ಕೂದುವಳ್ಳಿ ಚಂದ್ರಶೇಖರ್ ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಟ. ೬೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ[೧]. ಹಲವಾರು ಚಿತ್ರಗಳಲ್ಲಿ ಪೋಷಕ ನಟ ಮತ್ತು ಖಳನಟನ ಪಾತ್ರಗಳಲ್ಲಿ, ಹಾಗೂ ಕೆಲವು ಚಿತ್ರಗಳಲ್ಲಿ ನಾಯಕನಟನ ಪಾತ್ರದಲ್ಲಿ ನಟಿಸಿದ್ದಾರೆ. ೧೯೭೩ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದರು. ಇವರು ಕೆನಡಾ ಚಂದ್ರು ಎಂಬ ಹೆಸರಿನಿಂದಲೂ ಗುರುತಿಸಲ್ಪಡುತ್ತಿದ್ದರು. ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು.

ಚಂದ್ರಶೇಖರ್
'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್
ಜನನ
-
ಮರಣಜನವರಿ ೨೭, ೨೦೧೮
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಕೆನಡಾ ಚಂದ್ರು
ವೃತ್ತಿಸಿನೆಮಾ ನಟ
ಸಕ್ರಿಯ ವರ್ಷಗಳು೧೯೬೯-೧೯೮೪, ೨೦೦೪-೨೦೧೭
ಗಮನಾರ್ಹ ಕೆಲಸಗಳುನಟನೆ
ಹೆಸರಾಂತ ಕೆಲಸಗಳುಎಡಕಲ್ಲು ಗುಡ್ಡದ ಮೇಲೆ,
ಮಾನಸ ಸರೋವರ

ಸಿನೆಮಾ ಪಯಣ

ಬದಲಾಯಿಸಿ

ನಟಿಸಿದ ಸಿನೆಮಾಗಳು[೪] (ಅಪೂರ್ಣ ಪಟ್ಟಿ)

ಬದಲಾಯಿಸಿ

ಕೆನಡಾ ದೇಶದ ಒಟ್ಟಾವದಲ್ಲಿ ವಾಸವಾಗಿದ್ದ ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು. ಅವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನ ಅಗಲಿದ್ದಾರೆ. ’3 ಗಂಟೆ 30 ದಿನ 30 ಸೆಕೆಂಡ್’ ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದು, ಮರಣದ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.[೫]

ಉಲ್ಲೇಖಗಳು

ಬದಲಾಯಿಸಿ