ಬಲ್ಲಾಳ ರಾಯನ ದುರ್ಗ

ಬಲ್ಲಾಳ ರಾಯನ ದುರ್ಗ ಕುದುರೆಮುಖ ಪರ್ವತಶ್ರೇಣಿಯಲ್ಲಿರುವ ಒಂದು ಪರ್ವತ. ಇದು ಚಿಕ್ಕಮಗಳೂರಿನ ಪ್ರವಾಸಿ ಸ್ಥಳ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ ತಾಲೂಕಿನಲ್ಲಿರುವ ದುರ್ಗದಹಳ್ಳಿ ಗ್ರಾಮದಲ್ಲಿದೆ. ಇಲ್ಲಿ ಹೊಯ್ಸಳ ರಾಜ ಒಂದನೆಯ ವೀರ ಬಲ್ಲಾಳ ೧೨ನೆಯ ಶತಮಾನದಲ್ಲಿ ಕಟ್ಟಿಸಿದ ಕೋಟೆ ಇದೆ.[೧] ಹಾಗಾಗಿ ಬಲ್ಲಾಳರಾಯನದುರ್ಗ ಎಂಬ ಹೆಸರು ಬಂದಿದೆ. ಇದು ಸಮುದ್ರ ಮಟ್ಟದಿಂದ ೧೫೦೯ ಮೀಟರ್ ಎತ್ತರವಿದ್ದು ಸುತ್ತಲೂ ರಮಣೀಯ ದೃಶ್ಯ ಕಾಣಬರುತ್ತದೆ.ಇಲ್ಲಿಂದ ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸಬಹುದಾಗಿದೆ.

  ಬಿದನೂರಿನ ಬಸಪ್ಪನಾಯಕನು ೧೭೫೫ ಕಾಲವಾಗಲು ಅವನ ಹೆಂಡತಿಯೂ ಚನ್ನಬಸವಯ್ಯನೆಂಬ (ಚನ್ನಬಸವ ನಾಯಕ) ಅವನ ಪುತ್ರ ರಾಜ್ಯವನ್ನು ನೋಡಿಕೊಳ್ಳುತ್ತಿದ್ದರು ಆದರೆ ರಾಣಿ ನಿಂಬಯ್ಯನೆಂಬುವನನ್ನು ಕಟ್ಟಿಕೊಂಡು ದುರ್ನಡತೆಗೆ ಬಿದ್ದಿದ್ದಳು ಇದು ಮಗನಿಗೆ ತಿಳಿದು ಆಕ್ಷೇಪಿಸಿದನು.ಆದುದರಿಂದ ಅವನನ್ನು ಕೂಲ್ಲಿಸಿದರು
  ಇದನ್ನೇ ನೆವವಾಗಿರಿಸಿ ಹೈದರಾಲಿ ಬಿದನೂರಿಗೆ ಮುತ್ತಿಗೆ ಹಾಕಲು ರಾಣಿಗೂ,ಅವಳ ಇನಿಯನಿಗೂ ಹೆದರಿಕೆ ಉಂಟಾಗಿ ಬಲ್ಲಾಳರಾಯನದುರ್ಗಕ್ಕೆ ಸೊಸೆ (ಚನ್ನಬಸವನಾಯಕನ ಹೆಂಡತಿ) ಜೊತೆ ಓಡಿ ಬಂದರು, ಸೊಸೆ ತುಂಬಿದ ಬಸುರಿ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಳು ಇದನ್ನೇ ರಾಣಿ ಜರಿ ಎನ್ನುತ್ತಾರೆ
  ಅನಂತರ ಹೈದರಾಲಿ ರಾಣಿ ಮತ್ತು ನಿಂಬಯ್ಯ ಇವರನ್ನು ಮದ್ಧಗಿರಿಯ ದುರ್ಗದಲ್ಲಿ ಸೆರೆಯಿಡಿಸಿದನು.

(Willks ರವರ ಮೈಸೂರು ಚರಿತ್ರೆ---ಮೊದಲನೇ ಬಾಗ ,ಪುಟ ೪೪೭ - ೪೫೪)

  ಇನ್ನೂ ಹೆಚ್ಚಿನ ವಿವರಗಳಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ 'ಚೆನ್ನಬಸವನಾಯಕ 'ಕಾದಂಬರಿ ಓದಿ ಮತ್ತು ಕುವೆಂಪು ಅವರ ರಕ್ತಾಕ್ಷಿ ನಾಟಕದ ಮುನ್ನುಡಿ ನೋಡಿ

ಚಾರಣ ಸ್ಥಳಸಂಪಾದಿಸಿ

 • ಇದೊಂದು ಪ್ರಶಸ್ತವಾದ ಚಾರಣ ಸ್ಥಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯಿಂದ ಚಾರಣ ಮಾಡಬಹುದಾಗಿದೆ. ದಾರಿಯಲ್ಲಿ ಸಿಗುವ ಬಂಡಾಜೆ ಅರ್ಬಿ (ಜಲಪಾತ)ಚಾರಣಿಗರಿಗೆ ಹೆಚ್ಚುವರಿ ಆಕರ್ಷಣೆ.
 • ಕೊಟ್ಟಿಗೆಹಾರ ರಸ್ತೆಯಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ ಸುಂಕಸಾಲೆ ಗ್ರಾಮದ ಬಳಿ ಒಂದು ರಸ್ತೆ ಎಡಕ್ಕೆ ಸಾಗಿದರೆ ಬಲ್ಲಾಳರಾಯನ ದುರ್ಗದ ಬುಡ ತಲುಪಬಹುದು. ಬಸ್ ಸೌಕರ್ಯ ಇಲ್ಲದೆ ಇರುವುದರಿಂದ ಖಾಸಗಿ ವಾಹನದಲ್ಲಿ ಇಲ್ಲಿಗೆ ಬರುವುದು ಸೂಕ್ತ. ಕೋಟೆ ಇರುವ ಸ್ಥಳಕ್ಕೆ ಸಾಗಬೇಕಾದರೆ ಸುಮಾರು 3 ಕಿ.ಮಿ ದೂರ ಬೆಟ್ಟಸಾಲುಗಳ ನಡುವೆ ಕಾಲ್ನಡಿಗೆಯಲ್ಲೆ ಸಾಗಬೇಕು.[೨]

ಉಲ್ಲೇಖಗಳುಸಂಪಾದಿಸಿ

 1. "Ballalarayana Durga Fort, Chikmagalur – An Enigmatic Place".
 2. ನಿಸರ್ಗದ ಸೊಬಗಿನ ಬಲ್ಲಾಳರಾಯನ ದುರ್ಗ, ನಂದೀಶ್ ಬಂಕೇನಹಳ್ಳಿ, ವಿಜಯವಾಣಿ, ೧೭ಸೆಪ್ಟೆಂಬರ್೨೦೧೭