ಜೈವಿಕ ಆಹಾರಗಳ ಉತ್ಪಾದನೆಯಲ್ಲಿ ಸಂಶ್ಲೇಷಿತ ವಸ್ತುಗಳ ಬಳಕೆ ಸೀಮಿತಗೊಳಿಸಲಾಗುತ್ತದೆ ಅಥವಾ ಅದರ ಬಳಕೆ ನಿಷೇಧಿಸಲಾಗುತ್ತದೆ. ಮಾನವನ ಬದುಕಿನ ಬಹುಭಾಗದ ಇತಿಹಾಸದಲ್ಲಿ, ಕೃಷಿಯು ಜೈವಿಕ ಎಂದು ವಿವರಿಸಬಹುದು; 20ನೇ ಶತಮಾನದ ಸುಮಾರಿಗೆ ಒಂದು ಹೊಸ ಸಂಶ್ಲೇಷಕ ರಾಸಾಯನಿಕಗಳನ್ನು ಆಹಾರದ ಪೂರೈಕೆಗೆ ದೊಡ್ಡ ಪ್ರಮಾಣದಲ್ಲಿ ಸೇರಿಸಲಾಯಿತು. ಈ ರೀತಿ ತೀರ ಇತ್ತೀಚಿನ ಉತ್ಪಾದನಾ ಶೈಲಿಯನ್ನು "ಸಾಂಪ್ರದಾಯಿಕ" ಎಂದು ಉಲ್ಲೇಖಿಸಲಾಗಿದೆ. ಜೈವಿಕ ಉತ್ಪಾದನೆಯಲ್ಲಿ, ಸಾಂಪ್ರದಾಯಿಕ ಅಜೈವಿಕ ಕ್ರಿಮಿನಾಶಕಗಳು, ಕೀಟನಾಶಕಗಳು ಹಾಗು ಸಸ್ಯನಾಶಕಗಳ ಬಳಕೆಯನ್ನು ಬಹುಮಟ್ಟಿಗೆ ನಿರ್ಬಂಧಿಸಿರುವುದರ ಜೊತೆಗೆ ಅದನ್ನು ಕಡೆಯ ಸಾಧನವಾಗಿ ಉಳಿಸಲಾಗಿದೆ. ಆದಾಗ್ಯೂ, ಈ ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ, ಕೆಲವು ಅಜೈವಿಕ ರಸಗೊಬ್ಬರಗಳನ್ನು ಇಂದಿಗೂ ಬಳಕೆ ಮಾಡಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಜಾನುವಾರುಗಳು ಭಾಗಿಯಾಗಿದ್ದರೆ, ಅವುಗಳನ್ನು, ಪ್ರತಿಜೀವಕಗಳನ್ನು ನಿಯತಕ್ರಮದಲ್ಲಿ ಬಳಕೆ ಮಾಡದೆ ಹಾಗು ಬೆಳವಣಿಗೆಯ ಹಾರ್ಮೋನ್ ಗಳನ್ನು ಬಳಸದೆ ಪಾಲನೆ ಮಾಡಬೇಕು, ಇದಲ್ಲದೆ ಸಾಮಾನ್ಯವಾಗಿ ಒಂದು ಆರೋಗ್ಯಕರ ಆಹಾರವನ್ನು ನೀಡಬೇಕು.[ಸೂಕ್ತ ಉಲ್ಲೇಖನ ಬೇಕು] ಹಲವು ರಾಷ್ಟ್ರಗಳಲ್ಲಿ, ಜೈವಿಕ ಉತ್ಪನ್ನವು ಕುಲಾಂತರಿ ತಳಿಗೆ ರೂಪಾಂತರ ಆಗದಿರಬಹುದು. ನ್ಯಾನೋಟೆಕ್ನಾಲಜಿಯನ್ನು ಆಹಾರ ಮತ್ತು ಕೃಷಿಯಲ್ಲಿ ಅನ್ವಯಿಸುವುದು ಮುಂದಿನ ತಂತ್ರಜ್ಞಾನವಾದ್ದರಿಂದ ಪ್ರಮಾಣೀಕೃತಗೊಂಡ ಜೈವಿಕ ಆಹಾರದಿಂದ ಹೊರಗಿಡಬೇಕೆಂದು ಸಲಹೆ ನೀಡಲಾಗಿದೆ.[] ದಿ ಸಾಯಿಲ್ ಅಸೋಸಿಯೇಶನ್ (UK) ಒಂದು ನ್ಯಾನೋ-ಬಹಿಷ್ಕಾರವನ್ನು ಜಾರಿಗೆ ತಂದ ಮೊದಲ ಜೈವಿಕ ಪ್ರಮಾಣಕರ್ತ.[]

ಅರ್ಜೆಂಟಿನದ ರೈತರ ಮಾರುಕಟ್ಟೆಯಲ್ಲಿ ಜೈವಿಕ ತರಕಾರಿಗಳು

ಜೈವಿಕ ಆಹಾರದ ಉತ್ಪಾದನೆ ಖಾಸಗಿ ತೋಟಗಾರಿಕೆ ಗಿಂತ ವಿಭಿನ್ನವಾಗಿ ಒಂದು ಅತಿಹೆಚ್ಚಿನ ಪ್ರಮಾಣದ ನಿಯಂತ್ರಣಕ್ಕೊಳಪಟ್ಟ ಕ್ಷೇತ್ರ. ಪ್ರಸಕ್ತ, ಯುರೋಪಿಯನ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್ ಹಾಗು ಇತರ ಹಲವು ರಾಷ್ಟ್ರಗಳಲ್ಲಿ, ತಮ್ಮ ಗಡಿಯೊಳಗೆ ಆಹಾರವನ್ನು "ಜೈವಿಕ"ವೆಂದು ಮಾರಾಟಮಾಡಲು ಉತ್ಪಾದಕರುವಿಶೇಷ ಪ್ರಮಾಣೀಕರಣ ಪಡೆಯಬೇಕಾದ ಅಗತ್ಯವಿದೆ.

ಹಲವು ಪ್ರಮಾಣೀಕರಣಗಳು ಕೆಲವು ರಾಸಾಯನಿಕಗಳು ಹಾಗು ಕ್ರಿಮಿನಾಶಕಗಳ ಬಳಕೆಗೆ ಅನುಮತಿ ನೀಡುತ್ತವೆ[ಸೂಕ್ತ ಉಲ್ಲೇಖನ ಬೇಕು], ಹೀಗಾಗಿ ಗ್ರಾಹಕರು ತಮ್ಮ ತಮ್ಮ ಪ್ರದೇಶಗಳಲ್ಲಿ "ಜೈವಿಕ"ವೆಂದು ಅರ್ಹತೆ ಪಡೆದ ವಸ್ತುಗಳ ಮಾನದಂಡದ ಬಗ್ಗೆ ಅರಿವನ್ನು ಹೊಂದಿರಬೇಕು.

ಐತಿಹಾಸಿಕವಾಗಿ, ಜೈವಿಕ ಕೃಷಿ ಗೆ ಸಂಬಂಧಿಸಿದಂತೆ, ಅದು ಕುಟುಂಬಗಳು ನಡೆಸುವ ಒಂದು ಸಣ್ಣ ಚಟುವಟಿಕೆಯಾಗಿತ್ತು. ಈ ಕಾರಣಕ್ಕೆ ಜೈವಿಕ ಆಹಾರವು ಒಂದೊಮ್ಮೆ ಸಣ್ಣ ಮಳಿಗೆಗಳಲ್ಲಿ ಅಥವಾ ರೈತರ ಮಾರುಕಟ್ಟೆ ಗಳಲ್ಲಿ ಮಾತ್ರ ದೊರಕುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಆದಾಗ್ಯೂ, 1990ರ ಪ್ರಾರಂಭದಿಂದೀಚೆಗೆ, ಜೈವಿಕ ಆಹಾರದ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 20%ನಷ್ಟು ಬೆಳವಣಿಗೆಯ ಪ್ರಮಾಣವನ್ನು ಹೊಂದಿದೆ. ಇದು ಅಭಿವೃದ್ಧಿಹೊಂದಿದ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳೆರಡರಲ್ಲೂ ಉಳಿದೆಲ್ಲಾ ಆಹಾರ ಉದ್ಯಮಗಳಿಗಿಂತ ಬಹಳ ಮುಂದಿದೆ. ಏಪ್ರಿಲ್ 2008ರ ತನಕ, ವಿಶ್ವವ್ಯಾಪಿಯಾಗಿ ಜೈವಿಕ ಆಹಾರದ ಮಾರಾಟವು 1–2%ನಷ್ಟಿದೆ ಎಂದು ಗಣಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಪದದ ಅರ್ಥ ಹಾಗೂ ವ್ಯುತ್ಪತ್ತಿ

ಬದಲಾಯಿಸಿ

ಕಳೆದ 1939ರಲ್ಲಿ, ಲಾರ್ಡ್ ನಾರ್ತ್ಬೌರ್ನ್ ತಮ್ಮ ಪುಸ್ತಕ ಲುಕ್ ಟು ದಿ ಲ್ಯಾಂಡ್ (1940)ನಲ್ಲಿ ಆರ್ಗ್ಯಾನಿಕ್ ಫಾರ್ಮಿಂಗ್ ಎಂಬ ಪದವನ್ನು ಸೃಷ್ಟಿಸಿದ್ದಾರೆ. ಇದು "ಜೈವಿಕತೆಯ ಪ್ರಕಾರವಾದ ಕೃಷಿ" ಎಂಬ ಅವರ ಪರಿಕಲ್ಪನೆಯನ್ನು ಆಧರಿಸಿದೆ. ಇದನ್ನು ಅವರು ಕೃಷಿಯ ಸಮಗ್ರತೆ ಹಾಗು ಪರಿಸರ-ಸಮತೋಲನದ ಮಾರ್ಗವೆಂದು ವಿವರಿಸುತ್ತಾರೆ- ಇದು ಅವರು ಹೆಸರಿಸಿದ ಕೆಮಿಕಲ್ ಫಾರ್ಮಿಂಗ್ ಗೆ ವಿರುದ್ಧವಾಗಿದೆ. ಇದು "ಆಮದು ಮಾಡಿಕೊಂಡ ಫಲವತ್ತತೆಯ ತಳಿಯ" ಮೇಲೆ ಅವಲಂಬಿತವಾಗಿದೆ ಹಾಗು ಇದು "ಸ್ವಯಂಪೂರ್ಣವಲ್ಲ ಅಥವಾ ಸಂಪೂರ್ಣ ಜೈವಿಕತೆ ಹೊಂದಿರುವುದಿಲ್ಲ."[] ಇದು ವೈಜ್ಞಾನಿಕವಾಗಿ ಬಳಕೆಯಾಗುವ "ಆರ್ಗ್ಯಾನಿಕ್" ಪದಕ್ಕಿಂತ ಭಿನ್ನವಾಗಿದೆ. ವೈಜ್ಞಾನಿಕ ಪದವು ಕಾರ್ಬನ್ ನನ್ನು ಹೊಂದಿರುವ ಅಣುಗಳ ಗುಂಪನ್ನು ಸೂಚಿಸಲು, ವಿಶೇಷವಾಗಿ ರಸಾಯನ ವಿಜ್ಞಾನದಲ್ಲಿ ಬಳಕೆಯಾಗುತ್ತದೆ.

ಜೈವಿಕ ಆಹಾರದ ಸ್ವರೂಪಪತ್ತೆ

ಬದಲಾಯಿಸಿ
 
ಜೈವಿಕ ದ್ವಿದಳ ಧಾನ್ಯಗಳ ಮೊಳಕೆಯ ಮಿಶ್ರಣ
  • ಇದನ್ನೂ ನೋಡಿ: ಜೈವಿಕ ಆಹಾರದ ಉತ್ಪಾದನೆಯ ಬಗ್ಗೆ ಮಾಹಿತಿಯನ್ನು ನೀಡುವ ಜೈವಿಕ ಕೃಷಿ.

ಸಂಸ್ಕರಣಗೊಂಡ ಜೈವಿಕ ಆಹಾರವು ಸಾಮಾನ್ಯವಾಗಿ ಕೇವಲ ಜೈವಿಕ ಅಂಶಗಳನ್ನು ಹೊಂದಿರುತ್ತವೆ. ಅಜೈವಿಕ ಅಂಶಗಳನ್ನು ಒಳಗೊಂಡಿದ್ದಲ್ಲಿ, ಕಡೇಪಕ್ಷ ಒಟ್ಟಾರೆಯಾಗಿ ಆಹಾರದ ಸ್ವಲ್ಪ ಪ್ರಮಾಣದಲ್ಲಿ ಸಸ್ಯ ಹಾಗು ಪ್ರಾಣಿಯ ಅಂಶಗಳು ಜೈವಿಕವಾಗಿರಬೇಕಾಗುತ್ತದೆ (95%ನಷ್ಟು ಯುನೈಟೆಡ್ ಸ್ಟೇಟ್ಸ್[], ಕೆನಡಾ, ಹಾಗು ಆಸ್ಟ್ರೇಲಿಯಾದಲ್ಲಿ). ಇದಲ್ಲದೆ ಅಜೈವಿಕವಾಗಿ ಉತ್ಪಾದನೆಗೊಂಡ ಯಾವುದೇ ಅಂಶಗಳು ಹಲವಾರು ಕೃಷಿ ಅವಶ್ಯಕತೆಗಳಿಗೆ ಒಳಗಾಗಿರುತ್ತವೆ. ಜೈವಿಕವೆಂದು ವಿವರಿಸಲ್ಪಡುವ ಆಹಾರಗಳು ಕೃತಕ ಆಹಾರ ಸಂಯೋಜನೀಯಗಳಿಂದ ಮುಕ್ತವಾಗಿರಬೇಕು, ಜೊತೆಗೆ ಇವುಗಳನ್ನು ಕೆಲವೇ ಕೆಲವು ಕೃತಕ ವಿಧಾನಗಳಿಂದ, ವಸ್ತುಗಳು ಹಾಗು ಸ್ಥಿತಿಗಳಿಂದ ಸಂಸ್ಕರಿಸಲಾಗುತ್ತದೆ, ಉದಾಹರಣೆಗೆ ರಾಸಾಯನಿಕ ಪಕ್ವಗೊಳಿಸುವಿಕೆ, ಆಹಾರಗಳನ್ನು ವಿಕಿರಣಗಳ ಪ್ರಭಾವಕ್ಕೆ ಗುರಿಪಡಿಸುವುದು, ಹಾಗು ಕುಲಾಂತರಿ ತಳಿ ಅಂಶಗಳು. ಕ್ರಿಮಿನಾಶಕಗಳು ಎಲ್ಲಿಯವರೆಗೆ ಸಂಶ್ಲೇಷಕವಾಗಿರುವುದಿಲ್ಲವೋ ಅಲ್ಲಿಯವರೆಗೆ ಅದರ ಬಳಕೆಗೆ ಅನುಮತಿಯಿದೆ.

ಮುಂಚೆಲ್ಲ ಗ್ರಾಹಕರು, ರಾಸಾಯನಿಕ ಪ್ರಕ್ರಿಯೆಗೆ ಒಳಪಡದ, ತಾಜಾ ಅಥವಾ ಕನಿಷ್ಠ ಸಂಸ್ಕರಣೆಯನ್ನು ಮಾಡಲ್ಪಟ್ಟ ಆಹಾರದ ಬಗ್ಗೆ ಆಸಕ್ತಿ ವಹಿಸಿದ್ದರು. ಅವರು ಬಹುಮಟ್ಟಿಗೆ ನೇರವಾಗಿ ಬೆಳೆಗಾರರಿಂದ ಖರೀದಿಸಬೇಕಿತ್ತು: "ನಿಮ್ಮ ರೈತನ ಬಗ್ಗೆ ಅರಿಯಿರಿ, ನಿಮ್ಮ ಆಹಾರದ ಬಗ್ಗೆ ಅರಿಯಿರಿ" ಎಂಬುದು ಧ್ಯೇಯ ಮಂತ್ರವಾಗಿತ್ತು. "ಜೈವಿಕ" ವೆಂದು ರಚಿಸಲಾದ ವೈಯಕ್ತಿಕ ಅರ್ಥನಿರೂಪಣೆಗಳನ್ನು ನೇರವಾದ ಅನುಭವದ ಮೂಲಕ ಅಭಿವೃದ್ಧಿ ಪಡಿಸಲಾಗಿತ್ತು: ರೈತರೊಂದಿಗೆ ಮಾತುಕತೆ, ಕೃಷಿಯ ಸ್ಥಿತಿಯ ಬಗ್ಗೆ ವೀಕ್ಷಣೆ, ಹಾಗು ಕೃಷಿ ಚಟುವಟಿಕೆಗಳ ಮೂಲಕ. ಸಣ್ಣದಾದ ಜಮೀನುಗಳಲ್ಲಿ ಜೈವಿಕ ಕೃಷಿಯ ವಿಧಾನಗಳನ್ನು ಬಳಸಿ, ಪ್ರಮಾಣೀಕೃತ ಅಥವಾ ಪ್ರಮಾಣೀಕೃತರಹಿತ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು (ಜೊತೆ ಜಾನುವಾರುಗಳ ಪಾಲನೆ), ಹಾಗು ಅದರ ಖರೀದಿಗೆ ಗ್ರಾಹಕನೊಬ್ಬನ ಮೇಲೆ ನಿಗಾವಹಿಸಲಾಗುತ್ತಿತ್ತು. ಜೈವಿಕ ಆಹಾರಗಳ ಬೇಡಿಕೆ ಹೆಚ್ಚಾಗಲು ಪ್ರಾರಂಭವಾಗುತ್ತಿದ್ದಂತೆ, ಸೂಪರ್‌ಮಾರ್ಕೆಟ್‌ಗಳು ಮುಂತಾದ ಸಮೂಹ ಮಾರುಕಟ್ಟೆಗಳ ಮೂಲಕ ಭಾರೀ ಪ್ರಮಾಣದ ಮಾರಾಟ ನಡೆಯಿತು ಹಾಗೂ ನೇರ ರೈತ ಸಂಪರ್ಕಕ್ಕೆ ಬದಲಿಯಾಗಿ ಬಂತು. ಇಂದು ಜೈವಿಕ ಕೃಷಿಯ ಗಾತ್ರಕ್ಕೆ ಸೀಮಿತತೆಯಿಲ್ಲ. ಜೊತೆಗೆ ಹಲವು ದೊಡ್ಡ ಸಂಸ್ಥೆಯ ಕೃಷಿಜಮೀನುಗಳು ಪ್ರಸಕ್ತ ಒಂದು ಜೈವಿಕ ವಿಭಾಗವನ್ನು ಹೊಂದಿರುತ್ತವೆ. ಆದಾಗ್ಯೂ, ಸೂಪರ್‌ಮಾರ್ಕೆಟ್ ಗ್ರಾಹಕರಿಗೆ, ಆಹಾರದ ಉತ್ಪಾದನೆಯ ಬಗ್ಗೆ ಸುಲಭವಾಗಿ ಗಮನಿಸಲು ಸಾಧ್ಯವಿಲ್ಲ, ಜೊತೆಗೆ ಉತ್ಪಾದನಾ ಗುರುತು-ಪಟ್ಟಿ, ಉದಾಹರಣೆಗೆ "ಪ್ರಮಾಣೀಕೃತ ಜೈವಿಕ" ಎಂಬಂತಹ ಪಟ್ಟಿಯ ಮೇಲೆ ಭರವಸೆ ಇಡುತ್ತಾರೆ. ಸರಕಾರದ ನಿಬಂಧನೆಗಳು ಹಾಗು ಥರ್ಡ್ ಪಾರ್ಟಿ(ತೃತೀಯ)ತಪಾಸಕರ ಭರವಸೆಯ ಮೇಲೆ ನಂಬಿಕೆ ಇರಿಸಲಾಗುತ್ತದೆ. ಸಂಸ್ಕರಣಗೊಂಡ ಉತ್ಪನ್ನವು "ಜೈವಿಕ" ವಾಗಿದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬೇಕಾದರೆ "ಪ್ರಮಾಣೀಕೃತ ಜೈವಿಕ" ಎಂಬ ಗುರುತು-ಪಟ್ಟಿಯಿಂದ ಮಾತ್ರ ಸಾಧ್ಯ.

USDA ಜೈವಿಕ ರೈತರನ್ನು ಪರಿಶೀಲನೆ ಮಾಡುವುದಿಲ್ಲ.[] 30 ತೃತೀಯ ತಪಾಸಕರಲ್ಲಿ 15 ಜನರನ್ನು ಸೂಕ್ಷ್ಮ ಪರೀಕ್ಷೆಯ ನಂತರ ಪರೀಕ್ಷಣಾವಧಿಯ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಏಪ್ರಿಲ್ 20, 2010ರಲ್ಲಿ ಕೃಷಿ ಇಲಾಖೆಯು, ಜೈವಿಕವಾಗಿ ಬೆಳೆಯಲ್ಪಟ್ಟ ಉತ್ಪನ್ನಗಳಲ್ಲಿನ ಕ್ರಿಮಿನಾಶಕಗಳ ಅಂಶ ಪತ್ತೆ ಹಚ್ಚುವ ಸಲುವಾಗಿ ಅದೇ ಸ್ಥಳದಲ್ಲಿ ಪರೀಕ್ಷೆ ನಡೆಸಲು ನಿಯಮವನ್ನು ಜಾರಿಗೆ ತರುವುದಾಗಿ ಹೇಳಿತು. ಇದು ಜೈವಿಕ ಆಹಾರ ಕ್ಷೇತ್ರದಲ್ಲಿ ಫೆಡರಲ್ ಅಜಾಗರೂಕತೆಯಿಂದ ಉಂಟಾದ ಪ್ರಮುಖ ಅಂತರಗಳನ್ನು ಒಬ್ಬ ಲೆಕ್ಕತಪಾಸಕ ತೋರಿಸಿಕೊಟ್ಟ ಪರಿಣಾಮವಾಗಿತ್ತು.[]


ಕಾನೂನಿನ ಅರ್ಥನಿರೂಪಣೆ

ಬದಲಾಯಿಸಿ
 
ದಿ ನ್ಯಾಷನಲ್ ಆರ್ಗ್ಯಾನಿಕ್ ಪ್ರೊಗ್ರಾಮ್ (USDA ನೇತೃತ್ವದ) ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜೈವಿಕತೆಯ ಕಾನೂನು ವ್ಯಾಖ್ಯಾನದ ಉಸ್ತುವಾರಿ ವಹಿಸಿದೆ ಹಾಗು ಜೈವಿಕತೆಯನ್ನು ಪ್ರಮಾಣೀಕರಿಸುತ್ತದೆ.

ಜೈವಿಕವೆಂದು ಪ್ರಮಾಣ ಗೊಳ್ಳಬೇಕಾದರೆ, ಉತ್ಪನ್ನಗಳ ಬೆಳೆ ಹಾಗೂ ತಯಾರಿಕೆಯನ್ನು ರಾಷ್ಟ್ರಗಳಲ್ಲಿ ರೂಪಿಸಲಾಗಿರುವ ಮಾನದಂಡಕ್ಕೆ ನಿಯಮಾನುಸಾರವಾಗಿ ಮಾಡಬೇಕು:

ಕೆನಡಾ: ಕೆನಡಾ ಗಜೆಟ್, ಗವರ್ನಮೆಂಟ್ ಆಫ್ ಕೆನಡಾ Archived 2012-07-26 ವೇಬ್ಯಾಕ್ ಮೆಷಿನ್ ನಲ್ಲಿ.

ಪರಿಸರದ ಮೇಲಿನ ಪರಿಣಾಮ

ಬದಲಾಯಿಸಿ

ಹಲವಾರು ಸಮೀಕ್ಷೆಗಳು ಹಾಗು ಅಧ್ಯಯನಗಳು ಸಾಂಪ್ರದಾಯಿಕ ಹಾಗು ಜೈವಿಕ ವಿಧಾನದ ಕೃಷಿ ಪದ್ಧತಿಗಳನ್ನು ಪರೀಕ್ಷಿಸಿ ಹೋಲಿಕೆ ಮಾಡುವ ಪ್ರಯತ್ನ ನಡೆಸಿವೆ. ಈ ಸಮೀಕ್ಷೆಗಳಿಂದ ಹೊರಬಿದ್ದ ಸಾಮಾನ್ಯವಾದ ಬಹುಮತಾಭಿಪ್ರಾಯವೆಂದರೆ[][] ಜೈವಿಕ ಕೃಷಿಯು ಈ ಕೆಳಕಂಡ ಕಾರಣಗಳಿಗೆ ಕಡಿಮೆ ಹಾನಿಯನ್ನು ಉಂಟುಮಾಡುತ್ತದೆ:

ಜೈವಿಕ ಭೂಮಿಯು ಸಂಶ್ಲೇಷಕ ಕ್ರಿಮಿನಾಶಕಗಳನ್ನು ಬಳಸಿಕೊಳ್ಳುವುದಿಲ್ಲ ಅಥವಾ ಪರಿಸರಕ್ಕೆ ಬಿಡುಗಡೆ ಮಾಡುವುದಿಲ್ಲ- ಕ್ರಿಮಿನಾಶಕಗಳಲ್ಲಿ ಕೆಲವೊಂದು ಮಣ್ಣಿಗೆ, ನೀರಿಗೆ ಹಾಗು ಸ್ಥಳೀಯ ಭೂಚರಗಳಿಗೆ ಹಾಗು ಜಲಚರಗಳಿಗೆ ತೊಂದರೆ ಉಂಟುಮಾಡುವ ಸಾಧ್ಯತೆಯನ್ನು ಹೊಂದಿರುತ್ತವೆ.

ವೈವಿಧ್ಯದ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಜೈವಿಕ ಕೃಷಿಯು ಸಾಂಪ್ರದಾಯಿಕ ಕೃಷಿಗಿಂತ ಉತ್ತಮವಾಗಿದೆ ಅದೆಂದರೆ , ಸಸ್ಯ ಹಾಗು ಕ್ರಿಮಿಕೀಟಗಳ ಸಂಖ್ಯೆಗಳು ಹಾಗು ಪ್ರಾಣಿಗಳ ಸಂಖ್ಯೆಗಳು.

  • ಪ್ರತಿ ಏಕಮಾನದ ಪ್ರದೇಶ ಅಥವಾ ಪ್ರತಿ ಏಕಮಾನದ ಉತ್ಪಾದನೆಯನ್ನು ಲೆಕ್ಕ ಹಾಕಿದಾಗ, ಜೈವಿಕ ಕೃಷಿಗಳು ಕಡಿಮೆ ಶ್ರಮವನ್ನು ಉಪಯೋಗಿಸುತ್ತವೆ ಹಾಗು ಕಡಿಮೆ ತ್ಯಾಜ್ಯವನ್ನು ಉತ್ಪಾದಿಸುತ್ತವೆಉದಾಹರಣೆಗೆ , ರಾಸಾಯನಿಕಗಳಿಗೆ ಪ್ಯಾಕ್ ಮಾಡಲು ಬಳಸುವ ವಸ್ತುಗಳ ತ್ಯಾಜ್ಯ.

ಆದಾಗ್ಯೂ, ಜೈವಿಕ ಕೃಷಿಯ ವಿಧಾನಗಳನ್ನು ಟೀಕಿಸುವ ವಿಮರ್ಶಕರು, ಸಾಂಪ್ರದಾಯಿಕ ಕೃಷಿಯಲ್ಲಿ ಬಳಸಿಕೊಳ್ಳಲಾಗುವ ಭೂಮಿಗಿಂತ ಅದೇ ಪ್ರಮಾಣದ ಬೆಳೆಯನ್ನು ತೆಗೆಯಲು ಜೈವಿಕ ಕೃಷಿಗೆ ಹೆಚ್ಚಿನ ಭೂಮಿಯ ಅಗತ್ಯವಿದೆಯೆಂದು ಭಾವಿಸುತ್ತಾರೆ (ಕೆಳಗಿನ 'ಇಳುವರಿ' ವಿಭಾಗವನ್ನು ನೋಡಿ). ಇದು ನಿಜವಾದ ಪರಿಸ್ಥಿತಿಯಾದರೆ, ಜೈವಿಕ ಕೃಷಿಯು ಮಳೆಯಾಧಾರಿತ ಕಾಡುಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗು ಹಲವು ಪರಿಸರ ವ್ಯವಸ್ಥೆಗಳನ್ನು ನಾಶ ಮಾಡಿಬಿಡುತ್ತದೆಂದು ಅವರು ವಾದಿಸುತ್ತಾರೆ.[][೧೦]


ಕಳೆದ 2003ರಲ್ಲಿ UKಯ ಡಿಪಾರ್ಟ್ಮೆಂಟ್ ಫಾರ್ ಇನ್ವೈರ್ನಮೆಂಟಲ್ ಫುಡ್ ಅಂಡ್ ರೂರಲ್ ಅಫೇರ್ಸ್ ನಡೆಸಿದ ತನಿಖೆಯಲ್ಲಿ, ಇತರ ವರದಿಗಳಂತೆ, ಜೈವಿಕ ಕೃಷಿಯು "ಸಕಾರಾತ್ಮಕವಾಗಿ ಪರಿಸರಕ್ಕೆ ಪ್ರಯೋಜನಗಳನ್ನು ಉಂಟುಮಾಡಬಹುದು", ಆದರೆ "ಪ್ರದೇಶಕ್ಕೆ ಬದಲಾಗಿ ಏಕಮಾನದ ಉತ್ಪಾದನೆಯ ಆಧಾರದ ಮೇಲೆ" ಹೋಲಿಕೆಗಳನ್ನು ಮಾಡಿದಾಗ,ಈ ಕೆಲವು ಪ್ರಯೋಜನಗಳು ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ ಎಂದು ಪತ್ತೆ ಮಾಡಿದೆ.[೧೧]

ಇಳುವರಿ

ಬದಲಾಯಿಸಿ

50%ನಷ್ಟು ಕಡಿಮೆ ರಸಗೊಬ್ಬರ ಹಾಗು 97%ನಷ್ಟು ಕಡಿಮೆ ಕ್ರಿಮಿನಾಶಕಗಳನ್ನು ಬಳಸುವ ಜೈವಿಕ ಕೃಷಿ ಭೂಮಿಗಳು 20%ನಷ್ಟು ಕಡಿಮೆ ಇಳುವರಿಯನ್ನು ನೀಡಿತೆಂದು ಒಂದು ಅಧ್ಯಯನದಲ್ಲಿ ತಿಳಿದುಬಂತು.[೧೨] ಇಳುವರಿಗಳನ್ನು ಹೋಲಿಕೆ ಮಾಡುವ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ನೀಡಿವೆ.[೧೩] ಜೈವಿಕವಾಗಿ ನಿರ್ವಹಣೆಯಾದ ಮಣ್ಣು ಉತ್ತಮ ಗುಣಮಟ್ಟವನ್ನು ಹೊಂದಿರುವುದರ[೧೪] ಜೊತೆಗೆ ಅತ್ಯಧಿಕ ನೀರಿನ ಧಾರಣಶಕ್ತಿಯನ್ನು ಹೊಂದಿರುತ್ತದೆಂದು ಬೆಂಬಲಿಗರು ಸಮರ್ಥಿಸುತ್ತಾರೆ. ಇದು ಬರಗಾಲದ ಅವಧಿಯಲ್ಲಿ ಜೈವಿಕ ಕೃಷಿ ಭೂಮಿಗಳಿಂದ ಹೆಚ್ಚಿನ ಇಳುವರಿಗಳನ್ನು ತೆಗೆಯಲು ಸಹಾಯಕವಾಗಿದೆ.


ಡ್ಯಾನಿಶ್ ಎನ್ವೈರನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಒಂದು ಅಧ್ಯಯನವು, ಪ್ರತಿಯೊಂದು ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಂತೆ, ಆಲೂಗೆಡ್ಡೆ, ಸಿಹಿ ಬೀಟ್ ಗೆಡ್ಡೆ ಹಾಗು ಸೀಡ್ ಗ್ರಾಸ್‌ ಉತ್ಪಾದಿಸುವ ಜೈವಿಕ ಭೂಮಿಯು, ಸಾಂಪ್ರದಾಯಿಕ ಕೃಷಿ ಉತ್ಪಾದನೆಯ ಅರ್ಧದಷ್ಟು ಕಡಿಮೆ ಇಳುವರಿಯನ್ನು ನೀಡುತ್ತದೆಂದು ವರದಿ ಮಾಡಿದೆ.[೧೫] ಈ ರೀತಿಯಾದ ಉದಾಹರಣೆಗಳು, ಹಾಗು ಕಡಿಮೆ-ಫಲವನ್ನು ನೀಡುವ ಪಶುಗಳ ಗೊಬ್ಬರದ ಮೇಲೆ ಅವಲಂಬಿತವಾಗಿರುವ ಜೈವಿಕ ಆಹಾರವು, ಜೈವಿಕ ಕೃಷಿಯು ಪರಿಸರಕ್ಕೆ ಸಂಬಂಧಿಸಿದಂತೆ ಅಭದ್ರವಾಗಿದೆ ಹಾಗು ವಿಶ್ವದ ಜನಸಂಖ್ಯೆಗೆ ಆಹಾರ ಪೂರೈಕೆ ಮಾಡುವಲ್ಲಿ ಅಸಮರ್ಥವಾಗಿದೆ ಎಂದು ವಿಜ್ಞಾನಿಗಳ ಟೀಕೆಗೆ ಒಳಗಾಗಿದೆ.[] ಟೀಕಾಕಾರರಲ್ಲಿ, "ಹಸಿರು ಕ್ರಾಂತಿ"ಯ ಪಿತಾಮಹ, ಹಾಗು ನೋಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ ನಾರ್ಮನ್ ಬೋರ್ಲುಗ್ ಸಹ ಒಬ್ಬರು.ಬೆಳೆಭೂಮಿಯನ್ನು ವಿಸ್ತರಿಸಿದ ನಂತರ,ಆ ಪ್ರಕ್ರಿಯೆಯಲ್ಲಿ ಪರಿಸರವ್ಯವಸ್ಥೆ ನಾಶವಾದರೂ ಜೈವಿಕ ಕೃಷಿ ಪದ್ಧತಿಯು ಹೆಚ್ಚೆಂದರೆ 4 ಶತಕೋಟಿ ಜನರಿಗೆ ಆಹಾರದ ಪೂರೈಕೆ ಮಾಡಬಹುದೆಂದು ಪ್ರತಿಪಾದಿಸುತ್ತಾರೆ.[೧೦] ದಿ ಆಮ್ನಿವೋರ್ಸ್ ಡೈಲೆಮ ದ ಕರ್ತೃ ಮೈಕ್ಹಲ್ ಪೋಲ್ಲನ್, ಇದಕ್ಕೆ ಪ್ರತಿಕ್ರಿಯಿಸುತ್ತಾ, ವಿಶ್ವದ ಕೃಷಿ ಸರಾಸರಿ ಇಳುವರಿಯು ಒಟ್ಟಾರೆಯಾಗಿ ಆಧುನಿಕ ಸುಸ್ಥಿರ ಕೃಷಿ ಇಳುವರಿಗಿಂತ ಕಡಿಮೆಯಿದೆಯೆಂದು ಸೂಚಿಸುತ್ತಾರೆ. ವಿಶ್ವದ ಸರಾಸರಿ ಇಳುವರಿಯನ್ನು ಆಧುನಿಕ ಜೈವಿಕ ಮಟ್ಟಗಳಿಗೆ ತಂದರೆ ಅದು ವಿಶ್ವದ ಆಹಾರ ಪೂರೈಕೆಯನ್ನು 50%ನಷ್ಟು ಹೆಚ್ಚಿಸಬಹುದು[೧೬].

ಒಟ್ಟಾರೆಯಾಗಿ ಎರಡು ಕೃಷಿ ವಿಧಾನಗಳ ಸಾಮರ್ಥ್ಯವನ್ನು ಅಂದಾಜು ಮಾಡಲು 293 ವಿಭಿನ್ನ ಹೋಲಿಕೆಗಳ ಸಂಶೋಧನೆಯನ್ನು ಒಂದೇ ಅಧ್ಯಯನವಾಗಿ ಸಂಗ್ರಹ ಮಾಡಿದ ಕಳೆದ 2007ರ ಒಂದು ಅಧ್ಯಯನವು[೧೭] ಈ ರೀತಿಯಾದ ನಿರ್ಣಯಕ್ಕೆ ಬಂದಿತು

...ಜೈವಿಕ ವಿಧಾನಗಳು ಜಾಗತಿಕ ಪ್ರತಿ ವ್ಯಕ್ತಿಯನ್ನು ಆಧರಿಸಿ ಪ್ರಸಕ್ತ ಜನಸಂಖ್ಯೆಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ಆಹಾರ ಉತ್ಪಾದನೆಯನ್ನು ಮಾಡಲು ಸಾಧ್ಯವಿದೆ, ಜೊತೆಗೆ ಕೃಷಿ ಭೂಮಿ ಮೂಲವನ್ನು ಹೆಚ್ಚಿಸದೇ ಇನ್ನೂ ಹೆಚ್ಚಿನ ಜನಸಂಖ್ಯೆಯನ್ನು ಪೋಷಿಸುವ ಸಾಮರ್ಥ್ಯವನ್ನು ಹೊಂದಿದೆ. (ಸಂಗ್ರಹದಿಂದ)

ಮುಂದುವರಿದ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಉತ್ಪಾದಿಸುವ ಇಳುವರಿಯ 92%ನಷ್ಟು ಇಳುವರಿಯನ್ನು ಜೈವಿಕ ವಿಧಾನವು ಉತ್ಪಾದಿಸುತ್ತದೆಂದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ 80%ನಷ್ಟು ಅಧಿಕ ಇಳುವರಿಯನ್ನು ಜೈವಿಕ ವಿಧಾನದಿಂದ ಪಡೆಯಬಹುದಾಗಿದೆ ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಏಕೆಂದರೆ ಕೆಲವು ಬಡ ರಾಷ್ಟ್ರಗಳಲ್ಲಿ ಸಂಶ್ಲೇಷಕ ಕೃಷಿ ಸಾಮಗ್ರಿಗಳಿಗಿಂತ ಜೈವಿಕ ಕೃಷಿಗೆ ಬೇಕಾದ ಸಾಮಗ್ರಿಗಳು ಸುಲಭವಾಗಿ ದೊರಕುತ್ತವೆ. ಮತ್ತೊಂದು ರೀತಿಯಲ್ಲಿ, ಕೃಷಿ ಸಮುದಾಯಗಳು ಮಣ್ಣನ್ನು ಮತ್ತೆ ಭರ್ತಿ ಮಾಡಲು ಸಾಕಷ್ಟು ಗೊಬ್ಬರದ ಕೊರತೆಯಿಂದ ಜೈವಿಕ ಕೃಷಿಗೆ ಮೊರೆ ಹೋಗುತ್ತವೆ, ಹಾಗು ಮಣ್ಣಿನ ಗುಣಮಟ್ಟವು ಶೀಘ್ರವಾಗಿ ತಗ್ಗುತ್ತದೆ[೧೮].

ಶಕ್ತಿ ದಕ್ಷತೆ

ಬದಲಾಯಿಸಿ

ಸೇಬಿನ ಉತ್ಪಾದನಾ ವ್ಯವಸ್ಥೆಯ ಸುಸ್ಥಿರತೆ ಅಧ್ಯಯನದಲ್ಲಿ, ಜೈವಿಕ ಕೃಷಿ ವಿಧಾನದ ಜೊತೆ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯನ್ನು ಹೋಲಿಸಿದಾಗ, ಜೈವಿಕ ವಿಧಾನವು ಹೆಚ್ಚಿನ ಶಕ್ತಿ ದಕ್ಷತೆ ಯನ್ನು ಹೊಂದಿದೆಯೆಂದು ಒಂದು ಅಧ್ಯಯನವು ಎತ್ತಿ ಹಿಡಿಯಿತು.[೧೯] ಆದಾಗ್ಯೂ, ಜೈವಿಕ ಕೃಷಿಯ ಕಳೆ ನಿಯಂತ್ರಣಕ್ಕೆ ದೊಡ್ಡ ಮಟ್ಟದ ಕೃಷಿಗೆ ಸಿದ್ಧವಾದ ಭೂಮಿಯ ಬಳಕೆಯಿಂದ ಇದು ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಪೋಷಕತೆ ಹೊಂದಿರುವ ಸಾಂದ್ರ ರಸಗೊಬ್ಬರಗಳ ಕಡಿಮೆ ಅಳವಡಿಕೆಯಿಂದ ಇಂಧನದ ಹೆಚ್ಚಿನ ಬಳಕೆಯು,ಅಧಿಕ ಇಂಧನ ಅನುಭೋಗದ ದರಗಳಲ್ಲಿ ಫಲಿತಾಂಶ ನೀಡುತ್ತದೆ. ಒಂದು ಸಾಮಾನ್ಯ ವಿಶ್ಲೇಷಣೆಯೆಂದರೆ, ಜೈವಿಕ ಉತ್ಪಾದನಾ ವಿಧಾನಗಳು ಸಾಮಾನ್ಯವಾಗಿ ಶಕ್ತಿ ದಕ್ಷತೆ ಹೊಂದಿರುತ್ತವೆ ಏಕೆಂದರೆ ಇವುಗಳು ರಾಸಾಯನಿಕವಾಗಿ ಸಂಶ್ಲೇಷಿತಗೊಂಡ ನೈಟ್ರೋಜನ್(ಸಾರಜನಕ)ನನ್ನು ಬಳಕೆ ಮಾಡುವುದಿಲ್ಲ. ಆದರೆ ಅವುಗಳು ಸಾಧಾರಣವಾಗಿ ಹೆಚ್ಚು ಪೆಟ್ರೋಲಿಯಂ ನ್ನು ಬಳಸಿಕೊಳ್ಳುತ್ತವೆ ಏಕೆಂದರೆ ಕಳೆಯನ್ನು ನಿಯಂತ್ರಿಸಲು ಇತರ ಆಯ್ಕೆಗಳ ಕೊರತೆ ಹಾಗೂ ಹೆಚ್ಚು ಸಾಂದ್ರೀಕೃತವಾದ ಮಣ್ಣಿನ ನಿರ್ವಹಣೆಯ ವಿಧಾನಗಳು ಸೇರಿವೆ.[ಸೂಕ್ತ ಉಲ್ಲೇಖನ ಬೇಕು]

ಶಕ್ತಿ ದಕ್ಷತೆಯನ್ನು ನಿರ್ಧರಿಸುವುದು ತುಂಬಾ ಕಠಿಣ; ಮೇಲೆ ನೀಡಲಾದ ನಿದರ್ಶನವನ್ನು ಲೇಖಕರು 1976ರಲ್ಲಿ ಬರೆದ ಒಂದು ಪುಸ್ತಕದಿಂದ ಉಲ್ಲೇಖಿಸುತ್ತಾರೆ. ಜೈವಿಕ ಕೃಷಿಗೆ ಸಂಬಂಧಿಸಿದಂತೆ ದಕ್ಷತೆ ಹಾಗು ಶಕ್ತಿಯ ಬಳಕೆಯ ವಾಸ್ತವ ಮೌಲ್ಯವನ್ನು ಇನ್ನೂ ನಿರ್ಧರಿಸಬೇಕಿದೆ.

ಕ್ರಿಮಿನಾಶಕಗಳು ಹಾಗು ರೈತರು

ಬದಲಾಯಿಸಿ

ಕ್ರಿಮಿನಾಶಕಗಳ ಬಳಕೆಯಿಂದ ರೈತಕಾರ್ಮಿಕರ ಆರೋಗ್ಯದ ಮೇಲಿನ ಪರಿಣಾಮಗಳು ಹಾಗು ಅಡ್ಡ ಪರಿಣಾಮಗಳನ್ನು ವಿಸ್ತೃತವಾಗಿ ವಿವರಿಸುವ ಅಧ್ಯಯನಗಳಿವೆ.[೨೦] ಕ್ರಿಮಿನಾಶಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೂ ಸಹ, ಅವು ಗಾಳಿಯ ಮೂಲಕ ರೈತಕಾರ್ಮಿಕರ ದೇಹದೊಳಕ್ಕೆ ಸೇರುತ್ತವೆ. ಈ ಅಧ್ಯಯನಗಳ ಮೂಲಕ, ಆರ್ಗನೋಫಾಸ್ಫೇಟ್ ಕ್ರಿಮಿನಾಶಕಗಳು ತೀವ್ರತರವಾದ ಆರೋಗ್ಯದ ಸಮಸ್ಯೆಗಳಾದ ಹೊಟ್ಟೆ ನೋವು, ತಲೆ ತಿರುಗುವಿಕೆ, ತಲೆ ನೋವು, ಓಕರಿಕೆ, ವಾಂತಿ ಮುಂತಾದ ಸಮಸ್ಯೆಗಳ ಜೊತೆಗೆ ಚರ್ಮ ಹಾಗು ಕಣ್ಣಿಗೆ ಹಾನಿಯನ್ನು ಉಂಟುಮಾಡುತ್ತದೆ.[೨೧] ಇದರ ಜೊತೆಗೆ, ಇತರ ಹಲವು ಅಧ್ಯಯನಗಳು, ಕ್ರಿಮಿನಾಶಕಗಳ ಒಡ್ಡುವಿಕೆಯಿಂದ ಹೆಚ್ಚು ತೀವ್ರತರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸಿವೆ. ಉದಾಹರಣೆಗೆ ಉಸಿರಾಟದ ಸಮಸ್ಯೆ, ಜ್ಞಾಪಕ ಶಕ್ತಿಯಲ್ಲಿ ಏರುಪೇರು, ಚರ್ಮದ ಸಮಸ್ಯೆಗಳು,[೨೨][೨೩] ಕ್ಯಾನ್ಸರ್,[೨೪] ಖಿನ್ನತೆ, ನರಗಳ ದುರ್ಬಲತೆ,[೨೫][೨೬] ಗರ್ಭಪಾತಗಳು, ಹಾಗು ಹುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.[೨೭] ಸಮಾನಸ್ಕಂದರ ಸಂಶೋಧನಾ ಸಾರಾಂಶಗಳು ಕ್ರಿಮಿನಾಶಕಗಳ ಒಡ್ಡುವಿಕೆ ಮತ್ತು ಆರ್ಗನೋಪ್ಹಾಸ್ಫೆಟ್‌ಗೆ-ಒಡ್ಡಿಕೊಂಡ ಕಾರ್ಮಿಕರಲ್ಲಿ ನರಗಳ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ ನಡುವೆ ಸಂಬಂಧವನ್ನು ಪರಿಶೀಲಿಸಿವೆ.[೨೮][೨೯]

ದಕ್ಷಿಣ ಅಮೆರಿಕದಿಂದ ಆಮದು ಮಾಡಿಕೊಳ್ಳಲಾದ ಹಣ್ಣುಗಳು ಹಾಗು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕಗಳ ಪ್ರಮಾಣ ಇರುವ ಸಂಭವವಿದೆ,[೩೦] ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಹ ಕ್ರಿಮಿನಾಶಕಗಳ ಬಳಕೆಯನ್ನು ನಿಷೇಧಿಸಲಾಗಿದೆ.[೩೧] ವಲಸೆ ಹೋಗುವ ಹಕ್ಕಿಗಳಾದ, ಸ್ವೈನ್ಸನ್ಸ್ ಗಿಡುಗಗಳು, ಚಳಿಗಾಲದಲ್ಲಿ ಅರ್ಜೆಂಟಿನದಲ್ಲಿ ನೆಲೆಯೂರುತ್ತವೆ. ಅಲ್ಲಿ ಸಾವಿರಾರು ಹಕ್ಕಿಗಳು ಮೊನೋಕ್ರೋಟೋಫೋಸ್ ಕ್ರಿಮಿನಾಶಕಗಳ ವಿಷದಿಂದ ಸತ್ತು ಹೋಗಿರುವುದು ಪತ್ತೆಯಾಯಿತು.[ಸೂಕ್ತ ಉಲ್ಲೇಖನ ಬೇಕು]

ಕ್ರಿಮಿನಾಶಕಗಳ ಉಳಿಕೆ

ಬದಲಾಯಿಸಿ

ಕಳೆದ 2002ರಲ್ಲಿ ಪ್ರಕಟಗೊಂಡ ಒಂದು ಅಧ್ಯಯನವು "ಜೈವಿಕವಾಗಿ ಬೆಳೆದ ಆಹಾರದಲ್ಲಿ, ಸಾಂಪ್ರದಾಯಿಕವಾಗಿ ಬೆಳೆದ ಆಹಾರದಲ್ಲಿರುವಂತೆ ಮೂರನೇ ಒಂದು ಭಾಗದಷ್ಟು ಕ್ರಿಮಿನಾಶಕಗಳ ಉಳಿಕೆ ಅಂಶ ಇರುತ್ತದೆಂದು ವರದಿ ಮಾಡಿತು."[೩೨][೩೩]

ಯುನೈಟೆಡ್ ಸ್ಟೇಟ್ಸ್ ನಲ್ಲಿ ಕ್ರಿಮಿನಾಶಕಗಳ ಉಳಿಕೆ ಬಗ್ಗೆ ಮೇಲ್ವಿಚಾರಣೆಯನ್ನು ಪೆಸ್ಟಿಸೈಡ್ ಡಾಟಾ ಪ್ರೊಗ್ರಾಮ್ ನಡೆಸುತ್ತದೆ (USDAನ ವಿಭಾಗವಾದ ಇದನ್ನು 1990ರಲ್ಲಿ ರೂಪಿಸಲಾಯಿತು. ಅಲ್ಲಿಂದೀಚೆಗೆ 400 ವಿವಿಧ ಮಾದರಿಯ ಕ್ರಿಮಿನಾಶಕಗಳಿಗಾಗಿ 60 ವಿವಿಧ ಮಾದರಿಗಳ ಆಹಾರದಲ್ಲಿ, ತಿನ್ನುವ ಹಂತದಲ್ಲಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಅವರ ತೀರ ಇತ್ತೀಚಿನ ಫಲಿತಾಂಶಗಳು 2005ರಲ್ಲಿ ಪತ್ತೆಯಾಯಿತು:

These data indicate that 29.5 percent of all samples tested contained no detectable pesticides [parent compound and metabolite(s) combined], 30 percent contained 1 pesticide, and slightly over 40 percent contained more than 1 pesticide.

USDA, Pesticide Data Program[೩೪]

ಶೇಕಡಾ 25ರಷ್ಟು ಜೈವಿಕ ಆಹಾರವು ಸಂಶ್ಲೇಷಿತ ಕ್ರಿಮಿನಾಶಕ ಉಳಿಕೆಗಳನ್ನು ಹೊಂದಿರುವುದಾಗಿ ಹಲವಾರು ಅಧ್ಯಯನಗಳು ಈ ಸಂಶೋಧನೆಗೆ ದೃಢೀಕರಣ ನೀಡಿವೆ. ಇದಕ್ಕೆ ಹೋಲಿಸಿದರೆ ಸಾಂಪ್ರದಾಯಿಕ ಆಹಾರದಲ್ಲಿ ಶೇಖಡಾ 77ರಷ್ಟು ಕ್ರಿಮಿನಾಶಕಗಳ ಉಳಿಕೆಯು ಪತ್ತೆಯಾಗಿದೆ.[೩೫][೩೬][೩೭][೩೮][೩೯][೪೦][೪೧][೪೨][೪೩][೪೪]

ಕಳೆದ 1993ರಲ್ಲಿ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಪ್ರಕಟಿಸಿದ ಒಂದು ಅಧ್ಯಯನವು, ಪ್ರಮುಖವಾಗಿ ಆಹಾರಕ್ರಮದ ಮೂಲಕ ಹಸುಗೂಸುಗಳು ಹಾಗು ಮಕ್ಕಳು ಕ್ರಿಮಿನಾಶಕಗಳಿಗೆ ಒಡ್ಡಿಕೊಳ್ಳುತ್ತಾರೆಂದು ನಿರ್ಣಯಿಸಿತು.[೪೫] ಕಳೆದ 2006ರ ಇತ್ತೀಚಿನ ಅಧ್ಯಯನವು, ಜೈವಿಕ ಆಹಾರಕ್ರಮಕ್ಕೆ ಬದಲಾಗುವುದಕ್ಕೆ ಮುಂಚೆ ಹಾಗು ನಂತರ ಆರ್ಗನೋಫೋಸ್ಫರಸ್ ಕ್ರಿಮಿನಾಶಕಕ್ಕೆ ಒಡ್ಡಿಕೊಂಡ 23 ಶಾಲಾ ಮಕ್ಕಳಲ್ಲಿ ಅದರ ಮಟ್ಟಗಳನ್ನು ಅಳೆಯಲಾಯಿತು. ಈ ಅಧ್ಯಯನವು, ಮಕ್ಕಳು ಜೈವಿಕ ಆಹಾರಕ್ರಮಕ್ಕೆ ತಮ್ಮನ್ನು ತಾವು ಬದಲಾಯಿಸಿಕೊಂಡ ನಂತರ ಆರ್ಗನೋಫೋಸ್ಫೋರಸ್ ಕ್ರಿಮಿನಾಶಕಗಳ ಒಡ್ಡುವಿಕೆ ಮಟ್ಟದಲ್ಲಿ ಗಮನಾರ್ಹವಾಗಿ ಹಾಗೂ ತಕ್ಷಣವೇ ಇಳಿಕೆಯಾಗಿರುವುದನ್ನು ಪತ್ತೆಮಾಡಿತು.[೪೬] ಕೇವಲ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಆಹಾರದಲ್ಲಿ ಕ್ರಿಮಿನಾಶಕಗಳ ಉಳಿಕೆಯನ್ನು ಕಡಿಮೆಗೊಳಿಸುವ ಕಾನೂನನ್ನು ರೂಪಿಸಲಾಗಿದೆ. ಜೊತೆಗೆ ಮಕ್ಕಳ ಜೀವಿತಾವಧಿಯಲ್ಲಿ ಪ್ರತಿ ಕ್ರಿಮಿನಾಶಕದ ಸೇವನೆಯ ಬಗ್ಗೆ ಪರಿಗಣಿಸಲಾಗಿದೆ.[೪೭]

ಕೆಲವು ಕ್ರಿಮಿನಾಶಕಗಳು ಆರೋಗ್ಯದ ಮೇಲೆ ಪ್ರಭಾವ ಬೀರುವ ಬಗ್ಗೆ ವಿವಾದಾಸ್ಪದ ಅಂಕಿಅಂಶಗಳಿವೆ. ಉದಾಹರಣೆಗೆ, ಸಸ್ಯನಾಶಕವಾದ ಅಟ್ರಾಜಿನ್, ಕೆಲವು ಪ್ರಯೋಗಗಳಲ್ಲಿ ಟೆರಟೋಜೆನ್ ಆಗಿ ತೋರಿಸಲಾಗಿದ್ದು,ಇದನ್ನು ಸಣ್ಣ ಪ್ರಮಾಣದಲ್ಲಿ ಗಂಡು ಕಪ್ಪೆಗಳಿಗೆ ಒಳಪಡಿಸಿದಾಗ ಅವುಗಳಲ್ಲಿ ನಪುಂಸಕತ್ವಕ್ಕೆ ಕಾರಣವಾಗುತ್ತದೆ. ಅಟ್ರಾಜಿನ್‌ನ ಪ್ರಭಾವಕ್ಕೊಳಪಟ್ಟ, ಗಂಡು ಕಪ್ಪೆಗಳಲ್ಲಿ ದೋಷಪೂರಿತ ಜನನಗ್ರಂಥಿಗಳು ಅಥವಾ ವೃಷಣಯುಕ್ತ ಜನನಗ್ರಂಥಿಗಳು ಸಂಕೀರ್ಣ ರಚನೆ ಕಳೆದುಕೊಳ್ಳದ ಮೊಟ್ಟೆಗಳನ್ನು ಒಳಗೊಂಡಿರುತ್ತವೆ.[೪೮] ಆದಾಗ್ಯೂ ಹೆಚ್ಚಿನ ಪ್ರಮಾಣಗಳಲ್ಲಿ ನೀಡಿದಾಗ ಇದರ ಪರಿಣಾಮವು ಗಮನಾರ್ಹವಾಗಿ ಕಡಿಮೆಯಾಯಿತು. ಈ ಪರಿಸ್ಥಿತಿಯು ನಿರ್ನಾಳಗ್ರಂಥಿಗಳ ವ್ಯವಸ್ಥೆಗೆ ಪರಿಣಾಮಬೀರುವ ಇತರ ಟೆರಟೋಜೆನ್ಸ್‌ನಲ್ಲಿ ಸ್ಥಿರವಾಗಿದೆ, ಉದಾಹರಣೆಗೆ ಎಸ್ಟ್ರಾಡಿಯೋಲ್.

ಜೈವಿಕ ಕೃಷಿಯ ಮಾನದಂಡವು ಸಂಶ್ಲೇಷಕ ಕ್ರಿಮಿನಾಶಕಗಳ ಬಳಕೆಗೆ ಅವಕಾಶವನ್ನು ನೀಡುವುದಿಲ್ಲ, ಆದರೆ ಸಸ್ಯಗಳಿಂದ ಹುಟ್ಟಿಕೊಂಡ ಕೆಲ ನಿರ್ದಿಷ್ಟ ಕ್ರಿಮಿನಾಶಕಗಳ ಬಳಕೆಗೆ ಅನುಮತಿ ನೀಡುತ್ತದೆ. ಬಹುತೇಕ ಜೈವಿಕ ಮಾನದಂಡಗಳಲ್ಲಿ ನಿರ್ಬಂಧದ ಬಳಕೆಗೆ ಒಪ್ಪಿಕೊಂಡಿರುವ ಸಾಮಾನ್ಯ ಜೈವಿಕ ಕ್ರಿಮಿನಾಶಕಗಳಲ್ಲಿ, Bt, ಪೈರೆಥ್ರಂ, ಹಾಗು ರೊಟೆನೋನ್ ಗಳು ಸೇರಿವೆ. ರೊಟೆನೋನ್, ಮೀನು ಹಾಗು ಜಲಚರಗಳಿಗೆ ಹೆಚ್ಚು ವಿಷಕಾರಿಯಾಗಿದೆ. ಇಲಿಗಳಿಗೆ ಇದನ್ನು ಚುಚ್ಚಿದಾಗ ಪಾರ್ಕಿನ್ಸನ್ ಕಾಯಿಲೆ ಉಂಟಾಗುತ್ತದೆ, ಹಾಗು ಇತರ ಸಸ್ತನಿಗಳಿಗೆ ಬೇರೆ ರೀತಿಯ ವಿಷಕಾರಿಯೆಂದು ತೋರಿಸಲಾಗಿದೆ.[೪೯]

ದಿ ಯುನೈಟೆಡ್ ಸ್ಟೇಟ್ಸ್ ಇನ್ವೈರನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಹಾಗು ರಾಜ್ಯದ ಇತರ ಏಜೆನ್ಸಿಗಳು ಕಾಲಾನುಕಾಲಕ್ಕೆ ಸಂದೇಹಾಸ್ಪದ ಕ್ರಿಮಿನಾಶಕಗಳಿಗೆ ನೀಡಿದ ಪರವಾನಗಿಯ ಬಗ್ಗೆ ಮರುಪರೀಕ್ಷೆ ನಡೆಸುತ್ತದೆ, ಆದರೆ ಪಟ್ಟಿಯಿಂದ ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆಯು ಬಹಳ ನಿಧಾನವಾಗಿದೆ. ನಿಧಾನಗತಿಯ ಈ ಪ್ರಕ್ರಿಯೆಯ ಒಂದು ಉದಾಹರಣೆಯೆಂದರೆ ಕ್ರಿಮಿನಾಶಕವಾದ ಡಿಕ್ಲೋರ್ವೋಸ್, ಅಥವಾ DDVPಯನ್ನು ಇತ್ತೀಚಿನವರೆಗೂ ಅಂದರೆ 2006ರವರೆಗೂ EPA ಅದರ ಮಾರಾಟವನ್ನು ಮುಂದುವರೆಸಲು ಉದ್ದೇಶಿಸಿತ್ತು. EPA, 1970ರಿಂದೀಚೆಗೆ ಹಲವಾರು ಸಂದರ್ಭಗಳಲ್ಲಿ ಈ ಕ್ರಿಮಿನಾಶಕದ ಬಳಕೆಯನ್ನು ಬಹುತೇಕ ನಿಷೇಧಿಸುವ ಹಂತ ತಲುಪಿತ್ತು. ಆದರೆ DDVP ಕೇವಲ ಕ್ಯಾನ್ಸರ್‌ಜನಕವಷ್ಟೇ ಅಲ್ಲ ಮಾನವನ ನರಮಂಡಲ- ವಿಶೇಷವಾಗಿ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂಬ ಗಮನಾರ್ಹವಾದ ಸಾಕ್ಷ್ಯಾಧಾರದ ಹೊರತಾಗಿಯೂ ಅದು ಹಾಗೆ ಮಾಡಲಿಲ್ಲ.[೫೦] EPA "ಆತಂಕದ ಮಟ್ಟಗಳನ್ನು ಅಪಾಯದ ಮಟ್ಟಗಳು ಮೀರಿಲ್ಲ ಎಂದು ನಿರ್ಣಯಿಸಿದೆ"[೫೧], ಒಂದು ಅಧ್ಯಯನದ ಪ್ರಕಾರ ಇಲಿಗಳನ್ನು ದೀರ್ಘಕಾಲ DDVPಗೆ ಒಳಪಡಿಸಿದಾಗ ಯಾವುದೇ ವಿಷಕಾರಿ ಪರಿಣಾಮಗಳು ಕಂಡುಬರಲಿಲ್ಲ.[೫೨]

ಪೌಷ್ಟಿಕಾಂಶದ ಮೌಲ್ಯ ಹಾಗು ಸ್ವಾದ

ಬದಲಾಯಿಸಿ

ಕಳೆದ 2009ರ ಏಪ್ರಿಲ್‌ನಲ್ಲಿ, ಯುರೋಪಿಯನ್ ಕಮಿಷನ್ ಹಣಕಾಸು ನೆರವು ನೀಡಿದ 5 ವರ್ಷದ ಸಮಗ್ರ ಅಧ್ಯಯನವಾದ ಕ್ವಾಲಿಟಿ ಲೋ ಇನ್ಪುಟ್ ಫುಡ್ (QLIF),[೫೩] "ಜೈವಿಕ ಹಾಗು ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳಲ್ಲಿ ಬೆಳೆಗಳ ಗುಣಮಟ್ಟ ಹಾಗು ಜಾನುವಾರುಗಳ ಉತ್ಪತ್ತಿಗಳು ಗಮನಾರ್ಹವಾಗಿ ವ್ಯತ್ಯಾಸವಾಗಿರುತ್ತದೆ." ಎಂದು ದೃಢಪಡಿಸಿದೆ.[೫೪] ವಿಶೇಷವಾಗಿ, ಬೆಳೆ ಮತ್ತು ಜಾನುವಾರು ಪೌಷ್ಠಿಕತೆ ಗುಣಮಟ್ಟದ ಮೇಲೆ ಜೈವಿಕ ಮತ್ತು ಕಡಿಮೆ ಇಳುವರಿಯ ಕೃಷಿಪದ್ಧತಿಯ ಪರಿಣಾಮಗಳನ್ನು ಅಧ್ಯಯನ ಮಾಡುವ QLIF ಯೋಜನೆಯ ಫಲಿತಾಂಶಗಳು:ಜೈವಿಕ ಆಹಾರ ಉತ್ಪಾದನೆ ವಿಧಾನಗಳಿಂದ (a) ಪೌಷ್ಟಿಕಾಂಶ ತುಂಬಿದ ಸಂಯುಕ್ತಗಳ ಹೆಚ್ಚಿನ ಮಟ್ಟಗಳು (ಉದಾಹರಣೆಗೆ, ವಿಟಮಿನ್ಸ್/ಆಕ್ಸಿಡೀಕಾರಕ ನಿರೋಧಕಗಳು ಹಾಗು ಬಹು ಅಪರ್ಯಾಪ್ತ ಮೇದಸ್ಸಿನ ಆಮ್ಲಗಳಾದ ಒಮೆಗಾ-3 ಹಾಗು ಕಲ ಮುಂತಾದವು)(b)ಪೌಷ್ಟಿಕಾಂಶ ತುಂಬಿದ ಅನಪೇಕ್ಷಣೀಯ ಸಂಯುಕ್ತಗಳ ಕಡಿಮೆ ಮಟ್ಟಗಳು ಉದಾಹರಣೆಗೆ ಭಾರ ಲೋಹಗಳು, ಮೈಕೋಟಾಕ್ಸಿನ್ಸ್, ಕ್ರಿಮಿನಾಶಕಗಳ ಉಳಿಕೆಗಳು ಹಾಗು ಗ್ಲೈಕೋ-ಆಲ್ಕಾಲಾಯ್ಡ್ಸ್ ಬೆಳೆಗಳ ಒಂದು ಗುಂಪಿನಲ್ಲಿ ಹಾಗು/ಅಥವಾ ಹಾಲಿನಲ್ಲಿ; (c) ಹಂದಿಗಳಲ್ಲಿ ವಿಸರ್ಜಿಸುವ ಸಾಲ್ಮೊನೆಲ್ಲ ಅಮೇಧ್ಯ ಅಪಾಯವನ್ನು ಕಡಿಮೆ ಮಾಡುತ್ತದೆ."[೫೫] QLIF ಅಧ್ಯಯನವು "ಜೈವಿಕ ಆಹಾರಕ್ರಮವು ಮಾನವ ಹಾಗು ಪ್ರಾಣಿಗಳ ಆರೋಗ್ಯದ ಮೇಲೆ ಬೀರುವ ಸಕಾರಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಸಾಕ್ಷ್ಯಗಳನ್ನು ಒದಗಿಸುವ ಮತ್ತಷ್ಟು ಹೆಚ್ಚಿನ ಹಾಗು ಅತಿ ವಿಸ್ತೃತ ಅಧ್ಯಯನಗಳ ಅಗತ್ಯವಿದೆಯೆಂಬ" ನಿರ್ಣಯದೊಂದಿಗೆ ಮುಗಿಸಿತು.[೫೬] ಇದಕ್ಕೆ ಪರ್ಯಾಯವಾಗಿ, UKಯ ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ ಯ ಪ್ರಕಾರ, "ಗ್ರಾಹಕರು ಜೈವಿಕ ಹಣ್ಣು, ತರಕಾರಿಗಳು ಹಾಗು ಮಾಂಸವನ್ನು ಖರೀದಿಸಲು ಆಯ್ಕೆ ಮಾಡಿಕೊಳ್ಳಬಹುದು ಏಕೆಂದರೆ ಅವು ಇತರ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದೆ ಎಂದು ಭಾವಿಸುತ್ತಾರೆ.

ಆದಾಗ್ಯೂ, ಪ್ರಸಕ್ತ ವೈಜ್ಞಾನಿಕ ಸಂಗತಿಗಳ ತುಲನೆಯು ಈ ಅಭಿಪ್ರಾಯಕ್ಕೆ ಬೆಂಬಲವನ್ನು ನೀಡುವುದಿಲ್ಲ."[೫೭]  ಕಳೆದ 2009ರ FSA ನಿಯೋಜಿತ 12-ತಿಂಗಳ ವ್ಯವಸ್ಥಿತ ಪುನರ್ಪರಿಶೀಲನೆ ಹಾಗು ಲಂಡನ್ ಸ್ಕೂಲ್ ಆಫ್ ಹೈಜೀನ್ & ಟ್ರಾಪಿಕಲ್ ಮೆಡಿಸಿನ್ ನಲ್ಲಿ, 50 ವರ್ಷಗಳ ಸಾಕ್ಷ್ಯ ಸಂಗ್ರಹವನ್ನು ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ "ಜೈವಿಕ ಆಹಾರವು ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುವುದಕ್ಕೆ ಯಾವುದೇ ಒಂದು ಸರಿಯಾದ ಸಾಕ್ಷ್ಯಗಳಿಲ್ಲವೆಂದು" ತೀರ್ಮಾನಕ್ಕೆ ಬಂದಿತು.[೫೮]  ಇತರ ಅಧ್ಯಯನಗಳು ಸಹ, ಜೈವಿಕ ಆಹಾರವು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳನ್ನಾಗಲಿ, ಹೆಚ್ಚಿನ ಗ್ರಾಹಕ ಸುರಕ್ಷತೆಯಾಗಲಿ ಅಥವಾ ರುಚಿಯಲ್ಲಿ ಯಾವುದೇ ವಿಶಿಷ್ಟ ವ್ಯತ್ಯಾಸವನ್ನು ತರುತ್ತದೆಂಬುದರ ಬಗ್ಗೆ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಹೇಳುತ್ತವೆ.[೫೯][೬೦][೬೧][೬೨]

ರುಚಿಗೆ ಸಂಬಂಧಿಸಿದಂತೆ, ಕಳೆದ 2001ರ ಅಧ್ಯಯನವು, ಜೈವಿಕ ಸೇಬುಗಳು ಗುರುತಿಸಲಾಗದ ಸ್ವಾದ ಪರೀಕ್ಷೆಯಲ್ಲಿ ಸಿಹಿಯಾಗಿದ್ದು ಕಂಡುಬಂತು. ಸಾಂಪ್ರದಾಯಿಕವಾಗಿ ಬೆಳೆದ ಸೇಬುಗಳಿಗಿಂತ ಜೈವಿಕವಾಗಿ ಬೆಳೆದ ಸೇಬುಗಳ ದೃಢತೆಯು ಹೆಚ್ಚೆಂದು ಬೆಲೆ ಕಟ್ಟಲಾಯಿತು.[೬೩] ಆಹಾರ ಸಂರಕ್ಷಕ ಗಳ ಸೀಮಿತ ಬಳಕೆಯಿಂದಾಗಿ ಜೈವಿಕ ಆಹಾರವು ಬೇಗನೆ ಕೆಟ್ಟು ಹೋಗಬಹುದು. ಇನ್ನೊಂದು ಭಾಗದಲ್ಲಿ, ಮಳಿಗೆಗಳಲ್ಲಿ ಇಂತಹ ಆಹಾರಗಳನ್ನು ವಿಸ್ತರಿತ ಸಮಯದವರೆಗೆ ಸಂಗ್ರಹಿಸಿಟ್ಟಿರುವ ಖಾತರಿಯಿಲ್ಲ. ಆಹಾರ ಸಂರಕ್ಷಕಗಳು ರಕ್ಷಿಸುವಲ್ಲಿ ವಿಫಲವಾಗುವ ಪೌಷ್ಟಿಕಾಂಶಗಳು ಬೇಗನೆ ಕೊಳೆಯುವ ಪ್ರಮಾಣ ಇದರಲ್ಲಿ ಹೆಚ್ಚಿರುತ್ತವೆ. ಜೈವಿಕ ಆಹಾರವು ನೈಸರ್ಗಿಕ ಬೈಯೋಟಾಕ್ಸಿನ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸಾಮರ್ಥ್ಯ ಪಡೆದಿರುತ್ತವೆ, ಉದಾಹರಣೆಗೆ ಆಲೂಗೆಡ್ಡೆಯಲ್ಲಿರುವ ಸೋಲಾನಿನ್ಉಲ್ಲೇಖ ದೋಷ: Closing </ref> missing for <ref> tag USDAನ ಪ್ರಕಾರ, ಅಮೆರಿಕನ್ನರು, 2004ರಲ್ಲಿ ಸರಾಸರಿ, $1,347ನಷ್ಟು ಹಣವನ್ನು ದಿನಸಿಯನ್ನು ಕೊಂಡುಕೊಳ್ಳಲು ಖರ್ಚು ಮಾಡಿದರು; ಈ ರೀತಿಯಾಗಿ ಸಂಪೂರ್ಣವಾಗಿ ಜೈವಿಕ ಆಹಾರಕ್ಕೆ ಬದಲಾಯಿಸಿಕೊಂಡರೆ, ಅವರ ದಿನಸಿಗಳ ವೆಚ್ಚವು ವಾರ್ಷಿಕವಾಗಿ $538.80ರಷ್ಟು ಅಧಿಕವಾಗುತ್ತದೆ($44.90/ಮಾಸಿಕ) ಜೊತೆಗೆ ಅರ್ಧದಷ್ಟು ಜೈವಿಕ ಆಹಾರಕ್ಕೆ ಬದಲಾಯಿಸಿಕೊಂಡರೆ ಅವರ ವೆಚ್ಚವು $269.40 ($22.45/ಮಾಸಿಕ)ನಷ್ಟು ಅಧಿಕವಾಗುತ್ತದೆ. ಸಂಸ್ಕರಣಗೊಂಡ ಜೈವಿಕ ಆಹಾರಗಳ ಜೊತೆಗೆ ಸಾಂಪ್ರದಾಯಿಕ ಆಹಾರಗಳನ್ನು ಹೋಲಿಸಿದಾಗ ಬೆಲೆಯಲ್ಲಿ ವ್ಯತ್ಯಾಸಗೊಳ್ಳುತ್ತವೆ. ಕಳೆದ 2004ರಲ್ಲಿ ಚಾಯ್ಸ್ ಮ್ಯಾಗಜಿನ್ ಆಸ್ಟ್ರೇಲಿಯದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಹಾಮಳಿಗೆಗಳಲ್ಲಿ ದೊರಕುವ ಸಂಸ್ಕರಣಗೊಂಡ ಜೈವಿಕ ಆಹಾರವು 65%ನಷ್ಟು ಅಧಿಕ ದುಬಾರಿಯಾಗಿತ್ತು, ಆದರೆ ಇದು ಸ್ಥಿರವಾಗಿರಲಿಲ್ಲವೆಂಬುದನ್ನು ಗಮನಿಸಬೇಕು. ಬೆಲೆಗಳು ದುಬಾರಿಯಾಗಿಬಹುದು ಏಕೆಂದರೆ ಜೈವಿಕ ಉತ್ಪನ್ನಗಳು ಸಣ್ಣ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವುದರ ಜೊತೆಗೆ ಪ್ರತ್ಯೇಕವಾಗಿ ಗಿರಣಿಗೆ ಹಾಕುವ ಅಥವಾ ಸಂಸ್ಕರಣೆ ಮಾಡುವ ಅವಶ್ಯಕತೆಯನ್ನು ಹೊಂದಿರುತ್ತವೆ. ಇದಲ್ಲದೆ, ಸ್ಥಳೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಕೇಂದ್ರೀಕೃತ ಉತ್ಪಾದನೆಯಿಂದ ಹಡಗಿನ ವೆಚ್ಚಗಳು ಅಧಿಕವಾಗಿರುತ್ತದೆ. ಹೈನುಗಾರಿಕೆ ಹಾಗು ಮೊಟ್ಟೆಗಳಿಗೆ ಸಂಬಂಧಿಸಿದಂತೆ, ಪ್ರಾಣಿಗಳ ಅವಶ್ಯಕತೆಗಳು, ಉದಾಹರಣೆಗೆ ಪ್ರತಿ ಎಕರೆಗೆ ಪಾಲನೆ ಮಾಡಬಹುದಾದ ಪ್ರಾಣಿಗಳ ಸಂಖ್ಯೆ, ಅಥವಾ ಪ್ರಾಣಿಯ ತಳಿ ಹಾಗು ಅವುಗಳ ಮೇವು ಪರಿವರ್ತನೆ ಅನುಪಾತವು ವೆಚ್ಚದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.

ಸಂಬಂಧಿತ ಬೆಳವಣಿಗೆಗಳು

ಬದಲಾಯಿಸಿ

ಜೈವಿಕ ಕೃಷಿಯ ವಿಧಾನ ಬಯೋಡೈನಾಮಿಕ್ ಕೃಷಿ ಯು ಜೈವಿಕ ಆಹಾರ ಬೆಳವಣಿಗೆಗೆ ನಿಕಟವಾಗಿ ಸಂಬಂಧಿಸಿದೆ.

ಆಧಾರಾಂಶಗಳು ಹಾಗು ಅಂಕಿಅಂಶಗಳು

ಬದಲಾಯಿಸಿ
align="center"ಚಿತ್ರ:Australian organic seal.jpg
ಆಸ್ಟ್ರೇಲಿಯಾ

ವಿಶ್ವವ್ಯಾಪಿಯಾಗಿ ಒಟ್ಟಾರೆ ಆಹಾರ ಮಾರಾಟದಲ್ಲಿ ಜೈವಿಕ ಆಹಾರದ ಪಾತ್ರವು 1–2%ನಷ್ಟಿದ್ದು, ಜೈವಿಕ ಆಹಾರದ ಮಾರುಕಟ್ಟೆಯು, ಮುಂದುವರಿದ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇತರ ಆಹಾರ ಉದ್ಯಮಕ್ಕಿಂತ ಶೀಘ್ರವಾಗಿ ಬೆಳವಣಿಗೆಯನ್ನು ಹೊಂದುತ್ತಿದೆ.

ಕಳೆದ 2002ರಲ್ಲಿ[೬೪] USನಲ್ಲಿ $23 ಶತಕೋಟಿ ಯಷ್ಟಿದ್ದ ವಿಶ್ವದ ಜೈವಿಕ ಆಹಾರದ ವ್ಯಾಪಾರವು 2008ರಲ್ಲಿ $52 ಶತಕೋಟಿಗೆ ಜಿಗಿಯಿತು.[೬೫]

  • ವಿಶ್ವದ ಜೈವಿಕ ಮಾರುಕಟ್ಟೆಯು 1990ರ ದಶಕದ ಪ್ರಾರಂಭದಿಂದೀಚೆಗೆ ವರ್ಷಕ್ಕೆ 20%ನಷ್ಟು ಬೆಳವಣಿಗೆಯಾಗುತ್ತಿದೆ. ರಾಷ್ಟ್ರವನ್ನು ಅವಲಂಬಿಸಿ ಭವಿಷ್ಯದಲ್ಲಿ ಇದು 10%–50% ನಷ್ಟು ವಾರ್ಷಿಕವಾಗಿ ಬೆಳವಣಿಗೆಯಾಗಬಹುದೆಂದು ಅಂದಾಜಿಸಲಾಗಿದೆ.

ಉತ್ತರ ಅಮೆರಿಕ

ಬದಲಾಯಿಸಿ
ಯುನೈಟೆಡ್ ಸ್ಟೇಟ್ಸ್

ಅಮೆರಿಕಾದ ಆಹಾರ ಮಾರುಕಟ್ಟೆ ಕ್ಷೇತ್ರದಲ್ಲಿ ಜೈವಿಕ ಆಹಾರವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿದೆ[೬೬].

  • ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಆಹಾರದ ವ್ಯಾಪಾರದಲ್ಲಿ ಶೇಖಡ 17 ರಿಂದ 20ರಷ್ಟು ಬೆಳವಣಿಗೆಯಾಗಿದೆ[೬೭]. ಈ ನಡುವೆ ಸಾಂಪ್ರದಾಯಿಕ ಆಹಾರದ ವ್ಯಾಪಾರವು ವಾರ್ಷಿಕವಾಗಿ ಕೇವಲ 2 ರಿಂದ 3ರಷ್ಟು ಶೇಕಡಾ ಪ್ರಗತಿಯನ್ನು ಕಂಡಿದೆ.[೬೮]
  • ಕಳೆದ 2003ರ ಸುಮಾರಿಗೆ ಜೈವಿಕ ಉತ್ಪನ್ನಗಳು ಸುಮಾರು 20,000 ನೈಸರ್ಗಿಕ ಆಹಾರ ಮಳಿಗೆಗಳಲ್ಲಿ ಹಾಗು 73%ನಷ್ಟು ಸಾಂಪ್ರದಾಯಿಕ ದಿನಸಿ ಪದಾರ್ಥಗಳ ಅಂಗಡಿಗಳಲ್ಲಿ ದೊರಕುತ್ತಿತ್ತು.[೬೯]
  • ಕಳೆದ 2005ರಲ್ಲಿ ಒಟ್ಟಾರೆ ಆಹಾರದ ವ್ಯಾಪಾರದಲ್ಲಿ ಜೈವಿಕ ಉತ್ಪನ್ನಗಳು 2.6%ರಷ್ಟಿತ್ತೆಂದು ಗಣಿಸಲಾಗಿದೆ.[೭೦]
  • ಮೂರನೇ ಎರಡು ಭಾಗದಷ್ಟು ಜೈವಿಕ ಹಾಲು ಹಾಗು ಕೆನೆ ಮತ್ತು ಅರ್ಧದಷ್ಟು ಜೈವಿಕ ಚೀಸ್ ಹಾಗು ಮೊಸರು ಸಾಂಪ್ರದಾಯಿಕ ಮಹಾ ಮಳಿಗೆಗಲ್ಲಿ ಮಾರಾಟ ಮಾಡಲಾಗುತ್ತದೆ.[೭೧]
ಕೆನಡಾ:
  • ಜೈವಿಕ ಆಹಾರದ ವ್ಯಾಪಾರವು 2006ರಲ್ಲಿ $1 ಶತಕೋಟಿಯನ್ನು ಮೀರಿಸಿತು. ಕೆನಡಾದಲ್ಲಿ ಆಹಾರ ವ್ಯಾಪಾರವು 0.9%ನಷ್ಟಿತ್ತೆಂದು ಗಣಿಸಲಾಗಿದೆ.[೭೨]
  • ಜೈವಿಕ ಆಹಾರವು ದಿನಸಿ ಅಂಗಡಿಗಳಲ್ಲಿ 2005ಕ್ಕಿಂತ 2006ರಲ್ಲಿ 28%ನಷ್ಟು ಅಧಿಕ ವ್ಯಾಪಾರವಾಗಿತ್ತು.[೭೨]
  • ಕೆನಡಾದ ಜನಸಂಖ್ಯೆಯಲ್ಲಿ 13%ನಷ್ಟು ಬ್ರಿಟಿಶ್ ಕೊಲಂಬಿಯನ್ಸ್ ಇದ್ದಾರಾದರೂ, 2006ರಲ್ಲಿ ಕೆನಡಾದಲ್ಲಿ ಮಾರಾಟವಾದ ಜೈವಿಕ ಆಹಾರದಲ್ಲಿ 26%ನಷ್ಟು ಖರೀದಿಸಿದ್ದಾರೆ.[೭೩]

ಯುರೋಪ್‌

ಬದಲಾಯಿಸಿ

ಯುರೋಪಿಯನ್ ಒಕ್ಕೂಟ (EU25)ಒಟ್ಟಾರೆ 3.9%ನಷ್ಟು ಬಳಕೆಯಾಗುವ ಕೃಷಿ ಭೂಮಿಯನ್ನು ಜೈವಿಕ ಆಹಾರ ಉತ್ಪಾದನೆಗೆ ಬಳಸಿಕೊಳ್ಳುತ್ತಿದೆ. ಅತ್ಯಧಿಕ ಪ್ರಮಾಣದ ಜೈವಿಕ ನೆಲವನ್ನು ಹೊಂದಿರುವ ರಾಷ್ಟ್ರಗಳೆಂದರೆ ಆಸ್ಟ್ರಿಯಾ(11%) ಹಾಗು ಇಟಲಿ(8.4), ನಂತರದ ಸ್ಥಾನವನ್ನು ಜೆಕ್ ರಿಪಬ್ಲಿಕ್ ಹಾಗು ಗ್ರೀಸ್ (ಎರಡೂ 7.2%) ರಾಷ್ಟ್ರಗಳು ಆಕ್ರಮಿಸಿಕೊಂಡಿವೆ. ಈ ಕೃಷಿಗಾಗಿ ಅತ್ಯಂತ ಕಡಿಮೆ ಭೂಮಿಯ ಅಂಕಿಅಂಶಗಳನ್ನು ಮಾಲ್ಟ (0.1%), ಪೋಲಂಡ್ (0.6%) ಹಾಗು ಐರ್ಲ್ಯಾಂಡ್(0.8%)ದೇಶಗಳು ಹೊಂದಿವೆ[೭೪]

ಆಸ್ಟ್ರಿಯಾ

ಕಳೆದ 2007ರಲ್ಲಿ, 11.6%ರಷ್ಟು ರೈತರ ಎಲ್ಲ ಉತ್ಪಾದನೆಯು ಜೈವಿಕವಾಗಿದ್ದವು.[೭೫] ಸರಕಾರವು 2010ರ ಹೊತ್ತಿಗೆ ಜೈವಿಕ ಉತ್ಪಾದನೆಯನ್ನು 20%ನಷ್ಟು ಹೆಚ್ಚಿಸುವ ಸಲುವಾಗಿ ಪ್ರೋತ್ಸಾಹ ಧನವನ್ನು ನಿಗದಿಪಡಿಸಿದೆ.[೭೬]

  • ಕಳೆದ 2006ರಲ್ಲಿ, ಆಸ್ಟ್ರಿಯಾದ ಮಹಾ ಮಳಿಗೆಗಳಲ್ಲಿ(ಡಿಸ್ಕೌಂಟ್ ಅಂಗಡಿಗಳು ಸೇರಿದಂತೆ) ಮಾರಾಟವಾದ 4.9%ನಷ್ಟು ಎಲ್ಲ ಆಹಾರ ಉತ್ಪನ್ನಗಳು ಜೈವಿಕವಾಗಿದ್ದವು.[೭೭] ಅದೇ ವರ್ಷ 8000 ವಿವಿಧ ಜೈವಿಕ ಉತ್ಪನ್ನಗಳು ದೊರೆತವು.[೭೮]
ಇಟಲಿ:
  • ಕಳೆದ 2005ರಿಂದ ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಊಟವು ಜೈವಿಕವಾಗಿರಬೇಕೆಂಬ ಕಾನೂನನ್ನು ರೂಪಿಸಲಾಗಿದೆ.[೭೯]
ಪೋಲೆಂಡ್‌
  • ಕಳೆದ 2005ರಲ್ಲಿ, 168,000 ಹೆಕ್ಟೇರ್ ಭೂಮಿಯು ಜೈವಿಕ ನಿರ್ವಹಣೆಯಲ್ಲಿತ್ತು. ಶೇಖಡಾ 7ರಷ್ಟು ಪೋಲಿಷ್ ಗ್ರಾಹಕರು EU-ಇಕೊ-ನಿಬಂಧನೆಯಂತೆ ಉತ್ಪಾದಿಸಲ್ಪಟ್ಟ ಆಹಾರವನ್ನು ಖರೀದಿಸಿದ್ದಾರೆ. ಜೈವಿಕ ಮಾರುಕಟ್ಟೆಯ ಮೌಲ್ಯವು 50 ದಶಲಕ್ಷ ಯುರೋಸ್ ಎಂದು ಅಂದಾಜಿಸಲಾಗಿದೆ (2006).[೮೦]
UK
  • ಕಳೆದ 1993/94ರಲ್ಲಿ ಕೇವಲ £100 ದಶಲಕ್ಷವಿದ್ದ ಜೈವಿಕ ಆಹಾರದ ವ್ಯಾಪಾರವು 2004ರಲ್ಲಿ £1.21 ದಶಲಕ್ಷಕ್ಕೆ ಏರಿಕೆಯಾಯಿತು (2003ರಲ್ಲಿ 11%ನಷ್ಟು ಅಧಿಕವಾಗಿತ್ತು).[೮೧]


ಕೆರಿಬಿಯನ್

ಬದಲಾಯಿಸಿ
ಕ್ಯೂಬಾ
  • ಕಳೆದ 1990ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ಪೂರ್ವ ಬಣದ ರಾಷ್ಟ್ರಗಳಿಂದ ಈ ಮುಂಚೆ ಖರೀದಿಸುತ್ತಿದ್ದ ಕೃಷಿ ಉತ್ಪನ್ನಗಳು ಕ್ಯೂಬಾಕ್ಕೆ ದೊರಕದಾಯಿತು, ಜೊತೆಗೆ ಹಲವು ಕ್ಯೂಬನ್ ಕೃಷಿಜಮೀನುಗಳನ್ನು ಅವಶ್ಯಕತೆಗನುಗುಣವಾಗಿ ಜೈವಿಕ ವಿಧಾನಕ್ಕೆ ಮಾರ್ಪಾಡು ಮಾಡಲಾಯಿತು.[೮೨] ಪರಿಣಾಮವಾಗಿ, ಕ್ಯೂಬಾದಲ್ಲಿ ಜೈವಿಕ ಕೃಷಿಯು ಮುಖ್ಯವಾಹಿನಿಯಲ್ಲಿ ಬಳಕೆಗೆ ಬಂದಿತು, ಈ ನಡುವೆ ಇತರ ರಾಷ್ಟ್ರಗಳಲ್ಲಿ ಈ ಪದ್ದತಿಯು ಒಂದು ಪರ್ಯಾಯ ಬಳಕೆಯಾಗಿ ಉಳಿಯಿತು. ಆದಾಗ್ಯೂ, ಕ್ಯೂಬಾದಲ್ಲಿ ಜೈವಿಕವೆಂದು ಕರೆಯಲ್ಪಡುವ ಕೆಲವು ಉತ್ಪನ್ನಗಳು ಇತರ ರಾಷ್ಟ್ರಗಳಲ್ಲಿ ಪ್ರಮಾಣೀಕರಣದ ಅಗತ್ಯಗಳನ್ನು ಪೂರೈಸಲಿಲ್ಲ. (ಉದಾಹರಣೆಗೆ,[೮೩][೮೪] ಬೆಳೆಗಳನ್ನು ಕುಲಾಂತರಿ ತಳಿಗೆ ಮಾರ್ಪಡಿಸಿರಬಹುದು), ಕ್ಯೂಬಾ, EU ಮಾರುಕಟ್ಟೆಗಳಲ್ಲಿ EU ಜೈವಿಕ ಮಾನದಂಡಗಳಿಗೆ ಒಳಪಡುವ ಜೈವಿಕ ಸಿಟ್ರಸ್‌ನ್ನು ಹಾಗು ಸಿಟ್ರಸ್ ರಸವನ್ನು ರಫ್ತು ಮಾಡುತ್ತದೆ. ಜೈವಿಕ ವಿಧಾನಕ್ಕೆ ಕ್ಯೂಬಾದ ಈ ಬಲವಂತದ ಮಾರ್ಪಾಡು, ಅದಕ್ಕೆ ಜೈವಿಕ ಉತ್ಪನ್ನಗಳ ವಿಶ್ವವ್ಯಾಪಕ ಸರಬರಾಜುದಾರನ ಸ್ಥಾನವನ್ನು ನೀಡುತ್ತದೆ.[೮೫]

ಜೈವಿಕ ಒಲಿಂಪಿಯಾಡ್

ಬದಲಾಯಿಸಿ

ಜೈವಿಕ ಒಲಿಂಪಿಯಾಡ್ 2007ರಲ್ಲಿ ಹನ್ನೆರೆಡು ಸೂತ್ರಗಳನ್ನು ಆಧರಿಸಿ, ಜೈವಿಕತೆಯಲ್ಲಿ ಮುಂದುವರೆದ ರಾಷ್ಟ್ರಗಳಿಗೆ, ಸ್ವರ್ಣ, ರಜತ ಹಾಗು ಕಂಚಿನ ಪದಕಗಳನ್ನು ನೀಡಲಾಯಿತು.[೮೬] . ಸ್ವರ್ಣ ಪದಕ ವಿಜೇತರು:

  • 11.8 ದಶಲಕ್ಷ ಜೈವಿಕ ಹೆಕ್ಟೇರ್‌ಗಳನ್ನು ಹೊಂದಿದ ಆಸ್ಟ್ರೇಲಿಯ.
  • 83,174 ಜೈವಿಕ ಕೃಷಿಭೂಮಿಗಳನ್ನು ಹೊಂದಿರುವ ಮೆಕ್ಸಿಕೋ.
  • 15.9 ದಶಲಕ್ಷ ಪ್ರಮಾಣೀಕೃತ ಮುಂಚೆ ಕೃಷಿ ಮಾಡಿಲ್ಲದ ಜೈವಿಕ ಹೆಕ್ಟೇರ್ ಗಳನ್ನು ಹೊಂದಿರುವ ರೊಮೇನಿಯ.
  • 135 ಸಾವಿರ ಟನ್ನುಗಳಷ್ಟು ಮುಂಚೆ ಕೃಷಿ ಮಾಡಿಲ್ಲದ ಜೈವಿಕ ಬೆಳೆಯನ್ನು ಉತ್ಪಾದಿಸಿರುವ ಚೀನಾ.
  • 1805 ಜೈವಿಕ ಸಂಶೋಧನಾ ಪ್ರಕಟಣೆಗಳನ್ನು ವರದಿ ಮಾಡಿರುವ ಡೆನ್ಮಾರ್ಕ್.
  • IFOAMನ 69 ಸದಸ್ಯರನ್ನು ಹೊಂದಿರುವ ಜರ್ಮನಿ.
  • 1,998,705ರಷ್ಟು ಅಧಿಕ ಜೈವಿಕ ಹೆಕ್ಟೇರ್‌ಗಳನ್ನು ಹೊಂದಿರುವ ಚೀನಾ.
  • 27.9%ರಷ್ಟು ಕೃಷಿ ಭೂಮಿಯು ಜೈವಿಕವೆಂದು ಪ್ರಮಾಣೀಕರಣಗೊಂಡಿರುವ ಲೀಕ್‌ಟೆನ್‌ಸ್ಟೈನ್.
  • ತನ್ನ ಜೈವಿಕ ಹೆಕ್ಟೇರ್‌ಗಳಲ್ಲಿ ವಾರ್ಷಿಕವಾಗಿ 8488%ನಷ್ಟು ಹೆಚ್ಚಿಸಿಕೊಂಡಿರುವಮಾಲಿ.
  • ಕೃಷಿ ಭೂಮಿಯನ್ನು ತನ್ನ ಜೈವಿಕತೆಯೊಂದಿಗೆ ವಾರ್ಷಿಕವಾಗಿ 3.01%ನಷ್ಟು ಹೆಚ್ಚು ಹಂಚಿಕೊಂಡಿರುವ ಲಾಟ್ವಿಯ.
  • ಅದರ ಒಟ್ಟಾರೆ ಕೃಷಿಯಲ್ಲಿ, ಜೈವಿಕತೆಯನ್ನು 4-ವರ್ಷಗಳಲ್ಲಿ 10.9%ನಷ್ಟು ಹೆಚ್ಚಿಸಿಕೊಂಡಿರುವ ಲೀಕ್‌ಟೆನ್‌ಸ್ಟೈನ್.
  • ಜೈವಿಕ ಉತ್ಪನ್ನಗಳ ಮೇಲೆ ವಾರ್ಷಿಕವಾಗಿ ತಲಾ ಒಬ್ಬರಿಗೆ 103 ಯುರೋಗಳನ್ನು ಹೂಡಿಕೆ ಮಾಡುವ ಸ್ವಿಟ್ಜರ್ಲ್ಯಾಂಡ್.

ಇವನ್ನೂ ಗಮನಿಸಿ

ಬದಲಾಯಿಸಿ

ಇಕೊಲೇಬಲ್]]


ದಿ ಫ್ಯೂಚರ್ ಆಫ್ ಫುಡ್ (ಕುಲಾಂತರಿ ತಳಿ ಆಹಾರದ ಜೊತೆಗೆ ಜೈವಿಕ ಆಹಾರದ ಬಗ್ಗೆ ಒಂದು ಭಾಗವನ್ನು ಒಳಗೊಂಡ ಒಂದು ಸಾಕ್ಷ್ಯಚಿತ್ರ)

ಆಕರಗಳು

ಬದಲಾಯಿಸಿ
  1. ಪಾಲ್, J. & ಲಯೋನ್ಸ್, K. (2008) , ನ್ಯಾನೋಟೆಕ್ನೋಲಜಿ: ದಿ ನೆಕ್ಸ್ಟ್ ಚ್ಯಾಲೆಂಜ್ ಫಾರ್ ಆರ್ಗ್ಯಾನಿಕ್ಸ್, ಜರ್ನಲ್ ಆಫ್ ಆರ್ಗ್ಯಾನಿಕ್ ಸಿಸ್ಟಮ್ಸ್, 3(1) 3–22
  2. ಪಾಲ್, J. & ಲಯೋನ್ಸ್, K. (2008), ನ್ಯಾನೋಟೆಕ್ನೋಲಜಿ: ದಿ ನೆಕ್ಸ್ಟ್ ಚ್ಯಾಲೆಂಜ್ ಫಾರ್ ಆರ್ಗ್ಯಾನಿಕ್ಸ್, ಜರ್ನಲ್ ಆಫ್ ಆರ್ಗ್ಯಾನಿಕ್ ಸಿಸ್ಟಮ್ಸ್, 3(1) 3–22
  3. ಜಾನ್ ಪಾಲ್, "ದಿ ಫಾರ್ಮ್ ಆಸ್ ಆರ್ಗ್ಯಾನಿಸಂ: ದಿ ಫೌಂಡೆಶನ್ ಐಡಿಯ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್", ಎಲಿಮೆಂಟಲ್ಸ್: ಜರ್ನಲ್ ಆಫ್ ಬಯೋ-ಡೈನಾಮಿಕ್ಸ್ ತಾಸ್ಮೇನಿಯ , ಸಂ.80 (2006): pp. 14–18.
  4. "ಲೇಬಲಿಂಗ್: ಪ್ರಿಯಾಂಬಲ್". Archived from the original on 2013-05-14. Retrieved 2021-08-28.
  5. "ಆರ್ಕೈವ್ ನಕಲು". Archived from the original on 2010-06-27. Retrieved 2010-05-20.
  6. http://www.organicconsumers.org/articles/article_20459.cfm
  7. ಸ್ಟಾಲ್ಜ್, M.; ಪಿಯೋರ್, A.; ಹಾರಿಂಗ್, A.M. ಹಾಗು ದಬ್ಬರ್ಟ್, S. (2000) ಯುರೋಪ್ ನಲ್ಲಿ ಜೈವಿಕ ಕೃಷಿಯಿಂದ ಪರಿಸರದ ಮೇಲಿನ ಪರಿಣಾಮ. ಆರ್ಗ್ಯಾನಿಕ್ ಫಾರ್ಮಿಂಗ್ ಇನ್ ಯುರೋಪ್: ಎಕನಾಮಿಕ್ಸ್ ಅಂಡ್ ಪಾಲಿಸಿ ಸಂ. 6. ಯೂನಿವರ್ಸಿಟಾಟ್, ಹೊಹೆನ್‌ಹೇಮ್-ಸ್ಟಟ್‌ಗಾರ್ಟ್ ಹೊಹೆನ್‌ಹೇಮ್.
  8. Hansen, Birgitt (2001). "Approaches to assess the environmental impact of organic farming with particular regard to Denmark". Agriculture, Ecosystems & Environment. 83: 11–26. doi:10.1016/S0167-8809(00)00257-7. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  9. ೯.೦ ೯.೧ Bob Goldberg. "The Hypocrisy of Organic Farmers". AgBioWorld. Retrieved 2007-10-10.
  10. ೧೦.೦ ೧೦.೧ Andrew Leonard. "Save the rain forest – boycott organic?". How The World Works. Archived from the original on 2007-10-13. Retrieved 2007-10-10.
  11. Department for Environment Food and Rural Affairs. "Assessment of the enviromnmental impacts of organic farming" (PDF). Archived from the original (PDF) on 2010-11-09. Retrieved 2009-09-29.
  12. Mader; Fliessbach, A; Dubois, D; Gunst, L; Fried, P; Niggli, U; et al. (2002). "Soil Fertility and Biodiversity in Organic Farming". Science. 296 (5573): 1694–1697. doi:10.1126/science.1071148. PMID 12040197. Archived from the original on 2009-10-01. Retrieved 2010-05-20. {{cite journal}}: Explicit use of et al. in: |author= (help)
  13. Welsh, Rick (1999). "Economics of Organic Grain and Soybean Production in the Midwestern United States". Henry A. Wallace Institute for Alternative Agriculture. {{cite journal}}: External link in |title= (help)
  14. Johnston, A. E. (1986). "Soil organic-matter, effects on soils and crops". Soil Use Management. 2: 97–105. doi:10.1111/j.1475-2743.1986.tb00690.x.
  15. ದಿ ಬಿಚೆಲ್ ಸಮಿತಿ. 1999. ಮುಖ್ಯ ಸಮಿತಿಯಿಂದ ವರದಿ. ಡ್ಯಾನಿಶ್ ಎನ್‌ವಾಯಿರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ. ಕಮಿಟಿಯ ತೀರ್ಮಾನಗಳು ಹಾಗು ಶಿಫಾರಸ್ಸುಗಳು: 8.7.1 ಒಟ್ಟು ಫೇಸ್-ಔಟ್. ವರದಿಯು ಮುದ್ರಣದಲ್ಲಿ ದೊರಕಿಲ್ಲ ಆದರೆ ಅಂತರಜಾಲದಲ್ಲಿ ಪೋಸ್ಟ್ ಮಾಡಲಾಗಿದೆ:http://www.mst.dk/udgiv/Publications/1998/87-7909-445-7/html/kap08_eng.htm#8.7.1 Archived 2014-01-19 ವೇಬ್ಯಾಕ್ ಮೆಷಿನ್ ನಲ್ಲಿ.. ಉದ್ಧರಿಸಿದ ಭಾಗ "ಒಂದು ಒಟ್ಟಾರೆ ಕ್ರಿಮಿನಾಶಕಗಳ ಬಳಕೆಯನ್ನು ನಿರ್ಬಂಧಿಸುವುದರಿಂದ ಕೃಷಿ ಮಟ್ಟದ ಇಳುವರಿಗಳಲ್ಲಿ 10% ನಿಂದ 25%ನಷ್ಟು ಸರಾಸರಿ ಕುಸಿತವುಂಟಾಗುತ್ತದೆ; ಹೈನುಗಾರಿಕೆಗೆ ಇದು ಅತೀಕಡಿಮೆ ನಷ್ಟಗಳನ್ನು ಉಂಟುಮಾಡುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಶೇಷ ಬೆಳೆಗಳನ್ನು ಹೊಂದಿರುವ ಜಮೀನಿನಲ್ಲಿ, ಉದಾಹರಣೆಗೆ ಆಲೂಗೆಡ್ಡೆ, ಸಿಹಿ ಬೀಟ್ ಗೆಡ್ಡೆ, ಸೀಡ್ ಗ್ರಾಸ್‌ನ ಉತ್ಪಾದನೆ ನಷ್ಟಗಳು ಪ್ರಮಾಣಕ್ಕೆ ಸಂಬಂಧಿಸಿದಂತೆ ಸುಮಾರು 50%ನಷ್ಟಾಗುತ್ತದೆ. ಬಹುಶಃ ಇತರ ಬೆಳೆಗಳು ಈ ಬೆಳೆಗಳನ್ನು ಅತಿಕ್ರಮಿಸಿರಬಹುದು."
  16. Michael Pollan. "Chief farmer". New York Times. Retrieved 2008-11-15.
  17. ಪೆರ್ಫೆಕ್ಟೊ et al., ರಿನ್ಯೂಅಬಲ್ ಅಗ್ರಿಕಲ್ಚರ್ ಅಂಡ್ ಫುಡ್ ಸಿಸ್ಟಮ್ಸ್ ನಲ್ಲಿ (2007), 22: 86–108 ಕೇಂಬ್ರಿಜ್ ಯುನಿವೆರ್ಸಿಟಿ ಪ್ರೆಸ್: ನ್ಯೂ ಸೈಂಟಿಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ 13:46 12 ಜುಲೈ 2007
  18. http://www.economist.com/daily/columns/greenview/displayStory.cfm?story_id=11911706
  19. Reganold; Glover, JD; Andrews, PK; Hinman, HR; et al. (2001). "Sustainability of three apple production systems". Nature. 410 (6831): 926–930. doi:10.1038/35073574. PMID 11309616. {{cite journal}}: Explicit use of et al. in: |author= (help); Unknown parameter |month= ignored (help)
  20. Linda A. McCauley; et al. (2006). "Studying Health Outcomes in Farmworker Populations Exposed to Pesticides". Environmental Health Perspectives. 114. Archived from the original on 2007-09-27. Retrieved 2010-05-20. {{cite journal}}: Explicit use of et al. in: |author= (help)
  21. ಇಕೊಬಿಚೋನ್ DJ. 1996. ಕ್ರಿಮಿನಾಶಕಗಳ ವಿಷಕಾರಿ ಪರಿಣಾಮ. ಇನ್: ಕಾಸರೆಟ್ ಅಂಡ್ ದೌಲ್ಸ್ ಟಾಕ್ಸಿಕಾಲಜಿ: ದಿ ಬೇಸಿಕ್ ಸೈನ್ಸ್ ಆಫ್ ಪಾಯಸನ್ಸ್ (ಕ್ಲಾಸ್ಸೇನ್ CD, ದೌಲ್ J, eds). 5th ed. ನ್ಯೂಯಾರ್ಕ್:ಮ್ಯಾಕ್ ಮಿಲನ್, 643–689.
  22. Arcury TA, Quandt SA, Mellen BG (2003). "An exploratory analysis of occupational skin disease among Latino migrant and seasonal farmworkers in North Carolina". Journal of Agricultural Safety and Health. 9 (3): 221–32. PMID 12970952.{{cite journal}}: CS1 maint: multiple names: authors list (link)
  23. O'Malley MA (1997). "Skin reactions to pesticides". Occupational Medicine. 12 (2): 327–345. PMID 9220489.
  24. Daniels JL, Olshan AF, Savitz DA. (1997). "Pesticides and childhood cancers". Environmental Health Perspectives. 105 (10): 1068–1077. doi:10.2307/3433848. PMC 1470375. PMID 9349828.{{cite journal}}: CS1 maint: multiple names: authors list (link)
  25. Kamel F; et al. (2003). "[http://dir.niehs.nih.gov/direb/studies/fwhs/pubs.htm Neurobehavioral performance and work experience in Florida farmworkers]". Environmental Health Perspectives. 111 (14): 1765–1772. PMC 1241721. PMID 14594629. {{cite journal}}: Explicit use of et al. in: |author= (help); External link in |title= (help)
  26. Firestone JA, Smith-Weller T, Franklin G, Swanson P, Longsteth WT, Checkoway H. (2005). "Pesticides and risk of Parkinson disease: a population-based case-control study". Archives of Neurology. 62 (1): 91–95. doi:10.1001/archneur.62.1.91. PMID 15642854.{{cite journal}}: CS1 maint: multiple names: authors list (link)
  27. Engel LS, O'Meara ES, Schwartz SM. (2000). "Maternal occupation in agriculture and risk of limb defects in Washington State, 1980–1993". Scandinavian Journal of Work, Environment & Health. 26 (3): 193–198. PMID 10901110.{{cite journal}}: CS1 maint: multiple names: authors list (link) Cordes DH, Rea DF. (1988). "Health hazards of farming". American Family Physician. 38 (4): 233–243. PMID 3051979. Das R, Steege A, Baron S, Beckman J, Harrison R (2001). "Pesticide-related illness among migrant farm workers in the United States" (PDF). International Journal of Occupational and Environmental Health. 7 (4): 303–312. PMID 11783860. Archived from the original (PDF) on 2008-05-28. Retrieved 2010-05-20.{{cite journal}}: CS1 maint: multiple names: authors list (link) Eskenazi B, Bradman A, Castorina R. (1999). "Exposures of children to organophosphate pesticides and their potential adverse health effects". Environmental Health Perspectives. 107: 409–419. PMC 1566222. PMID 10346990. Archived from the original on 2008-10-05. Retrieved 2010-05-20.{{cite journal}}: CS1 maint: multiple names: authors list (link) Garcia AM (2003). "Pesticide exposure and women's health". American Journal of Industrial Medicine. 44 (6): 584–594. doi:10.1002/ajim.10256. PMID 14635235. Moses M. (1989). "Pesticide-related health problems and farmworkers". American Association of Occupational Health Nurses. 37 (3): 115–130. PMID 2647086. Schwartz DA, Newsum LA, Heifetz RM. (1986). "Parental occupation and birth outcome in an agricultural community". Scandinavian Journal of Work, Environment & Health. 12 (1): 51–54. PMID 3485819.{{cite journal}}: CS1 maint: multiple names: authors list (link) Stallones L, Beseler C. (2002). "Pesticide illness, farm practices, and neurological symptoms among farm residents in Colorado". Environ Res. 90 (2): 89–97. doi:10.1006/enrs.2002.4398. PMID 12483798. Strong, LL, Thompson B, Coronado GD, Griffith WC, Vigoren EM, Islas I. (2004). "Health symptoms and exposure to organophosphate pesticides in farmworkers". American Journal of Industrial Medicine. 46 (6): 599–606. doi:10.1002/ajim.20095. PMID 15551369.{{cite journal}}: CS1 maint: multiple names: authors list (link) Van Maele-Fabry G, Willems JL. (2003). "Occupation related pesticide exposure and cancer of the prostate: a meta-analysis". Occupational and Environmental Medicine. 60 (9): 634–642. doi:10.1136/oem.60.9.634. PMC 1740608. PMID 12937183.
  28. Alavanja MC, Hoppin JA, Kamel F. (2004). "Health effects of chronic pesticide exposure: cancer and neurotoxicity". Annual Review of Public Health. 25: 155–197. doi:10.1146/annurev.publhealth.25.101802.123020. PMID 15015917.{{cite journal}}: CS1 maint: multiple names: authors list (link)
  29. Kamel F, Hoppin JA (2004). "Association of pesticide exposure with neurological dysfunction and disease". Environmental Health Perspectives. 112 (9): 950–958. PMC 1247187. PMID 15198914.
  30. "Pesticide levels 'high in fruit'". BBC. 2004-07-30. Retrieved 2008-03-30. {{cite news}}: Cite has empty unknown parameter: |coauthors= (help)
  31. STUTCHBURY, BRIDGET (2008-03-30). "Did Your Shopping List Kill a Songbird?". New York Times. Retrieved 2008-03-30. {{cite news}}: Cite has empty unknown parameter: |coauthors= (help)
  32. Baker, Brian. "Pesticide residues in conventional, IPM-grown and organic foods: Insights from three U.S. data sets". Food Additives and Contaminants. 19 (5): 427–446. doi:10.1080/02652030110113799. PMID 12028642. Archived from the original on 2007-02-03. Retrieved 2007-01-28. {{cite journal}}: Unknown parameter |coauthors= ignored (|author= suggested) (help)
  33. Goldberg, Adam (2002-05-08). "Consumers Union Research Team Shows: Organic Foods Really DO Have Less Pesticides". Consumers Union. Archived from the original on 2010-12-28. Retrieved 2007-01-27. {{cite web}}: Cite has empty unknown parameter: |coauthors= (help)
  34. Page 34 of
    Pesticide Data Program (February 2006). "Annual Summary Calendar Year 2005" (pdf). USDA. Retrieved 2006-07-24. {{cite journal}}: Cite journal requires |journal= (help)
  35. ಕನ್ಸ್ಯೂಮರ್ಸ್ ಯೂನಿಯನ್. ಡಿಸೆಂಬರ್ 15, 1997. ಜೈವಿಕ ಆಹಾರವು ಅವುಗಳ ಬೆಳೆಯಂತೆ ಉತ್ತಮವಾಗಿದೆಯೇ? ಒಂದು ಗ್ರಾಹಕ ಸೂಚಿ ವರದಿಯ ಅಧ್ಯಯನ. ಕನ್ಸ್ಯೂಮರ್ಸ್ ಯೂನಿಯನ್ ಪ್ರೆಸ್ ರಿಲೀಸ್. "ಕನ್ಸ್ಯೂಮರ್ ರಿಪೋರ್ಟ್ಸ್ ಪರೀಕ್ಷಿಸಿದ ಕಾಲು-ಭಾಗದಷ್ಟು ಜೈವಿಕ ಉತ್ಪನ್ನದ ಮಾದರಿಯನ್ನು ಶೇಕಡಾ 77ರಷ್ಟಿದ್ದ ಸಾಂಪ್ರದಾಯಿಕ ಮಾದರಿಗಳಿಗೆ ಹೋಲಿಸಿದಾಗ ಕೆಲವು ಕ್ರಿಮಿನಾಶಕಗಳ ಉಳಿಕೆಯು ಕಂಡುಬಂದಿತು, ."
  36. ಕನ್ಸ್ಯೂಮರ್ಸ್ ಯೂನಿಯನ್. ಜನವರಿ, 1998. ಗ್ರೀನರ್ ಗ್ರೀನ್ಸ್: ದಿ ಟ್ರೂತ್ ಅಬೌಟ್ ಆರ್ಗ್ಯಾನಿಕ ಫುಡ್. ಕನ್ಸ್ಯೂಮರ್ ರಿಪೋರ್ಟ್ಸ್ 63(1): ಪುಟಗಳು 12–18.
  37. ಬೇಕರ್ et al. ಮೇ, 2002 ಸಾಂಪ್ರದಾಯಿಕ, IPM-ಬೆಳೆ ಹಾಗು ಜೈವಿಕ ಆಹಾರಗಳಲ್ಲಿ ಕ್ರಿಮಿನಾಶಕಗಳ ಉಳಿಕೆಗಳು: U.S.ನ ಮೂರು ದತ್ತಾಂಶಗಳ ಸಂಗ್ರಹದ ಒಳನೋಟ. ಸಮ್ಮರಿ: ಅನಾಲಿಸಿಸ್ ಅಂಡ್ ರಿಸಲ್ಟ್ಸ್: ಫ್ರಿಕ್ವೆನ್ಸಿ ಆಫ್ ಪಾಸಿಟಿವ್ ಸ್ಯಾಂಪಲ್ಸ್. ಫುಡ್ ಅಡ್ಡಿಟಿವ್ಸ್ ಅಂಡ್ ಕಂಟಾಮಿನ್ಯಾಂಟ್ಸ್: ಸಂಪುಟ 19, ನಂ. 5, ಪುಟಗಳು 427–446. "ಫ್ರೀಕ್ವೆನ್ಸಿ ಆಫ್ ಪಾಸಿಟಿವ್ ಸ್ಯಾಂಪಲ್ಸ್: ಜೈವಿಕ ಉತ್ಪನ್ನಗಳ ಮಾದರಿಯು ಸ್ಥಿರವಾಗಿ ಒಂದು ಕಡಿಮೆ ಶೇಕಡಾವಾರು ಪ್ರಮಾಣದಲ್ಲಿ ಕ್ರಿಮಿನಾಶಕಗಳ ಉಳಿಕೆಯನ್ನು ಹೊಂದಿರುತ್ತವೆ: USDA, DPR ಹಾಗು CU ಡಾಟಾದಲ್ಲಿ ಕ್ರಮವಾಗಿ 23, 6.5 ಹಾಗು ಶೇಖಡಾ 27ರಷ್ಟು ಹೊಂದಿವೆ."
  38. ಎನ್‌ವೈರನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಆನ್ಲೈನ್. ಜನವರಿ 11, 2006. ಜೈವಿಕ ತರಕಾರಿಗಳು ಕ್ರಿಮಿನಾಶಕಗಳಿಂದ ಮುಕ್ತವಾಗಿಲ್ಲ. ಸೈನ್ಸ್ ನ್ಯೂಸ್.
  39. ^ COMPLIANCE SUMMARY FOR FRESH FRUIT AND VEGETABLE COMMODITIES Archived 2010-07-30 ವೇಬ್ಯಾಕ್ ಮೆಷಿನ್ ನಲ್ಲಿ.
  40. "ಮಾನಿಟರಿಂಗ್ ಆಫ್ ಇಂಪೋರ್ಟೆಡ್ ಪ್ರೋಸ್ಸೇಸ್ಡ್ ಫ್ರೂಟ್ ಅಂಡ್ ವೆಜಿಟೆಬಲ್ ಪ್ರಾಡಕ್ಟ್ಸ್ ಬೈ ಸ್ಪೆಸಿಫಿಕ್ ಕಮಾಡಿಟಿ, ಕಂಟ್ರಿ ಅಂಡ್ ಟೆಸ್ಟ್ಸ್". Archived from the original on 2010-07-30. Retrieved 2010-05-20.
  41. "ಫ್ರೆಶ್ ಫ್ರೂಟ್ ಅಂಡ್ ವೆಜಿಟೆಬಲ್ಸ್". Archived from the original on 2010-07-30. Retrieved 2010-05-20.
  42. "Report ಕ್ರಿಮಿನಾಶಕಗಳು, ಕೃಷಿ ರಾಸಾಯನಿಕಗಳು, ಪರಿಸರ ಮಾಲಿನ್ಯಗಳು ಮತ್ತು ಸಸ್ಯದ ಮೂಲದ ಕೃಷಿ- ಆಹಾರ ಪದಾರ್ಥಗಳಲ್ಲಿ ಇತರೆ ಕಶ್ಮಲಗಳು". Archived from the original on 2010-07-30. Retrieved 2010-05-20.
  43. "ಡೈರಿ ಪ್ರಾಡಕ್ಟ್ಸ್". Archived from the original on 2010-07-30. Retrieved 2010-05-20.
  44. ಕೆನೆಡಿಯನ್ ಫುಡ್ ಇನ್ಸ್ಪೆಕ್ಷನ್ ಏಜೆನ್ಸಿ. 2003. ಮಕ್ಕಳ ಆಹಾರದಲ್ಲಿ ಕ್ರಿಮಿನಾಶಕಗಳ ಉಳಿಕೆ ಕುರಿತು ವರದಿ 2002 – 2003. ಇನ್ಫ್ಯಾಂಟ್ ಅಂಡ್ ಜೂನಿಯರ್ ಬೇಬಿ ಫುಡ್ ಕೆಮಿಕಲ್ ರೆಸಿಡ್ಯೂಸ್ ಪ್ರಾಜೆಕ್ಟ್.
  45. National Research Council (1993). Pesticides in the Diets of Infants and Children (1st ed.). National Academies Press. ISBN 0-309-04875-3. {{cite book}}: Cite has empty unknown parameter: |coauthors= (help); External link in |title= (help)
  46. Lu, Chensheng; et al. (2006). "[http://www.ehponline.org/members/2005/8418/8418.pdf Organic Diets Significantly Lower Children's Dietary Exposure to Organophosphorus Pesticides]". Environmental Health Perspectives. 114 (2): 260–263. doi:10.1289/ehp.8418. PMC 1367841. PMID 16451864. {{cite journal}}: Explicit use of et al. in: |author= (help); External link in |title= (help)
  47. "Raw Food" (APA). Retrieved 2008-03-06.[ಶಾಶ್ವತವಾಗಿ ಮಡಿದ ಕೊಂಡಿ]
  48. Tyrone Hayes, Kelly Haston, Mable Tsui, Anhthu Hoang, Cathryn Haeffele, and Aaron Vonk (2003). "Atrazine-Induced Hermaphroditism at 0.1 ppb in American Leopard Frogs". Environmental Health Perspectives. 111. {{cite journal}}: External link in |title= (help)CS1 maint: multiple names: authors list (link)
  49. ಪೆಸ್ಟಿಸೈಡ್ ಇನ್ಫಾರ್ಮೇಶನ್ ಪ್ರೋಫೈಲ್ಸ್: ರೊಟೆನೋನ್. ಜೂನ್, 1996. ಪೆಸ್ಟಿಸೈಡ್ ಇನ್ಫಾರ್ಮೇಶನ್ ಪ್ರಾಜೆಕ್ಟ್ ಆಫ್ ಕೋಆಪರೇಟಿವ್ ಎಕ್ಸ್‌ಟೆನ್ಷನ್ ಆಫೀಸಸ್ ಆಫ್ ಕಾರ್ನೆಲ್ ಯುನಿವರ್ಸಿಟಿ, ಆರೆಗೋನ್ ಸ್ಟೇಟ್ ಯುನಿವರ್ಸಿಟಿ, ದಿ ಯುನಿವರ್ಸಿಟಿ ಆಫ್ ಇದಾಹೋ, ಹಾಗು ದಿ ಯುನಿವೆರ್ಸಿಟಿ ಆಫ್ ಕ್ಯಾಲಿಫೋರ್ನಿಯ ಅಟ್ ಡೇವಿಸ್ ಅಂಡ್ ದಿ ಇನ್ಸ್ಟಿಟ್ಯೂಟ್ ಫಾರ್ ಎನ್ವೈರನ್ಮೆಂಟಲ್ ಟಾಕ್ಸಿಕಾಲಜಿ, ಮಿಚಿಗನ್ ಸ್ಟೇಟ್ ಯುನಿವರ್ಸಿಟಿ,http://extoxnet.orst.edu/pips/rotenone.htm
  50. Raeburn, Paul (2006). "Slow-Acting: After 25 years the EPA still won't ban a risky pesticide". Scientific American. 295: 26. {{cite journal}}: External link in |title= (help)
  51. ರಿರಿಜಿಸ್ಟ್ರೇಶನ್ ಎಲಿಜಿಬಿಲಿಟಿ ಡಿಸಿಶನ್ ಫಾರ್ ಡಿಕ್ಲೋರ್ವೊಸ್(DDVP) http://www.epa.gov/oppsrrd1/reregistration/REDs/ddvp_red.pdf
  52. ಗಂಡು ಇಲಿಗಳಲ್ಲಿ DDVPಯ 90 ದಿನದ ಒಳಚರ್ಮದ ನಂಜು, ಬುಲ್ಲೆಟಿನ್ ಆಫ್ ಎನ್ವೈರನ್ಮೆಂಟಲ್ ಕಂಟಾಮಿನೇಶನ್ ಅಂಡ್ ಟಾಕ್ಸಿಕಾಲಜಿ http://www.springerlink.com/content/g067605h75k730t2/[ಶಾಶ್ವತವಾಗಿ ಮಡಿದ ಕೊಂಡಿ]
  53. "Quality Low Input Food Project" (APA). Retrieved 2009-11-23.
  54. ನಿಗ್ಗ್ಲಿ, ಉರ್ಸ್ et al. (2009). "QLIF ಇಂಟಿಗ್ರೇಟೆಡ್ ರಿಸರ್ಚ್ ಪ್ರಾಜೆಕ್ಟ್: ಅಡ್ವಾನ್ಸಿಂಗ್ ಆರ್ಗ್ಯಾನಿಕ್ ಅಂಡ್ ಲೋ-ಇನ್ಪುಟ್ ಫುಡ್." [೧] 23 ನವೆಂಬರ್ 2009ರಲ್ಲಿ ಮರುಸಂಪಾದಿಸಲಾಗಿದೆ
  55. ಲೆಯಿಫೆರ್ಟ್, ಕಾರ್ಲೋ & ಲಾರ್ಸ್ ಎಲ್ಸ್ಗಾರ್ಡ್. (2009). "QLIF ಸಬ್ ಪ್ರಾಜೆಕ್ಟ್ 2: ಎಫೆಕ್ಟ್ಸ್ ಆಫ್ ಪ್ರೊಡಕ್ಷನ್ ಮೆಥಡ್ಸ್: ದಿಟರ್ಮೈನಿಂಗ್ ದಿ ಎಫೆಕ್ಟ್ ಆಫ್ ಆರ್ಗ್ಯಾನಿಕ್ ಅಂಡ್ ಲೋ-ಇನ್ಪುಟ್ ಪ್ರೊಡಕ್ಷನ್ ಮೆಥಡ್ಸ್ ಆನ್ ಫುಡ್ ಕ್ವಾಲಿಟಿ ಅಂಡ್ ಸೇಫ್ಟಿ." [೨] 23 ನವೆಂಬರ್ 2009ರಲ್ಲಿ ಮರುಸಂಪಾದಿಸಲಾಗಿದೆ.
  56. ನಿಗ್ಗ್ಲಿ, ಉರ್ಸ್ et al. (2009). "QLIF ಇಂಟಿಗ್ರೇಟೆಡ್ ರಿಸರ್ಚ್ ಪ್ರಾಜೆಕ್ಟ್ : ಅಡ್ವಾನ್ಸಿಂಗ್ ಆರ್ಗ್ಯಾನಿಕ್ ಅಂಡ್ ಲೋ-ಇನ್ಪುಟ್ ಫುಡ್." [೩] 23 ನವೆಂಬರ್ 2009ರಲ್ಲಿ ಮರುಸಂಪಾದಿಸಲಾಗಿದೆ
  57. "ದಿ ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ'ಸ್ ಕರೆಂಟ್ ಸ್ಟಾನ್ಸ್" (PDF). Archived from the original (PDF) on 2010-03-31. Retrieved 2010-05-20.
  58. Sophie Goodchild (2009-07-). "Organic food 'no healthier' blow". London Evening Standard. Archived from the original on 2009-08-01. Retrieved 2009-07-29. {{cite web}}: Check date values in: |date= (help)
  59. ಬೌರ್ನ್ D, ಪ್ರೆಸ್ಕಾಟ್ J. ಜನವರಿ 2002. ಏ ಕಂಪ್ಯಾರಿಸನ್ ಆಫ್ ದಿ ನ್ಯೂಟ್ರಿಷನಲ್ ವ್ಯಾಲ್ಯೂ, ಸೆನ್ಸರಿ ಕ್ವಾಲಿಟೀಸ್, ಅಂಡ್ ಫುಡ್ ಸೇಫ್ಟಿ ಆಫ್ ಆರ್ಗ್ಯಾನಿಕಲಿ ಅಂಡ್ ಕನ್ವೆನ್ಷನಲಿ ಪ್ರೊಡ್ಯೂಸ್ಡ್ ಫುಡ್ಸ್ Archived 2010-06-09 ವೇಬ್ಯಾಕ್ ಮೆಷಿನ್ ನಲ್ಲಿ. ಕ್ರಿಟಿಕಲ್ ರಿವ್ಯೂಸ್ ಇನ್ ಫುಡ್ ಸೈನ್ಸ್ ನ್ಯೂಟ್ರಿಷನ್. 42(1): 1–34.
  60. ವಿಲ್ಲಿಯಮ್ಸ್, C. M. ಫೆಬ್ರವರಿ 2002. ಜೈವಿಕ ಆಹಾರದ ಪೌಷ್ಟಿಕಾಂಶದ ಗುಣಮಟ್ಟ: ಕಂದುಬಣ್ಣದ ಛಾಯೆಯೇ ಅಥವಾ ಹಸಿರುಬಣ್ಣದ ಛಾಯೆಯೇ? ಪ್ರೊಸೀಡಿಂಗ್ಸ್ ಆಫ್ ದಿ ನ್ಯೂಟ್ರಿಶನ್ ಸೊಸೈಟಿ. 61(1): 19–24
  61. ಕೆನೆಡಿಯನ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಅಸೋಸಿಯೇಶನ್ (CPMA). ಆರ್ಗ್ಯಾನಿಕಲಿ ಗ್ರೋನ್ ಪ್ರೊಡ್ಯೂಸ್: ಜೈವಿಕ ಉತ್ಪನ್ನಗಳು ರುಚಿಕರವಾಗಿರುತ್ತವೆಯೇ? & ಜೈವಿಕ ಉತ್ಪನ್ನಗಳು ಹೆಚ್ಚು ಪೌಷ್ಟಿಕರವಾಗಿರುತ್ತವೆಯೇ?
  62. ಸರ್ ಜಾನ್ ಕ್ರೆಬ್ಸ್. ಜೂನ್ 5, 2003. ಜೈವಿಕ ಆಹಾರವು ನಿಮಗೆ ಉತ್ತಮವಾಗಿದೆಯೇ? ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ ಯ ಅಂದಿನ ಅಧ್ಯಕ್ಷ, ಸರ್ ಜಾನ್ ಕ್ರೆಬ್ಸ್, ಜೂನ್ 5, 2005ರಲ್ಲಿ ನಡೆದ ಚೆಲ್ಟೆನ್ಹಾಮ್ ವಿಜ್ಞಾನ ಮೇಳದಲ್ಲಿ ನೀಡಿದ ಭಾಷಣ. ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿಯ ಅಂತರ್ಜಾಲದಲ್ಲಿ ಪೋಸ್ಟ್ ಮಾಡಲಾಗಿದೆ: http://www.food.gov.uk/news/newsarchive/2003/jun/cheltenham Archived 2010-10-14 ವೇಬ್ಯಾಕ್ ಮೆಷಿನ್ ನಲ್ಲಿ.
  63. Reganold, John (2001). "Sustainability of Organic, Conventional, and Integrated Apple Orchards". {{cite journal}}: Cite journal requires |journal= (help); External link in |title= (help)
  64. "The Global Market for Organic Food & Drink". Organic Monitor. 2002. Retrieved 2006-06-20.
  65. "Food: Global Industry Guide". Datamonitor. 2009. Retrieved 2008-08-28.
  66. "ಆರ್ಕೈವ್ ನಕಲು" (PDF). Archived from the original (PDF) on 2008-08-21. Retrieved 2010-05-20.
  67. Hansen, Nanette (2004). "Organic food sales see healthy growth". MSNBC. Archived from the original on 2006-06-22. Retrieved 2006-06-20.
  68. ವಾರ್ನರ್, ಮೆಲನಿ. "ವಾಟ್ ಇಸ್ ಆರ್ಗ್ಯಾನಿಕ್? ಪವರ್ಫುಲ್ ಪ್ಲೇಯರ್ಸ್ ವಾಂಟ್ ಎ ಸೇ". ನ್ಯೂಯಾರ್ಕ್ ಟೈಮ್ಸ್ : ನವೆಂಬರ್ 1, 2005.
  69. Catherine Greene and Carolyn Dimitri (2003). "Organic Agriculture: Gaining Ground". USDA Economic Research Service. Archived from the original on 2006-06-15. Retrieved 2006-06-20.
  70. Forschungsinstitut für biologischen Landbau (2006). "US-Biomarkt wächst wiederholt zweistellig". Ökolandbau.de. Archived from the original on 2007-10-13. Retrieved 2007-10-12.
  71. Dryer, Jerry (2003). "Market Trends: Organic Lessons". Prepared Foods. Retrieved 2006-06-20.
  72. ೭೨.೦ ೭೨.೧ Macey, Anne (2007). "Retail Sales of Certified Organic Food Products in Canada in 2006" (PDF). Organic Agriculture Center of Canada. Archived from the original (pdf) on 2008-05-28. Retrieved 2008-04-09.
  73. Macey, Anne (2007). "Retail Sales of Certified Organic Food Products in Canada in 2006. Organic food is not all organic. only food labeled with a 100% organic sticker are pesticide-free/" (PDF). Organic Agriculture Center of Canada. Archived from the original (pdf) on 2008-05-28. Retrieved 2008-04-09.
  74. European Commission – Eurostat. "Eurostat press release 80/2007" (PDF). p. 1. Retrieved 2007-10-07.
  75. Austrian Ministry of Agriculture. "FAQ". Archived from the original on 2010-07-10. Retrieved 2007-11-13.
  76. Austrian chamber of agriculture. "Obmann-Wechsel bei Bio Austria". Archived from the original on 2011-07-21. Retrieved 2007-04-26.
  77. Agrarmarkt Austria. "RollAMA Bioanteile LEH 2003–2006". p. 2. Archived from the original on 2009-03-01. Retrieved 2007-10-07.
  78. BIO AUSTRIA. "Wirtschaftlicher Durchbruch für Bio-Fachhandel im Jubiläumsjahr". Archived from the original on 2012-12-30. Retrieved 2007-11-13.
  79. Organic Consumers Association. "Italian Law Calls for All Organic Foods in Nation's Schools". Archived from the original on 2012-03-15. Retrieved 2007-11-13.
  80. SixtyTwo International Consultants. "The organic food market in Poland: Ready for take-off". Archived from the original on 2007-09-27. Retrieved 2007-10-08.
  81. Organic Centre Wales. "Organic statistics – the shape of organic food and farming". Archived from the original on 2007-10-07. Retrieved 2007-10-08.
  82. Alison Auld. "Farming with Fidel". Archived from the original on 2009-03-04. Retrieved 2007-10-08.
  83. Center for Genetic Engineering and Biotechnology. "Cuban GMO Vision" (PDF). Archived from the original (PDF) on 2013-11-05. Retrieved 2007-10-08.
  84. Centro de Ingeniería Genética y Biotecnología de Cuba. "DirecciÓn de Investigaciones Agropecuarias". Archived from the original on 2007-09-27. Retrieved 2007-10-08.
  85. Office of Global Analysis, FAS, USDA. "Cuba's Food & Agriculture Situation Report" (PDF). Retrieved 2008-09-04. {{cite web}}: |archive-url= is malformed: timestamp (help)CS1 maint: multiple names: authors list (link) CS1 maint: url-status (link)
  86. ಪಾಲ್, ಜಾನ್ "ಆರ್ಗ್ಯಾನಿಕ್ಸ್ ಒಲಿಂಪಿಯಾಡ್ 2007 – ಪೆರ್ಸ್ಪೆಕ್ಟಿವ್ಸ್ ಆನ್ ದಿ ಗ್ಲೋಬಲ್ ಸ್ಟೇಟ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್, ಎಕರ್ಸ್ ಆಸ್ಟ್ರೇಲಿಯ , (2008) 16 (1): 36–38.

ಹೆಚ್ಚಿನ ಮಾಹಿತಿಗಾಗಿ

ಬದಲಾಯಿಸಿ
  • Guthman, Julie (2004). Agrarian Dreams: The Paradox of Organic Farming in California. University of California Press. ISBN 0-520-24095-2.
  • Hamilton, Denis; Crossley, Stephen (editors) (2004). Pesticide residues in food and drinking water. J. Wiley. ISBN 0-471-48991-3. {{cite book}}: |author= has generic name (help)CS1 maint: multiple names: authors list (link)
  • Hond, Frank; et al. (2003). Pesticides: problems, improvements, alternatives. Blackwell Science. ISBN 0-632-05659-2. {{cite book}}: Explicit use of et al. in: |author= (help)
  • Watson, David H. (editor) (2004). Pesticide, veterinary and other residues in food. Woodhead Publishing. ISBN 1-85573-734-5. {{cite book}}: |author= has generic name (help)
  • Wargo, John (1998). Our Children's Toxic Legacy: How Science and Law Fail to Protect Us from Pesticides. Yale University Press. ISBN 0-300-07446-8.
  • Williams, Christine (2002). Nutritional quality of organic food: shades of grey or shades of green?. pp. 19–24. {{cite conference}}: Cite has empty unknown parameter: |coauthors= (help); Unknown parameter |booktitle= ignored (help)

ಬಾಹ್ಯ ಕೊಂಡಿಗಳು

ಬದಲಾಯಿಸಿ
  • ಪೆಸ್ಟಿಸೈಡ್ ಆಕ್ಷನ್ ನೆಟ್ವರ್ಕ್[ಶಾಶ್ವತವಾಗಿ ಮಡಿದ ಕೊಂಡಿ] ವಿಷಪೂರಿತ ಕ್ರಿಮಿನಾಶಕಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವ ಪ್ರಯತ್ನ, ಅವುಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಿರುವ ಬಗ್ಗೆ, ನಾವು ವಾಸಿಸುವ ಹಾಗು ಕೆಲಸ ಮಾಡುವ ಪರಿಸರದಲ್ಲಿ ಅವುಗಳ ಉಪಸ್ಥಿತಿ.
  • ಸಸ್ಟೈನಬಲ್ ಟೇಬಲ್ ಸುಸ್ಥಿರ ಆಹಾರ ವಿಷಯಗಳ ಬಗ್ಗೆ ಶೈಕ್ಷಣಿಕ ಸಂಪನ್ಮೂಲ


ದಿ ಬ್ರಿಟಿಶ್ ಲೈಬ್ರರಿ - ಆರ್ಗ್ಯಾನಿಕ್ ಫುಡ್ ಇಂಡಸ್ಟ್ರಿ ಗೈಡ್ Archived 2010-08-30 ವೇಬ್ಯಾಕ್ ಮೆಷಿನ್ ನಲ್ಲಿ. UK ಮಾಹಿತಿಯ ಮೂಲಗಳು


ua:Органічні продукти