'ಕುದುರೆಯ ಮುಖ'ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ 'ಕುದುರೆ ಮುಖ'. ಈ ಸುಂದರ ಗಿರಿಧಾಮ, ಚಿಕ್ಕಮಗಳೂರುಗೆ ದಕ್ಷಿಣ ಪಶ್ಚಿಮದಿಕ್ಕಿನಲ್ಲಿ ೯೫ ಕಿ.ಮೀ ದೂರದಲ್ಲಿದೆ. 'ಅರಬ್ಬೀ ಸಮುದ್ರ'ದೂರದಲ್ಲಿ ಕಾಣಿಸುತ್ತದೆ. ಈ ವಿಶಾಲ ಹಾಗೂ ಅಗಲವಾಗಿ ಹಬ್ಬಿದ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಕಿರಿದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದೇ ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ. ಇನ್ನೂ ಕೆಲವು ಜಾಗಗಳು 'ಪರ್ಯಟಕರ ಪುಸ್ತಕ'ಗಳಲ್ಲಿ ದಾಖಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಷ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು.

ಕುದುರೆಮುಖ
ಕುದುರೆಮುಖ ನಗರದ ಪಕ್ಷಿನೋಟ
ಕುದುರೆಯ ಮುಖದಂತಿರುವ ಕುದುರೆಮುಖ ಪರ್ವತ ಶ್ರೇಣಿ
India-locator-map-blank.svg
Red pog.svg
ಕುದುರೆಮುಖ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.08° N 75.16° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
8095
 - /ಚದರ ಕಿ.ಮಿ.

ಕಬ್ಬಿಣದ ಅದಿರಿನ ವಿಪುಲ-ಭಂಡಾರಸಂಪಾದಿಸಿ

ಕುದುರೆ ಮುಖ ಹೆಚ್ಚು ಬೆಳಕಿಗೆ ಬಂದದ್ದು ೧೯೭೬ ರ ನಂತರ, ೧೯೧೩ ರಲ್ಲಿ 'ಮೈಸೂರಿನ ಭೂಶೋಧಕ,ಸಂಪತ್ ಅಯ್ಯಂಗಾರ್ 'ಕುದುರೆ ಮುಖ ಬೆಟ್ಟ'ದಲ್ಲಿ ಕಬ್ಬಿಣದ ಅಂಶವಿರುವ ಅದಿರಿನ ಪತ್ತೆಹಚ್ಚಿದ್ದರು. ೪ ಮಿಲಿಯನ್ ಟನ್ ಅದಿರು ಸಿಗಬಹುದೆಂದು ಅಂದಾಜುಮಾಡಿದ್ದರು. ನ್ಯಾಷನಲ್ ಮಿನರಲ್ ಡೆವೆಲಪ್ ಮೆಂಟ್ ಕಾರ್ಪೊರೇಷನ್, ೧೯೬೫ ರಲ್ಲಿ ಉತ್ಖನನ ನಡೆಸಿ, ಪ್ರತಿವರ್ಷ ೨೫ ಮಿಲಿಯನ್ ಅದಿರು ತೆಗೆದರೂ ಮೋಸವಿಲ್ಲ ಎಂದು ವರದಿ ನೀಡಿತ್ತು. ೧೯೭೫ ರಲ್ಲಿ ಭಾರತ-ಇರಾನ್ ಮಧ್ಯೆ ಅದಿರು ರಫ್ತು ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಮೈಸೂರು ಸರಕಾರದ ಸ್ವಾಮ್ಯದ ಭಾರಿ ಗಣಿ ಸಂಸ್ಥೆ ದ ಕುದುರೆಮುಖ ಐರನ್ ಓರ್ ಲಿಮಿಟೆಡ್ ೧೯೭೬ ರ, ಏಪ್ರಿಲ್ ೨ ರಂದು ಅಸ್ತಿತ್ವಕ್ಕೆ ಬಂತು. ವಾರ್ಷಿಕ ೭೫ ಮಿಲಿಯನ್ ಕಬ್ಬಿಣದ ಅದಿರು ತೆಗೆಯುವ ಗುರಿಯಿಂದ ಸ್ಥಾಪಿತವಾದ ಕುದುರೆ ಮುಖ ಬೆಟ್ಟಶ್ರೇಣಿಗೆ ೪,೬೦೫ ಹೆಕ್ಟೇರ್ ಭೂಪ್ರದೇಶವನ್ನು ಗುತ್ತಿಗೆಯಾಗಿ ಪಡೆಯಿತು. ಸಂಪೂರ್ಣ ರಫ್ತಿಗೇ ಮೀಸಲಾಗಿದ್ದ ಕಂಪೆನಿ, ಅನೇಕ ಸಾವಿರಾರು ಚಿಕ್ಕ ಕೈಗಾ ರಿಕೆಗಳಿಗೆ ಮನೆಮಾಡಿಕೊಟ್ಟು ಅಲ್ಲಿನ ಜನರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿತು. ಗಣಿಗಾರಿಕೆ ಒಂದು ಉದ್ಯೋಗವಾಗಿ ನೆಲೆಯಾಗಿದೆ.

೮೦ ರ ದಶಕದಲ್ಲಿ ಪಶ್ಚಿಮ ಘಟ್ಟ ಉಳಿಸಿ ಆಂದೋಲನಸಂಪಾದಿಸಿ

'ಕುದುರೆಮುಖ ಅದಿರು ಸಂಸ್ಥೆ'ಯ ಮತ್ತೊಂದು ಮುಖ ಅನಾವರಣಗೊಂಡಿತು. ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಆಗುತ್ತಿರುವ ಅಂಶ ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಮತ್ತಿತರ ಸಂಘಟನೆಗಳಿಂದ ಬೆಳಕಿಗೆ ಬಂತು. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಸಂಘರ್ಷ ಆರಂಭವಾಯಿತು. 'ತುಂಗಭದ್ರ ನದಿ ಉಳಿಸಿ ಬ್ಯಾನರ್' ಅಡಿ ಸ್ಥಳೀಯ ಗಿರಿಜನರೂ ಒಳಗೊಂಡಂತೆ ಸಂಘಟಿತ ಹೋರಾಟ ಜರುಗಿ ಗಣಿಗಾರಿಕೆ ವಹಿವಾಟು ಮುಚ್ಚುವಂತೆ ಪ್ರಬಲ ಒತ್ತಾಯ ಹೇರಿತು. ಇದೊಂದು ಐತಿಹಾಸಿಕ ಚಳುವಳಿ.

ಗಣಿಗಾರಿಕೆ ಗುತ್ತಿಗೆ ಅಂತ್ಯವಾದುದ್ದುಸಂಪಾದಿಸಿ

ಗಣಿಗಾರಿಕೆ ಪಡೆದಿದ್ದ ೨೦ ವರ್ಷಗಳ ಗುತ್ತಿಗೆ ಅವಧಿ ೨೦೦೧ ರಲ್ಲಿ ಮುಗಿದು ಆದರೂ ಗಂಗಡಿಕಲ್ಲು ಪ್ರದೇಶಗಳಿಗೆ ಗಣಿಗಾರಿಕೆ ವಿಸ್ತರಿಸುವ ಹುನ್ನಾರವೂ ಸಾಗಿತ್ತು. ಪರಿಸರ ಮತ್ತು ವನ್ಯ ಜೀವಿಗಳ ಬದುಕಿನ ಮೇಲೆ ಆಗುತ್ತಿರುವ ಪರಿಣಾಮ ಮತ್ತಿತರ ಅಂಶಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್ ಗಣಿಗಾರಿಕೆ ನಿಲ್ಲಿಸಲು ಆದೇಶ ನೀಡಿತು. ೨೦೦೫ ಡಿಸೆಂಬರ್ ೩೦ ರ ಮಧ್ಯರಾತ್ರಿ ಗಣಿಗಾರಿಕೆ ಸ್ಥಗಿತಗೊಂಡಿತು. ಗಣಿಗಾರಿಕೆ ನಿಂತದ್ದು ಪರಿಸರವಾದಿಗಳಿಗೆ ಸಮಾಧಾನ ತಂದಿದೆ. ಸ್ಥಳೀಯ ಜನ ಗಣಿಗಾರಿಕೆಯನ್ನೇ ತಮ್ಮ ಜೀವನಕ್ಕೆ ಅವಂಭಿಸಿದ್ದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕುಟುಂಬಗಳು ನಲುಗಿವೆ.

ಗಣಿಗಾರಿಕೆಯ ಸ್ಥಗಿತಗೊಂಡ ನಂತರ ಪರಿಸ್ಥಿತಿಸಂಪಾದಿಸಿ

ಸದಾ ಜನರಿಂದ ಜಿಗಿಜಿಗಿಸುತ್ತಿರುವ ಕುದು ಪ್ರದೇಶ ಈಗ ನೀರವತೆ ತಟ್ಟಿದೆ. ನೂರಾರು ಕಾರ್ಮಿಕರು ಜಾಗಕ್ಕೆ ಸಲಾಮುಹಾಕಿ ಬೇರೆಕಡೆ ಹೋದರೆ, ಅಲ್ಲೇ ಇದ್ದವರು ಕೆಲಸವಿಲ್ಲದೆ ಸಹಿಹಾಕಿ ಸಂಬಳ ಪಡೆಯುತ್ತಿದ್ದಾರೆ. ಭಾರಿಯಂತ್ರಗಳು ಮೌನವಾಗಿ ಬಿದ್ದಿವೆ. ಆದರೆ ಗಣಿಗಾರಿಕೆಯ ಆರ್ಭಟಕ್ಕೆ ಸಿಕ್ಕಿ ನಲುಗಿದ ಬೆಟ್ಟಗಳು ತಮ್ಮ ಮೊದಲಿನ ಸೌಂದರ್ಯವನ್ನು ಮತ್ತೆ ಪಡೆಯುತ್ತಿವೆ. ಪಶುಪಕ್ಷಿ ಪ್ರಾಣಿ ಸಂಕುಲ ವೃದ್ಧಿಸಿದೆ. ಗಣಿಗಾರಿಕೆ ಸ್ಥಗಿತಗೊಂಡು ಐದು ವರ್ಷಗಳಾದರೂ ಬದಲಿ ವ್ಯವಸ್ಥೆಯೊಂದನ್ನು ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ಕೋಟ್ಯಾಂತರ ರುಪಾಯಿ ಬೆಳೆಬಾಳುವ ದೈತ್ಯ ಯಂತ್ರಗಳನ್ನು ಸ್ಥಳಾಂತರಿಸಲು ತೆರೆದ ಜಾಗತಿಕ ಟೆಂಡರ್ ಗೆ ಮನ್ನಣೆ ಸಿಕ್ಕಿಲ್ಲ. ಯುನೆಸ್ಕೋ ತಂಡಾ ಭೇಟಿಯಿತ್ತು 'ವಿಶ್ವಪಾರಂಪರಿಕ ಪಟ್ಟಿ'ಗೆ ಸೇರಿಸಲುಪ್ರಸ್ತಾವನೆ ಮಾಡಿದೆ. ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಿಸುವ ಮತುಗಳೂ ಕೇಳಿಬರುತ್ತಿವೆ. ಅಪರೂಪದ ಶೋಲಾ ಅರಣ್ಯ, ಹುಲ್ಲುಗಾವಲಿನಿಂದ ಆವೃತವಾದ, ಕಣಿವೆ ಇಳಿಜಾರಿನಿಂದ ಕೂಡಿದ ದಟ್ಟ ವನರಾಶಿ.

'ಕುದುರೆ ಮುಖ ನ್ಯಾಷನಲ್ ಪಾರ್ಕ್'ಸಂಪಾದಿಸಿ

ಸುಮಾರು ೬೦೦ ಚ.ಮೀ ವಿಸ್ತೀರ್ಣದಲ್ಲಿ ಹಬ್ಬಿರುವ ಈ 'ರಾಷ್ಟ್ರೀಯ ಉದ್ಯಾನ', 'ನಿತ್ಯ ಹರಿದ್ವರ್ಣದ ಕಾಡಿ'ಗೆ ಹೆಸರುವಾಸಿಯಾದ ಜಾಗವಾಗಿದೆ. ಪಶ್ಚಿಮ ಘಟ್ಟಗಳ ಹಚ್ಚಹಸಿರಿನ ಹುಲ್ಲಿನ ಇಳಿಜಾರಿನಲ್ಲಿ ಹಾಗೇ ಮೈಲುಗಟ್ಟಲೆ ದೂರ ಹಬ್ಬಿರುವ ಈ ಗಿರಿಶಿಖರಗಳು, ನಿತ್ಯಹರಿದ್ವರ್ಣದ ಕಾಡುಗಳಿಗೆ ಹೆಸರುವಾಸಿ. ಒಮ್ಮೊಮ್ಮೆ ಹವೆಯು ಹೆಚ್ಚು ಬಿಸಿಯಾಗಿರುವುದೂ ಉಂಟು. ಕರ್ನಾಟಕದ ಅತ್ಯಂತ ಪ್ರಮುಖ ಪರ್ಯಟಕರ ಪಟ್ಟಿಯಲ್ಲಿ ಇದೂ ಒಂದಾಗಿದೆ. ಈ ತಾಣದಲ್ಲಿ ಹುಲಿಗಳನ್ನು ಸಂರಕ್ಷಿಸುವ ಅಭಿಯಾನ (Global Tiger Conservation Priority-I,) ವನ್ನು ವೀಕ್ಷಿಸಬಹುದು. ಈ 'ಅಭಯಾರಣ್ಯ'ವನ್ನು ರಕ್ಷಣೆಯ ಪಟ್ಟಿಯಲ್ಲಿ ದಾಖಲುಮಾಡಿದ್ದಾರೆ. ಸನ್, ೧೯೮೭ ರಲ್ಲಿ ರಚಿತವಾದ ಈ ಅರಣ್ಯ, ಅನೇಕ ಸಸ್ತನಿಗಳಿಗೆ, ಕ್ರೂರ ಕಾಡುಪ್ರಾಣಿಗಳಿಗೆ, ಕಾಡು ನಾಯಿಗಳು, ಚಿರತೆಗಳು, ಮತ್ತು ಹುಲಿಗಳ ಸಂರಕ್ಷಣೆಗೆ ವಿಧೇಯಕವನ್ನು ಹೊಂದಿದ ಅರಣ್ಯಧಾಮವಾಗಿ ಪರಿಗಣಿಸಲ್ಪಟ್ಟಿದೆ. ಇದಲ್ಲದೆ, ಈ ಅರಣ್ಯದಲ್ಲಿ ಸ್ವಾಭಾವಿಕವಾಗಿಯೇ ಜೀವಿಸುತ್ತಿರುವ 'ಲಂಗೂರ್ ವಾನರ'ಗಳಿಗೆ, 'ಕಾಡುಹಂದಿ'ಗಳಿಗೆ, 'ಸಾಂಬಾರ್' ಹಾಗೂ ಸಿಂಹದ ಬಾಲವಿರುವ (macaque) ಗಳಿಗೆ ಮನೆಯಾಗಿದೆ.

ಚಾರಣ ಸ್ಥಳಗಳು ಅಥವಾ ಟ್ರೆಕ್ ಮಾಡಲು ಅನುಕೂಲವಾದ ವ್ಯವಸ್ಥೆಸಂಪಾದಿಸಿ

'ಕುದುರೆ ಮುಖ ನ್ಯಾಷನಲ್ ಪಾರ್ಕ್' ನಲ್ಲಿ ೧೩ ಚಾರಣ ಸ್ಥಳಗಳನ್ನು ಗುರುತಿಸಲಾಗಿದೆ. ಹತ್ತಿರದಲ್ಲೇ ಈ ಸ್ಥಳಗಳಿಗೆ ಹೋಗಿಬರಲು ಅನುಕೂಲವಾಗುವಂತೆ, 'ತಂಗುದಾಣ'ಗಳನ್ನು(forest rest house)ನಿರ್ಮಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು, 'ಕೆರೆಕಟ್ಟೆ', ಹಾಗೂ 'ನವೂರ್ ಅರಣ್ಯದ ರೆಸ್ಟ್ ಹೌಸ್' ಗಳು. ಅವು 'ಬೆಳ್ತಂಗಡಿ'ಯ ಹತ್ತಿರವಿದ್ದು 'ಚಾರಣಪ್ರಿಯ'ರಿಗೆ ಮುದಕೊಡುವ ತಾಣಗಳಾಗಿವೆ.

ಗಂಗಮೂಲಸಂಪಾದಿಸಿ

ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ ಇರುವ ಈ 'ಗಂಗಮೂಲ' ಅಥವಾ 'ವರಹಾ ಪರ್ವತ ಸಾಲುಗಳು','ಅಭಯಾರಣ್ಯ'ಕ್ಕೆ ಅಂಟಿಕೊಂಡಂತೆ ಇವೆ. ಇವು 'ಕುದುರೆ ಮುಖ' ತೀರ ಹತ್ತಿರದಲ್ಲಿವೆ. ಸಮುದ್ರ ಮಟ್ಟಕ್ಕಿಂತಾ ಸುಮಾರು ೧೪೫೮ ಮೀ.ಎತ್ತರವಿರುವ ಈ ಗಿರಿಧಾಮದಲ್ಲಿ ಉದಯಿಸುವ ಮೂರು ನದಿಗಳು, ತುಂಗಾ, ಭದ್ರಾ, ಮತ್ತು ನೇತ್ರಾವತಿ ನದಿಗಳು. ಸಹಜವಾಗಿ ನದಿಯ ಅಕ್ಕಪಕ್ಕಗಳಲ್ಲಿ ದಟ್ಟವಾದ ಅರಣ್ಯವಿದೆ.

ಲಕ್ಯ ಡ್ಯಾಮ್ಸಂಪಾದಿಸಿ

ಇದನು ನಿರ್ಮಿಸಿದವರು,'ಕುದ್ರೆ ಮುಖ್ ಕಬ್ಬಿಣದ ಅದಿರಿನ ಕಂಪೆನಿ'ಯವರು. ಭದ್ರ ನದಿಯ ಸೇರುವ 'ಉಪನದಿ ಲಕ್ಯ'ಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟು. ೧೦೦ ಮೀ ಎತ್ತರ, ಈ ನದಿಯಲ್ಲಿ ಗಣಿಗಾರಿಕೆಯ ಹಂತಗಳಲ್ಲಿ ಹೊರದೂಡುವ ತ್ಯಾಜ್ಯವಸ್ತುಗಳೇ ಹೆಚ್ಚಾಗಿರುತ್ತವೆ. ಅಕ್ಕಪಕ್ಕಗಳಲ್ಲಿ ಕಣ್ಣಿಗೆ ಹಬ್ಬದಂತೆ ತೋರುವ ಅಡವಿಯ ದೃಷ್ಯ. ಬೆಟ್ಟಗುಡ್ಡ ಕಣಿವೆಗಳು, ಶಿಖರ, ಘಟ್ಟಪ್ರದೇಶ ತಗ್ಗು, ನೋಡಲು ಬಂದ ಪರ್ಯಟಕರಿಗೆ ಮುದನೀಡುತ್ತವೆ.

ಹನುಮಾನ್ ಗುಂಡಿ ಫಾಲ್ಸ್ಸಂಪಾದಿಸಿ

'ಕುದುರೆಮುಖ' ಪರ್ವತ ಶ್ರೇಣಿಗೆ ಅತಿ ಹತ್ತಿರದಲ್ಲೇ ಕಾಣಿಸುವ, ಬೆಟ್ಟದ ಕೆಳಗೆ ಇರುವ ಜಲಪಾತ, ಇಲ್ಲಿಯ ಅತಿ ಸುಂದರವಾದ ಸ್ಥಳಗಳಲ್ಲಿ ಒಂದು. ಇಲ್ಲಿ ಬೀಳುವ ಜಲಧಾರೆ ೧೦೦ ಅಡಿಗಿಂತ ಹೆಚ್ಚು ಎತ್ತರದಿಂದ ರಭಸದಿಂದ ಭೂಮಿಗಿಳಿಯುವ ನೋಟ ಬಂಡೆಗಳ ಮೇಲೆ ಸುರಿದು,ಮುಂದುವರೆಯುವ ಭಂಗಿ ಅತ್ಯಂತ ಸುಂದರವಾಗಿದೆ. 'ಚಾರಣ ಪ್ರಿಯ'ರು ಜಲಪಾತದ ಹತ್ತಿರದವರೆಗೂ ಹೋಗಬಹುದು. 'ಅರಣ್ಯ ಇಲಾಖೆ'ಯವರು, ಕೆಳಗಿಳಿಯಲು ಬಲವಾದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ತಲಾ ೩೦ರೂಪಾಯಿಗಳ ಟಿಕೀಟ್ ಪಡೆದು ಇಷ್ಟವುಳ್ಳವರು, ಇದರ ಸವಿಯನ್ನು ಅನುಭವಿಸಬಹುದು.

ಸಮೀಪದಲ್ಲಿರುವ ಪ್ರದೇಶಗಳುಸಂಪಾದಿಸಿ

'ಕುದುರೆಮುಖ' ದಿಂದ ಸುಮಾರು ೨೦ ಕಿ.ಮೀ ದೂರದಲ್ಲಿ ಕಳಸವೆಂಬ ಊರಿದೆ. 'ಪಂಚತೀರ್ಥ'ವೆಂಬ ಸ್ಥಳವಿದೆ. ಐದು ತೀರ್ಥಗಳಿಂದ ಸುತ್ತುವರಿದ ಈ ತಾಣ ಬಹಳ ಮುದಕೊಡುವಂತಹದು. ಅವುಗಳ ಹೆಸರುಗಳು ಹೀಗಿವೆ.

  • 'ರುದ್ರ ತೀರ್ಥ',(೫ ಕಿ.ಮೀ)
  • 'ವಶಿಷ್ಥ ತೀರ್ಥ' (೬ ಕಿ.ಮೀ),
  • 'ಅಂಬಾ ತೀರ್ಥ' (೮ ಕಿ.ಮೀ),
  • 'ವರಹ ತೀರ್ಥ' (೩೦ ಕಿ.ಮೀ),
  • 'ನಾಗ ತೀರ್ಥ' (೩೫ ಕಿ.ಮೀ). ಗಳಿವೆ.

'ರುದ್ರ ತೀರ್ಥ'ಕ್ಕೆ ಸಮೀಪದಲ್ಲಿ ಒಂದು 'ಭಾರಿ ಕಲ್ಲಿನ ಬಂಡೆ'(ಶಿಲಾ ಶಾಸನ),ಯಿದೆ. ಅದರಮೇಲೆ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಪ್ರಕಾರ, ಮಧ್ವಾಚಾರ್ಯ ಯತಿಗಳು ಇಲ್ಲಿ ಆ ಶಾಸನವನ್ನು ಸ್ಥಾಪಿಸಿದರೆಂಬ ವಿಷಯ ತಿಳಿಯಬರುತ್ತದೆ. ಸಮೀಪದಲ್ಲೇ, 'ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ'ವಿದೆ. ಇದು, ಕುದುರಮುಖದಿಂದ, ೨೮ ಕಿ.ಮೀ ದೂರದಲ್ಲಿದೆ. ಹತ್ತಿರದಲ್ಲೇ ಇರುವ, 'ಕಾಳೇಶ್ವರ ದೇವಸ್ಥಾನ', 'ಗಿರಿಜಾಂಬ ದೇವಸ್ಥಾನ'ಗಳು ಮುಖ್ಯವಾದವುಗಳು. ಮೂರುದಿನಗಳಕಾಲ ವಿಜೃಂಭಣೆಯಿಂದ ಜರುಗುವ 'ಕಾಳೇಶ್ವರ ಸ್ವಾಮಿ' ಹಾಗೂ 'ಗಿರಿಜಾಂಬ ದೇವಿ'ಯರ ವಿವಾಹ, 'ಗಿರಿಜಾ ಕಲ್ಯಾಣೋತ್ಸವ'ವನ್ನು, 'ದೀಪಾವಳಿ'ಯ ಸಮಯದಲ್ಲಿ ಆಚರಿಸಲಾಗುತ್ತದೆ. ಇದನ್ನು ವೀಕ್ಷಿಸಲು ಕರ್ನಾಟಕ ಹಾಗೂ ಹತ್ತಿರದ ಪ್ರದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಜನರು ಬಂದು ಸೇರುತ್ತಾರೆ.

ಹವಾಮಾನಸಂಪಾದಿಸಿ

ಬೇಸಿಗೆಯಲ್ಲಿ ೩೮ ಡಿಗ್ರಿ ಸೆಂಟಿಗ್ರೇಡ್, ಚಳಿಗಾಲದಲ್ಲಿ ೪ ಬೇಸಿಗೆಯಲ್ಲೂ ೧೦೦ ರಿಂದ ೨೦೦ ಕಿ.ಮೀ.ವೇಗದಲ್ಲಿ ಬೀಸುವಗಾಳಿ. ಸಮುದ್ರಮಟ್ಟಕ್ಕಿಂತ ೬,೨೧೫ ಅಡಿ ಎತ್ತರ. ಇಲ್ಲಿ ಬೆಳೆಯುವ ಅಪರೂಪದ ಕಾರಂಜಿ ಹೂವು ೧೨ ವರ್ಷಕ್ಕೊಮ್ಮೆ ಅರಳಿ ಕಂಪು ಸೂಸಿ ನೀಲ ಹಾಸು ಹೊದ್ದಂತೆ ಕಂಗೊಳಿಸುವುದು, ಪ್ರಕೃತಿಯ ಈ ಒಂದು ಅಪರೂಪದ ಪುಷ್ಪೋತ್ಸ ವನ್ನು ಬಣ್ಣಿಸಲು ಪದಗಳು ಸಾಲುವುದಿಲ್ಲ.

ಕಳಸ-ಕುದುರೆಮುಖ-ಮಂಗಳೂರು ರಸ್ತೆಸಂಪಾದಿಸಿ

ನಡುವೆ ೧೦೪ ಮೈಲಿಗಳ ರಸ್ತೆ ನಿರ್ಮಾಣ ಶಾಲೆ, ಕಾಲೇಜು, ಆಸ್ಪತ್ರೆ, ವಾಸದ ಮನೆಗಳು ವಾಣಿಜ್ಯ ವ್ಯವಹಾರ, ದೂರಸಂಪರ್ಕ ಕೇಂದ್ರ ಪೋಲೀಸ್ ಠಾಣೆ,

ಶಿವಮೊಗ್ಗ-ಕಳಸ-ಮಂಗಳೂರು ರಸ್ತೆಸಂಪಾದಿಸಿ

೧.೭ ಕಿ.ಮೀ ಸುರಂಗ ಕೊರೆದು ೧೭ ಅಂಗುಲ ವ್ಯಾಸದ ಪೈಪ್ ಅಳವಡಿಸಿ ಕೇವಲ ’ಗುರುತ್ವಾಕರ್ಷಣೆಯ ತತ್ವವನ್ನು ಆಧರಿಸಿ’ ಕುದುರೆ ಮುಖದಿಂದ ಮಂಗಳೂರಿಗೆ ಅದಿರನ್ನು ಸಾಗಿಸಲು ವ್ಯವಸ್ಥೆ ಮಾಡಲಾಯಿತು. ಗಣಿ ಚಟುವಟಿಕೆಗೆ ಅಗತ್ಯವಾದ ನೀರನ್ನು ಪೂರೈಸಲು ಮತ್ತು ಗಣಿ ತ್ಯಾಜ್ಯವನ್ನು ಸಂಗ್ರಹಿಸಲು ಭದ್ರಾನದಿಯ ಉಪನದಿಗೆ ೧೦೦ ಅಡಿ ಎತ್ತರದ ಮಣ್ಣಿನ ಅಣೆಕಟ್ಟನ್ನು ೧೯೭೯ ರಲ್ಲಿ ನಿರ್ಮಿಸಲಾಯಿತು. ಈಗ ಅದು ಸಂಪೂರ್ಣವಾಗಿ ಹೂಳಿನಿಂದ ಆವೃತವಾಗಿದ್ದು ಉಪಯೋಗಕ್ಕೆ ಬಾರದೆ ಹಾಗೇ ನಿಂತಿದೆ.