ಪಟ್ಟಣ
ಪಟ್ಟಣವು ಮಾನವ ವಾಸಸ್ಥಳವಾಗಿದೆ. ಸಾಮಾನ್ಯವಾಗಿ ಪಟ್ಟಣಗಳು ಗ್ರಾಮಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತವೆ ಆದರೆ ನಗರಗಳಿಗಿಂತ ಚಿಕ್ಕದಾಗಿರುತ್ತವೆ. ಆದರೆ ಪಟ್ಟಣ ಮತ್ತು ನಗರದ ನಡುವೆ ವ್ಯತ್ಯಾಸಮಾಡುವ ಮಾನದಂಡಗಳು ವಿಶ್ವದ ವಿಭಿನ್ನ ಭಾಗಗಳ ನಡುವೆ ಗಣನೀಯವಾಗಿ ಬದಲಾಗುತ್ತವೆ.
ಸಾಮಾನ್ಯವಾಗಿ, ಇಂದು ಪಟ್ಟಣಗಳನ್ನು ಅವುಗಳ ಆರ್ಥಿಕ ಲಕ್ಷಣದ ಆಧಾರದ ಮೇಲೆ ಟೌನ್‍ಶಿಪ್‍ಗಳು, ಹಳ್ಳಿಗಳು, ಪಾಳ್ಯಗಳಿಂದ ವ್ಯತ್ಯಾಸ ಮಾಡಬಹುದು. ಪಟ್ಟಣದ ಜನರಲ್ಲಿ ಬಹುತೇಕ ಜನ ತಮ್ಮ ಜೀವಿಕೆಯನ್ನು ಕೃಷಿ ಅಥವಾ ಸಂಬಂಧಿತ ಚಟುವಟಿಕೆಗಳಂತಹ ಪ್ರಾಥಮಿಕ ಕೈಗಾರಿಕೆಯ ಬದಲಾಗಿ ಉತ್ಪಾದನಾ ಕೈಗಾರಿಕೆ, ವಾಣಿಜ್ಯ ಹಾಗೂ ಸಾರ್ವಜನಿಕೆ ಸೇವೆಗಳಿಂದ ಪಡೆದುಕೊಳ್ಳುತ್ತಾರೆ.
ಪಟ್ಟಣಗಳು ಹಲವುವೇಳೆ ಪ್ರತ್ಯೇಕ ಸರ್ಕಾರಿ ಘಟಕಗಳಾಗಿ ಅಸ್ತಿತ್ವದಲ್ಲಿರುತ್ತವೆ, ಮತ್ತು ಕಾನೂನಾತ್ಮಕವಾಗಿ ನಿರ್ದಿಷ್ಟಪಡಿಸಿದ ಗಡಿರೇಖೆಗಳು ಮತ್ತು ಸ್ಥಳೀಯ ಸರ್ಕಾರದ ಕೆಲವು ಅಥವಾ ಎಲ್ಲ ಉಪಸವಲತ್ತುಗಳನ್ನು ಹೊಂದಿರುತ್ತವೆ (ಉದಾ. ಪೋಲಿಸ್ ಪಡೆ). ಇತರ ಸಂದರ್ಭಗಳಲ್ಲಿ ಪಟ್ಟಣವು ತನ್ನ ಸ್ವಂತದ ಆಡಳಿತವನ್ನು ಹೊಂದಿರುವುದಿಲ್ಲ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Australian Bureau of Statistics: Australian Standard Geographical Classification (ASGC) 2005
- Open-Site Regional Archived 2021-01-29 ವೇಬ್ಯಾಕ್ ಮೆಷಿನ್ ನಲ್ಲಿ. — Contains information about towns in numerous countries.
- Geopolis : research group, university of Paris-Diderot, France — Access to Geopolis Database