ಪರ್ಯಾಪ್ತ ಕೊಬ್ಬಿನ ಆಮ್ಲ
ಕೊಬ್ಬಿನ ಆಮ್ಲಗಳು ಆಹಾರದಲ್ಲಿ ಬೇಕಾಗಿರುವ ಅತ್ಯಾವಶ್ಯಕ ಪದಾರ್ಥಗಳು. ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಸರಪಳಿ ಇರುವ ವೊನೋ ಕಾರ್ಬೋಕ್ಸೀಲಿಕ್ ಆಮ್ಲಗಳು(Mono carboxylic acid). ಕೊಬ್ಬಿನ ಆಮ್ಲಗಳನ್ನು ಸಸ್ಯಗಳ ಬೀಜದ ಎಣ್ಣೆಗಳಲ್ಲಿ ಮತ್ತು ಜೀವಿಗಳ ಕೊಬ್ಬಿನಲ್ಲಿ ಕಾಣಬಹುದು. ಕೊಬ್ಬಿನ ಆಮ್ಲಗಳು ಎಣ್ಣೆ ಅಥವಾ ಕೊಬ್ಬುಗಳಲ್ಲಿ ಟ್ರೈ ಗ್ಲಿಜರಾಯಿಡ್ಸ್(triglycerides) ರೂಪದಲ್ಲಿರುತ್ತವೆ. ಕೊಬ್ಬಿನ ಆಮ್ಲದಲ್ಲಿ ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಗಳಿರುತ್ತವೆ. ಕೊಬ್ಬಿನ ಆಮ್ಲಗಳ ಹೈಡ್ರೋಕಾರ್ಬನ್ ಸರಪಳಿ/ಸಂಕೋಲೆ(chain)ಯಲ್ಲಿ ಒಂದು ಅಂಚು ತುದಿಯಲ್ಲಿ ಮಿಥೈಲ್ (CH3) ಸಮೂಹವನ್ನು, ಇನ್ನೊಂದು ತುದಿಯಲ್ಲಿ ಕಾರ್ಬೋಕ್ಸೀಲ್ (COOH)ಸಮೂಹವನ್ನು ಹೊಂದಿರುತ್ತದೆ. ಕೊಬ್ಬಿನ ಆಮ್ಲಗಳು ಎರಡು ರೀತಿಯಲ್ಲಿರುತ್ತವೆ. ಅವು ಪರ್ಯಾಪ್ತ (saturated) ಮತ್ತು ಅಪರ್ಯಾಪ್ತ (unsaturated)ಕೊಬ್ಬಿನ ಆಮ್ಲಗಳು. ಪರ್ಯಾಪ್ತ ಆಮ್ಲಗಳ ಹೈಡ್ರೋಕಾರ್ಬನ್ ಸಂಕೋಲೆಯಲ್ಲಿರುವ ಕಾರ್ಬನ್-ಕಾರ್ಬನ್ ನಡುವೆ ದ್ವಿಬಂಧಗಳಿರುವುದಿಲ್ಲ[೧]. ಇದರ ಸಾಧಾರಣ ಫಾರ್ಮುಲಾ CnH2nO2 ಅಥವಾ CnH2n+1COOH ಆಗಿರುತ್ತದೆ.
ಪರ್ಯಾಪ್ತ ಆಮ್ಲಗಳಲ್ಲಿ ಕಾರ್ಬನ್ ಗಳು ಎರಡು ಕಾರ್ಬನ್ ಗಳಿಂದ ಆರಂಭವಾಗಿ ೩೬ ಕಾರ್ಬನ್ ಗಳವರೆಗೆ ಇರುತ್ತವೆ. ಇದರಲ್ಲಿ ಕೆಲವು ಆಮ್ಲಗಳು ಮಾತ್ರ ಎಣ್ಣೆಯಲ್ಲಿ ಹೆಚ್ಚಿನ ಶೇಕಡದಲ್ಲಿರುತ್ತವೆ. ಗಿಡಗಳ ಬೀಜಗಳಿಂದ ತೆಗೆದಿದ್ದ ಎಣ್ಣೆಯಲ್ಲಿ ಪರ್ಯಾಪ್ತ ಆಮ್ಲಗಳು ಪ್ರತಿಶತ ಕಡಿಮೆ ಇರುತ್ತದೆ. ಆದರೆ ಮರಗಳ ಬೀಜಗಳಿಂದ ತೆಗೆದ ಎಣ್ಣೆಗಳಲ್ಲಿ ಪರ್ಯಾಪ್ತ ಆಮ್ಲಗಳು ಹೆಚ್ಚಿನ ಪ್ರತಿಶತದಲ್ಲಿರುತ್ತವೆ. ೪ ರಿಂದ ೧೦ ಕಾರ್ಬನ್ ಗಳಿರುವ ಪರ್ಯಾಪ್ತ ಆಮ್ಲಗಳು ಕಡಿಮೆಯಾಗಿ ಪ್ರತಿಶತ ಜೀವಿಗಳ ಹಾಲಿನಲ್ಲಿ ಕಂಡು ಹಿಡಿಯಲಾಗಿದೆ. ೧೦ರಿಂದ ೧೮ ಕಾರ್ಬನ್ ಗಳಿರುವ ಪರ್ಯಾಪ್ತ ಕೊಬ್ಬಿನ ಆಮ್ಲಗಳು ಬೀಜದ ಎಣ್ಣೆಯಲ್ಲಿ ಹೆಚ್ಚಿನ ಪ್ರತಿಶತದಲ್ಲಿ ಕಾಣಬಹುದು. ೨೦-೨೬ ಕಾರ್ಬನ್ ಗಳಿರುವ ಆಮ್ಲಗಳು ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಗಳಲ್ಲಿ ಕಾಣಲಾಗುತ್ತವೆ.
ಬ್ಯುಟಿರಿಕ್(butyric acid)ಆಮ್ಲದಲ್ಲಿ ೪ ಕಾರ್ಬನ್ ಗಳಿವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ೮ ಕ್ಕಿಂತ ಕಡಿಮೆ ಕಾರ್ಬನ್ ಗಳಿದ್ದರೆ ಅಂತಹ ಕೊಬ್ಬಿನ ಆಮ್ಲಗಳನ್ನು ಲಘು ಸಂಕೋಲೆ ಕೊಬ್ಬಿನ ಆಮ್ಲಗಳೆಂದು ಕರೆಯುತ್ತಾರೆ. ಬ್ಯುಟಿರಿಕ್ ಆಮ್ಲವನ್ನು ಸಸ್ತನಿವರ್ಗದ ಪ್ರಾಣಿಗಳ ಹಾಲಿನಲ್ಲಿ ಕಾಣಬಹುದು. ಬ್ಯುಟಿರಿಕ್ ಆಮ್ಲವು ನೀರಿನಲ್ಲಿ ಕರಗುತ್ತದೆ. ಬ್ಯುಟಿರೋ ಎಂದರೆ ಬೆಣ್ಣೆ (butter)ಎಂದರ್ಥ.ಇದು ಬೆಣ್ಣೆಯಲ್ಲಿ ಹೆಚ್ಚಾಗಿರುವುದರಿಂದ, ಇದರ ಹೆಸರು ಬ್ಯುಟಿರಿಕ್ ಆಮ್ಲವಾಗಿದೆ.
ಬ್ಯುಟಿರಿಕ್ ಆಮ್ಲದ ಭೌತಿಕ ಧರ್ಮಗಳ ಪಟ್ಟಿ
ಲಕ್ಷಣ | ಮಿತಿ |
ಸೌಷ್ಠವ ಫಾರ್ಮುಲಾ | CH3(CH2)2COOH |
ಅಣು ಫಾರ್ಮುಲಾ | C4H8O2 |
ಅಣು ಭಾರ | 88.11 ಗ್ರಾಂ/ಮೋಲ್ |
ಸಾಂದ್ರತೆ | 959.5 ಗ್ರಾಂ/ಲೀ |
ದ್ರವೀಭವನ ಬಿಂದು | -7.90C |
ಕುದಿ ಬಿಂದು, | 163.50C |
ಸ್ನಿಗ್ಥತೆ | 0.1529cp |
(auto ignition temparature) | 520C |
ಇದು ಹೆಗ್ಗದ ವಾಸನೆ ಮತ್ತು ರುಚಿ ಹೊಂದಿರುತ್ತದೆ. ಬ್ಯುಟ್ರಿಕ್ ಆಮ್ಲ ನೀರು, ಇಥೆನಾಲ್ ಇನ್ನೂ ಇಥರುನಲ್ಲಿ ಕರಗುತ್ತದೆ. ಬ್ಯುಟ್ರಿಕ್ ಆಮ್ಲಕ್ಕೆ ೨-ಮಿಥೈಲ್ ಪ್ರೊಪೇನೋಯಿಕ್ ಆಮ್ಲ ಎನ್ನುವ ಐಸೋಮರ್(isomer)ಇದೆ. ಬ್ಯುಟಿರಿಕ್ ಆಮ್ಲದಿಂದ ಬ್ಯುಟನೋಟ್ ಎಸ್ಟರ್ ಗಳನ್ನು ಉತ್ಪಾದಿಸಲಾಗುತ್ತದೆ. ಇದರ ಅಣು ಸಂಕೇತ ಫಾರ್ಮುಲಾ(molecular formula) :C3H7COOH. ಸಸ್ತನಿ ವರ್ಗದ ಪ್ರಾಣಿಗಳ ಹಾಲಿನಲ್ಲಿ ೨-೪ ಶೇಕಡ ವರೆಗೆ ಬ್ಯುಟಿರಿಕ್ ಆಮ್ಲವಿರುತ್ತದೆ.
ಕಾಪ್ರೋಯಿಕ್ ಆಮ್ಲ
ಬದಲಾಯಿಸಿಕಾಪ್ರೋಯಿಕ್ ಆಮ್ಲ(caproic acid), ಇದು ೬ ಕಾರ್ಬನ್ ಗಳನ್ನು ಹೈಡ್ರೋಕಾರ್ಬನ್ ಸರಪಳಿಯಲ್ಲಿ ಹೊಂದಿರುವ ಕೊಬ್ಬಿನ ಆಮ್ಲ. ಆಮ್ಲದ ಅಣುವಿನಲ್ಲಿ ೬ ಕಾರ್ಬನ್ ಪರಮಾಣುಗಳು, ೧೨ ಹೈಡ್ರೋಜನ್ ಪರಮಾಣುಗಳು, ಇನ್ನೂ ಎರಡು ಆಕ್ಸಿಜನ್ ಪರಮಾಣುಗಳಿರುತ್ತವೆ. ಇದು ಲಘು ಹೈಡ್ರೋಕಾರ್ಬನ್ ಸರಪಳಿ ಹೊಂದಿರುವ ಕೊಬ್ಬಿನ ಆಮ್ಲವಾಗಿದೆ.
ಲಕ್ಷಣ | ಮಿತಿ |
ಅಣು ಫಾರ್ಮುಲಾ | CH3(CH2)4COOH. |
ಶಾಸ್ತ್ರೀಯ ಹೆಸರು | ಹೆಕ್ಸೇನೋಯಿಕ್ ಆಸಿಡ್(hexanoic acid) |
ಅಣು ಭಾರ | 116.158 ಗ್ರಾಂ/ಮೋಲ್ |
ಸಾಂದ್ರತೆ(density) | 920 ಗ್ರಾಂ/ಲೀ |
ದ್ರವೀ ಭವನ ಬಿಂದು | -3.40C |
ಕುದಿಬಿಂದು | 202-2030C |
ಲಭ್ಯತೆ: ಹಾಲಿನ ಕೊಬ್ಬಿನಲ್ಲಿ ೧-೩% ವರೆಗೆ ಇರುತ್ತದೆ. ಕೊಬ್ಬರಿ ಎಣ್ಣೆ, ಮತ್ತು ಪಾಮ್ ಕೆರ್ನಲ್ ಎಣ್ಣೆ ಯಲ್ಲಿ ೩-೧೦% ವರೆಗೆ ಲಭ್ಯವಾಗುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕಾಪ್ರಿಕ್ ಎನ್ನುವ ಪದ ಮೇಕೆ(Goat)ಗೆ ಸಂಬಧಪಟ್ಟಿದೆ. ೬-೧೦ ಕಾರ್ಬನ್ ಗಳಿರುವ ಕೊಬ್ಬಿನ ಆಮ್ಲಗಳು ಮೇಕೆ ಹಾಲಿನ ವಾಸನೆ ಹೊಂದಿರುವುದರಿಂದ ಈ ಆಮ್ಲಗಳ ಮುಂದಿನ ಪದವು ಕಾಪ್ರಿಎಂಬ ಹೆಸರಿನಿಂದ ಆರಂಭಿಸಲಾಗುತ್ತದೆ. ೬-೧೦ ಕಾರ್ಬನ್ ಗಳಿರುವ ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ೧೫% ವರೆಗೆ ಇರುತ್ತವೆ. ಕಾಪ್ರೋಯಿಕ್ ಆಮ್ಲಗಳ ಲವಣಗಳನ್ನು , ಎಸ್ಟರುಗಳನ್ನು ಹೆಕ್ಸೇನೋಯೆಟ್ಸ್ (hexanoates), ಕಾಪ್ರೋಯೆಟ್ಸ್(caproates)ಎನ್ನುತಾರೆ.
ಕಾಪ್ರಿಲಿಕ್ ಆಮ್ಲ
ಬದಲಾಯಿಸಿಕಾಪ್ರಿಲಿಕ್ ಆಮ್ಲದ ಅಣುವಿನಲ್ಲಿ ೮ ಕಾರ್ಬನ್ ಗಳಿರುತ್ತವೆ. ಆಮ್ಲದ ಸಾಂಕೇತಿಕ ಫಾರ್ಮುಲಾ:CH3(CH2)6COOH.. ಕಾಪ್ರಿಲಿಕ್ ಎನ್ನುವುದು ಇದರ ಸಾಧಾರಣ ಹೆಸರು. ಇದರ ಶಾಸ್ತ್ರೀಯ ಹೆಸರು ಆಕ್ಟಾನೋಯಿಕ್ ಆಮ್ಲ(octanoic acid).
ಆಮ್ಲದ ಗುಣಗಳ ಪಟ್ಟಿ
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಆಕ್ಟಾನೋಯಿಕ್ ಆಮ್ಲ(octanoic acid). |
ಅಣು ಸಂಕೇತ | C8H16O2, |
ಅಣು ಭಾರ | 144.21 ಗ್ರಾಂ/ಮೂಲ್[೨] |
ಸಾಂದ್ರತೆ | 910 ಗ್ರಾಂ./ಲೀ |
ದ್ರವೀ ಭವನ ಬಿಂದು | 16.70C |
ಕುದಿ ಬಿಂದು | 2370C |
ಬಣ್ಣ ರಹಿತವಾದ ಈ ಆಮ್ಲವು ತೈಲ ಸದೃಶವಾಗಿ ಕಾಣಿಸುತ್ತದೆ. ದ್ರವರೂಪದಲ್ಲಿರುತ್ತದೆ.
ಲಭ್ಯತೆ: ಸಸ್ತನಿವರ್ಗದ ಪ್ರಾಣಿಗಳ ಹಾಲಿನಲ್ಲಿ ೩-೫% ವರೆಗೆ, ಕೊಬ್ಬರಿ ಇನ್ನೂ ಪಾಮ್ ಕೆರ್ನಲ್ ಎಣ್ಣೆಯಲ್ಲಿ ೩-೫% ವರೆಗೆ ಇರುತ್ತದೆ [೩]>. ಈ ಎಣ್ಣೆ ತೈಲ ಸದೃಶ್ಯವಾಗಿರುವುದರಿಂದ ನೀರಿನಲ್ಲಿ ಕರಗುವುದಿಲ್ಲ. ಕಾಪ್ರಿಲಿಕ್ ಆಮ್ಲದಿಂದ ತಯಾರಿಸಲ್ಪಟ್ಟ ಈಸ್ಟರುಗಳನ್ನು ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಬಣ್ಣ(dye)ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಕ್ರಿಮಿನಾಶಕವಾಗಿ, ಆಲ್ಗೇ, ಫಂಗಸ್ ಶಿಲೀಂಧ್ರಗಳ ಸಂಹಾರಕವಾಗಿ ಉಪಯೋಗಿಸುತ್ತಾರೆ [೪].
ಕಾಪ್ರಿಕ್ ಆಮ್ಲ
ಬದಲಾಯಿಸಿಕಾಪ್ರಿಕ್ ಆಮ್ಲ ೧೦ ಕಾರ್ಬನ್ ಗಳನ್ನು ಹೊಂದಿರುತ್ತದೆ. ಇದರ ಅಣು ನಿರ್ಮಾಣ ಸೂತ್ರ: CH3(CH2)8COOH. ಕಾಪ್ರಿಕ್ ಆಮ್ಲವನ್ನು ಶಾಸ್ತ್ರೀಯವಾಗಿ ಡೇಕನೋಯಿಕ್ ಆಮ್ಲ(decanoic acid)ಎನ್ನುತಾರೆ.
ಲಕ್ಷಣ | ಮಿರಿ |
ಶಾಸ್ತ್ರೀಯ ಹೆಸರು | డెకనొయిక్(decanoic)ఆసిడ్. |
ಅಣು ಸೂತ್ರ | C10H20O2. |
ಅಣು ಭಾರ | 172.26 ಗ್ರಾಂ/ಮೋಲ್ |
ಸಾಂದ್ರತೆ | 893 ಗ್ರಾಂ/ಲೀ |
ದ್ರವೀ ಭವನ ಬಿಂದು | 31.60C |
ಕುದಿ ಬಿಂದು | 269.0C |
ಇದು ನೀರಿನಲ್ಲಿ ಕರಗುವುದಿಲ್ಲ. ಕಮಟಾದ ವಾಸನೆ ಇದ್ದು, ಸ್ಪಟಿಕ ರೂಪದಲ್ಲಿರುತ್ತದೆ.
ಲಭ್ಯತೆ: ಮೇಕೆ ಹಾಲಿನಲ್ಲಿ ೨-೪% ವರೆಗೆ, ಕೊಬ್ಬರಿ, ಪಾಮ್ ಕೆರ್ನಲ್ ಎಣ್ಣೆಗಳಲ್ಲಿ ೪-೮% ವರೆಗೆ ಇರುತ್ತದೆ. ಈಮ್(elm)ಗಿಡದ ಬೀಜದ ಎಣ್ಣೆಯಲ್ಲಿ ೫೦% ತನಕ ಕಾಣಿಸುತ್ತದೆ. ಕಾಪ್ರಿಕ್ ಆಮ್ಲವನ್ನು ಪರಿಮಳ ದ್ರವ್ಯಗಳ, ಕೀಲೆಣ್ಣೆಗಳ, ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ರಬ್ಬರು, ಪ್ಲಾಸ್ಟಿಕ್, ಇನ್ನೂ ಮುಂತಾದ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಲಾರಿಕ್ ಆಮ್ಲ
ಬದಲಾಯಿಸಿಲಾರಿಕ್ ಆಮ್ಲದಲ್ಲಿ ೧೨ ಕಾರ್ಬನ್ ಗಳಿರುತ್ತವೆ. ಈ ಆಮ್ಲವನ್ನು ಶಾಸ್ತ್ರೀಯವಾಗಿ ಡೋಡೆಕನೋಯಿಕ್ ಆಸೀಡ್(Dodecanoic acid)ಎನ್ನುತ್ತಾರೆ. ಇದರ ಅಣು ಸೂತ್ರ: CH< sub>3</ sub>(CH2)10COOH.
ಆಮ್ಲದ ಭೌತಿಕ ಗುಣಗಳ ಪಟ್ಟಿ[೫].
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಡೊಡೇಕೊನೋಯಿಕ್ ಆಸಿಡ್ (dodecanoic acid). |
ಅಣು ಸೂತ್ರ | C12H24O2 |
ಅಣು ಭಾರ | 200.317 ಗ್ರಾಂ/ಮೂಲ್ |
ಸ್ರಾಂದ್ರತೆ | 880 ಗ್ರಾಂ/ಲೀ |
ದ್ರವೀ ಭವನ ಬಿಂದು | 43.20C |
ಕುದಿ ಬಿಂದು | 298.90C |
ಇದು ಬೇವಿನ ಎಣ್ಣೆಯ(bay oil)ವಾಸನೆ ಹೊಂದಿರುತ್ತದೆ. ಬಿಳಿ ಬಣ್ಣದ ಪುಡಿ ರೂಪದಲ್ಲಿರುತ್ತದೆ. ಬಹಳ ಎಣ್ಣೆಗಳಲ್ಲಿ ಕಾಣಿಸುವ ಮೂರು ಪರ್ಯಾಪ್ತ ಕೊಬ್ಬಿನ ಆಮ್ಲಗಳಲ್ಲಿ ಲಾರಿಕ್ ಆಮ್ಲವೂ ಒಂದು. ಉಳಿದಿರುವ ಎರಡು ಆಮ್ಲಗಳು ಪಾಮಿಟಿಕ್ ಮತ್ತು ಸ್ಟಿಯರಿಕ್ ಆಮ್ಲಗಳು. ಲಾರೆಲ್(laurel)ಸಸ್ಯ ಕುಟುಂಬಕ್ಕೆ ಸೇರಿದ ಮರಗಳ ಬೀಜಗಳ ಎಣ್ಣೆಯಲ್ಲಿ ಲಾರಿಕ್ ಆಮ್ಲ ಹೆಚ್ಚಾಗಿ ಪ್ರತಿಶತದಲ್ಲಿ ಕಾಣಿಸುತ್ತದೆ. ಅದರಿಂದ ಈ ಕೊಬ್ಬಿನ ಆಮ್ಲದ ಸಾಧಾರಣದ ಹೆಸರು ಲಾರಿಕ್ ಆಮ್ಲವಾಗಿದೆ.
ಲಭ್ಯತೆ:ಲಾರಿಕ್ ಆಮ್ಲ ಕೊಬ್ಬರಿ, ಪಾಮ್ ಕೆರ್ನಲ್ ಮತ್ತು ಬಾಬಾಸು(babasu)ಎಣ್ಣೆಗಳಲ್ಲಿ ೪೦-೫೦% ವರೆಗೆ ಇರುತ್ತದೆ. ಹಾಗೇ ಹಾಲಿನಲ್ಲಿ ೨-೩% ವರೆಗೆ ಲಭ್ಯವಾಗುತ್ತದೆ. ಅವು ಹಾಲಿನಲ್ಲಿ ೨.೯%, ಮೇಕೆ ಹಾಲಿನಲ್ಲಿ ೩.೧%, ಮಹಿಳೆಯ ಹಾಲಿನಲ್ಲಿ ೨-೮% ವರೆಗೆ ಲಾರಿಕ್ ಆಮ್ಲವು ಇರುತ್ತದೆ. ಲಾರಿಕ್ ಆಮ್ಲವನ್ನು ಕೋಕೋಬಟ್ಟರು, ಸಾಬೂನ್, ಶ್ಯಾಂಫೋಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರತ್ಯೇಕ ವಾಸನೆ, ರುಚಿ ಬರುವುದಕ್ಕೆ ಆಹಾರ ಪದಾಥಗಳಲ್ಲಿ ಉಪಯೋಗಿಸುತ್ತಾರೆ. ಪ್ರತ್ಯೇಕವಾದ ಕೀಲೆಣ್ಣೆಗಳನ್ನು ಮಾಡುತ್ತಾರೆ.
ಮಿರಿಸ್ಟಿಕ್ ಆಮ್ಲ
ಬದಲಾಯಿಸಿಮಿರಿಸ್ಟಿಕ್ ಕೊಬ್ಬಿನ ಆಮ್ಲದಲ್ಲಿ ೧೪ ಕಾರ್ಬನ್ ಅಣುಗಳಿರುತ್ತವೆ. ಇದನ್ನು ಶಾಸ್ತ್ರೀಯವಾಗಿ ಟೆಟ್ರಾಡೆಕನೋಯಿಕ್ ಆಮ್ಲ ಎಂದು ಕರೆಯಲಾಗುತ್ತದೆ.
ಇದರ ಅಣುಸಂಕೇತ: CH 3(CH2)10COOH.
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಟೆಟ್ರಾಡೆಕನೋಯಿಕ್ ಆಮ್ಲ tetra decanoic acid |
ಅಣು ಸೂತ್ರ | C14H28O2. |
ಅಣು ಭಾರ( | 228.37 ಗ್ರಾಂ/ಮೂಲ್ |
ಸಾಂದ್ರತೆ | 862.2 ಗ್ರಾಂ/ಲೀ |
ದ್ರವೀ ಭವನ ಬಿಂದು | 54.40C |
ಕುದಿ ಬಿಂದು | 250.50C(100mmHg ಪ್ರೆಸರ್ ಕಡೆ) |
ಮಿಸ್ಟಿಕ ಫ್ರಾಗ್ರಾನ್ಸ್ (Mistca Fragrance)ಎನ್ನುವ ಜಾಜೀಕಾಯಿಯ ಬೀಜದ ಎಣ್ಣೆಯಲ್ಲಿ ೭೫% ವರೆಗೆ ಇರುವುದರಿಂದ ಇದ್ದನ್ನು ಮಿರಿಸ್ಟಿಕ್ ಆಮ್ಲವೆಂದು ಕರೆಯಲಾಗಿದೆ. ಜಾಜೀಕಾಯಿ ಎಣ್ಣೆಯಲ್ಲಿ ಮಿರಿಸ್ಟಿ ಆಮ್ಲವು ಹೆಚ್ಚಿನ ಶೇಕಡದಲ್ಲಿ ಸಿಂಪಿಲ್ ಟ್ರೈಗ್ಲಿಜರಾಯಿಡ್ ರೂಪದಲ್ಲಿರುತ್ತದೆ. ಸ್ಪೆರ್ಮ್ ತಿಮಿಂಗಲ ಎಣ್ಣೆಯಲ್ಲಿ ೧೫% ವರೆಗೆ ಲಭ್ಯವಾಗುತ್ತದೆ. ಹಾಲಿನ ಕೊಬ್ಬಿನಲ್ಲಿ ೮-೧೨* ತನಕ ಕಾಣಿಸುತ್ತದೆ. ಮಿರಿಸ್ಟಿಕ್ ಆಮ್ಲವೊಂದೇ ಸಸಾರಜನಕ ಆಹಾರ ಪದಾರ್ಥದಲ್ಲಿ(protein)ಎಮೈಡ್ ಕೊಂಡಿಯನ್ನು ಏರ್ಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮಿರಿಸ್ಟಿಕ್ ಆಮ್ಲವನ್ನು ಆಹಾರದಲ್ಲಿ ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ದೇಹ ವ್ಯವಸ್ಥೆಯಲ್ಲಿ ಫ್ಲಾಸ್ಮಾ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿದೆ. ಮಿರಿಸ್ಟಿಕ್ ಆಮ್ಲದಿಂದ ಮಿರಿಸ್ಟೇಟ್ ಎನ್ನುವ ಎಸ್ಟರನ್ನು ಉತ್ಪನ್ನಮಾಡಲಾಗುತ್ತದೆ. ಮಿರಿಸ್ಟಿಕ್ ಆಮ್ಲದಿಂದ ಮಿರಿಸ್ಟಿಕ್ ಆಲ್ಡಿಹೈಡ್ ,ಮಿರಿಸ್ಟಿಲ್ ಆಲ್ಕಹಾಲ್ ಗಳನ್ನು ಉತ್ಪನ್ನಮಾಡಲಾಗುತ್ತದೆ.
ಪಾಮಿಟಿಕ್ ಆಮ್ಲ
ಬದಲಾಯಿಸಿಪಾಮಿಟಿಕ್ ಆಮ್ಲದಲ್ಲಿ ೧೬ ಕಾರ್ಬನ್ ಗಳಿರುತ್ತವೆ. ಸಾಧಾರಣ ಅಣು ಸಂಕೇತವು CH3(cH2)14COOH ಅಥವಾ C16H30O2.ಪಾಮಿಟಿಕ್ ಆಮ್ಲದ ಶಾಸ್ತ್ರೀಯವಾದ ಹೆಸರು ಹೆಕ್ಸಾಡೆಕನೋಯಿಕ್ ಆಮ್ಲ(Hexadecanoic acid)
'ಪಾಮಿಟಿಕ್ ಆಮ್ಲದ ಭೌತಿಕ ಧರ್ಮಗಳ ಪಟ್ಟಿ[೬]
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | హెక్సాడెకనోయిక్ ఆసిడ్,(hexadecanoic acid) |
ಅಣು ಸಂಕೇತ | C16H32O2. ಇನ್ನೂ CH3(CH2)14COOH |
ಸಾಂದ್ರತೆ | 853 ಗ್ರಾಂ /ಲೀ 620C ಕಡೆ |
ದ್ರವೀ ಭವನ ಬಿಂದು | 62.50C |
ಕುದಿ ಬಿಂದು | 3520C,(215 ೦C-15mm/Hg ಕಡೆ) |
ಲಭ್ಯತೆ: ಪಾಮಿಟಿಕ್ ಆಮ್ಲವು ಬಿಳಿ ಬಣ್ಣವಾಗಿದ್ದು ಸ್ಪಟಿಕ ರೂಪದಲ್ಲಿರುತ್ತದೆ. ಫಾಮಾಯಿಲ್ ನಲ್ಲಿ ೪೫-೫೦%ವರೆಗೆ ಇರುವುದರಿಂದ ಈ ಕೊಬ್ಬಿನ ಆಮ್ಲಕ್ಕೆ ಪಾಮಿಟಿಕ್ ಆಮ್ಲ ಎನ್ನುವ ಹೆಸರು ಬಂದಿದೆ. ಕ್ರಿ.ಶ ೧೮೪೦ ರಲ್ಲಿ, ಮೊದಲಿನ ಬಾರಿಗೆ ಎಡ್ಮಂಡ್ ಫ್ರೇಮ್ ನಿಂದ ಗೊತ್ತು ಹಚ್ಚಲಾಗಿದೆ. ಎಲ್ಲಾ ಬೀಗದ ಎಣ್ಣೆಗಳಲ್ಲೂ ೫-೧೦% ವರೆಗೆ ಕಾಣಿಸುತ್ತದೆ. ಕೊಕೋಬಟ್ಟರು ಎಣ್ಣೆಯಲ್ಲಿ ೨೫-೪೫% ವರೇಗಿರುತ್ತದೆ. ಶೇಂಗಾ, ತವುಡು, ಹತ್ತಿಬೀಜ, ಸೋಯಾ ಬೀಜಗಳ ಎಣ್ಣೆಯಲ್ಲಿ ೧೦-೨೦% ವರೆಗೆ ಉಂಟಾಗಿರುತ್ತದೆ. ಪಾಮಿಟಿಕ್ ಆಮ್ಲದಿಂದ ಪಾಮಿಟೇಟ್ ಎನ್ನುವ ಎಸ್ಟರನ್ನು ಉತ್ಪನ್ನ ಮಾಡಲಾಗುತ್ತದೆ.
ಸ್ಟಿಯರಿಕ್ ಆಮ್ಲ
ಬದಲಾಯಿಸಿಸ್ಟಿಯರಿಕ್ ಆಮ್ಲದಲ್ಲಿ ೧೮ ಕಾರ್ಬನ್ ಗಳಿರುತ್ತವೆ. ಇದರ ಅಣು ಸಂಕೇತ C18H36O2.ಗ್ರೀಕ್ ಭಾಷೆಯಲ್ಲಿ ಸ್ಟಿಯರೋ ಎಂದರೆ ಕೊಬ್ಬು(tallow)ಎಂದರ್ಥ. ಇದನ್ನು ಮೊದಲಿಗೆ ಕೊಬ್ಬಿ(tallow)ನಲ್ಲಿ ಗುರುತಿಸಲಾಗಿದೆ. ಅದಕ್ಕೆ ಈ ಆಮ್ಲವನ್ನು ಸಾಧಾರಣವಾಗಿ ಸ್ಟಿಯರಿಕ್ ಆಮ್ಲ ಎಂದು ಕರೆಯಲಾಗುತ್ತದೆ [೭] .ಇದರ ಶಾಸ್ತ್ರೀಯ ಹೆಸರು ಆಕ್ಟಾಡೆಕನೋಯಿಕ್ ಆಮ್ಲ(octadecanoic acid)[೮].
ಸ್ಟಿಯರಿಕ್ ಆಮ್ಲದ ಭೌತಿಕ ಗುಣಗಳ ಪಟ್ಟಿ[೯]
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಆಕ್ಟಾಡೆಕನೋಯಿಕ್(octadecanoic) ಆಮ್ಲ |
ಅಣುಸಂಕೇತ | C18H36O2,లేదా CH3(CH2)16COOH |
ಅಣು ಭಾರ | 284.48 ಗ್ರಾಂ/ಮೋಲ್ |
ಸಾಂದ್ರತೆ | 847 ಗ್ರಾಂ/ಲೀ( at 700C) |
ದ್ರವೀ ಭವನ ಬಿಂದು | 69.60C |
ಕುದಿ ಬಿಂದು | 3830 C |
ಸೀಯರಿಕ್ ಆಮ್ಲ ಘನ ರೂಪದಲ್ಲಿರುತ್ತದೆ. ನೋಡುವುದಕ್ಕೆ ಮೇಣದಂತೆ ಕಾಣಿಸುತ್ತದೆ. ಇದು ಹೆಚ್ಚಾಗಿ ಜಂತು/ಜೀವಿಗಳ ಕೊಬ್ಬಿನಲ್ಲಿ ಇರುತ್ತದೆ. ಸಸ್ಯ ಬೀಜಗಳ ಎಣ್ಣೆಯಲ್ಲಿ ೧.೫% ವರೆಗೆ ಕೊಬ್ಬಿನ ಆಮ್ಲ ಇರುವ ಸಂಭವವಿವೆ. ಒಂದೆರಡು ಸಸ್ಯ ಬೀಜಗಳ ಎಣ್ಣೆಯಲ್ಲಿ ಹೆಚ್ಚಿನ ಶೇಕಡದಲ್ಲಿ ಕಾಣಿಸುತ್ತದೆ. ಕೋಕೋಬಟ್ಟರು, ಷೀಯ(shea)ಬಟ್ಟರುನಲ್ಲಿ ೨೮-೪೫%ನಷ್ಟು ಇರುತ್ತದೆ. ೧೮ ಕಾರ್ಬನ್ ಗಳಿರುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳನ್ನು ಹೈಡ್ರೋಜನೇಷನ್ ಮಾಡಿದರೆ, ಅವು ಸ್ಟಿಯರಿಕ್ ಆಮ್ಲಗಳಾಗಿ ಪರಿವರ್ತನೆ ಹೊಂದುತ್ತವೆ. ಸ್ಟಿಯರಿಕ್ ಆಮ್ಲವನ್ನು ಮೇಣಬತ್ತಿ, ಸಾಬೂನ್, ಪ್ಲಾಷ್ಟಿಕ್, ಷೇವಿಂಗ್ ಕ್ರೀಮ್ , ಸೌಂದರ್ಯ ದ್ರವ್ಯಗಳನ್ನು ತಯಾರಿಕೆ ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಪಟಾಕಿ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ. ಜೊತೆಗೆ ಕಲ್ಲುಸಕ್ಕರೆ(candy)ಮತ್ತು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುತ್ತಾರೆ.
ಅರಚಿಡಿಕ್ ಆಮ್ಲ
ಬದಲಾಯಿಸಿಅರಚಿಡಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿ ೨೦ ಕಾರ್ಬನ್ ಗಳಿರುತ್ತವೆ. ಅದರಿಂದ ಇದನ್ನು ಉದ್ದವಾದ ಸರಪಳಿ ಇರುವ ಕೊಬ್ಬಿನ ಸಮೂಹಕ್ಕೆ ಸೇರಿರುವ ಆಮ್ಲವೆಂದು ಕರೆಯುತ್ತಾರೆ. ಅರಚಿಡಿಕ್ ಆಮ್ಲವು ಹೆಚ್ಚಾಗಿ ದ್ವಿದಳ ಧಾನ್ಯ ಸಸ್ಯದ ಕಾಳು(legumes)ಎಣ್ಣೆಯಲ್ಲಿ ಲಭ್ಯವಾಗುತ್ತದೆ[೧೦].
ಗುಣಗಳ ಪಟ್ಟಿ[೧೧]
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಎಯಿಕೊಸನೋಯಿಕ್ ಆಮ್ಲ (eicosanoic acid) |
ಅಣು ಸಂಕೇತ | C20H40O2 ಅಥವಾ CH3(CH2)18COOH |
ಅಣು ಭಾರ | 304.47 ಗ್ರಾಂ/ಮೋಲ್ |
ದ್ರವೀ ಭವನ ಬಿಂದು | 75.40C |
ಸಾಂದ್ರತೆ | 0.922 |
ಅರಚಿಡಿಕ್ ಆಮ್ಲವನ್ನು ಮೀನಿನ ಎಣ್ಣೆಯಲ್ಲಿ ಕಾಣಬಹುದು. ಇದನ್ನು ಸಾಬೂನ್, ಸೌಂದರ್ಯ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ[೧೨].
ಬೆಹೆನಿಕ್ ಆಮ್ಲ
ಬದಲಾಯಿಸಿಬೆಹೆನಿಕ್ ಆಮ್ಲವು(Behenic acid) ಹೈಡ್ರೋಕಾರ್ಬನ್ ಸರಪಳಿಯಲ್ಲಿ ೨೨ ಕಾರ್ಬನ್ ಗಳನ್ನು ಹೊಂದಿದೆ. ಇದನ್ನು ಉದ್ದವಾದ ಸರಪಳಿಯುಳ್ಳ ಕೊಬ್ಬಿನ ಆಮ್ಲ ಎಂದು ಕರೆಯುತ್ತಾರೆ. ಆಮ್ಲದ ಶಾಸ್ತ್ರೀಯ ಹೆಸರು ಡೊಕಸನೋಯಿಕ್ ಆಸಿಡ್( docosanoic acid).
ಗುಣಗಳ ಪಟ್ಟಿ[೧೩]
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಡೊಕಸನೋಯಿಕ್ ಆಮ್ಲ( docosanoic acid) |
ಅಣು ಸಂಕೇತ | C22H44O2 ಅಥವಾ CH3(CH2)20COOH |
ಅಣು ಭಾರ | 340.58 ಗ್ರಾಂ/ಮೋಲ್ |
ದ್ರವೀ ಭವನ ಬಿಂದು | 800C |
ಕುದಿ ಬಿಂದು | 3060C |
ಬೆಹೆನಿಕ್ ಆಮ್ಲವು ಬಿಳುಪಾದ ಅಥವಾ ಕ್ರೀಮ್ ಬಣ್ಣದಲ್ಲಿರುತ್ತದೆ. ಸ್ಪಟಿಕ ಅಥವಾ ಪುಡಿ ರೂಪದಲ್ಲಿರುತ್ತದೆ. ಇದನ್ನು ಮೊದಲನೆ ಬಾರಿಗೆ ನುಗ್ಗೆಕಾಯಿ(Behen) ಬೀಜದಲ್ಲಿ ಗುರುತಿಸಲಾಗಿದೆ. ಆದ್ದರಿಂದ ಇದರ ಸಾಧಾರಣ ಹೆಸರು ಬೆಹೆನಿಕ್ ಆಮ್ಲವಾಗಿದೆ. ಶೇಂಗಾ, ಸಾಸಿವೆ ಎಣ್ಣೆಗಳಲ್ಲಿ ೧-೨% ವರೆಗೆ ಬೆಹೆನಿಕ್ ಆಮ್ಲವು ಇರುತ್ತದೆ. ಈ ಆಮ್ಲವನ್ನು ಹೇಯಿರ್ ಕಂಡಿಷನರ್ ಗಳಲ್ಲಿ ಬಳಸುತ್ತಾರೆ[೧೪].
ಲಿಗ್ನೋಸೆರಿಕ್ ಆಮ್ಲ
ಬದಲಾಯಿಸಿಲಿಗ್ನೋಸೆರಿಕ್ ಆಮ್ಲದ ಹೈಡ್ರೋಕಾರ್ಬನ್ ಸಂಕೋಲೆಯಲ್ಲಿ ೨೪ ಕಾರ್ಬನ್ ಗಳಿದ್ದಾವೆ. ಇದನ್ನು ಅತಿ ಉದ್ದವಾದ ಹೈಡ್ರೋಕಾರ್ಬನ್ ಶ್ರೇಣಿ ಇರುವ ಕೊಬ್ಬಿನ ಆಮ್ಲಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಅಮ್ಲದ ಗುಣಗಳ ಪಟ್ಟಿ'[೧೫]
ಲಕ್ಷಣ | ಮಿತಿ |
ಶಾಸ್ತ್ರೀಯ ಹೆಸರು | ಟೆಟ್ರಾಕೊಸನೋಯಿಕ್ ಆಸಿಡ್ (tetracosanoic acid). |
ಅಣು ಸಂಕೇತ | C23H47COOH |
ಅಣು ಭಾರ | 368.63 |
ದ್ರವೀ ಭವನ ಬಿಂದು | 80- 820C |
ಕುದಿ ಬಿಂದು | 2720C(10 mm/pr) |
ಶೇಂಗಾ ಎಣ್ಣೆ ಯಲ್ಲಿ1.1-2.2% ವರೆಗೆ ಇರುತ್ತದೆ. ಲಿಗ್ನೆನ್ ಉತ್ಪಾದಿಸುವ ಸಮಯದಲ್ಲಿ, ಲಿಗ್ನೋಸೆರಿಕ್ ಆಮ್ಲವು ಉಪ ಉತ್ಪತ್ತಿಯಾಗಿ ಲಭ್ಯವಾಗುತ್ತದೆ [೧೬]. ಆಲ್ಕೋಹಾಲಿಸಿಸ್ ಚರ್ಯದಿಂದ ಲಿಗ್ನೋಸೆರೆಲ್ ಆಲ್ಕೋಹಾಲನ್ನು ತಯಾರಿಸಲಾಗುತ್ತದೆ.
ಕೆಲವು ಪರ್ಯಾಪ್ತ ಕೊಬ್ಬಿನ ಆಮ್ಲಗಳ ವಿವರಣೆಗಳು
ಬದಲಾಯಿಸಿಕೆಳಗಿನ ಪಟ್ಟಿಯಲ್ಲಿ ಬೀಜದ ಎಣ್ಣೆಗಳಲ್ಲಿ ಮತ್ತು ಜೀವಿಗಳ ಕೊಬ್ಬಿನಲ್ಲಿರುವ ಪರ್ಯಾಪ್ತ ಆಮ್ಲಗಳ ಶಾಸ್ತ್ರೀಯ ಹೆಸರು, ಆಮ್ಲಗಳಲ್ಲಿ ಇರುವ ಕಾರ್ಬನ್ ಸಂಖ್ಯೆಯನ್ನು ಕೊಡಲಾಗಿದೆ [೧೭]
ಸಾಧಾರಣ ಹೆಸರು | ಶಾಸ್ತ್ರೀಯ ಹೆಸರು | ನಿರ್ಮಾಣ/ಅಣು ಸೂತ್ರ | ಕಾರ್ಬನ್ ಗಳ ಸಂಖ್ಯೆ |
Propionic acid | Propanoic acid | CH3CH2COOH | C3:0 |
ಬ್ಯುಟಿರಿಕ್ ಆಮ್ಲ | Butanoic acid | CH3(CH2)2COOH | C4:0 |
ವಲೆರಿಕ್ ಆಮ್ಲ | Pentanoic acid | CH3(CH2)3COOH | C5:0 |
ಕಾಪ್ರೋಯಿಕ್ ಆಮ್ಲ | Hexanoic acid | CH3(CH2)4COOH | C6:0 |
Enanthic acid | Heptanoic acid | CH3(CH2)5)COOH | C7:0 |
ಕಾಪ್ರಿಲಿಕ್ ಆಮ್ಲ | Octanoic acid | CH3(CH2)6COOH | C8:0 |
Pelargonic acid | Nonanoic acid | CH3(CH2)7COOH | C9:0 |
ಕಾಪ್ರಿಕ್ ಆಮ್ಲ | Decanoic acid | CH3(CH2)8COOH | C10:0 |
Undecylic acid | Undecanoic acid | CH3(CH2)9COOH | C11:0 |
ಲಾರಿಕ್ ಆಮ್ಲ | Dodecanoic acid | CH3(CH2)10COOH | C12:0 |
Tridecylic acid | Tridecanoic acid | CH3(CH2)11COOH | C13:0 |
ಮಿರಿಸ್ಟಿಕ್ ಆಮ್ಲ | Tetradecanoic acid | CH3(CH2)12COOH | C14:0 |
Pentadecylic acid | Pentadecanoic acid | CH3(CH2)13COOH | C15:0 |
ಪಾಮಿಟಿಕ್ ಆಮ್ಲ | Hexadecanoic acid | CH3(CH2)14COOH | C16:0 |
Margaric acid | Heptadecanoic acid | CH3(CH2)15COOH | C17:0 |
ಸ್ಟಿಯರಿಕ್ ಆಮ್ಲ | Octadecanoic acid | CH3(CH2)16COOH | C18:0 |
Nonadecylic acid | Nonadecanoic acid | CH3(CH2)17COOH | C19:0 |
ಅರಚಿಡಿಕ್ ಆಮ್ಲ | Eicosanoic acid | CH3(CH2)18COOH | C20:0 |
Heneicosylic acid | Heneicosanoic acid | CH3(CH2)19COOH | C21:0 |
ಬೆಹೆನಿಕ್ ಆಮ್ಲ | Docosanoic acid | CH3(CH2)20COOH | C22:0 |
Tricosylic acid | Tricosanoic acid | CH3(CH2)21COOH | C23:0 |
ಲಿಗ್ನೋಸೆರಿಕ್ ಆಮ್ಲ | Tetracosanoic acid | CH3(CH2)22COOH | C24:0 |
Pentacosylic acid | Pentacosanoic acid | CH3(CH2)23COOH | C25:0 |
ಸಿರೋಟಿಕ್ ಆಮ್ಲ | Hexacosanoic acid | CH3(CH2)24COOH | C26:0 |
Heptacosylic acid | Heptacosanoic acid | CH3(CH2)25COOH | C27:0 |
Montanic acid | Octacosanoic acid | CH3(CH2)26COOH | C28:0 |
Nonacosylic acid | Nonacosanoic acid | CH3(CH2)27COOH | C29:0 |
Melissic acid | Triacontanoic acid | CH3(CH2)28COOH | C30:0 |
Henatriacontylic acid | Henatriacontanoic acid | CH3(CH2)29COOH | C31:0 |
Lacceroic acid | Dotriacontanoic acid | CH3(CH2)30COOH | C32:0 |
Psyllic acid | Tritriacontanoic acid | CH3(CH2)31COOH | C33:0 |
Geddic acid | Tetratriacontanoic acid | CH3(CH2)32COOH | C34:0 |
Ceroplastic acid | Pentatriacontanoic acid | CH3(CH2)33COOH | C35:0 |
Hexatriacontylic acid | Hexatriacontanoic acid | CH3(CH2)34COOH | C36:0 |
ಇವುಗಳನ್ನೂ ನೋಡಿ
ಬದಲಾಯಿಸಿಬಾಹ್ಯಾಕೊಂಡಿಗಳು
ಬದಲಾಯಿಸಿಉಲ್ಲೇಖನ
ಬದಲಾಯಿಸಿ- ↑ "saturated fatty acid". thefreedictionary.com. Retrieved 2013-11-29.
- ↑ http://www.chemspider.com/Chemical-Structure.370.html
- ↑ http: //www. herb. com/ caprylic-acid
- ↑ "ಆರ್ಕೈವ್ ನಕಲು". Archived from the original on 2013-11-03. Retrieved 2013-11-28.
- ↑ http://www.chemicalbook.com/ChemicalProductProperty_EN_CB0357278.htm
- ↑ http://www.sigmaaldrich.com/catalog/product/sigma/p0500?lang=en®ion=IN
- ↑ http://www.scienceofcooking.com/stearic_acid.htm
- ↑ "ಆರ್ಕೈವ್ ನಕಲು". Archived from the original on 2014-05-27. Retrieved 2013-11-28.
- ↑ http://www.chemicalland21.com/lifescience/foco/STEARIC%20ACID.htm
- ↑ http://www.merriam-webster. com/ medical/ arachidic%20acid
- ↑ http://www.sigmaaldrich.com/etc/medialib/docs/Sigma/Product_Information_Sheet/a9673pis.Par.0001.File.tmp/a9673pis.pdf
- ↑ https://www.caymanchem.com/app/template/Product.vm/catalog/9000339
- ↑ http://www.chemicalland21.com/lifescience/foco/BEHENIC%20ACID.htm
- ↑ https://www.caymanchem.com/app/template/Product.vm/catalog/9000338
- ↑ http://www.chemicalbook.com/ChemicalProductProperty_EN_CB9333161.htm
- ↑ http: //www. scbt.com/datasheet-205373-lignoceric-acid.html
- ↑ "Examples of Saturated Fat+publisher=examples.yourdictionary.com/". Archived from the original on 2013-11-20. Retrieved 2013-11-29.