ಗಂಜಿ ರುಬ್ಬಿದ, ಜಜ್ಜಿದ ಅಥವಾ ಕತ್ತರಿಸಿದ ಪಿಷ್ಟ ಹೊಂದಿದ ಸಸ್ಯಗಳನ್ನು - ಸಾಮಾನ್ಯವಾಗಿ ಧಾನ್ಯಗಳನ್ನು ನೀರು ಅಥವಾ ಹಾಲಿನಲ್ಲಿ ಬೇಯಿಸಿ ತಯಾರಿಸಲಾದ ಒಂದು ಖಾದ್ಯ. ಅದನ್ನು ಹಲವುವೇಳೆ ಸಿಹಿ ಖಾದ್ಯ ತಯಾರಿಸಲು ಸಕ್ಕರೆ, ಜೇನು ಇತ್ಯಾದಿಗಳಂತಹ ರುಚಿಕಾರಕಗಳೊಂದಿಗೆ, ಅಥವಾ ಉಪ್ಪುಖಾರದ ಖಾದ್ಯ ತಯಾರಿಸಲು ಸಂಬಾರ ಪದಾರ್ಥಗಳು, ತರಕಾರಿಗಳು ಇತ್ಯಾದಿಗಳೊಂದಿಗೆ ಬೆರೆಸಿ ಬೇಯಿಸಲಾಗುತ್ತದೆ ಅಥವಾ ಬಡಿಸಲಾಗುತ್ತದೆ. ಅದನ್ನು ಸಾಮಾನ್ಯವಾಗಿ ಬೋಗುಣಿಯಲ್ಲಿ ಬಿಸಿಯಾಗಿ ಬಡಿಸಲಾಗುತ್ತದೆ.

ತೋಕೆಗೋಧಿಯ ಗಂಜಿ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಗಂಜಿ ಅಂದರೆ ಬೇಯಿಸಿ ನೀರು ಬಸಿಯದ ಅನ್ನ. ಗಂಜಿಯ ಕುಡಿದರು ಗಂಡನ ಮನೆಲೇಸು ಎಂಬ ಜನಪದ ಮಾತಿದೆ.[]

ಉತ್ತರ ಅಮೇರಿಕಾದಲ್ಲಿ ಗಂಜಿಯೆಂದರೆ ಸಾಮಾನ್ಯವಾಗಿ ತೋಕೆಗೋಧಿ ಗಂಜಿ, ಇದನ್ನು ಬೆಳಿಗ್ಗೆ ತಿಂಡಿಗೆ ಉಪ್ಪು, ಸಕ್ಕರೆ, ಹಾಲು, ಕೆನೆ, ಅಥವಾ ಬೆಣ್ಣೆ, ಮತ್ತು ಕೆಲವೊಮ್ಮೆ ಇತರ ರುಚಿಕಾರಕಗಳೊಂದಿಗೆ ತಿನ್ನಲಾಗುತ್ತದೆ.

ಗಂಜಿಗೆ ಬಳಸಲಾದ ಇತರ ಧಾನ್ಯಗಳು ರವೆ, ಅಕ್ಕಿ, ಗೋಧಿ, ಜವೆ, ಮೆಕ್ಕೆ ಜೋಳ, ಬಕ್‍ವೀಟ್ಅನ್ನು ಒಳಗೊಂಡಿವೆ.

ಆಫ್ರಿಕಾದ ಹೆಚ್ಚಿನ ಭಾಗಗಳಲ್ಲಿ ಗಂಜಿ ಒಂದು ಪ್ರಧಾನ ಆಹಾರವಾಗಿದೆ, ಮತ್ತು ಐತಿಹಾಸಿಕವಾಗಿ ಉತ್ತರ ಯೂರೋಪ್ ಮತ್ತು ರಷ್ಯಾದಲ್ಲಿ ಆಗಿತ್ತು.

ಗಂಜಿ ಜೀರ್ಣಿಸಲು ಸುಲಭ, ಹಾಗಾಗಿ ಅದನ್ನು ಸಾಂಪ್ರದಾಯಿಕವಾಗಿ ಅನೇಕ ಸಂಸ್ಕೃತಿಗಳಲ್ಲಿ ರೋಗಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ, ಮತ್ತು ಹಲವುವೇಳೆ ತರಬೇತಿಯಲ್ಲಿ ಕ್ರೀಡಾಪಟುಗಳಿಂದ ತಿನ್ನಲ್ಪಡುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. ಸಿಂಪಿ ಲಿಂಗಣ್ಣ ಗರತಿಯ ಬಾಳು ೧೯೫೪
  2. http://www.bbcgoodfood.com/howto/guide/eat-athlete-beckie-herbert


"https://kn.wikipedia.org/w/index.php?title=ಗಂಜಿ&oldid=1232824" ಇಂದ ಪಡೆಯಲ್ಪಟ್ಟಿದೆ