ಗುರುಪುರ ನದಿ
ಫಾಲ್ಗುಣಿ ನದಿ ಎಂದೂ ಕರೆಯಲ್ಪಡುವ ಗುರುಪುರ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದು ಮಂಗಳೂರು ನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದ ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ "ಗುರುಪುರ" ಹೆಸರನ್ನು ಪಡೆಯುತ್ತದೆ. ಈ ಊರು ಬೆಂಗಳೂರಿನಿಂದ ಪಶ್ಚಿಮದ ದಿಕ್ಕಿನಲ್ಲಿ ೩೪೫ ಕಿಲೋಮೀಟರ್ ದೂರದಲ್ಲಿ ಇದೆ. ನವ ಮಂಗಳೂರು ಬಂದರ(ರೇವು) ಮತ್ತು ಮಂಗಳೂರು ರಸಗೊಬ್ಬರ ಕಾರ್ಖಾನೆಗಳು ಗುರುಪುರ ನದಿಯ ಉತ್ತರ ತೀರದಲ್ಲಿ ಇವೆ. ಒಂದಾನೊಂದು ಕಾಲದಲ್ಲಿ ನೇತ್ರಾವತಿ ನದಿಯು ಮಂಗಳೂರು ನಗರದ ದಕ್ಷಿಣ ಗಡಿಯಾಗಿ ಮತ್ತು ಈ ಗುರುಪುರ ನದಿಯು ಮಂಗಳೂರು ನಗರದ ಉತ್ತರದ ಗಡಿಯಾಗಿ ಹರಿಯುತ್ತಿದ್ದವು.ಈಗ ಮಂಗಳೂರು ನಗರ ಈ ಎರಡು ನದಿಗಳ ಗಡಿ ದಾಟಿ ಬೆಳೆದಿದೆ.
ಗುರುಪುರ ನದಿ | |
ಫಲ್ಗುಣಿ ನದಿ, ಕೂಳೂರು ನದಿ | |
Kintra | ಭಾರತ |
---|---|
State | ಕರ್ನಾಟಕ |
Ceeties | ಮಂಗಳೂರು, ಗುರುಪುರ |
ಭೂವೈಜ್ಞಾನಿಕ ವೈಶಿಷ್ಟ್ಯ
ಬದಲಾಯಿಸಿಗುರುಪುರ ನದಿಯು ಕೂಳೂರಿನ ಬಳಿ ನವಮಂಗಳೂರು ಬಂದರದ (ಪಣಂಬೂರು)ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿಯುತ್ತಾ, ತಣ್ಣೀರುಭಾವಿ ಎಂಬಲ್ಲಿ ಒಮ್ಮೆಗೆ ಲಂಬ ತಿರುವು ಪಡೆದು ಕರಾವಳಿ ಕಡಲತೀರಕ್ಕೆ ಸಮಾಂತರವಾಗಿ ಸುಮಾರು ಐದು ಕಿಲೋಮೀಟರು ದೂರ ದಕ್ಷಿಣ ದಿಕ್ಕಿಗೆ ಹರಿದು ಮಂಗಳೂರು ನಗರದ ನೈಋತ್ಯ ಭಾಗದಲ್ಲಿ ನೇತ್ರಾವತಿ ನದಿಯ ಅಳಿವೆಯ ಬಳಿ (ಬೆಂಗರೆ ಮತ್ತು ಉಳ್ಳಾಲದ ಕೋಟೆಪುರದ ನಡುವೆ)ಅರಬಿ ಕಡಲನ್ನು ಸೇರುತ್ತದೆ. ಹೀಗೆ ಗುರುಪುರ- ನೇತ್ರಾವತಿ ನದಿಗಳು ಅಳಿವೆಯಲ್ಲಿ ಜೋಡಿಯಾಗಿ ಕಡಲಿಗೆ ಹರಿಯುವುದು ಕರ್ನಾಟಕದ ಪಶ್ಚಿಮ ಕರಾವಳಿಯ ಭೌಗೋಳಿಕ ಹಾಗೂ ಭೂವೈಜ್ಞಾನಿಕ ವಿಶೇಷಗಳಲ್ಲಿ ಒಂದು.