ಬೆಣ್ಣೆ ಯು ಹೈನುಗಾರಿಕೆ ಉತ್ಪನ್ನವಾಗಿದ್ದು, ತಾಜಾ ಅಥವಾ ಹುದುಗೆಬ್ಬಿಸಿದ ಕೆನೆ ಅಥವಾ ಹಾಲು ಕಡೆಯುವಿಕೆ ಮೂಲಕ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಲೇಪನ(ಹರಡುವಿಕೆ) ಮತ್ತುಆರೋಚಕವಾಗಿ ಬಳಸಲಾಗುತ್ತದೆ. ಜತೆಗೆ ಅಡುಗೆ ಬಳಕೆಗಳಿಗೆ- ಬೇಯಿಸುವುದು, ಸಾಸ್ ತಯಾರಿಕೆ ಹಾಗೂ ಬಾಣಲೆಯಲ್ಲಿ ಹುರಿಯುವುದು ಮುಂತಾದವು. ಬೆಣ್ಣೆಯು ಹಾಲಿನ ಕೊಬ್ಬು, ನೀರು ಮತ್ತು ಹಾಲಿನ ಪ್ರೊಟೀನ್‌ಗಳನ್ನು ಒಳಗೊಂಡಿದೆ.

ಬೆಣ್ಣೆಯನ್ನು ತುಂಡುಗಳಲ್ಲಿ ಸಾಮಾನ್ಯವಾಗಿ ಮಾರಲಾಗುತ್ತದೆ. (ಚಿತ್ರ [1]) ಅಥವಾ ಬ್ಲಾಕ್‌ಗಳು, ಸಾಮಾನ್ಯವಾಗಿ ಬೆಣ್ಣೆಚಾಕುವನ್ನು ಬಳಸಿ ವಿತರಿಸಲಾಗುತ್ತದೆ.

ಸಾಮಾನ್ಯವಾಗಿ ಹಸುಗಳ ಹಾಲಿನಿಂದ ಬೆಣ್ಣೆಯನ್ನು ತಯಾರಿಸಲಾಗುತ್ತದೆ. ಬೆಣ್ಣೆಯನ್ನು ಕುರಿ, ಆಡುಗಳು,ಎಮ್ಮೆ, ಯಾಕ್‌ಗಳು ಮುಂತಾದ ಇತರ ಸಸ್ತನಿಗಳ ಹಾಲಿನಿಂದಲೂ ತಯಾರಿಸಬಹುದು. ಉಪ್ಪು, ರುಚಿಕಾರಕಗಳು ಮತ್ತು ಸಂರಕ್ಷಕಗಳನ್ನು ಕೆಲವು ಬಾರಿ ಬೆಣ್ಣೆಗೆ ಸೇರಿಸಲಾಗುತ್ತದೆ. ಬೆಣ್ಣೆಯ ಸಂಸ್ಕರಣೆಯಿಂದ ಶೋಧಿಸಿದ ಬೆಣ್ಣೆ ಅಥವಾ ತುಪ್ಪ ವಾಗುತ್ತದೆ. ಇದು ಸಂಪೂರ್ಣವಾಗಿ ಹಾಲಿನಕೊಬ್ಬಿನಿಂದ ಕೂಡಿರುತ್ತದೆ.

ಬೆಣ್ಣೆಯು ತೈಲದಲ್ಲಿರುವ ನೀರಿನ ಸಂಪೂರ್ಣ ಬೆರೆಯದ ಮಿಶ್ರಣವಾಗಿದ್ದು, ನೀರಿನಲ್ಲಿ ತೈಲದ ಮಿಶ್ರಣವಾದ ಕೆನೆಯ ಪಲ್ಲಟದಿಂದ ಉಂಟಾಗುತ್ತದೆ. ಹಾಲಿನ ಪ್ರೋಟೀನ್‌ಗಳು ಎಮಲ್ಸಿಕಾರಕವಾಗಿರುತ್ತದೆ. ಬೆಣ್ಣೆಯನ್ನು ಶೈತ್ಯೀಕರಣ ಕ್ಕೆ ಒಳಪಡಿಸಿದಾಗ ಅದು ಘನಪದಾರ್ಥವಾಗಿ ಉಳಿಯುತ್ತದೆ. ಆದರೆ ಕೋಣೆಯ ವಾತಾವರಣದಲ್ಲಿ ಹರಡಿಕೊಳ್ಳಬಹುದಾದ ಸಾಂದ್ರತೆಗೆ ಮೃದುವಾಗುತ್ತದೆ ಹಾಗು ತೆಳು ದ್ರವ ಸಾಂದ್ರತೆಗೆ ೩೨–೩೫ °C (೯೦–೯೫ °F)ಯಲ್ಲಿ ಕರಗುತ್ತದೆ. ಬೆಣ್ಣೆಯ ಸಾಂದ್ರತೆಯು ೯೧೧ kg/m (೫೬.೯ lb/ft).[]

ಇದು ಸಾಮಾನ್ಯವಾಗಿ ಮಸುಕಾದ ಹಳದಿ ಬಣ್ಣದಿಂದ ಕೂಡಿರುತ್ತದೆ. ಆದರೆ ಕೆಲವೊಮ್ಮೆ ಗಾಢ ಹಳದಿ ಅಥವಾ ಬಿಳಿಯ ಬಣ್ಣದಿಂದ ವ್ಯತ್ಯಾಸ ಹೊಂದಿರುತ್ತದೆ. ಇದರ ಬದಲಾಗದ ಬಣ್ಣವು ಪ್ರಾಣಿಗಳ ಆಹಾರದ ಮೇಲೆ ಅವಲಂಬಿತವಾಗಿದೆ ಮತ್ತು ಸಾಮಾನ್ಯವಾಗಿ ವಾಣಿಜ್ಯ ಉತ್ಪಾದನೆ ಪ್ರಕ್ರಿಯೆಯಲ್ಲಿ ಆಹಾರದ ಬಣ್ಣದ ಮೂಲಕ ಬದಲಾಯಿಸಲಾಗುತ್ತದೆ. ಬಹುಮಟ್ಟಿಗೆ ಅನ್ನಾಟೊ ಅಥವಾ ಕ್ಯಾರೊಟೀನ್.

ವ್ಯುತ್ಪತ್ತಿ ಶಾಸ್ತ್ರ

ಬದಲಾಯಿಸಿ

ಬಟರ್ ಪದವು ( ಜರ್ಮಾನಿಕ್ ಭಾಷೆಗಳ ಮೂಲಕ) ಲ್ಯಾಟಿನ್ ಬುಟಿರುಮ್‌ ನಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಗ್ರೀಕ್‌ನ ಬೌಟಿರಾನ್‌ ನಿಂದ ಎರವಲು ಪಡೆಯಲಾಗಿದೆ. ಇದು ಸಾಂದರ್ಭಿಕ ಅರ್ಥವನ್ನು ಹೊಂದಿರಬಹುದು."ಹಸುವಿನ-ಗಿಣ್ಣು" (ಬೌಸ್ "ಆಕ್ಸ್, ಕೌ" + ಟೈರೋಸ್ "ಚೀಸ್"), ಅಥವಾ ಪದವನ್ನು ಇನ್ನೊಂದು ಭಾಷೆಯಿಂದ ಎರವಲು ಪಡೆದಿರಬಹುದು. ಬಹುಶಃ ಸ್ಕಿಥಿಯಾನ್.[]. ಮೂಲಪದವು ಬುಟಿರಿಕ್ ಆಮ್ಲ ಪದದಿಂದ ಮುಂದುವರಿದಿದೆ. ಬುಟಿರಿಕ್ ಆಮ್ಲವು ಕಮಟು ವಾಸನೆಯ ಬೆಣ್ಣೆ ಮತ್ತು ಪಾರ್ಮೇಸನ್ ಗಿಣ್ಣುಮುಂತಾದ ಹೈನುಗಾರಿಕೆ ಉತ್ಪನ್ನದಲ್ಲಿ ಕಂಡುಬರುವ ಸಂಯುಕ್ತವಾಗಿದೆ. (ಸಂಸ್ಕೃತ ಭುಟಾರಿ ಯಿಂದ ವಿಸ್ತರಿತ ವ್ಯುತ್ಪತ್ತಿ ಹೊಂದಿದ ಇನ್ನೊಂದು ಸಾಧ್ಯತೆ ಇರಬಹುದು. ಇದರ ಅರ್ಥ "ದುಷ್ಟ ಶಕ್ತಿಗಳ ಶತ್ರು".)[ಸೂಕ್ತ ಉಲ್ಲೇಖನ ಬೇಕು]

ಸಾಮಾನ್ಯ ಬಳಕೆಯಲ್ಲಿ, ಇತರ ವಿವರಕಗಳಿಂದ ಅನರ್ಹತೆ ಪಡೆದಾಗ, ಬೆಣ್ಣೆ ಪದವು ಹರಡಿಕೊಳ್ಳುವ(ಸವರುವ)ಹೈನುಗಾರಿಕೆ ಉತ್ಪನ್ನವನ್ನು ಉಲ್ಲೇಖಿಸುತ್ತದೆ. ನಯವಾದ ಕೆನೆಮಾಡಿದ ತರಕಾರಿ ಅಥವಾ ಕಡಲೆಕಾಯಿ ಬೆಣ್ಣೆ ಮತ್ತು ಬಾದಾಮಿ ಬೆಣ್ಣೆ ಮುಂತಾದ ಬೀಜದ ಉತ್ಪನ್ನಗಳನ್ನು ವರ್ಣಿಸಲು ಈ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಆಪಲ್ ಬಟರ್‌ ಮುಂತಾದ ಹಣ್ಣಿನ ಉತ್ಪನ್ನಗಳಮೇಲೆ ಸವರಬಹುದು. ಕೋಕಾ ಬಟರ್ ಮುಂತಾದ ಕೊಬ್ಬುಗಳು ಮತ್ತು ಶಿಯಾ ಬಟರ್ ಕೋಣೆಯ ವಾತಾವರಣದಲ್ಲಿ ಘನಪದಾರ್ಥವಾಗಿ ಉಳಿಯುವುದು. ಇದು ಕೂಡ "ಬಟರ್ಸ್" ಎಂದು ಹೆಸರಾಗಿದೆ. ಬೆಣ್ಣೆಯನ್ನು ಲೇಪಿಸುವ ಕ್ರಿಯೆಗೆ "ಟು ಬಟರ್" ಎಂದು ಕರೆಯುವುದರ ಜತೆಗೆ, ಡೈರಿ(ಹೈನು)ಬೆಣ್ಣೆಯ ಸಾಂದ್ರತೆ ಹೊಂದಿರುವ ಡೈರಿಯೇತರ ಪದಾರ್ಥಗಳನ್ನು ಕರೆಯಲು "ಬಟರ್" ಪದವನ್ನು ಬಳಸಬಹುದು. ಇದರಲ್ಲಿ ಆಹಾರಪದಾರ್ಥಗಳಾದ ಮ್ಯಾಪಲ್ ಬಟರ್ ಮತ್ತು ವಿಚ್`ಸ್ ಬಟರ್ ಹಾಗೂ ಆಹಾರೇತರ ಪದಾರ್ಥಗಳಾದ ಬೇಬಿ ಬಾಟಮ್ ಬಟರ್, ಹೈನಾ ಬಟರ್ ಮತ್ತು ರಾಕ್ ಬಟರ್ ಕೂಡ ಒಳಗೊಂಡಿದೆ.

ತಯಾರಿಕೆ

ಬದಲಾಯಿಸಿ
 
ವಾಣಿಜ್ಯ ಬೆಣ್ಣೆಯ ತಯಾರಿಕೆಯು ಎಚ್ಚರಿಕೆಯಿಂದ ನಿಯಂತ್ರಿತವಾದ ಕಾರ್ಯಾಚರಣೆ

ಸಮರಸೀಕರಿಸಿದಹಾಲು ಮತ್ತು ಕೆನೆಯುಹಾಲಿನ ಕೊಬ್ಬನ್ನು ಸೂಕ್ಷ್ಮ ಗುಳಿಗೆಗಳ ರೂಪದಲ್ಲಿ ಹೊಂದಿರುತ್ತದೆ. ಈ ಗುಳಿಗೆಗಳು ಪಾಸ್ಫೋಲಿಫಿಡ್‌ (ನೆಣಾಮ್ಲ(ಫ್ಯಾಟಿ ಆಸಿಡ್) ಎಮಲ್ಸಿಫೈಯರ್‌ಗಳು) ಮತ್ತುಪ್ರೊಟೀನ್‌ಗಳಿಂದ ನಿರ್ಮಿತವಾದ ಪೊರೆಗಳಿಂದ ಸುತ್ತುವರಿದಿದೆ. ಇದರಿಂದ ಹಾಲಿನಲ್ಲಿರುವ ಕೊಬ್ಬು ಏಕ ರಾಶಿಯಾಗಿ ಒಂದುಗೂಡದಂತೆ ಇವು ತಡೆಯುತ್ತವೆ. ಬೆಣ್ಣೆಯನ್ನು ಕದಡಿದ ಕೆನೆಯಿಂದ ತಯಾರಿಸಲಾಗುತ್ತದೆ. ಇವು ಪೊರೆಗಳನ್ನು ನಾಶಮಾಡಿ ಹಾಲಿನ ಕೊಬ್ಬನ್ನು ಒಂದುಗೂಡಲು ಅವಕಾಶ ನೀಡುತ್ತದೆ ಹಾಗೂ ಕೆನೆಯ ಇತರ ಭಾಗಗಳಿಂದ ಪ್ರತ್ಯೇಕಗೊಳಿಸುತ್ತದೆ.

ಉತ್ಪಾದನೆ ವಿಧಾನದಲ್ಲಿ ವ್ಯತ್ಯಾಸಗಳಿಂದ ವಿವಿಧ ಸಾಂದ್ರತೆಯ ಬೆಣ್ಣೆಗಳನ್ನು ಸೃಷ್ಟಿಸುತ್ತದೆ. ಇದು ಸಿದ್ಧಪಡಿಸಿದ ಉತ್ಪನ್ನದಲ್ಲಿ ಕೊಬ್ಬಿನ ರಚನೆಯಿಂದ ಬಹುಮಟ್ಟಿಗೆ ಉಂಟಾಗುತ್ತದೆ. ಬೆಣ್ಣೆಯು ಮೂರು ಸ್ವರೂಪಗಳಲ್ಲಿ ಕೊಬ್ಬನ್ನು ಒಳಗೊಂಡಿರುತ್ತದೆ: ಮುಕ್ತ ಹಾಲಿನಕೊಬ್ಬು, ಹಾಲಿನಕೊಬ್ಬಿನ ಸ್ಫಟಿಕಗಳು ಮತ್ತು ಹಾನಿಯಾಗದ ಕೊಬ್ಬಿನ ಗುಳಿಗೆಗಳ ಸ್ವರೂಪಗಳನ್ನು ಹೊಂದಿರುತ್ತದೆ. ಸಿದ್ಧಪಡಿಸಿದ ಉತ್ಪನ್ನದಲ್ಲಿ, ಈ ರೂಪಗಳ ವಿವಿಧ ಪ್ರಮಾಣಗಳಿಂದ ಬೆಣ್ಣೆಯಲ್ಲಿ ವಿವಿಧ ಸಾಂದ್ರತೆಗಳನ್ನು ಉಂಟುಮಾಡುತ್ತದೆ. ಅನೇಕ ಸ್ಫಟಿಕಗಳಿಂದ ಕೂಡಿದ ಬೆಣ್ಣೆಗಳು ಮುಕ್ತ ಕೊಬ್ಬುಗಳು ಹೆಚ್ಚಿರುವ ಬೆಣ್ಣೆಗಿಂತ ಗಟ್ಟಿಯಾಗಿರುತ್ತದೆ.

 
ಕೈಯಲ್ಲಿ ಹಿಡಿಯುವ ಮಿಕ್ಸರ್ ಮೂಲಕ ಕೆನೆಯನ್ನು ಬೆಣ್ಣೆಯಾಗಿ ಕಡೆಯುವುದು.

ಕಡೆಯುವಿಕೆಯಿಂದ ಕೆನೆಯ ನೀರಿನ ಮೂಲದ ಭಾಗದಲ್ಲಿ ತೇಲುವ ಸಣ್ಣ ಬೆಣ್ಣೆಯ ಹರಳುಗಳನ್ನು ಉತ್ಪಾದಿಸುತ್ತದೆ. ಈ ನೀರಿನಂಶದ ದ್ರವವನ್ನು ಮಜ್ಜಿಗೆ ಎಂದು ಕರೆಯುತ್ತಾರೆ. ಇಂದು ಬಹುಮಟ್ಟಿಗೆ ಸಾಮಾನ್ಯವಾಗಿ ಮಜ್ಜಿಗೆಯು ಕೆನೆತೆಗೆದ ಹಾಲಿನ ನೇರ ಹುದುಗುವಿಕೆಯಾಗಿದೆ. ಮಜ್ಜಿಗೆಯನ್ನು ಬರಿದುಮಾಡಿ, ಕೆಲವುಬಾರಿ ಹರಳುಗಳನ್ನು ನೀರಿನಿಂದ ನೆನೆಸುವ ಮೂಲಕ ಹೆಚ್ಚಿನ ಮಜ್ಜಿಗೆಯನ್ನು ತೆಗೆಯಲಾಗುತ್ತದೆ. ನಂತರ ಹರಳುಗಳನ್ನು ಒತ್ತಿ ಮುದ್ದೆ ಮಾಡಲಾಗುತ್ತದೆ. ಇದನ್ನು ಕೈಯಿಂದ ಸಿದ್ಧಪಡಿಸಿದಾಗ, ಸ್ಕಾಚ್ ಹ್ಯಾಂಡ್ಸ್ ಎಂಬ ಮರದ ಹಲಗೆಗಳನ್ನು ಬಳಸಿ ತಯಾರಿಸಬಹುದು. ಇದು ಬೆಣ್ಣೆಯನ್ನು ಘನ ರಾಶಿಯಾಗಿ ಒಂದುಗೂಡಿಸಿ,ಮಜ್ಜಿಗೆ ಅಥವಾ ನೀರಿನ ಹುದುಗಿದ ರಾಶಿಯನ್ನು ಸಣ್ಣ ಹನಿಗಳಾಗಿ ಒಡೆಯುತ್ತದೆ.

ವಾಣಿಜ್ಯಬೆಣ್ಣೆ ಸುಮಾರು ೮೦% ಬೆಣ್ಣೆಕೊಬ್ಬಿನಿಂದ ಕೂಡಿದೆ ಹಾಗು ೧೫% ನೀರು; ಸಾಂಪ್ರದಾಯಿಕವಾಗಿ ತಯಾರಿಸಿದ ಬೆಣ್ಣೆ ೬೫%ರಷ್ಟು ಕಡಿಮೆ ಕೊಬ್ಬು ಮತ್ತು ೩೦% ನೀರನ್ನು ಹೊಂದಿದೆ. ಹಾಲಿನಕೊಬ್ಬು ಅನೇಕ ಸಾಧಾರಣ ಗಾತ್ರದ, ಸ್ಯಾಚ್ಯುರೇಟೆಡ್(ಆರ್ದ್ರೀಕೃತ)ಹೈಡ್ರೋಕಾರ್ಬನ್ ಸರಪಳಿ ಮೇದಾಮ್ಲವನ್ನು ಹೊಂದಿದೆ. ಇದು ಟ್ರಿಗಲ್‌ಸೆರೈಡ್,ಒಂದು ಎಸ್ಟರು ಗ್ಲಿಸರೋಲ್ ಮತ್ತು ಮೂರು ಮೇದಾಮ್ಲ ವರ್ಗಗಳಿಂದ ವ್ಯುತ್ಪತ್ತಿಯಾಗಿದೆ. ಈ ಸರಪಳಿಗಳು ಬುಟಿರಿಕ್ ಆಮ್ಲ ಮತ್ತು ಡಯಾಸಿಟೈಲ್ ಮುಂತಾದ ಸಣ್ಣ ಭಾಗಗಳಾಗಿ ಒಡೆದಾಗ ಬೆಣ್ಣೆಯು ಕಮಟು ವಾಸನೆ ಬೀರುತ್ತದೆ. ಬೆಣ್ಣೆಯ ಸಾಂದ್ರತೆಯು ೦.೯೧೧ g/ಸೆಂಮೀ (೫೨೭ oz/in), ಮಂಜುಗಡ್ಡೆಗೆ ಸಮನಾಗಿರುತ್ತದೆ.

ವಿಧಗಳು

ಬದಲಾಯಿಸಿ
 
ಕೈಯಲ್ಲಿ ನಿರ್ಮಿಸಿದ ಬೆಣ್ಣೆ

ಆಧುನಿಕ ಕಾರ್ಖಾನೆಯ ಬೆಣ್ಣೆ ತಯಾರಿಕೆಗಿಂತ ಮುಂಚೆ, ಕೆನೆಯನ್ನು ಸಾಮಾನ್ಯವಾಗಿ ಹಲವಾರು ಬಾರಿ ಹಾಲು ಕಡೆಯುವುದರ ಮೂಲಕ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಅನೇಕ ದಿನಗಳು ಹಳೆಯದಾಗಿರುತ್ತದೆ ಮತ್ತು ಅದು ಬೆಣ್ಣೆಯಾಗಿ ತಯಾರಾಗುವ ಮುಂಚೆ ಒಂದು ರೀತಿ ಹುದುಗುವಿಕೆಗೆ ಒಳಗಾಗಿರುತ್ತದೆ. ಹುದುಗುವಿಕೆಗೆ(ಫರ್ಮೆಂಟೆಡ್) ಒಳಗಾದ ಕೆನೆಯಿಂದ ತೆಗೆದ ಬೆಣ್ಣೆಯು ಕಲ್ಚರ್ಡ್ ಬೆಣ್ಣೆ ಎಂದು ಹೆಸರಾಗಿದೆ. ಹುದುಗುವಿಕೆಗೆ ಒಳಪಡಿಸಿದ ಸಂದರ್ಭದಲ್ಲಿ, ಬ್ಯಾಕ್ಟೀರಿಯವು ಹಾಲಿನ ಸಕ್ಕರೆಗಳನ್ನು ದುಗ್ಧಾಮ್ಲವಾಗಿ ಪರಿವರ್ತಿಸುವುದರಿಂದ ಕೆನೆಯು ಸ್ವಾಭಾವಿಕವಾಗಿ ಹುಳಿಯಾಗುತ್ತದೆ. ಹುದುಗುವಿಕೆಗೆ ಒಳಪಡಿಸುವ ಪ್ರಕ್ರಿಯೆಯು ಡಯಾಸಿಟೈಲ್ ಸೇರಿದಂತೆ ಹೆಚ್ಚುವರಿ ಸುವಾಸನೆಯ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಇದು ಪೂರ್ಣ ಸುವಾಸನೆಯ ಹೆಚ್ಚು ಬೆಣ್ಣೆಯಂತ ರುಚಿಯ ಉತ್ಪನ್ನವನ್ನು ತಯಾರಿಸುತ್ತದೆ.[] ಇಂದು ಕಲ್ಚರ್ಡ್ ಬೆಣ್ಣೆ(ಹುದುಗುವಿಕೆ ಬೆಣ್ಣೆ)ಯನ್ನು ಸಾಮಾನ್ಯವಾಗಿ ಪಾಶ್ಚೀಕರಿಸಿದ ಕೆನೆಯಿಂದ ತಯಾರಿಸಲಾಗುತ್ತದೆ. ಅದರ ಹುದುಗುವಿಕೆ(ಹುಳಿಸುವಿಕೆ) ಲ್ಯಾಕ್ಟೋಕಾಕ್ಸಸ್ ಮತ್ತು ಲ್ಯುಕೋನಾಸ್ಟಾಕ್ ಬ್ಯಾಕ್ಟೀರಿಯಗಳನ್ನು ಪರಿಚಯಿಸುವುದರಿಂದ ಉತ್ಪಾದಿಸಲಾಗುತ್ತದೆ.

ಹುದುಗುವಿಕೆಗೆ ಒಳಗಾದ ಬೆಣ್ಣೆ(ಕಲ್ಚರ್ಡ್ ಬಟರ್) ತಯಾರಿಸುವ ಇನ್ನೊಂದು ವಿಧಾನವು ೧೯೭೦ರ ದಶಕದಲ್ಲಿ ಅಭಿವೃದ್ಧಿಯಾಗಿದ್ದು, ತಾಜಾ ಕೆನೆಯಿಂದ ಬೆಣ್ಣೆಯನ್ನು ಉತ್ಪಾದಿಸುವುದಾಗಿದೆ. ನಂತರ ಬೆಳೆಸಿದ ಬ್ಯಾಕ್ಟೀರಿಯಗಳನ್ನು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಸೇರಿಸುವುದು. ಈ ವಿಧಾನವನ್ನು ಬಳಸುವ ಮೂಲಕ, ಶೈತ್ಯಾಗಾರದಲ್ಲಿ ಶೇಖರಣೆಯಿಂದ ಕಲ್ಚರ್ಡ್ ಬೆಣ್ಣೆಯ ಸುವಾಸನೆಯು ಹೆಚ್ಚುತ್ತದೆ. ಉತ್ಪಾದಕರಿಗೆ ಈ ವಿಧಾನವು ಹೆಚ್ಚು ಪರಿಣಾಮಕಾರಿ. ಬೆಣ್ಣೆಯನ್ನು ತಯಾರಿಸುವ ಕೆನೆಯನ್ನು ಹೆಚ್ಚು ಕಾಲ ಇರಿಸುವುದರಿಂದ ಸಿದ್ಧಪಡಿಸಿದ ಬೆಣ್ಣೆ ಉತ್ಪನ್ನದ ಸಂಗ್ರಹಕ್ಕಿಂತ ಹೆಚ್ಚು ಜಾಗವನ್ನು ಆವರಿಸುತ್ತದೆ. ಕೆನೆಯಿಂದ ತೆಗೆದ ಬೆಣ್ಣೆಯ ಕೃತಕ ಅನುಕರಣೆ ವಿಧಾನವು, ತಾಜಾ ಕೆನೆಯ ಬೆಣ್ಣೆಗೆ ಲ್ಯಾಕ್ಟಿಕ್ ಆಮ್ಲ ಮತ್ತು ಸುವಾನೆಯ ಸಂಯುಕ್ತಗಳನ್ನು ನೇರವಾಗಿ ಸೇರಿಸುವುದು. ಇದರಿಂದ ಕಲ್ಚರ್ಡ್ ಬೆಣ್ಣೆಯ ರುಚಿಯನ್ನು ಈ ಪರಿಣಾಮಕಾರಿ ಪದ್ಧತಿ ಅನುಕರಣೆ ಮಾಡುತ್ತದೆ. ಉತ್ಪಾದಿಸಿದ ಉತ್ಪನ್ನವು ಕಲ್ಚರಡ್ ಅಲ್ಲ, ಆದರೆ ಬದಲಾಗಿ ಸುವಾಸನೆಯುಳ್ಳಾದ್ದಾಗಿರುತ್ತದೆ.

 
ಬೆಣ್ಣೆಯನ್ನು ಕಾಯಿಸಿದಾಗ,ತಕ್ಷಣವೇ ತೆಳು ದ್ರವವಾಗಿ ಕರಗುತ್ತದೆ.

ಹೈನುಗಾರಿಕೆ ಉತ್ಪನ್ನಗಳು ಉತ್ಪಾದನೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪಾಶ್ಚೀಕರಣಕ್ಕೆ ಒಳಗಾಗಿರುತ್ತದೆ. ರೋಗಜನಕ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮಾಣುಜೀವಿಗಳನ್ನು ಕೊಲ್ಲಲು ಪಾಶ್ಚೀಕರಣ ಕ್ರಿಯೆಗೆ ಒಳಪಡಿಸಲಾಗುತ್ತದೆ. ಪಾಶ್ಚೀಕರಿಸಿದ ತಾಜಾ ಕೆನೆಯಿಂದ ತಯಾರಿಸಿದ ಬೆಣ್ಣೆಯನ್ನು ಸಿಹಿ ಕೆನೆ ಬೆಣ್ಣೆ ಎಂದು ಕರೆಯಲಾಗುತ್ತದೆ. ಸಿಹಿ ಕೆನೆ ಬೆಣ್ಣೆಯ ಉತ್ಪಾದನೆಯು ೧೯ನೇ ಶತಮಾನದಲ್ಲಿ ಸರ್ವೇಸಾಮಾನ್ಯವಾಯಿತು. ಶೈತ್ಯೀಕರಣ ಮತ್ತು ಯಾಂತ್ರೀಕೃತ ಕೆನೆ ವಿಯೋಜಕ ಯಂತ್ರದ ಅಭಿವೃದ್ಧಿಯೊಂದಿಗೆ ಇದು ಸಾಧ್ಯವಾಯಿತು.[] ತಾಜಾ ಅಥವಾ ಹುದುಗುವಿಕೆಗೆ ಒಳಪಡಿಸಿದ ಪಾಶ್ಚರೀಕರಿಸದಿರುವ ಕೆನೆಯಿಂದ ತಯಾರಿಸಿದ ಬೆಣ್ಣೆಯನ್ನು ಹಸಿ ಕೆನೆ ಬೆಣ್ಣೆ ಎಂದು ಕರೆಯುತ್ತಾರೆ. ಹಸಿ ಕೆನೆ ಬೆಣ್ಣೆಯು ಸ್ವಚ್ಛ ಕೆನೆ ಸುವಾಸನೆ ಹೊಂದಿರುತ್ತದೆ. ಪಾಶ್ಚರೀಕರಣ ಪರಿಚಯಿಸಿದ ಕಾಯಿಸಿದ ಹಾಲಿನ ಲಕ್ಷಣಗಳು ಇರುವುದಿಲ್ಲ.

ಖಂಡಾಂತರ ಯುರೋಪ್‌ನಾದ್ಯಂತ ಸಂಸ್ಕರಿಸಿದ ಬೆಣ್ಣೆಗೆ ಆದ್ಯತೆ ಹೆಚ್ಚು. ಆದರೆ ಸಿಹಿ ಕೆನೆ ಬೆಣ್ಣೆಯು ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಪ್ರಾಬಲ್ಯ ಮೆರೆದಿದೆ. ಆದ್ದರಿಂದ ಕಲ್ಚರ್ಡ್ ಬೆಣ್ಣೆಯನ್ನು ಕೆಲವು ಬಾರಿ ಐರೋಪ್ಯ ಶೈಲಿಯ ಬೆಣ್ಣೆ ಎಂದು ಅಮೆರಿಕದಲ್ಲಿ ಹೆಸರು ನೀಡಲಾಗಿದೆ. ವಾಣಿಜ್ಯ ಹಸಿ ಕೆನೆ ಬೆಣ್ಣೆಯು ಅಕ್ಷರಶಃ ಅಮೆರಿಕದಲ್ಲಿ ಕೇಳಿಬರುವುದಿಲ್ಲ. ಹಸಿ ಕೆನೆ ಬೆಣ್ಣೆಯು ಸಾಮಾನ್ಯವಾಗಿ ಮನೆಯಿಂದ ತಯಾರಾಗುವುದನ್ನು ಗ್ರಾಹಕರು ಕಾಣುತ್ತಾರೆ. ಹೈನುಗಾರಿಕೆ ರೈತರಿಂದ ಗ್ರಾಹಕರು ಹಸಿ ಹಾಲನ್ನು ಖರೀದಿಸಿ,ಸ್ವತಃ ಕೆನೆಯನ್ನು ಕಡೆದು ಅದರಿಂದ ಬೆಣ್ಣೆ ತಯಾರಿಸುತ್ತಾರೆ. ಇದು ಯುರೋಪ್‌ನಲ್ಲಿ ಕೂಡ ಅಪರೂಪದ್ದಾಗಿದೆ.[]

ಹಲವಾರು ಲೇಪಿಸುವ ಬೆಣ್ಣೆ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ತಂಪಾದ ವಾತಾವರಣದಲ್ಲಿ ಮೃದುವಾಗಿರುತ್ತದೆ. ಆದ್ದರಿಂದ ಶೈತ್ಯೀಕರಣದಿಂದ ನೇರವಾಗಿ ಬಳಸುವುದಕ್ಕೆ ಸುಲಭವಾಗಿದೆ. ಕೆಲವರು ಬೆಣ್ಣೆಯ ಕೊಬ್ಬಿನ ಸ್ವರೂಪವನ್ನು ಸಿದ್ಧಪಡಿಸಿದ ಉತ್ಪನ್ನಕ್ಕೆ ರಾಸಾಯನಿಕ ಬಳಕೆಯಿಂದ ಬದಲಿಸುತ್ತಾರೆ. ಕೆಲವರು ಜಾನುವಾರು ಆಹಾರ ಬದಲಿಸುವ ಮೂಲಕ, ಕೆಲವರು ಬೆಣ್ಣೆಗೆ ಸಸ್ಯ ತೈಲವನ್ನು ಸೇರಿಸುವ ಮೂಲಕ ಬದಲಿಸುತ್ತಾರೆ. ಗಾಳಿ ಸೋಕಿದ ಬೆಣ್ಣೆ (ವಿಪ್ಡ್ ಬಟರ್) ಇನ್ನೊಂದು ಉತ್ಪನ್ನವಾಗಿದ್ದು,ಹೆಚ್ಚು ಹರಡುವಂತೆ ವಿನ್ಯಾಸಗೊಳಿಸಲಾಗಿದೆ.ಇದನ್ನು ಸಾರಜನಕ ಅನಿಲವನ್ನು ಸೇರಿಸುವ ಮೂಲಕ ಗಾಳಿಗೊಡ್ಡಲಾಗುತ್ತದೆ.—ಸಾಮಾನ್ಯ ಗಾಳಿಯನ್ನು ಬಳಸಲಾಗುವುದಿಲ್ಲ. ಹಾಗೆ ಮಾಡಿದರೆ ಆಕ್ಸಿಡೀಕರಣಮತ್ತು ಕಮಟು ಉತ್ತೇಜಿಸುತ್ತದೆ.

 
ಲಂಡನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಣ್ಣೆ, ಉಪ್ಪುಸಹಿತ (ಬಲಕ್ಕೆ) ಮತ್ತು ಉಪ್ಪುರಹಿತ(ಎಡಕ್ಕೆ)

ಬೆಣ್ಣೆಯ ಎಲ್ಲ ವರ್ಗಗಳನ್ನು ಉಪ್ಪುಸಹಿತ ಅಥವಾ ಉಪ್ಪುರಹಿತ ರೂಪಗಳಲ್ಲಿ ಮಾರಲಾಗುತ್ತದೆ. ಹರಳಿನ ಉಪ್ಪು ಅಥವಾ ಗಟ್ಟಿ ಲವಣಜಲವನ್ನು ಸಂಸ್ಕರಣೆಯ ಸಮಯದಲ್ಲಿ ಉಪ್ಪುಸಹಿತ ಬೆಣ್ಣೆಗೆ ಸೇರಿಸಲಾಗುತ್ತದೆ. ಹೆಚ್ಚಿದ ಸುವಾಸನೆಯ ಜತೆಗೆ, ಉಪ್ಪಿನ ಸೇರ್ಪಡೆಯು ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ಸಿದ್ಧಪಡಿಸಿದ ಉತ್ಪನ್ನದಲ್ಲಿ ಹಾಲಿನ ಕೊಬ್ಬಿನ ಪ್ರಮಾಣವು ಉತ್ಪಾದನೆಯ ಮುಖ್ಯ ಅಂಶವಾಗಿದೆ. ಅಮೆರಿಕದಲ್ಲಿ,ಬೆಣ್ಣೆಯ ರೀತಿ ಮಾರಾಟ ಮಾಡುವ ಉತ್ಪನ್ನಗಳಲ್ಲಿ ಕನಿಷ್ಠ ೮೦% ಕೊಬ್ಬನ್ನು ಒಳಗೊಂಡಿರಬೇಕಾಗುತ್ತದೆ. ಬಹುತೇಕ ಅಮೆರಿಕ ಬೆಣ್ಣೆಗಳು ಅದಕ್ಕಿಂತ ಸ್ವಲ್ಪ ಹೆಚ್ಚು ಕೊಬ್ಬನ್ನು ಹೊಂದಿದ್ದು, ಸರಾಸರಿ ೮೧% ಕೊಬ್ಬನ್ನು ಹೊಂದಿರುತ್ತದೆ. ಐರೋಪ್ಯ ಬೆಣ್ಣೆಗಳು ಸಾಮಾನ್ಯವಾಗಿ ಹೆಚ್ಚಿನ ಅನುಪಾತ ಹೊಂದಿದ್ದು, ಅದು ೮೫%.ಕೊಬ್ಬಿನ ಪ್ರಮಾಣದವರೆಗೆ ವಿಸ್ತರಿಸಬಹುದು.

ಶೋಧಿಸಿದ ಬೆಣ್ಣೆಯು ಅದರ ಎಲ್ಲಾ ನೀರು ಮತ್ತು ಹಾಲಿನ ಘನವಸ್ತುಗಳನ್ನು ತೆಗೆದನಂತರ ಶುದ್ಧ ಕೊಬ್ಬನ್ನು ಉಳಿಸುವುದಾಗಿದೆ. ಬೆಣ್ಣೆಯನ್ನು ಅದರಕುದಿಯುವ ಬಿಂದುವಿಗೆ ಕುದಿಸಿ ನಂತರ ತಂಪುಗೊಳಿಸುವ ಮೂಲಕ ಶೋಧಿಸಿದ ಬೆಣ್ಣೆ(ತುಪ್ಪ)ಯನ್ನು ತಯಾರಿಸಲಾಗುತ್ತದೆ. ತಳಸೇರಿದ ಬಳಿಕ, ಉಳಿದ ಭಾಗಗಳು ಸಾಂದ್ರತೆಯಿಂದ ಪ್ರತ್ಯೇಕಗೊಳ್ಳುತ್ತದೆ. ಮೇಲ್ಭಾಗದಲ್ಲಿ ಹಾಲೊಡಕು ಪ್ರೊಟೀನ್‌ಗಳು ನಿರ್ಮಿಸುವ ತ್ವಚೆಯನ್ನು ತೆಗೆಯಲಾಗುತ್ತದೆ. ಅದರ ಫಲವಾದ ಕೊಬ್ಬನ್ನು ತಳದಲ್ಲಿ ಶೇಖರವಾಗುವ ಕೇಸಿನ್ ಪ್ರೋಟೀನ್ ಮತ್ತು ನೀರಿನ ಮಿಶ್ರಣದಿಂದ ಹೊರತೆಗೆಯಲಾಗುತ್ತದೆ.[]

ತುಪ್ಪವು ಶೋಧಿಸಿದ ಬೆಣ್ಣೆಯಾಗಿದ್ದು, ಅದನ್ನು ೧೨೦ °C (೨೫೦ °F) ಉಷ್ಣಾಂಶದಲ್ಲಿ ಕುದಿಸಿದಾಗ, ನೀರು ಕರಗಿ ಹಾಲಿನ ಘನವಸ್ತುಗಳು ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಪ್ರಕ್ರಿಯೆಯು ತುಪ್ಪಕ್ಕೆ ಸುವಾಸನೆ ನೀಡುತ್ತದೆ ಮತ್ತು ಉತ್ಕರ್ಷರೋದಕಗಳನ್ನು ಉತ್ಪಾದಿಸಿ, ಅದು ಕಮಟುವಾಸನೆಯಿಂದ ರಕ್ಷಿಸಲು ನೆರವಾಗುತ್ತದೆ. ಈ ಕಾರಣದಿಂದಾಗಿ, ಸಾಮಾನ್ಯ ಉಷ್ಣಾಂಶದಲ್ಲಿ ತುಪ್ಪವನ್ನು ೬ ರಿಂದ ೮ತಿಂಗಳವರೆಗೆ ಇರಿಸಬಹುದು.[]

ಕೆನೆಯನ್ನು ಹಾಲಿನ ಬದಲು ಹಾಲೊಡಕು ಮೂಲಕ ಗಿಣ್ಣು ತಯಾರಿಕೆಯ ಉಪಉತ್ಪನ್ನವಾಗಿ ತೆಗೆಯಬಹುದು. ಹಾಲೊಡಕು ಬೆಣ್ಣೆಯನ್ನು ಹಾಲೊಡಕು ಕೆನೆಯಿಂದ ತಯಾರಿಸಬಹುದು. ಹಾಲೊಡಕು ಕೆನೆ ಮತ್ತು ಬೆಣ್ಣೆ ಕಡಿಮೆ ಕೊಬ್ಬಿನ ಅಂಶವನ್ನು ಒಳಗೊಂಡಿದ್ದು, ಹೆಚ್ಚು ಉಪ್ಪು,ಹುಳಿ ಮತ್ತು ಗಿಣ್ಣಿನ ರುಚಿಯನ್ನು ಹೊಂದಿರುತ್ತದೆ.[] ಇವು ಸಿಹಿ ಕೆನೆ ಮತ್ತು ಬೆಣ್ಣೆಗಿಂತ ಹೆಚ್ಚು ಅಗ್ಗದಿಂದ ಕೂಡಿರುತ್ತದೆ.

ಐರೋಪ್ಯ ಬೆಣ್ಣೆಗಳು

ಬದಲಾಯಿಸಿ

ಯುರೋಪ್‌ನಲ್ಲಿ ಉತ್ಪಾದಿಸಲಾಗುವ ಅನೇಕ ವಿಧದ ಬೆಣ್ಣೆಗಳಿವೆ. ಇವು ಬೌಗೋಳಿಕ ಲಕ್ಷಣಗಳಿಂದ ರಕ್ಷಿತವಾಗಿದೆ. ಇವುಗಳೆಂದರೆ:

  • ಬರ್ ಡಿ ಆರ್ಡೆನೆ Beurre d'Ardenne,ಬೆಲ್ಜಿಯಂನಿಂದ.
  • ಬರ್ ಡಿ ಇಸಿಗ್ನಿBeurre d'Isigny,ಫ್ರಾನ್ಸ್‌ನಿಂದ.
  • ಬರ್ ಚಾರೆಂಟಸ್ ಪೊಯಿಟೊBeurre Charentes-Poitou (ಇದು ಸಹ ಸೇರಿದೆ: ಒಂದೇ ವರ್ಗೀಕರಣದಲ್ಲಿ ಬರ್ಸ್ ಡೆಸ್ ಚಾರೆಂಟಸ್(Beurre des Charentes )ಮತ್ತು ಬರ್ ಡೆಸ್ ಡ್ಯುಕ್ಸ್-ಸೆವರ್ಸ್ Beurre des Deux-Sèvres )ಫ್ರಾನ್ಸ್‌ನಿಂದ.
  • ಬರ್ ರೋಸ್, ಲಕ್ಸೆಂಬರ್ಗ್ನಿಂದ
  • ಮಾಂಟೆಕ್ಯುಲ್ಲಾ ಡೆ ಸೊರಿಯ Mantequilla de Soria,ಸ್ಪೇನ್‌ನಿಂದ.
  • Mantequilla de l'Alt Urgell y la Cerdanya, ಸ್ಪೇನ್‌ನಿಂದ

ಇತಿಹಾಸ

ಬದಲಾಯಿಸಿ
 
ಪ್ಯಾಲೆಸ್ಟೀನ್‌ನಲ್ಲಿ ಸಾಂಪ್ರದಾಯಿಕ ಬೆಣ್ಣೆ ತಯಾರಿಕೆಪೂರ್ವದ 20ನೇ ಶತಮಾನದಲ್ಲೂ ಪ್ರಾಚೀನ ವಿಧಾನಗಳನ್ನು ಆಚರಿಸಲಾಗುತ್ತದೆ. ನ್ಯಾಷನಲ್ ಜಿಯೋಗ್ರಾಫಿಕ್, ಮಾರ್ಚ್1914.

ಪೂರ್ವಕಾಲದಲ್ಲಿ ಬೆಣ್ಣೆಯನ್ನು ಕುರಿ ಅಥವಾ ಆಡಿನ ಹಾಲಿನಿಂದ ತೆಗೆಯುತ್ತಿದ್ದರು. ಜಾನುವಾರುಗಳು ಸುಮಾರು ಒಂದು ಸಾವಿರ ವರ್ಷಗಳವರೆಗೆ ಸಾಕುಪ್ರಾಣಿಗಳಾಗಿ ಬಳಕೆಯಾಗಲಿಲ್ಲ ಎಂದು ಭಾವಿಸಲಾಗಿದೆ.[] ಪ್ರಾಚೀನ ಕಾಲದಲ್ಲಿ ಬೆಣ್ಣೆಯನ್ನು ತಯಾರಿಸುವ ವಿಧಾನವನ್ನು ಆಫ್ರಿಕಾ ಮತ್ತು ನಿಯರ್ ಈಸ್ಟ್ ಭಾಗಗಳಲ್ಲಿ ಈಗಲೂ ಬಳಸಲಾಗುತ್ತಿದ್ದು, ಹಾಲಿನಿಂದ ಅರ್ಧಭಾಗ ತುಂಬಿದ ಆಡಿನ ಚೀಲವನ್ನು ಒಳಗೊಂಡಿದ್ದು, ಅದನ್ನು ಮೊಹರು ಮಾಡುವ(ಮುಚ್ಚುವ) ಮುಂಚೆ ಗಾಳಿಯಿಂದ ಊದಿಸಲಾಗುತ್ತದೆ. ಚರ್ಮವನ್ನು ನಂತರ ಕೋಲುಗಳ ತ್ರಿಪಾದಿಗಳಿಗೆ ತೂಗುಹಾಕಿ, ಬೆಣ್ಣೆ ತಯಾರಾಗುವ ತನಕ ಹಿಂದೆ ಮುಂದೆ ತೂಗಲಾಗುತ್ತದೆ.

ಮೆಡಿಟರೇನಿಯನ್ ಹವಾಮಾನದಲ್ಲಿ ಶೋಧಿಸಿದ ಬೆಣ್ಣೆ(ತುಪ್ಪ)ವು ತಕ್ಷಣವೇ ಕೆಡುತ್ತದೆ. ಗಿಣ್ಣಿಗೆ ಭಿನ್ನವಾಗಿ ಹಾಲಿನ ಪೌಷ್ಠಿಕಾಂಶಗಳನ್ನು ಕೆಡದಂತೆ ಇಡುವ ಪ್ರಾಯೋಗಿಕ ವಿಧಾನ ಇದಲ್ಲ. ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಬೆಣ್ಣೆಯನ್ನು ಉತ್ತರ ಬಾರ್ಬೇರಿಯನ್‌(ಅನಾಗರಿಕ ಜನಾಂಗ)ಗೆ ಹೆಚ್ಚು ಸೂಕ್ತವಾದ ಆಹಾರವೆಂದು ಪರಿಗಣಿಸಿದಂತೆ ಕಾಣುತ್ತದೆ. ಗ್ರೀಕ್ ಕಾಮಿಕ್ ಕವಿಯ ನಾಟಕ ಅನಾಕ್ಸಂಡ್ರೈಡಸ್ಸ್ ತ್ರಾಸಿಯನ್‌ರನ್ನು ಬೌಟ್ರೋಫಾಗೋಯ್ ; "ಬೆಣ್ಣೆ-ಭಕ್ಷಕರು".[] ಎಂದು ಉಲ್ಲೇಖಿಸುತ್ತದೆ. ' ಸ್ವಾಭಾವಿಕ ಇತಿಹಾಸ ದಲ್ಲಿ ಪ್ಲೈನಿ ದಿ ಎಲ್ಡರ್ ಬೆಣ್ಣೆಯನ್ನು ಅತ್ಯಂತ ಕ್ರೂರ ರಾಷ್ಟ್ರಗಳ ಪೈಕಿ ಸ್ವಾದಿಷ್ಟ ಆಹಾರವಾಗಿದೆ ಎಂದು ಹೇಳುತ್ತಾರೆ ಹಾಗು ಅದರ ಔಷಧೀಯ ಗುಣಗಳನ್ನು ವರ್ಣಿಸುತ್ತಾರೆ.[೧೦] ನಂತರ ವೈದ್ಯ ಗ್ಯಾಲನ್ ಬೆಣ್ಣೆಯನ್ನು ಔಷಧಿ ಕಾರಕ ಮಾತ್ರವೆಂದು ಬಣ್ಣಿಸಿದ್ದಾರೆ.[೧೧]

ಇತಿಹಾಸಕಾರ ಮತ್ತು ಭಾಷಾತಜ್ಞ ಆಂಡ್ರಿವ್ ಡಾಲ್ಬಿ ಪ್ರಾಚೀನ ನಿಯರ್ ಈಸ್ಟ್ ಪಠ್ಯಗಳಲ್ಲಿ ಅನೇಕ ಉಲ್ಲೇಖಗಳನ್ನು ತುಪ್ಪ ಎಂದು ಹೆಚ್ಚು ಸೂಕ್ತವಾಗಿ ಅನುವಾದಿಸಬಹುದು ಎಂದು ಹೇಳಿದ್ದಾರೆ. ತುಪ್ಪವನ್ನು ಎರೆತ್ರಿಯನ್ ಸಮುದ್ರ ಯಾತ್ರೆಯಲ್ಲಿ ಅರಬ್ಬಿ ಸಮುದ್ರದ ೧ನೇ ಶತಮಾನದ CEಯಲ್ಲಿ ಒಂದು ಮಾದರಿಯ ವ್ಯಾಪಾರಿ ವಸ್ತುವಾಗಿ ಪ್ರಸ್ತಾಪವಾಗಿದೆ. ರೋಮನ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೊ ಇದನ್ನು ಅರೇಬಿಯ ಮತ್ತು ಸೂಡನ್‌ನ ಪದಾರ್ಥವೆಂದು ಬಣ್ಣಿಸಿದ್ದಾರೆ.[] ಭಾರತದಲ್ಲಿ ತುಪ್ಪವು ಶುದ್ಧತೆಯ ಸಂಕೇತವಾಗಿದ್ದು, ಸುಮಾರು ೩೦೦೦ಕ್ಕಿಂತ ಹೆಚ್ಚು ವರ್ಷಗಳ ಕಾಲ ದೇವರಿಗೆ ಅರ್ಪಣೆ ಮಾಡುವ, ವಿಶೇಷವಾಗಿ ಹಿಂದು ದೇವತೆ ಅಗ್ನಿಗೆ ಅರ್ಪಿಸಲಾಗುತ್ತದೆ. ತುಪ್ಪದ ಪವಿತ್ರ ಸ್ವರೂಪವು ಋಗ್ವೇದ, ಸಿರ್ಕಾ ೧೫೦೦–೧೨೦೦ BCEನಲ್ಲಿ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಕೃಷ್ಣ ಬೆಣ್ಣೆಯನ್ನು ಕದಿಯುವ ಕಥೆಯು ಭಾರತದಲ್ಲಿ ಇಂದಿಗೂ ಜನಪ್ರಿಯ ಮಕ್ಕಳ ಕಥೆಯಾಗಿ ಉಳಿದುಕೊಂಡಿದೆ. ಭಾರತದ ಪೂರ್ವೇತಿಹಾಸದ ಕಾಲದಿಂದ ತುಪ್ಪವನ್ನು ವರ್ಷವಿಡೀ ಆಹಾರವಾಗಿ ಬಳಸಲಾಗುತ್ತಿದ್ದು, ಪವಿತ್ರ ಜ್ಯೋತಿಗಳನ್ನು ಉರಿಸುವುದು ಮುಂತಾದ ಧಾರ್ಮಿಕ ಕ್ರಿಯೆಗಳ ಉದ್ದೇಶಗಳಿಗೆ ಮತ್ತು ಅಂತ್ಯಕ್ರಿಯೆ ಚಿತೆಗಳಿಗೆ ಬಳಸಲಾಗುತ್ತದೆ.

ಮಧ್ಯ ಯುಗಗಳು

ಬದಲಾಯಿಸಿ
 
ಬೆಣ್ಣೆಯನ್ನು ಕಡೆಯುತ್ತಿರುವ ಮಹಿಳೆ; ಕಾಂಪೋಸ್ಟ್ ಎಟ್ ಕೆಲೆಂಡ್ರಿಯರ್ ಡೆಸ್ ಬರ್ಗರೆಸ್, ಪ್ಯಾರಿಸ್, 1499.

ಉತ್ತರ ಯುರೋಪ್‌ನ ತಂಪಾದ ವಾತಾವರಣವು ಬೆಣ್ಣೆಯನ್ನು ಕೆಡುವುದಕ್ಕೆ ಮುಂಚಿತವಾಗಿ ಸುದೀರ್ಘ ಕಾಲದವರೆಗೆ ಸಂಗ್ರಹಿಸಲು ಅವಕಾಶ ನೀಡಿತ್ತು. ಸ್ಕಾಂಡಿನೇವಿಯ ಬೆಣ್ಣೆಯ ರಫ್ತು ವ್ಯಾಪಾರದಲ್ಲಿ ಯುರೋಪ್‌ನ ಪ್ರಾಚೀನ ಸಂಪ್ರದಾಯವನ್ನು ಹೊಂದಿದ್ದು,ಇದು ಕನಿಷ್ಠ ೧೨ನೇ ಶತಮಾನದ ಕಾಲಮಾನದ್ದಾಗಿದೆ.[೧೨] ರೋಮ್ ಪತನದ ನಂತರ, ಮಧ್ಯಯುಗದ ಬಹುಕಾಲ, ಯುರೋಪ್‌ನಾದ್ಯಂತ ಬೆಣ್ಣೆಯು ಸಾಮಾನ್ಯ ಆಹಾರವಾಗಿದೆ. ಆದರೆ ಮುಖ್ಯವಾಗಿ ರೈತರು ಹೆಚ್ಚು ಸೇವಿಸುತ್ತಿದ್ದ ಕೆಳದರ್ಜೆಯ ಆಹಾರವಾಗಿತ್ತು. ಮೇಲ್ವರ್ಗದ ಜನರು ನಿಧಾನವಾಗಿ ಬೆಣ್ಣೆಯನ್ನು ಸ್ವೀಕರಿಸಲು ಆರಂಭಿಸಿದರು. ವಿಶೇಷವಾಗಿ ೧೬ನೇ ಶತಮಾನದ ಆರಂಭದಲ್ಲಿ, ರೋಮನ್ ಕ್ಯಾಥೋಲಿಕ್ ಚರ್ಚ್ ಲೆಂಟ್ ಕಾಲದ ಸಂದರ್ಭದಲ್ಲಿ ಅದರ ಸೇವನೆಗೆ ಅವಕಾಶ ನೀಡಿತು. ಬ್ರೆಡ್ ಮತ್ತು ಬೆಣ್ಣೆ ಮಧ್ಯಮವರ್ಗ ಮತ್ತು ಇಂಗ್ಲೀಷರ ನಡುವೆ ಸಾಮಾನ್ಯ ತಿನಿಸಾಗಿತ್ತು. ಕರಗಿಸಿದ ಬೆಣ್ಣೆಯನ್ನು ಮಾಂಸ ಮತ್ತು ತರಕಾರಿಗಳಿಗೆ ಸಾಸ್ ರೀತಿಯಲ್ಲಿ ಮುಕ್ತವಾಗಿ ಬಳಸುವುದಕ್ಕೆ ಖ್ಯಾತಿ ಪಡೆಯಿತು.[೧೩]

ಪ್ರಾಚೀನ ಕಾಲದಲ್ಲಿ ಬೆಣ್ಣೆಯನ್ನು ತೈಲಕ್ಕೆ ಪರ್ಯಾಯವಾಗಿ ದೀಪಗಳನ್ನು ಉರಿಸುವ ಎಣ್ಣೆಯ ರೀತಿಯಲ್ಲಿ ಬಳಸಲಾಯಿತು. ಲೆಂಟ್ ಕಾಲದಲ್ಲಿ ಆರ್ಕ್‌ಬಿಷಪ್ ಜಾರ್ಜ್ಸ್ ಡಿ ಅಂಬೋಯಿಸ್ ಕೊರತೆಯಿದ್ದ ತೈಲದ ಬದಲಿಗೆ ಬೆಣ್ಣೆಯನ್ನು ಉರಿಸುವುದಕ್ಕೆ ಅನುಮತಿ ನೀಡಿದ್ದರು. ೧೬ನೇ ಶತಮಾನದ ಈ ಸಂದರ್ಭದಲ್ಲಿ ರೂವೆನ್ ಕೆಥೆಡ್ರಲ್‌ನ ಬೆಣ್ಣೆ ಗೋಪುರ ವನ್ನು ನಿರ್ಮಿಸಲಾಯಿತು.[೧೪]

ಉತ್ತರ ಯುರೋಪ್‌ನಾದ್ಯಂತ ಬೆಣ್ಣೆಯನ್ನು ಇಂದು ಕೇಳಿರದ ರೀತಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಅದನ್ನು ಫಿರ್ಕಿನ್(ಪೂರ್ಣ ಗಾತ್ರ ಪೀಪಾಯಿಯ ಕಾಲು ಭಾಗ) ಪೀಪಾಯಿಗಳಲ್ಲಿ ಶೇಖರಿಸಿ, ಬಹುಶಃ ವರ್ಷಗಟ್ಟಲೆ ಪೀಟ್ ಬಾಗ್‌(ಕೊಳೆತ ಸಸ್ಯಗಳ ಸಂಗ್ರಹದ ತೇವಭೂಮಿ)ಗಳಲ್ಲಿ ಹೂಳಲಾಗುತ್ತಿತ್ತು. ಇಂತಹ ಬಾಗ್ ಬೆಣ್ಣೆಯು ದೀರ್ಘಕಾಲದಲ್ಲಿ ಬಲವಾದ ಸುವಾಸನೆ ಬೆಳೆಸಿಕೊಳ್ಳುತ್ತದೆ ಹಾಗು ತಿನ್ನಲು ಯೋಗ್ಯವಾಗಿರುತ್ತದೆ. ಪೀಟ್ ಬಾಗ್‌ನ ವಿಶಿಷ್ಟ ತಂಪು,ವಾಯುರಹಿತ,ನಂಜುನಿರೋಧಕ ಮತ್ತು ಆಮ್ಲೀಯ ಪರಿಸರವೇ ಇದಕ್ಕೆ ಕಾರಣ. ಇಂತಹ ಹೂಳಲಾದ ಬೆಣ್ಣೆಯ ಫಿರ್ಕಿನ್‌ಗಳು ಐರ್ಲೆಂಡ್‌ನಲ್ಲಿ ಸಾಮಾನ್ಯ ಪುರಾತತ್ವ ಶೋಧವಾಗಿದ್ದು, ಐರಿಷ್ ನ್ಯಾಷನಲ್ ಮ್ಯೂಸಿಯಂನಲ್ಲಿ "ಕಂದುಬಣ್ಣದ ಗಿಣ್ಣಿನ ರೀತಿಯ, ಆಂಶಿಕವಾಗಿ ಗಟ್ಟಿಯಾದ, ಅಷ್ಟಾಗಿ ಬೆಣ್ಣೆಯ ರೀತಿಯಿರದ ಮತ್ತು ಕೊಳೆಯುವಿಕೆಯಿಂದ ಮುಕ್ತವಾದ ಪದಾರ್ಥವನ್ನು ಹೊಂದಿತ್ತು." ಐರ್ಲೆಂಡ್‌ನಲ್ಲಿ ೧೧-೧೪ನೇ ಶತಮಾನಗಳಲ್ಲಿ ಈ ಪದ್ಧತಿಯು ಸರ್ವೇಸಾಮಾನ್ಯವಾಗಿದ್ದು, ೧೯ನೇ ಶತಮಾನಕ್ಕೆ ಮುನ್ನ ಪೂರ್ಣವಾಗಿ ಕೊನೆಗೊಂಡಿತು.[೧೨]

ಕೈಗಾರಿಕೀಕರಣ

ಬದಲಾಯಿಸಿ

ಐರ್ಲೆಂಡ್ ರೀತಿಯಲ್ಲಿ, ಫ್ರಾನ್ಸ್ ವಿಶೇಷವಾಗಿ ನಾರ್ಮಂಡಿ ಮತ್ತು ಬ್ರಿಟಾನಿಯಲ್ಲಿ ತನ್ನ ಬೆಣ್ಣೆಗೆ ಹೆಸರುವಾಸಿಯಾಗಿದೆ. ಸುಮಾರು ೧೮೬೦ನೇ ದಶಕದ ಹೊತ್ತಿಗೆ, ಫ್ರಾನ್ಸ್‌ನಲ್ಲಿ ಬೆಣ್ಣೆಗೆ ಬೇಡಿಕೆ ತೀವ್ರಗೊಂಡಿತು. ಚಕ್ರವರ್ತಿ ನೆಪೋಲಿಯನ್ III ಫ್ರಾನ್ಸ್‌ನ ಅಸಮರ್ಪಕ ಬೆಣ್ಣೆ ಪೂರೈಕೆಗಳಿಗೆ ಪೂರಕಪದಾರ್ಥವಾಗಿ ದುಬಾರಿಯಲ್ಲದ ಪರ್ಯಾಯವನ್ನು ಶೋಧಿಸುವವರಿಗೆ ಬಹುಮಾನದ ಹಣ ನೀಡುವ ಪ್ರಸ್ತಾಪ ಮಾಡಿದ. ಫ್ರೆಂಚ್ ರಸಾಯನಶಾಸ್ತ್ರಜ್ಞ ೧೮೬೯ರಲ್ಲಿ ಮಾರ್ಗರೀನ್(ಕೃತಕ ಬೆಣ್ಣೆ) ಸಂಶೋಧಿಸುವುದರೊಂದಿಗೆ ಬಹುಮಾನದ ಮೇಲಿನ ಹಕ್ಕು ಪ್ರತಿಪಾದಿಸಿದ. ಮೊದಲ ಮಾರ್ಗರೀನ್ ದನದ ಮಾಂಸದ ಗಟ್ಟಿಜಿಡ್ಡು ಹಾಲಿನೊಂದಿಗೆ ಸುವಾಸನೆ ಕೊಡಬಹುದಾಗಿದ್ದು, ಬೆಣ್ಣೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ೧೯೦೦ರ ಸರಿಸುಮಾರಿಗೆ ಜಲಜನಕೀಕರಣ ಮಾಡಿದ ತೈಲಗಳ ಅಭಿವೃದ್ಧಿ ನಂತರ ಸಸ್ಯ ಮಾರ್ಗರೀನ್ ಅನುಸರಿಸಿದವು.

 
ಗಸ್ಟಾಫ್ ಡೆ ಲಾವಲ್ಸ್ ಸೆಂಟ್ರಿಫ್ಯೂಜಲ್ ಕೆನೆ ವಿಯೋಜಕವು ಬೆಣ್ಣೆ ತಯಾರಿಕೆ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸುತ್ತಿದೆ.

೧೯ನೇ ಶತಮಾನದವರೆಗೆ, ಬೆಣ್ಣೆಯ ಬಹುತೇಕ ಭಾಗವನ್ನು ಕೈಯಿಂದ ಜಮೀನಿನಲ್ಲಿ ಉತ್ಪಾದಿಸಲಾಗುತ್ತಿತ್ತು. ಆರಂಭದ ೧೮೬೦ರ ದಶಕದಲ್ಲಿ, ಅಮೆರಿಕದಲ್ಲಿ ಪ್ರಥಮ ಬೆಣ್ಣೆ ಕಾರ್ಖಾನೆಗಳು ಕಾಣಿಸಿಕೊಂಡವು. ಒಂದು ದಶಕಕ್ಕೆ ಮುಂಚೆ ಗಿಣ್ಣು ಕಾರ್ಖಾನೆಗಳನ್ನು ಯಶಸ್ವಿಯಾಗಿ ಆರಂಭಿಸಲಾಗಿತ್ತು. ೧೮೭೦ನೇ ದಶಕದ ಕೊನೆಯಲ್ಲಿ, ಅಪಕೇಂದ್ರಕ(ಸೆಂಟ್ರಿಫ್ಯೂಜಲ್) ಕೆನೆ ವಿಯೋಜಕವನ್ನು ಪರಿಚಯಿಸಲಾಯಿತು. ಸ್ವೀಡನ್ನಿನ ಎಂಜಿನಿಯರ್ ಕಾರ್ಲ್ ಗಸ್ಟಾಫ್ ಪಾಟ್ರಿಕ್ ಡಿ ಲಾವಲ್ ಯಶಸ್ವಿಯಾಗಿ ಮಾರಾಟ ಮಾಡಿದರು.[೧೫] ಇದರಿಂದ ಬೆಣ್ಣೆ ತಯಾರಿಸುವ ಪ್ರಕ್ರಿಯೆಯು ವೇಗದ ಗತಿ ಪಡೆದುಕೊಂಡಿತು. ಕೆನೆಯು ಸ್ವಾಭಾವಿಕವಾಗಿ ಹಾಲಿನ ಮೇಲೆ ಸಂಗ್ರಹವಾಗುವ ನಿಧಾನ ಪ್ರಕ್ರಿಯೆಯನ್ನು ಇದು ನಿವಾರಿಸಿತು. ಆರಂಭದಲ್ಲಿ,ಇಡೀ ಹಾಲನ್ನು ಬೆಣ್ಣೆ ಕಾರ್ಖಾನೆಗಳಿಗೆ ಸಾಗಿಸಲಾಯಿತು ಮತ್ತು ಕೆನೆಯ ವಿಯೋಜನೆ ಸಂಭವಿಸಿತು. ಶೀಘ್ರದಲ್ಲೇ, ಕೆನೆ ವಿಯೋಜನೆ ತಂತ್ರಜ್ಞಾನವು ಹೆಚ್ಚುವರಿ ಸಾಮರ್ಥ್ಯದ ಪರಿಚಯದೊಂದಿಗೆ ಸಣ್ಣಪ್ರಮಾಣದ ಮತ್ತು ದುಬಾರಿರಹಿತ ಎನಿಸಿತು. ವಿಯೋಜನೆಯನ್ನು ಜಮೀನಿನಲ್ಲಿ ಸಾಧಿಸಲಾಯಿತು ಮತ್ತು ಕೆನೆಯನ್ನು ಮಾತ್ರ ಕಾರ್ಖಾನೆಗೆ ಸಾಗಿಸಲಾಯಿತು. ೧೯೦೦ರ ಹೊತ್ತಿಗೆ, ಅಮೆರಿಕದಲ್ಲಿ ಉತ್ಪಾದನೆಯಾಗುವ ಬೆಣ್ಣೆಯ ಅರ್ಧ ಪ್ರಮಾಣಕ್ಕಿಂತ ಹೆಚ್ಚು ಕಾರ್ಖಾನೆ ತಯಾರಿಕೆಯಾಗಿದ್ದು, ಯುರೋಪ್ ಸ್ವಲ್ಪ ಸಮಯದಲ್ಲೇ ಅದನ್ನು ಅನುಸರಿಸಿತು.

೧೯೨೦ರಲ್ಲಿ ಒಟ್ಟೊ ಹಂಜೀಕರ್ ದಿ ಬಟರ್ ಇಂಡಸ್ಟ್ರಿ,ಪ್ರಿಪೇರ್ಡ್ ಫಾರ್ ಫ್ಯಾಕ್ಟರಿ,ಸ್ಕೂಲ್ ಎಂಡ್ ಲ್ಯಾಬೋರೇಟರಿ [೧೬] ಕೃತಿಯ ಲೇಖಕರಾದರು. ಇದು ಕೈಗಾರಿಕೆಯಲ್ಲಿ ಹೆಸರಾಂತ ಪಠ್ಯವಾಗಿದ್ದು, ಕನಿಷ್ಠ ಮೂರು ಆವೃತ್ತಿಗಳನ್ನು ಕಂಡಿತು (೧೯೨೦, ೧೯೨೭, ೧೯೪೦). ಪ್ರಯತ್ನಗಳ ಭಾಗವಾಗಿ ಅಮೆರಿಕನ್ ಡೇರಿ ಸೈನ್ಸ್ ಅಸೋಸಿಯೇಷನ್ ಪ್ರಾಧ್ಯಾಪಕ ಹುಂಜಿಕರ್ ಮತ್ತಿತರರು ಗಟ್ಟಿಜಿಡ್ಡು ಕಾರಣಗಳು[೧೭](ಪರಿಮಳದ ಕೊರತೆ, ರುಚಿಯ ಕೊರತೆಯಾದ ಕಮಟುವಾಸನೆಗಿಂತ ಭಿನ್ನ), ಬಣ್ಣದ ಚುಕ್ಕೆಗಳು[೧೮](ಏರುಪೇರಿನ ಬಣ್ಣಕ್ಕೆ ಸಂಬಂಧಿಸಿದ ಸೌಂದರ್ಯದ ವಿಷಯ), ಪರಿಚಯಿಸಿದ ಉಪ್ಪುಗಳು,[೧೯] ಬೆಣ್ಣೆ ಕಾರ್ಖಾನೆ ವಸ್ತುಗಳು[೨೦] ಮತ್ತು ದ್ರವಗಳ ಪರಿಣಾಮ[೨೧] ಮತ್ತು ಆಮ್ಲೀಯ ಮಾಪನಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿದರು.[೨೨] ಇದು ಮತ್ತು ಇತರ ADSA ಪ್ರಕಟಣೆಗಳಿಂದ ಪದ್ಧತಿಗಳನ್ನು ಅಂತಾರಾಷ್ಟ್ರೀಯವಾಗಿ ಪ್ರಮಾಣಕವಾಗಿಸಲು ನೆರವಾಯಿತು.

ಮಾರ್ಗರೀನ್ ಹೆಚ್ಚಿದ ಜನಪ್ರಿಯತೆಯಿಂದಾಗಿ, ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ೨೦ನೇ ಶತಮಾನದ ಸಂದರ್ಭದಲ್ಲಿ ತಲಾವಾರು ಬೆಣ್ಣೆಯ ಬಳಕೆ ಕುಸಿಯಿತು. ಮಾರ್ಗರೀನ್ ಕಡಿಮೆ ದುಬಾರಿ ಮತ್ತು ಇತ್ತೀಚಿನ ವರ್ಷಗಳ ತನಕ ಆರೋಗ್ಯಕರ ಆಹಾರವೆಂದು ಗ್ರಹಿಸಲಾಗಿತ್ತು. ಅಮೆರಿಕದಲ್ಲಿ ಮಾರ್ಗರೀನ್ ಬಳಕೆಯ ಪ್ರಮಾಣ ೧೯೫೦ರ ದಶಕದಲ್ಲಿ ಬೆಣ್ಣೆಯನ್ನು ಮೀರಿಸಿತು.[೨೩] U.S.ಮತ್ತು EUನಲ್ಲಿ ಬೆಣ್ಣೆಗಿಂತ ಹೆಚ್ಚು ಮಾರ್ಗರೀನ್ ಸೇವನೆಯ ಪ್ರಮಾಣ ಇಂದಿಗೂ ಚಾಲ್ತಿಯಲ್ಲಿದೆ.[೨೪]</ref>

ಬೆಣ್ಣೆ ತುಂಡುಗಳ ಆಕಾರ

ಬದಲಾಯಿಸಿ
 
ಪಾಶ್ಚಿಮಾತ್ಯ ಪ್ಯಾಕ್-ಆಕಾರದ ಬೆಣ್ಣೆ

ಅಮೆರಿಕದಲ್ಲಿ ಬೆಣ್ಣೆ ತುಂಡುಗಳನ್ನು ಸಾಮಾನ್ಯವಾಗಿ ೪ ಔನ್ಸ್ ತುಂಡುಗಳಲ್ಲಿ ಉತ್ಪಾದಿಸಿ, ಮಾರಲಾಗುತ್ತದೆ. ವ್ಯಾಕ್ಸ್‌ಪೇಪರ್‌ನಲ್ಲಿ ಸುತ್ತಿ, ರಟ್ಟಿನ ಪೆಟ್ಟಿಗೆಯಲ್ಲಿ ನಾಲ್ಕು ತುಂಡುಗಳಂತೆ ಮಾರಲಾಯಿತು. ಈ ಪದ್ಧತಿಯು ೧೯೦೭ರಲ್ಲಿ ಹುಟ್ಟಿತೆಂದು ನಂಬಲಾಗಿದೆ. ಸ್ವಿಫ್ಟ್ ಎಂಡ್ ಕಂಪೆನಿ ಸಾಮೂಹಿಕ ವಿತರಣೆಗಾಗಿ ಈ ರೀತಿ ಬೆಣ್ಣೆಯನ್ನು ಪ್ಯಾಕು ಮಾಡಲು ಆರಂಭಿಸಿತು.[೨೫]

ಬೆಣ್ಣೆ ಮುದ್ರಕಗಳಲ್ಲಿ ಐತಿಹಾಸಿಕ ಭಿನ್ನತೆಗಳಿದ್ದ ಕಾರಣ,ಈ ತುಂಡುಗಳನ್ನು ಎರಡು ಭಿನ್ನ ಆಕಾರಗಳಲ್ಲಿ ಉತ್ಪಾದಿಸಲಾಯಿತು.

  • ಪ್ರಮುಖ ಆಕಾರ ಈಸ್ಟ್ ಆಫ್ ದಿ ರಾಕಿ ಮೌಂಟನ್ಸ್ ಎಲ್ಗಿನ್ ಅಥವಾ ಈಸ್ಟರ್ನ್ ಪ್ಯಾಕ್ ಆಕಾರವಾಗಿದೆ. ಈ ಆಕಾರವನ್ನು ಮೂಲತಃ ಎಲ್ಗಿನ್ ಬೆಣ್ಣೆ ಟಬ್ ಕಂಪೆನಿಯು ಅಭಿವೃದ್ಧಿಪಡಿಸಿತು. ಎಲ್ಗಿನ್ ಇಲ್ಲಿನಾಯ್ಸ್ ಮತ್ತು ರಾಕ್ ಫಾಲ್ಸ್ ಇಲ್ಲಿನಾಯ್ಸ್‌ನಲ್ಲಿ ೧೮೮೨ರಲ್ಲಿ ಇದನ್ನು ಸ್ಥಾಪಿಸಲಾಯಿತು. ಈ ತುಂಡುಗಳು ೪¾ ಇಂಚುಗಳ ಉದ್ದ ಮತ್ತು ೧¼ಇಂಚುಗಳ ಅಗಲವಿದ್ದು,(121 mm × 32 mm) ಆಯಾತಾಕಾರದ ಧಾರಕದಲ್ಲಿ ಅಕ್ಕಪಕ್ಕದಲ್ಲೇ ಪ್ಯಾಕ್ ಮಾಡಿ ಸಾಮಾನ್ಯವಾಗಿ ಮಾರಲಾಯಿತು.[೨೬] ಇದನ್ನು ಬಳಸಿದ ಮುಂಚಿನ ಬೆಣ್ಣೆ ಮುದ್ರಕರಲ್ಲಿ, ಎಲ್ಗಿನ್ ಬೆಣ್ಣೆ ಕಟ್ಟರ್ ಸೇರಿದೆ.
  • ವೆಸ್ಟ್ ಆಫ್ ದಿ ರಾಕಿ ಮೌಂಟೆನ್ಸ್ ಬೆಣ್ಣೆ ಮುದ್ರಕರು ಭಿನ್ನ ಆಕಾರದಲ್ಲಿ ಪ್ರಮಾಣಕಗೊಂಡಿತು. ಇದನ್ನು ವೆಸ್ಟರ್ನ್ ಪ್ಯಾಕ್ ಆಕಾರ ಎಂದು ಇಂದು ಉಲ್ಲೇಖಿಸಲಾಗುತ್ತದೆ.[೨೬] ಈ ಬೆಣ್ಣೆ ತುಂಡುಗಳು ೩¼ ಇಂಚುಗಳಷ್ಟು ಉದ್ದ ಮತ್ತು ೧½ ಇಂಚು ಅಗಲವಿದ್ದು, (80 mm × 38 mm)ಸಾಮಾನ್ಯವಾಗಿ ಕ್ಯೂಬ್ ಆಕಾರದ ಪೆಟ್ಟಿಗೆಗಳಲ್ಲಿ ಮಾರಲಾಯಿತು.

ಎರಡೂ ತುಂಡುಗಳು ಸಮಾನ ಪ್ರಮಾಣದ ಬೆಣ್ಣೆಯನ್ನು ಹೊಂದಿರುತ್ತವೆ. ಆದರೂ ಬಹುತೇಕ ಬೆಣ್ಣೆ ತಟ್ಟೆಗಳು ಎಲ್ಗಿನ್ ಶೈಲಿಯ ಬೆಣ್ಣೆ ತುಂಡುಗಳನ್ನು ಇಡಲು ವಿನ್ಯಾಸಗೊಳಿಸಲಾಗುತ್ತದೆ.

ತುಂಡಗಳ ಹೊದಿಕೆಯನ್ನು ಸಾಮಾನ್ಯವಾಗಿ ೮ ಟೇಬಲ್‌ಸ್ಪೂನ್ ಎಂದು ಗುರುತಿಸಲಾಗುತ್ತದೆ.120 ml (4.2 imp fl oz; 4.1 US fl oz)* ಒಂದು ತುಂಡಿನ ವಾಸ್ತವ ಗಾತ್ರವು ಅಂದಾಜು ೯ ಟೇಬಲ್‌ಸ್ಪೂನ್‌ಗಳಾಗಿರುತ್ತದೆ.130 ml (4.6 imp fl oz; 4.4 US fl oz)*

ವಿಶ್ವಾದ್ಯಂತ

ಬದಲಾಯಿಸಿ

೧೯೯೭ರಲ್ಲಿ ಭಾರತವು ಬಹುಮಟ್ಟಿಗೆ ಸ್ಥಳೀಯವಾಗಿ ಸೇವಿಸುವ 1,470,000 metric tons (1,620,000 short tons)ಬೆಣ್ಣೆಯನ್ನು ಉತ್ಪಾದಿಸಿತು.[೨೭] ಉತ್ಪಾದನೆಯಲ್ಲಿ ಎರಡನೇ ಸ್ಥಾನವನ್ನು ಅಮೆರಿಕ ಪಡೆದಿದ್ದು, (522,000 t (575,000 short tons)*)ಫ್ರಾನ್ಸ್ (466,000 t (514,000 short tons)*), ಜರ್ಮನಿ (442,000 t (487,000 short tons)*), ಮತ್ತು ನ್ಯೂಜಿಲೆಂಡ್ (307,000 t (338,000 short tons)*)ಅದರ ಹಿಂದಿದೆ. ತಲಾವಾರು ಬೆಣ್ಣೆ ಸೇವನೆಯಲ್ಲಿ ಫ್ರಾನ್ಸ್ ಮೊದಲ ಸ್ಥಾನ ಪಡೆದಿದ್ದು, ಪ್ರತಿವರ್ಷ ತಲಾ ೮ ಕೇಜಿ ಬೆಣ್ಣೆಯನ್ನು ಸೇವಿಸಲಾಗುತ್ತದೆ.[೨೮]. ಪರಿಪೂರ್ಣ ಸೇವನೆಗೆ ಸಂಬಂಧಿಸಿದಂತೆ, ಜರ್ಮನಿಯು ಭಾರತದ ನಂತರ ಎರಡನೇ ಸ್ಥಾನ ಪಡೆದಿದೆ. ೧೯೯೭ರಲ್ಲಿ ಇದು578,000 metric tons (637,000 short tons) ರಷ್ಟು ಪ್ರಮಾಣದ ಬೆಣ್ಣೆಯನ್ನು ಬಳಸಿಕೊಂಡಿತು. ಅದನ್ನು ಅನುಸರಿಸಿ ಫ್ರಾನ್ಸ್,528,000 t (582,000 short tons)* ರಷ್ಯ514,000 t (567,000 short tons)* ಮತ್ತು ಅಮೆರಿಕ505,000 t (557,000 short tons)*ವಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯ ಮತ್ತು ಉಕ್ರೇನ್ ಗಮನಾರ್ಹ ಶೇಕಡಾವಾರು ಪ್ರಮಾಣದ ಬೆಣ್ಣೆಯನ್ನು ರಫ್ತು ಮಾಡುವ ಕೆಲವೇ ರಾಷ್ಟ್ರಗಳಲ್ಲಿ ಸೇರಿವೆ.[೨೯] ರಫ್ತು ಮತ್ತು ಆಮದು ಅಂಕಿಅಂಶಗಳು ಐರೋಪ್ಯ ಒಕ್ಕೂಟದ ಒಳಗಿರುವ ರಾಷ್ಟ್ರಗಳ ನಡುವೆ ವ್ಯಾಪಾರವನ್ನು ಒಳಗೊಂಡಿಲ್ಲ. ಕರಗಿಸಿದ ಬೆಣ್ಣೆಕೊಬ್ಬಿನ ಉತ್ಪನ್ನಗಳನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಅಸಾಮಾಂಜಸ್ಯವಿದೆ.(ಆದ್ದರಿಂದ ನ್ಯೂಜಿಲೆಂಡ್ ೧೯೯೭ರಲ್ಲಿ ಉತ್ಪಾದಿಸಿದ್ದಕ್ಕಿಂತ ಹೆಚ್ಚು ಬೆಣ್ಣೆಯನ್ನು ರಫ್ತು ಮಾಡಿದ್ದನ್ನು ತೋರಿಸಿರುವುದು ಏಕೆಂದು ವಿವರಿಸಲಾಗಿದೆ).</ref>

ವಿಶ್ವಾದ್ಯಂತ ಭಿನ್ನ ವಿಧದ ಬೆಣ್ಣೆಗಳು ಕಂಡುಬರುತ್ತವೆ. ಸ್ಮೆನ್ ಸಂಬಾರದ್ರವ್ಯದ ಮೊರೊಕ್ಕೋನ್ ಶೋಧಿಸಿದ ಬೆಣ್ಣೆ(ಕ್ಲಾರಿಫೈಡ್ ಬಟರ್)ಯನ್ನು ನೆಲದಲ್ಲಿ ಹೂಳಿ,ತಿಂಗಳುಗಳು ಅಥವಾ ವರ್ಷಗಳವರೆಗೆ ಇರಿಸಲಾಗುತ್ತದೆ. ಯಾಕ್ ಬೆಣ್ಣೆಯುಟಿಬೆಟ್‌ನಲ್ಲಿ ಮುಖ್ಯವಾಗಿದ್ದು, ಯಾಕ್ ಬೆಣ್ಣೆಯ ಜತೆ ಮಿಶ್ರಣಮಾಡಿದ ಬಾರ್ಲಿ ಹಿಟ್ಟು ಸಾಂಪಾ ವರ್ಷವಿಡೀ ಇಡಬಹುದಾದ ಆಹಾರವಾಗಿದೆ. ಬೆಣ್ಣೆ ಚಹಾವನ್ನು ಹಿಮಾಲಯದ ಟಿಬೆಟ್, ಭೂತಾನ್, ನೇಪಾಳ ಪ್ರದೇಶಗಳು ಮತ್ತು ಭಾರತದಲ್ಲಿ ಸೇವಿಸಲಾಗುತ್ತದೆ. ಇದು ಚಹಾವನ್ನು ಹೊಂದಿದ್ದು, ತೀವ್ರವಾಗಿ ಸುವಾಸನೆಭರಿತ ಕಮಟು ಯಾಕ್ ಬೆಣ್ಣೆ ಮತ್ತು ಉಪ್ಪಿನೊಂದಿಗೆ ಬಡಿಸಲಾಗುತ್ತದೆ. ಆಫ್ರಿಕಾ ಮತ್ತು ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ,ಬೆಣ್ಣೆಯನ್ನು ಸಾಂಪ್ರದಾಯಿಕವಾಗಿ ಕೆನೆಯ ಬದಲಾಗಿ ಹುಳಿಯ ಹಾಲು ಮೂಲಕ ತಯಾರಿಸಲಾಗುತ್ತದೆ. ಹುದುಗುವಿಕೆಯ ಹಾಲಿನಿಂದ ಬೆಣ್ಣೆ ಹರಳುಗಳನ್ನು ಉತ್ಪಾದಿಸಲು ಅನೇಕ ಗಂಟೆಗಳ ಕಡೆಯುವಿಕೆ ಬೇಕಾಗುತ್ತದೆ.[೩೦]

ದಾಸ್ತಾನು ಮತ್ತು ಅಡುಗೆ

ಬದಲಾಯಿಸಿ

ಸಾಮಾನ್ಯ ಬೆಣ್ಣೆಯು ಹರಡಬಹುದಾದ,ಶೀತಕಯಂತ್ರದ ಉಷ್ಣಾಂಶಕ್ಕಿಂತ ಹೆಚ್ಚಿನ ಸುಮಾರು ೧೫ °C (೬೦ °F)ಸಾಂದ್ರತೆಗೆ ಮೃದುವಾಗುತ್ತದೆ. ಬೆಣ್ಣೆಯ ವಿಭಾಗಗಳು ಅನೇಕ ಶೀತಕ ಯಂತ್ರದಲ್ಲಿ ಕಂಡುಬರುತ್ತವೆ. ಇದು ಬೆಚ್ಚನೆಯ ವಿಭಾಗದಲ್ಲಿ ಒಂದಾಗಿದ್ದರೂ,ಬೆಣ್ಣೆಯನ್ನು ಸ್ವಲ್ಪ ಗಟ್ಟಿಗೊಳಿಸುವ ಸ್ಥಿತಿಯಲ್ಲಿ ಇಡುತ್ತದೆ. ಇತ್ತೀಚಿನವರೆಗೆ,ಅನೇಕ ಶೀತಕ ಯಂತ್ರಗಳು ನ್ಯೂಜಿಲೆಂಡ್‌ನಲ್ಲಿ ಮಾರಾಟವಾಯಿತು. ಇದು ಬೆಣ್ಣೆ ಹವಾನಿಯಂತ್ರಕವನ್ನು ಒಳಗೊಂಡಿರುತ್ತದೆ. ಇದು ಉಳಿದ ಶೀತಕ ಯಂತ್ರಕ್ಕಿಂತ ವಿಭಾಗವನ್ನು ಬೆಚ್ಚಗಿರಿಸುತ್ತದೆ. ಕೋಣೆಯ ಉಷ್ಣಾಂಶಕ್ಕಿಂತ ತಂಪಾಗಿ ಸಣ್ಣನೆಯ ತಾಪಕವನ್ನು ಹೊಂದಿರುತ್ತದೆ.[೩೧] ಬಿಗಿಯಾಗಿ ಬೆಣ್ಣೆಯನ್ನು ಸುತ್ತಿಡುವುದರಿಂದ ಕಮಟು ವಾಸನೆಯನ್ನು ದೂರವಿರಿಸುತ್ತದೆ. ಬೆಣ್ಣೆಯನ್ನು ಗಾಳಿ ಮತ್ತು ಬೆಳಕಿಗೆ ಒಡ್ಡುವುದರಿಂದ ಕಮಟು ಹೆಚ್ಚುತ್ತದೆ ಮತ್ತು ಬಿಗಿ ಸುತ್ತುವಿಕೆಯು ಇತರ ವಾಸನೆಗಳು ಉಂಟಾಗದಂತೆ ತಡೆಯುತ್ತದೆ. ಬಿಗಿಯಾಗಿ ಸುತ್ತಿದ ಬೆಣ್ಣೆಯು ಶೀತಕಯಂತ್ರದ ಉಷ್ಣಾಂಶದಲ್ಲಿ ಅನೇಕ ತಿಂಗಳ ಬಡುಅವಧಿ(ಶೆಲ್ಪ್ ಲೈಫ್)ಹೊಂದಿರುತ್ತದೆ.[೩೨]

ಫ್ರೆಂಚ್ ಬೆಣ್ಣೆ ಪಾತ್ರೆಗಳು ಅಥವಾ ಅಕಾಡಿಯನ್ ಬೆಣ್ಣೆ ಪಾತ್ರೆಗಳು ಉದ್ದದ ಒಳಅಂಚಿನಿಂದ ಕೂಡಿದ ಮುಚ್ಚಳವನ್ನು ಒಳಗೊಂಡಿರುತ್ತದೆ. ಅದು ಸಣ್ಣ ಪ್ರಮಾಣದ ನೀರಿನೊಂದಿಗಿರುವ ಧಾರಕದಲ್ಲಿ ಕೂರುತ್ತದೆ. ಸಾಮಾನ್ಯವಾಗಿ ಪಾತ್ರೆಯನ್ನು ಮುಚ್ಚಿದಾಗ ಅದರ ಒಳಅಂಚು ಮುಚ್ಚುವಷ್ಟು ನೀರನ್ನು ಪಾತ್ರೆ ಹೊಂದಿರುತ್ತದೆ. ಬೆಣ್ಣೆಯನ್ನು ಮುಚ್ಚಳದೊಳಕ್ಕೆ ತುಂಬಬೇಕು. ನೀರು ಬೆಣ್ಣೆಯನ್ನು ತಾಜಾಸ್ಥಿತಿಯಲ್ಲಿ ಇರಿಸುವ ಮೊಹರಾಗಿ ಕಾರ್ಯನಿರ್ವಹಿಸುತ್ತದೆ. ಅಧಿಕ ಉಷ್ಣಾಂಶದಲ್ಲಿ ಬೆಣ್ಣೆಯು ಹೆಚ್ಚು ಬಿಸಿಯಾಗದಂತೆ ರಕ್ಷಿಸುತ್ತದೆ. ಇದರಿಂದ ಅನೇಕ ದಿನಗಳವರೆಗೆ ಕೆಡದಂತೆ ಬೆಣ್ಣೆಯನ್ನು ಸುರಕ್ಷಿತವಾಗಿ ಇಡಲು ಅವಕಾಶ ನೀಡುತ್ತದೆ.

ಬೆಣ್ಣೆಯು ಒಮ್ಮೆ ಮೃದುಗೊಂಡ ನಂತರ,ಸಂಬಾರಪದಾರ್ಥಗಳು,ಗಿಡಮೂಲಿಕೆಗಳು ಅಥವಾ ಇತರ ಸುವಾಸನೆ ಕಾರಕಗಳನ್ನು ಅದಕ್ಕೆ ಬೆರೆಸುವ ಮೂಲಕ ಸಂಯುಕ್ತ ಬೆಣ್ಣೆ ಅಥವಾ ಸಂಕೀರ್ಣ ಬೆಣ್ಣೆ ಯನ್ನು ಉತ್ಪಾದಿಸಲಾಗುತ್ತದೆ(ಕೆಲವು ಬಾರಿ ಕಂಪೋಸ್ಡ್ ಬೆಣ್ಣೆ ಎಂದು ಕರೆಯಲಾಗುತ್ತದೆ) ಸಂಯುಕ್ತ ಬೆಣ್ಣೆಗಳು ಹರಡುವಿಕೆಗಳಿಗೆ ಬಳಸಬಹುದು.ಅಥವಾ ತಂಪುಗೊಳಿಸಿ,ಕತ್ತರಿಸುವ ಮೂಲಕ ಬಿಸಿ ಆಹಾರದ ಮೇಲೆ ಸಾಸ್‌ನಲ್ಲಿ ಕರಗಿಸಬಹುದು. ಸಿಹಿ ಸಂಯುಕ್ತ ಬೆಣ್ಣೆಗಳನ್ನು ಗಟ್ಟಿ ಸಾಸ್ ಮುಂತಾದ ಡೆಸರ್ಟ್‌ (ಸಿಹಿ ಆಹಾರಪದಾರ್ಥ)ಗಳೊಂದಿಗೆ ಬಡಿಸಬಹುದು. ಆಗಾಗ್ಗೆ ಮದ್ಯಸಾರಗಳಿಂದ ಸುವಾಸನೆ ನೀಡಲಾಗುತ್ತದೆ.

 
ಬಿಳಿ ಆಸ್ಪರಾಗಾಸ್ ಮತ್ತು ಆಲೂಗಡ್ಡೆಗಳ ಮೇಲೆ ಬಡಿಸುತ್ತಿರುವ ಹಾಲೆಂಡಿನ ಸಾಸ್

ಕರಗುವ ಬೆಣ್ಣೆಯು ಸಾಸ್‌ಗಳ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೆಚ್ಚಾಗಿ ಫ್ರೆಂಚ್ ಕ್ಯುಸೈನ್(ಫ್ರೆಂಚ್ ಆಹಾರ ತಯಾರಿಕೆ ಶೈಲಿ)ಯಲ್ಲಿ ಕಂಡುಬರುತ್ತದೆ. ಬರ್ ನೊಯ್ಸೆಟೆ (ಹಸಿರುಕಂದು ಬೆಣ್ಣೆ) ಮತ್ತು ಬ್ಯೂರೆ ನೋಯಿರ್ (ಕಪ್ಪು ಬೆಣ್ಣೆ) ಕರಗಿದ ಬೆಣ್ಣೆಯ ಸಾಸ್‌ಗಳಾಗಿವೆ. ಹಾಲಿನ ಘನವಸ್ತುಗಳು ಮತ್ತು ಸಕ್ಕರೆಗಳು ಚಿನ್ನದ ಬಣ್ಣ ಅಥವಾ ಗಾಢ ಕಂದುಬಣ್ಣಕ್ಕೆ ತಿರುಗುವ ತನಕ ಕಾಯಿಸಲಾಗುತ್ತದೆ; ಅವುಗಳಿಗೆ ಸಾಮಾನ್ಯವಾಗಿ ವಿನೆಗರ್ ಅಥವಾ ಲಿಂಬೆ ರಸ ಬೆರೆಸುವ ಮೂಲಕ ಅಂತಿಮ ಹಂತಕ್ಕೆ ತರಲಾಗುತ್ತದೆ. ಹೊಲಾಂಡೈಸ್ ಮತ್ತು ಬಿಯರ್ನೈಸ್ ಸಾಸ್‌ಗಳು ಮೊಟ್ಟೆಯ ಲೋಳೆ ಮತ್ತು ಕರಗಿದ ಬೆಣ್ಣೆಯ ಮಿಶ್ರಣವಾಗಿದ್ದು, ಇದನ್ನು ತೈಲದ ಬದಲು ಬೆಣ್ಣೆಯಿಂದ ತಯಾರಿಸಿದ ಸುಗಂಧದ್ರವ್ಯ ಮಾಯೋನೈಸ್‌ಗಳಲ್ಲಿ ಬಳಸಲಾಗುತ್ತದೆ. ಹೊಲೆಂಡೈಸ್ ಮತ್ತು ಬಿಯರ್ನೈಸ್ ಸಾಸ್‌ಗಳನ್ನು ಮೊಟ್ಟೆಯ ಲೋಳೆಗಳಲ್ಲಿ ಶಕ್ತಿಶಾಲಿ ಎಮಲ್ಸಿಕಾರಕಗಳಿಂದ ಸ್ಥಿರಗೊಳಿಸಲಾಗುತ್ತದೆ.ಆದರೆ ಬೆಣ್ಣೆ ಸ್ವತಃ ಸಾಕಷ್ಟು ಎಮಲ್ಸಿಕಾರಕಗಳನ್ನು ಹೊಂದಿದೆ. ಇವು ಬಹುತೇಕ ದಪ್ಪ ಗೋಳಕ ಪೊರೆಗಳ ಅವಶೇಷಗಳಾಗಿದ್ದು,ಸ್ಥಿರ ಮಿಶ್ರಣವನ್ನು ಸ್ವತಃ ಉಂಟುಮಾಡುತ್ತದೆ. ಬರ್ ಬ್ಲಾಂಕ್ (ಬಿಳಿ ಬೆಣ್ಣೆ)ಯನ್ನು ಬೆಣ್ಣೆಯನ್ನು ಕಡಿಮೆ ಪ್ರಮಾಣದ ವಿನೆಗರ್ ಅಥವಾ ವೈನ್‌ನೊಂದಿಗೆ ಬೆರೆಸಿ ಕಾಯಿಸುವ ಮೂಲಕ ತಯಾರಿಸಲಾಗುತ್ತದೆ. ಇದರಿಂದ ಗಟ್ಟಿ ಕೆನೆಯ ವಿನ್ಯಾಸದ ಮಿಶ್ರಣ ರಚನೆಯಾಗುತ್ತದೆ. ಬರ್ ಮಾಂಟೆ (ಸಿದ್ಧಪಡಿಸಿದ ಬೆಣ್ಣೆ)ಯು ಕರಗಿದ್ದರೂ ಕೂಡ ಎಮಲ್ಸಿಕಾರಕ ಬೆಣ್ಣೆಯಾಗಿರುತ್ತದೆ. ಬೆಣ್ಣೆಯನ್ನು ಸಾಸ್‌ನೊಂದಿಗೆ ಬೆರೆಸುವ ಪದ್ಧತಿಯಿಂದ ಈ ಹೆಸರು ಬಂದಿದೆ. ಅಡುಗೆಯ ಕೊನೆಯಲ್ಲಿ ತಣ್ಣಗಿನ ಬೆಣ್ಣೆಯನ್ನು ಯಾವುದೇ ನೀರಿನ ಮೂಲದ ಸಾಸ್‌ನಲ್ಲಿ ಕಾಯಿಸುವ ಮೂಲಕ ಸಾಸ್ ದಪ್ಪನಾಗುತ್ತದೆ ಮತ್ತು ಹೊಳಪು ಮತ್ತು ಬೆಣ್ಣೆಯ ರುಚಿಯನ್ನು ನೀಡುತ್ತದೆ.[೩೩]

ಪೋಲೆಂಡ್‌ನಲ್ಲಿ ಬಟರ್ ಲ್ಯಾಂಬ್(ಬಾರನೆಕ್ ವೈಲ್‌ಕಾನೋನ್ಸಿ )ಯು ಅನೇಕ ಪೋಲಿಷ್ ಕ್ಯಾಥೋಲಿಕ್ಕರಿಗೆ ಈಸ್ಟರ್ ಭೋಜನಕ್ಕೆ ಸಾಂಪ್ರದಾಯಿಕ ಸೇರ್ಪಡೆಯಾಗಿದೆ ಬೆಣ್ಣೆಯನ್ನು ಕೈಯಿಂದ ಅಥವಾ ಕುರಿಮರಿ ಆಕಾರದ ಅಚ್ಚಿನಿಂದ ಕುರಿಮರಿಯಂತೆ ಆಕಾರ ನೀಡಲಾಗುತ್ತದೆ.

sautéing (ಕೊಬ್ಬಿನ ಪದಾರ್ಥದೊಂದಿಗೆ ಆಹಾರ ಬೇಯಿಸುವುದು ಮತ್ತು ಹುರಿಯುವುದು ಇವಕ್ಕೆ ಬೆಣ್ಣೆಯನ್ನು ಬಳಸಲಾಗುತ್ತದೆ. ಇದರ ಹಾಲು ಗಾಢ ಕಂದುಬಣ್ಣಕ್ಕೆ ತಿರುಗಿ ೧೫೦ °C (೨೫೦ °F)ಕ್ಕಿಂತ ಹೆಚ್ಚು ಉರಿಯುತ್ತದೆ. ಅನೇಕ ಬಳಕೆಗಳಿಗೆ ಇದು ಕಡಿಮೆ ಉಷ್ಣಾಂಶವಾಗಿದೆ. ಬೆಣ್ಣೆಯ ಹೊಗೆಬರುವ ಹಂತವು ಸರಿಸುಮಾರು ೨೦೦ °C (೪೦೦ °F)ವಾಗಿದ್ದು, ಕರಗಿಸಿದ ಬೆಣ್ಣೆ ಅಥವಾ ತುಪ್ಪವು ಹುರಿಯಲು ಸೂಕ್ತವಾಗಿರುತ್ತದೆ.[] ತುಪ್ಪವು ಭಾರತದಲ್ಲಿ ಸದಾ ಹುರಿಯುವ ಪದಾರ್ಥವಾಗಿದ್ದು, ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರಣಗಳಿಗಾಗಿ ಇತರ ಪ್ರಾಣಿಜನ್ಯ ಕೊಬ್ಬನ್ನು ಅನೇಕ ಮಂದಿ ತಪ್ಪಿಸುತ್ತಾರೆ.

 
ಬ್ರೌನಿಯನ್ನು ತಯಾರಿಸಲು ಕರಗಿದ ಬೆಣ್ಣೆಯನ್ನು ಚಾಕೋಲೇಟ್ ಜತೆ ಮಿಶ್ರಣ ಮಾಡುತ್ತಿರುವುದು.

ಬೆಣ್ಣೆಯು ಬೇಯಿಸುವ ಅನೇಕ ಪಾತ್ರಗಳನ್ನು ಪೂರೈಸುತ್ತದೆ. ಇತರ ಘನ ಕೊಬ್ಬುಗಳಾದ ಹಂದಿಮಾಂಸದ ಕೊಬ್ಬು, ದನ ಅಥವಾ ಕುರಿಮಾಂಸದ ಕೊಬ್ಬು ಅಥವಾ ಅರೆಘನಕೊಬ್ಬನ್ನು ಬಳಸಿದ ರೀತಿಯಲ್ಲೇ ಇದನ್ನು ಬಳಸಲಾಗುತ್ತದೆ.ಸಿಹಿ ಬೇಯಿಸಿದ ಪದಾರ್ಥಗಳಿಗೆ ಹೆಚ್ಚು ಪೂರಕವಾದ ಸುವಾಸನೆಯನ್ನು ಇದು ನೀಡುತ್ತದೆ. ಅನೇಕ ಕೂಕಿ ಕಣಕಗಳು ಹಾಗೂ ಕೆಲವು ಕೇಕ್ ಅರೆದ್ರವಮಿಶ್ರಣವು ಬೆಣ್ಣೆ ಮತ್ತು ಸಕ್ಕರೆ ಲೇಪನದಿಂದ ಆಂಶಿಕವಾಗಿ ಹುಳಿಯಾಗುತ್ತದೆ. ಇದು ಬೆಣ್ಣೆಯೊಳಗೆ ಗಾಳಿಯ ಗುಳ್ಳೆಗಳನ್ನು ಸೇರಿಸುತ್ತದೆ. ಬೇಯಿಸುವುದರಿಂದ ಬೆಣ್ಣೆಯಲ್ಲಿರುವ ಸಣ್ಣ ಗುಳ್ಳೆಗಳು ಶಾಖಕ್ಕೆ ಹಿಗ್ಗಿ ಕೂಕಿ ಅಥವಾ ಕೇಕ್‌ನಲ್ಲಿ ಗಾಳಿತುಂಬುತ್ತದೆ. ಕೆಲವು ಶಾರ್ಟ್‌ಬ್ರೆಡ್ ರೀತಿಯ ಕೂಕಿಗಳಿಗೆ ಬೆಣ್ಣೆಯಲ್ಲಿರುವ ನೀರಿನಂಶ ಹೊರತುಪಡಿಸಿ ಆರ್ದ್ರತೆಯ ಯಾವುದೇ ಮೂಲ ಇರುವುದಿಲ್ಲ. ಪೈ ಹಿಟ್ಟು ಮುಂತಾದ ಅಟ್ಟಕಣಕವು ಹಿಟ್ಟಿಗೆ ಘನಕೊಬ್ಬನ್ನು ಸೇರಿಸುತ್ತದೆ. ಹಿಟ್ಟನ್ನು ಲಟ್ಟಿಸಿದಾಗ,ಕೊಬ್ಬಿನ ಮಟ್ಟಸ ಪದರಗಳಾಗುತ್ತವೆ. ಬೇಯಿಸುವ ಸಂದರ್ಭದಲ್ಲಿ,ಕೊಬ್ಬು ಕರಗಿ ಪದರದ ರಚನೆಯನ್ನು ಉಂಟುಮಾಡುತ್ತದೆ. ಇಂತಹ ಹಿಟ್ಟಿನಲ್ಲಿ ಬೆಣ್ಣೆಯು ಸುವಾಸನೆಯಿಂದಾಗಿ ಸಾಮಾನ್ಯ ಆಯ್ಕೆಯಾಗಿದೆ. ಆದರೆ ಅದರ ಕಡಿಮೆ ಕರಗುವ ಬಿಂದುವಿನಿಂದಾಗಿ ಹಿಟ್ಟಿನ ಭಕ್ಷ್ಯಗಳನ್ನು ಮಾಡುವ ಕೊಬ್ಬಿಗಿಂತ ಇದು ಹೆಚ್ಚು ಕಷ್ಟಕರವಾಗಿದೆ. ಬೆಣ್ಣೆಯ ಹಿಟ್ಟಿನೊಂದಿಗೆ ಕೆಲಸ ಮಾಡುವ ಅಟ್ಟಕಣಕ ತಯಾರಕರು ಸಾಮಾನ್ಯವಾಗಿ ಅವರ ಎಲ್ಲ ಪದಾರ್ಥಗಳನ್ನು ಮತ್ತು ಪಾತ್ರೆಗಳನ್ನು ತಣ್ಣಗೆ ಮಾಡುತ್ತಾರೆ.

ಬೆಣ್ಣೆಯು ಕೆಲವು ಸಂಸ್ಕೃತಿಗಳಿಗೆ ನಿರ್ದಿಷ್ಟವಾದ ಅಡುಗೆಮನೆಯಿಂದ ಹೊರಗಿನ ಸಾಂಪ್ರದಾಯಿಕ ಬಳಕೆಗಳಿಂದ ಕೂಡಿದೆ. ಉದಾಹರಣೆಗೆ, ಉತ್ತರ ಅಮೆರಿಕದಲ್ಲಿ ಏಪ್ರಿಲ್ ಫೂಲ್ ದಿನದಂದು ಬಾಗಿಲಿನ ಹಿಡಿಗೆ ಬೆಣ್ಣೆಯನ್ನು ಸವರುವುದು ಸಾಮಾನ್ಯ ಕೀಟಲೆಯಾಗಿತ್ತು.

ಆರೋಗ್ಯ ಮತ್ತು ಪೌಷ್ಠಿಕತೆ

ಬದಲಾಯಿಸಿ
Butter, unsalted
ಪೌಷ್ಟಿಕಾಂಶದ ಮೌಲ್ಯ 100 g (3.5 oz)
ಶಕ್ತಿ2,999 kJ (717 kcal)
0 g
81 g
ಪರ್ಯಾಪ್ತ51 g
ಏಕಾಪರ್ಯಾಪ್ತ21 g
ಬಹು ಅಪರ್ಯಾಪ್ತ3 g
1 g
ವಿಟಮಿನ್‌(ಅನ್ನಾಂಗ)ಗಳುಪ್ರಮಾಣ %DV
ಎ ಅನ್ನಾಂಗ
86%
684 μg
Vitamin D
10%
60 IU
ಇ ಅನ್ನಾಂಗ
15%
2.32 mg
ಇತರೆಪ್ರಮಾಣ
Cholesterol215 mg

Fat percentage can vary.
See also Types of butter.
  • ಘಟಕ
  • μg = ಮೈಕ್ರೋಗ್ರಾಮ್ • mg = ಮಿಲಿಗ್ರಾಮ್
  • IU = ಅಂತರರಾಷ್ಟ್ರೀಯ ಮಾನದಂಡ
Percentages are roughly approximated using US recommendations for adults.
Source: USDA FoodData Central

USDAಅಂಕಿಅಂಶಗಳ ಪ್ರಕಾರ, ಒಂದು ಚಮಚ ಬೆಣ್ಣೆ14 grams (0.5 oz)*420 kilojoules (100 kcal) ಹೊಂದಿದೆ. ಎಲ್ಲವು ಕೊಬ್ಬಿನಿಂದ, 11 grams (0.4 oz)ರಷ್ಟು ಕೊಬ್ಬು, ಅದರಲ್ಲಿ7 grams (0.25 oz) ರಷ್ಟು ಸ್ಯಾಚ್ಯುರೇಟೆಡ್ ಕೊಬ್ಬು ಮತ್ತು 30 milligrams (0.46 gr)ರಷ್ಟು ಕೊಲೆಸ್ಟರಾಲ್.[೩೪]

ಬೆಣ್ಣೆ ಬಹುತೇಕ ಸ್ಯಾಚ್ಯುರೇಟೆಡ್ ಕೊಬ್ಬನ್ನು ಹೊಂದಿದ್ದು, ಕೊಲೆಸ್ಟರಾಲ್ ಗಮನಾರ್ಹ ಮೂಲವಾಗಿದೆ. ಈ ಕಾರಣಗಳಿಂದಾಗಿ ಕೆಲವರು ಬೆಣ್ಣೆಯನ್ನು ಆರೋಗ್ಯ ಸಮಸ್ಯೆಗಳಿಗೆ ಕೊಡುಗೆ ನೀಡುತ್ತದೆಂದು ಪರಿಗಣಿಸುತ್ತಾರೆ. ವಿಶೇಷವಾಗಿ ಹೃದಯಬೇನೆ. ಮಾರ್ಗರೀನ್‌ನನ್ನು ಪರ್ಯಾಯವಾಗಿ ಶಿಫಾರಸು ಮಾಡಲಾಗಿದ್ದು,ಇದು ಸ್ಯಾಚ್ಯುರೇಟೆಡ್ ರಹಿತ ಕೊಬ್ಬುನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕಡಿಮೆ ಕೊಲೆಸ್ಟರಾಲ್ ಅಥವಾ ಕೊಲೆಸ್ಟರಾಲ್‌ರಹಿತವಾಗಿರುತ್ತದೆ. ಆಂಶಿಕ ಜಲಜನಕೀಕರಿಸಿದ ತೈಲಗಳು ಹೊಂದಿರುವ ಟ್ರಾನ್ಸ್ ಫಾಟ್(ಸಾಚ್ಯುರೇಟೆಡ್ ರಹಿತ ಕೊಬ್ಬು) ಗಮನಾರ್ಹವಾಗಿ LDLಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.[೩೫] ಆಗಿನಿಂದ ಟ್ರಾನ್ಸ್ ಫ್ಯಾಟ್ ಮುಕ್ತ ಮಾರ್ಗರೀನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸಾವಯವ ಬೆಣ್ಣೆ ಸೇವನೆಯ ಪ್ರತಿಪಾದಕರಾದ ಪೌಷ್ಠಿಕತಜ್ಞೆ ಮೇರಿ ಎನಿಗ್ ಹೇಳಿಕೆ ಪ್ರಕಾರ, ಬೆಣ್ಣೆಯು ಪೌಷ್ಠಿಕವಾದ್ದರಿಂದ ಸಣ್ಣ ಮತ್ತು ಮಧ್ಯಸರಣಿಯ ನೆಣಾಮ್ಲದಿಂದ ಸಮೃದ್ಧವಾಗಿರುವುದರಿಂದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ರೋಗವನ್ನು ನಿವಾರಿಸುತ್ತದೆ.[೩೬]

ಬೆಣ್ಣೆಯು ಲ್ಯಾಕ್ಟೋಸ್ ಅಂಶಗಳನ್ನು ಮಾತ್ರ ಹೊಂದಿದೆ. ಆದ್ದರಿಂದ ಬೆಣ್ಣೆಯ ಸಾಧಾರಣ ಸೇವನೆಯಿಂದ ಲ್ಯಾಕ್ಟೋಸ್ ಸಹನೀಯರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.[೩೭] ಹಾಲಿನ ಅಲರ್ಜಿಗಳುಇರುವ ಜನರು ಬೆಣ್ಣೆಯ ಸೇವನೆಯನ್ನು ತ್ಯಜಿಸಬೇಕು, ಏಕೆಂದರೆ ಪ್ರತಿಕ್ರಿಯೆಗಳನ್ನು ನೀಡುವಂತಹ ಅಲರ್ಜಿಕಾರಕ ಪ್ರೋಟೀನ್‌ಗಳನ್ನು ಇದು ಹೊಂದಿದೆ.[೩೮]

ಆಹಾರಕ್ರಮದಲ್ಲಿ ಬೆಣ್ಣೆಯು ಸಂತೃಪ್ತಿ ಒದಗಿಸುವ ಮೂಲಕ ಉಪಯುಕ್ತ ಪಾತ್ರವನ್ನು ವಹಿಸುತ್ತದೆ. ತರಕಾರಿಗಳು ಮುಂತಾದ ಕಡಿಮೆ ಕೊಬ್ಬಿನಂಶದ ಆಹಾರಗಳಲ್ಲಿ ಸ್ವಲ್ಪ ಪ್ರಮಾಣ ಸೇರಿಸುವುದರಿಂದ ಹಸಿವಿನ ಭಾವನೆಗಳನ್ನು ನಿವಾರಿಸುತ್ತದೆ.[೩೬]

Comparative properties of common cooking fats (per 100 g)
Total fat Saturated fat Monounsaturated fat Polyunsaturated fat Smoke point
Sunflower oil 100 g 11 g (11%) 20 g (84 g in high oleic variety[೩೯]) 69 g (4 g in high oleic variety[೩೯]) 225 °C (437 °F)[೪೦]
Soybean oil 100 g 16 g (16%) 23 g 58 g 257 °C (495 °F)[೪೦]
Canola oil 100 g 7 g (7%) 63 g 28 g 205 °C (401 °F)[೩೯][೪೧]
Olive oil 100 g 14 g (14%) 73 g 11 g 190 °C (374 °F)[೪೦]
Corn oil 100 g 15 g (15%) 30 g 55 g 230 °C (446 °F)[೪೦]
Peanut oil 100 g 17 g (17%) 46 g 32 g 225 °C (437 °F)[೪೦]
Rice bran oil 100 g 25 g (25%) 38 g 37 g 250 °C (482 °F)[೪೨]
Vegetable shortening (hydrogenated) 71 g 23 g (34%) 8 g (11%) 37 g (52%) 165 °C (329 °F)[೪೦]
Lard 100 g 39 g (39%) 45 g 11 g 190 °C (374 °F)[೪೦]
Suet 94 g 52 g (55%) 32 g (34%) 3 g (3%) 200 °C (392 °F)
Butter 81 g 51 g (63%) 21 g (26%) 3 g (4%) 150 °C (302 °F)[೪೦]
Coconut oil 100 g 86 g (86%) 6 g (6%) 2 g (2%) 177 °C (351 °F)

ಟಿಪ್ಪಣಿಗಳು

ಬದಲಾಯಿಸಿ
  1. Elert, Glenn. "Density". The Physics Hypertextbook. Archived from the original on 2009-09-03. Retrieved 2010-09-30.
  2. ಡೌಗ್ಲಾಸ್ ಹಾರ್ಪರ್ಸ್ ಆನ್‌ಲೈನ್ ಎಟಿಮೋಲಜಿ ಡಿಕ್ಷನರಿ ಎಂಟ್ರಿ ಫಾರ್ ಬಟರ್ . ೨೦೦೫ರ ನವೆಂಬರ್ ೨೭ರಂದು ಮರುಸಂಪಾದಿಸಲಾಗಿದೆ.
  3. ಮ್ಯಾಕ್‌ಗೀ, ಪುಟ ೩೫
  4. ಮ್ಯಾಕ್‌ಗೀ, ಪುಟ ೩೩
  5. ಮ್ಯಾಕ್‌ಗೀ, ಪುಟ ೩೪
  6. ೬.೦ ೬.೧ ೬.೨ ಮ್ಯಾಕ್‌ಗೀ, ಪುಟ ೩೭
  7. ಆರ್ಟಿಕಲ್ಸ್ ಆನ್ ಸ್ವೀಟ್ ಕ್ರೀಮ್, ವೇ ಕ್ರೀಮ್, ಎಂಡ್ ದಿ ಬಟರ್ಸ್ ದೆ ಪ್ರೊಡ್ಯೂಸ್
  8. ಡೇಟ್ಸ್ ಫ್ರಂ ಮೆಕ್‌ಗೀ ಪು. ೧೦.
  9. ೯.೦ ೯.೧ ಡಾಲ್ಬಿ ಪು. ೬೫.
  10. ಬೋಸ್ಟೋಕ್ ಎಂಡ್ ರೈಲಿ ಟ್ರಾನ್ಸ್‌ಲೇಷನ್ ಬುರ್ 28, ಚಾಪ್ಟರ್ 35.
  11. ಗ್ಯಾಲನ್ ಡಿ ಅಲಿಮೆಂಟ್. ಫ್ಯಾಕಲ್ಟ್.
  12. ೧೨.೦ ೧೨.೧ ವೆಬ್ ಎಕ್ಸಿಬಿಟ್ಸ್: ಬಟರ್ ಏನ್ಸೀಂಟ್ ಫಿರ್ಕಿನ್ಸ್ Archived 2005-10-21 ವೇಬ್ಯಾಕ್ ಮೆಷಿನ್ ನಲ್ಲಿ..
  13. ಮೆಕ್‌ಗೀ ಪು. ೩೩, "ಏನ್ಸೀಂಟ್, ಒನ್ಸ್ ಅನ್‌ಫ್ಯಾಷನೇಬಲ್".
  14. Soyer, Alexis (1977) [1853]. The Pantropheon or a History of Food and its Preparation in Ancient Times. Wisbech, Cambs.: Paddington Press. p. 172. ISBN 0-448-22976-5.
  15. ಎಡ್ವಾರ್ಡ್ಸ್, ಎವೆರೆಟ್ E. "ಯುರೋಪ್ಸ್ ಕಾಂಟ್ರಿಬ್ಯೂಷನ್ ಟು ದಿ ಅಮೆರಿಕನ್ ಡೇರಿ ಇಂಡಸ್ಟ್ರಿ". ದಿ ಜರ್ನಲ್ ಆಫ್ ಎಕಾನಾಮಿಕ್ ಹಿಸ್ಟರಿ , ಸಂಪುಟ ೯, ೧೯೪೯. ೭೨-೮೪.
  16. Hunziker, O F (1920). The Butter Industry, Prepared for Factory, School and Laboratory. LaGrange, IL: author.
  17. Hunziker, O F (1 November 1917). "Tallowy Butter—its Causes and Prevention" (PDF). Journal of Dairy Science. 1 (4). American Dairy Science Association: 320–346. doi:10.3168/jds.S0022-0302(17)94386-3. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  18. Hunziker, O F (1 March 1920). "Mottles in Butter—Their Causes and Prevention" (PDF). Journal of Dairy Science. 3 (2). American Dairy Science Association: 77–106. doi:10.3168/jds.S0022-0302(20)94253-4. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  19. Hunziker, O F (1 September 1929). "Studies on Butter Salts" (PDF). Journal of Dairy Science. 11 (5). American Dairy Science Association: 333–351. doi:10.3168/jds.S0022-0302(28)93647-4. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  20. Hunziker, O F (1 March 1929). "Metals in Dairy Equipment. Metallic Corrosion in Milk Products and its Effect on Flavor" (PDF). Journal of Dairy Science. 12 (2). American Dairy Science Association: 140–181. doi:10.3168/jds.S0022-0302(29)93566-9. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  21. Hunziker, O F (1 May 1929). "Metals in Dairy Equipment: Corrosion Caused by Washing Powders, Chemical Sterilizers, and Refrigerating Brines" (PDF). Journal of Dairy Science. 12 (3). American Dairy Science Association: 252–284. doi:10.3168/jds.S0022-0302(29)93575-X. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  22. Hunziker, O F (1 July 1931). "Method for Hydrogen Ion Determination of Butter" (PDF). Journal of Dairy Science. 14 (4). American Dairy Science Association: 347–37. doi:10.3168/jds.S0022-0302(31)93478-4. Retrieved 2008-06-28. {{cite journal}}: Unknown parameter |coauthors= ignored (|author= suggested) (help)
  23. ವೆಬ್ ಎಕ್ಸಿಬಿಟ್ಸ್: ಬಟರ್ ಈಟಿಂಗ್ ಲೆಸ್ ಬಟರ್, ಎಂಡ್ ಮೋರ್ ಫ್ಯಾಟ್ Archived 2005-12-14 ವೇಬ್ಯಾಕ್ ಮೆಷಿನ್ ನಲ್ಲಿ..
  24. ಉದಾಹರಣೆಗೆ ನೋಡಿ ದಿಸ್ ಚಾರ್ಟ್ Archived 2005-09-08 ವೇಬ್ಯಾಕ್ ಮೆಷಿನ್ ನಲ್ಲಿ. ಕಂಟ್ರೀಸ್ ಆಫ್ ಯುರೋಪ್‌ನ ಇಂಟರ್‌ನ್ಯಾಷನಲ್ ಮಾರ್ಗರೀನ್ ಅಸೋಸಿಯೇಷನ್‌ನಿಂದ ಸ್ಟಾಟಿಟಿಕ್ಸ್ Archived 2005-09-30 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೫ ಡಿಸೆಂಬರ್ ೪ರಂದು ಮರುಸಂಪಾದಿಸಲಾಗಿದೆ.
  25. Milton E. Parker (1948). "Princely Packets of Golden Health (A History of Butter Packaging)" (PDF). Archived from the original (PDF) on 2006-10-06. Retrieved 2006-10-15. {{cite journal}}: Cite journal requires |journal= (help)
  26. ೨೬.೦ ೨೬.೧ "A Better Stick of Butter?". Cook's Illustrated (72): 3. 2005.
  27. ಅನೇಕ ರಾಷ್ಟ್ರಗಳು ಸ್ಥಳೀಯವಾಗಿ ಬೆಣ್ಣೆಯ ದೊಡ್ಡ ಪ್ರಮಾಣವನ್ನು ಉತ್ಪಾದಿಸಿ ಸೇವಿಸುತ್ತವೆ.
  28. http://envoye-special.france೨.fr/index-fr.php?page=reportage&id_rubrique=೧೪೯೬[permanent dead link]
  29. ಸ್ಟಾಟಿಸ್ಟಿಕ್ಸ್ ಫ್ರಂ USDAಫಾರೀನ್ ಅಗ್ರಿಕಲ್ಚರಲ್ ಸರ್ವೀಸ್ (೧೯೯೯). ಡೇರಿ: ವರ್ಡ್ ಮಾರ್ಕೆಟ್ಸ್ ಎಂಡ್ ಟ್ರೇಡ್ Archived 2005-09-23 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೯ ಡಿಸೆಂಬರ್‌ ೧೦ರಂದು ಮರುಸಂಪಾದಿಸಲಾಗಿದೆ .
  30. ಕ್ರಾಫೋರ್ಡ್ et al. , part B, section III, ch. ೧: ಬೆಣ್ಣೆ. ೨೦೦೫ ನವೆಂಬರ್ ೨೮ರ ರಂದು ಮರುಸಂಪಾದಿಸಲಾಗಿದೆ.
  31. ಬ್ರಿಂಗ್ ಬ್ಯಾಕ್ ಬಟರ್ ಕಂಡೀಷನರ್ಸ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೫ ನವೆಂಬರ್ ೨೭ರಂದು ಮರುಸಂಪಾದಿಸಲಾಗಿದೆ. ಇಂಧನ ಸಂರಕ್ಷಣೆ ಕಾರಣಗಳಿಗಾಗಿ ಮುಖ್ಯಲಕ್ಷಣವನ್ನು ಹಂತಹಂತವಾಗಿ ತೆಗೆಯಲಾಗಿದೆ.
  32. joyofbaking.com ಪ್ರಕಾರ, ಉಪ್ಪುರಹಿತ ಬೆಣ್ಣೆ ಮೂರು ತಿಂಗಳವರೆಗೆ ಕೆಡದಂತೆ ಉಳಿಯುತ್ತದೆ ಮತ್ತು ಉಪ್ಪುಸಹಿತ ಬೆಣ್ಣೆ ಐದು ತಿಂಗಳವರೆಗೆ ಉಳಿಯುತ್ತದೆ.
  33. ಸಾಸ್ ಮಾಹಿತಿ McGee, pp. ೩೬ (ಬರ್ ನಾಯ್‌ಸೆಟ್ಟೆ ಮತ್ತು ಬರ್ ನಾಯರ್ ), ೬೩೨ (ಬರ್ ಬ್ಲಾಂಕ್ ಮತ್ತು ಬರ್ ಮಾಂಟೆ ), ಮತ್ತು ೬೩೫–೬೩೬ (ಹೊಲೆಂಡೈಸ್ ಮತ್ತು ಬರ್‌‌ನಾಯಿಸ್).
  34. ದತ್ತಾಂಶ nutritiondata.com ನಿಂದ. ೨೦೦೫ನವೆಂಬರ್ ೨೭ರಂದು ಮರುಸಂಪಾದಿಸಲಾಗಿದೆ.
  35. Q&A about ಸ್ಯಾಚ್ಯುರೇಟೆಡ್ ಕೊಬ್ಬು, ಟ್ರಾನ್ಸ್ ಫ್ಯಾಟ್, ಮತ್ತು ಕೊಲೆಸ್ಟರಾಲ್ (U.S.)ನಿಂದ. ನ್ಯಾಷನಲ್ ಹಾರ್ಟ್, ಲಂಗ್ ಎಂಡ್ ಬ್ಲಡ್ ಇನ್ಸ್‌ಟಿಟ್ಯೂಟ್ (೨೦೦೫). ೨೦೦೬ಏಪ್ರಿಲ್ ೧೫ರಂದು ಮರುಸಂಪಾದಿಸಲಾಯಿತು.
  36. ೩೬.೦ ೩೬.೧ "Why Butter Is Better". Does butter cause disease? On the contrary, butter protects us against many diseases. The Weston A. Price Foundation. Archived from the original on 2009-09-04. Retrieved 2009-10-23. "ವೈ ಬಟರ್ ಈಸ್ ಬಟರ್" ಹೆಲ್ತ್ ಫ್ರೀಡಂ ನ್ಯೂಸ್‌ನಲ್ಲಿ ಮೊದಲಿಗೆ ಕಾಣಿಸಿಕೊಂಡಿದೆ. ೧೯೯೯ ಸ್ಯಾಲಿ ಫ್ಯಾಲನ್ ಮತ್ತು ಮ್ಯಾರಿ G. ಎನಿಗ್, PhD.
  37. ಅಂಕಿಅಂಶ here Archived 2005-12-24 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ, ಒಂದು ಟೀಸ್ಪೂನ್ ಬೆಣ್ಣೆಯು ೦.೦೩ ಗ್ರಾಂ ಲ್ಯಾಕ್ಟೋಸ್ ಹೊಂದಿದ್ದರೆ; ಆ ಮೊತ್ತದ ೪೦೦ ಪಟ್ಟು ಲ್ಯಾಕ್ಟೋಸ್‌ನ್ನು ಒಂದು ಕಪ್ ಹಾಲು ಹೊಂದಿದೆ.
  38. ಅಲರ್ಜಿ ಸೊಸೈಟಿ ಆಫ್ ಸೌಟ್ ಆಫ್ರಿಕಾ ಮಿಲ್ಕ್ ಅಲರ್ಜಿ & ಇಂಟಾಲರೆನ್ಸ್ Archived 2005-11-26 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೫ರ ನವೆಂಬರ್ ೨೭ರಂದು ಮರುಸಂಪಾದಿಸಲಾಗಿದೆ.
  39. ೩೯.೦ ೩೯.೧ ೩೯.೨ "Nutrient database, Release 25". United States Department of Agriculture.
  40. ೪೦.೦ ೪೦.೧ ೪೦.೨ ೪೦.೩ ೪೦.೪ ೪೦.೫ ೪೦.೬ ೪೦.೭ The Culinary Institute of America (2011). The Professional Chef. New York: Wiley. ISBN 0-470-42135-5.
  41. doi: 10.1016/j.foodchem.2009.09.070
    This citation will be automatically completed in the next few minutes. You can jump the queue or expand by hand
  42. [[೧]]

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Vegetarianism

"https://kn.wikipedia.org/w/index.php?title=ಬೆಣ್ಣೆ&oldid=1240497" ಇಂದ ಪಡೆಯಲ್ಪಟ್ಟಿದೆ