ಸಾಸಿವೆ
ಸಾಸಿವೆಯು ಬ್ರಾಸೀಕಾ ಮತ್ತು ಸಿನ್ಯಾಪಿಸ್ ಪಂಗಡಗಳಲ್ಲಿನ ಒಂದು ಸಸ್ಯ ಜಾತಿ. ಇದರ ಸಣ್ಣದಾದ ಬೀಜಗಳನ್ನು ಒಂದು ಸಂಬಾರ ಪದಾರ್ಥವಾಗಿ ಬಳಸಲಾಗುತ್ತದೆ ಮತ್ತು, ಅವುಗಳನ್ನು ಅರೆದು ನೀರು, ವಿನಿಗರ್ ಅಥವಾ ಇತರ ದ್ರವಗಳೊಂದಿಗೆ ಸೇರಿಸಿ ಮಸ್ಟರ್ಡ್ ಎಂಬ ವ್ಯಂಜನವನ್ನು ತಯಾರಿಸಲಾಗುತ್ತದೆ. ಬೀಜಗಳನ್ನು ಕಿವುಚಿ ಸಾಸಿವೆ ಎಣ್ಣೆಯನ್ನೂ ತಯಾರಿಸಲಾಗುತ್ತದೆ, ಮತ್ತು ಎಲೆಗಳನ್ನು ಸೊಪ್ಪಾಗಿಯೂ ತಿನ್ನಬಹುದು.
ಈ ಸಾಸಿವೆ ವೈದ್ಯಕೀಯವಾಗಿ ಬಹಳ ಪ್ರಯೋಜನಕಾರಿ. ಪ್ರಕೃತಿ ಚಿಕಿತ್ಸೆಯಲ್ಲಿ ಇದರ ಉಪಯೋಗ ಅತ್ಯಮೂಲ್ಯ, ಇದನ್ನು ಮಂಡಿ ನೋವು (ಆರ್ತೈತಟಿಸ್)ನಲ್ಲಿ ಸಾಸಿವೆ ಪಟ್ಟಿ ಮಾಡಿ ಉಪಯೋಗಿಸುತ್ತಾರೆ. ಈ ಸಾಸಿವೆ ಪಟ್ಟಿಯು ಇಂತಹ ನೋವುಗಳಲ್ಲಿ ಧೀರ್ಘಕಾಲಿಕ ಉಪಯೋಗ ಸಿಗುತ್ತದೆ. ಈ ಸಾಸಿವೆ ಪಟ್ಟಿಯ ಮೇಲೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಸಂಸ್ಥೆಯು ಸಂಶೋಧನೆಯನ್ನು ನಡೆಸುತ್ತಿದೆ ಇದಕ್ಕೆ ಯಾರಾದರು ರೋಗಿಗಳು ಹೋಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಮಹೇಶ್ ಕಮಲ್, ಜಿಂದಾಲ್ ಧರ್ಮಾಥ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು.
ನೋಡಿಸಂಪಾದಿಸಿ
- Brassica juncea(Indian mustard-ಸಾಸಿವೆ ಗಿಡ ಹೂ.)
- Mustard seed ಸಾಸಿವೆ ಕಾಳು(ಕೆಂಪು)
ಹೆಚ್ಚಿನ ಓದಿಗೆಸಂಪಾದಿಸಿ
- ಕುಲಾಂತರಕ್ಕೆ;ಮೊನ್ಸಾಂಟೊ ಬಾಣಲೆಯ ಕೆಳಗೆ ಬಾಯರ್ ಬೆಂಕಿ; ನಾಗೇಶ್ ಹೆಗಡೆ;[[೧]]
- ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?[[೨]]
[[೩]]
ಉಲ್ಲೇಖಸಂಪಾದಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |