ್‌ನ ಪ್ರತಿಕ್ರಿಯೆಯು ಕಡಿಮೆಯಾಗುತ್ತದೆ).[೩೭] ಈ ಪರಿಣಾಮವು ಜೀರ್ಣವಾಗದ ಕಾರ್ಬೊಹೈಡ್ರೇಟ್‌ಗಳ ದೊಡ್ಡ ಕರುಳಿನ ಹುದುಗುವಿಕೆಯಿಂದ ಉಂಟಾಗುತ್ತದೆ. ಬಾರ್ಲಿಯನ್ನು ಕಾಫಿಯ ಬದಲಿಯಾಗಿಯೂ ಬಳಸಬಹುದು.
ಹೊಟ್ಟಿರುವ ಬಾರ್ಲಿಯನ್ನು (ಅಥವಾ ಆವರಿಸಿದ ಬಾರ್ಲಿ) ತಿನ್ನಲನರ್ಹವಾದ, ನಾರಿನಂತಹ ಹೊರಗಿನ ಹೊಟ್ಟನ್ನು ತೆಗೆದು ತಿನ್ನಲಾಗುತ್ತದೆ. ಒಮ್ಮೆ ಹೊಟ್ಟನ್ನು ತೆಗೆದ ನಂತರ ಅದನ್ನು ಹೊಟ್ಟಿಲ್ಲದ(ಡಿಹಲ್ಲೆಡ್) ಬಾರ್ಲಿ (ಅಥವಾ ಪಾಟ್ ಬಾರ್ಲಿ ಅಥವಾ ಸ್ಕಾಟ್ಚ್ ಬಾರ್ಲಿ) ಎನ್ನುತ್ತಾರೆ.[೩೮] ಇಡಿ ಧಾನ್ಯದಂತೆ, ಹೊಟ್ಟಿಲ್ಲದ ಬಾರ್ಲಿಯು ಹೊಟ್ಟು ಮತ್ತು ಮೊಳಕೆಯನ್ನು ಹೊಂದಿದ್ದು, ಅದನ್ನು ಪೌಷ್ಟಿಕ ಮತ್ತು ಜನಪ್ರಿಯ ಆರೋಗ್ಯಪೂರ್ಣ ಆಹಾರವಾಗಿ ಮಾಡುತ್ತದೆ. ಮುತ್ತು ಬಾರ್ಲಿಯು (ಅಥವಾ ಪರ್ಲ್ಡ್ ಬಾರ್ಲಿ) ಹೊಟ್ಟಿಲ್ಲದ ಬಾರ್ಲಿಯಾಗಿದ್ದು, ಅದರ ಹೊಟ್ಟನ್ನು ತೆಗೆಯಲು ಅದನ್ನು ಮತ್ತಷ್ಟು ಆವಿಯಿಂದ ಸಂಸ್ಕರಿಸಲಾಗುತ್ತದೆ.[೩೮] ಇದನ್ನು "ಸಣ್ಣ ಮುತ್ತಿನಂಥ ಕಾಳಾಗಿ ಮಾಡುವ" ಕ್ರಿಯೆಯ ಮೂಲಕ ನಯಗೊಳಿಸಬಹುದು. ಹೊಟ್ಟಿಲ್ಲದ ಅಥವಾ ಮುತ್ತು ಬಾರ್ಲಿಯನ್ನು ಓಟ್ ಹಿಟ್ಟು ಮತ್ತು ಓಟ್ಸ್ ತರಿಗಳಂತೆ ಹಿಟ್ಟು ಮತ್ತು ತೆಳುವಾದ ಹಲ್ಲೆಗಳನ್ನೂ ಒಳಗೊಂಡಂತೆ ವಿವಿಧ ರೀತಿಯ ಬಾರ್ಲಿ ಉತ್ಪನ್ನಗಳಾಗಿ ತಯಾರಿಸಬಹುದು.
ಗೋಧಿಯ ಹಿಟ್ಟಿಗಿಂತ ಕಡಿಮೆ ಭಾರವನ್ನು ಹೊಂದಿರುವ ಮತ್ತು ಬಣ್ಣದಲ್ಲಿ ಹೆಚ್ಚು ಕಡುವಾಗಿರುವ ಬಾರ್ಲಿಯ ತವುಡು ತೆಗೆಯದ ಹಿಟ್ಟನ್ನು ಸ್ಕಾಟ್‌ಲ್ಯಾಂಡ್‌ನಲ್ಲಿ ಅಂಬಲಿ ಮತ್ತು ಗಂಜಿಯಲ್ಲಿ ಬಳಸುತ್ತಾರೆ.[೩೮] ಬಾರ್ಲಿ-ಹಿಟ್ಟಿನ ಗಂಜಿಯನ್ನು ಅರಬ್ ರಾಷ್ಟ್ರಗಳಲ್ಲಿ ಸ್ಯಾವಿಗ್ ಎಂದು ಕರೆಯುತ್ತಾರೆ.[೩೯] ಮಧ್ಯಪೂರ್ವದಲ್ಲಿ ಕೃಷಿಯ ದೀರ್ಘಕಾಲದ ಇತಿಹಾಸವನ್ನು ಹೊಂದಿರುವುದರೊಂದಿಗೆ ಬಾರ್ಲಿಯನ್ನು, ಕ್ಯಾಶ್ಕಾಕ್, ಕ್ಯಾಶ್ಕ್ ಮತ್ತು ಮುರ್ರಿಯನ್ನೂ ಒಳಗೊಂಡಂತೆ ಸಾಂಪ್ರದಾಯಿಕ ಅರೇಬಿಕ್, ಕುರ್ದಿಶ್, ಪರ್ಷಿಯನ್ ಮತ್ತು ಟರ್ಕಿಶ್ ಆಹಾರ ಪದಾರ್ಥಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಾರ್ಲಿಯ ಸಾರನ್ನು ಸೌದಿ ಅರೇಬಿಯಾದಲ್ಲಿ ರಮದಾನ್ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ತಿನ್ನುತ್ತಾರೆ.[೪೦] ಇದನ್ನು ಪೂರ್ವ ಯುರೋಪಿನಲ್ಲಿ ಸಾರು ಮತ್ತು ಭಕ್ಷ್ಯಗಳಲ್ಲಿಯೂ ಬಳಸುತ್ತಾರೆ. ಸಾಂಪ್ರದಾಯಿಕ ಆಹಾರ ಸಸ್ಯವಾಗಿರುವ ಆಫ್ರಿಕಾದಲ್ಲಿ, ಇದು ಪೌಷ್ಟಿಕಾಂಶವನ್ನು ವರ್ಧಿಸಲು, ಆಹಾರ ಸುರಕ್ಷತೆಯನ್ನು ಹೆಚ್ಚಿಸಲು, ಗ್ರಾಮೀಣ ಪ್ರದೇಶದಲ್ಲಿ ಬೆಳೆಸಲು ಮತ್ತು ಸಮರ್ಥನೀಯ ಭೂಮಿಯನ್ನು ಬೆಂಬಲಿಸಲು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ.[೪೧]
ಆರು-ಸಾಲಿನ ಪ್ರಭೇದ ಬೆರೆ ಯನ್ನು ಆರ್ಕ್ನೆ, ಶೆಟ್‌ಲ್ಯಾಂಡ್, ಕೈತ್ನೆಸ್ ಹಾಗೂ ಸ್ಕಾಟಿಷ್ ಬೆಟ್ಟದ ಸೀಮೆ ಮತ್ತು ದ್ವೀಪಗಳ ಪಶ್ಚಿಮ ಐಲ್‌ಗಳಲ್ಲಿ ಬೆಳೆಸಲಾಗುತ್ತದೆ. ಈ ಧಾನ್ಯವನ್ನು ಬೆರೆ-ಹಿಟ್ಟನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಸ್ಥಳೀಯವಾಗಿ ಬ್ರೆಡ್, ಬಿಸ್ಕೆಟ್ ಮತ್ತು ಸಾಂಪ್ರದಾಯಿಕ ಬೆರೆಹಿಟ್ಟಿನ ತೆಳು ರೊಟ್ಟಿಯಲ್ಲಿ ಉಪಯೋಗಿಸುತ್ತಾರೆ.[೪೨]
ಮಾಪನ
ಬದಲಾಯಿಸಿಬಾರ್ಲಿ ಧಾನ್ಯಗಳನ್ನು ಇಂಗ್ಲೆಂಡ್‌ನಲ್ಲಿ ಮಾಪನ ಮಾಡಲು ಬಳಸುತ್ತಿದ್ದರು, ಒಂದು ಇಂಚಿಗೆ 3 ಅಥವಾ 4 ಬಾರ್ಲಿ-ಕಾಳುಗಳು ಮತ್ತು ಬಾರ್ಲಿ-ಕಾಳಿಗೆ 4 ಅಥವಾ 5 ಗಸಗಸೆ ಬೀಜಗಳು.[೪೩] ಒಂದು ಇಂಚಿನ ನಿಯಮಬದ್ಧ ನಿರೂಪಣೆಯು 3 ಬಾರ್ಲಿ-ಕಾಳುಗಳಾಗಿದ್ದವು. ಆದರೆ 19ನೇ ಶತಮಾನದಿಂದ ಇದು ಪ್ರಮಾಣಿತ ಇಂಚಿನ ಮಾಪನಗಳಿಂದಾಗಿ ರದ್ದುಗೊಂಡಿತು.[೪೪] ಈ ಏಕಮಾನವು ಬ್ರಿಟನ್ ಮತ್ತು USAಯಲ್ಲಿ ಬಳಸುವ ಶೂ ಸೈಜ್‌ನಲ್ಲಿ ಈಗಲೂ ಬಳಕೆಯಲ್ಲಿದೆ.[೪೫].
ಬಾರ್ಲಿ-ಕಾಳನ್ನು ಟರ್ಕಿಶ್‌ನಲ್ಲಿ ಆರ್ಪ ಎಂದು ಕರೆಯುತ್ತಾರೆ. ಅಧಿಕಾರಿಗಳು ಅವರ ಕುದುರೆಗಳ ಮೇವಿನ ಖರ್ಚುಗಳನ್ನು ಸರಿದೂಗಿಸಲು ಮಾಡಿದ ಎರಡನೆಯ ಅನುಮೋದನೆಯನ್ನು ನಿರೂಪಿಸಲು, ಟರ್ಕಿಯಲ್ಲಿನ ಊಳಿಗಮಾನ್ಯ ಪದ್ಧತಿಯು ಅರ್ಪಾಲಿಕ್ ಅಥವಾ "ಬಾರ್ಲಿ-ಹಣ" ಎಂಬ ಪದವನ್ನು ಸೂಚಿಸಿತು.[೪೬]
ಅಲಂಕಾರ ಸಸ್ಯ
ಬದಲಾಯಿಸಿಹಾರ್ಡಿಯಮ್ ವಲ್ಗರೆ ವರಿಗೇಟ್ ಎಂದು ಸೂಚಿಸುವ ಹಾರ್ಡಿಯಮ್ ವಲ್ಗರೆ ಯ ಹೊಸ ದೃಢವಾದ ಎರಡು ಅಥವಾ ಹೆಚ್ಚು ಬಣ್ಣಗಳಿರುವ ಎಲೆಗಳುಳ್ಳ ಪ್ರಭೇದವನ್ನು ಅಲಂಕಾರಕ ಮತ್ತು ಕುಂಡದ ಗಿಡಗಳ ಕೃಷಿಯಲ್ಲಿ, ಮುದ್ದಿನ ಬೆಕ್ಕುಗಳನ್ನು ಅವುಗಳಲ್ಲಿ ಮೆಲ್ಲಗೆ ಕಚ್ಚಿ ತಿನ್ನುವಂತೆ ಬಿಡುವುದಕ್ಕಾಗಿ, ಬಳಸಲಾಗುತ್ತದೆ.[೪೭]
ಸಂಶೋಧನೆ
ಬದಲಾಯಿಸಿಕ್ಲೋರೊಫಿಲ್ ಬಂಧನ a/b ಪ್ರೋಟೀನ್ ಬಾರ್ಲಿಯ ಆಲ್ಬೊಸ್ಟ್ರೈನ್‍ಗಳಲ್ಲಿ ಕಂಡುಬರುವುದಿಲ್ಲ ಮತ್ತು ಅವನ್ನು ಸಸ್ಯಗಳಲ್ಲಿನ ಪ್ಲಾಸ್ಟಿಡ್ ಬೆಳವಣಿಗೆಯನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಬಿಳಿ ಪಟ್ಟಿಯ ಜಾತಿಗಳ ಸಂಶೋಧನೆ ಮಾಡುವಾಗ, ಸಸ್ಯ ವಿಜ್ಞಾನಿಗಳು ಕ್ಲೋರೊಪ್ಲಾಸ್ಟ್ ಪ್ರೋಟೀನ್‌ಗಳ ಉತ್ಪತ್ತಿಯಲ್ಲಿ ವರದಿಗಾರ-ಜೀನ್ ಅಭಿವ್ಯಕ್ತಿಯ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಪಡೆದರು.[೪೮]
ಸಾಂಸ್ಕೃತಿಕ ಪ್ರಾಮುಖ್ಯತೆ
ಬದಲಾಯಿಸಿಇಸ್ಲಾಂನಲ್ಲಿ ಪ್ರವಾದಿ ಮಹಮ್ಮದ್ ಬಾರ್ಲಿಯನ್ನು ಏಳು ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಸೂಚಿಸಿದ್ದಾನೆ.[೪೯] ಇದು ಕರುಳಿನ ನೋವನ್ನು ಶಮನ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು. ಅವಿಸೆನ್ನ ಅವನ 11ನೇ ಶತಮಾನದ ಕೃತಿ ದ ಕೆನನ್ ಆಫ್ ಮೆಡಿಸಿನ್ ನಲ್ಲಿ, ಬಾರ್ಲಿ ನೀರು, ಸಾರು ಮತ್ತು ಎಸರಿನ ಜ್ವರವನ್ನು ಕಡಿಮೆ ಮಾಡುವ ಪರಿಣಾಮದ ಬಗ್ಗೆ ಬರೆದಿದ್ದಾನೆ.[೫೦] ಬಾರ್ಲಿಯನ್ನು ಹುರಿದು, ಬಾರ್ಲಿ ಚಹಾವಾಗಿ ತಯಾರಿಸಬಹುದು. ಇದು ಏಷ್ಯಾದ ಒಂದು ಜನಪ್ರಿಯ ಪಾನೀಯವಾಗಿದೆ.
ಇಂಗ್ಲಿಷ್ ಜನಪದ ಕಥೆಗಳಲ್ಲಿ, ಜಾನ್ ಬಾರ್ಲಿಕಾರ್ನ್ ಎಂಬ ಜಾನಪದ ಹಾಡಿನಲ್ಲಿನ ಅದೇ ಹೆಸರಿನ ವ್ಯಕ್ತಿಯು ಬಾರ್ಲಿಯ ಹಾಗೂ ಅದರಿಂದ ತಯಾರಿಸುವ ಬಿಯರ್ ಮತ್ತು ವಿಸ್ಕಿಯಂಥ ಆಲ್ಕಹಾಲಿಕ ಪಾನೀಯಗಳ ಮೂರ್ತರೂಪವಾಗಿದೆ. ಹಾಡಿನಲ್ಲಿ ಜಾನ್ ಬಾರ್ಲಿಕಾರ್ನ್, ಕೊಯ್ಲು ಮತ್ತು ಮೊಳಕೆ ಬರಿಸುವಂತಹ ಬಾರ್ಲಿ-ಕೃಷಿಯ ವಿವಿಧ ಹಂತಗಳನ್ನು ಹೋಲುವ ದಾಳಿ, ಸಾವು ಮತ್ತು ಅವಮಾನದಿಂದ ಬಳಲುವುದನ್ನು ನಿರೂಪಿಸಲಾಗಿದೆ. ಅವನು ಮಿಮಿರ್ ಅಥವಾ ಕ್ವಾಸಿರ್‌ನಂತಹ ಹಿಂದಿನ ಪೇಗನ್ ದೇವರುಗಳಿಗೆ ಸಂಬಂಧಿಸಿರಬಹುದು.[೫೧]
ಇದನ್ನೂ ಗಮನಿಸಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ITIS
- ↑ "FAOSTAT". Food and Agriculture Organization of the United Nations. Archived from the original on 2009-05-08. Retrieved 2009-05-18.
- ↑ J. Simpson, E. Weiner (eds), ed. (1989). "barley". Oxford English Dictionary (2nd edition ed.). Oxford: Clarendon Press. ISBN 0-19-861186-2.
{{cite encyclopedia}}
:|edition=
has extra text (help);|editor=
has generic name (help) - ↑ ೪.೦ ೪.೧ ೪.೨ ೪.೩ Ayto, John (1990), The glutton's glossary : a dictionary of food and drink terms, London: Routledge, pp. 16–17, ISBN 0415026474
- ↑ "Dictionary of the Scots Language: "DSL - SND1 BEAR, BERE, Beer, Bar"". Archived from the original on 2011-05-26. Retrieved 2008-11-19.
- ↑ ಸ್ಮೌಟ್, T.C. (1972) ಎ ಹಿಸ್ಟರಿ ಆಫ್ ದ ಸ್ಕಾಟಿಷ್ ಪೀಪಲ್ 1560-1830 ಪುಟ 114
- ↑ "Dictionary of the Scots Language: "DSL - DOST Bere, Beir"". Archived from the original on 2011-05-26. Retrieved 2008-11-19.
- ↑ ೮.೦ ೮.೧ ೮.೨ ೮.೩ ೮.೪ ೮.೫ ೮.೬ Zohary, Daniel (2000). Domestication of Plants in the Old World: The Origin and Spread of Cultivated Plants in West Asia, Europe, and the Nile Valley (3rd ed.). Oxford University Press. pp. 59–69. ISBN 0198503571.
{{cite book}}
: Unknown parameter|coauthors=
ignored (|author=
suggested) (help) - ↑ Komatsuda, T. (2006). "Six-rowed barley originated from a mutation in a homeodomain-leucine zipper I-class homeobox gene". Proceedings of the National Academy of Sciences of the United States of America. 104 (4): 1424–1429. doi:10.1073/pnas.0608580104.
- ↑ "Nitrogen Fertilizer Management of Malting Barley: Impacts of Crop and Fertilizer Nitrogen Prices (Prairie Provinces and Northern Great Plains States)". International Plant Nutrition Institute. Archived from the original on 2008-12-23. Retrieved 2009-05-28.
{{cite web}}
: Cite uses deprecated parameter|authors=
(help) - ↑ Bhatty, R.S. (1999). "The potential of hull-less barley". Cereal Chemistry. 76: 589–599. doi:10.1094/CCHEM.1999.76.5.589.
- ↑ Bhatty, R.S. (1999). "β-glucan and flour yield of hull-less barley". Cereal Chemistry. 76: 314–315. doi:10.1094/CCHEM.1999.76.2.314.
- ↑ "ಆರ್ಕೈವ್ ನಕಲು" (PDF). Archived from the original (PDF) on 2012-03-20. Retrieved 2010-06-11.
- ↑ -ಸ್ಯಾಲ್ಟಿನಿ ಆಂಟೋನಿಯೊ, ಐ ಸೆಮಿ ಡೆಲ್ಲ ಸಿವಿಲ್ಟ. ಗ್ರ್ಯಾನೊ ರಿಸೊ ಇ ಮೈಸ್ ನೆಲ್ಲಾ ಸ್ಟೋರಿಯ ಡೆಲ್ಲೆ ಸೊಶಿಯೆಟ ಉಮಾನೆ, , ಪ್ರಿಫಾಜಿಯೋನೆ ಡಿ ಲುಯಿಗಿ ಬರ್ನ್ಯಾಬೊ ಬ್ರಿಯ ಅವೆನ್ಯೂ ಮೀಡಿಯ, ಬೋಲೊಗ್ನ 1996
- ↑ Crawford, Gary W. (2003). "Agricultural Origins in the Korean Peninsula". Antiquity. 77 (295): 87–95. ISSN 0003-598X.
{{cite journal}}
: Cite has empty unknown parameter:|month=
(help); Unknown parameter|coauthors=
ignored (|author=
suggested) (help) - ↑ Diamond, Jared M. (1997). Guns, germs, and steel: the fates of human societies. New York: W.W. Norton. p. 141. ISBN 0-393-03891-2.
- ↑ ೧೭.೦ ೧೭.೧ Pellechia, Thomas (2006), Wine : the 8,000-year-old story of the wine trade, Philadelphia: Running Press, p. 10, ISBN 1560258713[ಶಾಶ್ವತವಾಗಿ ಮಡಿದ ಕೊಂಡಿ]
- ↑ J. Dobraszczyk, Bogdan (2001). Cereals and cereal products: chemistry and technology. Gaithersburg, Md.: Aspen Publishers. p. 7. ISBN 0-8342-1767-8.
- ↑ ೧೯.೦ ೧೯.೧ ೧೯.೨ ೧೯.೩ ಮ್ಯಾಕ್‌ಗೀ, ಪುಟ 235
- ↑ ೨೦.೦ ೨೦.೧ Fernandez, Felipe Armesto (2001), Civilizations: Culture, Ambition and the Transformation of Nature, p. 265, ISBN 0743216504
- ↑ Dreyer, June Teufel; Sautman, Barry (2006), Contemporary Tibet : politics, development, and society in a disputed region, Armonk, New York: Sharpe, p. 262, ISBN 0765613549
- ↑ Roden, Claudia (1997). The Book of Jewish Food. Knopf. p. 135. ISBN 0394532589.
- ↑ "ಆರ್ಕೈವ್ ನಕಲು". Archived from the original on 2006-06-19. Retrieved 2024-05-20.
- ↑ Brunt, A.A., Crabtree, K., Dallwitz, M.J., Gibbs, A.J., Watson, L. and Zurcher, E.J. (editors) (20 August 1996). "Plant Viruses Online: Descriptions and Lists from the VIDE Database". Archived from the original on 18 ಅಕ್ಟೋಬರ್ 2006. Retrieved 11 ಜೂನ್ 2010.
{{cite web}}
:|author=
has generic name (help)CS1 maint: multiple names: authors list (link) - ↑ "Barley mild mosaic bymovirus". Archived from the original on 2006-12-08. Retrieved 2010-06-11.
- ↑ http://www.btny.purdue.edu/pubs/APM/APM-1-W.pdf
- ↑ "Barley". Retrieved 2008-02-02.
- ↑ "ಆರ್ಕೈವ್ ನಕಲು". Archived from the original on 2012-03-12. Retrieved 2010-06-11.
- ↑ [೧]
- ↑ ಮ್ಯಾಕ್‌ಗೀ, ಪುಟ 471
- ↑ Ogle, Maureen (2006), Ambitious brew : the story of American beer, Orlando: Harcourt, pp. 70–72, ISBN 0151010129
- ↑ ಮ್ಯಾಕ್‌ಗೀ, ಪುಟ 481
- ↑ ಮ್ಯಾಕ್‌ಗೀ, ಪುಟ 490
- ↑ Clarke, ed by R J (1988), Coffee, London: Elsevier Applied Science, p. 84, ISBN 1851661034
- ↑ "ಆರ್ಕೈವ್ ನಕಲು". Archived from the original on 2012-03-06. Retrieved 2010-06-11.
- ↑ "ಆರ್ಕೈವ್ ನಕಲು". Archived from the original on 2012-04-23. Retrieved 2010-06-11.
- ↑ Nilsson, A. (2006). "Effects of GI and content of indigestible carbohydrates of cereal-based evening meals on glucose tolerance at a subsequent standardised breakfast". European Journal of Clinical Nutrition. 60: 1092–1099. doi:10.1038/sj.ejcn.1602423.
{{cite journal}}
: Cite has empty unknown parameter:|month=
(help); Unknown parameter|coauthors=
ignored (|author=
suggested) (help) - ↑ ೩೮.೦ ೩೮.೧ ೩೮.೨ ಸೈಮನ್, ಆಂಡ್ರೆ (1963) ಗೈಡ್ ಟು ಗುಡ್ ಫುಡ್ ಆಂಡ್ ವೈನ್ಸ್: ಎ ಕಂನ್ಸೈಸ್ ಎನ್‌ಸೈಕ್ಲೊಪೀಡಿಯ ಆಫ್ ಗ್ಯಾಸ್ಟ್ರೊನೊಮಿ ಕಂಪ್ಲೀಟ್ ಆಂಡ್ ಅನ್ಎಬ್ರಿಡ್ಜ್ಡ್ ಪುಟ 150 ಕೊಲ್ಲಿನ್ಸ್, ಲಂಡನ್
- ↑ Tabari, W. Montgomery Watt, M. V. McDonald (1987). The History of Al-Tabari: The Foundation of the Community: Muhammad at Al-Madina, A. D. 622-626/ijrah-4 A. H. SUNY Press. ISBN 0887063446, 9780887063442.
{{cite book}}
: Check|isbn=
value: invalid character (help)CS1 maint: multiple names: authors list (link) - ↑ Long, David E. (2005). Culture and customs of Saudi Arabia. Greenwood Publishing Group. p. 50. ISBN 0313320217.
- ↑ National Research Council (1996-02-14). "Other Cultivated Grains". Lost Crops of Africa: Volume I: Grains. Lost Crops of Africa. Vol. 1. National Academies Press. p. 243. ISBN 978-0-309-04990-0. Retrieved 2008-07-25.
{{cite book}}
: Cite has empty unknown parameter:|origdate=
(help); Unknown parameter|chapterurl=
ignored (help) - ↑ Martin, Peter (2008-06). "Bere Whisky: rediscovering the spirit of an old barley". The Brewer & Distiller International. 4 (6): 41–43. Retrieved 2008-11-14.
{{cite journal}}
: Check date values in:|date=
(help); Unknown parameter|coauthors=
ignored (|author=
suggested) (help) - ↑ Oxford English Dictionary, Oxford University Press, 2009, archived from the original on 2006-06-25, retrieved 2010-06-11
- ↑ George Long (1842), The Penny Cyclopædia of the Society for the Diffusion of Useful Knowledge, p. 436
- ↑ Cairns, Warwick (2007). About the Size of It. Macmillan. ISBN 978-0-230-01628-6.
- ↑ Houtsma M Th (1993). E.J. Brill's First Encyclopaedia of Islam, 1913-1936. Brill. p. 460. ISBN 9004097961.
{{cite book}}
: Unknown parameter|coauthors=
ignored (|author=
suggested) (help) - ↑ http://www.loghouseplants.com/images/catgrass2.pdf
- ↑ The Changing Scenario in Plant Sciences. Allied Publishers Pvt. Ltd. 2000. p. 299. ISBN 81-7764-021-6.
- ↑ ಹ್ಯಾಡಿತ್ . ಸಂಪುಟ 7, ಪುಸ್ತಕ 71, ಸಂಖ್ಯೆ 593: (ನರೇಟೆಡ್ ಉರ್ಸ)
- ↑ Scully, Terence (1997). The art of cookery in the Middle Ages. Boydell Press. pp. 187–88. ISBN 0851154301.
{{cite book}}
: Unknown parameter|coauthors=
ignored (|author=
suggested) (help) - ↑ de Vries, Ad (1976). Dictionary of Symbols and Imagery. Amsterdam: North-Holland Publishing Company. pp. 34–35. ISBN 0-7204-8021-3.
ಉಲ್ಲೇಖಿತ ವಿಷಯಗಳು
ಬದಲಾಯಿಸಿ- McGee, Harold (1986). On Food and Cooking: The Science and Lore of the Kitchen. Unwin. ISBN 0-04-440277-5.
- Chisholm, Hugh, ed. (1911). Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Missing or empty|title=
(help)
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕ್ರಾಪ್ ವೈಲ್ಡ್ ರಿಲೇಟೀವ್ಸ್ ಗ್ಯಾಪ್ ಅನಾಲಿಸಿಸ್ ಪೋರ್ಟಲ್ Archived 2015-09-10 ವೇಬ್ಯಾಕ್ ಮೆಷಿನ್ ನಲ್ಲಿ. - ಹಾರ್ಡಿಯಮ್ ಜೀನ್ಪೂಲ್ಗೆ ಸಂಬಂಧಿಸಿದಂತೆ ಎಲ್ಲಿ ಮತ್ತು ಯಾವುದನ್ನು ಎಕ್ಸ್-ಸಿತು ಸಂರಕ್ಷಿಸಬೇಕು ಎಂಬುದರ ಬಗೆಗಿನ ಭರವಸೆಯ ಮಾಹಿತಿಯ ಮೂಲ
- ಬಾರ್ಲಿ ಆಹಾರಗಳ ಒಂದು ಸಂಕ್ಷಿಪ್ತ ಇತಿಹಾಸ Archived 2007-10-16 ವೇಬ್ಯಾಕ್ ಮೆಷಿನ್ ನಲ್ಲಿ.
- ಬಾರ್ಲಿ ಮತ್ತು ಬಾರ್ಲಿ ಪಾಕವಿಧಾನದೊಂದಿಗೆ ಅಡುಗೆ ಮಾಡುವುದು Archived 2014-09-17 ವೇಬ್ಯಾಕ್ ಮೆಷಿನ್ ನಲ್ಲಿ.
- ತಳೀಯವಾಗಿ ಮಾರ್ಪಡಿಸಿದ ಬಾರ್ಲಿ Archived 2010-04-29 ವೇಬ್ಯಾಕ್ ಮೆಷಿನ್ ನಲ್ಲಿ. ಗುರಿ: ಉತ್ತಮ ಮೊಳಕೆ ಬರಿಸುವ ಮತ್ತು ಮೇವಿನ ಗುಣಮಟ್ಟವನ್ನು ಹೊಂದಿರುವ ಬಾರ್ಲಿ
- ನ್ಯೂಟ್ರಿಷನ್ಡೇಟಾದ ಬಾರ್ಲಿ
- ಬಾರ್ಲಿಯ ಪೌಷ್ಟಿಕ ಮೌಲ್ಯ Archived 2014-07-13 ವೇಬ್ಯಾಕ್ ಮೆಷಿನ್ ನಲ್ಲಿ.
- ಬಾರ್ಲಿಯ ಪ್ರಯೋಜನಗಳ ಬಗೆಗಿನ ವೈದ್ಯಕೀಯ ಸಂಶೋಧನೆ Archived 2018-09-16 ವೇಬ್ಯಾಕ್ ಮೆಷಿನ್ ನಲ್ಲಿ.
- ದ ನ್ಯಾಷನಲ್ ಬಾರ್ಲಿ ಫುಡ್ಸ್ ಕೌನ್ಸಿಲ್ (NBFC) ಮುಖಪುಟ.