ಕ್ರೀಡಾಪಟು
ಕ್ರೀಡಾಪಟು ಎಂದರೆ ದೈಹಿಕ ಶಕ್ತಿ, ವೇಗ ಅಥವಾ ಸಹಿಷ್ಣುತೆಯನ್ನು ಒಳಗೊಳ್ಳುವ ಒಂದು ಅಥವಾ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸುವ ವ್ಯಕ್ತಿ. ಕುದುರೆ ಸವಾರಿ ಅಥವಾ ವಾಹನ ಚಾಲನೆಯಂತಹ, ಇತರ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಈ ಪದದ ಅನ್ವಯ ಸ್ವಲ್ಪಮಟ್ಟಿಗೆ ವಿವಾದಾಸ್ಪದವಾಗಿದೆ.
ಕ್ರೀಡಾಪಟುಗಳು ವೃತ್ತಿಪರರು ಅಥವಾ ಹವ್ಯಾಸಿಗಳು ಆಗಿರಬಹುದು. ಬಹುತೇಕ ವೃತ್ತಿಪರ ಕ್ರೀಡಾಪಟುಗಳು ವಿಶೇಷವಾಗಿ, ವಿಸ್ತಾರವಾದ ದೈಹಿಕ ತರಬೇತಿ ಮತ್ತು ಕಟ್ಟುನಿಟ್ಟಾದ ವ್ಯಾಯಾಮ, ಜೊತೆಗೆ ಕಟ್ಟುನಿಟ್ಟಾದ ಆಹಾರ ನಿಯಮದಿಂದ ಪಡೆದುಕೊಂಡ ಚೆನ್ನಾಗಿ ಬೆಳೆಸಿಕೊಂಡ ಮೈಕಟ್ಟನ್ನು ಹೊಂದಿರುತ್ತಾರೆ.
ಅವಲೋಕನ
ಬದಲಾಯಿಸಿಸಾಮಾನ್ಯ ಕರ್ಷಣ ವ್ಯಾಯಾಮಗಳನ್ನು ಅಭ್ಯಸಿಸುವ ಕ್ರೀಡಾಪಟುಗಳು ಹೆಚ್ಚಿನ ಸರಾಸರಿ ಎಡ ಕುಹರ ಅಂತ್ಯ-ವ್ಯಾಕೋಚನ ಪರಿಮಾಣವನ್ನು ಹೊಂದಿದ್ದು, ಖಿನ್ನರಾಗುವ ಸಾಧ್ಯತೆ ಕಡಿಮೆಯಿರುತ್ತದೆ.[೧] ಅವರ ಶ್ರಮದಾಯಕ ದೈಹಿಕ ಚಟುವಟಿಕೆಗಳ ಕಾರಣ, ಕ್ರೀಡಾಪಟುಗಳು ಸಾಮಾನ್ಯ ಜನರಿಗಿಂತ ಮಾಲೀಷು ಸಲೂನುಗಳಿಗೆ ಭೇಟಿಕೊಡುವ ಮತ್ತು ಮಾಲೀಶು ಚಿಕಿತ್ಸಕರು ಹಾಗೂ ಮಾಲೀಶುಗಾರರಿಂದ ಪಡೆಯುವ ಸೇವೆಗಳಿಗೆ ಪಾವತಿಸುವ ಸಾಧ್ಯತೆ ಬಹಳ ಹೆಚ್ಚು.
ಉಲ್ಲೇಖಗಳು
ಬದಲಾಯಿಸಿ- ↑ MORGANROTH, JOEL, et al. "Comparative left ventricular dimensions in trained athletes." Annals of Internal Medicine 82.4 (1975): 521-524.