ಮಳೆಗಾಲ ಸಂದರ್ಭದಲ್ಲಿ ಮಲೆನಾಡಿನ ಒಂದೊಂದು ಭಾಗವು ಚೆಲುವಿನಿಂದ ಕಂಗೊಳಿಸುತ್ತವೆ.ಈ ಪೈಕಿ ಐತಿಹಾಸಿಕ ಹಿನ್ನಳೆಯುಳ್ಳ ಮಂಜ್ರಾಬಾದ್ ಕೋಟೆಯು ಒಂದು.

ಕೋಟೆಯ ಮುಖ್ಯ ದ್ವಾರ

ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.

ಕೋಟೆಯ ಹಿನ್ನೆಲೆ

ಬದಲಾಯಿಸಿ

ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ ೧೭೮೫-೧೭೯೨ರ ನಡುವೆ ನಿರ್ಮಿಸಿದನು[]. ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ.ಮೊದಲ ಹಂತದಲ್ಲಿ ಸುಮಾರು 12 ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದರೆ,ಎರಡನೆ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಮೊದಲ ಹಂತವನ್ನು ಸಕಲೇಶಪುರ ತಾಲ್ಲೂಕು ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿ ಇದ್ದು,ನಂತರ ಟಿಪ್ಪುಸುಲ್ತಾನ್ ನಿಂದ ಪುನರ್ ನವೀಕರಣಗೊಂಡಿದೆ. ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.

ಕೋಟೆಯ ವಿನ್ಯಾಸ

ಬದಲಾಯಿಸಿ
 
ಕೋಟೆಯ ಮುಖ್ಯ ದ್ವಾರದಿಂದ ಕೋಟೆಯ ಒಳ ನೋಟ
 
ಕೋಟೆಯ ಒಳ ನೋಟ-೧

ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರದಲ್ಲಿದ್ದು, ಸುಮಾರು ೫ ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ[]. ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ. ಆಗಿನಿಂದ ಈವರೆಗೂ ಮಂಜ್ರಾಬಾದ್ ಕೋಟೆ ಸೌಂದರ್ಯ, ಆಕರ್ಷಣೆಯನ್ನು ಉಳಿಸಿಕೊಂಡಿದೆ.ಮಳೆಗಾಲದಲ್ಲಿ ಒಂದು ರೀತಿ ಕಾಣುವ ಈ ಕೋಟೆ, ಮಳೆ ಇಲ್ಲದಿದ್ದಾಗ ಬೇರೆಯದೆ ರೀತಿ ಕಾಣುತ್ತದೆ.ಇಲ್ಲಿಗೆ ಬಂದರೆ ಎತ್ತರದ ತಾಣದಲ್ಲಿ ನಿಂತು ಹಸಿರ ಸಿರಿಯನ್ನು ಕಣ್ತುಂಬಿಕೊಳ್ಳಬಹುದು. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.

ಉಲ್ಲೇಖಗಳು

ಬದಲಾಯಿಸಿ
Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.

  1. "ಆರ್ಕೈವ್ ನಕಲು". Archived from the original on 2016-08-31. Retrieved 2016-08-16.
  2. http://www.starforts.com/manjarabad.html