ಒಗ್ಗರಣೆಯು ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಪಾಕಶೈಲಿಗಳಲ್ಲಿ ಬಳಸಲಾಗುವ ಒಂದು ಅಡುಗೆ ತಂತ್ರವಾಗಿದೆ. ಇದರಲ್ಲಿ ಇಡೀ ಸಂಬಾರ ಪದಾರ್ಥಗಳನ್ನು (ಮತ್ತು ಕೆಲವೊಮ್ಮೆ ಒಣ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಶುಂಠಿ ಅಥವಾ ಸಕ್ಕರೆಯಂತಹ ಇತರ ಘಟಕಾಂಶಗಳು ಕೂಡ) ಎಣ್ಣೆ ಅಥವಾ ತುಪ್ಪದಲ್ಲಿ ಸ್ವಲ್ಪ ಕಾಲ ಹುರಿಯಲಾಗುತ್ತದೆ. ಇದರ ಉದ್ದೇಶ ಕೋಶಗಳಿಂದ ಸಾರತೈಲಗಳನ್ನು ಹೊರಬರುವಂತೆ ಮಾಡಿ ಅವುಗಳ ರುಚಿ/ಕಂಪನ್ನು ಹೆಚ್ಚಿಸುವುದಾಗಿರುತ್ತದೆ. ನಂತರ ಒಗ್ಗರಣೆಯನ್ನು ಎಣ್ಣೆಯ ಜೊತೆಗೆ ಒಂದು ಖಾದ್ಯದೊಳಗೆ ಸುರಿಯಲಾಗುತ್ತದೆ.[೧]

ಬಾಣಲೆಯಲ್ಲಿ ಒಗ್ಗರಣೆಯನ್ನು ಸಿದ್ಧಪಡಿಸುತ್ತಿರುವುದು (ಆಲಿವ್ ಎಣ್ಣೆ, ಜೀರಿಗೆ, ಮೆಂತ್ಯದ ಬೀಜಗಳು ಮತ್ತು ಉದ್ದುದ್ದಾಗಿ ಹೆಚ್ಚಿರುವ ಒಣ ಕೆಂಪು ಮೆಣಸಿನಕಾಯಿಗಳನ್ನು ಹೊಂದಿದೆ)

ಸಾಮಾನ್ಯವಾಗಿ ಅಡುಗೆಯ ಆರಂಭದಲ್ಲಿ ಒಂದು ಮೇಲೋಗರ ಅಥವಾ ಹೋಲುವ ಖಾದ್ಯಕ್ಕೆ ಇತರ ಘಟಕಾಂಶಗಳನ್ನು ಸೇರಿಸುವ ಮುನ್ನ ಒಗ್ಗರಣೆಯನ್ನು ಮಾಡಿಕೊಳ್ಳಲಾಗುತ್ತದೆ, ಅಥವಾ ಇದನ್ನು ಅಡುಗೆಯ ಕೊನೆಗೆ, ಬಡಿಸುವ ಸ್ವಲ್ಪ ಮುನ್ನ (ತೊವ್ವೆ, ಹುಳಿ ಅಥವಾ ಸ್ಟ್ಯೂಗೆ ಮಾಡಿದಂತೆ) ಖಾದ್ಯಕ್ಕೆ ಸೇರಿಸಬಹುದು.[೨]

ಉಲ್ಲೇಖಗಳು ಬದಲಾಯಿಸಿ

  1. "The Crackling Spices Of Indian Tempering". NPR.org. Retrieved 2017-04-16.
  2. "How To Temper Spices | Rasam Indian Restaurant". www.rasam.ie (in ಅಮೆರಿಕನ್ ಇಂಗ್ಲಿಷ್). Retrieved 2017-04-16.
"https://kn.wikipedia.org/w/index.php?title=ಒಗ್ಗರಣೆ&oldid=992412" ಇಂದ ಪಡೆಯಲ್ಪಟ್ಟಿದೆ