ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ .[] ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ .[]
ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು . ಅದರಲ್ಲಿ ಬಿಲ್ಲವ , ಬಂಟ್ಸ್ , ಗೌಡ , ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ . ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ . ಆದರೆ ಕೊಂಕಣಿ , ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ .[]

ಗುರುಪುರ
town
ಗುರುಪುರ is located in Karnataka
ಗುರುಪುರ
ಗುರುಪುರ
Location in Karnataka, India
Coordinates: 12°56′20″N 74°55′52″E / 12.938828°N 74.931107°E / 12.938828; 74.931107
Country ಭಾರತ
Stateಕರ್ನಾಟಕ
Districtದಕ್ಷಿಣ ಕನ್ನಡ
Government
 • Bodyಮೂಳೂರು ಗ್ರಾಮ ಪಂಚಾಯತ್
Population
 (೨೦೧೧)
 • Total೫೪೬೫
ಭಾಷೆಗಳು
 • Officialತುಳು
Time zoneUTC+5:30 (IST)
PIN
೫೭೪೧೪೫[]
Nearest cityಮಂಗಳೂರು
Lok Sabha constituencyಮಂಗಳೂರು
Vidhan Sabha constituencyಮಂಗಳೂರು ಉತ್ತರ
Civic agencyಮೂಳೂರು ಗ್ರಾಮ ಪಂಚಾಯತ್

ಗುರುಪುರ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ / ಕುಗ್ರಾಮ . ಇದು ಗುರುಪುರ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ ಹಾಗೂ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಉತ್ತರಕ್ಕೆ ೪೧ ಕಿ.ಮೀ ದೂರದಲ್ಲಿದೆ. ತರೀಕೆರೆಯಿಂದ ೧೮ ಕಿ.ಮೀ. ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೨೫೨ ಕಿ.ಮೀ. ದೂರದಲ್ಲಿದೆ .

ಇತಿಹಾಸ

ಬದಲಾಯಿಸಿ

ಸ್ಥಳೀಯ ದೇವಾಲಯಗಳ ದಾಖಲೆಗಳ ಪ್ರಕಾರ , ಗುರುಪುರ ಪಟ್ಟಣವನ್ನು ಹಿಂದೆ ಗುಲಿಪುರ ಎಂದು ಕರೆಯುತ್ತಿದ್ದರು . ಫಾಲ್ಗುಣಿ ನದಿಯ ದಡದಲ್ಲಿ ನೆಲೆಗೊಂಡಿರುವ ಗುಲಿಪುರ ವಾಣಿಜ್ಯ ಪಟ್ಟಣವಾಗಿದ್ದು , ನದಿಯ ಇತರ ಭಾಗಗಳಿಗೆ ಅದರ ಸಂಪರ್ಕ ಹೊಂದಿದೆ .[] ಬಂಡಸಾಲೆ ಎಂಬುದು ಅಲ್ಲಿನ ಒಂದು ಸ್ಥಳ [], ಅಲ್ಲಿನ ಸಿಗುವ ಸರುಕುಗಳನ್ನು ಸಂಗ್ರಹಿಸಿ ಅನೇಕ ಸ್ಥಳಗಳಿಗೆ ವಿತರಿಸಲಾಗುತ್ತದೆ . ಕುಡಿಯುವ ನೀರಿನ ಸರಬರಾಜು ಗಾಗಿ ನಿರ್ಮಿಸಲಾದ ಅಣೆಕಟ್ಟಿನಂತಹ ರಚನೆಯುಳ್ಳ 'ಬಾಂಗ್ಲಾ ಗುಡ್ಡೆ' ಯನ್ನು ಗುರುಪುರದಲ್ಲಿ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ್ದಾರೆ.[] []

ಹತ್ತಿರದ ಸ್ಥಳಗಳು

ಬದಲಾಯಿಸಿ

ಗುರುಪುರವು ಮಂಗಳೂರು ನಗರದಿಂದ - ೧೨ ಕಿ.ಮಿ(೭.೫ ಮೈಲು) .[][೧೦] ; ಕೈಕಂಬದಿಂದ - ೦೫ ಕಿ.ಮೀ. (೩.೧ ಮೈಲು) .[೧೧]; ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕರ್ನಾಟಕದಿಂದ - ೨೮ ಕಿ.ಮೀ(೧೭ ಮೈಲು) .[೧೨]; ಸುರತ್ಕಲ್ ನಿಂದ‌ - ೨೯ ಕಿ.ಮೀ(೧೮ ಮೈಲು) .[೧೩]; ಫಾಲ್ಗುಣಿ ನದಿತಿಂದ - ೦೦ ಕಿ.ಮೀ(೦ ಮೈಲು); ಉಡುಪಿಯಿಂದ - ೬೬ ಕಿ.ಮೀ(೪೧ ಮೈಲು) .[೧೪] ದೂರದಲ್ಲಿದೆ .

ಗುರುಪುರ ತಲುಪಲು ದಾರಿ

ಬದಲಾಯಿಸಿ

ರಸ್ತೆ ಮೂಲಕ

ಬದಲಾಯಿಸಿ

ತರೀಕೆರೆ ಗುರುಪುರಕ್ಕೆ ಹತ್ತಿರದ ಪಟ್ಟಣ. ತರೀಕೆರೆ ಗುರುಪುರದಿಂದ ೨೩ ಕಿ.ಮೀ ದೂರದಲ್ಲಿದೆ. ತರೀಕೆರೆದಿಂದ ಗುರುಪುರದವರೆಗೆ ರಸ್ತೆ ಸಂಪರ್ಕವಿದೆ.

ರೈಲು ದಾರಿ

ಬದಲಾಯಿಸಿ

ಗುರುಪುರ ಬಳಿ ೧೦ ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಪಟ್ಟಣದ ತರೀಕೆರೆ ಹತ್ತಿರದಲ್ಲಿ ರೈಲ್ವೆ ನಿಲ್ದಾಣಗಳಿವೆ . ಅಲ್ಲಿಂದ ಗುರುಪುರಕ್ಕೆ ತಲುಪಬಹುದು.[೧೫]

ಧಾರ್ಮಿಕ ತಾಣಗಳು

ಬದಲಾಯಿಸಿ

ಗುರುಪುರವು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಪಟ್ಟಣದ ನಂತರ ಫಾಲ್ಗುಣಿ ನದಿಯನ್ನು ಗುರುಪುರ ಎಂದು ಹೆಸರಿಸಲಾಗಿದೆ . ಇದು ವಾಮಂಜೂರು ಮತ್ತು ಕಾಳಿಕಾಂಬ ಸ್ಥಳಕ್ಕೂ ಹತ್ತಿರದಲ್ಲಿದೆ .[೧೬] ದಕ್ಷಿಣ ಕನ್ನಡ ಜಿಲ್ಲೆಯ ತ್ವರಿತ ನಗರೀಕರಣದೊಂದಿಗೆ ಈ ಗ್ರಾಮವು ಒಂದು ಸಣ್ಣ ಪಟ್ಟಣವಾಗಿ ಮಾರ್ಪಟ್ಟಿದೆ. ಹಿಂದೂ ದೇವತೆಗಳಾದ ವರದ್ರಾಜ , ವೆಂಕಟರಮಣ ಮತ್ತು ಶ್ರೀ ಸತ್ಯದೇವತೆ ಧರ್ಮದೇವತೆ[೧೭] ಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.[೧೮] ಹಬ್ಬಗಳು ವರ್ಷದ ಬಹುಪಾಲು ಇಲ್ಲಿ ನಡೆಯುತ್ತವೆ, ಆದರೆ ಮುಖ್ಯ ಹಬ್ಬವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ . ಭಾರತೀಯ ಕ್ಯಾಲೆಂಡರ್ ತಿಂಗಳಲ್ಲಿ ಗುರುಪುರ ತೆರು[೧೯] , ಓಕುಲ್, ಒಡು ತೆರು ಎಂದು ಹೆಸರಿಸಲಾಗುತ್ತದೆ . ಶ್ರೀ ಸತ್ಯದೇವತಾ ಧರ್ಮದೇವತಾ ದೇವಸ್ಥಾನದ ಸ್ವಲ್ಪ ದೂರದಲ್ಲಿ ದೊಡ್ಡ ಮಸೀದಿ ಇದೆ .

ಉಲ್ಲೇಖಗಳು

ಬದಲಾಯಿಸಿ
  1. ಪಿನ್ ಕೋಡ್
  2. ಗುರುಪುರ ನದಿ
  3. "Indian express". Archived from the original on 2022-07-17. Retrieved 2019-06-20.
  4. Explore India
  5. [೧]
  6. ಬಂಡಸಲೆ[ಶಾಶ್ವತವಾಗಿ ಮಡಿದ ಕೊಂಡಿ]
  7. Megamedia news[ಶಾಶ್ವತವಾಗಿ ಮಡಿದ ಕೊಂಡಿ]
  8. ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ ಬಾಂಗ್ಲಾ ಗುಡ್ಡೆ[ಶಾಶ್ವತವಾಗಿ ಮಡಿದ ಕೊಂಡಿ]
  9. ಗುರುಪುರ[ಶಾಶ್ವತವಾಗಿ ಮಡಿದ ಕೊಂಡಿ]
  10. ಮಂಗಳೂರಿನಿಂದ ಗುರುಪುರಕ್ಕೆ
  11. ಗುರುಪುರದಿಂದ ಕೈಕಂಬಕ್ಕಿರುವ ಅಂತರ
  12. ಎನ್ಐಟಿಕೆ ಯಿಂದ ಗುರುಪುರಕ್ಕಿರುವ ಅಂತರ
  13. ಗುರುಪುರದಿಂದ ಸುರತ್ಕಲ್ ಗೆ ಇರುವ ಅಂತರ
  14. ಉಡುಪಿಯಿಂದ ಗುರುಪುರಕ್ಕಿರುವ ಅಂತರ
  15. https://www.onefivenine.com/india/villages/Chikmagalur/Tarikere/Gurupura
  16. ಗುರುಪುರ ಮತ್ತು ವಾಮಂಜೂರಿಗೆ ಇರುವ ಅಂತರ
  17. ಶ್ರೀ ಸತ್ಯದೇವತೆ ಮಂದಿರ
  18. "ಗುರುಪುರದಲ್ಲಿನ ದೇವಾಲಯ". Archived from the original on 2021-12-24. Retrieved 2019-06-20.
  19. ಗುರುಪುರ ತೆರು
"https://kn.wikipedia.org/w/index.php?title=ಗುರುಪುರ&oldid=1228362" ಇಂದ ಪಡೆಯಲ್ಪಟ್ಟಿದೆ